` kiccha sudeepa - chitraloka.com | Kannada Movie News, Reviews | Image

kiccha sudeepa

 • ಕಿಚ್ಚನ ಚಿತ್ರದಲ್ಲಿ ರಂಗಿತರAಗ ಹೀರೋ.. ಸಮಂತಾ ನಾಯಕಿ..!?

  will samantha act in sudeep'a phantom

  ಕಿಚ್ಚ ಸುದೀಪ್ ಈಗ ಸಿಕ್ಕಾಪಟ್ಟೆ ಬ್ಯುಸಿ. ಒಂದು ಕಡೆ ಅವರ ದಬಾಂಗ್ 3 ರಿಲೀಸ್ ಆಗುತ್ತಿದೆ. ಮತ್ತೊಂದು ಕಡೆ ಕೋಟಿಗೊಬ್ಬ 3 ಶೂಟಿಂಗ್ ಬಿಡುವಿಲ್ಲದಂತೆ ನಡೆಯುತ್ತಿದೆ. ಜೊತೆಗೆ ಬಿಗ್‌ಬಾಸ್. ಈ ಎಲ್ಲವನ್ನೂ ನಿಭಾಯಿಸುತ್ತಿರುವ ಸುದೀಪ್, ನಡುವೆಯೇ ಫ್ಯಾಂಟಮ್ ಚಿತ್ರ ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರದ ವಿಶೇಷವೆಂದರೆ ಈ ಚಿತ್ರದಲ್ಲಿ ರಂಗಿತರAಗ ಖ್ಯಾತಿಯ ನಿರೂಪ್ ಭಂಡಾರಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಅವರದ್ದು ಅತ್ಯಂತ ಪ್ರಮುಖ ಪಾತ್ರ ಎನ್ನುತ್ತಾರೆ ನಿರ್ಮಾಪಕ ಜಾಕ್ ಮಂಜು. ಚಿತ್ರಕ್ಕೆ ಅನೂಪ್ ಭಂಡಾರಿ ನಿರ್ದೇಶಕ.

  ಇನ್ನು ಚಿತ್ರಕ್ಕೆ ಸಮಂತಾ ಆಯ್ಕೆಯಾಗುವ ನಿರೀಕ್ಷೆಗಳಿವೆ. ಈಗ ಚಿತ್ರದಲ್ಲಿ ಸುದೀಪ್ ಮತ್ತು ಸಮಂತಾ ಒಟ್ಟಿಗೇ ನಟಿಸಿದ್ದರು. ಆದರೆ ಸಮಂತಾ ಮದುವೆಯ ನಂತರ ಸಿಕ್ಕಾಪಟ್ಟೆ ಚ್ಯೂಸಿಯಾಗಿದ್ದು, ಓಕೆ ಮಾಡ್ತಾರಾ..? ಚಿತ್ರತಂಡವೂ ವೇಯ್ಟಿಂಗ್‌ನಲ್ಲೇ ಇದೆ.

 • ಕಿಚ್ಚನ ಪೈಲ್ವಾನ್ ಶುರುವಾಯ್ತು

  phailwan started on ugadi festival

  ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರಕ್ಕೆ ಓಂಕಾರ ಬಿದ್ದಿದೆ. ಚಿತ್ರಕ್ಕೆ ಹನುಮಂತನಗರದ ಶ್ರೀರಾಮಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿತು. ಕಿಚ್ಚ ಸುದೀಪ್ ಅಭಿನಯದ ಮೊದಲ ದೃಶ್ಯಕ್ಕೆ ಪ್ರಿಯಾ ಸುದೀಪ್ ಕ್ಲಾಪ್ ಮಾಡಿದರು.

  ಚಿತ್ರವನ್ನು ನಿರ್ದೇಶಿಸುತ್ತಿರುವುದು ಹೆಬ್ಬುಲಿ ಕೃಷ್ಣ. ಸ್ವಪ್ನ ಕೃಷ್ಣ ನಿರ್ಮಾಪಕಿ. ಇನ್ನುಳಿದಂತೆ ಹೆಬ್ಬುಲಿ ಚಿತ್ರತಂಡವೇ ಈ ಚಿತ್ರದಲ್ಲೂ ಕೆಲಸ ಮಾಡಲಿದೆ.

  ಹೆಬ್ಬುಲಿಯಲ್ಲಿ ಸುದೀಪ್‍ರನ್ನು ಸೈನಿಕನಾಗಿ ತೋರಿಸಿದ್ದ ಕೃಷ್ಣ, ಈ ಚಿತ್ರದಲ್ಲಿ ಸುದೀಪ್ ಅವರನ್ನು ಬಾಕ್ಸರ್ ಆಗಿ ತೋರಿಸಲಿದ್ದಾರೆ.

 • ಕಿಚ್ಚನ ಬಿಗ್​ಬಾಸ್ ಮನೆಗೆ ನೀವೂ ಹೋಗಬಹುದು

  big boss season 5

  ಬಿಗ್​ಬಾಸ್ ಎಂದರೆ, ಖ್ಯಾತ ನಟ, ನಟಿಯರು, ಸೆಲೆಬ್ರಿಟಿಗಳೇ ತುಂಬಿರುವ ಮನೆ ಎನ್ನೋದು ಇದುವರೆಗಿನ ನಂಬಿಕೆ. ಈ ಬಾರಿ ಕಾನ್ಸೆಪ್ಟ್ ಬದಲಾಗಿದೆ. ಬಿಗ್‌ ಬಾಸ್‌ ಮನೆಗೆ ನೀವೂ ಹೋಗಬಹುದು.  ಬಿಗ್‌ ಬಾಸ್ ಕನ್ನಡ ರಿಯಾಲಿಟಿ ಷೋದ ಐದನೇ ಆವೃತ್ತಿಯಲ್ಲಿ ಜನಸಮಾನ್ಯರಿಗೂ ಅವಕಾಶ ನೀಡಲು ಕಲರ್ಸ್‌ ಕನ್ನಡ ವಾಹಿನಿ ನಿರ್ಧರಿಸಿದೆ. ಸೆಲೆಬ್ರಿಟಿಗಳ ಆಟ ತುಂಟಾಟಗಳನ್ನೇ ನೋಡಿ ಖುಷಿಪಡುತ್ತಿದ್ದ ಜನಸಾಮಾನ್ಯರು ಬಿಗ್​ಬಾಸ್​ನಲ್ಲಿ ಕಾಣಿಸಿಕೊಳ್ಳಬಹುದು. ಕಿಚ್ಚ ಸುದೀಪ್ ಎದುರು ಮಾತನಾಡಬಹುದ

  ಅರ್ಜಿ ಸಲ್ಲಿಕೆ ಶೀಘ್ರದಲ್ಲೇ ಶುರುವಾಗಲಿದೆ. ಈ ಬಾರಿಯೂ ಒಟ್ಟು 15 ಸ್ಪರ್ಧಿಗಳಿರಲಿದ್ದಾರೆ. ಆ 15ರಲ್ಲಿ ಮೂವರು ಜನಸಾಮಾನ್ಯರು. ಸ್ಪರ್ಧಿಗಳ ಆಯ್ಕೆಗೆ ಈ ವಾರವೇ ವಾಹಿನಿ ಅಧಿಕೃತವಾಗಿ ಅರ್ಜಿ ಕರೆಯಲಿದೆ. ವೂಟ್‌ ಡಾಟ್‌ ಕಾಂನಲ್ಲಿ ಅರ್ಜಿ ನಮೂನೆ ಲಭ್ಯವಿದೆ. ಅರ್ಜಿ ಸಲ್ಲಿಕೆಗೆ ಅಧಿಕೃತ ಪ್ರಕಟಣೆ ಇನ್ನೂ ಹೊರಬಿದ್ದಿಲ್ಲ.

