` uppu huli khara - chitraloka.com | Kannada Movie News, Reviews | Image

uppu huli khara

 • ಉಪ್ಪು ಹುಳಿ ಖಾರದ ಥೀಮ್ ಗೊತ್ತಾಯ್ತು..!

  uppu huli khara theme revealed

  ಉಪ್ಪು ಹುಳಿ ಖಾರ.. ಇದೇ ವಾರ ರಿಲೀಸ್ ಆಗುತ್ತಿರುವ ಚಿತ್ರ. ಚಿತ್ರದ ಹಾಡುಗಳು ವೈರಲ್ ಆಗಿದ್ದು, ಚಿತ್ರದ ಬಗ್ಗೆ ನಿರೀಕ್ಷೆಯೂ ಹೆಚ್ಚಿದೆ. ಅದಕ್ಕೆ ಕಾರಣ ಚಿತ್ರದ ಟೈಟಲ್. ಅಡುಗೆ ಮಾಡಬೇಕು ಅಂದ್ರೆ, ಉಪ್ಪು ಹುಳಿ ಖಾರ ಸರಿಯಾಗಿರಬೇಕು ಅಂತೀವಿ. ಸಿನಿಮಾದಲ್ಲೂ ಹಾಗೆಯೇ. ಎಲ್ಲವೂ ಹದವಾಗಿ ಬೆರೆತಿರಬೇಕು.

  ಉಪ್ಪು ಹುಳಿ ಖಾರದ ಥೀಮೇ ಹಾಗಿದೆಯಂತೆ. ಈ ಸಮಾಜ ಮೊದಲು ಬದಲಾಗಬೇಕು ಎನ್ನುವ ಒಂದು ಗುಂಪು, ಹೀಗೇ ಇರಲಿ ಬಿಡಿ, ಎಲ್ಲವೂ ಚೆನ್ನಾಗಿದೆ ಎನ್ನುವ ಇನ್ನೊಂದು ಗುಂಪು ಜೊತೆಗೆ ಹೇಗಿದ್ದರೂ ನಡೆಯುತ್ತೆ ಎನ್ನುವ ಮತ್ತೊಂದು ಗುಂಪು. ಇಡೀ ಚಿತ್ರದಲ್ಲಿ ಎದ್ದು ಕಾಣುವುದು ಇಂಥ ಮೂವರ ಮನಸ್ಥಿತಿ. ಅದನ್ನೇ ಚಿತ್ರದಲ್ಲಿ ಕಾಮಿಡಿ ರೂಪದಲ್ಲಿ ಹೇಳಲಾಗಿದೆ. ತಮ್ಮ ಕಲ್ಪನೆಯೆಲ್ಲವನ್ನೂ ಕಲಾವಿದರು ಅಚ್ಚುಕಟ್ಟಾಗಿ ತೆರೆಗೆ ತಂದಿದ್ದಾರೆ ಎಂದಿದ್ದಾರೆ ನಿರ್ದೇಶಕ ಇಮ್ರಾನ್ ಸರ್ದಾರಿಯಾ.

  ಕನ್ನಡ ಕಿರುತೆರೆಯ ನಂ.1 ಆ್ಯಂಕರ್ ಅನುಶ್ರೀ, ಚಿತ್ರದಲ್ಲಿಯೂ ಆ್ಯಂಕರ್ ಪಾತ್ರವನ್ನೇ ಮಾಡಿದ್ದಾರೆ. ಅನುಶ್ರೀ ಅವರದ್ದು ಬಿಂದಾಸ್ ಡೈಲಾಗ್ ಪಾತ್ರ. ಕಾವ್ಯಾತ್ಮಕವಾಗಿ ಮಾತನಾಡುವ ಶೈಲಿ. ಟಿವಿ ಸ್ಕ್ರೀನ್‍ಗೂ, ಬೆಳ್ಳಿತೆರೆಗೂ ಡಿಫರೆನ್ಸ್ ಲುಕ್ ಇದೆ ಎಂದಿದ್ದಾರೆ.

