` milana nagaraj, - chitraloka.com | Kannada Movie News, Reviews | Image

milana nagaraj,

  • ರಾಜಕೀಯಕ್ಕೆ ಮಿಲನ ನಾಗರಾಜ್ 

    milana nagraj to play role pf politician in matte udbhava

    ಮಿಲನ ನಾಗರಾಜ್ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಮ್ ದುನಿಯಾ ನಮ್ ಸ್ಟೈಲ್ ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟ ಮಿಲನ ನಾಗರಾಜ್, ಈಗ ತಾನೆ ಲವ್ ಮಾಕ್ವೆಲ್ ಚಿತ್ರಕ್ಕೆ ನಿರ್ಮಾಪಕಿಯೂ ಆಗಿದ್ದರು. ಈಗ ರಾಜಕಾರಣಿಯೂ ಆಗಿದ್ದಾರೆ.

    ಮಿಲನ ನಾಗರಾಜ್ ಅವರ ರಾಜಕೀಯ ಗುರು ಕೂಡ್ಲು ರಾಮಕೃಷ್ಣ. ಅಫ್‍ಕೋರ್ಸ್.. ಮತ್ತೆ ಉದ್ಭವ ಚಿತ್ರದಲ್ಲಿ. ರಾಜಕಾರಣಿ ಕಮ್ ಪರಿಸರ ಪ್ರೇಮಿಯಾಗಿ ಕಾಣಿಸಿಕೊಂಡಿರುವ ಮಿಲನ ನಾಗರಾಜ್, ಈ ವರ್ಷ ಬೆಳ್ಳಿ ತೆರೆಯ ಮೇಲೆ ರಾರಾಜಿಸಲಿದ್ದಾರೆ.

    ಮತ್ತೆ ಉದ್ಭವ ರಿಲೀಸ್ ಆಗೋಕೆ ವೇದಿಕೆ ಸಿದ್ಧವಾಗಿದ್ದು, ರಂಗಾಯಣ ರಘು, ಇಲ್ಲಿ ಅನಂತ್‍ನಾಗ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಮೋದ್ ಈ ಚಿತ್ರದ ನಾಯಕ.

  • Charlie Audio Released

    charlie image

    'Madarangi' Krishna's new film 'Charlie' being directed by debutante Shiva is all ready for release and before that the audio of the film was released. Former Chief Minister H D Kumaraswamy, Shiva's mentor Soori and others were present at the function and released the audio. H D Kumaraswamy arrived late and in his absence, Soori and others had released the songs of the film and the songs were released once again after H D Kumaraswamy arrived one and a half hours late.

    charlie image
    charlie audio release

    Actor Krishna and Yogaraj Bhatt were absent due to various reasons. Actresses Milana Nagaraj, Vaishali Deepak, director Shiva, music director Veer Samarth, producer Manjunath, lyricists Kaviraj and Chethan Kumar and others were present at the dais.

  • Krishna and Milana To Get Hitched On February 14th

    Krishna and Milana To Get Hitched On February 14th

    Actor-director Krishna of 'Darling' fame and actress-producer Milana are all set to get hitched on Valentines Day (February 14th) 2021.

    Krishna and Milana acted for the first time together five years back in a film called 'Nam Duniya Nam Style' directed by Preetham Gubbi. Though the film was a failure, they got close. Then the duo went on to act in films like 'Charlie' and 'Love Mocktail'.

    Before the start of 'Love Mocktail' the duo were dating each other and after the completion of the film, they announced that they are in love and planning to marry by the end of this year.

    However, due to Corona and various reasons, Krishna and Milana have decided to marry on February 14th 2021. On Tuesday afternoon, Krishna and Milana have made it official through their social media accounts that they are getting hitched on Valentine's Day next year. 

    Chitraloka wishes the couple a happy married life.

  • Matte Udbhava Review: Chitraloka Rating 3.5/ 5*

    matte udbhava movie review

    The 1990s superhit film 'Udbhava' by the veteran filmmaker Kodlu Ramakrishna returns with a fresh look to it. The continued saga is a treat to the fans of Udbhava, as it keeps the original essence intact while delivering an entirely new package to the present generation audience.

