ಶಿವರಾಜ್‍ಕುಮಾರ್, ಬಹುತೇಕ ತಮ್ಮ ಸಮಕಾಲೀನ ಸ್ಟಾರ್‍ಗಳು, ತಮಗಿಂತಲೂ ಮೊದಲಿನ ಸ್ಟಾರ್‍ಗಳು ಹಾಗೂ ತಮ್ಮ ನಂತರದ ಜನರೇಷನ್ ಸ್ಟಾರ್‍ಗಳೊಂದಿಗೆಲ್ಲ ತೆರೆ ಹಂಚಿಕೊಂಡಿದ್ದಾರೆ. ಡಾ.ರಾಜ್, ಅಂಬರೀಷ್, ರವಿಚಂದ್ರನ್, ಅನಂತ್‍ನಾಗ್, ಪ್ರಭಾಕರ್, ದೇವರಾಜ್, ರಮೇಶ್ ಅರವಿಂದ್, ಉಪೇಂದ್ರ, ಜಗ್ಗೇಶ್, ಶಶಿಕುಮಾರ್.. ಅವರದ್ದೆಲ್ಲ ಎರಡು ಜನರೇಷನ್. ತಮ್ಮ ನಂತರದ ಕಲಾವಿದರಾದ ದರ್ಶನ್, ವಿಜಯ್ ರಾಘವೇಂದ್ರ, ಶ್ರೀಮುರಳಿ, ಯೋಗಿ, ಧನಂಜಯ್.. ಇವರದ್ದೆಲ್ಲ ಇನ್ನೊಂದು ಜನರೇಷನ್. ಕಿಚ್ಚ ಸುದೀಪ್ ಜೊತೆ ನಟಿಸುತ್ತಿರುವ ದಿ ವಿಲನ್ ಅಂತೂ ಚಿತ್ರರಂಗವೇ ಎದುರು ನೋಡುವಂತೆ ಮಾಡಿದೆ.
ಇನ್ನು ಪುನೀತ್ ರಾಜ್‍ಕುಮಾರ್ ಕೂಡಾ ಹಲವು ಸ್ಟಾರ್‍ಗಳ ಜೊತೆ ತೆರೆ ಹಂಚಿಕೊಂಡವರೇ. ತಮ್ಮ ಜನರೇಷನ್‍ನ ಯೋಗಿ, ಶ್ರೀನಗರ ಕಿಟ್ಟಿ, ದರ್ಶನ್, ಆದಿತ್ಯ.. ಮೊದಲಾದವರ ಜೊತೆ ತೆರೆ ಹಂಚಿಕೊಂಡಿದ್ದಾರೆ ಪುನೀತ್. ಆದರೆ, ಅಭಿಮಾನಿಗಳ ನಿರೀಕ್ಷೆ ಇರುವುದು ಅಣ್ಣ-ತಮ್ಮಂದಿರ ಮಿಲನದಲ್ಲಿ. ಯಾವಾಗ ಎನ್ನುವುದೇ ಎಲ್ಲರ ಪ್ರಶ್ನೆ.
ಕಾಲ ಕೂಡಿ ಬರುತ್ತಿದೆ. ಬಹುಬೇಗನೆ ಒಟ್ಟಿಗೇ ನಟಿಸುತ್ತೇವೆ ಎಂಬ ಭರವಸೆ ಸಿಕ್ಕಿರುವುದು ಶಿವಣ್ಣ ಅವರಿಂದ. ಅಪ್ಪು ಹುಟ್ಟುಹಬ್ಬಕ್ಕೆ ಶುಭ ಹಾರೈಸಲು ಪುನೀತ್ ಮನೆಗೇ ಬಂದಿದ್ದ ಅಣ್ಣ ಶಿವಣ್ಣ, ಪುನೀತ್‍ಗೆ ಶುಭ ಕೋರಿದರು. ಅಭಿಮಾನಿಗಳ ಒಕ್ಕೊರಲ ಕೂಗಿಗೆ ಸ್ಪಂದಿಸಿದ ಶಿವಣ್ಣ, ತಮಗೂ ಅಪ್ಪು ಜೊತೆ ನಟಿಸುವ ಬಯಕೆ ಇದೆ ಎಂದು ಹೇಳಿಕೊಂಡರು.
ಆದರೆ, ಯಾವಾಗ..? ಅಭಿಮಾನಿ ದೇವರುಗಳ ಕೂಗು ಈಡೇರಬೇಕೆಂದರೆ ನಿರ್ದೇಶಕ ದೇವರು ಮನಸ್ಸು ಮಾಡಬೇಕು. ಅಷ್ಟೆ. ಕಥೆ ಸಿಕ್ಕರೆ, ಅದು ಈಗಲೇ ಆಗಬಹುದು.