` manvitha harish - chitraloka.com | Kannada Movie News, Reviews | Image

manvitha harish

 • ಕನ್ನಡದಲ್ಲಿ ನಟಿಸುವ ಆಸೆ. ಆದರೆ.. - ಅಲ್ಲು ಶಿರೀಷ್

  allu sirish Image

  ತೆಲುಗು ಚಿತ್ರರಂಗದ ಸ್ಟೈಲಿಶ್ ಸ್ಟಾರ್ ಅವರ ತಮ್ಮ ಅಲ್ಲು ಶಿರೀಷ್. ಈಗಾಗಲೇ ಎರಡು ಹಿಟ್ ಚಿತ್ರಗಳನ್ನು ನೀಡಿರುವ ಕಲಾವಿದ. ಮೊನ್ನೆ ಮೊನ್ನೆಯಷ್ಟೇ ಟಗರು ಚಿತ್ರದ ಆಡಿಯೋ ರಿಲೀಸ್‍ಗೆ ಬಂದಿದ್ದ ಅಲ್ಲು ಶಿರೀಷ್, ಕನ್ನಡದಲ್ಲಿ ನಟಿಸಬೇಕು ಎನ್ನುವುದು ನನ್ನ ಆಸೆ ಎಂದು ಹೇಳಿಕೊಂಡಿದ್ದಾರೆ.

  ಆದರೆ, ಅವರದ್ದೊಂದು ಬೇಡಿಕೆಯಿದೆ. ನಾನು ನಟಿಸುವ ಚಿತ್ರದಲ್ಲಿ ಶಿವರಾಜ್ ಕುಮಾರ್ ಇರಬೇಕು. ಪುನೀತ್ ಕೂಡಾ ಇದ್ದರೆ ಇನ್ನೂ ಸೂಪರ್ ಎಂದು ಹೇಳಿಕೊಂಡಿದ್ದಾರೆ.

  ಪಾಪ, ಶಿವಣ್ಣ ಮತ್ತು ಪುನೀತ್ ಅಭಿಮಾನಿಗಳು ಅದೆಷ್ಟೋ ವರ್ಷಗಳಿಂದ ಅಣ್ಣ-ತಮ್ಮನನ್ನು ಒಟ್ಟಿಗೇ ತೆರೆಯ ಮೇಲೆ ನೋಡುವ ಆಸೆಯಿಟ್ಟುಕೊಂಡು ಕಾಯುತ್ತಿರುವುದು ಅವರಿಗೆ ಗೊತ್ತಿಲ್ಲವೇನೋ. ಅಟ್‍ಲೀಸ್ಟ್ ಅವರ ಮೂಲಕವಾದರೂ ರಾಜ್ ಫ್ಯಾಮಿಲಿ ಅಭಿಮಾನಿಗಳ ಆಸೆ ಈಡೇರಲಿ ಬಿಡಿ.

 • ಜರ್ಮನಿಯಲ್ಲಿ ಟಗರು ಹಾಡಿಗೆ ಫುಲ್ ಸ್ಟೆಪ್ಪು

  tagaru craze in germany

  ಟಗರು ಚಿತ್ರದ ಟಗರು ಬಂತು ಟಗರು.. ಹಾಡು ಯಾವ ಪರಿ ಫೇಮಸ್ ಆಗಿದೆಯೆನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಕನ್ನಡಿಗರ ಹೃದಯಕ್ಕೆ ಲಗ್ಗೆಯಿಟ್ಟು ಕಾಲುಗಳು ನರ್ತಿಸುವಂತೆ ಮಾಡುವ ಖದರು ಈ ಹಾಡಿಗಿದೆ. ಈಗ ಈ ಹಾಡು ವಿದೇಶಗಳಲ್ಲೂ ಸದ್ದು ಮಾಡ್ತಿದೆ.

