` shakeela - chitraloka.com | Kannada Movie News, Reviews | Image

shakeela

  • ``ಶಕೀಲಾ ಎಂದರೆ ಪವಿತ್ರ ಆತ್ಮ''

    ``ಶಕೀಲಾ ಎಂದರೆ ಪವಿತ್ರ ಆತ್ಮ''

    ಶಕೀಲಾ ಎಂದರೆ ಸಾಫ್ಟ್ ಪೋರ್ನ್ ಸಿನಿಮಾ. ಒಂದಾನೊಂದು ಕಾಲದ.. ಈಗ 40 ಮೇಲ್ಪಟ್ಟಿರುವವರ ಯೌವನದ ದಿನಗಳ ಕನಸಿನ ರಾಣಿ. ಅವರ ಬದುಕು ಸಿನಿಮಾ ಆಗಿದೆ. ಶಕೀಲಾ ಸಿನಿಮಾ ತೆರೆಗೆ ಬಂದಿದೆ. ಆದರೆ, ಇಲ್ಲಿ ಇರೋ ಶಕೀಲಾ ಕಥೆ ಏನು..?

    ಶಕೀಲಾ ಎಲ್ಲರ ಹಾಗೆಯೇ ಇದ್ದಾರೆ. ಎಲ್ಲ ಮುಸ್ಲಿಂ ಹೆಣ್ಣು ಮಕ್ಕಳಂತೆಯೇ ಅವರೂ ಬುರುಕಾ ಧರಿಸಿಯೇ ಓಡಾಡುವ ಸಂಪ್ರದಾಯಬದ್ಧ ಮಹಿಳೆ. ಅವರು ಯಾವ ಕುಟುಂಬಕ್ಕಾಗಿ ಅಷ್ಟೆಲ್ಲ ಕಷ್ಟಪಟ್ಟರೋ.. ಅವಮಾನ ಭರಿಸಿದರೋ.. ಅವರೇ ಈಗ ಶಕೀಲಾರನ್ನು ದೂರವಿಟ್ಟಿದ್ದಾರೆ. ನನ್ನ ಪ್ರಕಾರ ಶಕೀಲಾ ಎಂದರೆ ಪವಿತ್ರ ಆತ್ಮ.

    ಶಕೀಲಾಗೆ ಇಂಥಾದ್ದೊಂದು ಪ್ರಮಾಣ ಪತ್ರ ನೀಡಿದವರು ರಿಚಾ ಚಡ್ಡಾ. ಶಕೀಲ ಚಿತ್ರದಲ್ಲಿ ಶಕೀಲಾ ಪಾತ್ರದಲ್ಲಿ ನಟಿಸಿರುವುದು ಇವರೇ. ಇಂದ್ರಜಿತ್ ಲಂಕೇಶ್ ನಿರ್ದೇಶಿಸಿರುವ ಸಿನಿಮಾ, ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡದಲ್ಲಿ ಏಕಕಾಲಕ್ಕೆ ರಿಲೀಸ್ ಆಗಿರುವುದು ವಿಶೇಷ.

  • 'Shakeela' To Release On December 25th

    'Shakeela' To Release On December 25th

    Indrajith Lankesh's new film 'Shakeela' is all set to be released on 25th of December across India in more than 2000 screens.

    'Shakeela' is a Biopic based on the life of soft porn actress Shakeela who was very famous during the 1990s. Based on her life, Indrajith has made a film in Hindi and has dubbed the film to Kannada, Telugu, Tamil and Malayalam hereby making it a PAN Indian film.

    Indrajith says the film is not only a PAN Indian film because it has been dubbed into four other languages. ''Shakeela' is literally a PAN Indian film as many artists and technicians have come together for this film. Firstly, the film is based on a South Indian actress and has been portrayed by a North Indian actress. Apart from that, the film features artists and technicians from Kannada, Hindi, Malayalam and Marathi film industries hereby making it a PAN Indian film' says Indrajith Lankesh.

  • Love You Aaliya Audio Released

    love you aaliya imeag

    Crazy Star Ravichandran released the audio of his forthcoming film 'Love You Aaliya' being directed by Stylish director Indrajith Lankesh. The audio release was held at the sets of 'Maja With Sruja' programmed being aired in Colors Kannada. Indrajith Lankesh plays a judge for the famous reality show and the audio release will be released through the programme.

    Apart from Indrajith Lankesh and Ravichandran, Bhumika Chawla, Shakeela and others were also present at the occasion.

