ತಾರಕ್ ಚಿತ್ರದ ಹೀರೋ ದರ್ಶನ್. ಪ್ರಕಾಶ್‍ಗೆ ಗೆಳೆಯ. ಚಿತ್ರದಲ್ಲಿರುವುದು ಫ್ಯಾಮಿಲಿ ಸ್ಟೋರಿ. ಆದರೆ, ಚಿತ್ರ ತಂಡದಲ್ಲೇ ಒಂದು ಫ್ಯಾಮಿಲಿ ಇದೆ. ಚಿತ್ರದ ನಿರ್ಮಾಪಕ ದುಶ್ಯಂತ್ ಹಾಗೂ ನಿರ್ದೇಶಕ ಮಿಲನ ಪ್ರಕಾಶ್ ಬಾವ ಬಾಮೈದರು. ಪ್ರಕಾಶ್ ಮದುವೆಯಾಗಿರೋದು ದುಶ್ಯಂತ್ ಅವರ ಸೋದರಿಯನ್ನ.
ಹೀಗೆ ನೆಂಟರು,ಸಂಬಂಧಿಕರೇ ಒಟ್ಟಾಗಿ ಚಿತ್ರ ನಿರ್ಮಾಣಕ್ಕಿಳಿದಾಗ ಲಾಭಗಳೂ ಇರುತ್ತವೆ. ಸಮಸ್ಯೆಗಳೂ ಇರುತ್ತವೆ. ಆದರೆ, ದುಶ್ಯಂತ್ ಮತ್ತು ಪ್ರಕಾಶ್, ಸಂಬಂಧಿಗಳು ಹೌದಾದರೂ, ಚಿತ್ರದ ವಿಚಾರಕ್ಕೆ ಬಂದರೆ ಪಕ್ಕಾ ವೃತ್ತಿಪರರು. ಶೂಟಿಂಗ್, ಡೇಟ್ಸ್, ಟೆಕ್ನಾಲಜಿ ವಿಚಾರ ಬಂದಾಗ ಪಕ್ಕಾ ವ್ಯವಹಾರಸ್ಥರಂತೆಯೇ ಇರುತ್ತಾರಂತೆ. ಇದರಿಂದಾಗಿ ಚಿತ್ರದ ನಿರ್ಮಾಣಕ್ಕೆ ಅನುಕೂಲವಾಗುತ್ತೆ.ಕೆಲವೊಮ್ಮೆ ಇಬ್ಬರ ನಡುವಿನ ಬಾಂಧವ್ಯ, ಸಣ್ಣ ಪುಟ್ಟ ತಪ್ಪುಗಳನ್ನು ಅಡ್ಜಸ್ಟ್ ಮಾಡಿಕೊಂಡು ಹೋಗುವಂತೆ ಮಾಡುತ್ತೆ. ತಾರಕ್‍ನಲ್ಲೂ ಅಂಥಾ ಅನುಭವಗಳಾಗಿವೆ.
ಪ್ರಕಾಶ್ ಚಿತ್ರಕ್ಕೆ ನಿರ್ದೇಶಕರಷ್ಟೇ ಅಲ್ಲ, ಸಹ ನಿರ್ಮಾಪಕರೂ ಹೌದು. ಈ ಹಿಂದೆ ಶ್ರೀ ಮತ್ತು ಮಿಲನ ಚಿತ್ರದಲ್ಲೂ ಇದೇ ರೀತಿ ಒಂದಾಗಿದ್ದ ಬಾವ ಬಾಮೈದರ ಜೋಡಿ, 3ನೇ ಬಾರಿಗೆ ತಾರಕ್‍ನಲ್ಲಿ ಮತ್ತೆ ಒಂದಾಗಿದೆ.