  ಜರ್ಮನಿಯಲ್ಲಿಯೂ ಈ ಹಾಡು, ಮ್ಯೂಸಿಕ್ಕಿಗೆ ಜನ ಮರುಳಾಗಿದ್ದಾರೆ. ಬರ್ಲಿನ್‍ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಟಗರು ಚಿತ್ರದ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಹಾಗೆ ಕುಣಿದವರಲ್ಲಿ ಕನ್ನಡಿಗರಷ್ಟೆ ಅಲ್ಲ, ವಿದೇಶಿಯರೂ ಇದ್ದಾರೆ ಎನ್ನುವುದು ಇನ್ನೊಂದು ಥ್ರಿಲ್.

  ಆ ಥ್ರಿಲ್‍ನ್ನು ಅಭಿಮಾನಿಗಳ ಜೊತೆ ಸ್ವತಃ ಚಿತ್ರದ ನಿರ್ಮಾಪಕರೂ ಆಗಿದ್ದ ಕೆ.ಪಿ.ಶ್ರೀಕಾಂತ್ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

 • ಟಗರು ಚಿತ್ತತಂಡಕ್ಕೆ ಕಂಪ್ಲೀಟ್ ಇನ್ಷೂರೆನ್ಸ್

  tagaru team insured

  ಮಾಸ್ತಿಗುಡಿ ದುರಂತದ ಪರಿಣಾಮವೋ ಏನೋ..ಚಿತ್ರರಂಗ ನಿಧಾನವಾಗಿ ಸುರಕ್ಷತೆಯತ್ತ ಗಮನ ಹರಿಸುತ್ತಿದೆ. ಇತ್ತೀಚೆಗೆ ಕೆಜಿಎಫ್ ಚಿತ್ರತಂಡ ಚಿತ್ರ ತಂಡದ ಎಲ್ಲರಿಗೂ ಇನ್ಷೂರೆನ್ಸ್ ಮಾಡಿಸಿತ್ತು. ಈಗ ಟಗರು ಚಿತ್ರತಂಡವೂ ಅದೇ ರೀತಿ ಇಡೀ ಚಿತ್ರತಂಡಕ್ಕೆ ಇನ್ಷೂರೆನ್ಸ್ ಮಾಡಿಸಿದೆ.

  ಸಿನಿಮಾ ಚಿತ್ರೀಕರಣ ಮಾಡುವಾಗ ಅನೇಕ ಬಾರಿ ಅವಘಡಗಳು ಸಂಭವಿಸುತ್ತವೆ. ಕೆಲವು ದೃಶ್ಯಗಳಲ್ಲಂತೂ ಕಲಾವಿದರು, ತಂತ್ರಜ್ಞರು ಜೀವದ ಹಂಗು ತೊರೆದು ಕೆಲಸ ಮಾಡಬೇಕಾಗುತ್ತದೆ. ದುರಂತಗಳಾಗುವುದು ಬೇಡ ಎನ್ನುವುದು ಎಲ್ಲರ ಹಾರೈಕೆ ಮತ್ತು ಪ್ರಾರ್ಥನೆ. ಆದರೆ, ಅದು ಫಲಿಸಬೇಕಲ್ಲ. ಅಕಸ್ಮಾತ್ ಹಾಗೇನಾದರೂ ಅನಾಹುತ ಸಂಭವಿಸಿದಾಗ ಇನ್ಷೂರೆನ್ಸ್ ಇದ್ದರೆ, ಅದು ಚಿತ್ರತಂಡದ ನೆರವಿಗೆ ಬರುತ್ತದೆ. ಅಷ್ಟೇ ಅಲ್ಲ, ಕಾರ್ಮಿಕರಿಗೂ ಒಂದು ಧೈರ್ಯವಿರುತ್ತದೆ.

