ಅಮ್ಮ ಐ ಲವ್ ಯೂ. ಕನ್ನಡದಲ್ಲಿ ಬಹುದಿನಗಳ ನಂತರ ಬಂದಿರುವ ತಾಯಿಮಗನ ಸೆಂಟಿಮೆಂಟ್ ಕಥೆ. ಮಕ್ಕಳಿಗಾಗಿ ತ್ಯಾಗ ಮಾಡೋ ತಾಯಿಯ ಕಥೆ, ಹೊಸದೇನಲ್ಲ. ಆದರೆ, ಇದು ತಾಯಿಗಾಗಿ ಮಗನೊಬ್ಬ ತ್ಯಾಗ ಮಾಡುವ ಕಥೆ. ಚಿತ್ರದ ಸೆಂಟಿಮೆಂಟ್ ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ. ಸಿನಿಮಾ ನೋಡಿದವರು ತಾಯಿಯನ್ನು ಖಂಡಿತಾ ನೆನಪಿಸಿಕೊಳ್ಳುತ್ತಾರೆ. ತಾಯಿ ಇಲ್ಲದವರು ನೆನಪಿಸಿಕೊಂಡು ಕಣ್ಣೀರಾಗುತ್ತಾರೆ.
ಈ ಸಿನಿಮಾವನ್ನು ಬಹುತೇಕ ಚಿತ್ರರಂಗದ ತಾರೆಗಳೆಲ್ಲ ಮೆಚ್ಚಿ ದಯವಿಟ್ಟು ಸಿನಿಮಾ ನೋಡಿ ಎನ್ನುತ್ತಿರುವುದು ವಿಶೇಷ. ಚಿತ್ರದ ಆಡಿಯೋ ಬಿಡುಗಡೆ ಮಾಡಿದ್ದ ಶಿವರಾಜ್ಕುಮಾರ್, ಧ್ರುವ ಸರ್ಜಾ.. ಚಿತ್ರವನ್ನು ವೇದಿಕೆಯಲ್ಲೇ ಮೆಚ್ಚಿದ್ದರು. ಕಿಚ್ಚ ಸುದೀಪ್, ವಿದೇಶದಲ್ಲಿದ್ದರೂ, ಚಿತ್ರದ ಬಗ್ಗೆ ಕೇಳಿದ್ದ ವಿಮರ್ಶೆಗಳನ್ನು ನೋಡಿ, ಖುಷಿಯಾಗಿ ಸಿನಿಮಾ ನೋಡಿ ಎಂದಿದ್ದರು. ಈಗ ರಾಕಿಂಗ್ ಸ್ಟಾರ್ ಯಶ್, ಸಿನಿಮಾವನ್ನು ನೋಡಿ.. ಪ್ರತಿಯೊಬ್ಬರೂ ಈ ಸಿನಿಮಾ ನೋಡಲೇಬೇಕು ಎನ್ನುತ್ತಿದ್ದಾರೆ.
ನಟಿ ರಕ್ಷಿತಾ ಪ್ರೇಮ್, ಮೇಘನಾ ರಾಜ್ ಸೇರಿದಂತೆ ಹಲವರು ಚಿತ್ರವನ್ನು ನೋಡಿ ಮೆಚ್ಚಿ ಹೊಗಳುತ್ತಿದ್ದಾರೆ. ಚಿತ್ರವನ್ನು ನೋಡಿದ ಪ್ರೇಕ್ಷಕರೂ ಕೂಡಾ ಇಂಥಾ ಸಿನಿಮಾ ನಿರ್ಮಿಸಿದ ಯೋಗಿ ದ್ವಾರಕೀಶ್ ಅವರನ್ನು ಅಭಿನಂದಿಸುತ್ತಿರುವುದು ವಿಶೇಷ.
ಚಿರಂಜೀವಿ ಸರ್ಜಾ, ನಿಶ್ವಿಕಾ ನಾಯ್ಡು, ಸಿತಾರಾ, ಚಿಕ್ಕಣ್ಣ, ಪ್ರಕಾಶ್ ಬೆಳವಾಡಿ ಪ್ರಮುಖ ತಾರಾಗಣದಲ್ಲಿರುವ ಸಿನಿಮಾಗೆ, ಗುರುಕಿರಣ್ ಸಂಗೀತವಿದೆ. ಅಮ್ಮಾ.. ನನ್ನ ಈ ಜನುಮ ಹಾಡು.. ಪ್ರೇಕ್ಷಕರ ಕಣ್ಣಂಚು ಒದ್ದೆ ಮಾಡುವಂತಿದೆ. ನಿರ್ದೇಶಕ ಚೈತನ್ಯ ಮತ್ತೊಮ್ಮೆ ಗೆದ್ದಿದ್ದಾರೆ.