` kiccha sudeepa - chitraloka.com | Kannada Movie News, Reviews | Image

kiccha sudeepa

 • ಕೋಟಿಗೊಬ್ಬ ಟೀಂಗೆ ಆ ದಗಾಕೋರ ಮಾಡಿದ ವಂಚನೆ ಏನು..?

  kotigobba 3 team faces problem in poland

  ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಚಿತ್ರ ತಂಡಕ್ಕೆ ಪೋಲೆಂಡ್‍ನಲ್ಲೊಬ್ಬ ದಗಾಕೋರ ಮಹಾವಂಚನೆಯನ್ನೇ ಮಾಡಿದ್ದಾನೆ. ಈ ಕುರಿತು ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪೋಲೆಂಡ್‍ನಲ್ಲಿರೋ ಭಾರತದ ರಾಯಭಾರ ಕಚೇರಿಯನ್ನೂ ಸಂಪರ್ಕಿಸುತ್ತಿದ್ದಾರೆ. ಸದ್ಯಕ್ಕೆ ಸೂರಪ್ಪ ಬಾಬು ಅವರ ಅಕೌಂಟೆಂಟ್, ಪೋಲೆಂಡಿನಲ್ಲಿ ಆ ದಗಾಕೋರನ ವಶದಲ್ಲೇ ಇದ್ದಾನೆ. ಆಗಿರೋದು ಇಷ್ಟು.

  ಕೋಟಿಗೊಬ್ಬ 3 ಟೀಂ ಪೋಲೆಂಡ್‍ಗೆ ಶೂಟಿಂಗ್‍ಗೆಂದು ಹೋದಾಗ ಮಂಬೈನ ಏಜೆನ್ಸಿಯೊಂದರ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಚಿತ್ರೀಕರಣಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನೂ ಮಾಡಿಕೊಡುವುದಾಗಿ ಆ ಸಂಸ್ಥೆ ಹೇಳಿತ್ತು ಹಾಗೂ 3 ಕೋಟಿ ಹಣವನ್ನೂ ಪಡೆದುಕೊಂಡಿತ್ತು. ಆದರೆ, ಚಿತ್ರೀಕರಣ ಮುಗಿಸಿ ಹೊರಡುವಾಗ ಅಲ್ಲಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಸಂಜಯ್ ಪೌಲ್ ಎಂಬ ವ್ಯಕ್ತಿ ಮತ್ತೆ 50 ಲಕ್ಷಕ್ಕೆ ಡಿಮ್ಯಾಂಡ್ ಇಟ್ಟಿದ್ದಾನೆ. ಇಲ್ಲದೇ ಹೋದರೆ ಚಿತ್ರತಂಡವನ್ನೇ ಹೋಗೋಕೆ ಬಿಡಲ್ಲ ಎಂದು ಬೆದರಿಸಿದ್ದಾನೆ. ಹೇಗೋ ಹಣ ಕೊಟ್ಟು ಬಂದಿರುವ ಚಿತ್ರತಂಡ, ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ವಂಚಕನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

 • ಕೋಟಿಗೊಬ್ಬ ಟೀಂನಿಂದ ಸಾಯಿ ಕೃಷ್ಣ ಹೊರಕ್ಕೆ..

  ಕೋಟಿಗೊಬ್ಬ ಟೀಂನಿಂದ ಸಾಯಿ ಕೃಷ್ಣ ಹೊರಕ್ಕೆ..

  ಕೋಟಿಗೊಬ್ಬ 3 ಚಿತ್ರತಂಡದ ಚಿತ್ರದ ಪೋಸ್ಟರ್ ಡಿಸೈನರ್ ಹೊರನಡೆದಿದ್ದಾರೆ. ಸಾಯಿಕೃಷ್ಣ, ಕೋಟಿಗೊಬ್ಬ ಚಿತ್ರ ಶುರುವಾದಾಗಿನಿಂದ ಜೊತೆಯಲ್ಲೇ ಇದ್ದವರು. ಮಧ್ಯೆ ಏನಾಯ್ತು.. ಬಹುಶಃ ಸುದೀಪ್ ಅವರಿಗೂ ಗೊತ್ತಿರುವ ಸಾಧ್ಯತೆ ಇಲ್ಲ. ಏಕೆಂದರೆ ಸಾಯಿ ಕೃಷ್ಣ, ಇದನ್ನು ಸೋಷಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿಬಿಟ್ಟಿದ್ದಾರೆ.

  ನಾನು ಈ ಚಿತ್ರವನ್ನು ಒಪ್ಪಿಕೊಳ್ಳೋಕೆ ಕಾರಣ ಸುದೀಪ್ ಸರ್, ಸುದೀಪ್ ಸರ್ ಫ್ಯಾನ್ಸ್ ಮತ್ತು ಹಣ ಎಂದು ನೇರವಾಗಿಯೇ ಹೇಳಿರುವ ಸಾಯಿ ಕೃಷ್ಣ, ನಿರ್ಮಾಣ ಸಂಸ್ಥೆಯವರು ಚಿತ್ರದ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿರಲಿಲ್ಲ. ಇನ್ನು ಮುಂದೆ ನಾನು ಕೋಟಿಗೊಬ್ಬ 3  ಚಿತ್ರದ ಅಫಿಷಿಯಲ್ ಡಿಸೈನರ್ ಅಲ್ಲ ಎಂದಿದ್ದಾರೆ ಸಾಯಿ.

  ಕೋಟಿಗೊಬ್ಬ 3 ತಂಡದ ಜರ್ನಿಯಲ್ಲಿ ನೀವಿದ್ದೀರಿ. ನಿಮ್ಮ ನಿರ್ಣಯವನ್ನು ಗೌರವಿಸುತ್ತೇನೆ. ಏನಾಯಿತೋ.. ಅದನ್ನು ಬಿಟ್ಟು ಬಿಡಿ. ನೀವು ನಮ್ಮೊಂದಿಗೆ ಇರಬೇಕು. ಖಂಡಿತಾ ಇದರ ಬಗ್ಗೆ ಗಮನ ಹರಿಸುತ್ತೇನೆ ಎಂದಿದ್ದಾರೆ ಕಿಚ್ಚ.

 • ಕೋಟಿಗೊಬ್ಬ-3 ಆನಂದ.. ಆನಂದ.. ಆನಂದವೇ..

  anand audio acquires kotigobba 3 audio rights

  ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತ ತಲುಪಿದೆ. ಇತ್ತ ಕೋಟಿಗೊಬ್ಬ-3 ಚಿತ್ರದ ಚಿತ್ರೀಕರಣದ ಮುಂದಿನ ಹಂತಕ್ಕೆ ಪ್ಲಾನ್ ನಡೆಯುತ್ತಿದೆ. ಹೀಗಿರುವಾಗಲೇ ಆನಂದ್ ಆಡಿಯೋ ಕೋಟಿಗೊಬ್ಬ0-3 ಚಿತ್ರದ ಆಡಿಯೋ ರೈಟ್ಸ್ ಪಡೆದುಕೊಂಡಿದೆಯಂತೆ.

