` puneeth rajkumar, - chitraloka.com | Kannada Movie News, Reviews | Image

puneeth rajkumar,

 • ಪುನೀತ್-ರಾಕ್‍ಲೈನ್ ಸಿನಿಮಾ ಸ್ಟಾರ್ಟ್

  puneeth's new film launched

  ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್, ರಾಕ್‍ಲೈನ್ ವೆಂಕಟೇಶ್ ಹಾಗೂ ಪವನ್ ಒಡೆಯರ್ ಕಾಂಬಿನೇಷನ್‍ನ ಹೊಸ ಸಿನಿಮಾ ಶುರುವಾಗಿದೆ. ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ.

  ಪ್ರೊಡಕ್ಷನ್ ನಂ.9 ಹೆಸರಲ್ಲಿ ಶುರುವಾಗಿರುವ ಚಿತ್ರಕ್ಕೆ ಶುಭ ಕೋರಿದ್ದು ನಿರ್ಮಾಪಕ ಮುನಿರತ್ನ.

  rockline_puneeth_newmovie_2.jpgರಣವಿಕ್ರಮ ಚಿತ್ರದ ನಂತರ ಪವನ್ ಒಡೆಯರ್, ಎರಡನೇ ಬಾರಿಗೆ ಪುನೀತ್ ಸಿನಿಮಾ ನಿರ್ದೇಶಿಸುತ್ತಿರುವುದು ವಿಶೇಷ. ಇನ್ನು ರಾಕ್‍ಲೈನ್ ವೆಂಕಟೇಶ್ ಕೂಡಾ ಹಲವು ವರ್ಷಗಳ ನಂತರ ಪುನೀತ್ ಸಿನಿಮಾ ನಿರ್ಮಿಸುತ್ತಿದ್ದಾರೆ. ಹೀಗಾಗಿಯೇ ಚಿತ್ರ ಶುರುವಾಗುತ್ತಿದ್ದಂತೆಯೇ ನಿರೀಕ್ಷೆಗಳೂ ಶುರುವಾಗಿವೆ.

 • ಪುನೀತ್, ಪರಶುರಾಮನೋ.. ದೇವತಾ ಮನುಷ್ಯನೋ..?

  puneeth rajkumar's next film is parashurama

  ಪುನೀತ್ ರಾಜ್‍ಕುಮಾರ್, ಸಂತೋಷ್ ಆನಂದ್‍ರಾಮ್ ಹಾಗೂ ಹೊಂಬಾಳೆ ಫಿಲಂಸ್ ಕಾಂಬಿನೇಷನ್‍ನ ಹೊಸ ಸಿನಿಮಾ ಶೀಘ್ರದಲ್ಲೇ ಶುರುವಾಗಲಿದೆ. ನಟಸಾರ್ವಭೌಮ ಮುಗಿಸಿದ ತಕ್ಷಣ ಈ ಚಿತ್ರದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಪುನೀತ್. ಚಿತ್ರದ ಕಥೆ ಸಾಮಾಜಿಕ ಸಮಸ್ಯೆಯೊಂದರ ಸುತ್ತ ಇದೆ ಎನ್ನಲಾಗಿದ್ದು, ಕಥೆ ಇನ್ನೂ ಗುಟ್ಟಾಗಿಯೇ ಇದೆ.

  ಇಷ್ಟಕ್ಕೂ ಚಿತ್ರದ ಟೈಟಲ್ ಏನು ಎಂಬ ಪ್ರಶ್ನೆಗೆ ಸಂತೋಷ್ ಆನಂದ್‍ರಾಮ್ ಎದುರು ಎರಡು ಆಯ್ಕೆಗಳಿವೆ. ಒಂದು ಪರಶುರಾಮ್, ಎರಡನೆಯದ್ದು ದೇವತಾ ಮನುಷ್ಯ. ಎರಡೂ ಕೂಡಾ ಡಾ.ರಾಜ್ ಚಿತ್ರಗಳ ಹೆಸರುಗಳೇ. ಪರಶುರಾಮ್, ಪುನೀತ್ ಬಾಲನಟನಾಗಿ ಕಾಣಿಸಿಕೊಂಡ ಕೊನೆಯ ಸಿನಿಮಾ. ದೇವತಾ ಮನುಷ್ಯ, ಅಣ್ಣಾವ್ರ ಕ್ಲಾಸಿಕ್‍ಗಳಲ್ಲಿ ಒಂದು.

  ಚಿತ್ರತಂಡದ ಒಳಗೆ ಪರಶುರಾಮ ಅನ್ನೋ ಹೆಸರಿಗೆ ಹೆಚ್ಚು ಒಲವು ವ್ಯಕ್ತವಾಗುತ್ತಿದೆಯಂತೆ. ಆದರೆ, ಚಿತ್ರದ ಟೈಟಲ್ ತಿಳಿದುಕೊಳ್ಳೋಕೆ ಗಣೇಶನ ಹಬ್ಬದವರೆಗೂ ಕಾಯಬೇಕು ಎನ್ನುತ್ತಿದ್ದಾರೆ ಸಂತೋಷ್.

 • ಪುನೀತ್.. ಈಗ ಪಕ್ಕಾ ಕಮರ್ಷಿಯಲ್..!

  puneeth in naanu pakka commercial

  ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್, ಕನ್ನಡ ಚಿತ್ರರಂಗದವರ ಪಾಲಿಗೆ ಪ್ರೀತಿಯ ಅಪ್ಪು. ಸ್ನೇಹ, ಬಾಂಧವ್ಯಗಳ ವಿಚಾರಕ್ಕೆ ಬಂದರೆ, ಕಮರ್ಷಿಯಲ್ ವಿಚಾರಗಳನ್ನು ಸ್ವಲ್ಪ ದೂರವೇ ಇಟ್ಟು ನೋಡುವ ವ್ಯಕ್ತಿ. ಅವರು ಕಮರ್ಷಿಯಲ್ ಆಗಿದ್ದಾರೆ ಅಂದ್ರೆ, ಕನ್‍ಫ್ಯೂಸ್ ಆಗಲ್ವಾ..? ಆಗುತ್ತೆ. ಆದರೆ, ಇದು ನಿಜ. 

  ಅಂದಹಾಗೆ ನಾವ್ ಹೇಳ್ತಾ ಇರೋದು ವಾಸು.. ನಾನ್ ಪಕ್ಕಾ ಕಮರ್ಷಿಯಲ್ ಅನ್ನೋ ಚಿತ್ರದ ಬಗ್ಗೆ. ಅದು ಅನೀಶ್ ತೇಜೇಶ್ವರ್ ಅಭಿನಯದ ಚಿತ್ರ. ಅಕಿರ ಅನ್ನೋ ವಿಭಿನ್ನ ಚಿತ್ರದ ಮೂಲಕ ಪರಿಚಯವಾಗಿದ್ದ ಅನೀಶ್ ಅವರ ಹೊಸ ಸಿನಿಮಾ ವಾಸು.. ನಾನ್ ಪಕ್ಕಾ ಕಮರ್ಷಿಯಲ್. ಈ ಚಿತ್ರಕ್ಕೆ ಅಪ್ಪು ಒಂದು ಯುಗಳ ಗೀತೆಗೆ ದನಿಯಾಗಿದ್ದಾರೆ.

  ಅಕಿರ ಚಿತ್ರಕ್ಕೂ ಒಂದು ಹಾಡು ಹಾಡಿದ್ದ ಪುನೀತ್, ಈ ಚಿತ್ರದಲ್ಲಿ ಡ್ಯುಯೆಟ್ ಸಾಂಗ್ ಹಾಡಿರೋದು ವಿಶೇಷ. ಸಾಮಾನ್ಯವಾಗಿ ಪುನೀತ್ ಹಾಡುಗಳಲ್ಲಿ ಯುಗಳ ಗೀತೆಗಳಿಗಿಂತ ಇಂಟ್ರೊಡಕ್ಷನ್ ಸಾಂಗ್, ಟೈಟಲ್ ಸಾಂಗ್ ಹಾಡಿಸ್ತಾರೆ. ಆದರೆ, ಈ ಚಿತ್ರದಲ್ಲಿ ರೊಮ್ಯಾಂಟಿಕ್ ಸಾಂಗ್‍ಗೆ ಧ್ವನಿಯಾಗಿದ್ದಾರೆ ಅಪ್ಪು. ಅಪ್ಪು ಹಾಡಿರುವ ಹಾಡನ್ನು ನಾರ್ವೆಯಲ್ಲಿ ಶೂಟಿಂಗ್ ಮಾಡಲಾಗುತ್ತಿದೆ.

   

 • ಪುನೀತ್‍ಗೆ ಕೊನೆಗೂ ಸಿಕ್ಕಿತು ವಾಲ್ಮೀಕಿ ರಾಮಾಯಣ

  puneeth finally gets valmiki ramayana

  ಬೆಟ್ಟದ ಹೂವು ಸಿನಿಮಾ ನೋಡಿದ್ದೀರಿ ತಾನೇ. ಅದು ಪುನೀತ್‍ಗೆ ಬಾಲ್ಯದಲ್ಲೇ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಚಿತ್ರ. ಆ ಚಿತ್ರದ ಕಥೆಯಾದರೂ ಏನ್ ಗೊತ್ತಾ..? ಬಡವರ ಮನೆಯ ಹುಡುಗ, ಪೈಸೆ ಪೈಸೆ ಕೂಡಿಟ್ಟು ವಾಲ್ಮೀಕಿ ರಾಮಾಯಣ ಖರೀದಿಸಿ ಓದುವ ಆಸೆ ಇಟ್ಟುಕೊಂಡಿರುತ್ತಾನೆ. 10 ರೂಪಾಯಿ ಕೂಡಿಸಿ, ರಾಮಾಯಣದ ಪುಸ್ತಕ ಕೊಂಡುಕೊಳ್ಳಬೇಕು ಅನ್ನೊದು ಬಾಲಕ ಪುನೀತ್‍ನ ಜೀವನದ ಗುರಿ. ಆದರೆ, 10 ರೂಪಾಯಿ ಕೂಡಿದ ಮೇಲೆ ಮನೆಯ ಕಷ್ಟಗಳು ಅವನ ಮನಕಲಕುತ್ತವೆ. ವಾಲ್ಮೀಕಿ ರಾಮಾಯಣ ಖರೀದಿಸಬೇಕು ಎಂದಿದ್ದವನು ಮನೆಗೆ ರಗ್ಗು ತೆಗೆದುಕೊಂಡು ಹೋಗುತ್ತಾನೆ. ಚಳಿಯಲ್ಲಿ ನಡುಗುವ ತಾಯಿಗೆ ರಗ್ಗು ಕೊಡುತ್ತಾನೆ. ಪ್ರೇಕ್ಷಕರ ಕಣ್ಣಲ್ಲಿ ನೀರಾಡಿರುತ್ತೆ. ಇದು ಸಿನಿಮಾ ಕಥೆ.

  ಆದರೆ, ಸಿನಿಮಾ ಆದ ಮೇಲೆ ವಾಲ್ಮೀಕಿ ರಾಮಾಯಣ ಪುಸ್ತಕ ಖರೀದಿಸಬೇಕು ಎಂದು ಪುನೀತ್‍ಗೂ ಅನಿಸಿತ್ತಂತೆ. ಬೇರೆ ಪುಸ್ತಕಗಳನ್ನು ಓದಿದರೂ, ವಾಲ್ಮೀಕಿ ರಾಮಾಯಣ ಪುಸ್ತಕ ಸಿಕ್ಕಿರಲಿಲ್ಲ. ಅದನ್ನು ಈಗ ಅಭಿಮಾನಿಯೊಬ್ಬರು ಈಡೇರಿಸಿದ್ದಾರೆ. ಪುನೀತ್‍ರನ್ನು ಇತ್ತೀಚೆಗೆ ಭೇಟಿ ಮಾಡಿದ ಅಭಿಮಾನಿಯೊಬ್ಬರು ಪುನೀತ್‍ಗೆ ವಾಲ್ಮೀಕಿ ರಾಮಾಯಣ ಪುಸ್ತಕವನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಅಮೂಲ್ಯ ವಜ್ರವೇನೋ ಎಂಬಷ್ಟು ಜತನದಿಂದ ಕಾಪಿಟ್ಟುಕೊಂಡಿರುವ ಪುನೀತ್, ಅದನ್ನು ಸಂಭ್ರಮದಿಂದ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ.

 • ಪುನೀತ್ಗೆ ದಿನಕರ್ ತೂಗುದೀಪ ಡೈರೆಕ್ಷನ್..?

  ಪುನೀತ್ಗೆ ದಿನಕರ್ ತೂಗುದೀಪ ಡೈರೆಕ್ಷನ್..?

  ಜೊತೆ ಜೊತೆಯಲಿ, ನವಗ್ರಹ,  ಸಾರಥಿ, ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರಗಳ ಮೂಲಕ ಸ್ಟಾರ್ ಡೈರೆಕ್ಟರ್ ಪಟ್ಟಕ್ಕೇರಿರುವ ದಿನಕರ್ ತೂಗುದೀಪ್, ಈಗ ಹೊಸ ಚಿತ್ರಕ್ಕೆ ರೆಡಿಯಾಗುತ್ತಿದ್ದಾರೆ. ಅದರಲ್ಲೂ ಈ ಬಾರಿ ಪುನೀತ್ ರಾಜ್ಕುಮಾರ್ ಜೊತೆ ಸಿನಿಮಾ ಮಾಡ್ತಾರೆ. ಇಂತಾದ್ದೊಂದು ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

  ದಿನಕರ್, ನಟರನ್ನು ಮನಸ್ಸಿನಲ್ಲಿಟ್ಟುಕೊಂಡು ಕಥೆ ಮಾಡುವವರಲ್ಲ. ಈ ಬಾರಿ ಲಾಕ್ ಡೌನ್ ಮಧ್ಯೆ ಒಂದು ಚೆಂದದ ಕಥೆ ಸಿದ್ಧ ಮಾಡಿಟ್ಟುಕೊಂಡಿದ್ದು, ಆ ಕಥೆಗೆ ಪುನೀತ್ ಹೊಂದುತ್ತಾರಂತೆ. ಈ ಬಗ್ಗೆ ಪುನೀತ್ ಆಗಲಿ, ದಿನಕರ್ ಆಗಲೀ ಏನೂ ಹೇಳಿಲ್ಲ. ಆದರೆ, ಗಾಂಧಿನಗರದಲ್ಲಿ ಸುದ್ದಿ ಭರ್ಜರಿಯಾಗಿ ಹರಿದಾಡುತ್ತಿರೋದಂತೂ ಸತ್ಯ. ನಿಜವಾದರೆ, ಒಂದೊಳ್ಳೆ ಸಿನಿಮಾ ಗ್ಯಾರಂಟಿ.

 • ಪುನೀತ್‍ಗೆ ಯಾವ ಊಟ ಇಷ್ಟ..?

  ಪುನೀತ್‍ಗೆ ಯಾವ ಊಟ ಇಷ್ಟ..?

  ಊಟದ ವಿಚಾರಕ್ಕೆ ಬಂದ್ರೆ ಥೇಟು ಅಪ್ಪನ ತರಾನೆ. ಪುನೀತ್ ಒಳ್ಳೆಯ ಊಟ ಸಿಗುತ್ತೆ ಅಂದ್ರೆ ಮಿಸ್ ಮಾಡೋದೇ ಇಲ್ಲ. ನಾನ್‍ವೆಜ್ ಇಷ್ಟ.. ಹಾಗಂತ ವೆಜ್ ಇಷ್ಟವಿಲ್ಲ ಎಂದೇನಿಲ್ಲ. ಒಳ್ಳೆಯ ಊಟವನ್ನು ಎಲ್ಲಿ ಬೇಕಾದರೂ ಸಖತ್ತಾಗಿ ಬಾರಿಸುವ ಪುನೀತ್ ಅವರಿಗೆ ಇಷ್ಟವಾದ ಊಟ ಯಾವುದು..?

  ಇಂತಹುದೇ ಅಂತೇನಿಲ್ಲ. ನಾನು ಎಲ್ಲಿಗೇ ಹೋದರೂ ಅಲ್ಲಿಯ ಲೋಕಲ್ ಫುಡ್ ಇಷ್ಟಪಡ್ತೇನೆ. ನನಗೆ ಕರ್ನಾಟಕದಲ್ಲಂತೂ ಆಲ್‍ಮೋಸ್ಟ್ ಒಳ್ಳೆಯ ಊಟ ಸಿಗುವ ಜಾಗಗಳೆಲ್ಲ ಗೊತ್ತು. ದೊಡ್ಡ ದೊಡ್ಡ ಹೋಟೆಲ್‍ಗಳು ಅಂತಾನೇ ಅಲ್ಲ. ಯಾವ ಊರಿನ ಯಾವ ತಳ್ಳುವ ಗಾಡಿಯಲ್ಲಿ ಎಂತಹ ಸ್ಪೆಷಲ್ ಸಿಗುತ್ತೆ ಅನ್ನೋದನ್ನೂ ತಿಳ್ಕೊಂಡಿದ್ದೇನೆ. ಯಾವ ಗಲ್ಲಿಯಲ್ಲಿ ಯಾವ ಮೂಲೆಯಲ್ಲಿ ಒಳ್ಳೆಯ ಊಟ, ತಿಂಡಿ ಸಿಗುತ್ತೆ ಅನ್ನೋದೂ ಗೊತ್ತು. ಇಡೀ ಇಂಡಿಯಾದಲ್ಲಿ ಎಲ್ಲಿಗೇ ಹೋದರೂ ಒಳ್ಳೆಯ ಊಟವಂತೂ ಸಿಗುತ್ತೆ ಎನ್ನುವ ಪುನೀತ್ ಅವರಿಗೆ ಹತ್ತಿರವಾಗೋಕೆ ಒಂದೇ ಐಡಿಯಾ ಇರೋದು.

  ಪುನೀತ್ ಅವರಿಗೆ ಅವರಿಗೆ ಗೊತ್ತಿಲ್ಲದ ಒಳ್ಳೆಯ ಫುಡ್ ಸಿಗುವ ಜಾಗ ಹೇಳಿ, ಅಲ್ಲಿಗೆ ಕರೆದುಕೊಂಡು ಹೋದರೆ ಸಾಕು. ಹ್ಞಾಂ.. ಪುನೀತ್ ಅವರು ಎಲ್ಲಿ ಬೇಕಾದರೂ ಊಟ ಮಾಡ್ತಾರೆ. ಸ್ಟಾರ್ ಹೋಟೆಲ್ಲೇ ಬೇಕು ಎಂದೇನೂ ಇಲ್ಲ. ತಟ್ಟಿಗೆ ಹೋಟೆಲ್ ಆದರೂ ನೋ ಪ್ರಾಬ್ಲಂ. ಕ್ಲೀನ್ & ರುಚಿಯಾಗಿರಬೇಕು.. ಅಷ್ಟೆ..

  ಅಂದಹಾಗೆ ಇದೆಲ್ಲವನ್ನೂ ಸ್ವತಃ ಪುನೀತ್ ಅವರೇ ಯುವರತ್ನ ಚಿತ್ರದ ಪ್ರಮೋಷನ್ ಇಂಟರ್‍ವ್ಯೂನಲ್ಲಿ ಹೇಳಿಕೊಂಡಿದ್ದಾರೆ.

 • ಪುನೀತ್‍ರಿಂದ ತೂಗುದೀಪ ದರ್ಶನ ಪುಸ್ತಕ ಬಿಡುಗಡೆ

  puneeth rajkumar releases thogudeepa poster

  ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ತೂಗುದೀಪ ಶ್ರೀನಿವಾಸ್ ಕುರಿತ ತೂಗುದೀಪ ದರ್ಶನ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಪತ್ರಕರ್ತ ವಿನಾಯಕ್ ರಾಮ್ ಕಲಗಾರು ಬರೆಯುತ್ತಿರುವ ಪುಸ್ತಕ ತೂಗುದೀಪ ದರ್ಶನ. ಸ್ಮೈಲ್ ಶ್ರೀನು ನೇತೃತ್ವದಲ್ಲಿ ಜೋಹರ್ ಪಬ್ಲಿಕೇಷನ್ಸ್ ಮೂಲಕ ಬರುತ್ತಿರುವ ಪುಸ್ತಕದ ಕವರ್ ಪೇಜ್‍ನ್ನು ಪುನೀತ್ ಅವರು ಬಿಡಗಡೆ ಮಾಡಿ ಶುಭ ಹಾರೈಸಿದ್ದಾರೆ.

  `ತೂಗುದೀಪ ದರ್ಶನ ಅನ್ನೋ ಟೈಟಲ್ಲಿನಲ್ಲಿ ತೂಗುದೀಪ ಶ್ರೀನಿವಾಸ್ ಇದ್ದಾರೆ. ನಮ್ಮ ದರ್ಶನ್ ಕೂಡಾ ಇದ್ದಾರೆ. ಈ ಪುಸ್ತಕ ಓದುಗರಿಗೆ ಸ್ಫೂರ್ತಿ ನೀಡುವಂತಾಗಲಿ' ಎಂದು ಶುಭ ಕೋರಿದ್ದಾರೆ ಪುನೀತ್.

   

 • ಪುಷ್ಕರಣಿಯಲ್ಲಿ ನಟಸಾರ್ವಭೌಮ ಶೂಟಿಂಗ್‍ಗೆ ಅಡ್ಡಿ

  natasarwabhowma movie shooting in trouble

  ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರದ ಚಿತ್ರೀಕರಣಕ್ಕೆ ಬಾಗಲಕೋಟೆಯಲ್ಲಿ ಅಪಸ್ವರ ಕೇಳಿಬಂದಿದೆ. ಬಾಗಲಕೋಟೆಯ ಬಾದಾಮಿಯಲ್ಲಿರೋ ಮಹಾಕೂಟೇಶ್ವರ ಪುಷ್ಕರಿಣಿಯಲ್ಲಿ ನಟಸಾರ್ವಭೌಮ ಚಿತ್ರತಂಡ ಸೆಟ್ ಹಾಕಿ ಚಿತ್ರೀಕರಣ ಮಾಡುತ್ತಿದೆ. ಆದರೆ, ಈ ಶೂಟಿಂಗ್ ವೇಳೆ ಪುಷ್ಕರಣಿಯಲ್ಲಿರುವ ನೀರನ್ನು ಹೊರಹಾಕಿ ಸೆಟ್ ಹಾಕಲಾಗಿದೆ ಅನ್ನೋದು ಗ್ರಾಮಸ್ಥರ ಆರೋಪ. ಏಕೆಂದರೆ, ಈ ಪುಷ್ಕರಣಿ, ಸ್ಥಳೀಯರಿಗೆ ಜಲಮೂಲ. ಈ ಪುಷ್ಕರಣಿಯಲ್ಲಿ ನೀರು ಬತ್ತುವುದಿಲ್ಲ. ಈ ಪುಷ್ಕರಣಿಯಿಂದಾಗಿ ಸುತ್ತಮುತ್ತಲ ಪ್ರದೇಶಗಳಲ್ಲಿ ಅಂತರ್ಜಲ ಚೆನ್ನಾಗಿದೆ. 

  ಹೀಗಿರುವಾಗ ಪುಷ್ಕರಣಿಯನ್ನು ಡಿಗ್ಗಿಂಗ್ ಮಾಡಿ, ನೀರನ್ನು ಹೊರತೆಗೆದು ಸೆಟ್ ಹಾಕಿದರೆ, ಅಂತರ್ಜಲಕ್ಕೆ ಸಮಸ್ಯೆಯಾಗುತ್ತೆ ಅನ್ನೋದು ಸ್ಥಳೀಯರ ಆತಂಕ. ಈ ಕುರಿತು ನಿರ್ದೇಶಕ ಪವನ್ ಒಡೆಯರ್ ಸ್ಪಷ್ಟನೆ ಕೊಟ್ಟಿದ್ದಾರೆ. ಐತಿಹಾಸಿಕ ಸ್ಥಳಗಳ ಬಗ್ಗೆ ನಮಗೂ ಗೌರವ ಇದೆ. ಕಾಳಜಿ ಇದೆ. ಈ ಪ್ರದೇಶವನ್ನು ಇನ್ನಷ್ಟು ಚೆನ್ನಾಗಿ ತೋರಿಸಬೇಕು ಅನ್ನೋದು ನಮ್ಮ ಆಸೆ. ಪುಷ್ಕರಣಿಗೆ, ಅಂತರ್ಜಲಕ್ಕೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳುತ್ತೇವೆ, ಆತಂಕ ಬೇಡ ಎಂದು ಭರವಸೆ ಕೊಟ್ಟಿದ್ದಾರೆ.

 • ಪೈಲ್ವಾನ್ ಜೊತೆ ಜೊತೆಯಲಿ ಯುವರತ್ನ..!

  yuvaratna ayudha pooje special in santhosh theater

  ಯುವರತ್ನ ಟೀಸರ್ ಬಿಡುಗಡೆಗೆ ದಿನಾಂಕ ಫಿಕ್ಸ್ ಆಗಿದೆ. ಆಯುಧಪೂಜೆಯ ದಿನ ಸಂಜೆ 5.30ಕ್ಕೆ ಟೀಸರ್ ರಿಲೀಸ್. ಆ ದಿನ ಹೊಂಬಾಳೆ ಫಿಲ್ಮ್ಸ್ ಯೂ ಟ್ಯೂಬ್ ಚಾನೆಲ್ನಲ್ಲಿ ನೀವು ಟೀಸರ್ ನೋಡಬಹುದು. ಆದರೆ, ಅದಕ್ಕಿಂತಲೂ ಕಿಕ್ಕೇರಿಸುವ ಸುದ್ದಿಯಿದೆ. ಪೈಲ್ವಾನ್ ಜೊತೆಯಲ್ಲಿ ಯುವರತ್ನ ಬರಲಿದ್ದಾನೆ.

  ಟೀಸರ್ ಬಿಡುಗಡೆ ಕಾರ್ಯಕ್ರಮವನ್ನು ಸಂತೋಷ್ ಚಿತ್ರಮಂದಿರದಲ್ಲಿ ಮಾಡಲು ಉದ್ದೇಶಿಸಿದೆ ಯುವರತ್ನ ಟೀಂ. ಸಂತೋಷ್ ಚಿತ್ರಮಂದಿರದಲ್ಲಿ ಈಗ ಪ್ರದರ್ಶನವಾಗುತ್ತಿರುವುದು ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ. ಆ ದಿನ ಪೈಲ್ವಾನ್ ಶೋ ಶುರುವಾಗುವ ಮುನ್ನ ಯುವರತ್ನ ಟೀಸರ್ ಅಲ್ಲಿಯೇ ರಿಲೀಸ್ ಆಗಲಿದೆ.

  ಯುವರತ್ನ, ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ರಾಜಕುಮಾರ ಚಿತ್ರದ ನಂತರ ಪುನೀತ್, ಸಂತೋಷ್ ಮತ್ತು ವಿಜಯ್ ಕಿರಗಂದೂರು ಮತ್ತೊಮ್ಮೆ ಜೊತೆಯಾಗಿರುವ ಚಿತ್ರವಿದು.

  ಶಿಕ್ಷಣ ಮಾಫಿಯಾ ಕಥೆ ಇರುವ ಚಿತ್ರದಲ್ಲಿ ಪುನೀತ್ ಕಾಲೇಜು ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದಾರೆ.

  ಅಪ್ಪುಗೆ ನಾಯಕಿಯಾಗಿ ಸಯೇಷಾ ಇದ್ದರೆ, ಪ್ರಕಾಶ್ ರೈ, ಸೋನು ಗೌಡ, ಡಾಲಿ ಧನಂಜಯ್, ರಾಧಿಕಾ ಶರತ್ ಕುಮಾರ್, ಅರು ಗೌಡ, ವಸಿಷ್ಠ ಮೊದಲಾದ ದೊಡ್ಡ ದೊಡ್ಡ ಕಲಾವಿದರ ಸೈನ್ಯವೇ ಚಿತ್ರದಲ್ಲಿದೆ.

 • ಪೈಲ್ವಾನ್‍ಗೆ ಪವರ್ ಸ್ಟಾರ್ ಪವರ್

  puneeth to be chief guest for pailwan audio release

  ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇದೆ. ಸುದೀಪ್ ಇದೇ ಮೊದಲ ಬಾರಿಗೆ ಕುಸ್ತಿ ಪಟುವಾಗಿ ನಟಿಸಿರುವ ಚಿತ್ರವಿದು. 5 ಭಾಷೆಗಳಲ್ಲಿ ಸಿದ್ಧವಾಗಿರುವ ಪೈಲ್ವಾನ್ ಸೆಪ್ಟೆಂಬರ್‍ನಲ್ಲಿ ರಿಲೀಸ್ ಆಗುತ್ತಿದೆ. ವರಮಹಾಲಕ್ಷ್ಮಿ ಹಬ್ಬದ ದಿನ ಚಿತ್ರದುರ್ಗದಲ್ಲಿ ಆಡಿಯೋ ರಿಲೀಸ್.

  ಪೈಲ್ವಾನ್ ಆಡಿಯೋ ಬಿಡುಗಡೆಗೆ ಸುನಿಲ್ ಶೆಟ್ಟಿ ಕೂಡಾ ಬರುತ್ತಿದ್ದಾರೆ. ಇದೆಲ್ಲದರ ಜೊತೆಗೆ ಕಾರ್ಯಕ್ರಮದ ಸ್ಪೆಷಲ್ ಗೆಸ್ಟ್ ಆಗಿ ಬರುತ್ತಿರುವುದು ಪುನೀತ್ ರಾಜ್‍ಕುಮಾರ್. ಇದು ಸಹಜವಾಗಿಯೇ ಚಿತ್ರತಂಡದ ಖುಷಿ ಹೆಚ್ಚಿಸಿದೆ.

  ಕೃಷ್ಣ ನಿರ್ದೇಶನದ ಚಿತ್ರದಲ್ಲಿ ಸುನಿಲ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸ್ವಪ್ನ ಕೃಷ್ಣ ನಿರ್ದೇಶನವಿದ್ದು, ಆಕಾಂಕ್ಷಾ ಸಿಂಗ್ ನಾಯಕಿ.

 • ಪ್ರಕಾಶ್ ರೈ ಎದೆಯುಬ್ಬಿಸಿಕೊಂಡು ಹೇಳುತ್ತಿದ್ದಾರೆ..

  ಪ್ರಕಾಶ್ ರೈ ಎದೆಯುಬ್ಬಿಸಿಕೊಂಡು ಹೇಳುತ್ತಿದ್ದಾರೆ..

  ಪ್ರಕಾಶ್ ರೈ, ಕರ್ನಾಟಕದ ಎಲ್ಲೆ ಮೀರಿ ಬೆಳೆದಿರುವುದು ಎಲ್ಲರಿಗೂ ಗೊತ್ತಿರೋ ವಿಷಯ. ಕನ್ನಡದಿಂದ ಬೆಳೆದ ಪ್ರತಿಭೆ,ತಮಿಳು, ತೆಲುಗು, ಹಿಂದಿ, ಮಲಯಾಳಂ.. ಹೀಗೆ ಎಲ್ಲೆಡೆ ವ್ಯಾಪಿಸಿಕೊಂಡು ಬಿಟ್ಟಿದ್ದಾರೆ. ಅಂತಹವರು ಎದೆಯುಬ್ಬಿಸುವಂತೆ ಮಾಡಿರುವುದು ಯುವರತ್ನ. ಯುವರತ್ನ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಪ್ರಕಾಶ್ ರೈ, ಚಿತ್ರದ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡರು.

  ಬೇರೆ ಭಾಷೆಗಳಲ್ಲಿ ಒಳ್ಳೆಯ , ದೊಡ್ಡ ದೊಡ್ಡ ಚಿತ್ರಗಳಲ್ಲಿ ನಟಿಸಿದ್ದೇನೆ. ಆದರೆ ಯುವರತ್ನ ನನಗೆ ಎದೆಯುಬ್ಬಿಸಿಕೊಂಡು ಇದು ನನ್ನ ಕನ್ನಡದ ಸಿನಿಮಾ ಎಂದು ಹೇಳಿಕೊಳ್ಳೋ ಹಾಗೆ ಮಾಡಿದೆ. ಇಂತಹ ಆಲೋಚನೆಗಳನ್ನು ನಮ್ಮವರೂ ಮಾಡ್ತಾರೆ. ಅಷ್ಟೇ ಅದ್ಧೂರಿಯಾಗಿ ಮನಮುಟ್ಟುವಂತೆ ಹೇಳ್ತಾರೆ ಎಂದು ಹೇಳಿಕೊಳ್ಳೋ ಹಾಗೆ ಮಾಡಿದೆ ಎಂದು ಖುಷಿಯಿಂದ ಹೇಳಿಕೊಂಡರು ಪ್ರಕಾಶ್ ರೈ.

  ಸಾಮಾನ್ಯವಾಗಿ ತಮ್ಮ ಡಬ್ಬಿಂಗ್ ಚಿತ್ರಗಳಿಗೆ ಪ್ರಕಾಶ್ ರೈ ಡಬ್ಬಿಂಗ್ ಮಾಡೋದಿಲ್ವಂತೆ. ಆದರೆ, ಯವರತ್ನ ಚಿತ್ರಕ್ಕೆ ನಾನೇ ತೆಲುಗಿಗೂ ಡಬ್ ಮಾಡುತ್ತೇನೆ ಎಂದು ಕೇಳಿಕೊಂಡು ಹೋಗಿ ಡಬ್ ಮಾಡಿದೆ. ಇದು ನಮ್ಮ ಕನ್ನಡದ ಸಿನಿಮಾ ಎಂದ ಪ್ರಕಾಶ್ ರೈ, ಇಷ್ಟೆಲ್ಲ ಹೇಳುವಾಗ ಕೊನೆಯವರೆಗೂ ಎದೆಯುಬ್ಬಿಸಿಕೊಂಡೇ ನಿಂತಿದ್ದರು. ಸಂತೋಷ್ ಆನಂದರಾಮ್, ವಿಜಯ್ ಕಿರಗಂದೂರು ಮತ್ತು ಪುನೀತ್ ಜೊತೆಗಿನ ಯುವರತ್ನ ಚಿತ್ರ ಅವರು ಹಾಗೆ ನಿಲ್ಲುವ ಹಾಗೆ ಮಾಡಿತ್ತು.

 • ಪ್ರಜ್ವಲ್ ದೇವರಾಜ್ ಪತ್ನಿ, ಅಪ್ಪು ಚಿತ್ರಕ್ಕೆ ನಾಯಕಿ

  puneeth rajkumar to produce movie for ragini chandran

  ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಚಂದ್ರನ್ ವೃತ್ತಿಪರ ಮಾಡೆಲ್. ಅವರೀಗ ಸಿನಿಮಾಗೆ ಎಂಟ್ರಿ ಕೊಡುತ್ತಿದ್ದಾರೆ. ಅದೂ ಪುನೀತ್ ರಾಜ್‍ಕುಮಾರ್ ನಿರ್ಮಾಣದ ಸಿನಿಮಾ ಮೂಲಕ. ರಘು ಸಮರ್ಥ ನಿರ್ದೇಶನದ ಚಿತ್ರದಲ್ಲಿ ರಾಗಿಣಿ ಚಂದ್ರನ್ ನಟಿಸಲಿದ್ದಾರೆ ಎಂಬ ಸುದ್ದಿಯನ್ನು ಈಗ ಪುನೀತ್ ಸ್ಪಷ್ಟಪಡಿಸಿದ್ದಾರೆ. ಇದೊಂದು ಮಹಿಳಾ ಪ್ರಧಾನ ಸಿನಿಮಾ.

  `ಸಿನಿಮಾದ ಕಥೆ ಇಷ್ಟವಾಯ್ತು. ಒಂದೊಳ್ಳೆ ಫ್ರೆಶ್ ಥಾಟ್ ಚಿತ್ರದಲ್ಲಿದೆ. ಹೀಗಾಗಿ ನಿರ್ಮಾಣಕ್ಕೆ ಒಪ್ಪಿಕೊಂಡೆ' ಎಂದಿದ್ದಾರೆ ಪುನೀತ್. ಅವಿನಾಶ್, ಪ್ರಕಾಶ್ ಬೆಳವಾಡಿ ಹಾಗೂ ಅಚ್ಯುತ್ ಕುಮಾರ್ ಚಿತ್ರದ ಪ್ರಧಾನ ಪಾತ್ರಗಳಲ್ಲಿದ್ದಾರೆ.

  ಪುನೀತ್ ನಿರ್ಮಾಣದಲ್ಲಿ 3 ಚಿತ್ರಗಳು ಶುರುವಾಗಿವೆ. ಕವಲುದಾರಿ, ಮಾಯಾಬಜಾರ್ ಹಾಗೂ ಪನ್ನಗಾಭರಣ ನಿರ್ದೇಶನದ ಇನ್ನೂ ಹೆಸರಿಡದ ಸಿನಿಮಾ. ಇದೂ ಶುರುವಾದರೆ 4ನೇ ಸಿನಿಮಾ ಆಗಲಿದೆ. 

 • ಪ್ರಥಮ್ ಕೇಳಿದ್ರು.. ಪುನೀತ್ ಕೊಟ್ಟೇಬಿಟ್ರು..!

  pratham requests puneeth obliges

  ಒಳ್ಳೆಯ ಹುಡುಗ ಪ್ರಥಮ್, ಬಿಗ್‍ಬಾಸ್ ಪ್ರಥಮ್, ದೇವ್ರಂಥ ಮನುಷ್ಯ ಪ್ರಥಮ್, ಇತ್ತೀಚೆಗೆ ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಂದ ಒಂದು ವಿಶೇಷ ಉಡುಗೊರೆಯನ್ನ ಕೇಳಿ ಪಡೆದುಕೊಂಡಿದ್ದಾರೆ.

  ಪ್ರಥಮ್ ಪಡೆದುಕೊಂಡಿರುವ ಆ ಉಡುಗೊರೆ ಬೇರೇನೂ ಅಲ್ಲ, ಪುನೀತ್ ಧರಿಸಿಕೊಂಡಿದ್ದ ಸೂಟ್ ಬ್ಲೇಜರ್. ಫ್ಯಾಮಿಲಿ ಪವರ್ ಶೋಗೆ ಅತಿಥಿಯಾಗಿ ಬಂದಿದ್ದ ಪ್ರಥಮ್, ಪುನೀತ್ ಅವರ ಬ್ಲೇಜರ್ ಮೇಲೆ ಕಣ್ಣು ಹಾಕಿ, ಇಷ್ಟವಾಗಿ ಕೇಳಿ ಪಡೆದುಕೊಂಡೂಬಿಟ್ಟಿದ್ದಾರೆ. ಇಷ್ಟವಾಗಿದ್ದು ಏಕೆ..? ಫ್ಯಾಮಿಲಿ ಪವರ್ ಶೋ ನೋಡಬೇಕಷ್ಟೆ.

   

   

   

 • ಪ್ರೇಮಿಗಳ ದಿನಕ್ಕೆ ಯುವರತ್ನ

  yuvaratna shooting to start on valentine's day

  ರಾಜಕುಮಾರ ಕಾಂಬಿನೇಷನ್‍ನಲ್ಲಿ ಮೂಡಿಬರುತ್ತಿರುವ ಯುವರತ್ನ ಚಿತ್ರದ ಶೂಟಿಂಗ್, ಫೆಬ್ರವರಿ 14ರಿಂದ ಶುರುವಾಗುತ್ತಿದೆ. ಚಿತ್ರದ ಭರ್ಜರಿ ಆ್ಯಕ್ಷನ್ ಸೀನ್‍ಗಳೊಂದಿಗೇ ಚಿತ್ರೀಕರಣ ಆರಂಭವಾಗುತ್ತಿರುವುದು ವಿಶೇಷ. 

  ರಾಜಕುಮಾರ ನಂತರ, ಸಂತೋಷ್ ಆನಂದ್‍ರಾಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರವಿದು. ಹೊಂಬಾಳೆ ಪ್ರೊಡಕ್ಷನ್ಸ್‍ನಲ್ಲಿ ವಿಜಯ್ ಕಿರಗಂದೂರು ನಿರ್ಮಾಣದ ಸಿನಿಮಾವನ್ನು ದಸರಾ ವೇಳೆಗೆ ತೆರೆಗೆ ತರುವುದಾಗಿ ಚಿತ್ರತಂಡ ಈಗಾಗಲೇ ಘೋಷಿಸಿದೆ.

 • ಫಸ್ಟ್ ಡೇ..ಫಸ್ಟ್ ಶೋ - ಟಗರು ನೋಡ್ತಾರೆ ಪುನೀತ್

  puneeth rajkumar to watch tagaru first day first show

  ಶಿವಣ್ಣ-ಸೂರಿ-ಶ್ರೀಕಾಂತ್ ಕಾಂಬಿನೇಷನ್‍ನ ಟಗರು ಚಿತ್ರ, ಇತ್ತೀಚೆಗೆ ಅತಿದೊಡ್ಡ ನಿರೀಕ್ಷೆ ಮೂಡಿಸಿದ ಚಿತ್ರ. ಪ್ರೇಕ್ಷಕರು ತುದಿಗಾಲಲ್ಲಿ ನಿಂತು ಕಾಯುವಂತೆ ಮಾಡಿರುವ ಈ ಚಿತ್ರವನ್ನು ಮೊದಲ ದಿನವೇ ನೋಡಲು ನಿರ್ಧರಿಸಿದ್ದಾರೆ ಪುನೀತ್ ರಾಜ್‍ಕುಮಾರ್.

  ಪುನೀತ್ ರಾಜ್‍ಕುಮಾರ್ ಸೂರಿಯವರ ಜೊತೆ  ಜಾಕಿ, ಅಣ್ಣಾಬಾಂಡ್, ದೊಡ್ಮನೆ ಹುಡುಗ ಚಿತ್ರ ಮಾಡಿರುವ ನಾಯಕ. ಜೊತೆಗೆ ಟಗರು ಚಿತ್ರದ ಹೀರೋ ಶಿವಣ್ಣ. ಹೀಗಾಗಿಯೇ ಅಣ್ಣನ ಸಿನಿಮಾವನ್ನು ಮೊದಲ ದಿನವೇ ಊರ್ವಶಿ ಚಿತ್ರಮಂದಿರದಲ್ಲಿ ನೋಡಲು ವ್ಯವಸ್ಥೆ ಮಾಡಿಕೊಂಡಿದ್ದಾರೆ ಪುನೀತ್.

 • ಫಸ್ಟ್ ಶೋ ಮುಗಿಯೋ ಹೊತ್ತಿಗೆ ಯುವರತ್ನ ಪೈರಸಿ

  ಫಸ್ಟ್ ಶೋ ಮುಗಿಯೋ ಹೊತ್ತಿಗೆ ಯುವರತ್ನ ಪೈರಸಿ

  ಯುವರತ್ನ ಚಿತ್ರಕ್ಕೂ ಪೈರಸಿ ಕಾಟ ಬಿಟ್ಟಿಲ್ಲ. ಪುನೀತ್ ಅಭಿನಯದ ಯುವರತ್ನ ಚಿತ್ರದ ಫಸ್ಟ್ ಶೋ ಮುಗಿದು ಥಿಯೇಟರಿನಿಂದ ಹೊರಬರುವ ಹೊತ್ತಿಗೆ ಪೈರಸಿ ಮಾಡಿ ಲಿಂಕ್ ಬಿಟ್ಟಿದ್ದಾರೆ ಪೈರಸಿ ಕ್ರಿಮಿನಿಲ್ಸ್. ಹೊಂಬಾಳೆ ಫಿಲಮ್ಸ್ ಇದನ್ನು ನಿರೀಕ್ಷೆ ಮಾಡಿದ್ದ ಕಾರಣ, ಅಲ್ಲಿ ಲಿಂಕ್ ಬರುತ್ತಿದ್ದಂತೆ ಡಿಲೀಟ್ ಮಾಡುವ ಕೆಲಸ ಶುರು ಹಚ್ಚಿದೆ.

  ಇತ್ತೀಚೆಗೆ ಪೈರಸಿಯನ್ನು ವಿಪರೀತವಾಗಿ ಎದುರಿಸಿದ್ದ ಚಿತ್ರಗಳು ರಿಷಬ್ ಶೆಟ್ಟಿಯವರ ಹೀರೋ ಮತ್ತು ದರ್ಶನ್ ಅಭಿನಯದ  ರಾಬರ್ಟ್. ಈಗ ಸಹಜವಾಗಿಯೇ ಪವರ್ ಸ್ಟಾರ್ ಚಿತ್ರದ ಮೇಲೂ ಪೈರಸಿ ವೀರರು ಕಣ್ಣು ಹಾಕಿದ್ದಾರೆ.

  ಸಿನಿಮಾಗಳನ್ನು ಚಿತ್ರಮಂದಿರದಲ್ಲಿಯೇ ನೋಡಿ. ಇದು ಚಿತ್ರಲೋಕದ ಕಳಕಳಿಯೂ ಹೌದು.

 • ಫಿಲಂಸಿಟಿಗೆ ಅಪ್ಪು ಹೆಸರಿಟ್ಟರೆ ಸಂತೋಷ. ಆದರೆ ಅಪ್ಪುಗಿಂತ ಹಿರಿಯರಿದ್ದಾರೆ : ಶಿವಣ್ಣ

  ಫಿಲಂಸಿಟಿಗೆ ಅಪ್ಪು ಹೆಸರಿಟ್ಟರೆ ಸಂತೋಷ. ಆದರೆ ಅಪ್ಪುಗಿಂತ ಹಿರಿಯರಿದ್ದಾರೆ : ಶಿವಣ್ಣ

  ಅಪ್ಪು ಹುಟ್ಟುಹಬ್ಬ. ಜೇಮ್ಸ್ ರಿಲೀಸ್. ರಾಜ್ಯಾದ್ಯಂತ ಆಚರಣೆಯ ನಡುವೆಯೇ ಶಿವಣ್ಣ ಅಭಿಮಾನಿಗಳಿಗೆ ಸಿಕ್ಕರು. ಶಕ್ತಿಧಾಮದಲ್ಲಿ ಮಕ್ಕಳ ಜೊತೆಯಲ್ಲಿದ್ದ ಶಿವಣ್ಣ, ಮೈಸೂರಿನಲ್ಲಿ ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಿದರು. ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಶಿವ ರಾಜಕುಮಾರ್ ಅವರಿಗೆ ಮೈಸೂರಿನಲ್ಲಿ ಸ್ಥಾಪಿಸಲು ಹೊರಟಿರೋ ಫಿಲಂಸಿಟಿಯ ಪ್ರಶ್ನೆ ಎದುರಾಯ್ತು.

  ಫಿಲಂಸಿಟಿಗೆ ಪುನೀತ್ ರಾಜಕುಮಾರ್ ಹೆಸರಿಡಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತೀರಾ ಎಂಬ ಪ್ರಶ್ನೆಗೆ ಶಿವಣ್ಣ ಉತ್ತರಿಸಿದ್ದು ಹೀಗೆ.

  ಪುನೀತ್ ಹೆಸರಿಟ್ಟರೆ ಸಂತೋಷ. ನಾನು ಪುನೀತ್ ಅಣ್ಣ. ಒಂದೇ ಕುಟುಂಬದವನು. ನಮ್ಮ ಕುಟುಂಬದವರ ಹೆಸರು ಇಡಿ ಎಂದು ಕೇಳೋದು ಚೆನ್ನಾಗಿರಲ್ಲ. ಹೀಗಾಗಿ  ನಾನು ಒತ್ತಾಯ ಮಾಡಲ್ಲ. ಆದರೆ ಪುನೀತ್‍ಗಿಂತ ಚಿತ್ರರಂಗದಲ್ಲಿ ಹಿರಿಯರಿದ್ದಾರೆ. ಅವರ ಹೆಸರು ಇಟ್ಟರೂ ಸಂತೋಷ ಎಂದಿದ್ದಾರೆ ಶಿವಣ್ಣ.

 • ಫಿಲ್ಮ್‍ಫೇರ್‍ನಲ್ಲಿ ಪುನೀತ್, ಶೃತಿ, ಚೌಕ ದಿ ಬೆಸ್ಟ್

  film fare award list

  ಪ್ರತಿಷ್ಟಿತ ಫಿಲ್ಮ್‍ಫೇರ್ ಪ್ರಶಸ್ತಿ ಪ್ರಕಟಗೊಂಡಿದೆ. ಈ ಬಾರಿಯ ಶ್ರೇಷ್ಟ ನಟ ಪ್ರಶಸ್ತಿ ಪುನೀತ್ ರಾಜ್‍ಕುಮಾರ್ ಅವರಿಗೆ ನೀಡಲಾಗಿದೆ. ರಾಜಕುಮಾರ ಚಿತ್ರದ ನಟನೆಗೆ ಪುನೀತ್ ಶ್ರೇಷ್ಟರಾಗಿದ್ದರೆ, ಶ್ರೇಷ್ಟ ನಟಿಯಾಗಿರುವುದು ಶೃತಿ ಹರಿಹರನ್. ಇದೇ ಚಿತ್ರಕ್ಕೆ ರಾಜ್ಯ ಪ್ರಶಸ್ತಿಯನ್ನೂ ಪಡೆದಿರುವ ಶೃತಿ, ಫಿಲ್ಮ್‍ಫೇರ್ ಪ್ರಶಸ್ತಿಯನ್ನೂ ಗೆದ್ದುಕೊಂಡಿದ್ದಾರೆ.

  ಈ ಬಾರಿ ಅತಿ ಹೆಚ್ಚು ಪ್ರಶಸ್ತಿ ಗೆದ್ದಿರುವ ಚಿತ್ರ, ಯೋಗಿ ದ್ವಾರಕೀಶ್ ನಿರ್ಮಾಣದ ಚೌಕ. ಚೌಕ ಚಿತ್ರದ ನಿರ್ದೆಶನಕ್ಕಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ತರುಣ್ ಸುಧೀರ್ ಪಾಲಾದರೆ, ಚಿತ್ರದ ಅಪ್ಪಾ ಐ ಲವ್ ಯೂ ಪಾ ಹಾಡಿಗಾಗಿ ಗಾಯಕಿ ಅನುರಾಧಾ ಭಟ್ ಹಾಗೂ ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್ ಪ್ರಶಸ್ತಿ ಸ್ವೀಕರಿಸಿದ್ರು. ಒಟ್ಟಿನಲ್ಲಿ ಚೌಕ ಚಿತ್ರ 3 ಫಿಲ್ಮ್‍ಫೇರ್ ಪ್ರಶಸ್ತಿ ಪಡೆಯಿತು.

  ಶ್ರೇಷ್ಟ ಪೋಷಕ ನಟ ಪ್ರಶಸ್ತಿ ರವಿಶಂಕರ್ (ಕಾಲೇಜ್ ಕುಮಾರ), ಶ್ರೇಷ್ಟ ಪೋಷಕ ನಟಿ ಪ್ರಶಸ್ತಿ ಭವಾನಿ ಪ್ರಕಾಶ್(ಉರ್ವಿ) ಅವರಿಗೆ ಸಂದಿದ್ದರೆ, ಈ ವರ್ಷದ ಬೆಸ್ಟ್ ಸಿನಿಮಾ ಪ್ರಶಸ್ತಿ, ಒಂದು ಮೊಟ್ಟೆಯ ಕಥೆ ಚಿತ್ರಕ್ಕೆ ಸಂದಿದೆ. 

  ಅತ್ಯುತ್ತಮ ಸಂಗೀತ ನಿರ್ದೇಶಕ ಭರತ್ (ಬ್ಯೂಟಿಫುಲ್ ಮನಸುಗಳು), ಅತ್ಯುತ್ತಮ ಗಾಯಕ ಅರ್ಮಾನ್ ಮಲಿಕ್ ಅತ್ಯುತ್ತಮ ಗಾಯಕ (ಒಂದು ಮಳೆಬಿಲ್ಲು.. ಚಿತ್ರ: ಚಕ್ರವರ್ತಿ) ಪ್ರಶಸ್ತಿ  ಮುಡಿಗೇರಿಸಿಕೊಂಡಿದ್ದಾರೆ.

  ಇನ್ನು ವಿಮರ್ಶಕರ ಪ್ರಶಸ್ತಿ ಪಟ್ಟಿಯಲ್ಲಿ ಶ್ರೇಷ್ಟನಟಿಯಾಗಿ ಶ್ರದ್ಧಾ ಶ್ರೀನಾಥ್ (ಚಿತ್ರ:ಆಪರೇಷನ್ ಅಲಮೇಲಮ್ಮ) ಹಾಗೂ ಶ್ರೇಷ್ಟನಟನಾಗಿ ಧನಂಜಯ್ (ಚಿತ್ರ: ಅಲ್ಲಮ) ಹೊರಹೊಮ್ಮಿದ್ದಾರೆ.

 • ಫೆ. 24 ಟ್ರಂಪ್ ಇಂಡಿಯಾಗೆ.. ಯುವರತ್ನ ಯೂರೋಪ್‍ಗೆ..

  yuvaratna movie team geared up for europe shoot

  ಫೆಬ್ರವರಿ 24, ಭಾರತ ಮತ್ತು ಅಮೆರಿಕ ಬಾಂಧವ್ಯಕ್ಕೆ ಮಹತ್ವದ ದಿನ. ಆ ದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬರಲಿದ್ದಾರೆ. ಅದೇ ದಿನ ಯುವರತ್ನ ಚಿತ್ರಕ್ಕೂ ಮಹತ್ವದ ದಿನ. ಚಿತ್ರತಂಡ ಫೆ.24ರಂದು ಯೂರೋಪ್‍ನತ್ತ ಹೊರಟಿದೆ.

  ಯುವರತ್ನ ಚಿತ್ರದ ಡ್ಯುಯೆಟ್ ಸಾಂಗ್ ಶೂಟಿಂಗ್‍ಗಾಗಿ ಪುನೀತ್ ರಾಜ್‍ಕುಮಾರ್, ಸಯೇಷಾ ಯೂರೋಪ್‍ಗೆ ತೆರಳಲಿದ್ದಾರೆ. ಹೀರೋ ಇಂಟ್ರೊಡಕ್ಷನ್ ಸಾಂಗ್ ಶೂಟಿಂಗ್ ಬೆಂಗಳೂರಿನಲ್ಲೇ ನಡೆಯಲಿದೆಯಂತೆ.

  ಎಜುಕೇಷನ್ ಮಾಫಿಯಾ ಕುರಿತ ಚಿತ್ರದ ರಿಲೀಸ್ ಡೇಟ್ ಇನ್ನೂ ಪಕ್ಕಾ ಆಗಿಲ್ಲ. ಯುವರತ್ನ ಚಿತ್ರದಲ್ಲಿ ತಾರಾಬಳಗವೇ ತುಂಬಿ ತುಳುಕುತ್ತಿದೆ. ಸಂತೋಷ್ ಆನಂದರಾಮ್, ಪುನೀತ್ ರಾಜ್‍ಕುಮಾರ್, ಹೊಂಬಾಳೆ ಫಿಲಂಸ್‍ನ ವಿಜಯ್ ಕಿರಗಂದೂರು.. ರಾಜಕುಮಾರ ಚಿತ್ರದ ನಂತರ ಮತ್ತೆ ಒಂದುಗೂಡಿರುವ ಚಿತ್ರವಿದು.

 • ಫೆ.3ರಿಂದಲೇ ನಟಸಾರ್ವಭೌಮನ ಟಿಕೆಟ್ ಬುಕ್ ಮಾಡಿ

  natasarvabhouma booking from feb 3rd

  ನಟಸಾರ್ವಭೌಮ ಚಿತ್ರ ಕ್ರೇಜ್ ಸೃಷ್ಟಿಸುತ್ತಿದೆ. ಟ್ರೆಂಡಿಂಗ್‍ನಲ್ಲಿ ಈಗಲೂ ಟಾಪ್ 10ನಲ್ಲಿರೋ ನಟಸಾರ್ವಭೌಮ ಚಿತ್ರಕ್ಕೆ ಒಂದು ವಾರ ಮೊದಲೇ ಬುಕ್ಕಿಂಗ್ ಶುರುವಾಗಲಿದೆ. ಫೆಬ್ರವರಿ 3ನೇ ತಾರೀಕಿನಿಂದ ಅಂದರೆ, ಭಾನುವಾರದಿಂದಲೇ ನಟಸಾರ್ವಭೌಮ ಚಿತ್ರಕ್ಕೆ ಟಿಕೆಟ್ ಬುಕ್ ಮಾಡಬಹುದು.

  ಕನ್ನಡದಲ್ಲಿ ಮೊದಲ ದಿನವೇ ಫ್ಯಾಮಿಲಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಬರುವಂತೆ ಮಾಡುವ ಶಕ್ತಿ ಇರುವ ನಟ ಪುನೀತ್. ಇದರ ಜೊತೆಗೆ ವಾರಕ್ಕೆ ಮೊದಲೇ ಬುಕ್ಕಿಂಗ್ ಶುರುವಾದರೆ ಮೊದಲ ದಿನವೇ ಹೌಸ್‍ಫುಲ್ ಬೋರ್ಡ್ ಗ್ಯಾರಂಟಿ.

  ರಚಿತಾ ರಾಮ್, ಅನುಪಮಾ, ಬಿ.ಸರೋಜಾದೇವಿ, ರವಿಶಂಕರ್, ಸಾಧುಕೋಕಿಲ, ಚಿಕ್ಕಣ್ಣ ಅಭಿನಯದ ಸಿನಿಮಾಗೆ ಪವನ್ ಒಡೆಯರ್ ನಿರ್ದೇಶಕರಾದರೆ, ರಾಕ್‍ಲೈನ್ ವೆಂಕಟೇಶ್ ನಿರ್ಮಾಪಕ.