` aniruddh, - chitraloka.com | Kannada Movie News, Reviews | Image

aniruddh,

  • `ರಾಜ ಸಿಂಹ'ನಲ್ಲಿ ಸಾಹಸ ಸಿಂಹನೂ ಇರ್ತಾರೆ..!

    raja simha movie image

    `ರಾಜಸಿಂಹ' ಅನಿರುದ್ಧ, ಸಂಜನಾ ಗರ್ಲಾನಿ, ನಿಖಿತ ಅಭಿನಯದ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ಚಿತ್ರದ ವಿಶೇಷವೆಂದರೆ, ಚಿತ್ರದಲ್ಲಿ ನೀವು ರಾಜಸಿಂಹನನ್ನಷ್ಟೇ ಅಲ್ಲ, ಸಾಹಸಸಿಂಹನನ್ನೂ ನೋಡಬಹುದು. ವಿಷ್ಣುವರ್ಧನ್ ಅವರನ್ನು ಗ್ರಾಫಿಕ್ಸ್ ಮೂಲಕ ತೆರೆಗೆ ತರಲಾಗಿದೆ.

    ಇದು ಸಿಂಹಾದ್ರಿಯ ಸಿಂಹ ಚಿತ್ರದ ಮುಂದುವರಿದ ಕಥೆ ಎನ್ನುವ ಸುದ್ದಿಗಳೂ ಇವೆ. ಆದರೆ, ಚಿತ್ರತಂಡ ಅದನ್ನು ಗುಟ್ಟಾಗಿಯೇ ಇಟ್ಟುಕೊಂಡಿದೆ. ಇನ್ನೆಷ್ಟು ದಿನ. ಫೆಬ್ರವರಿ 2ರ ನಂತರ ಎಲ್ಲ ಗುಟ್ಟುಗಳೂ ರಟ್ಟಾಗಲಿವೆ. ಭಾರತಿ ವಿಷ್ಣುವರ್ಧನ್ ಕೂಡಾ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ವಿಷ್ಣು ಮೊಮ್ಮಕ್ಕಳಾದ ಶ್ಲೋಕ ಮತ್ತು ಜೇಷ್ಠವರ್ಧನ ಅವರನ್ನೂ ಚಿತ್ರದಲ್ಲಿ ನೋಡಬಹುದು. ಅವರು ಅನಿರುದ್ಧ ಅವರ ಮಕ್ಕಳು.

    ಒಟ್ಟಿನಲ್ಲಿ ರಾಜಸಿಂಹ ಚಿತ್ರದಲ್ಲಿ ವಿಷ್ಣುವರ್ಧನ್ ಅವರ ಕುಟುಂಬವೇ ಇರಲಿದೆ. ವಿಷ್ಣು ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಚಿತ್ರ ರಾಜಸಿಂಹ.

     

  • 9 Years Of Wait, 5 CMs, 5 Places And Yet No Memorial For Appaji: Anirudh

    vishnu memorail controversy raised again

    It has been nine years since rebel star Ambareesh's ‘kuchiku’ friend had passed away. A legendary actor late Dr. Vishnuvardhan, and one of the three strong pillars of Kannada film industry along with thespian late Dr. Rajkumar and late Dr. Ambareesh, is still waiting for a memorial as assured by the state government!

    With the state government acting swiftly in the case of rebel star Ambareesh by allocating a piece of land in Kanteerava Studio, for a memorial to be built in his honour, the fans of Dr. Vishnuvardhan have started to express dissatisfaction against the state government and its authorities for dilly dallying with regard to the memorial of their favourite star, the sahasa simha Dr. Vishnuvardhan.

    Further, after son-in-law of Dr. Vishnuvardhan, Anirudh Jatkar has expressed dissatisfaction urging chief minister to stop such careless attitude in the matter, the Chief Minister H D Kumaraswamy has reacted to it saying that such a statement was uncalled for and that it was him who had personally called the then CM Mr. B S Yeddyurappa to make arrangements honouring the legendary actor though the Vishnu family were ready for last rites to be performed in Banashankari crematorium.

    Following the reaction to his statement by the Chief Minister H D Kumaraswamy, Anirudh says, “I have nothing personal against Mr. Kumaraswamy or any his family members. In fact, I have the highest of regard for him especially for his close association with Appaji. My statement is out of displeasure against the functioning of the state government for the last nine years which has seen five chief ministers.”

