` puneeth rajkumar, - chitraloka.com | Kannada Movie News, Reviews | Image

puneeth rajkumar,

  • ಮಕ್ಕಳು ಅಪ್ಪು ಅವರನ್ನು ಏನಂತಾ ಕರೀತಾರೆ ಗೊತ್ತಾ..?

    ಮಕ್ಕಳು ಅಪ್ಪು ಅವರನ್ನು ಏನಂತಾ ಕರೀತಾರೆ ಗೊತ್ತಾ..?

    ಕನ್ನಡದಲ್ಲಿ ಅತೀ ಹೆಚ್ಚು ಪುಟ್ಟ ಮಕ್ಕಳ ಫ್ಯಾನ್ಸ್ ಹೊಂದಿರೋ ನಟ ಪುನೀತ್ ರಾಜ್‍ಕುಮಾರ್. ಪುನೀತ್ ಅವರ ಡ್ಯಾನ್ಸ್ ಅಂದ್ರೆ ಪುಟ್ಟ ಮಕ್ಕಳಿಗೆ ಪ್ರಾಣ. ಜೊತೆಗೆ ಪುನೀತ್ ಬಾಲನಟನಾಗಿಯೂ ಸ್ಟಾರ್ ಆಗಿದ್ದವರು. ಹೀಗಾಗಿಯೇ ಮಕ್ಕಳು ಪುನೀತ್ ಅವರನ್ನು ಸಿಕ್ಕಾಪಟ್ಟೆ ಇಷ್ಟಪಡ್ತಾರೆ.

    ಯುವರತ್ನ ಚಿತ್ರದ ಪ್ರಮೋಷನ್‍ನಲ್ಲಿ ದೊಡ್ಡವರಿಗಿಂತ ದೊಡ್ಡ ಮಟ್ಟದಲ್ಲಿ ಥ್ರಿಲ್ ಆಗಿರೋದು ಮಕ್ಕಳು. ಅಂದಹಾಗೆ ಅಪ್ಪು ಅವರನ್ನು ಕಂಡರೆ ಯಾವ ಮಕ್ಕಳೂ ಸರ್ ಎಂದೋ.. ಅಂಕಲ್ ಎಂದೋ ಕರೆಯಲ್ಲವಂತೆ. ಎಲ್ಲ ಮಕ್ಕಳಿಗೂ ನಾನು ಅಪ್ಪು ಮಾಮ ಆಗಿಬಿಟ್ಟಿದ್ದೇನೆ. ಅಪ್ಪು ಮಾಮ.. ಅಪ್ಪು ಮಾಮ.. ಎಂದೇ ಎಲ್ಲ ಮಕ್ಕಳೂ ಮಾತನಾಡಿಸೋದು ಎಂದು ಹೇಳಿಕೊಳ್ಳೋ ಪುನೀತ್ ಅವರಿಗೆ ಬಹುಶಃ ಅವರ ತಂದೆ ತಾಯಿ ಅವರಿಗೆ ಭಕ್ತ ಪ್ರಹ್ಲಾದ, ಎರಡು ನಕ್ಷತ್ರಗಳು ಸಿನಿಮಾಗಳನ್ನು ತೋರಿಸಿರಬೇಕು ಎಂದು ಹೇಳಿಕೊಳ್ತಾರೆ.

  • ಮಗನ ಪೋಟೋ ಇಟ್ಟುಕೊಂಡು ಯುವರತ್ನ ಚಲನಚಿತ್ರ ವೀಕ್ಷಣೆ ಮಾಡಿದ ಕುಟುಂಬಸ್ಥರು.

    ಮಗನ ಪೋಟೋ ಇಟ್ಟುಕೊಂಡು ಯುವರತ್ನ ಚಲನಚಿತ್ರ ವೀಕ್ಷಣೆ ಮಾಡಿದ ಕುಟುಂಬಸ್ಥರು.

    ಕಳೆದ ಮೂರು ತಿಂಗಳ ಹಿಂದೆ ಮಗನನ್ನು ಕಳೆದುಕೊಂಡಿದ್ದರು. ಪುನೀತ್ ರಾಜ್‍ಕುಮಾರ್ ಅಪ್ಪಟ ಅಭಿಮಾನಿಯಾಗಿದ್ದ ಮಗ ಹರಿಕೃಷ್ಣನ್. ಮೈಸೂರಿನ ನಿವಾಸಿ‌ ಮುರಳಿಧರ್ ಎಂಬುವವರ ಪುತ್ರ ಹರಿಕೃಷಣ್ಣನ್.

    ಯುವರತ್ನ ಸಿನಿಮಾ ನೋಡಬೇಕು ಎಂದು ಆಸೆ ಪಟ್ಟಿದ್ದ ಮಗ. ಆದರೆ‌ ಯುವರತ್ನ ಸಿನಿಮಾ ರಿಲೀಸ್ ಗು ಮುನ್ನ ಸಾವನಪ್ಪಿದ್ದ ಮಗ. ಈಜಲು ಹೋಗಿ ನೀರಲ್ಲಿ ಮುಳುಗಿ ಸಾವನಪ್ಪಿದ ಮಗ. ಮಗನ ಆಸೆಯನ್ನು ತೀರಿಸುವ ಸಲುವಾಗಿ ಪೋಟು ಇಟ್ಟುಕೊಂಡು  ಸಿನಿಮಾ ವೀಕ್ಷಣೆ ಮಾಡಿದ ಕುಟುಂಬಸ್ಥರು.

    ಮೈಸೂರಿನ ಡಿಆರ್ ಸಿ‌ ಮಲ್ಟಿಪ್ಲೆಕ್ಸ್ ನಲ್ಲಿ ಸಿನಿಮಾ ವೀಕ್ಷಣೆ. ತಂದೆ-ತಾಯಿ-ಹಿರಿಯ ಮಗನ ಜೊತೆ ಸಿನಿಮಾ ವೀಕ್ಷಣೆ. ಸಾವನಪ್ಪಿದ ಮಗನಿಗು ಒಂದು ಟಿಕೆಟ್ ತೆಗೆದುಕೊಂಡು ಪೋಟೋ ಇಟ್ಟುಕೊಂಡು ಚಲನಚಿತ್ರ ವೀಕ್ಷಣೆ.

  • ಮಂಜುನಾಥನ ಸನ್ನಿಧಿಯಲ್ಲಿ ಪುನೀತ್ ಭಕ್ತಿಗೀತೆ

    puneeth sings bhajan in dharmastala

    ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಧರ್ಮಸ್ಥಳದಲ್ಲಿ ನಡೆದ ಮಂಜುನಾಥೇಶ್ವರ ಭಜನಾ ಪರಿಷತ್ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದರು. ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿದ್ದರು ಪುನೀತ್. 300ಕ್ಕೂ ಹೆಚ್ಚು ಭಜನಾ ತಂಡಗಳು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ 3000ಕ್ಕೂ ಹೆಚ್ಚು ಭಜನೆ ಗಾಯಕರು ಭಾಗವಹಿಸಿದ್ದರು. 

    ಕಾರ್ಯಕ್ರಮದಲ್ಲಿ ಮಾತನಾಡಿದ ಪುನೀತ್, ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಪಕ್ಕದಲ್ಲಿ ವೇದಿಕೆ ಹಂಚಿಕೊಂಡಿದ್ದೇ ನನ್ನ ಸೌಭಾಗ್ಯ ಎಂದರು. ಹಾಲಲ್ಲಾದರೂ ಹಾಕು.. ನೀರಲ್ಲಾದರೂ ಹಾಕು ರಾಘವೇಂದ್ರ.. ಹಾಡನ್ನು ಹಾಡಿ ಭಕ್ತರ ಮನರಂಜಿಸಿದರು.

  • ಮಠಾಧೀಶರುಗಳೂ ಮೆಚ್ಚಿದ ಯುವರತ್ನ

    ಮಠಾಧೀಶರುಗಳೂ ಮೆಚ್ಚಿದ ಯುವರತ್ನ

    ಸಿನಿಮಾವೊಂದು ಇಷ್ಟೆಲ್ಲ ರೀತಿಯಲ್ಲಿ ಸಂಚಲನ ಸೃಷ್ಟಿಸಬಹುದೇ ಎಂಬ ಪ್ರಶ್ನೆ ಹುಟ್ಟಿಸಿರುವುದು ಯುವರತ್ನ. ಸರ್ಕಾರದಿಂದ ಉದ್ಭವವಾದ ಸಡನ್ ಪ್ರಾಬ್ಲಂನಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಯುವರತ್ನ ಸಿನಿಮಾ, ದಿನದಿಂದ ದಿನಕ್ಕೆ ಪ್ರೇಕ್ಷಕರನ್ನು ಸೆಳೆಯುತ್ತಲೇ ಇದೆ. ಈಗ ಮಠಾಧೀಶರ ಸರದಿ.

    ಕಾಗಿನೆಲೆಯ ಕನಕ ಗುರು ಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ, ರಾಜನಹಳ್ಳಿ ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ, ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು, ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಡಿವೈಎಸ್‍ಪಿ ಶ್ರೀ ನರಸಿಂಹ ತಾಮ್ರಧ್ವಜ, ಹರಿಹರಿ ಸಿಪಿಐ ಸತೀಶ್, ಪಿಎಸ್‍ಐ ವೀರೇಶ್ ಮೊದಲಾದವರು ಒಟ್ಟಿಗೇ ಹೋಗಿ ಸಿನಿಮಾ ನೋಡಿದ್ದಾರೆ.

    ಸಿನಿಮಾ ನೋಡಿ ಬಂದ ಮೇಲೆ ಸ್ವತಃ ಪುನೀತ್ ಅವರಿಗೆ ಕರೆ ಮಾಡಿ ಒಳ್ಳೆಯ ಸಿನಿಮಾ ಮಾಡಿದ್ದೀರಿ. ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದ್ದೀರಿ ಎಂದು ಹಾರೈಸಿದ್ದಾರೆ. ವಿವಿಧ ಸಮುದಾಯದ ಪ್ರಮುಖ ಸ್ವಾಮೀಜಿಗಳು ಒಟ್ಟಿಗೇ ಸಿನಿಮಾ ನೋಡಿದ್ದೇ ವಿಶೇಷವಾಗಿತ್ತು.

    ಇತ್ತ ಥಿಯೇಟರುಗಳಿಗೆ 50% ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಥಿಯೇಟರುಗಳ ಜೊತೆಗೆ ಒಟಿಟಿಯಲ್ಲೂ ರಿಲೀಸ್ ಆಗಿರುವ ಸಿನಿಮಾ ಯುವರತ್ನ, ಎಲ್ಲ ಕಡೆಯೂ ಭರ್ಜರಿ ಪ್ರದರ್ಶನ ಕಾಣುತ್ತಿದೆ.

  • ಮತ್ತೆ ದಾಖಲೆ ಬರೆದೈತೆ.. ಬೊಂಬೆ ಹೇಳುತೈತೆ..

    raajakumara breaks another another record

    ಬೊಂಬೆ ಹೇಳುತೈತೆ.. ಮತ್ತೆ ಹೇಳುತೈತೆ.. ಹಾಡು ಮತ್ತೆ ಮತ್ತೆ ದಾಖಲೆ ಬರೆಯುತ್ತಲೇ ಇರುತ್ತಲೇ ಇದೆ. ಸಿನಿಮಾ ರಿಲೀಸ್ ಆದ 8 ತಿಂಗಳಲ್ಲಿ ಯೂಟ್ಯೂಬ್‍ನಲ್ಲಿ ಬೊಂಬೆ ಹೇಳುತೈತೆ ಹಾಡು 40 ಮಿಲಿಯನ್‍ಗೂ ಹೆಚ್ಚು ಹಿಟ್ಸ್ ಪಡೆದಿರುವುದು ದಾಖಲೆ.

    ಈ ಸಂಭ್ರಮವನ್ನು ನಿರ್ದೇಶಕ ಸಂತೋಷ್ ಆನಂದ್‍ರಾಮ್ ಖುಷಿಯಿಂದ ಹಂಚಿಕೊಂಡಿದ್ದಾರೆ. ಇದು ಕನ್ನಡ ಚಿತ್ರರಂಗವೇ ಹೆಮ್ಮೆ ಪಡುವ ವಿಷಯ ಎಂದು ಸಂಭ್ರಮಿಸಿದ್ದಾರೆ. 

    ಬೊಂಬೆ ಹೇಳುತೈತೆ ಹಾಡು ಬರೆದ ದಾಖಲೆಗಳು ಒಂದೆರೆಡಲ್ಲ. ಆ ಹಾಡು ಬೆಳಗಾವಿಯಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಕರೆತರಲು ಕೂಡಾ ಬಳಕೆಯಾಗಿತ್ತು. ಇದು ಜನಾಭಿಮಾನದ ದಾಖಲೆ ಎಂದು ಸಂಭ್ರಮವನ್ನಾಚರಿಸುತ್ತಿದೆ ರಾಜಕುಮಾರನ ಬಳಗ.

  • ಮತ್ತೆ ಪುನೀತ್ ಕಾಣದಂತೆ ಮಾಯವಾದನು..!

    puneeth rajkumar kanadanthe mayavadhano

    ಕಾಣದಂತೆ ಮಾಯವಾದನು ಹಾಡಿಗೂ ಪುನೀತ್ ರಾಜ್‍ಕುಮಾರ್‍ಗೂ ಅದೇನೋ ಬಿಡಿಸಲಾಗದ ನಂಟು. ಪುನೀತ್ ಬಾಲನಟನಾಗಿದ್ದಾಗ ಹಾಡಿದ್ದ ಈ ಹಾಡು ಇಂದಿಗೂ ಜನಪ್ರಿಯ. ಅದೇ ಹಾಡನ್ನು ಅವರದ್ದೇ ಅಭಿನಯದ ಅಣ್ಣಾ ಬಾಂಡ್ ಚಿತ್ರದಲ್ಲಿ ರಾಕ್ ಶೈಲಿಯಲ್ಲಿ ಬಳಸಿಕೊಳ್ಳಲಾಗಿತ್ತು. ಒನ್ಸ್ ಎಗೇಯ್ನ್ ಪುನೀತ್ ಅವರೇ ಹಾಡಿದ್ದರು. ಈಗ ಮತ್ತೊಮ್ಮೆ ಪುನೀತ್ ಅವರನ್ನು ಕಾಣದಂತೆ ಮಾಯವಾದನು ಹಿಂಬಾಲಿಸಿಕೊಂಡು ಬಂದಿದೆ.

    ಜಯಮ್ಮನ ಮಗ ಚಿತ್ರದ ನಿರ್ದೇಶಕ ವಿಕಾಸ್ ಹೀರೋ ಆಗಿ ನಟಿಸಿರುವ ಮೊದಲ ಚಿತ್ರ ಕಾಣದಂತೆ ಮಾಯವಾದನು. ಈ ಚಿತ್ರದಲ್ಲಿ ಕಳೆದೋದಾ ಕಾಳಿದಾಸ.. ಅನ್ನೋ ರೊಮ್ಯಾಂಟಿಕ್ ಹಾಡು ಹಾಡಿದ್ದಾರೆ ಪುನೀತ್. ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯಕ್ಕೆ ಗುಮ್ಮಿನೇನಿ ವಿಜಯ್ ಸಂಗೀತವಿದೆ. ವಿಕಾಸ್ ಎದುರು ಸಿಂಧು ಲೋಕನಾಥ್ ನಾಯಕಿಯಾಗಿ ನಟಿಸಿದ್ದಾರೆ.

  • ಮತ್ತೆ ಬೇಕು ಅಂದ್ರೆ ಅಪ್ಪು ಸಿಗಲ್ಲ. ಈ ಸಿನಿಮಾ ಅಪ್ಪಿಕೊಳ್ಳಿ : ಕಿಚ್ಚ ಸುದೀಪ್

    ಮತ್ತೆ ಬೇಕು ಅಂದ್ರೆ ಅಪ್ಪು ಸಿಗಲ್ಲ. ಈ ಸಿನಿಮಾ ಅಪ್ಪಿಕೊಳ್ಳಿ : ಕಿಚ್ಚ ಸುದೀಪ್

    ಲಕ್ಕಿಮ್ಯಾನ್. ಸೆಪ್ಟೆಂಬರ್`ನಲ್ಲಿ ರಿಲೀಸ್ ಆಗುತ್ತಿರೋ ಸಿನಿಮಾ ಇದು. ನಾನ್ ಕಡುವುಳೆ ಚಿತ್ರದ ರೀಮೇಕ್ ಆಗಿರೋ ಲಕ್ಕಿಮ್ಯಾನ್ ಚಿತ್ರದಲ್ಲಿ ಪುನೀತ್ ರಾಜಕುಮಾರ್ ದೇವರ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಭುದೇವ ಕೂಡಾ ನಟಿಸಿರೋ ಚಿತ್ರಕ್ಕೆ ಪ್ರಭುದೇವ  ಸಹೋದರ ನಾಗೇಂದ್ರ ಪ್ರಸಾದ್ ನಿರ್ದೇಶಕ. ಚಿತ್ರದ ಬಿಡುಗಡೆ ಹಿನ್ನೆಲೆಯಲ್ಲಿ ಬಾರೋ ರಾಜ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಮಾಡಿದ ಚಿತ್ರತಂಡ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕಿಚ್ಚ ಸುದೀಪ್, ರಾಘವೇಂದ್ರ ರಾಜಕುಮಾರ್, ಸಾಧುಕೋಕಿಲ ಸೇರಿದಂತೆ ಇಡೀ ಚಿತ್ರತಂಡ ಹಾಜರಿತ್ತು.

    ಚಿತ್ರದ ಹೀರೋ ಡಾರ್ಲಿಂಗ್ ಕೃಷ್ಣ. ಅಪ್ಪು ಸರ್ ಜೊತೆ ನಟಿಸುವುದು ನನಗೆ ಹೊಸದಲ್ಲ. ಈ ಹಿಂದೆ ಅಭಿನಯಿಸಿದ್ದೇನೆ. ಆದರೆ ನಾನು ಲೀಡ್ ರೋಲಿನಲ್ಲಿರುವ ಚಿತ್ರದಲ್ಲಿ ಅಪ್ಪು ಸರ್ ನಟಿಸಿದ್ದಾರೆ ಎನ್ನುವುದು ನನ್ನ ಹೆಮ್ಮೆ ಎಂದರು ಕೃಷ್ಣ.

    ಈ ಚಿತ್ರವನ್ನು ಬಾಚಿ ತಬ್ಬಿಕೊಂಡು ಬಿಡಿ. ಅಪ್ಪುನ ಮತ್ತೆ ನೋಡಬಹುದು ಅನ್ನೋ ಕಾರಣಕ್ಕೆ ನಾನು ಟ್ರೇಲರ್ ನೋಡಿ ಖುಷಿಪಟ್ಟೆ. ಅಪ್ಪು ಅವರು ಈಗಿಲ್ಲ. ಅವರು ದೇವರಾಗಿದ್ದಾರೆ. ಈ ಸಿನಿಮಾದಲ್ಲೂ ದೇವರಾಗಿ ನಟಿಸಿದ್ದಾರೆ. ಮತ್ತೆ ಬೇಕು ಅಂದ್ರೂ ಅಪ್ಪು ನೋಡೋಕೆ ಸಿಗಲ್ಲ. ಅಪ್ಪುಗೆ ದೇವರ ಪಾತ್ರ ಚೆನ್ನಾಗಿ ಸೂಟ್ ಆಗುತ್ತೆ ಎಂದವರು ಸುದೀಪ್.

    ಚಿತ್ರದ ನಿರ್ದೇಶಕ ನಾಗೇಂದ್ರ ಪ್ರಸಾದ್ ಎಲ್ಲವನ್ನೂ ನಡೆಸಿಕೊಟ್ಟ ಅಣ್ಣ ಪ್ರಭುದೇವಗೆ ಥ್ಯಾಂಕ್ಸ್ ಹೇಳಿದರು. ಪ್ರಭುದೇವ ಫೋನಿನಲ್ಲಿ ಕೇಳಿದ ತಕ್ಷಣ ಮರುಮಾತನಾಡದೆ ಖುಷಿಯಿಂದ ಒಪ್ಪಿಕೊಂಡರಂತೆ ಅಪ್ಪು.

    ಡಾರ್ಲಿಂಗ್ ಕೃಷ್ಣ ಮತ್ತು ಸಂಗೀತಾ ಶೃಂಗೇರಿ ಪ್ರಧಾನ ಪಾತ್ರದಲ್ಲಿರೋ ಚಿತ್ರದಲ್ಲಿ ಅಪ್ಪು ಅತಿಥಿ ನಟರಾಗಿದ್ದರೂ ಅವರ ಪಾತ್ರ ಮುಕ್ಕಾಲು ಗಂಟೆ ಇರಲಿದೆಯಂತೆ.

    ಲಕ್ಕಿಮ್ಯಾನ್ ಒಂದು ರೀತಿಯಲ್ಲಿ ಅಪ್ಪು ನಟನೆಯ ಕಟ್ಟಕಡೆಯ ಸಿನಿಮಾ. ಇದಾದ ನಂತರ ಗಂಧದ ಗುಡಿ ಬರಲಿದೆಯಾದರೂ ಅದು ಸಾಕ್ಷ್ಯಚಿತ್ರ. ಸಿನಿಮಾ ಅಲ್ಲ.

  • ಮತ್ತೆ ಮತ್ತೆ ರಾಜ್ ವಿಷ್ಣು - ಕನ್ನಡ ಬೆಳ್ಳಿತೆರೆಯಲ್ಲಿ ಇವತ್ತಿಗೂ ಇವರೇ ರಾಜರು

    rajkumar, vishnuvardhan, yash, puneeth

    ಸುಮ್ಮನೆ ನೆನಪಿಸಿಕೊಳ್ಳಿ. ಇತ್ತೀಚೆಗೆ ಹಿಟ್ ಆದ ಎರಡು ಚಿತ್ರಗಳಲ್ಲಿ ಒಂದು ರಾಜಕುಮಾರ. ಇಡೀ ಚಿತ್ರದಲ್ಲಿ ರಾಜ್ಕುಮಾರ್ ಛಾಯೆ ಇದ್ದೇ ಇದೆ. ಚಿತ್ರದ ಹಾಡುಗಳಲ್ಲಿ, ಡೈಲಾಗುಗಳಲ್ಲಿ, ಚಿತ್ರದಲ್ಲಿ, ಚಿತ್ರದ ಕಥೆಯಲ್ಲಿ ರಾಜ್ ಇದ್ದೇ ಇರುತ್ತಾರೆ.

    ಇನ್ನೊಂದು ಹಿಟ್ ಚಿತ್ರ ಬಂಗಾರ S/O ಬಂಗಾರದ ಮನುಷ್ಯ ಚಿತ್ರದಲ್ಲೂ ಹಾಗೇ. ಚಿತ್ರದುದ್ದಕ್ಕೂ ರಾಜ್ ಕಾಡುತ್ತಲೇ ಹೋಗುತ್ತಾರೆ. ನಾಗರಹಾವು ಚಿತ್ರದಲ್ಲಿ ರಾಜ್ಕುಮಾರ್ರನ್ನು ಒಂದು ವಿಶೇಷ ಪಾತ್ರವಾಗಿ ತೋರಿಸಲಾಗಿತ್ತು. ಗ್ರಾಫಿಕ್ಸ್ನಲ್ಲಿ ಮರುಸೃಷ್ಟಿ ಮಾಡಿ ಚಿತ್ರದ ಬಗ್ಗೆ ದೊಡ್ಡ ಹೈಪ್ ಸೃಷ್ಟಿಸಲಾಗಿತ್ತು.

    ಯಶ್ ಅಭಿನಯದ ಸೂಪರ್ ಹಿಟ್ ಚಿತ್ರ ನಡೆಯುವುದೇ ವಿಷ್ಣುವರ್ಧನ್ರ ರಾಮಾಚಾರಿ ನೆನಪಿನಲ್ಲಿ. ಯಶ್ ಅಭಿನಯದ ಇನ್ನೊಂದು ಚಿತ್ರ ಗಜಕೇಸರಿಯಲ್ಲೂ ಅಷ್ಟೆ, ಯಶ್, ರಾಜ್ಕುಮಾರ್ ಅಭಿಮಾನಿ. ಚಿತ್ರದ ಕಥೆಯಲ್ಲಿ ರಾಜ್ ನೆನಪಾಗುತ್ತಲೇ ಇರುತ್ತಾರೆ. ಸುದೀಪ್ ಅಭಿನಯದ ಕೋಟಿಗೊಬ್ಬ 2 ಟೈಟಲ್ನಲ್ಲೇ ವಿಷ್ಣು ಇದ್ದರು. ಕೋಟಿಗೊಬ್ಬ 3ರಲ್ಲೂ ವಿಷ್ಣು ನೆನಪು ಕಾಡುತ್ತೆ. ಸುದೀಪ್ ಅಭಿನಯದ ಸೂಪರ್ ಹಿಟ್ ಚಿತ್ರವೊಂದರ ಹೆಸರೇ ವಿಷ್ಣುವರ್ಧನ.

    ಆ ಚಿತ್ರದಲ್ಲಿ ಸುದೀಪ್ ಪಾತ್ರದ ಹೆಸರೂ ವಿಷ್ಣುವರ್ಧನ. ಇದು ಹೊಸದೇನಲ್ಲ. ಇನ್ನು ಈಗ ಬರುತ್ತಿರುವ ಚಿತ್ರಗಳಲ್ಲೂ ರಾಜ್ ಇದ್ದಾರೆ. ವಿಷ್ಣುವೂ ಇದ್ದಾರೆ. ಶರಣ್ ಮತ್ತು ಚಿಕ್ಕಣ್ಣ ಅಭಿನಯದ ರಾಜ್ ವಿಷ್ಣು ಚಿತ್ರದಲ್ಲಿ ಇಬ್ಬರೂ ದಿಗ್ಗಜರ ನೆನಪಾಗುತ್ತಿದೆ. ದುನಿಯಾ ವಿಜಿ ಅಭಿನಯದ ಕನಕ  ಚಿತ್ರದಲ್ಲೂ ಅಷ್ಟೆ. ಹೀರೋ ರಾಜ್ ಕುಮಾರ್ ಅಭಿಮಾನಿ ಮತ್ತು ಆಟೋ ಡ್ರೈವರ್ ಎನ್ನುವುದಷ್ಟೇ ನಿರ್ದೇಶಕ ಹೇಳಿರುವ ಕಥೆಯ ಎಳೆ. ಸಂಭ್ರಮವವೇ ಇರಲಿ, ಸಂದೇಶವೇ ಇರಲಿ.. ಹಾಸ್ಯ, ವಿಷಾದ, ಜೀವನ..ಹೀಗೆ ಯಾವುದೇ ಇರಲಿ.

    ಚಿತ್ರರಂಗ ರಾಜ್ ವಿಷ್ಣು ಇಬ್ಬರನ್ನೂ ಮರೆಯೋದಿಲ್ಲ ಎನ್ನುವುದಕ್ಕೆ ಪದೇ ಪದೇ ಸಾಕ್ಷಿಗಳು ಸಿಗುತ್ತಲೇ ಹೋಗುತ್ತವೆ. ಸಾಮಾನ್ಯವಾಗಿ ಚಾಲ್ತಿಯಲ್ಲಿರುವ ಸ್ಟಾರ್ಗಳು ವರ್ಷಕ್ಕೆ ಒಂದೋ ಎರಡೋ ಚಿತ್ರ ಮಾಡಿದರೆ ಹೆಚ್ಚು. ಆದರೆ, ರಾಜ್ ವಿಷ್ಣು ಪ್ರತೀ ವರ್ಷ ರಿಲೀಸ್ ಆಗುವ 100 ಚಿತ್ರಗಳಲ್ಲಿ ಕನಿಷ್ಠ ಹತ್ತರಲ್ಲಾದರೂ ಒಂದು ಪಾತ್ರವಾಗಿರುತ್ತಾರೆ. ಕಥೆಯಾಗಿರುತ್ತಾರೆ.

    ಭೌತಿಕವಾಗಿ ಇಬ್ಬರೂ ಇಲ್ಲದೇ ಇರಬಹುದು. ಆದರೆ, ಕನ್ನಡ ಚಿತ್ರರಂಗದ ಹಾಲಿ ಸ್ಟಾರ್ಗಳ ಲಿಸ್ಟಲ್ಲಿ ಅವರನ್ನೂ ಸೇರಿಸಿಕೊಳ್ಳಬಹುದು.

     

  • ಮದುವೆ ಮಂಟಪದಿಂದ ಅಪ್ಪು ನೋಡಲು ಬಂದ ವಧು-ವರರು..!

    newly wed couples rush to take puneeth's blessings

    ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್‍ಗೆ ಫ್ಯಾಮಿಲಿ ಅಭಿಮಾನಿಗಳು ಹೆಚ್ಚು. ಆದರೆ, ಇಂತಹ ಅಭಿಮಾನಿಗಳೂ ಇದ್ದಾರೆ ಎನ್ನುವುದು ಸ್ವತಃ ಪುನೀತ್‍ಗೂ ಅಚ್ಚರಿಯೇ ಸರಿ. ಸದ್ಯಕ್ಕೆ ಪುನೀತ್ ಮೈಸೂರಿನಲ್ಲಿ ಯುವರತ್ನ ಚಿತ್ರದ ಶೂಟಿಂಗಿನಲ್ಲಿದ್ದಾರೆ. ಅಲ್ಲಿ ಒಂದು ನವಜೋಡಿ ದಿಢೀರನೆ ಪ್ರತ್ಯಕ್ಷವಾಯ್ತು.

    ಪೇಟ, ಕಚ್ಚೆಪಂಚೆ, ಬಾಸಿಂಗ ಧರಿಸಿರುವ ಹುಡುಗ, ಕೊರಳಲ್ಲಿ ತಾಳಿಯ ಹರಿಸಿನದ ವಾಸನೆ ಇನ್ನೂ ಆರದ ಹುಡುಗಿಯನ್ನು ನೋಡುತ್ತಲೇ ಇವರು ಮದುವೆ ಮಂಟಪದಿಂದ ನೇರವಾಗಿ ಸೆಟ್ಟಿಗೆ ಬಂದವರು ಎನ್ನುವುದು ಗೊತ್ತಾಯ್ತು.

    ತಾಳಿ ಕಟ್ಟಿದ ನಂತರ ನೇರವಾಗಿ ಪುನೀತ್ ನೋಡಲು ಬಂದಿದ್ದ ಯೋಗೇಶ್ ದಂಪತಿಗೆ ಪುಟ್ಟ ಉಡುಗೊರೆ ಕೊಟ್ಟು ಶುಭ ಹಾರೈಸಿ ಕಳಿಸಿದರು ಪುನೀತ್.

  • ಮಧ್ಯರಾತ್ರಿ ಬರ್ತಾರೆ ಪುನೀತ್-ರಶ್ಮಿಕಾ..!

    anjaniputra mid night show

    ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಅಂಜನೀಪುತ್ರ ಮಧ್ಯರಾತ್ರಿಯೇ ರಿಲೀಸ್ ಆಗ್ತಿದೆ. ನೀವು ಒಂದ್ಸಲ ಶೋ ಟೈಮಿಂಗ್ಸ್ ನೋಡಬೇಕು. ಶಾಕ್ ಆಗಿಬಿಡ್ತೀರಿ. ಬೆಂಗಳೂರು, ಬಳ್ಳಾರಿ, ಹೊಸಪೇಟೆ.. ಹೀಗೆ ರಾಜ್ಯದ ಎಲ್ಲ ಕಡೆಗಳಲ್ಲೂ ಅಂಜನೀಪುತ್ರ ಮಧ್ಯರಾತ್ರಿಯೇ ದರ್ಶನ ಕೊಡಲಿದ್ದಾನೆ.

    ಬೆಳಗಾವಿ, ಶಿವಮೊಗ್ಗ, ದಾವಣಗೆರೆಯ ಥಿಯೇಟರುಗಳಲ್ಲಿ ಅಂಜನೀಪುತ್ರನ ಮೊದಲ ಶೋ, ಮಧ್ಯರಾತ್ರಿ 12 ಗಂಟೆಗೆ ಫಿಕ್ಸ್ ಆಗಿದೆ. ಬೆಂಗಳೂರಿನ 10ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ಮುಂಜಾನೆ 5 ಗಂಟೆಗೇ ಮೊದಲ ಶೋ ಶುರುವಾಗಲಿದೆ.

    ಚಿತ್ರ ಮೇಯ್ನ್ ಥಿಯೇಟರ್ ತ್ರಿವೇಣಿಯಲ್ಲಿ ಪುನೀತ್ ರಾಜ್‍ಕುಮಾರ್ ಅವರ 78 ಅಡಿ ಎತ್ತರದ ಕಟೌಟ್ ನಿಲ್ಲಿಸಲಾಗುತ್ತಿದೆ. 

  • ಮನೆ ಮೂರು.. ಮನಸ್ಸು ಒಂದೇ.. - ಅಣ್ಣಾವ್ರ ಮಕ್ಕಳು

    shivarajkumar talks about his brothers

    ಡಾ.ರಾಜ್‍ಕುಮಾರ್ ಮಕ್ಕಳಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‍ಕುಮಾರ್ ಹಾಗೂ ಪುನೀತ್ ರಾಜ್‍ಕುಮಾರ್, ಬೇರೆ ಬೇರೆ ಮನೆಗಳಲ್ಲಿದ್ದಾರೆ. ಒಂದೇ ಮನೆಯಲ್ಲಿ ಇಲ್ಲ. ಹಾಗಂತ ನಮ್ಮ ನಡುವೆ ಏನೋ ಆಗಿಬಿಟ್ಟಿದೆ, ಬೇರೆ ಬೇರೆಯಾಗಿದ್ದೇವೆ ಎಂದುಕೊಳ್ಳಬೇಡಿ. ಬೇರೆ ಬೇರೆ ಇರುವುದು ಮನೆಗಳು ಮಾತ್ರ, ಮನಸ್ಸುಗಳಲ್ಲ ಎಂದು ಹೇಳಿದ್ದಾರೆ ಶಿವರಾಜ್‍ಕುಮಾರ್.

    ಗ್ರಾಮಾಯಣ ಚಿತ್ರದ ಟೀಸರ್ ಬಿಡುಗಡೆ ವೇಳೆ ಶಿವಣ್ಣ ಈ ಮಾತು ಹೇಳಿದಾಗ, ರಾಘವೇಂದ್ರ ರಾಜ್‍ಕುಮಾರ್ ಮತ್ತು ಪುನೀತ್ ರಾಜ್‍ಕುಮಾರ್ ಇಬ್ಬರೂ ವೇದಿಕೆಯಲ್ಲಿದ್ದರು. ಅಪ್ಪು ನನಗಿಂತ 13 ವರ್ಷ ಚಿಕ್ಕವನು. ಆತನ ಪ್ರತಿಯೊಂದು ಸಕ್ಸಸ್‍ನ್ನೂ ಸಂಭ್ರಮಿಸುವ ಮೊದಲ ವ್ಯಕ್ತಿ ನಾನೇ ಎಂದರು ಶಿವಣ್ಣ. ರಾಘು ಚಿಕ್ಕವನಾದರೂ, ನಾನೂ ಅವನೂ ಗೆಳೆಯರಂತೆಯೇ ಇದ್ದೇವೆ ಎಂದ ಶಿವಣ್ಣ, ಸಣ್ಣ ಪುಟ್ಟ ಮನಸ್ತಾಪಗಳು ಬರುವುದು ಸಹಜ. ಆದರೆ, ಅಂತಹ ಮನಸ್ತಾಪಗಳನ್ನು ನಮ್ಮನ್ನು ಇನ್ನಷ್ಟು ಹತ್ತಿರ ಸೇರಿಸಿವೆ ಎಂದರು. ಮನೆಯಲ್ಲಿ ಒಂದು ಸಣ್ಣ ಕಾರ್ಯಕ್ರಮವಾದರೂ, ನಮ್ಮ ಮನೆಯವರೇ ಕನಿಷ್ಠ ನೂರು ಮಂದಿ ಇರುತ್ತೇವೆ ಎಂದು ಹೇಳಿಕೊಂಡರು.

    ಗಾಜನೂರಿನ ಬಾಲ್ಯದ ದಿನಗಳನ್ನು ನೆನೆದ ಶಿವರಾಜ್‍ಕುಮಾರ್, ಅಲ್ಲಿ ಈಜಾಡಿದ್ದು, ಮರಕೋತಿ ಆಟವಾಡಿದ್ದು, ಊರಿನ ಮನೆಗಳಲ್ಲಿ ಊಟ ಮಾಡಿಕೊಂಡು ಬೆಳದ ದಿನಗಳನ್ನು ನೆನಪಿಸಿಕೊಂಡರು. ಇಂದಿನ ಈ ಎನರ್ಜಿಗೆ, ಅಂದಿನ ಬಾಲ್ಯದಲ್ಲಿ ಆಡಿದ ಆಟಗಳೇ ಕಾರಣ ಎಂದು ನೆನಪಿಗೆ ಜಾರಿದರು ಶಿವರಾಜ್‍ಕುಮಾರ್.

  • ಮನೆಯ ಮಹಾರಾಣಿಗೆ ಅಪ್ಪು ಕೊಟ್ಟರು ಲ್ಯಾಂಬೋರ್ಗಿನಿ

    [uneeth gifts lamorghini to his wife ashwini

    ಪುನೀತ್ ರಾಜ್‍ಕುಮಾರ್ ಮನೆಗೆ ಅವರೇ ಮಹಾರಾಣಿ. ಹೆಸರು ಅಶ್ವಿನಿ. ಆ ಮಹಾರಾಣಿಗೀಗ ಲ್ಯಾಂಬೋರ್ಗಿನಿ. ಅದು ಆ ಮನೆಯ ಮಹಾರಾಜ ಕೊಟ್ಟಿರುವ ಪ್ರೀತಿಯ ಕಾಣಿಕೆ. ಮಹಿಳಾ ದಿನಕ್ಕೆ ಈ ಬಾರಿ ಪುನೀತ್, ತಮ್ಮ ಪತ್ನಿಗೆ ಲ್ಯಾಂಬೋರ್ಗಿನಿ ಕಾರ್‍ನ್ನೇ ಉಡುಗೊರೆಯಾಗಿ ಕೊಟ್ಟಿದ್ದಾರೆ.

    ಎಕ್ಸ್ ಶೋರೂಂ ಬೆಲೆಯೇ 3 ಕೋಟಿ ರೂ. ಇನ್ನು ರೋಡ್ ಟ್ಯಾಕ್ಸ್, ಇನ್ಷೂರೆನ್ಸ್, ರಿಜಿಸ್ಟ್ರೇಷನ್ ಎಲ್ಲ ಸೇರಿಬಿಟ್ರೆ 4 ಕೋಟಿ ರೂ. ದಾಟುತ್ತೆ. 

    ಪುನೀತ್ ಬಳಿ ಈಗಾಗಲೇ ಇರುವ ಆಡಿ, ರೇಂಜ್ ರೋವರ್‍ನಂತಹ ಐಷಾರಾಮಿ ಕಾರುಗಳ ಕ್ಲಬ್ಬಿಗೆ ಈಗ ಲ್ಯಾಂಬೋರ್ಗಿನಿಯೂ ಸೇರಿದೆ. 

  • ಮಾಮಾ.. ಚಾಲೆಂಜ್ ಓಕೆ.. ನೆಕ್ಸ್ಟ್.. ದರ್ಶನ್, ಗಣೇಶ್, ಪ್ರಜ್ವಲ್

    srimurali accepts puneeth's challenge

    ಫಿಟ್‍ನೆಸ್ ಚಾಲೆಂಜ್ ವೈರಲ್ ಆಗುತ್ತಿದೆ. ಸರಪಳಿಯಂತೆ ಬೆಳೆಯುತ್ತಲೇ ಹೋಗುತ್ತಿದೆ. ಪುನೀತ್ ರಾಜ್‍ಕುಮಾರ್ ಹಾಕಿದ್ದ ಫಿಟ್‍ನೆಸ್ ಚಾಲೆಂಜ್‍ನ್ನು ಸ್ವೀಕರಿಸಿರುವ ಶ್ರೀಮುರಳಿ, ಬೆರಗುಗೊಳಿಸುವಂತೆ ವ್ಯಾಯಾಮದ ವಿಡಿಯೋ ಅಪ್‍ಲೋಡ್ ಮಾಡಿದ್ದಾರೆ.

    ನಿಮ್ಮ ಚಾಲೆಂಜ್ ಸ್ವೀಕರಿಸಿದ್ದೇನೆ.. ಪುನೀತ್ ರಾಜ್‍ಕುಮಾರ್ ಮಾಮಾ, ಆರೋಗ್ಯವೇ ಐಶ್ವರ್ಯ ಎಂದಿದ್ದಾರೆ. 

    ಶ್ರೀಮುರಳಿ, ಈಗ ಫಿಟ್‍ನೆಸ್ ಚಾಲೆಂಜ್‍ನ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್, ಪ್ರಜ್ವಲ್ ದೇವರಾಜ್, ಗೋಲ್ಡನ್ ಸ್ಟಾರ್ ಗಣೇಶ್‍ಗೆ ಪಾಸ್ ಮಾಡಿದ್ದಾರೆ.

    Related Articles :-

    ರಕ್ಷಿತ್, ಧ್ರುವಾ, ಶ್ರೀಮುರಳಿಗೆ ಅಪ್ಪು ಚಾಲೆಂಜ್

  • ಮಾಯಾಬಜಾರಲ್ಲಿ ಹೆಂಗಾರ ಹಾಳಾಗೋಗ್ಲಿ ಕಾಸು ಮಾಡಣ

    spb's song from mayabazaar goes viral

    ಮಾಯಾಬಜಾರ್ ಚಿತ್ರದಲ್ಲಿ ಎಸ್‍ಪಿಬಿ ಹಾಡಿದ ಹಾಡು ವೈರಲ್ ಆಗೋಕೆ ಶುರುವಾಗಿದೆ. ಕಾರಣ ಇಷ್ಟೆ, ಹಾಡಿನಲ್ಲಿರೋ ಸಾಹಿತ್ಯ. ತಾರಾತಿಗಡಿ.. ಪಾತಾಳ್‍ಗರಡಿ..  ಥಳಕ್ಕು ಬಳುಕು.. ಬೆಳ್ಳಂ ಬೆಳಕು.. ಲಕಲಕಲಕಲಕ.. ಲೋಕ ನಮ್ದು ಮಾಯಾಬಜಾರು.. ಬಣ್ಣದ ಬಾಳು ಬೆಣ್ಣೆ ಮಾತು.. ನೀರಿನ ಮ್ಯಾಲೆ ದೋಣಿ ತೂತು.. ಸುಳ್ಳಿನ ಸಂತೆಯಲಿ ಸತ್ಯ ಢುಮ್ಕಿ ಢಮಾರು..

    ಭಗವಂತಂಗೆ ಕೆಳಗೆ ಕರೆದು ಬುದ್ದಿ ಹೇಳಣ.. ನಾಳೆಯಿಂದ ನಾವೇ ದೇವರಾಗಿಬಿಡೋಣ.. ಯಾವುದು ಹೆಂಗಾರ ಹಾಳಾಗೋಗ್ಲಿ.. ಕಾಸು ಮಾಡಣ..

    ಎಂದು ಸಾಗುವ ಸಾಹಿತ್ಯ. ಥೇಟು ಭಟ್ಟರ ಶೈಲಿ. ಯೋಗರಾಜ್ ಭಟ್ಟರ ಹಾಡಿಗೆ ಮ್ಯೂಸಿಕ್ಕು ಕೊಟ್ಟಿರೋದು ಮಿಧುನ್ ಮುಕುಂದನ್. ಎಸ್‍ಪಿಬಿ ಹಾಡಿರೋ ಹಾಡಿಗೆ ಸ್ಟೆಪ್ಪು ಹಾಕಿದ್ದಾರೆ ಪುನೀತ್. ನಿರ್ಮಾಣವೂ ಅವರದ್ದೇ. ತಮ್ಮದೇ ನಿರ್ಮಾಣದ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಅಪ್ಪು ಕಾಣಿಸಿಕೊಳ್ತಿದ್ದಾರೆ. ಚಿತ್ರದಲ್ಲಿ ರಾಜ್ ಬಿ.ಶೆಟ್ಟಿ. ಅಚ್ಯುತ್ ಕುಮಾರ್, ಪ್ರಕಾಶ್ ರೈ, ವಸಿಷ್ಠ ಸಿಂಹ, ಸುಧಾರಾಣಿ, ಚೈತ್ರಾ ರಾವ್, ಸಾಧು ಕೋಕಿಲ ಮೊದಲಾದವರು ನಟಿಸಿದ್ದಾರೆ

  • ಮಾರ್ಚ್ 17 : ಪುನೀತ ಜಯಂತಿಗೆ ಹೊಸ ಹೆಸರು

    ಮಾರ್ಚ್ 17 : ಪುನೀತ ಜಯಂತಿಗೆ ಹೊಸ ಹೆಸರು

    ಮಾರ್ಚ್ 17. ಪುನೀತ್ ರಾಜಕುಮಾರ್ ಹುಟ್ಟಿದ ದಿನ. ಆ ದಿನವನ್ನು ಸ್ಫೂರ್ತಿಯ ದಿನ ಅಥವಾ ಪ್ರೇರಣಾ ದಿನವನ್ನಾಗಿ ಘೋಷಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕೇವಲ ಸಿನಿಮಾದಲ್ಲಷ್ಟೇ ಅಲ್ಲದೆ ವ್ಯಕ್ತಿತ್ವ ಮತ್ತು ಸಾಮಾಜಿಕ ಸೇವಾ ಕಾರ್ಯಗಳಿಂದ ಪುನೀತ್ ಮಾಡಿದ್ದ ಕೆಲಸಗಳು ಎಲ್ಲರಿಗೂ ಪ್ರೇರಣೆಯಾಗಲಿ ಎಂದು ರಾಜ್ಯ ಸರ್ಕಾರ ಘೋಷಿಸಿದೆ.

    ಪುನೀತ್ ಅವರಿಗೆ ರಾಜ್ಯ ಸರ್ಕಾರ ಕರ್ನಾಟಕ ರತ್ನ ಪುರಸ್ಕಾರ ಘೋಷಿಸಿದ್ದ, ನವೆಂಬರ್ 1ರಂದು ರಾಜ್ಯೋತ್ಸವ ದಿನದಂದು ಪ್ರದಾನ ಮಾಡಲಿದೆ. ಈಗ ಸ್ಫೂರ್ತಿಯ ದಿನವಾಗಿ ಅವರ ಹುಟ್ಟುಹಬ್ಬವನ್ನು ಘೋಷಣೆ ಮಾಡಲಾಗುತ್ತಿದೆ.

    ಅಂದಹಾಗೆ ಪುನೀತ್ ಈಗಾಗಲೇ ಹಲವರಿಗೆ ಹಲವು ರೀತಿಯಲ್ಲಿ ಸ್ಫೂರ್ತಿಯಾಗಿದ್ದಾರೆ. ನೇತ್ರದಾನಕ್ಕೆ ಪುನೀತ್ ಪ್ರೇರಣೆಯಾಗಿರುವುದು ಇತಿಹಾಸವನ್ನೇ ಸೃಷ್ಟಿಸಿದೆ. 2 ಲಕ್ಷಕ್ಕೂ ಹೆಚ್ಚು ಜನ ನೋಂದಣಿ ಮಾಡಿಕೋಂಡಿದ್ದಾರೆ. ದಾನ-ಧರ್ಮ, ದೀನರ ಸೇವೆಯಲ್ಲಿಯೂ ಪುನೀತ್ ಸ್ಫೂರ್ತಿಯಿಂದಾಗಿಯೇ ಹಲವರು ತೊಡಗಿಸಿಕೊಂಡಿದ್ದಾರೆ.

  • ಮಾರ್ಚ್ 20ಕ್ಕೆ ಮೈಸೂರಿನಲ್ಲಿ ಯುವರತ್ನನ ಹಬ್ಬ

    ಮಾರ್ಚ್ 20ಕ್ಕೆ ಮೈಸೂರಿನಲ್ಲಿ ಯುವರತ್ನನ ಹಬ್ಬ

    ಯುವರತ್ನ ಚಿತ್ರದ ಬಿಡುಗಡೆ ಪ್ಲಾನ್ ಜೋರಾಗಿದೆ. ಏಪ್ರಿಲ್ 1ಕ್ಕೆ ರಿಲೀಸ್ ಆಗುತ್ತಿರೋ ಚಿತ್ರದ ಪ್ರಿ-ಇವೆಂಟ್ ಶೋವನ್ನು ಮೈಸೂರಿನಲ್ಲಿ ಮಾರ್ಚ್ 20ಕ್ಕೆ ಫಿಕ್ಸ್ ಮಾಡಿದೆ ಯುವರತ್ನ ತಂಡ.

    ಯುವರತ್ನ ಚಿತ್ರದ ಸುದ್ದಿಗೋಷ್ಠಿ ಮಾಡಿದ ಚಿತ್ರದ ನಿರ್ದೇಶಕ ಸಂತೋಷ್ ಆನಂದ ರಾಮ್, ನಟ ಪುನೀತ್ ರಾಜ್ ಕುಮಾರ್, ಕೆಆರ್‍ಜಿ ಸ್ಟುಡಿಯೋ ಮಾಲೀಕ ಕಾರ್ತಿಕ್ ಗೌಡ, ಡಾಲಿ ಧನಂಜಯ್, ನಟಿ ಸೋನು ಗೌಡ ಚಿತ್ರದ ಪ್ರಿ-ಇವೆಂಟ್ ಶೋ ಬಗ್ಗೆ ಮಾಹಿತಿ ನೀಡಿದ್ದಾರೆ.

    ಮೈಸೂರು  ಯುವರತ್ನ ಶೋನಲ್ಲಿ ವಿಜಯ್ ಪ್ರಕಾಶ್, ತಮನ್ ಅವರ ಟೀಂ, ಡ್ರಮ್ ಶಿವಮಣಿ ಮತ್ತು ಅರ್ಮಾನ್ ಮಲಿಕ್ ಕಾರ್ಯಕ್ರಮವೂ ಇರಲಿದೆ. ಅದೇ ದಿನ ಚಿತ್ರದ ಟ್ರೇಲರ್ ರಿಲೀಸ್ ಆಗಲಿದ್ದು, ಚಿತ್ರದಲ್ಲಿ ಒಂದೊಳ್ಳೆ ಮೆಸೇಜ್ ಇದೆ ಎಂದಿದ್ದಾರೆ ಪುನೀತ್ ರಾಜ್‍ಕುಮಾರ್.

  • ಮುನಿರತ್ನ ತ್ರಿಮೂರ್ತಿ ಚಿತ್ರಕ್ಕೆ ಪುನೀತ್ ಹೇಳಿದ್ದೇನು..?

    puneeth speaks on chandragupta maurya

    ಚಂದ್ರಗುಪ್ತ ಮೌರ್ಯನ ಕುರಿತ ಸಿನಿಮಾ ಮಾಡುವ ಆಸೆಯಿದೆ. ಪುನೀತ್, ಸುದೀಪ್ & ಉಪೇಂದ್ರ ಅವರನ್ನು ಹಾಕಿಕೊಂಡು ಸಿನಿಮಾ ಮಾಡಬೇಕು. ಸುದೀಪ್ ಅಲೆಕ್ಸಾಂಡರ್ ಪಾತ್ರ ಮಾಡಿದರೆ ಚೆಂದ ಎಂದೆಲ್ಲ ಕನಸು ಹಂಚಿಕೊಂಡಿದ್ದರು ನಿರ್ಮಾಪಕ ಮುನಿರತ್ನ. ಈ ಕುರಿತು ನಟ ಪುನೀತ್ ರಾಜ್‍ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

    ಚಂದ್ರಗುಪ್ತನಾಗುವ ಆಸೆ ನನಗೂ ಇದೆ. ಆದರೆ, ಈ ಬಗ್ಗೆ ನನಗೇನೂ ಗೊತ್ತಿಲ್ಲ. ಚಿತ್ರದ ಬಗ್ಗೆ ಮುನಿರತ್ನ ಅವರ ಹೇಳಿಕೆಗಳನ್ನು ಪತ್ರಿಕೆಗಳಿಂದಷ್ಟೇ ತಿಳಿದುಕೊಂಡಿದ್ದೇನೆ. ಅವರ ಆಸೆ, ಆಲೋಚನೆ ಅದ್ಭುತ ಎಂದಿದ್ದಾರೆ ಪುನೀತ್.

    ಐತಿಹಾಸಿಕ ಚಿತ್ರಗಳನ್ನು ಮಾಡುವುದು ದೊಡ್ಡ ಸವಾಲು. ತಾಂತ್ರಿಕತೆ ಅದ್ಬುತವಾಗಿರಬೇಕು ಎಂದು ಬಾಹುಬಲಿ ಸಿನಿಮಾ ಉದಾಹರಿಸುವ ಪುನೀತ್, ಕಥೆಯ ಜೊತೆ ತಾಂತ್ರಿಕವಾಗಿ ಕೂಡಾ ಶ್ರೀಮಂತಿಕೆ ಇಲ್ಲದೇ ಹೋದರೆ, ಐತಿಹಾಸಿಕ ಚಿತ್ರ ವಿಫಲವಾಗಬಹುದು ಎಂಬ ಆತಂಕ ವ್ಯಕ್ತಪಡಿಸುತ್ತಾರೆ. ಕುರುಕ್ಷೇತ್ರ ಚಿತ್ರದ ಸಾಹಸ ಆ ನಿಟ್ಟಿನಲ್ಲಿ ಯಶಸ್ವಿಯಾಗಲಿದೆ. ನಿಜಕ್ಕೂ ಕನ್ನಡದಲ್ಲಿ ಅದೊಂದು ದೊಡ್ಡ ಸಾಹಸ ಎಂದು ಕುರುಕ್ಷೇತ್ರ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.

    Related Articles :-

    ಸುದೀಪ್, ಪುನೀತ್, ಉಪೇಂದ್ರ ಒಟ್ಟಿಗೇ ನಟಿಸ್ತಾರಾ..?

  • ಮೈಸೂರಿನಲ್ಲಿ ಯುವರತ್ನ ದಸರೆಯೂ ಇಲ್ಲ.. ಅಪ್ಪುನೂ ಸಿಕ್ಕಲ್ಲ..!

    ಮೈಸೂರಿನಲ್ಲಿ ಯುವರತ್ನ ದಸರೆಯೂ ಇಲ್ಲ.. ಅಪ್ಪುನೂ ಸಿಕ್ಕಲ್ಲ..!

    ಕೊರೊನಾ ಮತ್ತೆ ಕೆರಳದೇ ಹೋಗಿದ್ದರೆ ಮಾರ್ಚ್ 20ರಂದು ಮೈಸೂರಿನಲ್ಲಿ ಯುವರತ್ನ ದಸರಾ ನಡೆಯಬೇಕಿತ್ತು. ಆದರೆ, ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ಸೋಂಕು ಪ್ರಕರಣಗಳ ಹಿನ್ನೆಲೆಯಲ್ಲಿ ಯುವರತ್ನ ಸಂಭ್ರಮ ರದ್ದಾಗಿದೆ. ಅನುಮತಿಯೂ ಸಿಕ್ಕಿಲ್ಲ ಎನ್ನುವುದು ಮೂಲಗಳು ನೀಡಿರುವ ಮಾಹಿತಿ. ಚಿತ್ರತಂಡವೂ ಇದನ್ನು ಅಧಿಕೃತವಾಗಿ ಹೇಳಿಕೊಂಡಿಲ್ಲ. ಮೈಸೂರಿನಲ್ಲಿ ಒಂದೇ ಕಡೆ ಸಂಭ್ರಮಾಚರಣೆ ಮಾಡುವ ಬದಲು ಎಲ್ಲ ಜಿಲ್ಲೆಗಳಿಗೂ ಟೂರ್ ಹೋಗಲು ತೀರ್ಮಾನಿಸಿದೆ ಯುವರತ್ನ ಟೀಂ. ಮಾರ್ಚ್ 21ರಿಂದಲೇ ಯುವರತ್ನ ಟೂರ್ ಶುರುವಾಗಲಿದೆ. ಯಾವ ಯಾವ ದಿನ.. ಎಲ್ಲೆಲ್ಲಿ ಯುವ ಸಂಭ್ರಮ ಅನ್ನೋದು ಶೀಘ್ರದಲ್ಲೇ ಅನೌನ್ಸ್ ಆಗಲಿದೆ.

    ಇನ್ನು ಮಾರ್ಚ್ 17ನೇ ತಾರೀಕು ಪುನೀತ್ ಮನೆ ಬಳಿ ಹೋಗಲೇಬೇಡಿ. ಆ ದಿನ ಪುನೀತ್ ಮನೆಯಲ್ಲಿ ಇರಲ್ಲ, ದೇವಸ್ಥಾನಗಳಿಗೆ ಕುಟುಂಬ ಸಮೇತ ಹೋಗಿರುತ್ತಾರೆ. ದಯವಿಟ್ಟು ಯಾರೂ ಮನೆಯ ಬಳಿ ಬರಬೇಡಿ ಎಂದು ಪ್ರಾರ್ಥಿಸಿದ್ದಾರೆ ಪುನೀತ್.

  • ಮೊಟ್ಟೆ ರಾಜ್‍ಗೆ ಲಡ್ಡು ಬಾಯಿಗೇ ಬಿತ್ತಾ..?

    did raj b shetty in puneet banner?

    ರಾಜ್ ಬಿ ಶೆಟ್ಟಿ. ಇವರನ್ನು ಹಾಕಿಕೊಂಡು ಹೊಸ ಸಿನಿಮಾ ಮಾಡೋಕೆ ಅಪ್ಪು ಉತ್ಸಾಹ ತೋರಿಸಿದ್ದಾರೆ. ಅವರ ಹೊಸ ಪಾರ್ವತಮ್ಮ ರಾಜ್‍ಕುಮಾರ್ (ಪಿಆರ್‍ಕೆ) ಬ್ಯಾನರ್ ಅಡಿಯಲ್ಲಿ 2ನೇ ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಆ 2ನೇ ಚಿತ್ರದ ಹೀರೋ ಆಗಿ ರಾಜ್ ಬಿ ಶೆಟ್ಟಿ ಆಯ್ಕೆಯಾಗುವ ಸಾಧ್ಯತೆ ಇದೆ.

    ರಾಜ್ ಬಿ ಶೆಟ್ಟಿ ಅಂದ್ರೆ ಯಾರಂತ ಗೊತ್ತಲ್ಲ. ಒಂದು ಮೊಟ್ಟೆಯ ಕಥೆಯ ಹೀರೋ. ರಾಧಾಕೃಷ್ಣ ಎಂಬುವವರು ನಿರ್ದೇಶಿಸಲಿರುವ ಚಿತ್ರದ ಕಥೆ ಪುನೀತ್‍ಗೆ ಇಷ್ಟವಾಗಿದೆ. ಆ ಕಥೆಗೆ ರಾಜ್ ಬಿ ಶೆಟ್ಟಿ ಸೂಕ್ತ ಆಯ್ಕೆ ಎನ್ನಿಸಿದೆ. ಪ್ರಕ್ರಿಯೆ ಶುರುವಾಗಿದೆ.

    ಈಗಾಗಲೇ ಕವಲುದಾರಿ ಎಂಬ ಚಿತ್ರದಲ್ಲಿ ಯುವನಟ ರಿಷಿಗೆ ಅವಕಾಶ ನೀಡಿದ್ದ ಪುನೀತ್, 2ನೇ ಚಿತ್ರದಲ್ಲೂ ಹೊಸಬರಿಗೇ ಬಾಗಿಲು ತೆರೆದಿದ್ದಾರೆ. ಆದರೆ, 3ನೇ ಚಿತ್ರದಲ್ಲಿ ಸ್ವತಃ ಪುನೀತ್ ನಾಯಕರಾಗುವ ಸಾಧ್ಯತೆಗಳಿವೆ. ಶಶಾಂಕ್ ನಿರ್ದೇಶನದ ಚಿತ್ರಕ್ಕೆ ಪುನೀತ್ ಓಕೆ ಎಂದಿದ್ದಾರೆ ಎನ್ನುವುದು ಸುದ್ದಿ. ಆಂಜನಿಪುತ್ರದ ನಂತರ ಆ ಚಿತ್ರ ಸೆಟ್ಟೇರಲಿದೆ.

  • ಮೊದಲ ಬಾರಿಗೆ ಅತಿಥಿ ನಟನಾಗಿ ಪುನೀತ್..!

    puneeth rajkumar in guest role for danish's film

    ಪುನೀತ್ ರಾಜ್‍ಕುಮಾರ್ ನಿರ್ಮಾಣದ, ದಾನಿಶ್ ಸೇಠ್ ಅಭಿನಯದ ಹೊಸ ಚಿತ್ರದಲ್ಲಿ ಸ್ವತಃ ಪುನೀತ್ ಅತಿಥಿ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದುವರೆಗೆ ಪುನೀತ್ ಯಾವುದೇ ಸಿನಿಮಾಗಳಲ್ಲಿ ಅತಿಥಿ ನಟನಾಗಿ ಕಾಣಿಸಿಕೊಂಡಿಲ್ಲ. ಬೇರೆಯವರ ಸಿನಿಮಾಗಳಲ್ಲಿ ಹಾಡಿದ್ದಾರೆ. ವಾಯ್ಸ್ ಓವರ್ ಕೊಟ್ಟಿದ್ದಾರೆ. ಅತಿಥಿ ನಟನಾಗಿರಲಿಲ್ಲ. ಅದನ್ನು ಈಗ ತಮ್ಮದೇ ನಿರ್ಮಾಣದ ಚಿತ್ರದಲ್ಲಿ ಬ್ರೇಕ ಮಾಡುತ್ತಿದ್ದಾರೆ ಪುನೀತ್.

    ಪನ್ನಗಾಭರಣ ನಿರ್ದೇಶನದ ಚಿತ್ರದ ಚಿತ್ರೀಕರಣ ಈಗಾಗಲೇ ಶುರುವಾಗಿದೆ. ಹೊಸ ವರ್ಷ.. ಹೊಸ ಸಿನಿಮಾ.. ಹೊಸ ಜರ್ನಿ.. ಈ ಬಾರಿ ಪುನೀತ್ ಅಣ್ಣ ಹಾಗೂ ಪನ್ನಗಾಭರಣ ಜೊತೆ ಆರಂಭವಾಗಿದೆ. ಇದೊಂದು ವಿಶೇಷವಾದ ಸಿನಿಮಾ ಎಂದು ಹೇಳಿಕೊಂಡಿದ್ದಾರೆ ದಾನಿಶ್ ಸೇಠ್.