ರಜನಿಕಾಂತ್ ಅವರು ಡಾ.ರಾಜ್ ಮನೆಯ ಸದಸ್ಯರಿದ್ದಂತೆ. ಶಿವಣ್ಣ, ಪುನೀತ್ ಅವರ ಹಲವು ಚಿತ್ರಗಳ ಗೆಲುವಿನ ಸಂಭ್ರಮದಲ್ಲಿ ಜೊತೆಯಾಗಿದ್ದಾರೆ. ಅಷ್ಟೇ ಅಲ್ಲ, ಡಾ.ರಾಜ್ ಮನೆಯ ಯಾವುದೇ ಸಮಾರಂಭವಿರಲಿ, ರಜನಿಕಾಂತ್ ತಪ್ಪುವುದಿಲ್ಲ. ಅಂತಹ ರಜನಿಕಾಂತ್ ನನಗೆ ಚಿಕ್ಕಪ್ಪನವರ ಸಮಾನ ಎಂದಿದ್ದಾರೆ ಶಿವಣ್ಣ.
ಒಂದು ದಿನ ನನ್ನ ತಂದೆ ಶಬರಿಮಲೆಗೆ ಹೋದಾಗ ರಜನಿ ನಾನು ಸರ್ ಅವರ ಹಿಡಿದುಕೊಂಡು ಹೋಗಿದ್ದೆ. ಬಾಲ್ಯದಲ್ಲಿ ಕೈ ಹಿಡಿದು ಅಂದು ತೋರಿದ ಪ್ರೀತಿಯನ್ನು ಈಗಲೂ ತೋರಿಸುತ್ತಾರೆ. ಅವರು ನನ್ನ ಚಿಕ್ಕಪ್ಪನ ಹಾಗೆ ಎಂದು ಹೇಳಿದರೆ ತಪ್ಪಾಗದು ಎಂದಿದ್ದಾರೆ ಶಿವಣ್ಣ. ರಜನಿಕಾಂತ್ ಅವರ ಜೈಲರ್ ಚಿತ್ರ ರಿಲೀಸ್ ಆಗುತ್ತಿದ್ದು, ಆ ಚಿತ್ರದ ಈವೆಂಟ್‍ನಲ್ಲಿ ಈ ಕಥೆ ಹೇಳಿದ್ಧಾರೆ ಶಿವಣ್ಣ.
ಇದೇ ಮೊದಲ ಬಾರಿಗೆ ರಜನಿ ಜೊತೆ ಶಿವಣ್ಣ ಆಕ್ಟ್ ಮಾಡಿದ್ದಾರೆ. ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಿವಣ್ಣ ನಟಿಸಿರುವುದರಿಂದ ಕನ್ನಡಿಗರಿಗೂ ಈ ಕೂಡ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಈಗಾಗಲೇ ಶಿವರಾಜ್ ಕುಮಾರ್ ಲುಕ್ ರಿಲೀಸ್ ಆಗಿದ್ದು ಅಭಿಮಾನಿಗಳ ಹೃದಯ ಗೆದ್ದಿದೆ.
ಬೀಸ್ಟ್ ಚಿತ್ರೀಕರಣದ ನಂತರ ನೆಲ್ಸನ್ ನನಗೆ ಕರೆ ಮಾಡಿದರು. ನಂತರ ನಾನು ವಿಜಯ್ ಸರ್ ಅವರನ್ನು ಭೇಟಿಯಾದೆ ಎಂದಿರುವ ಶಿವಣ್ಣ, ಚೆನ್ನೈ ಜೊತೆಗಿನ ತಮ್ಮ ನೆನಪನ್ನೂ ಹೇಳಿಕೊಂಡಿದ್ದಾರೆ. ನಾನು ಹುಟ್ಟಿದ್ದು, ಬೆಳೆದಿದ್ದು, ಓದಿದ್ದು ಚೆನ್ನೈನಲ್ಲಿ. ಆಕ್ಟಿಂಗ್ ಕೋರ್ಸ್ ಮಾಡಿದ್ದು ಇಲ್ಲೇ. ಚೆನ್ನೈ ಎಂದರೆ ಎಮೋಷನಲ್ ಸ್ಥಳ. ನನಗೆ ಚೆನ್ನೈ ತುಂಬಾ ಇಷ್ಟ' ಎಂದು ಹೇಳಿದ್ದಾರೆ.
ಜೈಲರ್ ರಜನಿಕಾಂತ್ ನಟಿಸಿರುವ ಸಿನಿಮಾ. ರಜನಿಕಾಂತ್ ಜೊತೆ ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಚಿತ್ರಗಳ ಸ್ಟಾರ್ ನಟರು ನಟಿಸಿದ್ದಾರೆ. ಶಿವಣ್ಣ ಅವರಷ್ಟೇ ಅಲ್ಲ, ಬಾಲಿವುಡ್ ಸ್ಟಾರ್ ಜಾಕಿ ಶ್ರಾಫ್, ಮಲಯಾಳಂ ಸ್ಟಾರ್ ಮೋಹನ್ ಲಾಲ್, ರಮ್ಯಾ ಕೃಷ್ಣ, ಯೋಗಿ ಬಾಬು ಅವರೆಲ್ಲ ಇದ್ದಾರೆ. ತಮನ್ನಾ ಭಾಟಿಯಾ ಹೀರೋಯಿನ್.