` kiccha sudeepa - chitraloka.com | Kannada Movie News, Reviews | Image

kiccha sudeepa

  • ಮೂರು ಕಥೆಗೆ ಯೆಸ್ ಎಂದ ಸುದೀಪ್.. ಫಸ್ಟ್ ಯಾವುದು..?

    ಮೂರು ಕಥೆಗೆ ಯೆಸ್ ಎಂದ ಸುದೀಪ್.. ಫಸ್ಟ್ ಯಾವುದು..?

    ಸುದೀಪ್ ಮಂದಿನ ಸಿನಿಮಾ ಯಾವುದು..? ಹೊಸ ಸಿನಿಮಾ ಯಾರು ಡೈರೆಕ್ಟ್ ಮಾಡ್ತಾರೆ..? ಪ್ರಯೋಗಕ್ಕೆ ಹೋಗ್ತಾರಾ..? ಕಮಷಿಯಲ್ ಸಿನಿಮಾ ಮಾಡ್ತಾರಾ..? ಕನ್ನಡಕ್ಕಷ್ಟೇ ಮಾಡ್ತಾರಾ..? ಪ್ಯಾನ್ ಇಂಡಿಯಾ ಸಿನಿಮಾ ಮಾಡ್ತಾರಾ..? ಹೀಗೆ ಹಲವು ತಿಂಗಳಿಂದ ಪ್ರೇಕ್ಷಕರನ್ನು ಕಾಡುತ್ತಿದ್ದ ಪ್ರಶ್ನೆಗೆ ಸುದೀಪ್ ಉತ್ತರ ಕೊಟ್ಟಿದ್ದಾರೆ. ತಡೆದ ಮಳೆ ಜಡಿದು ಬಂದಂತೆ ಆಗಿದೆ.

    ವಿಕ್ರಾಂತ್ ರೋಣ ಹಾಗೂ ಕಬ್ಜ ನಂತರ ಕಿಚ್ಚ ಸುದೀಪ್ ಯಾವ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ? ಈ ಪ್ರಶ್ನೆಗೆ ಇನ್ನೂ ಅಧಿಕೃತ ಉತ್ತರ ಸಿಕ್ಕಿಲ್ಲ. ಆದರೆ, ಮೂರು ಸಿನಿಮಾಗಳನ್ನ ಒಪ್ಪಿಕೊಂಡಿರುವುದಾಗಿ ಕಿಚ್ಚ ಸುದೀಪ್ ಹೇಳಿದ್ದಾರೆ.  ಮೂರು ಕಥೆಗಳನ್ನ ಫೈನಲ್ ಮಾಡಿರುವ ಬಗ್ಗೆ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.

    ಕಿಚ್ಚ 46 ಕುರಿತಾಗಿ ನಿಮ್ಮ ಟ್ವೀಟ್ಗಳು ಮತ್ತು ಮೀಮ್ಗಳು ನನಗೆ ಅರ್ಥವಾಗಿದೆ. ಧನ್ಯವಾದಗಳು. ಈಗ ಇದೇ ವಿಚಾರದ ಕುರಿತಾಗಿ ಈ ಸಣ್ಣ ಸ್ಪಷ್ಟೀಕರಣವನ್ನು ನೀಡಲು ನಿರ್ಧರಿಸಿದ್ದೇನೆ. ನಾನು ವಿರಾಮ ತೆಗೆದುಕೊಂಡಿದ್ದೆ. ಇದು ನನ್ನ ವೃತ್ತಿಜೀವನದ ಮೊಟ್ಟಮೊದಲ ವಿರಾಮ. ವಿಕ್ರಾಂತ್ ರೋಣ ಚಿತ್ರದ ನಂತರ ನನಗೆ ಬ್ರೇಕ್ ಬೇಕಾಗಿತ್ತು. ತೀವ್ರಕರವಾದ ಕೋವಿಡ್ ಮತ್ತು ಸುದೀರ್ಘವಾದ ವೇಳಾಪಟ್ಟಿ ಹೊಂದಿದ್ದ ಬಿಗ್ ಬಾಸ್ ವಿಕ್ರಾಂತ್ ರೋಣ’ ಚಿತ್ರದಲ್ಲಿ ಭಾಗಿಯಾಗುವುದು ಶ್ರಮದಾಯಕವಾಗಿತ್ತು. ಆದ್ದರಿಂದ ಈ ವಿರಾಮ ನನಗೆ ಅಗತ್ಯವಿತ್ತು. ನನ್ನ ವಿರಾಮ ಆನಂದಿಸಲು ಉತ್ತಮ ಮಾರ್ಗವೆಂದರೆ ನನಗೆ ಸಂತೋಷ ನೀಡುವ ಕೆಲಸವನ್ನು ಮಾಡುವುದು. ಕ್ರಿಕೆಟ್ ಖಂಡಿತವಾಗಿಯೂ ನನಗೆ ವಿಶ್ರಾಂತಿ ನೀಡುವ ಕ್ರೀಡೆ. ಆ ವಲಯದಲ್ಲಿ ನಾನು ಸಂತೋಷವಾಗಿರುತ್ತೇನೆ. ಏಅಅ ಮತ್ತು ಏಃ ಜೊತೆಗೆ ಸಮಯ ಕಳೆದಿದ್ದು ನನಗೆ ಖುಷಿ ನೀಡಿದೆ. ಇದರಿಂದ ನನಗೆ ಖಂಡಿತವಾಗಿಯೂ ಉತ್ತಮ ವಿರಾಮ ಸಿಕ್ತು ಎಂದು ನಾನು ಹೇಳಬಲ್ಲೆ. ಆದರೂ, ನನ್ನ ಸ್ಕ್ರಿಪ್ಟ್ ಚರ್ಚೆಗಳು ನನ್ನ ದೈನಂದಿನ ಜೀವನದ ಒಂದು ಭಾಗವಾಗಿತ್ತು. ಮೂರು ಸ್ಕ್ರಿಪ್ಟ್ಗಳನ್ನು ಅಂತಿಮಗೊಳಿಸಿದ್ದೇನೆ… ಅಂದರೆ ಮೂರು ಚಿತ್ರಗಳನ್ನು ಅಂತಿಮಗೊಳಿಸಲಾಗಿದೆ. ಎಲ್ಲಾ ಮೂರು ಸ್ಕ್ರಿಪ್ಟ್ಗಳಿಗೆ ಭಾರೀ ಪ್ರಮಾಣದ ಹೋಮ್ ವರ್ಕ್ನ ಬೇಡಿಕೆಯಿರುವುದರಿಂದ ಸಿದ್ಧತೆಗಳು ನಡೆಯುತ್ತಿವೆ. ಆಯಾ ತಂಡಗಳು ಹಗಲಿರುಳು ಶ್ರಮಿಸುತ್ತಿವೆ ಮತ್ತು ಶೀಘ್ರದಲ್ಲೇ ಅಧಿಕೃತವಾಗಿ ಅನೌನ್ಸ್ ಮಾಡ್ತಾರೆ. ಪ್ರೀತಿ ಹಾಗು ಅಪ್ಪುಗೆಗಳೊಂದಿಗೆ ನಿಮ್ಮ  ಕಿಚ್ಚ ಎಂದು ಬರೆದುಕೊಂಡಿದ್ದಾರೆ ಕಿಚ್ಚ ಸುದೀಪ್.

    ಆ ಮೂರು ಸಿನಿಮಾ ಯಾವುದು..? ಒಂದೇನೋ ಅನೂಪ್ ಭಂಡಾರಿಯವರ ಜೊತೆ ಎನ್ನಲಾಗಿದೆ. ಆದರೆ ಡೈರೆಕ್ಟರ್ಸ್ ಯಾರು..? ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಕೆಆರ್‍ಜಿ, ಹೊಂಬಾಳೆಯವರ ಜೊತೆ ಸಿನಿಮಾ ಮಾಡುತ್ತಿದ್ದು, ಶೀಘ್ರದಲ್ಲೇ ಎಲ್ಲವೂ ಗೊತ್ತಾಗಲಿದೆ.

  • ಮೊದಲ ದಿನವೇ 10 ಕೋಟಿ ಕ್ಲಬ್ ಸೇರಿದ ಪೈಲ್ವಾನ್

    pailwan joins 10 crore club on first day itself

    5 ಭಾಷೆಗಳಲ್ಲಿ ರಿಲೀಸ್ ಆಗಿ ಎಲ್ಲೆಡೆಯಿಂದ ಮೆಚ್ಚುಗೆ ಸ್ವೀಕರಿಸುತ್ತಿರುವ ಸಿನಿಮಾ ಪೈಲ್ವಾನ್. ಕ್ಲಾಸ್ ಮತ್ತು ಮಾಸ್.. ಎರಡೂ ವರ್ಗದ ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಏಕಕಾಲಕ್ಕೆ ಶಹಬ್ಬಾಸ್ ಎನಿಸಿಕೊಂಡಿರುವ ಪೈಲ್ವಾನ್ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿದೆ. 10 ಕೋಟಿ ಕ್ಲಬ್ ಸೇರಿದೆ.

    ಇದು ಕನ್ನಡದ ಮಟ್ಟಿಗೆ ದಾಖಲೆಯೇ ಸರಿ. ಆದರೆ, ಮೊದಲ ದಿನದ ಅತೀ ಹೆಚ್ಚು ಕಲೆಕ್ಷನ್ ದಾಖಲೆ ಈಗಲೂ ಸುದೀಪ್-ಶಿವಣ್ಣ ನಟಿಸಿದ್ದ ದಿ ವಿಲನ್ ಚಿತ್ರದ ಹೆಸರಲ್ಲಿಯೇ ಇದೆ. ಅದು ಫಸ್ಟ್ ಡೇ 20 ಕೋಟಿ ಕಲೆಕ್ಷನ್ ಮಾಡಿತ್ತು.

    ಕಲೆಕ್ಷನ್ ಭರ್ಜರಿಯಾಗಿ ಆಗಿದೆ ಎನ್ನುವುದು ಸತ್ಯ. ಆದರೆ ಎಷ್ಟು ಎನ್ನುವುದನ್ನು ಈಗಲೇ ಹೇಳುವುದು ಸಾಧ್ಯವಿಲ್ಲ. ಪಕ್ಕಾ ಲೆಕ್ಕ ಸಿಗೋಕೆ ಇನ್ನೂ ಟೈಂ ಬೇಕು. ಎಲ್ಲ ಭಾಷೆಗಳಲ್ಲೂ ಪಾಸಿಟಿವ್ ರಿಯಾಕ್ಷನ್ ಸಿಕ್ಕಿದೆ. ಒಂದು ವಾರ ಹೀಗೆಯೇ ಕಂಟಿನ್ಯೂ ಆದರೆ, ಹಾಕಿದ ಬಂಡವಾಳ ನಮ್ಮ ಕೈ ಸೇರಲಿದೆ ಎಂದಿದ್ದಾರೆ ನಿರ್ದೇಶಕ ಕೃಷ್ಣ. ಚಿತ್ರಕ್ಕೆ ಅವರ ಪತ್ನಿ ಸ್ವಪ್ನಾ ಕೃಷ್ಣ ಅವರೇ ನಿರ್ಮಾಪಕಿ.

