` kiccha sudeepa - chitraloka.com | Kannada Movie News, Reviews | Image

kiccha sudeepa

  • ಗೋವಾ ಅಂ.ರಾ. ಚಲನಚಿತ್ರೋತ್ಸವಕ್ಕೆ ಮುಖ್ಯ ಅತಿಥಿ ಕಿಚ್ಚ ಸುದೀಪ್

    ಗೋವಾ ಅಂ.ರಾ. ಚಲನಚಿತ್ರೋತ್ಸವಕ್ಕೆ ಮುಖ್ಯ ಅತಿಥಿ ಕಿಚ್ಚ ಸುದೀಪ್

    ಜನವರಿ 16ಕ್ಕೆ ಗೋವಾದಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ. ಭಾರತದಲ್ಲಿ ನಡೆಯುವ ಹಲವು ಚಿತ್ರೋತ್ಸವಗಳಿಗಿಂತಲೂ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಬೇರೆಯದ್ದೇ ಆದ ವಿಶೇಷ ಮಾನ್ಯತೆ ಇದೆ. ಈ ಬಾರಿ ಕನ್ನಡಿಗರು ಈ ವಿಷಯದಲ್ಲಿ ಇನ್ನಷ್ಟು ಸಂಭ್ರಮಿಸುವ ಕ್ಷಣಗಳಿವೆ. ಏಕೆಂದರೆ ಈ ಬಾರಿ ಮುಖ್ಯ ಅತಿಥಿ ನಮ್ಮ ಕಿಚ್ಚ ಸುದೀಪ್.

    ಸುದೀಪ್ ಅವರೇ ಈ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಕೇಂದ್ರ ವಾರ್ತಾ ಮತ್ತು

  • ಗ್ರ್ಯಾಂಡ್ ಮಾಸ್ಟರ್ ವಿಶಿ ಜೊತೆ ಚೆಸ್ ಆಡಿದ ಕಿಚ್ಚ

    ಗ್ರ್ಯಾಂಡ್ ಮಾಸ್ಟರ್ ವಿಶಿ ಜೊತೆ ಚೆಸ್ ಆಡಿದ ಕಿಚ್ಚ

    ವಿಶ್ವನಾಥನ್ ಆನಂದ್. ಭಾರತದ ಚೆಸ್ ಜಗತ್ತಿನ ಅದ್ಭುತ ಆಟಗಾರ. ವಿಶ್ವದ ಶ್ರೇಷ್ಟ ಚೆಸ್ ಆಟಗಾರರಲ್ಲಿ ಒಬ್ಬರಾದ ವಿಶ್ವನಾಥನ್ ಆನಂದ್ ಜೊತೆ ಕಿಚ್ಚ ಸುದೀಪ್ ಚೆಸ್ ಆಡಿದ್ದಾರೆ. ಈ ಚದುರಂಗದಾಟ ನಡೆದಿರೋದು ಕೋವಿಡ್ ಸಂತ್ರಸ್ತರಿಗೆ ನೆರವಾಗುವ ಸಲುವಾಗಿ.

    ಚೆಕ್‍ಮೇಟ್ ಕೋವಿಡ್ ಹೆಸರಿನಲ್ಲಿ ನಡೆದ ಪ್ರದರ್ಶನ ಪಂದ್ಯವಿದು. ಆನ್‍ಲೈನ್‍ನಲ್ಲಿಯೇ ನಡೆದ ಚೆಸ್‍ನಲ್ಲಿ ಕಿಚ್ಚ ಸುದೀಪ್, ವಿಶಿ ವಿರುದ್ಧ ಗೆಲ್ಲಲಾಗಲಿಲ್ಲ. ಅಫ್‍ಕೋರ್ಸ್, ಕಾಸ್ಟರೋವ್, ಕಾರ್ಪೊವ್‍ರಂತಾ ದಿಗ್ಗಜರನ್ನೇ ಸೋಲಿಸಿರುವ ವಿಶ್ವನಾಥನ್ ಆನಂದ್ ವಿರುದ್ಧ, ಪ್ರೊಫೆಷನಲ್ ಚೆಸ್ ಆಟಗಾರನಲ್ಲದ ಸುದೀಪ್ ಗೆಲ್ಲುವುದು ಸುಲಭವೇನಲ್ಲ.

    ಚೆಸ್ ಮಾಸ್ಟರ್ ವಿಶ್ವನಾಥನ್ ಆನಂದ್ ಸರ್ ಜೊತೆ ಆಡುವ ಅವಕಾಶ ಸಿಕ್ಕಿದ್ದೇ ಒಂದು ಖುಷಿ. ನನಗೆ ಆನ್‍ಲೈನ್ ಚೆಸ್ ಆಟದ ಬಗ್ಗೆ ಮಾಹಿತಿಯೂ ಇರಲಿಲ್ಲ. ಸೋಲುವ ಭಯವೂ ಇರಲಿಲ್ಲ. ನಾನು ಆಡಿದ್ದು ಚೆಸ್ ಮಾಸ್ಟರ್ ಜೊತೆಗೆ. ಆ ಖುಷಿ ನನಗೆ ಜೀವನ ಪೂರ್ತಿ ಇರಲಿದೆ ಎಂದಿದ್ದಾರೆ ಸುದೀಪ್.

    ಕೋವಿಡ್ ಚೆಕ್‍ಮೇಟ್ ಹೆಸರಿನಲ ಶೋನಲ್ಲಿ ಈಗಾಗಲೇ ವಿಶಿ ಜೊತೆ ಯಜುವೇಂದ್ರ ಚಾಹಲ್, ಅಮೀರ್ ಖಾನ್, ರಿತೇಶ್ ದೇಶ್‍ಮುಖ್ ಮೊದಲಾದ ಖ್ಯಾತನಾಮರು ಈಗಾಗಲೇ ಆಡಿದ್ದಾರೆ.

  • ಚೇಜ್ ಚಿತ್ರಕ್ಕೆ ಕಿಚ್ಚನ ಬಲ

    ಚೇಜ್ ಚಿತ್ರಕ್ಕೆ ಕಿಚ್ಚನ ಬಲ

    ಚೇಜ್. ಇನ್ ದ ಡಾರ್ಕ್

    ಯುಎಫ್‍ಓನವರು ರಿಲೀಸ್ ಮಾಡ್ತಿರೋ ಮೊದಲ ಕನ್ನಡ ಸಿನಿಮಾ. ಅವಿನಾಶ್ ನರಸಿಂಹರಾಜು ಸುದೀರ್ಘ ಗ್ಯಾಪ್ ನಂತರ ಬರುತ್ತಿರೋ ಸಿನಿಮಾ. ರಾಧಿಕಾ ನಾರಾಯಣ್, ಅರ್ಜುನ್ ಯೋಗಿ, ಶೀತಲ್ ಶೆಟ್ಟಿ.. ಲೀಡ್ ರೋಲ್‍ನಲ್ಲಿರೋ ಸಿನಿಮಾ.

    ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ಸಿನಿಮಾ.ಚಿತ್ರಕ್ಕೀಗ ಕಿಚ್ಚನ ಬಲ ಸಿಕ್ಕಿದೆ. ಟ್ರೇಲರ್ ರಿಲೀಸ್ ಮಾಡುತ್ತಿರೋದು ಸುದೀಪ್.

    ಯುಎಫ್‍ಓನವರು ಚಿತ್ರವನ್ನ ನೋಡಿ ಮೆಚ್ಚಿದರು. ಯುನಿವರ್ಸಲ್ ಸಂಸ್ಥೆಯೊಂದು ನಮ್ಮ ಚಿತ್ರವನ್ನು ನೋಡಿ, ಮೆಚ್ಚಿ ವಿತರಣೆಗೆ ಮುಂದಾಗಿದ್ದು ಚಿತ್ರದ ಕ್ವಾಲಿಟಿಗೆ ಸಿಕ್ಕ ಗಿಫ್ಟ್. ಚಿತ್ರದ ಟ್ರೇಲರ್‍ನ್ನು ಸುದೀಪ್ ರಿಲೀಸ್ ಮಾಡುತ್ತಿರೋದು ಇನ್ನೊಂದು ಗಿಫ್ಟ್ ಎಂದು ಖುಷಿ ಹಂಚಿಕೊಳ್ತಿದೆ ಚಿತ್ರತಂಡ.

    ಹರಿ ಆನಂದ್ ನಿರ್ದೇಶನದ ಚಿತ್ರಕ್ಕೆ ಮನೋಹರ್ ಸುವರ್ಣ, ಪ್ರದೀಪ್ ಶೆಟ್ಟಿ ಮತ್ತು ಪ್ರಶಾಂತ್ ಶೆಟ್ಟಿ ನಿರ್ಮಾಪಕರು. ಜುಲೈ 15ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ.

  • ಜನವರಿ 15. 4:45 ಗಂಟೆ.. ಪೈಲ್ವಾನ್ ಬರ್ತಾನೆ..

    pailwan teaser on jan 15th

    ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಪೈಲ್ವಾನ್. ಕೃಷ್ಣ ನಿರ್ದೇಶನದ ಚಿತ್ರಕ್ಕೆ ಸುದೀಪ್ ತಮ್ಮ ದೇಹವನ್ನು ಹುರಿಗೊಳಿಸಿರುವುದೇ ಭರ್ಜರಿ ನಿರೀಕ್ಷೆ ಹುಟ್ಟುಹಾಕಿದೆ. ಇದುವರೆಗೆ ಚಿತ್ರದ ಫಸ್ಟ್ ಲುಕ್ ಬಿಟ್ಟರೆ ಬೇರೇನನ್ನೂ ಹೊರಬಿಡದೆ ಕುತೂಹಲ ಕಾಯ್ದಿಟ್ಟಿದೆ ಚಿತ್ರತಂಡ.

    ಸುಮಾರು 40-50 ಕೋಟಿ ವೆಚ್ಚದಲ್ಲಿ ಅದ್ಧೂರಿಯಾಗಿ ತಯಾರಾಗುತ್ತಿರುವ ಪೈಲ್ವಾನ್ ಚಿತ್ರದ ಮೊದಲ ಟೀಸರ್ ಜನವರಿ 15ನೇ ತಾರೀಕು, 4 ಗಂಟೆ, 45 ನಿಮಿಷಕ್ಕೆ ಬಿಡುಗಡೆಯಾಗಲಿದೆ. ಅಭಿಮಾನಿಗಳೇ.. ಸಿದ್ಧರಾಗಿ.

  • ಜನವರಿ 3ನೇ ವಾರದಿಂದ ಮತ್ತೆ ಬಿಗ್ ಬಾಸ್

    Big Boss Coming Soon

    ಬಿಗ್ ಬಾಸ್ ಒಂದು ಸ್ಪೆಷಲ್ ರಿಯಾಲಿಟಿ ಶೋ. ಟಿವಿ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಬರೆದ ಈ ಶೋ ಈಗ ಮತ್ತೆ ಶುರುವಾಗುತ್ತಿದೆ. ಕೊರೊನಾ ಇಲ್ಲದೇ ಇದ್ದಿದ್ದರೆ ಈ ವರ್ಷದ ಸೀಸನ್, ಇಷ್ಟೊತ್ತಿಗೆ ಶೋ ಶುರುವಾಗಿ ಮುಗಿದೂ ಹೋಗಿರಬೇಕಿತ್ತು. ಈಗ ಜನವರಿ 3ನೇ ವಾರದಿಂದ ಶುರುವಾಗುತ್ತಿದೆ ಬಿಗ್ ಬಾಸ್.

    ಎಂದಿನಂತೆ ಈ ಬಾರಿಯೂ ಕಿಚ್ಚ ಸುದೀಪ್ ಅವರದ್ದೇ ಸ್ಟೈಲಿಷ್ ನಿರೂಪಣೆ ಇರಲಿದೆ. ಸುದೀಪ್ ಸದ್ಯಕ್ಕೆ ಫಾರಿನ್ ಶೂಟಿಂಗ್ ಪ್ಲಾನ್ ಇಟ್ಟುಕೊಂಡಿಲ್ಲ. ಹೀಗಾಗಿ ಅವರು ವೀಕೆಂಡ್‍ನಲ್ಲಿ ನಮಗೆ ಸಿಗುತ್ತಾರೆ ಎಂದಿದ್ದಾರೆ ಕಲರ್ಸ್ ಕನ್ನಡ ವಾಹಿನಿಯ ಪರಮೇಶ್ವರ್ ಗುಂಡ್ಕಲ್.

  • ಜಿಲ್ಲೆಗೊಂದರಂತೆ 31 ಗೋವು ದತ್ತು ಪಡೆದ ಸುದೀಪ್

    ಜಿಲ್ಲೆಗೊಂದರಂತೆ 31 ಗೋವು ದತ್ತು ಪಡೆದ ಸುದೀಪ್

    ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ಸರ್ಕಾರಿ ಗೋಶಾಲೆಗಳಲ್ಲಿ ಪ್ರತಿ ಜಿಲ್ಲೆಗೆ ಒಂದರಂತೆ 31 ಗೋವುಗಳನ್ನು ದತ್ತು ಪಡೆಯುತ್ತೇನೆ ಎಂದು ಚಿತ್ರನಟ ಸುದೀಪ್ ಘೋಷಿಸಿದ್ದಾರೆ.  ತಮ್ಮ ನಿವಾಸದಲ್ಲಿಯೇ ಪಶುಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ಅವರೊಂದಿಗೆ ಗೋಪೂಜೆ ನೇರವೇರಿಸಿ ಮಾತನಾಡಿದ ಸುದೀಪ್, ಪುಣ್ಯಕೋಟಿ ದತ್ತು ಯೋಜನೆಯ ರಾಯಭಾರಿಯನ್ನಾಗಿ ನೇಮಕ ಮಾಡಿದ ಸರ್ಕಾರಕ್ಕೆ ಕೃತಜ್ಞತೆ ತಿಳಿಸಿದ್ದಾರೆ. ರಾಜ್ಯ ಸರ್ಕಾರ ಗೋಸಂಕುಲ ಸಂರಕ್ಷಣೆಯಲ್ಲಿ ಮಹತ್ವದ ಕೆಲಸ ಮಾಡುತ್ತಿದೆ. ನನ್ನನ್ನು ನೇಮಕ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಪ್ರಭು ಚವ್ಹಾಣ್ ಅವರಿಗೆ ಕೃತಜ್ಞತೆ ತಿಳಿಸುತ್ತೇನೆ. ಸಾರ್ವಜನಿಕರು, ಚಿತ್ರರಂಗದ ಕಲಾವಿದರು, ಸಾರ್ವಜನಿಕ ಸಂಘ ಸಂಸ್ಥೆಗಳು ಗೋವುಗಳನ್ನು ದತ್ತು ಪಡೆಯಬೇಕು ಎಂದು ಸುದೀಪ್ ಮನವಿ ಮಾಡಿದ್ದಾರೆ.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹುಟ್ಟುಹಬ್ಬದಂದು 11 ಗೋವು ದತ್ತು ಪಡೆದು, ಪುಣ್ಯಕೋಟಿ ದತ್ತು ಯೋಜನೆ ಜಾರಿಗೆ ತಂದರು. ನಾನು ಕೂಡ ಸುದೀಪ್ ಅವರಂತೆಯೇ ಜಿಲ್ಲೆಗೆ ಒಂದರಂತೆ 31 ಗೋವುಗಳನ್ನು ದತ್ತು ಪಡೆದಿದ್ದೇನೆ ಎಂದು ಸಚಿವ ಪ್ರಭು ಚವ್ಹಾಣ್ ತಿಳಿಸಿದರು.

    ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದ ನಂತರ 100 ಸರ್ಕಾರಿ ಗೋಶಾಲೆ ಸ್ಥಾಪಿಸಲಾಗುತ್ತಿದೆ.‌ ರಾಷ್ಟ್ರದಲ್ಲಿಯೇ ಪುಣ್ಯಕೋಟಿ ದತ್ತು ಯೋಜನೆ ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ. ಪ್ರಾಣಿ ಕಲ್ಯಾಣ ಮಂಡಳಿ, ಪ್ರಾಣಿ ಸಹಾಯವಾಣಿ ಕೇಂದ್ರ, ಪಶು ಸಂಜೀವಿನಿ ಆ್ಯಂಬುಲೆನ್ಸ್, ಗೋಮಾತಾ ಸಹಕಾರ ಸಂಘ, ಆತ್ಮ ನಿರ್ಭರ ಗೋಶಾಲೆ ಸ್ಥಾಪನೆ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

    ಜಾನುವಾರುಗಳ ದತ್ತು ಯೋಜನೆಯಡಿ ಗೋಶಾಲೆಗಳ ಪ್ರತಿ ಜಾನುವಾರಿಗೆಗೆ ವಾರ್ಷಿಕ ರೂ.11 ಖರ್ಚಾಗುತ್ತದೆ. ಸಾರ್ವಜನಿಕರು ಕೂಡಾ ತಮ್ಮ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ, ಮಕ್ಕಳ ಹುಟ್ಟುಹಬ್ಬ ಇತ್ಯಾದಿ ಸಂದರ್ಭದಲ್ಲಿ ರಾಸುಗಳಿಗೆ ಒಂದು ದಿನಕ್ಕೆ.70 ರೂ. ನೀಡಿ ದತ್ತು ಪಡೆಯಬಹುದು. ಪುಣ್ಯಕೋಟಿ ದತ್ತು ಪೋರ್ಟಲ್‌ನಲ್ಲಿ ಯಾವುದೇ ಗೋಶಾಲೆಗಳಿಗೆ ಕನಿಷ್ಠ 10 ರೂ. ಸೇರಿದಂತೆ ಗರಿಷ್ಠ ಎಷ್ಟು ಬೇಕಾದರೂ ದೇಣಿಗೆ ನೀಡಬಹುದು. ಈ ಯೋಜನೆಯಲ್ಲಿ ತೆರಿಗೆ ವಿನಾಯಿತಿಯೂ ಲಭ್ಯವಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

    ಇದೇ ಸಂದರ್ಭದಲ್ಲಿ ಚಿತ್ರನಟ ಸುದೀಪ್ ಅವರಿಗೆ ಪುಣ್ಯಕೋಟಿ ದತ್ತು ಯೋಜನೆಯ ರಾಯಭಾರಿ ನೇಮಕಾತಿ ಪತ್ರ ನೀಡಿ, ನೆನಪಿನ ಕಾಣಿಕೆ ನೀಡಿಸನ್ಮಾನಿಸಿದ್ದಾರೆ.

  • ಜೈಜಗದೀಶ್ ಹೇಳಿದ ಮೊದಲ ಪತ್ನಿ, ಮಗಳ ಕಣ್ಣೀರ ಕಥೆ

    jai jagadeesh breaks down during big boss 7

    ಜೈಜಗದೀಶ್ ಅವರ ಪತ್ನಿ ವಿಜಯಲಕ್ಷ್ಮೀ ಸಿಂಗ್. ಆಕೆಯೂ ನಟಿ, ನಿರ್ದೇಶಕಿ, ನಿರ್ಮಾಪಕಿ. ಮಕ್ಕಳು ವೈಭವಿ, ವೈನಿಧಿ ಹಾಗೂ ವೈಸಿರಿ. ಆದರೆ ಬಹುತೇಕರಿಗೆ ಗೊತ್ತಿಲ್ಲದೇ ಇದ್ದ ತಮ್ಮ ಮೊದಲ ಪತ್ನಿ ಹಾಗೂ ಮಗಳ ಕಥೆಯನ್ನು ಸ್ವತಃ ಜೈಜಗದೀಶ್ ಅವರೇ ಬಿಚ್ಚಿಟ್ಟಿದ್ದಾರೆ. ಬಿಗ್ ಬಾಸ್ ಮನೆಯಲ್ಲಿರುವ ಜೈಗದೀಶ್ ತಮ್ಮ ಮೊದಲ ಮದುವೆ, ಮಗಳು, ಆಕೆ ಅನುಭವಿಸಿದ ನೋವು ಎಲ್ಲವನ್ನೂ ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ.

    ಜೈಗದೀಶ್ ಅವರಿಗೆ ರೂಪಾ ಎಂಬುವವರ ಜೊತೆ ಮೊದಲು ಮದುವೆಯಾಗಿತ್ತು. ಅರ್ಪಿತಾ ಎಂಬ ಮಗಳೂ ಹುಟ್ಟಿದ್ದಳು. ಆದರೆ, ಸಣ್ಣ ವಿಷಯಕ್ಕೆ ವೈಮನಸ್ಯ ಬಂದು, ಹೆಂಡತಿ, ಮಗಳಿಂದ  ದೂರವಾದರು ಜೈಜಗದೀಶ್. ವಿಚ್ಛೇದನದ ನಂತರ ಮಗಳು ಮತ್ತು ಪತ್ನಿ ಬೇರೆಯೇ ಇದ್ದರು.

    ಅದಾದ ಮೇಲೆ ಮಗಳು ಅರ್ಪಿತಾ ಮದುವೆಯೂ ಆಯಿತು. ಆದರೆ, ಎಷ್ಟು ವರ್ಷಗಳಾದರೂ ಮಕ್ಕಳಾಗಲಿಲ್ಲ. ಆಕೆಯ ಪತಿಗೆ ಮಕ್ಕಳು ಬೇಕಿರಲಿಲ್ಲ. ಅರ್ಪಿತಾಳ ಪ್ರೀತಿಯೂ ಬೇಕಿರಲಿಲ್ಲ. ಒಟ್ಟಿನಲ್ಲಿ ನನ್ನ ಮಗಳಿಗೆ ತಂದೆಯಾಗಿ ನಾನೂ ಪ್ರೀತಿ ಕೊಡಲಿಲ್ಲ. ಗಂಡನ ಪ್ರೀತಿಯೂ ಸಿಗಲಿಲ್ಲ. ಕ್ಷಮಿಸಿಬಿಡು ಮಗಳೇ ಎಂದು ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ ಜೈಜಗದೀಶ್.

