` hero, - chitraloka.com | Kannada Movie News, Reviews | Image

hero,

 • ಹೀರೋ ಕಥೆ ಇದೇ.. ಇಷ್ಟೆ.. : ಹೀರೋ ಟೀಂ ನೋಡ್ಲೇಬೇಕಾದ ಸ್ಟೋರಿ ಇದು

   ಹೀರೋ ಕಥೆ ಇದೇ.. ಇಷ್ಟೆ.. : ಹೀರೋ ಟೀಂ ನೋಡ್ಲೇಬೇಕಾದ ಸ್ಟೋರಿ ಇದು

  ಹೀರೋ ಕಥೆ ನಂ. 1

  ಏನಿಲ್ಲ ಗುರೂ.. ಹೀರೋಯಿನ್‍ಗೆ ಹೀರೋ ಜೊತೆ ಮೊದಲೇ ಲವ್ವಾಗಿರುತ್ತೆ. ಆದರೆ ಶ್ರೀಮಂತನ ಜೊತೆಯಲ್ಲಿ ಮದುವೆ ಆಗೋಗಿರುತ್ತೆ. ಅವಳನ್ನ ಎತ್ತಾಕ್ಕೊಂಡ್ ಹೋಗೋಕೆ ಹೀರೋ ಬರ್ತಾನೆ. ಹೊತ್ಕೊಂಡ್ ಹೋಗ್ತಾನೆ.

  ಹೀರೋ ಕಥೆ ನಂ. 2

  ಹೀರೋಯಿನ್ ಶ್ರೀಮಂತನ ಹೆಂಡತಿ. ಆಕೆಗೂ ಈ ರಿಷಬ್ ಶೆಟ್ಟಿಗಗೂ ಅಫೇರ್ ಇರುತ್ತೆ. ಅದು ಗೊತ್ತಾಗಿ ಪ್ರಮೋದ್ ಶೆಟ್ಟಿ ಅವಳನ್ನು ಕೊಲ್ಲೋಕೆ, ಹಿಂಸೆ ಕೊಡೋಕೆ ಶುರು ಮಾಡ್ತಾನೆ. ಆಮೇಲೆ ರಿಷಬ್  ಶೆಟ್ಟಿ ಬಂದು ಕಾಪಾಡ್ತಾನೆ.

  ಹೀರೋ ಕಥೆ ನಂ. 3

  ಹೀರೋ ಕಟಿಂಗ್ ಶಾಪ್‍ನಲ್ಲಿ ಕೆಲಸ ಮಾಡೋವ್ನು. ಅವನಿಗೆ ಶ್ರೀಮಂತನ ಆಸ್ತಿ ಮತ್ತು ಹೆಂಡ್ತಿ ಮೇಲೆ ಕಣ್ಣು. ಅದಕ್ಕಾಗಿ ಬಂಗಲೆಗೆ ಬಂದಾಗ ಅವಳನ್ನೂ ಪಟಾಯಿಸಿಕೊಂಡು, ಚಿನ್ನ, ಒಡವೆ ಹೊಡ್ಕೊಂಡು ಹೋಗಿ ಹೀರೋ ಆಗ್ತಾನೆ.

  ಹೀರೋ ಕಥೆ ನಂ. 4

  ಹೀರೋಯಿನ್‍ಗೇ ಶ್ರೀಮಂತ ಗಂಡನ ಮೇಲೆ ಕೋಪ ಇರುತ್ತೆ. ಹೀಗಾಗಿ ಅವಳು ತನ್ನ ಹಳೆಯ ಲವರ್ (ರಿಷಬ್)ನ್ನ ಕರೆಸಿಕೊಂಡು ಗೇಮ್ ಆಡ್ತಾಳೆ. ಆಟವನ್ನೆಲ್ಲ ಆಡಿಸೋದು ಹೀರೋಯಿನ್. ಹೀರೋಗೆ ತನ್ನ ಮೇಲಿರೋ ಪ್ರೀತಿಯನ್ನ ಅವಳು ಯೂಸ್ ಮಾಡ್ಕೋತಾಳೆ.

  ಹೀರೋ ಕಥೆ ನಂ. 5

  ಹೀರೋಯಿನ್, ಬಂಗಲೆಯಲ್ಲಿ ಕೆಲಸ ಮಾಡುವವಳು. ಹೀರೋಗೂ ಅವಳಿಗೂ ಲವ್ವು. ಹೀರೋನ ಪ್ರೇಯಸಿ ಮನೆಗೆಲಸದವಳ ಮೇಲೆ ಶ್ರೀಮಂತ ಕಣ್ಣು ಹಾಕ್ತಾನೆ. ಮುಂದಿನದ್ದೆಲ್ಲ ಟ್ರೇಲರಲ್ಲೇ ಇದೆ.. ಅಷ್ಟೆ ಬಾಸು..

  ಹಲೋ.. ಹಲೋ.. ರಿಷಬ್ ಶೆಟ್ಟಿಯವರೇ.. ಭರತ್ ರಾಜ್ ಅವರೇ.. ಕಥೆ ಗೊತ್ತಾಯ್ತಾ..? ಹೀರೋ ಸಿನಿಮಾ ರಿಲೀಸ್ ಹತ್ತಿರವಾಗುತ್ತಿದ್ದಂತೆ ಇದು ಹೀರೋ ಬಗ್ಗೆ ಕುತೂಹಲ ಇರೋ ಒಂದಷ್ಟು ಜನ ಫ್ಯಾನ್ಸ್ ಕಟ್ಟಿರುವ ಅಥವಾ ಊಹಿಸಿರುವ ಕಥೆ.

  ಹೌದಾ ಅಂದ್ರೆ ಹೀರೋ ಚಿತ್ರತಂಡ ಹೇಳೋದೇ ಬೇರೆ. ಇದು ರಿಷಬ್ ಟೀಂನ ಸಿನಿಮಾ. ಅಭಿಮಾನಿಗಳು ಊಹಿಸಿದ್ದಕ್ಕಿಂತ ಭಿನ್ನವಾಗಿರುತ್ತೆ ಮತ್ತು ಥ್ರಿಲ್ ಕೊಡುತ್ತೆ. ಸ್ವಲ್ಪ ವೇಯ್ಟ್ ಮಾಡಿ ಅಂತಿದೆ. ಮಾರ್ಚ್ 5ನೇ ತಾರೀಕಿನವರೆಗೆ ವೇಯ್ಟ್ ಮಾಡಿ

 • 3 ನಿಮಿಷದಲ್ಲೇ ಅಷ್ಟೆಲ್ಲ ಥ್ರಿಲ್ ಕೊಟ್ಟ ಸಿನಿಮಾ.. ಥಿಯೇಟರಿಗೆ ಬಂದ್ರೆ..

  3 ನಿಮಿಷದಲ್ಲೇ ಅಷ್ಟೆಲ್ಲ ಥ್ರಿಲ್ ಕೊಟ್ಟ ಸಿನಿಮಾ.. ಥಿಯೇಟರಿಗೆ ಬಂದ್ರೆ..

  ಹೀರೋ. ರಿಷಬ್ ಶೆಟ್ಟಿ ಬ್ಯಾನರಿನ ಹೊಸ ಸಿನಿಮಾ.  ಮಾರ್ಚ್ 5ಕ್ಕೆ ರಿಲೀಸ್ ಆಗುತ್ತಿರೋ ಈ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇರೋದು ಎರಡು ಕಾರಣಕ್ಕೆ. ಇದು ಬೆಲ್‍ಬಾಟಂ ನಂತರ ರಿಷಬ್ ಶೆಟ್ಟಿ ಮತ್ತೆ ನಾಯಕನಾಗಿ ನಟಿಸಿರೋ ಸಿನಿಮಾ ಎನ್ನುವುದು ಒಂದಾದ್ರೆ, ಎರಡನೆಯದು ಚಿತ್ರದ ಟ್ರೇಲರ್.

  ಒಂದು ಸಿನಿಮಾದಲ್ಲಿ ಏನೇನೆಲ್ಲ ಇರಬಹುದೋ.. ಅದೆಲ್ಲವನ್ನೂ  ಟ್ರೇಲರಿನಲ್ಲಿಯೇ ಕೊಟ್ಟಿರೋದು ಹೀರೋ ಚಿತ್ರದ ಪ್ಲಸ್ ಪಾಯಿಂಟ್. ಅಲ್ಲಿ ಕಾಮಿಡಿ,  ಸಸ್ಪೆನ್ಸ್, ಥ್ರಿಲ್, ಹಾರರ್, ಲವ್.. ಎಲ್ಲವನ್ನೂ ಇಟ್ಟಿದ್ದಾರೆ. ಆದರೆ.. ಯಾವುದನ್ನೂ ಬಿಟ್ಟುಕೊಟ್ಟಿಲ್ಲ. ಕುತೂಹಲವನ್ನು ಕಾಯ್ದಿರಿಸಿದ್ದಾರೆ ರಿಷಬ್ ಶೆಟ್ಟಿ.

  ಅಂದಹಾಗೆ ಈ ಚಿತ್ರಕ್ಕೆ ರಿಷಬ್ ಹೀರೋ ಮತ್ತು ನಿರ್ಮಾಪಕ ಮಾತ್ರ. ಅವರ ಜೊತೆಯಲ್ಲೇ ಇದ್ದ ಭರತ್ ರಾಜ್ ನಿರ್ದೇಶಕ. ಆದರೆ ಕಥೆಯಲ್ಲಿ ರಿಷಬ್ ಶೆಟ್ಟಿ ಪಾತ್ರವೂ ಇದೆ. ಗಾನವಿ ಲಕ್ಷ್ಮಣ್ ಹೀರೋಯಿನ್. ರಿಷಬ್ ಅವರ ಫೇವರಿಟ್ ಪ್ರಮೋದ್  ಶೆಟ್ಟಿ ಪ್ರಮುಖ ಪಾತ್ರದಲ್ಲಿದ್ದಾರೆ. ಜಯಣ್ಣ ಕಂಬೈನ್ಸ್ ಮೂಲಕ ರಿಲೀಸ್ ಆಗುತ್ತಿರೋ ಸಿನಿಮಾ, ಬೆಲ್‍ಬಾಟಂನ್ನೂ ಮೀರಿದ ಯಶಸ್ಸು ಕಾಣಲಿದೆ ಎನ್ನುವುದು ಚಿತ್ರ ನೋಡಿದವರ ಮಾತು.

 • Dhananjay All Set to Turn Hero

  hero image

  One actor who has plenty of films in hand, but none for release is none than Dhananjay of 'Directors Special' fame. The actor is currently acting in 'Allama', 'Badmash', 'Boxer', 'Vijayaditya' and other films.

  Now the actor has signed a new film called 'Hero' with Omprakash Rao as the director. Earlier, Omprakash was supposed to direct Dhananjay in 'Huchcha 2'. However, 'Madarangi' Krishna replaced Dhananjay and the film is complete now. Even before its release, Omprakash has announced 'Hero' with Dhananjay.

  The film which is being produced by Umesh Reddy is all set to be launched on the Varamahalakshmi festival day. Sharath Chandru, Krishna, Shekhar Kotyan and others play prominent roles in the film.

 • Hero Movie Review: Chitraloka Rating 3.5/5

  Hero Movie Review: Chitraloka Rating 3.5/5

  After Bell Bottom and Katha Sangama, Rishab Shetty returns with yet another entertainer with a difference! Unlike the usual hero-centric action drama, this film focuses more on the creative script, performances and its making. That apart, Ajaneesh Lokanath packs it up with a perfect background score coupled with soothing numbers in between.

  What makes 'Hero' a great watch is its subtle approach with a handful of unique characters. Further, action laced with humour makes the experience more joyful as it drives the audience for a thrilling end.

  Every aspect of Hero is attached with creativity. Made during the lockdown period, the entire team has thrived hard to make Hero a winner. And, they won in doing so. Insofar as the violence on the screen is concerned, the script justifies but has no adverse effect whatsoever as a whole and is solely made for pure entertainment.

  Bharat Raj along with his entire directorial team have delivered a good content with newness and originality written all over. Rishab Shetty along with Ganavi steal the show while Pramod as the 'main villain' and the whole team's performance is definitely the highlights of Hero. It is the story and the way which it is presented (marking) makes Hero the real Hero. Violence is just a part while the big picture is the content-driven 'action comedy'.

  Every character has something in it without being diffused in the presence of lead characters. Each and every aspect, everyone and everything in Hero is beautifully showcased with hardly anything left to criticise. It is undoubtedly one of the best in recent times. Watch 'Hero' for the story and its making. The team emerges as a hero and not just the lone usual central character referred to as 'hero' in a movie.

 • Rishab Shetty's 'Hero' To Release On March 5th

  Rishab Shetty's 'Hero' To Release On March 5th

  Rishab Shetty's 'Hero' which was shot during the post lockdown is all set to release on the 05th of March across Karnataka. Rishab took to his Twitter handle on Thursday and announced the release date of the film.

  Post lockdown, Rishab is said to be the first to start shooting for the film. The actor in a recently held press conference had announced that the shooting for the film commenced on the 07th of July and got completed in a 45 day single schedule in a Coffee Estate in Chickmagalur. After that, the team was busy with the post-production of the film and now has announced the release date of the film.

  'Hero' which has a caption called 'You cannot be a Hero without being a coward' is directed by debutante Bharath Raj and scripted by Rishab Shetty and team. Apart from acting and scripting, Rishab has produced the film under his Rishab Shetty Productions banner. The film stars Ganavi Lakshman, Pramod Shetty, Kolar Manju and others in prominent roles. Ajaneesh Lokanath is the music director, while Aravind Kashyap is the cinematographer.

 • ಕಣ್ಣಲ್ಲೇ ಭಯ ಹುಟ್ಟಿಸ್ತಾನೆ ಹೀರೋನ ವಿಲನ್..!

  ಕಣ್ಣಲ್ಲೇ ಭಯ ಹುಟ್ಟಿಸ್ತಾನೆ ಹೀರೋನ ವಿಲನ್..!

  ಪ್ರಮೋದ್ ಶೆಟ್ಟಿ. ವಿಲನ್ ಪಾತ್ರಗಳಿಗೆ ಇತ್ತೀಚೆಗೆ ಬೇರೆಯದ್ದೇ ಗತ್ತು ತಂದುಕೊಟ್ಟ ನಟ. ಹೀರೋ ಚಿತ್ರದಲ್ಲೂ ಇವರೇ ವಿಲನ್. ಇತ್ತೀಚೆಗೆ ಅವರು ಹಲವು ಚಿತ್ರಗಳಲ್ಲಿ ವಿಲನ್ ಆಗಿದ್ದಾರೆ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಅವನೇ ಶ್ರೀಮನ್ನಾರಾಯಣ.. ಹೀಗೆ ಹಲವು ಚಿತ್ರಗಳಲ್ಲಿ ಅವರು ವಿಲನ್ ಆದರೂ, ಅದರಲ್ಲೊಂದು ಕಾಮಿಡಿ ಶೇಡ್ ಇರುತ್ತಿತ್ತು. ಆದರೆ, ಹೀರೋನಲ್ಲಿ ಹಾಗಿಲ್ಲ.

  ಹೀರೋ ಚಿತ್ರದ ಟ್ರೇಲರ್ ನೋಡಿದವPramod Shetty Grabs Attention In Villain Role

  ಕಣ್ಣಲ್ಲೇ ಭಯ ಹುಟ್ಟಿಸ್ತಾನೆ ಹೀರೋನ ವಿಲನ್..!

  ಪ್ರಮೋದ್ ಶೆಟ್ಟಿ. ವಿಲನ್ ಪಾತ್ರಗಳಿಗೆ ಇತ್ತೀಚೆಗೆ ಬೇರೆಯದ್ದೇ ಗತ್ತು ತಂದುಕೊಟ್ಟ ನಟ. ಹೀರೋ ಚಿತ್ರದಲ್ಲೂ ಇವರೇ ವಿಲನ್. ಇತ್ತೀಚೆಗೆ ಅವರು ಹಲವು ಚಿತ್ರಗಳಲ್ಲಿ ವಿಲನ್ ಆಗಿದ್ದಾರೆ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಅವನೇ ಶ್ರೀಮನ್ನಾರಾಯಣ.. ಹೀಗೆ ಹಲವು ಚಿತ್ರಗಳಲ್ಲಿ ಅವರು ವಿಲನ್ ಆದರೂ, ಅದರಲ್ಲೊಂದು ಕಾಮಿಡಿ ಶೇಡ್ ಇರುತ್ತಿತ್ತು. ಆದರೆ, ಹೀರೋನಲ್ಲಿ ಹಾಗಿಲ್ಲ.

  ಹೀರೋ ಚಿತ್ರದ ಟ್ರೇಲರ್ ನೋಡಿದವರಿಗೆ ಪ್ರಮೋದ್ ಶೆಟ್ಟಿ ಕಣ್ಣುಗಳು ಡಿಫರೆಂಟ್ ಆಗಿ ಕಂಡಿದ್ದರೆ ಆಶ್ಚರ್ಯವಿಲ್ಲ. ಈ ಪಾತ್ರದಲ್ಲಿ ನನ್ನ ಕಣ್ಣುಗಳೇ ಹೈಲೈಟ್. ಡೈರೆಕ್ಟರ್ ಹೇಳಿದಂತೆ ನಟಿಸಿದ್ದೇನೆ. ಕಣ್ಣುಗಳು ವಿಭಿನ್ನವಾಗಿ ಕಾಣಲೆಂದು ಲೆನ್ಸ್ ಬಳಸೋಕೆ ಹೇಳಿದ್ದರು. ಭರತ್ ರಾಜ್, ನನ್ನ ಇಡೀ ಪಾತ್ರವನ್ನು ತುಂಬಾ ಚೆನ್ನಾಗಿ ಡಿಸೈನ್ ಮಾಡಿದ್ದಾರೆ ಎಂದು ಖುಷಿ ಹಂಚಿಕೊಂಡಿದ್ದಾರೆ ಪ್ರಮೋದ್ ಶೆಟ್ಟಿ.

  ಟ್ರೇಲರ್ ನೋಡಿದರೆ ಪ್ರಮೋದ್ ಶೆಟ್ಟಿಯವರನ್ನು ಲಂಕಾಸುರನಿಗೆ ಹೋಲಿಸಲಾಗಿದೆ. ಲಂಕಾಸುರನನ್ನು ಮೀರಿಸುವ ಕ್ರೌರ್ಯವನ್ನು ಪ್ರಮೋದ್ ಶೆಟ್ಟಿಯ ಪಾತ್ರ ಮಾಡುತ್ತದೆಯಂತೆ. ಅಷ್ಟೊಂದು ಕ್ರೌರ್ಯ ಇರುವ ಪಾತ್ರವನ್ನು ಪ್ರಮೋದ್ ಶೆಟ್ಟಿ ಹೇಗೆ ನಿಭಾಯಿಸಿದ್ದಾರ ಅನ್ನೋದನ್ನ ನೋಡೋಕೆ ಕೆಲವು ದಿನ ಕಾಯಬೇಕು. ಏಕೆಂದರೆ ಚಿತ್ರದಲ್ಲಿ ಡೈಲಾಗುಗಳಿಗಿಂತ ಹಾವಭಾವದಲ್ಲೇ ನಟಿಸಿದ್ದಾರಂತೆ ಪ್ರಮೋದ್ ಶೆಟ್ರು.

  ರಿಷಬ್ ಶೆಟ್ಟಿ ಮತ್ತು ಗಾನವಿ ಲಕ್ಷ್ಮಣ್ ಪ್ರಧಾನ ಪಾತ್ರದಲ್ಲಿರೋ ಚಿತ್ರಕ್ಕೆ ಸ್ವತಃ ರಿಷಬ್ ಶೆಟ್ಟಿಯೇ ಪ್ರೊಡ್ಯೂಸರ್. ಕಥೆ ಬರೆಯುವ ಟೀಂನಲ್ಲೂ ಇದ್ದ ರಿಷಬ್ ಶೆಟ್ಟಿ, ತಮ್ಮದೇ ಟೀಂನ ಹುಡುಗ ಭರತ್ ರಾಜ್ ಅವರಿಗೆ ಡೈರೆಕ್ಟರ್ ಪಟ್ಟ ಕಟ್ಟಿದ್ದಾರೆ. ಒಂದು ಚೆಂದದ ಕಥೆಯ ಸಿನಿಮಾ ಮಾರ್ಚ್ 5ರಂದು ರಿಲೀಸ್ ಆಗುತ್ತಿದೆ.ರಿಗೆ ಪ್ರಮೋದ್ ಶೆಟ್ಟಿ ಕಣ್ಣುಗಳು ಡಿಫರೆಂಟ್ ಆಗಿ ಕಂಡಿದ್ದರೆ ಆಶ್ಚರ್ಯವಿಲ್ಲ. ಈ ಪಾತ್ರದಲ್ಲಿ ನನ್ನ ಕಣ್ಣುಗಳೇ ಹೈಲೈಟ್. ಡೈರೆಕ್ಟರ್ ಹೇಳಿದಂತೆ ನಟಿಸಿದ್ದೇನೆ. ಕಣ್ಣುಗಳು ವಿಭಿನ್ನವಾಗಿ ಕಾಣಲೆಂದು ಲೆನ್ಸ್ ಬಳಸೋಕೆ ಹೇಳಿದ್ದರು. ಭರತ್ ರಾಜ್, ನನ್ನ ಇಡೀ ಪಾತ್ರವನ್ನು ತುಂಬಾ ಚೆನ್ನಾಗಿ ಡಿಸೈನ್ ಮಾಡಿದ್ದಾರೆ ಎಂದು ಖುಷಿ ಹಂಚಿಕೊಂಡಿದ್ದಾರೆ ಪ್ರಮೋದ್ ಶೆಟ್ಟಿ.

  ಟ್ರೇಲರ್ ನೋಡಿದರೆ ಪ್ರಮೋದ್ ಶೆಟ್ಟಿಯವರನ್ನು ಲಂಕಾಸುರನಿಗೆ ಹೋಲಿಸಲಾಗಿದೆ. ಲಂಕಾಸುರನನ್ನು ಮೀರಿಸುವ ಕ್ರೌರ್ಯವನ್ನು ಪ್ರಮೋದ್ ಶೆಟ್ಟಿಯ ಪಾತ್ರ ಮಾಡುತ್ತದೆಯಂತೆ. ಅಷ್ಟೊಂದು ಕ್ರೌರ್ಯ ಇರುವ ಪಾತ್ರವನ್ನು ಪ್ರಮೋದ್ ಶೆಟ್ಟಿ ಹೇಗೆ ನಿಭಾಯಿಸಿದ್ದಾರ ಅನ್ನೋದನ್ನ ನೋಡೋಕೆ ಕೆಲವು ದಿನ ಕಾಯಬೇಕು. ಏಕೆಂದರೆ ಚಿತ್ರದಲ್ಲಿ ಡೈಲಾಗುಗಳಿಗಿಂತ ಹಾವಭಾವದಲ್ಲೇ ನಟಿಸಿದ್ದಾರಂತೆ ಪ್ರಮೋದ್ ಶೆಟ್ರು.

  ರಿಷಬ್ ಶೆಟ್ಟಿ ಮತ್ತು ಗಾನವಿ ಲಕ್ಷ್ಮಣ್ ಪ್ರಧಾನ ಪಾತ್ರದಲ್ಲಿರೋ ಚಿತ್ರಕ್ಕೆ ಸ್ವತಃ ರಿಷಬ್ ಶೆಟ್ಟಿಯೇ ಪ್ರೊಡ್ಯೂಸರ್. ಕಥೆ ಬರೆಯುವ ಟೀಂನಲ್ಲೂ ಇದ್ದ ರಿಷಬ್ ಶೆಟ್ಟಿ, ತಮ್ಮದೇ ಟೀಂನ ಹುಡುಗ ಭರತ್ ರಾಜ್ ಅವರಿಗೆ ಡೈರೆಕ್ಟರ್ ಪಟ್ಟ ಕಟ್ಟಿದ್ದಾರೆ. ಒಂದು ಚೆಂದದ ಕಥೆಯ ಸಿನಿಮಾ ಮಾರ್ಚ್ 5ರಂದು ರಿಲೀಸ್ ಆಗುತ್ತಿದೆ.

 • ಕಾಮಿಡಿನಾ..? ಥ್ರಿಲ್ಲರಾ..? ಹೀರೋ ಕಥೆ ಎಂತ..?

  ಕಾಮಿಡಿನಾ..? ಥ್ರಿಲ್ಲರಾ..? ಹೀರೋ ಕಥೆ ಎಂತ..?

  ರಿಷಬ್ ಶೆಟ್ಟಿ ನಿರ್ಮಿಸಿ ನಟಿಸಿರುವ ಸಿನಿಮಾ ಹೀರೋ. ಚಿತ್ರದ ಟ್ರೇಲರ್ ರಿಲೀಸ್ ಆಗಿರೋದಷ್ಟೇ ಅಲ್ಲ, ಚಿತ್ರದ ಕಥೆ ಏನಿರಬಹುದು ಅನ್ನೋ ಕುತೂಹಲವನ್ನಂತೂ ದಂಡಿಯಾಗಿ ಹುಟ್ಟುಹಾಕಿದೆ.

  ಮೇಲ್ನೋಟಕ್ಕೆ ಕಾಮಿಡಿ ಥ್ರಿಲ್ಲರ್‍ನಂತೆ ಕಂಡರೂ, ಕಂಪ್ಲೀಟ್ ಕಾಮಿಡಿ ಅನ್ನೋಕಾಗಲ್ಲ, ಸೀರಿಯಸ್‍ನೆಸ್ ಇದೆ. ಹಾಗಂತ ಪೂರ್ತಿ ಸೀರಿಯಸ್ ಅನ್ನೋಕೂ ಸಾಧ್ಯವಿಲ್ಲ. ಇದರ ನಡುವೆ ಅಲ್ಲೊಂದು ಲವ್ ಸ್ಟೋರಿ ಇದ್ದ ಹಾಗಿದೆ. ಮೈನವಿರೇಳಿಸುವ ಆ್ಯಕ್ಷನ್ ಸೀನ್‍ಗಳೂ ಇವೆ.

  ರಿಷಬ್ ಶೆಟ್ಟಿ ಹೀರೋ ಆಗಿರುವ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ವಿಲನ್. ಆತನ ಪತ್ನಿಯಾಗಿರೋದು ನಾಯಕಿ ಗಾನವಿ ಗೌಡ. ಆಕೆ ಹೀರೋನ ಪ್ರಿಯತಮೆಯಾ.. ಗೊಂದಲ ಹುಟ್ಟುತ್ತೆ. ಡೈರೆಕ್ಟರ್ ಭರತ್ ರಾಜ್, ಚೆಂದದ ಕಥೆ, ಚಿತ್ರಕಥೆ ಮಾಡಿರುವ ಹಾಗಿದೆ. ಸದ್ಯಕ್ಕೀಗ ಹೀರೋ ಸರ್‍ಪ್ರೈಸ್.

 • ಪ್ಯಾನ್ ಇಂಡಿಯಾ ಅಲ್ಲ, ರಾಜ್ಯಗಳ ಗಡಿ ದಾಟಿದ ಹೀರೋ

  ಪ್ಯಾನ್ ಇಂಡಿಯಾ ಅಲ್ಲ, ರಾಜ್ಯಗಳ ಗಡಿ ದಾಟಿದ ಹೀರೋ

  ಹೀರೋ. ರಿಷಬ್ ಶೆಟ್ಟಿ ನಟಿಸಿ, ನಿರ್ಮಿಸಿರುವ ಅವರದ್ದೇ ಕಥೆಯ ವಿಭಿನ್ನ ಕಥಾ ಹಂದರದ ಸಿನಿಮಾ. ಥ್ರಿಲ್ಲರ್ ಅನ್ನೋದ್ರಲ್ಲಿ ಅನುಮಾನವೇನಿಲ್ಲ. ಅವರದ್ದೇ ಗರಡಿಯ ಭರತ್ ರಾಜ್ ನಿರ್ದೇಶನದ ಈ ಸಿನಿಮಾ ಪ್ಯಾನ್ ಇಂಡಿಯಾ ಮೂವಿ ಅಲ್ಲ. ಕನ್ನಡದಲ್ಲಷ್ಟೇ ಸಿದ್ಧವಾಗಿರುವ ಸಿನಿಮಾ. ಆದರೆ, ಈ ಸಿನಿಮಾ ಕೂಡಾ ರಾಜ್ಯದ ಗಡಿ ದಾಟಿದೆ.

  ಹೀರೋ, ಕರ್ನಾಟಕದಲ್ಲಷ್ಟೇ ಅಲ್ಲ, ಹೊರರಾಜ್ಯಗಳಲ್ಲೂ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ. ದೊಡ್ಡ ಮಟ್ಟದ ರಿಲೀಸ್ ಆಗುತ್ತಿರುವುದು ಮಹಾರಾಷ್ಟ್ರದಲ್ಲಿ. ಮುಂಬೈ, ಸೊಲ್ಲಾಪುರ ಸೇರಿದಂತೆ ಕನ್ನಡ ಭಾಷಿಕರು ಹೆಚ್ಚಿರುವ ಮಹಾರಾಷ್ಟ್ರದ ಜಿಲ್ಲೆಗಳಲ್ಲಿ, ಗೋವಾದ ಪಣಜಿಯಲ್ಲಿಯೂ ದೊಡ್ಡ ಮಟ್ಟದಲ್ಲಿ ತೆರೆ ಕಾಣುತ್ತಿದೆ.

  ವಿಶೇಷ ಅಂದ್ರೆ, ದೆಹಲಿಯಲ್ಲೂ ರಿಲೀಸ್ ಆಗುತ್ತಿರುವುದು. ಅತ್ತ ತಮಿಳುನಾಡಿನ ಚೆನ್ನೈ, ಕೇರಳದ ತ್ರಿವೇಂಡ್ರಂ ಸೇರಿದಂತೆ ಎಲ್ಲೆಲ್ಲಿ ಕನ್ನಡಿಗರು ಹೆಚ್ಚಿದ್ದಾರೋ, ಅಲ್ಲೆಲ್ಲ ಹೀರೋ ರಿಲೀಸ್ ಆಗುತ್ತಿರುವುದು ಈ ಬಿಡುಗಡೆಯ ಸ್ಪೆಷಾಲಿಟಿ. ಲಾಕ್ ಡೌನ್ ನಂತರ ಕರ್ನಾಟಕದ ಹೊರಗೂ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿರುವ ಮೊದಲ ಸಿನಿಮಾ ಹೀರೋ. ಕರ್ನಾಟಕದಲ್ಲಿ 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಗುಡ್ ಲಕ್.

 • ಬೆಲ್ಬಾಟಂ ಕ್ಲಾಸ್.. ಹೀರೋ ಕ್ಲಾಸ್ ಮಸಾಲಾ..

  ಬೆಲ್ಬಾಟಂ ಕ್ಲಾಸ್.. ಹೀರೋ ಕ್ಲಾಸ್ ಮಸಾಲಾ..

  ಹೀರೋ ಚಿತ್ರದ ಬಗ್ಗೆ ಪ್ರೇಕ್ಷಕರು ಇಷ್ಟೆಲ್ಲ ಕುತೂಹಲದಿಂದ ಕಾಯ್ತಿರೋದಕ್ಕೆ ಕಾರಣ ಬೆಲ್ಬಾಟಂ. ಯಾಕಂದ್ರೆ,

  ಬೆಲ್ ಬಾಟಂ ಮಾಸ್ ಅಲ್ಲ. ಪಕ್ಕಾ ಕ್ಲಾಸ್.

  ಆದರೆ, ಹೀರೋ ಹಾಗಿಲ್ಲ. ಅಲ್ಲೊಂದು ರೊಮ್ಯಾಂಟಿಕ್ ಲವ್ ಸ್ಟೋರಿ, ಬಿಸಿ ನೆತ್ತರನ್ನೇ ಕುಡಿಯುವ ಕ್ರೌರ್ಯ, ಫೈಟಿಂಗ್, ಚೇಸಿಂಗ್.. ಎಲ್ಲವೂ ಇದೆ. ಆದರೆ.. ಎಲ್ಲಿಯೂ ಕ್ಲಾಸ್ ಟಚ್ ಕಳೆದುಕೊಂಡಿಲ್ಲ.ಜೊತೆಗೆ ಹೀರೋ ಅನ್ನೋ ಮಾಸ್ ಟೈಟಲ್.

  ಹೀಗಾಗಿ.. ಹೀರೋ ಚಿತ್ರವನ್ನು ಕ್ಲಾಸ್ ಮಸಾಲಾ ಎನ್ನಬಹುದು.

  ಭರತ್ ರಾಜ್ ಅನ್ನೋ ತಮ್ಮದೇ ಗರಡಿಯ ಹುಡುಗನ ಬೆನ್ನಿಗೆ ನಿಂತು, ಚೆಂದದ ಚಿತ್ರ ಕಟ್ಟಿಕೊಟ್ಟಂತಿದೆ ರಿಷಬ್ ಶೆಟ್ಟಿ & ಟೀಂ. ರಿಷಬ್ ಶೆಟ್ಟಿಯ ಎದುರು ನಟಿಸಿರೋ ಗಾನವಿ ಲಕ್ಷ್ಮಣ್, ಹೀರೋ ಪಾತ್ರಕ್ಕೆ ಸೇರಿಗೆ ಸವ್ವಾಸೇರು ಎನ್ನುವಂತೆ ನಟಿಸಿದ್ದಾರೆ. ಪ್ರಮೋದ್ ಶೆಟ್ಟಿ, ಕಣ್ಣುಗಳಲ್ಲೇ ಕೊಲ್ಲುತ್ತಿದ್ದಾರೆ.

  ಇನ್ನು ಗ್ರಾಫಿಕ್ಸ್ ಕೆಲಸ ಮೇಲ್ನೋಟಕ್ಕೆ ಗೊತ್ತೇ ಆಗದಂತೆ ವರ್ಕೌಟ್ ಆದ ಹಾಗಿದೆ. ಅಜನೀಶ್ ಲೋಕನಾಥ್ ಸಂಗೀತದಲ್ಲಿ ಬೇರೆಯದ್ದೇ ಮ್ಯಾಜಿಕ್ ಇರುವ ಹಾಗಿದೆ. ಮೊದಲು ಕಥೆಯನ್ನು ಹೀರೋ ಆಗಿ ಸೆಲೆಕ್ಟ್ ಮಾಡಿಕೊಳ್ಳೋದು ರಿಷಬ್ ಶೆಟ್ಟಿ ಸ್ಟೈಲ್. ನಂತರ ಕೂರೋದು ಚಿತ್ರಕಥೆಗೆ.

  ಈ ಹಿಂದೆ ಕಿರಿಕ್ ಪಾರ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಕಥಾಸಂಗಮ, ಬೆಲ್ಬಾಟಂಗಳಲ್ಲಿ ಅವರು ಗೆದ್ದಿದ್ದೇ ಹಾಗೆ. ಆ ಕ್ಲಾಸಿಕಲ್ ಟಚ್ ಇಲ್ಲೂ ವರ್ಕೌಟ್ ಆಗಿದ್ದರೆ, ನೋ ಡೌಟ್. ಈ ಕ್ಲಾಸ್ ಮಸಾಲಾ ಚಿತ್ರವನ್ನು ರಿಲೀಸ್ ಆಗುವ ಮೊದಲೇ ಹಿಟ್ ಎಂದು ಘೋಷಿಸಬಹುದು.

 • ಮಗಳು  ಜಾನಕಿ ಹೀರೋಗೆ ಹೀರೋಯಿನ್ ಆದ ಕಥೆ

  ಮಗಳು  ಜಾನಕಿ ಹೀರೋಗೆ ಹೀರೋಯಿನ್ ಆದ ಕಥೆ

  ಟಿ ಎನ್ ಸೀತಾರಾಮ್ ಅವರ ಮಗಳು ಜಾನಕಿ ಧಾರಾವಾಹಿಯನ್ನು ಪ್ರೇಕ್ಷಕರು ಇವತ್ತಿಗೂ ಮರೆತಿಲ್ಲ. ಅವರೆಲ್ಲರ ಕಣ್ಣಿನಲ್ಲಿ ಅಚ್ಚಳಿಯದೆ ಉಳಿದಿರುವ ಮುಖ ಗಾನವಿ ಲಕ್ಷ್ಮಣ್ ಅವರದ್ದು. ಆ ಜಾನಕಿ ಹೀರೋಯಿನ್ ಆಗಿರೋ ಸಿನಿಮಾ ಹೀರೋ. ರಿಷಬ್ ಶೆಟ್ಟಿ ಹೀರೋ ಆಗಿರೋ ಹೀರೋ ಚಿತ್ರದಲ್ಲಿ ಹೀರೋಯಿನ್ ಆಗಿ ಕಾಣಿಸಿಕೊಂಡಿರೋದು ಮಗಳು ಜಾನಕಿ ಖ್ಯಾತಿಯ ಗಾನವಿ ಲಕ್ಷ್ಮಣ್.

  ಹೀರೋಯಿನ್  ಗಾನವಿಯ ಪರ್ಸನಲ್ ಲೈಫ್ ಕೂಡಾ ಅಷ್ಟೇ ಇಂಟ್ರೆಸ್ಟಿಂಗ್. ಗಾನವಿ ಓದಿದ್ದು ಸೈಕಾಲಜಿ. ಸಂಪ್ರದಾಯಸ್ಥ ಕುಟುಂಬವಾದರೂ, ಹಠಕ್ಕೆ ಬಿದ್ದು ಕಲಿತಿದ್ದು ಡ್ಯಾನ್ಸ್. ಚಿಕ್ಕಮಗಳೂರಿನ ಶಾಲೆಯೊಂದರಲ್ಲಿ ಟೀಚರ್ ಆಗಿದ್ದಾಗ ಕಥಕ್ಕಳಿ ಕಲಿತ ಗಾನವಿ, ನಂತರ ಡ್ಯಾನ್ಸ್ ಟೀಚರ್ ಆದರು. ಕೊರಿಯೋಗ್ರಫಿಯೂ ಚೆನ್ನಾಗಿ ಗೊತ್ತು. ರಂಗಭೂಮಿಯ ಪರಿಚಯವೂ ಚೆನ್ನಾಗಿದೆ.

  ಮೊದಲ ಚಿತ್ರದಲ್ಲೇ ಮಲ್ಟಿಪಲ್ ಡೈಮೆನ್ಷನ್ ಇರೋ, ವಿವಿಧ ಶೇಡ್‍ಗಳಿರೋ ಸಿನಿಮಾ ಸಿಕ್ಕಿದೆ. ಹೇಗೆ ನಟಿಸಿದ್ದೇನೆ ಅನ್ನೋ ಕುತೂಹಲ ಮತ್ತು ಪ್ರೇಕ್ಷಕರ ಪ್ರತಿಕ್ರಿಯೆಗಾಗಿ ನಾನೂ ಕಾಯುತ್ತಿದ್ದೇನೆ ಎಂದಿದ್ದಾರೆ ಗಾನವಿ.

  ಭರತ್ ರಾಜ್ ನಿರ್ದೇಶನದ ಚಿತ್ರದಲ್ಲಿ ರಿಷಬ್ ಶೆಟ್ಟಿ ಹೀರೋ. ಮಾರ್ಚ್ 5ಕ್ಕೆ ರಿಲೀಸ್ ಆಗುತ್ತಿರೋ ಸಿನಿಮಾವನ್ನು ಚಿತ್ರರಂಗ ಮತ್ತು ಪ್ರೇಕ್ಷಕರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

 • ಸ್ಪೆಷಲ್ಲುಗಳೇ ತುಂಬಿರುವ ಹೀರೋ

  ಸ್ಪೆಷಲ್ಲುಗಳೇ ತುಂಬಿರುವ ಹೀರೋ

  ಒಂದಲ್ಲ..ಎರಡಲ್ಲ.. ಹೀರೋ ಚಿತ್ರದಲ್ಲಿ ಹಲವು ಸ್ಪೆಷಲ್ಲುಗಳಿವೆ. ಇದು ರಿಷಬ್ ಶೆಟ್ಟಿ ಹೀರೋ ಆಗಿ ನಟಿಸಿರೋ 2ನೇ ಸಿನಿಮಾ. ಬೆಲ್ ಬಾಟಂ ಅನ್ನೋ ಸೂಪರ್ ಹಿಟ್ ಕೊಟ್ಟ ನಂತರ ರಿಷಬ್ ಶೆಟ್ಟಿ ನಟಿಸಿದ್ದಾರಾದರೂ ಕಂಪ್ಲೀಟ್ ಹೀರೋ ಆಗಿರಲಿಲ್ಲ.  ಅವರದ್ಧೇ ಕಥಾ ಸಂಗಮದಲ್ಲಿ ಒಂದು ಕಥೆಯಲ್ಲಿ ಹೀರೋ ಆಗಿದ್ದವರು, ಅವನೇ ಶ್ರೀಮನ್ನಾರಾಯಣದಲ್ಲಿ ಸೆಕೆಂಡ್ ಹೀರೋ (ಸೆಕೆಂಡುಗಳ ಕಾಲವಷ್ಟೇ ತೆರೆಯ ಮೇಲಿರೋ ಹೀರೋ) ಆಗಿದ್ದರು. ಈಗ ಹೀರೋ ಮೂಲಕ ಹೀರೋ ಆಗಿ ಹೀರೋ ತರಾನೇ ಎಂಟ್ರಿ ಕೊಡ್ತಿದ್ಧಾರೆ.

  ಅಂದಹಾಗೆ ಹೀರೋ ಆಗಿದ್ದರೂ, ಹೀರೋ ತರಾ ಬಿಲ್ಡಪ್ ಇಲ್ಲ ಅನ್ನೋದು ಈ ಚಿತ್ರದ ಇನ್ನೊಂದು ವಿಶೇಷ.

  ಇಡೀ ಚಿತ್ರದಲ್ಲಿ ಕೆಲಸ ಮಾಡಿರೋದು 24 ಜನರ ಟೀಂ. ಅರೆ ಒಂದು ಸಿನಿಮಾನ ಕೇವಲ 24 ಜನ ಮುಗಿಸೋಕೆ ಸಾಧ್ಯನಾ ಎಂದುಕೊಳ್ಳಬೇಡಿ. ಅನಿವಾರ್ಯವಾಗಿ, ಕೊರೊನಾ ಲಾಕ್ ಡೌನ್ ನಿಯಮಗಳನ್ನೆಲ್ಲ ಕಡ್ಡಾಯವಾಗಿ ಪಾಲಿಸಿದ್ದ ಕಾರಣಕ್ಕೆ ಇಡೀ ತಂಡದಲ್ಲಿ ಕೆಲಸ ಮಾಡಿದ್ದು ಕೇವಲ 24 ಜನ. ರಿಷಭ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಉಗ್ರಂ ಮಂಜು, ಗಾನವಿ ಲಕ್ಷಣ್ ಹೊರತು ಪಡಿಸಿ ಉಳಿದ ಎಲ್ಲಾ ನಟರು ಸಿನಿಮಾದ ಟೆಕ್ನಿಕಲ್ ಟೀಂನವರೇ. ಅರ್ಥಾತ್.. ನಟರೂ ಅವರೇ. ಕೂಲಿಗಳೂ ಅವರೇ. ಟೆಕ್ನಿಷಿಯನ್ಸೂ ಅವರೇ.

  ಇದುವರೆಗೆ ನಟ, ನಿರ್ದೇಶಕ, ನಿರ್ಮಾಪಕರಾಗಿದ್ದ ರಿಷಬ್ ಶೆಟ್ಟಿ ಈ ಚಿತ್ರದ ಮೂಲಕ ಸಾಹಸ ನಿರ್ದೇಶಕರೂ ಆಗಿದ್ದಾರೆ. ಅವರಿಗೆ ಜೊತೆ ನೀಡಿರೋದು ವಿಕ್ರಂ ಮೋರ್. ಅಜನೀಶ್ ಲೋಕನಾಥ್ ಚಿತ್ರಕ್ಕೆ ಮ್ಯೂಸಿಕ್ ನೀಡಿದ್ದು ಚಿತ್ರದ ಶೂಟಿಂಗ್ ಮುಗಿದ ಮೇಲೆ ಅನ್ನೋದು ಇನ್ನೊಂದು ಸ್ಪೆಷಾಲಿಟಿ.

  ಕಾಮಿಡಿ, ಲವ್, ಆ್ಯಕ್ಷನ್ ಎಲ್ಲವೂ ಇರೋ ಸಿನಿಮಾದಲ್ಲಿ ಹೀರೋಯಿನ್ ಗಾನವಿ ಲಕ್ಷ್ಮಣ್. ಆಕೆಗೆ ಇದು ಮೊದಲ ಸಿನಿಮಾ. ಇನ್ನು ಡೈರೆಕ್ಟರ್ ಭರತ್ ರಾಜ್ ಎಂ. ಅವರಿಗೂ ಅಷ್ಟೆ, ಪ್ರಥಮ ಚುಂಬನ. ಅಫ್ಕೋರ್ಸ್.. ಭರತ್ ರಾಜ್ ನಿರ್ದೇಶನ ಕಲಿತಿದ್ದು ರಿಷಬ್ ಶೆ್ಟ್ಟಿ ಗರಡಿಯಲ್ಲೇ ಅನ್ನೋದು ಬೇರೆ ವಿಷಯ.

  ಒಂದೇ ರಾತ್ರಿಯಲ್ಲಿ ಸಿದ್ಧವಾದ ಕಥೆಯಿದು. ರಣಹೇಡಿಯಾಗೋಕೆ ಸಿದ್ಧವಿದ್ದರೆ ಮಾತ್ರ ಹೀರೋ ಆಗೋಕೆ ಸಾಧ್ಯ ಅನ್ನೋ ಟ್ಯಾಗ್ಲೈನ್ನಲ್ಲಿ ಬರ್ತಿರೋ ಸಿನಿಮಾ ಹೀರೋ. ಇಷ್ಟೆಲ್ಲ ಸ್ಪೆಷಾಲಿಟಿಗಳಿರೋ ಹೀರೋ ಮಾರ್ಚ್ 5ಕ್ಕೆ ರಿಲೀಸ್ ಆಗ್ತಿದೆ.

 • ಹೀರೋ ಕೈಲಿ ಕತ್ತರಿ..ಏನಿದರ ಮಿಸ್ಟರಿ..?

  ಹೀರೋ ಕೈಲಿ ಕತ್ತರಿ..ಏನಿದರ ಮಿಸ್ಟರಿ..?

  ಹೀರೋ ಚಿತ್ರದ ಟ್ರೇಲರ್ ನೋಡಿದವರಿಗೆಲ್ಲ ಕಾಡೋದು ಒಂದೇ ಪ್ರಶ್ನೆ. ಹೀರೋ ಪಾತ್ರ ಏನು..?

  ಆತ ಯಾಕೆ ಆ ಎಸ್ಟೇಟ್ಗೆ ಕಟಿಂಗ್ ಮಾಡೋ ನೆಪದಲ್ಲಿ ಬರ್ತಾನೆ..?

  ಆ ಎಸ್ಟೇಟ್ನಲ್ಲಿ ನಿಜಕ್ಕೂ ಏನು ನಡೀತಾ ಇರುತ್ತೆ..?

  ಅಷ್ಟೆಲ್ಲ ಜನ ರಕ್ತಸಿಕ್ತವಾಗಿ ಬಿದ್ದಿರೋದ್ಯಾಕೆ..?

  ವಿಲನ್ ಪ್ರಮೋದ್ ಶೆಟ್ಟಿ ಕ್ರೂರಿ. ಆದರೆ ಯಾಕೆ..?

  ಆತನ ಬಂಗಲೆಯಲ್ಲಿರೋ ಆಕೆ ಆತನ ಹೆಂಡತಿನಾ..? ಅಲ್ಲವಾ..?

  ಹೀರೋ ಜೊತೆ ಅವಳು ಓಡಿ ಬರೋದ್ಯಾಕೆ..?

  ಆ ಹೀರೋಯಿನ್, ಹೀರೋ ಕೈಗೆ ರೇಝರ್ ಕೊಡೋದ್ಯಾಕೆ..

  ಮತ್ತು..

  ಕೊನೆಯಲ್ಲಿ..

  ಅವನು ಅವಳ ಕುತ್ತಿಗೆಯನ್ನೇ ಸೀಳೋದ್ಯಾಕೆ..?

  ಒಂದಲ್ಲ.. ಎರಡಲ್ಲ.. ಹತ್ತಾರು ಪ್ರಶ್ನೆಗಳು. ಇಲ್ಲಿರೋ ಪ್ರಶ್ನೆಗಳ ಜೊತೆಗೆ ನಿಮ್ಮ ತಲೆಯಲ್ಲೂ ಇನ್ನೊಂದಷ್ಟು ಪ್ರಶ್ನೆಗಳು ಮೂಡಿದ್ದರೆ, ಅದಕ್ಕೆ ಕಾರಣ ಚಿತ್ರದ ಒಂದೇ ಒಂದು ಟ್ರೇಲರ್. ಒಂದು ಟ್ರೇಲರ್, ಒಂದು ಹಾಡು ಬಿಟ್ಟು, ಮತ್ತೇನನ್ನೂ ತೋರಿಸದೆ.. ಅಷ್ಟರಲ್ಲೇ ಪ್ರಶ್ನೆ, ಕುತೂಹಲ, ಸಸ್ಪೆನ್ಸ್ ಹುಟ್ಟು ಹಾಕಿರೋದು ನಿರ್ದೇಶಕ ಭರತ್ ರಾಜ್.

  ಎಷ್ಟೆಂದರೂ ಅವರು ಪಳಗಿರೋದು ರಿಷಬ್ ಗಡಿಯಲ್ಲಿ. ಇನ್ನು ಗಾನವಿ ಲಕ್ಷ್ಮಣ್ ಅಚ್ಚರಿ ಹುಟ್ಟಿಸೋದು ಖರೆ. ಆದರೆ.. ಆಕೆಗೂ, ರಿಷಬ್ ಶೆಟ್ಟಿಗೂ ಏನು ಲಿಂಕ್..? ಅವಳ್ಯಾಕೆ ವಿಲನ್ ಬಂಗಲೆಯಲ್ಲಿದ್ದಾಳೆ..?

  ಎಷ್ಟೆಲ್ಲ ಪ್ರಶ್ನೆಗಳು.. ಈ ಪ್ರಶ್ನೆಗಳಿಗೆಲ್ಲ ಉತ್ತರ ನೋಡಬೇಕು ಅಂದ್ರೆ ಮಾರ್ಚ್ 5ನೇ ತಾರೀಕು ಥಿಯೇಟರಿಗೇ ಹೋಗಬೇಕು. ಅಷ್ಟರಮಟ್ಟಿಗೆ ಸಿನಿಮಾದ ಕುತೂಹಲವನ್ನ ಟ್ರೇಲರ್ನಲ್ಲೇ ಸೃಷ್ಟಿಸಿದ್ದಾರೆ ರಿಷಬ್ ಶೆಟ್ಟಿ.

 • ಹೀರೋ ನಾನಲ್ಲ, ನಮ್ ಟೀಮೂ ಅಲ್ಲ - ರಿಷಬ್ ಶೆಟ್ಟಿ

  ಹೀರೋ ನಾನಲ್ಲ, ನಮ್ ಟೀಮೂ ಅಲ್ಲ - ರಿಷಬ್ ಶೆಟ್ಟಿ

  ಹೀರೋ ಶೂಟಿಂಗ್ ಆಗಿದ್ದು ಲಾಕ್ ಡೌನ್ ರೂಲ್ಸ್ ಸ್ವಲ್ಪ ರಿಲ್ಯಾಕ್ಸ್ ಆದ ಟೈಮ್ನಲ್ಲಿ. ಶೂಟಿಂಗ್ ಸ್ಪಾಟ್ನಲ್ಲಿ ಕಡಿಮೆ ಜನ ಇರಬೇಕು, ಸ್ಯಾನಿಟೈಸೇಷನ್, ಸಾಮಾಜಿಕ ಅಂತರ ಎಲ್ಲವನ್ನೂ ಕಡ್ಡಾಯವಾಗಿ ಪಾಲಿಸುತ್ತಿದ್ದ ಟೈಂನಲ್ಲಿ ಶೂಟಿಂಗ್ ಆದ ಸಿನಿಮಾ ಹೀರೋ.

  ಒಂದು ರಾತ್ರಿಯ ಕಥೆ ಓಕೆ ಆಗಿದ್ದು ಒಂದೇ ದಿನದಲ್ಲಾದರೂ ಚಿತ್ರೀಕರಣವನ್ನೂ ಒಂದೇ ದಿನ ಮಾಡೋದು ಸಾಧ್ಯವಿಲ್ಲವಲ್ಲ. ಹೀಗಾಗಿ ಬೇಲೂರು ಸಮೀಪದಲ್ಲಿ ನಡೆದ ಚಿತ್ರೀಕರಣ ಸತತವಾಗಿ ನಡೆದದ್ದು 43 ದಿನ. ಆ 43 ದಿನದಲ್ಲಿ ಚಿತ್ರೀಕರಣದಲ್ಲಿದ್ದ ಯಾರೊಬ್ಬರೂ ಹೊರಗೆ ಹೋಗಲಿಲ್ಲ. ಟೀಂಗೆ ಆಗಾಗ್ಗೆ ಚೇಂಜ್ ಮಾಡಬೇಕಿದ್ದ ಕೇಬಲ್ಸ್, ಲೈಟಿಂಗ್ಸ್ ವಸ್ತುಗಳನ್ನು ನೋಡಿಕೊಂಡು ತರಿಸಿಕೊಳ್ಳಲಾಗ್ತಿತ್ತು. ಉಳಿದಂತೆ ಊಟ, ತಿಂಡಿ ವ್ಯವಸ್ಥೆಗೆ ಹೋಗಿ ಬರುತ್ತಿದ್ದವರು ಒಬ್ಬರು ಮಾತ್ರ. ಊರಿನಿಂದ ಸುಮಾರು 6 ಕಿ.ಮೀ.ಒಳಗಿನ ಕಾಡಿನಲ್ಲಿ ನಡೆದ ಚಿತ್ರೀಕರಣ ಅದು. ಉಳಿದಂತೆ ಇಡೀ ಟೀಂ ಜೊತೆ ಹೊರಗಿನಿಂದ ಸಂಪರ್ಕದಲ್ಲಿದ್ದವರು ಶೈನ್ ಶೆಟ್ಟಿ ಮಾತ್ರ.

  ನಾನಲ್ಲ.. ಡೈರೆಕ್ಟರ್ ಅಲ್ಲ.. 24 ಜನರ ಟೀಮೂ ಅಲ್ಲ. ರಿಯಲ್ ಹೀರೋಗಳು ನಾವ್ಯಾರೂ ಅಲ್ಲ. ನಾವು ಕಾಡಿನಲ್ಲಿರುವಾಗ ಅಷ್ಟೂ ದಿನ ಆತಂಕದಲ್ಲಿಯೇ ಇದ್ದರೂ, ಅದನ್ನು ನಮಗೆ ತಿಳಿಸದೆ ಕಾಯ್ದ ನಮ್ಮ ಕುಟುಂಬ ಸದಸ್ಯರು. ನಮ್ಮ ಕುಟುಂಬದವರೇ ರಿಯಲ್ ಹೀರೋಗಳು ಎಂಬರ್ಥದಲ್ಲಿ ಹೇಳಿದ್ದಾರೆ ರಿಷಬ್ ಶೆಟ್ಟಿ.

  ಹೆಚ್ಚೂ ಕಡಿಮೆ 150 ಜನರ ಕೆಲಸವನ್ನು ಕೇವಲ 24 ಜನ ಮಾಡಿದ್ದೇವೆ. ಎಲ್ಲರೂ ತಂತ್ರಜ್ಞರೇ. ಅಗತ್ಯ ಬಿದ್ದಾಗ ಕೂಲಿಗಳೂ ಆಗಿದ್ದೇವೆ. ಹೀಗಾಗಿ ನಮ್ಮ ತಂಡದ ಎಲ್ಲರೂ ಈ ಚಿತ್ರದಲ್ಲಿ ಹೀರೋಗಳೇ ಎಂದು ಹೆಮ್ಮೆಯಿಂದ ಎದೆಯುಬ್ಬಿಸಿ ಹೇಳ್ತಾರೆ ರಿಷಬ್ ಶೆಟ್ಟಿ. ಅವರ ಹೆಮ್ಮೆಯ ಚಿತ್ರವೀಗ ಚಿತ್ರಮಂದಿರಗಳಲ್ಲಿದೆ.

 • ಹೀರೋ ಮ್ಯೂಸಿಕ್ ಚಾಲೆಂಜ್

  ಹೀರೋ ಮ್ಯೂಸಿಕ್ ಚಾಲೆಂಜ್

  ಹೀರೋ ಚಿತ್ರದ ಹಾಡೊಂದು ರಿಲೀಸ್ ಆಗಿದೆ. ಅದರಲ್ಲೂ ನೆನಪಿನ ಹುಡುಗಿಯೇ.. ಹಾಡು ಗುನುಗುವ ಗುಣವಿರೋ ಹಾಡು. ಒನ್ಸ್ ಎಗೇಯ್ನ್ ಅಜನೀಶ್ ಲೋಕನಾಥ್ ಮೆಲೋಡಿ ಸ್ಕೋರ್ ಮಾಡಿದ್ದಾರೆ. ಆದರೆ ಈ ಚಿತ್ರದ ಮ್ಯೂಸಿಕ್ ಮತ್ತು ಅದರ ಚಾಲೆಂಜ್ ಕಥೆ ಬೇರೆಯೇ ಇದೆ.

  ಎಲ್ಲ ಚಿತ್ರಗಳಿಗೂ ಮ್ಯೂಸಿಕ್ ಮಾಡೋ ಸ್ಟೈಲೇ ಬೇರೆ. ಆದರೆ ಹೀರೋಗೆ ಮ್ಯೂಸಿಕ್ ಮಾಡಿದ ಅನುಭವವೇ ಬೇರೆ. ಸಾಮಾನ್ಯವಾಗಿ ಚಿತ್ರದ ಬಗ್ಗೆ ಡಿಸ್ಕಷನ್ ನಡೆಯುವಾಗಲೇ ಹಾಡು, ಮ್ಯೂಸಿಕ್‍ಗಳ ಒಂದು ರಫ್ ವರ್ಕ್ ಆದರೂ ಆಗಿರುತ್ತೆ. ಆದರೆ ಹೀರೋ ಚಿತ್ರದಲ್ಲಿ ಹಾಗಾಗಲಿಲ್ಲ. ಹೀರೋ ಚಿತ್ರದ ಶೂಟಿಂಗ್ ಮುಗಿಸಿಕೊಂಡು ಬಂದ ಮೇಲೆ ರಿಷಬ್ ಶೆಟ್ಟಿ ಮ್ಯೂಸಿಕ್ ಮಾಡೋಕೆ ಹೇಳಿದರು ಎನ್ನುತ್ತಾರೆ ಅಜನೀಶ್.

  ಅದು ನನಗೆ ಚಾಲೆಂಜಿಂಗ್ ಆಗಿತ್ತು. ನಮ್ಮ ಕಂಪೋಸಿಂಗ್ ಮೇಲೆ ಎಲ್ಲರೂ ಸೀನ್ ಶೂಟ್ ಮಾಡಿದ್ರೆ, ಇಲ್ಲಿ ಸೀನ್‍ಗಳಿಗೆ ತಕ್ಕಂತೆ ಮ್ಯೂಸಿಕ್ ಕಂಪೋಸ್ ಮಾಡೋ ಸವಾಲು. ರಿಷಬ್ ಅವರಂತೂ ನನಗೆ 3 ಹಾಡು ಬೇಕು. ಎಲ್ಲಿ, ಯಾವ ಪಾರ್ಟ್‍ನಲ್ಲಿದ್ದರೆ ಓಕೆ ಅನ್ನೋದನ್ನು ನೋಡಿ ಕಂಪೋಸ್ ಮಾಡಿಕೊಡು ಎಂದರು. ಮೊದ ಮೊದಲು ತಲೆ ಕೆಟ್ಟಿದ್ದು ಹೌದಾದರೂ, ಆಮೇಲೆ ಅದು ಕೊಟ್ಟ ಥ್ರಿಲ್ಲೇ ಬೇರೆ ಎಂದಿದ್ದಾರೆ ಅಜನೀಶ್.

  ಅಜನೀಶ್ ಲೋಕನಾಥ್ ಮತ್ತು ರಿಷಬ್ ಶೆಟ್ಟಿ ಅವರ ಸಂಬಂಧ ಬೇರೆಯದೇ ರೀತಿಯದ್ದು. ಉಳಿದವರು ಕಂಡಂತೆ, ಕಿರಿಕ್ ಪಾರ್ಟಿ, ಬೆಲ್ ಬಾಟಂ..ಹೀಗೆ ರಿಷಬ್ ಶೆಟ್ಟಿ ಜರ್ನಿಯಲ್ಲಿ ಅಜನೀಶ್ ಕೂಡಾ ಜೊತೆ ಜೊತೆಯಲಿ ಹೆಜ್ಜೆ ಹಾಕಿದ್ದಾರೆ. ಹೀರೋ ಚಾಲೆಂಜ್‍ನ್ನೂ ಸೊಗಸಾಗಿ ಗೆದ್ದಿದ್ದಾರೆ. ಮುಂದಿನದ್ದು ಪ್ರೇಕ್ಷಕರ ಚಾಲೆಂಜ್.

   

 • ಹೀರೋಗೆ ವಿಲನ್ಸ್ ವಿಚಿತ್ರ ಹಿಂಸೆ

  ಹೀರೋಗೆ ವಿಲನ್ಸ್ ವಿಚಿತ್ರ ಹಿಂಸೆ

  ಈ ಶುಕ್ರವಾರವಷ್ಟೇ ರಿಲೀಸ್ ಆದ ಹೀರೋಗೆ ಎಲ್ಲ ಕಡೆಯಿಂದ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಥಿಯೇಟರುಗಳೂ ಭರ್ತಿಯಾಗಿವೆ. ಮೆಚ್ಚುಗೆಗಳೂ ಭರಪೂರ ಸಿಕ್ಕಿವೆ. ಚಿತ್ರಕ್ಕೆ ಮೌತ್ ಪಬ್ಲಿಸಿಟಿ ಸಿಗುತ್ತಿದೆ. ಈ ಹೊತ್ತಿನಲ್ಲೇ ಹೀರೋಗೆ ವಿಲನ್ಸ್ ಚಿತ್ರ ವಿಚಿತ್ರ ಹಿಂಸೆ ಕೊಡೋಕೆ ಶುರು ಮಾಡಿದ್ದಾರೆ.

  ರಿಷಬ್ ಶೆಟ್ಟಿಯವರ ಹೀರೋ ರಿಲೀಸ್ ಆಗಿದ್ದು ಮಾರ್ಚ್ 5ರಂದು. ರಿಷಬ್ ಶೆಟ್ಟಿ ಮತ್ತು ಗಾನವಿ ಲಕ್ಷ್ಮಣ್ ಅಭಿನಯದ ಕಾಮಿಡಿ ಹಾರರ್ ಥ್ರಿಲ್ಲರ್ ಸಿನಿಮಾ ರಿಲೀಸ್ ಆದ ಮೂರೇ ದಿನಗಳಲ್ಲಿ ಪೈರಸಿ ಆಗಿದೆ. ನಮ್ಮ ಹೀರೋ ಸಿನಿಮಾ 2 ಕಡೆ ರನ್ನಿಂಗ್ ಸಕ್ಸಸ್‌ಫುಲ್. ಒಂದು ಚಿತ್ರಮಂದಿರದಲ್ಲಿ, ಮತ್ತೊಂದು ಪೈರಸಿಯಲ್ಲಿ. ಕಷ್ಟಪಟ್ಟು ಮಾಡಿದ ಸಿನಿಮಾ ರಿಲೀಸ್ ಆದ ಮೂರೇ ದಿನಕ್ಕೆ ಪೈರಸಿ ಆಗಿ, ಆ ಕಾಪಿಗಳು ಎಲ್ಲೆಡೆ ಹರಿದಾಡುತ್ತಿವೆ  ಎಂದು ನೋವು ತೋಡಿಕೊಂಡಿದ್ದಾರೆ ರಿಷಬ್ ಶೆಟ್ಟಿ.

  ಹಾಗಂತ ರಿಷಬ್ ಶೆಟ್ಟಿ& ಟೀಂ ಸುಮ್ಮನೆ ಕೂತಿಲ್ಲ.  ಪೈರಸಿ ತಡೆಯುವವರ ಟೀಂನ್ನೇ ಕಟ್ಟಿಕೊಂಡು ಲಿಂಕ್ಗಳನ್ನು ಡಿಲೀಟ್ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಆದರೆ, ಒಂದು ಕಡೆ ಡಿಲೀಟ್ ಆದರೆ, ಮತ್ತೊಂದು ಕಡೆ  ಲಿಂಕ್ ಓಪನ್ ಆಗುತ್ತಲೇ ಇವೆ. ಚಿತ್ರಮಂದಿರಗಳಲ್ಲಿ ಶೂಟ್ ಮಾಡಿ ಬಿಟ್ಟಿದ್ದಾರೆ. ಥಿಯೇಟರಿನವರು ಇದಕ್ಕೆಲ್ಲ ಹೇಗೆ ಅವಕಾಶ ಕೊಡ್ತಾರೆ ಅನ್ನೋದೇ ನನಗೆ ಅರ್ಥ ಆಗ್ತಾ ಇಲ್ಲ ಅನ್ನೋದು ರಿಷಬ್ ಶೆಟ್ಟಿ ಕಂಪ್ಲೇಂಟು.

  ಇದು ಚಿತ್ರರಂಗಕ್ಕೆ ಹೊಸದೇನೂ ಅಲ್ಲ. ಈ ಹಿಂದೆ ಕನ್ನಡದಲ್ಲೇ ಪೈಲ್ವಾನ್ ಚಿತ್ರಕ್ಕೆ ಈ ಪ್ರಾಬ್ಲಂ ಎದುರಾಗಿತ್ತು. ಆದರೆ, ಪೈರಸಿಗೆ ಸಪೋರ್ಟ್ ಮಾಡುವ ವೆಬ್ಸೈಟ್ ಮತ್ತಿತರ ಪ್ಲಾಟ್ಫಾರಂಗಳನ್ನು ಅದೇಕೆ ಬ್ಯಾನ್ ಮಾಡ್ತಿಲ್ಲವೋ ಅರ್ಥ ಆಗ್ತಿಲ್ಲ ಅನ್ನೋದು ರಿಷಬ್ ಶೆಟ್ಟಿ ದೂರು.

  ಪೈರಸಿ ಕ್ರಿಮಿನಲ್ಸ್ ವಿರುದ್ಧ ವ್ಯವಸ್ಥೆಯೇ ಸೋತು ಹೋದಾಗ ಮತ್ತೇನು ಮಾಡೋಕೆ ಸಾಧ್ಯ. ಒಂದು ಕಡೆ ಅವರು ಹುಡುಕುತ್ತಿದ್ದಾರೆ. ಈ ಹೋರಾಟದಲ್ಲಿ ಪ್ರೇಕ್ಷಕರೂ ಭಾಗವಹಿಸಬೇಕು. ನಿಮಗೆ ಅಂತಾ ಲಿಂಕ್ ಸಿಕ್ಕರೆ ದಯವಿಟ್ಟು ರಿಷಬ್ ಶೆಟ್ಟಿಯವರಿಗೇ ತಲುಪಿಸಿ. ಅದನ್ನು ಅವರೇ ತೆಗೆಯುವ ಪ್ರಯತ್ನ ಮಾಡ್ತಾರೆ. ಸಿನಿಮಾ ಫೀಲ್ಡ್ ಉಳಿಯಬೇಕೆಂಧರೆ ಅದು ಅನಿವಾರ್ಯ. ಜನ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿದರೆ ಮಾತ್ರ, ಚಿತ್ರರಂಗ ಉಳಿಯೋಕೆ ಸಾಧ್ಯ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery