` chiranjeevi sarja, - chitraloka.com | Kannada Movie News, Reviews | Image

chiranjeevi sarja,

 • ಆಕೆಗೆ ದರ್ಶನ್ ನಂತರ ರಮ್ಯಾ ಶಹಬ್ಬಾಸ್​ಗಿರಿ

  ramya tweets about aake

  ಆಕೆ ಚಿತ್ರ ಇದೇ ಜೂನ್ 30ಕ್ಕೆ ತೆರೆ ಕಾಣುತ್ತಿದೆ. ಟ್ರೇಲರ್​ನಲ್ಲೇ ಚಿತ್ರದ ಹಾರರ್​ ಫೀಲಿಂಗ್​ ನೋಡಿ ಬೆಚ್ಚಿದವರ ಸಂಖ್ಯೆ ಕಡಿಮೆಯೇನಿಲ್ಲ. ಇತ್ತೀಚೆಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್, ಆಕೆ ಚಿತ್ರವನ್ನು ಹೊಗಳಿದ್ದರು.

  ಈಗ ರಮ್ಯಾ ಕೂಡಾ ಅಂಥದ್ದೇ ಮಾತು ಹೇಳಿದ್ದಾರೆ.

  ಟ್ರೇಲರ್ ಈಸ್ ಹಾಂಟಿಂಗ್ ಎಂಬ ಮಾತಿನಲ್ಲೇ ಆಕೆ ಚಿತ್ರದ ಹಾರರ್ ಫೀಲಿಂಗ್ ಎಂಥದ್ದು ಎನ್ನುವುದು ಗೊತ್ತಾಗುತ್ತಿದೆ.

  ಚಿತ್ರ ಹಾಲಿವುಡ್ ಸಿನಿಮಾ ಫೀಲಿಗ್ ಕೊಡುತ್ತೆ ಎಂದಿದ್ದರು ದರ್ಶನ್. ಚಿತ್ರ ಭಯ ಹುಟ್ಟಿಸುವಂತಿದೆ ಎನ್ನುತ್ತಿದ್ದಾರೆ ರಮ್ಯಾ. ಭಯ ಪಡೋಕೆ ಸಿದ್ಧರಾಗಿ. ಗುಂಡಿಗೆ ಗಟ್ಟಿಯಿರಲಿ.

  Related Articles :-

  ಆಕೆ ಅರ್ಧ ಸ್ಯಾಂಡಲ್​ವುಡ್, ಉಳಿದರ್ಧ ಹಾಲಿವುಡ್

  Aake Censored

  Will It Be 9th Or 16th For Aake?

  Aake Trailer Released

  Eros International Presents Aake

  Chaitanya - Chiru Film Titled Aake 

   

   

 • ಆಟೋ ಡ್ರೈವರ್ ಆದ ಚಿರಂಜೀವಿ ಸರ್ಜಾ

  chiru sarja turns auto driver

  ಚಿರಂಜೀವಿ ಸರ್ಜಾ ಅಂದ್ರೆ ಆ್ಯಕ್ಷನ್ ಮತ್ತು ರೊಮ್ಯಾನ್ಸ್. ಆದರೆ, ಈಗ ಚಿರಂಜೀವಿ ಸರ್ಜಾ ಆಟೋ ಡ್ರೈವರ್ ಆಗಿಬಿಟ್ಟಿದ್ದಾರೆ. ಮೈಸೂರಿನಲ್ಲಿ ಅಕ್ಷರಶಃ ಆಟೋ ಓಡಿಸಿದ್ದಾರೆ ಚಿರಂಜೀವಿ ಸರ್ಜಾ.

  chiru_sarja_auto_driving1.jpgಅಮ್ಮ ಐ ಲವ್ ಯೂ ಚಿತ್ರದ ಪ್ರಚಾರಕ್ಕೆ ಮೈಸೂರಿಗೆ ತೆರಳಿದ್ದ ಚಿರಂಜೀವಿ ಸರ್ಜಾ, ಅಲ್ಲಿನ ಸಿದ್ಧಾರ್ಥ ಹೋಟೆಲ್‍ಗೆ ಆಟೋದಲ್ಲಿ ಎಂಟ್ರಿ ಕೊಟ್ರು. ತಿಂಡಿ ತಿನ್ನೋಕೆ ಆಟೋದಲ್ಲಿ ಬಂದ ಚಿರಂಜೀವಿ ಸರ್ಜಾರನ್ನು ಕಂಡವರಿಗೆ ಸಣ್ಣದೊಂದು ಆಘಾತವಾಗಿದ್ದರೆ ಅಚ್ಚರಿಯೇನೂ ಇಲ್ಲ.

  ಆದರೆ, ಇದು ಚಿತ್ರದ ಪ್ರಚಾರಕ್ಕಷ್ಟೇ ಅಲ್ಲ, ಮೈಸೂರಿಗೆ ಹೋದಾಗಲೆಲ್ಲ ಚಿರಂಜೀವಿ ಸರ್ಜಾ ಇಂಥಹ ಕೆಲಸ ಮಾಡ್ತಾ ಇರ್ತಾರಂತೆ. ಜಸ್ಟ್ ಥ್ರಿಲ್‍ಗಾಗಿ.

 • ಆದ್ಯಾ ಇದ್ದಾಳೋ.. ಇಲ್ಲವೋ.. ಅದೇ ಸಸ್ಪೆನ್ಸ್..!

  aadhya suspense continues

  ಆದ್ಯಾ, ಚಿರಂಜೀವಿ ಸರ್ಜಾ ಅಭಿನಯದ ಸಿನಿಮಾ. ಈ ಚಿತ್ರದಲ್ಲಿ ಆದ್ಯಾ ಎಂಬುದು ಮಗುವಿನ ಹೆಸರು.ಆ ಮಗು ಇದೆಯೋ.. ಇಲ್ಲವೋ.. ಎನ್ನುವುದೇ ಸಸ್ಪೆನ್ಸ್. ಹೌದು, ಇಂಥಾದ್ದೊಂದು ವಿಭಿನ್ನ ಕಲ್ಪನೆಯ ಚಿತ್ರಕ್ಕೆ ರಕ್ತಮಾಂಸ ತುಂಬಿ ತೆರೆಗೆ ತಂದಿದ್ದಾರೆ ಚೈತನ್ಯ.

  ಚಿರಂಜೀವಿ ಸರ್ಜಾ ಇಲ್ಲಿ ಎರಡು ಶೇಡ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಾಲೇಜ್ ಸ್ಟೂಡೆಂಟ್ ಆಗಿ ಮತ್ತು ಌಕ್ಷನ್ ಹೀರೋ ಆಗಿ. ಶ್ರುತಿ ಹರಿಹರನ್ ಅಚ್ಚರಿಯಾದರೆ, ಸಂಗೀತಾ ಭಟ್ ಅವರ ಪಾತ್ರ ಹಲವು ಮಜಲುಗಳಲ್ಲಿ ಓಪನ್ ಆಗುತ್ತಾ ಹೋಗುತ್ತೆ. ಇದು ಥ್ರಿಲ್ಲರ್ ಸಿನಿಮಾ. ಆದರೆ, ಭಯ, ರಕ್ತಪಾತ ಇರೋದಿಲ್ಲ ಅನ್ನೋದು ಕೆ.ಎಂ.ಚೈತನ್ಯ ಭರವಸೆ.

 • ಆದ್ಯಾದಲ್ಲಿ ಕಥೆಯೇ ಹೀರೋ

  story is the main hero in aadya

  ಚಿರಂಜೀವಿ ಸರ್ಜಾ, ಶ್ರುತಿ ಹರಿಹರನ್, ಸಂಗೀತಾ ಭಟ್ ನಟಿಸಿರುವ ಆದ್ಯಾ ಈಗ ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕೆ ಕೆ.ಎಂ.ಚೈತನ್ಯ ನಿರ್ದೇಶಕ. ಇಷ್ಟಿದ್ದರೂ.. ಈ ಚಿತ್ರದಲ್ಲಿ ಹೀರೋ ನಾನಲ್ಲ. ಕಥೆ ಎನ್ನುತ್ತಿದ್ದಾರೆ ನಾಯಕ ಚಿರಂಜೀವಿ ಸರ್ಜಾ.

  ಇದು ಪ್ರೇಕ್ಷಕನನ್ನು ಬೇರೆಯದೇ ಲೋಕಕ್ಕೆ ಕರೆದೊಯ್ಯುವ ಸಿನಿಮಾ. ಒಬ್ಬ ಬಿಸಿನೆಸ್‍ಮನ್ ಸುಮಾರು ವರ್ಷಗಳ ನಂತರ ಬೆಂಗಳೂರಿಗೆ ಬಂದಾಗ ಅನೇಕ ಸಮಸ್ಯೆಗಳು ಅವನ ಕಣ್ಣಿಗೆ ಬೀಳುತ್ತವೆ. ಆಗ ಆತ ತಾನು ಈ ಹಿಂದೆ ಯಾವತ್ತೂ ನೋಡಿರದೇ ಇದ್ದ ವ್ಯಕ್ತಿಯನ್ನು ಹುಡುಕಿಕೊಂಡು ಹೊರಡುತ್ತಾನೆ. ಅದು ಆದ್ಯಾ ಎನ್ನುವ ಹುಡುಗಿ. ಇದು ಟೋಟ್ಟಲ್ಲಿ ಥ್ರಿಲ್ಲಿಂಗ್ ಸ್ಟೋರಿ ಎನ್ನುತ್ತಾರೆ ಚಿರು.

  ಆಟಗಾರ, ಆಕೆ, ಅಮ್ಮ ಐ ಲವ್ ಯೂ ನಂತರ ಕೆ.ಎಂ.ಚೈತನ್ಯ ಮತ್ತೊಮ್ಮೆ ಚಿರು ಜೊತೆ ಮಾಡಿರುವ ಚಿತ್ರವಿದು. ಟಿ.ಜಿ.ವಿಶ್ವಪ್ರಸಾದ್, ರಘುನಾಥ್ ಎಸ್. ನಿರ್ಮಾಣದ ಸಿನಿಮಾದ ಟ್ರೇಲರ್ ಥ್ರಿಲ್ ಕೊಡುತ್ತಿದೆ.

 • ಆಪ್ತಮಿತ್ರನಾಗಿ ‘ಆಕೆ’ ನೋಡುತ್ತೇನೆ - ಅಪ್ಪು

  puneeth eager to watch aake

  ಆಕೆ ಚಿತ್ರ ಇದೇ ಜೂನ್ 30ರಂದು ಬಿಡುಗಡೆಯಾಗ್ತಾ ಇದೆ. ಈಗಾಗಲೇ ಚಿತ್ರದ ಹಾರರ್ ಟ್ರೇಲರ್, ನಿರೀಕ್ಷೆ ಹುಟ್ಟಿಸಿದೆ. ದರ್ಶನ್, ಸುದೀಪ್, ರಮ್ಯಾ ಸೇರಿದಂತೆ ಚಿತ್ರರಂಗದ ಹಲವರು ಟ್ರೇಲರ್ ನೋಡಿಯೇ ಥ್ರಿಲ್ ಆಗಿದ್ದಾರೆ. ಈಗ ಥ್ರಿಲ್ ಆಗಿರೋದು ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್.

  ಆಕೆ ಚಿತ್ರದ ಟ್ರೇಲರ್, ಹಾಲಿವುಡ್ ಸಿನಿಮಾಗಳಿಗೆ ಸಡ್ಡು ಹೊಡೆಯುವಂತಿದೆ. ಚಿತ್ರವನ್ನು ನಾನು ನೋಡಿಯೇ ನೋಡುತ್ತೇನೆ. ಚೈತನ್ಯ ಚಿತ್ರವನ್ನು ಅದ್ಭುತವಾಗಿ ಸೃಷ್ಟಿಸಿದ್ದಾರೆ ಎಂದಿರುವ ಅಪ್ಪು ಚಿತ್ರವನ್ನು ನೋಡಲು ನಾನು ಕಾತರನಾಗಿದ್ದೇನೆ ಎಂದಿದ್ದಾರೆ.

  ಎಲ್ಲಕ್ಕಿಂತ ಹೆಚ್ಚಾಗಿ, ಆಪ್ತಮಿತ್ರ ಚಿರಂಜೀವಿ ಸರ್ಜಾಗಾಗಿ ಈ ಚಿತ್ರ ನೋಡುತ್ತೇನೆ ಎಂದಿರುವ ಅಪ್ಪು, ಅಭಿಮಾನಿಗಳಲ್ಲಿ ಆಕೆ ಚಿತ್ರದ ಬಗ್ಗೆ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.

  Related Articles :-

  ಆಕೆ ಚಿತ್ರದ ಭಯಾನಕ ಅನುಭವಗಳು - ಕೇಳಿದರೆ ಬೆಚ್ಚಿಬೀಳುತ್ತೀರಿ

  ಚಿರುವಿನ 'ಆಕೆ'ಗೆ ಕಿಚ್ಚನ ಮೆಚ್ಚುಗೆ

  ಆಕೆಗೆ ದರ್ಶನ್ ನಂತರ ರಮ್ಯಾ ಶಹಬ್ಬಾಸ್​ಗಿರಿ

  ಆಕೆ ಅರ್ಧ ಸ್ಯಾಂಡಲ್​ವುಡ್, ಉಳಿದರ್ಧ ಹಾಲಿವುಡ್

  Aake Censored

  Aake Trailer Released

  Eros International Presents Aake

  Chaitanya - Chiru Film Titled Aake 

 • ಇಂದು ಚಿರು-ಮೇಘನಾ ನಿಶ್ಚಿತಾರ್ಥ

  chiru meghana engagement today

  ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ವೈವಾಹಿಕ ಬಂಧನದ ಮೊದಲ ಹೆಜ್ಜೆ ಇಡಲಿದ್ದಾರೆ. ಇಂದು ಅವರಿಬ್ಬರಿಗೂ ನಿಶ್ಚಿತಾರ್ಥ. ಸುಮಾರು 10 ವರ್ಷಗಳ ಪ್ರೀತಿಗೆ ಎಂಗೇಜ್‍ಮೆಂಟ್ ರಿಂಗ್‍ನ ಮುದ್ರೆ ಬೀಳುವ ದಿನ. 

  ಕಲಾವಿದರ ಕುಟುಂಬದ ಕುಡಿಗಳು, ಮದುವೆಯಾಗುತ್ತಿರುವುದು ಇಡೀ ಚಿತ್ರರಂಗದಲ್ಲಿ ಒಂದು ಹಬ್ಬವನ್ನೇ ಸೃಷ್ಟಿಸಿದೆ ಎನ್ನಬೇಕು. 

  ಮೇಘನಾ ರಾಜ್, ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಷಾಯ್ ಮಗಳು. ಚಿರಂಜೀವಿ ಸರ್ಜಾ, ಅರ್ಜುನ್ ಸರ್ಜಾ ಅವರ ಸೋದರಿಯ ಮಗ. ಚಿತ್ರರಂಗದ ಎರಡು ಕುಟುಂಬಗಳು ಬೀಗರ ಕುಟುಂಬವಾಗುತ್ತಿರುವುದೇ ಖುಷಿಗೆ ಕಾರಣ.