 • ಉಪ್ಪು ಹುಳಿ ಖಾರದಲ್ಲಿ ರಾಗಿಣಿ ಬುಸ್ ಬುಸ್..!

  ragini is nagini in uppu huli khara

  ಉಪ್ಪು ಹುಳಿ ಖಾರ ಚಿತ್ರದ ತುಂಬಾ ರುಚಿಕಟ್ಟಾದ ಅಡುಗೆಯಿದೆ. ಆ ಅಡುಗೆಗೆ ತುಪ್ಪ ಹಾಕಿದ್ದಾರೆ ಇಮ್ರಾನ್ ಸರ್ದಾರಿಯ. ತುಪ್ಪ ಎಂದರೆ, ತುಪ್ಪದ ಹುಡುಗಿ ಎಂದು ಬೇರೆ ಹೇಳಬೇಕಿಲ್ಲ. 

  ಆದರೆ, ಚಿತ್ರದಲ್ಲಿ ತುಪ್ಪದ ಹುಡುಗಿ ಕಾಣಿಸಿಕೊಂಡಿರೋದು ನಾಗಿಣಿ ಅವತಾಋದಲ್ಲಿ. ಇಚ್ಚಾಧಾರಿ ಸ್ವರೂಪಿ ನಾಗಿಣಿಯಾಗಿ ರಾಗಿಣಿ ನಟಿಸಿದ್ದಾರೆ. ನರ್ತಿಸಿದ್ದಾರೆ. ಅದು ಚಿತ್ರದ ವಿಶೇಷ ಹಾಡು.

  ಅಂದಹಾಗೆ ಚಿತ್ರದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ಕಲಾವಿದರ ಕಾಸ್ಟ್ಯೂಮ್ ಮತ್ತು ಸ್ಟೈಲ್. ಆ ಕಲೆಯ ಹಿಂದಿರೋದು ಸಾನಿಯಾ. ಅವರು ಇಮ್ರಾನ್ ಸರ್ದಾರಿಯಾ ಅವರ ಪತ್ನಿ. ಚಿತ್ರದ ಕ್ಯಾರೆಕ್ಟರ್‍ಗಳನ್ನು ವಿವರಿಸಿ, ಅದಕ್ಕೆ ತಕ್ಕಂತೆ ಡ್ರೆಸ್ ಆಯ್ಕೆ ಮಾಡುವಂತೆ ಹೇಳಿದ್ದೆ. ಅವರು ಅದ್ಭುತವಾಗಿ ಮಾಡಿದ್ದಾರೆ ಎಂದಿದ್ದಾರೆ ಇಮ್ರಾನ್.

 • ಜವಾರಿ ಭಾಷ್ಯಾಗ್ ಮಾತಾಡ್ತಾರಾ ಮಾಲಾಶ್ರೀ

  malashree's new look

  ಉಪ್ಪು ಹುಳಿ ಖಾರ. ಸಿನಿಮಾ ಪೂರ್ತಿ ಮಸಾಲೆ ಅರೆದಿರೋ ನಿರ್ದೇಶಕ ಇಮ್ರಾನ್ ಸರ್ದಾರಿಯಾ, ಮಾಲಾಶ್ರೀ ಅವರಿಂದ ಜವಾರಿ ಭಾಷೆಯ ಖಡಕ್ ಡೈಲಾಗ್ ಹೇಳಿಸಿರೋದು ಚಿತ್ರದ ಸ್ಪೆಷಲ್. ಉಪ್ಪು ಹುಳಿ ಖಾರದಲ್ಲೂ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸಿರುವ ಮಾಲಾಶ್ರೀಗೆ, ಈ ಪಾತ್ರ ಡಿಫರೆಂಟ್ ಎನಿಸಿದೆ.

  ನಾನು ಖಡಕ್ ಡೈಲಾಗ್ ಹೊಡೆದರೂ ಅದು ಸ್ವೀಟಾಗಿ ಕೇಳಿಸುತ್ತೆ ಎನ್ನುತ್ತಿದ್ದಾರೆ ಮಾಲಾಶ್ರೀ. ಆ ಪಾತ್ರಕ್ಕೆ ನಾನೇ ಬೇಕೆಂದು ಹಠ ಹಿಡಿದ ನಿರ್ದೇಶಕರು, ಚಿತ್ರದಲ್ಲಿ ನನ್ನನ್ನು ಅತ್ಯಂತ ವಿಭಿನ್ನವಾಗಿ ತೋರಿಸಿದ್ದಾರೆ ಎಂಬ ವಿಶ್ವಾಸದಲ್ಲಿದ್ದಾರೆ.

