` bullet prakash - chitraloka.com | Kannada Movie News, Reviews | Image

bullet prakash

 • ಬುಲೆಟ್ ಮಗಳ ಮದುವೆ ಹೊಣೆ ಹೊತ್ತ ದರ್ಶನ್

  darshan steps forward tp hlp bullet prakash's family

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆಳೆಯರ ಬಳಗ ದೊಡ್ಡದು. ಒಂದಾನೊಂದು ಕಾಲದಲ್ಲಿ ಬುಲೆಟ್ ಪ್ರಕಾಶ್ ಕೂಡಾ ದರ್ಶನ್ ಗೆಳೆಯರ ಬಳಗದಲ್ಲಿದ್ದವರೇ. ಆದರೆ.. ಅದೇನಾಯ್ತೋ ಏನೋ.. ಬುಲೆಟ್ ಪ್ರಕಾಶ್ ಕೊನೆ ದಿನಗಳಲ್ಲಿ ದರ್ಶನ್ ಅವರ ಗೆಳೆಯರ ಬಳಗದಿಂದ ಹೊರಬಿದ್ದರು. ಏನಾಯ್ತೆಂದು ದರ್ಶನ್ ಬಾಯಿ ಬಿಡಲಿಲ್ಲ. ಬುಲೆಟ್ ಕೂಡಾ ಸ್ಪಷ್ಟವಾಗಿ ಹೇಳಲಿಲ್ಲ. ಆದರೆ ಬುಲೆಟ್ ಪ್ರಕಾಶ್ ನಿಧನದ ನಂತರ ದರ್ಶನ್ ಗೆಳೆಯನ ಕುಟುಂಬದ ನೆರವಿಗೆ ಧಾವಿಸಿ ಬಂದಿದ್ದಾರೆ.

  ಅವನು ಈಗ ನನ್ನ ಗೆಳೆಯ ಹೌದೋ ಅಲ್ವೋ ಅದು ಬೇರೆ ವಿಷಯ. ಆದರೆ ಒಂದು ಕಾಲದಲ್ಲಿ ಗೆಳೆಯನಾಗಿದ್ದವನೇ ತಾನೆ. ಹೆದರಬೇಡಿ. ಬುಲೆಟ್ ಪ್ರಕಾಶ್ ಮಗಳ ಮದುವೆ ಜವಾಬ್ದಾರಿ ನನ್ನದು ಎಂಬ ಸಂದೇಶ ರವಾನಿಸಿದ್ದಾರೆ ದರ್ಶನ್. ನಿರ್ಮಾಪಕ ರಾಮಮೂರ್ತಿ ಮೂಲಕ ಪ್ರಕಾಶ್ ಕುಟುಂಬಕ್ಕೆ ಸಂದೇಶ ಕಳಿಸಿದ್ದಾರೆ.

  Also Read :-

  ಬುಲೆಟ್ ಪ್ರಕಾಶ್ ನಿಧನ

  Actor Bullet Prakash Hospitalized, Condition Critical

 • Actor Bullet Prakash Hospitalized, Condition Critical

  actor bullet prakash hospitalized

  Actor - Comedian Bullert Prakash, has been hospitalized and his medical condition looks serious. The Actor suffered a liver infection and gastric problems and sources say the actor is on Ventilator Support system.

  Bullet Prakash had appeared in over 300 movies. He made his acting debut through 'Dhruva' and has acted in Kannada and Tamil films too. Bullet Prakash had recently joined BJP.

  Chitraloka wishes him a speedy recovery.

   

   

 • Bullet Prakash Names His New House Kushi

  bullet prakash image

  One of the top comedians of the Kannada film industry, Bullet Prakash has named his new home Kushi. The new house is constructed at Verma Layout, Bhuvaneshwarinagara, Dasarahalli, Hebbala.

  Bullet Prakash and his family members will do the Gruhapravesha of their new house on August 29.

 • Darshan is the Special Guest in Maja Talkies

  maja talkies image

  'Challenging Star' Darshan is one who actor who normally doesn't like to appear in small screen for various reasons. However, the actor participated in a reality show called 'Kaasge Toss' a couple of years ago. The actor is now back to small screen as a guest in the popular reality show 'Maja Talkies' being aired in Colors Kannada.

