` soorappa babu - chitraloka.com | Kannada Movie News, Reviews | Image

soorappa babu

  • ಜಗ್ಗೇಶ್, ಸದಾನಂದ ಗೌಡ ಸಹಾಯಹಸ್ತ : ಕೋಟಿಗೊಬ್ಬ 3 ಟೀಂ ಸೇಫ್

    kotigibba 3 poland issues resolved

    ಕೋಟಿಗೊಬ್ಬ 3 ಚಿತ್ರಕ್ಕೆ ಪೋಲೆಂಡ್‍ನಲ್ಲಿ ತಗ್ಲಾಕ್ಕೊಂಡ ವಂಚಕನೊಬ್ಬ ಯಾಮಾರಿಸಿದ್ದ. ಇಡೀ ತಂಡ ವಾಪಸ್ ಆದರೂ ನಿರ್ಮಾಪಕ ಸೂರಪ್ಪ ಬಾಬು ಅವರ ಅಸಿಸ್ಟೆಂಟ್ ಅವರ ಪಾಸ್‍ಪೋರ್ಟ್ ಕಿತ್ತಿಟ್ಟುಕೊಂಡು 95 ಲಕ್ಷ ರೂ. ಕೊಡಲೇಬೇಕು ಎಂದು ಬ್ಲಾಕ್‍ಮೇಲ್ ಮಾಡಿದ್ದ. ಒಪ್ಪಂದದ ಪ್ರಕಾರ ಕೊಡಬೇಕಿದ್ದ 2 ಕೋಟಿ 36 ಲಕ್ಷ ಕೊಟ್ಟ ಮೇಲೂ ಹೊಸದಾಗಿ 95 ಲಕ್ಷಕ್ಕೆ ಡಿಮ್ಯಾಂಡ್ ಇಟ್ಟು ಹಿಂಸೆ ಕೊಟ್ಟಿದ್ದ.

    ಇಡೀ ತಂಡವನ್ನು ವಾಪಸ್ ಕರೆದುಕೊಂಡು ಬಂದ ಸೂರಪ್ಪ ಬಾಬು, ನಂತರ ಜಗ್ಗೇಶ್ ಅವರನ್ನು ಸಂಪರ್ಕಿಸಿದ್ದಾರೆ. ಜಗ್ಗೇಶ್ ನೆರವಿನೊಂದಿಗೆ ಕೇಂದ್ರ ಸಚಿವ ಸದಾನಂದ ಗೌಡರನ್ನು ಸಂಪರ್ಕಿಸಿದ್ದಾರೆ. ಯಾವಾಗ ಕೇಂದ್ರ ಸಚಿವರ ಕರೆ ಬಂತೋ ಮುಂಬೈ ಪೊಲೀಸರು ಖದೀಮನಿಗೆ ನೋಟಿಸ್ ಕೊಟ್ಟಿದ್ದಾರೆ. ಇತ್ತ ಬೆಂಗಳೂರಿನಲ್ಲೂ ಕೇಸ್ ದಾಖಲಾಗಿದೆ. ತಕ್ಷಣ ಹೆದರಿದ ಪೋಲೆಂಡ್‍ನಲ್ಲಿದ್ದ ಅಜಯ್ ಪಾಲ್ ಮತ್ತು ಸಂಜಯ್ ಪಾಲ್, ಸೂರಪ್ಪ ಬಾಬು ಅವರ ಅಸಿಸ್ಟೆಂಟ್‍ರನ್ನು ಕಳಿಸಿಕೊಟ್ಟಿದ್ದಾರೆ.

