ಇತ್ತೀಚೆಗೆ ಅಮ್ಮ ಐ ಲವ್ ಯೂ ಚಿತ್ರದ ಆಡಿಯೋ ಬಿಡುಗಡೆ ಅದ್ಧೂರಿಯಾಗಿ ನೆರವೇರಿತು. ನೋಡೋಕೆ ಸಿಂಪಲ್ ಆಗಿದ್ದರೂ, ಇಡೀ ಕಾರ್ಯಕ್ರಮದಲ್ಲಿ ರಸಗಳಿಗೆಗಳೇ ತುಂಬಿದ್ದವು.
ಇದು ದ್ವಾರಕೀಶ್ ಬ್ಯಾನರ್ನ ಸಿನಿಮಾ. ನಿರ್ಮಾಣದ ಹೊಣೆ ಹೊತ್ತಿರುವ ಯೋಗಿ ದ್ವಾರಕೀಶ್, ಚೌಕ ಚಿತ್ರದ ನಂತರ ನಿರ್ಮಿಸುತ್ತಿರುವ ಸಿನಿಮಾ ಇದು. ಚಿತ್ರ ಶುರುವಾಗುವ ಹೊತ್ತಿಗೆ ಚಿರಂಜೀವಿ ಸರ್ಜಾ ಬ್ಯಾಚುಲರ್ ಆಗಿದ್ದರು. ರಿಲೀಸ್ಗೆ ರೆಡಿಯಾಗುವ ಹೊತ್ತಿಗೆ ಮೇಘನಾ ಜೊತೆ ಸಪ್ತಪದಿ ತುಳಿದಾಗಿದೆ. ಮದುವೆಯಾದ ಮೇಲೆ ರಿಲೀಸ್ ಆಗುತ್ತಿರುವ ಚಿರಂಜೀವಿ ಸರ್ಜಾರ ಮೊದಲ ಸಿನಿಮಾ ಅಮ್ಮ ಐ ಲವ್ ಯೂ..
ಆಪ್ತಮಿತ್ರ ಚಿತ್ರದ ನಂತರ ಗುರುಕಿರಣ್, ದ್ವಾರಕೀಶ್ ಬ್ಯಾನರ್ಗೆ ಮ್ಯೂಸಿಕ್ ನೀಡಿರುವ ಚಿತ್ರ ಅಮ್ಮ ಐ ಲವ್ ಯೂ. ಇದು ಅವರ 51ನೇ ಸಂಗೀತ ನಿರ್ದೇಶನದ ಸಿನಿಮಾ.
ಇನ್ನು ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಸ್ಟಾರ್ಗಳ ಸಮಾಗಮವಾಗಿತ್ತು. ನಾಯಕ ಚಿರಂಜೀವಿ ಸರ್ಜಾ, ನಾಯಕಿ ನಿಶ್ವಿಕಾ ನಾಯ್ಡು, ನಿರ್ದೇಶಕ ಚೈತನ್ಯ, ಗುರುಕಿರಣ್ ಜೊತೆ ಶಿವರಾಜ್ ಕುಮಾರ್, ಪುನೀತ್ ರಾಜ್ಕುಮಾರ್, ದ್ವಾರಕೀಶ್, ಧ್ರುವ ಸರ್ಜಾ, ಉಪೇಂದ್ರ, ಪ್ರಿಯಾಂಕಾ ಉಪೇಂದ್ರ, ಪಲ್ಲವಿ ಗುರುಕಿರಣ್, ಭಾರ್ಗವ, ಸಾಧುಕೋಕಿಲ, ವಸಿಷ್ಠ ಸಿಂಹ, ತರುಣ್ ಸುಧೀರ್, ವಿ. ಮನೋಹರ್..ಹೀಗೆ ಅರ್ಧ ಚಿತ್ರರಂಗವೇ ಹಾಜರಿತ್ತು.
ಪತಿಯ ಸಿನಿಮಾದ ಆಡಿಯೋ ಬಿಡುಗಡೆ ರಸನಿಮಿಷಗಳನ್ನು ಕಣ್ತುಂಬಿಕೊಂಡರು ಮೇಘನಾ ರಾಜ್. ನಿರ್ಮಾಪಕರಾದ ಜಾಕ್ಮಂಜು, ಉದಯ್ ಮೆಹ್ತಾ.. ಮೊದಲಾದವರೆಲ್ಲ ಕುಟುಂಬ ಸಮೇತರಾಗಿ ಹಾಜರಿದ್ದು, ಚಿತ್ರತಂಡಕ್ಕೆ ಶುಭ ಕೋರಿದ್ರು.
ಮುಂದಿನ ವರ್ಷ ದ್ವಾರಕೀಶ್ ಬ್ಯಾನರ್ನಲ್ಲಿ ನಟಿಸೋದಾಗಿ ಹೇಳಿದ ಶಿವರಾಜ್ ಕುಮಾರ್, ಅಮ್ಮ ಐ ಲವ್ ಯೂ ಚಿತ್ರತಂಡಕ್ಕೆ ಶುಭ ಕೋರಿದ್ರು.