  Darshan is the chief guest of the 50th episode of the 'Maja Talkies' being anchored and directed by Srujan Lokesh. Darshan will be seen in the episodes which will be aired on the 15th and 16th of August at 8 PM. Darshan along with Bullet Prakash has participated in the show and has shared some unique experiences through the show.

 • Darshan's Film To Be Titled Sultan? - Exclusive

  sultan movie image

  If sources are to be believed, then Darshan's new film is titled as 'Sultan'. The film is being produced by actor Bullet Prakash. Earlier, there was a news that actor Bullet Prakash will be producing a film for Darshan. After that Bullet Prakash had brought the remake rights of Tamil film 'Poojai' starring Vishal and Shruthi Hariharan in prominent roles. It seems Darshan has also given his consent in acting in the film.

  More details about the film are yet awaited.

  Also See

  Bullet Prakash Buys Remake Rights of Poojai - Exclusive

 • Jaggesh Reached Out To Bullet Prakash, An Hour Ago His Demise - Exclusive

  jaggesh, bullet prakash image

  Navarasa Nayaka Jaggesh, who learnt about the critical condition of Bullet Prakash at hospital from former KFCC president Sa Ra Govindu, had reached out to the actor by giving Rs 50,000 for medical expenses just an hour ago before his demise.

  ಬುಲೆಟ್ ಮಗಳ ಮದುವೆ ಹೊಣೆ ಹೊತ್ತ ದರ್ಶನ್

  Speaking to Chitraloka, Mr. Sa Ra Govindu revealed that after he learnt about the critical condition of Bullet Prakash, he immediately shared it with Mr. Jaggesh, who wasted no time in doing his bit to help the actor. He said he gave Rs 50,000 for medical expenses but unfortunately, it is sad to learn that treatment failed and Bullet Prakash is no more amongst us.

  ಬುಲೆಟ್ ಪ್ರಕಾಶ್ ನಿಧನ

  "He will be dearly missed by the entire film industry and will be remembered forever for his contribution to Sandalwood," said Sa Ra Govindu.

 • ಚಾಮರಾಜಪೇಟೆಯ ಬಿಜೆಪಿ ಅಭ್ಯರ್ಥಿ ಬುಲೆಟ್ ಪ್ರಕಾಶ್..?

  will bullet contestant for bjp

  ಚಿತ್ರನಟ ಬುಲೆಟ್ ಪ್ರಕಾಶ್, ತಮ್ಮ ರಾಜಕೀಯ ಮಹತ್ವಾಕಾಂಕ್ಷೆಯನ್ನು ಮುಚ್ಚಿಟ್ಟುಕೊಂಡವರೇನೂ ಅಲ್ಲ. ರಾಜಕೀಯ ಕ್ಷೇತ್ರದಲ್ಲಿ ದೊಡ್ಡ ದೊಡ್ಡ ಆಸೆಗಳನ್ನಿಟ್ಟುಕೊಂಡಿರುವ ಬುಲೆಟ್ ಪ್ರಕಾಶ್, ಈ ವರ್ಷದ ವಿಧಾನಸಭೆ ಚುನಾವಣೆಯಲ್ಲಿ ಅಖಾಡಕ್ಕಿಳಿಯಲು ಸಿದ್ಧರಾಗಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಬುಲೆಟ್ ಪ್ರಕಾಶ್ ಈ ಬಾರಿ ಚಾಮರಾಜಪೇಟೆಯಿಂದ ಸ್ಪರ್ಧಿಸಲಿದ್ದಾರೆ. ಬುಲೆಟ್ ಪ್ರಕಾಶ್ ಅವರಿಗೆ ಬಿಜೆಪಿ ಟಿಕೆಟ್ ಸಿಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

  ಬುಲೆಟ್ ಪ್ರಕಾಶ್ ಅವರ ತಾಯಿ ಗೌರಮ್ಮ 1989ರಲ್ಲಿಯೇ ಕಾರ್ಪೊರೇಟರ್ ಆಗಿದ್ದವರು. ಸುಮಾರು 35 ವರ್ಷ ಬಿಜೆಪಿಯಲ್ಲಿಯೇ ಕೆಲಸ ಮಾಡಿದ್ದವರು. ಪಕ್ಷದ ಸಂಘಟನೆಯಲ್ಲಿ ದುಡಿದಿದ್ದ ಬುಲೆಟ್ ಪ್ರಕಾಶ್ ಅವರ ತಾಯಿ ಗೌರಮ್ಮ, ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ, ದಿ.ಬಿ.ಬಿ.ಶಿವಪ್ಪ, ಜಗದೀಶ್ ಶೆಟ್ಟರ್ ಸೇರಿದಂತೆ ಹಲವರ ಜೊತೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

  ಇತ್ತೀಚೆಗೆ ಬಿಜೆಪಿ, ಬುಲೆಟ್ ಪ್ರಕಾಶ್ ಅವರನ್ನು ಪಕ್ಷದ ಸಾಂಸ್ಕøತಿಕ ಪ್ರಕೋಷ್ಟದ ರಾಜ್ಯ ಸಹ ಸಂಚಾಲಕರನ್ನಾಗಿ ನೇಮಿಸಿದೆ. ಇದು ಟಿಕೆಟ್ ನೀಡುವ ಮೊದಲಿನ ಹೆಜ್ಜೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಚಾಮರಾಜಪೇಟೆಯಲ್ಲಿ ಉತ್ತಮ ಜನ ಸಂಪರ್ಕವನ್ನೂ ಹೊಂದಿರುವ ಬುಲೆಟ್ ಪ್ರಕಾಶ್, ಈ ಬಾರಿ ಗೆದ್ದು ಶಾಸಕರಾಗುವ ನಿರೀಕ್ಷೆಯಲ್ಲಿದ್ದಾರೆ. 

 • ಪ್ರಕಾಶ್ ಬುಲೆಟ್ ಪ್ರಕಾಶ್ ಆದ ಕ್ರೇಜಿ ಸ್ಟೋರಿ

  prakash to bullet prakash

  ಕನ್ನಡ ಚಿತ್ರ ಪ್ರೇಕ್ಷಕರಿಗೆ ಪ್ರಕಾಶ್ ಎಂದರೆ, ಯಾರು ಅಂತಾರೆ. ಬುಲೆಟ್ ಪ್ರಕಾಶ್ ಎಂದರೆ, ಅವರ ಮುಖದ ಮೇಲೊಂದು ಮುಗುಳ್ನಗೆ ಸರಿದು ಹೋಗುತ್ತೆ. ಆ ಕರಿಯಾನಾ.. ಆ ದಡಿಯಾನಾ.. ಅಂಥಾ ಕೇಳ್ತಾರೆ. ಹಾಗಂತ ಅವರೆಲ್ಲ ಪ್ರಕಾಶ್ ಅವರನ್ನು ಬೈತಾರೆ ಅಂತಾನೋ.. ಲೇವಡಿ ಮಾಡ್ತಾರೆ ಅಂತಾನೋ ಅಂದ್ಕೋಬೇಕಿಲ್ಲ. ಅಭಿಮಾನಿಗಳು ಹಾಗೆ ಕರೆಯುತ್ತಲೇ ಬುಲೆಟ್‍ನ್ನು ಪ್ರೀತಿಸ್ತಾರೆ. 

  ಆದರೆ, ಈ ಪ್ರಕಾಶ್‍ಗೆ  ಬುಲೆಟ್ ಪ್ರಕಾಶ್ ಅಂತಾ ನಾಮಕರಣ ಮಾಡಿದ್ಯಾರು..? ಇಂಥಾದ್ದೊಂದು ಬುಲೆಟ್‍ನಂತಾ ಪ್ರಶ್ನೆಗೆ ಉತ್ತರ ಕೊಟ್ಟಿದ್ಧಾರೆ ಬುಲೆಟ್ ಪ್ರಕಾಶ್. ಇವರಿಗೆ ಆ ಹೆಸರು ನಾಮಕರಣ ಮಾಡಿದ್ದು ಕ್ರೇಜಿ ಸ್ಟಾರ್ ರವಿಚಂದ್ರನ್.

  ರವಿಚಂದ್ರನ್ ಅವರ ಶಾಂತಿ ಕ್ರಾಂತಿ ಚಿತ್ರದಲ್ಲಿ ಬಾಲಕನಾಗಿದ್ದ ಬುಲೆಟ್ ಪ್ರಕಾಶ್, ನಂತರ ಪ್ರೀತ್ಸು ತಪ್ಪೇನಿಲ್ಲ ಚಿತ್ರದಲ್ಲಿ ನಟಿಸಿದ್ದರು. ಅದು ಅವರ ಅಭಿನಯದ 3ನೇ ಚಿತ್ರ. ಬರೀ ಪ್ರಕಾಶ್ ಅಂದ್ರೆ ಜನ ನೆನಪಿನಲ್ಲಿಟ್ಟುಕೊಳ್ಳಲ್ಲ ಅಂತಾ ಹೇಳಿ ಬುಲೆಟ್ ಪ್ರಕಾಶ್ ಎಂದು ನಾಮಕರಣ ಮಾಡಿದರಂತೆ ರವಿಚಂದ್ರನ್. ಆಗ ಪ್ರಕಾಶ್ ಬಳಿ ಒಂದು ಭರ್ಜರಿ ಬುಲೆಟ್ ಇತ್ತು. ಆದರೆ ಅದೀಗ ಇಲ್ಲ. ಸಾಲ ತೀರಿಸಲಾಗದೆ ಮಾರಿಬಿಟ್ಟರಂತೆ ಪ್ರಕಾಶ್. 

  ಸಿನಿಮಾ ಇಂಡಸ್ಟ್ರಿಯಲ್ಲಿ ನನ್ನ ಮೊದಲ ಗುರು, ದೇವರು ಅಂದ್ರೆ ಅದು ರವಿಚಂದ್ರನ್ ಎನ್ನುತ್ತಾರೆ ಬುಲೆಟ್ ಪ್ರಕಾಶ್.

 • ಬುಲೆಟ್ ಪ್ರಕಾಶ್ ನಿಧನ

  bullet prakash no more

  ಸ್ಯಾಂಡಲ್ ವುಡ್ ಹಾಸ್ಯ ನಟ ಬುಲೆಟ್ ಪ್ರಕಾಶ್ ನಿಧನರಾಗಿದ್ದಾರೆ. ಅವರ ಆರೋಗ್ಯ ಸ್ಥಿತಿ ಅತ್ಯಂತ ಗಂಭಿರವಾಗಿತ್ತು. ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಆಸ್ಪತ್ರೆ ಸೇರಿದ್ದ ಬುಲೆಟ್ ಪ್ರಕಾಶ್ ಅವರಿಗೆ ಕಿಡ್ನಿ ವೈಫಲ್ಯ, ಉಸಿರಾಟ ಸಮಸ್ಯೆಯೂ ಸೇರಿ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಪೋರ್ಟಿಸ್ ಆಸ್ಪತ್ರೆಯಲ್ಲಿ ಕಳೆದ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಬುಲೆಟ್ ಪ್ರಕಾಶ್ ವಿಧಿವಶರಾಗಿದ್ದಾರೆ. 

  2 ವರ್ಷಗಳ ಹಿಂದೆ ಆಪರೇಷನ್ ಮಾಡಿಸಿಕೊಂಡ ನಂತರ ಬುಲೆಟ್ ಪ್ರಕಾಶ್ ಸಣ್ಣಗಾದರಾದರೂ, ಚೇತರಿಸಿಕೊಳ್ಳಲೇ ಇಲ್ಲ. ಭಾರೀ ದೇಹ ಹೊಂದಿದ್ದ ಬುಲೆಟ್ ಪ್ರಕಾಶ್ ಸಣ್ಣಗಾಗಲು ಮಾಡಿಸಿಕೊಂಡ ಬೇರಿಯಾಟ್ರಿಕ್ ಸರ್ಜರಿ, ಅವರ ದೇಹ ವ್ಯವಸ್ಥೆಯನ್ನೇ ಅಸ್ತವ್ಯಸ್ತಗೊಳಿಸಿತ್ತು. 

  ಸುಮಾರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಸ್ಯನಟನಾಗಿ ಮಿಂಚಿದ್ದ ಬುಲೆಟ್ ಪ್ರಕಾಶ್ ಅವರಿಗೆ 44 ವರ್ಷವಷ್ಟೇ ವಯಸ್ಸು. ಏಪ್ರಿಲ್ 2ರಂದು ಅವರ ಹುಟ್ಟುಹಬ್ಬವಿತ್ತು. ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗ ಇನ್ನೂ ಕೆಲವರು ಪ್ರಕಾಶ್ ಹೆಸರಿನ ಕಲಾವಿದರಿದ್ದರು. ಆಗ ರಾಯಲ್ ಎನ್ಫೀಲ್ಡ್ ಬುಲೆಟ್ ಓಡಿಸುತ್ತಿದ್ದ ಕಾರಣಕ್ಕೆ, ಬುಲೆಟ್ ಪ್ರಕಾಶ್ ಎಂದೇ ನಾಮಕರಣ ಮಾಡಲಾಯ್ತು. ಶಿವಣ್ಣ, ಸುದೀಪ್, ಪುನೀತ್, ಗಣೇಶ್, ದುನಿಯಾ ವಿಜಿ, ಪ್ರೇಮ್ ಸೇರಿದಂತೆ ಕನ್ನಡದ ಬಹುತೇಕ ಎಲ್ಲ ಸ್ಟಾರ್ ನಟರ ಜೊತೆಯಲ್ಲೂ ನಟಿಸಿದ್ದರು ಬುಲೆಟ್ ಪ್ರಕಾಶ್. ದರ್ಶನ್ ಜೊತೆ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಐತಲಕ್ಕಡಿ ಚಿತ್ರದಲ್ಲಿ ರಂಗಾಯಣ ರಘು ಜೊತೆ ಹೀರೋ ಆಗಿಯೂ ನಟಿಸಿದ್ದ ಬುಲೆಟ್ ಪ್ರಕಾಶ್, ಪತ್ನಿ ಮತ್ತು ಮಗ ರಕ್ಷಕ್ನನ್ನು ಅಗಲಿದ್ದಾರೆ. ಆಪರೇಷನ್ ನಂತರ ಸಿನಿಮಾದಲ್ಲಿ ಅವಕಾಶ ಸಿಗದೆ ಮಾನಸಿಕ ಖಿನ್ನತೆಗೂ ಗುರಿಯಾಗಿದ್ದ ಬುಲೆಟ್ ಪ್ರಕಾಶ್ ಇನ್ನು ನೆನಪು ಮಾತ್ರ.

  Also Read :-

  Actor Bullet Prakash Hospitalized, Condition Critical

 • ಸ್ಲಿಮ್ ಆಗುತ್ತಿದ್ದಾರೆ ಬುಲೆಟ್ ಪ್ರಕಾಶ್

  bullet prakash becoming slim

  ಬುಲೆಟ್ ಪ್ರಕಾಶ್, ಅವರ ಹೆಗ್ಗುರುತೇ ಅವರ ದೈತ್ಯ ದೇಹ. ಕಾಮಿಡಿ ನಟನಾಗಿಯೇ ಖ್ಯಾತರಾಗಿರುವ ಬುಲೆಟ್, ಸಿನಿಮಾಗಳಲ್ಲಿಯೂ ಡುಮ್ಮ ಎಂದೇ ಕರೆಸಿಕೊಳ್ಳುತ್ತಿದ್ದವರು. ಅವರೀಗ ಸಣ್ಣಗಾಗುತ್ತಿದ್ದಾರೆ. ಸ್ಲಿಮ್ ಆಗುತ್ತಿದ್ದಾರೆ.

  ಬುಲೆಟ್ ಪ್ರಕಾಶ್, ಈಗ 35 ಕೆಜಿ ತೂಕ ಕಳೆದುಕೊಂಡಿದ್ದಾರಂತೆ. ಅದನ್ನು ಸ್ವತಃ ಬುಲೆಟ್ ಅವರೇ ಹೇಳಿಕೊಂಡಿದ್ದಾರೆ. ಹಾಗೆಂದು ಇದು ಫೈನಲ್ ಅಲ್ಲ. ಇನ್ನೂ ಸಣ್ಣಗಾಗುತ್ತಾರಂತೆ ಬುಲೆಟ್ ಪ್ರಕಾಶ್. 100 ಕೆಜಿಗೂ ಹೆಚ್ಚು ತೂಕವಿದ್ದ ಬುಲೆಟ್ ಪ್ರಕಾಶ್ ಮುಖದಲ್ಲೀಗ ಆರೋಗ್ಯದ ಕಳೆ ಕಾಣಿಸುತ್ತಿರುವುದಂತೂ ಹೌದು. ನಾನೀಗ ಹೇಗೆ ಕಾಣಿಸುತ್ತಿದ್ದೇನೆ ಎಂದು ಅಭಿಮಾನಿಗಳನ್ನೇ ಕೇಳುತ್ತಿದ್ದಾರೆ ಬುಲೆಟ್ ಪ್ರಕಾಶ್.