  ಇಂದು ಸಂಜೆ ಲೀಲಾ ಪ್ಯಾಲೇಸ್‍ನಲ್ಲಿ ವಿಧ್ಯುಕ್ತ ಸಮಾರಂಭ ನಡೆಯಲಿದೆ. ಬೆಳಗ್ಗೆ ಮನೆಗಳಲ್ಲಿ ಶಾಸ್ತ್ರೋಕ್ತ ಸಂಪ್ರದಾಯಗಳು ನೆರವೇರಲಿವೆ. 

 • ಇರುವುದೆಲ್ಲವ ಬಿಟ್ಟು ರಾಜಾ ಕನ್ನಲಿ ಚಿರು ಸರ್ಜಾ ಜೊತೆ..

  chiranjeeivi sarj'a next with raja kannali

  ಇರುವುದೆಲ್ಲವ ಬಿಟ್ಟು.. ಚಿತ್ರದ ಮೂಲಕ ಗಮನ ಸೆಳೆದಿದ್ದ ರಾಜಾ ಕನ್ನಲಿ, ಈಗ ಚಿರಂಜೀವಿ ಸರ್ಜಾ ಜೊತೆ ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಈ ಬಾರಿ ರಾಜಾ ಕನ್ನಲಿ ಕಮರ್ಷಿಯಲ್ ಸಿನಿಮಾ ಮಾಡುತ್ತಿದ್ದಾರೆ.

  ನಂಬಿಕೆ ಮತ್ತು ಪ್ರೀತಿಯ ನಡುವೆ ಟ್ರಾವೆಲ್ ಆಗುವ ಕಥೆಯಿದು. ಚಿರು ಸರ್ಜಾರ ಕಮರ್ಷಿಯಲ್ ಫ್ಯಾನ್ಸ್ ದೃಷ್ಟಿಯಲ್ಲಿಟ್ಟುಕೊಂಡು ಮಾಡಿರುವ ಕಥೆ ಎನ್ನುತ್ತಾರೆ ರಾಜು ಕನ್ನಲಿ.

  ಅಂದಹಾಗೆ ಇರುವುದೆಲ್ಲವ ಬಿಟ್ಟು.. ಚಿತ್ರದ ಪೂರ್ವಿ ಪಾತ್ರ, ಚಿರು ಪತ್ನಿ ಮೇಘನಾ ರಾಜ್ ಅವರಿಗೆ ರಾಜ್ಯ ಪ್ರಶಸ್ತಿ ತಂದುಕೊಟ್ಟಿದೆ. ಈಗ ಚಿರು ಜೊತೆ ಸಿನಿಮಾ ಶುರು ಮಾಡಿದ್ದಾರೆ ರಾಜು ಕನ್ನಲಿ. ಗುಡ್ ಲಕ್.

 • ಇಲ್ಲಿ ಖಾಕಿ ತೊಟ್ಕೊಂಡು ಅಲ್ಲಿ ರಚಿತಾ ರಾಮ್ ಮಿಸ್ಸಿಂಗ್ ಅನ್ನೋದಾ ಚಿರು..?

  chiru looks out for missing rachita ram in april

  ಖಾಕಿ, ಸದ್ಯದಲ್ಲೇ ರಿಲೀಸ್ ಆಗುತ್ತಿರೋ ಚಿರಂಜೀವಿ ಸರ್ಜಾ ಹೀರೋ ಆಗಿರೋ ಸಿನಿಮಾ. ಈ ಚಿತ್ರದಲ್ಲಿ ಕಾಮನ್ ಮ್ಯಾನ್ ಪವರ್ ತೋರಿಸೋಕೆ ಹೊರಟಿರೋ ಚಿರು, ಅಲ್ಲಿ ಇನ್ನೊಂದ್ ಕಡೆ ರಚಿತಾ ರಾಮ್ ಮಿಸ್ಸಿಂಗ್ ಅಂತಾ ಬೋರ್ಡ್ ಹಿಡ್ಕೊಂಡು ಹೊರಟಿದ್ದಾರೆ.

  ಯೆಸ್, ಇದು ಏಪ್ರಿಲ್ ಚಿತ್ರದ ಪೋಸ್ಟರ್. ವಿಶೇಷ ಅಂದ್ರೆ ರಚಿತಾ ರಾಮ್ ಕೂಡಾ ಪುಟ್ಟ ಮಗುವೊಂದರ ಫೋಟೋ ಹಿಡ್ಕೊಂಡು ಮಿಸ್ಸಿಂಗ್ ಅಂತಿದ್ರೆ, ರಚಿತಾ ಮತ್ತು ಮಗು ಇಬ್ಬರೂ ಇರೋ ಫೋಟೋ ಹಿಡ್ಕೊಂಡು ಚಿರು ನಿಂತಿದ್ದಾರೆ.

  ಒಂದರ ಹಿಂದೊಂದು ಚಿತ್ರಗಳಲ್ಲಿ ಬ್ಯುಸಿಯಾಗಿರೋ ಚಿರಂಜೀವಿ ಸರ್ಜಾ, ಈಗ ಖಾಕಿ ಚಿತ್ರದ ರಿಲೀಸ್ ಖುಷಿಯಲ್ಲಿದ್ದಾರೆ.

 • ಇವ್ರು ಶ್ಯಾನೆ ಟಾಪಾಗವ್ಳೆ ಅಂದ್ರೆ.. ಅವ್ರು ಶ್ಯಾನೆ ಟಾಪಾಗವ್ನೆ..

  shane top agavale son craze

  ಬಹುಶಃ ಇತ್ತೀಚೆಗೆ ಹಾಡೊಂದು ಇಷ್ಟೊಂದು ದೊಡ್ಡ ಕ್ರೇಜ್ ಹುಟ್ಟುಹಾಕಿದ್ದ ಉದಾಹರಣೆ ಇಲ್ಲ. ಸಿಂಗ ಚಿತ್ರದ ಹಾಡು ಅಷ್ಟೊಂದು ಕ್ರೇಜ್ ಸೃಷ್ಟಿಸಿದೆ. ಶ್ಯಾನೆ ಟಾಪಾಗವ್ಳೆ ಅನ್ನೋ ಹಾಡಿದೆಯಲ್ಲ, ಅದು ಆನ್‍ಲೈನ್‍ನಲ್ಲಿ ಭಯಂಕರ ಫೇಮಸ್. ಅದೊಂದು ಹಾಡನ್ನು ನೋಡಿ ಮೆಚ್ಚಿದವರ ಸಂಖ್ಯೆ 80 ಲಕ್ಷಕ್ಕೂ ಹೆಚ್ಚು. ಆದರೆ ಅದಕ್ಕಿಂತಲೂ ದೊಡ್ಡದೊಂದು ನ್ಯೂಸ್ ಇನ್ನೊಂದಿದೆ.

  ಚಿತ್ರದಲ್ಲಿ ಚಿರಂಜೀವಿ ಸರ್ಜಾ ಈ ಹಾಡು ಹಾಡೋದು ಅದಿತಿ ಪ್ರಭುದೇವ ಮೇಲೆ. ಆದರೆ, ಟಿಕ್‍ಟಾಕ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಈ ಹಾಡಿಗೆ ತಮ್ಮದೇ ಲಿರಿಕ್ಸ್ ಸೃಷ್ಟಿಸಿದೆ ಯುವ ಫಂಡ. ಅದರಲ್ಲೂ ಹುಡುಗಿಯರು ಈ ಹಾಡಿಗೆ ಪುರುಷಾಕಾರ ನೀಡಿ, ಶ್ಯಾನೆ ಟಾಪಾಗವ್ನೆ ನಮ್ ಹುಡುಗ ಶ್ಯಾನೆ ಟಾಪಾಗವ್ನೆ ಎಂದು ಹಾಡು ಹರಿಬಿಟ್ಟಿದ್ದಾರೆ.

  ಟಿಕ್‍ಟಾಕ್ ಒಂದರಲ್ಲೇ ಈ ಹಾಡು 7 ಲಕ್ಷಕ್ಕೂ ಹೆಚ್ಚು ಮರುಸೃಷ್ಟಿಯಾಗಿದೆ. ಧರ್ಮವಿಶ್ ಖುಷಿಯಾಗಲೇಬೇಕಲ್ವೆ.. ಉದಯ್ ಮೆಹ್ತಾ ನಿರ್ಮಾಣದ ಸಿನಿಮಾಗೆ ವಿಜಯ್ ಕಿರಣ್ ನಿರ್ದೇಶನವಿದೆ. 

  ಚಿರು, ಅದಿತಿ ಜೊತೆ ರವಿಶಂಕರ್, ತಾರಾ, ಶಿವರಾಜ್ ಕೆಆರ್ ಪೇಟೆ, ಅರುಣಾ ಬಾಲರಾಜ್, ರಂಜಿತಾ ಮೊದಲಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

 • ಕನಕಪುರ ಶ್ರೀನಿವಾಸ್ @21 ರಣಂ

  ಕನಕಪುರ ಶ್ರೀನಿವಾಸ್ @21 ರಣಂ

  ರಣಂ, ಕನಕಪುರ ಶ್ರೀನಿವಾಸ್ ಬ್ಯಾನರ್ ಸಿನಿಮಾ. ತೆಲುಗಿನಲ್ಲಿ ಜ್ಯೂ.ಎನ್‍ಟಿಆರ್ ಜೊತೆ ಸುಬ್ಬು, ಕನ್ನಡದಲ್ಲಿ ಶಿವರಾಜ್ ಕುಮಾರ್ ಜೊತೆ ಯುವರಾಜ ಚಿತ್ರದಿಂದ ಶುರುವಾದ ಸಿನಿಮಾ ಜರ್ನಿಯಲ್ಲಿ ಇದುವರೆಗೆ 20 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ ಕನಕಪುರ ಶ್ರೀನಿವಾಸ್. ರಣಂ, ಆರ್‍ಎಸ್ ಪ್ರೊಡಕ್ಷನ್ಸ್‍ನ 21ನೇ ಸಿನಿಮಾ.

  ಚಿರಂಜೀವಿ ಸರ್ಜಾ, ಆ ದಿನಗಳು ಚೇತನ್, ವರಲಕ್ಷ್ಮಿ ಶರತ್ ಕುಮಾರ್, ನೀತೂ ಗೌಡ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ ಇದೀಗ ರಿಲೀಸ್ ಆಗುತ್ತಿದೆ. ಚಿತ್ರದಲ್ಲಿ ರೈತ ಹೋರಾಟದ ಕಥೆಯಿದೆ. ವಿ. ಸಮುದ್ರ ಚಿತ್ರದ ನಿರ್ದೇಶಕ.

  ನನ್ನ 20 ಚಿತ್ರಗಳಲ್ಲಿ 10 ಸಿನಿಮಾಗಳು 100 ದಿನ ಓಡಿವೆ. ರಣಂ ಕೂಡಾ ಖಂಡಿತಾ ಶತದಿನೋತ್ಸವ ಆಚರಿಸಲಿದೆ ಎಂಬ ವಿಶ್ವಾಸದಲ್ಲಿದ್ದಾರೆ ಶ್ರೀನಿವಾಸ್.

 • ಕಾಮಿಡಿ ಅಲ್ಲ.. ಸೀರಿಯಸ್ ಚಿಕ್ಕಣ್ಣ

  chikkanna in rajahuli

  ಚಿಕ್ಕಣ್ಣ ಎಂದ ಕೂಡಲೇ ಜನರ ಮುಖದಲ್ಲಿ ನಗು ಅರಳುತ್ತೆ. ಮುಖ ನೋಡಿದರೆ ಹಲ್ಲು ಓಪನ್ ಆಗುತ್ತೆ. ಇನ್ನು ಚಿಕ್ಕಣ್ಣ ಡೈಲಾಗ್ ಹೊಡೆಯೋಕೆ ಶುರು ಮಾಡಿದ್ರೆ, ಗಹಗಹಿಸಿ ನಗುವುದಷ್ಟೇ ಬಾಕಿ. ಅದು ಚಿಕ್ಕಣ್ಣ ಕಾಮಿಡಿಗಿರುವ ಸ್ಪೆಷಾಲಿಟಿ.

  ಆದರೆ, ಅಂಥಾ ಚಿಕ್ಕಣ್ಣ ಈಗ ಸೀರಿಯಸ್ ಪಾತ್ರ ಮಾಡಿದ್ದಾರಂತೆ. ಸಂಹಾರ ಚಿತ್ರದಲ್ಲಿ ಚಿಕ್ಕಣ್ಣ ಅವರದ್ದು ಇನ್ಸ್‍ಪೆಕ್ಟರ್ ಪಾತ್ರ. ಸಿಕ್ಕಾಪಟ್ಟೆ ಸೀರಿಯಸ್ ಆಗಿದೆ ಎಂದಿದ್ದಾರೆ ಚಿಕ್ಕಣ್ಣ.

  ಆದರೆ, ಟ್ರೇಲರ್‍ನಲ್ಲಿ ಕಾಮಿಡಿಯೇ ಇದ್ಯಲ್ಲ ಅಂದ್ರೆ, ಅದು ಸಿಚುಯೇಷನ್ ಕಾಮಿಡಿ ಅಷ್ಟೆ, ಉಳಿದಂತೆ ಸೀರಿಯಸ್ ಪಾತ್ರ ಅಂತಾರೆ ಚಿಕ್ಕಣ್ಣ.

  ಅಂದಹಾಗೆ ಚಿಕ್ಕಣ್ಣಗೆ ಒಬ್ಬ ನಟನಾಗಿ ಇಮೇಜ್ ಸೃಷ್ಟಿಸಿದ್ದು ರಾಜಾಹುಲಿ. ಆ ಚಿತ್ರದ ನಿರ್ದೇಶಕ ಗುರು ದೇಶಪಾಂಡೆ ನಿರ್ದೇಶನದಲ್ಲಿಯೇ ಚಿಕ್ಕಣ್ಣ ಹೊಸ ಇಮೇಜ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಗುಡ್‍ಲಕ್.

 • ಖಾಕಿ ಕಾಮನ್ ಮ್ಯಾನ್ ಪವರ್ ದರ್ಶನ

  khakii released today

  ಖಾಕಿ, ದಿ ಪವರ್ ಆಫ್ ಕಾಮನ್ ಮ್ಯಾನ್.. ಈಗ ಥಿಯೇಟರುಗಳಲ್ಲಿದೆ. ಚಿತ್ರದಲ್ಲಿ ಚಿರಂಜೀವಿ ಸರ್ಜಾ ಕೇಬಲ್ ಹುಡುಗ. ಬಸಣ್ಣಿ ಖ್ಯಾತಿಯ ತಾನ್ಯಾ ಹೋಪ್ ನಾಯಕಿಯಾಗಿರುವ ಚಿತ್ರದಲ್ಲಿ ಸಂಚಾರಿ ವಿಜಯ್ ಹಾಗೂ ಛಾಯಾಸಿಂಗ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

  ನವೀನ್ ರೆಡ್ಡಿ ನಿರ್ದೇಶನದ ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿರುವುದು ಕನ್ನಡದ ಸೆನ್ಸೇಷನಲ್ ಡೈರೆಕ್ಟರ್ ಶಿವಮಣಿ.  ಒಂದು ಪಕ್ಕಾ ಕಮರ್ಷಿಯಲ್ ಸಿನಿಮಾ ಆಗಿರುವ ಖಾಕಿ ಚಿತ್ರಕ್ಕೆ ತರುಣ್ ಶಿವಪ್ಪ ನಿರ್ಮಾಪಕ.

 • ಖಾಕಿ ಮೇಲೆ ತಾನ್ಯಾ ಹೋಪ್

  tanya hope is hoping high with khakii

  ಕನ್ನಡ ಚಿತ್ರ ರಸಿಕರ ಪಾಲಿಗೆ ಬಸಣ್ಣಿಯಾಗಿಯೇ ಗುರುತಿಸಿಕೊಂಡ ತಾನ್ಯಾ ಹೋಪ್, ಅಮರ್ ಚಿತ್ರದಲ್ಲಿ ನಾಯಕಿಯಾಗಿ ಗಮನ ಸೆಳೆದರು. ಈಗ ಚಿರಂಜೀವಿ ಸರ್ಜಾ ಎದುರು ಹೀರೋಯಿನ್ ಆಗಿ ಖಾಕಿ ತೊಟ್ಟಿದ್ದಾರೆ.

  ನನಗೆ ಖಾಕಿ ಮೇಲೆ ತುಂಬಾನೇ ನಿರೀಕ್ಷೆ ಇದೆ. ನಾನಂತೂ ಪ್ರೇಕ್ಷಕರ ರಿಯಾಕ್ಷನ್ ಹೇಗಿರುತ್ತೆ ಎಂದು ತಿಳಿದುಕೊಳ್ಳೋಕೆ ಎಕ್ಸೈಟ್ ಆಗಿದ್ದೇನೆ. ಇಷ್ಟಪಟ್ಟು, ಕಷ್ಟಪಟ್ಟು ಮಾಡಿರುವ ಚಿತ್ರವಿದು ಅಂತಾರೆ ತಾನ್ಯಾ ಹೋಪ್.

  ಒಂದೊಳ್ಳೆ ಅವಕಾಶ ಕೊಟ್ಟ ನಿರ್ಮಾಪಕ ತರುಣ್ ಶಿವಪ್ಪ ಮತ್ತು ನಿರ್ದೇಶಕ ನವೀನ್ ರೆಡ್ಡಿಗೆ ಥ್ಯಾಂಕ್ಸ್ ಹೇಳೋದನ್ನು ಮರೆಯೋದಿಲ್ಲ. ಅದನ್ನು ಸರಿಯಾಗಿ ಬಳಸಿಕೊಂಡಿದ್ದೇನೆ. ಭ್ರಷ್ಟಾಚಾರದ ವಿರುದ್ಧ ಹೋರಾಡುವ ನಾಯಕನಿಗೆ ಬೆನ್ನೆಲುಬಾಗಿ ನಿಲ್ಲುವ ಸ್ಟ್ರಾಂಗ್ ಹುಡುಗಿಯ ಪಾತ್ರ ನನ್ನದು ಎನ್ನುವ ತಾನ್ಯಾ ಹೋಪ್, ಈ ಚಿತ್ರದಲ್ಲಿ 100% ಎಂಟರ್ಟೈನ್ಮೆಂಟ್ ಪಕ್ಕಾ ಅನ್ನೊ ಭರವಸೆ ಕೊಡ್ತಾರೆ.

  ಸಿನಿಮಾ ಮುಂದಿನ ವಾರ ರಿಲೀಸ್ ಆಗುತ್ತಿದ್ದು, ಚಿತ್ರದಲ್ಲಿ ಛಾಯಾಸಿಂಗ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಖ್ಯಾತ ನಿರ್ದೇಶಕ ಶಿವಮಣಿ ಚಿತ್ರದಲ್ಲಿ ವಿಲನ್.

 • ಗಂಡನ ಲವ್ವರ್ ಬ್ಯೂಟಿ ಹೊಗಳೋ ಹೆಂಡತಿ ನೋಡಿದ್ರಾ..?

  meghana raj sings for chiru's movie

  ಎಲ್ಲಾದರೂ ಕಂಡಿದ್ದೀರಾ..? ಕೇಳಿದ್ದೀರಾ..? ಆದರೆ ಇದು ಸತ್ಯ.. ಸತ್ಯ.. ಸತ್ಯ.. ಪತಿ ಚಿರಂಜೀವಿ ಸರ್ಜಾ ಕಣ್ಣು ಹಾಕಿರೋ ಹುಡುಗಿ ಶ್ಯಾನೆ ಟಾಪ್ ಆಗಿರೋ ಆದಿತಿ ಪ್ರಭುದೇವ. ಆ ಹುಡುಗಿಯನ್ನು ನವೀನ್ ಸಜ್ಜು ಧ್ವನಿಯಲ್ಲಿ ಚಿರು ಹಾಡಿ ಹೊಗಳಿ ಕುಣಿದು ಕುಪ್ಪಳಿಸುತ್ತಿದ್ದರೆ, ಮೇಘನಾ ರಾಜ್ ಅವರ ಜೊತೆಯಲ್ಲೇ ಹಾಡಿ, ಹಾಡಿನ ಕಿಕ್ಕೇರಿಸಿದ್ದಾರೆ.

  ವ್ಹಾಟ್ ಎ ಬ್ಯೂಟಿಫುಲ್ ಹುಡುಗಿ.. ಅನ್ನೋ ಈ ಹಾಡು ಸಿಂಗ ಚಿತ್ರದ್ದು. ಹಾಡನ್ನು ಬಿಡುಗಡೆ ಮಾಡಿರೋದು ಚಾಲೆಂಜಿಂಗ್ ಸ್ಟಾರ್ ದರ್ಶನ್. ಆ ಚಿತ್ರದ ಶ್ಯಾನೆ ಟಾಪಾಗವ್ಳೆ ಹಾಡು ಕೇಳಿ, ಅವರೇ ಚಿರುಗೆ ಕೇಳಿದ್ರಂತೆ. ಯಾವ ಚಿತ್ರದ್ದು ಈ ಹಾಡು, ವಿಚಾರಿಸು ಅಂತಾ. ಚಿರು ಚಿತ್ರದ್ದೇ ಎಂದು ಗೊತ್ತಾದಾಗ ಖುಷಿಯಾಗಿ ಅಭಿನಂದಿಸಿದ್ದರಂತೆ.

  ಉದಯ್ ಮೆಹ್ತಾ ನಿರ್ಮಾಣದ ಚಿತ್ರಕ್ಕೆ ವಿಜಯ್ ಕಿರಣ್ ನಿರ್ದೇಶನ ಮಾಡಿದ್ದಾರೆ. ಧರ್ಮ ವಿಶ್ ಸಂಗೀತ ನೀಡಿದ್ದಾರೆ.

 • ಗೋ ಹತ್ಯೆ.. ಡೈಲಾಗ್‍ಗೆ ಕತ್ತರಿ..!

  cow slaughter dialogue removied from seizer

  ಸೀಜರ್ ಚಿತ್ರ ನಾಳೆ ತೆರೆಕಾಣುತ್ತಿದೆ. ಚಿತ್ರದಲ್ಲಿ ಒಂದು ಕಡೆ ಗೋಹತ್ಯೆ ಕುರಿತ ಡೈಲಾಗ್ ಇದೆ. ಪಾತ್ರಧಾರಿ ರವಿಚಂದ್ರನ್, ಹಸುವಿನ ತಲೆ ಕಡಿಯುವುದು ಹಾಗೂ ಹೆತ್ತ ತಾಯಿಯ ತಲೆ ಹಿಡಿಯುವುದು ಎರಡೂ ಒಂದೇ ಎಂದು ಹೇಳುವ ಡೈಲಾಗ್ ಅದು. ಆ ಸಂಭಾಷಣೆಗೆ ವಿರೋಧ ವ್ಯಕ್ತವಾಗಿತ್ತು. ಗೋಹತ್ಯೆ ಪರ ಇರುವ ಸಂಘಟನೆಗಳು ಹಾಗೂ ಚಿತ್ರತಂಡದ ಭಾಗವಾಗಿರುವ ಪ್ರಕಾಶ್ ರೈ, ನಿರ್ದೇಶಕ ವಿನಯ್ ಕೃಷ್ಣ ವಿರುದ್ಧ ಕೆಂಡಕಾರಿದ್ದರು. ಫೋನ್ ಮಾಡಿ ಬೈದಿದ್ದೇನೆ ಎಂದು ಹೇಳಿದ್ದರು ಪ್ರಕಾಶ್ ರೈ.

  ಸಂಭಾಷಣೆಗೂ ರೈಗೂ ಸಂಬಂಧ ಇಲ್ಲ. ಅವರು ನನಗೆ ಫೋನ್ ಮಾಡಿಲ್ಲ ಎಂದಿದ್ದ ವಿನಯ್ ಕೃಷ್ಣ, ಈಗ ಚಿತ್ರದಲ್ಲಿ ಡೈಲಾಗ್‍ಗೆ ಮ್ಯೂಟ್ ಹಾಕಿಸಿದ್ದಾರೆ. ಅಂದರೆ, ಚಿತ್ರಮಂದಿರದಲ್ಲಿ ಈ ಸಿನಿಮಾ ನೋಡುವಾಗ ಆ ಸಂಭಾಷಣೆ ಬರುವ ವೇಳೆ ಬೀಪ್ ಸೌಂಡ್ ಮಾತ್ರ ಕೇಳುತ್ತೆ. 

  ನಟ ರವಿಚಂದ್ರನ್ ಕೂಡಾ ವಿವಾದ ಏಕೆ, ಡೈಲಾಗ್ ಬಿಡಿ ಎಂದು ಸೂಚಿಸಿದ ಹಿನ್ನೆಲೆಯಲ್ಲಿ ನಿರ್ದೇಶಕ ವಿನಯ್ ಹಾಗೂ ನಿರ್ಮಾಪಕ ತ್ರಿವಿಕ್ರಮ್ ಡೈಲಾಗ್‍ಗೆ ಕತ್ತರಿ ಆಡಿಸಿದ್ದಾರೆ. ಗೋಹತ್ಯೆ ಡೈಲಾಗ್ ಇಲ್ಲದ ಸೀಜರ್ ಸಿನಿಮಾ ನಾಳೆ ತೆರೆ ಕಾಣಲಿದೆ.

 • ಗೋಹತ್ಯೆ ಕುರಿತ ರವಿಚಂದ್ರನ್ ಡೈಲಾಗ್ ವಿವಾದ

  ravichandran dialogue creates controversy

  `ಹಸು ತಲೆ ಕಡಿಯೋದೂ ಒಂದೇ.. ಹೆತ್ತ ತಾಯಿಯ ತಲೆ ಹಿಡಿಯೋದೂ ಒಂದೇ..' ಇದು ರವಿಚಂದ್ರನ್ ಅಭಿನಯದ ಸೀಜರ್ ಚಿತ್ರದಲ್ಲಿರೋ ಡೈಲಾಗ್. ಈ ಡೈಲಾಗ್ ಹೇಳೋದು ನಾಯಕ ಕ್ರೇಜಿಸ್ಟಾರ್ ರವಿಚಂದ್ರನ್. ಸೀಜರ್ ಚಿತ್ರದ ಟ್ರೇಲರ್‍ನಲ್ಲೂ ಈ ಡೈಲಾಗ್ ಇದೆ. ಆದರೆ, ಈ ಡೈಲಾಗ್ ಈಗ ವಿವಾದಕ್ಕೆ ಕಾರಣವಾಗಿದೆ. 

  ರವಿಚಂದ್ರನ್ ಅವರಿಗೆ ಈಗ ಮಾರ್ಕೆಟ್ ಇಲ್ಲ. ಹೀಗಾಗಿ ಇಂತಹ ಗಿಮಿಕ್ ಮಾಡಿದ್ದಾರೆ. ಬೇರೆಯವರ ಆಹಾರ ಅಭ್ಯಾಸಗಳ ಬಗ್ಗೆ ಮಾತನಾಡೋ ಹಕ್ಕು ಅವರಿಗೆ ಇಲ್ಲ ಎನ್ನುವುದು ವಕೀಲ ಬಿ.ಟಿ.ವೆಂಕಟೇಶ್ ಎಂಬುವರ ಹೇಳಿಕೆ. ಹಿರಿಯ ನಟರಾದ ರವಿಚಂದ್ರನ್, ಈ ರೀತಿಯ ಡೈಲಾಗ್‍ಗೆ ನೋ ಎನ್ನಬೇಕಿತ್ತು. ಇದು ಕೋಮುಗಲಭೆಗೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ ಜನವಾದಿ ಸಂಘಟನೆ ನಾಯಕಿ ವಿಮಲಾ. 

  ಒಬ್ಬ ಹಿಂದೂ ಆಗಿ ಹಸುಗಳನ್ನು ಕೊಲ್ಲಬೇಡಿ ಎಂದು ಹೇಳೋದು ನನ್ನ ಹಕ್ಕು. ಗೋವನ್ನು ನಾವು ಪೂಜಿಸುತ್ತೇವೆ. ಗೋಹತ್ಯೆ ನಿಲ್ಲಿಸಬೇಕು. ಚಿತ್ರದಲ್ಲಿ ನಾವು ಅದನ್ನೇ ಹೇಳಿದ್ದೇವೆ. ಚಿತ್ರದ ಬಗ್ಗೆ ಸೆನ್ಸಾರ್ ಮಂಡಳಿಯೂ ಆಕ್ಷೇಪ ವ್ಯಕ್ತಪಡಿಸಿಲ್ಲ. ಒಂದೇ ಒಂದು ಕಟ್ ಇಲ್ಲದೆ ಪ್ರಮಾಣ ಪತ್ರ ಕೊಟ್ಟಿದೆ. ಇದರಲ್ಲಿ ವಿವಾದವೇ ಇಲ್ಲ ಎಂದಿದ್ದಾರೆ ನಿರ್ದೇಶಕ ವಿನಯ್ ಕೃಷ್ಣ.

  ಸೀಜರ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಚುನಾವಣೆ ಹೊಸ್ತಿಲಲ್ಲಿ ನಿಂತಿರುವಾಗ ಇಂತಹ ವಿವಾದವಾದರೆ ಬಿಡುಗಡೆ ಸಾಧ್ಯವೇ ಎಂಬ ಅನುಮಾನವನ್ನೂ ಹುಟ್ಟುಹಾಕಿದೆ. ರವಿಚಂದ್ರನ್ ಜೊತೆ ಚಿತ್ರದಲ್ಲಿ ಚಿರಂಜೀವಿ ಸರ್ಜಾ, ಪ್ರಕಾಶ್ ರೈ ಕೂಡಾ ಇದ್ದಾರೆ.

 • ಚಂದನ್ ಶೆಟ್ಟಿ ಸಂಗೀತ ನಿರ್ದೇಶನದ ಸೀಜರ್

  chandan shetty's music in seizer

  ಚಂದನ್ ಶೆಟ್ಟಿ ಎಂದರೆ ತಕ್ಷಣ ನೆನಪಾಗುವುದು ಮೂರೇ ಮೂರು ಪೆಗ್ಗಿಗೆ.. ಹಾಡು. ಆದರೆ, ಚಂದನ್ ಶೆಟ್ಟಿ ಇದಿಷ್ಟೇ ಅಲ್ಲ, ಅವರು ಗಾಯಕರೂ ಹೌದು. ಹಾಡನ್ನು ಬರೆಯುವ ಕಲೆಯೂ ಅವರಿಗೆ ಸಿದ್ಧಿಸಿದೆ. ಸಂಗೀತ ಸಂಯೋಜಿಸುವುದೂ ಗೊತ್ತಿದೆ. ಇದೆಲ್ಲವೂ ಗೊತ್ತಿರುವ ಚಂದನ್ ಶೆಟ್ಟಿ, ಸೀಜರ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.

  ಚಂದನ್ ಶೆಟ್ಟಿಯವರಿಗೆ ಇಂತಾದ್ದೊಂದು ಅವಕಾಶ ಕೊಟ್ಟಿದ್ದು ನಿರ್ಮಾಪಕ ತ್ರಿವಿಕ್ರಮ್. ಪವರ್ ಚಿತ್ರದ ಧಮ್ ಪವರೇ ಹಾಡು ಕೇಳಿದ ನಂತರ ತ್ರಿವಿಕ್ರಮ್, ಚಂದನ್ ಅವರನ್ನು ಆಯ್ಕೆ ಮಾಡಿದರಂತೆ.

  ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ನಾಲ್ಕೂ ಹಾಡುಗಳು ಸದ್ಯಕ್ಕೆ ಹಿಟ್ ಲಿಸ್ಟ್‍ನಲ್ಲಿವೆ. ವೆಸ್ಟರ್ನ್ ಶೈಲಿಯಲ್ಲಿರುವ ಸಂಗೀತ, ಅಭಿಮಾನಿಗಳಿಗೆ ಇಷ್ಟವಾಗಿದೆ.ರವಿಚಂದ್ರನ್, ಚಿರಂಜೀವಿ ಸರ್ಜಾ, ಪಾರೂಲ್ ಯಾದವ್ ಅಭಿನಯದ ಚಿತ್ರಕ್ಕೆ ವಿನಯ್ ಕೃಷ್ಣ ನಿರ್ದೇಶಕರು. ಚಿತ್ರ ಇದೇ ವಾರ ತೆರೆಗೆ ಬರುತ್ತಿದೆ.

 • ಚಿರಂಜೀವಿ ಸರ್ಜಾ V/S ಅರ್ಜುನ್ ಸರ್ಜಾ

  chiranjeevi sarja vs arjun sarja

  ಚಿರಂಜೀವಿ ಸರ್ಜಾ ಅವರಿಗೆ ಅರ್ಜುನ್ ಸರ್ಜಾ ಗಾಡ್‍ಫಾದರ್ ಅನ್ನೊದು ರಹಸ್ಯವೇನೂ ಅಲ್ಲ. ಮಾವ ಅರ್ಜುನ್ ಸರ್ಜಾ ಹಾಕಿದ ಗೆರೆಯನ್ನು ಚಿರಂಜೀವಿ ಸರ್ಜಾ ಆಗಲೀ, ಧ್ರುವ ಸರ್ಜಾ ಆಗಲೀ ಇದುವರೆಗೂ ದಾಟಿಲ್ಲ. ಮುಂದೆಯೂ ಅಂತಹ ಯಾವುದೇ ಸೂಚನೆಗಳಿಲ್ಲ. ಹೀಗಿದ್ದರೂ ಅರ್ಜುನ್ ಸರ್ಜಾ ವಿರುದ್ಧವೇ ಚಿರಂಜೀವಿ ಸರ್ಜಾ ನಿಲ್ಲುವಂತಾ ಪರಿಸ್ಥಿತಿ ಎದುರಾಗಿದೆ.

  ಚಿರಂಜೀವಿ ಸರ್ಜಾ ನಿರ್ದೇಶನದ ಪ್ರೇಮ ಬರಹ ಚಿತ್ರ ಫೆಬ್ರವರಿ 9ರಂದು ಬಿಡುಗಡೆಯಾಗುತ್ತಿದೆ. ಪ್ರೇಮ ಬರಹ ಚಿತ್ರದ ಹೀರೋಯಿನ್ ಅರ್ಜುನ್ ಸರ್ಜಾ ಮಗಳು ಐಶ್ವರ್ಯಾ. ಅದು ಐಶ್ವರ್ಯಾ ಅವರ ಪ್ರಥಮ ಚಿತ್ರವೂ ಹೌದು.

  ಅದೇ ದಿನ ಚಿರಂಜೀವಿ ಸರ್ಜಾ ಅಭಿನಯದ ಸಂಹಾರ ಕೂಡಾ ಬಿಡುಗಡೆಯಾಗುತ್ತಿದೆ. ಗುರು ದೇಶ್‍ಪಾಂಡೆ ನಿರ್ದೇಶನದ ಸಂಹಾರ ಚಿತ್ರದಲ್ಲಿ ಹರಿಪ್ರಿಯಾ ನಾಯಕಿ. ಕುರುಡನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿರಂಜೀವಿ ಸರ್ಜಾ, ಆ ದಿನ ಪೈಪೋಟಿ ನೀಡಬೇಕಿರುವುದು ತನ್ನ ಮಾವನ ನಿರ್ದೇಶನದ, ಮಾವನ ಮಗಳ ಚಿತ್ರಕ್ಕೆ. 

  ಒಂದೇ ದಿನ, ಒಂದೇ ಕುಟುಂಬದ ಎರಡು ಚಿತ್ರಗಳು ತೆರೆಗೆ ಬರುತ್ತಿರುವುದು ಸ್ಯಾಂಡಲ್‍ವುಡ್ ವಿಶೇಷ ಎಂದಷ್ಟೇ ಈಗ ಹೇಳೋಬಹುದು.

   

 • ಚಿರಂಜೀವಿ ಸರ್ಜಾ ಸಾವು ಹೇಗಾಯ್ತು..? ಡಾಕ್ಟರ್ ರಿಪೋರ್ಟ್ 

  chiru sarja medical sarja

  ಚಿರಂಜೀವಿ ಸರ್ಜಾ ಸಾವು ಅನಿರೀಕ್ಷಿತ ಆಘಾತ. ಏಕೆಂದರೆ ಚಿರಂಜೀವಿ ಸರ್ಜಾ ಫಿಟ್ ಆಗಿದ್ದರು. ವ್ಯಾಯಾಮ ನಿರಂತರವಾಗಿತ್ತು. ವಯಸ್ಸು ಜಸ್ಟ್ 39 ವರ್ಷ. ಹಾಗಾದರೆ ಇದ್ದಕ್ಕಿದ್ದಂತೆ ಸಾವು ಸುತ್ತಿಕೊಂಡಿದ್ದು ಹೇಗೆ..? ಡಾಕ್ಟರ್ ಕೊಟ್ಟಿರೋ ವರದಿಯ ಡೀಟೈಲ್ಸ್ ಹೀಗಿದೆ.

  ಚಿರು ಅವರನ್ನು ವೈದ್ಯರು ಆಸ್ಪತ್ರೆಗೆ ಕರೆತಂದಿದ್ದು ಮಧ್ಯಾಹ್ನ 2.20ಕ್ಕೆ. ಆಸ್ಪತ್ರೆಗೆ ಕರೆತರುವ ಹೊತ್ತಿಗೆ ಚಿರು ಅವರ ಪಲ್ಸ್ ರೇಟ್ ಡೌನ್ ಆಗಿತ್ತು. ಹೀಗಾಗಿ ಆಸ್ಪತ್ರೆಗೆ ಕರೆತಂದ ತಕ್ಷಣ ಅವರನ್ನು ಎಮರ್ಜೆನ್ಸಿ ರೂಂಗೆ ಶಿಫ್ಟ್ ಮಾಡಲಾಯ್ತು. ತಕ್ಷಣ ಅವರನ್ನು ಟ್ರಿಯೇಜ್ ಏರಿಯಾಗೆ ಶಿಫ್ಟ್ ಮಾಡಲಾಯ್ತು. ಟ್ರಿಯೇಜ್ ಏರಿಯಾ ಅಂದ್ರೆ ಏನ್ ಗೊತ್ತಾ..? ಸಿಂಪಲ್ಲಾಗ್ ಅರ್ಥ ಆಗಬೇಕು, ಆರ್ಮಿಯಲ್ಲಿ ಮೈತುಂಬಾ ಗಾಯಗೊಂಡವರನ್ನ ಒಂದು ರೂಂಗೆ ಶಿಫ್ಟ್ ಮಾಡ್ತಾರೆ. ಅಲ್ಲಿ ಒಬ್ಬ ರೋಗಿಗೆ ಏನೇನೆಲ್ಲ ಸೌಲಭ್ಯ ಕೊಡಲು ಸಾಧ್ಯವಿದೆಯೋ, ಎಲ್ಲ ಸೌಲಭ್ಯಗಳೂ ಅಲ್ಲಿರ್ತವೆ. ಇದು ಆರ್ಮಿಯಿಂದ ಬಂದಿರೋ ಪದ. ಹೀಗಾಗಿ ಹಲವು ಆಸ್ಪತ್ರೆಗಳು ಅದನ್ನು ಟ್ರಿಯೇಜ್ ಏರಿಯಾ ಎಂದೇ ಕರೆಯುತ್ತವೆ. ಅದು ಎಮರ್ಜೆನ್ಸಿ ರೂಂಗಳಲ್ಲಿ ಮಾತ್ರ ಇರುತ್ತೆ. ಅಲ್ಲಿ ಚಿಕಿತ್ಸೆ ನೀಡಲಾಯ್ತು.

  ಚಿಕಿತ್ಸೆ ವೇಳೆ ಪಲ್ಸ್ ಬಡಿತ ಹೆಚ್ಚಿಸಲು ಪ್ರಯತ್ನ ಮಾಡಲಾಯ್ತು. ಸಿಪಿಆರ್ ಬಳಸುವ ಮೂಲಕ ನಾಡಿ ಮಿಡಿತವನ್ನು ಹತೋಟಿಯಲ್ಲಿಡಲು ಪ್ರಯತ್ನ ಮಾಡಿದರೂ ಫಲಕಾರಿಯಾಗಲಿಲ್ಲ. 3 ಗಂಟೆ 48 ನಿಮಿಷದವರೆಗೂ ನಡೆದ ನಿರಂತರ ಪ್ರಯತ್ನದಲ್ಲಿ 3 ಬಾರಿ ನಾಡಿ ಮಿಡಿತ ಹೆಚ್ಚಿಸಲು ಯಶಸ್ವಿಯಾದೆವು. ಆದರೆ ಅದು ಸ್ಥಿರವಾಗಿ ನಿಲ್ಲಲಿಲ್ಲ. 3.48ಕ್ಕೆ ಚಿರಂಜೀವಿ ಸರ್ಜಾ ನಿಧನ ಎಂದು ಘೋಷಿಸಿದೆವು.

  ಇದು ಜಯನಗರ ಅಪೋಲೋ ಆಸ್ಪತ್ರೆಯ ಡಾ.ಯತೀಶ್ ಗೋವಿಂದಯ್ಯ ಅವರು ನೀಡಿರುವ ವರದಿ.

  ಚಿರುಗೆ ನಿನ್ನೆಯೇ ಎದೆನೋವು ಕಾಣಿಸಿಕೊಂಡಿತ್ತಂತೆ. ಇಸಿಜಿ ಮಾಡಿಸಿಕೊಂಡು ಬಂದಿದ್ದರಂತೆ. ಅಣ್ಣನಿಗೆ ಧ್ರುವ ಸರ್ಜಾ ಮನೆಯಿಂದ ಮಟನ್ ಮಾಡಿಸಿಕೊಂಡು ತಂದಿದ್ದರು. ಚೆನ್ನಾಗಿಯೇ ಊಟವನ್ನೂ ಮಾಡಿದ್ದ ಚಿರು, ಮಧ್ಯಾಹ್ನ ಮಾವ ಅರ್ಜುನ್ ಸರ್ಜಾ ಜೊತೆ ಮಾತನಾಡಿದ್ದರು. ಚೆನ್ನಾಗಿದ್ದೇನೆ ಎಂದು ತಿಳಿಸಿದ್ದರು. ಅಪ್ಪನ ಜೊತೆ ಯಾಕೋ ಸ್ವಲ್ಪ ಬೆವರು ಬರ್ತಿದೆ ಅಪ್ಪಾ, ಫ್ಯಾನ್ ಹಾಕಿ ಎಂದು ಫ್ಯಾನ್ ಹಾಕಿಸಿಕೊಂಡಿದ್ದರು. ಹಾಗೇ ಮಲಗಿದವರು ಮೇಲೇಳಲೇ ಇಲ್ಲ.

   

 • ಚಿರಂಜೀವಿ ಸರ್ಜಾ..ಚೇತನ್ ಜೊತೆ ಜೊತೆಯಲಿ..

  chethan and chiranjeeivi sarja team up

  ಚಿರಂಜೀವಿ ಸರ್ಜಾ ಮತ್ತು ಚೇತನ್ ರಣಂ ಚಿತ್ರದಲ್ಲಿ ಒಟ್ಟಿಗೇ ನಟಿಸುತ್ತಿದ್ದಾರೆ. ವಿ ಸಮುದ್ರ ನಿರ್ದೇಶನದ ಈ ಚಿತ್ರದಲ್ಲಿ, ಚೇತನ್ ಕ್ರಾಂತಿಕಾರಿಯ ಪಾತ್ರ ಮಾಡುತ್ತಿದ್ದಾರೆ. ಅದೂ ಚೆಗವೇರಾ ಮಾದರಿಯ ಕ್ರಾಂತಿಕಾರಿ. 

  ಈಗ ಆ ಚಿತ್ರಕ್ಕೆ ಚಿರಂಜೀವಿ ಸರ್ಜಾ ಪ್ರವೇಶವಾಗಿದೆ. ಚಿರು, ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ ಮಾಡುತ್ತಿದ್ದಾರಂತೆ. ಚೇತನ್ ಇರುವ ದೃಶ್ಯಗಳ ಚಿತ್ರೀಕರಣ ಮುಕ್ತಾಯವಾಗಿದ್ದು, ಚಿರಂಜೀವಿ ಸರ್ಜಾ ಅಭಿನಯದ ದೃಶ್ಯಗಳ ಚಿತ್ರೀಕರಣ ಬಾಕಿ ಇದೆ. ಚಿರು, 20 ದಿನಗಳ ಕಾಲ್‍ಶೀಟ್ ಕೊಟ್ಟಿದ್ದಾರೆ.