  ಶಿವರಾಜ್ ಕುಮಾರ್ ನಾಯಕರಾಗಿರುವ ಟಗರು ಚಿತ್ರದ ಚಿತ್ರೀಕರಣ ಅಂತಿಮ ಹಂತದಲ್ಲಿದೆ. ದುನಿಯಾ ಸೂರಿ ನಿರ್ದೇಶನದ ಚಿತ್ರಕ್ಕೆ ಶ್ರೀಕಾಂತ್ ನಿರ್ಮಾಪಕ. ಹುಬ್ಬಳ್ಳಿ, ಉಡುಪಿ-ಮಂಗಳೂರಿನಲ್ಲಿ ಚಿತ್ರೀಕರಣ ಮುಗಿಸಿ, ನಂತರ ಗೋವಾಕ್ಕೆ ತೆರಳಲಿದೆ ಚಿತ್ರತಂಡ. ಕಡ್ಡಿಪುಡಿ ನಂತರ ಮತ್ತೆ ಒಂದಾಗಿರುವ ಸೂರಿ-ಶಿವರಾಜ್​ ಕುಮಾರ್ ಜೋಡಿಯ ಟಗರು ಚಿತ್ರದ ಮೇಲೆ ಈಗಾಗಲೇ ಭರ್ಜರಿ ನಿರೀಕ್ಷೆಯಿದೆ. ನಾಯಕಿಯರಾಗಿ ಜಾಕಿ ಭಾವನಾ ಹಾಗೂ ಕೆಂಡಸಂಪಿಗೆ ಮಾನ್ವಿತಾ ನಟಿಸುತ್ತಿದ್ದಾರೆ. ನಾಯಕರಾಗಿದ್ದ ಧನಂಜಯ್, ಈ ಚಿತ್ರದಲ್ಲಿ ಖಳನಾಯಕ.

  Related Articles :-

  Tagaru Team Insured

 • ಟಗರು ಪುಟ್ಟಿ ಪೆನ್ನು ಹಿಡಿದಾಗ

  manvitha busy with pen

  ಕೆಂಡ ಸಂಪಿಗೆ ಚಿತ್ರದ ಮುಗ್ದ ಪ್ರೇಮಿಯಾಗಿದ್ದ ಮಾನ್ವಿತಾ ಹರೀಶ್, ಟಗರು ಚಿತ್ರದ ನಂತರ ಟಗರು ಪುಟ್ಟಿಯೇ ಆದರು. ಈ ಟಗರು ಪುಟ್ಟಿ, ತಾರಕಾಸುರ ಚಿತ್ರದ ನಂತರ ಹೊರಗೆ ಕಾಣಿಸಿಲ್ಲ. ಏನ್ ಮಾಡ್ತಿದ್ದಾರೆ ಮಾನ್ವಿತಾ ಎಂದು ಹುಡುಕಾಡಿದಾಗ 5 ತಿಂಗಳ ರಿಪೋರ್ಟ್ ಕೊಟ್ಟಿದ್ದಾರೆ ಮಾನ್ವಿತಾ.

  ಈ 5 ತಿಂಗಳಲ್ಲಿ 3 ಸಿನಿಮಾ ಮುಗಿಸಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಸನದ ಸಿನಿಮಾ ಶೂಟಿಂಗ್ ಮುಗಿದಿದೆ. ಆ ಚಿತ್ರದಲ್ಲಿ ವಸಿಷ್ಠ ಸಿಂಹ ಹೀರೋ. ರಾಮ್‍ಕುಮಾರ್ ಪುತ್ರ ಧಿರೇನ್ ಅಭಿನಯದ ಮೊದಲ ಚಿತ್ರ ದಾರಿ ತಪ್ಪಿದ ಮಗದ ಶೂಟಿಂಗ್‍ನ್ನೂ ಮುಗಿಸಿಕೊಟ್ಟಿದ್ದಾರೆ. ರಾಜಸ್ಥಾನ್ ಡೈರೀಸ್ ಚಿತ್ರದ ಪ್ಯಾಚ್‍ವರ್ಕ್ ಕೆಲಸ ನಡೆಯುತ್ತಿದೆ. ಒಟ್ಟಿನಲ್ಲಿ ಮಾನ್ವಿತಾ ಈಗ ಮತ್ತೊಮ್ಮೆ ಹೊಸ ಕಥೆಗಳನ್ನು ಕೇಳುವಷ್ಟು ಬಿಡುವಾಗಿದ್ದಾರೆ.

