` kiccha sudeepa - chitraloka.com | Kannada Movie News, Reviews | Image

kiccha sudeepa

 • ಫೇಸ್ ಬುಕ್ಕಿಗೆ ಎಂಟ್ರಿ ಕೊಟ್ಟ ಕಿಚ್ಚ

  sudeep enters facebook

  ಕಿಚ್ಚ ಸುದೀಪ್ ಟ್ವಿಟರ್‌ನಲ್ಲಿ ಸದಾ ಸಕ್ರಿಯ. ಇನ್‌ಸ್ಟಾಗ್ರಾಮ್‌ನಲ್ಲಿ ಕೂಡಾ ಫುಲ್ ಆಕ್ಟಿವ್. ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ನಿರಂತರ ಟಚ್‌ನಲ್ಲಿರೋ ಸುದೀಪ್, ಈಗ ಫೇಸ್‌ಬುಕ್ಕಿಗೆ ಎಂಟ್ರಿ ಕೊಟ್ಟಿದ್ದಾರೆ.

  ಟ್ವಿಟರಿನಲ್ಲಿ 2.3 ಮಿಲಿಯನ್ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ 5 ಲಕ್ಷಕ್ಕೂ ಹೆಚ್ಚು ಫಾಲೋರ‍್ಸ್ ಹೊಂದಿರುವ ಸುದೀಪ್‌ಗೆ ಫೇಸ್‌ಬುಕ್ಕಿನಲ್ಲೂ ಅಭೂತಪೂರ್ವ ಸ್ವಾಗತ ಸಿಕ್ಕಿದೆ.

  ಸುದೀಪ್ ತಮ್ಮ ಫೇಸ್ ಬುಕ್ ಪೇಜ್‌ಗೆ ಐ ಆ್ಯಮ್ ಕೆ ಹೆಸರಿಟ್ಟಿದ್ದು, ತಮ್ಮ ಫೋಟೋ ಹಾಕಿದ್ದಾರೆ.

 • ಫ್ಯಾಂಟಮ್ ಜೊತೆ ಫಕೀರನೂ ಬಂದ..!

  meet fakira from the world of phantom

  ಫ್ಯಾಂಟಮ್ ಚಿತ್ರದ ವಿಕ್ರಾಂತ್ ರೋಣನ ಲುಕ್ ನೋಡಿ ಥ್ರಿಲ್ ಆಗಿದ್ದವರಿಗೆ ಈಗ ಫಕೀರನ ಲುಕ್ಕೂ ಸಿಕ್ಕಿದೆ. ಸರ್‍ಪ್ರೈಸ್ ಕೊಡುತ್ತೇನೆ ಎಂದಿದ್ದ ನಿರ್ದೇಶಕ ಅನೂಪ್ ಭಂಡಾರಿ, ಚಿತ್ರದ ಇನ್ನೊಬ್ಬ ಹೀರೋ ನಿರೂಪ್ ಭಂಡಾರಿಯ ಪಾತ್ರ ಬಹಿರಂಗ ಪಡಿಸಿದ್ದಾರೆ.

  ಚಿತ್ರದಲ್ಲಿ ನಿರೂಪ್ ಭಂಡಾರಿ ಪಾತ್ರದ ಹೆಸರು ಸಂಜೀವ್ ಗಂಭೀರ್. ಲಂಡನ್ನಿನಿಂದ ಭಾರತಕ್ಕೆ ವಾಪಸ್ ಆದ ಹುಡುಗ. ನಗುತ್ತಾ.. ನಗಿಸುತ್ತಾ.. ತರಲೆ ಮಾಡುತ್ತಾ ಇರುವ ಯುವಕ. ಹೆಸರು ಮಾತ್ರ ಸಂಜೀವ್ ಗಂಭೀರ್. ಅವರ ಪಾತ್ರಕ್ಕೆ ಇನ್ನೊಂದು ಹೆಸರೇ ಫಕೀರ.

  ನಟ ನಿರೂಪ್ ಅವರನ್ನು ಈ ಪೋಸ್ಟರ್ ಮೂಲಕ ಸ್ವಾಗತ ಕೋರಿದ್ದಾರೆ ಚಿತ್ರದ ಹೀರೋ ಕಿಚ್ಚ ಸುದೀಪ್, ನಿರ್ಮಾಪಕ ಜ್ಯಾಕ್ ಮಂಜು. ಫ್ಯಾಂಟಮ್ ಇನ್ನೂ ಶೂಟಿಂಗ್‍ನಲ್ಲಿದೆ.ಕೂಡಾ ಇದ್ದರು.

 • ಫ್ಯಾಂಟಮ್ ಪೋಸ್ಟರ್ ಕ್ರೇಜ್

  phantom poster crae

  ಕಿಚ್ಚ ಸುದೀಪ್ ಅವರ ಹೊಸ ಸಿನಿಮಾ ಫ್ಯಾಂಟಮ್. ಒಂದೆಡೆ ಕೋಟಿಗೊಬ್ಬ 3 ಮುಗಿಸಿದವರೇ, ಹೊಸ ಚಿತ್ರಕ್ಕೆ ಶ್ರೀಕಾರ ಹಾಡಿದ್ದಾರೆ ಕಿಚ್ಚ ಸುದೀಪ. ರಂಗಿತರಂ ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನದ ಚಿತ್ರ ಫ್ಯಾಂಟಮ್. ಹೀಗಾಗಿ ಕುತೂಹಲವೂ ಹೆಚ್ಚು. ನಿರೀಕ್ಷೆಯೂ ಹೆಚ್ಚು. ಚಿತ್ರದ ಚಿತ್ರೀಕರಣ ಶುರುವಾಗಿದೆ.

  ಚಿತ್ರದ ಹೆಸರೊಂದು ಬಿಟ್ಟರೆ, ಮಿಕ್ಕ ಯಾವುದರ ಗುಟ್ಟನ್ನೂ ಬಿಟ್ಟುಕೊಡದ ಅನೂಪ್, ಚಿತ್ರದ ಒಂದು ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಶೂಟಿಂಗ್ ಶುರು ಎಂಬ ಮೆಸೇಜ್ ಕೊಟ್ಟು ಪೋಸ್ಟರ್ ಕೊಟ್ಟಿದ್ದಾರೆ ಅನೂಪ್. ಕಿಚ್ಚನ ಕೈಲಿ ಬಂದೂಕು. ಸಖತ್ ಸ್ಟೈಲಿಷ್ ಆಗಿರೋ ಫ್ಯಾಂಟಮ್ ಪೋಸ್ಟರ್ ಕ್ರೇಜ್ ಸೃಷ್ಟಿಸಿದೆ. ಈ ಚಿತ್ರದಲ್ಲಿ ನಿರೂಪ್ ಭಂಡಾರಿ ಕೂಡಾ ನಟಿಸುತ್ತಿದ್ದಾರೆ.