    With Rangayana Raghu in the lead along with the talented Pramod and Milana Nagaraj, Matte Udbhava kick starts with the idol of Lord Ganesha emerging yet again for a rib tickling comedy. The director's take on Matte Udbhava is a hilarious one but also carries an important message to the audience and to the society at large.

    Rangayna Raghu as priest and his son played by Pramod make use of the idol to swindle people, which ensures for an edge of the seat entertainment. The humorous twists and turns is a perfect recipe for this retake on the classic movie. Milana plays her part beautifully.

    Further, the movie is also inspired by real life incidents in a lighter vein such as black money in a mutt, a struggling actress making her efforts to get into politics, building mafia and more.

    Along with top-notch performance, it is the Kodlu Ramakrishna's narrative style which makes Matte Udbhava another must watch movie for the season. Expect entertainment plus some important message in a humorous way from this one. Go book your tickets at a theater near you for some real fun on the big screen

  • ಓ... ಮಿಲನ ನಾಗರಾಜ್..!

    milana nagraj in horro flick

    ಮಿಲನ ನಾಗರಾಜ್ ಇದೇ ಮೊದಲ ಬಾರಿಗೆ ಹಾರರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಹೆಸರು `ಓ'.  ಜೋಗಿ ಪ್ರೇಮ್ ಶಿಷ್ಯ ಮಹೇಶ್ ಅಮ್ಮಲಿದೊಡ್ಡಿ ನಿರ್ದೇಶನದ ಚಿತ್ರದಲ್ಲಿ ಮಿಲನ ನಾಗರಾಜ್ ನಾಯಕಿ.

    ನಮ್ ದುನಿಯಾ ನಮ್ ಸ್ಟೈಲ್ ಚಿತ್ರದಿಂದ ಬೆಳ್ಳಿತೆರೆಗೆ ಬಂದ ಮಿಲನ ನಾಗರಾಜ್, ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಅಕ್ಕ-ತಂಗಿಯ ಕಥೆ ಇದೆ. ನನ್ನ ಜೊತೆ ಅಮೃತಾ ಅಯ್ಯಂಗಾರ್ ಎಂಬ ಮತ್ತೊಬ್ಬ ನಾಯಕಿಯಿದ್ದಾರೆ. ಇಬ್ಬರಿಗೂ ಸಮಾನ ಅವಕಾಶವಿದೆ ಎಂದಿದ್ದಾರೆ ಮಿಲನ ನಾಗರಾಜ್.

    ಕಿರಣ್ ತಲಕಾಡು ನಿರ್ದೇಶನದ ಚಿತ್ರದ ಒಂದು ಹಂತದ ಚಿತ್ರೀಕರಣ ಈಗಾಗಲೇ ಮುಗಿದಿದೆ.

  • ಗ್ಲಾಮರ್ ಗೊಂಬೆ ಮಿಲನ ನಾಗರಾಜ್ ರಾಜಕಾರಣಿಯಾದಾಗ..

    milana nagraj as politician in matte udbhava

    ಮಿಲನ ನಾಗರಾಜ್, ಗ್ಲಾಮರ್ ಗೊಂಬೆ. ತಾವೊಬ್ಬ ಉತ್ತಮ ನಟಿ ಎಂದು ಸಾಬೀತು ಮಾಡಿರುವ ಮಿಲನ ಈಗ ರಾಜಕಾರಣಿಯಾಗಿದ್ದಾರೆ. ವೃತ್ತಿಯ ಆರಂಭದ ದಿನಗಳಲ್ಲೇ ಪಾಲಿಟಿಕ್ಸ್‍ಗೆ ಬಂದ್ರಾ ಎನ್ನಬೇಡಿ, ಅವರು ಮಾಡಿರುವುದೇ ರಾಜಕಾರಣಿಯ ಪಾತ್ರ. ಮತ್ತೆ ಉದ್ಭವ ಚಿತ್ರದಲ್ಲಿ.

    ರಾಜಕೀಯದಲ್ಲಿ ನನಗೆ ಆಸಕ್ತಿಯೇ ಇಲ್ಲ. ರಾಜಕೀಯ ಸುದ್ದಿಗಳನ್ನೂ ಓದಲ್ಲ ಎನ್ನುವ ಮಿಲನಾಗೆ, ಪಾತ್ರದಲ್ಲಿ ನಟಿಸಿದ ಮೇಲೆ ಗೊತ್ತಾಗಿರೋದು ಏನಂದ್ರೆ, ರಾಜಕೀಯ ಸುಲಭ ಅಲ್ಲ. ಅವರಿಗೆ ಸಿಕ್ಕಾಪಟ್ಟೆ ಪ್ರೆಶರ್ ಇರುತ್ತೆ ಅನ್ನೋ ಸತ್ಯ.

    ಇನ್ನು ಮಿಲನಾಗೆ ಜನರ ರಾಜಕೀಯವೂ ಅರ್ಥವಾಗಲ್ಲ. ಜನರೂ ಹೇಗಾಗಿದ್ದಾರೆ ಅಂದ್ರೆ, ತಾವು ಇಷ್ಟಪಡುವ ವ್ಯಕ್ತಿ, ಪಕ್ಷ ಏನೇ  ಮಾಡಿದರೂ ವಹಿಸಿಕೊಂಡು ಬರ್ತಾರೆ. ಎದುರಾಳಿಯವರು ಏನೇ ಮಾಡಿದ್ರೂ ವಿರೋಧಿಸ್ತಾರೆ. ಸರಿ, ತಪ್ಪು ಅನ್ನೋದನ್ನ ನೋಡಲ್ಲ. ನಾವು ನಂಬುವ ರಾಜಕಾರಣಿ, ಪಕ್ಷ ಯಾವಾಗಲೂ 100% ಸರಿ ಮಾಡುತ್ತೆ ಅಂತಾ ನಂಬೋದು ತಪ್ಪು ಎನ್ನುತ್ತಾರೆ ಮಿಲನಾ. ಸ್ಸೋ.. ಹೀಗಿರುವ ಮಿಲನ, ರಾಜಕೀಯಕ್ಕೆ ಸೂಟ್ ಆಗಲ್ಲ ಅನ್ನೋದು ಕನ್‍ಫರ್ಮ್ ಆಯ್ತು.

    ಅಂದಹಾಗೆ ಮಿಲನ ರಾಜಕಾರಣಿಯಾಗಿರೋ ಮತ್ತೆ ಉದ್ಭವ ಇದೇ ವಾರ ರಿಲೀಸ್ ಆಗುತ್ತಿದೆ. ಕೂಡ್ಲು ರಾಮಕೃಷ್ಣ ನಿರ್ದೇಶನದ ಚಿತ್ರದಲ್ಲಿ ಪ್ರಮೋದ್, ರಂಗಾಯಣ ರಘು ನಟಿಸಿದ್ದಾರೆ.

  • ಡಾರ್ಲಿಂಗ್ ಕೃಷ್ಣ ಮತ್ತೆ ಮದುವೆಗೆ ರೆಡಿ..!

    ಡಾರ್ಲಿಂಗ್ ಕೃಷ್ಣ ಮತ್ತೆ ಮದುವೆಗೆ ರೆಡಿ..!

    2020ರಲ್ಲಷ್ಟೇ ಮದುವೆಯಾಗಿತ್ತು. ನಿಧಿಮಾ ಜೊತೆ. ಆದಿತ್ಯ ಮತ್ತು ನಿಧಿಮಾ ಲವ್ ಪ್ರೇಕ್ಷಕರಿಗೂ ಇಷ್ಟವಾಗಿತ್ತು. ವಿಧಿಯಾಟ.. ನಿಧಿಮಾ ದೂರವಾದಳು. ನಿಧಿಮಾ ದೂರವಾಗಿ 2 ವರ್ಷ ಕಳೆಯುವಷ್ಟರ ಹೊತ್ತಿಗೆ ಆದಿತ್ಯನಿಗೆ ಮತ್ತೆ ಮದುವೆಯಾಗೋ ಮನಸ್ಸಾಗಿದೆ. ಈ ಬಾರಿ ಯಾರ ಮೇಲೆ ಲವ್ ಆಗಿದೆ? ನಿಧಿಮಾ ಅಂದ್ರೇನೇ ಪ್ರೀತಿ ಅನ್ನೋ ಆದಿ, ಇನ್ನೊಬ್ಬಳಲ್ಲಿ ಪ್ರೀತಿ ಹುಡುಕಿದನಾ?

    ಹೀಗೆ ಹಲವು ಪ್ರಶ್ನೆಗಳಿಗೆ ಉತ್ತರ ಹೇಳೋಕೆ ಬರುತ್ತಿದೆ ಲವ್ ಮಾಕ್‍ಟೇಲ್ 2. ಒನ್ಸ್ ಎಗೇನ್ ಇದು ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಕನಸಿನ ಇನ್ನೊಂದು ಸಿನಿಮಾ. ಕಥೆ, ಚಿತ್ರಕಥೆ, ನಿರ್ದೇಶನ ಕೃಷ್ಣ ಅವರದ್ದೇ. ಈ ಬಾರಿ ನಕುಲ್ ಅಭ್ಯಂಕರ್ ಮ್ಯೂಸಿಕ್ ಹೊಣೆ ಹೊತ್ತಿದ್ದರೆ, ಸಾಹಿತ್ಯ ರಾಘವೇಂದ್ರ ಕಾಮತ್ ಅವರದ್ದು. ಮಿಲನಾ ಅವರಿಂದ ಬೈಸ್ಕೊಂಡ್ ಮೇಲೆ ಟ್ರೇಲರ್ ರಿಲೀಸ್ ಆಗಿದೆ. ಮೊದಲ ಭಾಗದಂತೆಯೇ ಒಂದಿಷ್ಟು ತರಲೆ, ತಮಾಷೆಗಳ ಜೊತೆಯಲ್ಲಿ ಸಾಗುವ ಕಥೆಯಲ್ಲಿ ಭಾವುಕತೆಯನ್ನು ತುಂಬಿ ತುಳುಕಿಸಿರೋ ಸುಳಿವು ಕೊಟ್ಟಿದ್ದಾರೆ ಕೃಷ್ಣ.

  • ಪೃಥ್ವಿ ಅಂಬರ್.. ಮಿಲನಾ ನಾಗರಾಜ್ ಫಾರ್ ರಿಜಿಸ್ಟ್ರೇಷನ್

    ಪೃಥ್ವಿ ಅಂಬರ್.. ಮಿಲನಾ ನಾಗರಾಜ್ ಫಾರ್ ರಿಜಿಸ್ಟ್ರೇಷನ್

    ಲವ್ ಮಾಕ್‍ಟೇಲ್ ಖ್ಯಾತಿಯ ಮಿಲನಾ ನಾಗರಾಜ್, ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಇಬ್ಬರೂ ಫಾರ್ ರಿಜಿಸ್ಟ್ರೇಷನ್‍ಗೆ ರೆಡಿಯಾಗಿದ್ದಾರೆ. ಇದು ಅವರಿಬ್ಬರೂ ನಟಿಸುತ್ತಿರುವ ಹೊಸ ಸಿನಿಮಾ. ಚಿತ್ರಕ್ಕೆ ಇತ್ತೀಚೆಗಷ್ಟೇ ಮುಹೂರ್ತ ನೆರವೇರಿದೆ.

    ನವೀನ್ ದ್ವಾರಕನಾಥ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಇನ್ನೊಂದು ಅಟ್ರ್ಯಾಕ್ಷನ್ ಸುಧಾರಾಣಿ. ಪ್ರಮುಖ ಪಾತ್ರ ಮಾಡುತ್ತಿರುವ ತಬಲಾ ನಾಣಿ, ಚಿತ್ರಕ್ಕೆ ಸಂಭಾಷಣೆಯನ್ನೂ ಬರೆದಿರುವುದು ಇನ್ನೊಂದು ಹೈಲೈಟ್.

    ನವೀನ್ ರಾವ್ ಎಂಬುವವರು ಈ ಚಿತ್ರ ನಿರ್ಮಿಸುತ್ತಿದ್ದು, ಸುಧಾ ಬೆಳವಾಡಿ, ಬಾಬು ಹಿರಣ್ಣಯ್ಯ ಮೊದಲಾದವರು ಚಿತ್ರದಲ್ಲಿ ನಟಿಸುತ್ತಿದ್ದಾರೆ.

