ಶಿರಾಡಿಘಾಟ್, ಇದು ಎರಡು ವರ್ಷದ ಹಿಂದೆ ಶುರುವಾಗಿದ್ದ ಸಿನಿಮಾ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಇಷ್ಟು ಹೊತ್ತಿಗೆ ಚಿತ್ರ ಚಿತ್ರಮಂದಿರಗಳಿಗೆ ಲಗ್ಗೆಯಿಡಬೇಕಿತ್ತು. ಆದರೆ, ಮಧ್ಯೆ ಏನೇನೋ ಆಗಿ, ಚಿತ್ರದ ತಂತ್ರಜ್ಞರಿಗೆ ಅಪಘಾತವಾಗಿ ಆಸ್ಪತ್ರೆ ಸೇರಿದರು. ಇಬ್ಬರು ಸಾವನ್ನಪ್ಪಿದರು. ನಿರ್ಮಾಪಕರು ತಲೆ ಮೇಲೆ ಕೈಹೊತ್ತು ಕುಳಿತರು.
ಹಾಗೆ ನಿಂತುಹೋಗಿದ್ದ ಆ ಸಿನಿಮಾಗೆ, ಈಗ ಮತ್ತೆ ಜೀವ ಬಂದಿದೆ. ಕಥೆ, ಚಿತ್ರಕಥೆ, ನಿರ್ದೇಶಕ ಎಲ್ಲರೂ ಬದಲಾಗಿದ್ದಾರೆ. ನಿರ್ಮಾಪಕರು ಮಾತ್ರ ಅವರೇ. ಉಮೇಶ್ ಸಕ್ಕರೆನಾಡು. ನಿರ್ದೇಶಕರಾಗಿ ಗಡ್ಡ ವಿಜಿ ಬಂದಿದ್ದಾರೆ.
ಗಡ್ಡ ವಿಜಿ ನಿರ್ದೇಶನಕ್ಕೆ ಒಪ್ಪಿದ್ದೇ ನಾನು ಅರ್ಧ ಗೆದ್ದಂತೆ ಎನ್ನುವ ಉಮೇಶ್ ಸಕ್ಕರೆನಾಡು, ತಾವೇ ಚಿತ್ರದ ಹೀರೋ ಕೂಡಾ ಆಗಿದ್ದಾರೆ. ಅಂದಹಾಗೆ ಸಿನಿಮಾ ಮುಗಿಯುವವರೆಗೆ ಅವರು ಶೇವ್ ಮಾಡೋದಿಲ್ಲ. ಗಡ್ಡ ತೆಗೆಯಲ್ಲ. ಹೀರೋ ಆಗಿ ನಟಿಸುತ್ತಿರುವುದರಿಂದ, ಗಡ್ಡಕ್ಕೂ ಚಿತ್ರದಲ್ಲಿ ಅಂಥಾದ್ದೊಂದು ಮಹತ್ವ ಇದೆಯಾ..? ಗಡ್ಡ ವಿಜಿ ಮಾತನಾಡಲ್ಲ.