  ನೀವು ಮಾಡಬೇಕಾದ್ದು ಇಷ್ಟೆ. 

  ಅರ್ಜಿಯಲ್ಲಿ ಕೇಳಲಾಗಿರುವ 3 ಪ್ರಶ್ನೆಗಳಿಗೆ ಉತ್ತರಿಸುವುದು. ನಿಮ್ಮನ್ನು ನಿಮ್ಮದೇ ಆದ ರೀತಿಯಲ್ಲಿ ಪರಿಚಯಿಸಿಕೊಳ್ಳಬೇಕು. ನೀವು ಬಿಗ್‌ಬಾಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಯಸುತ್ತಿರುವುದು ಏಕೆ ಎಂದು ಹೇಳಬೇಕು. ಅಷ್ಟೇ ಅಲ್ಲ,  ಇತರರಿಗಿಂತ ನೀವು ಹೇಗೆ ಭಿನ್ನ ಎಂದು ತೋರಿಸಿಕೊಳ್ಳಬೇಕು. ಇದಕ್ಕೆ ಮೂರು ನಿಮಿಷದ ಉತ್ತರವನ್ನು ವಿಡಿಯೊ ಮಾಡಿ ಕಳಿಸಿಕೊಡಬೇಕು. ನಿಮ್ಮ ವಿಡಿಯೋ ಕ್ರಿಯೇಟಿವಿಟಿ ಮೇಲೆ ನಿಮ್ಮ ಆಯ್ಕೆ ನಿರ್ಧಾರವಾಗಬಹುದು. 

  ಇಂಥ ಪ್ರಯತ್ನ ಕನ್ನಡದಲ್ಲಷ್ಟೇ ಹೊಸದು. ಈಗಾಗಲೇ ಬೇರೆ ಬೇರೆ ದೇಶಗಳಲ್ಲಿ ಈ ಕಾನ್ಸೆಪ್ಟ್ ಈಗಾಗಲೇ ಪ್ರಯೋಗವಾಗಿದ್ದು, ಯಶಸ್ವಿಯೂ ಆಗಿದೆ.

   

 • ಕಿಚ್ಚನ ಬೆಳ್ಳಿಹಬ್ಬ ಈಗ ಕೋಟಿಗೊಬ್ಬ ಟೀಂನಿಂದ..

  ಕಿಚ್ಚನ ಬೆಳ್ಳಿಹಬ್ಬ ಈಗ ಕೋಟಿಗೊಬ್ಬ ಟೀಂನಿಂದ..

  ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಪ್ರವೇಶಿಸಿ 25 ವರ್ಷಗಳಾಗಿದ್ದನ್ನು ವಿಕ್ರಾಂತ್ ರೋಣ ತಂಡ ದೊಡ್ಡಮಟ್ಟದಲ್ಲಿ ಸಂಭ್ರಮಿಸಿತು. ದುಬೈನ ಭುರ್ಜ್ ಖಲೀಫಾದಲ್ಲಿ ದಾಖಲೆಯನ್ನೂ ಬರೆಯಿತು. ಇದಾದ ನಂತರ ಸುದೀಪ್ ಅವರ 25ನೇ ವರ್ಷದ ಜರ್ನಿಯನ್ನು ಪತ್ರಿಕೆ ಮತ್ತು ಟಿವಿ ಚಾನೆಲ್‍ಗಳಲ್ಲಿ ವಿಶೇಷವಾಗಿ ಸೆಲಬ್ರೇಟ್ ಮಾಡಲಾಯ್ತು. ಈಗ ಕೋಟಿಗೊಬ್ಬ 3 ತಂಡದ ಸರದಿ.

  ಕೋಟಿಗೊಬ್ಬ 3 ನಿರ್ಮಾಪಕ ಸೂರಪ್ಪ ಬಾಬು, ಸುದೀಪ್ ಬೆಳ್ಳಿಹಬ್ಬವನ್ನು ಸ್ಪೆಷಲ್ ಆಗಿಯೇ ಸೆಲಬ್ರೇಟ್ ಮಾಡುತ್ತಿದ್ದಾರೆ. ಮಾರ್ಚ್ 15ಕ್ಕೆ ಡೇಟ್ ಫಿಕ್ಸ್ ಆಗಿದೆ. ಸ್ಥಳ ಚೌಡಯ್ಯ ಮೆಮೋರಿಯಲ್ ಹಾಲ್. ಕಾರ್ಯಕ್ರಮ ಶುರುವಾಗೋದು ಸಂಜೆ 6.30ಕ್ಕೆ. ಇದೆಲ್ಲದರ ಜೊತೆ ಇನ್ನೂ ಕೆಲವು ವಿಶೇಷಗಳಿವೆ.

  ಸುದೀಪ್ ಬೆಳ್ಳಿಹಬ್ಬದ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿರುವುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ಅವರು ಬರೋದು ಅಧಿಕೃತವಾಗಿ ಇನ್ನೂ ಕನ್‍ಫರ್ಮ್ ಆಗಿಲ್ಲ. ಇನ್ನು ಶಿವರಾಜ್ ಕುಮಾರ್, ರವಿಚಂದ್ರನ್, ರಮೇಶ್ ಅರವಿಂದ್ ಸೇರಿದಂತೆ ಚಿತ್ರರಂಗದ ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.

  ಕನ್ನಡ ಪ್ರಭ ಸುವರ್ಣ ನ್ಯೂಸ್‍ನ ಪ್ರಧಾನ ಸಂಪಾದಕ ರವಿ ಹೆಗಡೆ, ಪಬ್ಲಿಕ್ ಟಿವಿ ಸಂಪಾದಕ ಹೆಚ್.ಆರ್.ರಂಗನಾಥ್, ರಾಕ್'ಲೈನ್ ವೆಂಕಟೇಶ್, ಶಾಸಕ ಮುನಿರತ್ನ ಸೇರಿದಂತೆ ಇನ್ನೂ ಹಲವು ಗಣ್ಯರು ಆ ದಿನದ ಕಾರ್ಯಕ್ರಮಕ್ಕೆ ಮೆರುಗು ತುಂಬಲಿದ್ದಾರೆ.

 • ಕಿಚ್ಚನ ಸೆಟ್ಟಲ್ಲಿ ನಟಸಾರ್ವಭೌಮ

  puneeth visits kotigobba 3 set

  ಪೈಲ್ವಾನ್ ಚಿತ್ರ ಮುಗಿಸಿ, ಬೆವರು ಒಣಗುವ ಮುನ್ನವೇ ಕಿಚ್ಚ ಸುದೀಪ್ ಕೋಟಿಗೊಬ್ಬ 3 ಸೆಟ್‍ನಲ್ಲಿ ಬ್ಯುಸಿಯಾಗಿಬಿಟ್ಟಿದ್ದಾರೆ. ಶಿವಕಾರ್ತಿಕ್ ನಿರ್ದೇಶನದ ಚಿತ್ರದಲ್ಲಿ ಬಿಡುವಿಲ್ಲದಂತೆ ತೊಡಗಿಸಿಕೊಂಡಿದ್ದಾರೆ ಸುದೀಪ್. 2ನೇ ಹಂತದ ಚಿತ್ರೀಕರಣ ನಡೆಯುತ್ತಿದ್ದ ಚಿತ್ರದ ಸೆಟ್‍ಗೆ ದಿಢೀರನೆ ವಿಸಿಟ್ ಕೊಟ್ಟಿರುವುದು ಪುನೀತ್ ರಾಜ್‍ಕುಮಾರ್.

  ಕೋಟಿಗೊಬ್ಬ 3 ಚಿತ್ರದ ಸೆಟ್‍ನಲ್ಲಿ ಪುನೀತ್ ಮತ್ತು ಸುದೀಪ್ ಸುಮಾರು ಹೊತ್ತು ಮಾತುಕತೆ ನಡೆಸಿದ್ದಾರೆ. ಚಿತ್ರದ ಬಗ್ಗೆ ಪುನೀತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೂರಪ್ಪ ಬಾಬು ನಿರ್ಮಾಣದ ಚಿತ್ರಕ್ಕೆ ಬೆಂಗಳೂರು ಮೆಟ್ರೋ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗುತ್ತಿದೆ.k

 • ಕಿಚ್ಚನ ಸ್ಟೈಲಿಗೆ ಫಿದಾ.. ಕೋಟಿಗೊಬ್ಬ 3 ಪೋಸ್ಟರ್ ಸಖತ್

  kiccha sudeep'a style from kotigobba 3 attracts audience

  ಒಂದು ಕೈಲಿ ಕಾರ್ಡ್.. ಇನ್ನೊಂದು ಕೈಲಿ ಸಿಗಾರ್.. ಬಾಯ್ತುಂಬಾ ಹೊಗೆ.. ಹಾರಾಡುತ್ತಿರುವ ವಿಲನ್ಸ್.. ಇಂಥಾದ್ದೊಂದು ಮೋಷನ್ ಪೋಸ್ಟರ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ ಕಿಚ್ಚ ಸುದೀಪ್. ಸಖತ್ ಸ್ಟೈಲಿಷ್ ಆಗಿ ಕಾಣ್ತಿರೋ ಸುದೀಪ್, ಅಭಿಮಾನಿಗಳಿಗೆ ಸಂಕ್ರಾಂತಿಯ ಹಬ್ಬದೂಟ ಕೊಟ್ಟಿದ್ದಾರೆ.

  ಶಿವಕಾರ್ತಿಕ್ ನಿರ್ದೇಶನದ ಚಿತ್ರವಿದು. ಸುದೀಪ್ ಹೇಳಿದ್ದಂತೆ ಅರ್ಜುನ್ ಜನ್ಯ ಮ್ಯೂಸಿಕ್ಕಿನಲ್ಲೇ ಥ್ರಿಲ್ ಕೊಟ್ಟಿದ್ದಾರೆ. ಮಡೋನ್ನಾ ಸೆಬಾಸ್ಟಿನ್, ಶ್ರದ್ಧಾ ದಾಸ್, ಅಫ್ತಾಬ್ ಶಿವದಾಸನಿ ನಟಿಸಿರುವ ಚಿತ್ರಕ್ಕೆ ಸೂರಪ್ಪ ಬಾಬು ನಿರ್ಮಾಪಕ.

   

 • ಕಿಚ್ಚನಿಗಿಂತ ಮೊದಲ ಪೈಲ್ವಾನ್ ಡಾ.ರಾಜ್

  sudeep's pailwan reminds dr rajkumar's roles

  ಕಿಚ್ಚ ಸುದೀಪ್ ಇದೇ ಮೊದಲ ಬಾರಿಗೆ ಪೈಲ್ವಾನ್ ಆಗಿ ನಟಿಸಿದ್ದಾರೆ. ಸಿನಿಮಾ ರಿಲೀಸ್ ಆಗಿದೆ. ಭರ್ಜರಿ ಹಿಟ್ ಆಗುವತ್ತ ದೊಡ್ಡ ಹೆಜ್ಜೆಯಿಟ್ಟಿದೆ. ಕನ್ನಡದಲ್ಲಿ ಕ್ರೀಡೆಯನ್ನೇ ಆಧರಿಸಿದ ಸಿನಿಮಾಗಳು ಅಪರೂಪದಲ್ಲಿ ಅಪರೂಪ. ಅದರಲ್ಲೂ ಕುಸ್ತಿ ಇದೆಯಲ್ಲ. ಈ ಆಟಕ್ಕೆ ಕೈ ಹಾಕಿದವರ ಸಂಖ್ಯೆ ಬಹಳ ಕಡಿಮೆ.

  ಆದರೆ ಆಡು ಮುಟ್ಟದ ಸೊಪ್ಪಿಲ್ಲ.. ರಾಜ್ ಮಾಡದ ಪಾತ್ರವಿಲ್ಲ ಎಂಬ ಹಾಗೆ, ಪೈಲ್ವಾನನಾಗಿಯೂ ಕಂಗೊಳಿಸಿರುವ ಹಿರಿಮೆ ಅಣ್ಣಾವ್ರಿಗಿದೆ.

  ಡಾ.ರಾಜ್ ಹಲವು ಚಿತ್ರಗಳಲ್ಲಿ ಕುಸ್ತಿ ಪಟುವಾಗಿ, ಜಟ್ಟಿಯಾಗಿ ನಟಿಸಿದ್ದಾರೆ. ಕನ್ನಡ ಚಿತ್ರರಂಗವನ್ನು ಕರ್ನಾಟಕಕ್ಕೆ ತರುವ ಸಲುವಾಗಿ ಅತಿ ದೊಡ್ಡ ಸಾಹಸಕ್ಕೆ ಕೈ ಹಾಕಿ ನಿರ್ಮಿಸಿದ್ದ ರಣಧೀರ ಕಂಠೀರವ ಚಿತ್ರದಲ್ಲಿಯೇ ಡಾ.ರಾಜ್ ಕುಸ್ತಿ ಮಾಡಿ ಗೆಲ್ಲುತ್ತಾರೆ. ಮಯೂರ ಚಿತ್ರದಲ್ಲಿ ರಾಜ್ ಎಂಟ್ರಿಯೇ ಕುಸ್ತಿ ಅಖಾಡದಲ್ಲಿ. ರಾಜ್ ಎದುರು ಲಂಗೋಟಿಯಲ್ಲಿ ಕುಸ್ತಿ ಆಡುವುದು ಟೈಗರ್ ಪ್ರಭಾಕರ್. ಶ್ರೀಕೃಷ್ಣದೇವರಾಯ ಚಿತ್ರದಲ್ಲೂ ಕುಸ್ತಿ ಪಟುವಾಗಿ ಗಮನ ಸೆಳೆಯುವ ರಾಜ್‍ಕುಮಾರ್ ಪೈಲ್ವಾನನಂತೆಯೇ ದೇಹದಾಢ್ರ್ಯ ಹೊಂದಿದ್ದರು. ಅದರಲ್ಲಿಯೂ ರಣಧೀರ ಕಂಠೀರವ ಚಿತ್ರದಲ್ಲಿ ರಾಜ್ ಅವರ ದೇಹ ಸೌಷ್ಟವ ಅದ್ಭುತವಾಗಿತ್ತು.

  ಈಗ ಪೈಲ್ವಾನ್ ರೂಪದಲ್ಲಿ ಸುದೀಪ್ ಕುಸ್ತಿ ಪಟುವಾಗಿ, ಬಾಕ್ಸರ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಅಭಿಮಾನಿಗಳು ಅಣ್ಣಾವ್ರ ಆ ಕುಸ್ತಿ ಪಟ್ಟುಗಳನ್ನು ನೆನಪಿಸಿಕೊಂಡೇ ಕಿಚ್ಚನಿಗೆ ಜೈಜೈಜೈ ಎಂದಿದ್ದಾರೆ. ಪೈಲ್ವಾನ್ ಸೃಷ್ಟಿಕರ್ತ ಕೃಷ್ಣಗೆ ಮತ್ತೊಮ್ಮೆ ಗೆದ್ದ ಖುಷಿ. ಸ್ವಪ್ನಾ ಕೃಷ್ಣ ಅವರಿಗೆ ಮೊದಲ ಪ್ರಯತ್ನದಲ್ಲೇ ದಿಗ್ವಿಜಯ ಸಾಧಿಸಿದ ಸಂಭ್ರಮ.

 • ಕಿಚ್ಚನಿಗೆ ಜಂಬೋ ಸರ್`ಪ್ರೈಸ್

  ಕಿಚ್ಚನಿಗೆ ಜಂಬೋ ಸರ್`ಪ್ರೈಸ್

  ಕ್ರಿಕೆಟ್ ಲೋಕದಲ್ಲಿ ಜಂಬೋ ಎಂದೇ ಕರೆಯಲ್ಪಡುವ, ಭಾರತೀಯ ಕ್ರಿಕೆಟ್‍ನ ದಂತಕತೆ ಅನಿಲ್ ಕುಂಬ್ಳೆ, ಕಿಚ್ಚ ಸುದೀಪ್ ಅವರಿಗೆ ಮರೆಯಲಾಗದ ಗಿಫ್ಟ್ ಕೊಟ್ಟಿದ್ದಾರೆ. ಸೆಪ್ಟೆಂಬರ್ 2ಕ್ಕೆ ಸುದೀಪ್ ಹುಟ್ಟುಹಬ್ಬ. ಕೊರೊನಾ ಕಾರಣದಿಂದ ಈ ಬಾರಿಯೂ ರೂಲ್ಸ್ ಫಾಲೋ ಮಾಡ್ತಿದ್ದಾರೆ ಸುದೀಪ್. ಹಾಗಂತ ಅಭಿಮಾನಿಗಳು ಸುಮ್ಮನೆ  ಕುಳಿತಿಲ್ಲ.  ಸುದೀಪ್ ಅವರ ಹುಟ್ಟುಹಬ್ಬಕ್ಕೆಂದೇ ಸ್ಪೆಷಲ್ ಡಿಪಿ ರೆಡಿ ಮಾಡಿದ್ದಾರೆ.

  ಬಾದ್‍ಷಾ ಎಂದು ಡಿಸೈನ್ ಮಾಡಿರೋ ಸ್ಪೆಷಲ್ ಡಿಪಿಯೊಂದನ್ನು ಸುದೀಪ್ ಹುಟ್ಟುಹಬ್ಬಕ್ಕೆಂದೇ ಡಿಸೈನ್ ಮಾಡಲಾಗಿದ್ದು, ಅದನ್ನು ಬಿಡುಗಡೆ ಮಾಡಿರುವುದು ಅನಿಲ್ ಕುಂಬ್ಳೆ. ಸಹಜವಾಗಿಯೇ ಸುದೀಪ್ ಖುಷಿಯಾಗಿದ್ದಾರೆ. ನನಗೆ ಇದಕ್ಕಿಂತ ದೊಡ್ಡ ಗಿಫ್ಟ್ ಇನ್ನೇನಿರಲು ಸಾಧ್ಯ. ಅನಿಲ್ ಕುಂಬ್ಳೆ ಸರ್, ನಿಮಗೆ ಧನ್ಯವಾದ ಎಂದಿದ್ದಾರೆ ಸುದೀಪ್.

 • ಕಿಚ್ಚನಿಗೆ ದಾದಾ.. ಅವಾರ್ಡ್

  sudeep gets dada saheb phalke award

  ಭಾರತೀಯ ಚಿತ್ರರಂಗದ ಪಿತಾಮಹ ಎಂದೇ ಕರೆಯಲ್ಪಡುವ ದಾದಾ ಸಾಹೇಬ್ ಫಾಲ್ಕೆ ಅವರ ಹೆಸರಿನ ಪುರಸ್ಕಾರ ಈ ಬಾರಿ ಕಿಚ್ಚ ಸುದೀಪ್ ಅವರಿಗೆ ಸಂದಿದೆ. ಅಂದಹಾಗೆ ಇದು ಕೇಂದ್ರ ಸರ್ಕಾರ ಚಿತ್ರರಂಗದವರಿಗೆಂದೇ ಕೊಡುವ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯಲ್ಲ. ಇದು ಮಹಾರಾಷ್ಟ್ರದ ದಾದಾ ಸಾಹೇಬ್ ಫಾಲ್ಕೆ ಟ್ರಸ್ಟ್ ನಡೆಸುವ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್ ನೀಡುವ ಪುರಸ್ಕಾರ. ಈ ಪ್ರಶಸ್ತಿಗೆ ಇರುವ ಘನತೆಯೇ ಬೇರೆ. ಈ ಬಾರಿ ಅದು ಸುದೀಪ್ ಅವರಿಗೆ ಸಿಕ್ಕಿದೆ.

  2020ರ ಭರವಸೆಯ ನಟ ಪ್ರಶಸ್ತಿ ಸ್ವೀಕರಿಸಿದ್ದಾರೆ ಸುದೀಪ್. ಅವರಿಗೆ ಈ ಪ್ರಶಸ್ತಿ ಕೊಟ್ಟಿರುವುದು ದಬಾಂಗ್ ಚಿತ್ರದ ವಿಲನ್ ಪಾತ್ರ. ತಮಗೆ ಸಿಕ್ಕ ಪ್ರಶಸ್ತಿಯನ್ನು ತಮ್ಮೊಂದಿಗೆ ಇದ್ದ ತಂತ್ರಜ್ಞರು, ಚಿತ್ರದಲ್ಲಿ ತಮ್ಮೊಂದಿಗೆ ಕೆಲಸ ಮಾಡಿದ ಕಲಾವಿದರು, ಗೆಳೆಯರಿಗೆ ಅರ್ಪಿಸಿದ್ದಾರೆ ಸುದೀಪ್.

 • ಕಿಚ್ಚನಿಗೆ ಹುಟ್ಟುಹಬ್ಬದ ಉಡುಗೊರೆಗಳ ಸುರಿಮಳೆ

  sudeep imag

  ಈ ವರ್ಷದ ಕಿಚ್ಚ ಸುದೀಪ್ ಹುಟ್ಟುಹಬ್ಬ ತುಂಬಾನೇ ಸ್ಪೆಷಲ್. ಹುಟ್ಟುಹಬ್ಬಗಳ ಸುರಿಮಳೆಯೇ ಆಗುತ್ತಿದೆ. ಅವರು ನಟಿಸುತ್ತಿರುವ ಚಿತ್ರಗಳ ಟೀಂ, ತಲಾ ಒಂದೊಂದು ಗಿಫ್ಟ್ ನೀಡಿದೆ.

  ಹೆಬ್ಬುಲಿ ಕೃಷ್ಣ ನಿರ್ದೇಶನದ ಪೈಲ್ವಾನ್ ಚಿತ್ರದ ಪೋಸ್ಟರ್ ಕ್ರೇಝ್ ಸೃಷ್ಟಿಸಿದ್ದರೆ, ರಾಜು ಕನ್ನಡ ಮೀಡಿಯಂನ ಸ್ಟೈಲಿಷ್ ಲುಕ್ ಬೇರೆಯೇ ಟೇಸ್ಟ್‍ನಲ್ಲಿದೆ. ದಿ ವಿಲನ್ ಚಿತ್ರದ ಮೋಷನ್ ಪೋಸ್ಟರ್‍ನ ಮ್ಯಾಜಿಕ್ಕೇ ಬೇರೆ. ಇವುಗಳಿಗೆಲ್ಲ ಕಳಶವಿಟ್ಟಂತೆ ಅಭಿಮಾನಿಗಳಿಂದ ಸಮಾಜಸೇವೆ. ಅನ್ನದಾನ, ರಕ್ತದಾನ, ಅನಾಥರಿಗೆ ಅನುದಾನಗಳು. ಸುದೀಪ್ ಬರ್ತ್‍ಡೇಯನ್ನು ಸ್ಪೆಷಲ್ ಮಾಡಿರುವುದೇ ಇವು.

 • ಕಿಚ್ಚನಿಗೇ ಬಿಗ್‍ಬಾಸ್ ಸರ್‍ಪ್ರೈಸ್

  big boss host sudeep

  ಕಿಚ್ಚ ಸುದೀಪ್ ಯಾವಾಗಲೂ ತಮ್ಮ ಗೆಳೆಯರಿಗೆ, ಆತ್ಮೀಯರಿಗೆ ಸರ್‍ಪ್ರೈಸ್ ಕೊಡೋದ್ರಲ್ಲಿ ಹೆಸರುವಾಸಿ. ಇಂಥ ಕಿಚ್ಚನಿಗೇ ಸರ್‍ಪ್ರೈಸ್ ಕೊಟ್ಟಿರೋದು ಬಿಗ್‍ಬಾಸ್. ಬಿಗ್‍ಬಾಸ್ 50 ದಿನ ಪೂರೈಸಿರುವ ಹಿನ್ನೆಲೆಯಲ್ಲಿ ಸುದೀಪ್‍ಗೆ ಬಿಗ್‍ಬಾಸ್ ಸಿಬ್ಬಂದಿ ಒಂದು ಅಚ್ಚರಿಯ ಉಡುಗೊರೆ ಕೊಟ್ಟರು. 

  ಬಿಗ್‍ಬಾಸ್ ಸೀಸನ್ 5 ಶುರುವಾದಾಗಿನಿಂದ ಸುದೀಪ್ ಪಾಲ್ಗೊಂಡಿದ್ದ ಬಿಗ್‍ಬಾಸ್ ಪಂಚಾಯಿತಿಗಳ ಸ್ಪೆಷಲ್ ವಿಡಿಯೋ ತುಣುಕು ಮಾಡಿದ್ರು. ಅದು ಕಿಚ್ಚನಿಗೂ ಸರ್‍ಪ್ರೈಸ್.

  ಇಂಥಾದ್ದೊಂದು ವಿಡಿಯೋ ಮಾಡಿರುವುದು ನನಗೆ ಗೊತ್ತಿರಲಿಲ್ಲ. ನಿಜಕ್ಕೂ ಸಂತೋಷವಾಯ್ತು ಎಂದ ಸುದೀಪ್, ಬಿಗ್‍ಬಾಸ್‍ಗೆ ಧನ್ಯವಾದ ಅರ್ಪಿಸಿದ್ರು.

   

 • ಕಿಚ್ಚನ್ ಕಿಚನ್‍ನಲ್ಲಿ ಖುಷಿಖುಷಿಯಾದ ಕಿಚ್ಚ

  kicchana kitchen with gundappa vishwanath

  ಕಿಚ್ಚ ಸುದೀಪ್ ಬಿಗ್‍ಬಾಸ್ ವೀಕೆಂಡ್‍ನಲ್ಲಿ ಕಿಚ್ಚನ್ ಕಿಚನ್ ಶೋ ಕೂಡಾ ಮಾಡ್ತಾರೆ. ಅದು ಬಿಗ್‍ಬಾಸ್ ನಿರೂಪಣೆಯ ಒಂದು ಭಾಗ. ಈ ವಾರದ ಕಿಚ್ಚನ್ ಕಿಚನ್‍ನಲ್ಲಿ ಸ್ವತಃ ಸುದೀಪ್ ಥ್ರಿಲ್ ಆಗುವಂತಾ ಅತಿಥಿಯೊಬ್ಬರು ಬಂದಿದ್ದರು.

  ಭಾರತೀಯ ಕ್ರಿಕೆಟ್ ಕಂಡ ಕ್ರಿಕೆಟ್ ಕಲಾವಿದ ಜಿ.ಆರ್.ವಿಶ್ವನಾಥ್ ಅವರ ಆಗಮನ ಸುದೀಪ್ ಅವರ ಖುಷಿಯನ್ನು ಹೆಚ್ಚಿಸಿತ್ತು. ಗುಂಡಪ್ಪ ವಿಶ್ವನಾಥ್ ಅವರ ಬ್ಯಾಟಿಂಗ್ ನೋಡಿದವರು ಅವರನ್ನು ಆಟಗಾರ ಎನ್ನುವ ಬದಲಿಗೆ ಕ್ರಿಕೆಟ್ ಕಲಾವಿದ ಎಂದೇ ಬಣ್ಣಿಸುತ್ತಾರೆ. ಅದೊಂದು ರೀತಿ ಕ್ರಿಕೆಟ್ ಕಲಾವಿದ ಹಾಗೂ ಚಿತ್ರರಂಗದ ಕಲಾವಿದರ ಸಮ್ಮಿಲನವಾಗಿತ್ತು. 

  ಇಬ್ಬರೂ ಕಲಾವಿದರ ಮಧ್ಯೆ ಶೃತಿ ಹರಿಹರನ್ ಮಿನುಗಲೆ ಮಿನುಗಲೆ ನಕ್ಷತ್ರ ಎಂಬಂತೆ ಮಿಂಚುತ್ತಿದ್ದರು.

 • ಕೆಸಿಸಿ ಟಿ-10 ಕ್ರಿಕೆಟ್ ಟೂರ್ನಿ - ಯಾವ ಹೀರೋ ಯಾವ ಟೀಂನಲ್ಲಿ..?

  star players in kcc t 0 cricket tournament

  ಕರ್ನಾಟಕ ಚಲನಚಿತ್ರ ಕ್ರಿಕೆಟ್ ಕಪ್. ಕೆಸಿಸಿ ಟಿ-10 ಕ್ರಿಕೆಟ್ ಟೂರ್ನಿಯಲ್ಲಿ 6 ತಂಡಗಳಿರುತ್ತವೆ. ಕಿಚ್ಚ ಸುದೀಪ್ ಸ್ವತಃ ಆಸಕ್ತಿವಹಿಸಿ ರೂಪಿಸಿರುವ ಈ ಕ್ರಿಕೆಟ್ ಟೂರ್ನಿ, ಮನರಂಜನೆಗಾಗಿ. ಈಗ ಟೂರ್ನಿಯ 6 ತಂಡಗಳಲ್ಲಿ ಯಾವ್ಯಾವ ನಾಯಕರು ಯಾವ್ಯಾವ ಟೀಂನಲ್ಲಿ ಆಡ್ತಾರೆ ಅನ್ನೋದು ಬಹಿರಂಗವಾಗಿದೆ. ಇದನ್ನು ಲಕ್ಕಿ ಡ್ರಾ ಮೂಲಕ ಆರಿಸಿದವರು ಭಾರತೀಯ ಕ್ರಿಕೆಟ್ ದಂತಕತೆ ಅನಿಲ್ ಕುಂಬ್ಳೆ.

  ಶಿವರಾಜ್‍ಕುಮಾರ್, ಸುದೀಪ್, ಪುನೀತ್ ರಾಜ್‍ಕುಮಾರ್, ಯಶ್,  ರಕ್ಷಿತ್ ಶೆಟ್ಟಿ ಹಾಗೂ ದಿಗಂತ್. ಇವರು ಆರು ತಂಡಗಳಲ್ಲಿ ಆಡಲಿದ್ದಾರೆ. ನಂದಕಿಶೋರ್, ಸದಾಶಿವ ಶೆಣೈ, ಇಂದ್ರಜಿತ್ ಲಂಕೇಶ್, ಜಾಕ್ ಮಂಜು, ಕೆ.ಪಿ.ಶ್ರೀಕಾಂತ್, ಕೃಷ್ಣ.. ಟೀಂಗಳ ಕ್ಯಾಪ್ಟನ್‍ಗಳು. 

 • ಕೆಸಿಸಿ-10 ಟೂರ್ನಿ - ಶಿವಣ್ಣ ಟೀಂ ಚಾಂಪಿಯನ್

  kcc cup

  ಕರ್ನಾಟಕ ಚಲನಚಿತ್ರ ಕಪ್ ಟೂರ್ನಮೆಂಟ್‍ನ ಮೊದಲ ವರ್ಷದ ಚಾಂಪಿಯನ್ ಆಗಿ ಶಿವರಾಜ್‍ಕುಮಾರ್ ನೇತೃತ್ವದ ಟೀಂ ಹೊರಹೊಮ್ಮಿದೆ. 10 ಓವರ್‍ಗಳ ಮ್ಯಾಚ್ ಟೂರ್ನಮೆಂಟ್‍ನಲ್ಲಿ ಶಿವಣ್ಣ ಟೀಂ, ಫೈನಲ್‍ನಲ್ಲಿ ಒಡೆಯರ್ ಚಾರ್ಜರ್ಸ್ ವಿರುದ್ಧ ಗೆಲುವು ಸಾಧಿಸಿದೆ. ವಿಜಯನಗರ ಪೇಟ್ರಿಯಾಟ್ಸ್ ತಂಡದ ಸ್ಟಾರ್ ಆಟಗಾರರಾಗಿದ್ದವರು ಶಿವರಾಜ್ ಕುಮಾರ್.

  ಹೊಯ್ಸಳ ಈಗಲ್ಸ್, ರಾಷ್ಟ್ರಕೂಟ ಪ್ಯಾಂಥರ್ಸ್ ವಿರುದ್ಧ ಗೆದ್ದಿದ್ದ ಶಿವರಾಜ್‍ಕುಮಾರ್ ಟೀಂ ಫೈನಲ್ ಪ್ರವೇಶಿಸಿತ್ತು.

 • ಕೊರೊನಾ ಕಡುಕಷ್ಟಕಾಲ : ಸಹಾಯ ಹಸ್ತ ಚಾಚಿದ ಚಿತ್ರರಂಗ

  ಕೊರೊನಾ ಕಡುಕಷ್ಟಕಾಲ : ಸಹಾಯ ಹಸ್ತ ಚಾಚಿದ ಚಿತ್ರರಂಗ

  ಕಿಚ್ಚ ಸುದೀಪ್, ಉಪೇಂದ್ರ, ಲೀಲಾವತಿ ಚಿತ್ರರಂಗದ ಕಲಾವಿದರು, ತಂತ್ರಜ್ಞರಿಗೆ ನೆರವಾಗುತ್ತಿರುವ ಬೆನ್ನಲ್ಲೇ ಇನ್ನಷ್ಟು ಕಲಾವಿದರು, ನಿರ್ಮಾಪಕರು ನೆರವಿನ ಹಸ್ತ ಚಾಚಿದ್ದಾರೆ. ನಟ ಸೋನು ಸೂದ್, ರಾಗಿಣಿ ದ್ವಿವೇದಿ ಕೂಡಾ ಕೊರೊನಾ ವಾರಿಯರ್ಸ್ ನೆರವಿಗೆ ಕೈ ಜೋಡಿಸಿದ್ದಾರೆ. ಪ್ರಕಾಶ್ ರೈ ಬೇರೆಯದೇ ರೀತಿಯಲ್ಲಿ ದೊಡ್ಡಮಟ್ಟದಲ್ಲಿ ನೆರವು ನೀಡುವ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

  ಇದೀಗ ಕೆಜಿಎಫ್, ಯುವರತ್ನ ಚಿತ್ರಗಳ ನಿರ್ಮಾಪಕ ವಿಜಯ್ ಕಿರಗಂದೂರು ಮಂಡ್ಯ ಜಿಲ್ಲೆಯ ಜನರ ನೆರವಿಗೆ ಧಾವಿಸಿದ್ದಾರೆ. ಮಂಡ್ಯ, ವಿಜಯ್ ಕಿರಗಂದೂರು ಅವರ ಹುಟ್ಟೂರು ಎನ್ನುವುದು ವಿಶೇಷ.

  ವಿಜಯ್ ಕಿರಗಂದೂರು ಮಂಡ್ಯದ ಜನರಿಗಾಗಿ 500 ಎಲ್‍ಪಿಎಂ ಸಾಮಥ್ರ್ಯದ 2 ಆಕ್ಸಿಜನ್ ಘಟಕ ಅಥವಾ 50 ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಿಕೊಡಲು ನಿರ್ಧರಿಸಿದ್ದಾರೆ. ಹೊಂಬಾಳೆ ಫಿಲಮ್ಸ್ ಮೂಲಕ ಇವುಗಳಲ್ಲಿ ಯಾವುದು ಅಗತ್ಯವಿದೆಯೋ.. ಅದಕ್ಕೆ ನೆರವು ನೀಡುವುದಾಗಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲೂ ಇದ್ದಾರೆ.

  ಅತ್ತ ಪ್ರಕಾಶ್ ರೈ ತಮಿಳುನಾಡಿನ ಭೂಮಿಕಾ ಟ್ರಸ್ಟ್ ಸಹಯೋಗದಲ್ಲಿ 500ಕ್ಕೂ ಹೆಚ್ಚು ಆಕ್ಸಿಜನ್ ಕಾನ್ಸಂಟ್ರೇಟರ್ ಒದಗಿಸಿದ್ದಾರೆ.

  ನಟ, ಸಂಗೀತ ನಿರ್ದೇಶಕ ಸಾಧುಕೋಕಿಲ ಆರ್ಕೆಸ್ಟ್ರಾ ಕಲಾವಿದರಿಗಾಗಿ ಎರಡೂವರೆ ಲಕ್ಷ ರೂ.ಗಳನ್ನು ಉಪೇಂದ್ರ ಅವರಿಗೆ ನೀಡಿದ್ದು, ಸಹಾಯ ನೀಡಲು ಕೋರಿದ್ದಾರೆ. ಹಿರಿಯನಟಿ ಬಿ.ಸರೋಜಾದೇವಿ 4 ಲಕ್ಷ ರೂ.ಗಳನ್ನು ಸಹಕಲಾವಿದರ ಕುಟುಂಬಕ್ಕೆ ಕಿಟ್ ವಿತರಿಸುವ ಸಲುವಾಗಿ ನೀಡಿದ್ದಾರೆ.

  ನಿರ್ದೇಶಕ ಪವನ್ ಒಡೆಯರ್ 20 ಸಾವಿರ ರೂ.ಗಳನ್ನು ನೀಡಿದ್ದಾರೆ. ಹಿರಿಯ ನಟ ಶೋಭರಾಜ್ 10 ಸಾವಿರ ರೂ. ನೀಡಿದ್ದಾರೆ. ನಟ ಶ್ರೀಮುರಳಿ 5 ಆಸ್ಪತ್ರೆಗಳ ಕೊರೊನಾ ವಾರಿಯರ್ಸ್‍ಗೆ ಊಟದ ವ್ಯವಸ್ಥೆ ಮಾಡಿಕೊಡುತ್ತಿದ್ದಾರೆ. ನಟಿ ಸಂಜನಾ ಗಲ್ರಾನಿ ಬಡವರಿಗಾಗಿ ಆಹಾರದ ಕಿಟ್ ವಿತರಿಸುತ್ತಿದ್ದಾರೆ.

  ಅಮೆರಿಕದಲ್ಲಿ ನೆಲೆಸಿರುವ ನಟಿ ಮಾನ್ಯ ಉಪೇಂದ್ರ ಅವರಿಗೆ 1 ಲಕ್ಷ ರೂ. ಕಳಿಸಿಕೊಟ್ಟಿದ್ದಾರೆ.

  ನಟ ಕಿಚ್ಚ ಸುದೀಪ್ ತಮ್ಮ ಚಾರಿಟಬಲ್ ಟ್ರಸ್ಟ್ ಮೂಲಕ ಕೊರೊನಾದಿಂದಾಗಿ ಅನಾಥರಾದ ಕೆಲವು ಮಕ್ಕಳನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿದ್ದು ಮಾಹಿತಿ ಕಲೆಹಾಕುತ್ತಿದೆ. ಅದರಲ್ಲಿಯೂ ಚಾಮರಾಜನಗರದ ಆಕ್ಸಿಜನ್ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳ ಮಾಹಿತಿ ಸಂಗ್ರಹಿಸುತ್ತಿದೆ. ಮೊದಲ ಹಂತದಲ್ಲಿ ಆ ಕುಟುಂಬಗಳಿಗೆ ಆಹಾರದ ಕಿಟ್ ನೀಡುತ್ತಿದ್ದು, ಕೊರೊನಾ ಮುಗಿದ ನಂತರ ಮುಂದಿನ ನೆರವಿನ ಯೋಜನೆ ರೂಪಿಸುವುದಾಗಿ ಹೇಳಿದೆ.

 • ಕೋಟಿಗೊಬ್ಬ 3 : ರಿಲೀಸ್ ಅನೌನ್ಸ್ ಬೆನ್ನಲ್ಲೇ ಪೈರಸಿ ಕಾಟ

  ಕೋಟಿಗೊಬ್ಬ 3 : ರಿಲೀಸ್ ಅನೌನ್ಸ್ ಬೆನ್ನಲ್ಲೇ ಪೈರಸಿ ಕಾಟ

  ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಅಕ್ಟೋಬರ್ 14ಕ್ಕೆ ರಿಲೀಸ್ ಆಗಬೇಕು. ಆದರೆ, ರಿಲೀಸ್ ಆಗುವುದಕ್ಕೆ ಇನ್ನೂ 2 ವಾರ ಇರುವಾಗಲೇ ಪೈರಸಿ ಖದೀಮರ ಕಾಟ ಶುರುವಾಗಿದೆ. ಎಷ್ಟರಮಟ್ಟಿಗೆಂದರೆ ಟೆಲಿಗ್ರಾಂ ಸೈಟ್‍ನಲ್ಲಿ ಈಗಾಗಲೇ ಕೋಟಿಗೊಬ್ಬ 3 ಹೆಸರಿನ ಪೇಜ್‍ಗಳು ಸೃಷ್ಟಿಯಾಗಿವೆ. ಚಾನೆಲ್‍ಗಳು ಹುಟ್ಟಿಕೊಂಡಿವೆ. ಸುಮಾರು 50ರಿಂದ 60 ಮಂದಿಯ ಗ್ಯಾಂಗ್ ಈ ಕೆಲಸ ಮಾಡುತ್ತಿದೆ ಎನ್ನುವುದು ನಿರ್ಮಾಪಕ ಸೂರಪ್ಪ ಬಾಬು ಅನುಮಾನ. ಈ ಕುರಿತು ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ದೂರು ನೀಡಿದ್ದಾರೆ.

  ಒಬ್ಬ ನಿರ್ಮಾಪಕನಾಗಿ ನನ್ನ ಸಿನಿಮಾ ಉಳಿಸಿಕೊಳ್ಳೋಕೆ ಏನು ಮಾಡಬೇಕೋ ಎಲ್ಲವನ್ನೂ ಮಾಡುತ್ತೇನೆ. ಒಬ್ಬ ಸಿಕ್ಕರೂ ಸಾಕು, ಇಡೀ ತಂಡವನ್ನು ಹಿಡಿಯುತ್ತೇನೆ. ಇದು ಸಣ್ಣ ವಿಷಯ. ಹಾಗಾಗಿ ಸುದೀಪ್ ಅವರನ್ನು ಕರೆಯಲಿಲ್ಲ. ಪರಿಸ್ಥಿತಿ ಮಿತಿಮೀರಿದರೆ ಸುದೀಪ್ ಕೂಡಾ ಬರುತ್ತಾರೆ ಎಂದಿದ್ದಾರೆ ಸೂರಪ್ಪ ಬಾಬು.

 • ಕೋಟಿಗೊಬ್ಬ 3 ಶೂಟಿಂಗ್ ಸ್ಟಾರ್ಟ್ 

  kotigobba shooting starts

  ಪೈಲ್ವಾನ್ ಚಿತ್ರದ ಚಿತ್ರೀಕರಣ ಮುಗಿಯುತ್ತಿದ್ದಂತೆಯೇ ಹೊಸ ಡ್ಯೂಟಿಗೆ ಹಾಜರ್ ಆಗಿದ್ದಾರೆ ಕಿಚ್ಚ ಸುದೀಪ್. ಕೋಟಿಗೊಬ್ಬ 3 ಚಿತ್ರದ 3ನೇ ಹಂತದ ಚಿತ್ರೀಕರಣ ಶುರುವಾಗಿದೆ. 