  • ಟೈಮೂ.. ಡೇಟೂ.. ಬಂದೇ ಬಿಡ್ತು.. ದಬಾಂಗ್ ಇಂದು

    dabanng 3 released world wide

    ಟೈA ನಂದು.. ತಾರೀಕು ನಂದು.. ಎನ್ನುತ್ತಲೇ ಕನ್ನಡದಲ್ಲಿ ಹವಾ ಎಬ್ಬಿಸಿದ್ದರು ಸಲ್ಮಾನ್ ಖಾನ್. ಅವರು ಹೇಳಿದ ಟೈಮು, ಡೇಟು ಬಂದಾಗಿದೆ. ದಬಾಂಗ್ 3 ಥಿಯೇಟರುಗಳಲ್ಲಿದೆ. ಒಂದೇ ದಿನ.. ಕನ್ನಡ ಮತ್ತು ಹಿಂದಿ ಎರಡೂ ವರ್ಷನ್‌ನಲ್ಲಿ ಬಂದಿದೆ ದಬಾಂಗ್ 3.

    ಸಲ್ಮಾನ್ ಖಾನ್ ಕನ್ನಡದಲ್ಲಿ ಬರಲು ಮೂಲ ಕಾರಣ ಕಿಚ್ಚ ಸುದೀಪ್. ಬೇರೆ ಭಾಷೆಯವರು ಕನ್ನಡದಲ್ಲಿ ಮಾತನಾಡಬೇಕು ಎಂದು ಬಯಸುವ ನಾವು, ಅವರು ಕನ್ನಡದಲ್ಲಿ ಸಿನಿಮಾ ಮಾಡಲು ಬಂದಾಗ ಬಿಡಬೇಕು. ಆಗಲೇ ಕನ್ನಡ ಬೆಳೆಯೋದು ಎನ್ನುವ ಸುದೀಪ್, ದಬಾಂಗ್ 3ಯಲ್ಲಿ ಬಲ್ಲಿ ಸಿಂಗ್ ಆಗಿದ್ದಾರೆ. ಚುಲ್ ಬುಲ್ ಪಾಂಡೆ ಎದುರು ವಿಲನ್. ಸೋನಾಕ್ಷಿ ಸಿನ್ಹಾ ಎಂದಿನAತೆ ಸಲ್ಮಾನ್ ಜೋಡಿ.

    ವಿಶೇಷವೆಂದರೆ ಈ ಚಿತ್ರಕ್ಕೆ ಪ್ರಭುದೇವ ಡೈರೆಕ್ಟರ್. ಡಬ್ಬಿಂಗ್ ಮಾಡುವಾಗ ಸುದೀಪ್ ನೀಡಿದ ಸಹಕಾರವನ್ನು ನೆನಪಿಸಿಕೊಂಡಿರುವ ಪ್ರಭುದೇವ, ಸುದೀಪ್ ಇಲ್ಲದಿದ್ದರೆ ಇದೆಲ್ಲ ಸಾಧ್ಯವಾಗುತ್ತಿರಲಿಲ್ಲ ಎಂದಿದ್ದಾರೆ.

     

  • ಟ್ವಿಟರ್​ಗೆ ಎಂಟ್ರಿ ಕೊಟ್ಟ ಕ್ರೇಜಿ ಕ್ವೀನ್ ಮಾಡಿದ ಮೊದಲ ಕೆಲಸ..

    rakshitha prem wishes sudeep

    ಸುದೀಪ್​ಗೆ ಶುಭ ಹಾರೈಸುವ ಮೂಲಕ... ಫೈನಲಿ ಟ್ವಿಟರ್​ಗೆ ಎಂಟ್ರಿ ಕೊಟ್ಟಿದ್ದೇನೆ. ಹುಟ್ಟುಹಬ್ಬದ ಶುಭಾಶಯಗಳು ಸುದೀಪ್. ನನ್ನ ಗೆಳೆಯ ಸುದೀಪ್​ಗೆ ಒಳ್ಳೆಯದಾಗಲಿ. ನಿನ್ನ ಜೀವನದಲ್ಲಿ ಸುಖ ಸಂತೋಷ ತುಂಬಿ ತುಳುಕಲಿ. ಇದು ರಕ್ಷಿತಾ ಪ್ರೇಮ್ ಮಾಡಿದ ಮೊದಲ ಟ್ವೀಟ್.

    ರಕ್ಷಿತಾ ಪ್ರೇಮ್ ಕಿಚ್ಚನ ಹುಟ್ಟುಹಬ್ಬದ ದಿನವೇ ಟ್ವಿಟರ್​ಗೆ ಎಂಟ್ರಿ ಕೊಟ್ಟಿದ್ದಾರೆ. ಹಾಗೆ ಟ್ವಿಟರ್​ಗೆ ಬಂದ ರಕ್ಷಿತಾ ಮಾಡಿರುವ ಮೊದಲ ಟ್ವೀಟ್​ ಕಿಚ್ಚನಿಗೆ ಹುಟ್ಟುಹಬ್ಬದ ಶುಭ ಕೋರಿದ್ದು. ರಕ್ಷಿತಾ ಅವರ ಪತಿ ಜೋಗಿ ಪ್ರೇಮ್ ಸುದೀಪ್, ಶಿವರಾಜ್ ಕುಮಾರ್ ಜೋಡಿಯ ದಿ ವಿಲನ್ ಚಿತ್ರದ ನಿರ್ದೇಶಕ.

    ಕಿಚ್ಚ ಸುದೀಪ್ ಜೊತೆ ಹುಬ್ಬಳ್ಳಿ ಚಿತ್ರದಲ್ಲಿನ ಹಾಡಿನ ಫೋಟೋವೊಂದನ್ನು ಟ್ವೀಟ್ ಮಾಡಿದ್ದಾರೆ. ರಕ್ಷಿತಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಅಪ್ಪು ಚಿತ್ರದ ಮೂಲಕ. ರಕ್ಷಿತಾ ನಟಿಸಿದ ಎರಡನೇ ಚಿತ್ರ ಧಮ್. ಆ ಚಿತ್ರದ ನಾಯಕ ಸುದೀಪ್. ಆನಂತರವೂ ಕಾಶಿ ಫ್ರಂ ವಿಲೇಜ್ ಹಾಗೂ ಹುಬ್ಬಳ್ಳಿ ಚಿತ್ರಗಳಲ್ಲಿ ರಕ್ಷಿತಾ ಸುದೀಪ್ ಒಟ್ಟಿಗೇ ನಟಿಸಿದ್ದರು.

  • ಡಿಸೆಂಬರ್`ಗೆ ವಿಕ್ರಾಂತ್ ರೋಣ ಫಿಕ್ಸ್

    ಡಿಸೆಂಬರ್`ಗೆ ವಿಕ್ರಾಂತ್ ರೋಣ ಫಿಕ್ಸ್

    ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ, ಅದ್ಭುತ ಎನ್ನಿಸುವ ರೀತಿಯ ಕ್ರೇಜ್ ಸೃಷ್ಟಿಸಿದೆ. ಬುರ್ಜ್ ಖಲೀಫಾದಲ್ಲಿ ಟೈಟಲ್ ಪೋಸ್ಟರ್, ಮುಂಬೈನಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದ ವಿಕ್ರಾಂತ್ ರೋಣ 2021ರ ಇಂಡಿಯಾದಲ್ಲಿನ ಭಾರಿ ನಿರೀಕ್ಷಿತ ಚಿತ್ರಗಳಲ್ಲೊಂದು. ಆ ಚಿತ್ರದ ಬಿಡುಗಡೆಗೆ ಡಿಸೆಂಬರ್‍ನಲ್ಲಿ ಮುಹೂರ್ತ ಫಿಕ್ಸ್ ಆಗಿದೆ.

    ಪರಿಸ್ಥಿತಿ ಸರಿ ಹೋದರೆ ಡಿಸೆಂಬರ್‍ನಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಡಿಸೆಂಬರ್ ಡೆಡ್‍ಲೈನ್ ಇಟ್ಟುಕೊಂಡೆ ಕೆಲಸ ಮಾಡುತ್ತಿದ್ದೇವೆ. ಎಲ್ಲ ಭಾಷೆಗಳ ಚಿತ್ರರಂಗದ ಬೆಳವಣಿಗೆಗಳನ್ನೂ ನೋಡಬೇಕು. ಬಿಡುಗಡೆಗೆ 10 ದಿನ ಮೊದಲು ಡೇಟ್ ಅನೌನ್ಸ್ ಮಾಡುತ್ತೇವೆ ಎಂದಿದ್ದಾರೆ ಜಾಕ್ ಮಂಜು.

    ಹಿಂದಿ, ತಮಿಳು, ತೆಲುಗಿಗೂ ಸುದೀಪ್ ಅವರೇ ಡಬ್ ಮಾಡಿದ್ದಾರಂತೆ. ಮಲಯಾಳಂನಲ್ಲಿ ಮಾತ್ರ ಬೇರೆಯವರು ಡಬ್ ಮಾಡಿದ್ದಾರೆ. ಏನೇ ಇದ್ದರೂ ಮೊದಲ ಬಿಡುಗಡೆ ಚಿತ್ರಮಂದಿರಗಳಲ್ಲೇ. ನಂತರವೇನಿದ್ದರೂ ಓಟಿಟಿ ಎಂದಿದ್ದಾರೆ ಜಾಕ್ ಮಂಜು.

    ಜಾಕ್ ಮಂಜು ನಿರ್ಮಾಣದ ಚಿತ್ರದಲ್ಲಿ ಸುದೀಪ್ ಹೀರೋ. ವಿಕ್ರಾಂತ್ ರೋಣ ಪಾತ್ರಧಾರಿ. ನಿರೂಪ್ ಭಂಡಾರಿ ಸಂಜೀವ್ ಗಂಭೀರ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ನೀತಾ ಅಶೋಕ್ ನಟಿಸಿದ್ದರೆ, ಜಾಕ್ವೆಲಿನ್ ಫರ್ನಾಂಡಿಸ್ ಗಡಂಗ್ ರಕ್ಕಮ್ಮನಾಗಿ ಮಿಂಚು ಹರಿಸಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದ ಅಜನೀಶ್ ಲೋಕನಾಥ್ ಸಂಗೀತವಿದೆ.

  • ತೆಲುಗಿನಲ್ಲಿ ಕೋಟಿಗೊಬ್ಬ-3ಯ ಪಟಾಕಿ

    ತೆಲುಗಿನಲ್ಲಿ ಕೋಟಿಗೊಬ್ಬ-3ಯ ಪಟಾಕಿ

    ಕೋಟಿಗೊಬ್ಬ 3 ಭರ್ಜರಿಯಾಗಿಯೇ ಸದ್ದು ಮಾಡುತ್ತಿದೆ. ಸುದೀಪ್ ಅವರ ಹಿಂದಿನ ಚಿತ್ರಗಳಂತೆ ಕೋಟಿಗೊಬ್ಬ 3 ಕೂಡಾ ಬಹುಭಾಷೆಗಳಿಗೆ ಹೋಗುತ್ತಿದೆ. ಇದರ ಮೊದಲ ಹೆಜ್ಜೆಯಾಗಿ ಚಿತ್ರದ 3 ಹಾಡುಗಳನ್ನು ತೆಲುಗಿನಲ್ಲೂ ರಿಲೀಸ್ ಮಾಡಲಾಗಿದೆ.

    ಕನ್ನಡದಲ್ಲಿ ಹಲ್‍ಚಲ್ ಎಬ್ಬಿಸಿರುವ ಪಟಾಕಿ ಪೋರಿಯೋ ಹಾಡು ತೆಲುಗಿನಲ್ಲೂ ಹಬ್ಬ ಮಾಡಲು ಸಿದ್ಧವಾಗುತ್ತಿದೆ. ಕಿಚ್ಚ ಮತ್ತು ಆಶಿಕಾ ರಂಗನಾಥ್ ಕಿಚ್ಚು ಹಚ್ಚುತ್ತಿದ್ದಾರೆ. ಶಿವ ಕಾರ್ತಿಕ್ ನಿರ್ದೇಶನದ ಚಿತ್ರದಲ್ಲಿ ಸುದೀಪ್ ಎದುರು ಮಡೋನ್ನಾ ಸೆಬಾಸ್ಟಿಯನ್ ನಾಯಕಿ. ಸೂರಪ್ಪ ಬಾಬು ನಿರ್ಮಾಣದ ಚಿತ್ರ, ಶೂಟಿಂಗ್ ಮತ್ತು ಡಬ್ಬಿಂಗ್ ಎಲ್ಲವನ್ನೂ ಮುಗಿಸಿದ್ದು ರಿಲೀಸ್ ಆಗೋಕೆ ರೆಡಿಯಾಗಿದೆ. ವೇಯ್ಟಿಂಗ್ ಫಾರ್ ಕೊರೊನಾ ಗೋಯಿಂಗ್.

  • ತೋತಾಪುರಿ ತೊಟ್ಟು ಕಚ್ಚಿದ ಕಿಚ್ಚ ಹೇಳಿದ ಮಾರ್ಮಿಕ ಮಾತು

    ತೋತಾಪುರಿ ತೊಟ್ಟು ಕಚ್ಚಿದ ಕಿಚ್ಚ ಹೇಳಿದ ಮಾರ್ಮಿಕ ಮಾತು

    ಜಗ್ಗೇಶ್ ಹೇಳೋ ರೀತಿಯ ಡೈಲಾಗ್ ನಾನು ಹೇಳಿದ್ರೆ ಯಾವೆಲ್ಲ ರೀತಿಯಲ್ಲಿ ಟ್ರೋಲ್ ಆಗಬಹುದು ಅಂತಾ ಯೋಚಿಸ್ತಾ ಇದ್ದೆ. ನಾನು ಜಗ್ಗೇಶ್ ಥರಾ ಡೈಲಾಗ್ ಹೊಡೆದ್ರೂ ನ್ಯೂಸಲ್ಲಿರ್ತೀನಿ. ಯಾರಿಗೂ ಸಪೋರ್ಟ್ ಮಾಡದೇ ಇಲ್ಲದಿದ್ರೂ ನ್ಯೂಸಲ್ಲಿರ್ತೀನಿ..

    ಇದು ಸುದೀಪ್ ಆಡಿದ ಮಾತು. ಸ್ಥಳ ತೋತಾಪುರಿ ಭಾಗ 1ರ ಟ್ರೇಲರ್ ಬಿಡುಗಡೆ ಕಾರ್ಯಕ್ರಮ.

    ತೋತಾಪುರಿ ಟ್ರೇಲರ್ ರಿಲೀಸ್ ಮಾಡಿದ ಸುದೀಪ್ ಉತ್ತರ ಕೊಟ್ಟಿದ್ದು  ಯಾರಿಗೆ? ಇತ್ತೀಚೆಗೆ ಯಾವುದೋ ಹಳೆಯ ವಿಡಿಯೋ ಇಟ್ಟುಕೊಂಡು ವಿವಾದ ಸೃಷ್ಟಿಸಲಾಗಿತ್ತು. ಅದು ಯಶ್ ಫ್ಯಾನ್ಸ್ ವರ್ಸಸ್ ಸುದೀಪ್ ಫ್ಯಾನ್ಸ್ ಲೆವೆಲ್ಲಿಗೆ ಹೋಗಿತ್ತು. ಅದಕ್ಕೆ ಕೊಟ್ಟ ಉತ್ತರವಾ ಇದು?

    ಹಾಗಂತ ಸುದೀಪ್ ಯಾರಿಗೂ ಸಪೋರ್ಟ್ ಮಾಡಲ್ಲ ಎನ್ನುವುದಕ್ಕೆ ಸಾಧ್ಯವೇ ಇಲ್ಲ. ಇದೇ ತೋತಾಪುರಿ ಚಿತ್ರದಲ್ಲಿ ನಟಿಸಿರುವ ಡಾಲಿ ಧನಂಜಯ್ ಅವರನ್ನು ಸುದೀಪ್, ಮನಃಪೂರ್ವಕವಾಗಿ ಹೊಗಳಿದರು. ಸುದೀಪ್ ಅವರೇ ಅವಕಾಶ ಕೊಟ್ಟು ಬೆಳೆಸಿದ ಹಲವರು ಇವತ್ತು ಚಿತ್ರರಂಗದಲ್ಲಿದ್ದಾರೆ.

    ಕನ್ನಡವನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಮೊದಲಿಗ ಸುದೀಪ್ ಎಂದು ಜಗ್ಗೇಶ್ ಹೇಳಿದರೆ, ಇದು ಜಗ್ಗೇಶ್ ಸೇರಿದಂತೆ ಹಲವು ಹಿರಿಯರು ಬೆಳೆಸಿರೋ ಚಿತ್ರರಂಗ. ನಾವಿಲ್ಲಿ ಏನೋ ಮಾಡುತ್ತೇವೆ ಎನ್ನುವುದು ನೆಪ ಮಾತ್ರ ಎಂದರು ಸುದೀಪ್.

  • ದಬಾಂಗ್ 3 ಕನ್ನಡಿಗರ ಸಿನಿಮಾ - ಸಲ್ಮಾನ್

    dabanng 3 is kannadiga's movie

    ಚಿತ್ರದ ಡೈರೆಕ್ಟರ್ ಕನ್ನಡಿಗ, ಪ್ರಭುದೇವ. ಚಿತ್ರದ ವಿಲನ್ ಕನ್ನಡಿಗ ಸುದೀಪ್. ಜೊತೆಗೆ ಸಲ್ಮಾನ್ ಖಾನ್ ಚಿತ್ರವೊಂದು ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಬರುತ್ತಿದೆ. ಹೀಗಾಗಿ ಇದು ಕನ್ನಡ ಸಿನಿಮಾ. ಕನ್ನಡಿಗರ ಸಿನಿಮಾ ಎಂದರು ಸಲ್ಲು.

    ಸುದೀಪ್ ನನ್ನ ಸಹೋದರನಿದ್ದಂತೆ ಎಂದು ಹೊಗಳಿದ್ದ ಸಲ್ಮಾನ್, ಇದು ಸುದೀಪ್ ಸಿನಿಮಾ. ಅವರು ನಿಜವಾದ ಸೂಪರ್ ಸ್ಟಾರ್ ಎಂದು ಹೊಗಳಿದರು. ತಾರೀಕು ನಂದು, ಟೈಮೂ ನಂದು ಎಂದು ಕನ್ನಡದಲ್ಲೇ ಹೇಳಿದ ಸಲ್ಮಾನ್ ಕನ್ನಡ ನಂಗೂ ಬರುತ್ತೆ ಎಂದು ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡರು. ನಾಯಕಿ ಸೋನಾಕ್ಷಿ ಸಿನ್ಹಾ, ನಿರ್ದೇಶಕ ಪ್ರಭುದೇವ ಕೂಡಾ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

  • ದಬಾಂಗ್ ೩ ಸಲ್ಲು ಹಾಡಿದ ಕನ್ನಡ ಪ್ರೇಮಗೀತೆ ಕೇಳಿದ್ರಾ..?

    dabang 3 kannada song wins hearts

    ಸೀರೇಲಿ ಬಳುಕುತ್ತಾ ಬಂದೆ.. ನೀನು ಬಿಚ್ಚೋಲೆ ಗೌರಮ್ಮನಂತೆ.. ನೀ ಏನೇ ಕೇಳು ಹೂ ಅನುವೆ..

    ಇದು ದಬಾಂಗ್ ೩ ಚಿತ್ರದ ಯುಗಳ ಗೀತೆ. ಹಾಡಿಗೆ ಬಿಂದಾಸ್ ಆಗಿ ಕುಣಿದಿರೋದು ಸಲ್ಮಾನ್ ಖಾನ್ ಮತ್ತು ಸೋನಾಕ್ಷಿ ಸಿನ್ಹಾ. ಹಿಂದಿ ಹಾಡನ್ನು ಯಥಾವತ್ ಇಳಿಸದೆ, ಹೊಸದೇ ಎನ್ನುವ ರೀತಿಯಲ್ಲಿ ಸಾಹಿತ್ಯ ಬರೆದಿರುವುದು ರಂಗಿತರAಗದ ಅನೂಪ್ ಭಂಡಾರಿ.

    ವಿಜಯ ಪ್ರಕಾಶ್ ಮತ್ತು ಐಶ್ವರ್ಯ ರಂಗರಾಜನ್ ಹಾಡು ಹಾಡಿದ್ದು, ಹಾಡು ಕಿಕ್ಕೇರಿಸಿದೆ. ಸಲ್ಮಾನ್ ಖಾನ್ ಜೊತೆಗೆ ಕಿಚ್ಚ ಸುದೀಪ್ ನೆಗೆಟಿವ್ ಶೇಡ್ ಪಾತ್ರದಲ್ಲಿ ನಟಿಸಿದ್ದು, ಕ್ರಿಸ್‌ಮಸ್‌ಗೆ ರಿಲೀಸ್ ಆಗುತ್ತಿದೆ. ಹೀಗಾಗಿಯೇ ದಬಾಂಗ್ ೩ ಸೆನ್ಸೇಷನ್ ಸೃಷ್ಟಿಸಿದೆ. ಇದರಂತೆಯೇ ಹಾಡು ಕೂಡಾ.

  • ದಬಾಂಗ್ 3ಯನ್ನೂ ಬಿಡಲಿಲ್ಲ ತಮಿಳು ರಾರ‍್ಸ್

    tamil rockers haunt dabanng 3 as well

    ಯಾವುದೇ ಭಾಷೆಯ ಚಿತ್ರರಂಗಕ್ಕೆ ವಿಲನ್ ಆಗಿರುವ ತಮಿಳು ರಾರ‍್ಸ್ ಸಲ್ಮಾನ್ ಖಾನ್ ಅಭಿನಯದ ದಬಾಂಗ್ 3ಗೂ ಖಳನಾಯಕರಾಗಿ ಕಾಡಿದ್ದಾರೆ. ಚಿತ್ರ ರಿಲೀಸ್ ಆದ ದಿನವೇ ತಮಿಳು ರಾರ‍್ಸ್ ಚಿತ್ರದ ಪೈರಸಿ ವಿಡಿಯೋ ರಿಲೀಸ್ ಮಾಡಿದೆ. ಅದೂ ಹೆಚ್‌ಡಿ ವರ್ಷನ್‌ನಲ್ಲಿ.

    ಬಾಲಿವುಡ್ ಮಂದಿ ಸಿನಿಮಾವನ್ನು ಎಲ್ಲ ಸುರಕ್ಷತಾ ಕ್ರಮಗಳನ್ನಿಟ್ಟುಕೊಂಡೇ ರಿಲೀಸ್ ಮಾಡುತ್ತಾರೆ. ಆದರೂ ತಮಿಳು ರಾರ‍್ಸ್, ಅವರಿಗಿಂತ ಒಂದು ಹೆಜ್ಜೆ ಮುಂದಿರುತ್ತಾರೆ. ಒಂದು ಕಡೆ ಸಲ್ಮಾನ್, ಸುದೀಪ್ ಕಾಂಬಿನೇಷನ್ನಿನ ಸಿನಿಮಾ ಬಾಕ್ಸಾಫೀಸನ್ನು ಚಿಂದಿ ಉಡಾಯಿಸುತ್ತಿದ್ದರೆ, ತಮಿಳು ರಾರ‍್ಸ್ ನಿರ್ಮಾಪಕರಿಗೆ ಟೆನ್ಷನ್ ತಂದಿಟ್ಟಿದ್ದಾರೆ

  • ದಬಾಂಗ್ ಕನ್ನಡ.. ಸಲ್ಮಾನ್ ಕನ್ನಡ.. ಬಂದೇ ಬಿಡ್ತು..!

    salman khan speaks kannada in dabaang 3 motion poster

    ದಬಾಂಗ್ 3, ಸಲ್ಮಾನ್ ಖಾನ್ ಅಭಿನಯದ ಪ್ರಭುದೇವ ನಿರ್ದೇಶನದ ಸಿನಿಮಾ. ಕಿಚ್ಚ ಸುದೀಪ್, ಸಲ್ಮಾನ್ ಎದುರು ಪ್ರತಿನಾಯಕನಾಗಿ ನಟಿಸಿರುವ ಚಿತ್ರವಿದು. ಸ್ವತಃ ಸಲ್ಮಾನ್ ಖಾನ್, ಅರ್ಬಾಜ್ ಖಾನ್, ನಿಖಿಲ್ ದ್ವಿವೇದಿ ಚಿತ್ರದ ನಿರ್ಮಾಪಕರು. ಈ ಚಿತ್ರ ಡಿಸೆಂಬರ್ 20ರಂದು ರಿಲೀಸ್ ಆಗುತ್ತಿದ್ದು, ಕನ್ನಡದಲ್ಲೂ ಬರಲಿದೆ.

    ಪೈಲ್ವಾನ್ ರಿಲೀಸ್ ಆಗುವುದಕ್ಕೆ 2 ದಿನ ಮೊದಲು ಕನ್ನಡದ ದಬಾಂಗ್ 3 ಟೀಸರ್ ಬಿಟ್ಟಿರುವ ಸಲ್ಮಾನ್, ಸ್ವತಃ ಕನ್ನಡದಲ್ಲಿಯೇ ಡಬ್ ಮಾಡಿದ್ದಾರೆ. ಟೈಮೂ ನಂದು..ತಾರೀಕೂ ನಂದು ಎನ್ನುವ ಸಲ್ಮಾನ್ ವಾಯ್ಸ್ ಇರುವ ಮೋಷನ್ ಪೋಸ್ಟರ್ ಹವಾ ಎಬ್ಬಿಸಿದೆ. ದಬಾಂಗ್ 3 ಒಟ್ಟು 4 ಭಾಷೆಗಳಲ್ಲಿ ಬರಲಿದೆ. ಒನ್ಸ್ ಎಗೇಯ್ನ್, ಇಲ್ಲಿಯೂ ಸಲ್ಮಾನ್ಗೆ ಸೋನಾಕ್ಷಿ ಸಿನ್ಹಾ ನಾಯಕಿ. ಒಟ್ಟಿನಲ್ಲಿ ಈ ಮೂಲಕ ಸಲ್ಮಾನ್  ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.

  • ದಬಾಂಗ್ ಕ್ಲೈಮಾಕ್ಸ್ ಲೀಕ್ : ಕಿಚ್ಚನ ಹೊಡೆದಾಟ ಬಿಚ್ಚಿಟ್ಟ ಸಲ್ಲು

    dabanng 3 climax video leaked

    ಯಾವುದೇ ಚಿತ್ರದ ಜೀವಾಳವೇ ಕ್ಲೈಮಾಕ್ಸ್. ಅಂಥಾದ್ದರಲ್ಲಿ ಬಾಲಿವುಡ್ಡಿನ ಬಹುನಿರೀಕ್ಷಿತ ಚಿತ್ರ ದಬಾಂಗ್ 3 ಚಿತ್ರದ ಕ್ಲೈಮಾಕ್ಸ್ ಲೀಕ್ ಆಗಿದೆ. ವಿಶೇಷ ಅಂದ್ರೆ, ಈ ಕ್ಲೈಮಾಕ್ಸ್ ದೃಶ್ಯದ ತುಣುಕುಗಳನ್ನು ಲೀಕ್ ಮಾಡಿರುವುದು ಸ್ವತಃ ಸಲ್ಮಾನ್ ಖಾನ್.

    ಕ್ಲ್ಯೈಮ್ಯಾಕ್ಸ್ ಸೀನ್‌ನಲ್ಲಿ ಸಿಕ್ಕಾಪಟ್ಟೆ ಆ್ಯಕ್ಷನ್ ಇದ್ದು, ಬಲಿ ಸಿಂಗ್ ಆಗಿ ಸುದೀಪ್ ನಟಿಸಿದ್ದಾರೆ. 23 ದಿನ ಶೂಟಿಂಗ್ ಆದ ಕ್ಲೈಮಾಕ್ಸ್ ಇದು. ಸಲ್ಮಾನ್ 500 ಜನರ ವಿರುದ್ಧ ಫೈಟ್ ಮಾಡ್ತಾರಂತೆ. 00 ಕಾರ್‌ಗಳು ಕ್ಲ್ಯೈಮ್ಯಾಕ್ಸ್ ಸೀನ್‌ನಲ್ಲಿವೆಯಂತೆ. ಬ್ಲಾಸ್ಟ್ ಆಗ್ತವಾ..?

    ಅಲ್ಲೇ ಇರೋದು ಟ್ವಿಸ್ಟು. ಸಲ್ಮಾನ್ ಖಾನ್ ಅಣ್ಣ ಅರ್ಬಾಜ್ ಖಾನ್ ಚಿತ್ರದ ನಿರ್ಮಾಪಕ. ಅಷ್ಟು ಸುಲಭವಾಗಿ ಬಿಟ್ಟು ಬಿಡ್ತಾರಾ..? ಪ್ರಭುದೇವ ನಿರ್ದೇಶನದ ಈ ಸಿನಿಮಾ ಡಿಸೆಂಬರ್ 20ಕ್ಕೆ ರಿಲೀಸ್ ಆಗ್ತಿದೆ. ಅಲ್ಲಿಯವರೆಗೂ ಚುಲ್ ಬುಲ್ ಪಾಂಡೆ ಇಂತಹ ಮಜಾ ಕೊಡ್ತಾನೇ ಇರ್ತಾರೆ. ಫುಲ್ ಮಜಾ ಸಿಗೋದೇನಿದ್ರೂ ಆವತ್ತೇ..

  • ದಬಾಂಗ್ ಬಾಕ್ಸಾಫೀಸ್ ಬೊಂಬಾಟ್

    dabanng 3 box office report

    ಕಿಚ್ಚ ಸುದೀಪ್ ವಿಲನ್ ಆಗಿ ನಟಿಸಿರುವ ದಬಾಂಗ್ 3, ಕನ್ನಡದಲ್ಲಿ ಕಮಾಲ್ ಮಾಡುತ್ತಿದೆ. ಸಲ್ಮಾನ್ ಖಾನ್, ಸೋನಾಕ್ಷಿ ಸಿನ್ಹ ನಟಿಸಿರುವ ದಬಾಂಗ್ 3 ಕನ್ನಡದಲ್ಲಿ 4 ಕೋಟಿ ರೂ. ಕಲೆಕ್ಷನ್ ಮಾಡಿದೆ. ಡಬ್ಬಿಂಗ್ ಸಿನಿಮಾವೊಂದು ಕನ್ನಡದಲ್ಲಿ ಗಳಿಸಿರುವ ಅತಿ ದೊಡ್ಡ ಕಲೆಕ್ಷನ್ ಇದು. ಹೀಗಾಗಿಯೇ ವಿತರಕ ಜಾಕ್ ಮಂಜು ಖುಷಿಯಾಗಿದ್ದಾರೆ.

    ಚಿತ್ರಕ್ಕೆ ಉತ್ತರ ಕರ್ನಾಟಕದಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ರಾಜ್ಯದ ಹಲವು ಕಡೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಹಿಂದಿಗಿAತಲೂ ಕನ್ನಡಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ ಎಂದಿದ್ದಾರೆ ಜಾಕ್ ಮಂಜು. ಚಿತ್ರಮಂದಿರಗಳ ಸಂಖ್ಯೆ ಹೆಚ್ಚುತ್ತಿರುವುದು ಚಿತ್ರದ ಸಕ್ಸಸ್ ತೋರಿಸುತ್ತಿದೆ.

  • ದಬಾಂಗ್ ಸ್ಟರ‍್ಸ್ ಇಷ್ಟದ ಕ್ರಿಕೆರ‍್ಸ್ ಯಾರು..?

    dabanng 3 promotions reaches cricket stadium too

    ದಬಾಂಗ್ 3 ರಿಲೀಸ್ ಹತ್ತಿರವಾದಂತೆ ಚಿತ್ರದ ಪ್ರಮೋಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ ಸಲ್ಮಾನ್ ಮತ್ತು ಸುದೀಪ್. ಈಗ ನಡೆಯುತ್ತಿರುವ ವೆಸ್ಟ್ಇಂಡೀಸ್ ವಿರುದ್ಧದ ಸರಣಿಯಲ್ಲೂ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ ಸಲ್ಲು ಮತ್ತು ಕಿಚ್ಚ. ಪಂದ್ಯದ ನೇರಪ್ರಸಾರದ ವೇಳೆ ಸ್ಟುಡಿಯೋಗೆ ತೆರಳಿದ್ದ ಸಲ್ಮಾನ್ ಮತ್ತು ಸುದೀಪ್ ಕ್ರಿಕೆಟ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

    ಇದೇ ವೇಳೆ ತಮಗಿಷ್ಟವಾದ ಆಟಗಾರರು ಯಾರು ಎಂಬ ಪ್ರಶ್ನೆಗೆ ಸಲ್ಮಾನ್ ವೈಯಕ್ತಿಕವಾಗಿ ನನಗೆ ಕೇದಾರ್ ಜಾಧವ್ ಗೊತ್ತು, ಆದರೆ ನನಗೆ ಧೋನಿ ಫೇವರಿಟ್ ಸ್ಟಾರ್ ಎಂದಿದ್ದಾರೆ.

    ಸ್ವತಃ ಕ್ರಿಕೆಟರ್ ಆಗಿರುವ ಸುದೀಪ್ ಅವರು ಆ ದಿನ ಚೆನ್ನಾಗಿ ಆಡುವವನೇ ನಿಜವಾದ ಸ್ಟಾರ್ ಎಂದರಾದರೂ ತಮ್ಮ ಅಚ್ಚುಮೆಚ್ಚಿನ ಆಟಗಾರ ಅನಿಲ್ ಕುಂಬ್ಳೆ, ಪ್ರಸ್ತುಟ ಟೀಂನಲ್ಲಿರುವವರಲ್ಲಿ ರೋಹಿತ್ ಶರ್ಮಾ ಇಷ್ಟ ಎಂದಿದ್ದಾರೆ.

  • ದಯವಿಟ್ಟು ಕ್ಷಮಿಸಿ. ಕೋಟಿಗೊಬ್ಬ -3 ಇಂದಲ್ಲ.. ನಾಳೆ ರಿಲೀಸ್ : ಸೂರಪ್ಪ ಬಾಬು

    ದಯವಿಟ್ಟು ಕ್ಷಮಿಸಿ. ಕೋಟಿಗೊಬ್ಬ -3 ಇಂದಲ್ಲ.. ನಾಳೆ ರಿಲೀಸ್ : ಸೂರಪ್ಪ ಬಾಬು

    ಆಯುಧಪೂಜೆಯ ದಿನವೇ ರಿಲೀಸ್ ಆಗಬೇಕಿದ್ದ ಕೋಟಿಗೊಬ್ಬ 3 ಚಿತ್ರದ ಬಿಡುಗಡೆ ಒಂದು ದಿನ ಮುಂದಕ್ಕೆ ಹೋಗಿದೆ.  ಚಿತ್ರ ಇಂದು ಬಿಡುಗಡೆಯಾಗುತ್ತಿಲ್ಲ. ಬೆಳಗ್ಗೆಯಿಂದಲೇ ಶುರುವಾದ ಗೊಂದಲಕ್ಕೆ ನಿರ್ಮಾಪಕ ಸೂರಪ್ಪ ಬಾಬು ತೆರೆ ಎಳೆದಿದ್ದಾರೆ. ಅತ್ತ ಕಿಚ್ಚ ಸುದೀಪ್ ಕೂಡಾ ಟ್ವೀಟ್ ಮೂಲಕ ಅಭಿಮಾನಿಗಳಿಗೆ ಶಾಂತಿಯಿಂದಿರಲು ಮನವಿ ಮಾಡಿದ್ದಾರೆ.

    ಕೆಲವರ ಬೇಜವಾಬ್ದಾರಿತನದಿಂದಾಗಿ ಕೋಟಿಗೊಬ್ಬ- 3 ಚಿತ್ರ ರಿಲೀಸ್ ಆಗಲಿಲ್ಲ. ಚಿತ್ರಮಂದಿರಗಳ ಮಾಲೀಕರ ತಪ್ಪು ಏನೂ ಇಲ್ಲ. ದಯವಿಟ್ಟು ಶಾಂತಿಯಿಂದಿರಿ. ಚಿತ್ರಮಂದಿರದವರ ಜೊತೆ ಗಲಾಟೆ ಮಾಡಬೇಡಿ ಎಂದು ಸುದೀಪ್ ಮನವಿ ಮಾಡಿದ್ದಾರೆ.

    ಕೆಲವರ ಷಡ್ಯಂತ್ರದಿಂದಾಗಿ ಚಿತ್ರ ಬಿಡುಗಡೆ ಸಾಧ್ಯವಾಗಲಿಲ್ಲ. ಈಗ ಎಲ್ಲವನ್ನೂ ಬಗೆಹರಿಸಿಕೊಳ್ಳುತ್ತಿದ್ದೇವೆ. ಸಂಜೆಯೊಳಗೆ ವಿವಾದ ಇತ್ಯರ್ಥವಾಗಲಿದ್ದು, ನಾಳೆ ಬೆಳಗ್ಗೆಯೇ ಶೋ ಶುರುವಾಗಲಿದೆ. ಸುದೀಪ್ ಅಭಿಮಾನಿಗಳು ಹಾಗೂ ಪ್ರೇಕ್ಷಕರಲ್ಲಿ ಆಗಿರುವ ಗೊಂದಲಕ್ಕೆ ಕ್ಷಮೆ ಕೇಳುತ್ತಿದ್ದೇನೆ. ದಯವಿಟ್ಟು ಸಹಕರಿಸಿ ಎಂದು ಕೇಳಿಕೊಂಡಿದ್ದಾರೆ ನಿರ್ಮಾಪಕ ಸೂರಪ್ಪ ಬಾಬು.