  • ಕ್ರಿಸ್ ಮಸ್'ಗೆ ಶಕೀಲಾ

    Shakeel to Release on christmas

    ಶಕೀಲಾ, 90ರ ದಶಕದಲ್ಲಿ ಮಲಯಾಳಂ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದ ಹೆಸರು. ಶಕೀಲಾ ಸಿನಿಮಾ ಎದುರು ಮುಮ್ಮಟ್ಟಿ, ಮೋಹನ್ ಲಾಲ್‍ರಂತಾ ನಟರ ಚಿತ್ರಗಳೂ ಸೋತು ಸೊರಗಿದ್ದವು. ಬಿ ದರ್ಜೆಯ ಸಿನಿಮಾಗಳು ಮಲಯಾಳಂ ದಾಟಿ, ತಮಿಳು, ತೆಲುಗು, ಕನ್ನಡದ ಮಾರುಕಟ್ಟೆಯಲ್ಲೂ ದೊಡ್ಡ ಮಟ್ಟದ ಸಕ್ಸಸ್ ಕಂಡಿದ್ದವು. ಅಂತಹ ಶಕೀಲಾ ಜೀವನ ಚರಿತ್ರೆ ಈಗ ಸಿನಿಮಾ ಆಗಿದೆ.

    ಖ್ಯಾತ ನಿರ್ದೇಶಕ ಇಂದ್ರಜಿತ್ ಲಂಕೇಶ್ ಶಕೀಲಾ ಅವರ ಜೀವನ ಚರಿತ್ರೆಯನ್ನಿಟ್ಟುಕೊಂಡು ಚೆಂದದ ಸಿನಿಮಾ ಮಾಡಿದ್ದಾರೆ. ಶಕೀಲಾ ಪಾತ್ರದಲ್ಲಿ ನಟಿಸಿರುವುದು ಬಾಲಿವುಡ್ ಹಾಟ್ ರಿಚಾ ಚಡ್ಡಾ. 16 ವರ್ಷದವಳಿದ್ದಾಗ ಚಿತ್ರರಂಗಕ್ಕೆ ಬಂದ ಶಕೀಲಾ ಸಾಫ್ಟ್ ಪೋರ್ನ್ ಚಿತ್ರಗಳಲ್ಲಿ ಸ್ಟಾರ್ ನಟಿಯಾದರು. ಆದರೆ.. ಶಕೀಲಾ ಅಂದರೆ ಅಷ್ಟೇ ಅಲ್ಲ. ಆಕೆ ಸಾಕಿದ್ದು 6 ಜನ ಸೋದರಿಯರ ಕುಟುಂಬವನ್ನು. ಆಕೆಗೂ ಪ್ರೀತಿಯಾಯಿತು. ವಂಚನೆಯೂ ಆಯಿತು. ಆಕೆಯಿಂದ ಬದುಕು ಕಟ್ಟಿಕೊಂಡವರೇ, ಆಕೆಯನ್ನು ದೂರವಿಟ್ಟರು. ಯಶಸ್ಸಿನ ಉತ್ತುಂಗ ಮತ್ತು ಮೋಸದ ಬದುಕು ಎರಡೂ ಇರುವ ಶಕೀಲಾ, ಮತ್ತೆ ಮತ್ತೆ ಬದುಕು ಕಟ್ಟಿಕೊಂಡ ಕಥೆಯೇ ಶಕೀಲಾ ಸಿನಿಮಾ. ಇಷ್ಟೆಲ್ಲ ಕಥೆ ಇರುವ ಶಕೀಲಾ ಚಿತ್ರ ಇದೇ ಕ್ರಿಸ್‍ಮಸ್ ದಿನ ತೆರೆಗೆ ಬರುತ್ತಿದೆ.

  • ತಮ್ಮ ಚಿತ್ರಗಳಿಗೆ ಸ್ಪೆಷಲ್ ಒಟಿಟಿ ಮಾಡ್ತಿದ್ದಾರೆ ಶಕೀಲಾ

    ತಮ್ಮ ಚಿತ್ರಗಳಿಗೆ ಸ್ಪೆಷಲ್ ಒಟಿಟಿ ಮಾಡ್ತಿದ್ದಾರೆ ಶಕೀಲಾ

    ಒಂದು ಕಾಲದ ಸಾಫ್ಟ್ ಪೋರ್ನ್ ಚಿತ್ರಗಳ ಮಹಾರಾಣಿಯೇ ಆಗಿದ್ದ ಶಕೀಲಾ, ಈಗ ಒಂದು ಒಟಿಟಿ ಆರಂಭಿಸುತ್ತಿದ್ದಾರೆ. ಆ ಒಟಿಟಿಯಲ್ಲಿ ರಿಲೀಸ್ ಆಗುವುದು ಅವರದ್ದೇ ನಿರ್ಮಾಣದ ಚಿತ್ರಗಳು. ಶಕೀಲಾ ತಮ್ಮದೇ ಒಟಿಟಿ ಮಾಡುತ್ತಿರೋದಕ್ಕೆ ಕಾರಣ ಸೆನ್ಸಾರ್ ಪ್ರಾಬ್ಲಂ.

    ಈ ಒಟಿಟಿಯಲ್ಲಿ ರಿಲೀಸ್ ಆಗಲಿರುವುದು ಅವರ ಮಗಳ ಚಿತ್ರಗಳೇ. ಶಕೀಲಾ ಅವರ ಮಗಳು ಮಿಲಾ ನಟಿಸಿರುವ ಅಟ್ಟರ್ ಫ್ಲಾಪ್ ಮೂವಿ ಮತ್ತು ರೊಮ್ಯಾಂಟಿಕ್ ಚಿತ್ರಗಳಲ್ಲಿ ಅಲ್ಲಿ ರಿಲೀಸ್ ಆಗಲಿವೆಯಂತೆ. ಆ ಒಟಿಟಿಗೆ ಕೆಆರ್ ಡಿಜಿಟಲ್ ಪ್ಲೆಕ್ಸ್ ಅನ್ನೋ ನಾಮಕರಣವೂ ಆಗಿದೆ.

    ಅದು ಸಾಫ್ಟ್ ಪೋರ್ನ್ ಚಿತ್ರಗಳ ಒಟಿಟಿ ಅನ್ನೋದ್ರಲ್ಲೇನೂ ಡೌಟಿಲ್ಲ. ಆ ಚಿತ್ರಗಳಲ್ಲಿ ನಟಿಸಿರುವುದು ಅವರ ದತ್ತು ಪುತ್ರಿ ಮಿಲಾ. ಈ ಹಿಂದೆ ನನ್ನ ಚಿತ್ರಗಳಿಗೆ ಸೆನ್ಸಾರ್‍ನವರು ಸಮಸ್ಯೆ ಸೃಷ್ಟಿಸಿದರು. ಹೀಗಾಗಿ ನಾನು ಒಟಿಟಿ ಮೊರೆ ಹೋಗುತ್ತಿದ್ದೇನೆ ಎಂದಿದ್ದಾರೆ ಶಕೀಲಾ. ಸದ್ಯಕ್ಕೆ ಒಟಿಟಿ ಅಥವಾ ಆನ್‍ಲೈನ್‍ನಲ್ಲಿಯೇ ರಿಲೀಸ್ ಆಗುವ ಚಿತ್ರಗಳಿಗೆ ಸೆನ್ಸಾರ್ ನಿರ್ಬಂಧಗಳಿಲ್ಲ.

  • ನನ್ನವರು ಯಾರೂ ಇಲ್ಲ : ಶಕೀಲಾ

    shakeela talks about her lonely days

    ನನ್ನ ಜೀವನ ಕಥೆಯೇ ಸಿನಿಮಾ ಆಗುತ್ತಿದೆ. ಒಬ್ಬ ವ್ಯಕ್ತಿಯ ಬದುಕು ಸಿನಿಮಾ ಆಗುವುದು ಸಣ್ಣ ವಿಷಯವೇನಲ್ಲ. ಆ ಖುಷಿ ನನಗಿದೆ. ಆದರೆ ಜೊತೆಯಲ್ಲೇ ನನ್ನವರು ಎನಿಸಿಕೊಂಡವರೊಬ್ಬರೂ ನನ್ನ ಜೊತೆಗಿಲ್ಲ ಎಂಬ ಕೊರಗೂ ಇದೆ..

    ಹೀಗೆ ಮಾತನಾಡುತ್ತಾ ಹೋದರು ಶಕೀಲಾ. ಅವರ ಖುಷಿಗೆ ಕಾರಣವಿತ್ತು. ಇಂದ್ರಜಿತ್ ಲಂಕೇಶ್, ಶಕೀಲಾ ಅವರ ಜೀವನ ಚರಿತ್ರೆಯನ್ನೇ ಸಿನಿಮಾ ಮಾಡಿದ್ದಾರೆ. ಟೀಸರ್ ರಿಲೀಸ್ ಮಾಡಿದ್ದಾರೆ. ಕ್ರಿಸ್‍ಮಸ್‍ಗೆ ರಿಲೀಸ್ ಕೂಡಾ ಆಗುತ್ತಿದೆ. ಆದರೆ.. ಶಕೀಲಾ ಒಬ್ಬಂಟಿ.

    ಒಬ್ಬ ಅಕ್ಕ ನಾನು ದುಡಿದದ್ದನ್ನೆಲ್ಲ ದೋಚಿಕೊಂಡು ಹೋದಳು. ಅವಳ ಜೊತೆ ಮಾತು ಬಿಟ್ಟಿದ್ದೇನೆ. ಇವತ್ತಿಗೂ ಅವಳು ನನ್ನ ದುಡ್ಡಿನಲ್ಲೇ ಬದುಕುತ್ತಿದ್ದಾಳೆ. ಇನ್ನೊಬ್ಬ ತಮ್ಮ. ನಾನು ಚೆನ್ನಾಗಿ ದುಡಿಯುತ್ತಿದ್ದಾಗ ನನ್ನಿಂದ ಎಲ್ಲ ಸಹಾಯವನ್ನೂ ಪಡೆದುಕೊಂಡ. ಈಗ ಅವನೂ ಜೊತೆಗಿಲ್ಲ. ಒಂದು ಫೋನ್ ಮಾಡಿ ಹೇಗಿದ್ದೀಯ ಎಂದು ವಿಚಾರಿಸೋದಿಲ್ಲ.. ಹೀಗೆ ಹೇಳುವಾಗ ಶಕೀಲಾ ಮುಖದಲ್ಲೊಂದು ನೋವಿತ್ತು. ಆದರೆ.. ಕಷ್ಟ ಹೇಳುತ್ತಲೇ ನಾನು ಈಗಲೂ ಸ್ಟ್ರಾಂಗ್ ಎಂದು ತೋರಿಸಿಕೊಳ್ಳೋ ಹಂಬಲವೂ ಇತ್ತು.

    ನನ್ನದೊಂದು ಪುಟ್ಟ ಮನೆಯಿದೆ. ಬಂಗಲೆಯೇನಲ್ಲ. ಅಲ್ಲಿ ನಾನೇ ರಾಣಿ.. ನಾನೇ ಮಂತ್ರಿ.. 10ನೇ ಕ್ಲಾಸಿನಲ್ಲಿ ಮನೆಯವರಿಗಾಗಿ ದುಡಿಯೋಕೆ ಶುರು ಮಾಡಿದವಳು. ಈಗ ನನಗಾಗಿ ನಾನು ದುಡಿಯುತ್ತಿದ್ದೇನೆ ಎನ್ನುವಾಗ ಇದ್ದದ್ದು ಬೇಸರವೋ.. ಹತಾಶೆಯೋ.. ನೋವೋ.. ಗೊತ್ತಾಗುವಂತಿರಲಿಲ್ಲ.

    ಸದ್ಯಕ್ಕೆ ಶಕೀಲಾ ಕೂಡಾ ಕ್ರಿಸ್‍ಮಸ್ ದಿನ ರಿಲೀಸ್ ಆಗುವ ಶಕೀಲಾ ಸಿನಿಮಾಗಾಗಿ ಕಾಯುತ್ತಿದ್ದಾರೆ.

  • ಬಂಗಾರದ ಗೊಂಬೆ ಶಕೀಲಾ ಪೋರ್ನ್ ಸ್ಟಾರ್ ಅಲ್ಲ.. !

    indrajith lankesh's shakeela first look out

    ಶಕೀಲಾ.. ಒಂದಾನೊಂದು ಕಾಲದ ವಯಸ್ಸಕರಿಗೆ ಮಾತ್ರ ಚಿತ್ರಗಳ ಸೂಪರ್ ಸ್ಟಾರ್. ಆಕೆಯ ಚಿತ್ರಗಳು ತಯಾರಾಗುತ್ತಿದ್ದುದು ಮಲಯಾಳಂನಲ್ಲಾದರೂ.. ಕನ್ನಡ,ತೆಲುಗು, ತಮಿಳು ಭಾಷಿಕರೂ ಆಕೆಯ ಚಿತ್ರಗಳನ್ನು ಹುಚ್ಚೆದ್ದು ನೋಡುತ್ತಿದ್ದರು. ಆಕೆಯ ಜೀವನ ಚರಿತ್ರೆಯನ್ನು ಸಿನಿಮಾ ಮಾಡಲು ಹೊರಟಿರುವ ಇಂದ್ರಜಿತ್ ಲಂಕೇಶ್, ಈಗ ಆ ಚಿತ್ರದ ಫಸ್ಟ್‍ಲುಕ್ ಬಿಡುಗಡೆ ಮಾಡಿದ್ದಾರೆ.

    ಶಕೀಲಾ - ನಾಟ್ ಎ ಪೋರ್ನ್ ಸ್ಟಾರ್ ಚಿತ್ರದ ಫಸ್ಟ್‍ಲುಕ್‍ನಲ್ಲಿ ರಿಚಾಚಡ್ಡಾ ಅಲಿಯಾಸ್ ಶಕೀಲಾ, ಸಂಪೂರ್ಣ ಬಂಗಾರದಲ್ಲೇ ಮುಳುಗಿದ್ದಾರೆ. ಥೇಟು ಬಂಗಾರದ ಗೊಂಬೆ. ಏಕೆ ಹೀಗೆ.. ಶಕೀಲಾ ಪಾತ್ರಧಾರಿ ಆಭರಣ ಸುಂದರಿಯಾಗಿದ್ದು ಏಕೆ.. ಎಂದರೆ ಅದನ್ನು ಚಿತ್ರದಲ್ಲೇ ನೋಡಿ. ಆ ಫೋಟೋಗೂ, ಚಿತ್ರದ ಕಥೆಗೂ ಲಿಂಕ್ ಇದೆ. ಈಗಲೇ ಹೇಳಲ್ಲ ಅಂತಾರೆ ಇಂದ್ರಜಿತ್.

