` chiranjeevi sarja, - chitraloka.com | Kannada Movie News, Reviews | Image

chiranjeevi sarja,

  • ಚಿರು ಅಭಿನಯದ ಶಿವಾರ್ಜುನ ಅ. 16ಕ್ಕೆ ರಿ-ರಿಲೀಸ್

    'Shivarjuna' To Re Release On Oct 16th

    ಲಾಕ್ ಡೌನ್ ಶುರುವಾಗುವ ಒಂದು ವಾರ ಮುಂಚೆ ದೇಶದಾದ್ಯಂತ ಥಿಯೇಟರುಗಳನ್ನು ಬಂದ್ ಮಾಡಿದ್ರಲ್ಲ, ಆಗ ಥಿಯೇಟರಿನಲ್ಲಿದ್ದ ಸಿನಿಮಾಗಳಲ್ಲಿ ಚಿರಂಜೀವಿ ಸರ್ಜಾ ಅಭಿನಯದ ಶಿವಾರ್ಜುನ ಚಿತ್ರವೂ ಒಂದು. ಚಿರು, ಅಮೃತಾ ಅಯ್ಯಂಗಾರ್ ನಟಿಸಿದ್ದ ಚಿತ್ರ ಮಾರ್ಚ್ 12ರಂದು ರಿಲೀಸ್ ಆಗಿತ್ತು. ಗಳಿಕೆಯ ಹಾದಿಯಲ್ಲೇ ಥಿಯೇಟರ್ ಬಾಗಿಲು ಮುಚ್ಚಿದ ಕಾರಣ ಈಗ ಮತ್ತೆ ರಿ-ರಿಲೀಸ್‍ಗೆ ಮುಂದಾಗಿದ್ದಾರೆ ನಿರ್ಮಾಪಕರು.

    ನೋವಿನ ಸಂಗತಿಯೆಂದರೆ ಸಿನಿಮಾ ರಿಲೀಸ್ ಆದಾಗ ಸಂಭ್ರಮದಿಂದ ಚಿತ್ರದ  ಪ್ರಚಾರ ಮಾಡಿದ್ದ ಚಿರಂಜೀವಿ ಸರ್ಜಾ, ಈಗಿಲ್ಲ. ಚಿರು ಇಲ್ಲ ಎಂಬ ನೋವಿನಲ್ಲೇ ಸಿನಿಮಾ ಮರುಬಿಡುಗಡೆ ಮಾಡುತ್ತಿದ್ದೇವೆ. ಚಿರು ಎಲ್ಲಿಯೋ ಹೋಗಿಲ್ಲ.ಸಿನಿಮಾಗಳಲ್ಲಿ.. ನಮ್ಮೊಂದಿಗೆ ಈಗಲೂ ಇದ್ದಾರೆ. ದಯವಿಟ್ಟು ಚಿತ್ರಮಂದಿರಕ್ಕೆ ಬಂದು ಚಿರು ಚಿತ್ರವನ್ನು ಪ್ರೋತ್ಸಾಹಿಸಿ ಎಂದು ಕೇಳಿಕೊಂಡಿದ್ದಾರೆ ನಿರ್ದೇಶಕ ಶಿವತೇಜಸ್.

    ಎಂ.ಬಿ.ಮಂಜುಳಾ ಶಿವಾರ್ಜುನ್ ನಿರ್ಮಾಣದ ಚಿತ್ರದಲ್ಲಿ ಚಿರು, ಅಮೃತಾ ಅಯ್ಯಂಗಾರ್ ಪ್ರಧಾನ ಪಾತ್ರದಲ್ಲಿದ್ದರೆ ತಾರಾ, ಅಕ್ಷತಾ, ಅವಿನಾಶ್, ಕುರಿ ಪ್ರತಾಪ್, ಶಿವರಾಜ್ ಕೆ.ಆರ್.ಪೇಟೆ ಮೊದಲಾದವರು ನಟಿಸಿದ್ದಾರೆ.

  • ಚಿರು ಅಭಿಮಾನಿಯ ಆಸೆ ಈಡೇರಿಸಿದ ಕರಣ್ ಆಚಾರ್ಯ..!

    Artist Karan Acharya Fulfills Chiru Fan Request

    ಮೇಘನಾ ರಾಜ್ ಅವರ ಸೀಮಂತದ ಫೋಟೋ ನೋಡಿ ಅದೆಷ್ಟು ಜನ ಕಣ್ಣೀರಿಟ್ಟರೋ.. ಅಂತಹ ಒಬ್ಬ ಅಭಿಮಾನಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾನೆ. ಶಿವಾನಂದ ಲಕ್ಕಣ್ಣವರ್ ಎಂಬ ಚಿರು ಅಭಿಮಾನಿ, ಚಿತ್ರ ಕಲಾವಿದ ಕರಣ್ ಆಚಾರ್ಯ ಅವರಿಗೆ ಮನವಿ ಮಾಡಿದ್ದು, ಮೇಘನಾ ಅವರ ಫೋಟೋ ಜೊತೆಗೆ ಚಿರು ಫೋಟೋ ಕೂಡಾ ಬರುವಂತೆ ಮಾಡಿಕೊಡುವಿರಾ ಎಂದು ಕೇಳಿಕೊಂಡಿದ್ದರು.

    ನಿಮಗೆ ಕರಣ್ ಆಚಾರ್ಯ ಗೊತ್ತಿರಬೇಕಲ್ಲ, ಕಾರುಗಳ ಹಿಂದೆ ನೀವು ಪದೇ ಪದೇ ವೀರಾಂಜನೇಯನ ಪೇಂಯ್ಟಿಂಗ್ ರೂಪಿಸಿದ್ದ ಕರಣ್ ಆಚಾರ್ಯ. ಚಿತ್ರಗಳನ್ನು ಫೋಟೋಗಳಿಗಿಂತ ಚೆಂದವಾಗಿ ಕಟ್ಟಿಕೊಡುವ ಕರಣ್ ಆಚಾರ್ಯ, ಚಿರು ಅಭಿಮಾನಿಯ ಮನವಿಗೂ ಸ್ಪಂದಿಸಿದ್ದಾರೆ. ಮೇಘನಾ ಅವರ ಜೊತೆಯಲ್ಲಿ ಚಿರು ಇರುವಂತೆ ಒಂದು ಪೇಂಯ್ಟಿಂಗ್ ಸೃಷ್ಟಿಸಿ ಅಭಿಮಾನಿಗೆ ಕೊಟ್ಟಿದ್ದಾರೆ.

     

  • ಚಿರು ಕೊರೋನಾ ಟೆಸ್ಟ್ ನೆಗೆಟಿವ್

    chiru sarja's corona test report negative

    ಅನಿರೀಕ್ಷಿತವಾಗಿ ಹೃದಯಾಘಾತದಿಂದ ಮೃತಪಟ್ಟ ಚಿರಂಜೀವಿ ಸರ್ಜಾ  ಕೊರೊನಾ ಟೆಸ್ಟ್ ವರದಿ ನೆಗೆಟಿವ್ ಬಂದಿದೆ. ಕೊರೋನಾ ಅನ್ನೋ ಶಂಕೆಯಿಂದ ಟೆಸ್ಟ್ ಮಾಡಲಾಗಿತ್ತು. ಮೃತಪಟ್ಟ ಅರ್ಧ ಗಂಟೆಯ ಒಳಗೆ ಗಂಟಲಿನ ಸ್ವಾಬ್ ತೆಗೆದು ಪರೀಕ್ಷೆ ಮಾಡಲಾಗಿದ್ದು, ಸ್ವಾಬ್ ನಲ್ಲಿ ಕೋವಿಡ್ 19 ಅಂಶಗಳಿಲ್ಲ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

    ಇದೀಗ ಕೊರೊನಾ ಸ್ವ್ಯಾಬ್ ಟೆಸ್ಟ್ ನಲ್ಲಿ ನೆಗಟಿವ್ ಬಂದಿರುವ ಹಿನ್ನೆಲೆಯಲ್ಲಿ ಮೃತದೇಹವನ್ನು ಹಸ್ತಾಂತರ ಮಾಡಲಾಗಿದೆ.