  ಅಂದಹಾಗೆ ಈಗೇನು ಮಾಡ್ತಿದ್ದಾರೆ. ಅದಕ್ಕೆ ಉತ್ತರವೂ ಸಿಕ್ಕಿದೆ. ಬಿಡುವಿದ್ದಾಗಲೆಲ್ಲ ಕನ್ನಡ, ಇಂಗ್ಲಿಷ್ ಕಾದಂಬರಿಗಳನ್ನು ಓದುವ ಮಾನ್ವಿತಾ, ಒಳ್ಳೆಯ ಬರಹಗಾರ್ತಿಯೂ ಹೌದು. ಹೀಗಾಗಿ ಅವರೇ ಒಂದು ವೆಬ್ ಸಿರೀಸ್ ಮಾಡಲು ಯೋಜಿಸಿದ್ದು, ಕಥೆ ಬರೆಯಲು ಶುರುವಿಟ್ಟಿದ್ದಾರೆ. ನಮ್ಮ ಪ್ರೇಕ್ಷಕರು ಪ್ರತಿಯೊಂದಕ್ಕೂ ಲಾಜಿಕ್ ಹುಡುಕ್ತಾರೆ. ಆ ಲಾಜಿಕ್ಕುಗಳನ್ನಿಟ್ಟುಕೊಂಡೇ ಒಂದು ಕ್ರೈಂ ಥ್ರಿಲ್ಲರ್ ಕಥೆ ಬರೆಯುತ್ತಿದ್ದೇನೆ ಎಂದಿದ್ದಾರೆ ಮಾನ್ವಿತಾ.

 • ತಾರಕಾಸುರನ ವಿರುದ್ಧ ಬುಡಬುಡಿಕೆಯವರ ಆಕ್ರೋಶ

  budabudike community against tarakasura

  ತಾರಕಾಸುರ. ನಾಳೆ ರಿಲೀಸ್ ಆಗುತ್ತಿರುವ ಈ ಸಿನಿಮಾದ ಮೇಲೆ ಸ್ಯಾಂಡಲ್‍ವುಡ್ ನಿರೀಕ್ಷೆ ಅಪಾರ. ಏಕೆಂದರೆ, ಚಿತ್ರದ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ. ಹಾಲಿವುಡ್ ನಟ ಡ್ಯಾನಿ ಸಪಾನಿ ವಿಲನ್ ಆಗಿರುವ ಚಿತ್ರದಲ್ಲಿ ವೈಭವ್ ಮತ್ತು ಮಾನ್ವಿತಾ ಕಾಮತ್ ಹೀರೋ, ಹೀರೋಯಿನ್. ಚಿತ್ರದಲ್ಲಿ ಬಂಡಿಯಪ್ಪ ಹೇಳುತ್ತಿರುವುದು ಬುಡಬುಡಿಕೆಯವರ ಥ್ರಿಲ್ಲರ್ ಸ್ಟೋರಿ. ಬುಡಬುಡಿಕೆಯವರು ತಾರಕಾಸುರನ ವಿರುದ್ಧ ಸಿಟ್ಟಿಗೆದ್ದಿರುವುದೇ ಈ ಕಾರಣಕ್ಕೆ.

  ತಮಗೆ ಚಿತ್ರವನ್ನು ಬಿಡುಗಡೆಗೆ ಮುನ್ನವೇ ತೋರಿಸಬೇಕು. ಚಿತ್ರದಲ್ಲಿ ನಮ್ಮ ಜನಾಂಗವನ್ನು ಅವಹೇಳನಕಾರಿಯಾಗಿ ತೋರಿಸಿರಬಹುದು ಎಂಬ ಅನುಮಾನ ನಮಗಿದೆ ಎಂದು ಫಿಲಂ ಚೇಂಬರ್‍ಗೆ ದೂರು ನೀಡಿ ಪ್ರತಿಭಟನೆಗೂ ಕುಳಿತಿದ್ದರು.

  ಪ್ರತಿಭಟನಾಕಾರರ ಆಕ್ರೋಶಕ್ಕೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ, ಚಿತ್ರದಲ್ಲಿ ಬುಡಬುಡಿಕೆ ಜನಾಂಗವನ್ನು ಕೆಟ್ಟದಾಗಿ ತೋರಿಸಿಲ್ಲ. ಸಾಕಷ್ಟು ಸಂಶೋಧನೆ ಮಾಡಿಯೇ ಸಿನಿಮಾ ಮಾಡಿದ್ದೇವೆ. ಅವರ ಸಮುದಾಯದ ಹಿರಿಯ ಕರಿಯಪ್ಪ ಅವರ ಮನೆಯಲ್ಲಿ ಇದಕ್ಕಾಗಿಯೇ ಒಂದು ವಾರ ಇದ್ದೆ. ಚಿತ್ರವನ್ನು ರಿಲೀಸ್‍ಗೆ ಮುನ್ನ ತೋರಿಸಲ್ಲ. ಸೆನ್ಸಾರ್‍ನವರು ಚಿತ್ರವನ್ನು ವೀಕ್ಷಿಸಿ ಎ ಪ್ರಮಾಣ ಪತ್ರ ಕೊಟ್ಟಿದ್ದಾರೆ ಎಂದಿದ್ದಾರೆ.

 • ಯುಗಯುಗದ ಯುಗಪುರಷ.. ತಾರಕಾಸುರ

  much awaited release for tarakasura

  ತಾರಕಾಸುರ. ಅದೇ ಒಬ್ಬ ರಾಕ್ಷಸನ ಹೆಸರು. ಪಾರ್ವತಿಯಿಂದ ಸಂಹಾರವಾದ ಅಸುರನ ಹೆಸರಲ್ಲಿ ಹೀರೋ ಸಿನಿಮಾನಾ..? ಅಂತಹ ಕುತೂಹಲ ಹುಟ್ಟಿಸಿಯೇ ಬರುತ್ತಿದೆ ತಾರಕಾಸುರ ಚಿತ್ರ. ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ಸಿನಿಮಾ ರಿಲೀಸ್‍ಗೆ ರೆಡಿಯಾಗಿದೆ. ರಥಾವರ ಎಂಬ ಹಿಟ್ ಸಿನಿಮಾ ಕೊಟ್ಟಿದ್ದ ಬಂಡಿಯಪ್ಪ, ತಮ್ಮ 2ನೇ ಸಿನಿಮಾದಲ್ಲಿ ಹೊಸ ಪ್ರತಿಭೆಗಳನ್ನು ಹುಡುಕಿ ಹೊಚ್ಚಹೊಸ ಸಿನಿಮಾ ತೆಗೆದಿದ್ದಾರೆ. ಅದಕ್ಕಾಗಿ 2 ವರ್ಷಗಳ ಸುದೀರ್ಘ ಅವಧಿ ತೆಗೆದುಕೊಂಡಿರುವ ಸಿನಿಮಾ ಇದು.

  ವೈಭವ್‍ಗೆ ನಾಯಕಿಯಾಗಿ ನಟಿಸಿರುವುದು ಟಗರು ಪುಟ್ಟಿ ಕೆಂಡಸಂಪಿಗೆ ಮಾನ್ವಿತಾ. ಹಾಲಿವುಡ್ ನಟ ಡ್ಯಾನಿ ಸಫಾನಿ ಚಿತ್ರದ ವಿಲನ್. ನಾಯಕನಟ ವೈಭವ್, ನಿರ್ಮಾಪಕ ನರಸಿಂಹಲು ಅವರ ಮಗ. ನಿರ್ಮಾಪಕರ ಮಗ ಎಂಬ ಯಾವ ಮುಲಾಜು ಇಟ್ಟುಕೊಳ್ಳದೇ ಚಿತ್ರದಲ್ಲಿ ದುಡಿಸಿಕೊಂಡಿದ್ದಾರೆ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ.

 • ಲಂಡನ್‍ನಲ್ಲಿ ಮಾನ್ವಿತಾ ಹರೀಶ್, ವಸಿಷ್ಟ ಸಿಂಹ ಬಂಧನ, ಬಿಡುಗಡೆ

  vasistha simha, manvitha harish in london

  ಕೆಂಡಸಂಪಿಗೆ, ಟಗರು ಚಿತ್ರಗಳ ಖ್ಯಾತಿಯ ಮಾನ್ವಿತಾ ಹರೀಶ್, ರಾಜಾಹುಲಿ, ಟಗರು ಚಿತ್ರಗಳ ಖ್ಯಾತಿಯ ವಸಿಷ್ಟ ಸಿಂಹರನ್ನು ಲಂಡನ್ ಪೊಲೀಸರು ಇತ್ತೀಚೆಗೆ ಅರೆಸ್ಟ್ ಮಾಡಿ ಬಿಡುಗಡೆ ಮಾಡಿದ್ಧಾರೆ. ಅದಕ್ಕೆ ಕಾರಣವಾಗಿದ್ದು ಇಷ್ಟೆ, ಮಾನ್ವಿತಾ ಮತ್ತು ವಸಿಷ್ಟ ಸಿಂಹ, ಲಂಡನ್‍ನ ರಸ್ತೆಯಲ್ಲಿ ರೊಮ್ಯಾನ್ಸ್ ಮಾಡಿದ್ದು.

  ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಮಾನ್ವಿತಾ ಮತ್ತು ವಸಿಷ್ಟ ನಾಯಕ, ನಾಯಕಿಯಾಗಿ ನಟಿಸುತ್ತಿದ್ದಾರೆ. ಅದಾದ ನಂತರ ಇದು ಸಿನಿಮಾಗಾಗಿ ನಡೆಯುತ್ತಿರುವ ರೊಮ್ಯಾನ್ಸ್ ಎಂದು ತಿಳಿದ ಮೇಲೆ ಲಂಡನ್ ಪೊಲೀಸರು ಬಿಟ್ಟು ಕಳಿಸಿದರಂತೆ.

 • ಸೆನ್ಸಾರ್ ಜೊತೆ ಗುದ್ದಾಡಿ ಗೆದ್ದ ತಾರಕಾಸುರ

  tarakasura gets censor clearance

  ತಾರಕಾಸುರ. ರಿಲೀಸ್‍ಗೆ ರೆಡಿಯಾಗಿರುವ ಈ ಸಿನಿಮಾವನ್ನು ಸೆನ್ಸಾರ್ ಅಧಿಕಾರಿಗಳು ಸರ್ಟಿಫಿಕೇಟ್ ಕೊಡದೆ ಬ್ಯಾನ್ ಮಾಡುವುದಾಗಿ ಹೇಳಿದ್ದರಂತೆ. ರಥಾವರದಂತಹ ಹಿಟ್ ಕೊಟ್ಟಿದ್ದ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪಗೆ ಶಾಕ್ ಆಗುವುದೊಂದೇ ಬಾಕಿ. 

  ಹೀಗೆ ಹೆದರಿಸಿದ್ದ ಸೆನ್ಸಾರ್ ಅಧಿಕಾರಿಗಳು 16 ಪ್ರಶ್ನೆಗಳನ್ನಿಟ್ಟರಂತೆ. ಆ 16 ಪ್ರಶ್ನೆಗಳಿಗೂ ಉತ್ತರ ಕೊಟ್ಟ ಬಂಡಿಯಪ್ಪ, ಯಾವುದಕ್ಕೂ ಬಗ್ಗುವುದಿಲ್ಲ ಎಂಬ ಸಂದೇಶ ಕೊಟ್ಟು, ಒಂದೇ ಒಂದು ಸೀನ್‍ಗೂ ಕತ್ತರಿ ಹಾಕಿಸಿಕೊಳ್ಳದೆ ಪ್ರಮಾಣ ಪತ್ರ ಪಡೆದಿದ್ದಾರೆ. 

  ಆದರೆ, ತಾರಕಾಸುರ ಚಿತ್ರಕ್ಕೆ ಸಿಕ್ಕಿರುವುದು ಎ ಸರ್ಟಿಫಿಕೇಟ್. ಬುಡಬುಡಿಕೆ ಜನಾಂಗವನ್ನಿಟ್ಟುಕೊಂಡು ಮಾಡಿರುವ ಕಥೆ ಇದು. ತಾಯಿಗೆ ತಕ್ಕ ಮಗ ಚಿತ್ರಕ್ಕೂ ಸೆನ್ಸಾರ್ ಪ್ರಾಬ್ಲಂ ಎದುರಾಗಿರುವಾಗಲೇ ತಾರಕಾಸುರ ಸೆನ್ಸಾರ್ ಯುದ್ಧ ಗೆದ್ದ ಕಥೆ ಹೇಳಿಕೊಂಡಿದೆ.

 • ಹಳ್ಳಿ ಹುಡುಗಿಯಾದ ಟಗರು ಪುಟ್ಟಿ

  ಹಳ್ಳಿ ಹುಡುಗಿಯಾದ ಟಗರು ಪುಟ್ಟಿ

  ಪ್ರಜ್ವಲ್ ದೇವರಾಜ್ ಹೊಸ ಸಿನಿಮಾ ಘೋಷಿಸಿದ್ದ ನಿರ್ದೇಶಕ ಪಿ.ಸಿ.ಶೇಖರ್, ಈಗ ಮಾನ್ವಿತಾ ಹರೀಶ್ ಜೊತೆ ಸಿನಿಮಾ ಶುರು ಮಾಡಿದ್ದಾರೆ. ಲಾಕ್‍ಡೌನ್‍ನಿಂದಾಗಿ ಏರುಪೇರಾದ ಡೇಟ್ಸ್‍ಗಳಿಂದಾಗಿ ಪ್ರಜ್ವಲ್ ದೇವರಾಜ್ ಚಿತ್ರವನ್ನು ಪೋಸ್ಟ್‍ಪೋನ್ ಮಾಡಿದ್ದಾರೆ. ಆ ಗ್ಯಾಪಿನಲ್ಲಿ ಮಾನ್ವಿತಾ ಹರೀಶ್ ಸಿನಿಮಾ ಕೈಗೆತ್ತಿಕೊಂಡಿದ್ದಾರೆ.

  ಸ್ವಲ್ಪ ಹೀರೋಯಿನ್ ಓರಿಯಂಟೆಡ್ ಕಥೆ ಇದಾಗಿದ್ದು, ಮಾನ್ವಿತಾ ಅವರದ್ದು ಬೋಲ್ಡ್ ಹಳ್ಳಿ ಹುಡುಗಿ ಪಾತ್ರ. ರೈತನ ಮಗಳು. ಸ್ವತಃ ಕೃಷಿ ಮಾಡುವ ಹುಡುಗಿ ಎಂದಿರುವ ಪಿ.ಸಿ.ಶೇಖರ್ ನಾಯಕರಾಗಿ ನಕುಲ್ ಗೌಡ ಅವರನ್ನು ಸೆಲೆಕ್ಟ್ ಮಾಡಿದ್ದಾರೆ.

  ವೆಂಕಟೇಶ್ ಗೌಡ ನಿರ್ಮಾಣದ ಈ ಚಿತ್ರದ ಬಗ್ಗೆ ಮಾನ್ವಿತಾ ಕೂಡಾ ಆತ್ಮವಿಶ್ವಾಸದಲ್ಲಿದ್ದಾರೆ. ಪಿ.ಸಿ.ಶೇಖರ್ ಚಿತ್ರಗಳಲ್ಲಿ ನಾಯಕಿಯರ ಪಾತ್ರಕ್ಕೆ ತೂಕವಿರುತ್ತದೆ. ಹೀಗಾಗಿಯೇ ಒಪ್ಪಿಕೊಂಡೆ ಎಂದಿರುವ ಮಾನ್ವಿತಾ, ಚಿತ್ರದ ಪಾತ್ರಕ್ಕೆ ತಯಾರಿಯನ್ನೂ ಆರಂಭಿಸಿದ್ದಾರೆ.

 • ಹೆಂಗೈತೆ ಟಗರು..? ಶಿವಣ್ಣ ಕೂಡಾ ವೇಯ್ಟಿಂಗ್..!

  shivarajkumar eager to watch tagaru

  ಟಗರು ಚಿತ್ರದ ಬಗ್ಗೆ ಪ್ರೇಕ್ಷಕರು, ಅಭಿಮಾನಿಗಳ ಜೊತೆ ಅಷ್ಟೇ ಕುತೂಹಲದಿಂದ ಕಾಯುತ್ತಿರುವ ಮತ್ತೊಬ್ಬ ವ್ಯಕ್ತಿ ಶಿವರಾಜ್‍ಕುಮಾರ್. ಕಡ್ಡಿಪುಡಿ ನನ್ನ ಚಿತ್ರಜೀವನದಲ್ಲಿಯೇ ಒಂದು ಫೈನೆಸ್ಟ್ ಸಿನಿಮಾ ಎಂದಿರುವ ಶಿವ ರಾಜ್‍ಕುಮಾರ್, ಸೂರಿ ಜೊತೆ ಆಗಲೇ ಮತ್ತೊಮ್ಮೆ ಕೆಲಸ ಮಾಡುವ ಅಭಿಲಾಷೆ ವ್ಯಕ್ತಪಡಿಸಿದ್ದರು. ಅದು ಮತ್ತೊಮ್ಮೆ ಟಗರು ಚಿತ್ರದಲ್ಲಿ ನನಸಾಗಿದೆ.

  ಇದು ಕ್ರೈಂ ಚೇಸಿಂಗ್ ಸ್ಟೋರಿ ಎನ್ನುವ ಶಿವಣ್ಣ, ಚಿತ್ರದ ಕಥೆ, ಮೇಕಿಂಗ್ ಪ್ರತಿಯೊಂದು ಕೂಡಾ ವಿಭಿನ್ನ ಫೀಲ್ ಕೊಡುತ್ತೆ. ಚಿತ್ರದ ಸೌಂಡಿಂಗ್ ಕೂಡಾ ಅದ್ಭುತವಾಗಿ ಮೂಡಿಬಂದಿದೆ ಎಂದು ನಿರ್ದೇಶಕ ಚರಣ್‍ರಾಜ್‍ರನ್ನು ಹೊಗಳಿದ್ದಾರೆ. ಸೂರಿ ಜೊತೆ ಕೆಲಸ ಮಾಡುವುದು ಒಂದು ಅದ್ಭುತ ಅನುಭವ. ವಿಭಿನ್ನವಾದ ಸಿನಿಮಾ ಹುಟ್ಟೋದು ವಿಭಿನ್ನ ಜನ ಒಟ್ಟಿಗೇ ಸೇರಿದಾಗ ಮಾತ್ರ. ಅದು ಟಗರುನಲ್ಲಿ ಸಾಧ್ಯವಾಗಿದೆ. ಚಿತ್ರ ನೋಡೋಕೆ ನಾನೂ ಕುತೂಹಲದಿಂದ ಕಾಯತ್ತಿದ್ದೇನೆ ಎಂದು ನಿರೀಕ್ಷೆ ಬಿಚ್ಚಿಟ್ಟಿದ್ದಾರೆ ಶಿವಣ್ಣ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery