` hari priya, - chitraloka.com | Kannada Movie News, Reviews | Image

hari priya,

 • ತುಸು ಪೋಲಿ.. ಸ್ವಲ್ಪ ಜಾಲಿ.. ಭಾವನೆಗಳ ಜೋಕಾಲಿ.. : ಪೆಟ್ರೋಮ್ಯಾಕ್ಸ್ ಟ್ರೇಲರ್

  ತುಸು ಪೋಲಿ.. ಸ್ವಲ್ಪ ಜಾಲಿ.. ಭಾವನೆಗಳ ಜೋಕಾಲಿ.. : ಪೆಟ್ರೋಮ್ಯಾಕ್ಸ್ ಟ್ರೇಲರ್

  ತರಲೆ ತುಂಟಾಟಗಳನ್ನಿಟ್ಟುಕೊಂಡು ಚೇಷ್ಟೆ ಮಾಡೋದ್ರಲ್ಲಿ ವಿಜಯ ಪ್ರಸಾದ್ ಎತ್ತಿದ ಕೈ. ಬನ್ನಿ ಪಂಪ್ ಹೊಡೆಯೋಣ ಎಂದು ಹೇಳಿಯೇ ಟ್ರೇಲರ್‍ಗೆ ವೆಲ್‍ಕಂ ಹೇಳೋ ವಿಜಯ್ ಪ್ರಸಾದ್, ಇಲ್ಲಿಯೂ ಬೀಜವನ್ನು ಮರೆತಿಲ್ಲ. ಕೊನೆಗೆ ನಮ್ಮ ಮನೆಯಲ್ಲಿ ಉಕ್ಕಿಸಿದಂತೆ ನಾಳೆ ನಿಮ್ಮ ಮನೆಯಲ್ಲೂ ಉಕ್ಕಿಸಿ.. ಹಾಲನ್ನ.. ಎನ್ನೋ ಡಬಲ್ ಮೀನಿಂಗ್ ಇಟ್ಟು ಟ್ರೇಲರ್ ಮುಗಿಸಿದ್ದಾರೆ.

  ಇದು ಪೆಟ್ರೋಮ್ಯಾಕ್ಸ್ ಚಿತ್ರದ ಟ್ರೇಲರು. ಮಧ್ಯೆ ಒಂದಿಷ್ಟು ಭಾವನೆಗಳ ಜೋಕಾಲಿಯೂ ಇದೆ. ನೀನಾಸಂ ಸತೀಶ್, ಹರಿಪ್ರಿಯಾ ನಟಿಸಿರುವ ಚಿತ್ರಕ್ಕೆ ನಿರ್ಮಾಪಕರೂ ನೀನಾಸಂ ಸತೀಶ್ ಅವರೇ. ಪೆಟ್ರೋಮ್ಯಾಕ್ಸ್ ಮನೆ ದೇವ್ರಾಣೆಗೂ ಅದಲ್ಲ ಅನ್ನೋ ಟ್ಯಾಗ್‍ಲೈನು ಇಟ್ಟುಕೊಂಡೇ ಬರುತ್ತಿರೋ ಸಿನಿಮಾ, ಭರಪೂರ ಮನರಂಜನೆಯ ಗಂಟೆ ಬಾರಿಸುತ್ತಿದೆ.

 • ದರ್ಶನ್‍ಗೆ ಹರಿಪ್ರಿಯಾ `ಮಾಯೆ'

  hari priya image

  ಕುರುಕ್ಷೇತ್ರ ಚಿತ್ರದ ಶೂಟಿಂಗ್ ಮುಗಿಸಿ ಬಂದಿದ್ದಾರೆ ಹರಿಪ್ರಿಯಾ. ಚಿತ್ರದಲ್ಲಿ ಹರಿಪ್ರಿಯಾ ಅವರದ್ದು ನರ್ತಕಿಯ ಪಾತ್ರ ಎನ್ನಲಾಗಿತ್ತು. ಈಗ ಚಿತ್ರದ ಇನ್ನೊಂದು ಮಾಹಿತಿ ಹೊರಬಿದ್ದಿದೆ. ಚಿತ್ರದಲ್ಲಿ ಹರಿಪ್ರಿಯಾ ಅವರ ಪಾತ್ರದ ಹೆಸರು ಮಾಯೆ. ದುರ್ಯೋಧನನನ್ನು ಮರಳು ಮಾಡುವ ಮಾಯೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಹರಿಪ್ರಿಯಾ.

  ಚಿತ್ರವನ್ನು 3ಡಿಯಲ್ಲಿ ಚಿತ್ರೀಕರಿಸಿರುವುದನ್ನು ಥ್ರಿಲ್ಲಾಗಿ ನೋಡಿರುವ ಹರಿಪ್ರಿಯಾ, ಶೂಟಿಂಗ್ ಮಾನಿಟರ್ ನೋಡುವಾಗಲೂ 3ಡಿ ಕನ್ನಡಕ ಬಳಸುತ್ತಿರುವುದನ್ನು ನೋಡಿ ಬೆರಗಾಗಿದ್ದರಂತೆ. ಒಟ್ಟಿನಲ್ಲಿ ಕುರುಕ್ಷೇತ್ರದ ಒಂದೊಂದು ಸುದ್ದಿಯೂ ಕುತೂಹಲವನ್ನು ಹೆಚ್ಚಿಸುತ್ತಲೇ ಇದೆ.

 • ಪಾಕಿಸ್ತಾನ್ ಜಿಂದಾಬಾದ್ ಎನ್ನುವವರನ್ನು ದೇಶದಿಂದ ಹೊರಹಾಕಬೇಕು - ರಿಷಬ್ ಶೆಟ್ಟಿ, ಹರಿಪ್ರಿಯಾ

  pro pakistani intellectuals should leave india says rishab shetty

  ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಬೆಲ್‍ಬಾಟಂ ಚಿತ್ರತಂಡ ಹುತಾತ್ಮ ಯೋಧ ಗುರು ಕುಟುಂಬದ ನೆರವಿಗೆ ಧಾವಿಸಿದೆ. ಗುರು ಕುಟುಂಬಕ್ಕೆ ರಿಷಬ್ ಶೆಟ್ಟಿ 50 ಸಾವಿರ ರೂ. ಹಾಗೂ ನಿರ್ಮಾಪಕ ಸಂತೋಷ್ 25 ಸಾವಿರ ರೂ. ಪರಿಹಾರನೀಡಿ ಸಾಂತ್ವನ ಹೇಳಿದ್ದಾರೆ. 

  ನಾವು ನೀಡುವ ಹಣ, ಗುರು ಕುಟುಂಬದ ತ್ಯಾಗಕ್ಕೆ ಯಾವ ರೀತಿಯಲ್ಲೂ ಸಮನಲ್ಲ ಎಂದಿರುವ ರಿಷಬ್ ಶೆಟ್ಟಿ, ಇಂತಹ ವೇಳೆಯಲ್ಲೂ ಪಾಕ್ ಪರ ಘೋಷಣೆ ಕೂಗುವವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  ತಂದೆಯನ್ನು ಕಳೆದುಕೊಂಡವರ ನೋವು, ನನಗೆ ಅರ್ಥವಾಗುತ್ತೆ ಎಂದಿರುವ ಹರಿಪ್ರಿಯಾ ಕೂಡಾ ಪಾಕ್ ಪರ ಘೋಷಣೆ ಕೂಗುವವರು ದೇಶದಲ್ಲಿರಲು ಅರ್ಹತೆ ಹೊಂದಿಲ್ಲ ಎಂದಿದ್ದಾರೆ ಹರಿಪ್ರಿಯಾ.

 • ಪೆಟ್ರೋಮ್ಯಾಕ್ಸ್.. ಪಿಚ್ಚು..ವಿಕೆಟ್ಟು..ಅಶ್ಲೀಲ.. ಆಟ ಶುರು..

  ಪೆಟ್ರೋಮ್ಯಾಕ್ಸ್.. ಪಿಚ್ಚು..ವಿಕೆಟ್ಟು..ಅಶ್ಲೀಲ.. ಆಟ ಶುರು..

  ಮಂಚದ ಮೇಲೆ ಅವರಿಬ್ಬರೂ ಅರೆಬೆತ್ತಲೆ.. ಆಟ ಮುಗಿದ ಸೂಚನೆ.. ಅವಳದ್ದು ಸಿಂಗಲ್ ಮೀನಿಂಗ್ ಪ್ರಶ್ನೆ.. ಇವನದ್ದು ಅಷ್ಟೇ ಸಿಂಗಲ್ ಮೀನಿಂಗ್ ಉತ್ತರ.. ಮುಗಿದ ಕೂಡಲೇ ಶ್ಲೀಲ..ಅಶ್ಲೀಲದ ವೇದಾಂತ..ಕೊನೆಯಲ್ಲೊಂದು ಡಬಲ್ ಮೀನಿಂಗ್ ಡೈಲಾಗು..ಅರ್ಥವಾದವರ ಕಿವಿ ಪಾವನ.. ಟ್ರೇಲರಿನ ಆರಂಭದಲ್ಲಿ ಕಣ್ಣು.. ಟ್ರೇಲರುದ್ದಕ್ಕೂ ಕಿವಿ ತಣಿಸುವ ಸಂಭಾಷಣೆಗಳೊಂದಿಗೆ ಟ್ರೇಲರ್ ಬಿಟ್ಟಿದ್ದಾರೆ ಡೈರೆಕ್ಟರ್ ವಿಜಯ್ ಪ್ರಸಾದ್. ಪೆಟ್ರೋಮ್ಯಾಕ್ಸ್ ಬೆಳಕು ಜೋರಾಗಿಯೇ ಇರುವಂತಿದೆ.

  ಜುಲೈ 15ಕ್ಕೆ ರಿಲೀಸ್ ಆಗುತ್ತಿರೋ ಪೆಟ್ರೋಮ್ಯಾಕ್ಸ್ ಸತೀಶ್ ಪಿಕ್ಚರ್ಸ್ ಮತ್ತು ಸ್ಟುಡಿಯೋ 18 ನಿರ್ಮಾಣದ್ದು. ನೀನಾಸಂ ಸತೀಶ್, ಹರಿಪ್ರಿಯಾ, ನಾಗಭೂಷಣ್, ಕಾರುಣ್ಯ ರಾಮ್, ಅರುಣ್ ಕುಮಾರ್, ಅಚ್ಯುತ್ ಕುಮಾರ್, ಸುಮನ್ ರಂಗನಾಥ್, ವಿಜಯಲಕ್ಷ್ಮಿ ಸಿಂಗ್, ಪದ್ಮಜಾ ರಾವ್, ಮಿಮಿಕ್ರಿ ಗೋಪಿ.. ಎಲ್ಲರೂ ಪೆಟ್ರೋಮ್ಯಾಕ್ಸ್ ಬೆಳಕಲ್ಲಿ ಅದ್ಭುತವಾಗಿ ಕಾಣಿಸಲಿದ್ದಾರೆ ಅನ್ನೋದಂತೂ ಪಕ್ಕಾ. ಪೆಟ್ರೋಮ್ಯಾಕ್ಸ್ ನೋಡೋಕೆ ಜುಲೈ 15ಕ್ಕೆ ಸಿದ್ಧರಾಗಿ. ಇದು ಖಂಡಿತವಾಗಿಯೂ ಅದಲ್ಲ ಅನ್ನೋದು ವಿಜಯ್ ಪ್ರಸಾದ್ ಭರವಸೆ.

 • ಫೆಬ್ರವರಿ 15ರಿಂದ ಆರಂಭ.. 2019 ಹರಿಪ್ರಿಯಾ ವರ್ಷ

  2019 will be hari priya's year

  ಬೆಲ್‍ಬಾಟಂ.. ಇದೇ ವಾರ ತೆರೆಗೆ ಬರುತ್ತಿರುವ ಈ ಸಿನಿಮಾದಿಂದ ಹರಿಪ್ರಿಯಾ 2019ರ ವರ್ಷವನ್ನು ತಮ್ಮ ಕಬ್ಜಾ ಮಾಡಿಕೊಳ್ಳಲಿದ್ದಾರೆ. ಈ ವರ್ಷ ರಿಲೀಸ್ ಆಗುತ್ತಿರುವ ಹರಿಪ್ರಿಯಾರ ಮೊದಲ ಸಿನಿಮಾ ಬೆಲ್‍ಬಾಟಂ. ರೆಟ್ರೋ ಸ್ಟೈಲಿನಲ್ಲಿ ಕಾಣಿಸಿಕೊಂಡಿರೋ ಹರಿಪ್ರಿಯಾ, ಚಿತ್ರದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

  ಅಂದಹಾಗೆ.. ಹರಿಪ್ರಿಯಾ ವರ್ಷ ಬೆಲ್‍ಬಾಟಂನಿಂದ ಶುರುವಾಗಲಿದೆ. ಏಕೆಂದರೆ, ಹರಿಪ್ರಿಯಾ ಅವರ ಸೂಜಿದಾರ, ಡಾಟರ್ ಆಫ್ ಪಾರ್ವತಮ್ಮ, ಕುರುಕ್ಷೇತ್ರ, ಕಥಾಸಂಗಮ.. ತೆರೆಗೆ ಬರೋಕೆ ರೆಡಿಯಾಗಿವೆ.

  ಕನ್ನಡ್ ಗೊತ್ತಿಲ್ಲ, ಎಲ್ಲಿದ್ದೆ ಇಲ್ಲೀ ತನಕ, ಬಿಚ್ಚುಗತ್ತಿ.. ಚಿತ್ರಗಳು ಶೂಟಿಂಗ್ ಹಂತದಲ್ಲಿವೆ. ಒಟ್ಟಿನಲ್ಲಿ 2019, ಹರಿಪ್ರಿಯಾ ವರ್ಷವಾಗಲಿದೆ.

 • ಬಾಲಕೃಷ್ಣ ಜೊತೆ ಹರಿಪ್ರಿಯಾ ಶೂಟಿಂಗ್ ಕಥೆ

  haripriya shares experience with balakrishna

  ಹರಿಪ್ರಿಯಾ... ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ನಿಮಿಷವೂ ಪುರುಸೊತ್ತಿಲ್ಲದಂತೆ ಸುತ್ತುತ್ತಿರುವ ನಟಿ. ಕನ್ನಡದಲ್ಲಷ್ಟೇ ಅಲ್ಲ, ತೆಲುಗಿಗೂ ಹಾರಿರುವ ಹರಿಪ್ರಿಯಾ, ಬಾಲಕೃಷ್ಣ ಜೊತೆ ನಟಿಸುತ್ತಿದ್ದಾರೆ. ಅದು ತಮಿಳಿನ ಖ್ಯಾತ ನಿರ್ದೇಶಕ ಕೆ.ಎಸ್. ರವಿಕುಮಾರ್ ನಿರ್ದೇಶನದ ಚಿತ್ರ ಬೇರೆ. ಬಾಲಕೃಷ್ಣ ಅವರ 102ನೇ ಚಿತ್ರ `ಜೈ ಸಿಂಹ'ದಲ್ಲಿ ನಟಿಸುತ್ತಿರುವ ಹರಿಪ್ರಿಯಾ, ಬಾಲಕೃಷ್ಣ ಅವರ ಸರಳತೆಗೆ ಮಾರು ಹೋಗಿದ್ದಾರೆ.

  ತೆಲುಗು ಚಿತ್ರರಂಗ ನನಗೆ ಹೊಸದಲ್ಲ. ಈಗ ಮತ್ತೆ ತೆಲುಗಿಗೆ ಹೋಗಿದ್ದೇನೆ. ಅದೂ ಬಾಲಕೃಷ್ಣ ಜೊತೆಗಿನ ಸಿನಿಮಾ ಮೂಲಕ. 100 ಚಿತ್ರಗಳಲ್ಲಿ ನಟಿಸಿದ್ದರೂ, ಅವರು ಸಹಕಲಾವಿದರೊಂದಿಗೆ ವರ್ತಿಸುವ ರೀತಿ ನನಗೆ ಇಷ್ಟವಾಯಿತು ಎಂದಿದ್ದಾರೆ ಹರಿಪ್ರಿಯಾ. 

  ಚಿತ್ರದ ಶೂಟಿಂಗ್ ವೇಳೆ ತೆಗೆದ ಫೋಟೋಗಳನ್ನು ಹಂಚಿಕೊಂಡು ಖುಷಿಪಟ್ಟಿದ್ದಾರೆ.

 • ಬಾಲಯ್ಯ ಸಿನಿಮಾಗೆ ಹರಿಪ್ರಿಯಾ ನಾಯಕಿ

  haripriya in balakrishna nandamuri's next movie

  ಹರಿಪ್ರಿಯಾ ಕನ್ನಡದಲ್ಲಿ ಸಿಕ್ಕಾಪಟ್ಟೆ ಬ್ಯುಸಿ. ಲೈಫ್ ಜೊತೆ ಒಂದ್ ಸೆಲ್ಫಿ, ಸೂಜಿದಾರ ಚಿತ್ರಗಳಲ್ಲಿ ನಾಯಕಿಯಾಗಿ, ಆಂಜನಿಪುತ್ರದಲ್ಲಿ ಕ್ಯಾಮಿಯೋ ಆಗಿ ಕಾಣಿಸಿಕೊಂಡಿರುವ ಹರಿಪ್ರಿಯಾ, ಇತ್ತೀಚೆಗಷ್ಟೇ ಕುರುಕ್ಷೇತ್ರ ಮುಗಿಸಿದ್ದಾರೆ. ಇನ್ನು ಸಂಹಾರ ಚಿತ್ರದಲ್ಲಿ ನೆಗೆಟಿವ್ ಶೇಡ್ ಇರೋ ಪಾತ್ರ, ಕನಕದಲ್ಲಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿರುವ ಹರಿಪ್ರಿಯಾಗೆ ಬಿಡುವೇ ಇಲ್ಲ.

  ಈ ಬಿಡುವಿಲ್ಲದ ಶೆಡ್ಯೂಲ್ ಮಧ್ಯೆಯೇ ಹರಿಪ್ರಿಯಾ ತೆಲುಗಿಗೆ ಹೊರಟು ನಿಂತಿದ್ದಾರೆ. ಬಾಲಕೃಷ್ಣ ಅಭಿನಯದ, ಕೆ.ಎಸ್.ರವಿಕುಮಾರ್ ನಿರ್ದೇಶನದ ಚಿತ್ರದಲ್ಲಿ ಬಾಲಯ್ಯಗೆ ಹರಿಪ್ರಿಯಾ ನಾಯಕಿ. ದ್ವಿಪಾತ್ರದಲ್ಲಿರುವ ಬಾಲಕೃಷ್ಣಗೆ ಒಂದು ಪಾತ್ರದಲ್ಲಿ ನಯನತಾರ ನಾಯಕಿಯಾಗಿದ್ದರೆ, ಇನ್ನೊಂದು ಪಾತ್ರದಲ್ಲಿ ಹರಿಪ್ರಿಯಾ ನಾಯಕಿಯಾಗಿರುತ್ತಾರೆ. 

  4 ವರ್ಷಗಳ ನಂತರ ತೆಲುಗು ಚಿತ್ರದಲ್ಲಿ ನಟಿಸುತ್ತಿರುವ ಹರಿಪ್ರಿಯಾ, ಬಾಲಕೃಷ್ಣ ಜೊತೆ ನಟಿಸುವುದೇ ಒಂದು ದೊಡ್ಡ ಗೌರವ ಎಂದು ಹೇಳಿದ್ದಾರೆ.

 • ಬಿಚ್ಚುಗತ್ತಿ ಮುದ್ದಣ್ಣನ ಧ್ವನಿ ಬದಲಾವಣೆ

  bicchugathi mudaana gets new voice

  ಬಿಚ್ಚುಗತ್ತಿ, ಇದೇ ವಾರ ರಿಲೀಸ್ ಆಗಿ ಜನ ಮೆಚ್ಚುಗೆ ಪಡೆದಿರುವ ಸಿನಿಮಾ. ಬಿಚ್ಚುಗತ್ತಿ ಭರಮಣ್ಣನಾಗಿ ರಾಜವರ್ಧನ್, ಸಿದ್ದಾಂಬೆಯಾಗಿ ಹರಿಪ್ರಿಯಾ ಸಿನಿಮಾವನ್ನು ಆವರಿಸಿಬಿಟ್ಟಿದ್ದಾರೆ. ಚಿತ್ರದಲ್ಲಿ ಅಷ್ಟೇ ಪ್ರಮುಖವಾದ ಪಾತ್ರ ದಳವಾಯಿ ಮುದ್ದಣ್ಣನದ್ದು. ಈ ಪಾತ್ರಕ್ಕೆ ಜೀವ ತುಂಬಿರೋದು ಬಾಹುಬಲಿ ಪ್ರಭಾಕರ್. ಅಭಿನಯ ಬೊಂಬಾಟ್ ಇದ್ದರೂ, ತೆಲುಗಿನವರಾದ ಪ್ರಭಾಕರ್ ಡಬ್ಬಿಂಗ್‍ನಲ್ಲಿ ಕೆಲವು ಅಪಭ್ರಂಶಗಳಿದ್ದವು. ಇವುಗಳ್ನು ಪ್ರೇಕ್ಷಕರು ಗುರುತಿಸಿ, ಬದಲಿಸುವಂತೆ ಒತ್ತಡ ಬಂದ ಕಾರಣ, ಬಿಚ್ಚುಗತ್ತಿ ಚಿತ್ರತಂಡ ಧ್ವನಿ ಬದಲಿಸಲು ಮುಂದಾಗಿದೆ.

  ಪ್ರಭಾಕರ್ ಅರ್ಥಾತ್ ಮುದ್ದಣ್ಣನ ಪಾತ್ರಕ್ಕೆ ಬೇರೊಬ್ಬ ಕಲಾವಿದರಿಂದ ಡಬ್ಬಿಂಗ್ ಮಾಡಿಸುತ್ತಿದೆ ಚಿತ್ರತಂಡ. ಈಗಾಗಲೇ ಡಬ್ಬಿಂಗ್ ಮುಕ್ತಾಯದ ಹಂತಕ್ಕೆ ಬಂದಿದೆ. ಮುಂದಿನ ವಾರ ಅಂದರೆ ಶುಕ್ರವಾರದಿಂದ ಹೊಸ ಮುದ್ದಣ್ಣನ ಧ್ವನಿ ಚಿತ್ರಮಂದಿರದಲ್ಲಿ ಮೊಳಗಲಿದೆ.

 • ಬೆಟ್ಟ ಹತ್ತಿ ತಿಮ್ಮಪ್ಪನ ದರ್ಶನ ಪಡೆದ ಹರಿಪ್ರಿಯಾ

  haripriya in thirupathi

  ಸೆಲಬ್ರಿಟಿಗಳು ದೇವಸ್ಥಾನಕ್ಕಷ್ಟೇ ಅಲ್ಲ, ಎಲ್ಲಿಯೇ ಹೋದರೂ ಅಭಿಮಾನಿಗಳು ಮುತ್ತಿಕೊಳ್ಳುವುದು ಮಾಮೂಲು. ಹೀಗಾಗಿಯೇ ಸಾಮಾನ್ಯವಾಗಿ ಸೆಲಬ್ರಿಟಿಗಳು ದೇವಸ್ಥಾನಗಳಿಗೆ ಹೋದಾಗ ಸ್ವಲ್ಪ ಮುಂಜಾಗ್ರತೆ ವಹಿಸಿ, ಪೂರ್ವ ಸಿದ್ಧತೆ ಮಾಡಿಕೊಂಡೇ ಬರುತ್ತಾರೆ. ಹೀಗೆ ಬಂದವರು ಹಾಗೆ ಮರೆಯಾಗಿಬಿಡುತ್ತಾರೆ. ಆದರೆ, ಹರಿಪ್ರಿಯಾ ಹಾಗಲ್ಲ.

  ಹರಿಪ್ರಿಯಾ ತಿರುಪತಿ ತಿಮ್ಮಪ್ಪನದ ಭಕ್ತೆ. ಸಾಮಾನ್ಯವಾಗಿ ಸೆಲಬ್ರಿಟಿಗಳು ತಿರುಪತಿಗೆ ಹೋದರೆ ವಿಐಪಿ ದರ್ಶನಕ್ಕೆ ಹೋಗ್ತಾರೆಯೇ ಹೊರತು, ಬೆಟ್ಟ ಹತ್ತುವ ಸಾಹಸ ಮಾಡುವುದಿಲ್ಲ. ಆದರೆ, ಹರಿಪ್ರಿಯಾ 11 ಕಿ.ಮೀ. ಬೆಟ್ಟವನ್ನು ಹತ್ತಿ, 3550 ಮೆಟ್ಟಿಲುಗಳನ್ನೇರಿ ತಿರುಪತಿ ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ. ಮುಂಜಾನೆಯ ಚುಮು ಚುಮು ಚಳಿಯಲ್ಲೇ ಬೆಟ್ಟ ಹತ್ತಿ ದರ್ಶನ ಮುಗಿಸಿಕೊಂಡು ವಾಪಸ್ ಬಂದಿದ್ದಾರೆ.

  ಸದ್ಯಕ್ಕೆ ತೆಲುಗಿನಲ್ಲಿ ಹರಿಪ್ರಿಯಾ ಅಭಿನಯದ ಜೈಸಿಂಹ ಚಿತ್ರ ಭರ್ಜರಿಯಾಗಿ ಓಡುತ್ತಿದ್ದರೆ, ಕನ್ನಡದಲ್ಲಿ ಸಂಹಾರ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

 • ಬೆಲ್‍ಬಾಟಂ ಕಾಮಿಡಿ.. ಓದಿ.. ನಕ್ಕುಬಿಡಿ.. ಆಮೇಲೆ ಸಿನಿಮಾ ನೋಡಿ..

  bellbottom's funny promotions

  ಬೆಲ್‍ಬಾಟಂ ಚಿತ್ರದ ಪ್ರಮೋಷನ್ ಭರ್ಜರಿಯಾಗಿದೆ. ಡಿಫರೆಂಟ್ ಆಗಿದೆ. ಅವರು ಯಾವುದನ್ನೂ ಬಿಟ್ಟಿಲ್ಲ. ಅಟ್ಲಾಸ್ ಸೈಕಲ್ಲು, ಹೊಲಿಗೆ ಮೆಷಿನ್ನು, ದೀಪಾವಳಿ ಲಾಟರಿ, ಹಲ್ಲುಪುಡಿ, ಥ್ರಿಲ್ಲರ್ ಕಾದಂಬರಿ, ಸ್ನೋ ಪೌಡರು.. ಹೀಗೆ ಎಲ್ಲವನ್ನೂ ಚಿತ್ರದ ಪ್ರಚಾರಕ್ಕೆ ಬಳಸಿಕೊಂಡು ಕಿಕ್ ಕೊಟ್ಟಿರೋ ಬೆಲ್‍ಬಾಟಂ, ಒಂದಿಷ್ಟು ಕಾಮಿಡಿಯನ್ನೂ ಬಿಟ್ಟಿದೆ. ಸುಮ್ಮನೆ ಇವುಗಳನ್ನು ಓದುತ್ತಾ ಹೋಗಿ..

  ಅಯ್ಯೋ ಸಿವನೆ.. ಈ ನನ್ ಕಂದ ಓದಲ್ಲ.. ಬರೆಯಲ್ಲ.. ಡಿಟೆಕ್ಟಿವ್ ಆಗ್ತೀನಿ ಅಂತ ಕುಂತದಲ್ಲ. ಇದನ್ನು ತಗೊಂಡು ಏನ್ ಮಾಡ್ಲಿ, ಒಂದ್ ತಾಯತನಾದ್ರೂ ಕಟ್ಟುಸ್ಲ..

  ತಾಯಿ ಹೀಗೆ ಯೋಚಿಸ್ತಿದ್ರೆ, ಟಾಪಲ್ಲಿ ಎದೆ ಕಲಕುವ ಸೆಂಟಿಮೆಂಟ್ ಪತ್ತೇದಾರಿ ಪಿಕ್ಚರ್ ಎಂಬ ಒಕ್ಕಣೆ. ಮತ್ತೊಂದು ಕಡೆ ಚಿತ್ರಚೋರ ರಿಷಬ್ ಶೆಟ್ಟಿ, ಹಂಸವದನೆ ಹರಿಪ್ರಿಯಾ ನಟನೆಯಲ್ಲಿ.. ಎಂಬ ಸಾಲು. ಟೆಂಟ್ ಸಿನಿಮಾ ನೆನಪಾಯ್ತಾ..

  ಕಂಟಿನ್ಯೂ.. ಕಂಟಿನ್ಯೂ..

  ಸರ್ಪದೇವನ ಶಾಪದಿಂದ ಸಂಸಾರವನ್ನು ರಕ್ಷಿಸುವ ಗೃಹಿಣಿಯೊಬ್ಬಳ ಮೈನವಿರೇಳಿಸುವ ಸಾಹಸಯಮ ಕಥೆ. ಹೊಚ್ಚ ಹೊಸ ಕಾದಂಬರಿ, ಇದೀಗ ಮಾರುಕಟ್ಟೆಯಲ್ಲಿ ಲಭ್ಯ.

  ಇದು ಕಾದಂಬರಿ ಸ್ಟೈಲು. ಮುಂದಿನದ್ದು.. ಕೆಜಿಎಫ್ ಸ್ಟೈಲು.

  ಕೆಜಿಎಫ್ ಡಾನ್ : ನಂಗೊಂದ್ ಕೆಲಸ ಆಗಬೇಕು. ಒಂದ್ ಆನೇ ಹೊಡೀಬೇಕು.

  ಡಿಟೆಕ್ಟಿವ್ ದಿವಾಕರ : ಅಷ್ಟು ದೊಡ್ಡ ಪ್ರಾಣೀನೇ ಯಾಕೆ..?

  ಕೆಜಿಎಫ್ ಡಾನ್ : ಮಗಳ ಮದುವೆ ಆಯ್ತು. ಬೀಗರಿಗೆ ಗ್ರ್ಯಾಂಡ್ ಆಗಿ ಊಟ ಹಾಕಿಸ್ಬೇಕು.

  ಡಿಟೆಕ್ಟಿವ್ ದಿವಾಕರ : ಸಾರಿ ಆಂಡ್ರೂಸ್. ಆನೆ ಹೊಡೆದ್ರೆ ಅರಣ್ಯ ಇಲಾಖೆಯವರು ಕೇಸ್ ಹಾಕ್ತಾರೆ. ಬೇಕಾದ್ರೆ 50 ಕೆಜಿ ನಾಟಿಕೋಳಿ ಕೊಡ್ತೀನಿ. ಎಂಜಾಯ್.

  ಇದು ಸಿನಿಮಾ ಸ್ಟೈಲು. ಧಾರಾವಾಹಿ ಬುಟ್‍ಬುಡ್ತಾರಾ..? ಅಲ್ಲಿ ಪುಟ್ಟಗೌರಿ ಸ್ಟೈಲು. ಅತ್ತ.. ಗೆಳೆಯ ರಕ್ಷಿತ್ ಶೆಟ್ಟಿಯ ರಿಲೀಸ್ ಕೂಡಾ ಆಗದ ಅವನೇ ಶ್ರೀಮನ್ನಾರಾಯಣನೂ ಬೆಲ್‍ಬಾಟಂ ಪ್ರಚಾರಕ್ಕೆ ಬಂದಿದ್ದಾನೆ. 

  ರಕ್ಷಿತ್ ಶೆಟ್ಟಿ : ಅವನು ಚರ್ಮ ವೈದ್ಯ ಅಲ್ಲ ಅಂತ ಹೆಂಗೆ ಪತ್ತೆ ಹಚ್ಚಿದೆ ದಿವಾಕರ..?

  ದಿವಾಕರ : ಬಡ್ಡಿ ಮಗ, ಕ್ಲಿನಿಕ್ ಬೋರ್ಡಲ್ಲಿ ಲೆದರ್ ಸ್ಪೆಷಲಿಸ್ಟ್ ಅಂತಾ ಹಾಕ್ಕೊಂಡಿದ್ದ.

  ಫೈನಲ್ಲಾಗಿ.. ಟೈಟಾನಿಕ್ ನೋಡ್ಕಳಿ..

  ಟೈಟಾನಿಕ್ ಹಡಗು ಮುಳುಗೋಕೆ ಕಾರಣ ಏನ್ ಗೊತ್ತಾ..? ದಿವಾಕರನ ಪತ್ತೆದಾರಿಕೆಯ ವರದಿ ಇಷ್ಟೆ. ಟೈಟಾನಿಕ್ ಹಡಗಿಗೆ ಮಂತ್ರಿಸಿದ ನಿಂಬೆಹಣ್ಣನ್ನೇ ಕಟ್ಟಿಲ್ಲ. ಅಷ್ಟೆಲ್ಲ ದೃಷ್ಟಿ ಆದ್ರೆ ಇನ್ನೇನಾಗುತ್ತೆ. ಸ್ಸೋ.. ದೃಷ್ಟಿ ತಗುಲಿ ಟೈಟಾನಿಕ್ ಮುಳುಗಿದೆ.

 • ಬೆಲ್‍ಬಾಟಂನಲ್ಲಿ ಸುಂದರ ಕೃಷ್ಣ ಅರಸ್..!

  sundar krishna urs voice in bell bottom

  ಬೆಲ್‍ಬಾಟಂ ಚಿತ್ರದಲ್ಲಿ ಸುಂದರ ಕೃಷ್ಣ ಅರಸ್ ಇದ್ದಾರೆ. ಹೌದು, ಇದು ಅಚ್ಚರಿಯಾದರೂ ಸತ್ಯ. ಭೌತಿಕವಾಗಿ ನಮ್ಮೊಂದಿಗಿಲ್ಲದ ಸುಂದರ್ ಕೃಷ್ಣ ಅರಸ್ ಅವರನ್ನು, ಬೆಲ್‍ಬಾಟಂ ಚಿತ್ರದಲ್ಲಿ ಮತ್ತೊಮ್ಮೆ ಕೇಳಬಹುದು. ಯೆಸ್. ಚಿತ್ರದ ಹಾಡಿನಲ್ಲಿ ಅರಸ್ ಅವರ ಕಂಚಿನ ಕಂಠದ ವಿಶಿಷ್ಟ ಧ್ವನಿಯನ್ನು ವಿಶೇಷವಾಗಿ ಬಳಸಿಕೊಂಡಿದ್ದಾರೆ ನಿರ್ದೇಶಕ ಜಯತೀರ್ಥ.

  ಚಿತ್ರವನ್ನು ಡಿಫರೆಂಟ್ ಆಗಿಯೇ ಪ್ರಮೋಟ್ ಮಾಡುತ್ತಿರುವ ಜಯತೀರ್ಥ, ಹಳೆಯ ಜಾಹೀರಾತುಗಳ ಮೂಲಕವೇ ಚಿತ್ರದ ನಿರೀಕ್ಷೆ ಡಬಲ್ ಮಾಡಿದ್ದಾರೆ. ರಿಷಬ್ ಶೆಟ್ಟಿ, ಹರಿಪ್ರಿಯಾ ಅಭಿನಯದ ಚಿತ್ರದಲ್ಲಿ ಯೋಗರಾಜ್ ಭಟ್ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕೆ.ಟಿ.ದಯಾನಂದ್ ಬರೆದಿರುವ ಕಥೆಗೆ ಬಂಡವಾಳ ಹೂಡಿರುವುದು ಸಂತೋಷ್ ಕುಮಾರ್ ಎಂಸಿ..

   

 • ಬೆಲ್‍ಬಾಟಮ್ ಹಾಕ್ಕೊಳ್ತಾರೆ ಹರಿಪ್ರಿಯಾ

  haripriya in bellbottom

  ಕಿರಿಕ್ ಪಾರ್ಟಿಯ ನಿರ್ದೇಶಕ ರಿಷಬ್ ಶೆಟ್ಟಿ ನಾಯಕರಾಗಿ ನಟಿಸುತ್ತಿರುವ ಚಿತ್ರ ಬೆಲ್‍ಬಾಟಮ್. ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ಜಯತೀರ್ಥ. ಇವರಿಬ್ಬರ ಜೊತೆ ಹರಿಪ್ರಿಯಾ ಅವರದ್ದು ಎರಡನೇ ಪ್ರಯತ್ನ. ರಿಷಬ್ ನಿರ್ದೇಶನದ ರಿಕ್ಕಿ ಚಿತ್ರದಲ್ಲಿ ನಾಯಕಿಯಾಗಿದ್ದವರು ಹರಿಪ್ರಿಯಾ. ಇನ್ನು ಜಯತೀರ್ಥ ನಿರ್ದೇಶನದ ಬುಲೆಟ್ ಬಸ್ಯಾ ಚಿತ್ರದಲ್ಲೂ ಹರಿಪ್ರಿಯಾ ನಾಯಕಿಯಾಗಿದ್ದರು. ಈಗ ಈ ಇಬ್ಬರೂ ನಿರ್ದೇಶಕರು ಜೊತೆಯಾಗಿರುವ ಚಿತ್ರದಲ್ಲಿಯೂ ಹರಿಪ್ರಿಯಾ ನಾಯಕಿ.

  ಗೋಲ್ಡನ್ ಹಾರ್ಸ್ ಸಿನಿಮಾಸ್‍ನಲ್ಲಿ ಸಂತೋಷ್ ಕುಮಾರ್ ನಿರ್ಮಿಸುತ್ತಿರುವ ಚಿತ್ರಕ್ಕೆ, ಅಜನೀಶ್ ಲೋಕನಾಥ್ ಸಂಗೀತವಿದೆ. ಚಿತ್ರದ ಶೂಟಿಂಗ್ ಫೆಬ್ರವರಿಯಲ್ಲಿ ಶುರುವಾಗಲಿದೆ.

   

 • ಬೆಲ್‍ಬಾಟಮ್‍ನಲ್ಲಿ ಮುಳುಗಿ ಹೋಗಿದ್ದಾರೆ ಹರಿಪ್ರಿಯಾ

  haripriya in bellbottom

  ಹರಿಪ್ರಿಯಾ ಈಗ ಸಿಕ್ಕಾಪಟ್ಟೆ ಬ್ಯುಸಿ ನಟಿ. ಅವರ ಸಂಹಾರ ಚಿತ್ರ ಇದೇ ವಾರ ರಿಲೀಸ್ ಆಗುತ್ತಿದೆ. ಇನ್ನೊಂದು ಚಿತ್ರ ಲೈಫ್ ಜೊತೆ ಒಂದ್ ಸೆಲ್ಫಿ ಶೂಟಿಂಗ್‍ನ ಕೊನೆಯ ಹಂತದಲ್ಲಿದೆ. ಸೂಜಿದಾರ ಚಿತ್ರ ಪ್ರೊಡಕ್ಷನ್ ಹಂತದಲ್ಲಿದೆ. ತೆಲುಗಿನಲ್ಲಿ ನಟಿಸಿದ್ದ ಜೈಸಿಂಹ, ಭರ್ಜರಿ ಸದ್ದು ಮಾಡುತ್ತಿದೆ. ಮತ್ತೊಂದೆಡೆ ಬೆಲ್‍ಬಾಟಮ್ ಚಿತ್ರಕ್ಕೆ ರೆಡಿಯಾಗಿದ್ದಾರೆ ಹರಿಪ್ರಿಯಾ.

  ಬೆಲ್‍ಬಾಟಮ್ ಚಿತ್ರದ ಬಗ್ಗೆ ಹರಿಪ್ರಿಯಾ ಖುಷಿ ಪಡೋಕೆ ಕಾರಣಗಳಿವೆ. ಏಕೆಂದರೆ, ಇಡೀ ಚಿತ್ರದ ಸ್ಕ್ರಿಪ್ಟ್ ಅವರ ಕೈಲಿದೆ. ಇಷ್ಟು ವರ್ಷಗಳಲ್ಲಿ ಈ ರೀತಿ ಚಿತ್ರದ ಇಡೀ ಸ್ಕ್ರಿಪ್ಟ್ ನೋಡುತ್ತಿರುವುದು ಅವರಿಗೂ ಮೊದಲ ಅನುಭವ. ರಿಷಬ್ ಶೆಟ್ಟಿ ನಾಯಕರಾಗಿರುವ ಚಿತ್ರಕ್ಕೆ ಜಯತೀರ್ಥ ನಿರ್ದೇಶಕ.

  80ರ ದಶಕದ ಕಥೆ. ವಸ್ತ್ರ ವಿನ್ಯಾಸ, ಡೈಲಾಗ್ ಪ್ರತಿಯೊಂದೂ ವಿಭಿನ್ನವಾಗಿದೆ. ಚಿತ್ರದ ಮೇಲೆ ಭಾರಿ ವಿಶ್ವಾಸ ಇಟ್ಟುಕೊಂಡಿದ್ದಾರೆ.

 • ಮೈ ಗಢಗಢ ನಡುಗುವ ಚಳಿಯಲ್ಲಿ..ರಿವರ್ ರಾಫ್ಟಿಂಗ್

  life jothe ondu selfie team

  ರಿವರ್ ರ್ಯಾಫ್ಟಿಂಗ್ ಅನ್ನೋದು ಅದ್ಭುತ ಅನುಭವ ಕೊಡುತ್ತೆ. ಹರಿಯುವ ನದಿಯಲ್ಲಿ ರ್ಯಾಫ್ಟಿಂಗ್ ಮಾಡೋದು ಸುಲಭದ ಕೆಲಸವಲ್ಲ. ಅದಕ್ಕೆ ಮೊದಲು ಧೈರ್ಯ ಇರಬೇಕು. ಈಜು ಗೊತ್ತಿರಬೇಕು. ಈಜು ಗೊತ್ತಿದ್ದವರಿಗಷ್ಟೇ ಧೈರ್ಯ ಬರಲು ಸಾಧ್ಯ. ಸದ್ಯಕ್ಕೆ ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರತಂಡ ಹಿಮಾಲಯದ ತಪ್ಪಲಲ್ಲಿ ರ್ಯಾಫ್ಟಿಂಗ್ ಮಾಡಿದೆ.

  ದಿನಕರ್ ತೂಗುದೀಪ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಜ್ವಲ್, ಪ್ರೇಮ್, ಹರಿಪ್ರಿಯಾ ಪ್ರಮುಖ ಪಾತ್ರದಲ್ಲಿದ್ದಾರೆ. ಇಡೀ ಚಿತ್ರತಂಡ ಹೃಷಿಕೇಶದಲ್ಲಿ ಗಢಗಢ ನಡುಗುವ ಈ ಚಳಿಯಲ್ಲೇ ರ್ಯಾಫ್ಟಿಂಗ್ ಮಾಡಿರುವುದು ವಿಶೇಷ. ಹರಿಪ್ರಿಯಾ, ಪ್ರಜ್ವಲ್, ಪ್ರೇಮ್.. ಎಲ್ಲರೂ.. ಈಜು ಗೊತ್ತಿದ್ದರೂ, ಹರಿಯುವ ನದಿಯಲ್ಲಿ ರ್ಯಾಫ್ಟಿಂಗ್ ಮಾಡುವುದು ವಿಭಿನ್ನ ಅನುಭವ ಎಂದು ಖುಷಿ ಹಂಚಿಕೊಂಡಿದ್ದಾರೆ.

 • ಯಶೋಧರನ ಅಮೃತಮತಿ ಪಾತ್ರದಲ್ಲಿ ಹರಿಪ್ರಿಯಾ

  haripriya as amruthamathi in baraguru ramachandrappa's next film

  ಒಂದರ ಹಿಂದೊಂದು ಅದ್ಭುತ ಅವಕಾಶಗಳನ್ನೇ ಗಿಟ್ಟಿಸುತ್ತಿರುವ ಹರಿಪ್ರಿಯಾಗೆ ಈ ಬಾರಿ ಬಂಪರ್ ಅವಕಾಶವೇ ಸಿಕ್ಕಿದೆ. ಬಿಚ್ಚುಗತ್ತಿಯಲ್ಲಿ ಐತಿಹಾಸಿಕ ಪಾತ್ರ ಮಾಡುತ್ತಿರುವ ಹರಿಪ್ರಿಯಾ, ಈ ಬಾರಿ ಇನ್ನೂ ಹಿಂದಕ್ಕೆ ಅಂದರೆ 13ನೇ ಶತಮಾನಕ್ಕೆ ಹೋಗಲಿದ್ದಾರೆ. ಅದು ಬರಗೂರು ರಾಮಚಂದ್ರಪ್ಪ ನಿರ್ದೇಶನದಲ್ಲಿ.

  ಬರಗೂರು ಈಗ ಕನ್ನಡದ ಐತಿಹಾಸಿಕ ಕಾವ್ಯ ಜನ್ನನ ಯಶೋಧರ ಚರಿತೆಯನ್ನು ಸಿನಿಮಾ ರೂಪಕ್ಕೆ ತರುತ್ತಿದ್ದಾರೆ. ಈ ಚಿತ್ರದಲ್ಲಿನ ನಾಯಕಿ ಅಮೃತಮತಿ ಪಾತ್ರಕ್ಕೆ ಆಯ್ಕೆಯಾಗಿರುವುದು ಹರಿಪ್ರಿಯಾ.

  ಅಮೃತಮತಿ ಒಂದು ಅಪರೂಪದ ಪಾತ್ರ. ಮಹಾರಾಜನ ಪ್ರೀತಿಯ ಪತ್ನಿಯಾಗಿದ್ದೂ, ಸುಖದ ಸುಪ್ಪತ್ತಿಗೆಯಲ್ಲಿರುವ ಅಪರೂಪದ ಸೌಂದರ್ಯವತಿ. ಆದರೆ, ಆಕೆ ಕುರೂಪಿಯಾದ ಗೂನು ಬೆನ್ನಿನ ವಿಕೃತ ಮನಸ್ಸಿನ ಆನೆ ಕಾಯುವ ಮಾವುತನನ್ನು ಪ್ರೇಮಿಸುತ್ತಾಳೆ. ಕೊನೆಗೆ ಪತಿಯನ್ನೇ ಕೊಲ್ಲುವ ಪಾತ್ರ ಅಮೃತಮತಿಯದ್ದು. ಈ ಸಂಕೀರ್ಣ ಪಾತ್ರವನ್ನು ನಿರ್ವಹಿಸುವ ಹೊಣೆ ಹರಿಪ್ರಿಯಾ ಹೆಗಲೇರಿದೆ.

  ಜೈನ ಧರ್ಮದ ಪ್ರಚಾರಕ್ಕಾಗಿಯೇ 13ನೇ ಶತಮಾನದಲ್ಲಿ ಜನ್ನ ಬರೆದಿದ್ದ ಕಾವ್ಯ ಯಶೋಧರ ಚರಿತೆ. ಅದರ ಹೊರತಾಗಿಯೂ ಅದ್ಭುತ ಕಾವ್ಯ ಸೃಷ್ಟಿ ಹೊಂದಿರುವ ಯಶೋಧರ ಚರಿತೆಯನ್ನು ಸಿನಿಮಾ ರೂಪಕ್ಕಿಳಿಸುವುದು ಸುಲಭದ ಮಾತೇನಲ್ಲ. ಆ ಸಾಹಸಕ್ಕೆ ಬರಗೂರು ಕೈ ಹಾಕಿದ್ದರೆ, ಅತಿ ದೊಡ್ಡ ಪಾತ್ರವನ್ನು ನಿರ್ವಹಿಸುವ ಸವಾಲನ್ನು ಹರಿಪ್ರಿಯಾ ಸ್ವೀಕರಿಸಿದ್ದಾರೆ.

 • ರಾಕ್ಷಸಿಯಾಗಿಬಿಟ್ಟಿದ್ದಾರೆ ಹರಿಪ್ರಿಯಾ

  haripriya in samhara

  ಪಾಪ.. ಎಷ್ಟು ಮುದ್ದಾಗಿದ್ದಾರೆ. ನಕ್ರೆ ನೋಡ್ಬೇಕು ಅನ್ಸತ್ತೆ. ನೋಡ್ತಾನೇ ಇರಬೇಕು ಅನ್ಸತ್ತೆ ಅಂತಾ ವಯಸ್ಸಿನ ಹುಡುಗ್ರು ಬೇಜಾರ್ ಮಾಡ್ಕಂಡ್ರೆ, ನಮ್ ಕರಾವಳಿ ಹುಡ್ಗಿ ಕಾಣಿ, ಹಿಂಗೆಲ್ಲ ರಾಕ್ಷಸಿ ಅನ್ನೋದು ತಪ್ಪುಂಟು ಅಂತಾರೆ ಕರಾವಳಿ ಮಂದಿ. ಆದರೆ, ಒಂದಂತೂ ಸತ್ಯ. ಹರಿಪ್ರಿಯಾ ರಾಕ್ಷಸಿಯಾಗಿಬಿಟ್ಟಿದ್ದಾರೆ.

  ನಗುವಲ್ಲೇ ಮನಸ್ಸುಗಳನ್ನು ದೋಚುವ ರಾಕ್ಷಸಿಯಾಗಿದ್ದಾರೆ. ಮಜವಾದ ರಸಕನ್ಯೆಯೋ.. ನಿಜವಾದ ವಿಷಕನ್ಯೆಯೋ.. ಧನದಾಹಯ ಶೃಂಗಾರ ಪ್ರೇಯಸಿ.. ನಗುತಾಳೆ ಪ್ರೇಮೀನಾ ಸಾಯಿಸಿ.. 

  ಅಬ್ಬಾ.. ಇದೆಲ್ಲ ಇರುವುದು ಸಂಹಾರ ಚಿತ್ರದ ಹಾಡುಗಳ ಸಾಹಿತ್ಯದಲ್ಲಿ. 

  ಚಿತ್ರದಲ್ಲಿ ಹರಿಪ್ರಿಯಾ ಅವರದ್ದು ಸಂಪೂರ್ಣ ನೆಗೆಟಿವ್ ಶೇಡ್ ಇರುವ ಪಾತ್ರ. ಅಭಿನಯದ ವಿಚಾರಕ್ಕೆ ಬಂದರೆ, ಹರಿಪ್ರಿಯಾ ನಿಜಕ್ಕೂ ರಾಕ್ಷಸಿಯೇ. ಹಾಡು ಹಿಟ್ ಆಗಿರುವುದಷ್ಟೇ ಅಲ್ಲ, ಚಿತ್ರದ ಬಗ್ಗೆ ವಿಪರೀತ ಎನ್ನುವಷ್ಟು ಕುತೂಹಲ ಸೃಷ್ಟಿಸಿಬಿಟ್ಟಿದೆ. 

  ಚಿರಂಜೀವಿ ಸರ್ಜಾ ನಾಯಕರಾಗಿರುವ ಚಿತ್ರದಲ್ಲಿ ಹರಿಪ್ರಿಯಾ ನಾಯಕಿಯೋ.. ಖಳನಾಯಕಿಯೋ.. ಗೊಂದಲವಿದೆ. ಮುಂದಿನ ವಾರ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕೋದು ಖಚಿತ.

 • ಶಹಬ್ಬಾಸ್ ಹರಿಪ್ರಿಯಾ.. ಶಹಬ್ಬಾಸ್..

  haripriya donates blood to women in need

  ಟ್ವಿಟರ್‍ನಲ್ಲಿ ಆಕ್ಟಿವ್ ಆಗಿರುವ ನಟಿಯರಲ್ಲಿ ಹರಿಪ್ರಿಯಾ ಕೂಡಾ ಒಬ್ಬರು. ಹಾಗೇ ಟ್ವಿಟರ್ ನೋಡುತ್ತಿದ್ದಾಗ, ಗರ್ಭಿಣಿಯೊಬ್ಬರಿಗೆ ತುರ್ತಾಗಿ ರಕ್ತ ಬೇಕಾಗಿದೆ ಎಂಬ ಟ್ವೀಟ್ ಕಣ್ಣಿಗೆ ಬಿತ್ತು. ತಕ್ಷಣ ಆಸ್ಪತ್ರೆಗೆ ಹೋಗಿಬಿಟ್ಟರು ಹರಿಪ್ರಿಯಾ. ಆ ಗರ್ಭಿಣಿಗೆ ರಕ್ತದಾನ ಮಾಡಿದ ಹರಿಪ್ರಿಯಾ, ಹೆರಿಗೆಯವರೆಗೂ ಇದ್ದು ಬಂದಿದ್ದಾರೆ. ಆ ಮಹಿಳೆ, ಅವಳಿ ಮಕ್ಕಳಿಗೆ ಜನ್ಮ ಕೊಟ್ಟಿದ್ದಾರೆ. ಹರಿಪ್ರಿಯಾ ಖುಷಿಗೆ ಇನ್ನೇನು ಬೇಕು.

  ನಾನು ರಕ್ತದಾನ ಮಾಡಿದ್ದು ಇದೇ ಮೊದಲು. ಹೀಗಾಗಿ ರಕ್ತದಾನ ಮಾಡುವವರೆಗೂ ಸ್ವಲ್ಪ ಭಯವಿತ್ತು. ಆಮೇಲೆ ಆ ತಾಯಿಯನ್ನು ನೋಡಿದ ಮೇಲೆ ಅದೇನೋ ತೃಪ್ತಿ. ದಯವಿಟ್ಟು ಅಗತ್ಯವಿರುವವರಿಗೆ ರಕ್ತದಾನ ಮಾಡಿ ಎಂದು ಮನವಿ ಮಾಡಿದ್ದಾರೆ ಹರಿಪ್ರಿಯಾ. ಶಹಬ್ಬಾಸ್ ಎನ್ನಲೇಬೇಕಲ್ವಾ..

 • ಸರ್ಜಾ ಜೊತೆ ಹರಿಪ್ರಿಯಾ ಸ್ಪೆಷಲ್ ರೆಕಾರ್ಡ್..!

  haripriya's record with sarja brothers

  ಹರಿಪ್ರಿಯಾ, ಈಗ ಕನ್ನಡದಲ್ಲಿ ಅತ್ಯಂತ ಬ್ಯುಸಿ ನಟಿ. ಅತ್ತ ಕುರುಕ್ಷೇತ್ರ, ಇತ್ತ ಸಂಹಾರ, ಇನ್ನೊಂದು ಸೂಜಿದಾರ, ಮತ್ತೊಂದು ಸೆಲ್ಫಿ.. ಹೀಗೆ ಹರಿಪ್ರಿಯಾ ಕೈತುಂಬಾ ಸಿನಿಮಾಗಳಿವೆ. ಇದರ ಮಧ್ಯೆ ಹರಿಪ್ರಿಯಾ ಸದ್ದಿಲ್ಲದೇ ಒಂದು ವಿಶೇಷ ದಾಖಲೆ ಬರೆದಿದ್ದಾರೆ.

  ಸರ್ಜಾ ಫ್ಯಾಮಿಲಿಯ ಮೂವರು ಹೀರೋಗಳ ಜೊತೆ ಕಾಣಿಸಿಕೊಂಡಿರುವ ಹೊಸ ದಾಖಲೆ ಈಗ ಹರಿಪ್ರಿಯಾ ಹೆಸರಿಗೆ ಹೋಗಿದೆ. ಕುರುಕ್ಷೇತ್ರ ಚಿತ್ರದಲ್ಲಿ ಅರ್ಜುನ್ ಸರ್ಜಾ ಜೊತೆ ನಟಿಸಿರುವ ಹರಿಪ್ರಿಯಾ, ಭರ್ಜರಿಯಲ್ಲಿ ಧ್ರುವ ಸರ್ಜಾಗೆ ನಾಯಕಿಯಾಗಿದ್ದರು. ಈಗ ಸಂಹಾರ ಚಿತ್ರದಲ್ಲಿ ಧ್ರುವ ಅಣ್ಣ ಚಿರಂಜೀವಿ ಸರ್ಜಾಗೆ ನಾಯಕಿ.

  ಸಂಹಾರ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಇದೇ ಮೊದಲ ಬಾರಿಗೆ ಅಂಧನ ಪಾತ್ರದಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಹೀರೋಗಳು ಅಂಧನ ಪಾತ್ರದಲ್ಲಿ ನಟಿಸಿಯೇ ಇಲ್ಲ ಎನ್ನುವಷ್ಟು ಅಪರೂಪ. ಅಂತಹ ಚಿತ್ರದಲ್ಲಿ ಇಡೀ ಸಿನಿಮಾಗೆ ಟ್ವಿಸ್ಟ್ ಕೊಡುವ ಎರಡು ಶೇಡ್‍ಗಳಿರುವ ಪಾತ್ರದಲ್ಲಿ ನಟಿಸಿದ್ದಾರಂತೆ ಹರಿಪ್ರಿಯಾ. 

  ಕ್ಯಾರೆಕ್ಟರ್ ಹೆಂಗೆ ಅಂದ್ರೆ, ಡೈರೆಕ್ಟರ್ ಹೇಳಿದ್ದಾರೆ. ಹೇಳೋ ಹಾಗಿಲ್ಲ ಅಂತಾ ನಿರ್ದೇಶಕ ಗುರು ದೇಶಪಾಂಡೆ ಕಡೆ ಕೈತೋರಿಸ್ತಾರೆ ಹರಿಪ್ರಿಯಾ. 

   

 • ಸಂಹಾರ-2ಗೆ ವೇದಿಕೆ ಸಿದ್ಧ

  samhara part 2 soon

  ಚಿರಂಜೀವಿ ಸರ್ಜಾ ಹಾಗೂ ಹರಿಪ್ರಿಯಾ ಅಭಿನಯದ, ಗುರುದೇಶಪಾಂಡೆ ನಿರ್ದೇಶನದ ಸಂಹಾರ ಚಿತ್ರ, ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವಾಗಲೇ, ಚಿತ್ರದ 2ನೇ ಭಾಗಕ್ಕೆ ಸಿದ್ಧರಾಗುತ್ತಿದ್ದಾರೆ ನಿರ್ದೇಶಕ ಗುರುದೇಶಪಾಂಡೆ.

  ಸಂಹಾರದಲ್ಲಿ ಹರಿಪ್ರಿಯಾ ಅವರದ್ದು ನೆಗೆಟಿವ್ ಪಾತ್ರ. ಆ ಪಾತ್ರ ನೋಡಿದವರು, ಮೊದಲು ಶಾಕ್ ಆಗ್ತಾರೆ. ನಂತರ ಹರಿಪ್ರಿಯಾ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತಪಡಿಸ್ತಾರೆ. ಆದರೆ, ವರೇಕೆ ಆ ಹಾದಿ ತುಳಿಯುತ್ತಾರೆ..? ಅದಕ್ಕೆ ಸಂಹಾರದಲ್ಲಿ ಉತ್ತರ ಸಿಗಲ್ಲ. ಅದಕ್ಕೆ ಉತ್ತರ, ಸಂಹಾರ-2ನಲ್ಲಿ ಸಿಗಲಿದೆ ಅಂತಾರೆ ಗುರು ದೇಶಪಾಂಡೆ.

  ಹರಿಪ್ರಿಯಾ ಅವರನ್ನೇ ಮುಖ್ಯವಾಗಿಟ್ಟುಕೊಂಡು ಸಂಹಾರ-2 ಮಾಡುವುದಕ್ಕೆ ಪ್ಲಾನ್ ಮಾಡಿಕೊಳ್ಳುತ್ತಿದ್ದೇನೆ. ಒಂದು ಹೆಣ್ಣು ವಿಲನ್ ಆಗುವುದರ ಹಿಂದೆ ಒಂದು ಕಥೆ ಇದೆ. ಅದೇ ಮುಂದುವರಿದ ಭಾಗದಲ್ಲಿರುವ ಕಥೆ ಎಂದಿದ್ದಾರೆ ಗುರು ದೇಶಪಾಂಡೆ.

 • ಸಿಂಗ ಡೈರೆಕ್ಟರ್ ಚಿತ್ರಕ್ಕೆ ಹರಿಪ್ರಿಯಾ

  haripriya in gurunandan's next

  ಕನ್ನಡದ ಬ್ಯುಸಿ ಸ್ಟಾರಿಣಿ ಹರಿಪ್ರಿಯಾ ಮತ್ತೊಂದು ಚಿತ್ರಕ್ಕೆ ಯೆಸ್ ಎಂದಿದ್ದಾರೆ. ಸಿಂಗ ಖ್ಯಾತಿಯ ವಿಜಯ್ ಕಿರಣ್ ನಿರ್ದೇಶನದ ಚಿತ್ರಕ್ಕೆ ಜಯಣ್ಣ ನಿರ್ಮಾಪಕ. ಗುರುನಂದನ್ ಹೀರೋ.

  ` ಈ ಹಿಂದೆ ಜಯಣ್ಣ ಬ್ಯಾನರ್‍ನ ಬುಲೆಟ್ ಬಸ್ಯಾದಲ್ಲಿ ನಟಿಸಿದ್ದೆ. ಬೆಲ್‍ಬಾಟಂ ಚಿತ್ರದ ವಿತರಕ ಕೂಡಾ ಜಯಣ್ಣ. ಈಗ ಮತ್ತೊಮ್ಮೆ ಚಾನ್ಸ್ ಸಿಕ್ಕಿದೆ. ಪಾತ್ರವೂ ಚೆನ್ನಾಗಿದೆ. ಕಂಪ್ಲೀಟ್ ಜಾನರ್' ಎಂದಿದ್ದಾರೆ ಹರಿಪ್ರಿಯಾ.

  ಕನ್ನಡ್ ಗೊತ್ತಿಲ್ಲ, ಎಲ್ಲಿದ್ದೆ ಇಲ್ಲಿ ತನಕ, ಬಿಚ್ಚುಗತ್ತಿ, ಕಥಾಸಂಗಮ.. ಹೀಗೆ ಸಾಲು ಸಾಲು ಚಿತ್ರಗಳು ಹರಿಪ್ರಿಯಾ ಲಿಸ್ಟಿನಲ್ಲಿವೆ.