` puneeth rajkumar, - chitraloka.com | Kannada Movie News, Reviews | Image

puneeth rajkumar,

 • ಯುವ ಘರ್ಜನೆ ಶುರು

  ಯುವ ಘರ್ಜನೆ ಶುರು

  ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಯುವರತ್ನ ಚಿತ್ರದ ಘರ್ಜನೆ ಶುರುವಾಗಿದೆ. ಬೆಳಗ್ಗೆಯಿಂದಲೇ ಜೋಶ್ ಎಲ್ಲೆಲ್ಲೂ ಕಂಡುಬಂದಿದೆ. ಪುನೀತ್ ಫ್ಯಾನ್ಸ್ ಕ್ರೇಜ್ ಗೊತ್ತಿದ್ದ ಪೊಲೀಸರು, ರಾತ್ರಿಯೇ ಸೆಕ್ಯುರಿಟಿ ಟೈಟ್ ಮಾಡಿದ್ದ ಕಾರಣ ಎಲ್ಲಿಯೂ ಗದ್ದಲ, ಗಲಾಟೆಗಳಾಗಿಲ್ಲ. ಬೆಳಗ್ಗೆ 6 ಗಂಟೆಯಿಂದಲೇ ಶೋಗಳು ಶುರುವಾಗಿವೆ.

  ಪವರ್ ಆಫ್ ಯೂಥ್ ಹಾಡು ಬರುತ್ತಿದ್ದಂತೆ ಸ್ಕ್ರೀನ್ ಎದುರೇ ಕುಣಿದು ಕುಪ್ಪಳಿಸಿದ್ದಾರೆ. ಸಿನಿಮಾ ಶುರುವಾಗೋಕೂ ಮುನ್ನ ಪೂಜೆ ಮಾಡಿ, ಈಡುಗಾಯಿ ಹೊಡೆದು ಶುಭ ಕೋರಿದ್ದಾರೆ. ನೂರಾರು ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರಗಳೂ ನಡೆದಿವೆ. ಪಟಾಕಿಗಳು ಪಟಪಟನೆ ಸಿಡಿದಿವೆ.

 • ಯುವ ದಸರಾ ಉದ್ಘಾಟಿಸಿದ ಅಶ್ವಿನಿ ಪುನೀತ್ ರಾಜ್ ಕುಮಾರ್

  ಯುವ ದಸರಾ ಉದ್ಘಾಟಿಸಿದ ಅಶ್ವಿನಿ ಪುನೀತ್ ರಾಜ್ ಕುಮಾರ್

  ಯುವ ದಸರಾ ಉದ್ಘಾಟಿಸಲು ಅಶ್ವಿನಿ ಪುನೀತ್ ರಾಜ್ಕುಮಾರ್ ಆಗಮಿಸುತ್ತಿದ್ದಂತೆಯೇ ಪ್ರೇಕ್ಷಕರೆಲ್ಲರೂ ಎದ್ದು ನಿಂತು ಗೌರವ ಸೂಚಿಸಿದರು. ಶಿಳ್ಳೆ ಚಪ್ಪಾಳೆಗಳು ಮೊಳಗಿದವು. ರಾಜ್ ಕುಟುಂಬದಿಂದ ರಾಘವೇಂದ್ರ ರಾಜ್ಕುಮಾರ್, ವಿನಯ್ ರಾಜ್ಕುಮಾರ್ ಕೂಡಾ ವೇದಿಕೆಯಲ್ಲಿದ್ದರು. ಎಲ್ಲೆಲ್ಲೂ ಅಪ್ಪು ನಿನಾದ. ವಿಶ್ವ ವಿಖ್ಯಾತ ಮೈಸೂರು ದಸರಾದ ಯುವ ದಸರಾ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಅಶ್ವಿನಿ ಪುನೀತ್ ರಾಜಕುಮಾರ್. ಮೊದಲ ದಿನ ಅಪ್ಪು ನಮನ ಸಂಪೂರ್ಣ ಪುನೀತ್‍ಗೆ ಮೀಸಲಾಗಿತ್ತು. ವೇದಿಕೆಯಲ್ಲಿ ಉಸ್ತುವಾರಿ ಸಚಿವ ಎಸ್ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್.ನಾಗೇಂದ್ರ, ರಾಜ್ ಕುಟುಂಬ ಸದಸ್ಯರಿದ್ದರು. ಎಲ್ಲಾ ಅಭಿಮಾನಿ ದೇವರುಗಳಿಗೆ ಸಾಷ್ಟಾಂಗ ನಮಸ್ಕಾರ. ಎಲ್ಲರೂ ಅಪ್ಪು ಅವರನ್ನು ಪ್ರೀತಿಸುತ್ತಿದ್ರಿ. ಈಗ ಪೂಜಿಸುತ್ತಿದ್ದೀರಿ. ನಿಮ್ಮಲ್ಲರಲ್ಲೂ ಅಪ್ಪು ಕಾಣುತ್ತಿದ್ದೇನೆ ಎಂದರು ರಾಘವೇಂದ್ರ.

  ಸಂಸದ ಪ್ರತಾಪ್ ಸಿಂಹ ಅಪ್ಪು ನಮನ ಕಾರ್ಯಕ್ರಮ ಉದ್ಘಾಟನೆಯನ್ನು ಅಶ್ವಿನಿ ಅವರಿಂದಲೇ ಮಾಡಿಸಬೇಕು ಎಂಬುದು ಎಸ್ಟಿ. ಸೋಮಶೇಖರ್ ಆಸೆ ಆಗಿತ್ತು. ಅಭಿಮಾನಿಗಳ ಆಶಯ ಕೂಡ ಅದೇ ಆಗಿತ್ತು ಎಂದರು. ರಾಜ್ ಕುಟುಂಬ ಸದಸ್ಯರಿಗೆ ಧನ್ಯವಾದ ತಿಳಿಸಿದರು.  ನಟ ವಸಿಷ್ಠ ಸಿಂಹ ಬೊಂಬೆ ಹೇಳುತೈತೆ ಹಾಡು ಹಾಡಿದರು.

  ಗಾಯಕಿ ಅನುರಾಧ ಭಟ್, ಆಕಾಶ್ ಚಿತ್ರದ ‘ಆಹಾ ಎಂತ ಆಕ್ಷಣ, ನೆನೆದರೆ ತಲ್ಲಣ’ ಎಂಬ ಹಾಡನ್ನು ಹಾಡಿದರು. ಗುರುಕಿರಣ್ ಮೈಲಾರಿ ಚಿತ್ರದ ‘ಮೈಲಾಪುರದ ಮೈಲಾರಿ’ ಹಾಗೂ ಅಪ್ಪು ಚಿತ್ರದ ‘ತಾಲಿಬಾನ್ ಅಲ್ಲಾ ಅಲ್ಲಾ... ಬಿನ್ ಲಾಡೆನ್ ಅಲ್ವೆ ಅಲ್ಲ’, ಅಭಿ ಚಿತ್ರದ ‘ಮಾಮಾ ಮಜಾ ಮಾಡು’ ಹಾಡನ್ನು ಮತ್ತು ಮೌರ್ಯ ಚಿತ್ರದ ‘ಅಮ್ಮಾ ಅಮ್ಮಾ ಐ ಲವ್ ಯೂ’ ಹಾಡನ್ನು ಹಾಡಿ ಅಭಿಮಾನಿಗಳನ್ನು ಕುಣಿಸಿ ರಂಜಿಸಿದರು. ರಾಘವೇಂದ್ರ ರಾಜ್ ಕುಮಾರ್ ಪುನೀತ್ ಅವರಿಗಾಗಿ ಕಸ್ತೂರಿ ನಿವಾಸದ ‘ಆಡಿಸಿ ನೋಡು, ಬಿಳಿಸಿ ನೋಡು, ಉರುಳಿ ಹೋಗದು.. ಹಾಡನ್ನು ಹಾಡಿದರು.

 • ಯುವ ರಾಜ್ ಕುಮಾರ್ ಮೊದಲ ಚಿತ್ರಕ್ಕೆ ಪುನೀತ್ ನಿರ್ದೇಶನ

  puneeth to direct yuva rajkumar's debut movie

  ಯುವರಾಜ್ ಕುಮಾರ್. ಡಾ.ರಾಜ್ ಕುಟುಂಬದ ಕುಡಿ. ರಾಘವೇಂದ್ರ ರಾಜ್‍ಕುಮಾರ್ ಅವರ 2ನೇ ಮಗ. ನಟಸಾರ್ವಭೌಮ ಚಿತ್ರದ ಆಡಿಯೋ ಲಾಂಚ್ ವೇಳೆ ಅದ್ಭುತವಾಗಿ ಕುಣಿದು ವ್ಹಾವ್ ಎನಿಸಿಕೊಂಡಿದ್ದ ಹುಡುಗ. ಚಿತ್ರರಂಗಕ್ಕೆ ಬರಲು ಅವಸರವೇನೂ ಇಲ್ಲ ಎಂದಿದ್ದ ಯುವರಾಜ್ ಕುಮಾರ್, ರಾಜ್ ಕುಮಾರ್ ಟ್ರಸ್ಟ್ ಕೆಲಸದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದರು. ಅವರೀಗ ಹೀರೋ ಆಗೋಕೆ ರೆಡಿ. ಡೈರೆಕ್ಟರ್ ಪುನೀತ್.

  ಕನ್‍ಫ್ಯೂಸ್ ಆಗಬೇಡಿ. ಪುನೀತ್ ಎಂದರೆ, ಯುವರಾಜ್ ಚಿಕ್ಕಪ್ಪ ಪುನೀತ್ ರಾಜ್‍ಕುಮಾರ್ ಅಲ್ಲ. ಪವರ್ ಸ್ಟಾರ್ ಅಣ್ಣನ ಮಗನ ಚಿತ್ರಕ್ಕೆ ಡೈರೆಕ್ಷನ್ ಮಾಡುತ್ತಿರುವ ನಿರ್ದೇಶಕನ ಹೆಸರು ಪುನೀತ್. ಇವರು ಪ್ರಶಾಂತ್ ನೀಲ್ ಜೊತೆ ಕೆಜಿಎಫ್ ಚಿತ್ರಕ್ಕೆ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ್ದವರು. ಸ್ಸೋ.. ಡೈರೆಕ್ಟರ್ ಪುನೀತ್, ಯುವ ಚಿತ್ರಕ್ಕೆ ಸ್ಟೋರಿ ಬೋರ್ಡ್ ರೆಡಿ ಮಾಡುತ್ತಿದ್ದಾರೆ. 2020ಕ್ಕೆ ಸಿನಿಮಾ ಲಾಂಚ್ ಆಗಲಿದೆ. ಅಫ್‍ಕೋರ್ಸ್.. ಅದು ದೊಡ್ಮನೆ ಹಬ್ಬವಾಗಲಿದೆ.

 • ಯುವರತ್ನ : ಅಭಿಮಾನಿ ದೇವರುಗಳ ಅಭಿಮಾನದ ಕಥೆಗಳು

  ಯುವರತ್ನ : ಅಭಿಮಾನಿ ದೇವರುಗಳ ಅಭಿಮಾನದ ಕಥೆಗಳು

  ಯುವರತ್ನ ರಿಲೀಸ್ ಆಗಿದೆ. ಸರ್ಕಾರ ಒಂದಿಷ್ಟು ನಷ್ಟವನ್ನು ಮಾಡಿತಾದರೂ ಅಭಿಮಾನಿ ದೇವರುಗಳು ಅದನ್ನೂ ಮೀರಿ ನಿಂತಿದ್ದಾರೆ. ಅಭಿಮಾನಿ ದೇವರುಗಳ ಅಭಿಮಾನದ ಕಥೆಗಳು ಒಂದೆರಡಲ್ಲ.

  ಸರ್ಕಾರ ದಿಢೀರ್ 50% ಎಂದಾಗ ಎಲ್ಲರಿಗಿಂತ ಹೆಚ್ಚಾಗಿ ಗಮನ ಸೆಳೆದಿದ್ದು ಪುಟ್ಟ ಪುಟಾಣಿ ಅಭಿಮಾನಿಗಳು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದು. ಅದರ ಜೊತೆಯಲ್ಲೇ ಅದಾಗಲೇ ಸಿನಿಮಾ ನೋಡಿದ್ದ ಗೃಹಿಣಿಯರು, ಹಿರಿಯರು.. ಅದರಲ್ಲೂ ವಿಶೇಷವಾಗಿ ಶಿಕ್ಷಕರು ಚಿತ್ರದ ಬಗ್ಗೆ ಸ್ವತಃ ಮಾತನಾಡುತ್ತಾ ಹೋದರು.

  ಇದರ ಮಧ್ಯೆ ಕೆಲವೆಡೆ ಹಳ್ಳಿಗಳಿಂದ ಜನ ಟ್ರ್ಯಾಕ್ಟರ್‍ನಲ್ಲಿ ಬಂದು ಸಿನಿಮಾ ನೋಡುತ್ತಿದ್ದಾರೆ. ಇದು ರಾಜ್, ವಿಷ್ಣು ಕಾಲದ ಚಿತ್ರೋದ್ಯಮನವನ್ನು ನೆನಪಿಸಿದೆ. ಮತ್ತೊಂದೆಡೆ ಮೈಸೂರಿನಲ್ಲಿ ಪುನೀತ್ ಅಭಿಮಾನಿಯಾಗಿದ್ದು ಮೃತಪಟ್ಟ ಹುಡುಗನ ಫೋಟೋ ಇಟ್ಟುಕೊಂಡು ಸಿನಿಮಾ ನೋಡಿದ್ದು, ಪ್ರತಿಯೊಬ್ಬರಲ್ಲೂ ಕಣ್ಣೀರು ತರಿಸಿದೆ.

  ಹುಬ್ಬಳ್ಳಿಯಲ್ಲಿ ಜೈ ರಾಜವಂಶ ಅಭಿಮಾನಿ ಸಂಘದ ಸದಸ್ಯರು 15 ಅಂಗವಿಕಲರಿಗೆ ಕೃತಕ ಕಾಲು ಜೋಡಿಸಿ, ಯುವರತ್ನಕ್ಕೆ ಶುಭ ಕೋರಿದ್ದಾರೆ. ಅಭಿಮಾನಿಗಳಿಗಾಗಿ ಸ್ವತಃ 100 ಟಿಕೆಟ್ ಖರೀದಿಸಿ ವಿತರಿಸಿದ್ದಾರೆ.

  ಒಂದು ಸಿನಿಮಾ ಹಿಟ್ ಆಗಬೇಕು ಎಂದರೆ ಕುಟುಂಬದವರೆಲ್ಲ ಚಿತ್ರಮಂದಿರಕ್ಕೆ ಬರಬೇಕು. ಯುವರತ್ನ ಚಿತ್ರ ಅದನ್ನು ಮಾಡಿದೆ.

 • ಯುವರತ್ನ ಅಪ್ ಡೇಟ್

  yuvaratna dubbng resumes

  ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಯುವರತ್ನ ಚಿತ್ರದ ಅಪ್‍ಡೇಟ್ ಕೊಡಿ ಎಂದು ಅಪ್ಪು ಫ್ಯಾನ್ಸ್ ನಿರ್ದೇಶಕ ಸಂತೋಷ್ ಆನಂದ ರಾಮ್ ಬೆನ್ನು ಹತ್ತಿದ್ದಾರೆ. ರಾಜಕುಮಾರ ನಂತರ ಜೊತೆಯಾಗಿರೋ ತ್ರಿಮೂರ್ತಿಗಳ ಕಾಂಬಿನೇಷನ್ ಸಿನಿಮಾ ಅದು. ನಿರೀಕ್ಷೆ ಸಹಜವೇ.

  ಈಗ ಚಿತ್ರದ 2ನೇ ಹಂತದ ಡಬ್ಬಿಂಗ್ ಶುರುವಾಗಿದೆಯಂತೆ. ಇದು ಸದ್ಯದ ಅಪ್‍ಡೇಟ್. ಪುನೀತ್ ಜೊತೆ ಸೋಷಿಯಲ್ ಡಿಸ್ಟೆನ್ಸ್‍ನಲ್ಲಿರೋ ಫೋಟೋ ಶೇರ್ ಮಾಡಿರುವ ಸಂತೋಷ್, ಅಭಿಮಾನಿಗಳ ಥ್ರಿಲ್ ಹೆಚ್ಚಿಸಿದ್ದಾರೆ. ಹೊಂಬಾಳೆ ಫಿಲಂಸ್, ವಿಜಯ್ ಕಿರಗಂದೂರು, ಸಂತೋಷ್ ಆನಂದ್‍ರಾಮ್ ಮತ್ತೆ ಜೊತೆಯಾಗಿರುವ ಚಿತ್ರ ಯುವರತ್ನ.

   

 • ಯುವರತ್ನ ಅಪ್‍ಡೇಟ್

  yuvaratna movie updates

  ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಯುವರತ್ನ ಚಿತ್ರದ ಸೆನ್ಸೇಷನ್ ಅಪ್‍ಡೇಟ್ ಇದು. ಯುವರತ್ನ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ. ಒಂದಿಷ್ಟು ಹಾಡುಗಳ ಶೂಟಿಂಗ್ ಬ್ಯಾಲೆನ್ಸ್ ಇದೆ. ಈಗ ಚಿತ್ರದ ಇಂಟ್ರೊಡಕ್ಷನ್ ಸಾಂಗ್ ಶೂಟಿಂಗ್‍ಗೆ ಮುಹೂರ್ತ ಫಿಕ್ಸ್ ಆಗಿದೆ.

  ಸೆ.20ರಿಂದ ಸಾಂಗ್ ಶೂಟಿಂಗ್ ಶುರುವಾಗಲಿದ್ದು, ಡ್ಯಾನ್ಸ್ ಅಪ್ಪು ಡ್ಯಾನ್ಸ್ ಖ್ಯಾತಿಯ ಜಾನಿ ಮಾಸ್ಟರ್ ಅವರದ್ದೇ ಕೊರಿಯೋಗ್ರಫಿ ಎಂದು ಮಾಹಿತಿ ಕೊಟ್ಟಿದ್ದಾರೆ ಡೈರೆಕ್ಟರ್ ಸಂತೋಷ್ ಆನಂದರಾಮ್. ಪುನೀತ್, ಹೊಂಬಾಳೆ ಕಂಬೈನ್ಸ್ ಮತ್ತು ವಿಜಯ್ ಕಿರಗಂದೂರು ಜೊತೆ ಸಂತೋಷ್ ಆನಂದ್ ರಾಮ್ ಕಾಂಬಿನೇಷನ್‍ನ ಚಿತ್ರವಿದು. ಮಲ್ಟಿಸ್ಟಾರ್ ಚಿತ್ರವಾಗಿರೋ ಯುವರತ್ನ, 2021ರ ಆರಂಭದಲ್ಲಿ ರಿಲೀಸ್ ಆಗುವ ಸಾಧ್ಯತೆಗಳಿವೆ.

   

 • ಯುವರತ್ನ ಅಪ್ಪು ಎದುರೂ ಡಾಲಿನೇ ವಿಲನ್..!

  dhananjay to play baddie in puneeth's yuvaratna

  ಟಗರು ಚಿತ್ರದ ಡಾಲಿ ಪಾತ್ರದ ನಂತರ ಹೀರೋ, ವಿಲನ್ ಎಂದು ತಲೆಕೆಡಿಸಿಕೊಳ್ಳದ ಧನಂಜಯ್, ಇಷ್ಟವಾದ ಪಾತ್ರಗಳನ್ನೆಲ್ಲ ಮಾಡುತ್ತಿದ್ದಾರೆ. ಈಗ ಪುನೀತ್ ಅವರ ಯುವರತ್ನ ಚಿತ್ರಕ್ಕೆ ವಿಲನ್ ಆಗಿ ಕಮಿಟ್ ಆಗಿದ್ದಾರೆ. ಅಲ್ಲಿಗೆ ಇದು ಅವರಿಗೆ ವಿಲನ್ ಆಗಿ 3ನೇ ಸಿನಿಮಾ. ಏಕಂದ್ರೆ, ಈಗಾಗಲೇ ಟಗರುನಲ್ಲಿ ವಿಲನ್ ಆಗಿದ್ರು. ಧ್ರುವ ಸರ್ಜಾರ ಪೊಗರುನಲ್ಲೂ ಅವರೇ ವಿಲನ್ನು. ಜಗಪತಿ ಬಾಬು ಜೊತೆ. ಈಗ ಯುವರತ್ನ ಚಿತ್ರಕ್ಕೂ ವಿಲನ್. ದುನಿಯಾ ವಿಜಿಯವರ ಸಲಗ ಚಿತ್ರದಲ್ಲೂ ಅವರೇ ವಿಲನ್ ಅಂತೆ.

  ಅಂದಹಾಗೆ.. ದರ್ಶನ್ ಅವರ ಯಜಮಾನ ಚಿತ್ರದಲ್ಲಿ ಅವರು ವಿಲನ್ ಅಲ್ಲ. ತೋತಾಪುರಿಯಲ್ಲೂ ಅವರದ್ದು ಸಣ್ಣ ಪಾತ್ರ.

  ಇದೆಲ್ಲದರ ಜೊತೆಗೆ ಹೀರೋ ಆಗಿ ಪಾಪ್‍ಕಾರ್ನ್ ಮಂಕಿ ಟೈಗರ್, ಡಾಲಿ ಚಿತ್ರಗಳಿವೆ. 

  `ನಾನು ಬಂದಿದ್ದು ರಂಗಭೂಮಿಯಿಂದ. ಕೊಟ್ಟ ಪಾತ್ರಕ್ಕೆ ಜೀವ ತುಂಬಬೇಕು. ಇಂಥದ್ದೇ ಪಾತ್ರ ಎಂದು ಕೂರಬಾರದು. ಈ ಕಾರಣಕ್ಕೆ ಸಿಗುತ್ತಿರುವ, ಇಷ್ಟವಾಗುತ್ತಿರುವ ಪಾತ್ರಗಳನ್ನು ಹೀರೋ, ವಿಲನ್, ಪೋಷಕ ಪಾತ್ರ ಎಂದು ನೋಡದೆ ಒಪ್ಪಿಕೊಳ್ಳುತ್ತಿದ್ದೇನೆ' ಎಂದಿದ್ದಾರೆ ಧನಂಜಯ್.

 • ಯುವರತ್ನ ಕ್ರೇಜ್ : ಥಿಯೇಟರೇ ಕಾಣ್ತಿಲ್ಲ..!

  ಯುವರತ್ನ ಕ್ರೇಜ್ : ಥಿಯೇಟರೇ ಕಾಣ್ತಿಲ್ಲ..!

  ಸ್ಟಾರ್ ನಟರ ಚಿತ್ರವನ್ನು ಅಭಿಮಾನಿಗಳು ಹಬ್ಬದಂತೆಯೇ ಸ್ವಾಗತಿಸುತ್ತಾರೆ. ಇನ್ನು ಈಗ ಬರುತ್ತಿರೋದು ಪುನೀತ್ ರಾಜ್‍ಕುಮಾರ್ ಸಿನಿಮಾ. ಪುನೀತ್ ಅವರನ್ನು ಸ್ಟಾರ್ ನಟ, ಡಾ.ರಾಜ್ ಪುತ್ರ, ಶಿವಣ್ಣನ ತಮ್ಮ ಎನ್ನುವುದಕ್ಕಿಂತ ಹೆಚ್ಚಾಗಿ ಅವರನ್ನು ಮನೆಮಗನಂತೆ ಕಾಣುವವರ ಸಂಖ್ಯೆ ಹೆಚ್ಚು. ಹೀಗಾಗಿಯೇ ಈ ಬಾರಿ ಯುವರತ್ನನ ಕ್ರೇಜ್ ಬೇರೆಯೇ ಲೆವೆಲ್‍ನಲ್ಲಿದೆ.

  ಚಾಮರಾಜನಗರದಲ್ಲಂತೂ ಥಿಯೇಟರೇ ಕಾಣಿಸದಂತೆ ಥಿಯೇಟರ್‍ನ್ನು ಪೋಸ್ಟರ್, ಕಟೌಟುಗಳಿಂದ ಅಭಿಮಾನಿಗಳು ಮುಚ್ಚಿಬಿಟ್ಟಿದ್ದಾರೆ. ಹಾಸನ, ಬಳ್ಳಾರಿಗಳಲ್ಲೂ ಇದೇ ಪರಿಸ್ಥಿತಿ.

  ಕಟೌಟ್‍ಗಳನ್ನು ನಿರ್ಮಾಪಕರೇ ಹಾಕಬೇಕೆಂದೇನೂ ಇಲ್ಲ. ಅಭಿಮಾನಿಗಳೂ ನಿಲ್ಲಿಸಿದ್ದಾರೆ. ಇನ್ನು ಮಲ್ಟಿಪ್ಲೆಕ್ಸುಗಳಲ್ಲಿ ಮಕ್ಕಳು, ಯುವರತ್ನನ ಸ್ಟಾಂಡೀ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಖುಷಿ ಪಡುತ್ತಿದ್ದಾರೆ. ದೇವಸ್ಥಾನಗಳಲ್ಲಿ ಯುವರತ್ನ ಚಿತ್ರದ ಯಶಸ್ಸಿಗೆ ಪೂಜೆ, ಪುನಸ್ಕಾರಗಳೂ ನಡೆಯುತ್ತಿವೆ. ಪವರ್ ಆಫ್ ಯೂಥ್.. ಅಷ್ಟೆ..

 • ಯುವರತ್ನ ಚಿತ್ರಕ್ಕೆ ಸುಧಾರಾಣಿ ಎಂಟ್ರಿ

  sudharani joins yuvaratna team

  ಯುವರತ್ನ ಚಿತ್ರದ ತಾರಾಬಳಗ ದೊಡ್ಡದಾಗುತ್ತಲೇ ಹೋಗುತ್ತಿದೆ. ಈಗ ಯುವರತ್ನ ಚಿತ್ರ ತಂಡಕ್ಕೆ ಸುಧಾರಾಣಿ ಬಂದಿದ್ದಾರೆ. ಸುಧಾರಾಣಿಯವರ ಪಾತ್ರ ಏನು ಅನ್ನೋದು ಸದ್ಯಕ್ಕೆ ಸಸ್ಪೆನ್ಸ್. ಸುಧಾರಾಣಿಯವರ ಜೊತೆಗೆ ಅಚ್ಯುತ್ ಕುಮಾರ್, ರವಿಶಂಕರ್ ಗೌಡ, ಗುರುದತ್, ಕುರಿ ಪ್ರತಾಪ್, ಪ್ರಕಾಶ್ ಬೆಳವಾಡಿ ಕೂಡಾ ಜಾಯಿನ್ ಆಗಿದ್ದಾರೆ.

  ಈಗಾಗಲೇ ಚಿತ್ರದಲ್ಲಿ ಪ್ರಕಾಶ್ ರೈ, ದಿಗಂತ್, ಸಾಯಿ ಕುಮಾರ್, ಸೋನುಗೌಡ, ಧನಂಜಯ್, ರಾಧಿಕಾ ಶರತ್ ಕುಮಾರ್, ಆರುಗೌಡ, ವಸಿಷ್ಠ ಸಿಂಹ, ಟಗರು ತ್ರಿವೇಣಿ ಇದ್ದಾರೆ. ಪುನೀತ್‍ಗೆ ಸಯೇಷಾ ನಾಯಕಿ.

  ಸಂತೋಷ್ ಆನಂದರಾಮ್ ನಿರ್ದೇಶನದ ಯುವರತ್ನ, ಹೊಂಬಾಳೆ, ಪುನೀತ್ ಮತ್ತು ಸಂತೋಷ್ ಕಾಂಬಿನೇಷನ್‍ನಿಂದಾಗಿಯೇ ಭಾರಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ.

 • ಯುವರತ್ನ ಚಿತ್ರದ ಕಥೆಯ ಗುಟ್ಟು ರಟ್ಟಾಯ್ತು..!

  what is yuvaratna story

  ಯುವರತ್ನ ಚಿತ್ರಕ್ಕೆ ಅಭಿಮಾನಿಗಳು ಅದೆಷ್ಟು ಕಾತರದಿಮದ ಕಾಯುತ್ತಿದ್ದಾರೆಂದರೆ, ನಿರ್ದೇಶಕರಿಗೇ ಟೆನ್ಷನ್ ಶುರುವಾಗಿದೆ. ಅಭಿಮಾನಿಗಳೇ ಒಂದು ರಿಲೀಸ್ ಡೇಟ್ ಫಿಕ್ಸ್ ಮಾಡಿ ಕ್ಯಾಂಪೇನ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಸಿಟ್ಟಿನಲ್ಲಿ ನಿರ್ದೇಶಕರಿಗೇ ಮೆಸೇಜ್ ಮಾಡುತ್ತಿದ್ದಾರೆ. ಹಾಗೆಲ್ಲ ಮಾಡಬೇಡಿ, ಒಳ್ಳೆಯ ಸಿನಿಮಾ ಬರಲಿದೆ ಎಂದು ಹೇಳಿರುವ ನಿರ್ದೇಶಕ ಸಂತೋಷ್ ಆನಂದ್ ರಾಮ್, ಕಥೆಯ ಗುಟ್ಟೊಂದನ್ನು ಬಿಟ್ಟುಕೊಟ್ಟಿದ್ದಾರೆ.

  ರಾಜಕುಮಾರ ಚಿತ್ರದಲ್ಲಿ ಮೆಡಿಕಲ್ ಮಾಫಿಯಾ, ವೃದ್ಧಾಶ್ರಮದ ಕಥೆಯಿತ್ತು. ಯುವರತ್ನ ಚಿತ್ರದಲ್ಲಿ ಎಜುಕೇಷನ್ ಮಾಫಿಯಾ ಹಾಗೂ ಅದರ ವಿರುದ್ಧ ನಾಯಕ ಹೇಗೆಲ್ಲ ಹೋರಾಡುತ್ತಾನೆ ಎನ್ನುವ ಕಥೆಯಿದೆ. ಈ ಮಾಫಿಯಾದಿಂದಾಗಿಯೇ ಹೈಯರ್ ಎಜುಕೇಷನ್ ಸಾಮಾನ್ಯರ ಕೈಗೆ ಸಿಗುತ್ತಿಲ್ಲ ಎಂಬ ಕಥೆಯನ್ನು ಕಟ್ಟಿಕೊಟ್ಟಿದ್ದೇವೆ ಎಂದಿದ್ದಾರೆ ನಿರ್ದೇಶಕ ಸಂತೋಷ್ ಆನಂದರಾಮ್.

  ಹೀರೋ ಪುನೀತ್, ಡೈರೆಕ್ಟರ್ ಸಂತೋಷ್ ಮತ್ತು ಪ್ರೊಡ್ಯೂಸರ್ ವಿಜಯ್ ಕಿರಗಂದೂರು. ರಾಜಕುಮಾರ ನಂತರ ಜೊತೆಯಾಗಿರುವ ತ್ರಿಮೂರ್ತಿಗಳ ಜೋಡಿ. ಜೊತೆಗೆ ಅತಿ ದೊಡ್ಡ ತಾರಾಬಳಗ. ದಸರಾಗೆ ಟೀಸರ್ ಬಿಡುತ್ತಿರುವ ಚಿತ್ರತಂಡ, ರಿಲೀಸ್ ಡೇಟ್‍ನ್ನು ಇನ್ನೂ ಅನೌನ್ಸ್ ಮಾಡಿಲ್ಲ.

 • ಯುವರತ್ನ ಟೀಂಗೆ ಇನ್ನೊಬ್ಬರು ಸ್ಟಾರ್ ಎಂಟ್ರಿ..!

  yuvaratna completes 3rd schedule

  ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಯುವರತ್ನ ಚಿತ್ರದಲ್ಲಿ ಈಗಾಗಲೇ ದೊಡ್ಡ ದೊಡ್ಡ ಸ್ಟಾರ್‍ಗಳೇ ಇದ್ದಾರೆ. ನಿರ್ಮಾಪಕ ವಿಜಯ್ ಕಿರಗಂದೂರು, ನಿರ್ದೇಶಕ ಸಂತೋಷ್ ಆನಂದ್‍ರಾಮ್, ಈಗ ಯಾವ ಸ್ಟಾರ್‍ಗಳಿಗೂ ಕಡಿಮೆಯೇನಲ್ಲ. ಜೊತೆಗೆ ರಾಧಿಕಾ ಶರತ್‍ಕುಮಾರ್, ಡಾಲಿ ಧನಂಜಯ್ ನಟಿಸುತ್ತಿದ್ದಾರೆ. ಸಯೇಷಾ ಸೈಗಲ್ ನಾಯಕಿ.

  ಇಷ್ಟೆಲ್ಲ ಸ್ಟಾರ್‍ಗಳ ಜೊತೆ ಇನ್ನೊಬ್ಬರು ಖ್ಯಾತ ಕಲಾವಿದರು ಚಿತ್ರತಂಡ ಸೇರಿಕೊಳ್ಳಲಿದ್ದಾರಂತೆ. ಅವರ್ಯಾರು ಅನ್ನೋದು ಸದ್ಯಕ್ಕೆ ಸಸ್ಪೆನ್ಸ್. 

  ಅಂದಹಾಗೆ ಯುವರತ್ನ ಚಿತ್ರಕ್ಕೆ 10 ಶೆಡ್ಯೂಲ್‍ಗಳಲ್ಲಿ ಒಟ್ಟು 100 ದಿನ ಶೂಟಿಂಗ್ ನಡೆಯಲಿದೆ. ಸದ್ಯಕ್ಕೆ 3 ಹಂತದ ಶೂಟಿಂಗ್ ಮುಗಿದಿದೆ. ಕ್ರಿಸ್‍ಮಸ್‍ಗೆ ಸಿನಿಮಾ ರಿಲೀಸ್ ಮಾಡಲಿದ್ದೇವೆ ಎಂದಿದ್ದಾರೆ ಸಂತೋಷ್ ಆನಂದ್‍ರಾಮ್.

 • ಯುವರತ್ನ ಟೀಂಗೆ ಭಗವಾನ್

  bhagwan joins yuvaratna team

  ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಸಂತೋಷ್ ಆನಂದರಾಮ್, ವಿಜಯ ಕಿರಗಂದೂರು ಕಾಂಬಿನೇಷನ್ನಿನ ಸಿನಿಮಾ ಯುವರತ್ನ. ಆ ಚಿತ್ರಕ್ಕೆ ಈಗಾಗಲೇ ಘಟಾನುಘಟಿಗಳು ಆಯ್ಕೆಯಾಗಿದ್ದಾರೆ. ಈಗ ಆ ಘಟಾನುಘಟಿಗಳ ತಂಡಕ್ಕೆ ಹಿರಿಯ ನಿರ್ದೇಶಕ ಭಗವಾನ್ ಸೇರಿಕೊಂಡಿದ್ದಾರೆ.

  ಕನ್ನಡಕ್ಕೆ ಹಲವಾರು ಗ್ರೇಟ್ ಚಿತ್ರಗಳನ್ನು ನೀಡಿರುವ ಭಗವಾನ್‍ಗೆ ಆ್ಯಕ್ಷನ್ ಹೇಳುತ್ತಿರುವುದು ನನ್ನ ಸೌಭಾಗ್ಯ ಎಂದಿದ್ದಾರೆ ನಿರ್ದೇಶಕ ಸಂತೋಷ್ ಆನಂದರಾಮ್. ಚಿತ್ರದ ಮೊದಲ ಹಂತದ ಶೂಟಿಂಗ್ ಮುಗಿದಿದೆ.

 • ಯುವರತ್ನ ಟೀಂಗೆ ಸಾಯಿಕುಮಾರ್, ರಂಗಾಯಣ ರಘು

  saikumar joins yuvaratna movie cast

  ಯುವರತ್ನ ಚಿತ್ರದ ತಾರಾಬಳಗ ದೊಡ್ಡದು..ದೊಡ್ಡದು.. ಇನ್ನೂ ದೊಡ್ಡದಾಗುತ್ತಿದೆ. ಪುನೀತ್ ರಾಜ್‍ಕುಮಾರ್‍ಗೆ ಸಯೇಷಾ ಜೋಡಿ. ಇನ್ನು ಚಿತ್ರದಲ್ಲಿ ರಾಧಿಕಾ ಶರತ್ ಕುಮಾರ್, ಡಾಲಿ ಧನಂಜಯ್, ದಿಗಂತ್, ಪ್ರಕಾಶ್ ರೈ, ಸೋನು ಗೌಡ, ವಸಿಷ್ಠ ಸಿಂಹ, ತ್ರಿವೇಣಿ ರಾವ್.. ಹೀಗೆ ದೊಡ್ಡ ತಾರಾಬಳಗವೇ ಇದೆ.

  ಇವರೆಲ್ಲರ ಜೊತೆಯಲ್ಲೀಗ ಸಾಯಿ ಕುಮಾರ್ ಸೇರಿಕೊಂಡಿದ್ದಾರೆ. ಪುನೀತ್ ಚಿತ್ರದಲ್ಲಿ ಸಾಯಿಕುಮಾರ್ ನಟಿಸುತ್ತಿರುವುದು ಇದೇ ಮೊದಲು. ಅಷ್ಟೇ ಅಲ್ಲ, ರಂಗಾಯಣ ರಘು ಕೂಡಾ ಯುವರತ್ನ ಟೀಂಗೆ ಎಂಟ್ರಿ ಕೊಟ್ಟಿದ್ದಾರೆ.

  ಸಂತೋಷ್ ಆನಂದ್‍ರಾಮ್, ಹೊಂಬಾಳೆ ಫಿಲಂಸ್, ವಿಜಯ್ ಕಿರಗಂದೂರು ಮತ್ತು ಪುನೀತ್ ರಾಜ್‍ಕುಮಾರ್ ಕಾಂಬಿನೇಷನ್ನಿನ ಸಿನಿಮಾದ ಕ್ಯಾನ್‍ವಾಸ್ ದೊಡ್ಡದಾಗುತ್ತಲೇ ಇದೆ.

 • ಯುವರತ್ನ ಟೀಸರ್ : ಸೆಲಬ್ರಿಟಿಗಳ ರಿಯಾಕ್ಷನ್ ಹೇಗಿದೆ..?

  yuvaratna trailer launch

  ಹೊಂಬಾಳೆ ಫಿಲಂಸ್, ಸಂತೋಷ್ ಆನಂದ್ ರಾಮ್ ಡೈರೆಕ್ಷನ್, ವಿಜಯ್ ಕಿರಗಂದೂರು ಪ್ರೊಡಕ್ಷನ್, ಪುನೀತ್ ರಾಜ್ಕುಮಾರ್ ಌಕ್ಷನ್. ದಸರಾಗೆ ರಿಲೀಸ್ ಆದ ಯುವರತ್ನ ಟೀಸರ್ ಬಗ್ಗೆ ಎಲ್ಲೆಲ್ಲೂ ಮೆಚ್ಚುಗೆಯ ಸುರಿಮಳೆ. ಯುವರತ್ನ ಟೀಸರ್ ಬಗ್ಗೆ.. ಯಾಱರು.. ಏನೇನೆಲ್ಲ ಹೇಳಿದ್ದಾರೆ. ಇಲ್ಲಿದೆ ಡೀಟೈಲ್ಸ್.

  ಸಂಜಯ್ ದತ್ : ನೋಡೋಕೆ ಸಖತ್ತಾಗಿದೆ. ಯುವರತ್ನ ಟೀಂಗೆ ಒಳ್ಳೆಯದಾಗಲಿ.

  ಕಿಚ್ಚ ಸುದೀಪ್ : ಪುನೀತ್ ಇನ್ನೂ 10 ವರ್ಷ ಯಂಗ್ ಆಗಿ ಕಾಣಿಸುತ್ತಿದ್ದಾರೆ. ಬಟರ್ ಕೇಕ್ ಮೇಲಿನ ಚೆರ್ರಿ ಹಣ್ಣು ಇದ್ದ ಹಾಗಿದೆ.

  ರಕ್ಷಿತ್ ಶೆಟ್ಟಿ : ಪುನೀತ್ ಸರ್, 20 ವರ್ಷದವರಾಗಿದ್ದಾಗ ಇದ್ದ ಹಾಗೆ ಕಾಣ್ತಿದ್ದಾರೆ.

  ರಿಷಬ್ ಶೆಟ್ಟಿ : ಫೆಂಟಾಸ್ಟಿಕ್

  ಮಾನ್ವಿತಾ ಹರೀಶ್ : ಟೀಸರ್ ಅಂದ್ರೆ ಇದು ಗುರು

  ಕಬೀರ್ ಸಿಂಗ್ ದುಲ್ಹನ್ : ಫ್ಯಾಬುಲಸ್

  ನೀನಾಸಂ ಸತೀಶ್ : ದಸರಾ ಹಬ್ಬಕ್ಕೆ ಬೋನಸ್

  ಪ್ರೀತಮ್ ಗುಬ್ಬಿ : ಆಟ ಆಡ್ತಿರೋದು ಪುನೀತ್. ಮೈದಾನವೂ ಅವರದ್ದೇ.. ರೂಲ್ಸೂ ಅವರದ್ದೇ..

  ಸಿಂಪಲ್ ಸುನಿ : ರೂಲ್ ಮಾಡಲು ಹೊರಟಿರುವ ಪುನೀತ್. ಕೊನೆಯ ಫ್ರೇಮ್ ಅಂತೂ ಅದ್ಭುತ

  ಅನೂಪ್ ಭಂಡಾರಿ : ರೂಲ್ ಮಾಡೋಕೆ ಬಂದ ಹಾಗಿದೆ

  ಪೈಲ್ವಾನ್ ಕೃಷ್ಣ : ಪವರ್ ಫುಲ್.. ಯೂತ್ ಫುಲ್.. ಎನರ್ಜೆಟಿಕ್..

  ಡಾಲಿ ಧನಂಜಯ್ : ಡೈರೆಕ್ಟರ್ ಸಂತೋಷ್ ಆನಂದ್ ರಾಮ್ ಹ್ಯಾಟ್ರಿಕ್ ಬಾರಿಸಲಿ

  ಪವನ್ ಒಡೆಯರ್ : ವೆರಿ ವೆರಿ ಪವರ್ ಫುಲ್.. ವೆರಿ ವೆರಿ ಸ್ಟೈಲಿಷ್.. ವೆರಿ ವೆರಿ ಅಗ್ರೆಸ್ಸಿವ್..

  ಪ್ರಶಾಂತ್ ನೀಲ್ : ಒಂದೊಂದು ಬಿಟ್ ಕೂಡಾ ಪ್ರೀತಿ ಹುಟ್ಟಿಸುವಂತಿದೆ. ಇನ್ನೊಂದು ಬ್ಲಾಕ್ ಬಸ್ಟರ್ ಆಗಲಿದೆ

  ಅಶಿಕಾ ರಂಗನಾಥ್ : ವ್ಹಾಟ್ ಎ ಪವರ್.  ಪವರ್ ಫುಲ್ ಟೀಸರ್

  ಸಯ್ಯೇಷಾ : ಓಹೋ.. ಇಲ್ನೋಡಿ..ಅಪ್ಪು ಸರ್..

  ತರುಣ್ ಸುಧೀರ್ : ಸೂಪರ್ಬ್ ಲುಕಿಂಗ್

  ಭಾವನಾ ರಾವ್ : ವ್ಹಾವ್.. ಲವ್ಲಿ

 • ಯುವರತ್ನ ಟೀಸರ್ ವ್ಹಾರೆವ್ಹಾ.. ಹೊಡೀರೋ ವಿಸಲ್ಲು..

  yuvaratna dialogue promo specialty

  ಡೈಲಾಗ್ ಟೀಸರ್. 1.39 ನಿಮಿಷ. ಅಷ್ಟೂ ಹೊತ್ತು ಶಿಳ್ಳೆ.. ಚಪ್ಪಾಳೆ.. ಹೊಡೆಯಬೇಕು ಎನ್ನಿಸೋ ಡೈಲಾಗು.. ಇದು ಯುವರತ್ನ ಟೀಸರ್ ಸ್ಪೆಷಲ್. ಟೀಸರ್ ಶುರು ಮಾಡೋದು ಡಾಲಿ.

  ಡೈಲಾಗ್ ನಂ.1 :

  ಗಂಡಸ್ತನ.. ಛರ್ಬಿ.. ಮೀಟರು.. ಮಾರ್ಕೆಟ್ಟು.. ಎಲ್ಲ ಇರುವವನು ಬೇಕು.. ಸಿಗ್ತಾನಾ..

  ಡೈಲಾಗ್ ನಂ. 2:

  ಕಾಲೇಜಲ್ಲಿ ಹೊಡೆದಾಡಿ ಡಾನ್ ಆಗ್ಬೇಕು ಅಂದ್ಕೊಂಡಿದ್ದೀಯಾ..

  ಸೀಟ್‍ಗಾಗಿ ಹೊಡೆದಾಡೋನು ಡಾನು.. ಅದರ ಮೇಲೆ ಕೂತ್ಕೊಳ್ಳೋನು.. (ಕಿಂಗ್ ಎಲೆ ಪ್ರತ್ಯಕ್ಷ)

  ಡೈಲಾಗ್ ನಂ.3 :

  ಹೀರೋಯಿನ್ : ನೀವು ನೋಡೋಕೆ ಅಣ್ಣಾವ್ರ ತರಾನೇ ಇದ್ದೀರ.

  ಅಪ್ಪು : ಥ್ಯಾಂಕ್ಯೂ.. ಆದರೆ ನನ್ನನ್ನ ಅಣ್ಣ ಅಂದ್ಕೋಬೇಡಿ

  ಡೈಲಾಗ್ ನಂ.4 :

  ಖದರ್ ಇಲ್ಲದ ಕಡೆ ನಮ್ಮ ಹುಡುಗ್ರೇ ಇರಲ್ಲ, ಇನ್ನು ನಾನ್ ಇರ್ತೀನಾ..

  ಡೈಲಾಗ್ ನಂ. 5 :

  ಆರ್‍ಸಿಬಿ ಮ್ಯಾಚ್ ಗೆಲ್ಬೋದು, ಕಪ್ ಗೆಲ್ಲೋಕೆ ಆಗಲ್ಲ

  ನಾವ್ ನಂಬಿಕೆ ಕಳೆದುಕೊಂಡಿಲ್ಲ. ಕಳೆದುಕೊಳ್ಳೋದೂ ಇಲ್ಲ. ಬ್ಯಾಟ್ ಬಾಲ್ ಇದೆ ಅಂತಾ ಫೀಲ್ಡಿಗಿಳಿದೋನಲ್ಲ ನಾನು, ಹೊಡೀತೀವಿ ಅನ್ನೋ ಕಾನ್ಫಿಡೆನ್ಸ್ ಇರೋದಿಕ್ಕೇ ಫೀಲ್ಡಿಗೆ ಇಳಿದಿರೋದು..

  ಸಂತೋಷ್ ಆನಂದ ರಾಮ್ ಪೆನ್ನಿನಲ್ಲಿಯೇ ಪರಾಕ್ರಮ ಮೆರೆದಿದ್ದಾರೆ. ಅಪ್ಪು ಖದರ್ ಅಪ್ಪುವನ್ನೇ ನೆನಪಿಸಿದ್ರೆ, ನಾಯಕ ಸಯ್ಯೇಷಾ ಜೊತೆಗಿನ ಒಂದೇ ಒಂದು ತುಂಟತನದ ಡೈಲಾಗ್ ಮುಖದ ಮೇಲೆ ನಗು ಮೂಡಿಸುತ್ತೆ. ಹೊಂಬಾಳೆ ಪ್ರೊಡಕ್ಷನ್ಸ್‍ನಲ್ಲಿ ಪುನೀತ್ ಅವರಿಗೆ ಇದು 3ನೇ ಸಿನಿಮಾ. ರಾಜಕುಮಾರ ನಂತರ ಪ್ರೊಡ್ಯೂಸರ್, ಡೈರೆಕ್ಟರ್ ಮತ್ತು ಹೀರೋ ಮತ್ತೆ ಒಟ್ಟಿಗೇ ಸೇರಿರುವ ಚಿತ್ರ ಯುವರತ್ನ

 • ಯುವರತ್ನ ತೆಲುಗು ರೈಟ್ಸ್ ಯಾರಿಗೆ ಸಿಕ್ತು..? 

  ಯುವರತ್ನ ತೆಲುಗು ರೈಟ್ಸ್ ಯಾರಿಗೆ ಸಿಕ್ತು..? 

  ಯುವರತ್ನ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ಪುನೀತ್ ರಾಜ್ಕುಮಾರ್ ತೆಲುಗು ಚಿತ್ರರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ, ಅಫ್ಕೋರ್ಸ್, ಪುನೀತ್ ಅವರ ಹಲವು ಚಿತ್ರಗಳು ತೆಲುಗಿಗೆ ಡಬ್ ಆಗಿವೆ. ಆದರೂ, ಥಿಯೇಟರಿಗೆ ಎಂಟ್ರಿ ಕೊಡ್ತಿರೋ ಫಸ್ಟ್ ಮೂವಿ ಯುವರತ್ನ. ಯುವರತ್ನ ಚಿತ್ರತಂಡಕ್ಕೀಗ ಗುಡ್ ನ್ಯೂಸ್ ಸಿಕ್ಕಿದೆ. ಯುವರತ್ನ ಚಿತ್ರದ ತೆಲುಗು ಡಿಸ್ಟ್ರಿಬ್ಯೂಷನ್ ಹಕ್ಕನ್ನು ವಾರಾಹಿ ಸಂಸ್ಥೆ ಖರೀದಿಸಿದೆ ಎಂಬ ಸುದ್ದಿ ಬಂದಿದೆ.

  ವಾರಾಹಿ ಸಂಸ್ಥೆಗೂ, ಹೊಂಬಾಳೆ ಫಿಲಂಸ್ಗೂ ಅವಿನಾಭಾವ ಸಂಬಂಧವಿದೆ. ಕೆಜಿಎಫ್ ಚಾಪ್ಟರ್ 1 ಚಿತ್ರವನ್ನು ತೆಲುಗಿನಲ್ಲಿ ರಿಲೀಸ್ ಮಾಡಿದ್ದುದು ಇದೇ ಸಂಸ್ಥೆ. ಬಾಹುಬಲಿಯಂತಾ ಸಿನಿಮಾ ಮಾಡಿದ ವಾರಾಹಿ, ತೆಲುಗು ಮಾರ್ಕೆಟ್ನಲ್ಲಿ ದೊಡ್ಡ ಹೆಸರು ಹೊಂದಿದೆ.

  ಯುವರತ್ನ ಚಿತ್ರದ ಪ್ರಮೋಷನ್ ಶುರುವಾಗಿದ್ದು, ವೈಜಾಗ್ನಲ್ಲಿ ವಾರಾಹಿ ಸಂಸ್ಥೆ ಬಿಡುಗಡೆ ಮಾಡುತ್ತಿದೆ. ನಿಜಾಮ್‌ ಜಿಲ್ಲೆಯಲ್ಲಿ ದಿಲ್ ರಾಜು ಅವರ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್, ನೆಲ್ಲೂರು ಜೆಪಿಆರ್ ಫಿಲಂಸ್, ಗುಂಟೂರು ಧನುಶ್ರೀ ಫಿಲಂಸ್, ಕೃಷ್ಣ ಅನ್ನಪೂರ್ಣ ಸ್ಟುಡಿಯೋಸ್ ಲಿಮಿಟೆಡ್, ಪಶ್ಚಿಮ ಗೋವಾದರಿ ಇಶ್ನಾ ಎಂಟರ್‌ಪ್ರೈಸಸ್ ಹಾಗೂ ಪೂರ್ವ ಗೋವಾದರಿ ಮಹಿಕಾ ಮೂವಿಸ್ ಸಂಸ್ಥೆ ಯುವರತ್ನ ಚಿತ್ರವನ್ನು ರಿಲೀಸ್ ಮಾಡಲಿವೆ. ಯುವರತ್ನ ತೆಲುಗು ವಿತರಣೆ ಹಕ್ಕನ್ನು ತೆಲುಗಿನ ಖ್ಯಾತ ಸಂಸ್ಥೆಗಳು ಖರೀದಿಸಿವೆ.

  ಕರ್ನಾಟಕದಲ್ಲಿ ಎಂದಿನಂತೆ ಕಾರ್ತಿಕ್ ಗೌಡ ಅವರ ಕೆಆರ್ಜಿ ಸ್ಟುಡಿಯೋ ಸಿನಿಮಾ ರಿಲೀಸ್ ಮಾಡುತ್ತಿದೆ.

 • ಯುವರತ್ನ ಬುಕ್ಕಿಂಗ್ ಭಲೇ ಜೋರು

  ಯುವರತ್ನ ಬುಕ್ಕಿಂಗ್ ಭಲೇ ಜೋರು

  ಯುವರತ್ನ ರಿಲೀಸ್ ಆಗುತ್ತಿರೋದು ಏಪ್ರಿಲ 1ಕ್ಕೆ. ಅಲ್ಲಿಯವರೆಗೂ ಕಾಯೋಕೆ ಸಿದ್ಧವಿರುವ  ಅಭಿಮಾನಿಗಳು, ಆ ದಿನ ಸಿನಿಮಾ ನೋಡೋದನ್ನು ಪಕ್ಕಾ ಮಾಡಿಕೊಳ್ಳುತ್ತಿದ್ದಾರೆ. ಚಿತ್ರದ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಶುರುವಾದ ಮರುಕ್ಷಣದಿಂದಲೇ ಟಿಕೆಟ್ ಖರೀದಿ ಜೋರಾಗಿದೆ.

  ಬಹುತೇಕ ಮಲ್ಟಿಪ್ಲೆಕ್ಸ್, ಥಿಯೇಟರುಗಳು ಹೌಸ್‍ಫುಲ್. ಆ ದಿನ ಬೆಳಗ್ಗೆ 6 ಗಂಟೆಗೇ ಕೆಲವೆಡೆ ಶೋ ಶುರುವಾಗಲಿದೆ. ನಟಸಾರ್ವಭೌಮ ನಂತರ ಇದೇ ಮೊದಲ ಬಾರಿಗೆ ತೆರೆಗೆ ಬರುತ್ತಿದ್ದಾರೆ ಪುನೀತ್. ರಾಜಕುಮಾರ ನಂತರ ಸಂತೋಷ್-ಪುನೀತ್-ವಿಜಯ್ ಕಿರಗಂದೂರು ಮತ್ತೊಮ್ಮೆ ಜೊತೆಯಾಗಿರುವ ಚಿತ್ರವಿದು.

 • ಯುವರತ್ನ ರಿಲೀಸ್‌ ಡೇಟ್‌ ಫಿಕ್ಸ್..?

  has yuvaratana release ate been finalised

  ಪುನೀತ್,ಸಂತೋಷ್ ಆನಂದ ರಾಮ್, ಹೊಂಬಾಳೆ ಬ್ಯಾನರ್, ವಿಜಯ್ ಕಿರಗಂದೂರು ಕಾಂಬಿನೇಷನ್ನಿನ ಯುವರತ್ನ ರಿಲೀಸ್ ಡೇಟ್ ಯಾವಾಗ..? ಈ ಪ್ರಶ್ನೆಗೆ ಉತ್ತರ ಸಿಗುವ ಕಾಲ ಸನ್ನಿಹಿತವಾಗಿದೆ. ಈಗಾಗಲೇ ಯುವರತ್ನ ಚಿತ್ರದ ಬಹುತೇಕ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಜಾರಿಯಲ್ಲಿವೆ. ಹೀಗಿರುವಾಗಲೇ ಡಿಸೆಂಬರ್ 31ಕ್ಕೆ ಭರ್ಜರಿ ನ್ಯೂಸ್ ಸಿಗಲಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.

  ಹೌದಾ..? ಏನಿರಬಹುದು ಡಿ.31ರ ಭರ್ಜರಿ ನ್ಯೂಸ್..? ರಿಲೀಸ್ ಡೇಟ್ ಫಿಕ್ಸ್ ಆಗಿದೆಯಾ ಎಂಬ ಚರ್ಚೆಗಳು ಶುರುವಾಗಿಬಿಟ್ಟಿವೆ.

  ಕಾರಣ ಇಷ್ಟೆ, ಪುನೀತ್  ಅಭಿನಯದ ನಟಸಾರ್ವಭೌಮ ರಿಲೀಸ್ ಆಗಿ ಆಗಲೇ 10 ತಿಂಗಳಾಗಿದೆ. ಇನ್ನು  ಯುವರತ್ನ ಸೃಷ್ಟಿಸಿರುವ ಕ್ರೇಜೇ ಬೇರೆ. ಎಲ್ಲ ಪ್ಲಾನ್ ಪ್ರಕಾರವೇ ನಡೆದರೆ, 2020ರ ಏಪ್ರಿಲ್‌ ಮೊದಲ ವಾರದಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ. ಅಂದಹಾಗೆ ರಾಜಕುಮಾರ ರಿಲೀಸ್ ಆಗಿದ್ದುದು 2017ರ ಮಾರ್ಚ್ 24ರಂದು. ನೋಡೋಣ.. ಕಾಯೋಣ.

 • ಯುವರತ್ನ ರಿಲೀಸ್ ಸುಳ್ ಸುದ್ದಿ ಹಬ್ಬಿಸಿದ್ದು ಯಾರು..?

  yuvaratna release date clarification

  ಯುವರತ್ನ, ಸ್ಯಾಂಡಲ್‍ವುಡ್‍ನ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಕಾರಣವನ್ನು ಪದೇ ಪದೇ ಹೇಳುವ ಪ್ರಮೇಯವೇ ಇಲ್ಲ. ಪುನೀತ್, ಸಂತೋಷ್ ಆನಂದರಾಮ್ ಮತ್ತು ಹೊಂಬಾಳೆ ಫಿಲಂಸ್ ರಾಜಕುಮಾರ ನಂತರ ಮತ್ತೆ ಒಟ್ಟಾಗಿರುವ ಸಿನಿಮಾ ಇದು. ಈಗಾಗಲೇ ಟೀಸರ್ ಸೃಷ್ಟಿಸಿರುವ ಹವಾ ಬೇರೆಯದ್ದೇ ಲೆವೆಲ್ಲಿನಲ್ಲಿದೆ. ಹೀಗಿರೋವಾಗ ಇದ್ದಕ್ಕಿದ್ದಂತೆ ಒಂದು ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡೋಕೆ ಶುರುವಾಗುತ್ತೆ. ಮೇ 21ಕ್ಕೆ ಯುವರತ್ನ ರಿಲೀಸ್.

  ಅಂದಹಾಗೆ ಇದನ್ನು ಸೃಷ್ಟಿ ಮಾಡಿದವರು ಏಪ್ರಿಲ್ ಫೂಲ್ ಮಾಡೋಕೆ. ಆದರೆ, ಕಾದೂ ಕಾದೂ ಹಸಿದಿರುವ ಅಭಿಮಾನಿಗಳು ಅದು ಸುದ್ದಿಯಾಗಿದ್ದು ಏಪ್ರಿಲ್ 1ರಂದು ಅನ್ನೋದನ್ನೇ ಮರೆತುಬಿಟ್ಟರು. ಕೊನೆಗೆ ಏಪ್ರಿಲ್ ಫೂಲ್ ಸುದ್ದಿಗೆ ಸ್ವತಃ ಸಂತೋಷ್ ಆನಂದ ರಾಮ್ ಪ್ರತಿಕ್ರಿಯೆ ಕೊಟ್ಟರು.

  ಯುವರತ್ನ ಮೇ 21ಕ್ಕೆ ರಿಲೀಸ್ ಆಗುತ್ತಿಲ್ಲ. ಚಿತ್ರದ ಇನ್ನೂ ಕೆಲ ಭಾಗದ ಚಿತ್ರೀಕರಣ ಹಾಗೂ ಹಾಡುಗಳ ಚಿತ್ರೀಕರಣ ಮುಗಿದಿಲ್ಲ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಾಕಿ ಇವೆ. ಮೇ 21ಕ್ಕೆ ರಿಲೀಸ್ ಆಗಲ್ಲ.. ಆಗುತ್ತಿಲ್ಲ ಎಂದು ಸ್ಪಷ್ಟನೆ ಕೊಟ್ಟರು ಸಂತೋಷ್ ಆನಂದ ರಾಮ್.

 • ಯುವರತ್ನ ಶೂಟಿಂಗ್ ಮುಗೀತಾ..? ಇನ್ನೂ ಇದ್ಯಾ..?

  yuvaratna mvie ststus

  ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಯುವರತ್ನ ಚಿತ್ರದ ಟೀಸರ್ ಹೊರಬಿದ್ದಿದ್ದೇ ತಡ, ಅಭಿಮಾನಿಗಳದ್ದೆಲ್ಲ... ಒಂದೇ ಪ್ರಶ್ನೆ. ರಿಲೀಸ್ ಯಾವಾಗ..? ಇಷ್ಟಕ್ಕೂ ರಿಲೀಸ್ ಮಾಡಬೇಕು ಅಂದ್ರೆ ಶೂಟಿಂಗ್ ಮುಗಿದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲ ಮುಗಿಯಬೇಕಲ್ಲವೇ..? ಹಾಗಾದರೆ ಯುವರತ್ನ ಶೂಟಿಂಗ್ ಮುಗಿದಿದೆಯಾ..? ಈ ಪ್ರಶ್ನೆಗೆ ಒನ್ ವರ್ಡ್ ಉತ್ತರ : ಇಲ್ಲ.

  ಯುವರತ್ನ ಚಿತ್ರಕ್ಕೆ ಇದುವರೆಗೆ ಸುಮಾರು 70 ದಿನಗಳ ಶೂಟಿಂಗ್ ಆಗಿದ್ದು, ಇನ್ನೂ 30ರಿಂದ 35 ದಿನಗಳ ಶೂಟಿಂಗ್ ಇದೆ. ಹಾಡುಗಳ ಚಿತ್ರೀಕರಣ, ಪುನೀತ್ ಮತ್ತು ಧನಂಜಯ್ ನಡುವಿನ ಫೈಟ್ ಸೀನ್ ಇನ್ನೂ ಶೂಟಿಂಗ್ ಆಗಿಲ್ಲ. ಕಲಾವಿದರ ದಂಡೇ ಚಿತ್ರದಲ್ಲಿದೆ. ಅವರೆಲ್ಲರ ಡೇಟ್ಸ್ ಪರಸ್ಪರ ಹೊಂದಿಸುವ ಸವಾಲೂ ಇದೆ. 3 ಕಾಲೇಜುಗಳಲ್ಲಿ ಶೂಟಿಂಗ್ ನಡೆಯುತ್ತಿದೆ. ಸ್ಸೋ.. ಸದ್ಯಕ್ಕೆ ಯುವರತ್ನ ರಿಲೀಸ್ ಇಲ್ಲ. ಸಿಂಪಲ್ಲಾಗ್ ಹೇಳ್ಬೇಕಂದ್ರೆ 2019ಕ್ಕೆ ಯುವರತ್ನ ರಿಲೀಸ್ ಆಗೋದು ಡೌಟ್.

  ಸಂತೋಷ್ ಆನಂದ್ ರಾಮ್ ಈ ಬಗ್ಗೆ ಸ್ಪಷ್ಟ ಉತ್ತರವನ್ನೇನೂ ಕೊಟ್ಟಿಲ್ಲ. ಆದರೆ, ಚಿತ್ರದ ಕ್ವಾಲಿಟಿಯಲ್ಲಿ ರಾಜಿಯಾಗಲ್ಲ. ವೇಯ್ಟ್ ಎನ್ನುತ್ತಿದ್ದಾರೆ. ಕಾರ್ತಿಕ್ ಗೌಡ ಅವರು ಅಭಿಮಾನಿಗಳಿಗೆ ಹೇಳ್ತಿರೋದು ಇದನ್ನೇ. ಡೇಟ್ ನೀವು ಫಿಕ್ಸ್ ಮಾಡಬೇಡಿ, ನಾವೇ ಅನೌನ್ಸ್ ಮಾಡ್ತೇವೆ. ಪ್ಲೀಸ್ ವೇಯ್ಟ್ ಮಾಡಿ ಎನ್ನುತ್ತಿದ್ದಾರೆ. ವಿಜಯ್ ಕಿರಗಂದೂರು ನಿರ್ಮಾಣದಲ್ಲಿ ರೆಡಿಯಾಗುತ್ತಿರುವ ಯುವರತ್ನ ಟೀಸರ್ ಎಬ್ಬಿಸಿರುವುದು ಹವಾ ಅಲ್ಲ, ಬಿರುಗಾಳಿ.