` tamanna - chitraloka.com | Kannada Movie News, Reviews | Image

tamanna

  • Ramesh Arvind To Direct Telugu Version Of Queen Also?

    will ramesh aravind direct telugu queen?

    Ramesh Arvind who is directing the Kannada and Tamil version of the film Queen has been entrusted with directing the Telugu version also sources say. The films are the official remakes of the Hindi film Queen directed by Vikas Bahl. In Kannada, Parul Yadav is doing the lead role while in Tamil Kajal Aggarwal is in the lead. In Tamil the film is titled Paris Paris while in Kannada it is called Butterfly. 

    The Telugu version of the film was to be directed by Neelakanta Reddy with Tamannaah in the lead role. However Neelakanta Reddy is said to have backed away from the project prompting the producer to request Ramesh Arvind to take over. Since Ramesh Arvind is already handling two versions of the film, they felt that he would do justice to it. More details are awaited as there is no official announcement.

  • Rogue Censored U/A

    rogue movie image

    CR Manohar produced movie Rogue has been censored with U/A certificate and will be releasing in March end.

    Rogue' marks the debut of Ishan and comeback of acclaimed director Puri Jagannath to Kannada cinema. The film is made in Kannada and Telugu simultaneously and the audio of the film was released in a grand scale in Bengaluru and Hyderabad.

    'Rogue' stars Ishan along with Angela, Mannara Chopra, Ali and others in prominent roles. C R Manohar has produced the film, while Sunil Kashyap has composed the songs.

    Rogue Movie Gallery - View

    Related Articles :-

    Rogue Songs Released

  • RS Productions to Distribute Bahubali - Exclusive

    bahubali image

    RS Productions has signed an agreement with the makers of 'Bahubali' to distribute the film for entire Karnataka. RS Productions will not only be distributing the Karnataka area but also the Tamil, Hindi and Malayalam also.

    'Bahubali' is the most anticipated film of South India and has been directed by S S Rajamouli. The film stars Prabhas, Rana Daggubatti, Tamannah, Anushka Shetty and others and has been made on a whopping budget of more than 120 crores.

    Many producers and distributors were eyeing to buy the distribution rights of the film. However, Kanakapura Srinivas and Srikanth of RS Productions has been successful in buying the distribution rights of the film for entire Karnataka. The Agreement has been signed in this context.

    Sources say its the highest amount paid by a distributor in Karnataka for other languages.

  • Tamanna Bhatia To Dance For 'KGF'

    tamannah to dance for kgf

    Well known actress Tamanna Bhatia who has acted in Telugu and Hindi films is all set to feature in an item dance number in Yash starrer 'KGF'.

    The shooting for Yash starrer 'KGF' is almost done except for a song and the shooting for the song will start in a couple of days in Bangalore. The song features Tamanna Bhatia along with Yash and the song is a remix of yesteryear hit club song called 'Joke Naanu Belliya Minchu' from the film 'Paropakari'. The song will be shot in a specially erected set and Johnny Master will choreograph the song. 

    'KGF' is written and directed by Prashanth Neel who had earlier directed Murali starrer 'Ugram'. This is his second film as a director and the film is produced by Vijaykumar Kiragandur, who had earlier produced 'Rajakumara', 'Ninnindale' and 'Master Piece'. The film has music by Ravi Basrur and camerawork is by Bhuvan Gowda.

     

  • Tamanna In A Special Song In Jaguar

    jaguar movie image, tamannah image

    Actress Tamanna is seen in a special song in the film 'Jaguar' starring Nikhil Kumar, son of former Chief Minister H D Kumaraswamy.

    The shooting for the song is being held at the Ramoji Film City in Hyderabad and Shobhi is the choreographer of the song. A special set for the song has been erected in the studio and Tamanna along with many dancers are seen in the song.

    'Jaguar' is being shot simultaneously in Kannada and Telugu and Deepti Sati is the heroine. Jagapathi Babu, Aditya Menon, Sampath and others play prominent roles in the film. S S Thaman is the music director. The film is is being produced by former Chief Minister H D Kumaraswamy and directed by Mahadev.

    Also Read

    Jaguar Audio Released In Mandya

    Lahari Audio Acquires The Audio Rights Of Jaguar

    Jaguar Audio On Sep 2nd; Film Likely On Oct 6th

    Jaguar Teaser Released

    Jaguar Teaser On July 31st

    Bramhanadam Acts In Jaguar

    H D Kumaraswamy and Nikhil In Bulgaria For Jaguar Shooting

    Jaguar Action Sequences to be Shot in Bulgaria

    Jaguar to Complete in August

    Jaguar Teaser to be Released today evening

    Jaguar Shooting Starts in Mysore

    Jagapathi Babu to Act in Jaguar

    Nikhil's Jaguar Launched

     

  • Tamanna In The Villain? - Exclusive

    sudeep, shivarajkumar, tamanna image

    One of the most popular and top actress of South Indian films, Tamanna is most likely to be the leading lady in the Kannada film The Villain that has Shivarajkumar and Sudeep in the lead. The film is directed by Prem and produced by CR Manohar.

    Sources said Tamanna has given green signal to the script and only her dates had to be adjusted since she is very busy for the next two years. In the next 2-3 days, the dates will be finalised. The launch of the film will be held this month

  • ಅಪ್ಸರೆಯ ಜೊತೆ ಅಪ್ಪು ರಾಜಕುಮಾರ

    tamanah and puneeth in ad commercial

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಕನ್ನಡಿಗರ ರಾಜಕುಮಾರ. ಇನ್ನು ಮಿಲ್ಕಿ ಬ್ಯೂಟಿ ಎಂದೇ ದ.ಭಾರತ ಚಿತ್ರರಂಗದಲ್ಲಿ ಖ್ಯಾತವಾಗಿರೋ ತಮನ್ನಾ, ಅಪ್ಸರೆಯೇ ಸರಿ. ಇವರಿಬ್ಬರೂ ಈಗ ಒಟ್ಟಿಗೇ ನಟಿಸಿದ್ದಾರೆ. ಆದರೆ, ಅದು ಸಿನಿಮಾದಲ್ಲಿ ಅಲ್ಲ, ಜಾಹೀರಾತೊಂದರಲ್ಲಿ.

    ಜ್ಯುವೆಲ್ಲರಿ ಶಾಪ್‍ವೊಂದರ ಜಾಹೀರಾತಿನಲ್ಲಿ ತಮನ್ನಾ ರಾಜಕುಮಾರಿಯಂತೆ ಕಾಣಿಸಿಕೊಂಡಿದ್ದಾರೆ. ಪುನೀತ್ ರಾಜಕುಮಾರನ ವೇಷದಲ್ಲಿದ್ದಾರೆ. ಅವಿನಾಶ್ ಹಾಗೂ ಸಾಧುಕೋಕಿಲ ಕೂಡಾ ಜಾಹೀರಾತಿನಲ್ಲಿ ಭಾಗವಹಿಸಿರುವುದು ವಿಶೇಷ.

  • ಕನ್ನಡಕ್ಕೆ ತಮನ್ನಾ ಜೋಕೆ.. ಹಿಂದೀಮೇ ಗಲಿ ಗಲೀ

    hindi kgf will not have tamannah's jokai

    ಜೋಕೆ... ನಾನು ಬಳ್ಳಿಯ ಮಿಂಚು.. ಈ ಹಾಡನ್ನು ಕೆಜಿಎಫ್‍ನಲ್ಲಿ ಬಳಸಿಕೊಳ್ಳಲಾಗಿದೆ. ಮಿಲ್ಕಿ ಬ್ಯೂಟಿ ತಮನ್ನಾ ಮತ್ತು ಯಶ್ ಆ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇದು ಹಳೆಯ ವಿಷಯ. ಆದರೆ, ಅದೇ ಕೆಜಿಎಫ್‍ನ ಹಿಂದಿ ವರ್ಷನ್‍ನಲ್ಲಿ ತಮನ್ನಾ ಇಲ್ಲವಂತೆ.

    ಹಿಂದಿಯಲ್ಲಿ ತಮನ್ನಾನೂ ಇಲ್ಲ. ಜೋಕೆ ಹಾಡೂ ಇಲ್ಲ. ಅಲ್ಲಿ ತಮನ್ನಾ ಜಾಗದಲ್ಲಿ ಹೆಜ್ಜೆ ಹಾಕಿರೋದು ಮೌನಿರಾಯ್. ಬಳಸಿಕೊಂಡಿರೋ ಹಾಡು ಗಲೀ ಗಲೀ ಮೇ ಫಿರ್ತಾ ಹೈ. ಅದು ಜಾಕಿಶ್ರಾಫ್, ಸಂಗೀತಾ ಬಿಜಲಾನಿ ಅಭಿನಯದ ತ್ರಿದೇವ್ ಚಿತ್ರದ ಸಾಂಗ್.

    ಹಿಂದಿಗಾಗಿ ಆ ಹಾಡಿನ ಶೂಟಿಂಗ್ ಈಗಷ್ಟೇ ಶುರುವಾಗಿದೆಯಂತೆ.

  • ಕೆಜಿಎಫ್‍ಗೆ ಬಳ್ಳಿಯ ಮಿಂಚಾಗಿ ಮಿಲ್ಕಿ ಬ್ಯೂಟಿ

    tamannah to shake leg with yash

    ಹೊಂಬಾಳೆ ಫಿಲಂಸ್‍ನ ಭಾರಿ ಬಜೆಟ್‍ನ ಸಿನಿಮಾ ಕೆಜಿಎಫ್. ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರಕ್ಕೆ ಯಶ್ ಹೀರೋ. ಹೆಚ್ಚೂ ಕಡಿಮೆ 2 ವರ್ಷದಿಂದ ಅದ್ಧೂರಿಯಾಗಿ ಚಿತ್ರೀಕರಣಗೊಳ್ಳುತ್ತಿರುವ ಕೆಜಿಎಫ್‍ಗೆ ಬಳುಕುವ ಬಳ್ಳಿ ಮಿಂಚಾಗಿ ಎಂಟ್ರಿ ಕೊಟ್ಟಿರೋದು ಮಿಲ್ಕಿಬ್ಯೂಟಿ ತಮನ್ನಾ.

    ಚಿತ್ರದಲ್ಲಿನ ಒಂದು ಸ್ಪೆಷಲ್ ಸಾಂಗ್‍ಗೆ ಕಾಜಲ್ ಅಗರ್‍ವಾಲ್, ತಮನ್ನಾ, ಲಕ್ಷ್ಮೀ ರೈ.. ಮೊದಲಾದವರ ಹೆಸರು ಕೇಳಿಬಂದಿತ್ತು. ಈಗ ಅಧಿಕೃತವಾಗಿ ತಮನ್ನಾ ಎಂದು ಘೋಷಿಸಿದೆ ಕೆಜಿಎಫ್ ಟೀಂ. ತಮನ್ನಾಗೆ ಕನ್ನಡದಲ್ಲಿದು 2ನೇ ಪ್ರಯತ್ನ. ಈ ಹಿಂದೆ ಜಾಗ್ವಾರ್‍ನಲ್ಲೊಂದು ಐಟಂ ಸಾಂಗ್‍ಗೆ ಹೆಜ್ಜೆ ಹಾಕಿದ್ದ ತಮನ್ನಾ, ನಂತರ ಪುನೀತ್ ರಾಜ್‍ಕುಮಾರ್ ಜೊತೆ ಜಾಹೀರಾತಿನಲ್ಲಿ ಮಿಂಚಿದ್ದರು. ಈಗ.. ಕೆಜಿಎಫ್‍ನಲ್ಲಿ ಬಳುಕುವ ಬಳ್ಳಿ ಮಿಂಚಾಗಿ ಬರುತ್ತಿದ್ದಾರೆ.

    ಕೆಜಿಎಫ್‍ನಲ್ಲಿ ಎಲ್.ಆರ್.ಈಶ್ವರಿ ಕಂಠದಲ್ಲಿ ಮೋಡಿ ಮಾಡಿದ್ದ ಜೋಕೆ.. ನಾನು ಬಳ್ಳಿಯ ಮಿಂಚು.. ಕಣ್ಣು ಕತ್ತಿಯ ಅಂಚು.. ಹಾಡನ್ನು ಮರುಸೃಷ್ಟಿಸಲಾಗಿದೆ. ಡಾ.ರಾಜ್‍ಕುಮಾರ್ ಅಭಿನಯದ ಪರೋಪಕಾರಿ ಚಿತ್ರದ ಹಾಡದು. ಆ ಹಾಡನ್ನು ಪ್ರಶಾಂತ್ ನೀಲ್ ಕೆಜಿಎಫ್‍ನಲ್ಲಿ ಬಳಸಿಕೊಳ್ಳುತ್ತಿದ್ದಾರೆ.

    ಹಾಡನ್ನು 3 ದಿನಗಳ ಕಾಲ ಚಿತ್ರೀಕರಿಸಲಾಗುತ್ತಿದೆ. ಇಂದಿನಿಂದ (ಆಗಸ್ಟ್ 7) ಗುರುವಾರದವರೆಗೆ ಹಾಡಿನ ಚಿತ್ರೀಕರಣ ನಡೆಯಲಿದೆ. ಯಶ್ ಮತ್ತು ತಮನ್ನಾ ಕಾಂಬಿನೇಷನ್‍ನಲ್ಲೇ ಹಾಡು ಚಿತ್ರೀಕರಣಗೊಳ್ಳಲಿದೆ. ಈ ಹಾಡಿನೊಂದಿಗೆ ಕೆಜಿಎಫ್ ಚಿತ್ರೀಕರಣವೂ ಮುಗಿಯಲಿದೆಯಂತೆ.

    ಅದ್ಸರಿ ಸಾರ್.. ಹಾಡು ಯಾವ ಸನ್ನಿವೇಶದಲ್ಲಿ ಬರುತ್ತೆ ಅಂದ್ರೆ ಪ್ರಶಾಂತ್ ನೀಲ್ ಹೇಳೋದು ಇಷ್ಟು. ಇದೊಂದು ಕ್ಲಬ್ ಸಾಂಗ್. ಅಲ್ಲೊಂದು ದೃಶ್ಯದಲ್ಲಿ ಹೀರೋ ಕಾಣಿಸಿಕೊಳ್ತಾನೆ. ಹೀರೋಯಿನ್ ಕೂಡಾ ಇರುತ್ತಾಳೆ. ಅಲ್ಲಿ ಬರೋ ಹಾಡು ಇದು. ಯಾಕೆ ಅನ್ನೋದನ್ನ ಚಿತ್ರ ರಿಲೀಸ್ ಆದಾಗ.. ಚಿತ್ರಮಂದಿರದಲ್ಲೇ ನೋಡಿ' ಅಂತಾರೆ.

    ಚಿತ್ರದ ಬಹುತೇಕ ಕೆಲಸ ಪೂರ್ಣಗೊಂಡಿದೆ. ಈ ಹಾಡಿನ ರೈಟ್ಸ್ ತೆಗೆದುಕೊಳ್ಳೋದು ಮತ್ತು ನಟಿಯ ಆಯ್ಕೆ ಸ್ವಲ್ಪ ತಡವಾಯಿತು. ಸೆಪ್ಟೆಂಬರ್‍ನಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎಂದಿದ್ದಾರೆ ಹೊಂಬಾಳೆ ಫಿಲಂಸ್‍ನ ಕಾರ್ತಿಕ್ ಗೌಡ. ಅಲ್ಲಿಗೆ.. ಸೆಪ್ಟೆಂಬರ್‍ನಲ್ಲಿ ಕೆಜಿಎಫ್, ಕನ್ನಡಿಗರ ಹೃದಯದ ಗಣಿಗೆ ಇಳಿಯಲಿದೆ ಅನ್ನೋದು ಗ್ಯಾರಂಟಿಯಾಯ್ತು.

  • ಚಿಟ್ಟೆಗಳ ಜೊತೆ ಪಾರುಲ್ ಬರ್ತ್‍ಡೇ

    parul yadav's birthday celebration

    ಚಿತ್ರನಟಿ ಪಾರುಲ್ ಯಾದವ್, ಚಿಟ್ಟೆಯಾಗಿದ್ದಾರೆ. ಏಕೆಂದರೆ, ಅವರೀಗ ಬಟರ್‍ಫ್ಲೈ ಚಿತ್ರದ ನಾಯಕಿ ಕಂ ನಿರ್ಮಾಪಕಿ. ಈ ಚಿತ್ರದೊಂದಿಗೆ ಪಾರುಲ್ ಅವರಿಗೆ ವಿಶೇಷ ಬಾಂಧವ್ಯವೂ ಬೆಳೆದುಬಿಟ್ಟಿದೆ. ಕಳೆದ ವರ್ಷ ಪಾರುಲ್ ಹುಟ್ಟುಹಬ್ಬದಂದೇ ಚಿತ್ರದ ಮುಹೂರ್ತ ನೆರವೇರಿತ್ತು. ಈ ವರ್ಷ ಮತ್ತೊಮ್ಮೆ ಅದೇ ಚಿತ್ರತಂಡದೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ ಚಿಟ್ಟೆ ಪಾರುಲ್.

    ಚಿತ್ರರಂಗ ಸಾಮಾನ್ಯವಾಗಿ ಹೀರೋ ಓರಿಯಂಟೆಡ್. ಹೀಗಾಗಿ ಚಿತ್ರದ ಆಡಿಯೋ, ಮುಹೂರ್ತ.. ಇತ್ಯಾದಿಗಳನ್ನೆಲ್ಲ ನಾಯಕರ ಹುಟ್ಟುಹಬ್ಬದ ದಿನಕ್ಕೆ ಮಾಡ್ತಾರೆ. ಆದರೆ, ಈ ಸಿನಿಮಾದಲ್ಲಿ ನಾಯಕಿಗೆ ಆದ್ಯತೆ ನೀಡಿರುವುದು ವಿಶೇಷ. ಸಿನಿಮಾ ಶುರುವಾಗಿದ್ದೇ ನಾಯಕಿಯ ಹುಟ್ಟುಹಬ್ಬದ ದಿನ. ಈ ವರ್ಷ ಮತ್ತೊಮ್ಮೆ ಅದೇ ಚಿತ್ರತಂಡದೊಂದಿಗೆ ಹುಟ್ಟುಹಬ್ಬ ಆಚರಿಸಿದ್ದು ಖುಷಿ ಕೊಟ್ಟಿದೆ ಎಂದಿದ್ದಾರೆ ಪಾರುಲ್.

    ಮನುಕುಮಾರನ್ ಪ್ರಧಾನ ನಿರ್ಮಾಪಕರಾಗಿರುವ ಚಿತ್ರ ಇದು. ಏಕಕಾಲದಕ್ಕೆ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಶೂಟಿಂಗ್ ನಡೆಯುತ್ತಿದೆ. ಇದು ಕ್ವೀನ್ ಚಿತ್ರದ ರೀಮೇಕ್. 

    ಕನ್ನಡದಲ್ಲಿ ಪಾರುಲ್ ಯಾದವ್, ತಮಿಳಿನಲ್ಲಿ ತಮನ್ನಾ, ತೆಲುಗಿನಲ್ಲಿ ಕಾಜಲ್ ಕ್ವೀನ್ ಆಗಿದ್ದಾರೆ.

  • ಜೋಕೆ.. ಹಾಡು ಬಂತು.. ಹೇಗಿದ್ದಾಳೆ ಮಿಲ್ಕಿಬ್ಯೂಟಿ..?

    kgf's jakae lyrical video song creates sensation

    ಜೋಕೆ.. ನಾನು ಬಳ್ಳಿಯ ಮಿಂಚು.. ಈ ಹಾಡನ್ನು ಕೆಜಿಎಫ್‍ಗೆ ಬಳಸಿಕೊಳ್ಳಲಾಗುತ್ತಿದೆ ಎಂಬ ಸುದ್ದಿ ಬಂದಾಗಿನಿಂದ ಚಿತ್ರರಸಿಕರ ನಿರೀಕ್ಷೆ ಜೋರಾಗಿಯೇ ಇತ್ತು. ಅದರಲ್ಲೂ ಈ ಹಾಡಿಗೆ ಮಿಲ್ಕಿಬ್ಯೂಟಿ ತಮನ್ನಾ ಸೊಂಟ ಬಳುಕಿಸಿದ್ದಾರೆ ಎಂದಾಗ.. ನಿರೀಕ್ಷೆ ಮುಗಿಲುಮುಟ್ಟಿತ್ತು. ಹಾಗೆ ಮುಗಿಲು ಮುಟ್ಟಿದ ನಿರೀಕ್ಷೆಯನ್ನು ಸ್ವಲ್ಪ ಮಟ್ಟಿಗೆ ತಣಿಸಿದೆ ಕೆಜಿಎಫ್ ಟೀಂ.

    ಕೆಜಿಎಫ್ ಚಿತ್ರದ ಲಿರಿಕಲ್ ವಿಡಿಯೋ ಹೊರಬಿದ್ದಿದೆ. ಹಾಡಿನ ಒಂದಿಷ್ಟು ಫೋಟೋಗಳನ್ನು ಬಳಸಿಕೊಂಡು ಲಿರಿಕಲ್ ವಿಡಿಯೋ ಹೊರತರಲಾಗಿದೆ. ಯಶ್-ತಮನ್ನಾ ಕೆಮಿಸ್ಟ್ರಿ ಹೇಗಿರಲಿದೆ ಅನ್ನೋ ಕುತೂಹಲವನ್ನು ಸಿನಿಮಾ ರಿಲೀಸ್ ಆಗುವವರೆಗೂ ಉಳಿಸಿಕೊಳ್ಳೋ ಇರಾದೆ ಚಿತ್ರತಂಡಕ್ಕೆ ಇದ್ದ ಹಾಗಿದೆ.

    ನಿರ್ದೇಶಕ ಪ್ರಶಾಂತ್ ನೀಲ್, ಸಂಗೀತ ನಿರ್ದೇಶಕ ರವಿ ಬಸ್ರೂರು.. ಆ ಕುತೂಹಲವನ್ನು ಹಾಗೆಯೇ ಇಟ್ಟುಕೊಂಡಿದ್ದಾರೆ.

  • ನಾನು ಗಂಡನಿಗಾಗಿ ಶಾಪಿಂಗ್ ಮಾಡ್ತಿಲ್ಲ ಅಂದ್ರು ತಮನ್ನಾ..!

    tamannah rubbishes her marriage rumors

    ತಮನ್ನಾ.. ಕನ್ನಡದಲ್ಲಿ ಕಾಣಿಸಿಕೊಂಡಿರೋದು ಒಂದೇ ಸಿನಿಮಾದಲ್ಲಿ. ಜಾಗ್ವಾರ್ ಚಿತ್ರದಲ್ಲಿ ಐಟಂ ಸಾಂಗ್‍ಗೆ ಹೆಜ್ಜೆ ಹಾಕಿ ಹೋದ ತಮನ್ನಾ, ಕನ್ನಡಿಗರಿಗೆ ಹತ್ತಿರವಾಗಿದ್ದು ಪುನೀತ್ ರಾಜ್‍ಕುಮಾರ್ ಜೊತೆ ಕಾಣಿಸಿಕೊಂಡ ಜಾಹೀರಾತಿನ ಮೂಲಕ. ಅದಾದ ಮೇಲೆ ಕನ್ನಡದಲ್ಲಿಯೂ ನಟಿಸುವ ಆಸೆ ವ್ಯಕ್ತಪಡಿಸಿದ್ದ ಮಿಲ್ಕಿಬ್ಯೂಟಿ, ಈಗ ಮಾಧ್ಯಮಗಳ ಮೇಲೆ ಗುರ್ರ್ ಎನ್ನುತ್ತಿದ್ದಾರೆ. ಅದಕ್ಕೆ ಕಾರಣ ಇಷ್ಟೆ, ಇತ್ತೀಚೆಗೆ ತಮನ್ನಾ, ಅಮೆರಿಕದ ಡಾಕ್ಟರ್ ಒಬ್ಬರನ್ನು ಮದುವೆಯಾಗುತ್ತಿದ್ದಾರೆ ಎಂದು ಗಾಸಿಪ್ ಹರಡಲಾಗಿತ್ತು. ಈ ಕುರಿತು ಸಿಟ್ಟಿನಿಂದಲೇ ಪ್ರತಿಕ್ರಿಯೆ ಕೊಟ್ಟಿದ್ದಾರೆ ತಮನ್ನಾ.

    ``ಮೊದಲು ಆ್ಯಕ್ಟರ್ ಜೊತೆ, ನಂತರ ಕ್ರಿಕೆಟರ್ ಜೊತೆ, ಈಗ ಡಾಕ್ಟರ್ ಜೊತೆ... ಮದುವೆಯ ಸುದ್ದಿ ಮಾಡಿದ್ದೀರಿ. ನಾನೇನು ಗಂಡನನ್ನು ಆಯ್ಕೆ ಮಾಡಿಕೊಳ್ಳೋಕೆ ಶಾಪಿಂಗ್ ಮಾಡ್ತಿದ್ದೀನಾ..? ಈ ರೂಮರ್‍ಗಳನ್ನು ಮೊದಲು ನಿಲ್ಲಿಸಿ. ನನ್ನ ವೈಯಕ್ತಿಕ ಜೀವನದ ಬಗ್ಗೆ ಇಲ್ಲಸಲ್ಲದ ಸುದ್ದಿಗಳನ್ನೆಲ್ಲ ಹಬ್ಬಿಸಬೇಡಿ. ನಾನಾಗಲೀ, ನನ್ನ ಅಪ್ಪ, ಅಮ್ಮನಾಗಲೀ ಗಂಡು ಹುಡುಕುತ್ತಿಲ್ಲ. ನನಗೆ ಈಗಲೂ ಪ್ರೀತಿ ಇರೋದು ಸಿನಿಮಾದ ಮೇಲೆ ಮಾತ್ರ. ಇಂತಹ ಸುದ್ದಿಗಳು ನಿಮಗೂ, ನನಗೂ ಗೌರವ ತರುವುದಿಲ್ಲ. ನಾನು ಮದುವೆಯಾಗುವುದಾದರೆ, ಆ ದಿನ, ಆ ಸುದ್ದಿಯನ್ನು ನಾನೇ ಜಗತ್ತಿಗೆ ಸಾರಿ ಸಾರಿ ಹೇಳುತ್ತೇನೆ. ಅಲ್ಲಿಯವರೆಗೂ ಸುಮ್ಮನಿರಿ''

    ತಮ್ಮ ಮದುವೆಯ ಗಾಸಿಪ್ ಬಗ್ಗೆ ಸ್ವಲ್ಪ.. ಸ್ವಲ್ಪವೇನು ಸಂಪೂರ್ಣ ಖಾರವಾಗಿಯೇ ಪ್ರತಿಕ್ರಿಯಿಸಿರುವ ತಮನ್ನಾ, ಗಾಸಿಪ್‍ಗಳ ಬಗ್ಗೆ ತಲೆ ಕೆಡಿಸಿಕೊಂಡಿರುವುದಂತೂ ನಿಜ.

  • ಪುನೀತ್ ಹೀರೋ ಆದರೆ, ನಾನ್ ರೆಡಿ - ತಮನ್ನಾ

    tamannah wants to work with puneeth

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹಾಗೂ ಮಿಲ್ಕಿ ಬ್ಯೂಟಿ ತಮನ್ನಾ, ಇತ್ತೀಚೆಗಷ್ಟೇ ಚಿನ್ನದ ಮಳಿಗೆಯ ಜಾಹೀರಾತಿನಲ್ಲಿ ನಟಿಸಿದ್ದಾರೆ. ಅದೇ ಚಿನ್ನದ ಮಳಿಗೆಯ ಉದ್ಘಾಟನೆಗೆ ಬಂದಿದ್ದ ತಮನ್ನಾ, ಕನ್ನಡದಲ್ಲಿ ನಟಿಸುವ ಸುಳಿವನ್ನೂ ಕೊಟ್ಟಿದ್ದಾರೆ.

    ಕನ್ನಡ ಚಿತ್ರದಲ್ಲಿ ನಟಿಸೋಕೆ ನಾನು ರೆಡಿ. ಅದರಲ್ಲೂ ಪುನೀತ್ ರಾಜ್‍ಕುಮಾರ್  ಹೀರೋ ಆದರೆ, ನಟಿಸಲು ನಾನು ಸಿದ್ಧ ಎಂದಿದ್ದಾರೆ ಬಾಹುಬಲಿಯ ಆವಂತಿಕಾ.

    ತಮನ್ನಾ ಕನ್ನಡಕ್ಕೆ ಬರುವುದಾದರೆ ಸ್ವಾಗತ ಎಂದಿದ್ದಾರೆ ಪುನೀತ್. ಮುಂದಾ.. 

  • ಮಿಲ್ಕೀ ಬ್ಯೂಟಿ ಎನ್ನಬಾರದಂತೆ..

    dont call me milky beauty says tamannah

    ತಮನ್ನಾ ಭಾಟಿಯಾ.. ಇದೀಗ ತಾನೆ ಕೆಜಿಎಫ್‍ನ ಮಿಂಚಿನ ಬಳ್ಳಿಯಾಗಿ ಕಿಚ್ಚು ಹಚ್ಚಿಸಿರುವ ಚೆಲುವೆ. ಮಿಲ್ಕೀಬ್ಯೂಟಿ ಎಂದೇ ಫೇಮಸ್. ಆದರೆ, ತಮನ್ನಾ ಅವರೇ, ತಮ್ಮನ್ನು ಮಿಲ್ಕಿಬ್ಯೂಟಿ ಎನ್ನಬೇಡಿ ಎಂದು ಮನವಿ ಮಾಡಿದ್ದಾರೆ. ಅದಕ್ಕೆ ಅವರು ನೀಡಿರುವ ಕಾರಣ ಇದು.

    ಮೈಬಣ್ಣದ ಮೇಲೆ ಒಬ್ಬರನ್ನು ಹೊಗಳುವುದು ಅಥವಾ ತೆಗಳುವುದು ಒಳ್ಳೆಯದಲ್ಲ. ಮೈಬಣ್ಣದ ಮೇಲೆ ತಾರತಮ್ಯ ಮಾಡುವ ಭಾವನೆ ಮೊದಲು ತೊಲಗಬೇಕು. ಹೀಗಾಗಿ ನನಗೆ ಮಿಲ್ಕಿಬ್ಯೂಟಿ ಎಂದು ಕರೆದಾಗ ಕಿರಿಕಿರಿಯಾಗುತ್ತದೆ ಎಂದಿದ್ದಾರೆ ತಮನ್ನಾ.

  • ವರ್ಷದ ಕೊನೆಗೆ ಕನ್ನಡಕ್ಕೆ ತಮನ್ನಾ..!

    tammanah in kannada films by this year end

    ತಮನ್ನಾ ಭಾಟಿಯಾ. ತಮಿಳು, ತೆಲುಗು ಚಿತ್ರರಂಗದ ಮಿಲ್ಕಿಬ್ಯೂಟಿ. ಹಿಂದಿಯಲ್ಲೂ ಹೆಜ್ಜೆಯಿಟ್ಟಿರುವ ತಮನ್ನಾ, ಕನ್ನಡದ ಜಾಗ್ವಾರ್ ಚಿತ್ರದ ಐಟಂ ಸಾಂಗೊಂದರಲ್ಲಿ ಹೆಜ್ಜೆ ಹಾಕಿದ್ದರು. ಅದಾದ ನಂತರ ಪುನೀತ್ ರಾಜ್‍ಕುಮಾರ್ ಜೊತೆ ಜಾಹೀರಾತೊಂದರಲ್ಲಿ ನಟಿಸಿದ್ದರು. ಪುನೀತ್ ಜೊತೆ ಸಿನಿಮಾ ಮಾಡುವ ಕನಸಿದೆ ಎಂದು ಹೇಳಿಕೊಂಡಿದ್ದ ತಮನ್ನಾ, ಇದೇ ವರ್ಷದ ಕೊನೆಯ ಹೊತ್ತಿಗೆ ಕನ್ನಡ ಚಿತ್ರದಲ್ಲಿ ಪ್ರತ್ಯಕ್ಷವಾಗುವ ಸುಳಿವು ಕೊಟ್ಟಿದ್ದಾರೆ.

    ಮೈಸೂರಿನಲ್ಲಿ ಬಟರ್‍ಫ್ಲೈ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಅದೇ ಲೊಕೇಷನ್‍ನಲ್ಲಿ ತಮಿಳು ಕ್ವೀನ್ ವರ್ಷನ್‍ನ ಶೂಟಿಂಗ್ ಕೂಡಾ ನಡೆಯುತ್ತಿದೆ. ಬಟರ್‍ಫ್ಲೈ ಚಿತ್ರತಂಡ, ಪಾರುಲ್ ಯಾದವ್ ಅವರ ಹುಟ್ಟುಹಬ್ಬದ ಆಚರಣೆ ವೇಳೆ ತಮನ್ನಾ ಕೂಡಾ ಅಲ್ಲಿಯೇ ಇದ್ದರು. ಈ ವೇಳೆ ತಮ್ಮ ಕನ್ನಡ ಚಿತ್ರದ ಪ್ರವೇಶವನ್ನು ಘೋಷಿಸಿಕೊಂಡರು.

    ಕನ್ನಡದಿಂದ ಮತ್ತೊಂದು ಆಫರ್ ಬಂದಿದೆ. ಸದ್ಯಕ್ಕೆ ಅದಿನ್ನೂ ಮಾತುಕತೆ ಹಂತದಲ್ಲಿದೆ. ಈಗಲೇ ಹೆಚ್ಚಿನ ವಿವರ ಕೊಡೋದು ಸಾಧ್ಯವಿಲ್ಲ. ಆದರೆ, ಆ ಸಿನಿಮಾ ಇದೇ ವರ್ಷ ಸೆಟ್ಟೇರಲಿದೆ ಅನ್ನೋದು ಮಾತ್ರ ಗ್ಯಾರಂಟಿ ಎಂದಿದ್ದಾರೆ.