` bazaar, - chitraloka.com | Kannada Movie News, Reviews | Image

bazaar,

 • ಬಜಾರ್ ಬೆನ್ನು ಹತ್ತಿದ ಕಾಲಿವುಡ್

  taml producers wants to buy bazaar remake righs

  ಸಿಂಪಲ್ ಸುನಿ ನಿರ್ದೇಶನದ ಬಜಾರ್ ಚಿತ್ರ ಕಮರ್ಷಿಯಲ್ಲಾಗಿ ಹಿಟ್ ಆಗುತ್ತಿರುವಂತೆಯೇ, ಕಾಲಿವುಡ್ ನಿರ್ದೇಶಕರು, ನಿರ್ಮಾಪಕರು ಚಿತ್ರದ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ. ಚಿತ್ರ ಬಿಡುಗಡೆಗೂ ಮೊದಲೇ ಕಥೆಯ ಒನ್‍ಲೈನ್ ಕೇಳಿ ಇಷ್ಟಪಟ್ಟಿದ್ದ ತಮಿಳು ನಿರ್ಮಾಪಕರು, ಚಿತ್ರದ ರೀಮೇಕ್ ಹಕ್ಕು ಖರೀದಿಗೆ ಮುಂದಾಗಿದ್ದಾರೆ.

  ಧನ್ವೀರ್, ಆದಿತಿ ಪ್ರಭುದೇವ, ಶರತ್ ಲೋಹಿತಾಶ್ವ, ಸಾಧುಕೋಕಿಲ ನಟಿಸಿರುವ ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್ ಈಗಾಗಲೇ ಸೇಲ್ ಆಗಿದೆ. ಚಿತ್ರವನ್ನು ನೋಡಿದ ಪ್ರೇಕ್ಷಕರಿಗೆ ಪಾರಿವಾಳಗಳ ಕಥೆ, ಭೂಗತ ಜಗತ್ತಿನ ಪ್ರೇಮಲೋಕದ ಕಥೆ ಇಷ್ಟವಾಗಿದೆ.

 • ಬಜಾರ್ ಶಿಷ್ಯನನ್ನು ಹೊಗಳಿದ ದಚ್ಚು..!

  darshan watched simple suni's bazaar

  ಸಿನಿಮಾ ಚೆನ್ನಾಗಿದೆ. ಸ್ಕ್ರೀನ್ ಪ್ಲೇ ಕೂಡಾ ಸೂಪರ್. ಪಾರಿವಾಳ ಹಿಡಿಯೋದನ್ನು ಚೆನ್ನಾಗಿ ಕಲಿತುಕೋ.. ಗೆಳೆಯನೂ.. ಶಿಷ್ಯನೂ ಆದ ಧನ್ವೀರ್‍ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹೊಗಳಿದ್ದು ಮತ್ತು ಸಲಹೆ ನೀಡಿರುವುದು ಹೀಗೆ.

  ಬಜಾರ್ ಚಿತ್ರ ಪ್ರದರ್ಶನವನ್ನು ಡಿ ಬಾಸ್‍ಗಾಗಿಯೇ ವಿಶೇಷವಾಗಿ ಆಯೋಜಿಸಿದ್ದ ಧನ್ವೀರ್‍ಗೆ ದರ್ಶನ್ ಮಾತು ಕೇಳಿ ಅಕಾಶವನೇ ಕೈಗೆ ಸಿಕ್ಕಿದ್ದರೆ ಅಚ್ಚರಿಯಿಲ್ಲ. ಏಕೆಂದರೆ, ಧನ್ವೀರ್ ದರ್ಶನ್ ಅವರ ಬಿಗ್ ಫ್ಯಾನ್. 

  ಸಿಂಪಲ್ ಸುನಿ ನಿರ್ದೇಶನದ ಬಜಾರ್ ಸಿನಿಮಾ, ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವಾಗಲೇ ಚಿತ್ರದ ಬಗ್ಗೆ ದರ್ಶನ್ ಹೊಗಳಿರುವುದು ಚಿತ್ರತಂಡಕ್ಕೆ ಪಾರಿವಾಳವೇ ಕೈಗೆ ಸಿಕ್ಕಂತಾಗಿದೆ.

 • ಬಜಾರ್‍ಗೆ ಕಳ್ಳರ ಕಾಟ

  bazaar faces problems from piracy

  ಸಿಂಪಲ್ ಸುನಿ ನಿರ್ದೇಶನದ ಬಜಾರ್ ಸಿನಿಮಾ ಥಿಯೇಟರುಗಳಲ್ಲಿ ಚೆನ್ನಾಗಿ ಹೋಗುತ್ತಿದೆ. ಚಿತ್ರದ ಬಗ್ಗೆ ಪ್ರೇಕ್ಷಕರಿಂದ, ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ನೋಡಿ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಹೀಗೆ.. ಇನ್ನೊಂದು ಸಕ್ಸಸ್ ಎದುರು ನೋಡುತ್ತಿದ್ದ ಸುನಿಗೆ, ಈಗ ಕಳ್ಳರ ಕಾಟ. ಅದೂ ಸೈಬರ್ ಕಳ್ಳರ ಕಾಟ.

  ಬಜಾರ್ ಚಿತ್ರವನ್ನು ಪೈರೇಟ್ ಮಾಡಿರುವ ಕೆಲವು ದ್ರೋಹಿಗಳು, ಚಿತ್ರವನ್ನು ವೆಬ್‍ಸೈಟುಗಳಲ್ಲಿ ಅಪ್‍ಲೋಡ್ ಮಾಡಿಬಿಟ್ಟಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ ಆ್ಯಪ್ ಮೂಲಕ ಅಪ್‍ಲೋಡ್ ಮಾಡಿದ್ದಾರೆ. ಸುನಿಗೆ ತಲೆನೋವಾಗಿರುವುದೇ ಇದು. ಏಕೆಂದರೆ, ಆ್ಯಪ್‍ನಲ್ಲಿರುವ ವಿಡಿಯೋಗಳನ್ನು ಡಿಲೀಟ್ ಮಾಡುವುದು ಸುಲಭವಲ್ಲ.

  ಹೀಗಾಗಿ ಸುನಿ ಮತ್ತು ನಿರ್ಮಾಪಕ ತಿಮ್ಮೇಗೌಡ, ಸೈಬರ್ ಕ್ರೈಮ್ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಧನ್ವೀರ್ ಮತ್ತು ಆದಿತಿ ಪ್ರಭುದೇವ ನಟನೆಯ ಚಿತ್ರ ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವಾಗಲೇ ಪೈರಸಿ ಭೂತಕ್ಕೆ ಸಿಕ್ಕಬಿದ್ದಿರುವುದು ಚಿತ್ರತಂಡವನ್ನು ಬೆಚ್ಚಿ ಬೀಳಿಸಿದೆ.

 • ಬಜಾರ್‍ಗೆ ಪಾರಿವಾಳಗಳೇ ವಿಲನ್..!

  bazar release postponed due to pigeons

  ಬಜಾರ್ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಜನವರಿ 11ರ ಹೊತ್ತಿಗೆ ಬಜಾರ್ ಸಿನಿಮಾ ಥಿಯೇಟರುಗಳಲ್ಲಿರಬೇಕಿತ್ತು. ಸಿನಿಮಾದ ಎಲ್ಲ ಕೆಲಸ ಮುಗಿಸಿ, ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಚಿತ್ರತಂಡ, ಸಿನಿಮಾ ಬಿಡುಗಡೆಯನ್ನೇ ಮುಂದಕ್ಕೆ ಹಾಕಿದೆ. ಕಾರಣ ಬೇರೇನಲ್ಲ. ಪಾರಿವಾಳಗಳು.

  ಈಗಾಗಲೇ ಚಿತ್ರತಂಡ ಹೇಳಿಕೊಂಡಿರೋ ಹಾಗೆ ಇಡೀ ಚಿತ್ರದ ಕಥೆ ಸುತ್ತುವುದೇ ಪಾರಿವಾಳಗಳ ಸುತ್ತ. ಪಾರಿವಾಳಗಳ ರೇಸ್ ಮತ್ತು ಭೂಗತ ಲೋಕದ ಕಥೆ ಇರುವ ಬಜಾರ್‍ನಲ್ಲಿ ನಿಜವಾದ ಪಾರಿವಾಳಗಳನ್ನು ಬಳಸಿಕೊಂಡಿರುವುದೇ ಚಿತ್ರತಂಡವನ್ನು ಕಾಡುತ್ತಿದೆ. 

  ವನ್ಯಜೀವಿ ಸಂರಕ್ಷಣಾ ಕಾಯಿದೆ ಎಷ್ಟು ಬಿಗಿಯಾಗಿದೆಯೆಂದರೆ, ಅದು ಬಜಾರ್ ಚಿತ್ರದ ಬಿಡುಗಡೆಯನ್ನೇ ತಡೆಹಿಡಿದಿದೆ. ಇನ್ನೊಂದು ಅರ್ಥದಲ್ಲಿ ಚಿತ್ರದ ಹೀರೋ ಆಗಿದ್ದ ಪಾರಿವಾಳಗಳೇ, ಈಗ ವಿಲನ್ ಆಗಿಬಿಟ್ಟಿವೆ.