    ಅಂದಹಾಗೆ ಪೈಲ್ವಾನ್ ಚಿತ್ರಕ್ಕೆ ಸುಮಾರು 45 ಕೋಟಿ ಖರ್ಚಾಗಿದೆಯಂತೆ.

     

  • ಯಂಗ್ ಅಂಬಿಗೆ ಶೃತಿ ಹರಿಹರನ್ ಜೋಡಿ

    Ambi Ninge Vayassaitho

    ಅಂಬಿ ನಿಂಗೆ ವಯಸ್ಸಾಯ್ತೋ.. ಕಿಚ್ಚ ಕ್ರಿಯೇಷನ್ಸ್‍ನಲ್ಲಿ ಬರುತ್ತಿರುವ ಚಿತ್ರದಲ್ಲಿ ಕಿಚ್ಚ ಸುದೀಪ್, ಯಂಗ್ ಅಂಬರೀಷ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಯುವಕ ಅಂಬರೀಷ್ ಪಾತ್ರದಲ್ಲಿ ನಟಿಸುತ್ತಿರುವುದು ಸುದೀಪ್.

    ಸೀನಿಯರ್ ಅಂಬರೀಷ್‍ಗೆ ಸುಹಾಸಿನಿ ಜೋಡಿಯಾಗಿದ್ದರೆ, ಜ್ಯೂನಿಯರ್ ಅಂಬರೀಷ್‍ಗೆ ಯಾರು ಜೋಡಿ ಅನ್ನೋ ಪ್ರಶ್ನೆ ಇತ್ತು. ಆ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಸುದೀಪ್‍ಗೆ ಜೋಡಿಯಾಗುತ್ತಿರುವುದು ಶೃತಿ ಹರಿಹರನ್.

    Related Articles :-

    Shruthi Haran In Ambi Ninge Vayassaitho

  • ಯಾವ ಭಾಷೆ ದೊಡ್ಡದು..? : ಸುದೀಪರಿಂದ ಮೋದಿ.. ಮೋದಿಯಿಂದ ಅಕ್ಷಯ್ ಕುಮಾರ್..ವರೆಗೆ..

    ಯಾವ ಭಾಷೆ ದೊಡ್ಡದು..? : ಸುದೀಪರಿಂದ ಮೋದಿ.. ಮೋದಿಯಿಂದ ಅಕ್ಷಯ್ ಕುಮಾರ್..ವರೆಗೆ..

    ಯಾವ ಭಾಷೆ ದೊಡ್ಡದು.. ಯಾವುದೂ ಚಿಕ್ಕದು.. ಯಾವ ಭಾಷೆ ಕಲಿಯೋದು.. ಯಾವುದ್ ಬಿಡೋದು..

    ಜಯಭಾರತಿ ಮಡಿಲಲ್ಲಿವೆ ನೂರಾರು ಭಾಷೆಗಳು.. ನೂರಾರಲು ಗುರಿಯಿಲ್ಲದ ನೂರಾರು ಕವಲುಗಳು.. ನೋಟಿನಲ್ಲಿ ಕಾಣುವುದು 14 ರಾಜ್ಯಗಳ ಲಿಪಿಗಳು.. ಕನ್ನಡಕ್ಕೆ ಅಲ್ಲಿಹುದು 4ನೆಯ ದೊಡ್ಡ ಸ್ಥಾನಮಾನಗಳು..

    ಹೀಗೆ ಬರೋದು ಸಾಮ್ರಾಟ್ ಚಿತ್ರದ ಹಾಡಿನ ಸಾಲು. ಪುಷ್ಪ.. ಬೆನ್ನಲ್ಲೇ ಆರ್.ಆರ್.ಆರ್. .. ಜೊತೆಯಲ್ಲೇ ಬಂದ ಕೆಜಿಎಫ್ ಚಾಪ್ಟರ್ 2. ಚಿತ್ರಗಳ ಭರ್ಜರಿ ಯಶಸ್ಸು ಯಾವ ಇಂಡಸ್ಟ್ರಿ ದೊಡ್ಡದು.. ಯಾವುದು ಚಿಕ್ಕದು ಎಂಬ ವಿವಾದ ಹುಟ್ಟುಹಾಕಿತ್ತು. ಈ ಹಿಂದೆ ಹಿಂದಿ ಭಾಷಾ ಚಿತ್ರರಂಗದವರು ನಡೆದುಕೊಂಡಿದ್ದ ರೀತಿ ನೆನಪಿದ್ದವರಿಗೆ ಇದು ವಿಚಿತ್ರ ಸಂತೋಷವನ್ನೂ ಕೊಟ್ಟಿತ್ತು. ಜೊತೆಗೆ ಹಿಂದಿ ನ್ಯಾಷನಲ್ ಲಾಂಗ್ವೇಜು ಎಂಬ ಸುಳ್ಳನ್ನು ಸತ್ಯದ ಮೇಲೆ ಹೊಡೆದಂತೆ ಹೇಳುತ್ತಿದ್ದವರಿಗೂ ಇದು ಚುರುಕು ಮುಟ್ಟಿಸಿತ್ತು. ನಾನು ದಕ್ಷಿಣದ ಯಾವುದೇ ಭಾಷೆಯ ಚಿತ್ರದಲ್ಲಿ ನಟಿಸೋದಿಲ್ಲ ಎಂಬ ಜಾನ್ ಅಬ್ರಹಾಂ ಅಹಂಕಾರದ ಹೇಳಿಕೆಗೂ ಇಂತಹ ಭ್ರಮೆಗಳೇ ಕಾರಣ.

    ಹಿಂದಿ ರಾಷ್ಟ್ರಭಾಷೆಯೇನಲ್ಲ ಎಂಬ ಸುದೀಪ್ ಹೇಳಿಕೆ, ಅದಕ್ಕೆ ಅಜಯ್ ದೇವಗನ್ ಕೊಟ್ಟ ತಿರುಗೇಟು.. ಮೆಗಾಸ್ಟಾರ್ ಚಿರಂಜೀವಿ ಹೇಳಿದ ಅವಮಾನದ ಕಥೆ.. ಕಂಗನಾ ರಾವತ್ ವಿಚಿತ್ರ ಸ್ಟೇಟ್‍ಮೆಂಟು.. ವಿವಾದವನ್ನು ದೊಡ್ಡದಾಗಿ ಮಾಡಿತ್ತು. ಹಿಂದಿಯವರಿಗೆ ಸುದೀಪ್ ಅವರಿಗೆ ಸಿಕ್ಕಂತಹ ಬೆಂಬಲ ಸಿಗಲಿಲ್ಲ. ಅಷ್ಟು ಹೊತ್ತಿಗೆ ಅಜಯ್ ದೇವಗನ್ ವಿಷಾದ ವ್ಯಕ್ತಪಡಿಸಿದರಾದರೂ.. ಬಿಜೆಪಿಯ ಕೆಲವು ರಾಜಕೀಯ ನಾಯಕರು, ಅರ್ಜುನ್ ರಾಂಪಾಲ್ ರಂತಹ ನಟರು ವಿವಾದವನ್ನು ಜೀವಂತವಾಗಿಟ್ಟರು. ವಿವಾದ ಬೆಳೆಯುತ್ತಿದ್ದಂತೆಲ್ಲ ಮನೋಜ್ ಬಾಜಪೇಯಿ, ಸೋನು ನಿಗಮ್, ಮಾಧವನ್, ಸಿದ್ದಾರ್ಥ.. ಮೊದಲಾದವರು ರಾಷ್ಟ್ರೀಯ ಮಟ್ಟದಲ್ಲಿ ಸುದೀಪ್ ಬೆಂಬಲಕ್ಕೆ ಬಂದರೆ, ಸಂಪೂರ್ಣ ಕನ್ನಡ ಚಿತ್ರರಂಗವೇ ಸುದೀಪ್ ಬೆನ್ನಿಗಿತ್ತು. ಅದಕ್ಕೆ ಒಂದು ಹಂತದ ಬ್ರೇಕ್ ಹಾಕಿರೋದು ಪ್ರಧಾನಿ ನರೇಂದ್ರ ಮೋದಿ.

    ಯಾವುದೇ ಭಾಷೆ ಮೇಲಲ್ಲ. ಯಾವುದೇ ಭಾಷೆ ಕೀಳೂ ಅಲ್ಲ. ಎಲ್ಲ ಭಾಷೆಗಳೂ ಪೂಜನೀಯ. ಭಾರತದ ಸಂಸ್ಕøತಿ ಇರುವುದೇ ಈ ಪ್ರಾದೇಶಿಕ ಭಾಷೆಗಳಲ್ಲಿ ಎನ್ನುವ ಮೂಲಕ ನರೇಂದ್ರ ಮೋದಿ ಭಾಷಾ ಭಾವೈಕ್ಯತೆಯ ಸಂದೇಶ ಸಾರಿದ್ದರು. ಸುದೀಪ್ ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಹೇಳಿದ್ದರು. ಈಗ ಅಕ್ಷಯ್ ಕುಮಾರ್ ಮಾತನಾಡಿದ್ದಾರೆ.

    ಬ್ರಿಟಿಷರು ಭಾರತವನ್ನು ಒಡೆದಿದ್ದೇ ಇಂತಹವುಗಳಿಂದ. ಬ್ರಿಟಿಷರನ್ನು ಓಡಿಸಿದ ನಂತರವೂ ನಾವು ಇನ್ನೂ ಪಾಠ ಕಲಿತಿಲ್ಲ. ಮೊದಲಿಗೆ ಉತ್ತರ ಭಾರತ, ದಕ್ಷಿಣ ಭಾರತ ಎನ್ನುವುದನ್ನು ನಾವು ಮೊದಲು ಬಿಡಬೇಕು. ಚಿತ್ರರಂಗ ಎಂದರೆ ಎಲ್ಲರೂ ಒಂದೇ. ಇಷ್ಟಕ್ಕೂ ಇಲ್ಲಿನ ಚಿತ್ರಗಳು ಸಕ್ಸಸ್ ಆದಾಗ, ನಮಗೆ ಇಷ್ಟವಾದಾಗ ಅವುಗಳನ್ನು ರೀಮೇಕ್ ಮಾಡಿದರೆ ತಪ್ಪೇನಿದೆ. ಚಿತ್ರರಂಗ ಒಂದೇ ಅಲ್ಲವೇ. ಮೊದಲು ದಕ್ಷಿಣ ಭಾರತ ಚಿತ್ರರಂಗ, ಉತ್ತರ ಭಾರತ ಚಿತ್ರರಂಗ ಅನ್ನೋದನ್ನು ಬಿಡೋಣ ಎಂದಿದ್ದಾರೆ ಅಕ್ಷಯ್ ಕುಮಾರ್.

    ವಿವಾದ ಇಲ್ಲಿಗೇ ಮುಗಿಯುತ್ತಾ..? ಗೊತ್ತಿಲ್ಲ..

  • ಯೂ ಟ್ಯೂಬ್‍ನಿಂದ ಕೋಟಿಗೊಬ್ಬ 3 ಟೀಸರ್ ಡಿಲೀಟ್

    kotigobba 3 teaser removed from yourtube

    ಇತ್ತೀಚೆಗೆ ರಿಲೀಸ್ ಆಗಿ ಸುದೀಪ್ ಅಭಿಮಾನಿಗಳ ಜೋಶ್ ಹೆಚ್ಚಿಸಿದ್ದ ಕೋಟಿಗೊಬ್ಬ 3 ಚಿತ್ರದ ಟೀಸರ್ ಯೂಟ್ಯೂಬ್‍ನಿಂದ ನಾಪತ್ತೆಯಾಗಿದೆ. ಅರೆ.. ಏನಿದು.. ಏಕೆ ಹೀಗಾಯ್ತು.. ಎಂದು ಹುಡುಕಿದರೆ ಸಿಗುತ್ತಿರುವ ಉತ್ತರ ಮುಂಬೈನ ವೈಬ್ರೆಂಟ್ ಲಿಮಿಟಿಡ್ ಕಂಪೆನಿ.

    ಕೋಟಿಗೊಬ್ಬ 3 ಚಿತ್ರವನ್ನು ಪೋಲೆಂಡ್‍ನಲ್ಲಿ ಶೂಟಿಂಗ್ ಮಾಡಲಾಗಿದೆ. ಅಲ್ಲಿ ಶೂಟ್ ಮಾಡಿದ ದೃಶ್ಯಗಳ ಹಕ್ಕುಗಳು ವೈಬ್ರೆಂಟ್ ಕಂಪೆನಿ ಹೆಸರಲ್ಲಿವೆಯಂತೆ. ನಮಗೆ ಬಾಕಿ ಕೊಟ್ಟಿಲ್ಲ ಎಂದು ತಗಾದೆ ತೆಗೆದಿದ್ದ ಕಂಪೆನಿ, ಈಗ ಟೀಸರ್‍ಗೆ ಬ್ರೇಕ್ ಹಾಕಿಸಿದೆ.

    ಇದು ಹಣಕ್ಕಾಗಿ ನಡೆಯುತ್ತಿರುವ ಸಂಚು. ಕಂಪೆನಿಯ ಅಜಯ್ ಪಾಲ್ ನಮಗೇ ಮೋಸ ಮಾಡಿದ್ದಾನೆ. ಆತನ ವಿರುದ್ಧ ಕಾನೂನು ಹೋರಾಟ ನಡೆಸುತ್ತಿದ್ದೇವೆ. ಶೀಘ್ರದಲ್ಲೇ ಕೋಟಿಗೊಬ್ಬ 3 ಟೀಸರ್ ಮತ್ತೆ ಯೂಟ್ಯೂಬ್‍ಗೆ ಬರಲಿದೆ ಎಂದಿದ್ದಾರೆ ನಿರ್ಮಾಪಕ ಸೂರಪ್ಪ ಬಾಬು.

  • ಯೆಲ್ಲೋ ಬೋರ್ಡ್`ಗೀಗ ಕಿಚ್ಚನ ಬಲ

    ಯೆಲ್ಲೋ ಬೋರ್ಡ್`ಗೀಗ ಕಿಚ್ಚನ ಬಲ

    ಯೆಲ್ಲೋ ಬೋರ್ಡ್ ಚಿತ್ರಕ್ಕೆ ಆರಂಭದಲ್ಲೇ ಅಪ್ಪು ಬೆಂಬಲ ಸಿಕ್ಕಿತ್ತು. ಚಿತ್ರಕ್ಕೊಂದು ಹಾಡನ್ನೂ ಹಾಡಿ ಹೊಸಬರ ಬೆನ್ನು ತಟ್ಟಿದ್ದರು ಪುನೀತ್. ಸಂಭಾವನೆ ಪಡೆಯದೇ ಚಿತ್ರದ ಟೈಟಲ್ ಸಾಂಗ್ ಹಾಡಿದ್ದರು. ಈಗ ಕಿಚ್ಚ ಸುದೀಪ್ ಯೆಲ್ಲೋ ಬೋರ್ಡ್ ತಂಡದ ಬೆನ್ನು ತಟ್ಟಿದ್ದಾರೆ.

    ಇದು ನನ್ನ ಮಗನ ಚಿತ್ರವಿದ್ದಂತೆ ಅನ್ನೋ ಅರ್ಥದಲ್ಲಿ ಮಾತನಾಡಿದ ಸುದೀಪ್, ಚಿತ್ರದ ಹೀರೋ ಪ್ರದೀಪ್ ಅವರ ಬೆನ್ನು ತಟ್ಟಿದ್ರು. ತ್ರಿಲೋಕ್ ರೆಡ್ಡಿ ನಿರ್ದೇಶನದ ಚಿತ್ರ ಇದೇ ವಾರ ತೆರೆಗೆ ಬರುತ್ತಿದೆ. ಟ್ಯಾಕ್ಸಿ ಚಾಲಕರ ಸುತ್ತಲೇ ಹೆಣೆದಿರುವ ಕಥೆಯಲ್ಲಿರೋದು ಸಸ್ಪೆನ್ಸ್ ಥ್ರಿಲ್ಲರ್ ಸ್ಟೋರಿಯಂತೆ.  ವಿಂಟೇಜ್ ಫಿಲಂಸ್‍ನ ನವೀನ್ ಚಿತ್ರದ ನಿರ್ಮಾಪಕ

  • ರಕ್ಕಮ್ಮ ಗ್ಯಾಂಗ್ ಹವಾ : ವಿಕ್ರಾಂತ್ ರೋಣದ ಉಳಿದ ಹಾಡುಗಳು ಯಾವುದು?

    ಕ್ಕಮ್ಮ ಗ್ಯಾಂಗ್ ಹವಾ : ವಿಕ್ರಾಂತ್ ರೋಣದ ಉಳಿದ ಹಾಡುಗಳು ಯಾವುದು?

    ಎಲ್ಲೆಲ್ಲೂ ರಕ್ಕಮ್ಮನದ್ದೇ ಸದ್ದು. ಲಾಲ್ ಬಾಗ್‍ಗೆ ಹೋದರೂ ರಕ್ಕಮ್ಮ. ನೈಸ್ ರಸ್ತೆಗೆ ಹೋದರೂ ರಕ್ಕಮ್ಮ. ರೀಲ್ಸ್ ತೆಗೆದರೆ ಅಲ್ಲೂ ರಕ್ಕಮ್ಮ. ಸೆಲಬ್ರಿಟಿಗಳನ್ನು ನೋಡಿದರೆ ಅವರದ್ದೂ ರಕ್ಕಮ್ಮ.. ಒಟ್ಟಿನಲ್ಲಿ ವಿಕ್ರಾಂತ್ ರೋಣದ ರಕ್ಕಮ್ಮ ಹಾಡು ನೋಡಿದವರಿಗೆ.. ಕೇಳಿದವರಿಗೆ.. ಕ್ರೇಜ್ ಅಲ್ಲ.. ಹುಚ್ಚು ಹಿಡಿಸಿದೆ. ಮಕ್ಕಳು, ದೊಡ್ಡವರೆನ್ನದೆ ಎಲ್ಲರೂ ಹಾಡಿಗೆ ಕುಣಿಯುತ್ತಿದ್ದಾರೆ. 250ಕ್ಕೂ ಹೆಚ್ಚು ಮಕ್ಕಳು ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕಿರುವುದು ವಿಶೇಷ.

    ಸುದೀಪ್ ಅಭಿಮಾನಿಗಳಾದ ಬಾಲಾಜಿ ವಿಷ್ಣು ತಂಡ 250ಕ್ಕೂ ಹೆಚ್ಚು ಮಕ್ಕಳೊಂದಿಗೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಅಭಿಮಾನಿಗಳ ಜೊತೆ ಸಾರ್ವಜನಿಕರೂ ರಾ..ರಾ..ರಕ್ಕಮ್ಮ ಎಂದು ಕುಣಿದರು. ಈಗ ವಿಕ್ರಾಂತ್ ರೋಣದ ಉಳಿದ ಹಾಡುಗಳ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಚಿತ್ರತಂಡದ ಸದಸ್ಯರ ಪ್ರಕಾರ ರಾ..ರಾ.. ರಕ್ಕಮ್ಮನಂತೆಯೇ ಆ ಹಾಡುಗಳೂ ಗುಂಗು ಹಿಡಿಸುವಂತಿವೆ.

    ಹೇ ಫಕೀರಾ..

    ಗುಮ್ಮ ಬಂದ..

    ಚಿಕ್ಕಿ ಗೊಂಬೆ..

    ಲುಲ್ಲಾಬಿ ಹಾಡುಗಳು ಶೀಘ್ರದಲ್ಲೇ ಒಂದೊಂದೇ ರಿಲೀಸ್ ಆಗಲಿವೆ. ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತದ ರಾಯಭಾರಿಯಾಗಿದ್ದಾರೆ.

  • ರಕ್ತಬೀಜಾಸುರ ಪೈರಸಿ ವಿರುದ್ಧ ಪೈಲ್ವಾನ್ ಮಹಾಯುದ್ಧ

    pailwan movie producer files complaint against piracy criminals

    ಪೈರಸಿ ಕಾಟ ಸಿನಿಮಾ ರಂಗಕ್ಕೆ ಹೊಸದೇನಲ್ಲ. ಆದರೆ ಪೈಲ್ವಾನ್ ಎದುರಿಸುತ್ತಿರುವುದು ಅತಿ ದೊಡ್ಡ ಪೈರಸಿ ಯುದ್ಧ. ಎಷ್ಟರಮಟ್ಟಿಗೆ ಎಂದರೆ ಸಿನಿಮಾ ರಿಲೀಸ್ ಆದ ದಿನವೇ ರಾತ್ರಿ ಹೊತ್ತಿಗೆ 3 ಭಾಷೆಗಳಲ್ಲಿ ಪೈಲ್ವಾನ್ ಲೀಕ್ ಆಗಿತ್ತು. ಒನ್ಸ್ ಎಗೇಯ್ನ್ ಖಳನಾಯಕ ತಮಿಳು ರಾಕರ್ಸ್.

    ಇಷ್ಟಕ್ಕೂ ಇದನ್ನು ರಕ್ತಬೀಜಾಸುರ ಎಂದು ಕರೆದಿದ್ದಕ್ಕೆ ಕಾರಣವೂ ಇದೆ. ಇದುವರೆಗೆ ಪೈಲ್ವಾನ್ ಚಿತ್ರವನ್ನು ಅಪ್‍ಲೋಡ್ ಮಾಡಿದ್ದ 300ಕ್ಕೂ ಹೆಚ್ಚು ಲಿಂಕ್‍ಗಳನ್ನು ಡಿಲೀಟ್ ಮಾಡಲಾಗಿದೆ. ಕೋಟಿ ಕೋಟಿ ಸುರಿದು ಚಿತ್ರ ನಿರ್ಮಿಸಿದವರು ಪೈರಸಿ ವಿರುದ್ಧ ಹೋರಾಡಲೇಬೇಕಾದ ಅನಿವಾರ್ಯತೆ ಇದೆ.

    ಪೈರಸಿ ತಡೆಗಾಗಿ ಇಷ್ಟೆಲ್ಲ ಕ್ರಮ ಕೈಗೊಂಡಿದ್ದರೂ ಪೊಲೀಸರಿಗೂ ದೂರು ಕೊಟ್ಟಿದ್ದಾರೆ ನಿರ್ಮಾಪಕಿ ಸ್ವಪ್ನಾ ಕೃಷ್ಣ. ಅಷ್ಟೇ ಅಲ್ಲ, ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಕೆಟ್ಟ ಯುದ್ಧಕ್ಕೂ ಫುಲ್ ಸ್ಟಾಪ್ ಇಡುವ ಪ್ರಯತ್ನ ಮಾಡಿದ್ದಾರೆ.

    `ದರ್ಶನ್ ಅಭಿಮಾನಿಗಳಿಗೂ ಸಿನಿಮಾ ಲೀಕ್ ಆಗಿದ್ದಕ್ಕೂ ಸಂಬಂಧವಿಲ್ಲ. ಪೈರಸಿ ಮಾಡಿದವರು ದರ್ಶನ್ ಅಭಿಮಾನಿಗಳಲ್ಲ' ಎಂದು ಸ್ಪಷ್ಟನೆ ಕೊಟ್ಟಿರುವ ಸ್ವಪ್ನಾ ಕೃಷ್ಣ, ಸೈಬರ್ ಪೊಲೀಸರಿಗೆ ದೂರನ್ನೂ ಕೊಟ್ಟಿದ್ದಾರೆ.

  • ರವಿಚಂದ್ರನ್ ಮನೆಗೆ ಹೋದ ಕುಮಾರ್ ವರ್ಸಸ್ ಸುದೀಪ್ ಸಮರ

    ರವಿಚಂದ್ರನ್ ಮನೆಗೆ ಹೋದ ಕುಮಾರ್ ವರ್ಸಸ್ ಸುದೀಪ್ ಸಮರ

    ಸುದೀಪ್ ಮತ್ತು ಎನ್.ಕುಮಾರ್ ನಡುವಿನ ಸಮರ ಇದೀಗ ಫಿಲ್ಮ್ ಚೇಂಬರ್ ಹಂತವನ್ನು ದಾಟಿ ರವಿಚಂದ್ರನ್ ಮನೆ ಬಾಗಿಲು ತಲುಪಿದೆ. ಈ ನಡುವೆ ಕುಮಾರ್ ಬೆನ್ನಿಗೆ ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು, ನಿರ್ಮಾಪಕ ಯೋಗಿ ದ್ವಾರಕೀಶ್ ಕೂಡಾ ಸೇರಿಕೊಂಡಿದ್ದಾರೆ. ಈ ಮೊದಲು ಸುರೇಶ್ ಕೂಡಾ ಕುಮಾರ್ ಬೆನ್ನಿಗೆ ನಿಂತಿದ್ದರು. ಕುಮಾರ್ ಜೊತೆ ಮಾತುಕತೆ ನಡೆಸಿದ ನಂತರ ರವಿಚಂದ್ರನ್, ವಿಷಯ ಇತ್ಯರ್ಥಪಡಿಸುವ ಭರವಸೆ ಕೊಟ್ಟಿದ್ದಾರೆ.

    ಸುದೀಪ್ ಮತ್ತು ಕುಮಾರ್ 20 ವರ್ಷದಿಂದ ಪರಿಚಯ ಇಟ್ಟುಕೊಂಡವರು. ಅವರಿಬ್ಬರದ್ದು ಒಳ್ಳೆ ಗೆಳೆತನ, ಸಡನ್ ಆಗಿ ಬೆರಳು ತೋರಿಸಿದ್ದರಿಂದ ಸುದೀಪ್ ಗೆ ಬೇಜಾರಾಗಿದೆ, ಎರಡು ಕಡೆ ಸಹನೆ ಮೀರಿದೆ. ಹೀಗಾಗಿ ಈ ರೀತಿ ಆಗಿದೆ, ಧರಣಿ ಕುಳಿತವರು ಎದ್ದೇಳಬೇಕು ಆಮೇಲೆ ಏನು ಮಾಡಬೇಕು ಎಂದು ನಾನು ನಿರ್ಧಾರ ಮಾಡ್ತೀನಿ, ಕುಮಾರ್ ಅವರದ್ದು ತಪ್ಪಿದ್ದರೆ ಕರೆಸಿ ಮಾತಾಡ್ತೀನಿ, ಸುದೀಪ್ ಅವರದ್ದು ತಪ್ಪಾಗಿದ್ರೆ ನಾನೇ ಹೋಗಿ ಸುದೀಪ್ ಬಳಿ ಮಾತಾಡ್ತೀನಿ ಎಂದಿದ್ದಾರೆ ರವಿಚಂದ್ರನ್.

    ಶಿವಣ್ಣನೇ ಲೀಡರ್, ನಮಗೆಲ್ಲ ಮೊದಲು ರಾಜ್ಕುಮಾರ್ ಕುಟುಂಬವೇ ಮೊದಲು. ರಾಜ್ಕುಮಾರ್ ಮನೆ ನಮಗೆ ಹೆಡ್ ಆಫೀಸ್ ಇದ್ದ ಹಾಗೆ. ಅವರು ಎನ್ ಹೇಳಿದರೆ ಅದೇ ಅಂತಿಮ, ಶಿವಣ್ಣ ಈ ವಿಷಯಕ್ಕೆ ಬಂದರೆ ಅರ್ಧ ಸಮಸ್ಯೆ ಕ್ಲಿಯರ್ ಆಗುತ್ತೆ ಎಂದಿರುವ ರವಿಚಂದ್ರನ್, ಸುದೀಪ್ ತಮ್ಮ ಮಗನಿದ್ದಂತೆ. ನನ್ನ ಮಗನನ್ನ ಬಿಟ್ಟು ಕೋಡೋದಿಲ್ಲ. ಹೀಗಾಗಿ ಮಾತನಾಡುವುದು ಕಷ್ಟ. ಕುಮಾರ್ ಕೂಡಾ ನನಗೆ ಮೊದಲಿನಿಂದಲೂ ಗೊತ್ತು ಎಂದಿದ್ದಾರೆ.

    ಎಲ್ಲರೂ ಗೊತ್ತಿರುವವರೇ, ನನ್ನ ಮನೆಯವರೇ. ಎಲ್ಲರೂ ಸ್ವಲ್ಪ ಕೂಲಾಗಿ ಬಂದರೆ ಪರಿಶೀಲನೆ ಮಾಡುತ್ತೇನೆ. ದಾಖಲೆಗಳನ್ನು ಕೂಡಾ ನೋಡುತ್ತೇನೆ. ಮೊದಲು ಪ್ರತಿಭಟನೆ ಬಿಡಿ, ಆಮೇಲೆ ನೋಡೋಣ ಎಂದು ಹೇಳಿದ್ದಾರೆ ರವಿಚಂದ್ರನ್

  • ರವಿಚಂದ್ರನ್ ಮನೆಯಲ್ಲಿ ಸಂಧಾನ : ಸುದೀಪ್, ಕುಮಾರ್ ನಡುವೆ ಮಾತುಕತೆ

    ರವಿಚಂದ್ರನ್ ಮನೆಯಲ್ಲಿ ಸಂಧಾನ : ಸುದೀಪ್, ಕುಮಾರ್ ನಡುವೆ ಮಾತುಕತೆ

    ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಮನೆಯೇ ಈಗ ಫಿಲ್ಮ್ ಚೇಂಬರ್ ಆಗಿದೆ. ಕಿಚ್ಚ ಸುದೀಪ್ ಮತ್ತು ಎನ್.ಕುಮಾರ್ ನಡುವಿನ ಸಂಘರ್ಷವನ್ನು ಬಗೆಹರಿಸಲು ರವಿಚಂದ್ರನ್ ಬಂದಿದ್ದಾರೆ. ರವಿಚಂದ್ರನ್ ಮನೆಯಲ್ಲೇ ಸಂಧಾನ ಸಭೆ ನಡೆಯುತ್ತಿದ್ದು, ಮೊದಲ ಹಂತದಲ್ಲಿ ಸುದೀಪ್ ಮತ್ತು ಕುಮಾರ್ ನಡುವೆ ಪರಸ್ಪರ ಮಾತನಾಡುವಂತೆ ಮಾಡಿದ್ದಾರೆ. ಅದೇ ತಮ್ಮ ಮೊದಲ ಟಾಸ್ಕ್ ಎಂದು ಹೇಳಿಕೊಂಡಿದ್ದ ರವಿಚಂದ್ರನ್, ಮೊದಲ ಗುರಿ ಈಡೇರಿದೆ. ಆದರೆ ವಿವಾದ ಅಂತ್ಯವನ್ನೇನೂ ಕಂಡಿಲ್ಲ.

