ಅಗಲಿದ ಕಲಾವಿದನೊಬ್ಬನ ನೆನಪಲ್ಲಿ, ಅವರು ನಮ್ಮ ಮಧ್ಯೆ ಇಲ್ಲದಂತಾಗಿ ಹೋದ 8 ವರ್ಷದ ನಂತರ, ಅವರ ಸ್ಮರಣಾರ್ಥ ರಾಷ್ಟ್ರೀಯ ಉತ್ಸವವೊಂದು ನಡೆಯುತ್ತೆ ಎಂದರೆ, ಎಂಥವರೂ ಮೆಚ್ಚಲೇಬೇಕು. ಅಂಥಾದ್ದೊಂದು ಸಾಹಸ ಮಾಡಿರುವುದು ವೀರಕಪುತ್ರ ಶ್ರೀನಿವಾಸ್. ಇದೇ ಆಗಸ್ಟ್ಟ 27ಕ್ಕೆ ನವದೆಹಲಿಯಲ್ಲಿ ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ ನಡೆಯುತ್ತಿದೆ. ವಿಷ್ಣು ಸೇನಾ ಸಮಿತಿ ಹಮ್ಮಿಕೊಂಡಿರುವ ಈ ಸ್ಮರಣಾ ಕಾರ್ಯಕ್ರಮ ಕನ್ನಡಿಗರಿಗೆಲ್ಲ ಹೆಮ್ಮೆ
ಬೆಳಗ್ಗೆ 6ರಿಂದ ರಾತ್ರಿ 12ರವರೆಗೆ ಇಡೀ ದಿನ ವಿಷ್ಣು ಸ್ಮರಣೆ
ಆ ದಿನ ಬೆಳಗ್ಗೆ 6 ಗಂಟೆಗೆಲ್ಲ ಸಂಭ್ರಮ ಶುರುವಾಗುತ್ತೆ. ಇಡೀ ದಿನ ವಿಷ್ಣು ನೆನಪಲ್ಲಿ ಹಲವು ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಚಿತ್ರರಂಗದ ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. 500ಕ್ಕೂ ಹೆಚ್ಚು ಅಭಿಮಾನಿಗಳು ಇದೇ ಉತ್ಸವಕ್ಕಾಗಿ ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದಾರೆ.
6 ಅಡಿ ಎತ್ತರದ ವಿಷ್ಣು ಪ್ರತಿಮೆ ಅನಾವರಣ
ಇದೇ ಮೊದಲ ಬಾರಿಗೆ ಕನ್ನಡದ ಕಲಾವಿದರೊಬ್ಬರ ಮೇಣದ ಪ್ರತಿಮೆ, ನವದೆಹಲಿಯಲ್ಲಿ ಅನಾವರಣಗೊಳ್ಳುತ್ತಿದೆ. ಬೆಳಗ್ಗೆ 6 ಗಂಟೆಗೆ ಆಸ್ಟ್ರೇಲಿಯಾದಿಂದ ಬಂದಿರುವ ವಿಷ್ಣು ಅಭಿಮಾನಿ ಬಲರಾಂ, ವಿಷ್ಣು ಭಾವಚಿತ್ರವಕ್ಕೆ ಪೂಜೆ ನಡೆಸಲಿದ್ದಾರೆ. ಅಲ್ಲಿಂದ ಕಾರ್ಯಕ್ರಮ ಆರಂಭ.
ವಿಷ್ಣು ಅವರಿಗಾಗಿಯೇ ನಾಗೇಂದ್ರ ಪ್ರಸಾದ್ ಹಾಡು ಬರೆದಿದ್ದಾರೆ. ಚಿತ್ರಲೋಕ ವೀರೇಶ್ ಅವರಿಂದ ವಿಷ್ಣುವರ್ಧನ್ ಚಿತ್ರಜೀವನದ ಮೈಲುಗಲ್ಲುಗಳ ಫೋಟೋ ಎಕ್ಸಿಬಿಷನ್ ಇದೆ. ವಿಷ್ಣು ಹಾದಿಯ ಕುರಿತು, ಸಾಂಸ್ಕøತಿಕ ಲೋಕಕ್ಕೆ ವಿಷ್ಣು ನೀಡಿರುವ ಕೊಡುಗೆಗಳ ಕುರಿತು ಖ್ಯಾತಿ ಪತ್ರಕರ್ತರಾದ ಜೋಗಿ, ಬಿ. ಗಣಪತಿ, ಸದಾಶಿವ ಶೆಣೈ, ಕೆ.ಎಂ. ವೀರೇಶ್, ಬಿ. ನಂದಕುಮಾರ್ ವಿಚಾರ ಮಂಡನೆ ಮಾಡಲಿದ್ದಾರೆ.