  • ಬರೆದವರನ್ನು ಕಾಡಿದ ಶಕೀಲ ಕಥೆಗಳು

    shakeel's biography

    ಶಕೀಲ. ಒಂದಾನೊಂದು ಕಾಲದಲ್ಲಿ ಯುವಕರ ನಿದ್ದೆಗೆಡಿಸಿದ್ದ ನಟಿ. ಆದರೆ, ಆಕೆಯ ಬದುಕು ಅಷ್ಟು ರೋಮಾಂಚಕವಲ್ಲ. ಕಣ್ಣೀರ ಧಾರೆ. ಆಕೆಯ ಜೀವನ ಚರಿತ್ರೆ ಮಲಯಾಳಂನಲ್ಲಿ ಬಂದಿತ್ತು. ಅದನ್ನು ಕನ್ನಡಕ್ಕೆ ಅನುವಾದಿಸಿದ್ದವರು ಕೆ.ಕೆ. ಗಂಗಾಧರನ್. ಪುಸ್ತಕ ಬರೆದು ಎಷ್ಟೋ ವರ್ಷಗಳಾಗಿವೆ. ಆದರೆ, ಇವತ್ತಿಗೂ ಅವರನ್ನು ಆ ಪುಸ್ತಕ ಕಾಡುತ್ತಲೇ ಇದೆ. ಅವರೇ ಹೇಳಿಕೊಂಡಿರುವ ಕಥೆಗಳನ್ನೊಮ್ಮೆ ಓದಿ.

    ಶಕೀಲ ಕೃತಿಯನ್ನು ಮಲಯಾಳಂನಲ್ಲಿ ಬರೆದಿದ್ದವರು ಮಲಯಾಳಂನ ಖ್ಯಾತ ಲೇಖಕ. ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕøತ. ಆದರೆ, ಶಕೀಲ ಪುಸ್ತಕ ಬರೆದೆನೆಂದು ಗೊತ್ತಾದರೆ, ತನ್ನ ಇಮೇಜ್ ಹಾಳಾಗುತ್ತೆ ಎಂಬ ಕಾರಣಕ್ಕೆ, ಆತ ಕೃತಿಯಲ್ಲಿ ತನ್ನ ಹೆಸರನ್ನೇ ಹಾಕಿಕೊಂಡಿರಲಿಲ್ಲ.

    ಪುಸ್ತಕ ಓದಿದ ಶಿವಮೊಗ್ಗದ ವೈದ್ಯರೊಬ್ಬರು ಶಕೀಲಾರನ್ನು ತನಗೆ ಮದುವೆ ಮಾಡಿಸುವಂತೆ ಗಂಗಾಧರನ್‍ಗೆ ದುಂಬಾಲು ಬಿದ್ದಿದ್ದರು. ನೀವೇ ನಿಂತು ಮದುವೆ ಮಾಡಿಸಬೇಕು ಎಂದು ಗೋಗರೆದಿದ್ದರು. ಕೊನೆಗೆ ನಾನು ಬ್ರೋಕರ್ ಅಲ್ಲ, ಅನುವಾದಕನಷ್ಟೇ ಎಂದು ಜಾರಿಕೊಂಡಿದ್ದರು ಗಂಗಾಧರನ್. 

    ಪುಸ್ತಕ ಓದಿ, ಯುವತಿಯೊಬ್ಬಳು ತನ್ನ ಗಂಡನಿಗೆ ಡೈವೋರ್ಸ್ ನೀಡಿ, ನನ್ನನ್ನು ಮದುವೆಯಾಗುವುದಾಗಿ ದುಂಬಾಲು ಬಿದ್ದಿದ್ದಳು. ಕೊನೆಗೆ ಆಕೆಗೆ ಗಂಗಾಧರನ್ ತಮ್ಮ ಪತ್ನಿಯಿಂದ ಬುದ್ದಿ ಹೇಳಿಸಬೇಕಾಯಿತಂತೆ.

    ಒಮ್ಮೆ ಕನ್ನಡ ಭವನಕ್ಕೆ ಹೋಗಿ, ಎರಡು ಪುಸ್ತಕಗಳನ್ನು ಕೊಟ್ಟು ಸ್ವೀಕೃತಿ ಪತ್ರ ಪಡೆದು ಹೋಗುತ್ತಿದ್ದರಂತೆ.  ಆಗ ಅಲ್ಲಿದ್ದ ಇಬ್ಬರು ವಿದ್ವಾಂಸರು ಗಂಗಾಧರನ್ ಅವರನ್ನು ಕಡೆದು ಮಾತನಾಡಿಸಿ ಶಕೀಲ ಪುಸ್ತಕದ ಅನುವಾದ ಚೆನ್ನಾಗಿದೆ ಎಂದು ಹೊಗಳಿದರಂತೆ. ಕೊನೆಗೂ ಕನ್ನಡ ಭವನದಲ್ಲಿ ನನಗೆ ಕಾಫಿಯ ಗೌರವ ಕೊಡಿಸಿದ್ದು ಶಕೀಲ ಎಂಬ ನಟಿ ಎಂದು ನಕ್ಕು ಹೊರಬಂದಿದ್ದರಂತೆ ಗಂಗಾಧರನ್.

    ಅಷ್ಟೇ ಏಕೆ, ಪುಸ್ತಕದಲ್ಲಿ ತಾನೇ ತನ್ನ ತಾಯಿಯ ಬಗ್ಗೆ ಹೇಳಿದ್ದ ಮಾತನ್ನು ಪತ್ರಕರ್ತರು ಪ್ರಶ್ನಿಸಿದಾಗ ತಾನು ಹಾಗೆ ಹೇಳೇ ಇಲ್ಲ ಎಂದು ಹಠ ಸಾಧಿಸಿದ್ದರಂತೆ ಶಕೀಲ. ಇನ್ನು ಶಕೀಲಾ ಅವರ ಜೀವನ ಚರಿತ್ರೆ ಓದಿ ಕನ್ನಡದ ಮೂವರು ನಟಿಯರು ಫೋನ್ ಮಾಡಿ ಕಣ್ಣೀರಿಟ್ಟಿದ್ದರಂತೆ.

    ಆದರೆ, ಅದೆಲ್ಲಕ್ಕಿಂತ ಮಿಗಿಲಾದದ್ದು ಆಟೋ ಡ್ರೈವರ್ ಒಬ್ಬರ ಕಮೆಂಟ್. ಆಟೋದಲ್ಲಿ ಹೋಗುತ್ತಿದ್ದಾಗ ಜೊತೆಗಿದ್ದ ಮಿತ್ರರೊಬ್ಬರು ನೀವೀಗ ಕೆ.ಕೆ. ಗಂಗಾಧರನ್ ಅಲ್ಲ, ಶಕೀಲ ಗಂಗಾಧರನ್ ಎಂದು ರೇಗಿಸಿದರಂತೆ. ಆಟೋ ಡ್ರೈವರ್ ತಕ್ಷಣ ಆಟೋವನ್ನು ಬದಿಯಲ್ಲಿ ನಿಲ್ಲಿಸಿ, ಶಕೀಲಾ ಪುಸ್ತಕ ಬರೆದಿದ್ದು ನೀವಾ ಸರ್, ಸಖತ್ತಾಗಿದೆ.. ಎಂದು ಹೇಳಿ ಮೆಚ್ಚಿದ್ದನಂತೆ. 

    ಹೀಗೆ ಶಕೀಲಾ ಪುಸ್ತಕ ಹಲವು ವರ್ಷಗಳ ನಂತರವೂ ಕಾಡುತ್ತಿದೆ ಎಂಬುದನ್ನು ಗಂಗಾಧರನ್ ಸ್ಮರಿಸಿಕೊಂಡಿದ್ದಾರೆ. 

     

  • ಯಾರನ್ನೂ ನಂಬಬಾರದು.. ಇದು ಶಕೀಲಾ ಕಲಿತ ಜೀವನಪಾಠ

    shakeela shares her life experience

    ಶಕೀಲಾ... ಒಂದಾನೊಂದು ಕಾಲದ ಪಡ್ಡೆ ಹುಡುಗರ ಸ್ವಪ್ನ ಸುಂದರಿ. ಈಗ ಅವರ ಜೀವನವೇ ಸಿನಿಮಾ ಆಗುತ್ತಿದೆ. ಇಂದ್ರಜಿತ್ ಲಂಕೇಶ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾದಲ್ಲಿ ಬಾಲಿವುಡ್ ಸುಂದರಿ ರಿಚಾ ಚಡ್ಡಾ, ಶಕೀಲಾ ಪಾತ್ರ ಮಾಡುತ್ತಿದ್ದಾರೆ. ರಿಚಾ ಸ್ಲಿಂ & ಬ್ಯೂಟಿಫುಲ್. ಆದರೆ, ಶಕೀಲಾ ಪಾತ್ರಕ್ಕಾಗಿ ಡುಮ್ಮಗಾಗುತ್ತಿಲ್ಲ. ಚಿತ್ರದಲ್ಲಿ ಆ ಅಂಶಗಳಿಗಿಂತ ಹೆಚ್ಚು, ಶಕೀಲಾ ಅವರ ವೈಯಕ್ತಿಕ ಜೀವನಕ್ಕೆ ಒತ್ತು ಕೊಡಲಾಗಿದೆ ಎಂದಿದ್ದಾರೆ ಎಂದಿದ್ದಾರೆ ರಿಚಾ ಚಡ್ಡಾ.

    ಇಷ್ಟು ವರ್ಷಗಳ ವೃತ್ತಿ ಜೀವನ, ವೈಯಕ್ತಿಕ ಬದುಕಿನ ಏರಿಳಿತಗಳನ್ನು ಕಂಡಿರುವ ಶಕೀಲಾ, ಈಗ ಸಿಂಗಲ್. ನಿಮಗೆ ಜೀವನ ಕಲಿಸಿದ ದೊಡ್ಡ ಪಾಠವೇನು ಎಂದರೆ ಶಕೀಲಾ ಹೇಳುವುದಿಷ್ಟೆ.. ಯಾರನ್ನೂ ನಂಬಬಾರದು.. ಹೆತ್ತವರನ್ನು, ಬಂಧುಗಳನ್ನು ಯಾರನ್ನೂ ನಂಬಬಾರದು. 

    ಹೌದು, ಶಕೀಲಾರ ಬದುಕನ್ನು ಪಾಪದ ಕೂಪಕ್ಕೆ ತಳ್ಳಿದ್ದು ಅವರ ತಾಯಿ. ವೇಶ್ಯಾವಾಟಿಕೆಗೆ ದೂಡಿದ್ದರು ಎಂಬುದನ್ನು ಶಕೀಲಾ ತಮ್ಮ ಆತ್ಮಕಥನದಲ್ಲಿ ಬರೆದುಕಂಡಿದ್ದಾರೆ. ಮಗಳು ವಯಸ್ಕರ ಚಿತ್ರಗಳಲ್ಲಿ ನಟಿಸುತ್ತಿರುವಾಗ, ಹಣ ಬರುತ್ತದೆ ಎಂಬ ಕಾರಣಕ್ಕೆ ಪ್ರೋತ್ಸಾಹಿಸಿದವರು ಅವರ ತಾಯಿ. ಇನ್ನು ಶಕೀಲ ಅವರು ದುಡಿದಿದ್ದ ಹಣವನ್ನು ದೋಚಿಕೊಂಡು ಅವರನ್ನು ಬೀದಿಗೆ ತಳ್ಳಿದವರು ಅವರ ಒಡಹುಟ್ಟಿದವರು. ಈ ಕಥೆಗಳೆಲ್ಲ ಸಿನಿಮಾದಲ್ಲಿ ಬರಲಿವೆ.

  • ಶಕೀಲಾ ಕೆನ್ನೆಗೆ ಎಣಿಸಿ ಎಣಿಸಿ ಹೊಡೆದಿದ್ದರು ಸಿಲ್ಕ್ ಸ್ಮಿತಾ..!

    ಶಕೀಲಾ ಕೆನ್ನೆಗೆ ಎಣಿಸಿ ಎಣಿಸಿ ಹೊಡೆದಿದ್ದರು ಸಿಲ್ಕ್ ಸ್ಮಿತಾ..!

    ಒಂದು..ಎರಡು..ಮೂರು..ನಾಲ್ಕು.. ಹೀಗೆ.. ಎಣಿಸಿ ಎಣಿಸಿ 14 ಸಾರಿ ಶಕೀಲಾ ಕೆನ್ನೆಗೆ ಬಾರಿಸಿದ್ದರಂತೆ ಸಿಲ್ಕ್ ಸ್ಮಿತಾ. ಇದೆಲ್ಲ ನಡೆದದ್ದು ತಮಿಳಿನ ಕಥೈರಾಣಿ ಅನ್ನೋ ಸಿನಿಮಾ ಸೆಟ್ಟಿನಲ್ಲಿ. ಆ ಚಿತ್ರದಲ್ಲಿ ಸಿಲ್ಕ್ ಸ್ಮಿತಾ ಮತ್ತು ಶಕೀಲಾ ಇಬ್ಬರೂ ಇದ್ದರು. ಸಿಲ್ಕ್, ಶಕೀಲಾಗೆ ಕೆನ್ನೆಗೆ ಹೊಡೆಯುವ ಸನ್ನಿವೇಶ ಇತ್ತು. ಆ ದೃಶ್ಯದಲ್ಲಿ ಶಕೀಲಾ ಮೇಲಿನ ಸಿಟ್ಟನ್ನೆಲ್ಲ ತೀರಿಸಿಕೊಂಡಿದ್ದರು ಸಿಲ್ಕ್ ಸ್ಮಿತಾ.

    shakeela_new_poster.jpgಕಾರಣ ಬೇರೇನಿರಲಿಲ್ಲ, ಶಕೀಲಾ ಬಂದ ಮೇಲೆ ಸಿಲ್ಕ್‍ಗೆ ಡಿಮ್ಯಾಂಡ್ ಕಡಿಮೆಯಾಗಿತ್ತು. ಕ್ಯಾಬರೆ ಹಾಡುಗಳೂ ಇರಲಿಲ್ಲ, ಸಾಫ್ಟ್ ಪೋರ್ನ್ ಚಿತ್ರಗಳೂ ಇಲ್ಲದೆ ಆರ್ಥಿಕವಾಗಿ ನಲುಗಿ ಹೋಗಿದ್ದರು ಸಿಲ್ಕ್. ತನ್ನ ಅವಕಾಶಗಳನ್ನು ಶಕೀಲಾ ಬಾಚಿಕೊಳ್ಳುತ್ತಿದ್ದಾರೆ ಎಂಬ ಸಿಟ್ಟನ್ನು ಹಾಗೆ ತೀರಿಸಿಕೊಂಡಿದ್ದರು. ಇದನ್ನೆಲ್ಲ ಸ್ವತಃ ಶಕೀಲಾ ಹೇಳಿಕೊಂಡಿದ್ದಾರೆ.

    ಇದೇ ಕ್ರಿಸ್‍ಮಸ್‍ಗೆ ಶಕೀಲಾ ಸಿನಿಮಾ ರಿಲೀಸ್ ಆಗುತ್ತಿದ್ದು, ಇಂದ್ರಜಿತ್ ಲಂಕೇಶ್ ಇಂತಹ ಸನ್ನಿವೇಶಗಳನ್ನೆಲ್ಲ ಚಿತ್ರದಲ್ಲಿ ತಂದಿದ್ದಾರಂತೆ. ಶಕೀಲಾ ಪಾತ್ರದಲ್ಲಿ ರಿಚಾ ಚಡ್ಡಾ ನಟಿಸಿದ್ದು, 5 ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.

  • ಸಿನಿಮಾ ಆಗುತ್ತಿದೆ ಶಕೀಲಾ ಜೀವನ..!

    movie on shakeel to starts soon

    ಒಂದಾನೊಂದು ಕಾಲದಲ್ಲಿ ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಶಕೀಲಾ. ಶಕೀಲಾ ಅಭಿನಯದ ಅರೆನೀಲಿ ಚಿತ್ರಗಳ ಎದುರು ಮೋಹನ್‍ಲಾಲ್, ಮುಮ್ಮಟ್ಟಿಯಂಥವರ ಚಿತ್ರಗಳೂ ಪರದಾಡುತ್ತಿದ್ದ ಕಾಲವೂ ಇತ್ತು. ಹೆಚ್ಚೂ ಕಡಿಮೆ ಒಂದು ದಶಕದ ಕಾಲ ಮಲ್ಲು ಚಿತ್ರರಂಗವನ್ನು `ಕಡ್ಡಾಯವಾಗಿ ವಯಸ್ಕರಿಗೆ ಮಾತ್ರ' ಚಿತ್ರಗಳ ಮೂಲಕ ಆಳಿದವರು ಶಕೀಲಾ.

    ಆಕೆಯ ಮೈಮಾಟ ನೋಡಿ ಖುಷಿ ಪಡುತ್ತಿದ್ದ ಅಭಿಮಾನಿಗಳಿಗೆ ಆಕೆಯ ಜೀವನದ ಕಥೆ ಹೊರಬಿದ್ದಾಗ ಶಾಕ್ ಆಗಿತ್ತು. ಏಕೆಂದರೆ, ಶಕೀಲಾ ಅವರ ಜೀವನದಲ್ಲಿ ಎದುರಿಸಿದ್ದ ಸಂಕಟಗಳು ಆಘಾತ ತರುವಂತಿದ್ದವು. ಜೀವನದ ಪ್ರತಿ ಹಂತದಲ್ಲೂ ಆಕೆ ಎದುರಿಸಿದ ಅವಮಾನ, ಅನುಮಾನದ ಕಥೆಗಳನ್ನು ಆತ್ಮಕಥೆಯಲ್ಲಿ ಮುಕ್ತವಾಗಿ ಹೇಳಿಕೊಂಡಿದ್ದರು ಶಕೀಲಾ.

    ಈಗ ಅವರ ಆ ಜೀವನವನ್ನು ಸಿನಿಮಾ ಮಾಡಲು ನಿರ್ಧರಿಸಿದ್ದಾರೆ ನಿರ್ದೇಶಕ ಇಂದ್ರಜಿತ್ ಲಂಕೇಶ್. ಇದು ಹಳೆಯ ಪ್ರಾಜೆಕ್ಟೇ. 2015ರಲ್ಲಿಯೇ ಇಂದ್ರಜಿತ್ ಈ ಚಿತ್ರದ ಬಗ್ಗೆ ಮಾತನಾಡಿದ್ದರು. ಈಗ ಆ ಚಿತ್ರಕ್ಕೆ ಜೀವ ಬಂದಿದೆ. ಶಕೀಲಾ ಪಾತ್ರದಲ್ಲಿ ನಟಿಸೊಕೆ ಬಾಲಿವುಡ್ ನಟಿ ರಿಚಾ ಚಡ್ಡಾ ಒಪ್ಪಿಕೊಂಡಿದ್ದಾರಂತೆ. ಕೆಲವೇ ದಿನಗಳಲ್ಲಿ ಚಿತ್ರದ ಶೂಟಿಂಗ್ ಶುರುವಾಗಲಿದೆ.