  ಆಗಿರೋದು ಇಷ್ಟು. ಪಾರಿವಾಳಗಳನ್ನು ಸಿನಿಮಾಗಳಲ್ಲಿ ಬಳಸಿಕೊಳ್ಳೋದಕ್ಕೆ ಸೆಂಟ್ರಲ್ ಅನಿಮಲ್ ಬೋರ್ಡ್ ಅನುಮತಿ ಕೊಡಬೇಕು. ಇದಕ್ಕೆ ಚಿತ್ರತಂಡ ಪ್ರಕ್ರಿಯೆ ಆರಂಭಿಸಿತ್ತು. ಆದರೆ, ಅವರ ದುರದೃಷ್ಟ ನೋಡಿ. ಇನ್ನೇನು ಅಂತಿಮ ಅನುಮತಿ ಪತ್ರ ಸಿಗಬೇಕು ಎಂಬ ಹೊತ್ತಿನಲ್ಲಿ ಅನಿಮಲ್ ಬೋರ್ಡ್ ನಿರ್ದೇಶಕರು ಬದಲಾಗಿಬಿಟ್ಟರು. ಹೀಗಾಗಿ.. ಅನುಮತಿ ಪಡೆಯುವ ಪ್ರಕ್ರಿಯೆ ಮತ್ತೆ ಮೊದಲಿನಿಂದ ಶುರುವಾಯ್ತು. ಇದರಿಂದಾಗಿ ಸಿನಿಮಾವನ್ನು ಅನಿವಾರ್ಯವಾಗಿ ಬೇರೆ ದಿನಾಂಕದಲ್ಲಿ ರಿಲೀಸ್ ಮಾಡೋಕೆ ನಿರ್ಧರಿಸಿದೆ ಬಜಾರ್ ಟೀಂ.

  ತಿಮ್ಮೇಗೌಡ ನಿರ್ಮಾಣದ ಬಜಾರ್ ಚಿತ್ರದ ಮೂಲಕ ಧನ್ವೀರ್ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದು, ಆದಿತಿ ನಾಯಕಿ. ಸಿಂಪಲ್ ಸುನಿ ನಿರ್ದೇಶನದ ಚಿತ್ರ ಎಂಬ ಕಾರಣಕ್ಕೆ ಭಾರಿ ಕುತೂಹಲ ಹುಟ್ಟಿಸಿರುವ ಸಿನಿಮಾ ಬಿಡುಗಡೆಯ ಮುಂದಿನ ದಿನಾಂಕ ಸದ್ಯಕ್ಕೆ ಸಸ್ಪೆನ್ಸ್.

 • ಬಜಾರ್‍ನಲ್ಲಿ ಬೆಳ್ಳಿ.. ಚುಕ್ಕಿ.. ಯಾರವರು..?

  find out who is belli chukki in bazar

  ಬಜಾರ್. ಪಾರಿವಾಳಗಳ ರೇಸ್ ಮತ್ತು ಭೂಗತ ಜಗತ್ತಿನ ಕಥೆ. ಈ ಚಿತ್ರದಲ್ಲಿ ಹೀರೋ-ಹೀರೋಯಿನ್ ಅವರಷ್ಟೇ ಪ್ರಧಾನ ಪಾತ್ರ ಪಾರಿವಾಳಗಳದ್ದು. ಚಿತ್ರದಲ್ಲಿ ಎಲ್ಲರಿಗೂ ಇಷ್ಟವಾಗಿದ್ದೇ ಅದು. ಅದರಲ್ಲೂ ಶೂಟಿಂಗ್ ವೇಳೆ ಚಿತ್ರತಂಡದವರು ಪಾರಿವಾಳಗಳ ಜೊತೆ ಬಾಂಧವ್ಯ ಬೆಳೆಸಿಕೊಂಡುಬಿಟ್ಟಿದ್ದರು.

  ಅದರಲ್ಲೂ ನಾಯಕಿ ಆದಿತಿ, ಸೆಟ್‍ನಲ್ಲಿದ್ದ ನೂರಾರು ಪಾರಿವಾಳಗಳ ಪೈಕಿ ಎರಡನ್ನು ಸಾಕಿದ್ದರಂತೆ. ಅವುಗಳಿಗೆ ಬೆಳ್ಳಿ, ಚುಕ್ಕಿ ಎಂದೂ ಹೆಸರಿಟ್ಟಿದ್ದರಂತೆ. ಸೆಟ್‍ಗೆ ಬಂದ ಕೂಡಲೇ ಕಣ್ಣಿಗೆ ಬೆಳ್ಳಿ, ಚುಕ್ಕಿ ಕಾಣಿಸಿಕೊಳ್ಳಬೇಕು. ಇಲ್ಲದಿದ್ದರೆ ಏನೋ ತಳಮಳವಾಗುತ್ತಿತ್ತು. ಏನನ್ನೋ ಕಳೆದುಕೊಂಡಂತಾಗುತ್ತಿತ್ತು ಎಂದಿದ್ದಾರೆ ಆದಿತಿ ಪ್ರಭುದೇವ.

  ಚಿತ್ರದಲ್ಲಿ ಆದಿತಿ ಟೈಲರಿಂಗ್ ಹುಡುಗಿಯಾಗಿ ಕಾಣಿಸಿಕೊಂಡಿದ್ದು, ಮಹತ್ವಾಕಾಂಕ್ಷೆಯ ಹುಡುಗಿ. ಧನ್‍ವೀರ್ ನಾಯಕರಾಗಿರುವ ಚಿತ್ರಕ್ಕೆ, ಸಿಂಪಲ್ ಸುನಿ ನಿರ್ದೇಶಕ. ಮುಂದಿನ ವಾರ ತೆರೆಗೆ ಬರುತ್ತಿರುವ ಚಿತ್ರದ ಮೇಲೆ ಭಾರಿ ನಿರೀಕ್ಷೆ ಸೃಷ್ಟಿಯಾಗಿದೆ.

 • ಬಜಾರ್‍ನಲ್ಲಿ ಲವ್ ಫೇಲ್ಯೂರ್ ಸೆಲಬ್ರೇಷನ್..! 

  love failure song in bazar

  ಬಜಾರ್. ಸಿಂಪಲ್ ಸುನಿ ನಿರ್ದೇಶನದ ಸಿನಿಮಾ. ಈ ಚಿತ್ರದಲ್ಲಿ ಧನ್‍ವೀರ್ ಎಂಬ ಹೊಸ ನಾಯಕನನ್ನು ಪರಿಚಯಿಸುತ್ತಿದ್ದಾರೆ ಸುನಿ. ಆದಿತಿ ಪ್ರಭುದೇವ ನಾಯಕಿ. ಈ ಚಿತ್ರದಲ್ಲೀಗ ಲವ್ ಫೇಲ್ಯೂರ್ ಆಗಿದೆ. ಅರ್ಥಾತ್.. ಮೊದಲ ಹಾಡು ರಿಲೀಸ್ ಆಗಿದೆ.

  ಲವ್ ಫೇಲ್ಯೂರ್ ಆಗೋಯ್ತು ನನಗೆ..  ಫೀಲ್ ಅಂತೂ ಸೂಪರು ಕಣ್ಣೀರ ಜೊತೆಗೆ.. ಏನೇನೋ ಬೈದ್ರೂ ಚೆಂದಾನೇ ನನಗೆ.. ದೂರಾನೇ ಆದ್ರೂ ನೀ ಕಣ್ಣ ಒಳಗೆ.. ಅನ್ನೋ ಹಾಡು.. ಬಿಟ್ಟಿದ್ದಾರೆ ಸುನಿ. ಸಂಗೀತ ನೀಡಿರುವುದು ರವಿ ಬಸ್ರೂರು. ಹಾಡಿರುವುದು ವಿಜಯ್ ಪ್ರಕಾಶ್.

  ಈ ಹಾಡಿನ ಸ್ಪೆಷಾಲಿಟಿ ಏನ್ ಗೊತ್ತಾ..? ಲವ್ ಫೇಲ್ಯೂರ್ ಅನ್ನು ಸೆಲಬ್ರೇಷನ್ ಮಾಡೋ ಹಾಡಿದು. ಭಗ್ನ ಪ್ರೇಮಿಗಳಿಗೆ ದುಃಖದ ಹಾಡಿದೆ. ಎಣ್ಣೆ ಹಾಡಿದೆ. ಫೀಲಿಂಗ್ ಸಾಂಗ್ ಇದೆ. ಆದರೆ, ಸೆಲಬ್ರೇಷನ್ ಸಾಂಗ್ ಇರಲಿಲ್ಲ. ಅಂಥಾದ್ದೊಂದು ಹಾಡು ಕೊಡೋ ಮೂಲಕ ಸುನಿ, ಒನ್ಸ್ ಎಗೇಯ್ನ್ ತಾವು ಡಿಫರೆಂಟ್ ಅಂತಾ ತೋರಿಸಿದ್ದಾರೆ.

 • ಬ್ರಹ್ಮಚಾರಿಗೆ ಬಜಾರ್ ಬ್ಯೂಟಿ

  bazaar beauty joins bramhachaari

  ನೀನಾಸಂ ಸತೀಶ್, ಉದಯ್ ಮೆಹ್ತಾ ಜೋಡಿ, ಲವ್ ಇನ್ ಮಂಡ್ಯ ಚಿತ್ರದ ನಂತರ ಮತ್ತೆ ಒಂದಾಗಿರುವ ಸಿನಿಮಾ ಬ್ರಹ್ಮಚಾರಿ 100% ವರ್ಜಿನ್. ಈ ಬ್ರಹ್ಮಚಾರಿಯ ಚಿತ್ತ ಚಂಚಲಗೊಳಿಸಲು ಬಂದಿರುವ ಚೆಲುವೆ ಆದಿತಿ ಪ್ರಭುದೇವ.

  ಸಿಂಪಲ್ ಸುನಿ ನಿರ್ದೇಶನದ ಬಜಾರ್ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಆದಿತಿ, ಸ್ಯಾಂಡಲ್‍ವುಡ್‍ನ ಬ್ಯುಸಿ ನಟಿಯಾಗುತ್ತಿದ್ದಾರೆ. ಬಜಾರ್ ನಂತರ ಚಿರಂಜೀವಿ ಸರ್ಜಾ ಎದುರು ಸಿಂಗದಲ್ಲಿ ನಟಿಸುತ್ತಿರುವ ಆದಿತಿ, ಈಗ ನೀನಾಸಂ ಸತೀಶ್‍ಗೆ ಜೋಡಿಯಾಗಿದ್ದಾರೆ.

  ಆದಿತಿ ಕೈಲಿ ಈಗಾಗಲೇ ತೋತಾಪುರಿ, ರಂಗನಾಯಕಿ, ಸಿಂಗ ಹಾಗೂ ದುನಿಯಾ ವಿಜಯ್ ಜೊತೆ ಒಂದು ಸಿನಿಮಾ ಇದೆ. 

 • ಮತ್ತೊಂದು ಕಿಕ್ ಕೊಟ್ಟ ಬಜಾರ್ ಸುನಿ

  bazaar second trailer is out

  ಸಿಂಪಲ್ ಸುನಿ, ಚಮಕ್ ಸುನಿ.. ಈಗ ಬಜಾರ್ ಸುನಿಯಾಗಿದ್ದಾರೆ. ಪಾರಿವಾಳಗಳ ರೇಸ್, ಭೂಗತ ಜಗತ್ತು ಮತ್ತು ಮಧ್ಯದಲ್ಲೊಂದು ನವಿರಾದ ಪ್ರೇಮಕತೆಯನ್ನಿಟ್ಟುಕೊಂಡು ಬಜಾರ್ ಅನ್ನೋ ಚಿತ್ರ ಸೃಷ್ಟಿಸಿರುವ ಸುನಿ, ಅದೇ ಚಿತ್ರದ ಮತ್ತೊಂದು ಕಿಕ್ ಕೊಟ್ಟಿದ್ದಾರೆ. 

  ಹೊಸ ಪ್ರತಿಭೆ ಧನ್‍ವೀರ್, ಆದಿತಿ, ಶರತ್ ಲೋಹಿತಾಶ್ವ ನಟಸಿರುವ ಚಿತ್ರದ 2ನೇ ಟ್ರೇಲರ್ ಹೊರಬಿಟ್ಟಿದ್ದಾರೆ ಸುನಿ. ಪಾರಿವಾಳ ಎಂದರೆ ಪ್ರೀತಿ.. ಪಾರಿವಾಳ ಎಂದರೆ ಶಾಂತಿ.. ಆ ಎರಡನ್ನೂ ಹೊರತುಪಡಿಸಿದ ಇನ್ನೊಂದು ಕಥೆ ಇಲ್ಲಿದೆ ಎನ್ನುತ್ತಲೇ ವಿಭಿನ್ನ ಕಥೆಯೊಂದನ್ನು ಹೊರತೆಗೆದಿದ್ದಾರೆ ಸುನಿ.

  ಚಿತ್ರಕ್ಕೆ ರವಿ ಬಸ್ರೂರು ಸಂಗೀತವಿದ್ದು, ಹಾಡು ಹೆಜ್ಜೆ ಹಾಕುವಂತಿವೆ. ಚಿಗುರು ಮೀಸೆ ಹುಡುಗನಾಗಿ ಧನ್‍ವೀರ್, ಚೆಂದೊಳ್ಳಿ ಚೆಲುವೆಯಾಗಿ ಆದಿತಿ ಇಷ್ಟವಾಗುವಂತಿದ್ದಾರೆ. ಜನವರಿ 11ಕ್ಕೆ ಚಿತ್ರಮಂದಿರದ ಬಜಾರುಗಳಲ್ಲಿರಲಿದೆ ಬಜಾರ್.

 • ರೊಮಾನ್ಸ್ ಮಾಡೋದೇ ಕಷ್ಟವಾಯ್ತಂತೆ..!

  bazaar hero has no experience in love

  ಬಜಾರ್ ಚಿತ್ರದಲ್ಲಿರೋದು ಪಾರಿವಾಳ, ಭೂಗತ ಲೋಕದ ಕಥೆ. ಆ್ಯಕ್ಷನ್ ಸೀನುಗಳಿಗೆ ಬರವೇ ಇಲ್ಲ. ಚಿತ್ರದ ನಾಯಕ ದನ್ವೀರ್‍ಗೆ ಇದು ಮೊದಲ ಸಿನಿಮಾ. ಎಲ್ಲವೂ ಹೊಸದು. ಹೀಗಿದ್ದರೂ ಚಿತ್ರದಲ್ಲಿ ಫೈಟಿಂಗ್, ಆ್ಯಕ್ಷನ್, ಕಾಮಿಡಿ ಸೀನುಗಳನ್ನು ಮಾಡೋಕೆ ಭಯವಾಗಿರಲಿಲ್ಲವಂತೆ. ಕಾರಣ, ನಿರ್ದೇಶಕ ಸಿಂಪಲ್ ಸುನಿ.

  ಅವರು ಎಲ್ಲವನ್ನೂ ವಿವರವಾಗಿ ಹೇಳುತ್ತಿದ್ದರು. ನಾನು ಫಾಲೋ ಮಾಡ್ತಿದ್ದೆ. ಆ್ಯಕ್ಷನ್, ಕಾಮಿಡಿ ಕಷ್ಟವಾಗಲಿಲ್ಲ. ಆದರೆ, ರೊಮ್ಯಾಂಟಿಕ್ ದೃಶ್ಯಗಳೇ ನಿಜಕ್ಕೂ ಕಷ್ಟವಾದವು ಎಂದು ನಗುತ್ತಾರೆ ಧನ್ವೀರ್.

  ಕಾರಣ, ಇಷ್ಟೆ, ಲವ್ವಲ್ಲಿ ಧನ್ವೀರ್ ಅನನುಭವಿ. ಎಕ್ಸ್‍ಪೀರಿಯನ್ಸ್ ನಾಸ್ತಿ ಹುಡುಗ. ಆದರೂ ನಟಿ ಆದಿತಿ ಜೊತೆ ಚೆನ್ನಾಗಿ ನಟಿಸಿದ್ದಾರಂತೆ. ಚಿತ್ರ ಇದೇ ವಾರ ತೆರೆಗೆ ಬರುತ್ತಿದೆ. 

 • ಲವ್ ಫೇಲ್ಯೂರ್ ಆದ್ರೆ.. ಹಿಂಗೆಲ್ಲ ಎಂಜಾಯ್ ಮಾಡ್ತಾರಾ..?

  this hero is unque and enjoys break up

  ಲವ್ ಫೇಲ್ಯೂರ್ ಆದಾಗ ಹೀರೋಗಳು ಡಿಸೈನ್ ಡಿಸೈನಾಗಿ ಕಣ್ಣೀರು ಹಾಕೋದನ್ನ ಬೇಜಾನ್ ಸಿನಿಮಾಗಳಲ್ಲಿ ನೋಡಿದ್ದೇವೆ. ಆದರೆ, ಬಜಾರ್‍ನಲ್ಲಿ ನಿಮಗೆ ಬೇರೆಯದೇ ಸ್ಟೈಲ್ ಇದೆ. ಮುಂದಿನ ವಾರ ತೆರೆಗೆ ಬರ್ತಿರೋ ಸಿಂಪಲ್ ಸುನಿ ನಿರ್ದೇಶನದ ಬಜಾರ್‍ನಲ್ಲಿ ಹೀರೋ ಲವ್ ಫೇಲ್ಯೂರ್ ಆಗಲಿ ಎಂದು ಬಯಸಿ ಬಯಸೀ ಭಗ್ನ ಪ್ರೇಮಿಯಾಗ್ತಾನೆ.

  ಅಷ್ಟೇ ಅಲ್ಲ.. ಲವ್ ಫೇಲ್ಯೂರ್ ಆಗೋಯ್ತು ನನಗೆ.. ಫೀಲ್ ಅಂತೂ ಸೂಪರ್ ಕಣ್ಣೀರ ಜೊತೆಗೆ.. ಅನ್ನೋ ಹಾಡೂ ಇದೆ. ಧನ್ವೀರ್ ಈ ಹಾಡು ಹಾಡಿ ಕುಣಿತಾರಂತೆ. ಹುಡುಗರಿಗೆಲ್ಲ.. ಅದರಲ್ಲೂ ಭಗ್ನಪ್ರೇಮಿಗಳಿಗೆಲ್ಲ ಹಾಡು ಸಿಕ್ಕಾಪಟ್ಟೆ ಇಷ್ಟವಾಗಿಬಿಟ್ಟಿದೆ.

  ಆದಿತಿ ಪ್ರಭುದೇವ ನಾಯಕಿಯಾಗಿರುವ ಚಿತ್ರದಲ್ಲಿ ಪಾರಿವಾಳ ಮತ್ತು ಭೂಗತ ಲೋಕದ ನಂಟಿನ ಕಥೆಯಿದೆ. ಇದುವರೆಗಿನ ಸುನಿ ಚಿತ್ರಗಳ ಸ್ಟೈಲೇ ಬೇರೆ.. ಈ ಚಿತ್ರದ ಸ್ಟೈಲೇ ಬೇರೆ ಎನ್ನುತ್ತಿದೆ ಸ್ಯಾಂಡಲ್‍ವುಡ್.

 • ಸುನಿ ಅಂದ್ರೆ ಹೊಸಬರಿಗೆ ಲಕ್ಕಿ ಡೈರೆಕ್ಟರ್..!

  simple suni is a lucky charm to new comers

  ಸಿಂಪಲ್ ಸುನಿ ನಿರ್ದೇಶನದ ಬಜಾರ್ ಸಿನಿಮಾ ರಿಲೀಸ್‍ಗೆ ರೆಡಿಯಾಗಿದೆ. ಚಿತ್ರದ ಹೀರೋ ಧನ್‍ವೀರ್. ಅವರಿಗಿದು ಹೊಸ ಸಿನಿಮಾ. ಪಾರಿವಾಳದ ರೇಸ್, ರೌಡಿಸಂ, ಲವ್‍ಸ್ಟೋರಿ, ಮರ್ಡರ್ ಮಿಸ್ಟರಿ ಎಲ್ಲವೂ ಇರುವ ಸಿನಿಮಾ ಇದು. ಚಿತ್ರದ ಡೈರೆಕ್ಟರ್ ಸುನಿ. ಸಿಂಪಲ್ ಸುನಿ. ಲಾಂಚಿಂಗ್ ಸುನಿ. ಈ ಚಿತ್ರದೊಂದಿಗೆ ಸಿಂಪಲ್ ಸುನಿಗೆ ಇಂಥಾದ್ದೊಂದು ಬಿರುದು ಸಿಕ್ಕರೂ ಆಶ್ಚರ್ಯವಿಲ್ಲ. 

  ರಕ್ಷಿತ್ ಶೆಟ್ಟಿ ಎಂಬ ನಟ ಕನ್ನಡಿಗರಿಗೆ ಚಿರಪರಿಚಿತನಾಗಿದ್ದು ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದ ಮೂಲಕ. ಆಪರೇಷನ್ ಆಲಮೇಲಮ್ಮ ಮೂಲಕ ರಿಷಿ, ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ ಮೂಲಕ ಪ್ರವೀಣ್, ಈಗ ಬಜಾರ್ ಚಿತ್ರದ ಮೂಲಕ ಧನ್‍ವೀರ್.

  ವಿಶೇಷ ಅಂದ್ರೆ, ನಾನು ಹೊಸಬರನ್ನೇನೂ ಪರಿಚಯಿಸಲಿಲ್ಲ. ಅದಕ್ಕೂ ಮೊದಲೇ ನಟಿಸಿದ್ದ ಅವರಿಗೆ ನನ್ನ ಚಿತ್ರಗಳ ಮೂಲಕ ಹೆಸರೂ ಸಿಕ್ಕಿತು. ಹೀಗಾಗಿ ನಾನು ಲಾಂಚಿಂಗ್ ಡೈರೆಕ್ಟರ್ ಎನಿಸಿಕೊಂಡಿದ್ದೇನೆ ಅಂತಾರೆ ಸುನಿ. ಬಜಾರ್ ಚಿತ್ರದಲ್ಲಿ ಧನ್‍ವೀರ್ ಹಾಗೂ ಕಿರುತೆರೆ ಕಲಾವಿದೆ ಆದಿತಿಯನ್ನು ಲಾಂಚ್ ಮಾಡಿದ್ದಾರೆ ಸಿಂಪಲ್ ಸುನಿ.

   

 • ಸುನಿ ಬಜಾರ್‍ನಲ್ಲಿ ಚಾಲೆಂಜಿಂಗ್ ಸ್ಟಾರ್‍ಗೇನು ಕೆಲಸ..?

  darshan to release bazaar songs

  ಸಿಂಪಲ್ ಸುನಿ ನಿರ್ದೇಶನದ ಬಜಾರ್ ಚಿತ್ರ, ರಿಲೀಸ್ ಆಗೋಕೆ ರೆಡಿಯಾಗಿದೆ. ಚಿತ್ರ ನಿರ್ಮಾಣದಷ್ಟೇ ಚಿತ್ರದ ಪ್ರಚಾರಕ್ಕೂ ಶ್ರಮವಹಿಸುವ ಸುನಿ, ಚಿತ್ರದ ಹಾಡುಗಳ ಬಿಡುಗಡೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನ ಆಹ್ವಾನಿಸಿದ್ದಾರೆ.

  ಬಜಾರ್ ಚಿತ್ರದ ನಾಯಕ ಧನ್‍ವೀರ್, ಚಿತ್ರರಂಗಕ್ಕೆ ಹೊಸಬರು. ಅವರಿಗಿದು ಮೊದಲ ಸಿನಿಮಾ. ಮೊದಲಿನಿಂದಲೂ ದರ್ಶನ್ ಅಭಿಮಾನಿಯಾಗಿರುವ ಧನ್‍ವೀರ್‍ಗೆ, ತಮ್ಮ ಚಿತ್ರದ ಆಡಿಯೋವನ್ನು ದರ್ಶನ್ ಅವರೇ ಬಿಡುಗಡೆ ಮಾಡಲಿ ಎಂಬ ಆಸೆ. ಹೀಗಾಗಿ ಸುನಿ ಹಾಗೂ ಧನ್‍ವೀರ್, ದರ್ಶನ್‍ರನ್ನು ಭೇಟಿ ಮಾಡಿ ಆಡಿಯೋ ಬಿಡುಗಡೆಗೆ ಆಹ್ವಾನಿಸಿದ್ದಾರೆ.

  ಸುನಿ ಮನವಿಗೆ ದರ್ಶನ್ ಯೆಸ್ ಎಂದಿದ್ದಾರೆ. ಪಾರಿವಾಳಗಳ ರೇಸ್ ಕಥೆ ಇರುವ ಬಜಾರ್ ಸಿನಿಮಾದ ಹಾಡುಗಳು ಕೆಲವೇ ದಿನಗಳಲ್ಲಿ ನಿಮ್ಮ ಕಣ್ಣು, ಕಿವಿ ತಂಪು ಮಾಡಲಿವೆ.

 • ಸುನಿಗೆ ಬಜಾರ್ ಸಿಕ್ಸರ್

  bazar is sixth movie for suni

  ಬಜಾರ್. ಸಿಂಪಲ್ ಸುನಿ ನಿರ್ದೇಶನದ ಚಿತ್ರ ಎಂಬ ಕಾರಣಕ್ಕಾಗಿಯೇ ಕುತೂಹಲ ಹುಟ್ಟಿಸಿರುವ ಸಿನಿಮಾ. ಇದು ಅವರ ನಿರ್ದೇಶನದ ಆರನೇ ಸಿನಿಮಾ. ಹೀಗಾಗಿಯೇ ಭರ್ಜರಿ ಸಿಕ್ಸರ್ ನಿರೀಕ್ಷೆಯಲ್ಲಿದ್ದಾರೆ ಸುನಿ.

  2013ರಲ್ಲಿ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದ ಮೂಲಕ ರಕ್ಷಿತ್ ಶೆಟ್ಟಿ ಎಂಬ ಸ್ಟಾರ್ ಹುಟ್ಟಿಗೆ ಕಾರಣರಾದ ಸುನಿ, ಈಗ ಧನ್‍ವೀರ್ ಅವರನ್ನು ಈ ಚಿತ್ರದ ಮೂಲಕ ಪರಿಚಯಿಸುತ್ತಿದ್ದಾರೆ.

  ಬಜಾರ್, ಸುನಿ ಕೆರಿಯರ್‍ನಲ್ಲಿಯೇ ವಿಭಿನ್ನ ಕಥಾ ಹಂದರ ಹೊಂದಿರುವ ಸಿನಿಮಾ. ಪಾರಿವಾಳಗಳ ರೇಸ್‍ನ ಕಥೆ ಚಿತ್ರದಲ್ಲಿದೆ. ಪಾರಿವಾಳಗಳ ರೇಸ್, ಭೂಗತ ಜಗತ್ತಿನ ಕಥೆ ಹೇಳುತ್ತಿರುವ ಸುನಿ, ಫೈಟ್ಸ್, ರೊಮ್ಯಾನ್ಸ್, ಕಾಮಿಡಿಯನ್ನು ಹದವಾಗಿ ಬೆರೆಸಿ ತೆಗೆದಿರುವ ಪಾಕ ಬಜಾರ್.

  ಆದಿತಿ ಪ್ರಭುದೇವ ಚಿತ್ರದ ನಾಯಕಿ. ಚಿತ್ರದ 2ನೇ ಟ್ರೇಲರ್ 3ನೇ ತಾರೀಕು ರಿಲೀಸ್ ಆಗುತ್ತಿದ್ದು, ಸಿನಿಮಾ ಜನವರಿ 2ನೇ ವಾರದಲ್ಲಿ ತೆರೆಗೆ ಬರಲಿದೆ.

 • ಸೆನ್ಸಾರ್ ಗೆದ್ದ ಬಜಾರ್ 

  bazar wins censor war

  ಅನಿಮಲ್ ಬೋರ್ಡಿನಿಂದ ಅನುಮತಿ ಸಿಗದೆ, ಬಿಡುಗಡೆ ದಿನಾಂಕವನ್ನು ಘೋಷಿಸಿಯೂ ಸಂಕಷ್ಟಕ್ಕೆ ಸಿಲುಕಿದ್ದ ಬಜಾರ್ ಸಿನಿಮಾ, ಮೊದಲ ಯುದ್ಧ ಗೆದ್ದಿದೆ. ಪಾರಿವಾಳಗಳನ್ನು ಬಳಸಿಕೊಂಡಿದ್ದ ವಿಷಯಕ್ಕೆ ಅನಿಮಲ್ ಬೋರ್ಡಿನಿಂದ ಕ್ಲಿಯರೆನ್ಸ್ ಸಿಗದೆ ಜನವರಿ 11ಕ್ಕೆ ರಿಲೀಸ್ ಆಗಬೇಕಿದ್ದ ಚಿತ್ರವನ್ನು ಮುಂದೂಡಲಾಗಿತ್ತು.

  ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದ್ದು, ಶೀಘ್ರದಲ್ಲೇ ಚಿತ್ರ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ. ಸಿಂಪಲ್ ಸುನಿ ನಿರ್ದೇಶನದ ಚಿತ್ರಕ್ಕೆ ಧನ್ವೀರ್ ಹೀರೋ. ನಾಗಕನ್ಯೆ ಖ್ಯಾತಿ ಆದಿತಿ ಪ್ರಭುದೇವ ನಾಯಕಿ.

Ayushmanbhava Movie Gallery

Ellidhe Illitanaka Movie Gallery