ಕರಿಯ. 2003ರಲ್ಲಿ ರಿಲೀಸ್ ಆಗಿದ್ದ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬೆಳಕಿಗೆ ಬಂದವರು ಪ್ರೇಮ್. ಮೆಜೆಸ್ಟಿಕ್‍ನಿಂದ ಹೀರೋ ಆಗಿದ್ದ ದರ್ಶನ್‍ಗೆ ಸ್ಟಾರ್ ಪಟ್ಟ ನೀಡಿದ ಚಿತ್ರವೂ ಹೌದು. ಕರಿಯ ಚಿತ್ರದ ಕೆಂಚಾಲೋ.. ಮಚ್ಚಲೋ.., ಹೃದಯದ ಒಳಗೆ ಹೃದಯವಿದೆ.. ಮಾತಾಡು ಸಾಕು.. ನನ್ನಲಿ ನಾನಿಲ್ಲ.. ಹೀಗೆ ಎಲ್ಲ ಹಾಡುಗಳು ಇಂದಿಗೂ ಕೇಳುತ್ತವೆ. ಕಿವಿಯಲ್ಲಿ ಗುನುಗುಡುತ್ತವೆ.
ಆ ಚಿತ್ರ ರಿಲೀಸ್ ಆಗಿ 15 ವರ್ಷ. ಕರಿಯ ಸಿನಿಮಾ ರಿಲೀಸ್ ಆದಾಗ ಕರಿಯ ಪ್ರೇಮ್ ಆಗಿ, ಎಕ್ಸ್‍ಕ್ಯೂಸ್ ಮಿ ಪ್ರೇಮ್ ಆಗಿ, ಜೋಗಿ ಪ್ರೇಮ್ ಆಗಿ.. ಚಿತ್ರಗಳ ಮೂಲಕವೇ ಸ್ಟಾರ್ ಆದವರು ನಿರ್ದೇಶಕ ಪ್ರೇಮ್. ಅವರಿಗೀಗ ಚಿತ್ರರಂಗಕ್ಕೆ ಬಂದ 15ನೇ ವರ್ಷದ ಸಂಭ್ರಮ.
ಕರಿಯ ಚಿತ್ರದಿಂದ ನನ್ನ ಚಿತ್ರಜೀವನ ಆರಂಭವಾಯಿತು. ಆ ಚಿತ್ರಕ್ಕೆ ಅವಕಾಶ ಕೊಟ್ಟ ನಿರ್ಮಾಪಕ ಆನೇಕಲ್ ಬಾಲರಾಜ್, ನಟ ದರ್ಶನ್ ಹಾಗೂ ತಂತ್ರಜ್ಞರು ಎಲ್ಲರಿಗೂ ಧನ್ಯವಾದಗಳು ಎಂದಿರುವ ಪ್ರೇಮ್, ಕರಿಯ ಚಿತ್ರ ಹಿಟ್ ಆದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಈಗ ದಿ ವಿಲನ್ ಚಿತ್ರ ನಿರ್ದೇಶಿಸುತ್ತಿರುವ ಪ್ರೇಮ್‍ಗೆ ಶುಭವಾಗಲಿ.