ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್, ವಿಷ್ಣುವರ್ಧನ್ ಕುಟುಂಬ ನಡೆಸುತ್ತಿರುವ ವಿಭಾ ಚಾರಿಟಬಲ್ ಟ್ರಸ್ಟ್‍ಗೆ 1 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ವಿಭಾ ಎಂದರೆ ವಿಷ್ಣುವರ್ಧನ್, ಭಾರತಿ ಎಂದರ್ಥ. ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ತಮ್ಮನ್ನು ಭೇಟಿ ಮಾಡಿದ್ದ ವಿಷ್ಣುವರ್ಧನ್ ಅವರ ಅಳಿಯ ನಟ ಅನಿರುದ್ಧ ಅವರಿಗೆ 1 ಲಕ್ಷ ರೂ. ಚೆಕ್ ಹಸ್ತಾಂತರಿಸಿದ್ದಾರೆ.
ವಿಭಾ ಚಾರಿಟಬಲ್ ಟ್ರಸ್ಟ್, ವಿಷ್ಣು ಹುಟ್ಟುಹಬ್ಬದ ಅಂಗವಾಗಿ 150 ಮಕ್ಕಳ ಹೃದಯ ಶಸ್ತ್ರ ಚಿಕಿತ್ಸೆ ಶಿಬಿರ ಆಯೋಜಿಸಿತ್ತು. ಆ ಕಾರ್ಯಕ್ಕೆ ಧನ ಸಂಗ್ರಹ ಮಾಡಲು ಸೆಪ್ಟೆಂಬರ್ 14ರಂದು ಸಂಗೀತ ಕಾರ್ಯಕ್ರಮ ಆಯೋಜಿಸಿತ್ತು. ಆ ಕಾರ್ಯಕ್ರಮಕ್ಕೆ ಶಿವರಾಜ್‍ಕುಮಾರ್ ಕೂಡಾ ಹೋಗಿ, ಹಾಡಿದ್ದರು. ವಿಭಾ ಟ್ರಸ್ಟ್‍ಗೆ 1 ಲಕ್ಷ ರೂ. ದೇಣಿಗೆ ನೀಡುವುದಾಗಿ ಹೇಳಿದ್ದರು. ನುಡಿದಂತೆಯೇ ನಡೆದಿರುವ ಶಿವಣ್ಣ, ಈಗ ಟ್ರಸ್ಟ್‍ಗೆ 1 ಲಕ್ಷ ರೂ. ನೀಡಿ ಶುಭ ಹಾರೈಸಿದ್ದಾರೆ.