` virat - chitraloka.com | Kannada Movie News, Reviews | Image

virat

  • Darshan's Virat Resumes in Freedom Park

    viraat image

    The shooting for Darshan starrer 'Virat' resumed on Tuesday morning at the Freedom Park in Bangalore. The shooting is being continuing after a two year gap. Darshan starrer 'Virat' being directed by H Vasu was launched few years back at the Kanteerava Studios in Bangalore. But the shooting was stopped due to various problems. Later there was a news that another producer Sifcc president C Kalyan has took over the project from the earlier producer Ratnakumar and the project would start soon.

    However, Darshan had commented during the audio release of 'Ambarisha' that he would continue in the film if his conditions are met. Now it looks as if everything has come in place and the shooting of the film has started once again.

    Also See

    Darshan Ready to Act in Virat on Conditions

    Viraat heroine Isha Has Another Hit

    Viraat Unit To Shoot Songs In Switzerland

    Viraat team Leaves for Chickmagalur Shoot

    Viraat Song and Action Sequences Shoot

     

  • Kiss review - Don't Miss This Kiss: Chitraloka Rating 3.5/ 5*

    kiss movie review

    The talented filmmaker, writer and lyricist A P Arjun returns with a Kiss after a gap of three years. And, his Kiss is certainly worth a watch for its beautiful making, melodious songs along with some good action and drama pegged with necessary elements for a commercial potboiler.

    With a youthful subject, the maker has webbed a love story with a unique approach to it unlike the age-old formula of boy meets the girl, and they fall in love and fight for it before the happy ending.

    It is making which strikes the most for Kiss, and the energy which it emanates from the two debut actors - Viraat and Sreeleela, is the highlight. It has everything the younger audience, especially the college going ones would thrive for to fall in love with the movie. Music from Harikrishna, along with son Aadi, who has composed a number is synchronised perfectly with the unusual love story.

    A college student, Nandini 'accidentally' comes across the hero, which leads them to a pact for 70 days. It is better enjoyed watching the Kiss to learn about the 70 day agreement. The catfight leads to love, but is it too late to confess love? Well, watch this Kiss for a two plus hours of decent entertainment which is as sweet as the kiss.

    The two actors emerge impressive in Arjun's Kiss, so do watch and not miss the Kiss at a theatre near you.

  • Shall Not Miss The Kiss: Kichcha

    shall not miss the kiss says sudeep

    Abhinaya Chakravarthy Kichcha Sudeepa, who is basking upon the huge success of 'Pailwaan' which released in multiple languages, has said that he will definitely not miss the Kiss! He further expressed that he shall surely watch Kiss!

    Well, the Kiss which the star actor refers to is that of A P Arjun's 'Kiss' which is releasing tomorrow. While wishing the 'Kiss', a grand success, Kichcha has assured that he will definitely watch the Kiss soon.

    A P Arjun returns with Kiss after a gap of three years, which talks about the 'instant love' among the present younger generation. He had also produced the film along with penning the songs for the film, which is scored by Harikrishna, and his son Aadi.

  • Supari Surya Movie Review

    supari surya image

    Raghuraj who has given commercial hits like 'Boss', 'Namstey Madam' and others is back with another commercial film called 'Supari Surya'. As the title itself suggests, the film revolves around Surya who is basically a supari killer, but a software engineer to the society. Surya has resolved to supari killing because he needs urgent money for the treatment of his deaf and dumb sister. At one point of time, he gets an assignment to kill his sister due to various reasons. What happens next forms the crux of the film.

    Actually speaking the story is not new to Kannada film industry. However, director Raghuraj makes the film an engaging one with lots of twists and turns. Raghuraj surely knows how to make the audience glued to their seats and here also the director manages to entertain the audience with lots of action, comical and sentiment sequences.

    chitraloka_group1.gif

    Debutante Virat looks handsome on screen. He has tried his best to in the film. Madhurima has nothing much to do apart from singing and dancing. Sadhu Kokila, Vijay Chendur, Sharath Lohitashwa, 'Ugram' Manju are good in their respective roles. music director Sridhar Sambhram and cameraman Nandakumar have done a good job.

    Chitraloka Rating - 3.5/5

  • Supari Surya Releasing on March 4th

    supari surya image

    Supari Surya Kananda movie is releasing on March 4th. New actor Virat and Temper movie fame Madhurima Bannerji are in the lead role. Movie is directed by R Raghuraj who had earlier directed Boss, Rama Rama Raghurama, Sidilamari, Namaste Madam in Kannada. Movie is produced by Chamundi Chandru and Sridhar sambram has scored the music

    Debutant Virat has acted in anti social role.

    chitraloka_group1.gif

     

  • Viraat is About Power Problems - Darshan

    darshan image

    Actor Darshan has said that his new film 'Virat' which is all set to release in February talks about the power problem in the state. 'Though the film was launched three years back, it is applicable to now also. The film tells the power problem and we have tried to give a solution to the problems' said Darshan.

    Asked whether the film is giving a solution to the power problem, 'We have trie to give solution to the problem and it is up to the government to implement it. Even it is tough for the government also' said Darshan

  • Virat Is The Hero Of A P Arjun's Kiss

    actor virat image

    Though A P Arjun's new venture titled 'Kiss' was launched on the Valentines Day, the shooting for the film was not yet launched, as A P Arjun was busy looking for newcomers. Now Virat who has acted in small screen has been selected as the hero and Virat will be making his debut to big screen through 'Kiss'.