    ಸತತ 7 ಗಂಟೆಗಳ ಕಾಲ ನಡೆದ ಸಂಧಾನ ಸಭೆಯಲ್ಲಿ ಸುದೀಪ್, ಎಂಎನ್ ಕುಮಾರ್  ತಮ್ಮ-ತಮ್ಮ  ವಾದ ಮಂಡಿಸಿದ್ದಾರೆ. ರವಿಚಂದ್ರನ್ ಅವರ ಹೊಸಕೇರೆಹಳ್ಳಿ ಮನೆಯಲ್ಲಿ ನಡೆದ ಸಭೆಯಲ್ಲಿ ಸುದೀಪ್, ಎಂಎನ್ ಕುಮಾರ್ ಜೊತೆ ರಾಕ್ ಲೈನ್ ವೆಂಕಟೇಶ್, ಜಾಕ್ ಮಂಜು, ಭಾ.ಮ.ಹರೀಶ್, ಉಮೇಶ್  ಬಣಕಾರ್ ಅವರುಗಳೂ ಸಭೆಯಲ್ಲಿ ಭಾಗವಹಿಸಿದ್ದರು. ಶಿವರಾಜ್ ಕುಮಾರ್ ಸಭೆಗೆ ಬರಲು ಸಾಧ್ಯವಾಗಲಿಲ್ಲ. ಹೈದರಾಬಾದ್ನಲ್ಲಿ ಚಿತ್ರೀಕರಣದ ಕೆಲಸದಲ್ಲಿ ಬ್ಯುಸಿ ಇದ್ದರು. ಆದರೆ ಸಭೆಯ ಸಂಪೂರ್ಣ ಮಾಹಿತಿ ಅವರಿಗೂ ಇತ್ತು ಎನ್ನಲಾಗಿದೆ. ಆದರೆ ಸಭೆ ಯಾವುದೇ ಒಂದು ನಿರ್ಣಯಕ್ಕೆ ಬರಲು ಸಾಧ್ಯವಾಗಲಿಲ್ಲ.

    ಜುಲೈ 23 ರಂದು ಮತ್ತೊಂದು ಸುತ್ತಿನ ಸಭೆ ನಡೆಯಲಿದೆ.  ಅಂದು ಅಂತಿಮ ತೀರ್ಮಾನವನ್ನು ಸುದೀಪ್ ಹಾಗೂ ಎಂಎನ್ ಕುಮಾರ್ ಅವರ ಎದುರು ರವಿಚಂದ್ರನ್ ಒಂದು ನಿರ್ಧಾರ ಮುಂದಿಡುತ್ತಾರೆ. ಅಷ್ಟೇ ಅಲ್ಲ, ಸಭೆಯ ನಂತರ ಯಾವ ರೀತಿ ನಡೆದುಕೊಳ್ಳಬೇಕು ಎಂದು ಕೂಡಾ ಷರತ್ತು ಹಾಕುತ್ತಾರೆ ಎಂಬ ವರದಿಗಳಿವೆ.

  • ರಾಜಕುಮಾರಿಯ ಜೋಜೋ ಹಾಡು.. ಕೇಳಿದವರೆಲ್ಲ ಹಾಡಿದ್ರು ಲಾಲಿ..

    ರಾಜಕುಮಾರಿಯ ಜೋಜೋ ಹಾಡು.. ಕೇಳಿದವರೆಲ್ಲ ಹಾಡಿದ್ರು ಲಾಲಿ..

    ವಿಕ್ರಾಂತ್ ರೋಣ ಚಿತ್ರದ ಒಂದು ಹಾಡು ಈಗಾಗಲೇ ಸದ್ದು..ಸುದ್ದಿ..ಮಾಡಿ ಪಡ್ಡೆ ಹೈಕಳ ಡೇ&ನೈಟ್ ಸಾಂಗ್ ಆಗಿದೆ. ರಕ್ಕಮ್ಮ ಹಾಡಿನ ಮೂಲಕ ಹುಚ್ಚೆದ್ದು ಕುಣಿಯುವಂತೆ ಮಾಡಿದ್ದ ಅಜನೀಶ್ ಲೋಕನಾಥ್.. ಈಗ ಮಲಗೋಕೆ.. ಮಕ್ಕಳನ್ನು ಮಲಗಿಸೋಕೆ.. ಚೆಂದದ ಲಾಲಿ ಹಾಡು ಕೊಟ್ಟಿದ್ದಾರೆ. ರಾಜಕುಮಾರಿ ಹಾಡು..

    ಮಕ್ಕಳನ್ನು ಪ್ರೀತಿಸುವ ಅದರಲ್ಲೂ ಹೆಣ್ಣು ಮಕ್ಕಳ ಅಪ್ಪಂದಿರಿಗೆ ಈ ಹಾಡು ಇನ್ನೂ ಇನ್ನೂ ಇಷ್ಟವಾಗೋದ್ರಲ್ಲಿ ಅನುಮಾನವಿಲ್ಲ. ಕಿಚ್ಚ ಸುದೀಪ್ ಅವರಿಗೆ ಈ ಹಾಡು ಇಷ್ಟವಾಗಿರೋದು ಅದೇ ಕಾರಣಕ್ಕೆ. ಅವರ ಮನೆಯ ರಾಜಕುಮಾರಿಗಾಗಿಯೇ ಬರೆದಂತಿದೆ ಈ ಹಾಡು.

    ಅನೂಪ್ ಭಂಡಾರಿ ಅವರೇ ಈ ಹಾಡಿಗೂ ಸಾಹಿತ್ಯ ಕೊಟ್ಟಿದ್ದಾರೆ. ವಿಜಯ್ ಪ್ರಕಾಶ್ ರಾಜಕುಮಾರಿ ಹಾಡಿಗೆ ಮಾರ್ದವತೆ ತುಂಬಿದ್ದಾರೆ. ಕೇಳುವ ಪ್ರೇಕ್ಷಕರಿಗೂ ಬೇರೆಯದೇ ಫೀಲ್ ಕೊಟ್ಟಿದೆ ವಿಕ್ರಾಂತ್  ರೋಣನ ಈ ಹಾಡು. 

  • ರಾಜೇಂದ್ರ ಪೊನ್ನಪ್ಪ ಫ್ಯಾಮಿಲಿಗೆ ಕಿಚ್ಚ

    ರಾಜೇಂದ್ರ ಪೊನ್ನಪ್ಪ ಫ್ಯಾಮಿಲಿಗೆ ಕಿಚ್ಚ

    ದೃಶ್ಯ 2. ಮಲಯಾಳಂ ಹಾಗೂ ತೆಲುಗು ಎರಡೂ ಭಾಷೆಯಲ್ಲಿ ಈಗಾಗಲೇ ಬಂದಾಯ್ತು. ಈಗ ಕನ್ನಡದ ಸರದಿ. ಕನ್ನಡದಲ್ಲಿಯೂ ದೃಶ್ಯ ಸೂಪರ್ ಹಿಟ್ ಆಗಿತ್ತು. ರಾಜೇಂದ್ರ ಪೊನ್ನಪ್ಪನ ಹೋರಾಟಕ್ಕೆ ಪ್ರೇಕ್ಷಕ ಜೈ ಎಂದಿದ್ದ. ಈಗ ದೃಶ್ಯ 2 ಬರುತ್ತಿದೆ. ರಾಜೇಂದ್ರ ಪೊನ್ನಪ್ಪನ ಫ್ಯಾಮಿಲಿಗೆ ಈಗ ಕಿಚ್ಚನ ಪ್ರವೇಶವಾಗುತ್ತಿದೆ.

    ರವಿಚಂದ್ರನ್ ಅವರ ಜೊತೆ ವಿಶೇಷ ಬಾಂಧವ್ಯ ಹೊಂದಿರುವ ಸುದೀಪ್, ಚಿತ್ರದ ಟ್ರೇಲರ್ ಬಿಡುಗಡೆಗೆ ಬರುತ್ತಿದ್ದಾರೆ. ಟ್ರೇಲರ್ ರಿಲೀಸ್‍ನ್ನು ದೃಶ್ಯ 2 ನಿರ್ಮಾಪಕರು ಅದ್ಧೂರಿಯಾಗಿಯೇ ಮಾಡುತ್ತಿದ್ದಾರೆ. ಇ4 ಎಂಟರ್‍ಟೈನ್‍ಮೆಂಟ್‍ನಲ್ಲಿ ನಿರ್ಮಾಣವಾಗಿರುವ ಚಿತ್ರದಲ್ಲಿ ನವ್ಯಾ ನಾಯರ್ ನಾಯಕಿ. ಅನಂತ್‍ನಾಗ್ ದೃಶ್ಯ 2 ನಲ್ಲಿ ಎಂಟ್ರಿ ಕೊಟ್ಟಿರುವ ಇನ್ನೊಬ್ಬ ಸ್ಟಾರ್. ಪಿ.ವಾಸು ನಿರ್ದೇಶನದ ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗಲಿದೆ.

  • ರಿಲೀಸ್ ದಿನವೇ ದಾಖಲೆ ಬರೆಯಲಿದ್ದಾನೆ ಪೈಲ್ವಾನ್

    pailwan all set to write a record on release day

    ಸೆಪ್ಟೆಂಬರ್ 12ರಂದು ರಿಲೀಸ್ ಆಗುತ್ತಿರುವ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್, ರಿಲೀಸ್ ದಿನವೇ ಹೊಸ ದಾಖಲೆ ಬರೆಯಲಿದೆ. 3000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿರುವ ಪೈಲ್ವಾನ್, ಅತೀ ಹೆಚ್ಚು ಥಿಯೇಟರುಗಳಲ್ಲಿ ಬಿಡುಗಡೆಯಾದ ಕನ್ನಡ ಸಿನಿಮಾ ಎಂಬ ದಾಖಲೆಗೆ ಪಾತ್ರವಾಗಲಿದೆ. ಸದ್ಯಕ್ಕೆ ಈ ದಾಖಲೆ ಕೆಜಿಎಫ್ ಹೆಸರಿನಲ್ಲಿದೆ.

    ಹಿಂದಿಯಲ್ಲಿ ಝೀ ಸ್ಟುಡಿಯೋಸ್ ವಿತರಣೆ ಮಾಡುತ್ತಿದ್ದು, 3000ಕ್ಕೂ ಹೆಚ್ಚು ಸ್ಕ್ರೀನ್ ಕೊಡುತ್ತಿದೆ. ತೆಲುಗು ಮತ್ತು ತಮಿಳಿನಲ್ಲಿವಾರಾಹಿ ಚಲನಚಿತ್ರಂ ಮತ್ತು ವೈನಾಟ್ ಸ್ಟುಡಿಯೋ ವಿತರಣೆ ಹಕ್ಕು ಪಡೆದುಕೊಂಡಿವೆ. ಮಲಯಾಳಂನಲ್ಲಿ ಪಲ್ಲವಿ ಸ್ಟುಡಿಯೋಸ್ ಡಿಸ್ಟ್ರಿಬ್ಯೂಟ್ ಮಾಡುತ್ತಿದೆ.

    ಕನ್ನಡದಲ್ಲಿ ಕೆಆರ್‍ಜಿ ಸ್ಟುಡಿಯೋಸ್ ಮೂಲಕ ಕಾರ್ತಿಕ್ ಗೌಡ ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ. ಚಿತ್ರ ಸೆಟ್ಟೇರಿದ ದಿನವೇ ವಿತರಣೆ ಹಕ್ಕಿಗೆ ಬುಕ್ಕಿಂಗ್ ಮಾಡಿದ್ದ ಕಾರ್ತಿಕ್ ಗೌಡ ಕರ್ನಾಟಕದಲ್ಲಿ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ರಿಲೀಸ್ ಮಾಡಲು ಸಿದ್ಧತೆ ನಡೆಸಿದ್ದಾರೆ.

    ಸುದೀಪ್, ಆಕಾಂಕ್ಷಾ ಸಿಂಗ್, ಸುನಿಲ್ ಶೆಟ್ಟಿ, ಕಬೀರ್ ದುಹಾನ್ ಸಿಂಗ್, ಶರತ್ ಲೋಹಿತಾಶ್ವ ಮೊದಲಾದವರು ನಟಿಸಿರುವ ಚಿತ್ರಕ್ಕೆ ಕೃಷ್ಣ ನಿರ್ದೇಶಕರಾದರೆ, ಸ್ವಪ್ನಾ ಕೃಷ್ಣ ನಿರ್ಮಾಪಕಿ.

  • ರೈಸನ್ ಟ್ರೇಲರ್ ಕಮಿಂಗ್.. ಸುದೀಪ್ ಮಿಸ್ಸಿಂಗ್

    risen trailer out

    ಹಾಲಿವುಡ್ ಸಿನಿಮಾ ರೈಸನ್ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಇದು ಸೈಂಟಿಫಿಕ್ ಥ್ರಿಲ್ಲರ್. ಕಿಚ್ಚ ಸುದೀಪ್ ಅಭಿನಯಿಸುತ್ತಿರುವ ಹಾಲಿವುಡ್ ಸಿನಿಮಾ. ಆದರೆ, ಟ್ರೇಲರ್‍ನಲ್ಲಿ ಕಿಚ್ಚ ಸುದೀಪ್ ಮಿಸ್ಸಿಂಗ್. ಇದು ಅಭಿಮಾನಿಗಳಿಗೆ ತೀವ್ರ ನಿರಾಸೆ ತಂದಿರೋದು ನಿಜ.

    ಪಟ್ಟಣವೊಂದರಲ್ಲಿ ವಿಷಗಾಳಿ ಹರಡಿ ಜನರೆಲ್ಲ ಸಾಯುತ್ತಾರೆ. ನಂತರ ಪಟ್ಟಣದ ನಡುವೆ ಮರವೊಂದು ವಿಷಗಾಳಿ ತಡೆಯುವ ಪ್ರಯತ್ನ ಮಾಡಿ ಗೆಲ್ಲುವ ವಿಭಿನ್ನ ಕಲ್ಪನೆಯ ಸಿನಿಮಾ ಇದು. ಯಡ್ಡಿ ಆರ್ಯ ನಿರ್ದೇಶನದ ಈ ಚಿತ್ರಕ್ಕೆ ನಾಗೇಂದ್ರ ಜಯರಾಂ ಎಕ್ಸಿಕ್ಯುಟಿವ್ ಪ್ರೊಡ್ಯೂಸರ್.

    ಟ್ರೇಲರ್‍ನಲ್ಲಿ ಸುದೀಪ್ ಮಿಸ್ ಆಗಿರುವುದಕ್ಕೆ ಕಾರಣಗಳೂ ಇವೆ. ಸಿನಿಮಾದ ಫೋಟೋಶೂಟ್ ಬಿಟ್ಟರೆ, ಶೂಟಿಂಗ್‍ನಲ್ಲಿ ಭಾಗವಹಿಸೋಕೆ ಸುದೀಪ್‍ಗೆ ಸಾಧ್ಯವಾಗಿಲ್ಲ. ದಿ ವಿಲನ್, ಕೋಟಿಗೊಬ್ಬ 3, ಪೈಲ್ವಾನ್, ಬಿಗ್‍ಬಾಸ್, ಸೈರಾ ರೆಡ್ಡಿ... ಹೀಗೆ ಸಾಲು ಸಾಲು ಸಿನಿಮಾ, ರಿಯಾಲಿಟಿ ಶೋಗಳಲ್ಲಿ ಬ್ಯುಸಿಯಾಗಿದ್ದ ಸುದೀಪ್, ಡಿಸೆಂಬರ್‍ವರೆಗೆ ಫ್ರೀ ಇಲ್ಲ. 

    ಡಿಸೆಂಬರ್‍ನಲ್ಲಿ ಸುದೀಪ್ ಡೇಟ್ಸ್ ಸಿಗುವ ನಿರೀಕ್ಷೆ ಇದೆ. ಉಳಿದಂತೆ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದೆ. ಸುದೀಪ್ ದೃಶ್ಯಗಳಷ್ಟೇ ಪೆಂಡಿಂಗ್ ಇವೆ ಎಂದಿದ್ದಾರೆ ನಿರ್ಮಾಪಕ ನಾಗೇಂದ್ರ ಜಯರಾಂ.

  • ಲಾರ್ಡ್ಸ್​ನಲ್ಲಿ ಸುದೀಪ್ - ಟ್ರೋಫಿ ಗೆದ್ದಿದ್ದ ಸ್ಟೇಡಿಯಂನಲ್ಲಿ ಈ ಬಾರಿ ಪ್ರೇಕ್ಷಕರಾಗಿ ಕಿಚ್ಚ

    lourds stadium

    ಲಾರ್ಡ್ಸ್​​ನಲ್ಲಿ ಕ್ರಿಕೆಟ್ ಆಡುವ ಕನಸು ಪ್ರತಿಯೊಬ್ಬ ಕ್ರಿಕೆಟ್ ಆಟಗಾರನಿಗೂ ಇರುತ್ತೆ. ಕಾರಣ, ಲಾರ್ಡ್ಸ್​ ಕ್ರೀಡಾಂಗಣ ಕ್ರಿಕೆಟ್ ಕಾಶಿಯೆಂದೇ ಫೇಮಸ್. ಅಂತಾ ಲಾರ್ಡ್ಸ್​ನಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ವಿಶ್ವಕಪ್ ಫೈನಲ್ ಆಡುತ್ತಿದೆ. ಆ ಆಟ ನೋಡಲು ಹೋಗುತ್ತಿದ್ದೇನೆ. ಮಿಸ್ ಮಾಡಿಕೊಳ್ಳಲ್ಲ ಎಂದು ಟ್ವೀಟ್ ಮಾಡಿದ್ದ ಸುದೀಪ್​ಗೆ ಲಾರ್ಡ್ಸ್​ ಕ್ರೀಡಾಂಗಣ ಇನ್ನೂ ಒಂದು ರೀತಿ ವಿಶೇಷ.

    lourds_stadium_sudeep1.jpgವೃತ್ತಿಪರ ಕ್ರಿಕೆಟ್ ಆಟಗಾರನಲ್ಲದಿದ್ದರೂ, ಲಾರ್ಡ್ಸ್​ನಲ್ಲಿ ಕ್ರಿಕೆಟ್ ಆಡಿದ್ದರು. ಕಾರ್ಪೊರೇಟ್ ಕ್ರಿಕೆಟ್ ಡೇ ಟೂರ್ನಿಯಲ್ಲಿ ವಿಜೇನರ್ ತಂಡದ ಕ್ಯಾಪ್ಟನ್ ಆಗಿದ್ದ ಸುದೀಪ್, ಪ್ರಶಸ್ತಿಯನ್ನೂ ಗೆದ್ದಿದ್ದರು.  ಸುದೀಪ್ ನೇತೃತ್ವದ ತಂಡ ಮೇ ತಿಂಗಳಲ್ಲಿ ನಡೆದಿದ್ದ ಟೂರ್ನಿಯಲ್ಲಿ ಆಡಿದ ಎಲ್ಲ ಪಂದ್ಯಗಳಲ್ಲೂ ಗೆಲುವು ಸಾಧಿಸಿತ್ತು. ಡೆಲೋಯಿಟ್ ತಂಡದ ವಿರುದ್ಧ ಫೈನಲ್ ಆಡಿತ್ತು. ಪ್ರಶಸ್ತಿಯನ್ನೂ ಗೆದ್ದಿತ್ತು.

    ಈಗ ತಾವು ಟ್ರೋಫಿ ಎತ್ತಿಕೊಂಡಿದ್ದ ಅದೇ ಕ್ರೀಡಾಂಗಣದಲ್ಲಿ ಸುದೀಪ್, ಭಾರತೀಯ ಕ್ರಿಕೆಟ್ ತಂಡವನ್ನು ಹುರಿದುಂಬಿಸುವ ಪ್ರೇಕ್ಷಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇಲ್ಲಿರುವುದು ಮೇ ತಿಂಗಳಲ್ಲಿ ಸುದೀಪ್ ಪ್ರಶಸ್ತಿ ಗೆದ್ದಿದ್ದ ಆ ಕ್ಷಣದ ಫೋಟೋಗಳು.

  • ವಿಕ್ರಾಂತ್ ರೋಣ 3D ಅವತಾರ..!

    ವಿಕ್ರಾಂತ್ ರೋಣ 3D ಅವತಾರ..!

    ಆಗಸ್ಟ್ 19. 2021. ಡೇಟ್ ನೋಟ್ ಮಾಡಿಟ್ಟುಕೊಳ್ಳಿ. ಆ ದಿನ ವಿಕ್ರಾಂತ್ ರೋಣ, ದೇಶ ವಿದೇಶಗಳಲ್ಲಿ ಏಕಕಾಲಕ್ಕೆ ಪ್ರತ್ಯಕ್ಷವಾಗ್ತಾನೆ. 2019ರಲ್ಲಿ ಬಂದ ಪೈಲ್ವಾನ್ ನಂತರ ಕಿಚ್ಚನ ಅಭಿಮಾನಿಗಳಿಗೆ ಸುದೀಪ್ ಹೀರೋ ಆಗಿ ಸಿಕ್ಕಿಲ್ಲ. ಅಭಿಮಾನಿಗಳ ಕಿಚ್ಚಿನಂತಾ ಬಯಕೆ ಈಡೇರುವ ಕಾಲ.. ಮುಹೂರ್ತ ಆಗಸ್ಟ್ 19. 2021.

    ರಿಲೀಸ್ ಡೇಟ್ ಅನೌನ್ಸ್ ಮಾಡಿರೋ VR ಟೀಂ, ಇದರ ಜೊತೆಯಲ್ಲೇ ಇನ್ನೊಂದು ಸರ್ಪ್ರೈಸ್ನ್ನೂ ಕೊಟ್ಟಿದೆ. ವಿಕ್ರಾಂತ್ ರೋಣ 3D ಅವತಾರದಲ್ಲಿ ಬರಲಿದ್ದಾನೆ. ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಚಿತ್ರದಲ್ಲಿ

    ಕಥೆ ಏನು ಎನ್ನುವುದೇ ಒಂದು ಸರ್ಪ್ರೈಸ್. ಕಿಚ್ಚನ ಜೊತೆಗೆ ನಿರೂಪ್ ಭಂಡಾರಿ ಕೂಡಾ ಇದ್ದಾರೆ. ನೀತಾ ಅಶೋಕ್ ಹೀರೋಯಿನ್.

    ಜಾಕ್ ಮಂಜು ನಿರ್ಮಾಣದ ಸಿನಿಮಾ ಆಗಸ್ಟ್ನಲ್ಲಿ ಸ್ವಾತಂತ್ರ್ಯೋತ್ಸವ ಮುಗಿದ 4ನೇ ದಿನಕ್ಕೆ ಸರಿಯಾಗಿ ಥಿಯೇಟರುಗಳಲ್ಲಿ ಕಾಣಿಸಲಿದೆ.

  • ವಿಕ್ರಾಂತ್ ರೋಣ ಅಡ್ವಾನ್ಸ್ ಬುಕ್ಕಿಂಗ್ ಯಾವಾಗಿಂದ..?

    ವಿಕ್ರಾಂತ್ ರೋಣ ಅಡ್ವಾನ್ಸ್ ಬುಕ್ಕಿಂಗ್ ಯಾವಾಗಿಂದ..?

    ವಿಕ್ರಾಂತ್ ರೋಣ ಚಿತ್ರ ಸಂಚಲನ ಸೃಷ್ಟಿಸೋಕೆ ಶುರುವಾಗಿದೆ. ರಾ ರಾ ರಕ್ಕಮ್ಮ ಮೂಲಕವೇ ಹವಾ ಎಬ್ಬಿಸಿದ ಸಿನಿಮಾ ವಿಕ್ರಾಂತ್ ರೋಣ. ಚಿತ್ರ ಸೆನ್ಸಾರ್ ಪ್ರಕ್ರಿಯೆ ಮುಗಿಸಿದೆ. 147.39 ನಿಮಿಷದ ಸಿನಿಮಾ ವಿಕ್ರಾಂತ್ ರೋಣ. ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಸಿನಿಮಾ ರಿಲೀಸ್ ಆಗೋದು 28ಕ್ಕೆ. ಆದರೆ ಅಭಿಮಾನಿಗಳಿಂದ ಈಗಾಗಲೇ ಟಿಕೆಟ್ ಬುಕ್ಕಿಂಗ್ ಕ್ರೇಜ್ ಶುರುವಾಗಿದೆ.

    ಆದರೆ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗೋದು ಜುಲೈ 24ರಿಂದ. ರಿಲೀಸ್ ಆಗುವ ನಾಲ್ಕು ದಿನ ಮುಂಚಿನಿಂದ. ಅದೇ ದಿನ ಕಿಚ್ಚವರ್ಸ್ ಕೂಡಾ ಓಪನ್ ಆಗಲಿದೆ. ಎಂಜಾಯ್ ಮಾಡ್ತಾ ಮಾಡ್ತಾ ನೋಡಿ.. ಕಿಚ್ಚನ ಜೊತೆ ಮಾತಾಡ್ತಾ.. ಮಾತಾಡ್ತಾ.. ಟಿಕೆಟ್ ಬುಕ್ ಮಾಡಬಹುದು.

    ಇದೆಲ್ಲದರ ಮಧ್ಯೆ ಇವತ್ತು ಅಂದ್ರೆ ಜುಲೈ 21ರಂದು ಗುಮ್ಮನನ್ನು ತೋರಿಸಲಿದ್ದಾರೆ ನಿರ್ದೇಶಕ ಅನೂಪ್ ಭಂಡಾರಿ. ವಿಕ್ರಾಂತ್ ರೋಣನ ಸೆನ್ಸೇಷನ್ ಶುರು ಮಾಡಿದ್ದೇ ಗುಮ್ಮ. ಆ ಗುಮ್ಮನ ಹಾಡಿನ ದರ್ಶನ ಇವತ್ತು ಆಗಲಿದೆ.

    ಉಳಿದಂತೆ.. ವೇಯ್ಟ್.. ವೇಯ್ಟ್.. ವೇಯ್ಟ್.. ಹಬ್ಬ ಶುರುವಾಗೋದು ಜುಲೈ 28ಕ್ಕೇ..

  • ವಿಕ್ರಾಂತ್ ರೋಣ ಆಡಿಯೋ ಕೂಡಾ ಲಹರಿ ಪಾಲು

    ವಿಕ್ರಾಂತ್ ರೋಣ ಆಡಿಯೋ ಕೂಡಾ ಲಹರಿ ಪಾಲು

    ಇತ್ತೀಚೆಗೆ ಲಹರಿ ಸಂಸ್ಥೆ ಕನ್ನಡದ ದೊಡ್ಡ ದೊಡ್ಡ ಚಿತ್ರಗಳನ್ನೆಲ್ಲ ತೆಕ್ಕೆಗೆ ಹಾಕಿಕೊಳ್ಳುತ್ತಿದೆ. ಕೆಜಿಎಫ್ ಚಾಪ್ಟರ್ 2, ಆರ್‍ಆರ್‍ಆರ್ ಚಿತ್ರಗಳ ಆಡಿಯೋ ರೈಟ್ಸ್ ಖರೀದಿಸಿದ್ದ ಲಹರಿ ಸಂಸ್ಥೆ ಈಗ ವಿಕ್ರಾಂತ್ ರೋಣ ಚಿತ್ರದ ಆಡಿಯೋ ಹಕ್ಕುಗಳನ್ನೂ ಖರೀದಿಸಿದೆ. ಅಲ್ಲಿಗೆ.. ಇನ್ನೊಂದು ಪ್ಯಾನ್ ಇಂಡಿಯಾ ಸಿನಿಮಾ ಲಹರಿ ತೆಕ್ಕೆಗೆ ಜಾರಿದೆ.

    ಹಾಗೆ ಆಡಿಯೋ ರೈಟ್ಸ್ ಖರೀದಿಸಿದ ಹಿಂದೆಯೇ ಸುದೀಪ್ ಬರ್ತ್ ಡೇ ಕೂಡಾ ಬಂದಿದೆ. ಸೆಪ್ಟೆಂಬರ್ 2ಕ್ಕೆ ಸುದೀಪ್ ಹುಟ್ಟುಹಬ್ಬ. ಅಭಿಮಾನಿಗಳ ಸೈನ್ಯವನ್ನು ಸುದೀಪ್ ಅಭಿಮಾನದಿಂದಲೇ ಕಟ್ಟಿಹಾಕಿದ್ದಾರೆ. ಅದ್ಧೂರಿತನಕ್ಕೆ ಬ್ರೇಕ್ ಹಾಕಿದ್ದಾರೆ. ಆದರೆ..  ಆ ದಿನ ವಿಕ್ರಾಂತ್ ರೋಣ ಚಿತ್ರತಂಡ ಹಬ್ಬವನ್ನಂತೂ ಮಾಡಲಿದೆ. ಸೆ.2ರಂದು ವಿಕ್ರಾಂತ್ ರೋಣ ಚಿತ್ರದ ಡೆತ್ ಮ್ಯಾನ್ ಆ್ಯಂಥಮ್ ಸಾಂಗ್ ರಿಲೀಸ್ ಆಗಲಿದೆ. ವಾಟ್ ಈಸ್ ದಿಸ್ ಎನ್ನುವಂತಿಲ್ಲ. ಡೈರೆಕ್ಟರ್ ಅನೂಪ್ ಭಂಡಾರಿ ಅವರಂತೂ ಈ ಬಾರಿ ಡಿಫರೆಂಟ್ ಗಿಫ್ಟ್‍ನ್ನು ಈ ಹಾಡಿನ ಮೂಲಕ ರೆಡಿ ಮಾಡಿಟ್ಟುಕೊಂಡಿದ್ದಾರೆ.

  • ವಿಕ್ರಾಂತ್ ರೋಣ ಟ್ರೇಲರ್ : ಅಬ್ಬಾ.. ಎಂದ ಇಡೀ ಚಿತ್ರರಂಗ

    ವಿಕ್ರಾಂತ್ ರೋಣ ಟ್ರೇಲರ್ : ಅಬ್ಬಾ.. ಎಂದ ಇಡೀ ಚಿತ್ರರಂಗ

    ಇಡೀ ಚಿತ್ರರಂಗವೇ ಅಲ್ಲಿತ್ತು. ಶಿವಣ್ಣ, ರವಿಚಂದ್ರನ್, ರಮೇಶ್ ಅರವಿಂದ್, ರಕ್ಷಿತ್ ಶೆಟ್ಟಿ, ಡಾಲಿ ಧನಂಜಯ್, ರಿಷಬ್ ಶೆಟ್ಟಿ, ರಾಜ್ ಬಿ.ಶೆಟ್ಟಿ, ಯೋಗರಾಜ್ ಭಟ್, ಯುವ ರಾಜಕುಮಾರ್,  ನಂದಕಿಶೋರ್, ಅರ್ಜುನ್ ಜನ್ಯ, ಇಂದ್ರಜಿತ್ ಲಂಕೇಶ್.. ಹೀಗೆ ಬಹುತೇಕ ಇಂಡಸ್ಟ್ರಿಯ ಗಣ್ಯರು ಅಲ್ಲಿದ್ದರು. ವಿಕ್ರಾಂತ್ ರೋಣನಿಗೆ ಶುಭ ಕೋರಿದರು. ಟ್ರೇಲರ್ ಎಲ್ಲೆಡೆ ರಿಲೀಸ್ ಆಗುವ ಮುನ್ನ ಚಿತ್ರರಂಗದ ಗಣ್ಯರಿಗೆ ಟ್ರೇಲರ್ ತೋರಿಸಿದರು ಕಿಚ್ಚ ಸುದೀಪ್, ಅನೂಪ್ ಭಂಡಾರಿ ಮತ್ತು ಜಾಕ್ ಮಂಜು.

    ರವಿಚಂದ್ರನ್ : ಚಿತ್ರಮಂದಿರಕ್ಕೆ ಜನ ಬರುತ್ತಿಲ್ಲ ಎನ್ನುತ್ತಿದ್ದರು. ಈಗ ಎಷ್ಟೊಳ್ಳೆ ಸಿನಿಮಾ ಬರುತ್ತಿವೆ ಎಂದರೆ ಜನ ಬರುತ್ತಿದ್ದಾರೆ. ಚಿತ್ರಮಂದಿರಗಳೇ ಸಾಲುತ್ತಿಲ್ಲ. ವಿಆರ್ ಎಂದರೆ ವಿಕ್ರಾಂತ್ ರೋಣ ಅಷ್ಟೇ ಅಲ್ಲ, ವಿ. ರವಿಚಂದ್ರ.

    ರಕ್ಷಿತ್ ಶೆಟ್ಟಿ : ಸುದೀಪ್ ಸರ್ ಅಂತಹ ಅದ್ಭುತ ಟ್ಯಾಲೆಂಟೆಡ್ ಕಲಾವಿದ ನನ್ನ ಪ್ರತಿ ಸಿನಿಮಾ ರಿಲೀಸ್ ಆದಾಗಲೂ ಮೆಸೇಜ್ ಮಾಡ್ತಾರೆ. ಭಾರತದ ಅದ್ಭುತ ಟ್ಯಾಲೆಂಟೆಡ್ ಆಕ್ಟರ್‍ಗಳಲ್ಲಿ 5 ಜನರ ಪಟ್ಟಿ ಮಾಡಿದರೆ ಅವರಲ್ಲಿ ಸುದೀಪ್ ಒಬ್ಬರು.

    ಶಿವರಾಜಕುಮಾರ್ : ಸುದೀಪ್ ನನ್ನ ಕ್ಲೋಸ್ ಫ್ರೆಂಡ್. ಬ್ರದರ್. ಫ್ಯಾಮಿಲಿ. ಅವರ ಶಾಂತಿನಿವಾಸಕ್ಕೆ ಸಣ್ಣದಾಗಿ ಧ್ವನಿ ನೀಡಿದ್ದೆ. ಅವರು ನನ್ನ ಹೃದಯಕ್ಕೆ ಹತ್ತಿರ. ಅನೂಪ್ ಅವರ ರಂಗಿತರಂಗ ಥಿಯೇಟರಿನಲ್ಲೇ ನೋಡಿದ್ದೆ. ಈ ಸಿನಿಮಾವನ್ನೂ ಚೆನ್ನಾಗಿ ಮಾಡಿದ್ದಾರೆ.

    ರಮೇಶ್ ಅರವಿಂದ್ : ಸಿನಿಮಾ ನೋಡಿದಾಗ ಇನ್ನೊಂದು ಜಗತ್ತು ತೆರೆದುಕೊಳ್ಳುತ್ತೆ. ಕ್ಯಾಮೆರಾ, ಮ್ಯೂಸಿಕ್ ಎಲ್ಲವೂ ಸಖತ್ತಾಗಿದೆ. ಸೂಪರ್ ಹಿಟ್ ಆಗುವ ಎಲ್ಲ ಸೂಚನೆ ಇದೆ.

    ಡಾಲಿ ಧನಂಜಯ್ : ಸರ್, ಅದ್ಭುತ. ಏನ್ ಹೇಳ್ಬೇಕು ಗೊತ್ತಾಗ್ತಿಲ್ಲ.  ಈಗ ನಾವು ಹೊರಗೆ ಹೋದಾಗ ಕನ್ನಡ ಇಂಡಸ್ಟ್ರಿ ಅಂತಾ ಹೇಳಿಕೊಳ್ಳೋಕೆ ಹೆಮ್ಮೆ. ನೀವು ಫೇಸ್. ಎಲ್ಲ ಕಡೆ ನಿಮ್ಮ ಹೆಸರಿದೆ. ಎಲ್ಲರಿಗೂ ಸಪೋರ್ಟ್ ಮಾಡ್ತೀರ. ಬೆಳೆಸ್ತೀರಾ. ಈ ಸಿನಿಮಾ ಒಟ್ಟಿಗೇ ಫ್ಯಾಮಿಲಿ ಸಮೇತ ನೋಡೋ ಸಿನಿಮಾ.

    ಯೋಗರಾಜ್ ಭಟ್ : ತುಂಬಾ ಹತ್ತಿರದ ಜೀವ ಸುದೀಪ್ ಅವರು. ಜಾಕ್ವೆಲಿನ್ ಕುಣಿತವನ್ನ ಮತ್ತೆಮತ್ತೆ ಮೊಬೈಲಿನಲ್ಲಿ ನೋಡ್ತೀವಿ. ಪ್ರೇಕ್ಷಕನಾಗಿ ಸಿನಿಮಾ ನೋಡೋಕೆ ಕಾಯ್ತಿದ್ದೇನೆ.

    ರಿಷಬ್ ಶೆಟ್ಟಿ : ನಾನು ಸುದೀಪ್ ಸರ್ ಫ್ಯಾನ್ ಅಸೋಸಿಯೇಷನ್ ಕಡೆಯಿಂದ ಬಂದದಿದ್ದೇನೆ. ಟ್ರೇಲರ್ ಅದ್ಬುತವಾಗಿದೆ. ಸುದೀಪ್ ಸರ್ ಜೊತೆ ಒಂದು ಸಿನಿಮಾ ಮಾಡೇ ಮಾಡ್ತೀನಿ.

    ಅರ್ಜುನ್ ಜನ್ಯ : ಸುದೀಪ್ ಸರ್ ನನ್ನ ಗಾಡ್ ಫಾದರ್.

    ರಾಜ್ ಬಿ.ಶೆಟ್ಟಿ : ಅವರ ಸಿನಿಮಾ ನೋಡೋಕೆ ಮನೆಯಲ್ಲಿ ಸುಳ್ಳು ಹೇಳಿ ಹೋಗ್ತಿದ್ದೆ. ಈಗ ಅವರ ಸಿನಿಮಾ ಟ್ರೇಲರ್‍ನ್ನ ಎಲ್ಲರಿಗಿಂತ ಮೊದಲು ನೋಡೋ ಭಾಗ್ಯ ಸಿಕ್ಕಿದೆ.

    ಜಾಕ್ ಮಂಜು : ಸುದೀಪ್ ಸರ್ ಇಲ್ಲದೆ ಈ ಸಿನಿಮಾ ಆಗ್ತಾ ಇರಲಿಲ್ಲ. ಪ್ರಿಯಾ ಮೇಡಂ ಸಹಾಯದಿಂದ ಈ ಕಥೆ ಹೇಳಿದವಿ. ಜಾಕ್ವೆಲಿನ್ ಕನ್ನಡದಲ್ಲಿಯೇ ಮಾತನಾಡಿದ್ದಾರೆ. ಸುದೀಪ್ ಸರ್‍ಗೆ ತುಂಬಾ ಥ್ಯಾಂಕ್ಸ್

    ಅನೂಪ್ ಭಂಡಾರಿ : ಈ ಚಿತ್ರ ಇಷ್ಟು ದೊಡ್ಡ ಮಟ್ಟಕ್ಕೆ ಆಗೋಕೆ ಕಾರಣ ಸುದೀಪ್. ಅವರಿಗೆ ನನ್ನ ಥ್ಯಾಂಕ್ಸ್.

    ವೇದಿಕೆಯಲ್ಲಿದ್ದವರೆಲ್ಲ ವಿಕ್ರಾಂತ್ ರೋಣ ಟ್ರೇಲರ್ ನೋಡಿದ್ದಾರೆ. ಇವತ್ತು ಇಡೀ ದೇಶ ಟ್ರೇಲರ್ ನೋಡಲಿದೆ. ಪ್ರತಿ ಭಾಷೆಯಲ್ಲೂ ಆಯಾ ಚಿತ್ರರಂಗದ ಸ್ಟಾರ್ ಕಲಾವಿದರೇ ಚಿತ್ರದ ಟ್ರೇಲರ್‍ನ್ನು ಡಿಜಿಟಲ್ ಲಾಂಚ್ ಮಾಡುತ್ತಿದ್ದಾರೆ.

  • ವಿಕ್ರಾಂತ್ ರೋಣ ಡಬ್ಬಿಂಗ್`ನಲ್ಲಿ ಸುದೀಪ್ ಬ್ಯುಸಿ

    ವಿಕ್ರಾಂತ್ ರೋಣ ಡಬ್ಬಿಂಗ್`ನಲ್ಲಿ ಸುದೀಪ್ ಬ್ಯುಸಿ

    2021ರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ವಿಕ್ರಾಂತ್ ರೋಣ ಚಿತ್ರದ ಡಬ್ಬಿಂಗ್ ಶುರುವಾಗಿದೆ. ಸುದೀರ್ಘ ಅವಧಿಯ ಬಳಿಕ ಸಿನಿಮಾಗೆ ಧ್ವನಿ ನೀಡುತ್ತಿದ್ದೇನೆ. ಇದು ಹೊಸ ಅನುಭವದಂತೆ ಫೀಲ್ ಆಗುತ್ತಿದೆ. ಚಿತ್ರ ಅಂದುಕೊಂಡಂತೆಯೇ ಬರುತ್ತಿದೆ ಎನ್ನುವುದು ಖುಷಿಯ ವಿಚಾರ ಎಂದು ಡಬ್ಬಿಂಗ್ ಅನುಭವ ಹಂಚಿಕೊಂಡಿದ್ದಾರೆ ಕಿಚ್ಚ ಸುದೀಪ್.

    ಆಗಸ್ಟ್ 19ರಂದು ರಿಲೀಸ್ ಎಂದು ಘೋಷಿಸಿಕೊಂಡಿರುವ ವಿಕ್ರಾಂತ್ ರೋಣ, ಅದೇ ದಿನ ರಿಲೀಸ್ ಆಗುತ್ತದಾ..? ಇಲ್ಲವಾ..? ಎಂಬುದು ಗೊತ್ತಿಲ್ಲ. ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಚಿತ್ರ ಪ್ಯಾನ್ ಇಂಡಿಯಾ ಲೆವೆಲ್ಲಿನಲ್ಲಿ ರಿಲೀಸ್ ಆಗುತ್ತಿದೆ. ನಿರೂಪ್ ಭಂಡಾರಿ, ನೀತೂ ಅಶೋಕ್ ನಟಿಸಿರುವ ಚಿತ್ರಕ್ಕೆ ಜಾಕ್ ಮಂಜು ನಿರ್ಮಾಪಕ. ಚಿತ್ರ 2ಡಿ ಮತ್ತು 3ಡಿ ವರ್ಷನ್‍ನಲ್ಲಿ ಬರಲಿದೆ.