` sharan - chitraloka.com | Kannada Movie News, Reviews | Image

sharan

  • Bullet Basya Not Releasing This Month

    bullet basya image

    The much anticipated comedy film Bullet Basya that was earlier scheduled to release on June 26 has been postponed. The reason is not yet clear but as of now the release date is being rescheduled. One reason is the non availability of screens. Ranna and Vajrakaya are still doing well in over 300 screens. They have occupied all the premier theatres.

    The scene is not going to change in just one week. Another reason is Telugu film Baahubali. The film will release in Tamil and Telugu in Karnataka and is likely to occupy 200 screens from July 10. Bullet Basya will therefore have suffered pressure just in its second week.

    The film team is maintaining that the film will release one or two weeks after June 26. But no decision has been taken so far. 

     

  • Jai Maruti 800 is Sharan's Costliest Film

    jai maruthi 800 image

    Jai Maruti 800 is the costliest film of Sharan's career. The production cost of the film itself crossed Rs 6 crore. By the release tomorrow, the publicity and post production expenses have taken the budget to Rs 7 crore.

    The film directed by Harsha is produced by Manjula Ramesh and distribution by Jayanna. The film is releasing on Ugadi day and has high expectations riding on it as Sharan's list of comedy hits continues. The film will release in over 200 screens.

  • Lucky Theater For Sharan

    raj vishnu

    Sharan starrer Raj-Vishnu is releasing this Friday and in a sign of good things to come the film is releasing in Triveni theater in Majestic area. This theater is considered lucky for Sharan. Some of his most successful films as a lead actor were released in this theater including Rambo that launched his lead hero career.

    The theater was shut down for sometime recently and did not screen films for several months. Now it is back in business and has been screening mostly Kannada films in the recent months. It is one of the most popular theaters for Kannada films in Gandhinagar.

    It is large enough to be the "main theater" but also reasonably priced compared to the few other costlier theaters in the area. Apart from films of Sharan several other Kannada films have had successful runs in Triveni.

    Related Articles :-

    Raj-Vishnu To Release On August 4th

    ಮತ್ತೆ ಮತ್ತೆ ರಾಜ್ ವಿಷ್ಣು - ಕನ್ನಡ ಬೆಳ್ಳಿತೆರೆಯಲ್ಲಿ ಇವತ್ತಿಗೂ ಇವರೇ ರಾಜರು

    Raj-Vishnu Songs Released

    Raj-Vishnu Trailer Tomorrow; Songs On June 23rd

  • Maley and Bullet Basya Clash on July 24

    bullet basya, maley image

    Two much anticipated Kannada films, Maley and Bullet Basya are set for a box office clash. While producer Jayanna and director Jayateertha have announced Bullet Basya release on July 24, producer R Chandru last night announced that he is releasing Maley on the same day.

    With a big film Uppi2 releasing on August 14, these films do not want to withhold their releases any further. Both the films will try to maximise their returns in the three week gap.

  • Nataraja Service Censored Clean - Releasing On 20th

    nataraja servce movie image

    Nataraja Service movie has been censored with clean U certificate and is getting released on October 20th.

    'Nataraja Service' stars Sharan, Ravishankar, Mayuri, Ravishankar and others in prominent roles and is produced by N S Rajakumar. Anup Seelin has composed the songs of the film. A couple of songs including 'Allah Allah' has already become huge hits.

    Nataraja Service Movie Gallery - View

  • Rambo-2... ದ ಕಂಪ್ಲೀಟ್ ಮನರಂಜನೆ

    rambo 2 is a complete entertainer

    ಯವ್ವಾ ಯವ್ವಾ ಯವ್ವಾ.. ಚುಟುಚುಟು ಅಂತೈತಿ ಅನ್ನೋ ಟಪ್ಪಾಂಗುಚ್ಚಿ ಸಾಂಗು.. ಬಿಟ್‍ಹೋಗ್ಬೇಡ.. ಅನ್ನೋ ಫೀಲಿಂಗ್ ಸಾಂಗು.. ಹಾಡಿರೋದು ಅಂಧಗಾಯಕ ಮೆಹಬೂಬ್..ಧಮ್ ಮಾರೋ ಧಮ್ ಅನ್ನೋ ಐಟಂ ಸಾಂಗು.. ಈ ಹಾಡು ಹಾಡಿದ್ದು ಅರುಣ್ ಸಾಗರ್ ಮಗಳು ಆದಿತಿ... ಧಮ್ ಹಾಡಿನ ಕಿಕ್ ಹೆಚ್ಚಿಸಿರೋದು ಐಂದ್ರಿತಾ ರೇ ಡ್ಯಾನ್ಸು..

    ಕರ್ನಾಟಕ, ರಾಮೇಶ್ವರಂ, ಗೋವಾ, ರಾಜಸ್ತಾನ, ಭಾರತ-ಪಾಕಿಸ್ತಾನ ಗಡಿಗಳಲ್ಲಿ ಶೂಟಿಂಗ್.. ಅಶಿಕಾ ರಂಗನಾಥ್ ಅನ್ನೋ ಪೋರಿಯ ಗ್ಲ್ಯಾಮರ್.. ಡ್ಯಾನ್ಸು.. 

    ಅರ್ಜುನ್ ಜನ್ಯಾ ಅವರ ಹುಚ್ಚೆಬ್ಬಿಸುವ ಮೋಡಿ ಮಾಡುವ ಮ್ಯೂಸಿಕ್ಕು.. ಅನಿಲ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿರುವ ರ್ಯಾಂಬೋ-2 ಸಿನಿಮಾದಲ್ಲಿ ಮನರಂಜನೆಯ ಫ್ಯಾಮಿಲಿ ಪ್ಯಾಕ್ ಕೊಡಲಾಗಿದೆ.

    ಇಡೀ ಮನರಂಜನೆಯ ಫ್ಯಾಮಿಲಿ ಪ್ಯಾಕೇಜ್ ಕೊಡುತ್ತಿರುವುದು ಶರಣ್ ಮತ್ತು ಚಿಕ್ಕಣ್ಣ. ಇಬ್ಬರ ಕಾಂಬಿನೇಷನ್ ಇದ್ದ ಮೇಲೆ ಹೊಟ್ಟೆ ಹುಣ್ಣಾಗುವಂತೆ ನಗೋದಿಕ್ಕೆ ನೋ ಪ್ರಾಬ್ಲಂ. ಒಂದು ಕ್ಯೂಟ್ ಲವ್‍ಸ್ಟೋರಿ ಜೊತೆಯಲ್ಲಿದೆ. ಸಿನಿಮಾ ಥಿಯೇಟರ್‍ನಲ್ಲಿದೆ. ಜಸ್ಟ್ ಎಂಜಾಯ್.

  • Sharan Turns Story Writer with Bullet Basya

    bullet basya image

    Actor-producer Sharan has turned story writer with his new film 'Bullet Basya' which is all set to release on the 24th of this month. 'I got this idea during the making of 'Victory' and I was apprehensive whether it could be made a film or not. I told the story to producer Jayannq and he not only encouraged me, but also produced the film' says Sharan.

    Sharan thanks director Jayatheertha for writing the screenplay. 'Without Jayatheertha I could not ave made this film. He helped me a lot and he improved the storyline beyond my expectation' said Sharan.

  • Sharan's new film titled 'Avatar Purusha'

    sharan's new film titled avatara purusha

    'Simple' Suni directing a film for Sharan is not a new news. Recently, Suni, Sharan and producer Pushkar Mallikarjunaiah had come forward and had announced that they will be doing a film. Now the title of the film has finally been announced and the film has been titled as 'Avatar Purusha'.

    Almost three decades back, a film with the same name starring Ambarish was released. Now Sharan will be seen in the role of 'Avatar Purusha'. The story is about the Trishanku episode in Mahabharatha. Sharan plays a junior artiste in the film.

    Suni himself has scripted the film apart from directing it. William David is the cinematographer, while Charan Raj is the music composer. This is not a joint venture and the film is solely produced by Pushkar Mallikarjunaiah under Pushkar Films.

  • Victory 2 Movie Review, Chitraloka Rating 3.5/5

    victory 2 movie review

    Sharan is back and so is director Santu (now he is officially Hari Santosh). Victory 2 is not strictly a sequel to the hit film of five years ago. But it has a similar theme of  comedy at all costs. If one comic twist is not enough, take two. If two is not enough take three. If three is not enough? Watch the film! That is how the film progresses  from one comic episode to another leaving the audience no time in between laughter and more laughter.

    Chandru is a broker who has married the daughter of a top police officer. But his life is a mess because his wife is always suspicious of him. For one or the other reason,  he is unable to celebrate the first night with his wife. To celebrate it becomes his life's aim. Meanwhile Munna and Maamu are released from jail. Munna character is once again Sharan. Chandru and Munna are lookalikes but whenever Chandur is seen by 

    Munna and Maamu their lives become difficult. Maamu and Munna plan to do a very big robbery and settle down in life. They choose a secretive big house which is in the  middle of a forest. The story takes lots of twists and turns from here on. It is not just about these four characters. Every few minutes a new character is introduced which makes the story more interesting and complicated. It is a big journey which is a roller coaster ride of comedy. Is Chandru able to finish his first night? Do Munna and Maamu manage to steal the gold and jewels from the strange house? These are the questions the story finds answers to. 

    After the interval the fun just doubles and it would not be nice to spill the details here. Just go to the theatre and enjoy this show. You will be surprised at how the story takes different turns. There are two heroines in the film and both get ample opportunity. The songs are beautiful and add value to the story. The cinematography is breathtaking and makes Victory 2 visually rich. 

    This is one of the best films of Sharan and there is a long stream of comedy in the film. From the start to the finish, the director manages to keep the narration very intersting and peppy. There are good dialogues and comedy situations that will entertain everyone in the family. It is a kind of film that can be enjoyed from everyone from kids to the senior citizens. Do not miss this 100 percent entertainer.

    Chitraloka rating -3.5/5

     

  • ಇದು ಚುಟು ಚುಟು ಅಲ್ರೀ.. ಕುಟು ಕುಟು..

    victory 2 movie image

    ಚುಟು ಚುಟು ಅಂತೈತಿ ಹಾಡಿನ ಮೂಲಕ ಪಡ್ಡೆಗಳ ಮೈ ಬಿಸಿಯೇರಿಸಿತ್ತು ಶರಣ್-ಅಶಿಕಾ ರಂಗನಾಥ್ ಜೋಡಿ. ಈಗ ಶರಣ್ ಕುಟು ಕುಟು ಎನ್ನುತ್ತಾ ಬಂದಿದ್ದಾರೆ. ಅಶಿಕಾ ಬದಲಿಗೆ, ಅಪೂರ್ವ ಜೊತೆಯಾಗಿದ್ದಾರೆ. ಕುಟ್ಟಿ ಕುಟ್ಟಿ ಕುಟ್ಟಪ್ಪ ಅಂತ.. ಅನ್ನೋ ಉ.ಕರ್ನಾಟಕದ ಗೀತೆ ನೆನಪಿಸುವಂತೆ ವಿಕ್ಟರಿ 2ನ ಈ ಹಾಡು ಮೂಡಿ ಬಂದಿದೆ.

    ರಷ್ಯಾದಲ್ಲಿ ಶೂಟಿಂಗ್ ಆಗಿರುವ ಹಾಡಿಗೆ ಭರ್ಜರಿಯಾಗಿ ಹೆಜ್ಜೆ ಹಾಕಿದ್ದಾರೆ ಶರಣ್ ಮತ್ತು ಅಪೂರ್ವ. ಈ ಹಾಡಿಗೂ ಒನ್ಸ್ ಎಗೇಯ್ನ್, ಅರ್ಜುನ್ ಜನ್ಯ ಸಂಗೀತ ನಿರ್ದೇಶಕ. ಹಾಡಿರುವುದು ಶಬೀರ್ ಮತ್ತು ಶಮಿತಾ ಮಲ್ನಾಡ್.

    ತರುಣ್ ಶಿವಪ್ಪ ನಿರ್ಮಾಣದ ಚಿತ್ರಕ್ಕೆ ಅಲೆಮಾರಿ ಸಂತು ಅಲಿಯಾಸ್ ಹರಿ ಸಂತೋಷ್ ನಿರ್ದೇಶನವಿದೆ. ಕಾಲೇಜ್ ಕುಮಾರ ನಂತರ ಹರಿ ನಿದೇಶಿಸುತ್ತಿರುವ ಸಿನಿಮಾ ವಿಕ್ಟರಿ 2. ರ್ಯಾಂಬೋ 2 ನಂತರ ಶರಣ್ ಅಭಿನಯಿಸಿರುವ ಸಿನಿಮಾ ವಿಕ್ಟರಿ 2. ಮಾಸ್ ಲೀಡರ್ ನಂತರ ತರುಣ್ ಶಿವಪ್ಪ ನಿರ್ಮಾಣದ ಸಿನಿಮಾ ವಿಕ್ಟರಿ 2. ನವೆಂಬರ್ 1ಕ್ಕೆ ರಾಜ್ಯೋತ್ಸವದ ಉಡುಗೊರೆಯಾಗಿ ತೆರೆಗೆ ಬರುತ್ತಿದೆ ವಿಕ್ಟರಿ 2.

  • ಎಲ್ಲಿ ಕಾಣ್ ಎಲ್ಲಿಕಾಣೆನೋ.. ಪುನೀತ್ ಹಾಡಿದಾಗ..

    puneeth sings a song for rambo 2

    ರ್ಯಾಂಬೋ 2 ಚಿತ್ರದ 4 ಹಾಡುಗಳು ಇದುವರೆಗೆ ಬಿಡುಗಡೆಯಾಗಿವೆ. ಒಂದೊಂದು ಹಾಡೂ ಸ್ಪೆಷಲ್ಲಾಗಿ ಪ್ರೇಕ್ಷಕರಿಗೆ ಕಿಕ್ ಕೊಟ್ಟಿವೆ. ಈ ಬಾರಿ ಎಲ್ಲಿ ಕಾಣ್ ಎಲ್ಲಿ ಕಾಣೆನೋ ನನ್ ಹುಡುಗಿನಾ ಹಾಡು ರಿಲೀಸ್ ಆಗಿದೆ. ಈ ಹಾಡು ಹಾಡಿರೋದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್.

    ಈ ಹಿಂದೆ ಅಧ್ಯಕ್ಷ ಚಿತ್ರಕ್ಕೆ ಪುನೀತ್ ಟೈಟಲ್ ಸಾಂಗ್ ಹಾಡಿದ್ದರು. ಹಾಡು ಹಿಟ್ ಆಗಿತ್ತು. ಸಿನಿಮಾ ಸೂಪರ್ ಹಿಟ್ ಆಗಿತ್ತು. ಈಗ ರ್ಯಾಂಬೋ 2ಗೆ ಹಾಡಿದ್ದಾರೆ. ಈ ಹಾಡು ಉತ್ತರ ಕರ್ನಾಟಕದ ಜನಪದ ಶೈಲಿಯ ಹಾಡು. 

    ಅಶಿಕಾ ರಂಗನಾಥ್ ನಾಯಕಿಯಾಗಿ ನಟಿಸಿರುವ ರ್ಯಾಂಬೋ 2 ಚಿತ್ರ ಇನ್ನೇನು ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ. ತೆರೆಗೆ ಬರುವ ಮುನ್ನ ಚಿತ್ರದ ಹಾಡುಗಳು ಒಂದರ ಹಿಂದೊಂದರಂತೆ ಮ್ಯಾಜಿಕ್ ಮಾಡುತ್ತಿರುವುದು ಚಿತ್ರತಂಡದ ಖುಷಿ ಹೆಚ್ಚಿಸಿರುವುದು ನಿಜ.

  • ಕಾಶೀನಾಥ್‍ರನ್ನು ಮತ್ತೆ ನೆನಪಿಸಿದ ಶರಣ್ ಚಿತ್ರ

    rambo 2 dedicates movie to kashinath

    ರ್ಯಾಂಬೋ 2 ಸಿನಿಮಾ ರಿಲೀಸ್ ಆಗಿದೆ. ಸೂಪರ್ ಹಿಟ್ ಪ್ರದರ್ಶನ ಕಾಣುತ್ತಿದೆ. ಈ ವರ್ಷದ ಸೂಪರ್ ಹಿಟ್ ಸಿನಿಮಾ ಆಗುವ ಎಲ್ಲ ಸೂಚನೆಗಳೂ ಸಿಕ್ಕಿದೆ. ಶರಣ್, ಅಶಿಕಾ ರಂಗನಾಥ್ ಜೋಡಿ ಚುಟುಚುಟು ಮೋಡಿ ಮಾಡಿದೆ. ಇದೆಲ್ಲದರ ಮಧ್ಯೆ ಪ್ರೇಕ್ಷಕರಿಗೆ ಮತ್ತೊಮ್ಮೆ ಕಾಶೀನಾಥ್ ಅವರನ್ನು ನೆನಪಿಸಿದೆ.

    ಚಿತ್ರದ ಟೈಟಲ್ ಕಾರ್ಡ್‍ನಲ್ಲಿ ಚಿತ್ರವನ್ನು ಕಾಶೀನಾಥ್ ಅವರಿಗೆ ಅರ್ಪಣೆ ಮಾಡಲಾಗಿದೆ. ಚಿತ್ರದ ನಿರ್ಮಾಣದಲ್ಲಿ ಬಹುಮುಖ್ಯ ಪಾತ್ರ ವಹಿಸಿರುವ ತರುಣ್ ಸುಧೀರ್ ನಿರ್ದೇಶನದ ಚೌಕ ಚಿತ್ರದಲ್ಲಿ ಕಾಶೀನಾಥ್ ಪ್ರಮುಖ ಪಾತ್ರ ಮಾಡಿದ್ದರು. ಹೀಗಾಗಿಯೇ ಚಿತ್ರದ ಟೈಟಲ್ ಕಾರ್ಡ್‍ನಲ್ಲೇ ಹಿರಿಯ ನಿರ್ದೇಶಕನನ್ನು ಸ್ಮರಿಸಿಕೊಂಡಿದ್ದಾರೆ ತರುಣ್ ಸುಧೀರ್.

  • ಚಿಕ್ಕಣ್ಣ ಕೂಡಾ ಈಗ ನಿರ್ಮಾಪಕ..!

    chikkanna also a producer for rambo 2

    Rambo ಸಿನಿಮಾ ನೆನಪಿದೆಯಲ್ವಾ..? ಶರಣ್‍ರನ್ನು ಸ್ಟಾರ್ ಆಗಿಸಿದ ಸಿನಿಮಾ ಅದು. ಈಗ Rambo 2 ಬರುತ್ತಿದೆ. ಮತ್ತೊಮ್ಮೆ Rambo ಟೀಂ ಜೊತೆಯಾಗಿದೆ. ಒನ್ಸ್ ಎಗೇಯ್ನ್, ಅದು ತಂತ್ರಜ್ಞರೇ ಸೇರಿ ನಿರ್ಮಿಸುತ್ತಿರುವ ಚಿತ್ರ. ಅಂದರೆ, ಚಿತ್ರದ ತಂತ್ರಜ್ಞರೆಲ್ಲರೂ ಚಿತ್ರಕ್ಕೆ ನಿರ್ಮಾಪಕರೇ. ಲಾಭ ಬಂದರೆ, ಪ್ರತಿಯೊಬ್ಬರಿಗೂ ಷೇರ್ ಸಿಗಲಿದೆ. ಅದು ಶರಣ್ ರೂಪಿಸಿರುವ ತತ್ವ.

    ಅಂದಹಾಗೆ ಚಿತ್ರದ ನಿರ್ಮಾಪಕರಲ್ಲಿ ಚಿಕ್ಕಣ್ಣ ಕೂಡಾ ಒಬ್ಬರು. ಕಾಮಿಡಿ ಕಿಲಾಡಿಗಳು ಮೂಲಕ ಕನ್ನಡಿಗರಿಗೆ ಪರಿಚಿತರಾದ ಚಿಕ್ಕಣ್ಣ, ಹುಟ್ಟು ಶ್ರೀಮಂತರೇನಲ್ಲ. ಕೇವಲ ಪ್ರತಿಭೆಯೊಂದನ್ನೇ ಬಂಡವಾಳವನ್ನಾಗಿಸಿಕೊಂಡ ಚಿಕ್ಕಣ್ಣ, Rambo 2 ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ. ಅದು ಚಿಕ್ಕಣ್ಣ ಸಾಧನೆಯಷ್ಟೇ ಅಲ್ಲ, ಶರಣ್ ಔದಾರ್ಯವೂ ಹೌದು.

    ಲಡ್ಡು ಸಿನಿಮಾಸ್ ಬ್ಯಾನರ್‍ನಲ್ಲಿ ಬರುತ್ತಿರುವ ಚಿತ್ರಕ್ಕೆ ಶರಣ್ ಹಾಗೂ ಅಟ್ಲಾಂಟಾ ನಾಗೇಂದ್ರ ಅಧಿಕೃತ  ನಿರ್ಮಾಪಕರು. ಉಳಿದಂತೆ ಚಿಕ್ಕಣ್ಣ, ಛಾಯಾಗ್ರಹಕ ಸುಧಾಕರ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ, ಸಂಕಲನಕಾರ ಕೆ.ಎಂ.ಪ್ರಕಾಶ್, ಕಲಾ ನಿರ್ದೇಶಕ ಮೋಹನ್ ಬಿ. ಕೆರೆ, ಮ್ಯಾನೇಜರ್ ನರಸಿಂಹ ಹೀಗೆ ಚಿತ್ರದ ತಾಂತ್ರಿಕ ವರ್ಗದವರೆಲ್ಲ ವರ್ಕಿಂಗ್ ಪಾರ್ಟ್‍ನರ್ಸ್. 

     

     

  • ನಗ್ತಾ ನಗಿಸ್ತಾ ಹೆದರಿಸ್ತಾನೆ ಅವತಾರ್ ಪುರುಷ

    avatara purusha is a horror comedy

    ಶರಣ್, ಅಶಿಕಾ ರಂಗನಾಥ್, ಸಿಂಪಲ್ ಸುನಿ ಮತ್ತು ಪುಷ್ಕರ್ ಮಲ್ಲಿಕಾರ್ಜುನಯ್ಯ ಕಾಂಬಿನೇಷನ್ನಿನ ಸಿನಿಮಾ ಅವತಾರ್ ಪುರುಷ. ಶರಣ್ ಇರುವ ಕಾರಣಕ್ಕೆ ಇದು ಕಾಮಿಡಿ ಸಿನಿಮಾ ಎನ್ನುವುದಕ್ಕೆ ನೋ ಪ್ರಾಬ್ಲಂ. ಆದರೆ, ಈ ಕಾಮಿಡಿ ಜೊತೆ ಜೊತೆಯಲ್ಲೇ ಹಾರರ್ ಕೂಡಾ ಇದೆಯಂತೆ.

    ಆಪ್ತಮಿತ್ರ ಶೈಲಿಯ ಹಾರರ್ ಅಂಶಗಳೂ ಚಿತ್ರದ ಕಥೆಯಲ್ಲಿವೆ ಎಂದಿರುವ ಸುನಿ, ಇದನ್ನು ಹಾರರ್ ಕಾಮಿಡಿ ಎಂದೇ ಕರೆದಿದ್ದಾರೆ. ಸುಧಾರಾಣಿ, ಸಾಯಿಕುಮಾರ್ ಕೂಡಾ ಚಿತ್ರದ ಪ್ರಧಾನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಅಕ್ಟೋಬರ್‍ನಲ್ಲಿ ರಿಲೀಸ್ ಆಗಲಿರುವ ಅವತಾರ್ ಪುರುಷ, ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿ, ಥ್ರಿಲ್ ಕೊಡ್ತಾನೆ ಅನ್ನೋದು ಪುಷ್ಕರ್ ಭರವಸೆ. 

  • ಬಾಕ್ಸಾಫೀಸ್‍ನಲ್ಲಿ ಚುಟುಚುಟು ಅಂತೈತಿ..

    rambo 2 rocks at box office

    ಶರಣ್ ಅಭಿನಯದ ರ್ಯಾಂಬೋ 2 ಸಿನಿಮಾ ಬಾಕ್ಸ್‍ಆಫೀಸ್‍ನಲ್ಲಿ ಚುಟುಚುಟು ಅಂತಿದೆ. ಹಾಡಿನಷ್ಟೇ ಮೋಡಿ ಮಾಡಿರೋದು ಸಿನಿಮಾ. ಥಿಯೇಟರುಗಳಲ್ಲಿ ಹೌಸ್‍ಫುಲ್ ಪ್ರದರ್ಶನ ಕಾಣುತ್ತಿದೆ. ಮೊದಲ ವಾರದಲ್ಲೇ 5 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆಯಂತೆ. 

    ರ್ಯಾಂಬೋದಂತೆಯೇ ರ್ಯಾಂಬೋ 2 ಕೂಡಾ ಭರ್ಜರಿ ಸದ್ದು ಮಾಡುತ್ತಿದೆ.

    ಹೀಗೆ ರಾಜ್ಯಾದ್ಯಂತ ಅದ್ಭುತ ಪ್ರದರ್ಶನ ಕಾಣುತ್ತಿರುವಾಗಲೇ ರ್ಯಾಂಬೋ 2, ಅಮೆರಿಕ, ಆಸ್ಟ್ರೇಲಿಯಾದಲ್ಲಿ ರಿಲೀಸ್ ಆಗುತ್ತಿದೆ. ಜೂನ್ 2ರಂದು ವಿದೇಶದಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರ, ಈ ವರ್ಷದ ಬಿಗ್ ಹಿಟ್ ಆಗುವ ಎಲ್ಲ ಸೂಚನೆಗಳೂ ಇವೆ. 

    ಶರಣ್, ಅಶಿಕಾ ರಂಗನಾಥ್ ನಟಿಸಿರುವ ಚಿತ್ರ, ತಂತ್ರಜ್ಞರೇ ನಿರ್ಮಿಸಿರುವ ಸಿನಿಮಾ. ಶರಣ್, ಚಿಕ್ಕಣ್ಣ, ಅಟ್ಲಾಂಟ ನಾಗೇಂದ್ರ, ಅರ್ಜುನ್ ಜನ್ಯ ಸೇರಿದಂತೆ ಹಲವರು ನಿರ್ಮಾಪಕರಾಗಿರುವ ಚಿತ್ರ ರ್ಯಾಂಬೋ2. ಈ ಇಡೀ ತಂಡವನ್ನು ಒಗ್ಗೂಡಿಸಿರುವುದು ತರುಣ್ ಸುಧೀರ್. ತಂತ್ರಜ್ಞರ ಚಿತ್ರದ ಅದ್ಬುತ ಗೆಲುವು, ಚಿತ್ರರಂಗದ ಉತ್ಸಾಹ ಹೆಚ್ಚಿಸಿರೋದು ಸುಳ್ಳಲ್ಲ.

  • ಮತ್ತೆ ಬಂದ ರಾಂಬೋ

    rambo 2 coming soon

    ಶರಣ್ ಮತ್ತೊಮ್ಮೆ ರಾಂಬೋ ಆಗಿದ್ದಾರೆ. ಎರಡನೇ ಬಾರಿ ನಾಯಕರಾದಾಗ ಶರಣ್‍ಗೆ ಅದ್ಭುತ ಸಕ್ಸಸ್ ನೀಡಿದ್ದ ಚಿತ್ರ ರಾಂಬೋ. ಬಾಕ್ಸಾಫೀಸ್‍ನಲ್ಲೂ ದಾಖಲೆ ಬರೆದಿತ್ತು. ಈಗ ಅದೇ ರಾಂಬೋ ಟೈಟಲ್ ಇಟ್ಟುಕೊಂಡು ರ್ಯಾಂಬೋ-2 ಸಿನಿಮಾ ನಿರ್ಮಿಸಿದ್ದಾರೆ ಶರಣ್.

    ರಾಂಬೋ ಚಿತ್ರದಲ್ಲಿ ಕಾರು ಮತ್ತು ಹಂದಿ ಪ್ರಮುಖ ಪಾತ್ರದಲ್ಲಿದ್ದವು. ಈ ಚಿತ್ರದ ಫಸ್ಟ್‍ಲುಕ್ ನೋಡಿದರೆ, ಈ ಚಿತ್ರದಲ್ಲೂ ಕಾರು ಪ್ರಮುಖ ಪಾತ್ರವಾಗುವ ನಿರೀಕ್ಷೆ ಇದೆ. ಲಡ್ಡು ಬ್ಯಾನರ್‍ನಲ್ಲಿ ರೆಡಿಯಾಗಿರುವ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿರುವುದು ಅನಿಲ್‍ಕುಮಾರ್. ರಾಂಬೋ ಚಿತ್ರಕ್ಕೆ ಹಣ ಹೂಡಿದ್ದವರೆಲ್ಲ ಮತ್ತೆ ಈ ಸಿನಿಮಾ ಮೂಲಕ ಒಂದಾಗಿರುವುದು ಚಿತ್ರದ ವಿಶೇಷ.

    ಕೆಲವೇ ದಿನಗಳಲ್ಲಿ ಚಿತ್ರ ಫೈನಲ್ ಹಂತ ತಲಲುಪಲಿದೆ. ನಗೋಕೆ ರೆಡಿಯಾಗಿ.

  • ಲೇಡಿಸ್ ಟೈಲರ್ ಶರಣ್

    sharan is ladies tailor

    ನಟ ಶರಣ್ ಲೇಡಿಸ್ ಟೈಲರ್ ಆಗುತ್ತಿದ್ದಾರೆ. ಸಿದ್ಲಿಂಗು,  ನೀರ್‍ದೋಸೆ ಖ್ಯಾತಿಯ ವಿಜಯ್ ಪ್ರಸಾದ್ ನಿರ್ದೇಶನದ ಸಿನಿಮಾ ಲೇಡಿಸ್ ಟೈಲರ್. ಆರಂಭದಲ್ಲಿ ಚಿತ್ರಕ್ಕೆ ರವಿಶಂಕರ್ ಗೌಡ ಹೀರೋ ಆಗಿದ್ದರು. ನಂತರ ಬದಲಾಗಿ ಜಗ್ಗೇಶ್ ಹೆಸರು ಕೇಳಿಬಂದಿತ್ತು. ಮತ್ತೊಮ್ಮೆ ನೀನಾಸಂ ಸತೀಶ್ ಹೆಸರು ಕೇಳಿಬಂತು. ಮಗದೊಮ್ಮೆ.. ರವಿಶಂಕರ್ ಗೌಡ ಹೆಸರೇ ಬಂತು. ಈಗ ಶರಣ್ ಹೆಸರು ಪ್ರಸ್ತಾಪವಾಗಿದೆ.

    ಚಿತ್ರದ ಬಜೆಟ್ ಹೆಚ್ಚಾಗಿರುವ ಕಾರಣ, ಸ್ಟಾರ್‍ನಟರೇ ಇರಲಿ ಎಂಬ ಕಾರಣಕ್ಕೆ ಶರಣ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎನ್ನುತ್ತಿದೆ ಚಿತ್ರತಂಡ. ಸಿನಿಮಾ ಶೀಘ್ರದಲ್ಲೇ ಸೆಟ್ಟೇರಲಿದೆ.

    Related Articles :-

    Sharan Is The New 'Ladies Tailor'

  • ಸಿಂಪಲ್ಲಾಗೇ ಶುರುವಾಯ್ತು ಅವತಾರ್ ಪುರುಷ

    avatara pirisha launched

    ಸಿಂಪಲ್ ಸುನಿ ನಿರ್ದೇಶನ, ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ, ಶರಣ್-ಅಶಿಕಾ ರಂಗನಾಥ್ ಎಂಬ ಚುಟು ಚುಟು ಜೋಡಿಯ ಸಮ್ಮಿಶ್ರಣದ ಸಿನಿಮಾ ಅವತಾರ್ ಪುರುಷ ಚಿತ್ರ ಸಿಂಪಲ್ಲಾಗಿಯೇ ಶುರುವಾಗಿದೆ. ಬೆಂಗಳೂರಿನ ವರಸಿದ್ಧಿವಿನಾಯಕ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿದೆ.

    ಮಹಾಭಾರತದ ಎಳೆಯೊಂದನ್ನು ಆಧರಿಸಿ, ಚಿತ್ರದ ಕಥೆ ಮಾಡಲಾಗಿದೆಯಂತೆ. ಇಡೀ ಚಿತ್ರ ಕಾಮಿಡಿ ಮಯ ಎಂಬ ಮಾಹಿತಿ ಇದೆ. ಅವತಾರ್ ಪುರುಷನ ಅವತಾರ ನೋಡೋಕೆ ರೆಡಿಯಾಗಿ.

  • ಹೊಸ ಮನೆಗೆ ಶರಣ್ ಗೃಹ ಪ್ರವೇಶ

    sharan with his wife

    ಕನ್ನಡದ ಕಾಮಿಡಿ ಕಿಂಗ್ ಆದ ಶರಣ್, ಹೊಸ ಮನೆ ಕಟ್ಟಿಸಿದ್ದಾರೆ. ನಾಗರಭಾವಿಯಲ್ಲಿ ಹೊಸ ಮನೆ ಕಟ್ಟಿಸಿ, ಗೃಹ ಪ್ರವೇಶವನ್ನೂ ಮಾಡಿದ್ದಾರೆ. ಮಡದಿ, ಮಕ್ಕಳು, ಪೋಷಕರ ಜೊತೆ ಹೊಸ ಮನೆಯ ಗೃಹ ಪ್ರವೇಶ ಶಾಸ್ತ್ರಗಳನ್ನು ಮುಗಿಸಿ ಹೊಸ ಮನೆಗೆ ಬಲಗಾಲಿಟ್ಟಿದ್ದಾರೆ.

    ಶರಣ್ ಮನೆ ಗೃಹ ಪ್ರವೇಶದಲ್ಲಿ ತಂಗಿ ಶೃತಿ ಸಡಗರದಿಂದ ಓಡಾಡುತ್ತಿದ್ದರೆ, ಸ್ಯಾಂಡಲ್‍ವುಡ್ ತಾರೆಯರು ಬಂದು ಶರಣ್‍ಗೆ ಶುಭ ಹಾರೈಸಿದ್ರು.k

Adi Lakshmi Purana Movie Gallery

Rightbanner02_butterfly_inside

Yaana Movie Gallery