    Kiss is a film with a lot of newcomers. Arjun has himself written the story and screenplay of the film apart from direction. V Ravikumar is producing the film under the Rashtrakuta Pictures banner. Apart from newbies, Ananthnag and Sadhu Kokila will be playing prominent roles in the film. V Harikrishna will be composing the music for the film. Girish Gowda is the cameraman. The shooting for the film will be held in Bangalore, Mysore and Australia.

    Also See

    Arjun's New Film Kiss Starts

  • Virat Teaser to be Launched on Monday

    viraat image

    The teaser of Darshan starrer new film 'Virat' being directed by H Vasu will be officially launched on Monday. 'Virat' was launched few years back. However, the film was delayed due to various reasons. However, the producer was changed and C Kalyan took over the production of the film. Now the shooting of the film is completed and the team is planning to release the film on Darshan's birthday next year.

    Meanwhile, the team of the film has decided to release the teaser of the film on Monday officially.

    Also See

     

  • ಅದ್ಧೂರಿ ಲವರ್ ಫಸ್ಟ್ ಶೆಡ್ಯೂಲ್ ಕಂಪ್ಲೀಟ್

    ಅದ್ಧೂರಿ ಲವರ್ ಫಸ್ಟ್ ಶೆಡ್ಯೂಲ್ ಕಂಪ್ಲೀಟ್

    ಒಂದ್ ಕಡೆ ಧ್ರುವ ಸರ್ಜಾ ಅಭಿನಯದ ಮಾರ್ಟಿನ್. ಮತ್ತೊಂದು ಕಡೆ ವಿರಾಟ್ ಅಭಿನಯದ ಅದ್ಧೂರಿ ಲವರ್. ಎರಡೂ ಚಿತ್ರಗಳನ್ನು ಸರಿದೂಗಿಸುತ್ತಿರುವ ನಿರ್ದೇಶಕ ಎ.ಪಿ.ಅರ್ಜುನ್, ಅದ್ಧೂರಿ ಲವರ್ ಚಿತ್ರದ ಫಸ್ಟ್ ಶೆಡ್ಯೂಲ್ ಮುಗಿಸಿದ್ದಾರೆ.

    ಅದ್ಧೂರಿ ಲವರ್ ಆ್ಯಕ್ಷನ್ ಥ್ರಿಲ್ಲರ್ ಚಿತ್ರವಂತೆ. ಕಿಸ್ ಚಿತ್ರದ ಮೂಲಕ ವಿರಾಟ್ ಮತ್ತು ಶ್ರೀಲೀಲಾ ಎಂಬ ಎರಡು ಚೆಂದದ ಪ್ರತಿಭೆಗಳನ್ನು ಕೊಟ್ಟ ಅರ್ಜುನ್, ವಿರಾಟ್ ಅವರ 2ನೇ ಚಿತ್ರವನ್ನು ತಮ್ಮದೇ ಬ್ಯಾನರ್‍ನಲ್ಲಿ ಮಾಡುತ್ತಿದ್ದಾರೆ. 

  • ಅಪ್ಪು ನಟಿಸಬೇಕಿದ್ದ ಚಿತ್ರಕ್ಕೆ ಕಿಸ್ ಹೀರೋ?

    ಅಪ್ಪು ನಟಿಸಬೇಕಿದ್ದ ಚಿತ್ರಕ್ಕೆ ಕಿಸ್ ಹೀರೋ?

    ದಿನಕರ್ ತೂಗುದೀಪ ಅವರ ಬಹುವರ್ಷಗಳ ಕನಸು ನನಸಾಗುವ ಹಾದಿಯಲ್ಲಿತ್ತು. ದಿನಕರ್ ಸಿದ್ಧಪಡಿಸಿದ್ದ ಸ್ಕ್ರಿಪ್ಟ್‍ಗೆ ಪುನೀತ್ ಓಕೆ ಎಂದಿದ್ದರು. ಜೇಮ್ಸ್ ಮುಗಿದ ನಂತರ ದ್ವಿತ್ವ ಜೊತೆ ಜೊತೆಯಲ್ಲೇ ಶುರುವಾಗಬೇಕಿದ್ದ ಸಿನಿಮಾ ಅದು. ಜಯಣ್ಣ ಭೋಗೇಂದ್ರ ನಿರ್ಮಾಪಕರಾಗಿ ಸಿದ್ಧರಿದ್ದರು. ದುರದೃಷ್ಟವಶಾತ್ ಅಪ್ಪು ಅಗಲಿದರು. ಈಗ ಆ ಚಿತ್ರಕ್ಕೆ ಕಿಸ್ ಮೂಲಕ ಬೆಳಕಿಗೆ ಬಂದ ಪ್ರತಿಭೆ ವಿರಾಟ್ ಬಂದಿದ್ದಾರೆ.

    ಕಿಸ್ ಚಿತ್ರದಲ್ಲಿ ಒಳ್ಳೆಯ ಕಲಾವಿದನಾಗುವ ಎಲ್ಲ ಭರವಸೆ ಮೂಡಿಸಿದ್ದ ವಿರಾಟ್, ಈಗ ಅರ್ಜುನ್ ಅವರ ಜೊತೆಯಲ್ಲೇ ಅದ್ಧೂರಿ ಲವರ್ ಚಿತ್ರದಲ್ಲೂ ನಟಿಸುತ್ತಿದ್ದಾರೆ.

    ಕಥೆ ಕೇಳಿದ ಮೇಲೆ, ಈ ಕಥೆಗೆ ವಿರಾಟ್ ಪರ್ಫೆಕ್ಟ್ ಆಗಿ ಸೂಟ್ ಆಗುತ್ತಾರೆ ಎಂದರು ಜಯಣ್ಣ. ನನಗೂ ಓಕೆ ಎನ್ನಿಸಿತು. ಇದೊಂದು ಕಮರ್ಷಿಯಲ್ ಎಲಿಮೆಂಟ್ ಇರುವ ಥ್ರಿಲ್ಲರ್ ಸ್ಟೋರಿ ಅನ್ನೋದು ದಿನಕರ್ ಮಾತು.

    ಆದರೆ ಅದು ಅಪ್ಪುಗಾಗಿಯೇ ಸಿದ್ಧ ಮಾಡಿದ್ದ ಕಥೆನಾ? ಅಥವಾ ಬೇರೆ ಕಥೆನಾ..? ಅದು ಸದ್ಯಕ್ಕೆ ಗೊತ್ತಾಗಿಲ್ಲ.

  • ಆ ಒಂದು ವಿಡಿಯೋ.. ಶ್ರೀಲೀಲಾ ಕಿಸ್ ನಾಯಕಿಯಾಗಿಬಿಟ್ರು..!

    sreeleela became the heroine of kiss

    ಕಿಸ್. ಎ.ಪಿ.ಅರ್ಜುನ್ ನಿರ್ದೇಶನದ ಹೊಸ ಸಿನಿಮಾ. ಎ.ಪಿ. ಅರ್ಜುನ್‍ಗೆ ಈ ಬಾರಿ ಭರ್ಜರಿ ಸಕ್ಸಸ್ಸಿನ ನಿರೀಕ್ಷೆಯಿದೆ. ಚಿತ್ರಕ್ಕೆ ಶ್ರೀಲೀಲಾ ನಾಯಕಿ. ಮೆಡಿಕಲ್ ಸ್ಟೂಡೆಂಟ್. ಇದು ಅವರ ಮೊದಲ ಚಿತ್ರ. ಇಷ್ಟಕ್ಕೂ ಶ್ರೀಲೀಲಾ ನಾಯಕಿಯಾಗಿದ್ದು ಹೇಗೆ..? ಅಲ್ಲಿದೆ ಒಂದು ವಿಡಿಯೋ ಸ್ಟೋರಿ.

    ಅರ್ಜುನ್ ಅವರಿಗೆ ಶ್ರೀಲೀಲಾ ಇಷ್ಟವಾಗಿದ್ದು ಒಂದು ಫೋಟೋದಲ್ಲಿ. ಅದು ಕ್ಯಾಮೆರಾಮನ್ ಭುವನ್ ಗೌಡ, ಪ್ರತಿವರ್ಷದಂತೆ ಶ್ರೀಲೀಲಾ ಅವರ ಫ್ಯಾಮಿಲಿ ಫೋಟೋ ಶೂಟ್ ಮಾಡಿದ್ದಾರೆ. ಅದನ್ನು ಫೇಸ್‍ಬುಕ್‍ನಲ್ಲಿ ನೋಡಿದ ಅರ್ಜುನ್ ಅವರಿಗೆ ಶ್ರೀಲೀಲಾ ಓಕೆ ಎನಿಸಿದ್ದಾರೆ. ಇದರ ಜೊತೆ ಒಂದು ವಿಡಿಯೋ ಕಥೆಯೂ ಇದೆ.

    ಶ್ರೀಲೀಲಾ ಅವರ ಮನೆಯಲ್ಲಿನ ಅಕ್ವೇರಿಯಂನಲ್ಲಿ ಬೆಟಾಫಿಶ್ ಅನ್ನೋ ಮೀನಿತ್ತಂತೆ. ಒಂದ್ ದಿನ ಅಕ್ವೇರಿಯಂನಲ್ಲಿ ಆ ಮೀನು ಸೈಲೆಂಟ್ ಆಗಿತ್ತು. ಅಕ್ವೇರಿಯಂ ಒಳಗೇ ಕೈ ಹಾಕಿದ್ರೂ ನೋ ರಿಯಾಕ್ಷನ್. ಏನಾದ್ರೂ ಆಗೋಯ್ತೋ ಏನೋ ಎಂಬ ಬೇಜಾರಿನಲ್ಲಿ ಮೀನಿನ ಜೊತೆ ಮಾತನಾಡಿದ್ರಂತೆ ಶ್ರೀಲೀಲಾ. ಅದನ್ನು ಅವರ ತಾಯಿ ವಿಡಿಯೋ ಶೂಟ್ ಮಾಡಿದ್ದಾರೆ.

    ತಾಯಿ ವಿಡಿಯೋ ಮಾಡಿದ್ದನ್ನು ನೋಡಿದ ಶ್ರೀಲೀಲಾ `ನಾನು ಬೇಜಾರಲ್ಲಿದ್ರೆ ನೀನು ವಿಡಿಯೋ ಮಾಡ್ತೀರಾ.. ಸಮಾಧಾನ ಮಾಡೊಲ್ವಾ..' ಎಂದಿದ್ದಾರೆ. ಅಷ್ಟು ಹೊತ್ತಿಗೆ ಮೀನು ಆಕ್ಟಿವ್ ಆಗಿದೆ.

    ಅದಾದ ಮೇಲೆ ನಾನು ಫ್ರೆಂಡ್ಸ್ ಜೊತೆ ಊಟಕ್ಕೆ ಹೋಗಬೇಕು. ದುಡ್ಡು ಕೊಡು ಎಂದು ದುಡ್ಡು ಪಡೆದು ಹೋಗಿದ್ದಾರೆ. ಇದೆಲ್ಲವನ್ನೂ ನೋಡಿದ ಅರ್ಜುನ್ ಅವರಿಗೆ ಶ್ರೀಲೀಲಾ ಅವರ ಚೇಂಜ್ ಓವರ್ ಇಷ್ಟವಾಗಿದೆ. ಜೊತೆಗೆ ಬ್ಯಾಲೆ, ಭರತನಾಟ್ಯವೂ ಗೊತ್ತಿದ್ದ ಕಾರಣ, ನಟನೆಯೂ ಸಲೀಸಾಗಿದೆ. ಈಗ ಮೊದಲ ಪರೀಕ್ಷೆ ರಿಸಲ್ಟ್ ನೋಡುವ ಸಮಯ. ಸೆ.27ಕ್ಕೆ ಕಿಸ್ ರಿಲೀಸ್ ಆಗುತ್ತಿದೆ.

  • ಕಿಸ್ 100

    kiss movie celebrates 100 days

    ನೀನೆ ಮೊದಲು ನೀನೇ ಕೊನೆ.. ಎಂಬ ಹಾಡಿನ ಮೂಲಕ ಪ್ರೇಮಿಗಳ ಎದೆಯಲ್ಲಿ ಸಂಚಲನ ಮೂಡಿಸಿದ್ದ ಸಿನಿಮಾ ಕಿಸ್. ಎ.ಪಿ.ಅರ್ಜುನ್ ನಿರ್ದೇಶನದ ಕಿಸ್ ಶತದಿನೋತ್ಸವ ಪೂರೈಸಿದ ಸಂಭ್ರಮ ಪೂರೈಸಿದೆ.

    ವಿರಾಟ್ ಮತ್ತು ಶ್ರೀಲೀಲಾ ಎಂಬ ಎರಡು ಹೊಸ ಪ್ರತಿಭೆಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿ ಮತ್ತೊಮ್ಮೆ ಗೆದ್ದಿದ್ದಾರೆ ಎ.ಪಿ.ಅರ್ಜುನ್. ಶತದಿನೋತ್ಸವ ಹಿನ್ನೆಲೆಯಲ್ಲಿ ಚಿತ್ರದ ಕಲಾವಿದರು, ತಂತ್ರಜ್ಞರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯ್ತು. ಇದೇ ವೇಳೆ ಎ.ಪಿ.ಅರ್ಜುನ್ ತಮ್ಮ ಹೊಸ ಚಿತ್ರ ಲವರ್ ಶೀರ್ಷಿಕೆ ಅನಾವರಣಗೊಳಿಸಿದರು.

  • ಕಿಸ್ ಎಂದರೇನು..?

    what is the meaning of kiss

    ಕಿಸ್ ಎಂದರೇನು..? ಅಯ್ಯೋ ಅಷ್ಟು ಗೊತ್ತಿಲ್ವಾ.. ಮುತ್ತು. ಇಷ್ಟೂ ಗೊತ್ತಿಲ್ದೇ ಪ್ರಶ್ನೆ ಕೇಳ್ತೀರಲ್ಲ. ಗೊತ್ತಿಲ್ಲ ಅಂದ್ರೆ ಹೋಗಿ ಎ.ಪಿ.ಅರ್ಜುನ್ ಅವರನ್ನೇ ಕೇಳಿ. ಅದೇ ಹೆಸರಲ್ಲಿ ಒಂದ್ ಸಿನಿಮಾನೇ ಮಾಡಿದ್ದಾರೆ ಅನ್ನೋ ಉತ್ತರ ನಿಮ್ಮದಾಗಿದ್ದರೆ... ವೇಯ್ಟ್. ಎ.ಪಿ.ಅರ್ಜುನ್ ಅವರೇ ಕಿಸ್ ಅನ್ನೋದ್ರ ಅರ್ಥವನ್ನ ಬೇರೆಯದ್ದೇ ರೀತಿಯಲ್ಲಿ ಹೇಳಿದ್ದಾರೆ.

    ಏISS ಅಂದ್ರೆ ಕೀಪ್ ಇಟ್ ಶಾರ್ಟ್ & ಸ್ವೀಟ್ ಅಂತೆ. ಅದು ಚಿತ್ರದಲ್ಲಿ ಅವರು ಹೇಳಿರೋ ಕಿಸ್. ವಿರಾಟ್, ಶ್ರೀಲೀಲಾ ಜೊತೆಯಾಗಿ ನಟಿಸಿರುವ ಚಿತ್ರ ನಾಳೆ ರಿಲೀಸ್ ಆಗುತ್ತಿದೆ. ಅರ್ಜುನ್ ಚಿತ್ರಗಳಲ್ಲಿ ಸಹಜವಾಗಿ ಆಗುವಂತೆ ಹಾಡುಗಳೆಲ್ಲ ಮೆಲೋಡಿ ಹಿಟ್. ಚಿತ್ರದ ಟೈಟಲ್‍ನಲ್ಲಿ ಕಿಸ್ ಇದ್ದರೂ, ಇದೊಂದು ಫ್ಯಾಮಿಲಿ ಸಿನಿಮಾ ಅನ್ನೋ ಭರವಸೆ ಚಿತ್ರತಂಡದ್ದು.

  • ಕಿಸ್ ಕೊಡುವವರು.. ಪಡೆದುಕೊಳ್ಳುವವರು.. ಇಬ್ಬರಿಗೂ ಇದೆ ಸಂದೇಶ

    valuable message about kiss in kiss mvi

    ಎ.ಪಿ.ಅರ್ಜುನ್ ನಿರ್ದೇಶನದ ಕಿಸ್ ಸಿನಿಮಾ ಥಿಯೇಟರುಗಳಲ್ಲಿ ಲಗ್ಗೆಯಿಟ್ಟಾಗಿದೆ. ನೀನೇ ಮೊದಲು ನೀನೇ ಕೊನೆ.. ಹಾಡಿನ ಮೂಲಕ ಮನಸ್ಸು ಗೆದ್ದಿರುವ ಕಿಸ್ ಚಿತ್ರದಲ್ಲಿ ವಿರಾಟ್ ಮತ್ತು ಶ್ರೀಲೀಲಾ ಎಂಬ ಹೊಸಮುಖಗಳು ರೊಮ್ಯಾನ್ಸ್ ಮಾಡಿವೆ. ಹಾಡುಗಳನ್ನು ನೋಡಿದವರಿಗೆ ಎರಡು ಚೆಂದನೆಯ ಮುಖಗಳು ಫ್ರೆಶ್ ಎನಿಸುತ್ತವೆ. ಇಷ್ಟಕ್ಕೂ ಈ ಚಿತ್ರದ ಮೆಸೇಜ್ ಏನು..?

    ಇದು ಪ್ರತಿಯೊಬ್ಬರೂ ನೋಡಬೇಕಾದ ಸಿನಿಮಾ. ಟೀನೇಜ್‍ನಲ್ಲಿರುವ ಪ್ರೇಮಿಗಳು, ಅವರ ಪೋಷಕರು ಇಬ್ಬರಿಗೂ ಇಲ್ಲೊಂದು ಚೆಂದದ ಕಥೆ, ಸಂದೇಶ ಎರಡೂ ಇದೆ. ಕಿಸ್ ಎನ್ನುವುದು ಅಟ್ರ್ಯಾಕ್ಷನ್ ಅಲ್ಲ. ಕಿಸ್ ಕೊಡುವವರು ಮತ್ತು ಪಡೆದುಕೊಳ್ಳುವವರು ಇಬ್ಬರೂ ಕೂಡಾ ಕಿಸ್ ಕೊಡುವ ಮುನ್ನ.. ಅದನ್ನು ತೆಗೆದುಕೊಳ್ಳುವ ವ್ಯಕ್ತಿ ಯೋಗ್ಯನಾ.. ಅಲ್ಲವಾ.. ಎನ್ನುವುದನ್ನು ನಿರ್ಧರಿಸಬೇಕು. ಅದನ್ನು ಅರ್ಥ ಮಾಡಿಸುವ ಚೆಂದನೆಯ ಪ್ರಯತ್ನ ಮಾಡಿದ್ದೇವೆ' ಎನ್ನುತ್ತಾರೆ ಎ.ಪಿ.ಅರ್ಜುನ್.

    ಅರ್ಜುನ್ ಅವರಿಗೆ ಇದು 5ನೇ ಸಿನಿಮಾ. ಅಂಬಾರಿ, ರಾಟೆ, ಅದ್ಧೂರಿ, ಐರಾವತದ ನಂತರ ಕಿಸ್ ಮೂಲಕ ಬಂದಿದ್ದಾರೆ ಎ.ಪಿ.ಅರ್ಜುನ್. 

  • ಕಿಸ್ ಚಿತ್ರಕ್ಕೆ ಸ್ಠಾರ್ ಸಾಥ್

    kiss movie gets star support

    ಕಿಸ್ ಚಿತ್ರದಲ್ಲಿ ನಟಿಸಿರುವವರಲ್ಲಿ ವಿರಾಟ್ ಮತ್ತು ಶ್ರೀಲೀಲಾ ಇಬ್ಬರೂ ಹೊಸಬರೇ. ವಿಶೇಷವೇನು ಗೊತ್ತೇ.. ಚಿತ್ರತಂಡಕ್ಕೆ ಸ್ಟಾರ್ ನಟರ ಅದ್ಭುತ ಬೆಂಬಲ ಸಿಕ್ಕಿರುವುದು.

    ಕಿಸ್ ಚಿತ್ರಕ್ಕೆ ಹಿನ್ನೆಲೆ ಧ್ವನಿ ನೀಡಿರುವುದು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ. ತಮ್ಮನ್ನು ಚಿತ್ರರಂಗಕ್ಕೆ ಅದ್ಧೂರಿಯಾಗಿ ಪರಿಚಯಿಸಿದ ಎ.ಪಿ.ಅರ್ಜುನ್ ಮೇಲಿನ ಪ್ರೀತಿಗಾಗಿ ಚಿತ್ರಕ್ಕೆ ಬ್ಯಾಕ್ ಗ್ರೌಂಡ್ ವಾಯ್ಸ್ ಕೊಟ್ಟಿದ್ದಾರೆ.

    ಇನ್ನು ಹೀರೋ ವಿರಾಟ್ ಅವರಿಗೆ ಡ್ಯಾನ್ಸ್ ಸ್ಟೆಪ್ ಹೇಳಿಕೊಟ್ಟು ಸಹಕರಿಸಿರುವುದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. ಅದೂ ಕೇವಲ ಹೊಸಬರ ಮೇಲಿನ ಪ್ರೀತಿಗಾಗಿ.

    ನಟಿ ಶ್ರೀಲೀಲಾ ಪಾಲಿಗೆ ರಾಧಿಕಾ ಪಂಡಿತ್ ಅಕ್ಕನಂತೆ ನಿಂತು ಮಾರ್ಗದರ್ಶನ ಮಾಡಿದ್ದಾರೆ. ಅಫ್‍ಕೋರ್ಸ್, ರಾಧಿಕಾ ಪಂಡಿತ್ ಅವರ ಡಾಕ್ಟರ್ ಶ್ರೀಲೀಲಾ ತಾಯಿ ಸ್ವರ್ಣಲತಾ.

    ಕಿಸ್ ಮುಗಿಯುವ ಮೊದಲೇ ಶ್ರೀಲೀಲಾ ಅವರ ಅಭಿನಯ ಮೆಚ್ಚಿಕೊಂಡು ಭರಾಟೆಯಲ್ಲಿ ಚಾನ್ಸ್ ಕೊಟ್ಟಿದ್ದು ಭರ್ಜರಿ ಚೇತನ್. ಅದೂ ಶ್ರೀಮುರಳಿ ಎದುರು ನಾಯಕಿಯಾಗಿ.

    ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಹರಿಕೃಷ್ಣ ಅದ್ಬುತ ಹಾಡು ಕೊಟ್ಟಿದ್ದರೆ, ಇಮ್ರಾನ್ ಸರ್ದಾರಿಯಾ ಕೊರಿಯೋಗ್ರಫಿ ಕಣ್ಣು ಕುಕ್ಕುವಂತಿದೆ. ಅರ್ಜುನ್ ಶೆಟ್ಟಿ ಕ್ಯಾಮೆರಾ, ಸಾನ್ಯಾ ಅವರ ಕಾಸ್ಟ್ಯೂಮ್ ಕೂಡಾ ಕಿಸ್‍ನಲ್ಲಿ ಗಮನ ಸೆಳೆಯುತ್ತಿದೆ.

  • ಕಿಸ್ ಮಾಡೋಕೆ ಜರ್ಮನಿ ಕೆಲಸಕ್ಕೇ ವಿರಾಟ್ ಗುಡ್ ಬೈ

    kiss hero virat quot his job to act in films

    ಕಿಸ್ ಚಿತ್ರದ ಹೀರೋ ವಿರಾಟ್. ಜೊತೆ ಜೊತೆಯಲಿ ಧಾರಾವಾಹಿಯಿಂದ ಗಮನ ಸೆಳೆದಿದ್ದ ನಟ. ಈಗ ಕಿಸ್ ಚಿತ್ರದ ಹೀರೋ. ಸಾಫ್ಟ್‍ವೇರ್ ಎಂಜಿನಿಯರ್ ಆಗಿರುವ ವಿರಾಟ್ ಅವರಿಗೆ ಜರ್ಮನಿಯಲ್ಲಿ ಕೆಲಸವೂ ಸಿಕ್ಕಿತ್ತು. ಲಕ್ಷ ಲಕ್ಷ ಸಂಬಳವೂ ಫಿಕ್ಸ್ ಆಗಿತ್ತು.ಆದರೆ ಅದೆಲ್ಲವನ್ನೂ ಬಿಟ್ಟ ವಿರಾಟ್, ಅರ್ಜುನ್ ಅವರ ಮನೆ ಎದುರು ಪ್ರತಿದಿನ ಹೋಗಿ ನಿಲ್ಲುತ್ತಿದ್ದರಂತೆ.

    ಅರ್ಜುನ್ ಅವರಿಗಿಂತಲೂ ಮೊದಲು ವಿರಾಟ್ ಅವರ ತಾಯಿಯ ಕಣ್ಣಿಗೆ ಬಿದ್ದರಂತೆ. ಪ್ರತಿದಿನ ಟೀ-ಕಾಫಿ ಕೊಡಲು ಶುರು ಮಾಡಿದರಂತೆ. ಒಂದು ದಿನ ಅವರೇ ಮಗನಿಗೆ ಹೇಳಿ ಅಡಿಷನ್ ಕೊಡಿಸಿದರಂತೆ. 200ಕ್ಕೂ ಹೆಚ್ಚು ಜನರ ಅಡಿಷನ್ ನಡೆದು ಆಯ್ಕೆಯಾಗಿದ್ದು ಮಾತ್ರ ವಿರಾಟ್.

    ರಂಗಾಯಣದ ನಾಟಕಗಳಲ್ಲಿ ನಟಿಸಿರುವ ವಿರಾಟ್, ಇಡೀ ಚಿತ್ರದ ಪ್ರತಿಯೊಂದು ದೃಶ್ಯ, ಹಾಡು ಎಲ್ಲವನ್ನೂ ರಿಹರ್ಸಲ್ ಮಾಡಿಯೇ ನಟಿಸಿದ್ದಾರಂತೆ. ಚಿತ್ರದಲ್ಲಿನ ಪ್ರತಿಯೊಂದು ಸೀನ್‍ನ್ನೂ ಚಾಲೆಂಜ್ ಆಗಿ ತೆಗೆದುಕೊಂಡು ನಟಿಸಿದ್ದೇನೆ ಎನ್ನುವ ವಿರಾಟ್, ಮೊದಲ ಚಿತ್ರದ ಬಿಡುಗಡೆ ನಿರೀಕ್ಷೆಯಲ್ಲಿದ್ದಾರೆ.

  • ಜಯಣ್ಣ-ಭೋಗೇಂದ್ರ ಜೋಡಿಯ ದಿನಕರ್ ಸಿನಿಮಾ ಶುರು

    ಜಯಣ್ಣ-ಭೋಗೇಂದ್ರ ಜೋಡಿಯ ದಿನಕರ್ ಸಿನಿಮಾ ಶುರು

    ಡೈರೆಕ್ಟರ್ : ದಿನಕರ್ ತೂಗುದೀಪ.

    ಹೀರೋ : ಕಿಸ್ ಖ್ಯಾತಿಯ ವಿರಾಟ್

    ನಿರ್ಮಾಪಕರು : ಜಯಣ್ಣ ಮತ್ತು ಭೋಗೇಂದ್ರ

    ಬ್ಯಾನರ್ : ಜಯಣ್ಣ ಫಿಲಮ್ಸ್‍ನ 23ನೇ ಸಿನಿಮಾ

    ದಿನಕರ್ ತೂಗುದೀಪ್ ಸುದೀರ್ಘ ಗ್ಯಾಪ್ ನಂತರ ಮತ್ತೊಮ್ಮೆ ಡೈರೆಕ್ಷನ್ ಕ್ಯಾಪ್ ತೊಟ್ಟಿದ್ದಾರೆ. ಜಯಣ್ಣ ಭೋಗೇಂದ್ರ ನಿರ್ಮಾಣದಲ್ಲಿ ವಿರಾಟ್ ಹೀರೋ ಆಗಿರುವ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಚಿತ್ರಕ್ಕೆ ಮೀನಾ ತೂಗುದೀಪ ಕ್ಲಾಪ್ ಮಾಡಿ ಶುಭ ಕೋರಿದ್ದಾರೆ.

    ಪ್ಲಾನ್ ಪ್ರಕಾರ ದಿನಕರ್, ಜಯಣ್ಣ ಅವರಿಗಾಗಿಯೇ ಪುನೀತ್ ಸಿನಿಮಾ ನಿರ್ದೇಶಿಸಬೇಕಿತ್ತು. ಪುನೀತ್ ಅಕಾಲಿಕ ನಿಧನದ ನಂತರ ದಿನಕರ್ ಮತ್ತೊಂದು ಕಥೆ ಸಿದ್ಧಪಡಿಸಿದ್ದು, ಆ ಚಿತ್ರಕ್ಕೆ ವಿರಾಟ್ ಆಯ್ಕೆಯಾಗಿದ್ಧಾರೆ.

    ಕಿಸ್ ಸೂಪರ್ ಹಿಟ್ ಆದ ನಂತರ ವಿರಾಟ್, ಎ.ಪಿ.ಅರ್ಜುನ್ ಅವರೊಂದಿಗೆ ಅದ್ಧೂರಿ ಲವರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಅವರಿಗೆ 3ನೇ ಸಿನಿಮಾ. ಲೈಫ್ ಜೊತೆ ಒಂದ್ ಸೆಲ್ಫಿ ನಂತರ ಸುದೀರ್ಘ ಗ್ಯಾಪ್ ನಂತರ ದಿನಕರ್ ಡೈರೆಕ್ಟರ್ ಆಗಿರುವುದರಿಂದ ಚಿತ್ರದ ಮೇಲೆ ನಿರೀಕ್ಷೆಯೂ ಹೆಚ್ಚಿದೆ.

  • ದಿನಕರ್-ವಿರಾಟ್ ಚಿತ್ರಕ್ಕೆ ಹೀರೋಯಿನ್ ಫಿಕ್ಸ್

    ದಿನಕರ್-ವಿರಾಟ್ ಚಿತ್ರಕ್ಕೆ ಹೀರೋಯಿನ್ ಫಿಕ್ಸ್

    ದಿನಕರ್ ತೂಗುದೀಪ್ ಸುದೀರ್ಘ ಗ್ಯಾಪ್ ನಂತರ ಡೈರೆಕ್ಷನ್ ಮಾಡ್ತಿರೋ ಚಿತ್ರ ಇತ್ತೀಚೆಗೆ ತಾನೇ ಮುಹೂರ್ತ ಆಚರಿಸಿಕೊಂಡಿತ್ತು. ಜಯಣ್ಣ ಭೋಗೇಂದ್ರ ನಿರ್ಮಾಣದಲ್ಲಿ ವಿರಾಟ್ ಹೀರೋ ಆಗಿರುವ ಚಿತ್ರಕ್ಕೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಈಗ ಹೀರೋಯಿನ್ ಆಯ್ಕೆ ಆಗಿದೆ.

    ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ಮೂಲಕ ಎಂಟ್ರಿ ಕೊಟ್ಟ ಸಂಜನಾ ಆನಂದ್ ಸಲಗ ಚಿತ್ರದಲ್ಲಿ ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿದ್ದರು. ವಿರಾಟ್ ಎದುರು ಸಂಜನಾ ಆನಂದ್ ನಟಿಸುತ್ತಿದ್ದಾರೆ. ಸದ್ಯಕ್ಕೆ ಸಂಜನಾ ಆನಂದ್ ತೆಲುಗು ಚಿತ್ರವೊಂದರಲ್ಲಿ ಬ್ಯುಸಿಯಾಗಿದ್ದಾರೆ. ಅದು ಮುಗಿದ ತಕ್ಷಣವೇ ಈ ಚಿತ್ರತಂಡ ಸೇರಿಕೊಳ್ಳಲಿದ್ದಾರೆ ಸಂಜನಾ ಆನಂದ್.

    ಕಿಸ್ ನಂತರ ವಿರಾಟ್ ಎ.ಪಿ.ಅರ್ಜುನ್ ಅವರೊಂದಿಗೆ ಅದ್ಧೂರಿ ಲವರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಅವರಿಗೆ 3ನೇ ಸಿನಿಮಾ. ಲೈಫ್ ಜೊತೆ ಒಂದ್ ಸೆಲ್ಫಿ ನಂತರ ಸುದೀರ್ಘ ಗ್ಯಾಪ್ ನಂತರ ದಿನಕರ್ ನಿರ್ದೇಶಿಸುತ್ತಿರುವ ಚಿತ್ರವಿದು. ದಿನಕರ್ ಚಿತ್ರ ಎಂದ ಮೇಲೆ ನಿರೀಕ್ಷೆಯೂ ಹೆಚ್ಚಾಗಿಯೇ ಇರುತ್ತೆ.

  • ನೀನೆ ಮೊದಲು ನೀನೇ ಕೊನೆ.. ಕಿಸ್ ಸಾಂಗ್ಸ್ ಮೆಗಾ ಹಿಟ್

    romantic song from kiss is super hit

    ನೀನೆ ಮೊದಲು ನೀನೇ ಕೊನೆ.. ಇದು ಕಿಸ್ ಚಿತ್ರದ ಹಾಡು. ಚಿತ್ರವನ್ನು ನೋಡಲೇಬೇಕು ಎನ್ನುವವರಿಗೆ ವೆಲ್‍ಕಂ ಹೇಳುವ ಹಾಡು. ಇದೊಂದು ಹಾಡೇ ಪ್ರೇಕ್ಷಕರ ಹೃದಯದಲ್ಲಿ ರಂಗಿನ ಅಲೆಯೆಬ್ಬಿಸಿದೆ.

    ಇನ್ನು ಪುನೀತ್ ಹಾಡಿರುವ ಬೆಟ್ಟೇಗೌಡ ವರ್ಸಸ್ ಚಿಕ್ಕಬೋರಣ್ಣ ಹಾಡು ಟಪ್ಪಾಂಗುಚ್ಚಿಯಾಗಿದ್ದರೆ, ಶೀಲಾ ಸುಶೀಲಾ ಹಾಡು ಪಡ್ಡೆಗಳು ಕುಣಿದು ಕುಪ್ಪಳಿಸುವಂತಿದೆ. ಕಣ್ಣಾನೀರಿದು ವಿರಹ ಗೀತೆಯಾದರೆ, ಸಮಾಧಾನ ವಿಷಾದ ಗೀತೆ. ಒಟ್ಟಿನಲ್ಲಿ ಚಿತ್ರದ ಎಲ್ಲ ಹಾಡುಗಳೂ ಸೂಪರ್ ಹಿಟ್.

    ಎ.ಪಿ.ಅರ್ಜುನ್ ನಿರ್ದೇಶನದ ಕಿಸ್ ಚಿತ್ರದಲ್ಲಿ ಶ್ರೀಲೀಲಾ, ವಿರಾಟ್ ನಾಯಕಿ, ನಾಯಕರಾದರೆ, ಮ್ಯೂಸಿಕ್ ಡೈರೆಕ್ಟರ್ ಆದಿ ಹರಿ.

  • ವಿರಾಟ್, ಸಂಜನಾ ಅದ್ಧೂರಿ ಲವ್

    addhuri love story with virat and sanjana

    ಕಿಸ್ ಸಕ್ಸಸ್ ಆದ ನಂತರ ಎ.ಪಿ.ಅರ್ಜುನ್ ಅದ್ಧೂರಿ ಲವರ್ಸ್ ಚಿತ್ರ ಮಾಡೋದಾಗಿ ಘೋಷಿಸಿದ್ದರು. ಚಿತ್ರದ ಪೋಸ್ಟರ್ ರಿಲೀಸ್ ಮಾಡಿದ್ದರು. ಕಿಸ್ ಚಿತ್ರದ ಶತದಿನೋತ್ಸವ ಕಾರ್ಯಕ್ರಮದಲ್ಲಿಯೇ ಘೋಷಿಸಲ್ಪಟ್ಟಿದ್ದ ಅದ್ಧೂರಿ ಲವರ್ಸ್ ಹೀರೋ, ಹೀರೋಯಿನ್ ಯಾರು ಎಂಬುದು ಗುಟ್ಟಾಗಿಯೇ ಇತ್ತು. ಅದನ್ನೀಗ ಹೊರಬಿಟ್ಟಿದ್ದಾರೆ ಎ.ಪಿ.ಅರ್ಜುನ್.

    ಎ.ಪಿ.ಅರ್ಜುನ್ ಅವರ ಹೊಸ ಚಿತ್ರದಲ್ಲಿ ಅದ್ಧೂರಿಯಾಗಿ ಲವ್ ಮಾಡೋಕೆ ಕಿಸ್ ಖ್ಯಾತಿಯ ವಿರಾಟ್ ರೆಡಿ. ಅವರಿಗೆ ಜೊತೆಯಾಗೋಕೆ ಇತ್ತ ಸಂಜನಾ ಆನಂದ್ ರೆಡಿಯಾಗಿದ್ದಾರೆ. ಈ ಚಿತ್ರ ಹೇಗಿರುತ್ತೆ ಅಂದ್ರೆ ಹಿಂಗೂ.. ಈ ಲೆವೆಲ್ಲಿಗೂ ಲವ್ ಮಾಡ್ತಾರಾ..? ಇದು ಸಾಧ್ಯಾನಾ.. ಎಂದು ಬೆರಗು ಹುಟ್ಟಿಸುವಂತಾ ಕಥೆ ಚಿತ್ರದಲ್ಲಿದೆ ಅಂತಾರೆ ಅರ್ಜುನ್. ಗೆಟ್ ರೆಡಿ ಟು ಒನ್ ಮೋರ್ ಲವ್ ಸ್ಟೋರಿ.