` darshan car, - chitraloka.com | Kannada Movie News, Reviews | Image

darshan car,

  • ದರ್ಶನ್ ಕರೆದ ಕೂಡ್ಲೇ ಹುಲಿ ಓಡೋಡಿ ಬಂತು..!

    darshan spens time with his adopted tiger in mysore zoo

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗೆ ಮೈಸೂರಿನ ಮೃಗಾಲಯಕ್ಕೆ ಭೇಟಿ ಕೊಟ್ಟಿದ್ದರು. ವನ್ಯಜೀವಿ ಸಂರಕ್ಷಣೆ ರಾಯಭಾರಿಯೂ ಆಗಿರುವ ದರ್ಶನ್, ಹುಲಿ ದಿನಾಚರಣೆ ಹಿನ್ನೆಲೆಯಲ್ಲಿ ಮೃಗಾಲಯಕ್ಕೆ ಹೋಗಿದ್ದರು. ಅಚ್ಚರಿಯೇನು ಗೊತ್ತಾ..? ಹಾಗೆ ಹೋಗಿದ್ದಾಗ.. ಅವರೇ ದತ್ತು ತೆಗೆದುಕೊಂಡಿರುವ ಹುಲಿ ವಿನೀಶ್(ಅವರ ಮಗನ ಹೆಸರನ್ನೇ ಹುಲಿಗೆ ಇಟ್ಟಿದ್ದಾರೆ ದರ್ಶನ್), ಕರೆದೊಡನೆ ಓಡೋಡಿ ಬಂದಿದೆ.

    ದತ್ತು ತೆಗೆದುಕೊಂಡವರೇನೂ ಹುಲಿಯನ್ನು ಮುದ್ದು ಮಾಡಿ ಸಾಕೋದಿಲ್ಲ. ಅದನ್ನು ಸಾಕುವ ಖರ್ಚು ವೆಚ್ಚದ ಹೊಣೆಯನ್ನಷ್ಟೇ ನಿಭಾಯಿಸುತ್ತಾರೆ. ಆದರೆ, ದರ್ಶನ್ ಧ್ವನಿಗೆ ಹುಲಿ ರಿಯಾಕ್ಟ್ ಮಾಡಿರುವ ವಿಡಿಯೋ ಅಚ್ಚರಿ ಮೂಡಿಸಿರುವುದು ನಿಜ. 

    ಭೇಟಿ ನಂತರ ದರ್ಶನ್,ಮತ್ತೊಂದು ವರ್ಷಕ್ಕೆ ಹುಲಿ ಹಾಗೂ ಇನ್ನೊಂದು ಆನೆಯನ್ನು ದತ್ತು ಪಡೆದಿದ್ದಾರೆ.

  • ದರ್ಶನ್ ಕಲೆಕ್ಷನ್ಸ್‍ಗೆ ಜಿಪ್ಸಿ ಎಂಟ್ರಿ

    darshan adds another car

    ದರ್ಶನ್‍ಗೆ ಪ್ರಾಣಿಗಳು ಹಾಗೂ ಕಾರುಗಳ ಹುಚ್ಚು ಎಷ್ಟಿದೆ ಎನ್ನುವುದು ದರ್ಶನ್ ಅವರನ್ನು ಬಲ್ಲ ಪ್ರತಿಯೊಬ್ಬರಿಗೂ ಗೊತ್ತು. ಇತ್ತೀಚೆಗಷ್ಟೇ ಲ್ಯಾಂಬೊರ್ಗಿನಿ ಖರೀದಿಸಿ, ತಮ್ಮ ಕಲೆಕ್ಷನ್ಸ್‍ಗೆ ಸೇರಿಸಿಕೊಂಡಿದ್ದ ದರ್ಶನ್, ಈಗ ಮತ್ತೊಂದು ಕಾರ್‍ನ್ನು ಬರಮಾಡಿಕೊಂಡಿದ್ದಾರೆ.

    ದರ್ಶನ್ ಕಲೆಕ್ಷನ್ಸ್‍ಗೆ ಸೇರಿರುವ ಹೊಸ ನಾಲ್ಕು ಚಕ್ರದ ವಾಹನ ಜಿಪ್ಸಿ. ಸ್ಟೈಲಿಷ್ ಲುಕ್‍ನ ಜಿಪ್ಸಿಯನ್ನು ಎಂದಿನಂತೆ ಸ್ವತಃ ದರ್ಶನ್ ಡ್ರೈವ್ ಮಾಡಲಿದ್ದಾರೆ. ಈಗಾಗಲೇ ಅವರ ಕಲೆಕ್ಷನ್ಸ್‍ನಲ್ಲಿ ಬಿಎಂಡಬ್ಲ್ಯು, ಲ್ಯಾಂಬೊರ್ಗಿನಿ, ರೇಂಜ್ ರೋವರ್, ಜಾಗ್ವಾರ್, ಫಾಚ್ರ್ಯೂನರ್ ಕಾರುಗಳಿವೆ.

  • ದರ್ಶನ್ ಮಗ ಸಿನಿಮಾಗೆ ಬರೋದು ಗ್ಯಾರಂಟಿ

    will bring my son into films says darshan

    `ನನ್ನ ಮಗ ಇಂಡಸ್ಟ್ರಿಗೆ ಬರೋಕೆ ಇನ್ನೂ ಟೈಂ ಇದೆ. ಅವನು ಚಿತ್ರರಂಗಕ್ಕೆ ಬರೋದು ಗ್ಯಾರಂಟಿ. ನನ್ನ ನಂತರವೂ ನನ್ನ ಬ್ರ್ಯಾಂಡ್ ಇರಬೇಕಲ್ಲ. ಹಾಗಾಗಿ ಅವನನ್ನು ಚಿತ್ರರಂಗಕ್ಕೆ ತರುತ್ತೇನೆ' ಯಾವುದೇ ಅನುಮಾನಕ್ಕೆ ಅವಕಾಶವಿಲ್ಲದಂತೆ ಹೇಳಿದ್ದಾರೆ ದರ್ಶನ್.

    ನನ್ನ ಮಗ ಪ್ರತಿದಿನವೂ ಮುಂದಿನ ಸಿನಿಮಾ ಯಾವುದು ಅಂತಾ ಕೇಳ್ತಾ ಇರ್ತಾನೆ ಎನ್ನುವ ದರ್ಶನ್, ಈಗಾಗಲೇ ತಮ್ಮ ಐರಾವತ ಮತ್ತು ಯಜಮಾನ ಚಿತ್ರಗಳಲ್ಲಿ ಪುತ್ರ ವಿನೀಶ್‍ರನ್ನು ಬೆಳ್ಳಿತೆರೆಯಲ್ಲಿ ಕಾಣಿಸಿದ್ದಾರೆ.

    ದರ್ಶನ್ ಕುಟುಂಬವೇ ಕಲಾವಿದರ ಕುಟುಂಬ. ದರ್ಶನ್ ತಂದೆ ತೂಗುದೀಪ ಶ್ರೀನಿವಾಸ್, ಕನ್ನಡ ಚಿತ್ರರಂಗ ಕಂಡ ಅದ್ಭುತ ಕಲಾವಿದರಲ್ಲಿ ಒಬ್ಬರು. ದರ್ಶನ್ ಚಾಲೆಂಜಿಂಗ್ ಸ್ಟಾರ್ ಆದರೆ, ದರ್ಶನ್ ತಮ್ಮ ದಿನಕರ್ ಸ್ಟಾರ್ ಡೈರೆಕ್ಟರ್. ಈಗ ದರ್ಶನ್ ಕುಟುಂಬದಿಂದ ಇನ್ನೊಂದು ಕುಡಿ ಚಿತ್ರರಂಗಕ್ಕೆ ಬರೋಕೆ ರೆಡಿ. ಯಾವಾಗ ಬರ್ತಾರೆ ಗೊತ್ತಿಲ್ಲ. ವೆಲ್‍ಕಂ.

  • ದರ್ಶನ್ ಮನೆಗೆ ಬಂದಳು ಶ್ವೇತಸುಂದರಿ

    darshan's white beauty car

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆಗೆ ಹೊಸ ಶ್ವೇತಸುಂದರಿ ಬಂದಿದ್ದಾಳೆ. ಈ ಶ್ವೇತ ಸುಂದರಿ ಎಂದರೆ ಅಂತಿಂಥವಳಲ್ಲ. ಈ ಶ್ವೇತ ಸುಂದರಿಯ ಬೆಲೆ 5 ಕೋಟಿಗೂ ಹೆಚ್ಚು. ರಸ್ತೆಯಲ್ಲಿ ಈಕೆ ಹೋಗುತ್ತಿದ್ದರೆ, ಎಂಥವರೂ ವ್ಹಾವ್ ಎಂದು ತಿರುಗಿ ನೋಡ್ತಾರೆ. ಇಂಥ ಸುಂದರಿಯನ್ನು ಪಡೆದವನೇ ಅದೃಷ್ಟವಂತ ಅಂತಾರೆ. ಅಂಥಾ ಅದೃಷ್ಟವಂತರ ಸಾಲಿಗೆ ಸೇರಿದ್ದಾರೆ ದರ್ಶನ್. ಅಂದಹಾಗೆ ಆ ಶ್ವೇತ ಸುಂದರಿಯ ಹೆಸರು ಲ್ಯಾಂಬೋರ್ಗಿನಿ.

    ಈಗಾಗಲೇ ಮನೆಯಲ್ಲಿ ಜಾಗ್ವಾರ್, ಆಡಿ ಕ್ಯೂ, ರೇಂಜ್ ರೋವರ್, ಬೆಂಜ್, ಫಾರ್ಚೂನರ್, ಮಿನಿ ಕೂಪರ್ ಮೊದಲಾದ ಕಾರುಗಳನ್ನು ಹೊಂದಿರುವ ದರ್ಶನ್‍ಗೆ, ಪ್ರಾಣಿಗಳಂತೆಯೇ ಕಾರು, ಬೈಕ್‍ಗಳ ಕ್ರೇಜ್ ಕೂಡಾ ಇದೆ. ಆ ಕ್ರೇಜ್‍ನ ಹೊಸ ಎಂಟ್ರಿಯೇ ಲ್ಯಾಂಬೋರ್ಗಿನಿ. ಇಂಥ ದುಬಾರಿ ಕಾರು ಹೊಂದಿರುವ ಕನ್ನಡದ ಕೆಲವೇ ಸ್ಟಾರ್‍ಗಳಲ್ಲಿ ಒಬ್ಬರು ಚಾಲೆಂಜಿಂಗ್ ಸ್ಟಾರ್ ದರ್ಶನ್.

  • ದಸರಾ ರೇಸ್‍ಗೆ ಹೋಗ್ತಾರಾ ಐರಾವತ..?

    darsha gets car race license

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಪಘಾತದಿಂದ ಚೇತರಿಸಿಕೊಳ್ಳುತ್ತಿರುವಾಗಲೇ, ಅಭಿಮಾನಿಗಳು ಶಾಕ್ ಆಗುವ ಸುದ್ದಿಯೊಂದು ಬಂದಿದೆ. ದರ್ಶನ್ ಅವರಿಗೆ ದಸರಾ ರೇಸ್‍ನಲ್ಲಿ ಭಾಗವಹಿಸೋಕೆ ಗ್ರಾವಲ್ ಫೆಸ್ಟ್ ಲೈಸೆನ್ಸ್ ಸಿಕ್ಕಿದೆ. ಅಕ್ಟೋಬರ್ 7ರಂದು ಮೈಸೂರಿನ ಲಲಿತ್ ಮಹಲ್ ಹೆಲಿಪ್ಯಾಡ್ ಮೈದಾನದಲ್ಲಿ ಕಾರ್ ರೇಸ್ ನಡೆಯಲಿದೆ. ಆ ರೇಸ್‍ನಲ್ಲಿ ಭಾಗವಹಿಸೋಕೆ ದರ್ಶನ್ ತಯಾರಿ ಮಾಡಿಕೊಳ್ಳುತ್ತಿದ್ದರು. ರೇಸ್ ಕಾರ್ ಓಡಿಸುವ ಪ್ರಾಕ್ಟೀಸ್ ಮಾಡುತ್ತಿದ್ದ ದರ್ಶನ್, ಲೈಸೆನ್ಸ್‍ಗೆ ಅರ್ಜಿ ಹಾಕಿದ್ದರು. ಈಗ ಆ ಲೈಸೆನ್ಸ್ ಪಡೆದುಕೊಂಡಿದ್ದಾರೆ ದರ್ಶನ್.

    ದರ್ಶನ್ ಲೈಸೆನ್ಸ್ ಪಡೆದಿರುವುದು ಕುತೂಹಲ ಹೆಚ್ಚಿಸಿರುವುದು ಹೌದು. ಇದು ಅಭಿಮಾನಿಗಳಲ್ಲೂ ಗೊಂದಲ ಮೂಡಿಸಿರುವುದು ನಿಜ. ಕೆಲವು ದರ್ಶನ್ ಅಭಿಮಾನಿಗಳು, ಅಪಘಾತದ ಗಾಯದ ನಡುವೆಯೂ ರೇಸ್‍ಗೆ ಹೋಗ್ತಿದ್ದಾರೆ ನಮ್ ಡಿ ಬಾಸ್ ಎಂದು ಥ್ರಿಲ್ಲಾಗಿದ್ದರೆ, ಇನ್ನೂ ಕೆಲವು ದರ್ಶನ್ ಅಭಿಮಾನಿಗಳು ರೇಸ್ ಬೇಡ ಬಾಸ್. ಮೊದಲು ಹುಷಾರಾಗಿ ಎಂದು ಕೇಳಿಕೊಳ್ಳುತ್ತಿದ್ದಾರೆ.

  • ರಾಬರ್ಟ್ ಚಿತ್ರದ ಸೆಟ್‍ನಲ್ಲಿ ರ್ಯಾಂಕ್ ಸ್ಟೂಡೆಂಟ್ಸ್ ಫಾರ್ಮುಲಾ

    robert movie adapts rank student concept

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಸೆಟ್‍ನಲ್ಲಿ ಎಸ್‍ಎಸ್‍ಎಲ್‍ಸಿ, ಪಿಯು, ಯುಪಿಎಸ್‍ಸಿ ರ್ಯಾಂಕ್ ಸ್ಟೂಡೆಂಟ್‍ಗಳ ಫಾರ್ಮುಲಾ ಅಳವಡಿಸಿಕೊಳ್ಳಲಾಗ್ತಿದೆ. ಇಷ್ಟಕ್ಕೂ ಏನದು ರ್ಯಾಂಕ್ ಸ್ಟೂಡೆಂಟ್ಸ್ ಫಾರ್ಮುಲಾ ಅಂದ್ಕೊಂಡ್ರಾ..?

    ನೀವೇ ನೋಡಿ.. ಇತ್ತೀಚೆಗೆ ಹಾಗೆ ರ್ಯಾಂಕ್ ಬಂದ ವಿದ್ಯಾರ್ಥಿಗಳೆಲ್ಲ ಹೇಳಿರೋದು ಬಹುತೇಕ ಒಂದೇ ವಿಷಯ. ಅವರು ಫೋನ್, ವಾಟ್ಸಪ್, ಫೇಸ್‍ಬುಕ್ ಸೇರಿದಂತೆ ಸೋಷಿಯಲ್ ಮೀಡಿಯಾದಿಂದ ದೂರವಿದ್ದು ಓದಿದವರು. ಹಲವರ ಈ ಯಶಸ್ಸಿನ ಗುಟ್ಟನ್ನೇ ತನ್ನ ಸೆಟ್ಟಲ್ಲಿ ಅಳವಡಿಸಿಕೊಳ್ಳೋಕೆ ಮುಂದಾಗಿದ್ದಾರೆ ನಿರ್ದೇಶಕ ತರುಣ್ ಸುಧೀರ್.

    ಅವರ ಈ ನಿರ್ಧಾರಕ್ಕೆ ಕಾರಣ ಇಷ್ಟೆ, ಸಿನಿಮಾ ಚೆನ್ನಾಗಿ ಬರಬೇಕು, ಕೆಲಸಗಳು ಬೇಗ ಬೇಗ ಸರಾಗವಾಗಿ ಆಗಬೇಕು, ಮಧ್ಯೆ ಮಧ್ಯೆ ಡೈವರ್ಷನ್‍ಗಳು ಇರಬಾರದು. ಇದ್ಯಾವುದೂ ಆಗಬಾರದು ಎಂದರೆ, ಸೆಟ್ಟಿನಲ್ಲಿದ್ದವರ ಬಳಿ ಮೊಬೈಲ್ ಇರಬಾರದು. ಅಷ್ಟೇ ಅಲ್ಲ, ಹೀಗೆ ಮಾಡುವುದರಿಂದ ಚಿತ್ರದ ಶೂಟಿಂಗ್ ಸ್ಥಳದ ಫೋಟೋ, ವಿಡಿಯೋ ಲೀಕ್ ಆಗುವುದನ್ನೂ ತಪ್ಪಿಸಬಹುದು. ಹೀಗೆ ಹಲವು ಲೆಕ್ಕಾಚಾರ ಹಾಕಿಕೊಂಡೇ ನಿರ್ಧಾರಕ್ಕೆ ಬಂದಿದ್ದಾರೆ ತರುಣ್. ನಿರ್ದೇಶಕರೇ ಸಮಯದ ಉಳಿತಾಯಕ್ಕೆ, ಕೆಲಸದ ವೇಗಕ್ಕೆ ಇಷ್ಟೊಂದು ಮುತುವರ್ಜಿ ವಹಿಸುತ್ತಿರುವಾಗ ನಿರ್ಮಾಪಕರು ಖುಷಿಯಾಗದೇ ಇರ್ತಾರಾ..? ಪ್ರೊಡ್ಯೂಸರ್ ಉಮಾಪತಿ ಫುಲ್ ಹ್ಯಾಪಿ.

  • ರ್ಶನ್‍ಗೇ ದುರ್ಯೋಧನನ ಉಡುಗೊರೆ

    darshan gets special gift from his fan

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ದುರ್ಯೋಧನನಾಗಿರುವುದು ಹೊಸ ವಿಷಯವೇನೂ ಅಲ್ಲ. ದರ್ಶನ್ ಅವರ ಅಭಿನಯದ 50ನೇ ಸಿನಿಮಾ ಕುರುಕ್ಷೇತ್ರದಲ್ಲಿ ದರ್ಶನ್ ಅವರ ದುರ್ಯೋಧನನ ಲುಕ್ಕು ಮತ್ತು ಅವರ ಆ ನಗು ಅಭಿಮಾನಿಗಳನ್ನು ಇನ್ನಷ್ಟು ಮತ್ತಷ್ಟು ಹುಚ್ಚೆಬ್ಬಿಸಿರುವುದು ನಿಜ. ಈಗ ಆ ದುರ್ಯೋಧನನಿಗೇ ದುರ್ಯೋಧನನ ಉಡುಗೊರೆ ಕೊಟ್ಟಿದ್ದಾರೆ ದರ್ಶನ್‍ರ ಒಬ್ಬ ಅಭಿಮಾನಿ.

    ಕಿರಣ್ ಎಂಬ ಈ ಯುವಕ ದರ್ಶನ್‍ರ ಅಭಿಮಾನಿ. ಇವರ ಮದುವೆಗೆ ದರ್ಶನ್ ಅವರಿಗೆ ಆಹ್ವಾನ ಪತ್ರಿಕೆ ಕೊಡಲು ಹೋಗುವಾಗ, ಏನಾದರೂ ಗಿಫ್ಟ್ ತೆಗೆದುಕೊಂಡು ಎಂದುಕೊಂಡರಂತೆ. ಆಗ ದರ್ಶನ್ ಅವರು ದುರ್ಯೋಧನನ ಗೆಟಪ್ಪಿನಲ್ಲಿರುವ ಈ ಫೋಟೋವನ್ನು ಡಿಸೈನ್ ಮಾಡಿಸಿ, ದರ್ಶನ್‍ಗೆ ಉಡುಗೊರೆಯಾಗಿ ಕೊಟ್ಟಿದ್ದಾರೆ ದರ್ಶನ್.

    ಪೇಂಯ್ಟಿಂಗ್‍ನಲ್ಲಿ ಅರಳಿರುವ ಈ ಫೋಟೋ ದರ್ಶನ್ ಅವರಿಗೂ ಇಷ್ಟವಾಗಿದೆ.