ಸಿಂಹಾವಲೋಕನ ಕೃತಿ ಬಿಡುಗಡೆ ಹಾಗೂ ಶಿವರಾಮಣ್ಣನವರಿಗೆ ಡಾ. ವಿಷ್ಣುವರ್ಧನ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ ನೀಡಿ ಸನ್ಮಾನಿಸಲಾಗುತ್ತಿದೆ. ಕೇಂದ್ರ ಸಚಿವ ಅನಂತ್ ಕುಮಾರ್, ರಾಜ್ಯದ ಸಚಿವರಾದ ದಿನೇಶ್ ಗುಂಡೂರಾವ್, ವಿಧಾನಪರಿಷತ್ ಸದಸ್ಯರಾದ ಹೆಚ್.ಎಂ. ರೇವಣ್ಣ, ಕರವೇ ಅಧ್ಯಕ್ಷ ನಾರಾಯಣ ಗೌಡ ಮೊದಲಾದ ಗಣ್ಯರು ಭಾಗವಹಿಸುತ್ತಿದ್ದಾರೆ.
ಚಿತ್ರರಂಗದ ಕಲಾವಿದರ ಸಂಗಮ
ಡಾ. ವಿಷ್ಣು ಒಡನಾಡಿಗಳೂ, ಗೆಳೆಯರೂ ಆಗಿದ್ದ ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ.ರಾ. ಗೋವಿಂದು, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ. ರಾಜೇಂದ್ರ ಸಿಂಗ್ ಬಾಬು, ಹೇಮಾ ಚೌಧರಿ, ತಾರಾ ಅನುರಾಧ, ಚರಣ್ ರಾಜ್.. ಇವರೆಲ್ಲ ವಿಷ್ಣು ಜೊತೆಯಲ್ಲೇ ಬೆಳೆದಿದ್ದವರು. ಆದಿತ್ಯ, ಕೋಕಿಲ ಮೋಹನ್, ಬಿ.ಸಿ. ಪಾಟೀಲ್, ಅರುಣ್ ಸಾಘರ್, ಶ್ರೀನಗರ ಕಟ್ಟಿ, ರಾಗಿಣಿ, ಶೋಭರಾಜ್, ಸಾಧುಕೋಕಿಲ, ರವಿಶಂಕರ್ ಗೌಡ.. ಇವರೆಲ್ಲ ವಿಷ್ಣು ಅವರನ್ನು ನೋಡಿಕೊಂಡು ಬೆಳೆದ ಕಲಾವಿದರು.
ಅಟ್ಟಾವರ ರಾಮದಾಸ್, ವರದರಾಜ್ ಪೈ, ಹಾಗೂ ಕಾರ್ಯಕ್ರಮದ ರೂವಾರಿ, ಡಾ. ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್.. ಇವರೆಲ್ಲರ ಸಂಗಮವೂ ಇದೇ ವೇದಿಕೆಯಲ್ಲಿ ನಡೆಯಲಿದೆ.
ವಿಶೇಷಗಳು ಇನ್ನೂ ಹಲವಾರಿವೆ. ವಿಷ್ಣು ಉತ್ಸವವನ್ನು ಮಿಸ್ ಮಾಡಿಕೊಳ್ಳಬೇಡಿ. ಏಕೆಂದರೆ, ಇದು ಅಭಿಮಾನಿಗಳಿಗಾಗಿ..ಅಭಿಮಾನಿಗಳಿಂದ..ಅಭಿಮಾನಿಗಳಿಗೋಸ್ಕರ..