 • ಬಂದ ನೋಡು ಪೈಲ್ವಾನ್..

  banda nodo pailwan song

  ಪೈಲ್ವಾನ್ ತೋಳು ನೋಡು ಉಕ್ಕು.. ಒಂದೇ ಏಟು ಸಾಕು.. ದೇವ್ರೇ ನಿಂಗೆ ದಿಕ್ಕು..  ಬಂದ ನೋಡು ಪೈಲ್ವಾನ್..

  ಪೈಲ್ವಾನ್ ಚಿತ್ರದ ಥೀಮ್ ಮ್ಯೂಸಿಕ್ ಇರುವ ಹಾಡಿದು. ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಮಾಡಿ, ಮೊದಲ ಖುಷಿ ಕೊಟ್ಟಿದೆ ಪೈಲ್ವಾನ್ ಟೀಂ. ಪೋಸ್ಟರುಗಳು ಹಾಗೂ ಟೀಸರ್ ಮೂಲಕ ನಿರೀಕ್ಷೆ ಹುಟ್ಟಿಸಿದ್ದ ಪೈಲ್ವಾನ್ ಚಿತ್ರದ ಲಿರಿಕಲ್ ವಿಡಿಯೋ ಭಾರಿ ಸದ್ದು ಮಾಡುತ್ತಿದೆ.

  ಕಿಚ್ಚ ಸುದೀಪ್ ಹುರಿಗಟ್ಟಿದ ದೇಹ ಇಡೀ ಹಾಡಿನಲ್ಲಿ ಎದ್ದು ಕಂಡರೆ, ಬ್ಯಾಕ್‍ಗ್ರೌಂಡ್‍ನಲ್ಲಿ ಭರ್ಜರಿ ಸ್ಕೋರ್ ಮಾಡಿದ್ದಾರೆ ಅರ್ಜುನ್ ಜನ್ಯ. ಮ್ಯೂಸಿಕ್ಕು ಕಿಕ್ಕೇರಿಸುತ್ತಿದೆ ಎನ್ನುವುದು ಅಭಿಮಾನಿಗಳ ಒನ್‍ಲೈನ್ ಕಾಂಪ್ಲಿಮೆಂಟ್.

  ಕೃಷ್ಣ ನಿರ್ದೇಶನದ ಚಿತ್ರದ ಈ ಹಾಡಿಗೆ ಸಾಹಿತ್ಯ ಬರೆದಿರುವುದು ನಾಗೇಂದ್ರ ಪ್ರಸಾದ್. ಇಡೀ ಚಿತ್ರದಲ್ಲಿ ಈ ಹಾಡು ಪದೇ ಪದೇ ಬರಲಿದ್ದು, ಇಡೀ ಚಿತ್ರದ ಥೀಮ್ ಸಾಂಗ್ ಇದು ಎಂದಿದ್ದಾರೆ ನಿರ್ದೇಶಕ ಕೃಷ್ಣ. ಐದೂ ಭಾಷೆಯಲ್ಲಿ ಲಿರಿಕಲ್ ವಿಡಿಯೋ ಬಂದಿದೆ.

 • ಬಾರೋ ಪೈಲ್ವಾನ.. ಹಾಡು ಸೂಪರೋ ಅಣ್ಣಾ

  baro pailwan creates sensation

  ಪೈಲ್ವಾನ್ ಚಿತ್ರದ ಮತ್ತೊಂದು ಸಾಂಗ್ ಇದು. ಬಾರೋ ಪೈಲ್ವಾನ.. ಹಾಡಿದು. ಗೆದ್ದ ಗೆದ್ದ ಕುಸ್ತಿಯ ಗೆದ್ದ ಎದುರಿಲ್ಲ ಈ ಪೈಲ್ವಾನ್‍ಗೆ.. ಎದ್ದ ಮಣ್ಣಲಿ ಎದ್ದ ಎದುರಾದ ಬಿರುಗಾಳಿಗೆ.. ಎಂದು ಶುರುವಾಗುವ ಹಾಡು ತಾರಕಕ್ಕೆ ಹೋಗುವುದು ಬಾರೋ ಪೈಲ್ವಾನ್ ಎಂಬ ಬ್ಯಾಕ್‍ಗ್ರೌಂಡ್ ಸೌಂಡ್ ಶುರುವಾದಾಗ..

  ಇದು ಪೈಲ್ವಾನ್‍ನ ಇಂಟ್ರೊಡಕ್ಷನ್ ಸಾಂಗ್. ಹೆಜ್ಜೆ ಹಾಕಿರೋದು ಸುದೀಪ್ ಒಬ್ಬರೇ ಅಲ್ಲ, ಸುನಿಲ್ ಶೆಟ್ಟಿ ಕೂಡಾ ಸ್ಟೆಪ್ಪು ಹಾಕಿದ್ದಾರೆ. ಐದೂ ಭಾಷೆಯಲ್ಲಿ ಹಾಡಿನ ಲಿರಿಕಲ್ ವಿಡಿಯೋ ಹೊರಬಿದ್ದಿದ್ದು, ಕನ್ನಡವೊಂದರಲ್ಲೇ ಈಗಾಗಲೇ 10 ಲಕ್ಷಕ್ಕೂ ಹೆಚ್ಚು ಮಂದಿ ನೋಡಿ ಮೆಚ್ಚಿದ್ದಾರೆ.

  ಅರ್ಜುನ್ ಜನ್ಯ ಮ್ಯೂಸಿಕ್ಕು ಒನ್ಸ್ ಎಗೇಯ್ನ್ ಕಿಕ್ಕೇರಿಸುತ್ತಿದ್ದರೆ, ವಿಜಯ್ ಪ್ರಕಾಶ್, ಕೈಲಾಷ್ ಖೇರ್ ಮತ್ತು ಚಂದನ್ ಶೆಟ್ಟಿಯವರ ವಾಯ್ಸ್ ಕಿವಿಯಲ್ಲಿ ಮಾರ್ದನಿಸುವಂತಿದೆ. ಸಾಹಿತ್ಯ ಕೃಪೆ ನಾಗೇಂದ್ರ ಪ್ರಸಾದ್ ಅವರದ್ದು.

  ಕೃಷ್ಣ ನಿರ್ದೇಶನದ ಚಿತ್ರಕ್ಕೆ ಅವರ ಪತ್ನಿ ಸ್ವಪ್ನಾ ಕೃಷ್ಣಾ ಅವರೇ ನಿರ್ಮಾಪಕಿ. ಹಾಡಿನ ಜೋಷ್ ಮತ್ತು ಫೋರ್ಸ್ ಬಗ್ಗೆ ಸೆಲಬ್ರಿಟಿಗಳು ಮತ್ತು ಫ್ಯಾನ್ಸ್ ಫಿದಾ ಆಗಿದ್ದಾರೆ. ಅರ್ಜುನ್ ಜನ್ಯಾಗೆ ಹೆಚ್ಚು ಸ್ಕೋರ್ ಕೊಟ್ಟಿದ್ದಾರೆ.

 • ಬಾಲಕಿಯ ವಿದ್ಯಾಭ್ಯಾಸದ ಕನಸಿಗೆ ಶಕ್ತಿ ತುಂಬಿದ ಕಿಚ್ಚ

  sudeep lights up an under privileged girl's education dream

  ಕಿಚ್ಚ ಸುದೀಪ್ ಮತ್ತೊಮ್ಮೆ ಹೃದಯವಂತಿಕೆ ಮೆರೆದಿದ್ದಾರೆ. ಬೆಂಗಳೂರಿನ ನಾಗದೇವನಹಳ್ಳಿಯ ಬಾಲಕಿ ಕನೀಷಾ, 6ನೇ ತರಗತಿ ವಿದ್ಯಾರ್ಥಿನಿ. ಚೆನ್ನಾಗಿ ಓದುತ್ತಿದ್ದ ಹುಡುಗಿಗೆ ತಂದೆಯಿಲ್ಲ. ಇತ್ತ ಕೊರೊನಾ ವೈರಸ್ ಎಫೆಕ್ಟ್‍ನಿಂದಾಗಿ ತಾಯಿಗೆ ದುಡಿಮೆಯೂ ಇಲ್ಲದೆ ಪರದಾಡುವಂತಾಗಿತ್ತು. ಏನು ಮಾಡುವುದೋ ಗೊತ್ತಾಗದೆ, ಬಾಲಕಿಯ ತಾಯಿ ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್‍ನ್ನು ಸಂಪರ್ಕಿಸಿದರು.

  ತಕ್ಷಣ ಸುದೀಪ್ ಟ್ರಸ್ಟ್ ವಿದ್ಯಾರ್ಥಿನಿಯ ಸ್ಕೂಲ್ ಫೀಸ್ ಕಟ್ಟಿದ್ದಷ್ಟೆ ಅಲ್ಲ, ವಿದ್ಯಾರ್ಥಿನಿಯ ಶಿಕ್ಷಣದ ಸಂಪೂರ್ಣ ಹೊಣೆ ಹೊತ್ತುಕೊಂಡಿದೆ. ಕನೀಷಾ ಸಂದೀಪಿನಿ ಹೈಟೆಕ್ ಸ್ಕೂಲ್‍ನಲ್ಲಿ ಓದುತ್ತಿದ್ದಾಳೆ. ಕಾನಿಷಾ ಭವಿಷ್ಯ ಉಜ್ವಲವಾಗಲಿ.

 • ಬಿಗ್ ಬಾಸ್ ರೆಡಿ ಟು ಕಮ್

  ಬಿಗ್ ಬಾಸ್ ರೆಡಿ ಟು ಕಮ್

  ಕಿಚ್ಚ ಸುದೀಪ್ ಬಿಡುವಾಗಿ ಕುಳಿತುಕೊಳ್ಳುವವರೇ ಅಲ್ಲ. ಹೀಗಾಗಿಯೇ ತಮ್ಮ ಬ್ಯುಸಿ ಶೆಡ್ಯೂಲ್`ಗೆ ಎಂದಿನಂತೆ ಬಿಗ್ ಬಾಸ್ ಸೇರಿಸಿಕೊಂಡಿದ್ದಾರೆ.

  ಕನ್ನಡ ಕಲರ್ಸ್‍ನವರು 2021ರ ಬಿಗ್ ಬಾಸ್ ಸೀಸನ್ ಶುರು ಮಾಡುತ್ತಿದ್ದು, ಪ್ರೋಮೋ ಶೂಟಿಂಗ್ ನಡೆಯುತ್ತಿದೆ. ಈ ಬಗ್ಗೆ ಸ್ವತಃ ಪರಮೇಶ್ವರ್ ಗುಂಡ್ಕಲ್ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿದ್ದಾರೆ.

  ಸ್ಸೋ.. ಸುದೀಪ್ ಇರುತ್ತಾರೆ. ಎಂದಿನಂತೆ. ಅದೇ ಲವಲವಿಕೆಯಿಂದ.. ಬಿಗ್ ಬಾಸ್ ಮನೆಗೆ ಹೋಗೋರು ಯಾರು..? ಜಸ್ಟ್ ವೇಯ್ಟ್.. 

 • ಬಿಗ್ ಬಾಸ್ ಶೋನಲ್ಲಿ ರಾಜಕೀಯ ನಾಯಕ

  ಬಿಗ್ ಬಾಸ್ ಶೋನಲ್ಲಿ ರಾಜಕೀಯ ನಾಯಕ

  ಇದೇ ಫೆಬ್ರವರಿ 28ರಿಂದ ಬಿಗ್ ಬಾಸ್ ಶೋ ಶುರುವಾಗುತ್ತಿದೆ. ಈ ಬಾರಿಯೂ 17 ಸ್ಪರ್ಧಿಗಳಿರಲಿದ್ದಾರೆ. ಎಂದಿನಂತೆ ಸಂಗೀತ, ಸಿನಿಮಾ, ಕಿರುತೆರೆ, ಕ್ರೀಡೆ, ಸೆಮಿ-ಸೆಲಬ್ರಿಟಿಗಳು ಎಲ್ಲರೂ ಇರುತ್ತಾರೆ. ಇದರಲ್ಲಿ ಈ ಬಾರಿಯ ಸ್ಪೆಷಲ್ ಎಂದರೆ ಒಬ್ಬ ರಾಜಕಾರಣಿ.

  ಯೆಸ್, ಈ ಬಾರಿ ಒಬ್ಬ ಪೊಲಿಟಿಕಲ್ ಲೀಡರ್ ಕೂಡಾ ಇದ್ದಾರಂತೆ. ಅವರು ಯಾರು ಅನ್ನೋದನ್ನು ಕಲರ್ಸ್ ಬಿಟ್ಟುಕೊಟ್ಟಿಲ್ಲ. ಬಿಗ್‍ಬಾಸ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕಲರ್ಸ್ ಟಿವಿ ಪರಮೇಶ್ವರ್ ಗುಂಡ್ಕಲ್ ಈ ಒಬ್ಬ ರಾಜಕಾರಣಿಯೂ ಇರಲಿದ್ದಾರೆ ಎಂದು ಹೇಳಿದ್ದಾರೆ. ಅವರು ಸುದೀಪ್ ಅವರಿಗೂ ಗೊತ್ತಂತೆ.

  ಎಲ್ಲ 17 ಜನರೂ ಕ್ವಾರಂಟೈನ್‍ನಲ್ಲಿದ್ದಾರೆ. ಸ್ಸೋ.. ಈಗ ಚೆಕ್ ಮಾಡ್ತಾ ಹೋಗಿ, ಸುದೀಪ್ ಅವರಿಗೂ ಗೊತ್ತಿರೋ.. ಕಳೆದ ಕೆಲ ದಿನಗಳಿಂದ ಮಿಸ್ ಆಗಿರೋ ಆ ರಾಜಕೀಯ ನಾಯಕ ಯಾರು ಅನ್ನೋದನ್ನ. 

 • ಬಿಗ್ ಹೌಸ್‍ಗೆ ವಿಜಯಲಕ್ಷ್ಮಿ, ಚಂದನ್ ಶೆಟ್ಟಿ ಮತ್ತು...

  big boss 5 enteries are

  ನಾಗಮಂಡಲ ಖ್ಯಾತಿಯ ವಿಜಯಲಕ್ಷ್ಮಿ, ರ್ಯಾಪ್ ಸಂಗೀತಗಾರ ಚಂದನ್ ಶೆಟ್ಟಿ, ಸಿಹಿಕಹಿ ಚಂದ್ರು, ರಾಜೇಶ್ ನಟರಂಗ, ಕಿರುತೆರೆ ಕಲಾವಿದರಾದ ಕವಿತಾ ಗೌಡ, ವರ್ಷಿಣಿ ಕುಸುಮಾ, ಗಾಯಕಿಯರಾದ ಅನುರಾಧ್ ಅಥವಾ ಸುಪ್ರಿಯಾ ಲೋಹಿತ್, ಆರ್‍ಜೆ ರಿಯಾಜ್.. ಹೀಗೆ ಪಟ್ಟಿ ದೊಡ್ಡದಾಗಿದೆ. ಇವರೆಲ್ಲ ಈ ಬಾರಿಯ ಬಿಗ್‍ಬಾಸ್ ಮನೆಯಲ್ಲಿ ಎದುರಾಗಬಹುದು. 

  ಇವರ ಹೆಸರುಗಳೆಲ್ಲ ಅಂತಿಮಗೊಂಡಿದೆ ಎಂಬ ಸುದ್ದಿಯಿದೆಯಾದರೂ, ಅಧಿಕೃತವಾಗೋದು ಬಿಗ್‍ಬಾಸ್ ಶುರುವಾದ ದಿನವೇ. ಅಂದಹಾಗೆ ಈ ಬಾರಿಯ ಬಿಗ್‍ಬಾಸ್‍ನಲ್ಲಿ ಕಿಚ್ಚನ ಇನ್ನೊಂದು ಝಲಕ್ ಕೂಡಾ ಇದೆ. ಸುದೀಪ್ ಈ ಬಾರಿ ಆಗಾಗ್ಗೆ ಬಿಗ್‍ಹೌಸ್‍ನ ಅಡುಗೆ ಮನೆಗೂ ಎಂಟ್ರಿ ಕೊಡ್ತಾ ಇರ್ತಾರಂತೆ. ಸುದೀಪ್ ಅಡುಗೆಯ ಟೇಸ್ಟ್ ನೋಡೋದು ಮಾತ್ರ ಬಿಗ್‍ಬಾಸ್ ಮನೆಯವರು. ವೀಕ್ಷಕರಿಗೇನಿದ್ದರೂ ನಾಲಿಗೆ ಚಪ್ಪರಿಸುವ ಕೆಲಸವಷ್ಟೇ.

 • ಬಿಗ್‍ಬಾಸ್ 7 ಬದಲಾವಣೆ ಗೊತ್ತಾಯ್ತಾ..?

  big boss 7 will have celeb format only

  ಬಿಗ್‍ಬಾಸ್ ರಿಯಾಲಿಟಿ ಶೋ 7ನೇ ಸೀಸನ್‍ಗೆ ಕಾಲಿಟ್ಟಿದೆ. ಒನ್ಸ್ ಎಗೇಯ್ನ್ ಸುದೀಪ್ ಅವರೇ ನಿರೂಪಕ. ಅದರಲ್ಲಿ ಮಾತ್ರ ಯಾವುದೇ ಬದಲಾವಣೆ ಇಲ್ಲ. ಉಳಿದಂತೆ ಕಾರ್ಯಕ್ರಮದಲ್ಲಿ ಸ್ವಲ್ಪ ಬದಲಾವಣೆಗಳಾಗಿವೆ.

  ಈ ಬಾರಿ ಬಿಗ್‍ಬಾಸ್ ಕಲರ್ಸ್ ಸೂಪರ್‍ನಲ್ಲಿ ಅಲ್ಲ, ಕಲರ್ಸ್‍ನಲ್ಲಿಯೇ ಪ್ರಸಾರವಾಗಲಿದೆ.

  ಕಳೆದ ಬಾರಿಯಂತೆ ಈ ಬಾರಿ ಕಾಮನ್ ಮ್ಯಾನ್ ಇರಲ್ಲ. ಜನಸಾಮಾನ್ಯರ ಬಗ್ಗೆ ವೀಕ್ಷಕರು ಹೆಚ್ಚು ಆಸಕ್ತಿ ತೋರದೇ ಇರುವ ಹಿನ್ನೆಲೆಯಲ್ಲಿ ಈ ಬದಲಾವಣೆ. ಅಂದರೆ 15ಕ್ಕೆ 15 ಜನರೂ ಸೆಲಬ್ರಿಟಿಗಳೇ ಆಗಿರುತ್ತಾರೆ.

  ಸೆ.11ರಂದು ಬಿಗ್‍ಬಾಸ್ ಪ್ರೋಮೋ ಶೂಟಿಂಗ್ ನಡೆಯಲಿದೆ. ಅಂದರೆ ಪೈಲ್ವಾನ್ ರಿಲೀಸ್ ಆಗುವ ಮುನ್ನಾ ದಿನ. ಸೆ.13ರಿಂದ ಪ್ರೋಮೋ ರಿಲೀಸ್ ಆಗಲಿದೆ. ಆಗಸ್ಟ್ 20ರಿಂದ ಬಿಗ್‍ಬಾಸ್ ಆರಂಭ.

 • ಬಿಗ್‍ಬಾಸ್ ಜೊತೆ ವಿಲನ್ ಟೀಂ..!

  the villain team in kiccha's big boss 6

  ಬಿಗ್‍ಬಾಸ್ ಜೊತೆ ವಿಲನ್ ಬರ್ತಾರೆ. ಬಿಗ್‍ಬಾಸೂ ಅವ್ರೇ.. ವಿಲನ್ನೂ ಅವ್ರೇ.. ರಾವಣಾನೂ ಅವ್ರೇ.. ನೋ ಡೌಟ್. ಬಿಗ್‍ಬಾಸ್ ಶೋನಲ್ಲಿ ವಿಲನ್ ಟೀಂ ಸಂಗಮವಾಗಿದೆ.

  ಕಿಚ್ಚ ಸುದೀಪ್ ನಡೆಸಿಕೊಡ್ತಿರೋ ಬಿಗ್‍ಬಾಸ್ ಶೋಗೆ, ಶಿವಣ್ಣ, ಪ್ರೇಮ್, ನಿರ್ಮಾಪಕ ಸಿ.ಆರ್.ಮನೋಹರ್ ಜೊತೆ ಜೊತೆಯಾಗಿ ಹೋಗಿದ್ದಾರೆ. ಇವರೆಲ್ಲರ ಜೊತೆ ಚಿತ್ರದಲ್ಲಿ ನಟಿಸಿರುವ ತೆಲುಗು ಸ್ಟಾರ್ ನಟ ಶ್ರೀಕಾಂತ್ ಕೂಡಾ ಇರಲಿದ್ದಾರೆ.

  ಶಿವಣ್ಣ ಮತ್ತು ಸುದೀಪ್ ಒಟ್ಟಿಗೇ ನಟಿಸಲಿದ್ದಾರೆ ಎಂಬ ಸುದ್ದಿ ಬ್ರೇಕ್ ಆಗಿದ್ದೇ ಕಿಚ್ಚ ಸುದೀಪ್‍ರ ಬಿಗ್‍ಬಾಸ್ ಶೋನಲ್ಲಿ. ಅದಾದ ನಂತರ ಕಲಿ ಚಿತ್ರ ಶುರುವಾಗಿತ್ತು. ಅದು ಆಗಲಿಲ್ಲ. ವಿಲನ್ ಆಯ್ತು. ಸೂಪರ್ ಹಿಟ್ ಆಯ್ತು. ಈಗ.. ಸೆಲಬ್ರೇಷನ್ ಟೈಂ.

 • ಬಿಗ್‍ಬಾಸ್ ಫಿನಾಲೆ ಶೋ - ಫ್ಯಾನ್ಸ್‍ಗೆ ನೋ ಎಂಟ್ರಿ

  fans entry restricted for the season's finale

  ಬಿಗ್‍ಬಾಸ್ ಶೋ ಫೈನಲ್ ಹಂತ ತಲುಪಿದೆ. ವಿನ್ನರ್ ಯಾರು ಎಂಬುದು ಮುಂದಿನ ವಾರ ಗೊತ್ತಾಗಲಿದೆ. ಸದ್ಯಕ್ಕೆ ಮನೆಯಲ್ಲಿರೋದು ಕಾರ್ತಿಕ್ ಮತ್ತು ಚಂದನ್ ಶೆಟ್ಟಿ. ಇವರಿಬ್ಬರೂ ಈಗಾಗಲೇ ಸೇಫ್. ಇನ್ನು ಉಳಿದಿರುವುದು ದಿವಾಕರ್, ನಿವೇದಿತಾ ಮತ್ತು ಶ್ರುತಿ. ಇವರಲ್ಲಿ ಯಾರು ಗೆಲ್ಲಬಹುದು..? ಅದು ಈಗ ಸಸ್ಪೆನ್ಸ್.

  ಆ ಸಸ್ಪೆನ್ಸ್‍ನ್ನು ಕಟ್ಟಕಡೆಯ ಕ್ಷಣದವರೆಗೆ ಉಳಿಸಿಕೊಳ್ಳುವ ಸಲುವಾಗಿ, ಈ ಬಾರಿಯ ಫಿನಾಲೆಯಲ್ಲಿ ಫ್ಯಾನ್ಸ್‍ನ್ನು ಹೊರಗಿಡಲು ನಿರ್ಧರಿಸಲಾಗಿದೆ. ಕಳೆದ ಎರಡೂ ಸೀಸನ್‍ಗಳಲ್ಲಿ ಬಿಗ್‍ಬಾಸ್ ವಿನ್ನರ್ ಹೆಸರು ಶೋ ಪ್ರಸಾರವಾಗುವುದಕ್ಕೆ ಮುನ್ನವೇ ಬಹಿರಂಗವಾಗಿತ್ತು. ಶೋಗೆ ವೀಕ್ಷಕರಾಗಿ ಹೋಗಿದ್ದ ಅಭಿಮಾನಿಗಳು, ಅದನ್ನು ಸೋಷಿಯಲ್ ಮೀಡಿಯಾಗೆ ಹರಿಯಬಿಟ್ಟಿದ್ದರು.

  ಹೀಗಾಗಿ ಈ ಬಾರಿ ಬಿಗ್‍ಬಾಸ್ ನಿರ್ಮಾಪಕರು, ಶೋದ ಕುತೂಹಲವನ್ನು ಕೊನೆಯವರೆಗೂ ಉಳಿಸಿಕೊಳ್ಳಲು ನಿರ್ಧರಿಸಿದ್ದಾರೆ. ಕಿಚ್ಚ ಸುದೀಪ್ ನಡೆಸಿಕೊಡುತ್ತಿರುವ ಬಿಗ್‍ಬಾಸ್ ಶೋ, ಕರ್ನಾಟಕದಲ್ಲಿನ ಜನಪ್ರಿಯ ರಿಯಾಲಿಟಿ ಶೋ.

 • ಬಿಗ್‍ಬಾಸ್ ಮನೆಯಲ್ಲಿರೋರು ಇವರೇ..

  the contestants of big boss 6 are

  ಬಿಗ್‍ಬಾಸ್ ರಿಯಾಲಿಟಿ ಶೋ ಶುರುವಾಗಿದೆ. ಈ ಬಾರಿ 18 ಸ್ಪರ್ಧಿಗಳನ್ನು ಬಿಗ್‍ಹೌಸ್‍ಗೆ ಕಳಿಸಿದ್ದಾರೆ ಕಿಚ್ಚ ಸುದೀಪ್. ಚಿತ್ರನಟಿ ಸೋನು ಪಾಟೀಲ್, ಕಿರುತೆರೆಯಲ್ಲಿ ಹೆಸರು ಮಾಡಿರುವ ಜಯಶ್ರೀ ರಾಜ್, ಒಗ್ಗರಣೆ ಡಬ್ಬಿ ಮುರಳಿ, ರಂಗಭೂಮಿ ನಟಿ ಅಕ್ಷತಾ ಪಾಂಡವಪುರ, ಲಕ್ಷ್ಮೀ ಬಾರಮ್ಮ ಖ್ಯಾತಿಯ ಕವಿತಾ ಗೌಡ, ಆರ್‍ಜೆ ರ್ಯಾಪಿಡ್ ರಶ್ಮಿ, ಹಿನ್ನೆಲೆ ಗಾಯಕ ನವೀನ್ ಸಜ್ಜು, ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ಪುಟ್ಟಸ್ವಾಮಿ ಸೇರಿದಂತೆ ಒಟ್ಟು 18 ಸ್ಪರ್ಧಿಗಳು ಬಿಗ್‍ಬಾಸ್ ಮನೆಗೆ ಹೋಗಿದ್ದಾರೆ.

 • ಬಿಗ್‍ಬಾಸ್ ಲಾಸ್ಟ್ ಮಿನಿಟ್ ಸಸ್ಪೆನ್ಸ್

  big boss 5

  ಬಿಗ್‍ಬಾಸ್ ಶುರುವಾಗಲಿದೆ ಎನ್ನುವುದು ಸುದ್ದಿಯಾಗುವುದೇ ತಡ, ಸ್ಪರ್ಧಿಗಳು ಯಾರಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಶುರುವಾಗುತ್ತೆ. ಆದರೆ, ಈ ಬಾರಿಯ ಬಿಗ್‍ಬಾಸ್ ಕೊನೆಯ ಕ್ಷಣದವರೆಗೂ ಸಸ್ಪೆನ್ಸ್ ಕಾಯ್ದುಕೊಂಡಿದ್ದು ದೊಡ್ಡದು. ಒಂದೆರಡು ಹೆಸರುಗಳು ಹೊರಬಿದ್ದಿದ್ದವಾದರೂ, ಒಟ್ಟು 17 ಸ್ಪರ್ಧಿಗಳಲ್ಲಿ ಬಹಿರಂಗವಾದ ಸ್ಪರ್ಧಿಗಳ ವಿವರ 5ನ್ನೂ ಮುಟ್ಟಿರಲಿಲ್ಲ. ಈಗ ಬಿಗ್‍ಬಾಸ್ ಶುರುವಾಗಿದೆ. ಬಿಗ್‍ಬಾಸ್ ಮನೆ ಸೇರಿದವರ ಪಟ್ಟಿ ಈ ಬಾರಿ ನಿಜಕ್ಕೂ ಇಂಟ್ರೆಸ್ಟಿಂಗ್.

  ಸಿಹಿಕಹಿ ಚಂದ್ರು - ನಟ, ನಿರ್ದೇಶಕ, ದಯಾಳ್ ಪದ್ಮನಾಭನ್ - ನಿರ್ದೇಶಕ, ನಿರ್ಮಾಪಕ, ಕಾರ್ತಿಕ್ ಜಯರಾಂ (ಜೆಕೆ) - ನಟ, ತೇಜಸ್ವಿನಿ ಪ್ರಕಾಶ್ - ನಟಿ, ಅಶಿತಾ, ಕೃಷಿ ತಾಪಂಡಾ, ಅನುಪಮಾ (ಅಕ್ಕ ಧಾರಾವಾಹಿ ಖ್ಯಾತಿ), ರ್ಯಾಪರ್ ಚಂದನ್ ಶೆಟ್ಟಿ, ಸ್ಟೇಜ್ ಆ್ಯಂಕರ್ ರಿಯಾಜ್ ಬಾಷಾ ಇವರೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಬಣ್ಣದ ಲೋಕದವರು. ಇನ್ನು ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಇದ್ದಾರೆ.

  ಜನಸಾಮಾನ್ಯರ ಕೋಟಾದಲ್ಲಿ ಮೇಘಾ, ನಿವೇದಿತಾ ಗೌಡ, ಸಮೀರ್ ಆಚಾರ್ಯ, ಜಗನ್, ದಿವಾಕರ್, ಸುಮಾ ರಾಜ್‍ಕುಮಾರ್ ಬಿಗ್‍ಬಾಸ್ ಪ್ರವೇಶಿಸಿದ್ದಾರೆ.

  ಇನ್ನು 100 ದಿನ.. 17 ಸ್ಪರ್ಧಿಗಳು.. 47 ಕ್ಯಾಮೆರಾಗಳು.. ಬಿಗ್‍ಬಾಸ್ ಮನೆಯಲ್ಲಿನ ಚಿತ್ರ ವಿಚಿತ್ರ ಕಥನಾವಳಿ.. ವಾರಕ್ಕೆರಡು ಬಾರಿ ಕಿಚ್ಚನ ಜೊತೆ.. ಮನರಂಜನೆ ಭರಪೂರ ಸಿದ್ಧವಾಗಲಿದೆ.

 • ಬಿಲ್ಲ ರಂಗ ಬಾಷಾ.. ಕಿಚ್ಚನ ಚಿತ್ರಕ್ಕೆ ತಲೈವಾ ಟೈಟಲ್

  kiccha's new movie title is billa ranga basha

  ಬಿಲ್ಲಾ ರಂಗಾ.. ಈ ಹೆಸರು ಕೇಳಿದರೆ ಥಟ್ಟನೆ ನೆನಪಿಗೆ ಬರೋದು ರಜನಿಕಾಂತ್. ಅದು 1980ರಲ್ಲಿ ತಮಿಳಿನಲ್ಲಿ ರಿಲೀಸ್ ಆಗಿದ್ದ ಸಿನಿಮಾ. ಡಾನ್ ಚಿತ್ರದ ರೀಮೇಕ್ ಆಗಿದ್ದರೂ, ಅದನ್ನು ತಮ್ಮ ಸ್ಟೈಲ್‍ನಿಂದಲೇ ಮರೆಮಾಚಿಸಿಬಿಟ್ಟಿದ್ದರು ರಜನಿ. ತೆಲುಗಿನಲ್ಲಿ ಬಿಲ್ಲಾ ರಂಗಾ ಅನ್ನೋ ಹೆಸರಲ್ಲಿ ಚಿರಂಜೀವಿ ನಟಿಸಿದ್ದರು. 

  ಕೆಲವು ವರ್ಷಗಳ ಹಿಂದೆ ಅದೇ ಚಿತ್ರವನ್ನು ತೆಲುಗಿನಲ್ಲಿ ಪ್ರಭಾಸ್, ತಮಿಳಿನಲ್ಲಿ ಅಜಿತ್ ಮತ್ತೊಮ್ಮೆ ಮಾಡಿದ್ದರು. ಆಗಲೂ ಚಿತ್ರಗಳು ಸೂಪರ್ ಹಿಟ್. ಇನ್ನು ಭಾಷಾ ಎಂದರೆ, ಅದು ರಜನಿಕಾಂತ್ ಮಾತ್ರ. 

  ಈಗ ಈ ಮೂರು ಹೆಸರುಗಳನ್ನೂ ಸೇರಿಸಿ ಹೊಸ ಚಿತ್ರದ ಟೈಟಲ್ ರೆಡಿಯಾಗಿದೆ. ಬಿಲ್ಲ ರಂಗ ಭಾಷಾ.

  ಇದು ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನದ ಸಿನಿಮಾ. ಹೀರೋ ಕಿಚ್ಚ ಸುದೀಪ್. ನಿರ್ಮಾಪಕರೂ ಅವರೇ. ಪೈಲ್ವಾನ್, ಕೋಟಿಗೊಬ್ಬ 3 ಮುಗಿದ ನಂತರ ಬಿಲ್ಲ ರಂಗ ಭಾಷಾ ಚಿತ್ರದ ಚಿತ್ರೀಕರಣ ಶುರುವಾಗಲಿದೆ.

  Related Articles :-

  ರಂಗಿತರಂಗ ನಿರ್ದೇಶಕರ ಜೊತೆ ಸುದೀಪ್ ಸಿನಿಮಾ

 • ಬೀದಿಗೆ ಬಿದ್ದ ವಿದ್ಯಾರ್ಥಿಗಳ ಕಣ್ಣೀರಿಗೆ ಕರಗಿದ ಸುದೀಪ

  ಬೀದಿಗೆ ಬಿದ್ದ ವಿದ್ಯಾರ್ಥಿಗಳ ಕಣ್ಣೀರಿಗೆ ಕರಗಿದ ಸುದೀಪ

  ರಾಮನಗರದ ಗಾಂಧಿವಾಡಾದಲ್ಲಿನ ಹರಿಜನ ಹೆಣ್ಣು ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಬೀದಿಗೆ ಬಿದ್ದಿದ್ದರು. ಕಟ್ಟಡದ ಬಾಡಿಗೆ ನೀಡದ ಹಿನ್ನೆಲೆಯಲ್ಲಿ ಕಟ್ಟಡದ ಮಾಲೀಕ ವಿದ್ಯಾರ್ಥಿಗಳನ್ನು ಹೊರಗೆ ಹಾಕಿದ್ದ. ವಿದ್ಯಾರ್ಥಿನಿಯರು ಬೀದಿಯಲ್ಲಿ ಅಳುತ್ತಿದ್ದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು. ಸುದೀಪ್ ಕಣ್ಣಿಗೂ ಬಿತ್ತು.

  ತಕ್ಷಣ ಸುದೀಪ್ ಹುಬ್ಬಳ್ಳಿಯ ಗಾಂಧಿವಾಡ ಕಚೇರಿಗೆ ಭೇಟಿ ನೀಡುವಂತೆ ತಮ್ಮ ಚಾರಿಟಬಲ್ ಸೊಸೈಟಿ ಅಧ್ಯಕ್ಷ ರಮೇಶ್ ಅವರಿಗೆ ಸೂಚಿಸಿದ್ರು. ರಮೇಶ್ ತಕ್ಷಣಕ್ಕೆ ಬಾಡಿಗೆ ಕಟ್ಟಡ ನೀಡುವ ಭರವಸೆ ಕೊಟ್ಟಿದ್ದಾರೆ. ಮಕ್ಕಳೊಂದಿಗೆ ಸ್ವತಃ ಸುದೀಪ್ ಕೂಡಾ ವಿಡಿಯೋ ಕಾಲ್‍ನಲ್ಲಿ ಮಾತನಾಡಿ ಧೈರ್ಯ ಹೇಳಿದ್ದಾರೆ.

  ನಿಮ್ಮ ಜೊತೆ ನಾವಿದ್ದೇವೆ. ಬಾಡಿಗೆಯೋ.. ಸ್ವಂತ ಕಟ್ಟಡವೋ.. ಆಡಳಿತ ಮಂಡಳಿ ತೀರ್ಮಾನಿಸಿ ತಿಳಿಸಿದರೆ ನೆರವು ನೀಡಲು ಸಿದ್ಧ ಎಂದು ಹೇಳಿದ್ದಾರೆ ಕಿಚ್ಚ ಸುದೀಪ್.

 • ಭಾರ್ಗವ್ ಭಕ್ಷಿ ಸುದೀಪ್

  ಭಾರ್ಗವ್ ಭಕ್ಷಿ ಸುದೀಪ್

  ಪಾತ್ರ ಚೆನ್ನಾಗಿದೆ, ಅಭಿನಯಕ್ಕೆ ಸ್ಕೋಪ್ ಇದೆ, ಎಕ್ಸ್‍ಪೆರಿಮೆಂಟ್ ಮಾಡೋಕೆ ಅವಕಾಶವಿದೆ.. ಎನಿಸಿದರೆ ಹೀರೋನಾ..? ವಿಲನ್ನಾ..? ಪೋಷಕ ಪಾತ್ರನಾ ಅನ್ನೋದನ್ನೂ ನೋಡದೆ ಯೆಸ್ ಎನ್ನುವ ಕಿಚ್ಚ ಸುದೀಪ್, ಈ ಬಾರಿ ಭಾರ್ಗವ್ ಭಕ್ಷಿ ಆಗುತ್ತಿದ್ದಾರೆ. ಅದು ಕಬ್ಜ ಚಿತ್ರದಲ್ಲಿ. ಈ ಚಿತ್ರಕ್ಕೆ ಹೀರೋ ಉಪೇಂದ್ರ ಹಾಗೂ ನಿರ್ದೇಶಕ ಆರ್.ಚಂದ್ರು. ಒಟ್ಟು 7 ಭಾಷೆಗಳಲ್ಲಿ ಬರುತ್ತಿರುವ ಸಿನಿಮಾಗೆ ಸುದೀಪ್ ಎಂಟ್ರಿ ಕೊಟ್ಟಿದ್ದಾರೆ.

  ಸುದೀಪ್ ಪಾತ್ರ ಏನು..? ಹೀರೋನಾ..? ವಿಲನ್ನಾ..? ಹೇಗಿರುತ್ತೆ ಪಾತ್ರ ಅನ್ನೋದನ್ನು ತೆರೆಯ ಮೇಲೇ ನೋಡಿ ಎಂದಿದ್ದಾರೆ ಚಂದ್ರು.

  ಆರ್.ಚಂದ್ರು ಅವರ ಕಥೆ, ತಮ್ಮ ಪಾತ್ರದ ನರೇಷನ್ ಹಾಗೂ ಚಂದ್ರು ಅವರ ಕಬ್ಜ ಮೇಕಿಂಗ್ ನೋಡಿಯೇ ಪಾತ್ರಕ್ಕೆ ಓಕೆ ಎಂದಿದ್ದಾರಂತೆ ಸುದೀಪ್.

 • ಮಗಳ ಎದುರು ಆಗಲೇ ಗೆದ್ದಾಗಿದೆ ಪೈಲ್ವಾನ್

  sudeep's daughters first reaction on pailwan

  ಪೈಲ್ವಾನ್ ಚಿತ್ರದ ಪೋಸ್ಟರ್ ರಿಲೀಸ್ ಆದಾಗ ಎಲ್ಲರೂ ಹುಬ್ಬೇರಿಸಿದ್ದರು. ಮೂಗಿನ ಮೇಲೆ ಬೆರಳಿಟ್ಟಿದ್ದರು. ಅಭಿಮಾನಿಗಳು ವಾರೆ ವ್ಹಾ ಎಂದಿದ್ದರು. ಈಗ ಚಿತ್ರ ರಿಲೀಸ್ ಆಗಿದೆ.ಕೃಷ್ಣ ಡೈರೆಕ್ಷನ್, ಸ್ವಪ್ನಾ ಕೃಷ್ಣ ನಿರ್ಮಾಣದಲ್ಲಿ ಸುದೀಪ್ ಇದೇ ಮೊದಲ ಬಾರಿಗೆ ಕುಸ್ತಿ ಪಟುವಾಗಿ ಕಾಣಿಸಿಕೊಂಡಿದ್ದಾರೆ. ದೇಹ ಪ್ರದರ್ಶನವೂ ಅದ್ಭುತವಾಗಿದೆ.

  ಪ್ರೇಕ್ಷಕರ ಒಪ್ಪಿಗೆಗೂ ಮೊದಲೇ ಸುದೀಪ್ ಮೊದಲ ಗೆಲುವು ದಾಖಲಿಸಿದ್ದಾರೆ. ಅದೂ ಅವರ ಪ್ರೀತಿಯ ಮಗಳು ಸಾನ್ವಿಯ ಎದುರು. ನನ್ನ ಪೈಲ್ವಾನ್ ಪೋಸ್ಟರ್ ನೋಡಿ ನನ್ನ ಮಗಳು ವ್ಹಾವ್ ಎಂದರೂ.. ಆಮೇಲೆ ಪದೇ ಪದೇ ನಿಜಾನಾ ಅಂಥ ಕೇಳ್ತಾ ಇದ್ಲು. ಆಗ ಅವಳಿಗೆ ನಾನು ಜಿಮ್ ಮಾಡುತ್ತಿರುವ ದೃಶ್ಯಗಳನ್ನು ತೋರಿಸಿ ಪ್ರೂವ್ ಮಾಡಿದೆ. ನಿಜಕ್ಕೂ ಮಕ್ಕಳು ನನ್ನ ಸಿನಿಮಾ ಇಷ್ಟಪಡ್ತಾರೆ ಎಂದಿರುವ ಸುದೀಪ್, ಪೈಲ್ವಾನ್ ಚಿತ್ರದಿಂದಾಗಿ ನಾನು ಸರಿಯಾಗಿ ನಿದ್ದೆ, ಊಟ ಮತ್ತು ವರ್ಕೌಟ್ ಮಾಡುತ್ತಿದ್ದೇನೆ ಎಂದಿದ್ದಾರೆ. ಕೃಷ್ಣ ನಿರ್ದೇಶನದ ಪೈಲ್ವಾನ್ 5 ಭಾಷೆಗಳಲ್ಲಿ ಜಗತ್ತಿನಾದ್ಯಂತ ಏಕಕಾಲಕ್ಕೆ 3 ಸಾವಿರಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ರಿಲೀಸ್ ಆಗಿದೆ.

 • ಮತ್ತೊಮ್ಮೆ ಬಚ್ಚನ್ ಜೊತೆ ಸುದೀಪ್

  amitab bachchan and sudeep to act again

  ಕಿಚ್ಚ ಸುದೀಪ್ ಮತ್ತೊಮ್ಮೆ ಅಮಿತಾಬ್ ಬಚ್ಚನ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಅದು ಆಂಖೇ-2 ಚಿತ್ರದಲ್ಲಿ. ರಣ್ ಚಿತ್ರದಲ್ಲಿ ಒಟ್ಟಿಗೇ ನಟಿಸಿದ್ದ ಅಮಿತಾಬ್ ಮತ್ತು ಸುದೀಪ್, ತೆಲುಗಿನ ಸೈರಾ ಚಿತ್ರದಲ್ಲೂ ನಟಿಸಿದ್ದಾರೆ. ಈಗ.. ಮತ್ತೊಮ್ಮೆ ಆಂಖೇ-2 ನಲ್ಲಿ ಒಟ್ಟಿಗೇ ಕಾಣಿಸಿಕೊಳ್ಳುತ್ತಿದ್ದಾರೆ.

  ಅಷ್ಟೇ ಅಲ್ಲ, ದಬಾಂಗ್-3 ಚಿತ್ರದಲ್ಲಿ ಸಲ್ಮಾನ್ ಖಾನ್ ಸಿನಿಮಾದಲ್ಲಿ ನಟಿಸಲಿದ್ದಾರೆ.  ನವೆಂಬರ್‍ನಲ್ಲಿ ಹಾಲಿವುಡ್ ಸಿನಿಮಾದಲ್ಲಿ ಬ್ಯುಸಿಯಾಗಲಿರೋ ಸುದೀಪ್, ಜನವರಿಗೆಯಲ್ಲಿ ದಬಾಂಗ್-3 ಟೀಂ ಜೊತೆಯಾಗಲಿದ್ದಾರೆ. ಮುಂದಿನ ವರ್ಷ ಸೈರಾ ನರಸಿಂಹ ರೆಡ್ಡಿ ತೆಲುಗಿನಲ್ಲಿ, ಹಿಂದಿಯಲ್ಲಿ, ಇಂಗ್ಲಿಷ್‍ನಲ್ಲಿ.. ಒಟ್ಟಿನಲ್ಲಿ.. 2019ರಲ್ಲಿ ಸುದೀಪ್ ಅಭಿಮಾನಿಗಳಿಗೆ ವರ್ಷಪೂರ್ತಿ ಹಬ್ಬ.

 • ಮತ್ತೊಮ್ಮೆ ಹೃದಯವಂತಿಕೆ ಮೆರೆದ ಕಿಚ್ಚ

  sudeep's heartwarming act

  ಕಿಚ್ಚ ಸುದೀಪ್ ಕೋಟಿಗೊಬ್ಬರಷ್ಟೇ ಅಲ್ಲ, ಹೃದಯವಂತರೂ ಹೌದು ಅನ್ನೋದಕ್ಕೆ ಈ ಪ್ರಕರಣ ಇನ್ನೊಂದು ಸಾಕ್ಷಿ ಅನ್ನೋಕೆ ಅಡ್ಡಿಯಿಲ್ಲ. ಬಳ್ಳಾರಿ ಮೂಲದ ವಿನುತಾ, ಸುದೀಪ್ ಅವರ ಅಪ್ಪಟ ಅಭಿಮಾನಿ. ಕ್ಯಾನ್ಸರ್ 4ನೇ ಹಂತದಲ್ಲಿರುವ ವಿನುತಾ ಅವರಿಗೆ ಒಮ್ಮೆಯಾದರೂ ಸುದೀಪ್ ಅವರನ್ನು ನೋಡಬೇಕು, ಮಾತನಾಡಿಸಬೇಕು ಎಂಬ ಆಸೆ. 

  ತಮ್ಮ ಅಭಿಮಾನಿ ಸಂಘ ಕಿಚ್ಚ ಸುದೀಪ್ ಸೇನಾ ಸಮಿತಿಯಿಂದ ವಿಷಯ ತಿಳಿದುಕೊಂಡ ಸುದೀಪ್, ಮನೆಗೇ ಸ್ವತಃ ತೆರಳಿ ವಿನುತಾ ಅವರನ್ನು ಭೇಟಿಯಾಗಿದ್ದಾರೆ. ಅಭಿಮಾನಿಯ ಜೊತೆ ಗಂಟೆಗೂ ಹೆಚ್ಚು ಕಾಲ ಕಳೆದು ಅಭಿಮಾನಿಯ ಅಂತಿಮ ಆಸೆ ಈಡೇರಿಸಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery