ಆದಿ ದಕ್ಷ, ಪ್ರಾಮಾಣಿಕ ಅಧಿಕಾರಿ. ಸುಳ್ಳು ಹೇಳುವವರನ್ನು ಕಂಡ್ರೆ ಆಗೋದಿಲ್ಲ... ಅದು ನಿರೂಪ್ ಭಂಡಾರಿ..
ಅವನಿಗೆ ಮದುವೆಯಾಗಿಲ್ಲ. ಹುಡುಗಿ ಹುಡುಕುತ್ತಿದ್ದಾರೆ. ಇವನೇ ಯಾರಿಗೂ ಎಸ್ ಅಂತಿಲ್ಲ.. ಇವನಿಗೆ ಎಂತ ಹುಡುಗಿ ಬೇಕು ಅಂದ್ರೆ, ಅವಳನ್ನು ನೋಡಿದ ತಕ್ಷಣ ಮಿಂಚು ಹೊಡೀಬೇಕು. ಹಾರ್ಟಲ್ಲಿ ಸುನಾಮಿ ಎದ್ದೇಳಬೇಕು...
ನಿರೂಪ್‍ಗೆ ಮಿಂಚು ಹೊಡೆಸಿ, ಸುನಾಮಿಯನ್ನೂ ಏಳುವಂತೆ ಮಾಡುವ ಚೆಲುವೆ ಸಿಂಡ್ರೆಲಾ ರಾಧಿಕಾ ಪಂಡಿತ್.
ನಿಮ್ಮ ಹೆಸರು ನಂದಿನಿ ಅಲ್ಲ ತಾನೆ.. ಹಳೆಯ ಕಾಲದಿಂದಲೂ ಆ ಹೆಸರಿನ ಹುಡುಗೀರೇ ಹುಡುಗರಿಗೆ ಹುಚ್ಚು ಹಿಡಿಸಿರೋದು ಎನ್ನುವ ಡೈಲಾಗಿನಲ್ಲಿ ಬಂಧನ, ಮುಂಗಾರು ಮಳೆ ಚಿತ್ರಗಳನ್ನೆಲ್ಲ ನೆನಪಿಸಿಬಿಡ್ತಾರೆ.
ಆದಿ ಲಕ್ಷ್ಮಿ ಲವ್ ಪುರಾಣದ ಕಥೆ ಇಷ್ಟರಲ್ಲೇ ಕುತೂಹಲ ಹುಟ್ಟಿಸಿಬಿಡುತ್ತೆ. ಮಣಿರತ್ನಂ ಅಸಿಸ್ಟೆಂಟ್ ಆಗಿದ್ದ ಪ್ರಿಯಾ ನಿರ್ದೇಶನದ ಮೊದಲ ಚಿತ್ರವಿದು.
ಈಗ ಕುತೂಹಲವನ್ನು ಹಿಮಾಲಯದ ಎತ್ತರಕ್ಕೆ ಹೊತ್ತೊಯ್ಯುವ ಈ ಡೈಲಾಗ್ ಕೇಳಿಬಿಡಿ.
ನಾನೊಂದು ಹುಡುಗಿಯನ್ನು ಇಷ್ಟಪಟ್ಟಿದ್ದೇನೆ ಅಂತಾನೆ ನಾಯಕ. ಓಕೆ ಅನ್ನೋದನ್ನೇ ಕಾಯುತ್ತಿರುವ ನಾಯಕನ ಅಮ್ಮ ತಾರಾ, ಬಾ.. ಹೋಗಿ ಅವರ ಅಪ್ಪ ಅಮ್ಮನನ್ನ ಕೇಳಿಬಿಡೋಣ ಅಂತಾರೆ.
ನಾವು ಹೆಣ್ಣು ಕೇಳೋದಾದ್ರೆ, ಅವಳ ಗಂಡನನ್ನೇ ಕೇಳಬೇಕು ಅಂತಾನೆ ನಾಯಕ.. ಮುಂದಿನದ್ದು.. ನಿಮ್ಮ ಊಹೆಗೆ ಬಿಟ್ಟಿದ್ದು. ಉತ್ತರ ಸಿಕ್ಕೋದು ಮುಂದಿನ ವಾರ.