  ಸ್ಸೋ.. ಹೊಸ ಲುಕ್ಕಿನ ಮಾಲಾಶ್ರೀಯನ್ನು ಕಣ್ತುಂಬಿಕೊಳ್ಳಲು ರೆಡಿಯಾಗಿ.

 • ಪುನೀತ್ - ಇಮ್ರಾನ್ ಕಾಂಬಿನೇಷನ್‍ನಲ್ಲಿ ರೋಮಿಯೋ

  puneeth sngs for uppu huli khara

  ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹಾಗೂ ಡ್ಯಾನ್ಸ್ ಮಾಸ್ಟರ್ ಇಮ್ರಾನ್ ಸರ್ದಾರಿಯ ಒಟ್ಟಿಗೇ ಸೇರಿದರೆ ಅಲ್ಲೊಂದು ಹಿಟ್ ಸೃಷ್ಟಿಯಾಗುತ್ತೆ. ಈ ಹಿಂದೆ ಹಲವು ಬಾರಿ ಇಂಥ ಹಿಟ್ ನೀಡಿರುವ ಜೋಡಿ, ಈಗ ಮತ್ತೊಮ್ಮೆ ಒಂದಾಗಿದೆ. ಆದರೆ, ಈ ಬಾರಿಯ ಕಾಂಬಿನೇಷನ್ ಹಳೆಯ ಕಾಂಬಿನೇಷನ್‍ಗಿಂತ ಸ್ವಲ್ಪ ಡಿಫರೆಂಟ್.

  ಪುನೀತ್ ಹಾಡುಗಳಲ್ಲಿ ಹೊಸ ಗಾನಭಜಾನಾ, ತೊಂದರೆ ಇಲ್ಲ ಪಂಕಜಾ, ಅಣ್ಣಾಬಾಂಡ್, ಜಾಕಿ, ಹುಡುಗರು.. ಹೀಗೆ ಇವರಿಬ್ಬರೂ ಒಟ್ಟಿಗೇ ಸೇರಿದಾಗಲೆಲ್ಲ

  ಒಂದು ಹಿಟ್, ಟ್ರೆಂಡ್ ಸೃಷ್ಟಿಯಾಗಿದೆ. ಈ ಇಬ್ಬರ ಕಾಂಬಿನೇಷನ್ ಉಪ್ಪು ಹುಳಿ ಖಾರದಲ್ಲೂ ಕಂಟಿನ್ಯೂ ಆಗಿದೆ. ಆದರೆ, ಇಲ್ಲಿ ಪುನೀತ್ ನಟಿಸಿಲ್ಲ, ಡ್ಯಾನ್ಸ್ ಮಾಡಿಲ್ಲ. ಹಾಡು ಹಾಡಿದ್ದಾರೆ.

  ಪುನೀತ್ ಹಾಡಿರುವ ರೋಮಿಯೋ.. ಹಾಡಿಗೆ ಹೆಜ್ಜೆ ಹಾಕಿರುವುದು ಕಿರುತೆರೆಯ ಚಿನಕುರುಳಿ ಅನುಶ್ರೀ ಹಾಗೂ ಶರತ್. ಶರತ್‍ಗೆ ಇದು ಮೊದಲ ಚಿತ್ರ. ಅಂದಹಾಗೆ ಈ ಚಿತ್ರಕ್ಕೆ ಇಮ್ರಾನ್ ಕೇವಲ ಕೊರಿಯೋಗ್ರಾಫರ್ ಅಲ್ಲ, ನಿರ್ದೇಶಕರೂ ಅವರೇ. ಹಾಡನ್ನು ಅಮೆರಿಕದಲ್ಲಿ ಚಿತ್ರೀಕರಿಸಲಾಗಿದ್ದು, ಈ ಬಾರಿಯೂ ನಮ್ಮ ಜೋಡಿ ಹಿಟ್ ಆಗುತ್ತೆ ಅನ್ನೋ ವಿಶ್ವಾಸದಲ್ಲಿದ್ದಾರೆ ಇಮ್ರಾನ್ ಸರ್ದಾರಿಯಾ.

 • ವಿವಾದದ ಸುಳಿಯಲ್ಲಿ ಅಂಬರೀಷ್ ಡ್ಯಾನ್ಸ್

  ambareesh at uppu huli khara audio launch

  ರೆಬಲ್ ಸ್ಟಾರ್ ಅಂಬರೀಷ್ ಮತ್ತೊಮ್ಮೆ ನ್ಯಾಷನಲ್ ಸುದ್ದಿಯಾಗಿದ್ದಾರೆ. ವಿವಾದವಾಗಿದ್ದಾರೆ. ಆ ವಿವಾದಕ್ಕೆ ಕಾರಣವಾಗಿರೋದು ಉಪ್ಪು ಹುಳಿ ಖಾರ ಚಿತ್ರದ ಆಡಿಯೋ ಬಿಡುಗಡೆಯಲ್ಲಿ ಮಾಡಿದ ಒಂದು ಡ್ಯಾನ್ಸ್. ಚಿತ್ರದ ನಾಯಕಿ ಅನುಶ್ರೀ ಹಾಗೂ ಮಾಲಾಶ್ರೀ ಮತ್ತು ಚಿತ್ರತಂಡದ ಒತ್ತಾಯಕ್ಕೆ ಕಟ್ಟುಬಿದ್ದ ಅಂಬರೀಷ್ ಸ್ಟೇಜ್ ಮೇಲೆ ಒಂದೆರಡು ಸ್ಟೆಪ್ ಹಾಕಿದರು. 

  ಅಂಬರೀಷ್ ಬರೀ ಸ್ಟೆಪ್ಪು ಹಾಕಿದ್ದರೆ ವಿವಾದವಾಗುತ್ತಿರಲಿಲ್ಲ. ಆದರೆ, ಅಂಬರೀಷ್ ನಟರಷ್ಟೇ ಅಲ್ಲ, ಶಾಸಕರೂ ಹೌದು. ಒಂದು ಕಡೆ ಬೆಳಗಾವಿಯಲ್ಲಿ ಸೆಷನ್ ನಡೆಯುತ್ತಿರುವಾಗ, ಸದನದ ಕಲಾಪಕ್ಕೆ ಹೋಗದೆ, ಸಿನಿಮಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದನ್ನು ಜನ ಪ್ರಶ್ನಿಸಿದ್ದಾರೆ.

  ಅಂಬರೀಷ್ ನರ್ತನವನ್ನು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಸಮರ್ಥಿಸಿಕೊಂಡಿದ್ದಾರೆ. ಅಂಬರೀಷ್ ರಾಜಕಾರಣಿಯಾಗುವ ಮೊದಲು, ನಟ. ಒಬ್ಬ ನಟರಾಗಿ ಸಿನಿಮಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಲ್ಲಿ ತಪ್ಪೇನಿಲ್ಲ ಎಂದಿದ್ದಾರೆ ದಿನೇಶ್ ಗುಂಡೂರಾವ್. ಅಂಬರೀಷ್, ಇದಕ್ಕೆಲ್ಲ ತಲೆ ಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ. ಏಕೆಂದರೆ, ಅಂಬರೀಷ್ ಇರೋದೇ ಹಾಗೆ. 

 • ಸುಧಾಮೂರ್ತಿ ಮೆಚ್ಚಿದ್ದಕ್ಕೇ ಉಪ್ಪು ಹುಳಿ ಖಾರ

  sudha murthy liked uppu huli khara

  ಉಪ್ಪು ಹುಳು ಖಾರ ಚಿತ್ರದ ಕಥೆಯನ್ನು ಮೊದಲು ಇಷ್ಟಪಟ್ಟಿದ್ದು ಯಾರು ಗೊತ್ತಾ..? ಸುಧಾಮೂರ್ತಿ. ಇನ್ಫೋಸಿಸ್ ಸುಧಾಮೂರ್ತಿ. ಅವರು ಕಥೆ ಕೇಳಿ ಒಪ್ಪಿದ ನಂತರವೇ ಚಿತ್ರಕ್ಕೆ ಕೈ ಹಾಕಿದ್ದಾಗಿ ಹೇಳಿಕೊಂಡಿದ್ದಾರೆ ನಿರ್ಮಾಪಕ ರಮೇಶ್ ರೆಡ್ಡಿ.

  ರಮೇಶ್ ರೆಡ್ಡಿ, ಬಹಳ ಕಷ್ಟಪಟ್ಟು ಮೇಲೆ ಬಂದವರು. ಒಂದು ಕಾಲದಲ್ಲಿ ಗಾರೆ ಕೆಲಸವನ್ನು ಮಾಡುತ್ತಿದ್ದವರು. ಆರಂಭದಲ್ಲಿ ಸಿನಿಮಾ ನೋಡುವ ಹುಚ್ಚಿತ್ತು, ನಂತರ ಅದು ಸಿನಿಮಾ ಮಾಡಬೇಕು ಎಂಬ ಹುಚ್ಚಿಗೆ ಬದಲಾಯ್ತು. ಸುಧಾಮೂರ್ತಿ ಅವರಷ್ಟೇ ಅಲ್ಲ, ರಾಮದಾಸ್ ಕಾಮತ್, ಸಿ.ವಿ. ಕರ್ನಲ್, ಸಂಜಯ್ ಭಟ್ ಇನ್ನೂ ಹಲವರು ಸಿನಿಮಾ ಮಾಡಲು ಕಾರಣ ಎಂದು ತೆರೆಯ ಹಿಂದಿನ ಕಥೆ ಬಿಚ್ಚಿಟ್ಟಿದ್ದಾರೆ ರಮೇಶ್ ರೆಡ್ಡಿ.

  ಸುಧಾಮೂರ್ತಿ ಒಪ್ಪಿದರಷ್ಟೇ ಚಿತ್ರ ನಿರ್ಮಾಣ ಮಾಡೋದಾಗಿ ಇಮ್ರಾನ್ ಸರ್ದಾರಿಯಾ ಅವರಿಗೆ ಹೇಳಿ ಹೆಜ್ಜೆ ಮುಂದಿಟ್ಟರಂತೆ ರಮೇಶ್ ರೆಡ್ಡಿ. ಚಿತ್ರದ ಕಥೆ ಹಾಗೂ ಚಿತ್ರದಲ್ಲಿರುವ ಸಂದೇಶ ಸುಧಾಮೂರ್ತಿಯವರಿಗೂ ಇಷ್ಟವಾಯ್ತು. ಈಗ ಸಿನಿಮಾ ಆಗಿದೆ. ತೆರೆಗೆ ಬರುತ್ತಿದೆ.

 • ಸ್ಲಿಮ್ ಆಗುತ್ತಿದ್ದಾರೆ ಮಾಲಾಶ್ರೀ

  malashree becomes slim

  ಮಾಲಾಶ್ರೀ. ಅವರ ಹಳೆಯ ಚಿತ್ರಗಳನ್ನು ನೋಡಿದವರು ಈಗಿನ ಮಾಲಾಶ್ರೀ ತದ್ವಿರುದ್ಧ ಎನ್ನಿಸಿದರೆ ಆಶ್ಚರ್ಯವೇವನೂ ಇಲ್ಲ. ದೇಹದ ತೂಕವನ್ನು ಸಿಕ್ಕಾಪಟ್ಟೆ ಏರಿಸಿಕೊಂಡಿದ್ದ ಮಾಲಾಶ್ರೀ ಈಗ ಸಣ್ಣಗಾಗೋಕೆ ತಯಾರಾಗಿದ್ದಾರೆ. ಅಷ್ಟೇ ಅಲ್ಲ, ಸುಮಾರು 9 ಕೆಜಿಯಷ್ಟು ತೂಕವನ್ನೂ ಇಳಿಸಿದ್ದಾರಂತೆ.

  ಒಂದು ಹಾರರ್ ಹಾಗೂ ಇನ್ನೊಂದು ಥ್ರಿಲ್ಲರ್ ಚಿತ್ರದಲ್ಲಿ ನಟಿಸುತ್ತಿರುವ ಮಾಲಾಶ್ರೀ, ಈಗ ಪ್ರತಿದಿನ ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಿದ್ದಾರೆ. ಊಟ, ತಿಂಡಿ ವಿಚಾರದಲ್ಲಂತೂ ಕಟ್ಟುನಿಟ್ಟಾಗಿದ್ದಾರೆ. 

  ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ಉಪ್ಪು ಹುಳಿ ಖಾರ ಈ ವಆರ ತೆರೆ ಕಾಣುತ್ತಿದೆ. ಉಪ್ಪು ಹುಳಿ ಖಾರ ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ನಟಿಸಿರುವ ಮಾಲಾಶ್ರೀ, ಮುಂದಿನ ಚಿತ್ರಗಳಲ್ಲಿ ಬೇರೆಯೇ ರೀತಿಯಲ್ಲಿ ಕಾಣಿಸಲಿದ್ದಾರಂತೆ.