` anushka shetty - chitraloka.com | Kannada Movie News, Reviews | Image

anushka shetty

 • RS Productions to Distribute Bahubali - Exclusive

  bahubali image

  RS Productions has signed an agreement with the makers of 'Bahubali' to distribute the film for entire Karnataka. RS Productions will not only be distributing the Karnataka area but also the Tamil, Hindi and Malayalam also.

  'Bahubali' is the most anticipated film of South India and has been directed by S S Rajamouli. The film stars Prabhas, Rana Daggubatti, Tamannah, Anushka Shetty and others and has been made on a whopping budget of more than 120 crores.

  Many producers and distributors were eyeing to buy the distribution rights of the film. However, Kanakapura Srinivas and Srikanth of RS Productions has been successful in buying the distribution rights of the film for entire Karnataka. The Agreement has been signed in this context.

  Sources say its the highest amount paid by a distributor in Karnataka for other languages.

 • ಅನುಷ್ಕಾ ಶೆಟ್ಟಿ ಕಾಲಿಗೆ ನಮಸ್ಕರಿಸ್ತಾರಂತೆ ರವಿತೇಜ, ಪುರಿ ಜಗನ್ನಾಥ್ ಮತ್ತು ಚಾರ್ಮಿ

  puri jagannath talks about anushkar shetty

  ಅನುಷ್ಕಾ ಶೆಟ್ಟಿ, ಕನ್ನಡತಿಯೇ ಆದರೂ ಹೆಸರು ಮಾಡಿದ್ದು ತೆಲುಗು ಚಿತ್ರರಂಗದಲ್ಲಿ. ಟಾಲಿವುಡ್ನ ಲೇಡಿ ಸ್ಟಾರ್ ನಟಿ ಅನುಷ್ಕಾ ಶೆಟ್ಟಿ. ಅನುಷ್ಕಾ ಶೆಟ್ಟಿಯನ್ನು ಚಿತ್ರರಂಗಕ್ಕೆ ಪರಿಚಯಿಸಿದ ನಿರ್ದೇಶಕ ಪುರಿ ಜಗನ್ನಾಥ್. ಅನುಷ್ಕಾ ಶೆಟ್ಟಿ ಜೊತೆ ಹೀರೋ ಆಗಿ ನಟಿಸಿದ್ದವರು ಮಾಸ್ ಮಹಾರಾಜ ಎಂದೇ ಹೆಸರಾಗಿರುವ ರವಿತೇಜ. ಅನುಷ್ಕಾ ಶೆಟ್ಟಿ ಬೆಳೆಯುತ್ತಿರುವಾಗಲೇ ನಾಯಕಿಯಾಗಿ ತನ್ನದೇ ಚಾರ್ಮ್ ಸೃಷ್ಟಿಸಿದ ನಟಿ ಚಾರ್ಮಿ ಕೌರ್. ವಿಶೇಷವೆಂದರೆ ಈ ಮೂರೂ ಜನ ಅನುಷ್ಕಾ ಶೆಟ್ಟಿ ಅವರನ್ನು ಭೇಟಿಯಾದಾಗಲೆಲ್ಲ ಅವರ ಕಾಲು ಮುಟ್ಟಿ ನಮಸ್ಕರಿಸ್ತಾರಂತೆ.

  ಈ ರಹಸ್ಯವನ್ನು ಹೊರಗಿಟ್ಟಿದ್ದು ಬೇಱರೂ ಅಲ್ಲ, ಸ್ವತಃ ಪುರಿ ಜಗನ್ನಾಥ್. ಅನುಷ್ಕಾ ಶೆಟ್ಟಿ ಅಭಿನಯದ ನಿಶ್ಯಬ್ಧಂ ಚಿತ್ರ ರಿಲೀಸ್ ಆಗೋಕೆ ರೆಡಿಯಾಗಿದೆ. ಆ ಚಿತ್ರದ ಕುರಿತ ಕಾರ್ಯಕ್ರಮದಲ್ಲಿ ನಿರ್ದೇಶಕ ಪುರಿ ಜಗನ್ನಾಥ್ ಈ ವಿಷಯ ಬಹಿರಂಗಪಡಿಸಿದ್ದಾರೆ. ಅನುಮಾನವಿದ್ದರೆ ನೀವು ರವಿತೇಜ, ಚಾರ್ಮಿಯನ್ನು ಕೇಳಿಕೊಳ್ಳಬಹುದು ಎಂದಿದ್ದಾರೆ. ಇದು ತಮಾಷೆಯೋ.. ಸೀರಿಯಸ್ಸೋ ಅರ್ಥವಾಗದ ಸ್ಥಿತಿ ಅಭಿಮಾನಿಗಳದ್ದು.

 • ಅನುಷ್ಕಾ ಶೆಟ್ಟಿ ಟ್ವೀಟು.. ರಶ್ಮಿಕಾ ಮಂದಣ್ಣಗೆ ಘಾಟು..!

  rashmika gets trolled again

  ತೆಲುಗು ಸಿನಿಮಾ ಪ್ರೇಕ್ಷಕರ ಪಾಲಿನ ಅರುಂಧತಿ, ರುದ್ರಮದೇವಿ, ಬಾಹುಬಲಿಯ ದೇವಸೇನ.. ಅನುಷ್ಕಾ ಶೆಟ್ಟಿ, ಮೂಲತಃ ಕನ್ನಡದವರು. ಕರಾವಳಿಯ ಹುಡುಗಿ. ಆದರೆ, ನೆಲೆ ಕಂಡುಕೊಂಡಿದ್ದು, ಸ್ಟಾರ್ ನಟಿಯಾಗಿದ್ದು ತೆಲುಗು, ತಮಿಳಿನಲ್ಲಿ. ಇದುವರೆಗೆ ಅನುಷ್ಕಾ ಶೆಟ್ಟಿ ಒಂದೇ ಒಂದು ಕನ್ನಡ ಚಿತ್ರದಲ್ಲೂ ನಟಿಸಿಲ್ಲ. ಆದರೂ ಆಕೆಯ ಕನ್ನಡ ಪ್ರೇಮ ಹಾಗೆಯೇ ಇದೆ.

  ಅದಕ್ಕೆ ಸಾಕ್ಷಿಯಾಗಿ ಇತ್ತೀಚೆಗೆ ಅನುಷ್ಕಾ ಶೆಟ್ಟಿ, ತಮ್ಮ ತಾಯಿಯ ಹುಟ್ಟುಹಬ್ಬಕ್ಕೆ ಅಚ್ಚ ಕನ್ನಡದಲ್ಲಿ ಹುಟ್ಟುಹಬ್ಬದ ಶುಭಾಶಯಗಳು ಅಮ್ಮಾ ಎಂದು ಪೋಸ್ಟ್ ಹಾಕಿದ್ದರು.

  ಅನುಷ್ಕಾ ಶೆಟ್ಟಿಯವರ ಪೋಸ್ಟ್‍ಗೆ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ ಕೊಟ್ಟರು. ಹ್ಯಾಪಿ ಬರ್ತ್ ಡೇ ಆಂಟಿ. ಸ್ಟೇ ಬ್ಲೆಸ್ಡ್ ಎಂದರು. 

  ತಗೋ.. ಸೋಷಿಯಲ್ ಮೀಡಿಯಾದಲ್ಲಿ ಶುರುವಾಯ್ತು ಯುದ್ಧ. ಅನುಷ್ಕಾ ಶೆಟ್ಟಿಯ ಕನ್ನಡ ಪ್ರೇಮವನ್ನು ಹೊಗಳುತ್ತಲೇ.. ರಶ್ಮಿಕಾ ಮಂದಣ್ಣರ ಇಂಗ್ಲಿಷ್ ವ್ಯಾಮೋಹವನ್ನು ತರಾಟೆಗೆ ತೆಗೆದುಕೊಂಡರು ಕನ್ನಡಿಗರು.

  ಸಿನಿಮಾಗಳಲ್ಲಿ ಸಕ್ಸಸ್ ಮೇಲೆ ಸಕ್ಸಸ್ ಕಾಣುತ್ತಿರುವ ರಶ್ಮಿಕಾ, ಸೋಷಿಯಲ್ ಮತ್ತು ಪರ್ಸನಲ್ ಲೈಫಿನಲ್ಲಿ ಮಾತ್ರ ಏಕೋ.. ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದಾರೆ.

 • ನಂಜನಗೂಡು ನಾಗರತ್ನಮ್ಮ ಆಗ್ತಾರಾ ಅನುಷ್ಕಾ ಶೆಟ್ಟಿ..?

  will anushka shetty act in kannada films soon?

  ಅನುಷ್ಕಾ ಶೆಟ್ಟಿ ಕನ್ನಡತಿಯೇ ಆದರೂ, ಇದುವರೆಗೆ ಕನ್ನಡದಲ್ಲಿ ನಟಿಸಿಲ್ಲ. ತೆಲುಗಿನಲ್ಲಿ ಲೇಡಿ ಸೂಪರ್ ಸ್ಟಾರ್ ಆಗಿರುವ ಅನುಷ್ಕಾ ಶೆಟ್ಟಿ, ಕನ್ನಡಕ್ಕೆ ಬರುವ ಮನಸ್ಸು ಮಾಡಿರುವಂತಿದೆ. ಕನ್ನಡ ಚಿತ್ರರಂಗ ಪ್ರವೇಶಕ್ಕಾಗಿ ಅನುಷ್ಕಾ ಶೆಟ್ಟಿ ನಂಜನಗೂಡು ನಾಗರತ್ನಮ್ಮ'ನವರ ಬದುಕಿನ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರಂತೆ.

  ನಂಜನಗೂಡು ನಾಗರತ್ನಮ್ಮ, 17ನೇ ಶತಮಾನದಲ್ಲಿ ಬದುಕಿದ್ದ ದೇವದಾಸಿ ಹೆಣ್ಣು ಮಗಳು. ಆಕೆಯ ತಾಯಿ ಮೈಸೂರಿನ ಶ್ರೀಮಂತರೊಬ್ಬರ ಉಪಪತ್ನಿಯಾಗಿರುತ್ತಾರೆ. ಆಕೆಗೆ ಜನ್ಮ ಕೊಟ್ಟ ತಂದೆಯ ಧರ್ಮಪತ್ನಿಗೂ ಒಬ್ಬ ಮಗಳಿರುತ್ತಾಳೆ. ಆದರೆ, ನಾಗರತ್ನಮ್ಮನ ಪ್ರತಿಭೆ ಎದುರು ಧರ್ಮಪತ್ನಿಯ ಮಗಳು ಮಂಕಾಗುತ್ತಾಳೆ ಎಂದು ಭಾವಿಸಿ, ಆಕೆಯನ್ನು ನಾಟ್ಯ, ನರ್ತನ ಬಿಡುವಂತೆ ಹೇಳಿದಾಗ ನಾಗರತ್ನಮ್ಮನ ತಾಯಿ ಸವಾಲು ಹಾಕಿ ಮಗಳನ್ನು ನಾಟ್ಯ, ನರ್ತನದಲ್ಲಿ ಮುಂದುವರೆಸಿ ಗೆಲ್ಲುತ್ತಾರೆ. ಮೈಸೂರು ಅರಸರ ಸಭೆಯಲ್ಲಿ ನರ್ತಿಸಿ ಸವಾಲು ಗೆಲ್ಲುತ್ತಾರೆ ನಾಗರತ್ನಮ್ಮ. ವಿದುಷಿಯಾಗಿ ಪ್ರಖ್ಯಾತಿ ಗಳಿಸುತ್ತಾರೆ.

  ಅಷ್ಟೇ ಅಲ್ಲ, ಕೆಲವು ಕೃತಿಗಳನ್ನು ಸಂಪಾದಿಸುತ್ತಾರೆ. ಪುರಂದರ ದಾಸರ ಕೀರ್ತನೆಗಳನ್ನು ಹಾಡಿ ಗೆದ್ದ ದೇವದಾಸಿ ನಾಗರತ್ನಮ್ಮ. ರಾಧಿಕಾ ಸಾಂತ್ವನಮು ಎಂಬ ಕೃತಿಯನ್ನು ಸಂಪಾದಿಸಿ, ಅದರ ವಿರುದ್ಧ ಕೆಲವರು ದಂಗೆಯೆದ್ದಾಗ ಅದನ್ನು ಎದುರಿಸಿ ಗೆದ್ದ ಹೆಣ್ಣು ಮಗಳು ನಾಗರತ್ನಮ್ಮ. ದೇವದಾಸಿಯರನ್ನು ವೇಶ್ಯೆಯರಿಗೆ ಹೋಲಿಸಿದಾಗ ನಾವು ದೇವರು, ದೇವಸ್ಥಾನದ ಮುಡಿಪು. ವೇಶ್ಯೆಯರಲ್ಲ ಎಂದು ಕೋರ್ಟಿನಲ್ಲಿ ವಾದಕ್ಕೆ ನಿಂತವರು ನಾಗರತ್ನಮ್ಮ. ತಮಿಳುನಾಡಿನಲ್ಲಿ ತ್ಯಾಗರಾಜರ ಸಮಾಧಿಯ ಜೀರ್ಣೋದ್ಧಾರ ಮಾಡಿರುವ ನಾಗರತ್ನಮ್ಮನ ಬದುಕು ಸವಾಲಿನ ಕಥೆ.

  ಈಗ ಆ ಚಿತ್ರದಲ್ಲಿ ನಾಗರತ್ನಮ್ಮನಾಗಲು ಅನೂಷ್ಕಾ ಶೆಟ್ಟಿ ಆಸಕ್ತಿ ವಹಿಸಿದ್ದಾರೆ ಎನ್ನುತ್ತಿದೆ ಟಾಲಿವುಡ್. ಬಹುಶಃ ಕೋರೋನಾ ಸೈಲೆಂಟ್ ಆದ ಮೇಲೆ ಈ ಸುದ್ದಿಗೊಂದು ಸ್ಪಷ್ಟ ರೂಪ ಸಿಗಬಹುದು.

 • ನಟಿ ಅನುಷ್ಕಾ ಶೆಟ್ಟಿ ಅಣ್ಣನ ಹತ್ಯೆಗೆ ರೈ ಅಕ್ಕನ ಮಗ ಸ್ಕೆಚ್?

  ನಟಿ ಅನುಷ್ಕಾ ಶೆಟ್ಟಿ ಅಣ್ಣನ ಹತ್ಯೆಗೆ ರೈ ಅಕ್ಕನ ಮಗ ಸ್ಕೆಚ್?

  ಗುಣರಂಜನ್ ಶೆಟ್ಟಿ. ಇವರು ಅನುಷ್ಕಾ ಶೆಟ್ಟಿ ಅವರ ಅಣ್ಣ. ಉದ್ಯಮಿ. ಈ ಹಿಂದೆ ಜಯ ಕರ್ನಾಟಕ ಸಂಘಟನೆಯಲ್ಲಿಯೂ ಇದ್ದವರು. ಮುತ್ತಪ್ಪ ರೈ ಜೊತೆ ಆಪ್ತರಾಗಿದ್ದವರು. ಮುತ್ತಪ್ಪ ರೈ ನಿಧನದ ನಂತರ ಸಂಘಟನೆ ತೊರೆದಿದ್ದರು. ಇವರ ಹತ್ಯೆಗೆ ಮುತ್ತಪ್ಪ ರೈ ಅವರ ಅಕ್ಕನ ಮಗ ಮನ್ವಿತ್ ರೈ ಸಂಚು ರೂಪಿಸಿದ್ದಾರೆ ಎನ್ನುವುದು ಆರೋಪ.

  ನನಗೆ ಗೊತ್ತಿಲ್ಲ. ನನಗೆ ಭೂಗತ ಜಗತ್ತಿನ ಸಂಪರ್ಕವೂ ಇಲ್ಲ. ನನ್ನ ಮೇಲೆ ಒಂದು ಎಫ್‍ಐಆರ್ ಕೂಡಾ ಇಲ್ಲ. ಗುಣರಂಜನ್ ಶೆಟ್ಟಿಯವರಿಗೂ ಸಂಘಟನೆಯಲ್ಲಾಗಲೀ, ಉದ್ಯಮದಲ್ಲಾಗಲೀ ಶತ್ರುಗಳಿಲ್ಲ. ನನ್ನ ಹೆಸರು ಏಕೆ ಬಂತೋ ಗೊತ್ತಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ ಮನ್ವಿತ್ ರೈ.

  ಈ ಹಿಂದೆ ರಾಕೇಶ್ ಮಲ್ಲಿ ಎಂಬುವವರು ಮನ್ವಿತ್ ರೈ ವಿರುದ್ಧ ಆರೋಪ ಮಾಡಿದ್ದರು. ಆಗಲೂ ಮನ್ವಿತ್ ರೈ ನಿರಾಕರಿಸಿದ್ದರು.

  ನನಗೂ ಪೊಲೀಸರು ಮತ್ತು ಮಾಧ್ಯಮಗಳಿಂದ ವಿಷಯ ಗೊತ್ತಾಗಿದೆ. ಅಧಿಕೃತವಾಗಿ ದೂರು ನೀಡಿದ್ದಾರೆ ಎಂದಿದ್ದಾರೆ ಗುಣರಂಜನ್ ಶೆಟ್ಟಿ.