  ಈ ವರ್ಷ ಕನಿಷ್ಠ 1 ಕೋಟಿ ವೀಕ್ಷಕರನ್ನು ತಲುಪುವ ಗುರಿ ಹೊಂದಿರುವ ಆನಂದ್ ಆಡಿಯೋ, ಕಿಚ್ಚ ಸುದೀಪ್ ಚಿತ್ರದ ಮೂಲಕ ದೊಡ್ಡ ಮಟ್ಟದ ಸಕ್ಸಸ್ ತಲುಪುವ ಗುರಿಯನ್ನೂ ಇಟ್ಟುಕೊಂಡಿದೆ. 

  ಅಭಿಷೇಕ್ ಅಂಬರೀಷ್ ಅಭಿನಯದ ಅಮರ್, ಶ್ರೀಮುರಳಿ ಅಭಿನಯದ ಮದಗಜ, ಗಣೇಶ್ ಅಭಿನಯದ 99 ಚಿತ್ರದ ಆಡಿಯೋ ರೈಟ್ಸ್‍ನ್ನೂ ಆನಂದ್ ಆಡಿಯೋ ಖರೀದಿಸಿದೆಯಂತೆ. 

 • ಕೋಟಿಗೊಬ್ಬನ ಅಬ್ವರ

  ಕೋಟಿಗೊಬ್ಬನ ಅಬ್ವರ

  ರಿಲೀಸ್ ಆಗುತ್ತೋ ಇಲ್ವೋ.. ಎಂದು ಕಟ್ಟಕಡೆಯ ಕ್ಷಣದವರೆಗೂ ಟೆನ್ಷನ್ ಸೃಷ್ಟಿಸಿದ್ದ ಕೋಟಿಗೊಬ್ಬ 3 ಕೊನೆಗೂ ರಿಲೀಸ್ ಆಗಿದೆ. ವಿತರಕರು ಬದಲಾಗಿ ಸೈಯದ್ ಸಲಾಂ, ಗಂಗಾಧರ್ ಮತ್ತು ಜಾಕ್ ಮಂಜು ವಿತರಣೆಗೆ ನಿಲ್ಲೋದ್ರೊಂದಿಗೆ ಬಿಡುಗಡೆ ಸಮಸ್ಯೆ ಪರಿಹಾರವಾಯ್ತು. ಥಿಯೇಟರಿನಲ್ಲಿ ಬೆಳಗ್ಗಿನಿಂದಲೇ ಪ್ರದರ್ಶನ ಶುರುವಾಯ್ತು.

  ಕಿಚ್ಚ ಸುದೀರ್ಘ ಕಾಲದ ನಂತರ ಡಬಲ್ ಌಕ್ಟಿಂಗ್ನಲ್ಲಿ ಬಂದಿರೋ ಕೋಟಿಗೊಬ್ಬ 3, ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆಯ ಸ್ವಾಗತ ಸಿಕ್ಕಿದೆ. ರವಿಶಂಕರ್ ಪರ್ಫಾಮೆನ್ಸ್ಗೆ ಫುಲ್ ಮಾರ್ಕ್ಸ್ ಸಿಕ್ಕಿದೆ. ನಿರ್ದೇಶಕ ಶಿವಕಾರ್ತಿಕ್ ಮೊದಲ ಪ್ರಯತ್ನದಲ್ಲೇ ಗೆದ್ದಿದ್ದಾರೆ. ಸೂರಪ್ಪ ಬಾಬು ರಿಲ್ಯಾಕ್ಸ್ ಆಗಿದ್ದಾರೆ.         ಸುದೀಪ್ ಹಿಟ್ ಚಿತ್ರಗಳ ಲಿಸ್ಟ್ಗೆ ಇನ್ನೊಂದು ಸಿನಿಮಾ ಸೇರಿಕೊಂಡಿದೆ.

 • ಕೋಟಿಗೊಬ್ಬನ ಕಿಕ್ಕು.. ಮೇಕಿಂಗ್ ಝಲಕ್ಕು..

  ಕೋಟಿಗೊಬ್ಬನ ಕಿಕ್ಕು.. ಮೇಕಿಂಗ್ ಝಲಕ್ಕು..

  ಕೋಟಿಗೊಬ್ಬ 3 ಚಿತ್ರ ರಿಲೀಸ್ ಆಗೋಕೆ ರೆಡಿಯಾಗಿದೆ. ಮೊದಲಿಗೆ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಬರುತ್ತೋ.. ಕೋಟಿಗೊಬ್ಬ 3 ಬರುತ್ತೋ.. ಗ್ಯಾರಂಟಿಯಿಲ್ಲ.  ಈ ನಡುವೆಯೇ ಸೂರಪ್ಪ ಬಾಬು ನಿರ್ಮಾಣದ ಕೋಟಿಗೊಬ್ಬ 3 ಚಿತ್ರದ ಮೇಕಿಂಗ್ ವಿಡಿಯೋ ರಿಲೀಸ್ ಆಗಿದೆ.

  ಕೋಟಿಗೊಬ್ಬ3 ಸಿನಿಮಾ ಚಿತ್ರೀಕರಣ ಕಂಪ್ಲಿಟ್ ಆಗಿದ್ದು ಸಿನಿಮಾ ಬಿಡುಗಡೆಗೆ ಸಿದ್ದತೆ ಮಾಡಿಕೊಳ್ತಿದ್ದಾರೆ...ಈ ಮಧ್ಯೆ ಚಿತ್ರದ ಕಲರ್ ಫುಲ್ ಆಗಿರೋ ಮೇಕಿಂಗ್ ರಿಲಿಸ್ ಮಅಡಿ ಸಿನಿಮಾ ಮೇಲೆ ಮತ್ತಷ್ಟು ನಿರೀಕ್ಷೆ ಹುಟ್ಟುಹಾಕಿದೆ ಕೊಟಿಗೊಬ್ಬ3 ತಂಡ. ಕಿಚ್ಚನ ಜೊತೆ ನಾಯಕಿಯಾಗಿ ಮಲೆಯಾಳಂ ನಟಿ ಮಡೋನಾ ಕಾಣಿಸಿಕೊಂಡಿದ್ದಾರೆ. ಸದ್ಯ ಬಿಡುಗಡೆ ಆಗಿರೋ ಮೇಕಿಂಗ್ ನೋಡ್ತಿದ್ರೆ ಕೋಟಿಗೊಬ್ಬ ದೊಡ್ಡ ಬಜೆಟ್ಟಿನ ಸಿನಿಮಾ ಅನ್ನೋದ್ರಲ್ಲಿ ನೋ ಡೌಟ್. ಕಿಚ್ಚನ ಜೊತೆ ಮಡೋನ್ನಾ , ಆಶಿಕಾ ರಂಗನಾಥ್, ಶ್ರದ್ದಾ ದಾಸ್, ರವಿಶಂಕರ್ , ತಬಲಾನಾಣಿ , ಶಿವರಾಜ್ ಕೆ ಆರ್ ಪೇಟೆ, ಶೋಭ್ ರಾಜ್ ಹೀಗೆ ದೊಡ್ಡ ದೊಡ್ಡ ನಟರ ದಂಡೇ ಇದೆ. ನಿರ್ದೇಶಕ ಶಿವಕಾರ್ತಿಕ್. ಸೈಬೀರಿಯಾ, ಮಲೇಷಿಯಾ, ಥೈಲ್ಯಾಂಡ್ ನ ಸುಂದರ ತಾಣಗಳಲ್ಲಿ ಸಿನಿಮಾವನ್ನ ಚಿತ್ರೀಕರಿಸಿದ್ದು, ಇದು ಮೈಂಡ್ ಗೇಮ್ನ ಸಿನಿಮಾ ಎನ್ನಲಾಗಿದೆ.

 • ಕೋಟಿಗೊಬ್ಬನ ಜೊತೆ ಮದಗಜ : ಏನಿದು ವಿಶೇಷ..?

  ಕೋಟಿಗೊಬ್ಬನ ಜೊತೆ ಮದಗಜ : ಏನಿದು ವಿಶೇಷ..?

  ಕೋಟಿಗೊಬ್ಬ 3, ಇದೇ ಅಕ್ಟೋಬರ್‍ನಲ್ಲಿ ದಸರೆಗೆ ಬರುತ್ತಿದೆ. ಅದೇ ದಿನ ಸಲಗ ಚಿತ್ರವೂ ತೆರೆ ಕಾಣುತ್ತಿದೆ. ಶ್ರೀಕೃಷ್ಣ@ಜಿಮೇಲ್.ಕಾಮ್ ಸಿನಿಮಾ ಕೂಡಾ ಅದೇ ದಿನ ರಿಲೀಸ್. ಆದರೆ, ಮದಗಜ ಮಾತ್ರ, ಕೋಟಿಗೊಬ್ಬನ ಜೊತೆಯಲ್ಲೇ ಬರ್ತಾನೆ.

  ಮದಗಜ ಚಿತ್ರದ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಕಂಪ್ಲೀಟ್ ಬ್ಯುಸಿಯಾಗಿದೆ ಮದಗಜ ಟೀಂ. ಸಿನಿಮಾವನ್ನು ಡಿಸೆಂಬರ್‍ನಲ್ಲಿ ರಿಲೀಸ್ ಮಾಡೋ ತಯಾರಿಯಲ್ಲಿರೋ ಚಿತ್ರತಂಡ, ಕೋಟಿಗೊಬ್ಬ 3 ರಿಲೀಸ್ ಜೊತೆ ಪ್ರಚಾರವನ್ನೂ ಶುರು ಮಾಡಲಿದೆ. ಕೋಟಿಗೊಬ್ಬ 3 ಜೊತೆಯಲ್ಲೇ ಮದಗಜ ಚಿತ್ರದ ಟೀಸರ್ ಕೂಡಾ ತೆರೆ ಕಾಣಲಿದೆ.

  ಸುದೀಪ್ ಚಿತ್ರದ ಮೂಲಕ ಶ್ರೀಮುರಳಿ ಚಿತ್ರದ ಪ್ರಮೋಷನ್ ಕೆಲಸಗಳು ಶುರುವಾಗಲಿದೆ.

 • ಕೋಟಿಗೊಬ್ಬನ ಹಬ್ಬ

  kotigobba 3 lyrical video song is super hit

  ಆಕಾಶಾನೇ ಆಧರಿಸುವ.. ಈ ಭೂಮಿಯನ್ನೇ ಪಳಗಿಸುವ.. ಕೋಟಿ ಕೋಟಿ ನೋಟುಗಳ ಕೋಟೆಯ ಮೇಲೆ ಕುಳಿತಿರುವ.. ನಾಲ್ಕು ತಲೆ ಬ್ರಹ್ಮನಿಗೂ.. ಅಬ್ಬಬ್ಬಾ ಕನ್‍ಫ್ಯೂಸು ಮಾಡೋನಿವ.. ಕೋಟಿಗೊಬ್ಬ.. ಕೋಟಿಗೊಬ್ಬ..

  ಯಾವಾಗ.. ಯಾವಾಗ.. ಎಂಚು ಚಾತಕ ಪಕ್ಷಿಗಳಂತೆ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಹಬ್ಬದೂಟ. ಅರ್ಜುನ್ ಜನ್ಯ ಮತ್ತೊಮ್ಮೆ ವಂಡರ್‍ಫುಲ್ ಸ್ಕೋರ್ ಮಾಡಿದ್ದಾರೆ. ಡಾ.ವಿ.ನಾಗೇಂದ್ರ ಪ್ರಸಾದ್ ಬರೆದಿರುವ ಕೋಟಿಗೊಬ್ಬ ಟೈಟಲ್ ಸಾಂಗ್ ಮ್ಯಾಜಿಕ್ ಮಾಡಿಬಿಟ್ಟಿದೆ. ಪೈಲ್ವಾನ್ ನಂತರ ಮತ್ತೊಂದು ಚಿತ್ರಕ್ಕಾಗಿ ಕಾದು ಕುಳಿತಿರುವ ಫ್ಯಾನ್ಸ್ ಲಾಕ್ ಡೌನ್ ಮುಗಿಯುತ್ತಿದ್ದಂತೆಯೇ ಸಿನಿಮಾ ರಿಲೀಸ್ ಎಂಬ ನಿರೀಕ್ಷೆಯಲ್ಲಿದ್ದಾರೆ.

   

 • ಕೋಟಿಗೊಬ್ಬನಿಗೆ ಅದೆಷ್ಟು ಕೋಟಿ ಡಿಮ್ಯಾಂಡಪ್ಪಾ..?

  kotigobba 3 in full demand

  ಕೋಟಿಗೊಬ್ಬ 3 ಸಿನಿಮಾದ ಶೂಟಿಂಗೇ ಮುಗಿದಿಲ್ಲ. ಆಗಲೇ ಸಿನಿಮಾಗೆ ಕೋಟಿ ಕೋಟಿ ಡಿಮ್ಯಾಂಡ್ ಶುರುವಾಗಿದೆ. ಚಿತ್ರದಲ್ಲಿ ಕಿಚ್ಚ ಸುದೀಪ್ ಇರುವ ಕಾರಣಕ್ಕೇ ಈ ಡಿಮ್ಯಾಂಡ್ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. 

  ಚಿತ್ರದ ಹಿಂದಿ ಡಬ್ಬಿಂಗ್ ಮತ್ತು ಸ್ಯಾಟಲೈಟ್ ಹಕ್ಕುಗಳು ಭಾರೀ ಮೊತ್ತಕ್ಕೆ ಸೇಲ್ ಆಗಿವೆಯಂತೆ. ಇತ್ತೀಚೆಗೆ 9 ಕೋಟಿಗೆ ಹಿಂದಿ ಮತ್ತು ಟಿವಿ ರೈಟ್ಸ್ ಮಾರಾಟವಾಗಿವೆ ಎನ್ನಲಾಗಿತ್ತು. ಆದರೆ, ಈಗ ಚಿತ್ರಕ್ಕೆ 21 ಕೋಟಿ ಡಿಮ್ಯಾಂಡ್ ಎಂಬ ಹೊಸ ಮಾಹಿತಿ ಬಂದಿದೆ.

  ನಿರ್ಮಾಪಕ ಸೂರಪ್ಪ ಬಾಬು ಯಾವುದನ್ನೂ ಇನ್ನೂ ಫೈನಲ್ ಮಾಡಿಲ್ಲ. ಶಿವ ಕಾರ್ತಿಕ್ ನಿರ್ದೇಶನದ ಚಿತ್ರಕ್ಕೆ ಮಡೋನಾ ಸೆಬಾಸ್ಟಿನ್ ನಾಯಕಿ. ಟೀಸರ್‍ನಿಂದಲೇ ದೊಡ್ಡ ಹವಾ ಎಬ್ಬಿಸಿದೆ ಕೋಟಿಗೊಬ್ಬ 3 ಸಿನಿಮಾ.

 • ಕ್ರಿಸ್‍ಮಸ್‍ಗೆ ಬರ್ತಾನಂತೆ ಕೋಟಿಗೊಬ್ಬ 3

  sudeep's kotigobba 3 launched

  ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಶಿವ ಕಾರ್ತಿಕ್ ನಿರ್ದೇಶನದ ಈ ಚಿತ್ರಕ್ಕೆ ಸೂರಪ್ಪ ಬಾಬು ನಿರ್ಮಾಪಕ. ಕಥೆ ಸ್ವತಃ ಸುದೀಪ್ ಅವರದ್ದು.

  ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ವೇಣುಗೋಪಾಲಸ್ವಾಮಿ ದೇಗುಲದಲ್ಲಿ ನಡೆದ ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ಸುದೀಪ್ ಅವರ ಇಡೀ ಕುಟುಂಬವೇ ಭಾಗವಹಿಸಿತ್ತು. ಕ್ಯಾಮೆರಾ ಸ್ವಿಚ್ ಆನ್ ಮಾಡಿದ್ದು  ಸುದೀಪ್ ಅವರ ತಂದೆ ಸರೋವರ್ ಸಂಜೀವ್. ಜ್ಯೋತಿ ಬೆಳಗಿದ್ದು ಸುದೀಪ್ ಅವರ ಪತ್ನಿ ಪ್ರಿಯಾ. ಕ್ಲಾಪ್ ಮಾಡಿದ್ದು ನಿರ್ಮಾಪಕ ಮುನಿರತ್ನ. 

  ರಾಕ್‍ಲೈನ್ ವೆಂಕಟೇಶ್, ಗುರುದತ್, ಸಿ.ಆರ್. ಮನೋಹರ್ ಸೇರಿದಂತೆ ಚಿತ್ರರಂಗದ ಹಲವರು ಭಾಗವಹಿಸಿದ್ದರು. ಚಿತ್ರದ ಚಿತ್ರೀಕರಣ ಮಾರ್ಚ್ ತಿಂಗಳ ಕೊನೆಯಲ್ಲಿ ಶುರುವಾಗಲಿದೆ. ಚೆನ್ನೈ, ಹೈದರಾಬಾದ್‍ನಲ್ಲಿ ಚಿತ್ರೀಕರಣ ನಡೆಯಲಿದೆ. ಎಲ್ಲವೂ ಅಂದುಕೊಂಡಂತೆಯೇ ನಡೆದರೆ, ಕ್ರಿಸ್‍ಮಸ್ ವೇಳೆಗೆ ಕೋಟಿಗೊಬ್ಬ 3 ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾನೆ. 

 • ಗಲ್ಫ್ ಮಾಧ್ಯಮಗಳಲ್ಲಿ ಸುದೀಪ್ ಕ್ರೇಜ್

  ಗಲ್ಫ್ ಮಾಧ್ಯಮಗಳಲ್ಲಿ ಸುದೀಪ್ ಕ್ರೇಜ್

  ಕಿಚ್ಚ ಸುದೀಪ್ ಏನು ಮಾಡಿದರೂ ಸುದ್ದಿ, ಸೆನ್ಸೇಷನ್. ಐಪಿಎಲ್ ನೋಡುವ ಸಲುವಾಗಿ ಯುಎಇಗೆ ತೆರಳಿರುವ ಸುದೀಪ್ ಅವರನ್ನು ಗಲ್ಫ್ ದೇಶದ ಟ್ಯಾಬೊಲಾಯ್ಡ್ ಪತ್ರಿಕೆಗಳು ಬೆನ್ನು ಹತ್ತಿವೆ. ಪತ್ನಿ ಪ್ರಿಯಾ ಜೊತೆ ಐಪಿಎಲ್ ಪಂದ್ಯಗಳನ್ನು ಎಂಜಾಯ್ ಮಾಡುತ್ತಿರುವ ಸುದೀಪ್ ಅವರನ್ನು ಹಲವು ಪತ್ರಿಕೆಗಳು ಸಂದರ್ಶನ ಮಾಡಿವೆ.

  ಸುದೀಪ್ ಅವರ ಇಷ್ಟ, ಕಷ್ಟ, ಊಟ, ಕ್ರಿಕೆಟ್, ಲೈಫ್ ಜರ್ನಿ.. ಎಲ್ಲವನ್ನೂ ವಿಶೇಷವಾಗಿ ಪ್ರಕಟಿಸಿವೆ ಗಲ್ಪ್ ಟ್ಯಾಬೊಲಾಯ್ಡ್‍ಗಳು.

 • ಗಾಳಿಸುದ್ದಿಗಳಿಗೆ ಸುದೀಪ್ ಕೊಟ್ಟ ಉತ್ತರ ಏನು ಗೊತ್ತಾ..?

  sudeep clarifies rumors on it raid

  ಕಿಚ್ಚ ಸುದೀಪ್ ಮನೆಗೆ ಐಟಿ ಅಧಿಕಾರಿಗಳು ಬಂದಾಗ, ವರ ಮನೆಯ ಸೆಕ್ಯುರಿಟಿ ಗಾರ್ಡು,  ಗೇಟ್ ತೆಗೆಯಲೇ ಇಲ್ಲ. ಕೊನೆಗೆ ಐಟಿ ಅಧಿಕಾರಿಗಳು ಕಾಂಪೌಂಡ್ ಹಾರಿ ಮನೆಯೊಳಗೆ ಹೋದರು ಎನ್ನುವ ಸುದ್ದಿ ಕೆಲವು ವಾಹಿನಿಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಯ್ತು. ಅತ್ತ ಪೈಲ್ವಾನ್ ಚಿತ್ರದ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದ ಸುದೀಪ್ ಅವರಿಗೂ ಅದು ಅಚ್ಚರಿಯ ಸುದ್ದಿಯೇ.

  ಏಕೆಂದರೆ, ಐಟಿ ರೈಡ್ ಎಂದು ಗೊತ್ತಾದ ನಂತರವೂ ಕೂಲ್ ಆಗಿಯೇ ಚಿತ್ರೀಕರಣದಲ್ಲಿದ್ದ ಸುದೀಪ್, ಮನೆಯಲ್ಲಿ ತಾಯಿ ಒಬ್ಬರೇ ಇದ್ದಾರೆ ಎಂದು ತಿಳಿದು ಧಾವಿಸಿ ಬಂದರು. ಆಗ ಮಾಧ್ಯಮಗಳಲ್ಲಿ ಹರಿದಾಡಿದ ಗಾಳಿಸುದ್ದಿಗೆ ಸ್ವಲ್ಪ ಗರಂ ಆಗಿಯೇ ಉತ್ತರಿಸಿದ ಕಿಚ್ಚ ಸುದೀಪ್ ``ನನ್ನ ಮನೆಗೆ ಐಟಿ ಅಧಿಕಾರಿಗಳು ಗೇಟಿನ ಮೂಲಕವೇ ಬಂದಿದ್ದಾರೆ. ``ಯಾರಿಗೂ ಕಾಂಪೌಂಡ್ ಹಾರಿ ಬರುವ ಸನ್ನಿವೇಶ ಸೃಷ್ಟಿಸಿಲ್ಲ. ಐಟಿ ಅಧಿಕಾರಿಗಳು ಬಂದಿದ್ದಾರೆ. ನೀವು ಎಲ್ಲಿಂದ ಇಂತಹ ಸುದ್ದಿ ಹುಡುಕುತ್ತೀರಿ'' ಎಂದು ಪ್ರಶ್ನಿಸಿದ್ದಾರೆ ಸುದೀಪ್.

  ಇದು ರಾಜಕೀಯ ಪ್ರೇರಿತ ದಾಳಿಯೇನಲ್ಲ. ದಿ ವಿಲನ್, ಕೆಜಿಎಫ್ ಚಿತ್ರಗಳ ಸಕ್ಸಸ್ ಹಾಗೂ ನಟಸಾರ್ವಭೌಮದಂತಹ ಬಿಗ್ ಚಿತ್ರ ಈ ದಾಳಿಗೆ ಕಾರಣ ಇದ್ದರೂ ಇರಬಹುದು. ಹೀಗೇ ಎಂದು ಹೇಳೋಕೆ ಆಗಲ್ಲ. ನಾನು ತೆರಿಗೆ ಕಟ್ಟಿದ್ದೇನೆ. ಲೆಕ್ಕಾಚಾರ ಸರಿಯಾಗಿದೆ. ನೋ ಪ್ರಾಬ್ಲಂ. ಅಧಿಕಾರಿಗಳಿಗೆ ಸಹಕಾರ ನೀಡುವುದು ನಮ್ಮ ಕರ್ತವ್ಯ ಎಂದಿದ್ದಾರೆ ಸುದೀಪ್.

 • ಗೆದ್ದಾ ನೋಡೋ ಪೈಲ್ವಾನ್

  pailwan craze all over

  ಯಾವಾಗ್ ಬರ್ತಾನ್ ಪೈಲ್ವಾನ್ ಎಂದು ವರ್ಷದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ.. ಬಂದ ನೋಡೋ ಪೈಲ್ವಾನ್ ಎಂದು ಬಂದೇಬಿಟ್ರು ಕಿಚ್ಚ ಸುದೀಪ್. ಈಗ ಅದೇ ಅಭಿಮಾನಿಗಳು ಗೆದ್ದ ನೋಡೋ ಪೈಲ್ವಾನ್ ಎನ್ನುತ್ತಿದ್ದಾರೆ.

  ಪೈಲ್ವಾನ್ ರಿಲೀಸ್ ಸಂಭ್ರಮ ಹೇಗಿದೆಯೆಂದರೆ, ಪೈಲ್ವಾನ್ ಕಟೌಟ್‍ಗೆ ಹಾಲಿನ ಅಭಿಷೇಕ ಮಾಡಿ ಹೂಮಳೆ ಸುರಿಸಿದ್ದಾರೆ. ಥಿಯೇಟರಿನಲ್ಲಿ ಕಿಚ್ಚನ ಎಂಟ್ರಿ ವೇಳೆ ಕರ್ಪೂರದಾರತಿ ಮಾಡಿ ಹಾರೈಸಿದ್ದಾರೆ. ಪೈಲ್ವಾನ್ ಚಿತ್ರದ ಪೋಸ್ಟರ್ ಎದುರು ಈಡುಗಾಯಿ ಹೊಡೆದಿದ್ದಾರೆ. ದೇವರಿಗೆ ಪೂಜೆ ಮಾಡಿಸಿ, ಪ್ರೇಕ್ಷಕರಿಗೆ ಪ್ರಸಾದ ಹಂಚಿದ್ದಾರೆ. ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಹೆಣ್ಣು ಮಕ್ಕಳಂತೂ ಜೊತೆ ಜೊತೆಯಾಗಿ ಯೂನಿಫಾರ್ಮಿನಲ್ಲಿ ಬಂದು ಕಿಚ್ಚನ ಸ್ಟೈಲಲ್ಲೇ ಪೋಸು ಕೊಟ್ಟು ಚಿತ್ರವನ್ನು ನೋಡಿ ಆನಂದಿಸಿದ್ದಾರೆ. ಕಿಚ್ಚ ಫುಲ್ ಹ್ಯಾಪಿ.

 • ಗೋವಾ ಅಂ.ರಾ. ಚಲನಚಿತ್ರೋತ್ಸವಕ್ಕೆ ಮುಖ್ಯ ಅತಿಥಿ ಕಿಚ್ಚ ಸುದೀಪ್

  ಗೋವಾ ಅಂ.ರಾ. ಚಲನಚಿತ್ರೋತ್ಸವಕ್ಕೆ ಮುಖ್ಯ ಅತಿಥಿ ಕಿಚ್ಚ ಸುದೀಪ್

  ಜನವರಿ 16ಕ್ಕೆ ಗೋವಾದಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ. ಭಾರತದಲ್ಲಿ ನಡೆಯುವ ಹಲವು ಚಿತ್ರೋತ್ಸವಗಳಿಗಿಂತಲೂ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಬೇರೆಯದ್ದೇ ಆದ ವಿಶೇಷ ಮಾನ್ಯತೆ ಇದೆ. ಈ ಬಾರಿ ಕನ್ನಡಿಗರು ಈ ವಿಷಯದಲ್ಲಿ ಇನ್ನಷ್ಟು ಸಂಭ್ರಮಿಸುವ ಕ್ಷಣಗಳಿವೆ. ಏಕೆಂದರೆ ಈ ಬಾರಿ ಮುಖ್ಯ ಅತಿಥಿ ನಮ್ಮ ಕಿಚ್ಚ ಸುದೀಪ್.

  ಸುದೀಪ್ ಅವರೇ ಈ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಕೇಂದ್ರ ವಾರ್ತಾ ಮತ್ತು

 • ಗ್ರ್ಯಾಂಡ್ ಮಾಸ್ಟರ್ ವಿಶಿ ಜೊತೆ ಚೆಸ್ ಆಡಿದ ಕಿಚ್ಚ

  ಗ್ರ್ಯಾಂಡ್ ಮಾಸ್ಟರ್ ವಿಶಿ ಜೊತೆ ಚೆಸ್ ಆಡಿದ ಕಿಚ್ಚ

  ವಿಶ್ವನಾಥನ್ ಆನಂದ್. ಭಾರತದ ಚೆಸ್ ಜಗತ್ತಿನ ಅದ್ಭುತ ಆಟಗಾರ. ವಿಶ್ವದ ಶ್ರೇಷ್ಟ ಚೆಸ್ ಆಟಗಾರರಲ್ಲಿ ಒಬ್ಬರಾದ ವಿಶ್ವನಾಥನ್ ಆನಂದ್ ಜೊತೆ ಕಿಚ್ಚ ಸುದೀಪ್ ಚೆಸ್ ಆಡಿದ್ದಾರೆ. ಈ ಚದುರಂಗದಾಟ ನಡೆದಿರೋದು ಕೋವಿಡ್ ಸಂತ್ರಸ್ತರಿಗೆ ನೆರವಾಗುವ ಸಲುವಾಗಿ.

  ಚೆಕ್‍ಮೇಟ್ ಕೋವಿಡ್ ಹೆಸರಿನಲ್ಲಿ ನಡೆದ ಪ್ರದರ್ಶನ ಪಂದ್ಯವಿದು. ಆನ್‍ಲೈನ್‍ನಲ್ಲಿಯೇ ನಡೆದ ಚೆಸ್‍ನಲ್ಲಿ ಕಿಚ್ಚ ಸುದೀಪ್, ವಿಶಿ ವಿರುದ್ಧ ಗೆಲ್ಲಲಾಗಲಿಲ್ಲ. ಅಫ್‍ಕೋರ್ಸ್, ಕಾಸ್ಟರೋವ್, ಕಾರ್ಪೊವ್‍ರಂತಾ ದಿಗ್ಗಜರನ್ನೇ ಸೋಲಿಸಿರುವ ವಿಶ್ವನಾಥನ್ ಆನಂದ್ ವಿರುದ್ಧ, ಪ್ರೊಫೆಷನಲ್ ಚೆಸ್ ಆಟಗಾರನಲ್ಲದ ಸುದೀಪ್ ಗೆಲ್ಲುವುದು ಸುಲಭವೇನಲ್ಲ.

  ಚೆಸ್ ಮಾಸ್ಟರ್ ವಿಶ್ವನಾಥನ್ ಆನಂದ್ ಸರ್ ಜೊತೆ ಆಡುವ ಅವಕಾಶ ಸಿಕ್ಕಿದ್ದೇ ಒಂದು ಖುಷಿ. ನನಗೆ ಆನ್‍ಲೈನ್ ಚೆಸ್ ಆಟದ ಬಗ್ಗೆ ಮಾಹಿತಿಯೂ ಇರಲಿಲ್ಲ. ಸೋಲುವ ಭಯವೂ ಇರಲಿಲ್ಲ. ನಾನು ಆಡಿದ್ದು ಚೆಸ್ ಮಾಸ್ಟರ್ ಜೊತೆಗೆ. ಆ ಖುಷಿ ನನಗೆ ಜೀವನ ಪೂರ್ತಿ ಇರಲಿದೆ ಎಂದಿದ್ದಾರೆ ಸುದೀಪ್.

  ಕೋವಿಡ್ ಚೆಕ್‍ಮೇಟ್ ಹೆಸರಿನಲ ಶೋನಲ್ಲಿ ಈಗಾಗಲೇ ವಿಶಿ ಜೊತೆ ಯಜುವೇಂದ್ರ ಚಾಹಲ್, ಅಮೀರ್ ಖಾನ್, ರಿತೇಶ್ ದೇಶ್‍ಮುಖ್ ಮೊದಲಾದ ಖ್ಯಾತನಾಮರು ಈಗಾಗಲೇ ಆಡಿದ್ದಾರೆ.

 • ಜನವರಿ 15. 4:45 ಗಂಟೆ.. ಪೈಲ್ವಾನ್ ಬರ್ತಾನೆ..

  pailwan teaser on jan 15th

  ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಪೈಲ್ವಾನ್. ಕೃಷ್ಣ ನಿರ್ದೇಶನದ ಚಿತ್ರಕ್ಕೆ ಸುದೀಪ್ ತಮ್ಮ ದೇಹವನ್ನು ಹುರಿಗೊಳಿಸಿರುವುದೇ ಭರ್ಜರಿ ನಿರೀಕ್ಷೆ ಹುಟ್ಟುಹಾಕಿದೆ. ಇದುವರೆಗೆ ಚಿತ್ರದ ಫಸ್ಟ್ ಲುಕ್ ಬಿಟ್ಟರೆ ಬೇರೇನನ್ನೂ ಹೊರಬಿಡದೆ ಕುತೂಹಲ ಕಾಯ್ದಿಟ್ಟಿದೆ ಚಿತ್ರತಂಡ.

  ಸುಮಾರು 40-50 ಕೋಟಿ ವೆಚ್ಚದಲ್ಲಿ ಅದ್ಧೂರಿಯಾಗಿ ತಯಾರಾಗುತ್ತಿರುವ ಪೈಲ್ವಾನ್ ಚಿತ್ರದ ಮೊದಲ ಟೀಸರ್ ಜನವರಿ 15ನೇ ತಾರೀಕು, 4 ಗಂಟೆ, 45 ನಿಮಿಷಕ್ಕೆ ಬಿಡುಗಡೆಯಾಗಲಿದೆ. ಅಭಿಮಾನಿಗಳೇ.. ಸಿದ್ಧರಾಗಿ.

 • ಜನವರಿ 3ನೇ ವಾರದಿಂದ ಮತ್ತೆ ಬಿಗ್ ಬಾಸ್

  Big Boss Coming Soon

  ಬಿಗ್ ಬಾಸ್ ಒಂದು ಸ್ಪೆಷಲ್ ರಿಯಾಲಿಟಿ ಶೋ. ಟಿವಿ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಬರೆದ ಈ ಶೋ ಈಗ ಮತ್ತೆ ಶುರುವಾಗುತ್ತಿದೆ. ಕೊರೊನಾ ಇಲ್ಲದೇ ಇದ್ದಿದ್ದರೆ ಈ ವರ್ಷದ ಸೀಸನ್, ಇಷ್ಟೊತ್ತಿಗೆ ಶೋ ಶುರುವಾಗಿ ಮುಗಿದೂ ಹೋಗಿರಬೇಕಿತ್ತು. ಈಗ ಜನವರಿ 3ನೇ ವಾರದಿಂದ ಶುರುವಾಗುತ್ತಿದೆ ಬಿಗ್ ಬಾಸ್.

  ಎಂದಿನಂತೆ ಈ ಬಾರಿಯೂ ಕಿಚ್ಚ ಸುದೀಪ್ ಅವರದ್ದೇ ಸ್ಟೈಲಿಷ್ ನಿರೂಪಣೆ ಇರಲಿದೆ. ಸುದೀಪ್ ಸದ್ಯಕ್ಕೆ ಫಾರಿನ್ ಶೂಟಿಂಗ್ ಪ್ಲಾನ್ ಇಟ್ಟುಕೊಂಡಿಲ್ಲ. ಹೀಗಾಗಿ ಅವರು ವೀಕೆಂಡ್‍ನಲ್ಲಿ ನಮಗೆ ಸಿಗುತ್ತಾರೆ ಎಂದಿದ್ದಾರೆ ಕಲರ್ಸ್ ಕನ್ನಡ ವಾಹಿನಿಯ ಪರಮೇಶ್ವರ್ ಗುಂಡ್ಕಲ್.

 • ಜೈಜಗದೀಶ್ ಹೇಳಿದ ಮೊದಲ ಪತ್ನಿ, ಮಗಳ ಕಣ್ಣೀರ ಕಥೆ

  jai jagadeesh breaks down during big boss 7

  ಜೈಜಗದೀಶ್ ಅವರ ಪತ್ನಿ ವಿಜಯಲಕ್ಷ್ಮೀ ಸಿಂಗ್. ಆಕೆಯೂ ನಟಿ, ನಿರ್ದೇಶಕಿ, ನಿರ್ಮಾಪಕಿ. ಮಕ್ಕಳು ವೈಭವಿ, ವೈನಿಧಿ ಹಾಗೂ ವೈಸಿರಿ. ಆದರೆ ಬಹುತೇಕರಿಗೆ ಗೊತ್ತಿಲ್ಲದೇ ಇದ್ದ ತಮ್ಮ ಮೊದಲ ಪತ್ನಿ ಹಾಗೂ ಮಗಳ ಕಥೆಯನ್ನು ಸ್ವತಃ ಜೈಜಗದೀಶ್ ಅವರೇ ಬಿಚ್ಚಿಟ್ಟಿದ್ದಾರೆ. ಬಿಗ್ ಬಾಸ್ ಮನೆಯಲ್ಲಿರುವ ಜೈಗದೀಶ್ ತಮ್ಮ ಮೊದಲ ಮದುವೆ, ಮಗಳು, ಆಕೆ ಅನುಭವಿಸಿದ ನೋವು ಎಲ್ಲವನ್ನೂ ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ.

  ಜೈಗದೀಶ್ ಅವರಿಗೆ ರೂಪಾ ಎಂಬುವವರ ಜೊತೆ ಮೊದಲು ಮದುವೆಯಾಗಿತ್ತು. ಅರ್ಪಿತಾ ಎಂಬ ಮಗಳೂ ಹುಟ್ಟಿದ್ದಳು. ಆದರೆ, ಸಣ್ಣ ವಿಷಯಕ್ಕೆ ವೈಮನಸ್ಯ ಬಂದು, ಹೆಂಡತಿ, ಮಗಳಿಂದ  ದೂರವಾದರು ಜೈಜಗದೀಶ್. ವಿಚ್ಛೇದನದ ನಂತರ ಮಗಳು ಮತ್ತು ಪತ್ನಿ ಬೇರೆಯೇ ಇದ್ದರು.

  ಅದಾದ ಮೇಲೆ ಮಗಳು ಅರ್ಪಿತಾ ಮದುವೆಯೂ ಆಯಿತು. ಆದರೆ, ಎಷ್ಟು ವರ್ಷಗಳಾದರೂ ಮಕ್ಕಳಾಗಲಿಲ್ಲ. ಆಕೆಯ ಪತಿಗೆ ಮಕ್ಕಳು ಬೇಕಿರಲಿಲ್ಲ. ಅರ್ಪಿತಾಳ ಪ್ರೀತಿಯೂ ಬೇಕಿರಲಿಲ್ಲ. ಒಟ್ಟಿನಲ್ಲಿ ನನ್ನ ಮಗಳಿಗೆ ತಂದೆಯಾಗಿ ನಾನೂ ಪ್ರೀತಿ ಕೊಡಲಿಲ್ಲ. ಗಂಡನ ಪ್ರೀತಿಯೂ ಸಿಗಲಿಲ್ಲ. ಕ್ಷಮಿಸಿಬಿಡು ಮಗಳೇ ಎಂದು ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ ಜೈಜಗದೀಶ್.

 • ಟೈಮೂ.. ಡೇಟೂ.. ಬಂದೇ ಬಿಡ್ತು.. ದಬಾಂಗ್ ಇಂದು

  dabanng 3 released world wide

  ಟೈA ನಂದು.. ತಾರೀಕು ನಂದು.. ಎನ್ನುತ್ತಲೇ ಕನ್ನಡದಲ್ಲಿ ಹವಾ ಎಬ್ಬಿಸಿದ್ದರು ಸಲ್ಮಾನ್ ಖಾನ್. ಅವರು ಹೇಳಿದ ಟೈಮು, ಡೇಟು ಬಂದಾಗಿದೆ. ದಬಾಂಗ್ 3 ಥಿಯೇಟರುಗಳಲ್ಲಿದೆ. ಒಂದೇ ದಿನ.. ಕನ್ನಡ ಮತ್ತು ಹಿಂದಿ ಎರಡೂ ವರ್ಷನ್‌ನಲ್ಲಿ ಬಂದಿದೆ ದಬಾಂಗ್ 3.

  ಸಲ್ಮಾನ್ ಖಾನ್ ಕನ್ನಡದಲ್ಲಿ ಬರಲು ಮೂಲ ಕಾರಣ ಕಿಚ್ಚ ಸುದೀಪ್. ಬೇರೆ ಭಾಷೆಯವರು ಕನ್ನಡದಲ್ಲಿ ಮಾತನಾಡಬೇಕು ಎಂದು ಬಯಸುವ ನಾವು, ಅವರು ಕನ್ನಡದಲ್ಲಿ ಸಿನಿಮಾ ಮಾಡಲು ಬಂದಾಗ ಬಿಡಬೇಕು. ಆಗಲೇ ಕನ್ನಡ ಬೆಳೆಯೋದು ಎನ್ನುವ ಸುದೀಪ್, ದಬಾಂಗ್ 3ಯಲ್ಲಿ ಬಲ್ಲಿ ಸಿಂಗ್ ಆಗಿದ್ದಾರೆ. ಚುಲ್ ಬುಲ್ ಪಾಂಡೆ ಎದುರು ವಿಲನ್. ಸೋನಾಕ್ಷಿ ಸಿನ್ಹಾ ಎಂದಿನAತೆ ಸಲ್ಮಾನ್ ಜೋಡಿ.

  ವಿಶೇಷವೆಂದರೆ ಈ ಚಿತ್ರಕ್ಕೆ ಪ್ರಭುದೇವ ಡೈರೆಕ್ಟರ್. ಡಬ್ಬಿಂಗ್ ಮಾಡುವಾಗ ಸುದೀಪ್ ನೀಡಿದ ಸಹಕಾರವನ್ನು ನೆನಪಿಸಿಕೊಂಡಿರುವ ಪ್ರಭುದೇವ, ಸುದೀಪ್ ಇಲ್ಲದಿದ್ದರೆ ಇದೆಲ್ಲ ಸಾಧ್ಯವಾಗುತ್ತಿರಲಿಲ್ಲ ಎಂದಿದ್ದಾರೆ.

   

 • ಟ್ವಿಟರ್​ಗೆ ಎಂಟ್ರಿ ಕೊಟ್ಟ ಕ್ರೇಜಿ ಕ್ವೀನ್ ಮಾಡಿದ ಮೊದಲ ಕೆಲಸ..

  rakshitha prem wishes sudeep

  ಸುದೀಪ್​ಗೆ ಶುಭ ಹಾರೈಸುವ ಮೂಲಕ... ಫೈನಲಿ ಟ್ವಿಟರ್​ಗೆ ಎಂಟ್ರಿ ಕೊಟ್ಟಿದ್ದೇನೆ. ಹುಟ್ಟುಹಬ್ಬದ ಶುಭಾಶಯಗಳು ಸುದೀಪ್. ನನ್ನ ಗೆಳೆಯ ಸುದೀಪ್​ಗೆ ಒಳ್ಳೆಯದಾಗಲಿ. ನಿನ್ನ ಜೀವನದಲ್ಲಿ ಸುಖ ಸಂತೋಷ ತುಂಬಿ ತುಳುಕಲಿ. ಇದು ರಕ್ಷಿತಾ ಪ್ರೇಮ್ ಮಾಡಿದ ಮೊದಲ ಟ್ವೀಟ್.

  ರಕ್ಷಿತಾ ಪ್ರೇಮ್ ಕಿಚ್ಚನ ಹುಟ್ಟುಹಬ್ಬದ ದಿನವೇ ಟ್ವಿಟರ್​ಗೆ ಎಂಟ್ರಿ ಕೊಟ್ಟಿದ್ದಾರೆ. ಹಾಗೆ ಟ್ವಿಟರ್​ಗೆ ಬಂದ ರಕ್ಷಿತಾ ಮಾಡಿರುವ ಮೊದಲ ಟ್ವೀಟ್​ ಕಿಚ್ಚನಿಗೆ ಹುಟ್ಟುಹಬ್ಬದ ಶುಭ ಕೋರಿದ್ದು. ರಕ್ಷಿತಾ ಅವರ ಪತಿ ಜೋಗಿ ಪ್ರೇಮ್ ಸುದೀಪ್, ಶಿವರಾಜ್ ಕುಮಾರ್ ಜೋಡಿಯ ದಿ ವಿಲನ್ ಚಿತ್ರದ ನಿರ್ದೇಶಕ.

  ಕಿಚ್ಚ ಸುದೀಪ್ ಜೊತೆ ಹುಬ್ಬಳ್ಳಿ ಚಿತ್ರದಲ್ಲಿನ ಹಾಡಿನ ಫೋಟೋವೊಂದನ್ನು ಟ್ವೀಟ್ ಮಾಡಿದ್ದಾರೆ. ರಕ್ಷಿತಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಅಪ್ಪು ಚಿತ್ರದ ಮೂಲಕ. ರಕ್ಷಿತಾ ನಟಿಸಿದ ಎರಡನೇ ಚಿತ್ರ ಧಮ್. ಆ ಚಿತ್ರದ ನಾಯಕ ಸುದೀಪ್. ಆನಂತರವೂ ಕಾಶಿ ಫ್ರಂ ವಿಲೇಜ್ ಹಾಗೂ ಹುಬ್ಬಳ್ಳಿ ಚಿತ್ರಗಳಲ್ಲಿ ರಕ್ಷಿತಾ ಸುದೀಪ್ ಒಟ್ಟಿಗೇ ನಟಿಸಿದ್ದರು.

 • ಡಿಸೆಂಬರ್`ಗೆ ವಿಕ್ರಾಂತ್ ರೋಣ ಫಿಕ್ಸ್

  ಡಿಸೆಂಬರ್`ಗೆ ವಿಕ್ರಾಂತ್ ರೋಣ ಫಿಕ್ಸ್

  ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ, ಅದ್ಭುತ ಎನ್ನಿಸುವ ರೀತಿಯ ಕ್ರೇಜ್ ಸೃಷ್ಟಿಸಿದೆ. ಬುರ್ಜ್ ಖಲೀಫಾದಲ್ಲಿ ಟೈಟಲ್ ಪೋಸ್ಟರ್, ಮುಂಬೈನಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದ ವಿಕ್ರಾಂತ್ ರೋಣ 2021ರ ಇಂಡಿಯಾದಲ್ಲಿನ ಭಾರಿ ನಿರೀಕ್ಷಿತ ಚಿತ್ರಗಳಲ್ಲೊಂದು. ಆ ಚಿತ್ರದ ಬಿಡುಗಡೆಗೆ ಡಿಸೆಂಬರ್‍ನಲ್ಲಿ ಮುಹೂರ್ತ ಫಿಕ್ಸ್ ಆಗಿದೆ.

  ಪರಿಸ್ಥಿತಿ ಸರಿ ಹೋದರೆ ಡಿಸೆಂಬರ್‍ನಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಡಿಸೆಂಬರ್ ಡೆಡ್‍ಲೈನ್ ಇಟ್ಟುಕೊಂಡೆ ಕೆಲಸ ಮಾಡುತ್ತಿದ್ದೇವೆ. ಎಲ್ಲ ಭಾಷೆಗಳ ಚಿತ್ರರಂಗದ ಬೆಳವಣಿಗೆಗಳನ್ನೂ ನೋಡಬೇಕು. ಬಿಡುಗಡೆಗೆ 10 ದಿನ ಮೊದಲು ಡೇಟ್ ಅನೌನ್ಸ್ ಮಾಡುತ್ತೇವೆ ಎಂದಿದ್ದಾರೆ ಜಾಕ್ ಮಂಜು.

  ಹಿಂದಿ, ತಮಿಳು, ತೆಲುಗಿಗೂ ಸುದೀಪ್ ಅವರೇ ಡಬ್ ಮಾಡಿದ್ದಾರಂತೆ. ಮಲಯಾಳಂನಲ್ಲಿ ಮಾತ್ರ ಬೇರೆಯವರು ಡಬ್ ಮಾಡಿದ್ದಾರೆ. ಏನೇ ಇದ್ದರೂ ಮೊದಲ ಬಿಡುಗಡೆ ಚಿತ್ರಮಂದಿರಗಳಲ್ಲೇ. ನಂತರವೇನಿದ್ದರೂ ಓಟಿಟಿ ಎಂದಿದ್ದಾರೆ ಜಾಕ್ ಮಂಜು.

  ಜಾಕ್ ಮಂಜು ನಿರ್ಮಾಣದ ಚಿತ್ರದಲ್ಲಿ ಸುದೀಪ್ ಹೀರೋ. ವಿಕ್ರಾಂತ್ ರೋಣ ಪಾತ್ರಧಾರಿ. ನಿರೂಪ್ ಭಂಡಾರಿ ಸಂಜೀವ್ ಗಂಭೀರ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ನೀತಾ ಅಶೋಕ್ ನಟಿಸಿದ್ದರೆ, ಜಾಕ್ವೆಲಿನ್ ಫರ್ನಾಂಡಿಸ್ ಗಡಂಗ್ ರಕ್ಕಮ್ಮನಾಗಿ ಮಿಂಚು ಹರಿಸಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದ ಅಜನೀಶ್ ಲೋಕನಾಥ್ ಸಂಗೀತವಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery