` kiccha sudeepa - chitraloka.com | Kannada Movie News, Reviews | Image

kiccha sudeepa

  • ಫ್ಯಾಂಟಮ್ ಜೊತೆ ಫಕೀರನೂ ಬಂದ..!

    meet fakira from the world of phantom

    ಫ್ಯಾಂಟಮ್ ಚಿತ್ರದ ವಿಕ್ರಾಂತ್ ರೋಣನ ಲುಕ್ ನೋಡಿ ಥ್ರಿಲ್ ಆಗಿದ್ದವರಿಗೆ ಈಗ ಫಕೀರನ ಲುಕ್ಕೂ ಸಿಕ್ಕಿದೆ. ಸರ್‍ಪ್ರೈಸ್ ಕೊಡುತ್ತೇನೆ ಎಂದಿದ್ದ ನಿರ್ದೇಶಕ ಅನೂಪ್ ಭಂಡಾರಿ, ಚಿತ್ರದ ಇನ್ನೊಬ್ಬ ಹೀರೋ ನಿರೂಪ್ ಭಂಡಾರಿಯ ಪಾತ್ರ ಬಹಿರಂಗ ಪಡಿಸಿದ್ದಾರೆ.

    ಚಿತ್ರದಲ್ಲಿ ನಿರೂಪ್ ಭಂಡಾರಿ ಪಾತ್ರದ ಹೆಸರು ಸಂಜೀವ್ ಗಂಭೀರ್. ಲಂಡನ್ನಿನಿಂದ ಭಾರತಕ್ಕೆ ವಾಪಸ್ ಆದ ಹುಡುಗ. ನಗುತ್ತಾ.. ನಗಿಸುತ್ತಾ.. ತರಲೆ ಮಾಡುತ್ತಾ ಇರುವ ಯುವಕ. ಹೆಸರು ಮಾತ್ರ ಸಂಜೀವ್ ಗಂಭೀರ್. ಅವರ ಪಾತ್ರಕ್ಕೆ ಇನ್ನೊಂದು ಹೆಸರೇ ಫಕೀರ.

    ನಟ ನಿರೂಪ್ ಅವರನ್ನು ಈ ಪೋಸ್ಟರ್ ಮೂಲಕ ಸ್ವಾಗತ ಕೋರಿದ್ದಾರೆ ಚಿತ್ರದ ಹೀರೋ ಕಿಚ್ಚ ಸುದೀಪ್, ನಿರ್ಮಾಪಕ ಜ್ಯಾಕ್ ಮಂಜು. ಫ್ಯಾಂಟಮ್ ಇನ್ನೂ ಶೂಟಿಂಗ್‍ನಲ್ಲಿದೆ.ಕೂಡಾ ಇದ್ದರು.

  • ಫ್ಯಾಂಟಮ್ ಪೋಸ್ಟರ್ ಕ್ರೇಜ್

    phantom poster crae

    ಕಿಚ್ಚ ಸುದೀಪ್ ಅವರ ಹೊಸ ಸಿನಿಮಾ ಫ್ಯಾಂಟಮ್. ಒಂದೆಡೆ ಕೋಟಿಗೊಬ್ಬ 3 ಮುಗಿಸಿದವರೇ, ಹೊಸ ಚಿತ್ರಕ್ಕೆ ಶ್ರೀಕಾರ ಹಾಡಿದ್ದಾರೆ ಕಿಚ್ಚ ಸುದೀಪ. ರಂಗಿತರಂ ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನದ ಚಿತ್ರ ಫ್ಯಾಂಟಮ್. ಹೀಗಾಗಿ ಕುತೂಹಲವೂ ಹೆಚ್ಚು. ನಿರೀಕ್ಷೆಯೂ ಹೆಚ್ಚು. ಚಿತ್ರದ ಚಿತ್ರೀಕರಣ ಶುರುವಾಗಿದೆ.

    ಚಿತ್ರದ ಹೆಸರೊಂದು ಬಿಟ್ಟರೆ, ಮಿಕ್ಕ ಯಾವುದರ ಗುಟ್ಟನ್ನೂ ಬಿಟ್ಟುಕೊಡದ ಅನೂಪ್, ಚಿತ್ರದ ಒಂದು ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಶೂಟಿಂಗ್ ಶುರು ಎಂಬ ಮೆಸೇಜ್ ಕೊಟ್ಟು ಪೋಸ್ಟರ್ ಕೊಟ್ಟಿದ್ದಾರೆ ಅನೂಪ್. ಕಿಚ್ಚನ ಕೈಲಿ ಬಂದೂಕು. ಸಖತ್ ಸ್ಟೈಲಿಷ್ ಆಗಿರೋ ಫ್ಯಾಂಟಮ್ ಪೋಸ್ಟರ್ ಕ್ರೇಜ್ ಸೃಷ್ಟಿಸಿದೆ. ಈ ಚಿತ್ರದಲ್ಲಿ ನಿರೂಪ್ ಭಂಡಾರಿ ಕೂಡಾ ನಟಿಸುತ್ತಿದ್ದಾರೆ.

  • ಬಂದ ನೋಡು ಪೈಲ್ವಾನ್..

    banda nodo pailwan song

    ಪೈಲ್ವಾನ್ ತೋಳು ನೋಡು ಉಕ್ಕು.. ಒಂದೇ ಏಟು ಸಾಕು.. ದೇವ್ರೇ ನಿಂಗೆ ದಿಕ್ಕು..  ಬಂದ ನೋಡು ಪೈಲ್ವಾನ್..

    ಪೈಲ್ವಾನ್ ಚಿತ್ರದ ಥೀಮ್ ಮ್ಯೂಸಿಕ್ ಇರುವ ಹಾಡಿದು. ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಮಾಡಿ, ಮೊದಲ ಖುಷಿ ಕೊಟ್ಟಿದೆ ಪೈಲ್ವಾನ್ ಟೀಂ. ಪೋಸ್ಟರುಗಳು ಹಾಗೂ ಟೀಸರ್ ಮೂಲಕ ನಿರೀಕ್ಷೆ ಹುಟ್ಟಿಸಿದ್ದ ಪೈಲ್ವಾನ್ ಚಿತ್ರದ ಲಿರಿಕಲ್ ವಿಡಿಯೋ ಭಾರಿ ಸದ್ದು ಮಾಡುತ್ತಿದೆ.

    ಕಿಚ್ಚ ಸುದೀಪ್ ಹುರಿಗಟ್ಟಿದ ದೇಹ ಇಡೀ ಹಾಡಿನಲ್ಲಿ ಎದ್ದು ಕಂಡರೆ, ಬ್ಯಾಕ್‍ಗ್ರೌಂಡ್‍ನಲ್ಲಿ ಭರ್ಜರಿ ಸ್ಕೋರ್ ಮಾಡಿದ್ದಾರೆ ಅರ್ಜುನ್ ಜನ್ಯ. ಮ್ಯೂಸಿಕ್ಕು ಕಿಕ್ಕೇರಿಸುತ್ತಿದೆ ಎನ್ನುವುದು ಅಭಿಮಾನಿಗಳ ಒನ್‍ಲೈನ್ ಕಾಂಪ್ಲಿಮೆಂಟ್.

    ಕೃಷ್ಣ ನಿರ್ದೇಶನದ ಚಿತ್ರದ ಈ ಹಾಡಿಗೆ ಸಾಹಿತ್ಯ ಬರೆದಿರುವುದು ನಾಗೇಂದ್ರ ಪ್ರಸಾದ್. ಇಡೀ ಚಿತ್ರದಲ್ಲಿ ಈ ಹಾಡು ಪದೇ ಪದೇ ಬರಲಿದ್ದು, ಇಡೀ ಚಿತ್ರದ ಥೀಮ್ ಸಾಂಗ್ ಇದು ಎಂದಿದ್ದಾರೆ ನಿರ್ದೇಶಕ ಕೃಷ್ಣ. ಐದೂ ಭಾಷೆಯಲ್ಲಿ ಲಿರಿಕಲ್ ವಿಡಿಯೋ ಬಂದಿದೆ.

  • ಬಸ್ರೂರು ಗ್ಯಾಂಗ್ ಹವಾ : ಹೇಗಿದೆ ಕಬ್ಜ ಟೈಟಲ್ ಟ್ರ್ಯಾಕ್?

    ಬಸ್ರೂರು ಗ್ಯಾಂಗ್ ಹವಾ : ಹೇಗಿದೆ ಕಬ್ಜ ಟೈಟಲ್ ಟ್ರ್ಯಾಕ್?

    ಕಬ್ಜ. ಈ ವರ್ಷದ ಬಹುನಿರೀಕ್ಷಿತ ಚಿತ್ರ. ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಅಭಿನಯದ ಕಬ್ಜ ಚಿತ್ರದ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿದೆ. ರವಿ ಬಸ್ರೂರು ಸಂಗೀತ ಮತ್ತು ಸಾಹಿತ್ಯದಲ್ಲಿ ಧಮ್ ಇದೆ. ಕಬ್ಜ.. ಹೇ ಕಬ್ಜ.. ದುನಿಯಾನೇ ಮಾಡ್ಕೋ ಕಬ್ಜ.. ಎಂದು ಶುರುವಾಗುವ ಹಾಡು, ಚಿತ್ರದ ಹೀರೋ ಭೂಗತಲೋಕವನ್ನು ಆಳುವುದಕ್ಕೆ ಹೊರಟಾಗ ಬರುವ ಗೀತೆ ಇರಬೇಕು.

    ಸ್ವಾತಂತ್ರ್ಯ ಹೋರಾಟಗಾರನೊಬ್ಬನ ಮಗ ಭೂಗತ ದೊರೆಯಾಗುವ ಕಥೆ ಚಿತ್ರದಲ್ಲಿದೆ. ಉಪೇಂದ್ರ ಪ್ರಧಾನ ಪಾತ್ರದಲ್ಲಿ ನಟಿಸಿದ್ದು, ಪೊಲೀಸ್ ಆಫೀಸ್ ಪಾತ್ರದಲ್ಲಿ ಕಿಚ್ಚನ ಕರಾಮತ್ತಿದೆ. ಶ್ರೇಯಾ ಸರಣ್ ನಾಯಕಿ. ಆರ್.ಚಂದ್ರ, ಕಥೆ, ಚಿತ್ರಕಥೆ, ನಿರ್ದೇಶನದ ಜೊತೆ ನಿರ್ಮಾಣದ ಹೊಣೆಯನ್ನೂ ಹೊತ್ತಿದ್ದಾರೆ. ಕಬ್ಜ ಇದೇ ಮಾರ್ಚ್ 17ರಂದು ಪುನೀತ್ ರಾಜಕುಮಾರ್ ಹುಟ್ಟುಹಬ್ಬದ ದಿನ ಬಿಡುಗಡೆಯಾಗುತ್ತಿದೆ. ಟೈಟಲ್ ಟ್ರ್ಯಾಕ್ ಹಾಡಿರುವುದು ಒಬ್ಬರಲ್ಲ. ಇದು ಗ್ರೂಪ್ ಸಾಂಗ್. ಹಲವರು ಹೇಳುವ ರೀತಿ ಇರುವ ಗ್ರೂಪ್ ಸಾಂಗಿನಲ್ಲಿ ಬಸ್ರೂರು ಗ್ಯಾಂಗ್ ಇದೆ ಎನ್ನುವುದು ವಿಶೇಷ.

    ಸಂಗೀತ, ಸಾಹಿತ್ಯವಷ್ಟೇ ಅಲ್ಲ, ಹಾಡಿನಲ್ಲೂ ಬಸ್ರೂರು ಇದ್ದಾರೆ. ರವಿ ಬಸ್ರೂರು, ವಿಜಯ್ ಬಸ್ರೂರು, ಕೃಷ್ಣ ಬಸ್ರೂರು, ಕೃಷ್ಣಮೂರ್ತಿ ಬಸ್ರೂರು, ರಾಮಕೃಷ್ಣ ಬಸ್ರೂರು, ಭಾರ್ಗವ್ ಬಸ್ರೂರು, ಪೂರ್ಣಚಂದ್ರ ಬಸ್ರೂರು, ನಿಖ್ಲಿ ಬಸ್ರೂರು... ಹೀಗೆ ಬಸ್ರೂರು ಗ್ಯಾಂಗ್ ಜೊತೆ ಚೇತನ್ ಹಂದಟ್ಟು, ನಾಗಪ್ರಕಾಶ್ ಕೋಟಾ, ಉಮೇಶ್ ಕಾರ್ಕಡ, ನಂದು ಜೆಕೆಎಲ್‍ಎಫ್, ಡಿಜೆ ರಾಜು ಕೂಡಾ ಹಾಡಿದ್ದಾರೆ. ಅವರೆಲ್ಲರ ಟೋಟಲ್ ಸಾಂಗ್ ಕಬ್ಜ ಟ್ರ್ಯಾಕ್.

  • ಬಾಬಾ ಸನ್ನಿಧಿಯಲ್ಲಿ.. ವೃದ್ಧಾಶ್ರಮಕ್ಕೆ ಭೇಟಿ ಕೊಟ್ಟ ಸುದೀಪ್ ದಂಪತಿ

    ಬಾಬಾ ಸನ್ನಿಧಿಯಲ್ಲಿ.. ವೃದ್ಧಾಶ್ರಮಕ್ಕೆ ಭೇಟಿ ಕೊಟ್ಟ ಸುದೀಪ್ ದಂಪತಿ

    ಕಿಚ್ಚು ಸುದೀಪ್ ಮತ್ತು ಪ್ರಿಯಾ ಸುದೀಪ್ ಶಿರಡಿಯ ವೃದ್ಧಾಶ್ರಮಕ್ಕೆ ಭೇಟಿ ಕೊಟ್ಟಿದ್ದಾರೆ. ಇತ್ತೀಚೆಗೆ ತಾನೇ ಆಸ್ಟ್ರೆಲಿಯಾ ಪ್ರವಾಸ ಮಾಡಿ ವಿಶ್ವಕಪ್ ಮ್ಯಾಚ್ ನೋಡಿ ಬಂದಿದ್ದ ಪ್ರಿಯಾ ವಾಪಸ್ ಬಂದ ಮೇಲೆ ತೀರ್ಥಕ್ಷೇತ್ರಗಳಿಗೆ ಭೇಟಿ ಕೊಡುತ್ತಿದ್ದಾರೆ. ಸಾಯಿಬಾಬಾ ಸನ್ನಿಧಿಗೆ ತೆರಳಿದ ನಂತರ ಶಿರಡಿಯಲ್ಲಿರುವ ವೃದ್ಧಾಶ್ರಮಕ್ಕೆ ಭೇಟಿ ಕೊಟ್ಟಿದ್ದಾರೆ.

    ವೃದ್ಧಾಶ್ರಮದಲ್ಲಿರುವ ಹಿರಿಯ ಜೀವಗಳ ಆರೋಗ್ಯ ವಿಚಾರಿಸಿದ ಸುದೀಪ್, ಪ್ರಿಯಾ ದಂಪತಿ ವೃದ್ಧಾಶ್ರಮದ ವ್ಯವಸ್ಥೆಯನ್ನೂ ನೋಡಿಕೊಂಡು ಬಂದಿದ್ದಾರೆ. ದ್ವಾರಕಮಾಲ್ ವೃದ್ಧಾಶ್ರಮದಲ್ಲಿ ಸ್ವಲ್ಪ ಹೊತ್ತು ಕಳೆದು ಬಂದಿದ್ದಾರೆ. ಮಗಳು ಸಾನ್ವಿಯನ್ನೂ ವೃದ್ಧಾಶ್ರಮಕ್ಕೆ ಕರೆದುಕೊಂಡು ಹೋಗಿದ್ದಾರೆ ಸುದೀಪ್ ದಂಪತಿ. ಇವರ ಜೊತೆ ಕುಟುಂಬದ ಆಪ್ತಮಿತ್ರರೂ ಹೋಗಿರುವುದು ವಿಶೇಷ.

    ಹೊಸದೊಂದು ಸಿನಿಮಾಗೆ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿರುವ ಕಿಚ್ಚ ಸುದೀಪ್, ಅದು ಶುರುವಾಗುವ ಮೊದಲು ಇಡೀ ಫ್ಯಾಮಿಲಿಯೊಂದಿಗೆ ಸುತ್ತುವ ಮೂಡ್‍ನಲ್ಲಿದ್ದಾರೆ. ಹೀಗಾಗಿಯೇ ಆಸ್ಟ್ರೇಲಿಯಾ ಪ್ರವಾಸ ಮುಗಿಯುತ್ತಿದ್ದಂತೆಯೇ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ.

  • ಬಾರೋ ಪೈಲ್ವಾನ.. ಹಾಡು ಸೂಪರೋ ಅಣ್ಣಾ

    baro pailwan creates sensation

    ಪೈಲ್ವಾನ್ ಚಿತ್ರದ ಮತ್ತೊಂದು ಸಾಂಗ್ ಇದು. ಬಾರೋ ಪೈಲ್ವಾನ.. ಹಾಡಿದು. ಗೆದ್ದ ಗೆದ್ದ ಕುಸ್ತಿಯ ಗೆದ್ದ ಎದುರಿಲ್ಲ ಈ ಪೈಲ್ವಾನ್‍ಗೆ.. ಎದ್ದ ಮಣ್ಣಲಿ ಎದ್ದ ಎದುರಾದ ಬಿರುಗಾಳಿಗೆ.. ಎಂದು ಶುರುವಾಗುವ ಹಾಡು ತಾರಕಕ್ಕೆ ಹೋಗುವುದು ಬಾರೋ ಪೈಲ್ವಾನ್ ಎಂಬ ಬ್ಯಾಕ್‍ಗ್ರೌಂಡ್ ಸೌಂಡ್ ಶುರುವಾದಾಗ..

    ಇದು ಪೈಲ್ವಾನ್‍ನ ಇಂಟ್ರೊಡಕ್ಷನ್ ಸಾಂಗ್. ಹೆಜ್ಜೆ ಹಾಕಿರೋದು ಸುದೀಪ್ ಒಬ್ಬರೇ ಅಲ್ಲ, ಸುನಿಲ್ ಶೆಟ್ಟಿ ಕೂಡಾ ಸ್ಟೆಪ್ಪು ಹಾಕಿದ್ದಾರೆ. ಐದೂ ಭಾಷೆಯಲ್ಲಿ ಹಾಡಿನ ಲಿರಿಕಲ್ ವಿಡಿಯೋ ಹೊರಬಿದ್ದಿದ್ದು, ಕನ್ನಡವೊಂದರಲ್ಲೇ ಈಗಾಗಲೇ 10 ಲಕ್ಷಕ್ಕೂ ಹೆಚ್ಚು ಮಂದಿ ನೋಡಿ ಮೆಚ್ಚಿದ್ದಾರೆ.

    ಅರ್ಜುನ್ ಜನ್ಯ ಮ್ಯೂಸಿಕ್ಕು ಒನ್ಸ್ ಎಗೇಯ್ನ್ ಕಿಕ್ಕೇರಿಸುತ್ತಿದ್ದರೆ, ವಿಜಯ್ ಪ್ರಕಾಶ್, ಕೈಲಾಷ್ ಖೇರ್ ಮತ್ತು ಚಂದನ್ ಶೆಟ್ಟಿಯವರ ವಾಯ್ಸ್ ಕಿವಿಯಲ್ಲಿ ಮಾರ್ದನಿಸುವಂತಿದೆ. ಸಾಹಿತ್ಯ ಕೃಪೆ ನಾಗೇಂದ್ರ ಪ್ರಸಾದ್ ಅವರದ್ದು.

    ಕೃಷ್ಣ ನಿರ್ದೇಶನದ ಚಿತ್ರಕ್ಕೆ ಅವರ ಪತ್ನಿ ಸ್ವಪ್ನಾ ಕೃಷ್ಣಾ ಅವರೇ ನಿರ್ಮಾಪಕಿ. ಹಾಡಿನ ಜೋಷ್ ಮತ್ತು ಫೋರ್ಸ್ ಬಗ್ಗೆ ಸೆಲಬ್ರಿಟಿಗಳು ಮತ್ತು ಫ್ಯಾನ್ಸ್ ಫಿದಾ ಆಗಿದ್ದಾರೆ. ಅರ್ಜುನ್ ಜನ್ಯಾಗೆ ಹೆಚ್ಚು ಸ್ಕೋರ್ ಕೊಟ್ಟಿದ್ದಾರೆ.

  • ಬಾಲಕಿಯ ವಿದ್ಯಾಭ್ಯಾಸದ ಕನಸಿಗೆ ಶಕ್ತಿ ತುಂಬಿದ ಕಿಚ್ಚ

    sudeep lights up an under privileged girl's education dream

    ಕಿಚ್ಚ ಸುದೀಪ್ ಮತ್ತೊಮ್ಮೆ ಹೃದಯವಂತಿಕೆ ಮೆರೆದಿದ್ದಾರೆ. ಬೆಂಗಳೂರಿನ ನಾಗದೇವನಹಳ್ಳಿಯ ಬಾಲಕಿ ಕನೀಷಾ, 6ನೇ ತರಗತಿ ವಿದ್ಯಾರ್ಥಿನಿ. ಚೆನ್ನಾಗಿ ಓದುತ್ತಿದ್ದ ಹುಡುಗಿಗೆ ತಂದೆಯಿಲ್ಲ. ಇತ್ತ ಕೊರೊನಾ ವೈರಸ್ ಎಫೆಕ್ಟ್‍ನಿಂದಾಗಿ ತಾಯಿಗೆ ದುಡಿಮೆಯೂ ಇಲ್ಲದೆ ಪರದಾಡುವಂತಾಗಿತ್ತು. ಏನು ಮಾಡುವುದೋ ಗೊತ್ತಾಗದೆ, ಬಾಲಕಿಯ ತಾಯಿ ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್‍ನ್ನು ಸಂಪರ್ಕಿಸಿದರು.

    ತಕ್ಷಣ ಸುದೀಪ್ ಟ್ರಸ್ಟ್ ವಿದ್ಯಾರ್ಥಿನಿಯ ಸ್ಕೂಲ್ ಫೀಸ್ ಕಟ್ಟಿದ್ದಷ್ಟೆ ಅಲ್ಲ, ವಿದ್ಯಾರ್ಥಿನಿಯ ಶಿಕ್ಷಣದ ಸಂಪೂರ್ಣ ಹೊಣೆ ಹೊತ್ತುಕೊಂಡಿದೆ. ಕನೀಷಾ ಸಂದೀಪಿನಿ ಹೈಟೆಕ್ ಸ್ಕೂಲ್‍ನಲ್ಲಿ ಓದುತ್ತಿದ್ದಾಳೆ. ಕಾನಿಷಾ ಭವಿಷ್ಯ ಉಜ್ವಲವಾಗಲಿ.

  • ಬಾಲಿವುಡ್ ಕಣ್ಣೀಗ ಕಬ್ಜ ಮೇಲೆ..

    ಬಾಲಿವುಡ್ ಕಣ್ಣೀಗ ಕಬ್ಜ ಮೇಲೆ..

    ಕೆಜಿಎಫ್. ವಿಕ್ರಾಂತ್ ರೋಣ. 777 ಚಾರ್ಲಿ. ಈಗ ಕಾಂತಾರ. ಬೆನ್ನು ಬೆನ್ನಿಗೇ ಕನ್ನಡದ ಚಿತ್ರಗಳು ಗೆಲ್ಲುತ್ತಿರುವ ಹಿನ್ನೆಲೆಯಲ್ಲಿ ಬಾಲಿವುಡ್ ಕಣ್ಣೀಗ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಮೇಲೆ ಬಿದ್ದಿದೆ. ಬಾಲಿವುಡ್ನ ಕಣ್ಣು ಬಿದ್ದಿರೋ ಚಿತ್ರ ಕಬ್ಜ. ಆರ್. ಚಂದ್ರು ನಿರ್ದೇಶನದ ಕಬ್ಜ ಕೇವಲ ಕನ್ನಡದಲ್ಲಿ ಅಲ್ಲ, 8 ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಟೀಸರ್ ಕೂಡಾ ಬಂದಿದ್ದು ಸಂಚಲನವನ್ನೇ ಸೃಷ್ಟಿಸಿದೆ.

    ಈ ಚಿತ್ರದಲ್ಲಿ ಉಪೇಂದ್ರ, ಸುದೀಪ್, ಶ್ರೀಯಾ ಸರಣ್ ಸೇರಿದಂತೆ ಸ್ಟಾರ್ ನಟ ನಟಿಯರೇ ನಟಿಸಿದ್ದಾರೆ. ಚಿತ್ರದ ಬಿಡುಗಡೆಗೆ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಬರೀ ಪ್ರೇಕ್ಷಕರಷ್ಟೇ ಅಲ್ಲ, ಬೇರೆ ಚಿತ್ರರಂಗಗಳು ಸಹ ಈ ಚಿತ್ರವನ್ನು ಎದುರು ನೋಡುತ್ತಿದ್ದು, ಇತ್ತೀಚೆಗೆ ಇದೇ ವಿಚಾರವಾಗಿ ಬಾಲಿವುಡ್ನ ಖ್ಯಾತ ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟರ್ ಹಂಚಿಕೊಳ್ಳುವುದರ ಜತೆಗೆ ಚಿತ್ರದ ಬಿಡುಗಡೆ ದಿನಾಂಕಕ್ಕೆ ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ. ಇದಕ್ಕೆ ಪೂರಕವಾಗಿ ಚಿತ್ರತಂಡದವರು ಇನ್ನಷ್ಟೇ ಚಿತ್ರದ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಬೇಕಿದೆ.

    ನವಾಬ್ ಷಾ, ಕಬೀರ್ ಸಿಂಗ್ ದುಹಾನ್, ಪ್ರಮೋದ್ ಶೆಟ್ಟಿ, ಮುರಳಿ ಶರ್ಮ ಮುಂತಾದವರು ಅಭಿನಯಿಸಿದ್ದಾರೆ. ಕೆಜಿಎಫ್ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

  • ಬಿಎಸ್‍ಸಿ ವಿದ್ಯಾರ್ಥಿಗೆ ಕಿಚ್ಚನ ಟ್ರಸ್ಟ್ ಮಾಡಿದ ಸಹಾಯ

    ಬಿಎಸ್‍ಸಿ ವಿದ್ಯಾರ್ಥಿಗೆ ಕಿಚ್ಚನ ಟ್ರಸ್ಟ್ ಮಾಡಿದ ಸಹಾಯ

    ಕಿಚ್ಚ ಸುದೀಪ್ ತಮ್ಮ ಟ್ರಸ್ಟ್ ಮೂಲಕ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿರುವುದು ಹೊಸದೇನೂ ಅಲ್ಲ. ಇತ್ತೀಚೆಗೆ ಹಾಸನದ ಗಿರೀಶ್ ಎಂಬ ಬಿಎಸ್‍ಸಿ ವಿದ್ಯಾರ್ಥಿ ಎಕ್ಸಾಂ ಬರೆಯಲೂ ಸಾಧ್ಯವಾಗದೆ ಕಷ್ಟಕ್ಕೆ ಸಿಲುಕಿದ್ದರು. ಸತತ ಮಳೆಯಿಂದಾಗಿ ಅವರ ಜಮೀನಿನಲ್ಲಿದ್ದ ಬೆಳೆ ಕೊಚ್ಚಿ ಹೋಗಿತ್ತು. ಆ ಹಣದಲ್ಲೇ ಎಕ್ಸಾಂ ಫೀಸ್ ಕಟ್ಟುವ ಯೋಜನೆಯಲ್ಲಿದ್ದ ಕುಟುಂಬ ಕಂಗಾಲಾಗಿ ಹೋಗಿತ್ತು. ಎಕ್ಸಾಂ ಬರೆಯಲೇಬೇಕು, ಇಲ್ಲದಿದ್ದರೆ ಇಷ್ಟು ದಿನದ ಓದು ವ್ಯರ್ಥ.. ಏನು ಮಾಡೋದು ಎಂದು ಪರದಾಡುತ್ತಿದ್ದವರಿಗೆ ನೆನಪಾಗಿದ್ದು ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್.

    ಬಿಎಸ್‍ಸಿ ನರ್ಸಿಂಗ್ ಓದುತ್ತಿದ್ದ ಗಿರೀಶ್ ಅವರು ಕಟ್ಟಬೇಕಿದ್ದ ಫೀಸ್ 21 ಸಾವಿರ ರೂ. ಅಷ್ಟೂ ಹಣವನ್ನು ಟ್ರಸ್ಟ್ ಮೂಲಕ ಭರಿಸಲಾಗಿದೆ. ಗಿರೀಶ್ ಈಗ ನೆಮ್ಮದಿಯಾಗಿ ಎಕ್ಸಾಂ ಬರೆಯಬಹುದು. ಆ ನೆರವಿಗೆ ತಕ್ಕಂತೆ ಆತ ಒಳ್ಳೆಯ ಮಾಕ್ರ್ಸು ತೆಗೆದುಕೊಂಡು ಪಾಸ್ ಆದರೆ.. ಅದು ಸುದೀಪ್ ಟ್ರಸ್ಟ್‍ಗೆ ನೀಡುವ ಅತಿ ದೊಡ್ಡ ಗೌರವ ಎಂಬುದರಲ್ಲಿ ಅನುಮಾನವಿಲ್ಲ.

  • ಬಿಗ್ ಬಾಸ್ ಕಿಚ್ಚನ ಎದುರು ಡಾನ್ ಡಾಲಿ

    ಬಿಗ್ ಬಾಸ್ ಕಿಚ್ಚನ ಎದುರು ಡಾನ್ ಡಾಲಿ

    ಡಾಲಿ ಧನಂಜಯ್ ಅವರಿಗೆ ಮದುವೆ ಮಾಡಿಸುವ ಕಸರತ್ತು ಶುರುವಾದ ಹಾಗಿದೆ. ಮೊನ್ನೆ ಮೊನ್ನೆ ಜಗ್ಗೇಶ್ ಡಾಲಿಗೂ ಆದಿತಿಗೂ ನೆಂಟಸ್ತಿಕೆ ಕುದುರಿಸೋಕೆ ಪ್ರಯತ್ನಿಸಿದ್ದೆ. ಆ ಹುಡುಗಿ ಅಷ್ಟೊತ್ತಿಗೆ ಎಂಗೇಜ್‍ಮೆಂಟ್ ಆಗಿಬಿಟ್ಟಳು ಎಂದು ಓಪನ್ನಾಗಿಯೇ ಹೇಳಿದ್ದರು. ಈಗ ಕಿಚ್ಚ ಸುದೀಪ್ ಕೂಡಾ ಟ್ರೈ ಮಾಡ್ತಿದ್ದಾರಾ.. ಆಗಿರೋದು ಇಷ್ಟು.

    ಡಾಲಿ ಧನಂಜಯ್ ಹೆಡ್ ಬುಷ್ ಚಿತ್ರದ ಪ್ರಚಾರದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಈ ಚಿತ್ರಕ್ಕವರು ಹೀರೋ ಅಷ್ಟೆ ಅಲ್ಲ, ಪ್ರೊಡ್ಯೂಸರ್ ಕೂಡಾ ಹೌದು. ರಾಮ್ಕೋ ಸೋಮಣ್ಣ ಅವರೊಂದಿಗೆ ಸೇರಿ ಡಾಲಿ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 2ನೇ ಸಿನಿಮಾ. ಚಿತ್ರದ ಮೊದಲ ಭಾಗ ಇದೇ 21ಕ್ಕೆ ರಿಲೀಸ್ ಆಗುತ್ತಿದೆ. ಚಿತ್ರದಲ್ಲಿ ಡಾಲಿ ಧನಂಜಯ ಡಾನ್ ಜಯರಾಜನ ಪಾತ್ರ ಮಾಡುತ್ತಿದ್ದಾರೆ. ರೌಡಿಸಂ ಕಥೆಗಳು, ರೌಡಿಯ ಪಾತ್ರ ಡಾಲಿಗೆ ಹೊಸದಲ್ಲ. ಆದರೆ ರಿಯಲ್ ಡಾನ್ ಪಾತ್ರ ಮಾಡುತ್ತಿರುವುದು ಬೇರೆಯದೇ ಅನುಭವ.

    ಚಿತ್ರದ ಪ್ರಚಾರದ ವೇಳೆ ಬಿಗ್ ಬಾಸ್ ಶೋಗೆ ಅತಿಥಿಯಾಗಿ ಬಂದ ಡಾಲಿಯನ್ನು ಕಿಚ್ಚ ಸುದೀಪ್ ಹೊಗಳಿದರು. ಪುಟ್ಟ ಪಾತ್ರ ಮಾಡುತ್ತಾ ಬಂದು ನಿರ್ಮಾಪಕರಾಗಿ ಬಂದ ಡಾಲಿಯ ಸಾಧನೆಗೆ ಚಪ್ಪಾಳೆ ತಟ್ಟಿದರು. ಪರ್ಸನಲ್ ಲೈಫ್ ಬಗ್ಗೆಯೂ ಕೇಳಿದ್ರು. ಮದುವೆ ಯಾವಾಗ ಅನ್ನೋ ಪ್ರಶ್ನೆ ಎದುರಾಯ್ತು. ಸಿಂಗಲ್ಲಾಗಿದ್ದೀನಿ. ಇದೇ ಲೈಫ್ ಚೆನ್ನಾಗಿದೆ ಎಂದರು ಡಾಲಿ.

    ಹೆಡ್ ಬುಷ್ ಚಿತ್ರಕ್ಕೆ ಶೂನ್ಯ ನಿರ್ದೇಶಕರಾಗಿದ್ದು, ಅವರಿಗಿದು ಮೊದಲ ಸಿನಿಮಾ. ಅಗ್ನಿ ಶ್ರೀಧರ್ ಚಿತ್ರಕಥೆ ಸಂಭಾಷಣೆ ಬರೆದಿದ್ದು ಅವರೇ ಚಿತ್ರಕ್ಕೆ ಶಕ್ತಿಯನ್ನೂ ತುಂಬಿದ್ದಾರೆ. ಲೂಸ್ ಮಾದ ಯೋಗಿ ಗಂಗನ ಪಾತ್ರದಲ್ಲಿ, ವಸಿಷ್ಠ ಸಿಂಹ ಕೊತ್ವಾಲನ ಪಾತ್ರದಲ್ಲಿ ನಟಿಸಿದ್ದಾರೆ. ದೇವರಾಜ್, ಶ್ರುತಿ ಹರಿಹರನ್, ಪಾಯಲ್ ರಜಪೂತ್, ರಘು ಮುಖರ್ಜಿ ಸೇರಿದಂತೆ ದೊಡ್ಡ ದೊಡ್ಡ ಕಲಾವಿದರೇ ಚಿತ್ರದಲ್ಲಿ ನಟಿಸಿದ್ದಾರೆ.

  • ಬಿಗ್ ಬಾಸ್ ರೆಡಿ ಟು ಕಮ್

    ಬಿಗ್ ಬಾಸ್ ರೆಡಿ ಟು ಕಮ್

    ಕಿಚ್ಚ ಸುದೀಪ್ ಬಿಡುವಾಗಿ ಕುಳಿತುಕೊಳ್ಳುವವರೇ ಅಲ್ಲ. ಹೀಗಾಗಿಯೇ ತಮ್ಮ ಬ್ಯುಸಿ ಶೆಡ್ಯೂಲ್`ಗೆ ಎಂದಿನಂತೆ ಬಿಗ್ ಬಾಸ್ ಸೇರಿಸಿಕೊಂಡಿದ್ದಾರೆ.

    ಕನ್ನಡ ಕಲರ್ಸ್‍ನವರು 2021ರ ಬಿಗ್ ಬಾಸ್ ಸೀಸನ್ ಶುರು ಮಾಡುತ್ತಿದ್ದು, ಪ್ರೋಮೋ ಶೂಟಿಂಗ್ ನಡೆಯುತ್ತಿದೆ. ಈ ಬಗ್ಗೆ ಸ್ವತಃ ಪರಮೇಶ್ವರ್ ಗುಂಡ್ಕಲ್ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿದ್ದಾರೆ.

    ಸ್ಸೋ.. ಸುದೀಪ್ ಇರುತ್ತಾರೆ. ಎಂದಿನಂತೆ. ಅದೇ ಲವಲವಿಕೆಯಿಂದ.. ಬಿಗ್ ಬಾಸ್ ಮನೆಗೆ ಹೋಗೋರು ಯಾರು..? ಜಸ್ಟ್ ವೇಯ್ಟ್.. 

  • ಬಿಗ್ ಬಾಸ್ ಶೋನಲ್ಲಿ ರಾಜಕೀಯ ನಾಯಕ

    ಬಿಗ್ ಬಾಸ್ ಶೋನಲ್ಲಿ ರಾಜಕೀಯ ನಾಯಕ

    ಇದೇ ಫೆಬ್ರವರಿ 28ರಿಂದ ಬಿಗ್ ಬಾಸ್ ಶೋ ಶುರುವಾಗುತ್ತಿದೆ. ಈ ಬಾರಿಯೂ 17 ಸ್ಪರ್ಧಿಗಳಿರಲಿದ್ದಾರೆ. ಎಂದಿನಂತೆ ಸಂಗೀತ, ಸಿನಿಮಾ, ಕಿರುತೆರೆ, ಕ್ರೀಡೆ, ಸೆಮಿ-ಸೆಲಬ್ರಿಟಿಗಳು ಎಲ್ಲರೂ ಇರುತ್ತಾರೆ. ಇದರಲ್ಲಿ ಈ ಬಾರಿಯ ಸ್ಪೆಷಲ್ ಎಂದರೆ ಒಬ್ಬ ರಾಜಕಾರಣಿ.

    ಯೆಸ್, ಈ ಬಾರಿ ಒಬ್ಬ ಪೊಲಿಟಿಕಲ್ ಲೀಡರ್ ಕೂಡಾ ಇದ್ದಾರಂತೆ. ಅವರು ಯಾರು ಅನ್ನೋದನ್ನು ಕಲರ್ಸ್ ಬಿಟ್ಟುಕೊಟ್ಟಿಲ್ಲ. ಬಿಗ್‍ಬಾಸ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕಲರ್ಸ್ ಟಿವಿ ಪರಮೇಶ್ವರ್ ಗುಂಡ್ಕಲ್ ಈ ಒಬ್ಬ ರಾಜಕಾರಣಿಯೂ ಇರಲಿದ್ದಾರೆ ಎಂದು ಹೇಳಿದ್ದಾರೆ. ಅವರು ಸುದೀಪ್ ಅವರಿಗೂ ಗೊತ್ತಂತೆ.

    ಎಲ್ಲ 17 ಜನರೂ ಕ್ವಾರಂಟೈನ್‍ನಲ್ಲಿದ್ದಾರೆ. ಸ್ಸೋ.. ಈಗ ಚೆಕ್ ಮಾಡ್ತಾ ಹೋಗಿ, ಸುದೀಪ್ ಅವರಿಗೂ ಗೊತ್ತಿರೋ.. ಕಳೆದ ಕೆಲ ದಿನಗಳಿಂದ ಮಿಸ್ ಆಗಿರೋ ಆ ರಾಜಕೀಯ ನಾಯಕ ಯಾರು ಅನ್ನೋದನ್ನ. 

  • ಬಿಗ್ ಹೌಸ್‍ಗೆ ವಿಜಯಲಕ್ಷ್ಮಿ, ಚಂದನ್ ಶೆಟ್ಟಿ ಮತ್ತು...

    big boss 5 enteries are

    ನಾಗಮಂಡಲ ಖ್ಯಾತಿಯ ವಿಜಯಲಕ್ಷ್ಮಿ, ರ್ಯಾಪ್ ಸಂಗೀತಗಾರ ಚಂದನ್ ಶೆಟ್ಟಿ, ಸಿಹಿಕಹಿ ಚಂದ್ರು, ರಾಜೇಶ್ ನಟರಂಗ, ಕಿರುತೆರೆ ಕಲಾವಿದರಾದ ಕವಿತಾ ಗೌಡ, ವರ್ಷಿಣಿ ಕುಸುಮಾ, ಗಾಯಕಿಯರಾದ ಅನುರಾಧ್ ಅಥವಾ ಸುಪ್ರಿಯಾ ಲೋಹಿತ್, ಆರ್‍ಜೆ ರಿಯಾಜ್.. ಹೀಗೆ ಪಟ್ಟಿ ದೊಡ್ಡದಾಗಿದೆ. ಇವರೆಲ್ಲ ಈ ಬಾರಿಯ ಬಿಗ್‍ಬಾಸ್ ಮನೆಯಲ್ಲಿ ಎದುರಾಗಬಹುದು. 

    ಇವರ ಹೆಸರುಗಳೆಲ್ಲ ಅಂತಿಮಗೊಂಡಿದೆ ಎಂಬ ಸುದ್ದಿಯಿದೆಯಾದರೂ, ಅಧಿಕೃತವಾಗೋದು ಬಿಗ್‍ಬಾಸ್ ಶುರುವಾದ ದಿನವೇ. ಅಂದಹಾಗೆ ಈ ಬಾರಿಯ ಬಿಗ್‍ಬಾಸ್‍ನಲ್ಲಿ ಕಿಚ್ಚನ ಇನ್ನೊಂದು ಝಲಕ್ ಕೂಡಾ ಇದೆ. ಸುದೀಪ್ ಈ ಬಾರಿ ಆಗಾಗ್ಗೆ ಬಿಗ್‍ಹೌಸ್‍ನ ಅಡುಗೆ ಮನೆಗೂ ಎಂಟ್ರಿ ಕೊಡ್ತಾ ಇರ್ತಾರಂತೆ. ಸುದೀಪ್ ಅಡುಗೆಯ ಟೇಸ್ಟ್ ನೋಡೋದು ಮಾತ್ರ ಬಿಗ್‍ಬಾಸ್ ಮನೆಯವರು. ವೀಕ್ಷಕರಿಗೇನಿದ್ದರೂ ನಾಲಿಗೆ ಚಪ್ಪರಿಸುವ ಕೆಲಸವಷ್ಟೇ.

  • ಬಿಗ್‍ಬಾಸ್ 7 ಬದಲಾವಣೆ ಗೊತ್ತಾಯ್ತಾ..?

    big boss 7 will have celeb format only

    ಬಿಗ್‍ಬಾಸ್ ರಿಯಾಲಿಟಿ ಶೋ 7ನೇ ಸೀಸನ್‍ಗೆ ಕಾಲಿಟ್ಟಿದೆ. ಒನ್ಸ್ ಎಗೇಯ್ನ್ ಸುದೀಪ್ ಅವರೇ ನಿರೂಪಕ. ಅದರಲ್ಲಿ ಮಾತ್ರ ಯಾವುದೇ ಬದಲಾವಣೆ ಇಲ್ಲ. ಉಳಿದಂತೆ ಕಾರ್ಯಕ್ರಮದಲ್ಲಿ ಸ್ವಲ್ಪ ಬದಲಾವಣೆಗಳಾಗಿವೆ.

    ಈ ಬಾರಿ ಬಿಗ್‍ಬಾಸ್ ಕಲರ್ಸ್ ಸೂಪರ್‍ನಲ್ಲಿ ಅಲ್ಲ, ಕಲರ್ಸ್‍ನಲ್ಲಿಯೇ ಪ್ರಸಾರವಾಗಲಿದೆ.

    ಕಳೆದ ಬಾರಿಯಂತೆ ಈ ಬಾರಿ ಕಾಮನ್ ಮ್ಯಾನ್ ಇರಲ್ಲ. ಜನಸಾಮಾನ್ಯರ ಬಗ್ಗೆ ವೀಕ್ಷಕರು ಹೆಚ್ಚು ಆಸಕ್ತಿ ತೋರದೇ ಇರುವ ಹಿನ್ನೆಲೆಯಲ್ಲಿ ಈ ಬದಲಾವಣೆ. ಅಂದರೆ 15ಕ್ಕೆ 15 ಜನರೂ ಸೆಲಬ್ರಿಟಿಗಳೇ ಆಗಿರುತ್ತಾರೆ.

    ಸೆ.11ರಂದು ಬಿಗ್‍ಬಾಸ್ ಪ್ರೋಮೋ ಶೂಟಿಂಗ್ ನಡೆಯಲಿದೆ. ಅಂದರೆ ಪೈಲ್ವಾನ್ ರಿಲೀಸ್ ಆಗುವ ಮುನ್ನಾ ದಿನ. ಸೆ.13ರಿಂದ ಪ್ರೋಮೋ ರಿಲೀಸ್ ಆಗಲಿದೆ. ಆಗಸ್ಟ್ 20ರಿಂದ ಬಿಗ್‍ಬಾಸ್ ಆರಂಭ.

  • ಬಿಗ್‍ಬಾಸ್ ಜೊತೆ ವಿಲನ್ ಟೀಂ..!

    the villain team in kiccha's big boss 6

    ಬಿಗ್‍ಬಾಸ್ ಜೊತೆ ವಿಲನ್ ಬರ್ತಾರೆ. ಬಿಗ್‍ಬಾಸೂ ಅವ್ರೇ.. ವಿಲನ್ನೂ ಅವ್ರೇ.. ರಾವಣಾನೂ ಅವ್ರೇ.. ನೋ ಡೌಟ್. ಬಿಗ್‍ಬಾಸ್ ಶೋನಲ್ಲಿ ವಿಲನ್ ಟೀಂ ಸಂಗಮವಾಗಿದೆ.

    ಕಿಚ್ಚ ಸುದೀಪ್ ನಡೆಸಿಕೊಡ್ತಿರೋ ಬಿಗ್‍ಬಾಸ್ ಶೋಗೆ, ಶಿವಣ್ಣ, ಪ್ರೇಮ್, ನಿರ್ಮಾಪಕ ಸಿ.ಆರ್.ಮನೋಹರ್ ಜೊತೆ ಜೊತೆಯಾಗಿ ಹೋಗಿದ್ದಾರೆ. ಇವರೆಲ್ಲರ ಜೊತೆ ಚಿತ್ರದಲ್ಲಿ ನಟಿಸಿರುವ ತೆಲುಗು ಸ್ಟಾರ್ ನಟ ಶ್ರೀಕಾಂತ್ ಕೂಡಾ ಇರಲಿದ್ದಾರೆ.

    ಶಿವಣ್ಣ ಮತ್ತು ಸುದೀಪ್ ಒಟ್ಟಿಗೇ ನಟಿಸಲಿದ್ದಾರೆ ಎಂಬ ಸುದ್ದಿ ಬ್ರೇಕ್ ಆಗಿದ್ದೇ ಕಿಚ್ಚ ಸುದೀಪ್‍ರ ಬಿಗ್‍ಬಾಸ್ ಶೋನಲ್ಲಿ. ಅದಾದ ನಂತರ ಕಲಿ ಚಿತ್ರ ಶುರುವಾಗಿತ್ತು. ಅದು ಆಗಲಿಲ್ಲ. ವಿಲನ್ ಆಯ್ತು. ಸೂಪರ್ ಹಿಟ್ ಆಯ್ತು. ಈಗ.. ಸೆಲಬ್ರೇಷನ್ ಟೈಂ.

  • ಬಿಗ್‍ಬಾಸ್ ಫಿನಾಲೆ ಶೋ - ಫ್ಯಾನ್ಸ್‍ಗೆ ನೋ ಎಂಟ್ರಿ

    fans entry restricted for the season's finale

    ಬಿಗ್‍ಬಾಸ್ ಶೋ ಫೈನಲ್ ಹಂತ ತಲುಪಿದೆ. ವಿನ್ನರ್ ಯಾರು ಎಂಬುದು ಮುಂದಿನ ವಾರ ಗೊತ್ತಾಗಲಿದೆ. ಸದ್ಯಕ್ಕೆ ಮನೆಯಲ್ಲಿರೋದು ಕಾರ್ತಿಕ್ ಮತ್ತು ಚಂದನ್ ಶೆಟ್ಟಿ. ಇವರಿಬ್ಬರೂ ಈಗಾಗಲೇ ಸೇಫ್. ಇನ್ನು ಉಳಿದಿರುವುದು ದಿವಾಕರ್, ನಿವೇದಿತಾ ಮತ್ತು ಶ್ರುತಿ. ಇವರಲ್ಲಿ ಯಾರು ಗೆಲ್ಲಬಹುದು..? ಅದು ಈಗ ಸಸ್ಪೆನ್ಸ್.

    ಆ ಸಸ್ಪೆನ್ಸ್‍ನ್ನು ಕಟ್ಟಕಡೆಯ ಕ್ಷಣದವರೆಗೆ ಉಳಿಸಿಕೊಳ್ಳುವ ಸಲುವಾಗಿ, ಈ ಬಾರಿಯ ಫಿನಾಲೆಯಲ್ಲಿ ಫ್ಯಾನ್ಸ್‍ನ್ನು ಹೊರಗಿಡಲು ನಿರ್ಧರಿಸಲಾಗಿದೆ. ಕಳೆದ ಎರಡೂ ಸೀಸನ್‍ಗಳಲ್ಲಿ ಬಿಗ್‍ಬಾಸ್ ವಿನ್ನರ್ ಹೆಸರು ಶೋ ಪ್ರಸಾರವಾಗುವುದಕ್ಕೆ ಮುನ್ನವೇ ಬಹಿರಂಗವಾಗಿತ್ತು. ಶೋಗೆ ವೀಕ್ಷಕರಾಗಿ ಹೋಗಿದ್ದ ಅಭಿಮಾನಿಗಳು, ಅದನ್ನು ಸೋಷಿಯಲ್ ಮೀಡಿಯಾಗೆ ಹರಿಯಬಿಟ್ಟಿದ್ದರು.

    ಹೀಗಾಗಿ ಈ ಬಾರಿ ಬಿಗ್‍ಬಾಸ್ ನಿರ್ಮಾಪಕರು, ಶೋದ ಕುತೂಹಲವನ್ನು ಕೊನೆಯವರೆಗೂ ಉಳಿಸಿಕೊಳ್ಳಲು ನಿರ್ಧರಿಸಿದ್ದಾರೆ. ಕಿಚ್ಚ ಸುದೀಪ್ ನಡೆಸಿಕೊಡುತ್ತಿರುವ ಬಿಗ್‍ಬಾಸ್ ಶೋ, ಕರ್ನಾಟಕದಲ್ಲಿನ ಜನಪ್ರಿಯ ರಿಯಾಲಿಟಿ ಶೋ.

  • ಬಿಗ್‍ಬಾಸ್ ಮನೆಯಲ್ಲಿರೋರು ಇವರೇ..

    the contestants of big boss 6 are

    ಬಿಗ್‍ಬಾಸ್ ರಿಯಾಲಿಟಿ ಶೋ ಶುರುವಾಗಿದೆ. ಈ ಬಾರಿ 18 ಸ್ಪರ್ಧಿಗಳನ್ನು ಬಿಗ್‍ಹೌಸ್‍ಗೆ ಕಳಿಸಿದ್ದಾರೆ ಕಿಚ್ಚ ಸುದೀಪ್. ಚಿತ್ರನಟಿ ಸೋನು ಪಾಟೀಲ್, ಕಿರುತೆರೆಯಲ್ಲಿ ಹೆಸರು ಮಾಡಿರುವ ಜಯಶ್ರೀ ರಾಜ್, ಒಗ್ಗರಣೆ ಡಬ್ಬಿ ಮುರಳಿ, ರಂಗಭೂಮಿ ನಟಿ ಅಕ್ಷತಾ ಪಾಂಡವಪುರ, ಲಕ್ಷ್ಮೀ ಬಾರಮ್ಮ ಖ್ಯಾತಿಯ ಕವಿತಾ ಗೌಡ, ಆರ್‍ಜೆ ರ್ಯಾಪಿಡ್ ರಶ್ಮಿ, ಹಿನ್ನೆಲೆ ಗಾಯಕ ನವೀನ್ ಸಜ್ಜು, ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ಪುಟ್ಟಸ್ವಾಮಿ ಸೇರಿದಂತೆ ಒಟ್ಟು 18 ಸ್ಪರ್ಧಿಗಳು ಬಿಗ್‍ಬಾಸ್ ಮನೆಗೆ ಹೋಗಿದ್ದಾರೆ.

  • ಬಿಗ್‍ಬಾಸ್ ಲಾಸ್ಟ್ ಮಿನಿಟ್ ಸಸ್ಪೆನ್ಸ್

    big boss 5

    ಬಿಗ್‍ಬಾಸ್ ಶುರುವಾಗಲಿದೆ ಎನ್ನುವುದು ಸುದ್ದಿಯಾಗುವುದೇ ತಡ, ಸ್ಪರ್ಧಿಗಳು ಯಾರಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಶುರುವಾಗುತ್ತೆ. ಆದರೆ, ಈ ಬಾರಿಯ ಬಿಗ್‍ಬಾಸ್ ಕೊನೆಯ ಕ್ಷಣದವರೆಗೂ ಸಸ್ಪೆನ್ಸ್ ಕಾಯ್ದುಕೊಂಡಿದ್ದು ದೊಡ್ಡದು. ಒಂದೆರಡು ಹೆಸರುಗಳು ಹೊರಬಿದ್ದಿದ್ದವಾದರೂ, ಒಟ್ಟು 17 ಸ್ಪರ್ಧಿಗಳಲ್ಲಿ ಬಹಿರಂಗವಾದ ಸ್ಪರ್ಧಿಗಳ ವಿವರ 5ನ್ನೂ ಮುಟ್ಟಿರಲಿಲ್ಲ. ಈಗ ಬಿಗ್‍ಬಾಸ್ ಶುರುವಾಗಿದೆ. ಬಿಗ್‍ಬಾಸ್ ಮನೆ ಸೇರಿದವರ ಪಟ್ಟಿ ಈ ಬಾರಿ ನಿಜಕ್ಕೂ ಇಂಟ್ರೆಸ್ಟಿಂಗ್.

    ಸಿಹಿಕಹಿ ಚಂದ್ರು - ನಟ, ನಿರ್ದೇಶಕ, ದಯಾಳ್ ಪದ್ಮನಾಭನ್ - ನಿರ್ದೇಶಕ, ನಿರ್ಮಾಪಕ, ಕಾರ್ತಿಕ್ ಜಯರಾಂ (ಜೆಕೆ) - ನಟ, ತೇಜಸ್ವಿನಿ ಪ್ರಕಾಶ್ - ನಟಿ, ಅಶಿತಾ, ಕೃಷಿ ತಾಪಂಡಾ, ಅನುಪಮಾ (ಅಕ್ಕ ಧಾರಾವಾಹಿ ಖ್ಯಾತಿ), ರ್ಯಾಪರ್ ಚಂದನ್ ಶೆಟ್ಟಿ, ಸ್ಟೇಜ್ ಆ್ಯಂಕರ್ ರಿಯಾಜ್ ಬಾಷಾ ಇವರೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಬಣ್ಣದ ಲೋಕದವರು. ಇನ್ನು ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಇದ್ದಾರೆ.

    ಜನಸಾಮಾನ್ಯರ ಕೋಟಾದಲ್ಲಿ ಮೇಘಾ, ನಿವೇದಿತಾ ಗೌಡ, ಸಮೀರ್ ಆಚಾರ್ಯ, ಜಗನ್, ದಿವಾಕರ್, ಸುಮಾ ರಾಜ್‍ಕುಮಾರ್ ಬಿಗ್‍ಬಾಸ್ ಪ್ರವೇಶಿಸಿದ್ದಾರೆ.

    ಇನ್ನು 100 ದಿನ.. 17 ಸ್ಪರ್ಧಿಗಳು.. 47 ಕ್ಯಾಮೆರಾಗಳು.. ಬಿಗ್‍ಬಾಸ್ ಮನೆಯಲ್ಲಿನ ಚಿತ್ರ ವಿಚಿತ್ರ ಕಥನಾವಳಿ.. ವಾರಕ್ಕೆರಡು ಬಾರಿ ಕಿಚ್ಚನ ಜೊತೆ.. ಮನರಂಜನೆ ಭರಪೂರ ಸಿದ್ಧವಾಗಲಿದೆ.

  • ಬಿಡುಗಡೆಗೆ ಮುನ್ನವೇ ವಿಕ್ರಾಂತ್ ರೋಣ 24 ಕೋಟಿ ಬಿಸಿನೆಸ್..?!

    ಬಿಡುಗಡೆಗೆ ಮುನ್ನವೇ ವಿಕ್ರಾಂತ್ ರೋಣ 24 ಕೋಟಿ ಬಿಸಿನೆಸ್..?!

    ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಆಗುವುದಕ್ಕೂ ಮುನ್ನವೇ ದೊಡ್ಡ ಬಿಸಿನೆಸ್ ಮಾಡಿದೆ. ಅನೂಪ್ ಭಂಡಾರಿ ನಿರ್ದೇಶನದ ಚಿತ್ರದಲ್ಲಿ ಕಿಚ್ಚ ಸುದೀಪ್ ಹೀರೋ. ನಿರೂಪ್ ಭಂಡಾರಿ ಕೂಡಾ ಪ್ರಧಾನ ಪಾತ್ರದಲ್ಲಿರೋ ಸಿನಿಮಾ ವಿಕ್ರಾಂತ್ ರೋಣ. ಫೆಬ್ರವರಿ 24ರಂದು ರಿಲೀಸ್ ಆಗುತ್ತಿರುವ ವಿಕ್ರಾಂತ್ ರೋಣ ಈಗಾಗಲೇ ದೊಡ್ಡ ಮಟ್ಟದಲ್ಲಿ ಪ್ರಚಾರ ಕಾರ್ಯ ಆರಂಭಿಸಿದೆ.

    ಈಗ ರಿಲೀಸ್ ಆಗುವುದಕ್ಕೂ ಮೊದಲೇ ಚಿತ್ರದ ಸ್ಯಾಟಲೈಟ್ ಮತ್ತು ಓಟಿಟಿ ರೈಟ್ಸ್‍ಗಳಲ್ಲಿ 24 ಕೋಟಿ ಬಿಸಿನೆಸ್ ಮಾಡಿದೆ ಎನ್ನುವ ಸುದ್ದಿ ಇದೆ. ಡಬ್ಬಿಂಗ್, ಆಡಿಯೋ ರೈಟ್ಸ್‍ಗಳು ಇನ್ನೂ ನಿರ್ಮಾಪಕರ ಬಳಿಯೇ ಇದೆ. ಚಿತ್ರದ ಬಜೆಟ್ ಈಗಾಗಲೇ 50 ಕೋಟಿ ದಾಟಿದೆ. ಝೀ ಗ್ರೂಪ್‍ನವರು ಓಟಿಟಿ ಮತ್ತು ಸ್ಯಾಟಲೈಟ್ ಖರೀದಿಸಿದ್ದಾರೆ. ಪ್ರಚಾರವನ್ನೂ ಅವರೇ ವಹಿಸಿಕೊಂಡಿದ್ದಾರೆ.

    ಸದ್ಯಕ್ಕೆ ಇವಿಷ್ಟು ಬಿಸಿನೆಸ್‍ನಲ್ಲೇ ಚಿತ್ರದ ಬಹುಪಾಲು ಬಂಡವಾಳ ವಾಪಸ್ ಬಂದಂತಾಗಿದ್ದು, ಥಿಯೇಟರಿನಲ್ಲೂ ಚಿತ್ರ ದಾಖಲೆ ಬರೆಯುವ ನಿರೀಕ್ಷೆ ಇದೆ.

  • ಬಿಲ್ಲ ರಂಗ ಬಾಷಾ.. ಕಿಚ್ಚನ ಚಿತ್ರಕ್ಕೆ ತಲೈವಾ ಟೈಟಲ್

    kiccha's new movie title is billa ranga basha

    ಬಿಲ್ಲಾ ರಂಗಾ.. ಈ ಹೆಸರು ಕೇಳಿದರೆ ಥಟ್ಟನೆ ನೆನಪಿಗೆ ಬರೋದು ರಜನಿಕಾಂತ್. ಅದು 1980ರಲ್ಲಿ ತಮಿಳಿನಲ್ಲಿ ರಿಲೀಸ್ ಆಗಿದ್ದ ಸಿನಿಮಾ. ಡಾನ್ ಚಿತ್ರದ ರೀಮೇಕ್ ಆಗಿದ್ದರೂ, ಅದನ್ನು ತಮ್ಮ ಸ್ಟೈಲ್‍ನಿಂದಲೇ ಮರೆಮಾಚಿಸಿಬಿಟ್ಟಿದ್ದರು ರಜನಿ. ತೆಲುಗಿನಲ್ಲಿ ಬಿಲ್ಲಾ ರಂಗಾ ಅನ್ನೋ ಹೆಸರಲ್ಲಿ ಚಿರಂಜೀವಿ ನಟಿಸಿದ್ದರು. 

    ಕೆಲವು ವರ್ಷಗಳ ಹಿಂದೆ ಅದೇ ಚಿತ್ರವನ್ನು ತೆಲುಗಿನಲ್ಲಿ ಪ್ರಭಾಸ್, ತಮಿಳಿನಲ್ಲಿ ಅಜಿತ್ ಮತ್ತೊಮ್ಮೆ ಮಾಡಿದ್ದರು. ಆಗಲೂ ಚಿತ್ರಗಳು ಸೂಪರ್ ಹಿಟ್. ಇನ್ನು ಭಾಷಾ ಎಂದರೆ, ಅದು ರಜನಿಕಾಂತ್ ಮಾತ್ರ. 

    ಈಗ ಈ ಮೂರು ಹೆಸರುಗಳನ್ನೂ ಸೇರಿಸಿ ಹೊಸ ಚಿತ್ರದ ಟೈಟಲ್ ರೆಡಿಯಾಗಿದೆ. ಬಿಲ್ಲ ರಂಗ ಭಾಷಾ.

    ಇದು ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನದ ಸಿನಿಮಾ. ಹೀರೋ ಕಿಚ್ಚ ಸುದೀಪ್. ನಿರ್ಮಾಪಕರೂ ಅವರೇ. ಪೈಲ್ವಾನ್, ಕೋಟಿಗೊಬ್ಬ 3 ಮುಗಿದ ನಂತರ ಬಿಲ್ಲ ರಂಗ ಭಾಷಾ ಚಿತ್ರದ ಚಿತ್ರೀಕರಣ ಶುರುವಾಗಲಿದೆ.

    Related Articles :-

    ರಂಗಿತರಂಗ ನಿರ್ದೇಶಕರ ಜೊತೆ ಸುದೀಪ್ ಸಿನಿಮಾ