ಪಡ್ಡೆಹುಲಿ ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಿತರಾದ, ಭರವಸೆ ಮೂಡಿಸಿದ ನಟ ಶ್ರೇಯಸ್ ಮಂಜು. ಈಗ ಮಗನಿಗಾಗಿ ಸ್ವತಃ ನಿರ್ಮಾಪಕರೂ ಆಗಿದ್ದಾರೆ ಕೆ.ಮಂಜು. ಶ್ರೇಯಸ್ ನಟಿಸಿರುವ ಹೊಸ ಚಿತ್ರ ವಿಷ್ಣುಪ್ರಿಯ. ವಿಷ್ಣುಪ್ರಿಯದಲ್ಲಿ ಶ್ರೇಯಸ್‍ಗೆ ಜೊತೆಯಾಗಿರುವ ನಾಯಕಿ ಪ್ರಿಯಾ ವಾರಿಯರ್. ಕಣ್ಸನ್ನೆ ಚೆಲುವೆ.
ವಿಕೆ ಪ್ರಕಾಶ್ ನಿರ್ದೇಶಿಸಿರುವ ವಿಷ್ಣುಪ್ರಿಯ, ಟ್ರೇಲರಿನಲ್ಲೇ ಭರವಸೆ ಹುಟ್ಟಿಸಿದೆ. ಒಂದು ಚೆಂದದ ಲವ್ ಸ್ಟೋರಿ, ಅದರೊಳಗೆ ನಡೆಯುವ ತಾಕಲಾಟ, ಕೌಟುಂಬಿಕ ಯುದ್ಧ, ಸಮಾಜದ ತಲ್ಲಣ ಎಲ್ಲವನ್ನೂ ಚಿತ್ರದಲ್ಲಿ ಚೆಂದವಾಗಿ ಹಿಡಿದಿಟ್ಟಿದ್ದೇವೆ ಎನ್ನುವ ಸೂಚನೆ ಕೊಟ್ಟಿದ್ದಾರೆ ಪ್ರಕಾಶ್.
ಶ್ರೇಯಸ್ ಮಂಜು ಮತ್ತು ಪ್ರಿಯಾ ವಾರಿಯರ್ ಅವರ ನಟನೆ, ಟ್ರೇಲರಿನಲ್ಲೇ ಭರವಸೆ ಹುಟ್ಟಿಸುವಂತಿದೆ. ಅಂದಹಾಗೆ ಇದು 1990ರಲ್ಲಿ ಮೊಬೈಲ್ ಇಲ್ಲದ ಕಾಲದ, ಇಂಟರ್‍ನೆಟ್, ಸೋಷಿಯಲ್ ಮೀಡಿಯಾ ಯಾವುದೂ ಇಲ್ಲದ ಕಾಲದಲ್ಲಿ ನಡೆಯುವ ಲವ್ ಸ್ಟೋರಿ.