     

  • ಮತ್ತೆ ಲವ್ ಬಡ್ರ್ಸ್ ಆದ ಲವ್ ಮಾಕ್ಟೇಲ್ ಜೋಡಿ

    ಮತ್ತೆ ಲವ್ ಬಡ್ರ್ಸ್ ಆದ ಲವ್ ಮಾಕ್ಟೇಲ್ ಜೋಡಿ

    ಲವ್ ಮಾಕ್ಟೇಲ್ ಚಿತ್ರದ ಮೂಲಕ ತೆರೆಯ ಮೇಲೆ ಭರ್ಜರಿ ಜೋಡಿಯಾದವರು ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ. ತೆರೆಯ ಮೇಲೆ ಹಾಗೂ ರಿಯಲ್ ಲೈಫಿನಲ್ಲಿ ಎರಡೂ ಕಡೆ ಮುದ್ದು ಮುದ್ದು ಜೋಡಿಯಾದ ಮಿಲನಾ ಮತ್ತು ಕೃಷ್ಣ ಈಗ ಮತ್ತೊಮ್ಮೆ ಒಂದಾಗಿದ್ದಾರೆ. ಲವ್ ಬಡ್ರ್ಸ್ ಆಗಿ.

    ಲವ್ ಮಾಕ್ಟೇಲ್ ಮತ್ತು ಲವ್ ಮಾಕ್ಟೇಲ್ 2ನಲ್ಲಿ ಇಬ್ಬರೂ ಜೊತೆಯಾಗಿದ್ದರು. ಮೊದಲ ಚಿತ್ರ ಪ್ರೇಕ್ಷಕರ ಮನಸ್ಸನ್ನೂ, 2ನೇ ಚಿತ್ರ ಬಾಕ್ಸಾಫೀಸನ್ನೂ ಗೆದ್ದಿತ್ತು. ಜೊತೆಗೆ ಇವರಿಬ್ಬರೂ ನಟಿಸಿದ ಇನ್ನೊಂದು ಚಿತ್ರ ಮಿ.ಬ್ಯಾಚುಲರ್. ಲವ್ ಮಾಕ್ಟೇಲ್ ಚಿತ್ರಕ್ಕೆ ಹೋಲಿಸಿದರೆ ಬ್ಯಾಚುಲರ್ ದೊಡ್ಡ ಮಟ್ಟದ ಸದ್ದನ್ನೇನೂ ಮಾಡಲಿಲ್ಲ. ಈಗ ಈ ಇಬ್ಬರೂ ಒಂದಾಗಿದ್ದಾರೆ.

    ಆದರೆ ಈ ಬಾರಿ ಇವರಿಬ್ಬರನ್ನೂ ಒಂದುಗೂಡಿಸಿರುವುದು ಪಿ.ಸಿ.ಶೇಖರ್. ಡಿಫರೆಂಟ್ ಕಥೆಗಳನ್ನು ಅಷ್ಟೇ ಡಿಫರೆಂಟ್ ಆಗಿ ಹೇಳುವ ಪಿ.ಸಿ.ಶೇಖರ್ ಈ ಇಬ್ಬರನ್ನೂ ಅಷ್ಟೇ ವಿಭಿನ್ನವಾಗಿ ಪ್ರೆಸೆಂಟ್ ಮಾಡಿದ್ದಾರೆ. ಚಿತ್ರದ ಟೀಸರ್ ಅದೇ ಕಾರಣಕ್ಕೆ ಇಷ್ಟವಾಗುತ್ತಿದೆ. ಕಡ್ಡಿಪುಡಿ ಚಂದ್ರು ನಿರ್ಮಾಣದ ಲವ್ ಬಡ್ರ್ಸ್ ಚಿತ್ರದ ಟೀಸರ್ ರಿಲೀಸ್ ಮಾಡಿದ್ದು ವಿಜಯ್ ರಾಘವೇಂದ್ರ ಮತ್ತು ಅಜೇಯ್ ರಾವ್.

    ಲವ್ ಬಡ್ರ್ಸ್ ಚಿತ್ರದಲ್ಲಿ ಕೃಷ್ಣ ದೀಪಕ್ ಆಗಿ, ಮಿಲನಾ ಪೂಜಾ ಆಗಿ ನಟಿಸುತ್ತಿದ್ದಾರೆ. ಇಬ್ಬರಿಗೂ ಕಥೆ ಸಖತ್ ಇಷ್ಟವಾಗಿದೆ. ಇದು ಕೇವಲ ಲವ್ ಸ್ಟೋರಿ ಅಲ್ಲ ಅನ್ನೋದು ಕೃಷ್ಣ ಮತ್ತು ಮಿಲನಾ ಅವರ ಮಾತಷ್ಟೇ ಅಲ್ಲ, ನಿರ್ದೇಶಕರದ್ದೂ ಅದೇ ಕಥೆ. ನನಗೆ ಒಂದೇ ಜಾನರ್ ಸಿನಿಮಾ ಮಾಡೋಕೆ ಬರಲ್ಲ. ಹೀಗಾಗಿ ಲವ್ ಬಡ್ರ್ಸ್ ಕಥೆ ಸಿದ್ಧ ಮಾಡಿದೆ. ಇಲ್ಲಿ ಪ್ರೀತಿಯ ಜೊತೆಗೆ ಬೇರೆ ಬೇರೆ ವಿಷಯಗಳೂ ಇವೆ ಎನ್ನುತ್ತಾರೆ ಶೇಖರ್.

    ಕೃಷ್ಣ ಸಖತ್ ಸ್ಟೈಲಿಷ್ ಆಗಿ ಕಾಣಿಸುತ್ತಿದ್ದರೆ, ಮಿಲನಾ ಕಣ್ಣಿಗೆ ಕನ್ನಡಕ ಹಾಕಿಕೊಂಡು ಇಂಟಲೆಕ್ಚುವಲ್ ಆಗಿ ಕಾಣಿಸುತ್ತಿದ್ದಾರೆ. ಆತ ಸಾಫ್ಟ್‍ವೇರ್ ಮತ್ತು ಟ್ರಾವೆಲ್‍ನಲ್ಲಿ ಖುಷಿ ಕಾಣುವ ಹುಡುಗ. ಈಕೆ ಸ್ವತಂತ್ರ ಮನೋಭಾವದ ಹೋರಾಟದ ಹುಡುಗಿ. ಇವರಿಬ್ಬರೂ ಹೇಗೆ ಪ್ರಣಯದ ಪಕ್ಷಿಗಳಾಗ್ತಾರೆ..? ಒಮ್ಮೆ ಟೀಸರ್ ನೋಡಿಬಿಡಿ..

  • ಮಿಲನ ನಾಗರಾಜ್ ಪ್ರೊಡ್ಯೂಸರ್, ಮದರಂಗಿ ಕೃಷ್ಣ ಡೈರೆಕ್ಟರ್

    milana nagraj turns producer

    ಸಿನಿಮಾ, ಜಾಹೀರಾತುಗಳಲ್ಲಿ ಬ್ಯುಸಿಯಾಗಿರುವ ನಟಿ ಮಿಲನ ನಾಗರಾಜ್ ಈಗ ಸ್ವತಃ ನಿರ್ಮಾಪಕಿಯೂ ಆಗಿದ್ದಾರೆ. ಲವ್ ಮಾಕ್ಟೈಲ್ ಚಿತ್ರದ ಮೂಲಕ ನಿರ್ಮಾಪಕಿಯಾಗುತ್ತಿದ್ದಾರೆ ಮಿಲನ ನಾಗರಾಜ್. ಈ ಚಿತ್ರಕ್ಕೆ ಮದರಂಗಿ ಕೃಷ್ಣ ನಾಯಕ ಮತ್ತು ನಿರ್ದೇಶಕ.

    ಈ ಚಿತ್ರದಲ್ಲಿ ನಾನು ಐಟಿ ಹುಡುಗಿ. ಈ ಜನರೇಷನ್‍ನ ಮನೋಭಾವದ ಹುಡುಗಿಯ ಪಾತ್ರ. ಕಥೆ ಇಷ್ಟವಾಯಿತು. ಹಾಗಾಗಿ ನಿರ್ಮಾಪಕಿಯೂ ಆದೆ ಎನ್ನುವ ಮಿಲನ ನಾಗರಾಜ್ ಸದ್ಯಕ್ಕೆ ಓ, ಮತ್ತೆ ಉದ್ಭವ, ಚತುಷ್ಪದ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

     

  • ಲವ್ ಬಡ್ರ್ಸ್ ಕೃಷ್ಣ-ಮಿಲನ ಮಧ್ಯೆ ಸಂಯುಕ್ತ ಹೊರನಾಡು

    ಲವ್ ಬಡ್ರ್ಸ್ ಕೃಷ್ಣ-ಮಿಲನ ಮಧ್ಯೆ ಸಂಯುಕ್ತ ಹೊರನಾಡು

    ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಇಬ್ಬರೂ ಲವ್ ಮಾಕ್ಟೇಲ್ ನಂತರ ಮತ್ತೊಮ್ಮೆ ಜೊತೆಯಾಗಿರುವುದು ಪಿ.ಸಿ.ಶೇಖರ್ ಚಿತ್ರದಲ್ಲಿ. ಲವ್ ಬಡ್ರ್ಸ್ ಆ ಚಿತ್ರದ ಟೈಟಲ್. ಸಿನಿಮಾ ಇನ್ನೇನು ಶುರುವಾಗುವ ಹಂತದಲ್ಲಿದೆ.

    ಆದರೆ ಇದು ಲವ್ ಟ್ರಯಾಂಗಲ್ ಅಲ್ಲ. ಮಿಲನ ಮತ್ತು ಸಂಯುಕ್ತಾ ಇಬ್ಬರಿಗೂ ಒಳ್ಳೆಯ ಸ್ಪೇಸ್ ಇದೆ. ನಟನೆಗೆ ಅವಕಾಶವಿದೆ ಎಂದಿದ್ದಾರೆ ಪಿ.ಸಿ.ಶೇಖರ್.

    ನನ್ನದು ಮಾಯಾ ಅನ್ನೋ ಪಾತ್ರ. ಆಕೆಯನ್ನು ನೀವು ಪ್ರೀತಿಸದೆ ಇರಲಾರಿರಿ ಎನ್ನುತ್ತಾರೆ ಸಂಯುಕ್ತಾ ಹೊರನಾಡು. ಇದೊಂದು ಪ್ರೇಮಕಥೆ. ಈ ಲವ್ ಸ್ಟೋರಿಯಲ್ಲಿ ಎಲ್ಲ ಸಂಬಂಧಗಳನ್ನೂ ಪ್ರೀತಿಸಬೇಕು ಎನ್ನುವ ಕಥೆಯಿದೆ ಅನ್ನೋದು ಹೊರನಾಡು ಹೇಳುವ ಮಾತು. ಪಿ.ಸಿ.ಶೇಖರ್ ಇದೇ ಮೊದಲ ಬಾರಿಗೆ ಲವ್ ಸ್ಟೋರಿ ಹೇಳೋಕೆ ಹೊರಟಿದ್ದಾರೆ. ಹೀಗಾಗಿ ಕುತೂಹಲ ಹೆಚ್ಚೇ ಇದೆ.

  • ಲವ್ ಮಾಕ್‍ಟೇಲ್ 2 ಟ್ರೇಲರ್ ರಿಲೀಸ್ ಮಾಡೋಕೆ ಇಷ್ಟೊಂದ್ ಜಗಳಾನಾ?

    ಲವ್ ಮಾಕ್‍ಟೇಲ್ 2 ಟ್ರೇಲರ್ ರಿಲೀಸ್ ಮಾಡೋಕೆ ಇಷ್ಟೊಂದ್ ಜಗಳಾನಾ?

    ಲವ್ ಮಾಕ್‍ಟೇಲ್ 2 ಸಿನಿಮಾ ರೆಡಿಯಾಗಿದೆ. ರಿಲೀಸ್ ಮಾಡ್ತೀವಿ ಅಂತಾ ಹೇಳ್ಕೊಂಡ್ ಬಂದಿರೋ ಕೃಷ್ಣ ಇನ್ನು ಟ್ರೇಲರ್ ರಿಲೀಸ್ ಮಾಡಿಲ್ಲ. ಅದು ನಿಧಿಮಾಗೆ ತಂದಿರೋ ಕೋಪ ಅಷ್ಟಿಷ್ಟಲ್ಲ. ಥೇಟು ಲವ್ ಮಾಕ್‍ಟೇಲ್ ಸ್ಟೈಲ್‍ನಲ್ಲೇ ಕೃಷ್ಣನಿಗೆ ಕ್ಲಾಸ್ ತಗೊಂಡಿದ್ದಾರೆ ಮಿಲನಾ ನಾಗರಾಜ್.

    ಅಫ್‍ಕೋರ್ಸ್.. ಅದು ಟ್ರೇಲರ್ ರಿಲೀಸ್ ಮಾಡೋಕೆ ಬಿಟ್ಟಿರೋ ಟ್ರೇಲರ್ ತರಾ ಕಾಣಿಸಿದ್ರೆ ಅಚ್ಚರಿಯಿಲ್ಲ. ಲವ್ ಮಾಕ್‍ಟೇಲ್ ನಲ್ಲಿ ನಿಧಿಮಾ ಸತ್ತು ಹೋಗಿದ್ದಾರೆ. 2ನೇ ಭಾಗದಲ್ಲಿ ಅವರು ನೆನಪಾಗಿ ಇರ್ತಾರೆ. ಕಥೆ ಹೊಸದಾಗಿಯೇ ಶುರುವಾಗಲಿದೆ. ಹೀಗಿರೋವಾಗ ಕಥೆ ಹೇಗಿರಬಹುದು ಅನ್ನೋ ಕುತೂಹಲವಂತೂ  ಇದೆ. ಕೃಷ್ಣ ಅವರಿಗೆ ಲವ್ ಮಾಕ್‍ಟೇಲ್‍ನಲ್ಲಷ್ಟೇ ಅಲ್ಲ, ರಿಯಲ್ ಲೈಫಲ್ಲೂ ಹೀರೋಯಿನ್ ಆಗಿರೋ ಮಿಲನಾ, ಚಿತ್ರದ ನಿರ್ಮಾಪಕಿಯೂ ಹೌದು.

    ಈಗಾಗಲೇ ಸಂಚಾರಿಯಾಗು ನೀ, ನಿಂದೇನೇ ಜನುಮಾ, ಇದೇ ಸ್ವರ್ಗ ಹಾಗೂ ಈ ಪ್ರೇಮ ಹಾಡುಗಳನ್ನ ಬಿಟ್ಟಿರೋ ಕೃಷ್ಣ, ಟ್ರೇಲರ್‍ನ್ನೂ ಶೀಘ್ರದಲ್ಲೇ ರಿಲೀಸ್ ಮಾಡೋ ಭರವಸೆಯನ್ನಂತೂ ಕೊಟ್ಟಿದ್ದಾರೆ. ಯಾವಾಗ..? ವೇಯ್ಟ್..

  • ಹೊಸಮನೆಗೆ ಕೃಷ್ಣಮಿಲನ

    ಹೊಸಮನೆಗೆ ಕೃಷ್ಣಮಿಲನ

    ಸ್ಯಾಂಡಲ್‍ವುಡ್‍ನ ಕ್ಯೂಟ್ ಕ್ಯೂಟ್ ಜೋಡಿಗಳಲ್ಲೊಂದು ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಜೋಡಿ. ಅದರಲ್ಲಿಯೂ ಲವ್ ಮಾಕ್ಟೇಲ್ ಚಿತ್ರದ ನಂತರ ಇವರಿಬ್ಬರ ಜೋಡಿಗೊಂದು ಸೆನ್ಸೇಷನ್ ಕ್ರಿಯೇಟ್ ಆಗಿದೆ. ಕಳೆದ ವರ್ಷ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಜೋಡಿ ಇದೀಗ ಹೊಸ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

    ಕ್ರಿಸ್‍ಮಿ ನೆಸ್ಟ್ ಅನ್ನೋದು ಹೊಸ ಮನೆಯ ಹೆಸರು. ಕೃಷ್ಣ ಮತ್ತು ಮಿಲನ ಅವರ ಹೆಸರಿನ ಮೊದಲ ಅಕ್ಷರಗಳನ್ನೇ ತೆಗೆದುಕಕೊಂಡು ಮನೆಗೆ ನಾಮಕರಣ ಮಾಡಿದ್ದಾರೆ. ಗೂಡಿನಂತೇನೂ ಇಲ್ಲ. ಅರಮನೆಯಂತೆಯೇ ಇದೆ. ಆದರೆ ಅದು ಪ್ರೀತಿಯ ಗೂಡು ಕೂಡಾ ಹೌದು.