` hari priya, - chitraloka.com | Kannada Movie News, Reviews | Image

hari priya,

 • ಸೂಜಿದಾರ ಪೋಣಿಸೋಕೆ ಸಿದ್ಧವಾದರು ಹರಿಪ್ರಿಯಾ

  haripriya's new movie is soojidara

  ಇತ್ತೀಚೆಗೆ ಸಿಕ್ಕಾಪಟ್ಟೆ ಬ್ಯುಸಿಯಾಗುತ್ತಿರುವ ಹರಿಪ್ರಿಯಾ ಚಿತ್ರಗಳ ಲಿಸ್ಟ್‍ಗೆ ಹೊಸ ಚಿತ್ರ ಸೇರ್ಪಡೆಯಾಗಿದೆ. ಚಿತ್ರದ ಹೆಸರು ಸೂಜಿದಾರ. ಕಥೆ ಕೇಳಿದ ತಕ್ಷಣ ಒಪ್ಪಿಕೊಂಡರಂತೆ ಹರಿಪ್ರಿಯಾ. ಚಿತ್ರದ ನಿರ್ದೇಶಕ ಮೌನೇಶ್ ಬಡಿಗೇರ್. ಇದುವರೆಗೆ ಕಿರುಚಿತ್ರ, ನಾಟಕಗಳ ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದ ಮೌನೇಶ್‍ಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ.

  ಒಂದು ಕಡೆ ಕಮರ್ಷಿಯಲ್ ಸಿನಿಮಾಗಳು, ಮತ್ತೊಂದು ಕಡೆ ಪೌರಾಣಿಕ ಚಿತ್ರಗಳಲ್ಲಿ ನಟಿಸುತ್ತಲೇ ಈಗ ಮಹಿಳಾ ಪ್ರದಾನ ಚಿತ್ರದಲ್ಲಿ ನಟಿಸುತ್ತಿದ್ದಾರೆ ಹರಿಪ್ರಿಯಾ. ಚಿತ್ರದಲ್ಲಿ ಅವರ ಪಾತ್ರದ ಹೆಸರು ಪದ್ಮಾ. ಇಡೀ ಚಿತ್ರ ಸುತ್ತುವುದೇ ಆಕೆಯ ಪಾತ್ರದ ಸುತ್ತ. ನನ್ನ ವೃತ್ತಿ ಜೀವನದಲ್ಲಿ ಈ ಚಿತ್ರ ಮೈಲುಗಲ್ಲಾಗಲಿದೆ ಎಂಬ ನಿರೀಕ್ಷೆ ಹರಿಪ್ರಿಯಾ ಅವರಲ್ಲಿದೆ.

 • ಸೃಜನ್, ಹರಿಪ್ರಿಯಾ ಅದ್ಧೂರಿ ಮದುವೆ.. ಶಾಸ್ತ್ರಕ್ಕೊಂದು ಸೆಟ್..

  eloborate sets for ellidhe illitanaka wedding sequence

  ಎಲ್ಲಿದ್ದೆ ಇಲ್ಲೀ ತನಕ ಚಿತ್ರ ರಿಲೀಸ್ ಆಗೋಕೆ ಸಿದ್ಧವಾಗಿದೆ. ಸೃಜನ್ ಲೋಕೇಶ್, ಹರಿಪ್ರಿಯಾ ಜೋಡಿಯ ಈ ಚಿತ್ರದಲ್ಲಿ ಒಂದು ನವಿರಾದ ಲವ್ ಸ್ಟೋರಿ ಇದೆ. ವಿಶೇಷವೆಂದರೆ, ಇಡೀ ಸಿನಿಮಾದ ಶೇ.40ರಷ್ಟು ಕಥೆ ನಡೆಯೋದು ಮದುವೆ ಮಂಟಪದಲ್ಲಿ. ಚಿತ್ರದ ನಾಯಕ ಕೋಟ್ಯಧಿಪತಿ. ಆತನ ಸ್ಟೇಟಸ್‍ಗೆ ತಕ್ಕಂತೆ ಮದುವೆ ಅದ್ಧೂರಿಯಾಗಿ ಆಗಬೇಕು. ಹೀಗಾಗಿ ಮದುವೆ ಮಂಟಪದ ದೃಶ್ಯಗಳು ಭರ್ಜರಿಯಾಗಿ ಬಂದಿವೆ. ಇಡೀ ಸಿನಿಮಾದ 40ರಷ್ಟು ಕಥೆ, ಮದುವೆ ಮಂಟಪದಲ್ಲೇ ಆಗುತ್ತೆ ಎಂದಿದ್ದಾರೆ ಸೃಜನ್ ಲೋಕೇಶ್.

  ಹೀಗಾಗಿ ಮದುವೆಯ ಶಾಸ್ತ್ರ ಸಂಪ್ರದಾಯಗಳನ್ನು ಸುಂದರವಾಗಿ ಸೆರೆ ಹಿಡಿಯಲಾಗಿದೆ. ಒಂದೊಂದು ಶಾಸ್ತ್ರಕ್ಕೂ ಒಂದೊಂದು ಸೆಟ್ ಹಾಕಲಾಗಿದೆ. ಮದುವೆ ಮನೆಯಲ್ಲಿ ನಡೆಯುವ ಒಂದು ಘಟನೆಯೇ ಇಡೀ ಚಿತ್ರದ ಟರ್ನಿಂಗ್ ಪಾಯಿಂಟ್ ಎನ್ನುತ್ತಾರೆ ನಿರ್ದೇಶಕ ತೇಜಸ್ವಿ.

  ನಾಯಕರಾಗಿರುವ ಸೃಜನ್ ಲೋಕೇಶ್, ಚಿತ್ರದ ನಿರ್ಮಾಣದ ಹೊಣೆಯನ್ನೂ ಹೊತ್ತಿದ್ದಾರೆ. ಅಕ್ಟೋಬರ್ 11ರಂದು ಸಿನಿಮಾ ರಿಲೀಸ್ ಆಗುತ್ತಿದೆ.

 • ಹರಿಪ್ರಿಯಾ 25ನೇ ಸಿನಿಮಾ ರೆಡಿ

  haripriya's 25th film censored u

  ಡಾಟರ್ ಆಫ್ ಪಾರ್ವತಮ್ಮ. ಹರಿಪ್ರಿಯಾ ಅಭಿನಯದ 25ನೇ ಸಿನಿಮಾ. ಪಾರ್ವತಮ್ಮನಾಗಿ, ಹರಿಪ್ರಿಯಾ ತಾಯಿಯಾಗಿ ನಟಿಸಿರುವುದು ಸುಮಲತಾ ಅಂಬರೀಷ್. ಹರಿಪ್ರಿಯಾ ಈ ಚಿತ್ರದಲ್ಲಿ ವೈದೇಹಿ ಹೆಸರಿನ ತನಿಖಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

  ಬೆಲ್‍ಬಾಟಂ ಚಿತ್ರದ ಸಕ್ಸಸ್ ಖುಷಿಯಲ್ಲಿರೋ ಡಾಟರ್ ಆಫ್ ಪಾರ್ವತಮ್ಮ, ಸೆನ್ಸಾರ್ ಗೆದ್ದಿದೆ. ಯಾವುದೇ ಕಟ್, ಮ್ಯೂಟ್‍ಗಳಿಲ್ಲದೆ ಯು ಸರ್ಟಿಫಿಕೇಟ್ ಪಡೆದಿದೆ. ಕೆ.ಎಂ.ಶಶಿಧರ್, ವಿಜಯಲಕ್ಷ್ಮೀ, ಕೃಷ್ಣೇಗೌಡ ನಿರ್ಮಾಣದ ಸಿನಿಮಾಗೆ ಶಂಕರ್ ನಿರ್ದೇಶಕ.

 • ಹರಿಪ್ರಿಯಾಗೂ-ಧೃವಸರ್ಜಾಗೂ ಸ್ಪೀಡ್​ ಲವ್​..!

  bharjari song shooting in slovenia

  ಅಜ್ಜಿ ಹೇಳಿದ ಕತೆಯಲ್ಲಿ ಇದ್ದ ಏಳೂಕೋಟೆಯ ರಾಜಾ ಇವನು, ಸಪ್ತ ಸಾಗರ ದಾಟಿ ಬಂದ ಕಿನ್ನರ ಕಿಂಪುರುಷನು ಹಾಡು ಶುರುವಾಗೋದು ಹೀಗೆ. ಇದು ಭರ್ಜರಿ ಚಿತ್ರದ ಹಾಡು. ಹಾಡಿಗೆ ಹೆಜ್ಜೆ ಹಾಕಿರುವುದು ನಟ ಧೃವ ಸರ್ಜಾ ಮತ್ತು ಹರಿಪ್ರಿಯ. ಸ್ಲೊವೇನಿಯಾದ ಸುಂದಾರತಿಸುಂದರ ಜಾಗಗಳಲ್ಲಿ ಹಾಡಿನ ಶೂಟಿಂಗ್ ಆಗಿದೆ.

  ದೃವ ಸರ್ಜಾ ಫ್ರೆಂಚ್​ ಹೀರೋನಂತೆ ಕಂಡರೆ, ಹರಿಪ್ರಿಯ ಫ್ರೆಂಚ್ ಅಪ್ಸರೆಯಂತೆ ಕಂಗೊಳಿಸುತ್ತಿದ್ದಾರೆ. 

  ಸ್ವಾರ್ಥವೇ ತಿಳಿಯದ ಮಗು ಇವನು, ಪ್ರತಿ ತಾಯಿ ಬಯಸುವ ಮನೆ ಮಗನು ಎನ್ನುವ ಸಾಲುಗಳಲ್ಲಿ ನಾಯಕನ ವ್ಯಕ್ತಿತ್ವವನ್ನು ಬಣ್ಣಿಸುವ ಪ್ರಯತ್ನವಿದೆ. ನೃತ್ಯ ನಿರ್ದೇಶಕ ಹರ್ಷ ಇಬ್ಬರಿಗೂ ಹೆಜ್ಜೆ ಹಾಕಿಸಿದ್ದಾರೆ. 

  Related Articles :-

  Bharjari Team Shooting Songs In Slovenia

  Bharjari Trailer Released On Dhruva Sarja's Birthday

  Haripriya Joins Bharjari Team

  Bharjari Launch on June 12th

  Bharjari Music Starts From May 10

   

   

 • ಹರಿಪ್ರಿಯಾಗೆ ಜಾಗ್ವಾರ್ ರೋಮಾಂಚನ..!

  haripriya's thrilling jaguar ride

  ಹರಿಪ್ರಿಯಾ, ಸದಾ ಹೊಸತನ್ನು ಹುಡುಕುವ ಹುಡುಗಿ. ನಟನೆಯಲ್ಲಿ ಎಷ್ಟೇ ಬ್ಯುಸಿಯಿದ್ದರೂ, ಸ್ವತಃ ಡ್ರೈವಿಂಗ್ ಮಾಡೋದನ್ನು ಆನಂದಿಸುವ ಹರಿಪ್ರಿಯಾ, ಎಷ್ಟೋ ಬಾರಿ ತಮ್ಮ ಡ್ರೈವರ್‍ನ್ನೇ ಕಾರ್‍ನಲ್ಲಿ ಕೂರಿಸಿಕೊಂಡು, ತಾವು ಡ್ರೈವಿಂಗ್ ಮಾಡಿದ್ದೂ ಉಂಟು. ಇಂಥ ಹರಿಪ್ರಿಯಾ ಕೈಗೀಗ ಜಾಗ್ವಾರ್ ಸಿಕ್ಕಿಬಿಟ್ಟಿದೆ.

  ಕಾರ್ ಡ್ರೈವಿಂಗ್ ಇಷ್ಟಪಡುವವರಿಗೆ ಜಾಗ್ವಾರ್ ಥ್ರಿಲ್ ಕೊಡುತ್ತೆ. ಅಂಥ ಥ್ರಿಲ್ ಅನುಭವಿಸುತ್ತಿರುವ ಹರಿಪ್ರಿಯಾ, ಜಾಗ್ವಾರ್ ಕಾರ್‍ನ ವಿಶೇಷತೆಗಳ ಬಗ್ಗೆ ಈಗ ಗಂಟೆಗಟ್ಟಲೆ ಮಾತನಾಡುತ್ತಾರೆ. ಗಂಟೆಗೆ 220 ಕಿ.ಮೀ. ವೇಗದಲ್ಲಿ ಸಲೀಸಾಗಿ ಓಡಿಸಬಹುದು, ಸ್ಪೋಟ್ರ್ಸ್ ಮೋಡ್, ವಿಂಟರ್ ಮೋಡ್, ರೇನ್ ಮೋಡ್‍ಗಳಿಗೆ ತಕ್ಕಂತೆ ಬದಲಾಗುವ ಜಾಗ್ವಾರ್, ಲಾಂಗ್ ಡ್ರೈವ್‍ಗೆ ಹೇಳಿ ಮಾಡಿಸಿದ ಕಾರು.

  ಇಷ್ಟೆಲ್ಲದರ ನಡುವೆ ಹರಿಪ್ರಿಯಾಗೆ ಇರುವ ಒಂದೇ ಒಂದು ಬೇಜಾರೆಂದರೆ, ಮಿರಮಿರನೆ ಮಿಂಚುತ್ತಿರುವ ಜಾಗ್ವಾರ್‍ನನ್ನು ಮನೆಯಲ್ಲೇ ಬಿಟ್ಟು ಶೂಟಿಂಗ್‍ಗೆ ಹೋಗಬೇಕಲ್ಲ ಎನ್ನುವುದು. ಉಸಿರಾಡಲೂ ಪುರುಸೊತ್ತಿಲ್ಲದಷ್ಟು ಬ್ಯುಸಿಯಾಗಿರುವ ಹರಿಪ್ರಿಯಾ, ಹೊಸ ವರ್ಷಾಚರಣೆ ದಿನ ಲಾಂಗ್ ಡ್ರೈವ್ ಹೋಗುವ ಹುಮ್ಮಸ್ಸಿನಲ್ಲಿದ್ದಾರೆ.