    He goes on to add that till date, five chief minister have been approached and in turn five different places were allocated by them with an assurance to build a memorial and an institution. “All have ended in litigation. Now, a new proposal is being floated over the memorial in Kanteerava Studio. We have spent over two years on the last location in Mysuru. We have even dug a borewell after having the right vaastu plan to go ahead with the project. But, the farmers are agitating now. It is a gomala land, and the state can solve it within a day. We have been patient, but for how long?” asks Anirudh.

    He also clarifies that he and Amma, Mrs. Bharathi Vishnuvardhan have been running from pillar to post meeting all the concerned including the Chief Ministers. “Yes, I agree it was Mr. Kumaraswamy who personally called to inform that the departed soul will be honoured properly while we were all set to conduct the last rites in Banashankari crematorium. But how long should we wait. We once waited for him (Mr. Kumaraswamy) for hours at his office. He never got back to us after that. I have been calling his office but there has been no response. We stand firm urging the state to act fast and clear the hurdles at Mysuru, where not just the memorial with statue will be built but an institution will come up which will benefit the industry through the trust which will be headed by the head of the state government,” he explains as he wraps up.

    Related Articles :-

    ಅಂಬಿ ನಿಧನದ ಬೆನ್ನಲ್ಲೇ ವಿಷ್ಣು ಸ್ಮಾರಕ ವಿವಾದಕ್ಕೆ ಮತ್ತೆ ಜೀವ

  • Aniruddh To Small Screen

    aniruddh image

    Actor Aniruddh who is currently busy acting in a new film called 'Raja Simha' is all set to make his small screen debut with the second season of popular reality show 'Dancing Star'. Aniruddh is one among the 12 contestants who are participating in the show. Apart from Aniruddh, Master Anand, Mythrea Gowda, Harshika Poonachcha, Chandrika, Rapid Rashmi, singer Sinchan Deekshith and others are contesting in this show.

    Last time, director Guruprasad and Yogi were the judges of the show. This time actor-producer-distributor V Ravichandran will be participating in the show as one of the judges.

    The shooting for the programme will start from the 29th of this month and the reality programme is likely to be aired in the month of February.

  • Hot Song Shot For Raja Simha

    raja simha movie image

    A hot song featuring Sanjana and Aniruddh was shot recently for 'Raja Simha'. The song has been composed by Jessie Gift, while Tribhuvan has choreographed the song.

    'Raja Simha' is being produced by C D Basappa while, Ravi Ram is the director. Jessie Gift has composed the music for the film, while K M Vishnuvardhan is the cameraman. 'Raja Simha' stars Aniruddh, Nikitha Thukral, Bharathi Vishnuvardhan, Sharath Lohitashwa, Bullet Prakash, Arun Sagar, Pavan, Vijay Chendur and others.

    Related Articles :-

    Aniruddh Injured During The Shooting Of Raja Simha

    Raja Simha Launched

    Aniruddh is Raja Simha

    Raja Simha Heroine Nikitha Thukral - Exclusive

    Aniruddh in Raja Simha - Exclusive

  • Raja Simha Heroine Nikitha Thukral - Exclusive

    raja simha image

    Actress Nikitha Thukral has been selected as the heroine for Aniruddh in a new film called 'Raja Simha' which is all set to go on floors in the month of February. Earlier, 'Raja Simha' was announced with Aniruddh in lead role and the search for the heroine was on. Now Nikitha Thukral has been said to given her consent for acting in the film opposite Aniruddh. Apart from Aniruddh and Nikitha, Dr Bharathi Vishnuvardhan, Bullet Prakash and others are likely to play prominent roles in the film.

    Debutante Raja is directing the film apart from scripting it. Jessie Gift is the music director.

  • Raja Simha Teaser On Dr Vishnuvardhan's Birthday

    raja simha teaser

    If everything had gone right, then he teaser of Aniruddh's new film 'Raja Simha' was supposed to be released on September 06th on the occasion of Aniruddh's wife Keerthi's birthday. 

    Due to the death of journalist Gauri Lankesh, the event is postponed and now the teaser will be be released on Dr Vishnuvardhan's birthday (September 18) at his residence in Jayanagar on Monday.

    'Raja Simha' is written and directed by debutante Ravi Ram and is being produced by C D Rajanna. Nikitha Thukral plays the female lead in the film. Bharathi Vishnuvardhan plays an important role, apart from Ambarish.

  • Raja Simha Teaser On Keerthi's Birthday

    raja simha

    The trailer of Aniruddh's new film 'Raja Simha' is all set to be released on September 6th on the occasion of Aniruddh's wife Keerthi's birthday. The teaser will be released in Dr Vishnuvardhan's residence in Jayanagar on Wednesday.

    Actor Aniruddh who has done a lot of romantic roles in his career, will be seen in an action image in this film. He has also undergone a change in his physique. For that the actor had worked out for the last two years. There are four fights composed by Different Danny and the action sequences are said to be the highlight of the film.

    The film is written and directed by debutante Ravi Ram and is being produced by C D Rajanna. Nikitha Thukral plays the female lead in the film. Bharathi Vishnuvardhan plays an important role, apart from Ambarish.

  • Raja Simhana Rathayatre From Today

    raja simha movie image

    Aniruddh's latest film 'Raja Simha' is all set to release on Friday (February 02nd). Meanwhile, the team has organised a grand procession before the release of the film.

    The procession which is called as 'Raja Simhana Rathayatre' will start from Ananda Rao Circle on Friday morning at 8.30 AM. The procession will end at the Anupama theater. Dr Vishnuvardhan's statute which plays a prominent role in the film, will be taken in the procession. Thousands of Dr Vishnuvardhan's fans are expected to be a part of this procession.

    'Raja Simha' is written and directed by debutante Ravi Ram and is being produced by C D Rajanna. Nikitha Thukral plays the female lead in the film. Bharathi Vishnuvardhan plays an important role, apart from Ambarish. Sanjana, Arun Sagar, Bullet Prakash and others are also a part of the star cast.

  • Rajasimha Review; Chitraloka Rating 3.5/5

    rajasimha movie review

    Raja Simha is a tribute to the late Vishnuvardhan. The film is a sort of continuation of Vishnuvardhan's hit film Simhadriya Simha. There is a special treat awaiting the fans of Vishnuvardhan as the actor "returns" in all glory in a special scene.  The film starts on a comedy track with Raja Simha Anirudh playing the role of a mechanic.

    His has an ordinary life with a small romance in the background. Fate takes him to Simhadri. His mother is shocked with him going to that place. Flashback reveals how the character of Narasimhe Gowda played by Vishnuvrdhan in Simhadriya Simha is related to this story. 

    The betrayal from a family relative is revealed. What is the connection between Raja Simha and Narasimhe Gowda? Why is his mother afraid of him going to Simhadri? All these questions are answerd in an entertaining way in the film directed by Ravi Ram. In able form is Anirudh who mesmerises in comedy and romantic scenes and stuns you in the action scenes. There is a lot of scenes in which Anirudh reminds audience of Vishnuvardhan in his mannerisms and dialogue delivery. It is a treat to watch. 

    Anirudh has able company in the form of Nikitha, Sanjannaa Galrani in the romantic and comedy scenes. In the emotional scenes he gets to share screen with Bharati Vishnuvardhan. Ambareesh is also present in a guest role but an important character in the film. 

    The director's biggest success is linking the film to Simhadriya Simha. It is very convincingly done. That gives the film a big boost. Jessie Gift has come up with some very good music for Raja Simha which will remain for quite sometime. This is a kind of film you would have expected Vishnuvardhan to do. That is one more reason for his fans to watch it. Anirudh has returned to screen in style and this could just be the turning point of his career.

  • Sa Ra Govindu Raps Anirudh For His Careless Remarks Against CM

    sa ra govindu blasts anirudh for hi remarks on HD kumaraswamy

    Noted Kannada film producer and former president of Karnataka Film Chamber of Commerce (KFCC), Sa Ra Govindu has come down heavily upon Anirudh, actor and son-in-law of late Dr. Vishnuvardhan for his careless remarks against Chief Minister H D Kumaraswamy with regard to the pending memorial since nine years for Sahasa Simha.

    Following reports over proposal to build a memorial in honouring the legendary actor Vishnuvardhan in Kanteerava Studio alongside two other legends - Dr. Rajkumar and Dr. Ambareesh, the three main pillars of Kannada film industry, Anirudh had expressed anguish and had reportedly asked Chief Minister to stop such careless attitude in the matter.

    While such remarks against a Chief Minister has evoked strong opposition from many, Sa Ra Govindu while strongly objecting to it has taken Anirudh to task for such irresponsible behaviour. “Any such proposal to build the memorial of Dr. Vishnuvardhan in Kanteerava Studio would be in a positive manner, and to honour all the three legends in one common place, and is never an attempt to dishonour any of them. Such remarks against a chief minister is uncalled for,” said Mr. Govindu.

    He further asks Anirudh to apologise forthwith to the Chief Minister, and to the citizens Karnataka whom Mr. Kumaraswamy represents. He adds that such irresponsible remarks demeans the position of a Chief Minister.

  • ಅನಿರುದ್ಧ ಹೊಸ ದಾಖಲೆ : ಇದು ಜೊತೆ ಜೊತೆಯಲಿ ರೆಕಾರ್ಡ್ ಅಲ್ಲ...!

    anirudh makes yet another record

    ಅನಿರುದ್ಧ, ಈಗ ಕಿರುತೆರೆಯ ಸೂಪರ್ ಸ್ಟಾರ್. ಅವರ ಜೊತೆ ಜೊತೆಯಲಿ ಧಾರಾವಾಹಿ, ಕನ್ನಡ ಕಿರುತೆರೆಯಲ್ಲಿ ಕಲ್ಪನೆ ಮಾಡಿಕೊಳ್ಳಲೂ ಅಸಾಧ್ಯ ಎನ್ನುವಂತೆ ಟಿಆರ್‌ಪಿ ಗಳಿಸಿದೆ. ಗಳಿಸುತ್ತಿದೆ. ಪ್ರತಿವಾರವೂ ಹೊಸ ದಾಖಲೆ ಬರೆಯುತ್ತಿದೆ. ಅನಿರುದ್ಧ್ ಅವರಿಗೆ ಚಿತ್ರರಂಗದಲ್ಲಿ ಸಿಕ್ಕಿದ್ದಕ್ಕಿಂತ ೧೦೦ ಪಟ್ಟು ಹೆಚ್ಚು ಅಭಿಮಾನಿಗಳು ಕಿರುತೆರೆಯಿಂದ ಸಿಕ್ಕಿದ್ದಾರೆ. ಈ ಸಂಭ್ರಮದ ನಡುವೆಯೇ ಅನಿರುದ್ಧ್ ಹೊಸ ದಾಖಲೆ ಬರೆದಿದ್ದಾರೆ. ಆದರೆ, ಇದು ಸೀರಿಯಲ್ ರೆಕಾರ್ಡ್ ಅಲ್ಲ.

    ಅನಿರುದ್ಧ್ ಅವರು ಇತ್ತೀಚೆಗೆ ಕಿರುಚಿತ್ರಗಳ ತಯಾರಿಯಲ್ಲಿ ತೊಡಗಿಸಿಕೊಂಡಿದ್ದರು. ಆ ಕಿರುಚಿತ್ರ ಈಗ ದಾಖಲೆ ಪ್ರಶಸ್ತಿ ಗಳಿಸಿದೆ. ೫ ಪ್ರಶಸ್ತಿ ಬಾಚಿಕೊಂಡಿರುವ ಅವರ ಕಿರುಚಿತ್ರ ಇಂಡಿಯಾ ಬುಕ್ ಆಫ್ ರೆಕಾರ್ಡ್ಸನಲ್ಲಿ ಟಾಪ್ ೧೦೦ ಸ್ಥಾನ ದೊರಕಿಸಿಕೊಟ್ಟಿದೆ.

    ಕಲಾಂ ಬುಕ್ ಆಫ್ ರೆಕಾರ್ಡ್ಸನಲ್ಲೂ ೫ ಪ್ರಶಸ್ತಿ ಪಡೆದಿರುವ ಅನಿರುದ್ಧ್, ಕಲಾಮ್ಸ್ ಗೋಲ್ಡನ್ ಅವಾರ್ಡ್ ಕೂಡಾ ಪಡೆದಿದ್ದಾರೆ. ಏಷ್ಯನ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ೪ ಪ್ರಶಸ್ತಿ ಪಡೆದಿದ್ದು, ಗ್ರಾö್ಯಂಡ್ ಮಾಸ್ಟರ್ ಪ್ರಶಸ್ತಿ ಪಡೆದಿದ್ದಾರೆ. ಒಟ್ಟಿನಲ್ಲಿ ಅನಿರುದ್ಧ್ ಅವರಿಗೀಗ ಸಂಭ್ರಮದ ವರ್ಷ.

     

  • ಉಪ್ಪಿ ಅಣ್ಣನ ಮಗ ರಂಗ ಪ್ರವೇಶ - ಚಿಕ್ಕಮ್ಮ ಪ್ರಿಯಾಂಕಾ ಜೊತೆ

    uppi's brother son in second half

    ಉಪೇಂದ್ರ ಫ್ಯಾಮಿಲಿಯಿಂದ ಇನ್ನೊಂದು ಕುಡಿ ಚಿತ್ರರಂಗಕ್ಕೆ ಬರ್ತಾ ಇದೆ. ಉಪೇಂದ್ರ ಅವರ ಅವರ ಅಣ್ಣ ಸುನೀಂದ್ರ ಅವರ ಪುತ್ರ ನಿರಂಜನ್ ಬೆಳ್ಳಿತೆರೆಗೆ ಕಾಲಿಟ್ಟಿದ್ದಾರೆ. ಬಣ್ಣ ಹಚ್ಚಿದ ಮೊದಲ ಚಿತ್ರದಲ್ಲೇ ನಟಿಸುತ್ತಾ ಇರೋದು ಚಿಕ್ಕಮ್ಮ ಪ್ರಿಯಾಂಕಾ ಉಪೇಂದ್ರ ಜೊತೆ.

    ಪ್ರಿಯಾಂಕಾ ಪೊಲೀಸ್ ಕಾನ್‍ಸ್ಟೇಬಲ್ ಪಾತ್ರದಲ್ಲಿ ನಟಿಸುತ್ತಿರುವ `ಸೆಕೆಂಡ್ ಹಾಫ್' ಚಿತ್ರದಲ್ಲಿ ನಿರಂಜನ್ ನಟಿಸುತ್ತಿದ್ದಾರೆ. ಬಹುಶಃ ಪ್ರಿಯಾಂಕಾ ಅವರ ಜೊತೆ ನಿರಂಜನ್ ಮಗ ಅಥವಾ ತಮ್ಮನ ಪಾತ್ರ ಮಾಡಿರಬೇಕು ಎಂಬ ಸುದ್ದಿ ಗಾಂಧಿನಗರದಲ್ಲಿ ಸರಿದಾಡುತ್ತಿದೆ. ಚಿತ್ರದ ನಿರ್ದೇಶಕ ಯೋಗಿಗೆ ಇದು ಮೊದಲ ಪ್ರಯತ್ನ.

  • ನಾನು ಆರ್ಯವರ್ಧನ್ ಆಗುತ್ತಿಲ್ಲ : ಅನೂಪ್ ಭಂಡಾರಿ

    ನಾನು ಆರ್ಯವರ್ಧನ್ ಆಗುತ್ತಿಲ್ಲ : ಅನೂಪ್ ಭಂಡಾರಿ

    ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ್ ಜತ್ಕರ್ ಅವರನ್ನು ತೆಗೆದ ನಂತರ ಆ ಪಾತ್ರಕ್ಕೆ ಯಾರು ಎಂಬ ಪ್ರಶ್ನೆ ಅಭಿಮಾನಿಗಳಿಗೆ ಕಾಡುತ್ತಿರೋದು ನಿಜ. ಆ ಪಾತ್ರಕ್ಕೆ ಹಲವು ಹೆಸರುಗಳು ಕೇಳಿಬಂದವಾದರೂ ದೊಡ್ಡಮಟ್ಟದಲ್ಲಿ ಸದ್ದು ಮಾಡಿದ್ದು ರಂಗಿತರಂಗ, ವಿಕ್ರಾಂತ್ ರೋಣ ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿ ಅವರ ಹೆಸರು.

    ಜೊತೆ ಜೊತೆಯಲಿ ಚಿತ್ರೀಕರಣ ನಿಂತಿಲ್ಲ. ಆರ್ಯವರ್ಧನ್ ಪಾತ್ರವನ್ನು ಹೊರಗಿಟ್ಟುಕೊಂಡೇ ಕೆಲವು ಎಪಿಸೋಡ್ ಶೂಟ್ ಆಗುತ್ತಿವೆ. ಚಿತ್ರೀಕರಣವಂತೂಊ ಎಡಬಿಡದೆ ಸಾಗಿದೆ. ಈ ನಡುವೆಯೇ ಅನೂಪ್ ಭಂಡಾರಿ ತಮಗೆ ಆರ್ಯವರ್ಧನ್ ಪಾತ್ರಕ್ಕೆ ಆಫರ್ ಬಂದಿದ್ದು ನಿಜ ಎಂದಿದ್ದಾರೆ.

    ಆಫರ್ ಬಂದಿದ್ದು ನಿಜ. ನಾನು ನೋ ಎಂದಿದ್ದೂ ನಿಜ. ಸದ್ಯಕ್ಕೆ ನಾನು ಇನ್ನೊಂದು ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದೇನೆ. ಶೀಘ್ರದಲ್ಲೇ ಆ ಹೊಸ ಪ್ರಾಜೆಕ್ಟ್ ಅನೌನ್ಸ್ ಆಗಲಿದೆ ಎಂದಿದ್ದಾರೆ ಅನೂಪ್.

    ಅತ್ತ ಅನಿರುದ್ಧ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅವರು ನನ್ನನ್ನು ಬಿಟ್ಟಿರಬಹುದು, ನಾನು ಬಿಟ್ಟಿಲ್ಲ. ಅವರು ಕರೆದರೆ ಮತ್ತೆ ಹೋಗಲು ಸಿದ್ಧ ಎಂದಿದ್ದಾರೆ ಅನಿರುದ್ಧ್.

    ಇದರ ನಡುವೆ ಆರ್ಯವರ್ಧನ್ ಪಾತ್ರಕ್ಕೆ ವಿಜಯ್ ರಾಘವೇಂದ್ರ, ಜೆಕೆ ಸೇರಿದಂತೆ ಹಲವರ ಹೆಸರು ಚರ್ಚೆಯಾಗುತ್ತಿರುವುದಂತೂ ಸತ್ಯ. ಆದರೆ ಧಾರಾವಾಹಿ ತಂಡದವರು ಯಾವುದೇ ಹೆಸರನ್ನು ಎಸ್ ಎಂದೂ ಹೇಳ್ತಿಲ್ಲ. ನೋ ಎಂದೂ ಹೇಳ್ತಿಲ್ಲ.

  • ರಾಮಾಚಾರಿ, ಜಲೀಲ ಒಂದೇ ಚಿತ್ರದಲ್ಲಿ..!

    vishnu and ambi unite in rajasimha

    ವಿಷ್ಣುವರ್ಧನ್ ಮತ್ತು ಅಂಬರೀಷ್ ಚಿತ್ರರಂಗಕ್ಕೆ ಒಟ್ಟಿಗೇ ಬಂದವರು. ಅಂಬರೀಷ್ ಖಳನ ಪಾತ್ರಗಳಿಂದ ಆರಂಭಿಸಿ ರೆಬಲ್‍ಸ್ಟಾರ್ ಆದರೆ, ವಿಷ್ಣುವರ್ಧನ್ ಸಾಹಸ ಸಿಂಹನಾಗಿ ಮೆರೆದರು. ವಿಶೇಷವೆಂದರೆ ಪರಸ್ಪರ ಸ್ಪರ್ಧಿಗಳಾಗಿದ್ದರೂ ಅಂಬರೀಷ್ ಮತ್ತು ವಿಷ್ಣು ಜೀವದ ಗೆಳೆಯರು. ಅದು ಗುಟ್ಟಾಗಿಯೇನೂ ಇರಲಿಲ್ಲ. ಪರಸ್ಪರರ ಏಳಿಗೆಗೆ ನೆರವಾಗುತ್ತಿದ್ದ, ಸಂಕಟಗಳಲ್ಲಿ ಜೊತೆಯಾಗುತ್ತಿದ್ದ ಇಬ್ಬರೂ ಅದೆಷ್ಟೋ ಚಿತ್ರಗಳಲ್ಲಿ ಒಟ್ಟಿಗೇ ನಟಿಸಿದ್ದಾರೆ. 

    ಅದರಲ್ಲಿಯೂ ದಿಗ್ಗಜರು ಚಿತ್ರದಲ್ಲಿ ವಿಷ್ಣು ಮತ್ತು ಅಂಬಿಯನ್ನು ನೋಡಿದವರು, ಅವರನ್ನು ಪಾತ್ರಗಳಾಗಿ ನೋಡಿರಲೇ ಇಲ್ಲ ಎನ್ನುವುದರಲ್ಲೇ ಕುಚಿಕು ಗೆಳೆಯರ ಶ್ರೇಯಸ್ಸಿದೆ. ಈಗ ಅವರಿಬ್ಬರೂ ಒಟ್ಟಿಗೇ, ಒಂದೇ ಚಿತ್ರದಲ್ಲಿ ನಟಿಸಿದ್ದಾರೆ. 

    ಹೇಗೆ ಅಂತಾ ಗೊಂದಲ ಬೇಡ. ರಾಜಸಿಂಹ ಚಿತ್ರದಲ್ಲಿ ವಿಷ್ಣುವರ್ಧನ್ ಅವರನ್ನು ಗ್ರಾಫಿಕ್ಸ್‍ನಲ್ಲಿ ಮರುಸೃಷ್ಟಿ ಮಾಡಲಾಗಿದೆ. ಅದೇ ಚಿತ್ರದಲ್ಲಿ ಅಂಬರೀಷ್ ಕೂಡಾ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ವಿಷ್ಣು ಪತ್ನಿಯಾಗಿ ನಟಿಸಿರುವುದು ಭಾರತಿ. ವಿಷ್ಣು, ಸಿಂಹಾದ್ರಿಯ ಸಿಂಹನ ನರಸಿಂಹ ಗೌಡನಾಗಿ ಬರಲಿದ್ದಾರೆ. ಕುಚ್ಚಿಕು ಗೆಳೆಯರ ಪುನರ್‍ಮಿಲನವನ್ನು ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳೂ ಕಾಯುತ್ತಿದ್ದಾರೆ. 

  • ಸಿಎಂ ಕುಮಾರಸ್ವಾಮಿಗೆ ನೋವಾಗಿದ್ದರೆ ಕ್ಷಮೆ ಇರಲಿ - ಅನಿರುದ್ಧ

    anirudh apologize to cm hd kumaraswamy

    ಸರ್ಕಾರಕ್ಕೆ ಮರ್ಯಾದೆಯಿದ್ದರೆ, ಮೈಸೂರಿನಲ್ಲಿ ಸ್ಮಾರಕ ನಿರ್ಮಿಸಲಿ. ಕುಮಾರಸ್ವಾಮಿ ಒಬ್ಬ ಉಡಾಫೆ ಮುಖ್ಯಮಂತ್ರಿ ಎಂದು ಟೀಕಿಸಿದ್ದ ವಿಷ್ಣುವರ್ಧನ್ ಅಳಿಯ ಅನಿರುದ್ಧ, ಸಿಎಂ ಕುಮಾರಸ್ವಾಮಿಗೆ ಕ್ಷಮೆ ಯಾಚಿಸಿದ್ದಾರೆ. ಅನಿರುದ್ಧ ಹೇಳಿಕೆಗೆ ಕೆಂಡಕಾರಿದ್ದ ಸಿಎಂ, ಅನಿರುದ್ಧಗೆ ಪ್ರಬುದ್ಧತೆಯ ಕೊರತೆ ಇದೆ. ಟೀಕಿಸುವಾಗ ಗಾಂಭೀರ್ಯವಿರಲಿ ಎಂದಿದ್ದರು. 

    ಅಂಬರೀಷ್ ಅವರಂತೆಯೇ, ವಿಷ್ಣುವರ್ಧನ್ ಅವರೊಂದಿಗೆ ಕೂಡಾ ನನಗೆ ಒಡನಾಟವಿತ್ತು. ಬಾಂಧವ್ಯವಿತ್ತು. ವಿಷ್ಣು ಸ್ಮಾರಕ ಕುರಿತಂತೆ ಅಭಿಮಾನಿಗಳು ಮತ್ತು ಕುಟುಂಬಸ್ಥರು ಒಂದು ತೀರ್ಮಾನಕ್ಕೆ ಬರಲಿ ಎಂದಿದ್ದಾರೆ ಕುಮಾರಸ್ವಾಮಿ.

    ಕುಮಾರಸ್ವಾಮಿಯವರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಆದರೆ, ನಮ್ಮ ನೋವನ್ನೂ ಸಿಎಂ ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ ಅನಿರುದ್ಧ.

  • ಸಿಂಹಾದ್ರಿಯ ಸಿಂಹ ಭಾಗ 2 ರಾಜಸಿಂಹ

    anirudh's rajasimha

    ರಾಜಾಸಿಂಹ ಚಿತ್ರದ ಹೆಸರು, ಚಿತ್ರದಲ್ಲಿ ಗ್ರಾಫಿಕ್ಸ್‍ನಲ್ಲಿ ಮೂಡಿಸಿರುವ ವಿಷ್ಣುವರ್ಧನ್ ಗೆಟಪ್ ಎಲ್ಲವನ್ನೂ ನೋಡಿದರೆ, ಅಭಿಮಾನಿಗಳಿಗೆ ಮೂಡುತ್ತಿದ್ದ ಪ್ರಶ್ನೆಯೇ ಅದು. ಇದಕ್ಕೂ ಸಿಂಹಾದ್ರಿಯ ಸಿಂಹ ಚಿತ್ರಕ್ಕೂ ಸಂಬಂಧ ಇದೆಯಾ ಅನ್ನೋದು. ಹೌದು ಎಂಬ ಉತ್ತರ ಬಂದಿದೆ ಚಿತ್ರತಂಡದ ಕಡೆಯಿಂದ.

    ಇದು ಸಿಂಹಾದ್ರಿಯ ಸಿಂಹ ಚಿತ್ರದ ಮುಂದುವರಿದ ಭಾಗ ಎನ್ನುತ್ತಾರೆ ಅನಿರುದ್ಧ. ಅಪ್ಪಾಜಿ ನಿಧನರಾದ 8 ವರ್ಷಗಳ ನಂತರವೂ ಅಭಿಮಾನಿಗಳ ನೆನಪಲ್ಲಿ ವಿಷ್ಣುವರ್ಧನ್ ಸದಾ ಹಸಿರಾಗಿಯೇ ಇದ್ದಾರೆ. ವಿಷ್ಣು ಸ್ಟೈಲ್ ಸಿನಿಮಾ ಬೇಕು ಎನ್ನುತ್ತಿದ್ದಾಗ ಹೊಳೆದ ಕಥೆ ಇದು. ಹೀಗಾಗಿಯೇ ವಿಷ್ಣುವರ್ಧನ್ ಅವರನ್ನು ಗ್ರಾಫಿಕ್ಸ್ ಮೂಲಕ ಮರುಸೃಷ್ಟಿಸಲಾಗಿದೆಯಂತೆ.

    ಚಿತ್ರಕ್ಕಾಗಿ 3 ವರ್ಷ ಸಮಯ ತೆಗೆದುಕೊಂಡಿರುವ ಅನಿರುದ್ಧ, ಈ ಚಿತ್ರದ ಮೂಲಕ ಚಾಕಲೇಟ್ ಬಾಯ್ ಇಮೇಜ್‍ನಿಂದ ಹೊರಬರುವ ಉತ್ಸಾಹದಲ್ಲಿದ್ದಾರೆ. ಜಿಮ್‍ಗೆ ಹೋಗಿ ಮೈಕಟ್ಟು ಹುರಿಗೊಳಿಸಿದ್ದಾರೆ. ಚಿತ್ರದಲ್ಲಿ ಅದ್ಭುತ ಎನ್ನಿಸುವಂತಹ ಆ್ಯಕ್ಷನ್ ಸೀನ್‍ಗಳಿವೆಯಂತೆ. 

    ಸಿಂಹಾದ್ರಿಯಲ್ಲಿ ಸಿಂಹಾದ್ರಿಯ ಸಿಂಹ ನರಸಿಂಹ ಗೌಡನ ಮರಣಾನಂತರ ಆ ಊರು ಏನಾಗುತ್ತೆ..? ಅದನ್ನು ಸರಿಪಡಿಸಲು ಆತನ ಮಗ ಅನಿರುದ್ಧ ಏನು ಮಾಡ್ತಾನೆ ಅನ್ನೋದು ಚಿತ್ರದ ಕಥೆ. ಚಿತ್ರದಲ್ಲಿ ವಿಷ್ಣುವರ್ಧನ್ ಮಗನ ಪಾತ್ರದಲ್ಲಿ ನಟಿಸಿರುವುದು ಅನಿರುದ್ಧ. ತಾಯಿಯ ಪಾತ್ರದಲ್ಲಿ ಭಾರತಿ ನಟಿಸಿದ್ದಾರೆ. ಚಿತ್ರಮಂದಿರಕ್ಕೆ ಬರಲು ಕೆಲವು ಗಂಟೆಗಳಷ್ಟೇ ಬಾಕಿ.