` rajinikanth - chitraloka.com | Kannada Movie News, Reviews | Image

rajinikanth

  • HD Gangaraju Meet Rajinikanth and Kamal Hassan

    hd gangaraju, rajinikanth, kamal hassan image

    Siffc newly elected President HD Gangaraju visited Superstar Rajinikanth and Kamal Hassan and honored them in Chennai. Gangaraju will take charge from 27th July and he got elected unanimously. Sifcc election is on 26th and only for secretary post there will be election. Apart from that all the posts have been elected unanimously. 

    HD Gangaraju has made name as a distributor, especially of Tamil films in Karnataka. Those from Karnataka who have served as the presidents of SIFCC include KV Gupta, Bhakthavatsala, Ajantha Raju and KCN Chandrashekar. 

  • K Balachander Honored By Prakash Raj

    k balachander image

    "In a colorful gala function Kannadiga Prakash Rai has received the applaud from superstar Rajanikanth as 'Hats Off' for having given an excellent tribute to mentor KB. KB himself has given life to so many. Now also he gave the credit for Vidyasagar the music director for suggesting the title 'POI' he said to a rain of applause.

    Rajanikanth was speaking at the University Auditorium in Chennai on Sunday evening after the receiving the first piece of CD of POI Tamil film from Dr. Kamal Hassan. Rajanikanth fittingly quoted from the Mahabharatha - Drona picking the students on his choice and another anecdote 'Nemmadhi' and Power, Prestige and Panam'.

    balachander_rajini_kamal.jpg

    Rajanikanth showed his brilliance time sense when the song on KB was played. When all were requested to stand up when the song is played KB also stood up. Noticing this quickly Rajanikanth requested KB to sit because it is a tribute to him. The superb actor Dr.Kamal Hassan was observing this move made by Rajanikanth.

    Dr.Kamal Hassan said he is a part of KB school and he is a student still today. Kbji after seeing the today's arrangement told that something happens to him in the stomach. This is only for one day it happens to him but persons like me whenever we see him we get that experience he lauded and said he is 'Raja Rishi'. He picks out the talent that is not known to us he said.

    The cynosure of all eyes KB in his address said he had come today because superstar Rajanikanth and Ulaganayaka Dr.Kamal Hassan are coming. I am not for this type of grandeur. I love simplicity. When I worked for this film and prepared the first copy of 'POI' I felt 10 years of age has come down. Now if the audience see the film and bless me I would be younger by another 10 years he disclosed. He also requested everyone to go home and hear the nine melodious tunes scored by Vidyasagar.

    'STRUPENDOUS' - I always quarrel with this Thai Nagesh because he speaks bad English. He was telling me after seeing the film that it is 'strupendous'. I told him there is no such English word. He was mixing stupendous and tremendous and telling 'Strupendous'. However the company of Nagesh and V.Balu is unforgettable in my life he said.

    Actress Jayanthi speaking in Tamil recounted her experience working in KB camp. She also expressed that she is anxious to see the film because KB has acted in the movie.

    Prakash Rai and Ramesh Aravind the two humble students conducted the whole show. Actor Shivakumar, Thai Nagesh, V.Balu also spoke on this occasion.

    The artistes who have acted in KB direction in Tamil, Kannada, Telugu and Mayalam languages were present on this occasion. From Kannada Ramesh Aravind, T.S.Nagabharana, actress Shruthi, Jayanthi, her daughter in law Anu Prabhakar, Lokanath, H.G.Somasekhara Rao, Sunderraj, Pramila Joshai, Sridhar and Ramakrishna were present.

    Six lovely tunes of KB's 101 films were picked on the occasion. KB has directed Kannada films like Sundaraswapnagalu, Eradu Rekhegalu, Benkiyalli Aralidha Hoovugalu etc. At least one song from Kannada should have been there. When Tamil, Telugu and Hindi films songs are part of the music program why not a Kannada song yaar! After all 101 direction of KB is also inclusive of Kannada films he has directed.

    The program took off by half an hour late. Prakash Raj's daughter lighted the lamp to mark the beginning for the colorful function.

    The arrangements made by Prakash Rai for Kannada film press that came from Bangalore to attend this function to Chennai was excellent.

  • Kaala's Release Trouble in State 

    rajanikanthkaala's release trouble in karnataka

    Will the Tamil film Kaala starring Rajinikanth release in Karnataka? It is facing a big crisis due to the actor and aspiring politician Rajinikanth's immature statements about the Cauvery water dispute. Two weeks ago Rajinikanth demanded that Karnataka should immediately release water from its dams to Tamil Nadu. The ground situation was different with the Cauvery water dams in Karnataka being dry. This led to criticism of Rajinikanth's statements by Kannada organisations in the state. It was seen as an attempt by an aspiring politician to gain brownie points without knowing the ground realities. 

    Rajinikanth's statements were in stark contrast to someone like another Tamil actor Simbu. Simbu's call for brotherhood during the same crisis had been well received and people in Karnataka also praised him. But Rajinikanth's statements has caused trouble for his film. Many exhibitors in Karnataka have voluntarily decided not to screen Rajinikanth's film in support of the Cauvery issue. 

    It is not just Kannada organisations but also politicians in Karnataka who are upset with Rajinikanth's statements. Chief Minister HD Kumarswamy replied to Rajinikanth saying the actor should visit Karnataka to see the facts before making comments.

  • Not Good to Release Kaala - Personal Opinion of CM

    HD Kumaraswamy - Rajinikanth Image

    Karnataka chief minister HD Kumarswamy has expressed his personal opinion that Tamil film Kaala should not be released in Karnataka considering the sensitive situation because of the Cauvery Water issue. After the High Court direction to the government and police to provide security to the film release in the state, the CM said that the court order will be followed. However he ventured to give his personal opinion also and pointed out that in a similar situation two years ago a Kannada film dubbed to Tamil was not allowed to be released in Tamil Nadu. Naagarahavu 2 was not allowed release during a similar Cauvery water issue. The CM thinks there is a similar situation and producers of Kaala should not risk releasing their film now.

    It may be recalled that the Cauvery issue has always been a sensitive issue. In 2001 three theatres were set afire way angry mobs during the Cauvery crisis as they were screening Tamil films. It is possible that the CM has been appraised by the police that there could be trouble. It is no secret that whenever there is a situation like this and if the courts are about to give any Cauvery release judgement the police informally tell theatres not to screen Tamil films that week.

  • Shivarajkumar in Chennai - Meets Rajinikanth, Kamal

    shivarajkumar, rajinikanth image

    Shivarajkumar and his wife Geetha are currently in Chennai to meet Rajinikanth. The couple have invited Rajinikanth, Kamal Hassan and other celebrities for the wedding of their daughter Nirupama scheduled for August 31.

    Rajinikanth is a family friend of the Rajkumar family and has not missed any auspicious functions. Shivarajkumar is become very busy overseeing the preparations for the wedding. The engagement ceremony was held a few months ago.

  • ಅಣ್ಣನ 80ನೇ ಹುಟ್ಟುಹಬ್ಬಕ್ಕೆ ರಜನಿಕಾಂತ್ ಚಿನ್ನದ ಅಭಿಷೇಕ

    ಅಣ್ಣನ 80ನೇ ಹುಟ್ಟುಹಬ್ಬಕ್ಕೆ ರಜನಿಕಾಂತ್ ಚಿನ್ನದ ಅಭಿಷೇಕ

    ರಜನಿಕಾಂತ್ ಅವರಿಗೀತ 72 ವರ್ಷ ವಯಸ್ಸು. ಈ ವಯಸ್ಸಿನಲ್ಲೂ ರಜನಿ ಅವರಿಗೆ ಸರಿಸಾಟಿಯಾಗುವ ಇನ್ನೊಬ್ಬ ಸ್ಟಾರ್ ಇಡೀ ಭಾರತೀಯ ಚಿತ್ರರಂಗದಲ್ಲಿ ಇಲ್ಲ. ಇನ್ನು ಅವರ ಅಣ್ಣನಿಗೆ ಎಷ್ಟು ವರ್ಷ ವಯಸ್ಸಿರಬಹುದು?  ರಜನಿಕಾಂತ್ ಅವರ ಅಣ್ಣ ಸತ್ಯನಾರಾಯಣ್ ಗಾಯಕ್‍ವಾಡ್. ಬೆಂಗಳೂರಿನಲ್ಲೇ ಇದ್ದಾರೆ. ಅವರಿಗೀಗ 80 ವರ್ಷ. ಸತ್ಯನಾರಾಯಣ್ ಅವರ 80ನೇ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದೆ ಅವರ ಕುಟುಂಬ.

    ಇವತ್ತು ನಾನು ಏನಾಗಿದ್ದೇನೆಯೋ.. ಅದಕ್ಕೆ ಅವನು ಕಾರಣ. ಬಂಗಾರದ ಮನುಷ್ಯನಿಗೆ ಬಂಗಾರದ ಮಳೆಯ ಅಭಿಷೇಕ ಎಂದು ಬರೆದುಕೊಂಡಿದ್ದಾರೆ ರಜನಿಕಾಂತ್. ಅಣ್ಣನ 80ನೇ ಹುಟ್ಟುಹಬ್ಬಕ್ಕೆ ರಜನಿಕಾಂತ್ ತಮ್ಮ ಪತ್ನಿ ಜೊತೆ ಬಂದಿದ್ದರು. ಇಡೀ ಕಾರ್ಯಕ್ರಮದಲ್ಲಿ ಜೊತೆಯಲ್ಲಿಯೇ ಇದ್ದ ರಜನಿ, ಅಣ್ಣನ ಮೇಲೆ ಚಿನ್ನದ ನಾಣ್ಯಗಳ ಅಭಿಷೇಕ ಮಾಡಿದರು.

  • ಅಣ್ಣಾತೆ ರಿಲೀಸ್`ಗೆ ರೆಡಿ.. ರಜನಿಕಾಂತ್ ಆಸ್ಪತ್ರೆಯಲ್ಲಿ..

    ಅಣ್ಣಾತೆ ರಿಲೀಸ್`ಗೆ ರೆಡಿ.. ರಜನಿಕಾಂತ್ ಆಸ್ಪತ್ರೆಯಲ್ಲಿ..

    ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಣ್ಣಾತೆ ಸಿನಿಮಾ ರಿಲೀಸ್ ಆಗೋಕೆ ರೆಡಿಯಾಗಿದೆ. ಇದೇ ದೀಪಾವಳಿಗೆ ತೆರೆ ಮೇಲೆ ಬರುತ್ತಿದೆ ಅಣ್ಣಾತೆ. ಎಸ್‍ಪಿಬಿ ಕೊನೆಯ ಬಾರಿಗೆ ಹಾಡಿರುವ ಹಾಡು ಇರೋದು ಇದೇ ಅಣ್ಣಾತೆಯಲ್ಲಿ. ರಜನಿ ಜೊತೆ ಲೇಡಿ ಸೂಪರ್ ಸ್ಟಾರ್ ನಯನತಾರಾ, ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್, ಖುಷ್‍ಬೂ ಸುಂದರ್ ಕೂಡಾ ಇದ್ದಾರೆ. ಅತ್ತ.. ಅಣ್ಣಾತೆ ರಿಲೀಸ್ ಸಂಭ್ರಮದಲ್ಲಿದ್ದರೆ, ಇತ್ತ ರಜನಿಕಾಂತ್ ಆಸ್ಪತ್ರೆ ಸೇರಿದ್ದಾರೆ.

    ರಜನಿಕಾಂತ್ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದ್ದು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇತ್ತೀಚೆಗೆ ಹೃದಯ ಸಂಬಂಧಿ ಸಮಸ್ಯೆಯಿಂದಾಗಿ ಇದೇ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದ ರಜನಿ, ಚಿಕಿತ್ಸೆ ಪಡೆದ ನಂತರ ಸುದೀರ್ಘ ವಿಶ್ರಾಂತಿ ಪಡೆದಿದ್ದರು. ಅಮೆರಿಕಕ್ಕೆ ತೆರಳಿ ಅಲ್ಲಿ ಚಿಕಿತ್ಸೆ ಪಡೆದಿದ್ದರು. ಇತ್ತೀಚೆಗಷ್ಟೇ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದಿದ್ದ ರಜನಿಕಾಂತ್ ಅಭಿಮಾನಿಗಳ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದರು.

    ರಜನಿ ಆರೋಗ್ಯದ ಬಗ್ಗೆ ಗಾಬರಿ ಬೇಡ. ಅವರು ಆರೋಗ್ಯವಾಗಿದ್ದಾರೆ ಎಂದು ಕಾವೇರಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

  • ಅಂಬಿ ಹೇರ್ ಕಟ್ ಗೆ ಹತ್ತು ಸಾವಿರ ಕೊಡೋರು! | ವಿಷ್ಣು ವಿಮಾನದಲ್ಲಿ ಕರೆಸಿ ಕಟ್ಟಿಂಗ್ ಮಾಡಿಸಿದ್ರು | Ambareesh

    ambareesh haircutting image

    ಬೆಂಗಳೂರಿನಲ್ಲಿರು ಟಚ್ ಆಫ್ ಕ್ಲಾಸ್ ಸಲೂನ್ ಬಹು ಜನಪ್ರಿಯ. ಸಿನಿಮಾ ರಂಗದವರಿಗೆ ಅಚ್ಚು ಮೆಚ್ಚಿನ ಜಾಗ. ಅಂಬರೀಶ್ ಅವರಿಗೆ ಹೇರ್ ಕಟ್ ಮಾಡಿದ್ರೆ ಅವರು ಕೊಡುತ್ತಿದ್ದದ್ದು ಬರಿ ಹತ್ತು ಸಾವಿರ!!. ಬೇರೆ ಊರಿನಲ್ಲಿದ್ರೆ ವಿಷ್ಣು ನಾರಾಯಣ್ ಅವರನ್ನ ಕರೆಸಿಕೊಳ್ಳುತ್ತಿದ್ದುದ್ದು ವಿಮಾನದಲ್ಲಿ!!... ಬೆಂಗಳೂುರಿಗೆ ಬಂದ್ರೆ ರಜನಿ ಕಟ್ಟಿಂಗ್ ಮಾಡಿಸುತ್ತಿದ್ದದ್ದೇ ನಾರಾಯಣ್ ಅವರ ಕೈಯಲ್ಲಿ.... 

     

  • ಆಕ್ಟಿಂಗ್ ಬಿಡ್ತಾರಂತೆ ತಲೈವಾ ರಜನಿಕಾಂತ್..!

    ಆಕ್ಟಿಂಗ್ ಬಿಡ್ತಾರಂತೆ ತಲೈವಾ ರಜನಿಕಾಂತ್..!

    ರಜನಿಕಾಂತ್. ಸದ್ಯಕ್ಕೆ ಇಂಡಿಯಾದಲ್ಲಿ ಸೂಪರ್ ಸ್ಟಾರ್ ಪದಕ್ಕೆ ಅನ್ವರ್ಥವಾಗಿರುವ ಏಕೈಕ ಸ್ಟಾರ್. ಮಾತೃಭಾಷೆ ಮರಾಠಿ. ಹುಟ್ಟಿದ್ದು-ಬೆಳೆದಿದ್ದು ಕನ್ನಡದ ನೆಲದಲ್ಲಿ. ಸ್ಟಾರ್ ಆಗಿ ಮೆರೆದಿದ್ದು ತಮಿಳುನಾಡಿನಲ್ಲಿ. ಹೀಗೆ ಜರ್ನಿ ಸಾಗಿಸಿರುವ ರಜನಿಕಾಂತ್ ಈಗ ಅಭಿನಯಕ್ಕೇ ಗುಡ್ ಬೈ ಹೇಳಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.

    ರಜನಿಕಾಂತ್ ಜೈಲರ್ ಸಿನಿಮಾ ಬಳಿಕ ಖ್ಯಾತ ನಿರ್ದೇಶಕ ಲೋಕೇಶ್ ಕನಗರಾಜ್ ಸಾರಥ್ಯ ಮೂಡಿ ಬರುತ್ತಿರುವ ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಲೋಕೇಶ್ ಕನಗರಾಜ್ ಸಿನಿಮಾ ಬಳಿಕ ರಜನಿಕಾಂತ್ ನಿವೃತ್ತಿ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ತಮಿಳು ಸಿನಿಮಾರಂಗದಲ್ಲಿ ವೈರಲ್ ಆಗಿದೆ.  ಲೋಕೇಶ್ ಕನಗರಾಜ್ ಅವರ ಜೊತೆಗಿನ ಸಿನಿಮಾವೇ ರಜನಿಕಾಂತ್ ಅವರ ಕೊನೆಯ ಸಿನಿಮಾ ಆಗಲಿದೆ ಎಂದ ನಿರ್ದೇಶಕ ಮಿಸ್ಕಿನ್ ಅವರ ಮಾತು ಇಷ್ಟೆಲ್ಲ ಸುದ್ದಿಯಾಗಲು ಕಾರಣ.

    ರಜನಿಕಾಂತ್ ಅವರಿಗೆ ಈಗ 73 ವರ್ಷ. ರಜನಿಕಾಂತ್ ಅವರು ಅಣ್ಣಾತೆ ಸಿನಿಮಾ ಮಾಡಿದಾಗಲೇ ನಿವೃತ್ತರಾಗಲಿದ್ದಾರೆ ಎಂಬ ಸುದ್ದಿಯಿತ್ತು. ಆದರೆ ಆಗಲಿಲ್ಲ. ಈಗ ಜೈಲರ್, ಲಾಲ್ ಸಲಾಂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಲೋಗೇಶ್ ಅವರ ಸಿನಿಮಾ ಕೂಡಾ ಇದೆ. ಇನ್ನೂ ಹಲವು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಸದ್ಯಕ್ಕಂತೂ ನಿವೃತ್ತಿ ಇಲ್ಲ ಎನ್ನುತ್ತಿವೆ ರಜನಿಕಾಂತ್ ಕುಟುಂಬದ ಮೂಲಗಳು. ಆದರೆ ಡಿಸೈಡ್ ಮಾಡೋದು ರಜನಿಕಾಂತ್.

  • ಕಾಂತಾರ ಮನೆಯಲ್ಲಿಯೇ ಜೈಲರ್ ಶೂಟಿಂಗ್

    ಕಾಂತಾರ ಮನೆಯಲ್ಲಿಯೇ ಜೈಲರ್ ಶೂಟಿಂಗ್

    ಮಂಗಳೂರಿಗೆ ಬಂದಿರುವ ಜೈಲರ್ ಟೀಂ ಈಗಾಗಲೇ ಚಿತ್ರೀಕರಣ ಆರಂಭಿಸಿದೆ. ಮಂಗಳೂರಿನ ಪಿಲಿಕುಳ ಗತ್ತಿನ ಮನೆಯಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ರಜನಿಕಾಂತ್ ಹಾಗೂ ಶಿವಣ್ಣ ನಡುವಿನ ಮಾತಿನ ಭಾಗಗಳ ಚಿತ್ರೀಕರಣ ನಡೆಯುತ್ತಿದೆ. ಅಂದಹಾಗೆ ಈಗ ಶೂಟಿಂಗ್ ಆಗುತ್ತಿರುವ ಮನೆ ಕಾಂತಾರ ಮನೆ ಎಂದೇ ಫೇಮಸ್ ಆಗಿರುವ ಮನೆ. ಕಾಂತಾರದಲ್ಲಿ ಆರಂಭದಲ್ಲಿ ಬರುವ ರಾಜ ನೆಲೆಸಿರುವ ಮನೆ ಬರುತ್ತದಲ್ಲ.. ಆ ಮನೆಯಲ್ಲಿಯೇ ಈಗ ಜೈಲರ್ ಚಿತ್ರೀಕರಣ ನಡೆಯುತ್ತಿರುವುದು.

    ಅಣ್ಣಾತ್ತೆ ನಂತರ ರಜನಿ ನಟಿಸುತ್ತಿರುವ ಚಿತ್ರ ಜೈಲರ್. ಸನ್ ಪಿಕ್ಚರ್ಸ್ ನಿರ್ಮಾಣದ ಈ ಚಿತ್ರದಲ್ಲಿ ಶಿವಣ್ಣ ಗೆಸ್ಟ್ ರೋಲ್ ಮಾಡುತ್ತಿದ್ದಾರೆ. ಮಲಯಾಲಂ ಸ್ಟಾರ್ ಮೋಹನ್ ಲಾಲ್ ಕೂಡಾ ನಟಿಸುತ್ತಿದ್ದಾರೆ. ಜಾಕಿ ಶ್ರಾಫ್, ತೆಲುಗು ಕಮಿಡಿಯನ್ ಸುನಿಲ್, ಯೋಗಿ ಬಾಬು ಕೂಡಾ ಇರುವ ಚಿತ್ರದಲ್ಲಿ ತಮನ್ನಾ ಹಾಗೂ ರಮ್ಯಕೃಷ್ಣ ಇಬ್ಬರೂ ನಟಿಸುತ್ತಿದ್ದಾರೆ.

    ರಜನಿ ಸರ್ ನನ್ನನ್ನು ಚಿಕ್ಕಂದಿನಿಂದಲೂ ಅಪ್ಪಾಜಿ ಕಾಲದಿಂದಲೂ ನೋಡಿದವರು. ಆದರೆ ಒಟ್ಟಿಗೇ ನಟಿಸುತ್ತಿರುವುದು ಇದೇ ಮೊದಲು. ನನ್ನನ್ನು ರಜನಿ ಸರ್ ತುಂಬಾ ಆತ್ಮೀಯತೆಯಿಂದ ಕರೆದುಕೊಂಡರು. ಅವರ ಜೊತೆ ನನಗಿದು ಮೊದಲ ಸಿನಿಮಾ ಎಂದು ಅನ್ನಿಸಲೇ ಇಲ್ಲ. ಇಲ್ಲಿ ಡ್ರಾಮಾ ಸೀಕ್ವೆನ್ಸ್ ಶೂಟಿಂಗ್ ನಡೆಯುತ್ತಿದೆ. ಫೈಟ್ಸ್ ಸೀನ್ ಅಲ್ಲ. ನಾನು ಈ ಚಿತ್ರದಲ್ಲಿ ವಿಲನ್ ಅಲ್ಲ, ಗೆಸ್ಟ್ ರೋಲ್ ಎಂದಿದ್ದಾರೆ ಸ್ವತಃ ಶಿವಣ್ಣ. ಆದರೆ ಚಿತ್ರದ ನನ್ನ ಪಾತ್ರವನ್ನು ತೆರೆಯ ಮೇಲೇ ನೋಡಿ. ಚೆನ್ನಾಗಿದೆ. ಈಗಲೇ ಹೇಳಿದರೆ ಏನು ಚೆಂದ ಎಂದಿದ್ದಾರೆ ಶಿವರಾಜ್ ಕುಮಾರ್. ಇದು ದಿಲೀಪ್ ನೆಲ್ಸನ್ ನಿರ್ದೇಶನದ ಸಿನಿಮಾ.

  • ಕಾಂತಾರ ಮೆಚ್ಚಿದ ರಜನಿಕಾಂತ್

    ಕಾಂತಾರ ಮೆಚ್ಚಿದ ರಜನಿಕಾಂತ್

    ಕಾಂತಾರ ಚಿತ್ರವನ್ನು ನೋಡಿ ಮೆಚ್ಚಿದವರ ಸಾಲಿಗೀಗ ಸೂಪರ್ ಸ್ಟಾರ್ ರಜನಿಕಾಂತ್ ಕೂಡಾ ಸೇರಿದ್ದಾರೆ. ಸಿನಿಮಾ ನೋಡಿ ರೋಮಾಂಚನವಾಯಿತು ಎಂದು ಬರೆದುಕೊಂಡಿದ್ದಾರೆ.

    ಎಲ್ಲ ತಿಳಿದುಕೊಂಡಿರುವುದಕ್ಕಿಂತ ತಿಳಿದುಕೊಳ್ಳದೇ ಇರುವುದು ಹೆಚ್ಚಿರುತ್ತದೆ. ಬಹುಶಃ ಇದಕ್ಕಿಂತ ಒಳ್ಳೆಯ ಸಿನಿಮಾ ಮತ್ತೊಂದಿಲ್ಲ. ಇದಕ್ಕಾಗಿ ಹೊಂಬಾಳೆ ಫಿಲಂಸ್ ಹಾಗೂ ರಿಷಬ್ ಶೆಟ್ಟಿಯವರಿಗೆ ಧನ್ಯವಾದಗಳು.  ಈ ಚಿತ್ರ ಮೈ ನವಿರೇಳಿಸುವಂತೆ ಮಾಡಿದೆ. ರಿಷಬ್ ಅವರೇ, ಒಬ್ಬ ನಟನಾಗಿ, ಚಿತ್ರ ಸಾಹಿತಿಯಾಗಿ ಹಾಗೂ ಒಬ್ಬ ನಿರ್ದೇಶಕನಾಗಿ ನಿಮಗೆ ಹಾಗೂ ನಿಮ್ಮ ಇಡೀ ತಂಡಕ್ಕೆ ಹ್ಯಾಟ್ಸಾಫ್ ಎಂದಿದ್ದಾರೆ ರಜನಿಕಾಂತ್.

    ಸಹಜವಾಗಿಯೇ ರಿಷಬ್ ಶೆಟ್ಟಿಗೆ ರಜನಿಕಾಂತ್ ಮೆಚ್ಚುಗೆ ಖುಷಿ ಕೊಟ್ಟಿದೆ. ರಿಷಬ್ ಶೆಟ್ಟಿ, ಸಪ್ತಮಿಗೌಡ, ವಿಜಯ್ ಕಿರಗಂದೂರು, ಕಾರ್ತಿಕ್ ಗೌಡ, ಚೆಲುವೇಗೌಡ.. ಹೀಗೆ ಚಿತ್ರತಂಡದ ಪ್ರತಿಯೊಬ್ಬರೂ ರಜನಿಕಾಂತ್ ಮೆಚ್ಚುಗೆಗೆ ಸಂತೋಷ ವ್ಯಕ್ತಪಡಿಸಿದ್ದಾರೆ.

    ರಜನಿ ಸರ್, ನೀವು ಭಾರತದ ಸೂಪರ್ ಸ್ಟಾರ್. ನಾನು ಬಾಲ್ಯದಿಂದಲೂ ನಿಮ್ಮ ಅಭಿಮಾನಿ. ನಿಮ್ಮ ಈ ಮೆಚ್ಚುಗೆ ನನ್ನ ಬಹುದಿನದ ಕನಸೊಂದನ್ನು ನನಸು ಮಾಡಿಸಿದೆ. ಇನ್ನು ಮುಂದೆ ನಾನು ಮತ್ತಷ್ಟು ಸ್ಥಳೀಯ ಕಥೆಗಳನ್ನು ಆಧರಿಸಿದ ಚಿತ್ರಗಳನ್ನು ಮಾಡಲು, ಆ ಮೂಲಕ ನಮ್ಮ ಪ್ರೇಕ್ಷಕರನ್ನು  ಸ್ಫೂರ್ತಿಗೊಳಿಸುವ ಚಿತ್ರಗಳನ್ನು ಮಾಡುವಂತೆ ಸ್ಫೂರ್ತಿ ನೀಡಿದೆ ಎಂದಿದ್ದಾರೆ.

    ದೇಶದ ಅತಿದೊಡ್ಡ ಸೂಪರ್ ಸ್ಟಾರ್ ಮೆಚ್ಚುಗೆ ಸಿಕ್ಕಿದ್ದು ಎನರ್ಜಿ ಬೂಸ್ಟ್ ಕೊಟ್ಟಂತಾಗಿದೆ. ಅವರ ಬಗ್ಗೆ ಮಾತನಾಡಲು ನಾನು ಚಿಕ್ಕವಳು. ಥ್ಯಾಂಕ್ಯೂ ಸರ್ ಎಂದಿದ್ದಾರೆ ಸಪ್ತಮಿ ಗೌಡ.

    ನಿಮ್ಮ ಈ ಮೆಚ್ಚುಗೆ ನಮ್ಮ ಸಂಭ್ರಮವನ್ನು ಇಮ್ಮಡಿಗೊಳಿಸಿದವು ಎಂದು ಟ್ವೀಟ್ ಮಾಡಿದೆ ಹೊಂಬಾಳೆ ಸಂಸ್ಥೆ. ರಜನಿಕಾಂತ್ ಮೆಚ್ಚುಗೆ ಪಡೆಯಲು ನಾವು ಪುಣ್ಯ ಮಾಡಿದ್ದೆವು ಎನ್ನುವುದು ವಿಜಯ್ ಕಿರಗಂದೂರು ಮಾತು. ದಂತಕಥೆಗೆ ದಂತಕಥೆಯ ಮೆಚ್ಚುಗೆ ಸಿಕ್ಕಿದೆ ಎಂದಿದ್ದಾರೆ ಚೆಲುವೇಗೌಡ. ಥ್ರಿಲ್ಲಾಗಿದ್ದೇನೆ ಎಂದಿದ್ದಾರೆ ಕಾರ್ತಿಕ್ ಗೌಡ. ಒಟ್ಟಿನಲ್ಲಿ ದಂತಕಥೆಯ ಮೆಚ್ಚುಗೆಗೆ ದಂತಕಥೆ ಚಿತ್ರತಂಡವೇ ಪ್ರೀತಿಯಿಂದ ಶರಣಾಗಿದೆ.

  • ಚಲನಚಿತ್ರ ಕಾರ್ಮಿಕರ ನೆರವಿಗೆ ತಮಿಳು ಸ್ಟಾರ್ಸ್

    rajinikanth donates rs 50 lakhs to film federation of south indian films

    ಕೊರೋನಾ ವೈರಸ್‍ನಿಂದಾಗಿ ಇಡೀ ಭಾರತಕ್ಕೆ ಬಂದ್ ಘೋಷಿಸಲಾಗಿದೆ. ಕೊರೋನಾ ಭೀತಿ ಶುರುವಾದ ತಕ್ಷಣ ಮೊದಲಿಗೆ ಹೊಡೆತ ಬಿದ್ದಿದ್ದು ಚಿತ್ರರಂಗಕ್ಕೆ. ಮೊದಲು ರದ್ದಾಗಿದ್ದೆ ಚಿತ್ರಮಂದಿರಗಳು. ನಂತರ ಶೂಟಿಂಗ್. ಹೀಗಾಗಿ ಈಗಾಗಲೇ ಚಲನಚಿತ್ರ ರಂಗದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ 15 ದಿನಗಳಿಂದ ಕೆಲಸವಿಲ್ಲ. ಹೀಗಾಗಿಯೇ ಇಂತಹವರ ನೆರವಿಗೆ ಧಾವಿಸಿದೆ ತಮಿಳು ಚಿತ್ರರಂಗ. ಇದನ್ನು ಶುರು ಮಾಡಿದ್ದು ರಜನಿಕಾಂತ್.

    ತಲೈವಾ ರಜನಿಕಾಂತ್, ತಮಿಳು ಚಲನಚಿತ್ರ ಕಾರ್ಮಿಕರ ಸಂಘಕ್ಕೆ 50 ಲಕ್ಷ ನೀಡುವ ಮೂಲಕ ಮೊದಲ ಹೆಜ್ಜೆಯಿಟ್ಟರೆ, ಉಳಿದ ನಟರು ಅದನ್ನು ಫಾಲೋ ಮಾಡಿದರು. ಸೂರ್ಯ, ಕಾರ್ತಿ, ವಿಜಯ್ ಸೇತುಪತಿ, ಶಿವಕಾರ್ತಿಕೇಯ ತಲಾ 10 ಲಕ್ಷ ರೂ. ನೀಡಿದರು. ಪ್ರಕಾಶ್ ರೈ 150 ಮೂಟೆ ಅಕ್ಕಿ ಒದಗಿಸಿಕೊಟ್ಟರು.

    ತಮಿಳು ಚಿತ್ರರಂಗದ ಇನ್ನೂ ಹಲವು ಕಲಾವಿದರು ತಮ್ಮ ತಮ್ಮ ಕೈಲಾದ ಮಟ್ಟಿಗೆ ದಿನಸಿ, ಆಹಾರ, ಹಣಕಾಸು ನೆರವು ನೀಡಲು ಮುಂದೆ ಬಂದಿದ್ದಾರೆ. ಕನ್ನಡ ಚಿತ್ರರಂಗ..?

  • ಜೈಲರ್ ಚಿತ್ರದಲ್ಲಿ ಹೇಗಿದೆ ಶಿವಣ್ಣ ಪಾತ್ರ..? ರಿಲೀಸ್ ಡೇಟ್ ಫಿಕ್ಸ್

    ಜೈಲರ್ ಚಿತ್ರದಲ್ಲಿ ಹೇಗಿದೆ ಶಿವಣ್ಣ ಪಾತ್ರ..? ರಿಲೀಸ್ ಡೇಟ್ ಫಿಕ್ಸ್

    ರಜನಿಕಾಂತ್ ಚಿತ್ರದಲ್ಲಿ ಶಿವಣ್ಣ ಲುಕ್ ಸಖತ್ ಆಗಿದೆ. ಆಗಸ್ಟ್ 10ಕ್ಕೆ ರಿಲೀಸ್ ಡೇಟ್ ಘೋಷಿಸಿಕೊಂಡಿರೋ ಜೈಲರ್ ಸಿನಿಮಾ, ರಿಲೀಸ್ ಡೇಟ್ ಘೋಷಣೆಗೆಂದೇ ಟೀಸರ್ ರಿಲೀಸ್ ಮಾಡಿದೆ. ಶಿವಣ್ಣ ಲುಕ್ ಮಾತ್ರ ಸಖತ್ ಆಗಿದೆ.

     ಇದು ಪ್ಯಾನ್ ಇಂಡಿಯಾ ಸಿನಿಮಾವೇ ಅಥವಾ ಕೇವಲ ತಮಿಳಿನಲ್ಲಿ ಮಾತ್ರ ತೆರೆಗೆ ಬರಲಿದೆಯೇ ಎಂಬ ಬಗ್ಗೆ ಸಾಕಷ್ಟು ಅನುಮಾಗಳಿವೆ. ಆದರೆ ಈವರೆಗೂ ಚಿತ್ರತಂಡ ಸ್ಪಷ್ಟನೆ ಕೊಟ್ಟಿಲ್ಲ. ಆದರೆ ಸಿನಿಮಾದ ತುಂಬ ಎಲ್ಲ ಭಾಷೆಯ ಕಲಾವಿದರು ಇರುವುದರಿಂದ ಬಹುಶಃ ಪ್ಯಾನ್ ಇಂಡಿಯಾ ಮಟ್ಟದಲ್ಲೇ 'ಜೈಲರ್' ತೆರೆಗೆ ಬರುವ ಸಾಧ್ಯತೆಗಳಿವೆ.

    ಚಿತ್ರದಲ್ಲಿ ಶಿವಣ್ಣ ಅವರಷ್ಟೇ ಅಲ್ಲ, ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್, ಹಿಂದಿಯಿಂದ ಜಾಕಿ ಶ್ರಾಫ್ ಕೂಡಾ ಇದ್ದಾರೆ. ವಿನಾಯಕನ್, ಸುನಿಲ್, ನಾಗಬಾಬು, ಕಿಶೋರ್, ಬಿಲ್ಲಿ ಮುರಳಿ, ಕರಾಟೆ ಕೀರ್ತಿ, ಯೋಗಿ  ಬಾಬು, ಕಲೈ ಅರಸನ್.. ಅವರ ಜೊತೆ ಲೇಡಿ ಸೂಪರ್ ಸ್ಟಾರ್ಸ್ ಎಂದೇ ಕರೆಯಬಹುದಾದ ರಮ್ಯಕೃಷ್ಣ, ತಮನ್ನಾ ಭಾಟಿಯಾ ಕೂಡಾ ಇದ್ದಾರೆ.

    ಕೊಲಮಾವು ಕೋಕಿಲಾ, ಡಾಕ್ಟರ್ ನಂತಹ ಹಿಟ್ ಸಿನಿಮಾಗಳನ್ನು ನೀಡಿರುವ ನೆಲ್ಸನ್ ಬೀಸ್ಟ್ ಮೂಲಕ ನಿರಾಸೆ ಮಾಡಿದ್ದರು. ಆದರೆ ಈ ಬಾರಿ 'ಜೈಲರ್' ಮೂಲಕ  ಗೆಲುವಿನ ಟ್ರ್ಯಾಕ್`ಗೆ ಮರಳುವ ಹಾದಿಯಲ್ಲಿದ್ದಾರೆ.

  • ತಲೈವಾ ಮೆಚ್ಚಿದ ಚಾರ್ಲಿ

    ತಲೈವಾ ಮೆಚ್ಚಿದ ಚಾರ್ಲಿ

    ತಾವು ಇಷ್ಟಪಡುವ.. ಆರಾಧಿಸುವ.. ವ್ಯಕ್ತಿ ತಮ್ಮನ್ನು ಮೆಚ್ಚಿದಾಗ.. ಹೊಗಳಿದಾಗ.. ಸಿಗುವ ಆನಂದ.. ಅನುಭವಿಸಿದವರಿಗಷ್ಟೇ ಗೊತ್ತು. ಅಂತಾದ್ದೊಂದು ಅನುಭವದಲ್ಲಿದ್ದಾರೆ ರಕ್ಷಿತ್ ಶೆಟ್ಟಿ. ಏಕೆಂದರೆ ಅವರನ್ನು ಹಾಗೂ ಅವರ ಚಿತ್ರವನ್ನು ಹೊಗಳಿರುವುದು ಸ್ವತಃ ಫೋನ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿರೋದು ಬೇರಾರೋ ಅಲ್ಲ.. ತಲೈವಾ. ತಮಿಳುನಾಡು ಸೂಪರ್ ಸ್ಟಾರ್ ರಜನಿಕಾಂತ್.

    ಸಿನಿಮಾ ನೋಡಿರುವ ರಜನಿಕಾಂತ್ ಖುದ್ದು ರಕ್ಷಿತ್ ಶೆಟ್ಟಿಯವರಿಗೆ ಫೋನ್ ಮಾಡಿ ಒಳ್ಳೆ ಸಿನಿಮಾ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ರಾತ್ರಿ ಸಿನಿಮಾ ನೋಡಿದ ರಜನಿಕಾಂತ್, ಬೆಳಕು ಹರಿಯುತ್ತಿದ್ದಂತೆ ರಕ್ಷಿತ್ ಶೆಟ್ಟಿಗೆ ಫೋನ್ ಮಾಡಿದ್ದಾರೆ. ಚಿತ್ರದ ಮೇಕಿಂಗ್, ಕಥೆ, ಕ್ವಾಲಿಟಿ.. ಎಲ್ಲಕ್ಕಿಂತ ಹೆಚ್ಚಾಗಿ ಚಿತ್ರದ ಕ್ಲೈಮಾಕ್ಸ್ ರಜನಿಕಾಂತ್‍ಗೆ ಇಷ್ಟವಾಗಿದೆ. ರಜನಿ ಸರ್ ಅವರಿಂದ ಪ್ರಶಂಸೆ ಕೇಳಿದ್ದು ಅದ್ಭುತ ಅನುಭವ ಎಂದು ಹೇಳಿಕೊಂಡಿದ್ದಾರೆ ರಕ್ಷಿತ್ ಶೆಟ್ಟಿ.

    777 ಚಾರ್ಲಿ 3ನೇ ವಾರಕ್ಕೆ ಕಾಲಿಟ್ಟಿದೆ. ಥಿಯೇಟರ್ ಮತ್ತು ಸ್ಕ್ರೀನ್‍ಗಳ ಸಂಖ್ಯೆ ಹೆಚ್ಚಾಗಿದೆ. ಈಗಾಗಲೇ ಚಿತ್ರವನ್ನು ಸಿಎಂ ಬೊಮ್ಮಾಯಿ, ರಾಜ್ಯಸಭೆ ಸದಸ್ಯ ಜಗ್ಗೇಶ್, ಸಚಿವರಾದ ಸುಧಾಕರ್, ಅರ್.ಅಶೋಕ್, ನಾಗೇಶ್, ಕೇಂದ್ರ ಬಿಜೆಪಿ ನಾಯಕಿ ಮನೇಕಾ ಗಾಂಧಿ, ಬೋನಿ ಕಪೂರ್, ರಮ್ಯಾ, ಸಾಯಿ ಪಲ್ಲವಿ, ಶ್ರದ್ಧಾ ಶ್ರೀನಾಥ್, ರಾಣಾ ದಗ್ಗುಬಾಟಿ, ನೆನಪಿರಲಿ ಪ್ರೇಮ್, ಶಿವಣ್ಣ, ಜಾನ್ ಅಬ್ರಹಾಂ.. ಹೀಗೆ ಸ್ಟಾರ್ ನಟ ನಟಿಯರೆಲ್ಲ ಮೆಚ್ಚಿದ್ದಾರೆ.

  • ನಿನ್ನ ಸನಿಹಕೆ.. ರಜನಿಕಾಂತ್ ಆಶೀರ್ವಾದ

    ನಿನ್ನ ಸನಿಹಕೆ.. ರಜನಿಕಾಂತ್ ಆಶೀರ್ವಾದ

    ಡಾ.ರಾಜ್ ಮತ್ತು ರಜನಿಕಾಂತ್ ಕುಟುಂಬದ ನಡುವಿನ ಬಾಂಧವ್ಯ, ಅನ್ಯೋನ್ಯತೆ ಇಂದು ನಿನ್ನೆಯದಲ್ಲ. ಈ ಬಾಂಧವ್ಯದ ಪರಿಣಾಮವೇ ಈಗ ನಿನ್ನ ಸನಿಹಕೆ ಚಿತ್ರಕ್ಕೆ ರಜನಿಕಾಂತ್ ಆಶೀರ್ವಾದವೂ ಸಿಗುತ್ತಿದೆ. ಇದೇ ವಾರ ರಿಲೀಸ್ ಆಗುತ್ತಿರೋ ನಿನ್ನ ಸನಿಹಕೆ ಚಿತ್ರವನ್ನು ನೋಡೋಕೆ ಉತ್ಸುಕರಾಗಿದ್ದಾರಂತೆ ರಜನಿ.

    ನಿನ್ನ ಸನಿಹಕೆ.. ಸೂರಜ್ ಗೌಡ ನಟಿಸಿ, ನಿರ್ದೇಶಿಸಿರುವ ಸಿನಿಮಾ. ಈ ಚಿತ್ರದ ಮೂಲಕ ಧನ್ಯಾ ರಾಮ್‍ಕುಮಾರ್ ಮೊದಲ ಬಾರಿಗೆ ನಾಯಕಿಯಾಗಿ ತೆರೆಗೆ ಪರಿಚಿತರಾಗುತ್ತಿದ್ದಾರೆ. ರಾಜ್ ಕುಟುಂಬದಿಂದ ಬರುತ್ತಿರೋ ಮೊದಲ ಹೀರೋಯಿನ್ ಧನ್ಯಾ ರಾಮ್‍ಕುಮಾರ್. ಈಗಾಗಲೇ ಚಿತ್ರಕ್ಕೆ ಶಿವಣ್ಣ, ಪುನೀತ್ ಮತ್ತು ರಾಘವೇಂದ್ರ ರಾಜ್‍ಕುಮಾರ್ ಆಶೀರ್ವಾದ ಸಿಕ್ಕಿದೆ.

    ಈಗ ಸಿನಿಮಾವನ್ನು ಚೆನ್ನೈಗೆ ತೆಗೆದುಕೊಂಡು ಹೋಗಿ ರಜನಿಕಾಂತ್ ಅವರಿಗೆ ತೋರಿಸಲು ನಿರ್ಧರಿಸಿದೆ ನಿನ್ನ ಸನಿಹಕೆ ಟೀಂ.

  • ಬಂಡೀಪುರ ಕಾಡಿನಲ್ಲಿ ರಜನಿಕಾಂತ್ : ಮೋದಿ ಹಾದಿಯಲ್ಲಿ..

    rajinikanth returns to chennai after man vs wild shooting

    ಸೂಪರ್ ಸ್ಟಾರ್ ರಜನಿಕಾಂತ್ ಮೋದಿ ಹಾದಿಯಲ್ಲಿದ್ದಾರೆ. ಓಓಓಓ.. ರಾಜಕೀಯಕ್ಕೆ ಬಂದುಬಿಟ್ರಾ ಅನ್ನೋ ಪ್ರಶ್ನೆ ಬೇಡ. ಮೋದಿ ಕಳೆದ ವರ್ಷ ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನೆನಪಿದೆ ತಾನೇ.. ಅದು ಬೇರ್‍ಗ್ರಿಲ್ಸ್ ಜೊತೆಗೆ. ಈಗ ಅದೇ ಕಾರ್ಯಕ್ರಮದ ಅತಿಥಿಯಾಗಿರೋದು ಸೂಪರ್ ಸ್ಟಾರ್ ರಜನಿಕಾಂತ್.

    ಬಂಡೀಪುರ ಕಾಡಿನಲ್ಲಿ ಬೇರ್ ಗ್ರಿಲ್ಸ್ ರಜನಿಕಾಂತ್ ಅವರೊಂದಿಗೆ ಕಾರ್ಯಕ್ರಮ ಮಾಡಿದ್ದಾರೆ. ಕಾರ್ಯಕ್ರಮ ಚಿತ್ರೀಕರಣದ ನಡುವೆ ರಜನಿ ಅವರಿಗೆ ಲಂಟಾನಾ ಮುಳ್ಳು (ರೋಜಾನ್ ಮುಳ್ಳು) ತಗಲು ಸ್ವಲ್ಪ ತರಚಿದ ಗಾಯವಾಗಿದೆ. ಉಳಿದಂತೆ ಕಾರ್ಯಕ್ರಮ ಅದ್ಭುತವಾಗಿ ಮೂಡಿ ಬಂದಿದೆಯಂತೆ.

    ರಜನಿಕಾಂತ್ ಇಡೀ ದಿನ ಶೂಟಿಂಗ್ ಮುಗಿಸಿ ವಾಪಸ್ ಚೆನ್ನೈಗೆ ತೆರಳಿದ್ದಾರೆ.

     

  • ಬಂಡೀಪುರ ಕಾಡಿನಲ್ಲಿ ರಜನಿಕಾಂತ್ : ಮೋದಿ ಹಾದಿಯಲ್ಲಿ..

    rajinikanth at bandipur forest image

    ಸೂಪರ್ ಸ್ಟಾರ್ ರಜನಿಕಾಂತ್ ಮೋದಿ ಹಾದಿಯಲ್ಲಿದ್ದಾರೆ. ಓಓಓಓ.. ರಾಜಕೀಯಕ್ಕೆ ಬಂದುಬಿಟ್ರಾ ಅನ್ನೋ ಪ್ರಶ್ನೆ ಬೇಡ. ಮೋದಿ ಕಳೆದ ವರ್ಷ ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನೆನಪಿದೆ ತಾನೇ.. ಅದು ಬೇರ್‍ಗ್ರಿಲ್ಸ್ ಜೊತೆಗೆ. ಈಗ ಅದೇ ಕಾರ್ಯಕ್ರಮದ ಅತಿಥಿಯಾಗಿರೋದು ಸೂಪರ್ ಸ್ಟಾರ್ ರಜನಿಕಾಂತ್.

    ಬಂಡೀಪುರ ಕಾಡಿನಲ್ಲಿ ಬೇರ್ ಗ್ರಿಲ್ಸ್ ರಜನಿಕಾಂತ್ ಅವರೊಂದಿಗೆ ಕಾರ್ಯಕ್ರಮ ಮಾಡಿದ್ದಾರೆ. ಕಾರ್ಯಕ್ರಮ ಚಿತ್ರೀಕರಣದ ನಡುವೆ ರಜನಿ ಅವರಿಗೆ ಲಂಟಾನಾ ಮುಳ್ಳು (ರೋಜಾನ್ ಮುಳ್ಳು) ತಗಲು ಸ್ವಲ್ಪ ತರಚಿದ ಗಾಯವಾಗಿದೆ. ಉಳಿದಂತೆ ಕಾರ್ಯಕ್ರಮ ಅದ್ಭುತವಾಗಿ ಮೂಡಿ ಬಂದಿದೆಯಂತೆ.

    ರಜನಿಕಾಂತ್ ಇಡೀ ದಿನ ಶೂಟಿಂಗ್ ಮುಗಿಸಿ ವಾಪಸ್ ಚೆನ್ನೈಗೆ ತೆರಳಿದ್ದಾರೆ.

     

  • ಮಂಗಳೂರಿನಲ್ಲಿ ಸೆಂಚುರಿ ಸ್ಟಾರ್..ಸೂಪರ್ ಸ್ಟಾರ್..

    ಮಂಗಳೂರಿನಲ್ಲಿ ಸೆಂಚುರಿ ಸ್ಟಾರ್..ಸೂಪರ್ ಸ್ಟಾರ್..

    ಕನ್ನಡದ ಸೆಂಚುರಿ ಸ್ಟಾರ್ ಮತ್ತು ದ.ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಇಬ್ಬರೂ ಒಟ್ಟಿಗೇ ಜೈಲರ್ ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತಿರುವಂಥದ್ದೇ. ಆ ಮೂಲಕ ತಮಿಳಿಗೆ ಎಂಟ್ರಿ ಕೊಡುತ್ತಿರುವ ಶಿವಣ್ಣ, ರಜನಿ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಜೈಲರ್ ಚಿತ್ರದ ಕೆಲವು ದೃಶ್ಯಗಳು ಕರ್ನಾಟಕದಲ್ಲಿ ನಡೆಯುತ್ತಿವೆ. ರಜನಿ ತಮ್ಮ ಚಿತ್ರಗಳಲ್ಲಿ ಕರ್ನಾಟಕದ ಅದರಲ್ಲೂ ವಿಶೇಷವಾಗಿ ಮೈಸೂರಿನ ಒಂದಾದರೂ ದೃಶ್ಯ ಇರಬೇಕು ಎಂದು ಬಯಸುತ್ತಾರೆ. ಹೀಗಾಗಿಯೇ ಈಗಾಗಲೇ ಮೈಸೂರಿನ ಚಿತ್ರೀಕರಣ ಮುಗಿಸಿದ್ದು, ಇದೀಗ ಮಂಗಳೂರಿನಲ್ಲಿ ಜೈಲರ್ ತಂಡ ಬೀಡುಬಿಟ್ಟಿದೆ.

    ರಜನಿಕಾಂತ್ ನಟನೆಯ ಜೈಲು ಸಿನಿಮಾದ ಶೂಟಿಂಗ್ ಗಾಗಿ ಅವರು ಮಂಗಳೂರಿಗೆ ಬಂದಿದ್ದು, ಜೊತೆಗೆ ಮಂಗಳೂರಿನ ಹಲವು ದೇವಸ್ಥಾನಗಳಿಗೂ ಅವರು ಭೇಟಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಮಂಗಳೂರಿಗೆ ಸಿನಿಮಾ ಚಿತ್ರೀಕರಣ ನಡೆಯಲಿದೆ. ಈ ಶೂಟಿಂಗ್ ಮಧ್ಯೆಯೂ ಅವರು ಮಂಗಳೂರಿನ ಪ್ರಮುಖ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ. ಭದ್ರತೆಯ ದೃಷ್ಟಿಯಿಂದ ಚಿತ್ರತಂಡ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.

    ಜೈಲರ್ ಚಿತ್ರದಲ್ಲಿ ಶಿವಣ್ಣ ಮತ್ತು ರಜನಿಕಾಂತ್ ಪಾತ್ರವೇನು ಎಂಬ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲವಾದರೂ, ಗಾಂಧಿನಗರದ ಮೂಲಗಳು ಶಿವಣ್ಣ ವಿಲನ್ ಆಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಇದೇ ಮೊದಲ ಬಾರಿ ಇಬ್ಬರೂ ಒಟ್ಟಿಗೇ ನಟಿಸುತ್ತಿರುವುದು ವಿಶೇಷ. ಈ ಚಿತ್ರದಲ್ಲಿ ರಜನಿಗೆ ತಮನ್ನಾ ಹೀರೋಯಿನ್. ಬೀಸ್ಟ್ ಚಿತ್ರ ಮಾಡಿದ್ದ ದಿಲೀಪ್ ಡೈರೆಕ್ಷನ್ ಇದೆ.

    ಅಷ್ಟೇ ಅಲ್ಲ, 1981ರಲ್ಲಿ ರಜನಿಕಾಂತ್ ಗರ್ಜನೆ ಎಂಬ ಚಿತ್ರದಲ್ಲಿ ನಟಿಸಿದ್ದರು. ಅದಾದ ನಂತರ ಕನ್ನಡದ ಸಿನಿಮಾಗಳಲ್ಲಿ ರಜನಿ ನಟಿಸಿಯೇ ಇಲ್ಲ. ಇದೀಗ ಹೊಂಬಾಳೆಯವರ ಜೊತೆ ರಜನಿಕಾಂತ್ ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿ ಹಬ್ಬಿದ್ದು, ರಜನಿಕಾಂತ್ ರಾಜ್ಯಕ್ಕೆ ಬಂದಿರುವ ಸಮಯದಲ್ಲಿಯೇ ಈ ಮಾತುಕತೆಯೂ ಫೈನಲ್ ಆಗಲಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.

  • ರಜನಿ 2.0 ಚಿತ್ರಕ್ಕೆ ಶಿವಣ್ಣ, ಉಪ್ಪಿ ಶುಭ ಹಾರೈಕೆ

    shivarajkumar and upendra wish rajinikanth for 2.0

    sಸೂಪರ್‍ಸ್ಟಾರ್ ರಜನಿಕಾಂತ್ ಅಭಿನಯದ 2.0 ಚಿತ್ರದ ಟ್ರೇಲರ್ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ರಜನಿಕಾಂತ್, ಅಕ್ಷಯ್ ಕುಮಾರ್, ಆ್ಯಮಿ ಜಾಕ್ಸನ್ ಅಭಿನಯದ ಚಿತ್ರಕ್ಕೆ ಸ್ಟಾರ್ ಡೈರೆಕ್ಟರ್ ಶಂಕರ್ ನಿರ್ದೇಶನವಿದೆ. ಈ ಸಿನಿಮಾಗೆ ಶಿವರಾಜ್ ಕುಮಾರ್ ಮತ್ತು ಉಪೇಂದ್ರ ಶುಭ ಹಾರೈಸಿದ್ದು ವಿಶೇಷವಾಗಿತ್ತು.

    ನಿದೇಶಕ ಶಂಕರ್, ಉಪೇಂದ್ರ ಅವರ ಎ ಚಿತ್ರದಿಂದ ಸ್ಫೂರ್ತಿ ಪಡೆದಿದ್ದೇನೆ ಎಂದು ಹೇಳಿಕೊಂಡರೆ, ಶಿವಣ್ಣ ರಜನಿ ಚಿತ್ರಕ್ಕೆ ಕಾಯುತ್ತಿದ್ದೇನೆ ಎಂದು ಹೇಳಿಕೊಂಡರು.

  • ರಜನಿ ಚಿತ್ರದಲ್ಲಿ ಶಿವಣ್ಣ : ಈಗ ಅಧಿಕೃತ

    ಜನಿ ಚಿತ್ರದಲ್ಲಿ ಶಿವಣ್ಣ : ಈಗ ಅಧಿಕೃತ

    ಸೂಪರ್ ಸ್ಟಾರ್ ರಜನಿಕಾಂತ್ ಚಿತ್ರದಲ್ಲಿ ಶಿವಣ್ಣ ನಟಿಸುತ್ತಿದ್ದಾರಂತೆ ಎನ್ನುವ ಸುದ್ದಿ ಹಳೆಯದೇನಲ್ಲ. ಆದರೆ ಸೆಂಚುರಿ ಸ್ಟಾರ್ ಇದಕ್ಕೆ ಯೆಸ್ ಅಥವಾ ನೋ.. ಎಂದು ಹೇಳದೆ ಕುತೂಹಲ ಉಳಿಸಿದ್ದರು. ನಿರ್ದೇಶಕ ನೆಲ್ಸನ್ ಮತ್ತು ಅವರ ತಂಡ ಶಿವಣ್ಣ ಅವರನ್ನು ಭೇಟಿ ಮಾಡಿ ಒನ್ ಲೈನ್ ಸ್ಟೋರಿ ಹೇಳಿದೆ.

    ರಜನಿ ಸರ್ ಜೊತೆಗೆ ನಟಿಸುವ ಅವಕಾಶ ಸಿಗುವುದೇ ಅದೃಷ್ಟ ಮತ್ತು ಅಪರೂಪ. ಸಂತೋಷದಿಂದ ಸಿನಿಮಾದಲ್ಲಿ ನಟಿಸೋಕೆ ಒಪ್ಪಿಕೊಂಡಿದ್ದೇನೆ. ಚಿತ್ರದಲ್ಲಿನ ನನ್ನ ಪಾತ್ರದ ಬಗ್ಗೆ ಶೀಘ್ರದಲ್ಲೇ ವಿವರವಾಗಿ ಹೇಳುತ್ತೇನೆ ಎಂದಿದ್ದಾರೆ ಶಿವಣ್ಣ.

    ಇದೇ ವೇಳೆ ರಜನಿ ಸರ್ ಮತ್ತು ನಮ್ಮ ಕುಟುಂಬದ ಬಾಂಧವ್ಯ ತುಂಬಾ ಹಳೆಯದು. ನನ್ನನ್ನು ಚಿಕ್ಕ ಹುಡುಗನಾಗಿದ್ದಾಗಿನಿಂದ ನೋಡಿದ್ದಾರೆ. ಅವರೊಂದಿಗೆ ನನಗೆ, ನಮ್ಮ ಕುಟುಂಬಕ್ಕೆ ವಿಶೇಷ ಬಾಂಧವ್ಯ ಇದೆ. ಚಿತ್ರ ಬಹುಶಃ ಆಗಸ್ಟ್‍ನಲ್ಲಿ ಸೆಟ್ಟೇರಲಿದ್ದು, ನನ್ನ ಪಾತ್ರದ ಶೂಟಿಂಗ್ ಸೆಪ್ಟೆಂಬರ್‍ನಲ್ಲಿ ನಡೆಯಬಹುದು. ಮೈಸೂರು ಅಥವಾ ಬೆಂಗಳೂರಿನಲ್ಲಿ ಚಿತ್ರೀಕರಣವಾಗಹುದು ಎಂದಿದ್ದಾರೆ ಶಿವಣ್ಣ.