` raghavendra rajkumar - chitraloka.com | Kannada Movie News, Reviews | Image

raghavendra rajkumar

 • ಬಂಗಾರದ ಮನುಷ್ಯನಲ್ಲಿ ರಾಜಣ್ಣ.. ಅಮ್ಮನ ಮನೆಯಲ್ಲಿ ರಾಘಣ್ಣ

  ammana mane teaser released

  ಅಮ್ಮನ ಮನೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ರೆಗ್ಯುಲರ್ ಟೀಸರ್‍ಗಳಿಗಿಂತ ವಿಭಿನ್ನವಾಗಿರುವ ಕಾರಣಕ್ಕೇ ಗಮನ ಸೆಳೆಯುತ್ತಿದೆ. ರಾಘವೇಂದ್ರ ರಾಜ್‍ಕುಮಾರ್, 14 ವರ್ಷಗಳ ನಂತರ ನಟಿಸಿರುವ ಸಿನಿಮಾ ಎಂಬುದು ಚಿತ್ರಕ್ಕಿರುವ ಸ್ಪೆಷಲ್ ಕ್ವಾಲಿಟಿ. ನಿಖಿಲ್ ಮಂಜು ನಿರ್ದೇಶನದ ಸಿನಿಮಾ ಟೀಸರ್‍ನಲ್ಲಿ ಗಮನ ಸೆಳೆಯುವುವುದು ರಾಘವೇಂದ್ರ ರಾಜ್‍ಕುಮಾರ್ ಪಾತ್ರದ ಹೆಸರು... ರಾಜೀವ.

  ಬಂಗಾರದ ಮನುಷ್ಯ ಚಿತ್ರದಲ್ಲಿ ರಾಜೀವಪ್ಪನ ಹೆಸರಲ್ಲಿ ಕರುನಾಡಿನ ಜನರನ್ನು ಮೋಡಿದ್ದವರು ಡಾ.ರಾಜ್. ಈಗ.. ಅದೇ ಹೆಸರಲ್ಲಿ ರಾಘವೇಂದ್ರ ರಾಜ್‍ಕುಮಾರ್ ನಟಿಸಿದ್ದಾರೆ. ಚಿತ್ರದ ಹೆಸರೇ ಅಮ್ಮನ ಮನೆ. ತಾಯಿಯ ಮಡಿಲಲ್ಲಿ ಮಗುವಾಗಿರುವ ರಾಘಣ್ಣ, ರಾಘಣ್ಣನ ಮಡಿಲಲ್ಲಿ ಮಗುವಾಗಿರುವ ತಾಯಿ.. ಹೀಗೆ ವಿಭಿನ್ನತೆಯ ಮೂಲಕ ಸಂಥಿಂಗ್ ಸ್ಪೆಷಲ್ ಏನೋ ಹೇಳುತ್ತಿದ್ದಾರೆ ಎಂಬ ಭಾವನೆ ಮೂಡಿಸುವುದಂತೂ ಸತ್ಯ.

  ಅಮ್ಮನ ಮನೆ ಸಿನಿಮಾ, ಫೆಬ್ರವರಿಯಲ್ಲಿ ರಿಲೀಸ್ ಆಗಲಿದೆ.

 • ಮನೆ ಮೂರು.. ಮನಸ್ಸು ಒಂದೇ.. - ಅಣ್ಣಾವ್ರ ಮಕ್ಕಳು

  shivarajkumar talks about his brothers

  ಡಾ.ರಾಜ್‍ಕುಮಾರ್ ಮಕ್ಕಳಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‍ಕುಮಾರ್ ಹಾಗೂ ಪುನೀತ್ ರಾಜ್‍ಕುಮಾರ್, ಬೇರೆ ಬೇರೆ ಮನೆಗಳಲ್ಲಿದ್ದಾರೆ. ಒಂದೇ ಮನೆಯಲ್ಲಿ ಇಲ್ಲ. ಹಾಗಂತ ನಮ್ಮ ನಡುವೆ ಏನೋ ಆಗಿಬಿಟ್ಟಿದೆ, ಬೇರೆ ಬೇರೆಯಾಗಿದ್ದೇವೆ ಎಂದುಕೊಳ್ಳಬೇಡಿ. ಬೇರೆ ಬೇರೆ ಇರುವುದು ಮನೆಗಳು ಮಾತ್ರ, ಮನಸ್ಸುಗಳಲ್ಲ ಎಂದು ಹೇಳಿದ್ದಾರೆ ಶಿವರಾಜ್‍ಕುಮಾರ್.

  ಗ್ರಾಮಾಯಣ ಚಿತ್ರದ ಟೀಸರ್ ಬಿಡುಗಡೆ ವೇಳೆ ಶಿವಣ್ಣ ಈ ಮಾತು ಹೇಳಿದಾಗ, ರಾಘವೇಂದ್ರ ರಾಜ್‍ಕುಮಾರ್ ಮತ್ತು ಪುನೀತ್ ರಾಜ್‍ಕುಮಾರ್ ಇಬ್ಬರೂ ವೇದಿಕೆಯಲ್ಲಿದ್ದರು. ಅಪ್ಪು ನನಗಿಂತ 13 ವರ್ಷ ಚಿಕ್ಕವನು. ಆತನ ಪ್ರತಿಯೊಂದು ಸಕ್ಸಸ್‍ನ್ನೂ ಸಂಭ್ರಮಿಸುವ ಮೊದಲ ವ್ಯಕ್ತಿ ನಾನೇ ಎಂದರು ಶಿವಣ್ಣ. ರಾಘು ಚಿಕ್ಕವನಾದರೂ, ನಾನೂ ಅವನೂ ಗೆಳೆಯರಂತೆಯೇ ಇದ್ದೇವೆ ಎಂದ ಶಿವಣ್ಣ, ಸಣ್ಣ ಪುಟ್ಟ ಮನಸ್ತಾಪಗಳು ಬರುವುದು ಸಹಜ. ಆದರೆ, ಅಂತಹ ಮನಸ್ತಾಪಗಳನ್ನು ನಮ್ಮನ್ನು ಇನ್ನಷ್ಟು ಹತ್ತಿರ ಸೇರಿಸಿವೆ ಎಂದರು. ಮನೆಯಲ್ಲಿ ಒಂದು ಸಣ್ಣ ಕಾರ್ಯಕ್ರಮವಾದರೂ, ನಮ್ಮ ಮನೆಯವರೇ ಕನಿಷ್ಠ ನೂರು ಮಂದಿ ಇರುತ್ತೇವೆ ಎಂದು ಹೇಳಿಕೊಂಡರು.

  ಗಾಜನೂರಿನ ಬಾಲ್ಯದ ದಿನಗಳನ್ನು ನೆನೆದ ಶಿವರಾಜ್‍ಕುಮಾರ್, ಅಲ್ಲಿ ಈಜಾಡಿದ್ದು, ಮರಕೋತಿ ಆಟವಾಡಿದ್ದು, ಊರಿನ ಮನೆಗಳಲ್ಲಿ ಊಟ ಮಾಡಿಕೊಂಡು ಬೆಳದ ದಿನಗಳನ್ನು ನೆನಪಿಸಿಕೊಂಡರು. ಇಂದಿನ ಈ ಎನರ್ಜಿಗೆ, ಅಂದಿನ ಬಾಲ್ಯದಲ್ಲಿ ಆಡಿದ ಆಟಗಳೇ ಕಾರಣ ಎಂದು ನೆನಪಿಗೆ ಜಾರಿದರು ಶಿವರಾಜ್‍ಕುಮಾರ್.

 • ಮಹಿಳಾ ದಿನಕ್ಕೆ ಅಮ್ಮನ ಸಿನಿಮಾ

  ammana mane will release on women's day

  ರಾಘವೇಂದ್ರ ರಾಜ್‍ಕುಮಾರ್ 14 ವರ್ಷಗಳ ನಂತರ ನಟಿಸಿರುವ ಸಿನಿಮಾ ಅಮ್ಮನ ಮನೆ. ರಾಘಣ್ಣನ ಜೊತೆಯಲ್ಲಿ ರೋಹಿಣಿ, ಮಾನಸಿ, ಸುಚೇಂದ್ರ ಪ್ರಸಾದ್, ಶೀತಲ್, ತಬಲಾ ನಾಣಿ ಮೊದಲಾದವರ ಬೃಹತ್ ತಾರಾಗಣವೇ ಇದೆ. ಈ ಸಿನಿಮಾವನ್ನು ಮಹಿಳಾ ದಿನಕ್ಕೆ ಅಂದರೆ, ಮಾರ್ಚ್ 8ಕ್ಕೆ ರಿಲೀಸ್ ಮಾಡಲು ಮುಂದಾಗಿದೆ ಚಿತ್ರತಂಡ.

  ರಾಘಣ್ಣ, ತಾಯಿಯನ್ನು ತುಂಬಾ ಪ್ರೀತಿಸುವ ಮಗ. ಅಷ್ಟೇ ಅಲ್ಲ, ಹೆಂಡತಿ, ಮಗಳಲ್ಲೂ ತಾಯಿಯನ್ನೇ ಕಾಣುವಷ್ಟು ಮಾತೃ ಹೃದಯಿ. ತಾಯಿ, ಮಗನ ಬಾಂಧವ್ಯ ಹೇಳುವ ಈ ಚಿತ್ರ ಅಮ್ಮನ ಮನೆ. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ನಿಖಿಲ್ ಮಂಜು, ಇಡೀ ಚಿತ್ರವನ್ನು ವಿಭಿನ್ನವಾಗಿ ಕಟ್ಟಿಕೊಟ್ಟಿದ್ದಾರೆ. ಅಮ್ಮನನ್ನು ಪ್ರೀತಿಸುವವರು ಖಂಡಿತಾ ಈ ಸಿನಿಮಾ ನೋಡ್ತಾರೆ.

 • ರಾಘಣ್ಣ 25ನೇ ಸಿನಿಮಾ ಆಡಿಸಿದಾತ

  after 30 years raghavendra rajkumar

  ರಾಘವೇಂದ್ರ ರಾಜ್‍ಕುಮಾರ್ ಕನ್ನಡ ಚಿತ್ರರಂಗಕ್ಕೆ ಬಂದು 30 ವರ್ಷ ದಾಟಿದ್ದರೂ, ಅವರ ಚಿತ್ರಗಳ ಸಂಖ್ಯೆ 25 ದಾಟಿಲ್ಲ. ಇದು ಅಚ್ಚರಿ ಎನಿಸಿದರೂ ಸತ್ಯ. ಚಿರಂಜೀವಿ ಸುಧಾಕರ್ ಚಿತ್ರದಿಂದ ಬೆಳ್ಳಿತೆರೆಗೆ ಬಂದ ರಾಘವೇಂದ್ರ ರಾಜ್‍ಕುಮಾರ್, ನಂಜುಂಡಿ ಕಲ್ಯಾಣ, ಗಜಪತಿ ಗರ್ವಭಂಗದಂತಹ ಹಿಟ್ ಕೊಟ್ಟವರು. ಅವರು ಈಗ 25ನೇ ಸಿನಿಮಾಗೆ ರೆಡಿಯಾಗುತ್ತಿದ್ದಾರೆ.

  ಅಮ್ಮನ ಮನೆ ಚಿತ್ರದ ಮೂಲಕ ಕಮ್‍ಬ್ಯಾಕ್ ಮಾಡಿದ ರಾಘಣ್ಣ, ತ್ರಯಂಬಕಂ, ಪೊಗರು ಚಿತ್ರದಲ್ಲೂ ನಟಿಸುತ್ತಿದ್ದಾರೆ. ಇದರ ಜೊತೆಯಲ್ಲೇ ಆಡಿಸಿದಾತ ಎಂಬ ಚಿತ್ರಕ್ಕೆ ಸಹಿ ಮಾಡಿದ್ದಾರೆ. ಇದು ಅವರ 25ನೇ ಸಿನಿಮಾ.

  ಹರೀಶ್ ಭಾರದ್ವಾಜ್ ನಿರ್ದೇಶನದ ಚಿತ್ರ ಆಡಿಸಿದಾತ ಮಾರ್ಚ್ 25ರಂದು ಸೆಟ್ಟೇರುತ್ತಿದೆ. ಆಡಿಸಿದಾತ.. ಹೆಸರು ಕೇಳಿದರೆ ಕಸ್ತೂರಿ ನಿವಾಸದ ಆಡಿಸಿದಾತ ಬೇಸರ ಮೂಡಿ ಹಾಡು ನೆನಪಾಗುವುದು ಅತ್ಯಂತ ಸಹಜ.

 • ರಾಘಣ್ಣ ಕಂ ಬ್ಯಾಕ್ - ಅಪ್ಪು ಹೇಳಿದ್ದೇನು..?

  puneeth rjkumar talks about trayambakam

  ಅದು ತ್ರಯಂಬಕಂ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ. ಅಪ್ಪಟ ಶಿವನಂತೆ ಢಮರುಗ ಬಾರಿಸಿ ಟ್ರೇಲರ್ ರಿಲೀಸ್ ಮಾಡಿದ್ದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್. ಅಣ್ಣ ಮತ್ತೆ ಬಣ್ಣ ಹಚ್ಚಿರುವ ಬಗ್ಗೆ ಮಾತನಾಡುತ್ತಾ ಹೋದ ಪುನೀತ್ ``ನಂಗೆ ಶಿವಣ್ಣ ಮತ್ತು ರಾಘಣ್ಣ ಇಬ್ಬರೂ ಪಿಲ್ಲರ್‍ಗಳಿದ್ದಂತೆ. ರಾಘಣ್ಣ ಮತ್ತೆ ನಟಿಸುತ್ತಿದ್ದಾರೆ ಎನ್ನುವುದೇ ನನಗೆ ಖುಷಿ. ನಾಲ್ಕೈದು ವರ್ಷಗಳ ಹಿಂದೆ ರಾಘಣ್ಣ ಆರೋಗ್ಯ ಹದಗೆಟ್ಟಾಗ, ಅವರು ಮತ್ತೆ ಬಣ್ಣ ಹಚ್ಚುತ್ತಾರೆ ಎಂಬ ಕಲ್ಪನೆಯೂ ನಮಗಿರಲಿಲ್ಲ.

  ಅಣ್ಣನಿಗೆ ಎಷ್ಟು ಖುಷಿಯಾಗಿದ್ಯೋ ಅದರ 10 ಪಟ್ಟು ಖುಷಿ ನನಗಾಗಿದೆ'' ಎಂದಿದ್ದಾರೆ ಪುನೀತ್.

 • ರಾಘಣ್ಣ ಪತ್ನಿಯನ್ನು ಅಮ್ಮಾ ಎಂದು ಕರೆಯೋದೇಕೆ..?

  why did raghavendra rajkumar call his wife amma

  ಅಮ್ಮನ ಮನೆ ಚಿತ್ರದ ಬಿಡುಗಡೆ ಸಂಭ್ರಮ, ರಾಘವೇಂದ್ರ ರಾಜ್‍ಕುಮಾರ್ ಮುಖದಲ್ಲಿ ಎದ್ದು ಕಾಣ್ತಿದೆ. 14 ವರ್ಷಗಳ ನಂತರ ರಾಘಣ್ಣ ತೆರೆ ಮೇಲೆ ಬರುತ್ತಿದ್ದಾರೆ. ಅದೇ ಅವರಿಗೆ ಖುಷಿ. ಅಮ್ಮನ ಮನೆ ಅನ್ನೋ ಸಿನಿಮಾ, ರಾಘಣ್ಣನ ಎಲ್ಲ ನೋವು ನಲಿವುಗಳನ್ನೂ ನೆನಪಿಸಿದೆ.

  ಹೀಗೆ ಎಲ್ಲವನ್ನೂ ನೆನಪಿಸಿಕೊಳ್ಳುವಾಗ ತಮ್ಮ ಪತ್ನಿ ಮಂಗಳಾ ಅವರನ್ನು ತಾವು ಅಮ್ಮಾ ಎಂದೇ ಕರೆಯೋದಾಗಿ ಹೇಳಿಕೊಂಡಿದ್ದಾರೆ. 

  ನನಗೆ ತಂದೆ ಆಗಾಗ ಹೇಳ್ತಾ ಇದ್ರು. ಹೆಂಡತಿಯಲ್ಲಿ ಬರೀ ಕಾಮವನ್ನು ಹುಡುಕಬೇಡ. ತಾಯಿಯನ್ನು ಹುಡುಕು. ಸಿಕ್ತಾಳೆ. ಅವರೊಳಗೆ ಇರುವ ತಾಯಿಯನ್ನು ನಾವು ಹೊರಗೆ  ತರಬೇಕು. ಒಮ್ಮೆ ಆ ತಾಯಿ ಹೊರಬಂದುಬಿಟ್ಟರೆ, ನಿನಗೆ ಹೆಂಡತಿ, ತಾಯಿ, ಮಗಳು, ಸೊಸೆ ಎಲ್ಲರೂ ಸಿಕ್ತಾರೆ' ಎನ್ನುತ್ತಿದ್ದರು.

  ಅಪ್ಪಾಜಿ ಹೇಳಿದಂತೆಯೇ ಆಯಿತು. ಮಂಗಳಾ ನನಗೆ ತಾಯಿಯಾದಳು ಎನ್ನುವ ರಾಘಣ್ಣ, ಮಂಗಳಾ ಅವರನ್ನು ಇವತ್ತಿಗೂ ಕರೆಯೋದು ಅಮ್ಮಾ ಎಂತಲೇ. ಅಪ್ಪ, ಅಮ್ಮನನ್ನು ಯಾವತ್ತೂ ಹೋಗೇ ಬಾರೇ ಎಂದವರಲ್ಲ. ಸೊಸೆ, ಹೆಣ್ಣು ಮಕ್ಕಳನ್ನೂ ಹೋಗೇ ಬಾರೇ ಎಂದವರಲ್ಲ. ಹೀಗಾಗಿ.. ನನಗೂ ಅದೇ ಅಭ್ಯಾಸವಾಗಿ ಹೋಗಿದೆ ಎಂದು ನೆನಪಿಸಿಕೊಳ್ಳೋ ರಾಘಣ್ಣ, ಅದೆಲ್ಲ ನೆನಪನ್ನೂ ಮರುಕುಳಿಸುವಂತೆ ಮಾಡಿದ ಅಮ್ಮನ ಮನೆ ಸಿನಿಮಾ, ನಿರ್ದೇಶಕ ನಿಖಿಲ್ ಮಂಜು, ನಿರ್ಮಾಪಕರಾದ ಶ್ರೀಲಲಿತಾ ಅವರಿಗೆ ಥ್ಯಾಂಕ್ಸ್ ಹೇಳ್ತಾರೆ.

 • ರಾಘಣ್ಣ ಹೇಳಿದ `ಆ 5 ನಿಮಿಷ'ದ ಮಾತು : ದಯವಿಟ್ಟು ಪಾಲಿಸಿ

  ರಾಘಣ್ಣ ಹೇಳಿದ `ಆ 5 ನಿಮಿಷ'ದ ಮಾತು : ದಯವಿಟ್ಟು ಪಾಲಿಸಿ

  ರಾಘವೇಂದ್ರ ರಾಜ್`ಕುಮಾರ್ ಅಪ್ಪು ಅಗಲಿಕೆಯ ನೋವಿನಲ್ಲಿಯೇ ಇದ್ದಾರೆ.  ಆದರೆ ಆ ನೋವಿನ ನಡುವೆಯೂ ರಾಘಣ್ಣ ಹೇಳುತ್ತಿರುವ ಮಾತುಗಳು ಪ್ರತಿಯೊಬ್ಬರ ಮನಕಲಕುತ್ತಿವೆ. ತಮ್ಮನ ಅಗಲಿಕೆ ನೋವಿನಲ್ಲಿ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ರಾಘವೇಂದ್ರ ರಾಜ್‍ಕುಮಾರ್ ಹೇಳಿರುವ ಮಾತುಗಳು ವೈರಲ್ ಆಗುತ್ತಿವೆ. ಇವು ಕೇವಲ ವೈರಲ್ ಆಗಬೇಕಾದ ಮಾತುಗಳಲ್ಲ.. ಪ್ರತಿಯೊಬ್ಬರೂ ಪಾಲಿಸಬೇಕಾದ ಸೂತ್ರಗಳೂ ಹೌದು.

  ಅವತ್ತು ಅಪ್ಪು ಬಳಿ ಎಲ್ಲವೂ ಇತ್ತು. ಕೋಟ್ಯಂತರ ಆಸ್ತಿಯಿತ್ತು. ಐದಾರು ಕಾರುಗಳಿದ್ದವು. ಕುಟುಂಬವಿತ್ತು. ಪ್ರೀತಿಯಿತ್ತು. ಪಕ್ಕದ ಮನೆಯಲ್ಲೇ ನಾನೂ ಇದ್ದೆ. ಹೆಸರು.. ಖ್ಯಾತಿ ಎಲ್ಲವೂ ಇತ್ತು. ಇಷ್ಟೆಲ್ಲ ಇದ್ದರೂ 5 ನಿಮಿಷ ಅವನಿಗೆ ಇರಲಿಲ್ಲ. ಇದು ಕೇವಲ ಅಂದಿನ ಘಟನೆಯ ವಿವರ ಅಲ್ಲ. ಆ ದಿನ ಟ್ರಾಫಿಕ್ ಜಾಮ್‍ನಿಂದಾಗಿ ಪುನೀತ್ ಸಕಾಲದಲ್ಲಿ ಆಸ್ಪತ್ರೆಗೆ ಹೋಗೋಕೆ ಆಗಲಿಲ್ಲ. ನನ್ನ ಮನವಿ ಇಷ್ಟೆ, ನಾನು ಇದನ್ನು ಸರ್ಕಾರದವರು ಮಾಡಬೇಕು ಎಂದು ಹೇಳುತ್ತಿಲ್ಲ. ನಾವು.. ನೀವು ಪ್ರತಿಯೊಬ್ಬರೂ ಮಾಡಬೇಕು. ಆ್ಯಂಬುಲೆನ್ಸ್ ಅಥವಾ ಬೇರೆ ಯಾವುದೇ ವಾಹನದಲ್ಲಿ ರೋಗಿಗಳಿದ್ದಾರೆ ಎಂದು ಗೊತ್ತಾದ ತಕ್ಷಣ ಅವುಗಳಿಗೆ ದಾರಿ ಬಿಟ್ಟುಕೊಡೋಣ. ರೋಗಿಗಳು ತುರ್ತು ಅಗತ್ಯ ಇದ್ದವರು ಬೇಗ ಆಸ್ಪತ್ರೆಗೆ ತೆರಳುವಂತೆ ಸಹಕರಿಸೋಣ. ಆಸ್ಪತ್ರೆಗಳ ಅಕ್ಕ ಪಕ್ಕ ಹಾಗೂ ತಲುಪುವ ರಸ್ತೆಗಳು ವಿಶಾಲವಾಗಿರಬೇಕು. ಆ್ಯಂಬುಲೆನ್ಸ್‍ಗಳಿಗೆ ಪ್ರತ್ಯೇಕ ಮಾರ್ಗ ಇರಬೇಕು. ಇದೆಲ್ಲ ಆಗಿ ನಾಳೆ ಯಾರದ್ದಾದರೂ ಜೀವ ಇಂತಹ ಕೆಲಸಗಳಿಂದ ಉಳಿದರೆ, ಅದು ನೀವು ನಮಗೆ ಕೊಡುವ ಕಾಣಿಕೆ. ಅಪ್ಪುಗೆ ಸಲ್ಲಿಸುವ ಶ್ರದ್ಧಾಂಜಲಿ ಎಂದಿದ್ದಾರೆ ರಾಘಣ್ಣ.

  ಸರ್ಕಾರದ ವಿಷಯ ಬಿಡಿ. ನಮ್ಮಿಂದ ಸಾಧ್ಯವಾಗೋದನ್ನ ಮಾಡೋಣ.ಇದು ಅಸಾಧ್ಯವಾದ ಕೆಲಸವೇನಲ್ಲ. ಆ್ಯಂಬುಲೆನ್ಸ್‍ಗೆ ಜಾಗ ಬಿಟ್ಟುಕೊಡಬೇಕಾದ್ದು ನಮ್ಮ ನಿಮ್ಮೆಲ್ಲರ ಕರ್ತವ್ಯ.

 • ರಾಘಣ್ಣ, ಹರ್ಷಿಕಾ ಪೂಣಚ್ಚ ಸ್ತಬ್ಧ

  ರಾಘಣ್ಣ, ಹರ್ಷಿಕಾ ಪೂಣಚ್ಚ ಸ್ತಬ್ಧ

  ರಾಘವೇಂದ್ರ ರಾಜ್‍ಕುಮಾರ್ ಮತ್ತೊಂದು ಚಿತ್ರ ಒಪ್ಪಿಕೊಂಡಿದ್ದಾರೆ. ಅಪ್ಪು ಅಗಲಿದ ನಂತರ ಮತ್ತೆ ಕಾಯಕವೇ ಕೈಲಾಸ ಎನ್ನುವಂತೆ ಬಣ್ಣ ಹಚ್ಚಿದ್ದಾರೆ. ಲಾಲಿ ರಾಘವೇಂದ್ರ ನಿರ್ದೇಶನದ ಚಿತ್ರ ಸ್ತಬ್ಧ. ಹರ್ಷಿಕಾ ಪೂಣಚ್ಚ ಚಿತ್ರದ ನಾಯಕಿ.

  ಇತ್ತೀಚೆಗೆ ಭೋಜ್‍ಪುರಿ ಚಿತ್ರರಂಗದಲ್ಲಿ ಹೆಚ್ಚು ಬ್ಯುಸಿಯಾಗಿರುವ ಹರ್ಷಿಕಾಗೆ ರಾಘಣ್ಣನ ಜೊತೆ ನಟಿಸುತ್ತಿರುವ ಖುಷಿ ಇದೆ. ಪುನೀತ್ ಸರ್ ಮತ್ತು ಶಿವಣ್ಣ ಜೊತೆ ನಟಿಸಿದ್ದೇನೆ. ಈಗ ರಾಘಣ್ಣ ಜೊತೆ ನಟಿಸುತ್ತಿದ್ದೇನೆ. ಚಿತ್ರದಲ್ಲಿ ನನಗೆ ರಾಘಣ್ಣ ಮಗಳ ಪಾತ್ರ ಎಂದು ಖುಷಿ ಹಂಚಿಕೊಂಡಿದ್ದಾರೆ. ಹರ್ಷಿಕಾ ಪೂಣಚ್ಚಗೆ ಪ್ರತಾಪ್ ಸಿಂಹ ಹೀರೋ.

  ಡಾ. ಡಿ.ವಿ. ವಿದ್ಯಾಸಾಗರ್ ನಿರ್ಮಾಣದ ಸ್ತಬ್ಧ ಚಿತ್ರದಲ್ಲಿ ಸೈಕಲಾಜಿಕಲ್ ಥ್ರಿಲ್ಲರ್ ಸ್ಟೋರಿ ಇದೆ. ಒಬ್ಬ ವ್ಯಕ್ತಿಗೆ ನಾನೊಬ್ಬನೇ ಇದ್ದೇನೆ ಎಂಬ ಭಾವನೆ ಕಾಡುತ್ತಿರುತ್ತೆ. ಆದರೆ, ಅವನ ಸುತ್ತಲೂ ಜನ ಇರುತ್ತಾರೆ. ಅವರ ನೆಗೆಟಿವ್ ಎನರ್ಜಿ ಇವನಿಗೆ ಟ್ರಾನ್ಸ್‍ಫರ್ ಆಗುತ್ತೆ. ಆಗ ಏನಾಗುತ್ತೆ ಅನ್ನೋದೇ ಚಿತ್ರದ ಕಥೆ ಎನ್ನುತ್ತಾರೆ ಲಾಲಿ ರಾಘವ್.

 • ರಾಘಣ್ಣನ ಆರೈಕೆಯಲ್ಲಿ ಡಾ.ರಾಜ್ ಕುಟುಂಬ

  ರಾಘಣ್ಣನ ಆರೈಕೆಯಲ್ಲಿ ಡಾ.ರಾಜ್ ಕುಟುಂಬ

  ಹಿರಿಯ ನಟ ರಾಘವೇಂದ್ರ ರಾಜ್ಕುಮಾರ್ ಮತ್ತೊಮ್ಮೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ನಟ ರಾಘವೇಂದ್ರ ರಾಜ್ ಕುಮಾರ್ ಅವರ ಆರೈಕೆಗೆ ಇಡೀ ಕುಟುಂಬ ನಿಂತಿದೆ. ಬೆಳಕು ಸಿನಿಮಾ ಚಿತ್ರೀಕರಣದ ಸಮಯದಲ್ಲಿ  ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾಘವೇಂದ್ರ ಅವರನ್ನು ತುರ್ತು ಚಿಕಿತ್ಸೆಗಾಗಿ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಯ್ತು. 

  ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ ಎಂದಿರೋ ವೈದ್ಯರು, ರಾಘವೇಂದ್ರ ರಾಜ್ಕುಮಾರ್ ಅವರನ್ನು ಐಸಿಯುನಲ್ಲಿರಿಸಿದ್ದಾರೆ. ಎರಡು ದಿನಗಳಲ್ಲಿ ಡಿಸ್ಚಾರ್ಜ್ ಮಾಡುವಂತೆ ತಿಳಿಸಿದ್ದಾರೆ.

  ಇಸಿಜಿ ಮಾಡಿದಾಗ ರಾಘಣ್ಣನವರ ಹೃದಯ ಬಡಿತ 180-190ರಲ್ಲಿತ್ತು. ಸಾಮಾನ್ಯವಾಗಿ ಅದು 70-100ರ ಮಿತಿಯಲ್ಲಿರಬೇಕು. ಹೀಗಾಗಿ ವೈದ್ಯರು ತಕ್ಷಣ ಹೃದಯ ಮಿಡಿತವನ್ನು ಹತೋಟಿಗೆ ತಂದರು.

  ಆಸ್ಪತ್ರೆಯಲ್ಲಿ ರಾಘವೇಂದ್ರ ರಾಜ್ಕುಮಾರ್ ಪತ್ನಿ, ವಿನಯ್ ರಾಜ್ಕುಮಾರ್ ನಿಗಾವಹಿಸಿಕೊಂಡಿದ್ದಾರೆ. ಶಿವಣ್ಣ, ಪುನೀತ್ ಕುಟುಂಬ ಆಸ್ಪತ್ರೆಯಲ್ಲೇ ಕಾದು ಕುಳಿತಿದೆ. ರಾಘಣ್ಣನವರ ಅಕ್ಕ ಲಕ್ಷ್ಮಿ ಮತ್ತು ಬಾವ ಗೋವಿಂದರಾಜ್ ಕೂಡಾ ಆಸ್ಪತ್ರೆಯಲ್ಲೇ ಇದ್ದಾರೆ. ನಟ ಧ್ರುವ ಸರ್ಜಾ ಹಾಗು ನಿರ್ದೇಶಕ ನಂದಕಿಶೋರ್ ಕೂಡ ಆಗಮಿಸಿ  ರಾಘವೇಂದ್ರ ರಾಜ್ ಕುಮಾರ್ ಆರೋಗ್ಯ ವಿಚಾರಿಸಿಕೊಂಡಿದ್ದಾರೆ.

  ರಾಘಣ್ಣ ಚೇತರಿಸಿಕೊಳ್ಳುತ್ತಿದ್ದಾರೆ. ಯಾವುದೇ ಆತಂಕವಿಲ್ಲ ಎಂದಿದೆ ರಾಜ್ ಕುಟುಂಬ.

 • ರಾಘಣ್ಣನ ಸಿನಿಮಾದಲ್ಲಿ ಕೃಷ್ಣದೇವರಾಯನ ಕಥೆ..!

  dayal's trayambakam has a murder mystery

  ದಯಾಳ್ ನಿರ್ದೇಶನದ ತ್ರಯಂಬಕಂ ಚಿತ್ರದಲ್ಲಿ ರಾಘವೇಂದ್ರ ರಾಜ್‍ಕುಮಾರ್ ನಟಿಸುತ್ತಿರುವುದು ಗೊತ್ತಿರುವ ವಿಷಯವೇ. ಆ ಚಿತ್ರದಲ್ಲಿ ರಾಘವೇಂದ್ರ ರಾಜ್‍ಕುಮಾರ್‍ಗೆ ಮಗಳಾಗಿ ನಟಿಸುತ್ತಿರುವುದು ಅನುಪಮಾ ಗೌಡ. ರಾಘವೇಂದ್ರ ರಾಜ್‍ಕುಮಾರ್ ಜೊತೆ ಮಾತನಾಡಿದ ಮೇಲೆ, ಅವರೊಂದಿಗೆ ನಟಿಸುವುದಕ್ಕೆ ಇದ್ದ ಭಯ ನಿವಾರಣೆಯಾಯ್ತು. ಈಗ ಚಿತ್ರೀಕರಣಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದಿದ್ದಾರೆ ಅನುಪಮಾ ಗೌಡ. 

  ಚಿತ್ರದ ಇನ್ನೊಂದು ವಿಶೇಷವೆಂದರೆ, ಕೃಷ್ಣದೇವರಾಯನ ಕಥೆ. ಸಿನಿಮಾದಲ್ಲಿ ಸುಮಾರು 15 ನಿಮಿಷಗಳ ಕಾಲ ಕೃಷ್ಣದೇವರಾಯನ ಕಥೆ ಬರಲಿದೆ. ಕೊಲೆ, ಮಿಸ್ಟರಿ ಸಿನಿಮಾಕ್ಕೂ, ಕೃಷ್ಣದೇವರಾಯನ ಕಥೆಗೂ ಏನು ಸಂಬಂಧ ಎಂದು ಕೇಳಬೇಡಿ. ಅದು ಚಿತ್ರದ ಕಥೆಯೊಳಗೆ ಅದ್ಭುತವಾಗಿ ಬೆರೆತುಕೊಂಡಿದೆ ಎಂದು ಭರವಸೆ ನೀಡುತ್ತಾರೆ ದಯಾಳ್.

  ತ್ರಯಂಬಕಂ ಎಂದರೆ ಮೂರು ಕಣ್ಣುಳ್ಳವನು ಎಂದರ್ಥ. ಮೂರು ಕಣ್ಣುಳ್ಳವನು ಶಿವ. ಹೀಗೆ ವಿಭಿನ್ನ ಟೈಟಲ್, ವಿಭಿನ್ನ ಕಥಾ ಹಂದರದ ಚಿತ್ರಕ್ಕೆ ಸಂಭಾಷಣೆ ಬರೆದಿರುವುದು ನವೀನ್ ಕೃಷ್ಣ. ಐವರು ಟೆಕ್ಕಿಗಳು ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

 • ರಾಘಣ್ಣನಿಗೆ ಇವರೇ ಅಪ್ಪ.. ಅವರೇ ಅಮ್ಮ..

  raghavendra rajkumar considers shivanna as dr rajkumar

  ರಾಘವೇಂದ್ರ ರಾಜ್‍ಕುಮಾರ್ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದು ಚಿರಂಜೀವಿ ಸುಧಾಕರ್ ಚಿತ್ರದ ಮೂಲಕ. ಚಿತ್ರ ಸಾಧಾರಣ ಯಶಸ್ಸು ಕಂಡಿತು. ಆದರೆ, 2ನೇ ಸಿನಿಮಾ ನಂಜುಂಡಿ ಕಲ್ಯಾಣ. ಕನ್ನಡ ಚಿತ್ರರಂಗದ ದಾಖಲೆಗಳನ್ನೆಲ್ಲ ಪುಡಿಪುಡಿ ಮಾಡಿತು. ಅದಾದ ನಂತರ ರಾಘವೇಂದ್ರ ರಾಜ್‍ಕುಮಾರ್ ಹಲವು ಹಿಟ್ ಕೊಟ್ಟಿದ್ದಾರೆ. ಸೋಲನ್ನೂ ಕಂಡಿದ್ದಾರೆ. ವಜ್ರೇಶ್ವರಿ ಕಂಬೈನ್ಸ್ ಜವಾಬ್ದಾರಿ ತೆಗೆದುಕೊಂಡು ಗೆದ್ದಿದ್ದಾರೆ. ಇಡೀ ಕುಟುಂಬದ ನೊಗ ಹೊತ್ತು ನಕ್ಕಿದ್ದಾರೆ. ಇಷ್ಟೆಲ್ಲದಕ್ಕೂ ರಾಘಣ್ಣನ ಜೊತೆ ಇರುತ್ತಿದ್ದವರು ಡಾ.ರಾಜ್ ಮತ್ತು ಪಾರ್ವತಮ್ಮ.

  ಈಗ ಅಮ್ಮನ ಮನೆ ರಿಲೀಸ್. ಆದರೆ, ಗೊತ್ತಿರಲಿ, ರಾಜ್-ಪಾರ್ವತಮ್ಮ ಇಲ್ಲದೆ ರಿಲೀಸ್ ಆಯ್ತು ರಾಘಣ್ಣನ ಮೊದಲ ಸಿನಿಮಾ ಅಮ್ಮನ ಮನೆ. `ಅದು ನನ್ನನ್ನು ಕಾಡುತ್ತಲೇ ಇದೆ. ಆದರೆ, ನಾನೀಗ ಅಪ್ಪಾಜಿಯನ್ನು ಅಣ್ಣನಲ್ಲಿ ನೋಡುತ್ತಿದ್ದೇನೆ. ಶಿವಣ್ಣ, ನನಗೆ ಅಪ್ಪನೂ ಆಗಿಬಿಟ್ಟಿದ್ದಾರೆ. ಅತ್ತಿಗೆ, ಹೆಂಡತಿಯಲ್ಲಿ ತಾಯಿಯನ್ನು ನೋಡುತ್ತಿದ್ದೇನೆ. ಹೆತ್ತವರು ಇದ್ದಿದ್ದರೆ ಕುಣಿದಾಡುತ್ತಿದ್ದರು'' ಎಂದು ಭಾವುಕರಾಗಿಯೇ ಹೇಳಿದ್ದಾರೆ ರಾಘಣ್ಣ.

  ನಿಖಿಲ್ ಮಂಜು ನಿರ್ದೇಶನದ, ಶ್ರೀಲಲಿತಾ ಬ್ಯಾನರ್‍ನ ಸಿನಿಮಾ, ಈಗ ರಾಜ್ಯಾದ್ಯಂತ ತೆರೆ ಕಂಡಿದೆ. 

 • ರಾಘವೇಂದ್ರ ರಾಜ್ ಕುಮಾರ್ ಶ್ರೇಷ್ಟ ನಟ, ಮೇಘನಾ ರಾಜ್ ಶ್ರೇಷ್ಟ ನಟಿ

  Raghavendra Rajkumar, Meghana Raj Image

  ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿ ಪ್ರಕಟಗೊಂಡಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೂಲಕ ರಾಜ್ಯ ಸರ್ಕಾರ ಚಲನಚಿತ್ರ ರಂಗದ ಸಾಧಕರಿಗೆ ಜೀವಮಾನ ಸಾಧನೆಗಾಗಿ ಮತ್ತು ಚಲನಚಿತ್ರದ ವಿವಿಧ ವಿಭಾಗಗಳಲ್ಲಿ ನೀಡುವ 2018ನೇ ಪ್ರಶಸ್ತಿಗಳು ಘೋಷಣೆಯಾಗಿವೆ. ಬಸಂತ್ ಕುಮಾರ್ ಪಾಟೀಲ್ ಅಧ್ಯಕ್ಷತೆಯ ಸಮಿತಿಯಲ್ಲಿ ಪಿ.ಎಚ್‌.ವಿಶ್ವನಾಥ್, ಮಾರ್ಸ್ ಸುರೇಶ್, ರವೀಂದ್ರ ಭಟ್  ಇದ್ದರು.  ಆಯ್ಕೆ ಸಮಿತಿಗೆ ಕಳಿಸಲಾಗಿದ್ದ 162 ಚಿತ್ರಗಳನ್ನು ವೀಕ್ಷಿಸಿದ ಸಮತಿ ವಾರ್ಷಿ ಪ್ರಶಸ್ತಿ ಮತ್ತು ಜೀವಮಾನ ಸಾಧನೆಯ ಪ್ರಶಸ್ತಿಗಳನ್ನು ಘೋಷಿಸಿದೆ.

  ಜೀವಮಾನ ಸಾಧನೆ ಪ್ರಶಸ್ತಿ :

  ಡಾ.ರಾಜ್‌ಕುಮಾರ್ ಪ್ರಶಸ್ತಿ -ಜೆ.ಕೆ.ಶ್ರೀನಿವಾಸ ಮೂರ್ತಿ

  ಪುಟ್ಟಣ್ಣ ಕಣಗಾಲ್ ಪ್ರಶಸ್ತಿ-ಪಿ.ಶೇಷಾದ್ರಿ

  ಡಾ.ವಿಷ್ಣುವರ್ಧನ್ ಪ್ರಶಸ್ತಿ-ಬಿ.ಎಸ್.ಬಸವರಾಜು

  ಮೊದಲನೇ ಅತ್ಯುತ್ತಮ ಚಿತ್ರ: ಆ ಕರಾಳ ರಾತ್ರಿ

  ಎರಡನೇ ಅತ್ಯುತ್ತಮ ಚಿತ್ರ: ರಾಮನ ಸವಾರಿ

  ಮೂರನೇ ಅತ್ಯುತ್ತಮ ಚಿತ್ರ: ಒಂದಲ್ಲಾ ಎರಡಲ್ಲಾ

  ಅತ್ಯುತ್ತಮ ನಟ: ರಾಘವೇಂದ್ರ ರಾಜ್‌ಕುಮಾರ್ (ಅಮ್ಮನ ಮನೆ)

  ಅತ್ಯುತ್ತಮ ನಟಿ: ಮೇಘನಾ ರಾಜ್ (ಇರುವುದೆಲ್ಲವ ಬಿಟ್ಟು)

  ಅತ್ಯುತ್ತಮ ಪೋಷಕ ನಟ: ಬಾಲಾಜಿ ಮನೋಹರ್ (ಚೂರಿಕಟ್ಟೆ)

  ಅತ್ಯುತ್ತಮ ಪೋಷಕ ನಟಿ: ವೀಣಾ ಸುಂದರ್ (ಆ ಕರಾಳ ರಾತ್ರಿ)

  ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ: ಸಂತಕವಿ ಕನಕದಾಸರ ರಾಮಧಾನ್ಯ

  ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು

  ಅತ್ಯುತ್ತಮ ಮಕ್ಕಳ ಚಿತ್ರ: ಹೂವು ಬಳ್ಳಿ

  ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ: ಬೆಳಕಿನ ಕನ್ನಡಿ

  ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ: ದೇಯಿ ಬೈದೇತಿ

  ಅತ್ಯುತ್ತಮ ಕತೆ: ಹರೀಶ್ ಎಸ್ (ನಾಯಿಗೆರೆ)

  ಅತ್ಯುತ್ತಮ ಚಿತ್ರಕಥೆ: ಪಿ.ಶೇಷಾದ್ರಿ (ಮೂಕಜ್ಜಿಯ ಕನಸುಗಳು)

  ಅತ್ಯುತ್ತಮ ಸಂಭಾಷಣೆ: ಶಿರಿಷಾ ಜೋಶಿ (ಸಾವಿತ್ರಿ ಭಾಯಿ ಪುಲೆ)

  ಅತ್ಯುತ್ತಮ ಸಂಗೀತ ನಿರ್ದೇಶನ: ರವಿ ಬಸ್ರೂರು (ಕೆಜಿಎಫ್)

  ಅತ್ಯುತ್ತಮ ಕಲಾ ನಿರ್ದೇಶನ : ಶಿವಕುಮಾರ್ (ಕೆಜಿಎಫ್)

  ಅತ್ಯುತ್ತಮ ಬಾಲನಟ: ಮಾಸ್ಟರ್ ಆರೆನ್(ರಾಮನ ಸವಾರಿ)

  ಅತ್ಯುತ್ತಮ ಬಾಲನಟಿ: ಬೇಬಿ ಸಿಂಚನಾ (ಅಂದವಾದ ಸಿನಿಮಾ)

  ಅತ್ಯುತ್ತಮ ಗೀತ ರಚನೆ: ಡಾ.ಬರಗೂರು ರಾಮಚಂದ್ರಪ್ಪ (ಬಯಲಾಟದ ಭೀಮಣ್ಣ ಚಿತ್ರದ ಸಾವೇ ಸಾವೇ ಹಾಡು)

  ಅತ್ಯುತ್ತಮ ಕಿರುಚಿತ್ರ: ಪಡುವಾರಳ್ಳಿ

  ಅತ್ಯುತ್ತಮ ಹಿನ್ನಲೆ ಗಾಯಕ: ಸಿದ್ದಾರ್ಥ್ ಬೆಳ್ಮಣ್ಣು (ಸಂತಕವಿ ಕನಕದಾಸರ ರಾಮಧಾನ್ಯ ಚಿತ್ರದ ಇರುಳ ಚಂದಿರನ.. )

  ಅತ್ಯುತ್ತಮ ಹಿನ್ನಲೆ ಗಾಯಕಿ: ಕಲಾವತಿ ದಯಾನಂದ (ದೇಯಿ ಬೈದೇತಿ ಚಿತ್ರದ ಗೆಜ್ಜೆಗಿರಿ ನಂದನಾ.. )

  ರಾಜ್ಯ ಚಲನಚಿತ್ರ ಸಾಹಿತ್ಯ ವಾರ್ಷಿಕ ಪ್ರಶಸ್ತಿಯನ್ನು ಇಬ್ಬರು ಲೇಖಕರಿಗೆ ಜಂಟಿಯಾಗಿ ನೀಡಲಾಗಿದೆ. ಚಿತ್ರಕಥೆ ಹಾಗೆಂದರೇನು?  ಕೃತಿಗೆ ಎನ್‌.ಎಸ್‌.ಶಂಕರ್ ಮತ್ತು ಅಂಬರೀಶ್ ವ್ಯಕ್ತಿ-ವ್ಯಕ್ತಿತ್ವ-ವರ್ಣರಂಜಿತ ಬದುಕು ಕೃತಿಗೆ ಡಾ.ಶರಣು ಹುಲ್ಲೂರು ಪ್ರಶಸ್ತಿ ಪಡೆದಿದ್ದಾರೆ.

 • ರಾಘವೇಂದ್ರ ರಾಜ್‍ಕುಮಾರ್ ನಟಿಸುತ್ತಿರುವುದು 3 ಚಿತ್ರಗಳಲ್ಲಿ..!

  raghavendra rajkumar to act in 3 diferent movies

  ರಾಘವೇಂದ್ರ ರಾಜ್‍ಕುಮಾರ್, ಚೀಲಂ ಚಿತ್ರದಲ್ಲಿ ನಟಿಸೋಕೆ ಒಪ್ಪಿದ್ದಾರೆ. ಅದೂ ವಿಲನ್ ಪಾತ್ರದಲ್ಲಿ ಅನ್ನೋದು ಎಲ್ಲರ ಹುಬ್ಬೇರಿಸಿತ್ತು. ಅಷ್ಟೇ ಅಲ್ಲ, 14 ವರ್ಷಗಳ ನಂತರ ಆಡುವ ಗೊಂಬೆ ಚಿತ್ರಕ್ಕೆ ಹಾಡನ್ನೂ ಹಾಡಿದ್ದ ರಾಘವೇಂದ್ರ, ಚಿತ್ರರಂಗಕ್ಕೆ ಪುನರಾಗಮನ ಸಾರಿದ್ದರು. ಆದರೆ, ಅದಕ್ಕಿಂತಲೂ ಖುಷಿ ಪಡುವ ವಿಚಾರ ಇನ್ನೂ ಒಂದಿದೆ. ರಾಘವೇಂದ್ರ ರಾಜ್‍ಕುಮಾರ್ ನಟಿಸಲು ಒಪ್ಪಿರುವ ಚಿತ್ರ ಚೀಲಂ ಒಂದೇ ಅಲ್ಲ, ಇನ್ನೂ ಮೂರು ಚಿತ್ರಗಳಿವೆ.

  ನಿಖಿಲ್ ಮಂಜು ನಿರ್ದೇಶನದ ಅಮ್ಮನ ಮನೆ ಚಿತ್ರದಲ್ಲಿ ರಾಘವೇಂದ್ರ ರಾಜ್‍ಕುಮಾರ್ ನಟಿಸುತ್ತಿದ್ದಾರೆ. ತಂದೆ ತಾಯಿಯ ಪ್ರೀತಿಯ ಬಗ್ಗೆಯೇ ಹೇಳುವ ಸಿನಿಮಾ ಅದು. 

  ಇನ್ನೊಂದು ಪ್ರತಾಪ್ ನಿರ್ದೇಶನದ ಸಿನಿಮಾ. ಅದು ಹಾರರ್ ಚಿತ್ರ. ಒಟ್ಟಿನಲ್ಲಿ ಅನಾರೋಗ್ಯದಿಂದ ಚೇತರಿಸಿಕೊಂಡಿರುವ ರಾಘವೇಂದ್ರ ರಾಜ್‍ಕುಮಾರ್, ಮತ್ತೊಮ್ಮೆ ಸಿನಿಮಾದಲ್ಲಿ ಬ್ಯುಸಿಯಾಗುತ್ತಿರುವುದೇ ವಿಶೇಷ.

 • ರಾಘವೇಂದ್ರ ರಾಜ್‍ಕುಮಾರ್‍ಗೆ ಸುಮನ್ ರಂಗನಾಥ್ ಜೋಡಿ?

  suman ranganath to pair with raghavendran rajkumar in chillam

  ಚಿಲಂ ಸಿನಿಮಾ ಪ್ರತಿದಿನವೂ ಒಂದಲ್ಲಾ ಒಂದು ವಿಷಯದಿಂದ ಸುದ್ದಿ ಮಾಡುತ್ತಿದೆ. ಮನೋರಂಜನ್ ರವಿಚಂದ್ರನ್ ನಾಯಕತ್ವದ ಚಿತ್ರದಲ್ಲಿ ರಾಘವೇಂದ್ರ ರಾಜ್‍ಕುಮಾರ್ ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ನಟಿಸುತ್ತಿರುವುದೇ ದೊಡ್ಡ ಸುದ್ದಿ. ಇದರ ಜೊತೆ ನಾನಾ ಪಾಟೇಕರ್, ಸರಿತಾ ಕೂಡಾ ತಂಡಕ್ಕೆ ಸೇರಿದ್ದಾರೆ. ಈಗ ಸುಮನ್ ರಂಗನಾಥ್ ಸೇರುವ ಸಮಯ ಹತ್ತಿರವಾಗಿದೆ.

  ಚಿತ್ರದ ನಿರ್ದೇಶಕಿ ಚಂದ್ರಕಲಾ, ರಾಘವೇಂದ್ರ ರಾಜ್‍ಕುಮಾರ್ ಜೋಡಿಯ ಪಾತ್ರಕ್ಕೆ ಕನ್ನಡದ ಹಲವು ನಟಿಯರನ್ನು ಸಂಪರ್ಕಿಸಿದ್ದರಂತೆ. ಮಲ್ಲಿಕಾ ಶೆರಾವತ್‍ರನ್ನೂ ಕಾಂಟ್ಯಾಕ್ಟ್ ಮಾಡಿದ್ದರಂತೆ. ಆಧರೆ, ಸಂಭಾವನೆ ವಿಚಾರದಲ್ಲಿ ಹೊಂದಿಕೆಯಾಗಲಿಲ್ಲ. ಅಲ್ಲಿಂದ ವಾಪಸ್ ಬಂದು ಯೋಚಿಸುತ್ತಿದ್ದಾಗ ಹೊಳೆದಿದ್ದು ಸುಮನ್ ರಂಗನಾಥ್. ತಕ್ಷಣ ಅವರನ್ನು ಸಂಪರ್ಕಿಸಿ ಕಥೆ ಹೇಳಿದೆವು. ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಅವರು ಓಕೆ ಅನ್ನೋದನ್ನು ಕಾಯುತ್ತಿದ್ದೇವೆ ಎಂದಿದ್ದಾರೆ ನಿರ್ದೇಶಕಿ ಚಂದ್ರಕಲಾ.

 • ರಾಜಕಾರಣಕ್ಕೆ ರಾಘವೇಂದ್ರ ರಾಜ್ ಕುಮಾರ್

  raghavendra rajkumar to act as politician in his next

  ಚಿತ್ರನಟ ರಾಘವೇಂದ್ರ ರಾಜ್‍ಕುಮಾರ್ ರಾಜಕೀಯಕ್ಕೆ ಬರುತ್ತಿದ್ದಾರಾ ಎಂದು ಗಾಬರಿಯಾಗಬೇಡಿ. ರಾಘಣ್ಣ ರಾಜಕಾರಣಿಯಾಗುತ್ತಿರುವುದು ಸತ್ಯ, ಆದರೆ ರಿಯಲ್ ಲೈಫಿನಲ್ಲಿ ಅಲ್ಲ ರೀಲ್ ಲೈಫಲ್ಲಿ. ಇತ್ತೀಚೆಗೆ ತಾನೇ ಶುರುವಾಗಿರೋ ವಾರ್ಡ್ ನಂ.11 ಚಿತ್ರದಲ್ಲಿ ರಾಘವೇಂದ್ರ ರಾಜ್‍ಕುಮಾರ್ ರಾಜಕಾರಣಿಯ ಪಾತ್ರ ಮಾಡುತ್ತಿದ್ದಾರೆ.

  ಶ್ರೀಕಾಂತ್ ನಿರ್ದೇಶನದ ಚಿತ್ರಕ್ಕೆ ಗುರುರಾಜ್ ಮತ್ತು ಸಂದೀಪ್ ಶಿವಮೊಗ್ಗ ನಿರ್ಮಾಪಕರು. ರಾಘಣ್ಣ ಜೊತೆಗೆ ರಕ್ಷಿತ್, ವಿಶ್ವ, ಮೇಘನಾ ಮೊದಲಾದವರು ನಟಿಸುತ್ತಿದ್ದಾರೆ. ಚಿತ್ರದ ಮುಹೂರ್ತದಲ್ಲಿ ಭಾಗವಹಿಸಿದ್ದ ಪುನೀತ್ ರಾಜ್‍ಕುಮಾರ್, ರಿಷಬ್ ಶೆಟ್ಟಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

 • ರಾಜ್ಯ ಪ್ರಶಸ್ತಿ ನಿರ್ದೇಶಕರಿಗೆ ಸಲ್ಲಬೇಕು : ರಾಘವೇಂದ್ರ ರಾಜ್ ಕುಮಾರ್

  Raghavendra Rajkumar Image

  ನಟ ರಾಘವೇಂದ್ರ ರಾಜ್ಕುಮಾರ್ ಚಿತ್ರರಂಗಕ್ಕೆ ಬಂದು 30 ವರ್ಷಗಳಾಗಿದ್ದರೂ, ರಾಜ್ಯ ಪ್ರಶಸ್ತಿ ಮುಕುಟ ಸಿಕ್ಕಿರಲಿಲ್ಲ. ಇದೇ ಮೊದಲ ಬಾರಿಗೆ ಅಮ್ಮನ ಮನೆ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಪಡೆದಿರುವ ರಾಘವೇಂದ್ರ ರಾಜ್ಕುಮಾರ್, ಪ್ರಶಸ್ತಿಯ ಶ್ರೇಯವನ್ನು ಚಿತ್ರದ ನಿರ್ದೇಶಕ ನಿಖಿಲ್ ಮಂಜು ಅವರಿಗೆ ಕೊಟ್ಟಿದ್ದಾರೆ.

  ಇದು ನನ್ನ ವೃತ್ತಿ ಜೀವನದ ಮೊದಲ ಪ್ರಶಸ್ತಿ. ಅಪ್ಪಾಜಿ, ಅಣ್ಣ, ಪುನೀತ್ ಮತ್ತು ಪೂರ್ಣಿಮಾಗೆ ರಾಜ್ಯ ಪ್ರಶಸ್ತಿ ಸಿಕ್ಕಿದ್ದವು. ನನಗೆ ಸಿಕ್ಕಿರಲಿಲ್ಲ. ಈಗ ಇಡೀ ಕುಟುಂಬಕ್ಕೆ ಪ್ರಶಸ್ತಿ ಸಿಕ್ಕಂತಾಗಿದೆ. ಈ ಪ್ರಶಸ್ತಿಯನ್ನು ಚಿತ್ರದ ನಿರ್ದೇಶಕರಿಗೇ ಅರ್ಪಿಸುತ್ತೇನೆ ಎಂದಿದ್ದಾರೆ ರಾಘವೇಂದ್ರ ರಾಜ್ಕುಮಾರ್.

  ದೈಹಿಕವಾಗಿ ದುರ್ಬಲನಾಗಿರುವ ವಿಕಲಚೇತನ ವ್ಯಕ್ತಿ, ತನ್ನ ತಾಯಿಯನ್ನು ನೋಡಿಕೊಳ್ಳಲು ಒದ್ದಾಡುವ, ಅನ್ಯಾಯವನ್ನು ಸಹಿಸದ ರಾಜೀವ ಎಂಬ ಪಾತ್ರದಲ್ಲಿ ರಾಘವೇಂದ್ರ ರಾಜ್ಕುಮಾರ್ ಅಭಿನಯ ಮನ ಸೆಳೆದಿತ್ತು. ಆತ್ಮಶ್ರೀ ಬ್ಯಾನರ್ ನಿರ್ಮಾಣದ ಚಿತ್ರವನ್ನು ನಿಖಿಲ್ ಮಂಜು ನಿರ್ದೇಶಿಸಿದ್ದರು.

 • ರಾಜ್ಯಪಾಲರ ಪಾತ್ರದಲ್ಲಿ ರಾಘವೇಂದ್ರ ರಾಜಕುಮಾರ್

  ರಾಜ್ಯಪಾಲರ ಪಾತ್ರದಲ್ಲಿ ರಾಘವೇಂದ್ರ ರಾಜಕುಮಾರ್

  ಧ್ರುವ 369. ಇದು ಹೊಸ ಚಿತ್ರದ ಹೆಸರು. ನಿರ್ದೇಶಕರ ಹೆಸರು ಶಂಕರ್ ನಾಗ್. ಇದು ಪುರಾಣದಲ್ಲಿ ಬರುವ ಧ್ರುವ ನಕ್ಷತ್ರಕ್ಕೂ ಈಗಿನ ಖಗೋಳ ಶಾಸ್ತ್ರಕ್ಕೂ ಸಂಬಂಧಪಟ್ಟ ಕಥೆಯಂತೆ. ಈ ಚಿತ್ರದ ಓಪನಿಂಗ್, ಇಂಟರ್‍ವೆಲ್ ಹಾಗೂ ಕ್ಲೈಮಾಕ್ಸ್‍ನಲ್ಲಿ ರಾಘಣ್ಣ ಬರುತ್ತಾರೆ. ಅವರಿಂದಲೇ ಇಡೀ ಚಿತ್ರದ ಕಥೆ. ಅವರು ರಾಜ್ಯಪಾಲರ ಪಾತ್ರ ಮಾಡಿದ್ದಾರೆ ಎಂದು ವಿವರ ನೀಡಿದ್ದಾರೆ ಶಂಕರ್ ನಾಗ್.

  ರಮೇಶ್ ಭಟ್, ಅರುಣ್ ಸಾಗರ್, ಅತೀಶ್ ಶೆಟ್ಟಿ, ಚಂದನಾ, ನಮಿತಾ ಸೇರಿದಂತೆ ಹಲವು ರಂಗಭೂಮಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.

  ಶ್ರೀಕೃಷ್ಣ ಕಾಂತಿಲ ಚಿತ್ರದ ನಿರ್ಮಾಪಕರು. ಅಚಿಂತ್ಯ ಸ್ಟುಡಿಯೋಸ್ ಬ್ಯಾನರ್‍ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರವಿದು. ಚಿತ್ರದ ಕ್ಲೈಮಾಕ್ಸ್ ಶೂಟಿಂಗ್ ಇತ್ತೀಚೆಗೆ ನಂದಿಬೆಟ್ಟದಲ್ಲಿ ನಡೆಯಿತು. ಸತೀಶ್ ಬಾಬು ಸಂಗೀತ ನಿರ್ದೇಶನವಿದ್ದು, ಮಹಾಬಲ ಛಾಯಾಗ್ರಹಣ ಇದೆ.

 • ಲಕ್ಷ್ಮೀ ಬಾರಮ್ಮ ಹೀರೋ ಹೊಸ ಸಿನಿಮಾ ಶ್ರೀ ; ರಾಘಣ್ಣನ ಮಗನಾಗಿ ಚಂದು ಗೌಡ

  ragahvednra rajkumar's next film titled sri

  ಲಕ್ಷ್ಮೀ ಬಾರಮ್ಮ, ಕಿರುತೆರೆಯ ಜನಪ್ರಿಯ ಧಾರಾವಾಹಿ. ಆ ಧಾರಾವಾಹಿಯ ಕ್ಯೂಟ್ ಹುಡುಗನಾಗಿ ನಟಿಸಿ ಗೆದ್ದಿರುವ ಚಂದೂ ಗೌಡ, ಈಗ ಶ್ರೀ ಚಿತ್ರದಲ್ಲಿ ಹೀರೋ ಆಗಿದ್ದಾರೆ. ಆದಿತಿ ಮಹದೇವ್ ನಿರ್ದೇಶನದ ಚಿತ್ರದಲ್ಲಿ ಚಂದೂಗೌಡ ಹೀರೋ ಆದರೆ, ಅನುಷಾ ಸತೀಶ್ ನಾಯಕಿ. ವಿಶೇಷವೆಂದರೆ, ರಾಘವೇಂದ್ರ ರಾಜ್‍ಕುಮಾರ್ ನಾಯಕನ ತಂದೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  ಶ್ರೀ ಅನ್ನೋ ಟೈಟಲ್‍ಗೆ ತಸ್ಮೈ ಶ್ರೀ ಗುರವೇ ನಮಃ ಅನ್ನೋ ಟ್ಯಾಗ್‍ಲೈನ್ ಇದೆ. ಗುರುವಿನ ಮಹತ್ವ ಸಾರುವ ಕತೆ, ಚಿತ್ರದಲ್ಲಿದೆಯಂತೆ. ಆರ್.ಸ್ವಾಧೀನ್ ಕುಮಾರ್ ಚಿತ್ರದ ನಿರ್ಮಾಪಕರಾಗಿದ್ದಾರೆ.

 • ಸೈಬರ್ ಕ್ರೈಂ ಕಂಟ್ರೋಲ್‍ಗೆ ಅಂಬಿ, ಅಪ್ಪು, ರಾಘಣ್ಣ

  ambi puneeth rajkumar raghavendra rajkumar

  ಸೈಬರ್ ಕ್ರೈಂಗಳು ದಿನೇ ದಿನೇ ಹೆಚ್ಚುತ್ತಿವೆ. ಪೊಲೀಸರು ಎಷ್ಟೇ ಅಲರ್ಟ್ ಮಾಡಿದರೂ.. ಯಾರೋ ಫೋನ್ ಮಾಡಿದವರಿಗೆ ಡೆಬಿಟ್, ಕ್ರೆಡಿಟ್ ಕಾರ್ಡ್‍ಗಳ ಡೇಟಾ ಕೊಟ್ಟು, ಒಟಿಪಿ ಕೊಟ್ಟು ಹಣ ಕಳೆದುಕೊಳ್ಳುವವರು ದಿನೇ ದಿನೇ ಹೆಚ್ಚುತ್ತಿದ್ದಾರೆ. ಬೆಂಗಳೂರೊಂದರಲ್ಲೇ ಪ್ರತಿದಿನ ಮಿನಿಮಮ್ 25 ಜನ ಹೀಗೆ ಮೋಸ ಹೋಗ್ತಾರಂತೆ. ಈಗ ಆ ಚೀಟಿಂಗ್‍ಗೆ ಮ್ಯಾಟ್ರಿಮೋನಿಯಲ್ ವೆಬ್‍ಸೈಟುಗಳೂ ಸೇರಿವೆ. ಹೀಗಾಗಿ ಇವನ್ನು ತಡೆಗಟ್ಟಲು ಸೈಬರ್ ಪೊಲೀಸರು ಅಂಬರೀಷ್, ಪುನೀತ್ ರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್, ರಂಗಾಯಣ ರಘು ಅವರನ್ನು ಅರ್ಥಾತ್ ಅವರ ಧ್ವನಿಯನ್ನು ಬಳಸಿಕೊಳ್ಳಲು ಮುಂದಾಗಿದ್ದಾರೆ.

  ಸ್ಟಾರ್‍ಗಳು, ಕಲಾವಿದರ ಮೇಲೆ ಜನರಿಗೆ ಪ್ರೀತಿ ಮತ್ತು ನಂಬಿಕೆ ಹೆಚ್ಚು. ಅವರು ಹೇಳಿದ್ದನ್ನು ಪಾಲಿಸುತ್ತಾರಷ್ಟೇ ಅಲ್ಲ, ಬೇಗ ಮರೆಯುವುದಿಲ್ಲ. ಹೀಗಾಗಿ ಸೈಬರ್ ವಂಚನೆಯ ಸುಳಿಯಲ್ಲಿ ಸಿಲುಕದೇ ಇರಲು ಏನು ಮಾಡಬೇಕು.. ಏನು ಮಾಡಬಾರದು ಎಂಬ ಬಗ್ಗೆ ಅವರಿಂದ ಹೇಳಿಸೋದು ಸೈಬರ್ ಪೊಲೀಸರ ಪ್ಲಾನ್. ಈ ಮೂಲಕ ಸೈಬರ್ ಕ್ರೈಂ ಜಾಗೃತಿ ಸಂದೇಶ ಸಾರಲು ನಿರ್ಧರಿಸಿದ್ದಾರೆ ಬೆಂಗಳೂರು ಸೈಬರ್ ಕ್ರೈಂ ವಿಭಾಗದ ಪೊಲೀಸರು.

  ಅಷ್ಟೇ ಅಲ್ಲ, ಇದರ ಜೊತೆಯಲ್ಲೇ ಇನ್ನೂ ಒಂದು ಸಲಹೆ ಕೊಟ್ಟಿದ್ದಾರೆ ಸೈಬರ್ ವಿಭಾಗದ ಇನ್ಸ್‍ಪೆಕ್ಟರ್ ಯಶ್‍ವಂತ್ ಕುಮಾರ್. ಸೈಬರ್ ಕ್ರಿಮಿನಲ್‍ಗಳು ಹೆಚ್ಚಾಗಿ ಹೊರರಾಜ್ಯದವರು. ಅವರು ಹಿಂದಿ ಅಥವಾ ಇಂಗ್ಲಿಷ್‍ನಲ್ಲಿಯೇ ವ್ಯವಹರಿಸುತ್ತಾರೆ. ನಾವು ಬ್ಯಾಂಕ್‍ನವರ ಜೊತೆ ಆದಷ್ಟು ಕನ್ನಡದಲ್ಲಿಯೇ ಮಾತನಾಡಿದರೆ ಅರ್ಧ ಅಪರಾಧಗಳನ್ನು  ತಡೆಗಟ್ಟಬಹುದು ಅನ್ನೋದು ಅವರ ಸಲಹೆ. ಯಾವುದೇ ಬ್ಯಾಂಕ್‍ನವರು ತಾವಾಗಿಯೇ ಫೋನ್ ಮಾಡಿ ನಮ್ಮ ವಿವರ, ಖಾತೆಯ ವಿವರ, ಒಟಿಪಿ, ಪಾಸ್‍ವರ್ಡ್ ಕೇಳುವುದಿಲ್ಲ ಎನ್ನುವುದನ್ನೂ ಅವರು ಮತ್ತೊಮ್ಮೆ ನೆನಪಿಸಿದ್ದಾರೆ. ಇದರರ್ಥ ಇಷ್ಟೆ.. ವಂಚನೆಯಿಂದ ತಪ್ಪಿಸಿಕೊಳ್ಳಲು ಇರುವ ಅತಿ ದೊಡ್ಡ ಆಯುಧ ನಮ್ಮ ಭಾಷೆ.. ಕನ್ನಡ.

 • ಹಿಂದೂ ಹುಡುಗ.. ಮುಸ್ಲಿಂ ಹುಡುಗಿ ಲವ್ ಸ್ಟೋರಿಗೆ ರಾಘಣ್ಣ ಶೃತಿ

  ಹಿಂದೂ ಹುಡುಗ.. ಮುಸ್ಲಿಂ ಹುಡುಗಿ ಲವ್ ಸ್ಟೋರಿಗೆ ರಾಘಣ್ಣ ಶೃತಿ

  ರಾಘವೇಂದ್ರ ರಾಜಕುಮಾರ್ ಮತ್ತೊಂದು ಚಿತ್ರ ಒಪ್ಪಿಕೊಂಡಿದ್ದಾರೆ. ರಾಘಣ್ಣಂಗೆ ನಾಯಕಿಯಾಗಿರೋದು ಶೃತಿ. ಶೃತಿ ನಟಿಸಿದ ಮೊದಲ ಸಿನಿಮಾ ಆಸೆಗೊಬ್ಬ ಮೀಸೆಗೊಬ್ಬ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಗೆಸ್ಟ್ ರೋಲ್‍ನಲ್ಲಿ ನಟಿಸಿದ್ದರು. ಅದಾದ ಮೇಲೆ ಗೆಲುವಿನ ಸರದಾರ ಚಿತ್ರದಲ್ಲಿ ನಟಿಸಿದ್ದರು. ಅದಾದ ಸುಮಾರು 25  ವರ್ಷಗಳ ನಂತರ ಇಬ್ಬರೂ ಒಂದೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಟೈಟಲ್ 13.

  ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಗ್ಯಾರೇಜ್‍ನಲ್ಲಿ ಕೆಲಸ ಮಾಡುವ ಪಾತ್ರ ಮತ್ತು ನಿವೃತ್ತ ಪೊಲೀಸ್ ಆಫೀಸರ್ ಆಗಿದ್ದರೆ, ಶೃತಿ ಅವರದ್ದು ಟೀ ಅಂಗಡಿ ನಡೆಸುವ ಮುಸ್ಲಿಂ ಮಹಿಳೆಯ ಪಾತ್ರ. ರಾಘಣ್ಣ ಮೋಹನ್ ಆಗಿ, ಶೃತಿ ಸಾಯಿರಾ ಬಾನು ಆಗಿ ನಟಿಸುತ್ತಿದ್ದಾರೆ. ನರೇಂದ್ರ ಬಾಬು ನಿರ್ದೇಶನದ ಚಿತ್ರಕ್ಕೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಮುಹೂರ್ತ ನೆರವೇರಿದೆ.

  ಇದು ಲವ್ ಸ್ಟೋರಿ ಕಥೆಯೇ ಹೊರತು ಲವ್ ಜಿಹಾದ್ ಸ್ಟೋರಿ ಅಲ್ಲ. ಸಂಬಂಧಗಳನ್ನು ಬೆಸೆಯುವ ಕಥೆ ಎಂದಿದ್ದಾರೆ ಶೃತಿ. 13 ಅನ್ನೋದು ಕೆಡುಕಿನ ಸಂಖ್ಯೆ ಎನ್ನುವ ಭಾವನೆ ಇದೆ. ಅದು ಯಾಕೆ ಅನ್ನೋದನ್ನ ಸಸ್ಪೆನ್ಸ್ ಥ್ರಿಲ್ಲರ್ ಕಥೆಯಲ್ಲಿ ಹೇಳುತ್ತಿದ್ದಾರೆ ಎಂದು ನಿರ್ದೇಶಕರನ್ನು ಹೊಗಳಿದ್ದಾರೆ ರಾಘವೇಂದ್ರ ರಾಜಕುಮಾರ್.