    ಈಗ ನೋಡಿದರೆ ಲೆಕ್ಕದ ಪ್ರಕಾರ ಏಜೆನ್ಸಿಯವರೇ ನಮಗೆ ಹಣ ಕೊಡಬೇಕಿದೆ. ಅವರಿಬ್ಬರು ಮೆಡಿಕಲ್ ಮಾಫಿಯಾದಲ್ಲೂ ಇದ್ದಂತಹ ವ್ಯಕ್ತಿಗಳು. ತಿಂಗಳಿಗೊಂದು ಕಂಪೆನಿ ಆರಂಭಿಸಿ ವಂಚಿಸುವುದೇ ಅವರ ಕಾಯಕ. ಇವರ ವಿರುದ್ಧ ಹೋರಾಟ ಮುಂದುವರಿಯುತ್ತೆ ಎಂದಿದ್ದಾರೆ ಸೂರಪ್ಪ ಬಾಬು.

  • ದಯವಿಟ್ಟು ಕ್ಷಮಿಸಿ. ಕೋಟಿಗೊಬ್ಬ -3 ಇಂದಲ್ಲ.. ನಾಳೆ ರಿಲೀಸ್ : ಸೂರಪ್ಪ ಬಾಬು

    ದಯವಿಟ್ಟು ಕ್ಷಮಿಸಿ. ಕೋಟಿಗೊಬ್ಬ -3 ಇಂದಲ್ಲ.. ನಾಳೆ ರಿಲೀಸ್ : ಸೂರಪ್ಪ ಬಾಬು

    ಆಯುಧಪೂಜೆಯ ದಿನವೇ ರಿಲೀಸ್ ಆಗಬೇಕಿದ್ದ ಕೋಟಿಗೊಬ್ಬ 3 ಚಿತ್ರದ ಬಿಡುಗಡೆ ಒಂದು ದಿನ ಮುಂದಕ್ಕೆ ಹೋಗಿದೆ.  ಚಿತ್ರ ಇಂದು ಬಿಡುಗಡೆಯಾಗುತ್ತಿಲ್ಲ. ಬೆಳಗ್ಗೆಯಿಂದಲೇ ಶುರುವಾದ ಗೊಂದಲಕ್ಕೆ ನಿರ್ಮಾಪಕ ಸೂರಪ್ಪ ಬಾಬು ತೆರೆ ಎಳೆದಿದ್ದಾರೆ. ಅತ್ತ ಕಿಚ್ಚ ಸುದೀಪ್ ಕೂಡಾ ಟ್ವೀಟ್ ಮೂಲಕ ಅಭಿಮಾನಿಗಳಿಗೆ ಶಾಂತಿಯಿಂದಿರಲು ಮನವಿ ಮಾಡಿದ್ದಾರೆ.

    ಕೆಲವರ ಬೇಜವಾಬ್ದಾರಿತನದಿಂದಾಗಿ ಕೋಟಿಗೊಬ್ಬ- 3 ಚಿತ್ರ ರಿಲೀಸ್ ಆಗಲಿಲ್ಲ. ಚಿತ್ರಮಂದಿರಗಳ ಮಾಲೀಕರ ತಪ್ಪು ಏನೂ ಇಲ್ಲ. ದಯವಿಟ್ಟು ಶಾಂತಿಯಿಂದಿರಿ. ಚಿತ್ರಮಂದಿರದವರ ಜೊತೆ ಗಲಾಟೆ ಮಾಡಬೇಡಿ ಎಂದು ಸುದೀಪ್ ಮನವಿ ಮಾಡಿದ್ದಾರೆ.

    ಕೆಲವರ ಷಡ್ಯಂತ್ರದಿಂದಾಗಿ ಚಿತ್ರ ಬಿಡುಗಡೆ ಸಾಧ್ಯವಾಗಲಿಲ್ಲ. ಈಗ ಎಲ್ಲವನ್ನೂ ಬಗೆಹರಿಸಿಕೊಳ್ಳುತ್ತಿದ್ದೇವೆ. ಸಂಜೆಯೊಳಗೆ ವಿವಾದ ಇತ್ಯರ್ಥವಾಗಲಿದ್ದು, ನಾಳೆ ಬೆಳಗ್ಗೆಯೇ ಶೋ ಶುರುವಾಗಲಿದೆ. ಸುದೀಪ್ ಅಭಿಮಾನಿಗಳು ಹಾಗೂ ಪ್ರೇಕ್ಷಕರಲ್ಲಿ ಆಗಿರುವ ಗೊಂದಲಕ್ಕೆ ಕ್ಷಮೆ ಕೇಳುತ್ತಿದ್ದೇನೆ. ದಯವಿಟ್ಟು ಸಹಕರಿಸಿ ಎಂದು ಕೇಳಿಕೊಂಡಿದ್ದಾರೆ ನಿರ್ಮಾಪಕ ಸೂರಪ್ಪ ಬಾಬು.

  • ವಿಷ್ಣು ಗಡ್ಡಕ್ಕಾಗಿ ಕೋಟಿಗೊಬ್ಬ ಚಿತ್ರ

    kotigobba image

    ವಿಷ್ಣು ಗಡ್ಡಕ್ಕಾಗಿ ಕೋಟಿಗೊಬ್ಬ ಚಿತ್ರ ಮಾಡಿದ ಸೂರಪ್ಪ ಬಾಬು. Vishnuvardhan had a beard. Seeing this procucer M B Babu requested Vishnuvardhan to make a photo session with beard. After seeing the photos then Babu planned for the movie

     

  • ಶಿವರಾತ್ರಿಗೆ ಕಿಚ್ಚ ಕಿಚ್ಚ ಎನ್ನಿರೋ..

    kotigobba 3 teaser for shivaratri

    ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಚಿತ್ರ ರಿಲೀಸ್ ಆಗೋಕೆ ಇನ್ನೇನು ಕೆಲವೇ ದಿನ. ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ನಲ್ಲಿರುವ ಚಿತ್ರ ಟೀಸರ್ ರಿಲೀಸ್ ಮಾಡೋಕೆ ಶಿವರಾತ್ರಿಯಂದು ಮುಹೂರ್ತ ಫಿಕ್ಸ್ ಆಗಿದೆ.

    2020ರ ಬಹು ನೀರಿಕ್ಷಿತ ಚಿತ್ರ ಕೋಟಿಗೊಬ್ಬ 3 ಚಿತ್ರದ ಟೀಸರ್ ಫೆಬ್ರವರಿ 21 ರಿಲೀಸ್ ಆಗುತ್ತಿದ್ದು, ಶಿವರಾತ್ರಿಯ ದಿನ ಕಿಚ್ಚನ ಜಪ ಮಾಡುವಂತಾಗಲಿದೆ.

    ನಿರ್ಮಾಪಕ ಸೂರಪ್ಪ ಬಾಬು ನಿರ್ಮಾಣ ಮಾಡುತ್ತಿರುವ ಕೋಟಿಗೊಬ್ಬ 3 ಚಿತ್ರಕ್ಕೆ ಶಿವ ಕಾರ್ತಿಕ್ ನಿರ್ದೇಶನವಿದೆ. ಕೋಟಿಗೊಬ್ಬ 2 2016ರಲ್ಲಿ ರಿಲೀಸ್ ಆಗಿತ್ತು. ಅದಾದ 4 ವರ್ಷಗಳ ನಂತರ  ಕೋಟಿಗೊಬ್ಬ 3 ರಿಲೀಸ್ ಆಗುತ್ತಿದೆ. ಫೆಬ್ರವರಿ 21ರ ಶಿವರಾತ್ರಿ ದಿನ ಮಧ್ಯಾಹ್ನ 12 ಗಂಟೆ 1 ನಿಮಿಷಕ್ಕೆ ಟೀಸರ್ ಬಿಡುಗಡೆಯಾಗಲಿದೆ. ಸುದೀಪ್ ಎದುರು ಮಲಯಾಳಂ ನಟಿ ಮಡೋನಾ ಸೆಬಾಸ್ಟಿಯನ್ ನಾಯಕಿಯಾಗಿದ್ದಾರೆ.

  • ಸುದೀಪ್ ಸಂಭಾವನೆ 8 ಕೋಟಿ..!

    sudeep gets 8 crores for kotigobba 3

    ಕಿಚ್ಚ ಸುದೀಪ್, ಕನ್ನಡಲ್ಲಿ ನಿರ್ಮಾಪಕರನ್ನು ಕೆಲವೇ ಕೆಲವು ಸ್ಟಾರ್ ನಟರಲ್ಲಿ ಒಬ್ಬರು. ಅವರು ಯಾವಾಗಲೂ ನಿರ್ಮಾಪಕರ ಜೊತೆ ಇರುತ್ತಾರೆ. ಅವರು ನಿರ್ಮಾಪಕರಿಗೆ  ಷರತ್ತು ಹಾಕೋದಿಲ್ಲ. ಅವರಂತೆ ಎಲ್ಲ ನಟರೂ ನಿರ್ಮಾಪಕರ ಕಷ್ಟಗಳಿಗೆ ಸ್ಪಂದಿಸೋದಿಲ್ಲ. ಹೀಗಾಗಿಯೇ, ಅವರು ಕೇಳದಿದ್ದರೂ ನಾನೇ 8 ಕೋಟಿ ಸಂಭಾವನೆ ಕೊಟ್ಟಿದ್ದೇನೆ. ಹೀಗೆಂದು ಹೇಳಿರುವುದು ಸೂರಪ್ಪ ಬಾಬು.

    ಸುದೀಪ್ ಜೊತೆ ಕೋಟಿಗೊಬ್ಬ 3 ಚಿತ್ರ ನಿರ್ಮಿಸುತ್ತಿರುವ ಸೂರಪ್ಪ ಬಾಬು, ಇಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆಯುವ ಸುದೀಪ್, ಚಿತ್ರದ ಪ್ರತಿ ಹಂತದಲ್ಲೂ ನಿರ್ಮಾಪಕರ ಜೊತೆಗಿರುತ್ತಾರೆ. 8 ಕೋಟಿ, ಸುದೀಪ್ ಕೇಳಿದ್ದಲ್ಲ. ನಾನೇ ಕೊಟ್ಟಿದ್ದು ಎಂದಿದ್ದಾರೆ ಸೂರಪ್ಪ ಬಾಬು.

    ಚಿತ್ರದ ಚಿತ್ರೀಕರಣ ಶೀಘ್ರದಲ್ಲಿಯೇ ಶುರುವಾಗಲಿದ್ದು, ಸ್ಪೇನ್ ಹಾಗೂ ಬೆಂಗಳೂರಿನಲ್ಲಿ ಶೂಟಿಂಗ್ ನಡೆಯಲಿದೆ. ಕನ್ನಡದ ನಟಿಯೇ ನಾಯಕಿಯಾಗಿ ನಟಿಸಲಿದ್ದಾರೆ ಎಂದು ತಿಳಿಸಿದ್ದಾರೆ ಸೂರಪ್ಪ ಬಾಬು.

    ಕನ್ನಡದಲ್ಲಿ ನಟರು ತೆಗೆದುಕೊಳ್ಳುವ ಸಂಭಾವನೆ ಎಷ್ಟು ಎಂಬ ಬಗ್ಗೆ ಯಾರೊಬ್ಬರೂ ತುಟಿ ಬಿಚ್ಚುವುದಿಲ್ಲ. ಅಲ್ಲಿ ಇಲ್ಲಿ ಕಿವಿಗೆ ಬಿದ್ದ ಮಾತುಗಳನ್ನಷ್ಟೇ ಕೇಳುತ್ತಿದ್ದವರಿಗೆ ಸೂರಪ್ಪ ಬಾಬು, ಬಹಿರಂಗವಾಗಿಯೇ ಹೇಳುವ ಮೂಲಕ ರಹಸ್ಯ ಸ್ಫೋಟಿಸಿರುವುದು ನಿಜ.

  • ಸೂರಪ್ಪ ಚಿತ್ರದಲ್ಲಿ ವಿಷ್ಣು ಸಂಭಾವನೆಗಿಂತ ಜೂನಿಯರ್ಸ್ ಗಳ ಸಂಭಾವನೆ ಜಾಸ್ತಿ

    soorappa image

    ಸೂರಪ್ಪ ಚಿತ್ರದಲ್ಲಿ ವಿಷ್ಣು ನಂಬಿಕೆಗಳಿಸಿದ ಬಾಬು. ಸೂರಪ್ಪ ಚಿತ್ರದಲ್ಲಿ ವಿಷ್ಣು ಸಂಭಾವನೆಗಿಂತ ಜೂನಿಯರ್ಸ್ ಗಳ ಸಂಭಾವನೆ ಜಾಸ್ತಿ. Producer M B Babu became Soorappa Babu after the super hit movie Soorappa starring Dr Vishnuvardhan. 

  • ಸೂರಪ್ಪ ಬಾಬು ಪ್ರಾಣಾಪಾಯದಿಂದ ಪಾರು

    ಸೂರಪ್ಪ ಬಾಬು ಪ್ರಾಣಾಪಾಯದಿಂದ ಪಾರು

    ಖ್ಯಾತ ನಿರ್ಮಾಪಕ ಸೂರಪ್ಪ ಬಾಬು ಪವಾಡಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಮಿಳುನಾಡಿನ ದೇವಸ್ಥಾನವೊಂದಕ್ಕೆ ಕುಟುಂಬದ ಜೊತೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಇನ್ನೋವಾ ಕಾರಿನ ಮುಂಭಾಗ ನಜ್ಜು ಗುಜ್ಜಾಗಿ ಹೋಗಿದೆ. ಅದೃಷ್ಟವಶಾತ್ ಸೂರಪ್ಪ ಬಾಬು ಮತ್ತು ಅವರ ಕುಟುಂಬ ಪ್ರಾಣಾಪಾಯದಿಂದ ಪಾರಾಗಿದೆ.

    ಸೂರಪ್ಪ ಬಾಬು ಅವರ ಕಾಲಿಗೆ ಪೆಟ್ಟಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಭಾನುವಾರ ಮುಂಜಾನೆ 3 ಗಂಟೆ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ. ಮುಂಜಾನೆ 3 ಗಂಟೆ ಹೊತ್ತಿನಲ್ಲೂ ಕೂಡಾ ಅಪಘಾತ ಸ್ಥಳಕ್ಕೆ ಬಂದ ಕೆಲವರು ನನ್ನನ್ನು ಗುರುತಿಸಿದರು. ಅವರ ನೆರವಿನಿಂದಲೇ ಆಸ್ಪತ್ರೆ ತಲುಪಿದೆವು. ಮುಂದಿನ ಸೀಟಿನಲ್ಲಿ ಕೂತಿದ್ದೆ. ಕಾಲಿನ ನೋವು ವಿಪರೀತ ಇದೆ ಎಂದಿದ್ದಾರೆ ಸೂರಪ್ಪ ಬಾಬು.

    ತಮಿಳುನಾಡಿನ ಬ್ರಹ್ಮ ದೇವಸ್ಥಾನಕ್ಕೆ ಹೊರಟಿದ್ದ ಸೂರಪ್ಪ ಬಾಬು ಅವರ ಕಾರಿನಲ್ಲಿ ಒಟ್ಟು 7 ಜನ ಪ್ರಯಾಣಿಸುತ್ತಿದ್ದರು. ವೈದ್ಯರು ಕೆಲವು ದಿನಗಳ ಕಾಲ ಬೆಡ್ ರೆಸ್ಟ್ ಮಾಡುವಂತೆ ಸೂರಪ್ಪ ಬಾಬು ಅವರಿಗೆ ಸೂಚಿಸಿದ್ದಾರಂತೆ.