` puneeth rajkumar, - chitraloka.com | Kannada Movie News, Reviews | Image

puneeth rajkumar,

  • ಫ್ಯಾಮಿಲಿ ಪವರ್ ಗ್ರೇಟ್ ಆಗಿದ್ದು ಈ ಕಾರಣಕ್ಕೆ..!

    family power's heartfelt episode

    ಫ್ಯಾಮಿಲಿ ಪವರ್. ಕಲರ್ಸ್ ಕನ್ನಡ ಚಾನೆಲ್‍ಗೆ ಪುನೀತ್ ರಾಜ್‍ಕುಮಾರ್ ನಡೆಸಿಕೊಡುತ್ತಿರುವ ಕೌಟುಂಬಿಕ ರಿಯಾಲಿಟಿ ಶೋ. ಅನ್ಯೋನ್ಯವಾಗಿರುವ ಕುಟುಂಬಗಳನ್ನು ಹುಡುಕಿ, ಅವರಿಂದ ಆಟವಾಡಿಸಿ, ಗೆದ್ದವರಿಗೆ ಬಹುಮಾನ ನೀಡುವ ಕಾರ್ಯಕ್ರಮ, ಪುನೀತ್ ರಾಜ್‍ಕುಮಾರ್ ಅವರಿಂದಾಗಿಯೇ ಹಿಟ್ ಆಯಿತು. ಕಾರ್ಯಕ್ರಮ ಹಿಟ್ ಎನ್ನುವುದಕ್ಕಿಂತ ಇನ್ನೊಂದು ಹೃದಯಸ್ಪರ್ಶಿ ವಿಷಯ ಕಾರ್ಯಕ್ರಮದಲ್ಲಿದೆ. ಈ ಕಾರ್ಯಕ್ರಮ ಹಲವರ ಬಾಳು ಬೆಳಗಿದೆ.

    ಕಾರ್ಯಕ್ರಮದಲ್ಲಿ ಮುಸ್ಲಿಂ ದಂಪತಿಯೊಂದು ಭಾಗವಹಿಸಿತ್ತು. ಅವರಿಗೆ ಎದುರಾಳಿಯಾಗಿದ್ದ ಕುಟುಂಬದಲ್ಲಿ ಮಗುವೊಂದರ ಚಿಕಿತ್ಸೆಗೆ ಹಣ ಬೇಕಿತ್ತು. ಈ ದಂಪತಿ ತಾವು ಗೆದ್ದ 3ಲಕ್ಷ ರೂ. ಬಹುಮಾನದ ಹಣವನ್ನು ಆ ಮಗುವಿನ ಚಿಕಿತ್ಸೆಗೆ ಕೊಟ್ಟರು.

    ಅದಷ್ಟೇ ಅಲ್ಲ, ಇನ್ನೊಂದು ಶೋನದಲ್ಲಿ ಭಾಗವಹಿಸಿದ್ದವರು ತಾವು ಗೆದ್ದ ಹಣವನ್ನು ಹುತಾತ್ಮ ಯೋಧರೊಬ್ಬರ ಕುಟುಂಬಕ್ಕೆ ನೀಡಿದರು. ಹೀಗೆ ಸರಣಿಯಲ್ಲಿ ಹಲವರು ಈ ರೀತಿ ಇನ್ನೊಬ್ಬರ ಕಷ್ಟಕ್ಕೆ ನೆರವಾಗಿ, ಫ್ಯಾಮಿಲಿ ಪವರ್ ಎಂದರೆ ಏನೆಂದು ತೋರಿಸಿಕೊಟ್ಟಿದ್ದಾರೆ.

    ಈಗ ರಿಯಾಲಿಟಿ ಶೋನ ಗ್ರ್ಯಾಂಡ್‍ಫೈನಲ್ ನಡೆಯುತ್ತಿದೆ. ಸೀರಿಯಲ್ ಕಲಾವಿದರು ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಇವರೆಲ್ಲರೂ ಆಟವಾಡುತ್ತಿರುವುದು ಪ್ರಚೇತ್ ಎಂಬ ಪುಟ್ಟಬಾಲಕನ ಚಿಕಿತ್ಸೆಗಾಗಿ. ಶ್ರವಣದೋಷವಿರುವ ಮಗುವಿನ ಚಿಕಿತ್ಸೆಗೆ ಇನ್ನೂ ಹೆಚ್ಚು ಹಣದ ಅಗತ್ಯವಿದೆ ಎಂಬ ಕಾರಣಕ್ಕಾಗಿ ಬಹುಮಾನದ ಮೊತ್ತವನ್ನು 10ರಿಂದ 15 ಲಕ್ಷಕ್ಕೆ ಹೆಚ್ಚಿಸಿದೆ ಕಲರ್ಸ್ ಕನ್ನಡ.

    ಕಿರುತೆರೆ ಶೋಗಳು ಈ ರೀತಿ ಸಮಾಜದ ಕಷ್ಟಕ್ಕೂ ಸ್ಪಂದಿಸಬಹುದು ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ ಈ ರಿಯಾಲಿಟಿ ಶೋ.

  • ಫ್ಯಾಮಿಲಿ ಶೋ ನಡೆಸಿಕೊಡ್ತಾರೆ ಪುನೀತ್

    puneeth in realiy show

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಮತ್ತೊಮ್ಮೆ ಕಿರುತೆರೆ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ತಿದ್ದಾರೆ. ಹಾಗಂತ, ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ ಮತ್ತೆ ಶುರುವಾಯ್ತು ಎಂದುಕೊಳ್ಳಬೇಡಿ. ಪುನೀತ್ ಈ ಬಾರಿ ರಿಯಾಲಿಟಿ ಶೋ ನಡೆಸಿಕೊಡ್ತಿರೋದು ಕಲರ್ಸ್ ಸೂಪರ್ ಕನ್ನಡ ವಾಹಿನಿಗೆ. ಅದು ಅವಿಭಕ್ತ ಕುಟುಂಬಗಳ ರಿಯಾಲಿಟಿ ಶೋ. ಆ ಶೋನಲ್ಲಿ ಕುಟುಂಬಗಳ ಸದಸ್ಯರು ಭಾಗವಹಿಸುತ್ತಾರೆ. ಅವರಿಗೆ ಕ್ವಿಜ್ & ಗೇಮ್‍ಗಳಿರುತ್ತವೆ.

    ಈ ಶೋ ಸತತ 20 ವಾರಗಳ ಕಾಲ, ಶನಿವಾರ ಮತ್ತು ಭಾನುವಾರಗಳಂದು ಪ್ರಸಾರವಾಗಲಿದೆ. ಒಟ್ಟು 40 ಶೋಗಳು ನಡೆಯಲಿವೆ. ಈ ರಿಯಾಲಿಟಿ ಶೋ ನಿರ್ದೇಶಿಸುತ್ತಿರುವ ಕಲರ್ಸ್ ಮತ್ತು ಕಲರ್ಸ್ ಸೂಪರ್ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್. ಬಿಗ್‍ಬಾಸ್ ನಿರ್ದೇಶಕರೂ ಇವರೇ. 

    ಫ್ಯಾಮಿಲಿ ಶೋಗೆ ಪುನೀತ್‍ಗಿಂತ ಅತ್ಯುತ್ತಮ ಆಯ್ಕೆಯಿಲ್ಲ. ಅವಿಭಕ್ತ ಕುಟುಂಬಗಳಲ್ಲಿ ಹುಟ್ಟಿ ಬೆಳೆದ ಪುನೀತ್, ಕೌಟುಂಬಿಕ ಮೌಲ್ಯಗಳನ್ನು ಸಾರುವ ಅತ್ಯುತ್ತಮ ವ್ಯಕ್ತಿ ಎಂದಿದ್ದಾರೆ ಪರಮೇಶ್ವರ್ ಗುಂಡ್ಕಲ್.

     

  • ಬಡವ ರ್ಯಾಸ್ಕಲ್ ಡಾಲಿ ಧನಂಜಯ್

    dhananjay's next is badava rascal

    ಬಡವ ರ್ಯಾಸ್ಕಲ್ ಅನ್ನೋದು ಅಣ್ಣಾವ್ರ ಸ್ಪೆಷಲ್ ಬೈಗುಳ. ಬಹುಶಃ ರಾಜ್ ಚಿತ್ರಗಳಲ್ಲಿ ಅತಿ ಹೆಚ್ಚು ಬೈಗುಳ ಇದೇ ಇರಬೇಕು. ಈಗ ಅದು ಹೊಸ ಚಿತ್ರದ ಟೈಟಲ್ ಆಗಿದೆ. ಬಡವ ರ್ಯಾಸ್ಕಲ್ ಆಗಿರೋದು ಡಾಲಿ ಧನಂಜಯ್.

    ಸಹಾಯಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಶಂಕರ್, ಈ ಚಿತ್ರದ ಮೂಲಕ ನಿರ್ದೇಶರಾಗುತ್ತಿದ್ದಾರೆ. ಧನಂಜಯ್‍ಗೆ ಅಮೃತಾ ಅಯ್ಯಂಗಾರ್ ಅನ್ನೋ ಹುಡುಗಿ ನಾಯಕಿ. ಅಂದಹಾಗೆ ಇದು ಕಾಮಿಡಿ ಜಾನರ್ ಇರುವ ಚಿತ್ರವಂತೆ. ಇದೇ ಆಗಸ್ಟ್ 23ಕ್ಕೆ ಸಿನಿಮಾ ಸೆಟ್ಟೇರುತ್ತಿದೆ.

  • ಬರಿಗಾಲಲ್ಲಿ ಚಾಮುಂಡಿ ಬೆಟ್ಟವೇರಿದ ಪುನೀತ್

    puneeth rajkumar in mysore chamundi betta

    ಮೈಸೂರಿನ ಚಾಮುಂಡೇಶ್ವರಿ ಬೆಟ್ಟವನ್ನು ಬರಿಗಾಲಲ್ಲಿ ಹತ್ತಿ, ದೇವಿಯನ್ನು ಪೂಜಿಸಿದರೆ, ಒಳ್ಳೆಯದಾಗುತ್ತೆ ಎನ್ನುವುದು ನಂಬಿಕೆ. ಹಲವು ರಾಜಕಾರಣಿಗಳು, ಸೆಲಬ್ರಿಟಿಗಳು ಚಾಮುಂಡಿ ಬೆಟ್ಟವನ್ನು ಬರಿಗಾಲಲ್ಲಿ ಹತ್ತುವ ಹರಕೆಯನ್ನೂ ಹೊತ್ತಿರುತ್ತಾರೆ. ಇನ್ನೂ ಕೆಲವರು ಅದಕ್ಕೆ ಪ್ರಚಾರವನ್ನೂ ಕೊಡುತ್ತಾರೆ. 

    ಆದರೆ, ಪುನೀತ್ ರಾಜ್‍ಕುಮಾರ್ ಸುದ್ದಿ ಮಾಡದೆ ಸದ್ದಿಲ್ಲದೆ ಹೋಗಿ ಬೆಟ್ಟವನ್ನು ಹತ್ತಿ ಚಾಮುಂಡಿಯ ದರ್ಶನ ಪಡೆದು ಬಂದಿದ್ದಾರೆ. ಇತ್ತೀಚೆಗೆ ತಮ್ಮ ಶಕ್ತಿಧಾಮ ಆಶ್ರಮದ ಕಾರ್ಯಕ್ರಮಕ್ಕೆ ಮೈಸೂರಿಗೆ ತೆರಳಿದ್ದ ಪುನೀತ್, ಬೆಟ್ಟವನ್ನು ಬರಿಗಾಲಿನಲ್ಲಿಯೇ ಹತ್ತಿರುವುದು ವಿಶೇಷ.

    ಪುನೀತ್‍ರನ್ನು ಗುರುತಿಸಿದ ಅಭಿಮಾನಿಗಳು, ತಮ್ಮ ಮೆಚ್ಚಿನ ನಟನ ಜೊತೆ ತಾವೂ ಬೆಟ್ಟ ಹತ್ತಿದ್ದಷ್ಟೇ ಅಲ್ಲ, ಪುನೀತ್ ಬೆಟ್ಟ ಇಳಿಯುವವರೆಗೂ ಜೊತೆಯಲ್ಲೇ ಇದ್ದರು. ಸೆಲ್ಫಿಗಾಗಿ ಪುನೀತ್‍ಗೆ ಮುಗಿಬಿದ್ದರು. ಪುನೀತ್ ಎಲ್ಲರೊಂದಿಗೂ ತಾಳ್ಮೆಯಿಂದಲೇ ಇದ್ದು, ತಾಯಿ ಚಾಮುಂಡೇಶ್ವರಿಯ ಪೂಜೆ ನೆರವೇರಿಸಿದರು. ಪುನೀತ್ ಹೀಗೆ ಚಾಮುಂಡಿ ಬೆಟ್ಟವನ್ನು ಹತ್ತುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಹಲವು ಬಾರಿ ಬೆಟ್ಟವನ್ನು ಬರಿಗಾಲಿನಲ್ಲಿಯೇ ಏರಿ ಬಂದಿದ್ದಾರೆ. 

  • ಬರ್ತಾವ್ನಪ್ಪೋ ಬರ್ತಾವ್ನೆ.. ಅಂಜನೀಪುತ್ರ ಬತ್ತಾವ್ನೆ..

    anjaniputra audio launch

    ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಹರ್ಷ ಕಾಂಬಿನೇಷನ್‍ನ ಮೊದಲ ಸಿನಿಮಾ ಅಂಜನೀಪುತ್ರ. ಜೊತೆಗೆ ರಶ್ಮಿಕಾ ಮಂದಣ್ಣ ಎಂಬ ಮುಂಜಾನೆಯ ಚೆಲುವೆ. ರಮ್ಯಕೃಷ್ಣ, ರವಿಶಂಕರ್, ಸಾಧುಕೋಕಿಲ, ಶೋಭರಾಜ್, ಚಿಕ್ಕಣ್ಣ, ವಿ.ಮನೋಹರ್ ಮೊದಲಾದ ಪ್ರತಿಭೆಗಳ ಮಿಲನ. ರವಿ ಬಸ್ರೂರ್ ಸಂಗೀತ ಇರೋ ಚಿತ್ರದ ಹವಾ ಜೋರಾಗಿಯೇ ಇದೆ.

    ಚಿತ್ರದ ಬಗ್ಗೆ ಸಿಕ್ಕಾಪಟ್ಟೆ ಸೀಕ್ರೆಟ್ ಕಾಪಾಡಿಕೊಂಡಿರುವ ಚಿತ್ರತಂಡ, ನೇರವಾಗಿ ಆಡಿಯೋ ರಿಲೀಸ್ ಮೂಲಕ ಹೊರಗೆ ಕಾಣಿಸಿಕೊಳ್ತಾ ಇದೆ. ನವೆಂಬರ್ 24ಕ್ಕೆ ಅಂಜನೀಪುತ್ರದ ಆಡಿಯೋ ರಿಲೀಸ್. ಚಿತ್ರದ ಆಡಿಯೋ ಪುನೀತ್ ರಾಜ್‍ಕುಮಾರ್ ಸ್ವಂತ ಆಡಿಯೋ ಕಂಪೆನಿ ಬ್ಯಾನರ್‍ನಿಂದ ಹೊರಬರುತ್ತಿದೆ. ಸಹಜವಾಗಿಯೇ ಚಿತ್ರದ ಮೇಲೆ ನಿರೀಕ್ಷೆಗಳು ಸಿಕ್ಕಾಪಟ್ಟೆ ಇವೆ.

  • ಬಲ್ಲಾಳದೇವ ರಾಣಾದಗ್ಗುಬಾಟಿ ಮೆಚ್ಚಿದ ಕನ್ನಡ ನಟ

    rana daggupathi's favourite kannada actor

    ಬಾಹುಬಲಿ ಚಿತ್ರದ ಬಲ್ಲಾಳದೇವನ ಪಾತ್ರದ ಮೂಲಕ ದೇಶಾದ್ಯಂತ ಸ್ಟಾರ್ ಆದ ರಾಣಾ ದಗ್ಗುಬಾಟಿ ಟ್ವಿಟರ್​ನಲ್ಲಿ ಸದಾ ಌಕ್ಟಿವ್ ಇರ್ತಾರೆ. ಅಭಿಮಾನಿಗಳ ಪ್ರಶ್ನೆಗಳಿಗೆ ಸದಾ ಉತ್ತರ ಕೊಡ್ತಿರ್ತಾರೆ.

    ಹಾಗೆ ಟ್ವಿಟರ್​ನಲ್ಲಿ ರಾಣಾಗೆ ಕನ್ನಡಿಗರೊಬ್ಬರು ಕನ್ನಡದಲ್ಲಿ ನಿಮಗೆ ಇಷ್ಟವಾದ ನಟ ಯಾರು? ಅನ್ನೋ ಪ್ರಶ್ನೆ ಕೇಳಿದ್ದಾರೆ. ತಕ್ಷಣ ರಾಣಾ ದಗ್ಗುಬಾಟಿ ಕೊಟ್ಟಿರುವ ಉತ್ತರ ಪುನೀತ್ ರಾಜ್​ಕುಮಾರ್. 

    ರಾಣಾ ದಗ್ಗುಬಾಟಿಯ ಉತ್ತರಕ್ಕೆ ಖುಷಿಯಾದ ಪುನೀತ್ ಅಭಿಮಾನಿಗಳು, ಒಂದ್ಸಲ ರಾಜಕುಮಾರ ಚಿತ್ರ ನೋಡಿ ಎಂದು ರಾಣಾಗೆ ಕೇಳಿಕೊಂಡಿದ್ದಾರೆ.

  • ಬಸವಶ್ರೀ ಪುನೀತ್ ರಾಜ್ ಕುಮಾರ್

    ಬಸವಶ್ರೀ ಪುನೀತ್ ರಾಜ್ ಕುಮಾರ್

    ಮುರುಘಾ ಮಠ ಪ್ರತೀ ವರ್ಷ ನೀಡುವ ಬಸವಶ್ರೀ ಪುರಸ್ಕಾರವನ್ನು ಪುನೀತ್ ರಾಜ್‍ಕುಮಾರ್ ಅವರಿಗೆ ನೀಡಲು ಮುಂದಾಗಿದೆ. 2022ರ ಬಸವಶ್ರೀ ಪುರಸ್ಕಾರವನ್ನು ಚಿತ್ರದುರ್ಗದ ಮುರುಘಾಮಠ ಪುನೀತ್ ಅವರಿಗೆ ಘೋಷಿಸಿದೆ. ಸ್ವತಃ ಮುರುಘಾ ಶರಣರು ಪ್ರಶಸ್ತಿ ಘೋಷಿಸಲಿದ್ದಾರೆ.

    2022ರ ಬಸವ ಜಯಂತಿ ದಿನ ಈ ಕಾರ್ಯಕ್ರಮ ನಡೆಯಲಿದ್ದು, ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಈ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಶಿವಣ್ಣ, ರಾಘಣ್ಣ ಸೇರಿದಂತೆ ರಾಜ್ ಕುಟುಂಬ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಲಿದೆ.

    ತಮ್ಮ ನಟನೆ, ಸೇವೆಗಳಿಂದ ಪುನೀತ್ ಈ ಪುರಸ್ಕಾರಕ್ಕೆ ಖಂಡಿತಾ ಪಾತ್ರರಾಗುತ್ತಿದ್ದರು. ಹೀಗಾಗಿ ಮರಣೋತ್ತರವಾಗಿ ಪುನೀತ್ ಅವರಿಗೆ ಗೌರವ ನೀಡುತ್ತಿದ್ದೇವೆ ಎಂದು ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಘೋಷಿಸಿದ್ದಾರೆ. ಪ್ರಶಸ್ತಿ 5 ಲಕ್ಷ ರೂ. ನಗದು ಹೊಂದಿದೆ.ಅನುಭವ ಮಂಟಪದಲ್ಲಿ ಕಾರ್ಯಕ್ರಮ ನೆರವೇರಲಿದೆ.

  • ಬಹದ್ದೂರ್ ಹೊತ್ತಲ್ಲೇ ಜೇಮ್ಸ್ ಜಾಕ್‍ಪಾಟ್

    james movie begins

    ಪುನೀತ್ ರಾಜ್‍ಕುಮಾರ್ ಅಭಿನಯದ ಜೇಮ್ಸ್ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಬಹುದ್ದೂರ್ ಚೇತನ್ ನಿರ್ದೇಶನದ ಚಿತ್ರವಿದು. ಸುಮಾರು 4 ವರ್ಷಗಳ ಹಿಂದೆಯೇ ಅನೌನ್ಸ್ ಆಗಿದ್ದ ಚಿತ್ರ ಇಷ್ಟು ತಡವಾಗಿದ್ದೇಕೆ..? ಕಾರಣ ಕಮಿಟ್‍ಮೆಂಟ್ಸ್.

    ಜೇಮ್ಸ್ ಚಿತ್ರಕ್ಕೆ ಬುನಾದಿ ಬಿದ್ದಿದ್ದು ಬಹದ್ದೂರ್ ಚಿತ್ರದಲ್ಲಿ. ಆ ಚಿತ್ರಕ್ಕೆ ಪುನೀತ್ ಹಿನ್ನೆಲೆ ಧ್ವನಿ ಕೊಟ್ಟಿದ್ದರು. ಆಗ ಪುನೀತ್ ಅವರಿಗೆ ಕಥೆ ಹೇಳಿದ್ದೆ. ಔಟ್ ಆಫ್ ದಿ ಬಾಕ್ಸ್ ಸ್ಟೋರಿ. ಅವರಿಗೂ ಇಷ್ಟವಾಗಿತ್ತು. ಆದರೆ,ನಡುವೆ ಬೇರೆ ಏನೇನೋ ಕಮಿಟ್‍ಮೆಂಟ್ಸ್ ಬಂದ ಕಾರಣ, ಮುಂದೆ ಹೋಗುತ್ತಲೇ ಹೋಯ್ತು ಎಂದಿದ್ದಾರೆ ಚೇತನ್.

    ಅಂದಹಾಗೆ ಇದು ಪುನೀತ್ ಅಭಿನಯದ 30ನೇ ಸಿನಿಮಾ. ಮಾರ್ಚ್ 17ಕ್ಕೆ ಪುನೀತ್ ಹುಟ್ಟುಹಬ್ಬವಿದ್ದು, ಆ ದಿನ ಟೀಸರ್ ಕೊಡ್ತಾರಂತೆ ಚೇತನ್. ಚಿತ್ರಕ್ಕೆ ಚೇತನ್ ಅವರ ಸ್ನೇಹಿತ ಶೇಖರ್ ನಿರ್ಮಾಪಕರು.

    ಅಪ್ಪ ಅಮ್ಮ ಹೆಸರಿಟ್ಟರೆ ವಾಡಿಕೆ, ನಮಗೆ ನಾವೇ ಹೆಸರಿಟ್ಕೊಂಡ್ರೆ ಅದು ಬೇಡಿಕೆ ಅನ್ನೋ ಡೈಲಾಗ್ ಮೂಲಕ ಜೇಮ್ಸ್ ಶುರುವಾಗಿದೆ. ಕ್ಲಾಪ್ ಮಾಡಿರೋದು ಅಶ್ವಿನಿ ಪುನೀತ್ ರಾಜ್‍ಕುಮಾರ್.

  • ಬಳ್ಳಾರಿಯಲ್ಲಿ ಪುನೀತ್ ಪ್ರತಿಮೆ ಅನಾವರಣ : ಇದು ರಾಜ್ಯದಲ್ಲೇ ದೊಡ್ಡ ಪ್ರತಿಮೆ

    ಬಳ್ಳಾರಿಯಲ್ಲಿ ಪುನೀತ್ ಪ್ರತಿಮೆ ಅನಾವರಣ : ಇದು ರಾಜ್ಯದಲ್ಲೇ ದೊಡ್ಡ ಪ್ರತಿಮೆ

    ಬಳ್ಳಾರಿಯಲ್ಲಿ ಪುನೀತ್ ರಾಜಕುಮಾರ್ ಅವರ ವಿಶೇಷ ಪ್ರತಿಮೆ, ರಾಜ್ಯದಲ್ಲೇ ಅತಿ ದೊಡ್ಡ ಪುನೀತ್ ರಾಜಕುಮಾರ್ ಪ್ರತಿಮೆ ಅನಾವರಣಗೊಂಡಿದೆ. ಭೌತಿಕವಾಗಿ ಇಲ್ಲದಿದ್ದರೂ, ಅಭಿಮಾನಿಗಳ ಹೃದಯದಲ್ಲಿ ಇವತ್ತಿಗೂ ಜೀವಂತವಾಗಿರುವ ಡಾ.ಪುನೀತ್ ರಾಜಕುಮಾರ್ ಅವರ ಪ್ರತಿಮೆಯನ್ನು ಬಳ್ಳಾರಿಯಲ್ಲಿ ಡಾ.ರಾಜ್ ಕುಟುಂಬ ಸದಸ್ಯರು ಉದ್ಘಾಟನೆ ಮಾಡಿದರು. ಅಶ್ವಿನಿ ಪುನೀತ್ ರಾಜಕುಮಾರ್ ಭಾವುಕರಾಗಿದ್ದರೆ, ರಾಘವೇಂದ್ರ ರಾಜಕುಮಾರ್ ಸ್ಥಿತಪ್ರಜ್ಞರಾಗಿದ್ದರು. ಬಳ್ಳಾರಿ ಉತ್ಸವದಲ್ಲಿ ಅನಾವರಣ ಮಾಡುವುದಕ್ಕಾಗಿಯೇ ಸಿದ್ಧವಾಗಿದ್ದ ಬೃಹತ್ ಪ್ರತಿಮೆ ಇದು.

    ಅಪ್ಪು ಪ್ರತಿಮೆಯ ವಿಶೇಷಗಳು ಒಂದೆರಡಲ್ಲ. ಪ್ರತಿಮೆಯ ಎತ್ತರ 23 ಅಡಿ. ಕಬ್ಬಿಣ ಮತ್ತು ಫೈಬರ್ ಬಳಸಿ ನಿರ್ಮಾಣ ಮಾಡಲಾಗಿದ್ದು ಪ್ರತಿಮೆಯ ಒಟ್ಟು ತೂಕ 3000 ಕೆಜಿ. 1 ಸಾವಿರ ಕೆಜಿ ಕಬ್ಬಿಣವೇ ಇದೆ. ಜಿಲ್ಲಾ ಕ್ರೀಡಾಂಗಣದ ಎದುರು ತಲೆಯೆತ್ತಲಿರುವ ಈ ಪ್ರತಿಮೆಗೆ ಉಕ್ಕಿನ ಜೊತೆ ಸ್ವಲ್ಪ ಫೈಬರ್ ಮಿಶ್ರಣ ಮಾಡಲಾಗಿದೆ. ಈ ಪ್ರತಿಮೆ ನಿರ್ಮಾಣಕ್ಕೆ ಮಾಡಿರುವ ವೆಚ್ಚ 22 ಲಕ್ಷ.

    ಪ್ರತಿಮೆ ನಿರ್ಮಾಣ ಮಾಡಿರುವುದು ಶಿವಮೊಗ್ಗ ಜಿಲ್ಲೆಯ ನಿಧಿಗೆ ಗ್ರಾಮದ ಹಿಂದೂ ಮಹಾಸಭಾದ ಬೃಹತ್ ಗಣಪತಿ ಪ್ರತಿಮೆ ಮಾಡುವ ಶಿಲ್ಪಿ ಜೀವನ್ ಅವರ ನೇತೃತ್ವದ ತಂಡ. ಜೀವನ್ ಹಾಗೂ 15 ಶಿಲ್ಪಿಗಳ ತಂಡ ಇದಕ್ಕಾಗಿ ಇಡೀ ತಂಡ 3 ತಿಂಗಳು ಶ್ರಮ ವಹಿಸಿದೆ. ರಾಜ್ಯದ ಹಲವೆಡೆ ಬೃಹತ್ ಗಣಪತಿ ಪ್ರತಿಮೆ ನಿರ್ಮಾಣ ಮಾಡಿರುವ ಖ್ಯಾತಿಯೂ ಈ ತಂಡಕ್ಕೆ ಇದೆ. ಕೆಜಿಎಫ್ ಸಿನಿಮಾದಲ್ಲಿ ಬಳಸಲಾಗಿರುವ ಯಶ್ ಅವರ ಪ್ರತಿಮೆಯ ಸೃಷ್ಟಿಕರ್ತರೂ ಇವರೇ.

    ಈ ಪ್ರತಿಮೆಯನ್ನು ಶಿವಮೊಗ್ಗದಿಂದ ಬಳ್ಳಾರಿಗೆ ತರುವುದಕ್ಕೆ 40 ಅಡಿ ಉದ್ದದ 18 ಚಕ್ರದ ಉದ್ದನೆಯ ಟ್ರಕ್ ಬಳಸಲಾಗಿದೆ.

    ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಕೂಡಾ ರಾಜ್ ಕುಟುಂಬದ ಜೊತೆ ಪ್ರತಿಮೆ ಅನಾವರಣಕ್ಕೆ ಸಾಕ್ಷಿಯಾದರು.

  • ಬಿ.ಸರೋಜಾದೇವಿ ಜೊತೆ ಪುನೀತ್

    b sarojadevi plays herself in natasarwabhowma

    ನಟಸಾರ್ವಭೌಮ. ಇದು ಪುನೀತ್ ರಾಜ್‍ಕುಮಾರ್ ಅಭಿನಯದ ಸಿನಿಮಾ. ರಣವಿಕ್ರಮ ನಂತರ ಮತ್ತೆ ನಿರ್ದೇಶಕ ಪವನ್ ಒಡೆಯರ್ ಮತ್ತು ಪುನೀತ್ ಒಂದಾಗಿರುವ ಚಿತ್ರ. ಚಿತ್ರಕ್ಕೆ ರಾಕ್‍ಲೈನ್ ವೆಂಕಟೇಶ್ ನಿರ್ಮಾಪಕರಾದರೆ, ರಚಿತಾ ರಾಮ್ ನಾಯಕಿ. ಈ ಚಿತ್ರದಲ್ಲಿ ಬಿ.ಸರೋಜಾದೇವಿ, ಚಿತ್ರನಟಿಯಾಗಿಯೇ ನಟಿಸಿದ್ದಾರೆ ಅನ್ನೋದು ವಿಶೇಷ.

    ಸಿನಿಮಾದಲ್ಲಿ ಪುನೀತ್ ಪತ್ರಕರ್ತರಾಗಿ ನಟಿಸಿದ್ದಾರೆ. ಪತ್ರಕರ್ತನಾಗಿ ಬಿ.ಸರೋಜಾದೇವಿಯವರನ್ನು ಪುನೀತ್ ಸಂದರ್ಶನ ಮಾಡುವ ದೃಶ್ಯ ಚಿತ್ರದಲ್ಲಿದೆ. ನನಗೆ ಇದೊಂದು ಹೆಮ್ಮೆಯ ಕ್ಷಣ. ಇಬ್ಬರು ಶ್ರೇಷ್ಟರನ್ನು ಒಟ್ಟಿಗೇ ನಿರ್ದೇಶಿಸುವ ಸೌಭಾಗ್ಯ ನನ್ನದು ಎಂದು ಬರೆದುಕೊಂಡಿದ್ದಾರೆ ಪವನ್ ಒಡೆಯರ್.

    ಪುನೀತ್ ರಾಜ್‍ಕುಮಾರ್ ಮತ್ತು ಬಿ.ಸರೋಜಾದೇವಿ ಎಂದರೆ ತಕ್ಷಣ ನೆನಪಾಗೋದು ಯಾರಿವನು ಚಿತ್ರದ ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ ಹಾಡು.. ಆಗ ಪುನೀತ್ ಮಾಸ್ಟರ್ ಲೋಹಿತ್ ಆಗಿದ್ದರು. ಈಗ ಪವರ್‍ಸ್ಟಾರ್ ಆಗಿದ್ದಾರೆ. ಮತ್ತೊಮ್ಮೆ ಸರೋಜಾದೇವಿ ಎದುರು ನಟಿಸಿದ್ದಾರೆ. 

  • ಬಿಬಿಎಂಪಿ ಆವರಣದಲ್ಲಿ ಪುನೀತ್ ಪುತ್ಥಳಿ. ಗಂಧದಗುಡಿ. ಸಾಧಕರಿಗೆ ಪುನೀತ್ ಪ್ರಶಸ್ತಿ..

    ಬಿಬಿಎಂಪಿ ಆವರಣದಲ್ಲಿ ಪುನೀತ್ ಪುತ್ಥಳಿ. ಗಂಧದಗುಡಿ. ಸಾಧಕರಿಗೆ ಪುನೀತ್ ಪ್ರಶಸ್ತಿ..

    ಪುನೀತ್ ರಾಜಕುಮಾರ್ ಅನ್ನೋದು ಕೇವಲ ಹೆಸರಲ್ಲ. ಅವರು ಕನ್ನಡಿಗರ ಉಸಿರು.. ಹೇಳಿದವರು ಸಿಎಂ ಬಸವರಾಜ ಬೊಮ್ಮಾಯಿ. ಶೀಘ್ರದಲ್ಲಿಯೇ ಪುನೀತ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಿದ್ದು, ರಾಜ್ ಕುಟುಂಬದವರೊಡನೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳೋದಾಗಿ ತಿಳಿಸಿದ್ದಾರೆ ಮುಖ್ಯಮಂತ್ರಿ. ಬೊಮ್ಮಾಯಿಯವರು ಇಷ್ಟೆಲ್ಲ ಮಾತನಾಡಿದ್ದು ಬಿಬಿಎಂಪಿ ಆವರಣದಲ್ಲಿ ನಡೆದ ಪುನೀತ್ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ.

    ಬಿಬಿಎಂಪಿ ನೌಕರರ ಸಂಘ ಹಮ್ಮಿಕೊಂಡಿದ್ದ ಕಾರ್ಯಕ್ರಮವಿದು. ಇದೇ ವೇಳೆ ಆವರಣದಲ್ಲಿ ಗಂಧದ ಗುಡಿ ಉದ್ಯಾನವನ ಉದ್ಘಾಟಿಸಿದರು. ಇದೇ ವೇಳೆ 12 ಸಾಧಕರಿಗೆ ಪುನೀತ್ ರಾಜಕುಮಾರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ನಟಿ ತಾರಾ ಅನುರಾಧಾ, ನಟ ಹೊನ್ನವಳ್ಳಿ ಕೃಷ್ಣ, ಹಿರಿಯ ನಿರ್ದೇಶಕ ಎಸ್.ಕೆ.ಭಗವಾನ್, ಮಾಜಿ ಮಂತ್ರಿ ಬಿ.ಟಿ.ಲಲಿತಾ ನಾಯಕ್, ಸುವರ್ಣ ನ್ಯೂಸ್‍ನ ಜಯಪ್ರಕಾಶ್ ಶೆಟ್ಟಿ ಉಪ್ಪಳ, ಟಿವಿ 9ನ ರಂಗನಾಥ ಭರಾದ್ವಜ್, ಆರ್.ಪಿ.ಜಗದೀಶ್, ನೇತ್ರತಜ್ಞ ರಂಗಸ್ವಾಮಿ, ಸಿಸಿಬಿಯ ಪರಮೇಶ್ವರ್, ರಮ್ಯಾ ವಸಿಷ್ಟ ಅವರು ಪ್ರಶಸ್ತಿ ಸ್ವೀಕರಿಸಿದರು.

  • ಬೆಟ್ಟದ ಹೂವಿನ ಊರಲ್ಲಿ ಪುನೀತ್ ಹುಡುಕಾಟ

    puneeth rajkumar walks through bettada hoovu shooting experience

    ಬೆಟ್ಟದ ಹೂವು. 1984ರಲ್ಲಿ ಬಂದಿದ್ದ ಸಿನಿಮಾ. ಪಾರ್ವತಮ್ಮ ರಾಜ್‍ಕುಮಾರ್ ನಿರ್ಮಾಣದ ಆ ಸಿನಿಮಾ, ಇವತ್ತಿಗೂ ಕನ್ನಡದ ಅತ್ಯುತ್ತಮ ಮಕ್ಕಳ ಚಿತ್ರಗಳಲ್ಲಿ ಒಂದು. ಪುನೀತ್ ರಾಜ್‍ಕುಮಾರ್‍ಗೆ ರಾಷ್ಟ್ರಪ್ರಶಸ್ತಿ ದೊರಕಿಸಿಕೊಟ್ಟಿದ್ದ ಸಿನಿಮಾ ಅದು. ಸಿನಿಮಾ ಬಂದಾಗ ಪುನೀತ್‍ಗೆ 10 ವರ್ಷ. ಈಗ.. 34 ವರ್ಷಗಳ ನಂತರ ಪುನೀತ್, ಬೆಟ್ಟದ ಹೂವಿನ ಚಿತ್ರೀಕರಣ ನಡೆದ ಜಾಗ ಅತ್ತಿಬೆಲೆಯಲ್ಲಿ ಆ ದಿನಗಳ  ಹುಡುಕಾಟ ನಡೆಸಿದ್ದಾರೆ. ನಟಸಾರ್ವಭೌಮ ಚಿತ್ರದ ಚಿತ್ರೀಕರಣಕ್ಕಾಗಿ ಹೋಗಿದ್ದ ಅಪ್ಪುಗೆ, ಇಲ್ಲಿಯೇ ಅಲ್ಲವಾ ಬೆಟ್ಟದ ಹೂವು ಚಿತ್ರೀಕರಣ ನಡೆಸಿದ್ದು ಎಂಬ ಬಾಲ್ಯದ ನೆನಪು ಮರುಕಳಿಸಿಬಿಟ್ಟಿದೆ. ತಕ್ಷಣವೇ ಹುಡುಕಾಟಕ್ಕೆ ನಿಂತುಬಿಟ್ಟಿದ್ದಾರೆ.

    ಚಿತ್ರದ ನಿರ್ದೇಶಕ ಲಕ್ಷ್ಮೀನಾರಾಯಣ್, ಚಿತ್ರೀಕರಣದ ವೇಳೆ ತಮ್ಮನ್ನು ನೋಡಿಕೊಂಡಿದ್ದ ಚಿಕ್ಕಪ್ಪ ವರದಪ್ಪ, ಬಾಲಣ್ಣ, ಹೊನ್ನವಳ್ಳಿ ಕೃಷ್ಣ, ಗೌರಿಶಂಕರ್, ಪದ್ಮಾವಾಸಂತಿ, ಬ್ರಹ್ಮಾವರ್.. ಹೀಗೆ ಎಲ್ಲರ ಜೊತೆ ಕಳೆದ ಕ್ಷಣಗಳನ್ನೂ ಮೆಲುಕು ಹಾಕಿದ್ದಾರೆ. ಕೆಲವು ಜಾಗಗಳು ನೆನಪಿಗೆ ಬಂದಿಲ್ಲ. ಊರಿನವರನ್ನು ಮಾತನಾಡಿಸಿ, ಜಾಗಗಳನ್ನೆಲ್ಲ ನೋಡಿ ಖುಷಿಪಟ್ಟಿದ್ದಾರೆ ಪುನೀತ್.

    ಅನಿರೀಕ್ಷಿತವಾಗಿ ಬಂದ ರಾಜಕುಮಾರನನ್ನು ಅಭಿಮಾನದಿಂದ ಸ್ವಾಗತಿಸಿದ ಅತ್ತಿಬೆಲೆ ಗ್ರಾಮದ ಜನ, ಅಪ್ಪು ಜೊತೆ ಫೋಟೋ ತೆಗೆಸಿಕೊಂಡು ಖುಷಿಪಟ್ಟಿದ್ದಾರೆ. ತಮ್ಮ ನೆನಪಿನ ಕಥೆಗಳನ್ನೂ ಹೇಳಿದ್ದಾರೆ.

    ಬೆಟ್ಟದ ಹೂವು.. ಮುಗ್ದ ಬಾಲಕನೊಬ್ಬನ ರಾಮಾಯಣ ಓದುವ ಕನಸು ಹೊತ್ತವನ ಸಿನಿಮಾ. ರಾಮಾಯಣ ಪುಸ್ತಕ ಕೊಳ್ಳಲೆಂದು ದಿನಕ್ಕೆ 10 ಪೈಸೆ ಕೂಡಿಟ್ಟು, 10 ರೂಪಾಯಿ ಆದ ಮೇಲೆ ರಾಮಾಯಣ ಕೊಳ್ಳದೆ, ಅಮ್ಮನಿಗೆ ರಗ್ಗು ತಂದುಕೊಡುವ ಬಾಲಕನ ಚಿತ್ರ. 

    ಆ ಚಿತ್ರದ ತಾಯಿ ಶಾರದೆ ಲೋಕ ಪೂಜಿತೆ.. ಇಂದಿಗೂ ಹಲವಾರು ಶಾಲೆಗಳಲ್ಲಿ ಪ್ರಾರ್ಥನಾ ಗೀತೆ. ಬಿಸಿಲೇ ಇರಲಿ.. ಮಳೆಯೇ ಬರಲಿ.. ಹಾಗೂ ಪಟ್ಟೆಹುಲಿ ಬಲು ಕೆಟ್ಟಹುಲಿ ಹಾಡುಗಳು ಇವತ್ತಿಗೂ ಜನಪ್ರಿಯ ಗೀತೆಗಳು. 

  • ಬೆಲ್‍ಬಾಟಂಗೆ ಅಪ್ಪು ಬಹುಪರಾಕ್

    puneeth applauds bellbottom

    ಬಾಕ್ಸಾಫೀಸ್‍ನಲ್ಲಿ ಮೋಡಿ ಮಾಡುತ್ತಿರುವ ಬೆಲ್‍ಬಾಟಂ ಸಿನಿಮಾಗೆ ಈಗ ಇನ್ನೂ ಒಂದು ಪವರ್ ಸಿಕ್ಕಿದೆ. ಅದು ಅಪ್ಪು ಪವರ್. ಸಿನಿಮಾ ನೋಡಿದ ಪುನೀತ್ ರಾಜ್‍ಕುಮಾರ್ ಚಿತ್ರವನ್ನು ಮನಸಾರೆ ಹೊಗಳಿದ್ದಾರೆ.

    35 ವರ್ಷಗಳ ಹಿಂದಿನ ದೃಶ್ಯ ಸೃಷ್ಟಿಸುವುದು ಅತಿದೊಡ್ಡ ಸವಾಲು. ಸಾಮಾನ್ಯದ ಮಾತಲ್ಲ. ರಿಷಬ್, ಹರಿಪ್ರಿಯಾ ಅಭಿನಯವಂತೂ ಅದ್ಭುತ. ಪೋಷಕ ಪಾತ್ರಧಾರಿಗಳ ಸಣ್ಣ ಸಣ್ಣ ದೃಶ್ಯಗಳೂ ಕೂಡಾ ಮನಮುಟ್ಟುತ್ತವೆ ಎಂದಿದ್ದಾರೆ ಅಪ್ಪು.

    ಅಷ್ಟೇ ಅಲ್ಲ, ಚಿತ್ರದಲ್ಲಿ ಡಿಟೆಕ್ಟಿವ್ ಸುಧಾಕರ ಸಿಐಡಿ 999 ಡಾ.ರಾಜ್ ಅಭಿಮಾನಿ. ಅಪ್ಪಾಜಿ ಮೇಲಿಟ್ಟಿರುವ ಪ್ರೀತಿಗೆ ನಾನು ಋಣಿ ಎಂದಿದ್ದಾರೆ ಅಪ್ಪು.

  • ಬೋಲೋ ಬೋಲೋ ಜೇಮ್ಸ್ : ಸ್ಯಾಂಡಲ್‍ವುಡ್ ಸೆಲಬ್ರೇಷನ್

    ಬೋಲೋ ಬೋಲೋ ಜೇಮ್ಸ್ : ಸ್ಯಾಂಡಲ್‍ವುಡ್ ಸೆಲಬ್ರೇಷನ್

    ಜೇಮ್ಸ್ ಟೀಸರ್ ಬಂದಿದೆ. ಅಪ್ಪು ಹೀರೋ ಆಗಿ ನಟಿಸಿರೋ ಕೊನೆಯ ಚಿತ್ರ ಜೇಮ್ಸ್. ಟೀಸರ್‍ನ ಕ್ಷಣ ಕ್ಷಣವೂ ಅದ್ಭುತ. ಅದ್ಧೂರಿತನ. ಕಥೆಯ ಒಂದೆಳೆಯನ್ನಷ್ಟೇ ಬಿಟ್ಟುಕೊಟ್ಟು ಜೇಮ್ಸ್ ಪರಿಚಯ ಮಾಡಿಸಿದ್ದಾರೆ ಚೇತನ್ ಕುಮಾರ್. ಅಪ್ಪುಗೆ ಧ್ವನಿಯಾಗಿರೋದು ಶಿವಣ್ಣ.

    ಚಿತ್ರದಲ್ಲಿರೋದು ಒಂದೇ ಡೈಲಾಗ್. ಮೊದಲಿಂದಲೂ ನನಗೆ ರೆಕಾರ್ಡ್ ಬ್ರೇಕ್ ಮಾಡಿನೇ ಅಭ್ಯಾಸ ಅನ್ನೋ ಡೈಲಾಗ್. ನೋಡುವ ಅಭಿಮಾನಿಗಳ ಹೃದಯದಲ್ಲಿ ಚಳಕ್ ಎಂದರೆ ಟೀಸರ್ ಮಾತ್ರ ವ್ಹಾವ್ ಎನಿಸುತ್ತೆ. ಎಲ್ಲೆಲ್ಲೂ ಟೀಸರ್ ಹವಾ ಎದ್ದಿದೆ. ದಾಖಲೆ ಬರೆಯುತ್ತಿದೆ. ಇಡೀ ಕನ್ನಡ ಚಿತ್ರರಂಗ ಟೀಸರ್‍ನ್ನು ಶೇರ್ ಮಾಡಿರೋದು ವಿಶೇಷ. ಕನ್ನಡದ ಜೊತೆಗೆ ತಮಿಳು ಹಾಗೂ ಹಿಂದಿಯಲ್ಲಿ ಕೂಡಾ ಟೀಸರ್ ಬಂದಿದೆ. ಎಲ್ಲ ಕಡೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ.

    ಕಿಶೋರ್ ಪತಿಕೊಂಡ ನಿರ್ಮಾಣದ ಜೇಮ್ಸ್ ರಿಲೀಸ್ ಆಗೋದು ಅಪ್ಪು ಹುಟ್ಟುಹಬ್ಬಕ್ಕೆ. ಮಾರ್ಚ್ 17ಕ್ಕೆ. ಚಿತ್ರದಲ್ಲಿ ಶಿವಣ್ಣ ಹಾಗೂ ರಾಘಣ್ಣ ಕೂಡಾ ನಟಿಸಿದ್ದಾರೆ. ಅಣ್ಣಾವ್ರ ಮಕ್ಕಳು ಒಂದೇ ಚಿತ್ರದಲ್ಲಿ ಕಾಣಿಸಿಕೊಂಡಿರೋ ಏಕೈಕ ಸಿನಿಮಾ ಜೇಮ್ಸ್. ಪ್ರಿಯಾ ಆನಂದ್ ನಾಯಕಿ. ಜೊತೆಗೆ ಶರತ್ ಕುಮಾರ್, ಶ್ರೀಕಾಂತ್, ಅನು ಪ್ರಭಾಕರ್, ಅವಿನಾಶ್, ರಂಗಾಯಣ ರಘು, ಸಾಧು ಕೋಕಿಲ, ಚಿಕ್ಕಣ್ಣ, ಸುಚೇಂದ್ರ ಪ್ರಸಾದ್.. ಹೀಗೆ ಚಿತ್ರದಲ್ಲಿ ಕಲಾವಿದರ ಸೈನ್ಯವೇ ಇದೆ.

  • ಬೋಲೋ ಬೋಲೋರೆ ಜೇಮ್ಸ್

    james motion poster sensation

    ಯುವರತ್ನ ಟೀಸರ್ ಮೂಲಕ ಬರ್ತ್ ಡೇ ಮೊದಲು ಹಬ್ಬ ಶುರುವಾಯ್ತು. ಹಬ್ಬದ ದಿನದ ಕಿಕ್ ಹೆಚ್ಚಿಸಿದ್ದು ಜೇಮ್ಸ್.

    ಹುಟ್ಟುಹಬ್ಬದ ದಿನ ಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ ಜೇಮ್ಸ್ ಡೈರೆಕ್ಟರ್ ಚೇತನ್ ಕುಮಾರ್. ಕಿಶೋರ್ ಪತಿಕೊಂಡ ನಿರ್ಮಾಣದ ಜೇಮ್ಸ್ ಮೋಷನ್ ಪೋಸ್ಟರ್‍ನಲ್ಲಿಯೇ ಮಸ್ತ್ ಮಸ್ತ್ ಥ್ರಿಲ್ ಕೊಟ್ಟಿದೆ.

    ಕಷ್ಟ ಬಂದಾಗ ಹೆದರೋದು ಕಾಮನ್, ಎಲ್ಲವನ್ನೂ ಎದುರಿಸಿ ನಿಲ್ಲೋನು ನಂಬರ್ ಒನ್ ಅನ್ನೋ ಡೈಲಾಗ್‍ನೊಂದಿಗೆ ಶುರುವಾಗುತ್ತೆ ಪೋಸ್ಟರ್. ಬೋಲೋ ಬೋಲೋರೆ ಜೇಮ್ಸ್ ಅನ್ನೋ ರ್ಯಾಪ್ ಸಾಂಗ್, ಚೇಸಿಂಗ್ ಥ್ರಿಲ್ ಎಲ್ಲವನ್ನೂ ಲೈಟಾಗಿ ಟಚ್ ಮಾಡಿಸಿ ಥ್ರಿಲ್ ಕೊಡ್ತಾರೆ ಚೇತನ್.

    ಚರಣ್ ರಾಜ್ ಸಂಗೀತ ಇರೋ ಚಿತ್ರಕ್ಕೆ ಚೇತನ್ ಇನ್ನೂ ನಾಯಕಿಯನ್ನು ಪೈನಲ್ ಮಾಡಿಲ್ಲ.

  • ಭಜರಂಗಿ ತಂಡ ಅಪ್ಪುಗೆ ವಂದನೆ ಸಲ್ಲಿಸಿದ್ದು ಹೀಗೆ..

    ಭಜರಂಗಿ ತಂಡ ಅಪ್ಪುಗೆ ವಂದನೆ ಸಲ್ಲಿಸಿದ್ದು ಹೀಗೆ..

    ಚಿತ್ರರಂಗದಲ್ಲಿ ಅಪ್ಪುಗೆ ಬೇರೆಯದೇ ಸ್ಥಾನಮಾನವಿತ್ತು. ಅಜಾತಶತ್ರುವಾಗಿದ್ದ ಪುನೀತ್, ತಮ್ಮ ಹತ್ತಿರ ಬಂದ ಪ್ರತಿಯೊಬ್ಬರ ಹೃದಯಕ್ಕೂ ಹತ್ತಿರವಾಗಿಬಿಡುತ್ತಿದ್ದರು. ಜಯಣ್ಣ ಭೋಗೇಂದ್ರರಿಗೂ ಅಷ್ಟೆ.. ಜಯಣ್ಣ ಕಂಬೈನ್ಸ್‍ನಲ್ಲಿ ಪುನೀತ್ ಈಗಾಗಲೇ ಪರಮಾತ್ಮ, ರಣವಿಕ್ರಮ ಚಿತ್ರಗಳಲ್ಲಿ ನಟಿಸಿದ್ದರು. ಅದನ್ನೂ ಮೀರಿದ ಬಾಂಧವ್ಯ ಅವರ ನಡುವೆ ಇತ್ತು. ಅದು ಈಗ ಭಜರಂಗಿ 2 ಚಿತ್ರದ ಪ್ರಚಾರದ ಜಾಹೀರಾತುಗಳಲ್ಲೂ ಕಾಣಿಸಿದೆ.

    ಭಜರಂಗಿ 2ನೇ ವಾರಕ್ಕೆ ಕಾಲಿಟ್ಟಾಗ ಚಿತ್ರತಂಡ ನೀಡಿದ ಜಾಹೀರಾತಿನಲ್ಲಿ ಚಿತ್ರದ ಹೀರೋ ಶಿವಣ್ಣ ಸೇರಿದಂತೆ ಚಿತ್ರತಂಡದ ಯಾರೊಬ್ಬರ ಚಿತ್ರವೂ ಇರಲಿಲ್ಲ. ಅಲ್ಲಿ ಇದ್ದದ್ದು ಪುನೀತ್ ಚಿತ್ರ. ಪ್ರತಿಯೊಬ್ಬ ಅಭಿಮಾನಿಯ ಅಂತರಾಳದಲ್ಲಿ ನೀವು ಅಜರಾಮರ ಎಂಬ ಹೃದಯ ಮುಟ್ಟುವ ಸಾಲುಗಳು.. 

  • ಭಾನುವಾರ ಸಂಜೆ ಚಿತ್ರಮಂದಿರಗಳಲ್ಲಿ ಪುನೀತ್`ಗೆ ನಮನ

    ಭಾನುವಾರ ಸಂಜೆ ಚಿತ್ರಮಂದಿರಗಳಲ್ಲಿ ಪುನೀತ್`ಗೆ ನಮನ

    ಭಾನುವಾರ ಸಂಜೆ ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲಿ ಪುನೀತ್ ರಾಜ್‍ಕುಮಾರ್ ಅವರಿಗಾಗಿ ಪುಷ್ಪಾಂಜಲಿ ದೀಪಾಂಜಲಿ ಗೀತಾಂಜಲಿ ಬಾಷ್ಪಾಂಜಲಿ.. ಮೂಲಕ ನಮನ ಸಲ್ಲಿಸಲಾಗುತ್ತಿದೆ. ಸಂಜೆ 6 ಗಂಟೆಗೆ ಪ್ರೇಕ್ಷಕರು, ಚಿತ್ರಮಂದಿರದ ಮಾಲೀಕರು, ಸಿಬ್ಬಂದಿ.. ಎಲ್ಲರೂ ಈ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

    ಡಾ.ವಿ.ನಾಗೇಂದ್ರ ಪ್ರಸಾದ್ ಅವರು ಬರೆದಿರುವ ಬೆಳ್ಳಿ ಬಾನಿನಲ್ಲಿ ಸೇರಿ ಹೋದೆ ಅಪ್ಪು ಹಾಡು ಹಾಡುವ ಮೂಲಕ ನಮನ ಸಲ್ಲಿಸಲಾಗುತ್ತಿದೆ. ಸಾಮೂಹಿಕವಾಗಿ ದೀಪ ಬೆಳಗಿ ಪುನೀತ್ ಅವರಿಗೆ ನಮಿಸಲಿದ್ದಾರೆ ಚಿತ್ರಮಂದಿರ ಮಾಲೀಕರು.

  • ಮಕ್ಕಳು ಅಪ್ಪು ಅವರನ್ನು ಏನಂತಾ ಕರೀತಾರೆ ಗೊತ್ತಾ..?

    ಮಕ್ಕಳು ಅಪ್ಪು ಅವರನ್ನು ಏನಂತಾ ಕರೀತಾರೆ ಗೊತ್ತಾ..?

    ಕನ್ನಡದಲ್ಲಿ ಅತೀ ಹೆಚ್ಚು ಪುಟ್ಟ ಮಕ್ಕಳ ಫ್ಯಾನ್ಸ್ ಹೊಂದಿರೋ ನಟ ಪುನೀತ್ ರಾಜ್‍ಕುಮಾರ್. ಪುನೀತ್ ಅವರ ಡ್ಯಾನ್ಸ್ ಅಂದ್ರೆ ಪುಟ್ಟ ಮಕ್ಕಳಿಗೆ ಪ್ರಾಣ. ಜೊತೆಗೆ ಪುನೀತ್ ಬಾಲನಟನಾಗಿಯೂ ಸ್ಟಾರ್ ಆಗಿದ್ದವರು. ಹೀಗಾಗಿಯೇ ಮಕ್ಕಳು ಪುನೀತ್ ಅವರನ್ನು ಸಿಕ್ಕಾಪಟ್ಟೆ ಇಷ್ಟಪಡ್ತಾರೆ.

    ಯುವರತ್ನ ಚಿತ್ರದ ಪ್ರಮೋಷನ್‍ನಲ್ಲಿ ದೊಡ್ಡವರಿಗಿಂತ ದೊಡ್ಡ ಮಟ್ಟದಲ್ಲಿ ಥ್ರಿಲ್ ಆಗಿರೋದು ಮಕ್ಕಳು. ಅಂದಹಾಗೆ ಅಪ್ಪು ಅವರನ್ನು ಕಂಡರೆ ಯಾವ ಮಕ್ಕಳೂ ಸರ್ ಎಂದೋ.. ಅಂಕಲ್ ಎಂದೋ ಕರೆಯಲ್ಲವಂತೆ. ಎಲ್ಲ ಮಕ್ಕಳಿಗೂ ನಾನು ಅಪ್ಪು ಮಾಮ ಆಗಿಬಿಟ್ಟಿದ್ದೇನೆ. ಅಪ್ಪು ಮಾಮ.. ಅಪ್ಪು ಮಾಮ.. ಎಂದೇ ಎಲ್ಲ ಮಕ್ಕಳೂ ಮಾತನಾಡಿಸೋದು ಎಂದು ಹೇಳಿಕೊಳ್ಳೋ ಪುನೀತ್ ಅವರಿಗೆ ಬಹುಶಃ ಅವರ ತಂದೆ ತಾಯಿ ಅವರಿಗೆ ಭಕ್ತ ಪ್ರಹ್ಲಾದ, ಎರಡು ನಕ್ಷತ್ರಗಳು ಸಿನಿಮಾಗಳನ್ನು ತೋರಿಸಿರಬೇಕು ಎಂದು ಹೇಳಿಕೊಳ್ತಾರೆ.

  • ಮಗನ ಪೋಟೋ ಇಟ್ಟುಕೊಂಡು ಯುವರತ್ನ ಚಲನಚಿತ್ರ ವೀಕ್ಷಣೆ ಮಾಡಿದ ಕುಟುಂಬಸ್ಥರು.

    ಮಗನ ಪೋಟೋ ಇಟ್ಟುಕೊಂಡು ಯುವರತ್ನ ಚಲನಚಿತ್ರ ವೀಕ್ಷಣೆ ಮಾಡಿದ ಕುಟುಂಬಸ್ಥರು.

    ಕಳೆದ ಮೂರು ತಿಂಗಳ ಹಿಂದೆ ಮಗನನ್ನು ಕಳೆದುಕೊಂಡಿದ್ದರು. ಪುನೀತ್ ರಾಜ್‍ಕುಮಾರ್ ಅಪ್ಪಟ ಅಭಿಮಾನಿಯಾಗಿದ್ದ ಮಗ ಹರಿಕೃಷ್ಣನ್. ಮೈಸೂರಿನ ನಿವಾಸಿ‌ ಮುರಳಿಧರ್ ಎಂಬುವವರ ಪುತ್ರ ಹರಿಕೃಷಣ್ಣನ್.

    ಯುವರತ್ನ ಸಿನಿಮಾ ನೋಡಬೇಕು ಎಂದು ಆಸೆ ಪಟ್ಟಿದ್ದ ಮಗ. ಆದರೆ‌ ಯುವರತ್ನ ಸಿನಿಮಾ ರಿಲೀಸ್ ಗು ಮುನ್ನ ಸಾವನಪ್ಪಿದ್ದ ಮಗ. ಈಜಲು ಹೋಗಿ ನೀರಲ್ಲಿ ಮುಳುಗಿ ಸಾವನಪ್ಪಿದ ಮಗ. ಮಗನ ಆಸೆಯನ್ನು ತೀರಿಸುವ ಸಲುವಾಗಿ ಪೋಟು ಇಟ್ಟುಕೊಂಡು  ಸಿನಿಮಾ ವೀಕ್ಷಣೆ ಮಾಡಿದ ಕುಟುಂಬಸ್ಥರು.

    ಮೈಸೂರಿನ ಡಿಆರ್ ಸಿ‌ ಮಲ್ಟಿಪ್ಲೆಕ್ಸ್ ನಲ್ಲಿ ಸಿನಿಮಾ ವೀಕ್ಷಣೆ. ತಂದೆ-ತಾಯಿ-ಹಿರಿಯ ಮಗನ ಜೊತೆ ಸಿನಿಮಾ ವೀಕ್ಷಣೆ. ಸಾವನಪ್ಪಿದ ಮಗನಿಗು ಒಂದು ಟಿಕೆಟ್ ತೆಗೆದುಕೊಂಡು ಪೋಟೋ ಇಟ್ಟುಕೊಂಡು ಚಲನಚಿತ್ರ ವೀಕ್ಷಣೆ.

  • ಮಂಜುನಾಥನ ಸನ್ನಿಧಿಯಲ್ಲಿ ಪುನೀತ್ ಭಕ್ತಿಗೀತೆ

    puneeth sings bhajan in dharmastala

    ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಧರ್ಮಸ್ಥಳದಲ್ಲಿ ನಡೆದ ಮಂಜುನಾಥೇಶ್ವರ ಭಜನಾ ಪರಿಷತ್ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದರು. ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿದ್ದರು ಪುನೀತ್. 300ಕ್ಕೂ ಹೆಚ್ಚು ಭಜನಾ ತಂಡಗಳು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ 3000ಕ್ಕೂ ಹೆಚ್ಚು ಭಜನೆ ಗಾಯಕರು ಭಾಗವಹಿಸಿದ್ದರು. 

    ಕಾರ್ಯಕ್ರಮದಲ್ಲಿ ಮಾತನಾಡಿದ ಪುನೀತ್, ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಪಕ್ಕದಲ್ಲಿ ವೇದಿಕೆ ಹಂಚಿಕೊಂಡಿದ್ದೇ ನನ್ನ ಸೌಭಾಗ್ಯ ಎಂದರು. ಹಾಲಲ್ಲಾದರೂ ಹಾಕು.. ನೀರಲ್ಲಾದರೂ ಹಾಕು ರಾಘವೇಂದ್ರ.. ಹಾಡನ್ನು ಹಾಡಿ ಭಕ್ತರ ಮನರಂಜಿಸಿದರು.