ಸಂಹಾರ ಚಿತ್ರದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ಚಿರಂಜೀವಿ ಸರ್ಜಾರ ಅಂಧನ ಪಾತ್ರ, ಹರಿಪ್ರಿಯಾರ ವಿಲನ್ ಪಾತ್ರ ಹಾಗೂ ಚಿಕ್ಕಣ್ಣರ ಕಾಮಿಡಿ ರೋಲ್. ಆದರೆ, ಇವರೆಲ್ಲರ ನಿರ್ಮಾಪಕ ವೆಂಕಟೇಶ್ ಅವರ ಪುತ್ರ ಮನುಗೌಡ ಅಷ್ಟೇ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇಡೀ ಸಿನಿಮಾದಲ್ಲಿ ಮನುಗೌಡ, ನಾಯಕಿ ಹರಿಪ್ರಿಯಾ ಜೊತೆಯಲ್ಲಿರುತ್ತಾರೆ.
ಯಾರೋ ಮಾಡಬೇಕಿದ್ದ ಪಾತ್ರ, ಅನಿವಾರ್ಯವಾಗಿ ನಾನು ನಟಿಸಿದೆ. ಮೊದಲ ಬಾರಿ ಕ್ಯಾಮೆರಾ ಎದುರಿಸುವಾಗ ಆತಂಕಗಳಿದ್ದುದು ನಿಜ. ಆದರೆ, ಹರಿಪ್ರಿಯಾ ಪ್ರತಿಯೊಂದನ್ನು ತಿದ್ದಿ ತೀಡಿ ಹೇಳಿಕೊಟ್ರು. ಅವರಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು ಎಂದು ಹೇಳಿಕೊಂಡಿದ್ದಾರೆ ಮನುಗೌಡ.
ಮಗನ ಅಭಿನಯದ ಬಗ್ಗೆ ಅಪ್ಪ ವೆಂಕಟೇಶ್ ಕೂಡಾ ತೃಪ್ತಿಯಾಗಿದ್ದಾರೆ. ಚಿತ್ರದ ಬಗ್ಗೆಯೂ ಖುಷಿಯಾಗಿದ್ದಾರೆ. ನಿರ್ದೇಶಕ ಗುರು ದೇಶಪಾಂಡೆ, ತಾವು ಹೇಳಿದಂತೆಯೇ ಸಿನಿಮಾ ಮಾಡಿಕೊಟ್ಟಿದ್ದಾರೆ ಎನ್ನುವ ತೃಪ್ತಿ ನಿರ್ಮಾಪಕರದ್ದು. ಚಿತ್ರ ಈ ಶುಕ್ರವಾರದಿಂದ ತೆರೆಯಲ್ಲಿ ಮಿನುಗಲಿದೆ.