` puneeth rajkumar, - chitraloka.com | Kannada Movie News, Reviews | Image

puneeth rajkumar,

  • ಪುನೀತ್ ರಾಜ್ ಕುಮಾರ್ ಅಸ್ವಸ್ಥ : ಪರಿಸ್ಥಿತಿ ಗಂಭೀರ

    ಪುನೀತ್ ರಾಜ್ ಕುಮಾರ್ ಅಸ್ವಸ್ಥ : ಪರಿಸ್ಥಿತಿ ಗಂಭೀರ

    ನಟ ಪುನೀತ್ ರಾಜ್ಕುಮಾರ್ ಅವರಿಗೆ ಬೆಳಗ್ಗೆ ಗಂಭೀರ ಹೃದಯಾಘಾತವಾಗಿದ್ದು, ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಿಸ್ಥಿತಿ ಗಂಭೀರವಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

    ಸುದ್ದಿ ತಿಳಿಯುತ್ತಿದ್ದಂತೆಯೇ ಭಜರಂಗಿ 2 ಶೋ ಬಿಟ್ಟ ಶಿವಣ್ಣ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಯಶ್, ರವಿಚಂದ್ರನ್, ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಇಡೀ ಚಿತ್ರರಂಗವೇ ಆಸ್ಪತ್ರೆಗೆ ಓಡೋಡಿ ಬಂದಿದೆ.

    ಪುನೀತ್ ಗುಣಮುಖರಾಗಿ ಬರಲಿ ಎಂದು ಹಾರೈಸೋಣ..

  • ಪುನೀತ್ ರಾಜ್ ಕುಮಾರ್ ಮೇಲೊಂದು ಪುಟ್ಟ ಸಿನಿಮಾ

    a movie on puneeth rajkumar's life journey

    ಪುನೀತ್ ರಾಜ್‍ಕುಮಾರ್, ಕನ್ನಡಿಗರ ಪಾಲಿನ ಪವರ್ ಸ್ಟಾರ್. ವಯಸ್ಸು 44 ವರ್ಷ. ಹುಟ್ಟಿ 6 ತಿಂಗಳಿಗೇ ಬೆಳ್ಳಿತೆರೆಗೆ ಬಂದ ಪುನೀತ್, ಬಾಲಕಲಾವಿದನಾಗಿ ರಾಷ್ಟ್ರಪ್ರಶಸ್ತಿ, ರಾಜ್ಯ ಪ್ರಶಸ್ತಿ ಎರಡನ್ನೂ ಪಡೆದಿರುವ ನಟ. ದೊಡ್ಡವರಾದ ಮೇಲೂ ಎರಡು ರಾಜ್ಯ ಪ್ರಶಸ್ತಿ ಪಡೆದಿರುವ ಕಲಾವಿದ. ಹೀರೋ ಆಗಿ ನಟಿಸಿರುವ ಚಿತ್ರಗಳ ಸಂಖ್ಯೆ 28. ನಟನಾಗಿ, ನಿರ್ಮಾಪಕನಾಗಿ, ಗಾಯಕನಾಗಿ ಅಭಿಮಾನಿ ದೇವರುಗಳ ಹೃದಯದಲ್ಲಿ ಜಾಗ ಗಿಟ್ಟಿಸಿಕೊಂಡಿರುವ ರಾಜಕುಮಾರ, ಪುನೀತ್.

    ಇವರನ್ನೀಗ `ಅಜಾತ ಶತ್ರು' ಮಾಡಲು ಹೊರಟಿದ್ದಾರೆ ಧಿರೇನ್ ರಾಮ್‍ಕುಮಾರ್. ಧಿರೇನ್, ರಾಮ್‍ಕುಮಾರ್ ಪುತ್ರ. ಪುನೀತ್ ಅವರಿಗೆ ಅಳಿಯನಾಗಬೇಕು. ಮಾಮನ ಮೇಲೆ ಸಿನಿಮಾ ಮಾಡಲು ಹೊರಟಿರೋ ಧಿರೇನ್, ಆ ಕಿರುಚಿತ್ರಕ್ಕೆ ಅಜಾತಶತ್ರು ಅನ್ನೋ ಹೆಸರಿಟ್ಟಿದ್ದಾರೆ. ತೇಜಸ್ ರಂಗನಾಥ್ ಈ ಕಿರುಚಿತ್ರಕ್ಕೆ ಡೈರೆಕ್ಟರ್. ಅಭಿಮಾನಿಗಳಿಂದ.. ಅಭಿಮಾನಿಗಳಿಗಾಗಿ.. ಅಭಿಮಾನಿಗಳಿಗೋಸ್ಕರ.. ನಿರ್ಮಾಣವಾಗುತ್ತಿರುವ ಚಿತ್ರವಿದು. ಮಾರ್ಚ್ 17ರಂದು ರಿಲೀಸ್. ಅವತ್ತು ಪುನೀತ್ ಹುಟ್ಟುಹಬ್ಬ.

  • ಪುನೀತ್ ರಾಜ್‍ಕುಮಾರ್ ಮತ್ತೊಂದು ಹೊಸ ಸಾಹಸ

    puneeth rajkumar image

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಇನ್ನೊಂದು ಹೊಸ ಸಾಹಸಕ್ಕೆ ಕೈ ಹಾಕುತ್ತಿದ್ದಾರೆ. ಇತ್ತೀಚೆಗಷ್ಟೇ ಪಿಆರ್‍ಕೆ ಬ್ಯಾನರ್ ಸ್ಥಾಪಿಸಿ, ಹೊಸಬರಿಗೆ ಅವಕಾಶ ನೀಡಿ ಸಿನಿಮಾ ನಿರ್ಮಾಣದ ಸಾಹಸಕ್ಕೆ ಕೈ ಹಾಕಿದ್ದ ಪುನೀತ್, ಈಗ ಆಡಿಯೋ ಕಂಪೆನಿ ಹುಟ್ಟುಹಾಕುವ ಯೋಚನೆಯಲ್ಲಿದ್ದಾರೆ.

    ಪುನೀತ್ ನಟಿಸುತ್ತಿರುವ ಆಂಜನಿಪುತ್ರ ಚಿತ್ರದ ಆಡಿಯೋ ರೈಟ್ಸ್‍ಗಾಗಿ ಕನ್ನಡದ ಬಹುತೇಕ ಎಲ್ಲ ಆಡಿಯೋ ಕಂಪೆನಿಗಳೂ ಪೈಪೋಟಿ ನಡೆಸಿವೆ. ಆದರೆ, ಯಾವುದೇ ಕಂಪೆನಿಗೆ ಆಡಿಯೋ ರೈಟ್ಸ್ ಸಿಕ್ಕಿಲ್ಲ. ಆಂಜನಿಪುತ್ರದ ಆಡಿಯೋ ಮೂಲಕವೇ ಪುನೀತ್ ಹೊಸ ಆಡಿಯೋ ಕಂಪೆನಿ ಸಾಹಸ ಆರಂಭವಾಗಲಿದೆ. ರಾಜ್‍ಕುಮಾರ್ ಮ್ಯೂಸಿಕ್ ಎಂಬ ಕಂಪೆನಿ ಮೂಲಕ ಆಂಜನಿಪುತ್ರದ ಆಡಿಯೋ ಬಿಡುಗಡೆಯಾಗಲಿದೆ.

    ಹರ್ಷ ನಿರ್ದೇಶನದ ಚಿತ್ರದಲ್ಲಿ ಮಾಂಟೇಜ್ ಸೇರಿದಂತೆ ಒಟ್ಟು 6 ಹಾಡುಗಳಿವೆ. ಒಂದು ಹಾಡನ್ನು ಪುನೀತ್ ರಾಜ್‍ಕುಮಾರ್ ಅವರೇ ಹಾಡಲಿದ್ದಾರೆ. ಪುನೀತ್ ಚಿತ್ರದಲ್ಲಿ ಹಾಡುಗಳು ಇಂಪಾಗಿರುತ್ತವೆ. ಆಡಿಯೋ ಮಾರ್ಕೆಟ್‍ನಲ್ಲೂ ಪುನೀತ್ ಚಿತ್ರಕ್ಕೆ ವ್ಯಾಲ್ಯೂ ಇದೆ. ಹೀಗಾಗಿ, ಪುನೀತ್‍ರ ಹೊಸ ಸಾಹಸ ಆಂಜನಿಪುತ್ರದಿಂದಲೇ ಶುರುವಾಗಲಿದೆ.

    Related Articles :-

    Puneeth Rajkumar To Start Music Company

  • ಪುನೀತ್ ರಾಜ್‍ಕುಮಾರ್ ಸಿನಿಮಾ ಇಂದು ರಿಲೀಸ್..!

    one more appu movie releasing

    ಶಾಕ್ ಆಯ್ತಾ..? ಆಗ್ಲೇಬೇಕು. ಆಗ್ಲಿ ಅಂಥಾ ತಾನೇ ನಾವ್ ಈ ತರಾ ಹೆಡ್‍ಲೈನ್ ಕೊಟ್ಟಿದ್ದು. ಆದರೆ, ಇದು ಶಾಕಿಂಗ್ ಏನೂ ಅಲ್ಲ. ಇವತ್ತು ಪುನೀತ್ ರಾಜ್‍ಕುಮಾರ್ ಸಿನಿಮಾ ರಿಲೀಸ್ ಆಗ್ತಿದೆ. ಅದು ಹಂಬಲ್ ಪೊಲಿಟಿಷಿಯನ್ ನೊಗ್‍ರಾಜ್.

    ಅರೆ, ಆ ಸಿನಿಮಾ ಹೀರೋ ಡ್ಯಾನಿಶ್ ಸೇಟ್ ಅಲ್ವಾ..? ಸುಮ್ನೆ ಹುಳ ಬಿಡ್‍ಬ್ಯಾಡ್ರಿ ಅಂತಾ ಸುಮ್ಮನಾಗಬೇಡಿ. ಈ ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಅಭಿನಯಿಸಿರೋದು ನಿಜ. ಅದು ಅತಿಥಿ ನಟನಾಗಿ. ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪುನೀತ್, ಅದಕ್ಕೆ ಸಂಭಾವನೆಯನ್ನೂ ಪಡೆದಿಲ್ಲ ಎಂಬ ಸುದ್ದಿ ಇದೆ. 

    ಹೊಸಬರ ಪ್ರಯತ್ನಕ್ಕೆ ಸದಾ ಬೆನ್ನೆಲುಬಾರಿ ನಿಲ್ಲುವ ಪುನೀತ್ ರಾಜ್‍ಕುಮಾರ್, ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯನವರ ಈ ಸಾಹಸಕ್ಕೂ ಬೆನ್ನು ತಟ್ಟಿದ್ದಾರೆ. ರಾಜಕೀಯ ವಿಡಂಬನೆಯ ಕಥಾಹಂದರದ ಚಿತ್ರ, ಆನ್‍ಲೈನ್‍ನಲ್ಲಂತೂ ಭರ್ಜರಿ ಪ್ರಚಾರ ಗಿಟ್ಟಿಸಿದೆ. ಟ್ರೇಲರ್‍ನ್ನಂತೂ ಜನ ನೋಡಿ ನೋಡಿ ನಗುತ್ತಿದ್ದಾರೆ. ಥಿಯೇಟರ್‍ನಲ್ಲಿ ಆ ನಗೆ ಇನ್ನಷ್ಟು ಜೋರಾಗಿ ಕೇಳಿಸಿದರೆ ಅಚ್ಚರಿಯಿಲ್ಲ.

  • ಪುನೀತ್ ಸಿನಿಮಾ ನೋಡಬೇಕು.. ರಜೆ ಕೊಡಿ ಸರ್.. ವಿದ್ಯಾರ್ಥಿನಿಯ ರಜಾ ಪತ್ರ 

    puneeth fans applies for leave

    ಸೀತಾರಾಮ ಕಲ್ಯಾಣ ಚಿತ್ರ ನೋಡೋಕೆ ರಜಾ ಕೊಡಿ ಎಂದು ಬಿಎಂಟಿಸಿ ಕಂಡಕ್ಟರ್ ಒಬ್ಬರು ಅಧಿಕಾರಿಗೆ ಪತ್ರ ಬರೆದು ಸುದ್ದಿಯಾಗಿದ್ದರು. ಈಗ ನಟಸಾರ್ವಭೌಮ ಚಿತ್ರದ ಅಭಿಮಾನಿಯ ಸರದಿ. ಮೈಸೂರಿನ ನಿಸರ್ಗ ಎಂಬ ಹುಡುಗಿ ತಮ್ಮ ಪ್ರಾಧ್ಯಾಪಕರಿಗೆ ಫೆಬ್ರವರಿ 7ರಂದು ರಜೆ ಕೊಡಿ ಎಂದು ಪತ್ರ ಬರೆದು ಸುದ್ದಿಯಾಗಿದ್ದಾರೆ.

    ಮೈಸೂರಿನ ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿನಿ ನಿಸರ್ಗ ನಮ್ಮ ರಾಜ್‍ಕುಮಾರ್ ಅವರ ಹೆಮ್ಮೆಯ ತೃತೀಯ ಪುತ್ರನಾದ ಪುನೀತ್ ರಾಜ್‍ಕುಮಾರ್ ಈಗಿನ ಮಕ್ಕಳಿಗೂ ಅಚ್ಚುಮೆಚ್ಚು. ಅದು ಖಂಡಿತಾ ಎಲ್ಲ ವಯಸ್ಸಿನವರೂ ಕೌಟುಂಬಿಕವಾಗಿ ನೋಡುವ ಚಿತ್ರವಾಗಿರಲಿದೆ. ಫೆಬ್ರವರಿ 7ರಂದು ಸಿನಿಮಾ ಬಿಡುಗಡೆಯಾಗುತ್ತಿದ್ದು, ನಾನು ತರಗತಿಗೆ ಬರಲು ಸಾಧ್ಯವಿಲ್ಲ. ರಜೆ ಕೊಡಿ ಎಂದು ಕೇಳಿಕೊಂಡಿದ್ದಾರೆ.

  • ಪುನೀತ್ ಸುತ್ತ 20 ಬೌನ್ಸರ್‍ಗಳ ಕೋಟೆ..!

    anjaniputra movie image

    ಪುನೀತ್ ರಾಜ್‍ಕುಮಾರ್‍ಗೆ ಅಭಿಮಾನಿಗಳು ತಮ್ಮ ಹೃದಯದಲ್ಲಿ ಕೋಟೆ ಕಟ್ಟಿದ್ದರೆ, ಆಂಜನಿಪುತ್ರದ ನಿರ್ದೇಶಕ ಹರ್ಷ, ಪುನೀತ್ ರಾಜ್‍ಕುಮಾರ್ ಸುತ್ತ 20 ಬೌನ್ಸರ್‍ಗಳ ಕೋಟೆ ಕಟ್ಟಿದ್ದಾರೆ. ಆಂಜನಿಪುತ್ರ ಚಿತ್ರದ ಹಾಡು ಹಾಗೂ ಫೈಟ್‍ಗಳ ಚಿತ್ರೀಕರಣ ಚಿಕ್ಕಬಳ್ಳಾಪುರದಲ್ಲಿ ನಡೆಯುತ್ತಿದೆ. ಚಿತ್ರದ ಒಂದೇ ಒಂದು ಫೋಟೋ ಕೂಡಾ ಹೊರಗೆ ಬರಬಾರದು ಎಂಬ ಕಾರಣಕ್ಕೆ ಮುಂಜಾಗ್ರತೆ ವಹಿಸಿರುವ ನಿರ್ದೇಶಕ ಹರ್ಷ, ಪುನೀತ್ ಸುತ್ತ 20 ಬೌನ್ಸರ್‍ಗಳನ್ನು ಹಾಕಿದ್ದಾರಂತೆ.

    ಕ್ಲೈಮಾಕ್ಸ್ ದೃಶ್ಯದ ಚಿತ್ರೀಕರಣ ಅಕ್ಟೋಬರ್ 2ರಂದು ಹೈದರಾಬಾದ್‍ನಲ್ಲಿ ನಡೆಯಲಿದೆ. ಬಾಲಿವುಡ್‍ನ ಖ್ಯಾತ ಖಳನಟ ಅಖಿಲೇಶ್ ಮಿಶ್ರಾ ಹಾಗೂ ಪುನೀತ್ ನಡುವೆ ನಡೆಯುವ ಫೈಟ್ ಅದಾಗಿದೆ. ರಶ್ಮಿಕಾ ಹಾಗೂ ಪುನೀತ್ ನಡುವಣ ಹಾಡುಗಳ ಚಿತ್ರೀಕರಣವೂ ಬಿರುಸಿನಿಂದ ನಡೆಯುತ್ತಿದೆ. ಹಾಡಿದ ದೃಶ್ಯಗಳ ಚಿತ್ರೀಕರಣದ ಸ್ಟಿಲ್ಸ್ 

    ಲೀಕ್ ಆಗಿದ್ದೇ ಬೌನ್ಸರ್‍ಗಳ ನಿಯೋಜನೆಗೆ ಕಾರಣವಂತೆ.

  • ಪುನೀತ್ ಸುದೀಪ್ ಜೊತೆ ಜೊತೆಯಲಿ..

    sudeep, puneeth

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಮತ್ತು ಕಿಚ್ಚ ಸುದೀಪ್ ಒಟ್ಟಿಗೇ ತೆರೆ ಮೇಲೆ ಕಾಣಿಸಿಕೊಂಡರೆ ಹೇಗಿರುತ್ತೆ..? ಅಭಿಮಾನಿಗಳು ಹಬ್ಬ ಮಾಡ್ತಾರೆ ಬಿಡಿ ಅಂತೀರಾ. ಅಂಥಾದ್ದೊಂದು ಸನ್ನಿವೇಶ ಸೃಷ್ಟಿಯಾಗಿದೆ. ಆದರೆ, ಅದು ಬೆಳ್ಳಿತೆರೆಯಲ್ಲಿ ಅಲ್ಲ. ಕಿರುತೆರೆಯಲ್ಲಿ.

    ಇತ್ತೀಚೆಗಷ್ಟೇ ಪುನೀತ್ ರಾಜ್‍ಕುಮಾರ್ ಕಲರ್ಸ್ ಕನ್ನಡ ವಾಹಿನಿಯ ರಿಯಾಲಿಟಿ ಷೋವೊಂದರಲ್ಲಿ ಭಾಗವಹಿಸಲು ಒಪ್ಪಿಕೊಂಡಿದ್ದಾರೆ. ಆ ಷೋದ ಪ್ರೋಮೋ ಕೂಡಾ ಶೂಟಿಂಗ್ ಆಗಿದೆ. ಆದರೆ, ರಿಯಾಲಿಟಿ ಷೋನ ಕಾನ್ಸೆಪ್ಟ್‍ನ್ನು ಸಂಪೂರ್ಣ ಗುಟ್ಟಾಗಿಟ್ಟಿದ್ದಾರೆ.

    ಕೆಲವೇ ದಿನಗಳಲ್ಲಿ ಪ್ರೋಮೋ ರಿಲೀಸ್ ಆಗಬಹುದು. ಅಂದಹಾಗೆ ಅದೇ ಕಲರ್ಸ್ ಸೂಪರ್ ವಾಹಿನಿಯಲ್ಲಿ ಬಿಗ್‍ಬಾಸ್ ಶುರುವಾಗಲಿದ್ದು, ಅಲ್ಲಿ ಕಿಚ್ಚ ಇರುತ್ತಾರೆ. 

    ಅಂದ್ರೆ ಒಂದೇ ಚಾನೆಲ್‍ನಲ್ಲಿ ಎರಡು ರಿಯಾಲಿಟಿ ಷೋಗಳಿಗೆ ಒಂದರಲ್ಲಿ ಪುನೀತ್, ಇನ್ನೊಂದರಲ್ಲಿ ಸುದೀಪ್ ಇರುತ್ತಾರೆ. ಇಬ್ಬರು ಸ್ಟಾರ್‍ಗಳನ್ನು ಒಂದೇ ಚಾನೆಲ್‍ನಲ್ಲಿ ಸೇರಿಸುವ ಸಾಹಸವನ್ನು ಕಲರ್ಸ್ ಮಾಡಿದೆ. ಇನ್ನು ಕಾಯ್ತಾ ಇರಬೇಕು. ಅಷ್ಟೆ.

  • ಪುನೀತ್ ಸ್ಟಾರ್ ಎನಿಸಲೇ ಇಲ್ಲ - ರಶ್ಮಿಕಾ

    rashmika shares anjaniputra experience

    ಅಂಜನೀಪುತ್ರ ರಿಲೀಸ್‍ಗೆ ಸಿದ್ಧವಾಗಿರುವಾಗುತ್ತಿದೆ. ರಾಜಕುಮಾರ ಚಿತ್ರದ ಅದ್ಭುತ ಯಶಸ್ಸಿನ ಬರುತ್ತಿರುವ ಅಂಜನೀಪುತ್ರದಲ್ಲಿ ಕಿರಿಕ್ ಯಶಸ್ಸಿನ ರಶ್ಮಿಕಾ ಮಂದಣ್ಣ ನಾಯಕಿ. ಕಿರಿಕ್ ಪಾರ್ಟಿ ನಂತರ ತೆರೆಗೆ ಬರುತ್ತಿರುವ ರಶ್ಮಿಕಾರ ಮೊದಲ ಚಿತ್ರ ಅಂಜನೀಪುತ್ರ. ಈ ಚಿತ್ರದಲ್ಲಿ ಪುನೀತ್ ಜೊತೆಗಿನ ಹಾಗೂ ಚಿತ್ರತಂಡದ ಜೊತೆಗಿನ ಅನುಭವಗಳನ್ನು ರಶ್ಮಿಕಾ ಹೇಳಿಕೊಂಡಿದ್ದಾರೆ.

    ಪುನೀತ್ ಜೊತೆ ನಟಿಸುವಾಗ, ಸಣ್ಣದೊಂದು ಆತಂಕವಿದ್ದದ್ದು ಹೌದು. ಆದರೆ, ಅವರ ಜೊತೆ ನಟಿಸುವಾಗ, ಅವರೊಬ್ಬ ದೊಡ್ಡ ಸ್ಟಾರ್ ಎಂದು ನನಗೆ ಅನ್ನಿಸಲೇ ಇಲ್ಲ. ಅವರು ಅಷ್ಟು ಸಹಜವಾಗಿ ಸಿಂಪಲ್ ಆಗಿದ್ದರು. ಸ್ಟಾರ್ ನಟರೆಲ್ಲ ಹೀಗೆ ಇರುತ್ತಾರೇನೋ.. ಎತ್ತರಕ್ಕೆ ಬೆಳೆದವರು ಹೇಗೆ ಇರಬೇಕು ಅನ್ನೋದನ್ನು ಪುನೀತ್ ಅವರಿಂದ ಕಲಿಯಬೇಕು ಎಂದು ಹೊಗಳಿದ್ದಾರೆ ರಶ್ಮಿಕಾ.

    ಶೂಟಿಂಗ್ ವೇಳೆ ಚಿತ್ರತಂಡದಲ್ಲಿದ್ದ ದೊಡ್ಡ ದೊಡ್ಡ ಕಲಾವಿದರೆಲ್ಲ ನನ್ನನ್ನು ಹೊಸ ನಟಿ ಎಂಬಂತೆ ನೋಡಲೇ ಇಲ್ಲ. ಅದು ನನಗೆ ಖುಷಿ ಕೊಟ್ಟಿತು ಎಂದಿದ್ದಾರೆ ರಶ್ಮಿಕಾ. ನಿರ್ದೇಶಕ ಹರ್ಷ ಅವರಂತೂ ರಶ್ಮಿಕಾ ಅವರನ್ನು ಮಗುವಿನ ಹಾಗೆ ಟ್ರೀಟ್ ಮಾಡಿದರಂತೆ. ಆದರೆ, ಶೂಟಿಂಗ್ ವೇಳೆ ತಾವು ಅಂದುಕೊಂಡಿದ್ದನ್ನು ಎಷ್ಟೇ ಕಷ್ಟವಾದರೂ ಪಡೆದೇ ತೀರುತ್ತಿದ್ದರು ಎಂದಿದ್ದಾರೆ ರಶ್ಮಿಕಾ.

     

  • ಪುನೀತ್ ಸ್ಟೈಲ್ ಹಿಂದಿನ ಸ್ಟಾರ್ ಯಾರು ಗೊತ್ತಾ..?

    he is the secret star behind puneeth's style

    ಪುನೀತ್ ರಾಜ್‍ಕುಮಾರ್ ಅಂದ್ರೆ ಪವರ್ ಸ್ಟಾರ್. ಆದರೆ ನಟಸಾರ್ವಭೌಮ ನೋಡಿದವರಿಗೆ ಅಚ್ಚರಿಯಾಗುತ್ತಿರುವುದು ಪುನೀತ್ ಸ್ಟೈಲ್. ಕಣ್ಣಿಗೊಂದು ಚೆಂದದ ಕನ್ನಡಕ ಹಾಕಿಕೊಂಡು ಸಿಕ್ಕಾಪಟ್ಟೆ ಸ್ಟೈಲಿಷ್ ಆಗಿ ಕಾಣುತ್ತಿದ್ದಾರೆ ಅಪ್ಪು. ಅಪ್ಪು ಬದಲಾಗುತ್ತಿದ್ದಾರೆ. ಚಿತ್ರದಿಂದ ಚಿತ್ರಕ್ಕೆ ಅವರ ಸ್ಟೈಲ್, ಲುಕ್, ಮ್ಯಾನರಿಸಂ ಬದಲಾಗುತ್ತಲೇ ಇವೆ. ಈ ಎಲ್ಲದರ ಹಿಂದಿರುವ ಸೀಕ್ರೆಟ್ ಸ್ಟಾರ್ ಯಾರು ಗೊತ್ತಾ..?

    ಯೋಗಿ ಜಿ.ರಾಜ್. ಖುಷಿಖುಷಿಯಾಗಿ & ಬಂಗಾರ ಸನ್ ಆಫ್ ಬಂಗಾರದ ಮನುಷ್ಯ ಚಿತ್ರದ ನಿರ್ದೇಶಕ ಯೋಗಿ, ಪುನೀತ್ ಅವರ ಸ್ಟೈಲ್ ಹಿಂದಿರೋ ಸೀಕ್ರೆಟ್ ಸ್ಟಾರ್. ಮೂಲತಃ ಯೋಗಿ ಕಾಸ್ಟ್ಯೂಮ್ ಡಿಸೈನರ್. ತಮ್ಮ ಕೈಚಳಕವನ್ನು ಪುನೀತ್ ಮೇಲೆ ಪ್ರಯೋಗಿಸಿರುವ ಯೋಗಿ, ಪುನೀತ್‍ರನ್ನು ಸ್ಟೈಲಿಷ್ ನಟಸಾರ್ವಭೌಮನಾಗಿಸಿದ್ದಾರೆ.

  • ಪುನೀತ್ ಹಾಡಿದ ಕಳೆದೋದ ಕಾಳಿದಾಸ ಹಾಡು ಹಿಟ್

    puneeth's song in kaanadanthe mayavadhano' song is super hit

    ಕಾಣದಂತೆ ಮಾಯವಾದನು ಚಿತ್ರ ಇದೇ ತಿಂಗಳ ಕೊನೆಗೆ ರಿಲೀಸ್ ಆಗುತ್ತಿದೆ. ಇದೇ ವೇಳೆ ಚಿತ್ರ ತಂಡದವರಿಗೆ ಖುಷಿ ಕೊಟ್ಟಿರುವುದು ಚಿತ್ರದ ಕಳೆದೋದ ಕಾಳಿದಾಸ ಹಾಡು ಹಿಟ್ ಆಗಿರುವುದು. ಅಂದಹಾಗೆ ಈ ಹಾಡನ್ನು ಹಾಡಿರುವುದು ಸ್ವತಃ ಪುನೀತ್ ರಾಜ್‍ಕುಮಾರ್.

    ಚಿತ್ರದ ಟೈಟಲ್ ಕೂಡಾ ಪುನೀತ್ ಅವರ ಹಿಟ್ ಸಾಂಗ್ ಕಾಣದಂತೆ ಮಾಯವಾದನು ಜನಪ್ರಿಯ ಪದ. ಇನ್ನು ಚಿತ್ರದಲ್ಲಿ ಈಗ ಅವರೇ ಹಾಡಿರುವ ಕಳೆದೋದ ಕಾಳಿದಾಸ ಹಾಡು ಹಿಟ್ ಆಗಿದೆ.

    ವಿಕಾಸ್, ಸಿಂಧು ಲೋಕನಾಥ್ ಜೊತೆಯಾಗಿ ನಟಿಸಿರುವ ಚಿತ್ರದ ಸೂಪರ್ ಹೀರೋ ದೆವ್ವ ಅರ್ಥಾತ್ ಆತ್ಮ. ಆತ್ಮದ ಪಾತ್ರದಲ್ಲಿ ನಟಿಸಿರೋದು ಧರ್ಮಣ್ಣ. ನಿರ್ದೇಶಕ ರಾಜ್ ಪತ್ತಿಪಾಟಿ ಒಂದು ವಿಭಿನ್ನ ಕಥೆಯನ್ನು ತೆರೆಯ ಮೇಲೆ ತಂದಿದ್ದು, ಪ್ರೇಕ್ಷಕರ ರಿಯಾಕ್ಷನ್ ಎದುರು ನೋಡುತ್ತಿದ್ದಾರೆ.

  • ಪುನೀತ್ ಹೀರೋ ಆದರೆ, ನಾನ್ ರೆಡಿ - ತಮನ್ನಾ

    tamannah wants to work with puneeth

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹಾಗೂ ಮಿಲ್ಕಿ ಬ್ಯೂಟಿ ತಮನ್ನಾ, ಇತ್ತೀಚೆಗಷ್ಟೇ ಚಿನ್ನದ ಮಳಿಗೆಯ ಜಾಹೀರಾತಿನಲ್ಲಿ ನಟಿಸಿದ್ದಾರೆ. ಅದೇ ಚಿನ್ನದ ಮಳಿಗೆಯ ಉದ್ಘಾಟನೆಗೆ ಬಂದಿದ್ದ ತಮನ್ನಾ, ಕನ್ನಡದಲ್ಲಿ ನಟಿಸುವ ಸುಳಿವನ್ನೂ ಕೊಟ್ಟಿದ್ದಾರೆ.

    ಕನ್ನಡ ಚಿತ್ರದಲ್ಲಿ ನಟಿಸೋಕೆ ನಾನು ರೆಡಿ. ಅದರಲ್ಲೂ ಪುನೀತ್ ರಾಜ್‍ಕುಮಾರ್  ಹೀರೋ ಆದರೆ, ನಟಿಸಲು ನಾನು ಸಿದ್ಧ ಎಂದಿದ್ದಾರೆ ಬಾಹುಬಲಿಯ ಆವಂತಿಕಾ.

    ತಮನ್ನಾ ಕನ್ನಡಕ್ಕೆ ಬರುವುದಾದರೆ ಸ್ವಾಗತ ಎಂದಿದ್ದಾರೆ ಪುನೀತ್. ಮುಂದಾ.. 

  • ಪುನೀತ್ ಹೀರೋಯಿನ್ ಬದಲಾಗಿದ್ದು ಏಕೆ..?

    rachitha ram, puneeth image

    ಪುನೀತ್ ರಾಜ್‍ಕುಮಾರ್ ಅಭಿನಯದ ಹೊಸ ಚಿತ್ರಕ್ಕೆ ನಾಯಕಿ ಬದಲಾಗಿದ್ದಾರೆ. ಮೊದಲ ದಿನದ ಶೂಟಿಂಗ್‍ನಲ್ಲೂ ಭಾಗವಹಿಸಿದ್ದ ಪ್ರಿಯಾಂಕಾ ಜವಾಲ್‍ಕರ್ ಜಾಗಕ್ಕೆ ರಚಿತಾ ರಾಮ್ ಬಂದಿದ್ದಾರೆ. ರಚಿತಾ ರಾಮ್‍ಗೆ ಇದು ಪುನೀತ್ ಜೊತೆಗೆ 2ನೇ ಸಿನಿಮಾ. ಈ ಮೊದಲು ಚಕ್ರವ್ಯೂಹ ಚಿತ್ರಕ್ಕೆ ಹೀರೋಯಿನ್ ಆಗಿದ್ದ ರಚಿತಾ, ಮತ್ತೊಮ್ಮೆ ಪುನೀತ್‍ಗೆ ಜೋಡಿಯಾಗಿದ್ದಾರೆ.

    ಪುನೀತ್ ಜೊತೆ ನಟಿಸುತ್ತಿರುವುದು ನನ್ನ ಅದೃಷ್ಟ ಎಂದು ಹೇಳಿಕೊಂಡಿದ್ದ ಪ್ರಿಯಾಂಕಾ, ದಿಢೀರನೆ ಪ್ರಾಜೆಕ್ಟ್‍ನಿಂದ ಹೊರಹೋಗಿದ್ದಕ್ಕೆ ಡೇಟ್ಸ್ ಪ್ರಾಬ್ಲಂ ಕಾರಣವಂತೆ. ಹೀಗಂತ ಹೇಳಿರೋದು ನಿರ್ದೇಶಕ ಪವನ್ ಒಡೆಯರ್.

    ಒಟ್ಟಿನಲ್ಲಿ ಮತ್ತೊಮ್ಮೆ ಸ್ಟಾರ್ ಚಿತ್ರಕ್ಕೇ ರಚಿತಾ ಹೀರೋಯಿನ್ ಆಗಿದ್ದಾರೆ. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಈ ಬಹುನಿರೀಕ್ಷಿತ ಚಿತ್ರದ ಫಸ್ಟ್‍ಲುಕ್ ಮಾರ್ಚ್ 17ರಂದು ಬಿಡುಗಡೆಯಾಗಲಿದೆ. ಆ ದಿನ ಪುನೀತ್ ಅವರ ಹುಟ್ಟುಹಬ್ಬ.

  • ಪುನೀತ್ ಹುಟ್ಟುಹಬ್ಬಕ್ಕೆ ಎರಡು ಉಡುಗೊರೆ

    puneeth fans wait for two gifts on his birthday

    ನಾಳೆ ಪುನೀತ್ ರಾಜ್‍ಕುಮಾರ್ (ಮಾರ್ಚ್ 17) ಹುಟ್ಟುಹಬ್ಬ. ಈ ಹುಟ್ಟುಹಬ್ಬಕ್ಕೆ ಪುನೀತ್ ರಾಜ್‍ಕುಮಾರ್ ಹಾಗೂ ಅವರ ಅಭಿಮಾನಿಗಳಿಗೆ ಎರಡು ಕಾಣಿಕೆಗಳು ಸಿಗುವ ನಿರೀಕ್ಷೆ ಇದೆ. 

    ಒಂದು ಪಕ್ಕಾ ಆಗಿದೆ. ಅದು ನಟಸಾರ್ವಭೌಮ ಚಿತ್ರದ ಫಸ್ಟ್‍ಲುಕ್. ಇಂದು ರಾತ್ರಿಯೇ ನಟಸಾರ್ವಭೌಮನ ಫಸ್ಟ್‍ಲುಕ್ ಹೊರಬರಲಿದೆ.

    ಇನ್ನೊಂದು, ಹೊಂಬಾಳೆ ಪ್ರೊಡಕ್ಷನ್ಸ್‍ನ ಹೊಸ ಸಿನಿಮಾ. ಸಂತೋಷ್ ಆನಂದ್‍ರಾಮ್ ನಿರ್ದೇಶನದ ಚಿತ್ರದ ಟೈಟಲ್ ಬಹಿರಂಗವಾಗುವ ನಿರೀಕ್ಷೆಯೂ ಇದೆ. ರಾಜಕುಮಾರ ಚಿತ್ರತಂಡದ ಜೊತೆ ಇದು ಸಂತೋಷ್ ಆನಂದ್‍ರಾಮ್‍ಗೆ 2ನೇ ಸಿನಿಮಾ. ಪುನೀತ್ ಜೊತೆಗೂ ಇದು 2ನೇ ಸಿನಿಮಾ. ಪುನೀತ್ ರಾಜ್‍ಕುಮಾರ್‍ಗೆ ಇದು 29ನೇ ಸಿನಿಮಾ. (ನಾಯಕರಾಗಿ)

    ಇದಿಷ್ಟೂ ವಿವರವನ್ನು ಹೊಂಬಾಳೆ ಪ್ರೊಡಕ್ಷನ್ಸ್ ಪುನೀತ್‍ಗೆ ಹುಟ್ಟುಹಬ್ಬದ ಶುಭಾಶಯ ಕೋರಿ ನೀಡಿರುವ ಜಾಹೀರಾತಿನಲ್ಲಿ ಲಭ್ಯ. ಇದಾದ ನಂತರ ಈ ಚಿತ್ರದ ಟೈಟಲ್ ಕೂಡಾ ಬಿಡುಗಡೆಯಾಗುವ ನಿರೀಕ್ಷೆ ಇದೆ.

  • ಪುನೀತ್ ಹೇರ್‍ಸ್ಟೈಲ್ ಮೊದಲ ಪ್ರಯೋಗ ಯಾರ ಮೇಲೆ..?

    puneeth's hair style experiment on pavan wodeyar

    ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ, ಪವನ್ ಒಡೆಯರ್ ನಿರ್ದೇಶನದ ಹೊಸ ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಅವರ ವಿಭಿನ್ನ ಹೇರ್‍ಸ್ಟೈಲ್ ಸದ್ದು ಮಾಡುತ್ತಿರುವಾಗಲೇ ಒಂದು ಸ್ವಾರಸ್ಯ ಹೊರಬಿದ್ದಿದೆ. ಚಿತ್ರದ ಕಥೆ ಮತ್ತು ಪಾತ್ರದ ವ್ಯಕ್ತಿತ್ವ ತಿಳಿಸುವಂತೆ ಹೇರ್‍ಸ್ಟೈಲ್ ಇರಬೇಕು ಎಂದು ಪವನ್ ಹೇಳಿದರಂತೆ. ಪುನೀತ್ ಓಕೆ ಎಂದರು. ಅದಾದ ಮೇಲೆ ಡಿಸೈನ್ ರೆಡಿ ಆಯ್ತು.

    ಆದರೆ, ಡಿಸೈನ್ ರೆಡಿ ಆದ ಮೇಲೆ ಪ್ರಯೋಗವಾಗಬೇಕಲ್ಲ.. ಪ್ರಯೋಗಕ್ಕೆ  ಯಾರನ್ನು ಹುಡುಕೋದು..? ಆಗ ಮೊದಲ ಪ್ರಯೋಗಕ್ಕೆ ಒಳಗಾಗಿದ್ದು ಸ್ವತಃ ಪವನ್ ಒಡೆಯರ್. 

    ಅದು ಕೇವಲ ಪ್ರಯೋಗವಲ್ಲ. ಸ್ಪೀಡ್ ಇಂಡಿಕೇಷನ್ ಹೇರ್‍ಸ್ಟೈಲ್. ನಾಯಕನ ಪಾತ್ರದ ವೇಗಕ್ಕೆ ಸರಿಯಾಗಿ ಹೊಂದುವ ಸ್ಟೈಲ್. ಇಡೀ ಚಿತ್ರದಲ್ಲಿ ಪುನೀತ್ ಇದೇ ಹೇರ್‍ಸ್ಟೈಲ್‍ನಲ್ಲಿರುತ್ತಾರೆ ಎಂದು ತಿಳಿಸಿದ್ದಾರೆ ಪವನ್ ಒಡೆಯರ್.

    Related Articles :-

    ಪುನೀತ್ ಹೊಸ ಲುಕ್ ಸಖತ್ ಸ್ಟೈಲಿಶ್

  • ಪುನೀತ್ ಹೇಳಿದ ಮುತ್ತಿನಂತಾ ಮಾತುಗಳು

    appu speak up

    ಪುನೀತ್ ರಾಜ್‍ಕುಮಾರ್ ಹೆಸರಾಗಿರುವುದು ಸರಳತೆಗೆ. ವಿನಯಕ್ಕೆ. ಆ ಗುಣವೇ ಅವರನ್ನು ಪವರ್ ಸ್ಟಾರ್ ಆಗಿಸಿದೆ. ಎಲ್ಲರನ್ನೂ ಪ್ರೀತಿಸುವ ಅವರ ಆ ಗುಣವೇ ಚಿತ್ರರಂಗದಲ್ಲಿ ಅವರ ಗೌರವ ಇಮ್ಮಡಿಗೊಳ್ಳುವಂತೆ ಮಾಡಿದೆ. ಈಗ ಅಂಜನೀಪುತ್ರದ ಬಿಡುಗಡೆಯ ಸಮಯ. ರಾಜಕುಮಾರನ ಸಕ್ಸಸ್ ನಂತರ ಬಿಡುಗಡೆಯಾಗುತ್ತಿರುವ ಚಿತ್ರ, ಭರ್ಜರಿ ನಿರೀಕ್ಷೆ ಹುಟ್ಟಿಸಿದೆ. ಈ ಸಮಯದಲ್ಲಿ ಅವರು ಆಡಿರುವ ಈ ಮಾತುಗಳೇ, ಅವರೇಕೆ ರಾಜಕುಮಾರ ಎಂಬುದನ್ನು ಸಾರಿ ಹೇಳುತ್ತವೆ.

    ಹರ್ಷ ಅವರ ಜೊತೆ ನನ್ನ ಸ್ನೇಹ ಸುಮಾರು 20 ವರ್ಷಗಳದ್ದು. ಅವರು ಕೊರಿಯಾಗ್ರಫರ್ ಆದ ದಿನದಿಂದಲೂ ಒಟ್ಟಿಗೇ ಸಿನಿಮಾ ಮಾಡುವ ಆಸೆಯಿತ್ತು. ಅದು ಈಗ ಈಡೇರಿದೆ. 

    ಮೇಕಿಂಗ್ ವಿಚಾರಕ್ಕೆ ಬಂದರೆ, ಹರ್ಷ ಅವರ ಎಂಜಾಯ್ ಮಾಡುತ್ತಾ ಶೂಟಿಂಗ್ ಮುಗಿಸಿದ್ದೇನೆ. ಅದರ ಕ್ರೆಡಿಟ್ ಸಲ್ಲಬೇಕಿರೋದು ನಿರ್ಮಾಪಕ ಎಂ.ಎನ್.ಕುಮಾರ್ ಹಾಗೂ ನಿರ್ದೇಶಕ ಹರ್ಷ ಅವರಿಗೆ.

    ಇದು ರೀಮೇಕ್ ಆಗಿದ್ದರೂ, ವೊರಿಜಿನಲ್ ಚಿತ್ರಕ್ಕೂ ಈ ಚಿತ್ರಕ್ಕೂ ತುಂಬಾ ವ್ಯತ್ಯಾಸ ಇದೆ. ಹಾಡುಗಳು ಹಾಗೂ ಸಾಹಸ ದೃಶ್ಯಗಳು ನನಗೇ ಅಚ್ಚರಿ ಹುಟ್ಟಿಸುವಂತೆ ಮೂಡಿಬಂದಿವೆ. ಥ್ಯಾಕ್ಸ್ ಟು ರವಿವರ್ಮ.

    ರಶ್ಮಿಕಾ ಅವರಿಗೆ ನನ್ನ ವಯಸ್ಸಿನ ಅರ್ಧದಷ್ಟು ವಯಸ್ಸು. ಆದರೆ, ರಿಯಲಿ ವಂಡರ್‍ಫುಲ್.

    ರಮ್ಯ ಕೃಷ್ಣ ಅವರ ಜೊತೆ ನಟಿಸಿದ್ದೇನೆ ಎನ್ನುವುದೇ ನನಗೆ ಖುಷಿ. ಸಾಧುಕೋಕಿಲ, ರವಿಶಂಕg, ಮುಖೇಶ್ ತಿವಾರಿ, ಅಖಿಲೇಂದ್ರ ಮಿಶ್ರಾ.. ಅವರ ಬಗ್ಗೆ ನಾನು ಹೇಳುವುದೇನೂ ಇಲ್ಲ. ಅವರೆಲ್ಲ ಜೊತೆ ನಾನೂ ನಟಿಸಿದ್ದೆನೆ ಎಂಬ ಸಂಭ್ರಮವಿದೆ.

     

    ಹೀಗೆ ಪುನೀತ್ ನಿರರ್ಗಳವಾಗಿ ಮಾತನಾಡುತ್ತಾ, ಸಹಕಲಾವಿದರನ್ನು ಹೊಗಳುತ್ತಾ ಹೋಗುತ್ತಾರೆ. ಅದು ಕೇವಲ ತೋರಿಕೆಗೆ ಅನ್ನಿಸೋದಿಲ್ಲ. ಏಕೆಂದರೆ, ಅವರು ಇರೋದೇ ಹಾಗೆ. ಅದ್ಸರಿ, ಅಂಜನೀಪುತ್ರ ನೋಡಿದ್ರಾ..?

  • ಪುನೀತ್ ಹೊಸ ಚಿತ್ರ ಕ್ರಾಂತಿವೀರ

    puneeth's new film is kranthiveera

    ಪುನೀತ್ ರಾಜ್‍ಕುಮಾರ್, ಸಂತೋಷ್ ಆನಂದ್ ರಾಮ್, ವಿಜಯ್ ಕಿರಗಂದೂರು ಕಾಂಬಿನೇಷನ್ನಿನ ಹೊಸ ಸಿನಿಮಾದ ಟೈಟಲ್ ಯಾವುದು ಅನ್ನೋ ಪ್ರಶ್ನೆಗೆ ಈಗ ಇನ್ನೊಂದು ಉತ್ತರ ಸಿಕ್ಕಿದೆ. ಕ್ರಾಂತಿವೀರ. ನವೆಂಬರ್ 1ಕ್ಕೆ ಸಿನಿಮಾದ ಟೈಟಲ್ ಅದ್ಧೂರಿಯಾಗಿ ಅಭಿಮಾನಿ ದೇವರಿಂದ ಲಾಂಚ್ ಆಗಲಿದೆ. ಅದಕ್ಕೂ ಮೊದಲೇ ಚಿತ್ರದ ಟೈಟಲ್ ಏನಿರಬಹುದು ಅನ್ನೋ ಕುತೂಹಲಕ್ಕೆ ಉತ್ತರಗಳು ಸಿಗುತ್ತಿವೆ.  

    ಕ್ರಾಂತಿವೀರ ಕೂಡಾ ಡಾ.ರಾಜ್ ಕುಮಾರ್ ಅಭಿನಯದ ಸಿನಿಮಾ. 1972ರಲ್ಲಿ ತೆರೆಕಂಡಿದ್ದ ಬ್ಲಾಕ್ & ವೈಟ್ ಸಿನಿಮಾ. ಆಗಿನ ಕಾಲಕ್ಕೆ ಸೂಪರ್ ಹಿಟ್. ಇದುವರೆಗೆ ಕೇಳಿ ಬಂದಿದ್ದ ಹೆಸರುಗಳು ಪರಶುರಾಮ್, ದೇವತಾ ಮನುಷ್ಯ ಹಾಗೂ ಜ್ವಾಲಾಮುಖಿ. ಈಗ ಕ್ರಾಂತಿವೀರ. ಯಾವುದು ಸತ್ಯ..? ನವೆಂಬರ್ 1ಕ್ಕೆ ಕಾದು ನೋಡಿ.

  • ಪುನೀತ್ ಹೊಸ ಲುಕ್ ಸಖತ್ ಸ್ಟೈಲಿಶ್

    puneeth rajkumar sports new hairstyle

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ತಮ್ಮ ಚಿತ್ರಗಳಲ್ಲಿ ತಮ್ಮ ಕೇಶವಿನ್ಯಾಸ ಬದಲಾವಣೆ ಮಾಡಿಕೊಂಡಿದ್ದು ಬಹಳ ಕಡಿಮೆ. ಬಹುಶಃ ರಾಜ್ ದಿ ಶೋ ಮ್ಯಾನ್, ಯಾರೇ ಕೂಗಾಡಲಿ ಹೊರತುಪಡಿಸಿದರೆ, ಅಂತಹ ಬೇರೆ ಉದಾಹರಣೆಗಳು ಸಿಗುವುದು ಕಷ್ಟ. ಆದರೆ, ಈಗ ಸಿದ್ಧವಾಗುತ್ತಿರುವ ಹೊಸ ಚಿತ್ರಕ್ಕೆ ನಿರ್ದೇಶಕ ಪವನ್ ಒಡೆಯರ್ ಪುನೀತ್ ಹೇರ್‍ಸ್ಟೈಲ್‍ನ್ನೇ ಬದಲಾಯಿಸಿದ್ದಾರೆ.

    ಪುನೀತ್ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲವಾದರೂ, ಚಿತ್ರದಲ್ಲಿ ಪುನೀತ್ ಅವರದ್ದು ಎಲ್ಲರನ್ನೂ ಖುಷಿಯಾಗಿಸುವ ಪಾತ್ರವಂತೆ. ಸಂತೋಷ ಹಂಚುವುದೇ ಪುನೀತ್ ಕಾಯಕ. ತನಗೆ ಸರಿ ಅನ್ನಿಸಿದ್ದನ್ನು ಮಾಡುವ, ಸುತ್ತಲಿನವರನ್ನು ನಗಿಸುತ್ತಾ ಬದುಕುವ ಕೇರ್‍ಫ್ರೀ ಪಾತ್ರ ಎಂದಿದ್ದಾರೆ ಪವನ್ ಒಡೆಯರ್.

    ಚಿತ್ರದಲ್ಲಿ ಬಿ.ಸರೋಜಾದೇವಿ ಕೂಡಾ ನಟಿಸುತ್ತಿದ್ದಾರೆ. ಪುನೀತ್ ರಾಜ್‍ಕುಮಾರ್ ಬಾಲನಟನಾಗಿ ನಟಿಸಿದ್ದ ಯಾರಿವನು ನಂತರ, ಸರೋಜಾದೇವಿ ಮತ್ತೆ ತೆರೆಗೆ ಬಂದೇ ಇರಲಿಲ್ಲ. ಈಗ ಮತ್ತೊಮ್ಮೆ ಪುನೀತ್ ಸಿನಿಮಾ ಮೂಲಕವೇ ಬೆಳ್ಳಿತೆರೆಗೆ ಬರುತ್ತಿದ್ದಾರೆ ಸರೋಜಾದೇವಿ. ಯಾರಿವನು ಚಿತ್ರದಲ್ಲಿ ಪುನೀತ್ ತಾಯಿಯ ಪಾತ್ರ ಮಾಡಿದ್ದ ಸರೋಜಾದೇವಿ, ಈ ಚಿತ್ರದಲ್ಲಿ ಸ್ವತಃ ಬಿ.ಸರೋಜಾದೇವಿಯಾಗಿಯೇ ಕಾಣಿಸಿಕೊಳ್ಳಲಿದ್ದಾರೆ.

    ಹಾಗಾದರೆ, ಚಿತ್ರದ ಕಥೆ ಏನು ಎನ್ನುವ ಗುಟ್ಟನ್ನು ಹಾಗೆಯೇ ಉಳಿಸಿಕೊಂಡಿರುವ ಪವನ್, ಪುನೀತ್ ಪಾತ್ರವನ್ನಷ್ಟೇ ಬಾಯ್ಬಿಟ್ಟಿದ್ದಾರೆ. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರ, ಶೀಘ್ರದಲ್ಲೇ ಶೂಟಿಂಗ್ ಶುರು ಮಾಡಲಿದೆ.

     

  • ಪುನೀತ್`ಗಾಗಿ ತೆರೆಯಿತು ವಿಂಡ್ಸರ್ ಮ್ಯಾನರ್ ಬಾಗಿಲು

    ಪುನೀತ್`ಗಾಗಿ ತೆರೆಯಿತು ವಿಂಡ್ಸರ್ ಮ್ಯಾನರ್ ಬಾಗಿಲು

    ವಿಂಡ್ಸರ್ ಮ್ಯಾನರ್, ಬೆಂಗಳೂರಿನ ಐತಿಹಾಸಿಕ ಹೋಟೆಲ್. ವಾಸ್ತು ಸೌಂದರ್ಯಕ್ಕೂ ಹೆಸರುವಾಸಿ. ಇಂತಹ ಹೋಟೆಲ್‍ನಲ್ಲಿ ಸಿನಿಮಾ ಮಾಡಬೇಕು ಅನ್ನೋ ಕನಸು ಯಾರಿಗಿರಲ್ಲ ಹೇಳಿ... ಆದರೆ, ಈ ಹೋಟೆಲ್‍ನಲ್ಲಿ ಇದುವರೆಗೆ ಚಿತ್ರೀಕರಣಗೊಂಡಿರೋದು ಕೆಲವೇ ಕೆಲವು ಚಿತ್ರಗಳು. ಕಮಲ್‍ಹಾಸನ್ ಅಭಿನಯದ ಪುಷ್ಪಕ ವಿಮಾನ, ಮದನ ಕಾಮರಾಜ ಚಿತ್ರಗಳನ್ನು ಬಿಟ್ಟರೆ, ಬೇರೆ ಚಿತ್ರಗಳಿಗೆ ಈ ಹೋಟೆಲ್ ಅನುಮತಿಯನ್ನೇ ಕೊಡೋದಿಲ್ಲ. ಅಂಥಾದ್ದರಲ್ಲಿ ಈಗ ಮತ್ತೊಂದು ಚಿತ್ರಕ್ಕೆ ವಿಂಡ್ಸರ್ ಮ್ಯಾನರ್ ಹೋಟೆಲ್ ಬಾಗಿಲು ತೆರೆದಿದೆ.

    ಪುನೀತ್ ರಾಜ್‍ಕುಮಾರ್, ಭರ್ಜರಿ ಚೇತನ್ ಕಾಂಬಿನೇಷನ್ನಿನ ಜೇಮ್ಸ್ ಚಿತ್ರದ ಕೆಲವು ಭಾಗಗಳ ಶೂಟಿಂಗ್ ಈ ಹೋಟೆಲ್‍ನಲ್ಲಿ ನಡೆಯುತ್ತಿದೆ. ಸಾಮಾನ್ಯವಾಗಿ ಯಾರಿಗೂ ಅನುಮತಿ ಕೊಡಲ್ಲ. ಆದರೆ ಪುನೀತ್ ರಾಜ್‍ಕುಮಾರ್ ಹೇಳಿದರೆ ಕೆಲಸ ಆಗುತ್ತೆ ಎನಿಸಿ, ಅವರಿಂದಲೇ ಮಾತನಾಡಿಸಿದೆವು. ಪುನೀತ್ ಚಿತ್ರನಾ..? ಹಾಗಾದರೆ ಓಕೆ ಎಂದರು ಎನ್ನುತ್ತಾರೆ ಚೇತನ್.

    ಸ್ಸೋ.. ವಿಂಡ್ಸರ್ ಮ್ಯಾನರ್‍ಗೆ ಜೇಮ್ಸ್ ಎಂಟ್ರಿ ಕೊಟ್ಟಿದ್ದಾಗಿದೆ.

  • ಪುನೀತ್`ಗೆ ಡೇವಿಡ್ ವಾರ್ನರ್ ವಿಶೇಷ ಗೌರವ

    ಪುನೀತ್`ಗೆ ಡೇವಿಡ್ ವಾರ್ನರ್ ವಿಶೇಷ ಗೌರವ

    ಡೇವಿಡ್ ವಾರ್ನರ್. ಕ್ರಿಕೆಟ್ ಜಗತ್ತಿನ ಸ್ಪೆಷಲ್ ಆಟಗಾರ. ಆಸ್ಟ್ರೇಲಿಯಾ ತಂಡದ ಸ್ಟಾರ್. ಐಪಿಎಲ್‍ನಲ್ಲಿ ಕಳೆದ ವರ್ಷದವರೆಗೆ ಸನ್‍ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸಿದ್ದ ವಾರ್ನರ್, ಪುನೀತ್ ರಾಜ್‍ಕುಮಾರ್ ಅವರಿಗೆ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಿದ್ದಾರೆ.

    ರಾಜಕುಮಾರ ಚಿತ್ರದ ಬೊಂಬೆ ಹೇಳುತೈತೆ ಹಾಡಿನ ವಿಡಿಯೋಗೆ ಪುನೀತ್ ಮುಖದ ಜಾಗದಲ್ಲಿ ತ್ಮ ಮುಖವನ್ನು ಮಾರ್ಫ್ ಮಾಡಿ ವಿಡಿಯೋ ಬಿಟ್ಟಿದ್ದಾರೆ. ರೆಸ್ಪೆಕ್ಟ್ ಅನ್ನೋ ಹ್ಯಾಷ್‍ಟ್ಯಾಗ್ ಹಾಕಿ ಗೌರವ ಸಲ್ಲಿಸಿದ್ದಾರೆ.

    ಪುನೀತ್ ವಿಡಿಯೋ ಹಾಕಿದ್ದೇ ತಡ. ಆರ್‍ಸಿಬಿ ಫ್ಯಾನ್ಸ್ ವಾರ್ನರ್‍ರನ್ನು  ಆರ್‍ಸಿಬಿಗೆ ಕರೆಯುತ್ತಿದ್ದಾರೆ. ಆರ್‍ಸಿಬಿ ಕ್ಯಾಪ್ಟನ್ಸಿಗೆ ಕೊಹ್ಲಿ ವಿದಾಯ ಹೇಳಿದ್ದು, ಅತ್ತ ವಾರ್ನರ್ ಸನ್‍ರೈಸರ್ಸ್ ಟೀಂ ಬಿಟ್ಟಿದ್ದಾರೆ. ಹೀಗಾಗಿಯೇ ವಾರ್ನರ್ ಆರ್‍ಸಿಬಿ ಕ್ಯಾಪ್ಟನ್ ಆಗಲಿ ಅನ್ನೋದು ಅಭಿಮಾನಿಗಳ ಮಹದಾಸೆ. 

  • ಪುನೀತ್`ಗೆ ಪದ್ಮಶ್ರೀ, ಕರ್ನಾಟಕ ರತ್ನ ಗೌರವಕ್ಕೆ ಅಭಿಯಾನ

    ಪುನೀತ್`ಗೆ ಪದ್ಮಶ್ರೀ, ಕರ್ನಾಟಕ ರತ್ನ ಗೌರವಕ್ಕೆ ಅಭಿಯಾನ

    ಪುನೀತ್ ರಾಜ್‍ಕುಮಾರ್ ಅವರ ಸಾಮಾಜಿಕ ಸೇವೆಯ ಕೆಲಸಗಳು ಅವರ ನಿಧನಾನಂತರ ಹೊರಬೀಳುತ್ತಿದ್ದಂತೆ ಸಾವಿರಾರು ಜನ ಬೆರಗಾಗಿ ಹೋಗಿದ್ದಾರೆ. ನಮ್ಮ ಮನೆಯ ಹುಡುಗ, ಒಳ್ಳೆಯ ನಟ, ರಾಜ್ ಕುಮಾರ್ ಮಗ.. ಎಂಬ ಪ್ರೀತಿಗೆ ಅವರ ಸಮಾಜ ಸೇವೆಯೂ ಸೇರಿ ಇನ್ನೂ ಎತ್ತರಕ್ಕೇರಿದ್ದಾರೆ ಅಪ್ಪು. ಹೀಗಾಗಿಯೇ ಅವರ ಪದ್ಮಶ್ರೀ, ಕರ್ನಾಟಕ ರತ್ನ ಪುರಸ್ಕಾರ ನೀಡುವಂತೆ ಆಗ್ರಹಗಳು ಕೇಳಿ ಬರತೊಡಗಿವೆ.

    ಮೃತರಾದ ದಿನವೇ ರಾಜ್ಯೋತ್ಸವ ಪ್ರಶಸ್ತಿಗೆ ಆಗ್ರಹ ಕೇಳಿಬಂತಾದರೂ, ಹೈಕೋರ್ಟ್ ಆದೇಶದ ಪ್ರಕಾರ ಮರಣೋತ್ತರವಾಗಿ ರಾಜ್ಯೋತ್ಸವ ಪ್ರಶಸ್ತಿ ನೀಡುವಂತಿಲ್ಲ. ಹೀಗಾಗಿ ರಾಜ್ಯೋತ್ಸವ ಪ್ರಶಸ್ತಿ ಸಾಧ್ಯವಾಗಲಿಲ್ಲ. ಹಾಗಾದರೆ ಕರ್ನಾಟಕ ರತ್ನ ಪ್ರಶಸ್ತಿಯನ್ನೇ ನೀಡಿ ಎಂಬುದು ಅಭಿಮಾನಿಗಳ ಆಗ್ರಹ.

    ಇಲ್ಲಿ ಯಾವ ತಾಂತ್ರಿಕ ತೊಂದರೆಗಳಿವೆಯೋ ಮಾಹಿತಿ ಇಲ್ಲ. ಆದರೆ, ಇದುವರೆಗೆ ಕರ್ನಾಟಕ ರತ್ನ ಪಡೆದ ಒಟ್ಟು 9 ಮಂದಿಯಲ್ಲಿ ಎಸ್.ನಿಜಲಿಂಗಪ್ಪನವರಿಗೆ ಮರಣೋತ್ತರ ಗೌರವ ಸಿಕ್ಕಿದೆ. ಡಾ.ರಾಜ್, ಕುವೆಂಪು, ಶಿವಕುಮಾರ ಸ್ವಾಮೀಜಿ, ಭೀಮ್‍ಸೇನ್ ಜೋಷಿ, ದೇ.ಜವರೇಗೌಡ.. ಇವರೆಲ್ಲ ಜೀವಂತವಾಗಿದ್ದಲೇ ಗೌರವ ಸ್ವೀಕರಿಸಿದ ರತ್ನಗಳು. ಡಾ.ದೇವಿಶೆಟ್ಟಿ, ವೀರೇಂದ್ರ ಹೆಗ್ಗಡೆ, ಡಾ.ಸಿಎನ್‍ಆರ್ ರಾವ್.. ಈಗಲೂ ನಮ್ಮೊಂದಿಗಿದ್ದಾರೆ. ಸ್ಫೂರ್ತಿಯಾಗಿದ್ದಾರೆ. ಒಬ್ಬರಿಗೆ ಮರಣೋತ್ತರ ಗೌರವ ಸಿಕ್ಕಿರುವುದರಿಂದ ಆ ತಾಂತ್ರಿಕ ಸಮಸ್ಯೆ ಅಡ್ಡಿಯಾಗುವ ತೊಂದರೆ ಕಾಣುತ್ತಿಲ್ಲ.

    ಇನ್ನೊಂದೆಡೆ ಮಂಗಳೂರು ಶಶಿಕುಮಾರ್ ಪದ್ಮಶ್ರೀ ಗೌರವ ನೀಡಿ ಎಂಬ ಅಭಿಯಾನ ಆರಂಭಿಸಿದ್ದಾರೆ. ಪದ್ಮಶ್ರೀ ಗೌರವ ನೀಡಬೇಕು ಎಂಬ ಆಗ್ರಹಕ್ಕೆ ದೊಡ್ಡ ಶಕ್ತಿ ನೀಡಿರುವುದು ರಾಜ್ಯ ವಿಧಾನಸಭೆ ವಿರೋಧ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಶಿಫಾರಸು ಮಾಡುವುದಾಗಿ ಹೇಳಿದ್ದಾರೆ ಸಿದ್ದು.