` dr vishnuvardhan, - chitraloka.com | Kannada Movie News, Reviews | Image

dr vishnuvardhan,

  • ಸರ್ಕಾರಕ್ಕೆ ವಿಷ್ಣು ಅಭಿಮಾನಿ ಯಶ್ ಎಚ್ಚರಿಕೆ

    yash image

    ರಾಕಿಂಗ್ ಸ್ಟಾರ್ ಯಶ್, ವಿಷ್ಣುವರ್ಧನ್ ಅವರ ಅಭಿಮಾನಿ ಎನ್ನುವುದು ಗುಟ್ಟೇನಲ್ಲ. ಯಶ್ ಚಿತ್ರಜೀವನದ ಮೈಲುಗಲ್ಲು ಎಂದೇ ಪರಿಗಣಿತವಾಗುವ ರಾಮಾಚಾರಿ ಚಿತ್ರದಲ್ಲಿ ಯಶ್, ವಿಷ್ಣು ಅಭಿಮಾನಿಯಾಗಿಯೇ ಮಿಂಚಿದ್ದರು. ಈಗ ಯಶ್, ವಿಷ್ಣು ಅವರಿಗೆ ಸರ್ಕಾರ ಕೊಡಬೇಕಾದ ಗೌರವ ಕೊಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ವಿಷ್ಣುವರ್ಧನ್ ಅವರ ಅಳಿಯ ರಾಜಾಸಿಂಹ ಚಿತ್ರದ ಆಡಿಯೋ ಬಿಡುಗಡೆಗೆ ಆಗಮಿಸಿದ್ದ ಯಶ್, ಸರ್ಕಾರ ವಿಷ್ಣು ಅವರಿಗೆ ಕೊಡಬೇಕಾದ ಗೌರವ ಕೊಡುತ್ತಿಲ್ಲ. ಈ ಕೆಲಸವನ್ನು ಸರ್ಕಾರ ತುರ್ತಾಗಿ ಮಾಡಬೇಕು. ಇಲ್ಲದೇ ಹೋದರೆ, ಅಭಿಮಾನಿಗಳಾದ ನಾವೇ ಅದನ್ನು ಮಾಡಬೇಕಾಗುತ್ತದೆ ಎಂದಿದ್ದಾರೆ. ಯಶ್ ಅವರ ಮಾತಿನಲ್ಲಿ ಮನವಿಯಷ್ಟೇ ಇರಲಿಲ್ಲ, ಎಚ್ಚರಿಕೆಯೂ ಇತ್ತು ಎಂಬುದನ್ನು ಮರೆಯುವಂತಿಲ್ಲ.

  • ಸೆಪ್ಟೆಂಬರ್‍ನಲ್ಲಿ ವಿಷ್ಣು ಹಬ್ಬ

    vishnu rastriya utsava in september

    ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ ನಾಗರಹಾವು ಚಿತ್ರ, ಥಿಯೇಟರುಗಳಲ್ಲಿ ಮೋಡಿ ಮಾಡುತ್ತಿದ್ದರೆ, ಅತ್ತ ಅಭಿಮಾನಿಗಳು ವಿಷ್ಣು ಹಬ್ಬದ ಆಚರಣೆಗೆ ಸಿದ್ಧರಾಗುತ್ತಿದ್ದಾರೆ. ವಿಷ್ಣುವರ್ಧನ್ ಅಭಿಮಾನಿ, ವಿಷ್ಣುಸೇನಾ ಸಮಿತಿ 

    ಸೆ. 16, 17, 18ರಂದು ವಿಷ್ಣು ರಾಷ್ಟ್ರೀಯ ಉತ್ಸವ ಆಯೋಜಿಸಿದೆ.

    ವಿಷ್ಣುವರ್ಧನ್ ಅವರ 69ನೇ ಹುಟ್ಟುಹಬ್ಬವನ್ನು ರಾಷ್ಟ್ರೀಯ ಉತ್ಸವವನವನಾಗ ಆಚರಿಸುತ್ತಿದೆ ವಿಷ್ಣು ಸೇನಾ ಸಮಿತಿ. ರಾಷ್ಟ್ರೀಯ ಉತ್ಸವದ ಸಂಪೂರ್ಣ ಮಾಹಿತಿ ನೀಡಿದ್ದಾರೆ ವಿಷ್ಣುಸೇನಾ ಸಮತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್.

    ಸೆ.16ರಂದು ಕೆ.ಆರ್.ರಸ್ತೆಯ ಕುವೆಂಪು ಕಲಾಕ್ಷೇತ್ರದಲ್ಲಿ ರಾಷ್ಟ್ರೀಯ ಉತ್ಸವ ಉದ್ಘಾಟನೆ. ಬಿಬಿಎಂಪಿಯಿಂದ ಕಲಾಕ್ಷೇತ್ರದವರೆಗೆ ವಿವಿಧ ಜಾನಪದ ತಂಡಗಳ ಮೆರವಣಿಗೆ. ಮೆರವಣಿಗೆಯಲ್ಲಿ ನೂರಾರು ಕಲಾತಂಡಗಳು ಹಾಗೂ ಚಿತ್ರರಂಗದ ಕಲಾವಿದರ ಜೊತೆಗೆ 10 ಸಾವಿರಕ್ಕೂ ಹೆಚ್ಚು ಅಭಿಮಾನಗಳು ಭಾಗಿಯಾಗಲಿದ್ದಾರೆ. ವಿಷ್ಣುವರ್ಧನ್ ಅವರ ಕುರಿತ 3 ಕೃತಿಗಳೂ ಬಿಡುಗಡೆಯಾಗಲಿವೆ.

    ಈ ಬಾರಿ ವೀರಪ್ಪನಾಯ್ಕ ಗೆಟಪ್‍ನ ಪುತ್ಥಳಿ ಅನಾವರಣಗೊಳ್ಳಲಿದೆ. ವಿಷ್ಣು ಬದುಕು, ಸಾಧನೆ ಕುರಿತು ಚಿತ್ರಕಲಾ ಸ್ಪರ್ಧೆಯನ್ನೂ ಆಯೋಜಿಸಲಾಗಿದೆ. ವಿಷ್ಣು ಅವರೊಂದಿಗೆ ನಟಿಸಿದ್ದ ಕಲಾವಿದರು ಹಾಗೂ ಯುವನಟರು ವಿಚಾರ ಸಂಕಿರಣ ನಡೆಸಲಿದ್ದಾರೆ. ಮೂರೂ ದಿನ ಸಂಜೆ ವಿಷ್ಣುಗೀತೆಗಳ ರಸಸಂಜೆ ನಡೆಯಲಿದೆ. ಒಟ್ಟಿನಲ್ಲಿ ಸೆಪ್ಟೆಂಬರ್‍ನಲ್ಲಿ ವಿಷ್ಣು ಹಬ್ಬ.

  • ಹಳೆ ನಾಗರಹಾವುಗೆ ಡಿಜಿಟಲ್ ಸ್ಪರ್ಶ

    old nagarahaavu gets digital touch

    ನಾಗರಹಾವು, ಕನ್ನಡಕ್ಕೆ ಇಬ್ಬರು ಸ್ಟಾರ್‍ಗಳನ್ನು ಪರಿಚಯಿಸಿದ ಸಿನಿಮಾ. ವಿಷ್ಣುವರ್ಧನ್ ಮತ್ತು ಅಂಬರೀಷ್ ತೆರೆಗೆ ಪರಿಚಿತರಾಗಿದ್ದು ಇದೇ ಚಿತ್ರದಿಂದ. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಈ ಸಿನಿಮಾ, ಕನ್ನಡ ಚಿತ್ರರಂಗದ ಕ್ಲಾಸಿಕ್ ಸಿನಿಮಾಗಳಲ್ಲಿ ಒಂದು. ಈಗ ಈ ಚಿತ್ರ ಕಸ್ತೂರಿ ನಿವಾಸ, ಸತ್ಯಹರಿಶ್ಚಂದ್ರ, ಬಭ್ರುವಾಹನ.. ಇತ್ಯಾದಿಗಳ ಮಾದರಿಯಲ್ಲಿ ಡಿಜಿಟಲ್ ಸ್ಪರ್ಶದೊಂದಿಗೆ ಬಿಡುಗಡೆಗೆ ಸಿದ್ಧವಾಗಿದೆ.

    ನಾಗರಹಾವು ಚಿತ್ರ ಇದ್ದಿದ್ದು ಹಳೆ ಟೆಕ್ನಾಲಜಿಯಲ್ಲಿ. ಒಂದೇ ಸ್ಪೀಕರ್‍ನಲ್ಲಿ ವಾಯ್ಸ್ ಕೇಳಬೇಕಿತ್ತು. ಈಗ ಚಿತ್ರಕ್ಕೆ 7.1 ಡಿಟಿಎಸ್ ಸೌಂಡ್ ಎಫೆಕ್ಟ್ ನೀಡಲಾಗಿದೆ. 35 ಎಂಎಂನಲ್ಲಿದ್ದ ಸಿನಿಮಾವನ್ನು ಹೊಸ ತಂತ್ರಜ್ಞಾನಕ್ಕೆ ಒಗ್ಗಿಸಲಾಗಿದೆ. ಹೀಗಾಗಿ ಇಡೀ ಸಿನಿಮಾ ಹೊಸದಾಗಿ ಕಾಣಿಸಿಕೊಳ್ಳಲಿದೆ.

    ಅಂದಹಾಗೆ ಇದು ಎನ್.ವೀರಸ್ವಾಮಿ(ರವಿಚಂದ್ರನ್ ಅವರ ತಂದೆ) ಅವರ ನಿರ್ಮಾಣದ ಸಿನಿಮಾ. ಬಾಲಾಜಿ ಉಸ್ತುವಾರಿ ಹೊತ್ತಿರುವ ಈಶ್ವರಿ ಸಂಸ್ಥೆಯಿಂದ ಈ ಸಿನಿಮಾ ರೀ-ರಿಲೀಸ್ ಆಗುತ್ತಿದೆ. ಹಣದ ಬಗ್ಗೆ ಚಿಂತೆಯಿಲ್ಲ. ಈ ಅದ್ಭುತ ಸಿನಿಮಾವನ್ನು ಈಗಿನ ಯುವಪೀಳಿಗೆ ನೋಡಬೇಕು ಅನ್ನೋದು ನನ್ನ ಕಾಳಜಿ ಎನ್ನುತ್ತಾರೆ ಬಾಲಾಜಿ.

  • ಹಿಂದಿಯಲ್ಲೂ ಬರುತ್ತಿದೆ ನಿಷ್ಕರ್ಷ..

    nishkarsha movie to re release in hindi too

    90ರ ದಶಕದಲ್ಲಿ ಸಂಚಲನ ಸೃಷ್ಟಿಸಿದ್ದ ನಿಷ್ಕರ್ಷ ಚಿತ್ರವನ್ನು ವಿಷ್ಣುವರ್ಧನ್ ಹುಟ್ಟುಹಬ್ಬಕ್ಕೆಂದೇ ರಿ-ರಿಲೀಸ್ ಮಾಡುತ್ತಿದ್ದಾರೆ ಬಿ.ಸಿ.ಪಾಟೀಲ್. ಚಿತ್ರವನ್ನು ಹೊಸ ಟೆಕ್ನಾಲಜಿಯಿಂದ ಇನ್ನಷ್ಟು ಸುಂದರಗೊಳಿಸಲಾಗಿದೆ. ಇದಕ್ಕಿಂತ ಇನ್ನೂ ಒಂದು ವಿಶೇಷವೆಂದರೆ ಚಿತ್ರವನ್ನು ಹಿಂದಿಗೂ ಡಬ್ ಮಾಡಲಾಗಿದೆ. ಸೆ.20ರಂದು ಹಿಂದಿಯಲ್ಲೂ ನಿಷ್ಕರ್ಷ ರಿಲೀಸ್ ಆಗುತ್ತಿದೆ.

    ಆಗಿನ ಕಾಲಕ್ಕೆ ಚಿತ್ರವನ್ನು 60 ಲಕ್ಷದಲ್ಲಿ ನಿರ್ಮಿಸಲಾಗಿತ್ತು. ಈಗ ಚಿತ್ರವನ್ನು ರಿ-ರಿಲೀಸ್ ಮಾಡುವುದಕ್ಕೇ ಒಂದು ಕೋಟಿಗೂ ಹೆಚ್ಚು ಖರ್ಚಾಗಿದೆ.

    ಆಗ ಚಿತ್ರವನ್ನು ನೋಡಿದವರು ಇದು 25 ವರ್ಷಗಳ ನಂತರ ಬರಬೇಕಿದ್ದ ಸಿನಿಮಾ ಎಂದಿದ್ದರು. ಆ ಮಾತೇ ಈಗ ಮತ್ತೊಮ್ಮೆ ಬಿಡುಗಡೆ ಮಾಡಲು ಕಾರಣ ಎಂದಿದ್ದಾರೆ ಬಿ.ಸಿ.ಪಾಟೀಲ್.

    ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ ಮಾಸ್ಟರ್ ಪೀಸ್ ಆಗಿರುವ ನಿಷ್ಕರ್ಷ ಚಿತ್ರದಲ್ಲಿ ವಿಷ್ಣುವರ್ಧನ್, ಅನಂತ್‍ನಾಗ್, ಸುಮನ್ ನಗರ್‍ಕರ್, ಬಿ.ಸಿ.ಪಾಟೀಲ್ ನಟಿಸಿದ್ದಾರೆ.