    ಅಪೊಲೊ ಆಸ್ಪತ್ರೆಯ ವೈದ್ಯರಿಂದ  ಮಾಹಿತಿ ಸಿಕ್ಕಿದೆ. ನಾಳೆ ಮಧುಗಿರಿಯ ಜಕ್ಕೇನಹಳ್ಳಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ.

    Related Articles :-

    ಮೇಘನಾ ಸರ್ಜಾ 6 ತಿಂಗಳ ಗರ್ಭಿಣಿ 

    ಚಿರಂಜೀವಿ ಸರ್ಜಾ ಸಾವು ಹೇಗಾಯ್ತು..? ಡಾಕ್ಟರ್ ರಿಪೋರ್ಟ್ 

    Chirranjeevi Sarja Dies Of Massive Heart Attack

     

  • ಚಿರು ಖಾಕಿ ಶುರು

    chiranjeeivi's khaki starts

    ಚಿರಂಜೀವಿ ಸರ್ಜಾ ಈಗ ಸಿಕ್ಕಾಪಟ್ಟೆ ಬ್ಯುಸಿ. ಒಂದು ಕಡೆ ಚಿರಂಜೀವಿ ಸರ್ಜಾರ ಸಿಂಗ, ರಾಜಮಾರ್ತಾಂಡ, ಆದ್ಯ ಚಿತ್ರಗಳು ಶೂಟಿಂಗ್ ಹಂತದಲ್ಲಿವೆ. ಮೊನ್ನೆ ಮೊನ್ನೆಯಷ್ಟೇ ಜುಗಾರಿ ಕ್ರಾಸ್ ಮುಹೂರ್ತವಾಗಿದೆ. ಈಗ ಬೆನ್ನಲ್ಲೇ ಖಾಕಿ ಶುರುವಾಗಿದೆ.

    ನವೀನ್ ರೆಡ್ಡಿ ನಿರ್ದೇಶನದ ಖಾಕಿ ಚಿತ್ರಕ್ಕೆ ದಿ ಪವರ್ ಆಫ್ ಕಾಮನ್ ಮ್ಯಾನ್ ಅನ್ನೋ ಟ್ಯಾಗ್‍ಲೈನ್ ಇದೆ. ಚಿತ್ರದ ಮೊದಲ ದೃಶ್ಯಕ್ಕೆ ಚಿರಂಜೀವಿ ಸರ್ಜಾ ಪತ್ನಿ, ನಟಿ ಮೇಘನಾ ರಾಜ್ ಕ್ಲಾಪ್ ಮಾಡಿ ಸಂಭ್ರಮಿಸಿದ್ರು.

  • ಚಿರು ಚಿತ್ರಕ್ಕೆ ಧ್ರುವ ಸರ್ಜಾ ಡಬ್ಬಿಂಗ್

    ಚಿರು ಚಿತ್ರಕ್ಕೆ ಧ್ರುವ ಸರ್ಜಾ ಡಬ್ಬಿಂಗ್

    ಚಿರಂಜೀವಿ ಸರ್ಜಾ ಅಕಾಲಿಕ ನಿಧನಕ್ಕೂ ಮೊದಲು ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದರು. ಕೆಲವು ಚಿತ್ರಗಳು ಕಂಪ್ಲೀಟ್ ಆಗಿದ್ದವು. ಇನ್ನೂ ಕೆಲವು ಶೂಟಿಂಗ್ ಆಗಿದ್ದವು. ಪೋಸ್ಟ್ ಪ್ರೊಡಕ್ಷನ್ ಆಗಿರಲಿಲ್ಲ. ಅಂತಹ ಚಿತ್ರಗಳಲ್ಲಿ ಒಂದು ರಾಜಮಾರ್ತಾಂಡ. ಆ ಚಿತ್ರದ ಡಬ್ಬಿಂಗ್ ಮುಗಿಸಿಕೊಟ್ಟಿದ್ದಾರೆ ಧ್ರುವ ಸರ್ಜಾ.

    ಚಿರು ಅವರ ಯಾವುದೇ ಚಿತ್ರಗಳಿಗೆ ಬೇಕಿರುವ ಎಲ್ಲ ಸಪೋರ್ಟ್ ಮಾಡುವುದಾಗಿ ಧ್ರುವ ಹೇಳಿದ್ದರು. ಅದರಂತೆಯೇ ರಾಜಮಾರ್ತಾಂಡ ಡಬ್ಬಿಂಗ್ ಮುಗಿಸಿದ್ದಾರೆ ಧ್ರುವ. ಸಮಾಧಾನ.. ಸಮಾಧಾನ.. ಅಕ್ಕ ತಂಗಿಯರೇ.. ಅಣ್ಣ ತಮ್ಮಂದಿರೇ.. ಬಂಧು ಬಾಂಧವರೇ.. ನನ್ನ ನಂಬಿ ವೋಟ್ ಹಾಕಿ.. ನನ್ನ ಕೊನೆ ಉಸಿರು ಇರುವವರೆಗೆ ನಿಮ್ಮಗಳಿಗೋಸ್ಕರವೇ ಹೋರಾಡ್ತೀನಿ.. ಅಂತಾ ಧ್ರುವ ಹೇಳೋ ವಿಡಿಯೋವನ್ನು ಚಿತ್ರತಂಡ ರಿಲೀಸ್ ಮಾಡಿದೆ. ಅದು ಚಿತ್ರದಲ್ಲಿ ಚಿರಂಜೀವಿ ಸರ್ಜಾ ಹೇಳೋ ಡೈಲಾಗ್.

    ಬಹುತೇಕ ಎಲ್ಲ ಕೆಲಸವನ್ನೂ ಕಂಪ್ಲೀಟ್ ಮಾಡಿರುವ ರಾಮ್ ನಾರಾಯಣ್ ನಿರ್ದೇಶನದ ರಾಜಮಾರ್ತಾಂಡ ಜೂನ್‍ನಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ.

  • ಚಿರು ತಿಂಗಳ ಪುಣ್ಯ ತಿಥಿ

    chiranjeevi sarja's monthly punya thithi

    ಚಿರಂಜೀವಿ ಸರ್ಜಾ ಅಕಾಲಿಕ ನಿಧನಕ್ಕೆ ಒಂದು ತಿಂಗಳಾಗಿ ಹೋಯ್ತಾ..? ಸಮಯ ವೇಗವಾಗಿ ಓಡುತ್ತಿದೆ. ಜೂನ್ 7ರಂದು ಚಿರು ಅಕಾಲಿಕ ಮರಣಕ್ಕೀಡಾಗಿದ್ದರು. ಆಗಲೇ ಒಂದು ತಿಂಗಳು.

    ಈ ಹಿನ್ನೆಲೆಯಲ್ಲಿ ಚಿರು ಸರ್ಜಾ ಅವರ ಒಂದು ತಿಂಗಳ ಪುಣ್ಯತಿಥಿಯನ್ನು ಕುಟುಂಬಸ್ಥರು ನೆರವೇರಿಸಿದರು. ಧ್ರುವ ಸರ್ಜಾ ಅಣ್ಣನ ಸಮಾಧಿಗೆ ಪೂಜೆ ಸಲ್ಲಿಸಿದರು. ಇಡೀ ಸರ್ಜಾ ಕುಟುಂಬ ಪುಣ್ಯತಿಥಿಯಲ್ಲಿ ಭಾಗಿಯಾಗಿತ್ತು. ಚಿರು ಮರಣದ ನಂತರ ಖಿನ್ನತೆಗೊಳಗಾಗಿದ್ದ ಕುಟುಂಬ ಸದಸ್ಯರು ಈಗ ಚೇತರಿಸಿಕೊಳ್ಳುತ್ತಿದ್ದಾರೆ.

     

  • ಚಿರು ಮೇಘನಾ ಮದ್ವೆಯಂತೆ..! ನಿಜಾನಾ..?

    chiranjeevi sarja meghana raj

    ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಮಧ್ಯೆ ಪ್ರೀತಿಯಿದೆ.. ಅವರಿಬ್ಬರೂ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡಲು ಶುರುವಾಗಿ 2 ವರ್ಷಗಳೇ ಕಳೆದುಹೋದವು. ಊಹೂಂ.. ಸುದ್ದಿ ನಿಜವಾಗಲಿಲ್ಲ. 

    ಇಬ್ಬರೂ ಎರಡು ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದರು. ಪ್ರೀತಿ ಮದುವೆ ಸುದ್ದಿಗೆ ರೆಕ್ಕೆ ಪುಕ್ಕ ಬಂದವು. ಖಾಸಗಿ ಸಮಾರಂಭಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡರು. ಸುದ್ದಿಯ ಗಿಡ ಬೆಳೆದು ಹೆಮ್ಮರವಾಗೋಕೆ ಗೊಬ್ಬರ ಸಿಕ್ಕಂತಾಯ್ತು. ಮಧ್ಯೆ ಮಧ್ಯೆ ಇಬ್ಬರೂ ತಮ್ಮ ಮಧ್ಯೆ ಅಂಥದ್ದೇನೂ ಇಲ್ಲ ಎಂದು ಹೇಳುತ್ತಲೇ ಬಂದರು. 

    ಈಗ ಮತ್ತೊಂದು ಹೊಸ ಸುದ್ದಿ. ಇಬ್ಬರೂ ಡಿಸೆಂಬರ್ 2ನೇ ವಾರದಲ್ಲಿ ಸಪ್ತಪದಿ ತುಳಿಯುತ್ತಿದ್ದಾರಂತೆ. ಈ ಬಾರಿಯೂ ಮೇಘನಾ ಮತ್ತು ಚಿರಂಜೀವಿ ಸರ್ಜಾ, ಇದನ್ನು ನಿರಾಕರಿಸಿದ್ದಾರೆ. ತಮ್ಮ ಮದುವೆ ಬಗ್ಗೆಯೇ ಏಕೆ ಇಷ್ಟೊಂದು ಸುದ್ದಿ ಹಬ್ಬುತ್ತವೋ ನಮಗೂ ಗೊತ್ತಿಲ್ಲ ಎಂದಿದ್ದಾರೆ.

  • ಚಿರು ಸರ್ಜಾ ಕೋಟ್ಯಧಿಪತಿಯೋ.. ಭಿಕ್ಷುಕನೋ..?

    amma i love you poster creates curiosity

    ಅಮ್ಮ ಐ ಲವ್ ಯೂ.. ತಾಯಿಯನ್ನು ಇಷ್ಟಪಡುವ ಪ್ರತಿಯೊಬ್ಬರಿಗೂ ಇಷ್ಟವಾಗುವಂಥಾ ಟೈಟಲ್ಲು. ಚೈತನ್ಯ ನಿರ್ದೇಶನದ ಸಿನಿಮಾ ಆಗಿರೋದ್ರಿಂದ ಕುತೂಹಲವೂ ದೊಡ್ಡ ಮಟ್ಟದಲ್ಲೇ ಇದೆ. ಅಲ್ಲದೆ ಚಿತ್ರದ ನಿರ್ಮಾಪಕರಾಗಿರುವುದು ಯೋಗಿಶ್ ದ್ವಾರಕೀಶ್ ಮತ್ತು ದ್ವಾರಕೀಶ್. ಕಥೆಗೆ ಇನ್ನಿಲ್ಲದ ಪ್ರಾಮುಖ್ಯತೆ ಕೊಡುವ ಯೋಗಿ ದ್ವಾರಕೀಶ್, ಈ ಸಿನಿಮಾದಲ್ಲೂ ಕಥೆಯನ್ನೇ ಗಮನದಲ್ಲಿಟ್ಟುಕೊಂಡಿದ್ದಾರೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.

    ಎಲ್ಲವನ್ನೂ ಸಿದ್ಧಪಡಿಸಿಕೊಂಡು ಸಿನಿಮಾಗೆ ಫೈನಲ್ ಟಚಪ್ ನೀಡುತ್ತಿರುವ ಚಿತ್ರತಂಡ ಆಡಿಯೋ ಬಿಡುಗಡೆಗೆ ಸಿದ್ಧವಾಗಿದೆ. ಈ ಮಧ್ಯೆ ಗಮನ ಸೆಳೆಯುತ್ತಿರುವ ಅಂಶವೆಂದರೆ ಚಿತ್ರದ ಪೋಸ್ಟರ್‍ಗಳು. ಒಂದು ಪೋಸ್ಟರ್‍ನಲ್ಲಿ ಚಾರ್ಟರ್ಡ್ ಪ್ಲೇನ್‍ನಿಂದ ಇಳಿಯುತ್ತಿರುವ ಕೋಟ್ಯಧಿಪತಿಯ ಲುಕ್‍ನಲ್ಲಿರುವ ಚಿರು, ಇನ್ನೊಂದು ಪೋಸ್ಟರ್‍ನಲ್ಲಿ ಅಪ್ಪಟ ಭಿಕ್ಷುಕನಂತೆ ಕಾಣಿಸುತ್ತಿರುವ ಚಿರು.. ಏನಿದು ಅನ್ನೋ ಕುತೂಹಲ ಹುಟ್ಟೋಕೆ ಅಷ್ಟು ಸಾಕು.

    ಅಂದಹಾಗೆ ಈ ಭಾನುವಾರ ಅಮ್ಮಂದಿರ ದಿನ. ಆ ದಿನದ ವಿಶೇಷವಾಗಿ ಚಿತ್ರತಂಡ ಚಿತ್ರದ ಒಂದು ಹಾಡನ್ನು ಬಿಡುಗಡೆ ಮಾಡುತ್ತಿದೆ. ಅದು, ಅಮ್ಮ ಐ ಲವ್ ಯೂ ಚಿತ್ರತಂಡದಿಂದ ಅಮ್ಮಂದಿರ ದಿನಕ್ಕೆ ಉಡುಗೊರೆ.

  • ಚಿರು ಸರ್ಜಾ ಚಿತ್ರದಲ್ಲಿ ಶ್ರುತಿ ಹರಿಹರನ್ ಪೊಲೀಸ್

    sruthi hariharan plays cop in chiru sarja's aadhya

    ಮೀಟೂ ಪ್ರಕರಣದ ಬಳಿಕ ಶ್ರುತಿ ಹರಿಹರನ್ ನಟಿಸಿರುವ ಚಿತ್ರ ಆದ್ಯಾ. ಕಳೆದ ವರ್ಷ ನಾತಿಚರಾಮಿ ಚಿತ್ರದ ಅವಾರ್ಡ್ ಸೆನ್ಸೇಷನ್ ಸೃಷ್ಟಿಸಿದ್ದ ಶ್ರುತಿ, ನಂತರ ಮನೆ ಮಾರಾಟಕ್ಕಿದೆ ಚಿತ್ರದ ಮೂಲಕ ಬಾಕ್ಸಾಫೀಸ್ ಸಕ್ಸಸ್ ಕಂಡಿದ್ದರು. ಈಗ ಮತ್ತೊಮ್ಮೆ ಖಡಕ್ ಆಫೀಸರ್ ಆಗಿ ಬರುತ್ತಿದ್ದಾರೆ. ಆದ್ಯಾ ಚಿತ್ರದಲ್ಲಿ.

    ಆದ್ಯಾ ಚಿತ್ರದ ಹೀರೋ ಚಿರಂಜೀವಿ ಸರ್ಜಾ. ಶ್ರುತಿ ಹರಿಹರನ್ ಇಲ್ಲಿ ಪೊಲೀಸ್ ಅಧಿಕಾರಿ. ಮೀಟೂ ಮೂಲಕ ಸುದ್ದಿ ಮಾಡಿದ ಇನ್ನೊಬ್ಬ ನಟಿ ಸಂಗೀತಾ ಭಟ್ ಕೂಡಾ ಚಿತ್ರದಲ್ಲಿ ನಟಿಸಿದ್ದಾರೆ. ಶಶಾಂಕ್‌ ಪುರುಷೋತ್ತಮ್, ರವಿಶಂಕರ್‌ ಗೌಡ, ಪ್ರಮೋದ್ ಶೆಟ್ಟಿ ನಟಿಸಿರುವ ಚಿತ್ರದಲ್ಲಿ ಪುಟ್ಟ ಬಾಲಕಿ ಪಾತ್ರವೇ ಅಟ್ರ್ಯಾಕ್ಷನ್. ಆ ದಿನಗಳು ಖ್ಯಾತಿಯ ಕೆ.ಎಂ. ಚೈತನ್ಯ ನಿರ್ದೇಶಿಸಿರುವ ಚಿತ್ರವಿದು.  ಆಟಗಾರ, ಆಕೆ, ಅಮ್ಮ ಐ ಲವ್‌ ಯೂ ನಂತರ ಚೈತನ್ಯ ಮತ್ತು ಸರ್ಜಾ ಕಾಂಬಿನೇಷನ್ನಿನ 4ನೇ ಚಿತ್ರ. ಚಿತ್ರವು ಇದೇ ಫೆ.21ಕ್ಕೆ ರಿಲೀಸ್ ಆಗುತ್ತಿದೆ.

  • ಚಿರು ಸರ್ಜಾ ಮತ್ತೊಂದು ಹೊಸ ಸಿನಿಮಾ

    chiru sarja signs another film

    ಚಿರಂಜೀವಿ ಸರ್ಜಾ ಫುಲ್ ಬ್ಯುಸಿಯಾಗುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಸಿಂಗ ಚಿತ್ರದ ಯಶಸ್ಸಿನ ಝೂಮ್‍ನಲ್ಲಿರೋ ಚಿರಂಜೀವಿ ಸರ್ಜಾ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ. ಖಾಕಿ, ಆದ್ಯ, ರಾಜಮಾರ್ತಾಂಡ, ಜುಗಾರಿ ಕ್ರಾಸ್.. ಹೀಗೆ ಒಂದರ ಹಿಂದೊಂದು ಚಿತ್ರಗಳಲ್ಲಿ ತೊಡಗಿಸಿಕೊಂಡಿರುವ ಚಿರು ಇನ್ನೊಂದು ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

    ಲಕ್ಕಿ ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ಬ್ಯಾನರಿನಲ್ಲಿ ಪಕ್ಕಾ ಆ್ಯಕ್ಷನ್ ಚಿತ್ರಕ್ಕೆ ಯೆಸ್ ಎಂದಿದ್ದಾರೆ. ಬುದ್ದಿವಂತ 2 ಚಿತ್ರಕ್ಕೆ ಸಹ ನಿರ್ದೇಶಕರಾಗಿರುವ ಮಹೇಶ್ ಚೈತನ್ಯ ಈ ಚಿತ್ರಕ್ಕೆ ನಿರ್ದೇಶಕ.

    ಜೋಗಿ ಚಿತ್ರದ ಮಾದರಿಯಲ್ಲಿ ಈ ಚಿತ್ರ ಮೂಡಿಬರಲಿದೆ. ಡಿಸೆಂಬರ್‍ನಲ್ಲಿ ಶೂಟಿಂಗ್ ಶುರು ಎಂದಿದ್ದಾರೆ ಟಿ.ಆರ್.ಚಂದ್ರಶೇಖರ್.

  • ಚಿರು-ಮೇಘನಾ ಎರಡನೇ ಮದುವೆ

    chiru meghana gets married

    ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ 2ನೇ ಬಾರಿಗೆ ಮದುವೆಯಾಗಿದ್ದಾರೆ. ಒಂದೇ ವಾರದೊಳಗೆ ಎರಡು ಬಾರಿ ಮದುವೆಯಾಗಿರೋದು ವಿಶೇಷ. ಏಪ್ರಿಲ್ 29ರಂದು ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾದ ಚಿರು-ಮೇಘನಾ, ಈಗ ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದಿದ್ದಾರೆ.

    ಬುಧವಾರ ಬೆಳಗ್ಗೆ 10ರಿಂದ 11.30ರೊಳಗೆ ನಡೆದ ಮಿಥುನ ಲಗ್ನದಲ್ಲಿ ಚಿರು-ಮೇಘನಾ ಸತಿಪತಿಗಳಾದರು. ತಾಳಿ ಕಟ್ಟುವಾಗ ಮೇಘನಾ ನಾನ್‍ಸ್ಟಾಪ್ ಆಗಿ ಮಾತನಾಡುತ್ತಲೇ ಇದ್ದರು. ಚಿರು ನಗುತ್ತಲೇ ಇದ್ದರು. ನೀಲಿ ಗೋಲ್ಡ್ ಮಿಶ್ರಿತ ಅಂಚಿನ ಸೀರೆ ಧರಿಸಿದ್ದ ಮೇಘನಾ, ಅದಕ್ಕೆ ತಕ್ಕಂತೆ ಮಾಂಗ್‍ಟಿಕಾ, ಡಾಬು, ಒಡವೆಗಳಿಂದ ನಕ್ಷತ್ರದಂತೆ ಮಿನುಗುತ್ತಿದ್ದರು. ವರ ಚಿರು, ಪೇಟ, ಬಿಳಿಪಂಚೆ, ಶಲ್ಯದಲ್ಲಿ ಮಿನುಗಿದರು.

    ನವದಂಪತಿಗಳ ವಿವಾಹ ಸಂಭ್ರಮಕ್ಕೆ ಇಡೀ ಸ್ಯಾಂಡಲ್‍ವುಡ್ ಸಾಕ್ಷಿಯಾಯ್ತು. ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗದ ಕಲಾವಿದರು, ತಂತ್ರಜ್ಞರೂ ಮದುವೆಗೆ ಆಗಮಿಸಿ ವಧೂವರರಿಗೆ ಶುಭ ಕೋರಿದರು.

  • ಚಿರು, ಧ್ರುವಾ ಅಮ್ಮನ ದಿನದ ಸ್ಪೆಷಲ್ ವಿಡಿಯೋ

    mothers days special

    ಅಮ್ಮ ಐ ಲವ್ ಯೂ ಚಿತ್ರತಂಡ ಅಮ್ಮಂದಿರ ದಿನಕ್ಕಾಗಿ ಒಂದು ಸ್ಪೆಷಲ್ ವಿಡಿಯೋ ಹಾಗೂ ಒಂದು ಹಾಡನ್ನು ರಿಲೀಸ್ ಮಾಡ್ತಾ ಇದೆ. ತಾಯಿಯ ಕುರಿತು ಇದ್ದ ಒಂದು ಕೊಟೇಷನ್ ಗಿರಿ ದ್ವಾರಕೀಶ್ ಮತ್ತು ಚೈತನ್ಯಗೆ ಇಷ್ಟವಾಗಿದೆ. ಅದನ್ನು ಕನ್ನಡಕ್ಕೆ ಅನುವಾದಿಸಿ ಚಿರು ಮುಂದಿಟ್ಟಾಗ ಚಿರು ಮತ್ತು ಧ್ರುವ ಒಟ್ಟಿಗೇ ಮಾಡುವ ಬಯಕೆ ತೋರಿಸಿದ್ರು. ಅದರಂತೆ ವಿಡಿಯೋ ಸಿದ್ಧವಾಯ್ತು. ಈಗ ಅಮ್ಮಂದಿರ ದಿನದ ಕೊಡುಗೆಯಾಗಿ ಬಂದಿದೆ. ಅಷ್ಟೇ ಅಲ್ಲ, ಚಿತ್ರದ ಒಂದು ಹಾಡಿನ ವಿಡಿಯೋವೊಂದನ್ನು ಬಿಡುಗಡೆ ಮಾಡಲಾಗುತ್ತಿದೆ.

    ಇಷ್ಟಕ್ಕೂ ವಿಡಿಯೋದಲ್ಲಿ ಏನಿದೆ ಅಂತೀರಾ.. ತಾಯಿಯಿಂದ ಏನು ಬಯಸುತ್ತೇವೆ ಮತ್ತು ತಾಯಿಗೆ ಏನು ಕೊಡುತ್ತೇವೆ ಅನ್ನೋ ಸಂದೇಶ ವಿಡಿಯೋದಲ್ಲಿದೆ. ಅಷ್ಟೇ ಅಲ್ಲ, ತಂದೆಯಾಗಲು ಒಂದು ಕ್ಷಣ ಬೇಕು ಆದರೆ, ತಾಯಿಯಾಗಲು ಒಂದು ಜೀವನ ಬೇಕು ಅನ್ನೋದು ವಿಡಿಯೋ ಸಂದೇಶ. ಇದು ಅಮ್ಮಂದಿರ ದಿನಕ್ಕಾಗಿ ಅಮ್ಮ ಐ ಲವ್ ಯೂ ಚಿತ್ರತಂಡ ನೀಡುತ್ತಿರುವ ಕಾಣಿಕೆ.

  • ಚಿರುವಿನ 'ಆಕೆ'ಗೆ ಕಿಚ್ಚನ ಮೆಚ್ಚುಗೆ

    sudeep wishes aake team

    ಚಿರಂಜೀವಿ ಸರ್ಜಾ ಅಭಿನಯದ ಆಕೆ ಚಿತ್ರಕ್ಕೆ ಚಿತ್ರರಂಗದಲ್ಲಿ ಮೆಚ್ಚುಗೆಯ ಸುರಿಮಳೆಯೇ ಸುರಿಯುತ್ತಿದೆ. ಈಗ ಆಕೆಯನ್ನು ಹೊಗಳುವ ಸರದಿ ಕಿಚ್ಚ ಸುದೀಪ್ ಅವರದ್ದು. ಆಕೆ ಚಿತ್ರದ ಟ್ರೇಲರ್ ನೋಡಿಯೇ ಸುದೀಪ್ ಫಿದಾ ಆಗಿ ಹೋಗಿದ್ದಾರೆ.

    ಚಿರು ಸರ್ಜಾ, ಸುದೀಪ್‍ರನ್ನ ತನ್ನ ಗಾಡ್‍ಫಾದರ್ ಎಂದೇ ಹೇಳಿಕೊಳ್ತಾರೆ. ಸುದೀಪ್ ಕೂಡಾ ಅಷ್ಟೆ. ಈ ಹಿಂದೆ ವರದನಾಯಕ ಚಿತ್ರದಲ್ಲಿ ಸುದೀಪ್ ಪೋಷಕ ನಟನಾಗಿ ನಟಿಸಿದ್ದರು. ಆ ಚಿತ್ರಕ್ಕೆ ಚಿರು ನಾಯಕರಾಗಿದ್ದರು.

    ಚಿರಂಜೀವಿ ಸರ್ಜಾಗೆ ಬೆನ್ನು ತಟ್ಟುವ, ಒಳ್ಳೆಯದು ಮಾಡಿದಾಗ ಮೆಚ್ಚುವ, ತಪ್ಪು ಮಾಡಿದಾಗ ಒಳಗೇ ಕರೆದು ಬುದ್ದಿ ಹೇಳುವ ಒಂದು ಆತ್ಮೀಯತೆಯನ್ನು ಸುದೀಪ್ ಇಟ್ಟುಕೊಂಡಿದ್ದಾರೆ.

    ಆ ಆತ್ಮೀಯತೆಯ ಇನ್ನೊಂದು ಹೆಜ್ಜೆಯೇ ಈ ಹೊಗಳಿಕೆ. ಸುದೀಪ್ ಬಳಿ ಹೊಗಳಿಸಿಕೊಳ್ಳೋದು ಸುಮ್ಮನೆ ಮಾತಲ್ಲ. ಇಷ್ಟವಾಗದೇ ಹೋದರೆ, ಏನೊಂದೂ ಮಾತನಾಡದೆ ಸುಮ್ಮನಾಗಿಬಿಡುವ ಸುದೀಪ್, ಆಕೆ ಚಿತ್ರವನ್ನು ಮೆಚ್ಚಿದ್ದಾರೆ ಎಂದರೆ, ಚಿತ್ರದಲ್ಲಿ ಸ್ಪೆಷಲ್ ಇದೆ ಎಂದೇ ಅರ್ಥ. 

    ಆಕೆ, ಇದೇ ಜೂನ್ 30ಕ್ಕೆ ತೆರೆ ಕಾಣ್ತಾ ಇದೆ. ಚಿರಂಜೀವಿ ಸರ್ಜಾ, ಶರ್ಮಿಳಾ ಮಾಂಡ್ರೆ ನಾಯಕ-ನಾಯಕಿ. ಚೈತನ್ಯ ನಿರ್ದೇಶನದ ಚಿತ್ರ ಆಕೆ. ಟ್ರೇಲರ್ ನೋಡಿಯೇ ಭಯಬಿದ್ದವರು, ಚಿತ್ರವನ್ನು ಮಿಸ್ ಮಾಡಿಕೊಳ್ಳೋದಿಲ್ಲ ಅನ್ನೋ ಗ್ಯಾರಂಟಿ ಚಿತ್ರತಂಡಕ್ಕಿದೆ. 

    Related Articles :-

    ಆಕೆಗೆ ದರ್ಶನ್ ನಂತರ ರಮ್ಯಾ ಶಹಬ್ಬಾಸ್​ಗಿರಿ

    ಆಕೆ ಅರ್ಧ ಸ್ಯಾಂಡಲ್​ವುಡ್, ಉಳಿದರ್ಧ ಹಾಲಿವುಡ್

    Aake Censored

    Will It Be 9th Or 16th For Aake?

    Aake Trailer Released

    Eros International Presents Aake

    Chaitanya - Chiru Film Titled Aake 

     

     

     

  • ಚಿರುವಿನಂತಾ ಮಕ್ಕಳಿರಬೇಕು ಅಂದವರು ಮಹಿಳಾ ಪ್ರೇಕ್ಷಕರು..!

    women audience loves chiru sarja

    ಅಮ್ಮ ಐ ಲವ್ ಯು. ಥಿಯೇಟರುಗಳಲ್ಲಿ ಪ್ರೇಕ್ಷಕರ ಕಣ್ಣಾಲಿ ಒದ್ದೆ ಮಾಡುತ್ತಿರುವ ಸಿನಿಮಾ. ತಾಯಿಗಾಗಿ, ತಾಯಿಯ ಆರೋಗ್ಯಕ್ಕಾಗಿ ಭಿಕ್ಷೆ ಬೇಡುವ ಮಗನ ಕಥೆ, ತುಂಬಾ ಇಷ್ಟವಾಗಿರೋದು ಮಹಿಳಾ ಪ್ರೇಕ್ಷಕರಿಗೆ. ಥಿಯೇಟರಿನಿಂದ ಹೊರಬಂದ ಮಹಿಳೆಯರು, ಇದ್ದರೆ ಚಿರಂಜೀವಿ ಸರ್ಜಾನಂತಾ ಮಕ್ಕಳು ಇರಬೇಕು ಎನ್ನುತ್ತಿರುವುದು ಚಿತ್ರತಂಡಕ್ಕೆ ಸಿಕ್ಕಿರುವ ಅತಿದೊಡ್ಡ ಗೆಲುವು ಎಂದರೆ ತಪ್ಪಲ್ಲ.

    ಪ್ರೇಕ್ಷಕರು, ಕಳೆದ ವರ್ಷ ರಾಜಕುಮಾರ ಚಿತ್ರಕ್ಕೆ ಇಂತಾದ್ದೊಂದು ಪ್ರತಿಕ್ರಿಯೆ ಕೊಟ್ಟಿದ್ದರು. ಈ ಬಾರಿ ಅಮ್ಮ ಐ ಲವ್ ಯು ಚಿತ್ರಕ್ಕೆ ಅಂತಾದ್ದೊಂದು ಪ್ರತಿಕ್ರಿಯೆ ಸಿಕ್ಕಿದೆ. ತಾಯಿ ಅಂದ್ರೆ ಏನು ಅಂಥಾ ತಿಳಿದುಕೊಳ್ಳೋಕೆ ಮಕ್ಕಳು, ಮಕ್ಕಳು ಹೇಗಿರಬೇಕು, ಹೇಗೆ ಬೆಳೆಸಬೇಕು ಅಂತಾ ತಿಳಿದುಕೊಳ್ಳೋಕೆ ಹೆತ್ತವರು ಈ ಸಿನಿಮಾ ನೋಡಬೇಕು ಅಂಥಾ ಪ್ರೇಕ್ಷಕರು ಹೇಳಿ, ಸಿನಿಮಾದವರಿಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತಿದ್ದಾರೆ. ಯೋಗಿ ದ್ವಾರಕೀಶ್, ಚೈತನ್ಯಗೆ ಸಿಕ್ಕಿರುವ ಅತಿದೊಡ್ಡ ಆಶೀರ್ವಾದ ಇದು.

  • ಜುಗಾರಿ ಕ್ರಾಸ್ ಹೀರೋ ಚಿರಂಜೀವಿ ಸರ್ಜಾ

    jugari cross hero finally finalised

    ಜುಗಾರಿ ಕ್ರಾಸ್ ಅನ್ನೋ ಕಾದಂಬರಿಯನ್ನ ಸಿನಿಮಾ ಮಾಡೋಕೆ ಹೊರಟವರು ಒಬ್ಬಿಬ್ಬರಲ್ಲ. ರಾಜೇಂದ್ರ ಸಿಂಗ್ ಬಾಬು, ಕೋಡ್ಲು ರಾಮಕೃಷ್ಣ ಸೇರಿದಂತೆ ಹಲವರು ಪೂರ್ಣಚಂದ್ರ ತೇಜಸ್ವಿಯವರ ಕಾದಂಬರಿಗೆ ಸಿನಿಮಾ ರೂಪ ಕೊಡೋಕೆ ಪ್ರಯತ್ನಿಸಿದ್ದರು. ಸಕ್ಸಸ್ ಆಗಿರಲಿಲ್ಲ. ಪೂಚಂತೇ ಅವರ ಆ ಕಾದಂಬರಿ, ಸಾಹಿತ್ಯ ಲೋಕದ ನಕ್ಷತ್ರಗಳಲ್ಲಿ ಒಂದು. ಈಗ ಆ ಕಾದಂಬರಿಯನ್ನು ಸಿನಿಮಾ ಮಾಡೋಕೆ ದಿಟ್ಟ ಹೆಜ್ಜೆಯಿಟ್ಟಿರುವುದು ನಿರ್ದೇಶಕ ನಾಗಾಭರಣ.

    ಕಾದಂಬರಿಯನ್ನು ಈಗಿನ ಕಾಲಕ್ಕೆ ತಕ್ಕಂತೆ ಬದಲಿಸಿಕೊಂಡಿದ್ದೇವೆ. ಏಕೆಂದರೆ, ಮಲೆನಾಡು ಬದಲಾಗಿದೆ. ಅದಕ್ಕಾಗಿ 17 ಬಾರಿ ಚಿತ್ರಕಥೆಯನ್ನು ತಿದ್ದಿದ್ದೇನೆ. ಈಗ ಫೈನಲ್ ಆಗಿದೆ ಎಂದಿದ್ದಾರೆ ನಾಗಾಭರಣ.

    ಚಿತ್ರಕ್ಕೆ ಹೀರೋ ಆಗಿ ಆಯ್ಕೆಯಾಗಿರೋದು ಚಿರಂಜೀವಿ ಸರ್ಜಾ. ಕಡ್ಡಿಪುಡಿ ಚಂದ್ರು ಜುಗಾರಿ ಕ್ರಾಸ್ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಉಳಿದ ತಾರಾಬಳಗದ ಆಯ್ಕೆ ಬಿರುಸಿನಿಂದ ನಡೆಯುತ್ತಿದೆ.

  • ತೇಜಸ್ವಿ ಕಾದಂಬರಿಗೆ ನಾಗಾಭರಣ ಟಚ್

    jugari cross is based on a novel by poornachandra tejaswi

    ಜುಗಾರಿ ಕ್ರಾಸ್. ಕನ್ನಡದ ಶ್ರೇಷ್ಟ ಕಾದಂಬರಿಗಳಲ್ಲಿ ಒಂದು. ಪೂರ್ಣಚಂದ್ರ ತೇಜಸ್ವಿಯವರ ಈ ಅಪರೂಪದ ಕಲಾಕೃತಿ ಕೊನೆಗೂ ಸಿನಿಮಾ ಆಗುತ್ತಿದೆ. ಶ್ರೇಷ್ಟ ಸಾಹಿತಿಯ ಕಾದಂಬರಿಯನ್ನು ಸಿನಿಮಾ ಮಾಡುವ ಸಾಹಸಕ್ಕೆ ಕೈ ಹಾಕಿರುವ ನಿರ್ದೇಶಕ ನಾಗಾಭರಣ, ಚಿರಂಜೀವಿ ಸರ್ಜಾ ಅವರನ್ನು ಹೀರೋ ಮಾಡಿದ್ದಾರೆ.

    ಕಮರ್ಷಿಯಲ್ ಚಿತ್ರಗಳಲ್ಲೇ ಗುರುತಿಸಿಕೊಂಡಿದ್ದ ಚಿರುಗೆ, ಇದು ಹೊಸ ಅನುಭವ. ತೇಜಸ್ವಿಯವರ ಕಾದಂಬರಿಯನ್ನು ಸಿನಿಮಾ ಮಾಡುವ ಸಾಹಸಕ್ಕೆ ಕೈ ಹಾಕಿರುವುದು ಕಡ್ಡಿಪುಡಿ ಖ್ಯಾತಿಯ ಎಂ.ಚಂದ್ರು.

    ಯಶ್, ಪುನೀತ್ ಮೊದಲಾದವರ ಶುಭ ಹಾರೈಕೆಯೊಂದಿಗೆ ಚಿತ್ರ ಶುರುವಾಗಿದೆ. ನಿರ್ದೇಶಕ ಪನ್ನಗಾಭರಣ, ಈ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿದ್ದಾರೆ. 

     

  • ನಾನಾ.. ಮಾವನಾ..? ಚಿರಂಜೀವಿ ಸರ್ಜಾ ವಿಚಿತ್ರ ಸಂಕಟ

    chiranjeevi sarja in big dilema

    ಮುದ್ದಾಡೆಂದಿದೆ ಮಲ್ಲಿಗೆ ಹೂ.. ಬಳಸೂ ಎಂದಿದೆ ಸಂಪಿಗೆ ಹೂ.. ಅದು ಇಬ್ಬರ ಹೆಂಡಿರ ಗಂಡನ ತಾಕಲಾಟ. ಆದರೆ, ಚಿರಂಜೀವಿ ಸರ್ಜಾರದ್ದು ಆ ರೀತಿಯ ಸಂಕಟವಲ್ಲ. ಹೇಳಿಕೊಳ್ಳಲಾಗದ, ಸುಮ್ಮನಿರಲಾಗದ ವಿಚಿತ್ರ ತಳಮಳ. ಏಕೆಂದರೆ, ಈ ವಾರ ಅವರಿಗೆ ಎರಡು ಖುಷಿಯಿದೆ. ವಿಚಿತ್ರವೆಂದರೆ ಅವರೆಡೂ ಅವರಿಗೆ ಟೆನ್ಷನ್ ಕೂಡಾ ಹೌದು.

    ಈ ವಾರ ಚಿರಂಜೀವಿ ಸರ್ಜಾ ಅಭಿನಯದ ಸಂಹಾರ ಚಿತ್ರ ತೆರೆಗೆ ಬರುತ್ತಿದೆ. ಅದಕ್ಕೆ ಎದುರಾಗಿ ಬರುತ್ತಿರುವುದು ಪ್ರೇಮಬರಹ ಸಿನಿಮಾ. ಅದು ಐಶ್ವರ್ಯಾ ಸರ್ಜಾ ಲಾಂಚ್ ಆಗುತ್ತಿರುವ ಚಿತ್ರ. ಚಿರಂಜೀವಿ ಸರ್ಜಾ ತಮ್ಮ ಜೀವನದಲ್ಲಿ ತಮ್ಮ ಮಾಮ ಅರ್ಜುನ್ ಸರ್ಜಾರನ್ನು ಯಾವ ಎತ್ತರದಲ್ಲಿಟ್ಟಿದ್ದಾರೆ ಅನ್ನೋದನ್ನು ಬಿಡಿಸಿ ಹೇಳುವ ಅಗತ್ಯವೇ ಇಲ್ಲ. ಆದರೆ, ಈಗ ಅದೇ ಚಿತ್ರದ ಎದುರು ಅವರ ಚಿತ್ರವೇ ನಿಲ್ಲುವವಿಚಿತ್ರ ಪರಿಸ್ಥಿತಿ ಎದುರಾಗಿಬಿಟ್ಟಿದೆ.

    ಸಂಹಾರ ಚಿತ್ರ ಗೆಲ್ಲಬೇಕು. ಹಾಗೆಂದು ಪ್ರಾರ್ಥಿಸೋಕೆ ಕಾರಣ, ಆ ಚಿತ್ರಕ್ಕೆ ಅವರೇ ಹೀರೋ. ಪ್ರೇಮಬರಹ ಚಿತ್ರವೂ ಗೆಲ್ಲಬೇಕು. ಏಕೆಂದರೆ, ಆ ಚಿತ್ರದ ನಾಯಕಿ ಅರ್ಜುನ್ ಸರ್ಜಾ ಮಗಳು. ಅಷ್ಟೇ ಅಲ್ಲ, ಪ್ರೇಮಬರಹ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಒಂದು ಹಾಡಲ್ಲಿ ಕುಣಿದು ಕುಪ್ಪಳಿಸಿದ್ದಾರೆ ಕೂಡಾ. 

    ಹೀಗಾಗಿ ಒಂದೇ ವಾರ ಚಿರಂಜೀವಿ ಸರ್ಜಾ ಆಂಜನೇಯನ ಎದುರು ಎರಡು ಬೇಡಿಕೆ ಇಟ್ಟಿರೋದು ಸ್ಪಷ್ಟ. ಸಂಹಾರ ಚಿತ್ರ ಗೆಲ್ಲಬೇಕು. ಪ್ರೇಮಬರಹ ಚಿತ್ರವೂ ಗೆಲ್ಲಬೇಕು. ಆಂಜನೇಯ ಆ ಬೇಡಿಕೆಯನ್ನು ಈಡೇರಿಸಬೇಕು. 

  • ನಾಯಕಿ ನಾನೇ.. ಖಳನಾಯಕಿ ನಾನೇ..

    samhara heroine and villain is haripriya

    ಸಂಹಾರ ಚಿತ್ರದ ನಾಯಕಿ ಯಾರು..? ಹರಿಪ್ರಿಯಾ. ಖಳನಾಯಕಿ ಯಾರು..? ಹರಿಪ್ರಿಯಾ. ಎರಡೂ ಹೇಗೆ ಸಾಧ್ಯ..? ಸಿನಿಮಾ ನೋಡಿ. ನಿಮಗೇ ಗೊತ್ತಾಗುತ್ತೆ. ಇದು ಹರಿಪ್ರಿಯಾ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡಿರೋ ಮಾತು.

    ಸಿನಿಮಾದಲ್ಲಿ ಹರಿಪ್ರಿಯಾ ಅವರು ಎರಡು ಶೇಡ್‍ಗಳಲ್ಲಿ ಕಾಣಿಸಿಕೊಳ್ತಾರಂತೆ. ಮೊದಲರ್ಧದಲ್ಲಿ ಎಷ್ಟು ಕ್ಯೂಟ್ ಪಾತ್ರವೆಂದರೆ, ಸಿಕ್ಕರೆ ಇಂಥಾ ಹುಡುಗಿ ನಮಗೂ ಸಿಗಬೇಕು ಎನ್ನಿಸುವಷ್ಟು ಒಳ್ಳೆಯ ಹುಡುಗಿ. ಮಧ್ಯಂತರದ ನಂತರ ಕಥೆಯೇ ಉಲ್ಟಾ. ಅಕ್ಷರಶಃ ರಾಕ್ಷಸಿ.

    ಮಾಮೂಲಿ ಪಾತ್ರಗಳಿಗಿಂತ ಇದು ಎಷ್ಟು ಡಿಫರೆಂಟ್ ಎಂದರೆ, ಕಥೆ ಮತ್ತು ಪಾತ್ರ ಕೇಳಿದ ತಕ್ಷಣ ಒಪ್ಪಿಕೊಂಡುಬಿಟ್ಟೆ. ಇದು ರೆಗ್ಯುಲರ್ ಹೀರೋಯಿನ್ ಪಾತ್ರಗಳಿಗಿಂತ ಕಂಪ್ಲೀಟ್ ಡಿಫರೆಂಟ್ ಅನ್ನೋದು ಹರಿಪ್ರಿಯಾ ನುಡಿ.

    ನೀರ್‍ದೋಸೆ ನಂತರ ಬೇರೆಯೇ ಇಮೇಜ್ ಪಡೆದುಕೊಂಡಿದ್ದ ಹರಿಪ್ರಿಯಾ, ಈಗ ಸಂಹಾರ ನಂತರ ಆ ಇಮೇಜ್ ಮತ್ತೊಂದು ಮಗ್ಗುಲು ಬದಲಿಸುವ ಸಾಧ್ಯತೆಯ ನಿರೀಕ್ಷೆಯಲ್ಲಿದ್ದಾರೆ.

     

     

  • ನಿಗೂಢ ಸಂಹಾರ.. ವಿಭಿನ್ನತೆಯ ಸಂಚಾರ

    samhara is a suspense thriller

    ಚಿರಂಜೀವಿ ಸರ್ಜಾ ಹಾಗೂ ಹರಿಪ್ರಿಯಾ ಅಭಿನಯದ ಸಂಹಾರದ ಕಥೆ ಏನು..? ಅದು ನಿಗೂಢ. ಗುರುದೇಶಪಾಂಡೆ ಚಿತ್ರದ ಕಥೆಯ ಎಳೆಯನ್ನು ಎಲ್ಲಿಯೂ ಬಿಟ್ಟುಕೊಟ್ಟಿಲ್ಲ. ಆದರೆ, ಚಿರಂಜೀವಿ ಸರ್ಜಾ ಈ ಚಿತ್ರದಲ್ಲಿ ಕಣ್ಣು ಕಾಣದ ಕುರುಡ. ಅಂಧ. ಹಾಗೆಯೇ ಅಡುಗೆ ಭಟ್ಟ. ಇದು ಹೇಗೆ ಸಾಧ್ಯ ಎನ್ನುವವರಿಗೆ ಚಿತ್ರದಲ್ಲಿಯೇ ಉತ್ತರ ಸಿಗುತ್ತೆ.

    ನಾಯಕಿಯಾಗಿರೋದು ಹರಿಪ್ರಿಯಾ. ಅವರು ಇಲ್ಲಿ ಎರಡು ಶೇಡ್‍ಗಳಲ್ಲಿ ಕಾಣಿಸಿಕೊಂಡಿದ್ದಾರೆ. ನೆಗೆಟಿವ್ ರೋಲ್ ಇರಬಹುದಾ ಅಥವಾ ಫ್ಯಾಮಿಲಿ ಓರಿಯೆಂಟೆಡ್ ಪಾತ್ರವಾ..? ಅದು ಸೀಕ್ರೆಟ್.

    ಇನ್ನು ಕಾವ್ಯಾಶೆಟ್ಟಿ, ಈ ಚಿತ್ರದಲ್ಲಿ ಜರ್ನಲಿಸ್ಟ್ ಪಾತ್ರ. ಹಿಂದಿನ ಚಿತ್ರದಲ್ಲಿ ಟಿವಿ ಚಾನೆಲ್ ಮಾಲಕಿಯಾಗಿದ್ದ ಕಾವ್ಯಾಶೆಟ್ಟಿ, ಈ ಚಿತ್ರದಲ್ಲಿ ರಿಪೋರ್ಟರ್. 

    ನಟ ಚಿಕ್ಕಣ್ಣ ಅವರದ್ದು ರಾಜಾಹುಲಿ ಸ್ಟೈಲ್‍ನ ಇನ್ಸ್‍ಪೆಕ್ಟರ್ ಪಾತ್ರ. ಅದು ಸೇಡಿನ ಕಥೆಯಾ..? ಗೊತ್ತಿಲ್ಲ. ಸಸ್ಪೆನ್ಸ್ ಕಾಯ್ದಿಟ್ಟಿರುವ ಗುರುದೇಶಪಾಂಡೆ, ಸಂಪೂರ್ಣ ಕುತೂಹಲ ತಣಿಸುವುದು ಈ ವಾರದ ಕೊನೆಯಲ್ಲಿ. 

     

     

  • ನಿನಗಾಗಿ ಕಾಯುತ್ತಿದ್ದೇನೆ.. ಬೇಗ ಬಾ - ಮೇಘನಾ ರಾಜ್ ಚಿರುನಾಮಸ್ಮರಣೆ

    meghana raj's heartfelt letter to chiranjeevi sarja

    ಅನಿರೀಕ್ಷಿತವಾಗಿ ಕಳೆದುಕೊಂಡ ಚಿರಂಜೀವಿಯನ್ನು ಈಗಲೂ ಹುಡುಕುತ್ತಿದ್ದಾರೆ ಮೇಘನಾ.. ಬಾಗಿಲಿನತ್ತ ನೋಡಿದಾಗಲೆಲ್ಲ ನೆನಪಾಗೋದು ನಾ ಬಂದೆ.. ಎನ್ನುತ್ತಿದ್ದ ಚಿರು.. ನೀನು ಇದ್ದಕ್ಕಿದ್ದಂತೆ ಬಂದು ನನ್ನನ್ನು ಕರೆಯುತ್ತೀಯಾ ಎಂದು ಕಾಯುತ್ತೇನೆ.. ಅದು ಆಗದೇ ಹೋದಾಗಲೆಲ್ಲ ಬೇಸರವಾಗುತ್ತೆ.. ನನ್ನ ಗೆಳೆಯ.. ನನ್ನ ಪ್ರಿಯಕರ.. ನನ್ನ ಸಂಗಾತಿ.. ನನ್ನ ಮಗು.. ನನ್ನ ನಗು.. ನನ್ನ ಆತ್ಮವಿಶ್ವಾಸ.. ನನ್ನ ಗಂಡ.. ನೀನು ನನ್ನ ಪಾಲಿಗೆ ಎಲ್ಲವೂ.. ಎಲ್ಲಕ್ಕಿಂತ ಹೆಚ್ಚು.. ನನ್ನ ಆತ್ಮದ ಒಂದು ಭಾಗ ನೀನು ಚಿರು..

    ಮೇಘನಾ ರಾಜ್ ಪತಿ ಚಿರುಗಾಗಿ ಒಂದು ಸುದೀರ್ಘ ಪತ್ರವನ್ನೇ ಬರೆದುಬಿಟ್ಟಿದ್ದಾರೆ. ಆ ಪತ್ರಗಳಲ್ಲಿರೋದು ಚಿರುನಾಮಸ್ಮರಣೆ.

    ನಾನು ಒಂಟಿಯಾಗುತ್ತೇನೆ.. ಒಂಟಿಯಾಗಬಾರದೆಂದೇ ನಮ್ಮಿಬ್ಬರ ಪ್ರೀತಿಯ ಸಂಕೇತ ಕೊಟ್ಟು ಹೋದೆಯಾ ಎಂಬ ಸಾಲುಗಳನ್ನು ಓದುವಾಗ ಹೃದಯ ಭಾರವಾಗುವುದು ಖಂಡಿತಾ. ಈ ಮಗುವಿನ ರೂಪದಲ್ಲಿ ನೀನು ಮತ್ತೆ ಬಾ.. ನನಗೆ ಕಾಯಲು ಸಾಧ್ಯವಾಗುತ್ತಿಲ್ಲ ಎನ್ನುವ ಮೇಘನಾ.. ಕೊನೆಗೆ ಹೇಳೋದೇನು ಗೊತ್ತಾ..

    ನಾನು ನಿನಗಾಗಿ ಕಾಯುವೆ.. ಇನ್ನೊಂದು ಕಡೆ ನೀನು ಕಾಯುತ್ತಿರು.. ನನ್ನ ಉಸಿರು ಇರುವವರೆಗೆ ನೀನು ಜೀವಂತ ಇರುವೆ.. ನೀನು ನನ್ನೊಳಗೇ ಇರುವೆ.. ಐ ಲವ್ ಯೂ..