  ಪೈಲ್ವಾನ್ ಮುಗಿಸಿದ್ದೇವೆ. ಪೈಲ್ವಾನ್ ತಂಡವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಆದರೆ, ಇದೊಂಥರಾ ಮಕ್ಕಳು ಸ್ಕೂಲು ಬದಲಿಸಿದ ಹಾಗೆ. ಸಿನಿಮಾಗಳ ಬ್ಯೂಟಿಯೇ ಇದು. ಹೊಸ ಮುಖಗಳು.. ಹೊಸ ಜಾಗಗಳು.. ಅಫ್‍ಕೋರ್ಸ್.. ಹೊಸ ಹೊಸ ಸವಾಲುಗಳು.

  ಸೂರಪ್ಪ ಬಾಬು ನಿರ್ಮಾಣದ ಕೋಟಿಗೊಬ್ಬ 3 ಚಿತ್ರಕ್ಕೆ ಮಡೋನ್ನಾ ಸೆಬಾಸ್ಟಿಯನ್ ನಾಯಕಿ. ಹೊಸ ಹುಡುಗ ಕಾರ್ತಿಕ್ ಈ ಮೆಗಾಪ್ರಾಜೆಕ್ಟ್ 

 • ಕೋಟಿಗೊಬ್ಬ 3 ಸೆನ್ಸಾರ್ ಕಂಪ್ಲೀಟ್

  ಕೋಟಿಗೊಬ್ಬ 3 ಸೆನ್ಸಾರ್ ಕಂಪ್ಲೀಟ್

  ದಸರಾ ಹಬ್ಬಕ್ಕೆ ರಿಲೀಸ್ ಆಗುತ್ತಿರುವ ಕೋಟಿಗೊಬ್ಬ 3 ಚಿತ್ರ ಸೆನ್ಸಾರ್ ಪರೀಕ್ಷೆ ಗೆದ್ದಿದೆ. ಕಿಚ್ಚ ಸುದೀಪ್ ಹೀರೋ ಆಗಿರುವ ಚಿತ್ರ ಕೋಟಿಗೊಬ್ಬ 2 ಚಿತ್ರದ ಸೀಕ್ವೆಲ್. ಸುದೀಪ್ ಎದುರು ಮಡೋನ್ನಾ ಸೆಬಾಸ್ಟಿಯನ್ ನಾಯಕಿಯಾಗಿ ನಟಿಸಿದ್ದಾರೆ. ಶಿವಕಾರ್ತಿಕ್ ನಿರ್ದೇಶನದ ಸಿನಿಮಾ ಅದ್ಧೂರಿಯಾಗಿ ನಿರ್ಮಾಣಗೊಂಡಿದ್ದು, ಸರ್ಬಿಯಾ, ಮಲೇಷಿಯಾ, ಥೈಲ್ಯಾಂಡ್, ಪೋಲೆಂಡ್‍ಗಳಲ್ಲಿ ಚಿತ್ರೀಕರಣಗೊಂಡಿದೆ. ಬೆಂಗಳೂರು, ಮುಂಬೈ ಹಾಗೂ ಪಾಂಡಿಚೆರಿಯಲ್ಲೂ ಶೂಟಿಂಗ್ ಆಗಿದೆ.

  ಅಕ್ಟೋಬರ್ 14ಕ್ಕೆ ರಿಲೀಸ್ ಆಗುತ್ತಿರುವ ಕೋಟಿಗೊಬ್ಬ 3, ಸೆನ್ಸಾರ್ ಪರೀಕ್ಷೆ ಮುಗಿಸಿದ್ದು, ಯು/ಎ ಪ್ರಮಾಣ ಪತ್ರ ಪಡೆದುಕೊಂಡಿದೆ. ನಿರ್ಮಾಪಕ ಸೂರಪ್ಪ ಬಾಬು ಚಿತ್ರವನ್ನು ಅದ್ಧೂರಿಯಾಗಿ ರಿಲೀಸ್ ಮಾಡಲು ಯೋಜನೆ ರೂಪಿಸಿದ್ದಾರೆ. ಪ್ರಚಾರವನ್ನು ಚುರುಕುಗೊಳಿಸಿದ್ದಾರೆ. ಪೊಗರು ಗಂಗಾಧರ್ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ.

 • ಕೋಟಿಗೊಬ್ಬ 3ಗೆ ಶಿಫ್ಟ್ : ಸುದೀಪ್ ಇನ್ ಪೋಲೆಂಡ್

  kotigobba 3 shooting in poland

  ಕಿಚ್ಚ ಸುದೀಪ್ ಹೊಸ ಕೆಲಸಕ್ಕೆ ಶಿಫ್ಟ್ ಆಗಿದ್ದಾರೆ. ಅರ್ಥಾತ್.. ಹೊಸ ಸಿನಿಮಾದತ್ತ ಹೊರಳಿದ್ದಾರೆ. ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿರುವ ಕೋಟಿಗೊಬ್ಬ 3 ಚಿತ್ರದ ಶೂಟಿಂಗಿಗಾಗಿ ಪೋಲೆಂಡ್‍ಗೆ ತೆರಳಿದ್ದಾರೆ. ಶಿವಕಾರ್ತಿಕ್ ನಿರ್ದೇಶನದ ಕೋಟಿಗೊಬ್ಬ 3ಗೆ ಸೂರಪ್ಪ ಬಾಬು ನಿರ್ಮಾಪಕ.

  ಪೋಲೆಂಡಿನ ವಾರ್ಸಾದಲ್ಲಿ ಸಾಹಸ ದೃಶ್ಯಗಳ ಶೂಟಿಂಗ್ ನಡೆಯಲಿದ್ದು, ಕಣಲ್ ಕಣ್ಣನ್ ನಿರ್ದೇಶನದಲ್ಲಿ ಚೇಸಿಂಗ್ ಸೀನ್ ಶೂಟಿಂಗ್ ಆಗಲಿದೆ. 60 ಜನರ ಬೃಹತ್ ತಂಡ ಸಾಹಸ ದೃಶ್ಯಗಳ ಚಿತ್ರೀಕರಣದಲ್ಲಿ ಭಾಗವಹಿಸಿದೆ.

  ಸುದೀಪ್‍ಗೆ ಎದುರಾಗಿ ಮಡೋನಾ ಸೆಬಾಸ್ಟಿನ್ ನಾಯಕಿಯಾಗಿದ್ದು, ಶ್ರದ್ಧಾ ದಾಸ್, ನವಾಬ್ ಶಾ, ಅಫ್ತಾಬ್ ಶಿವದಾಸನಿ, ರವಿಶಂಕರ್ ಹೀಗೆ ಹಲವಾರು ಕಲಾವಿದರು ನಟಿಸಿದ್ದಾರೆ.

 • ಕೋಟಿಗೊಬ್ಬ ಕಿಚ್ಚನ ರೊಮ್ಯಾಂಟಿಕ್ ಲುಕ್

  sudeep'a romantic rocking look from kotigobba 3

  ಕೋಟಿಗೊಬ್ಬ 3 ಸಿನಿಮಾದ ಕಿಚ್ಚ ಈ ಬಾರಿ ಫುಲ್ ರೊಮ್ಯಾಂಟಿಕ್ ಲುಕ್ ಕೊಟ್ಟಿದ್ದಾರೆ. ದುಂಡು ದುಂಡಾದ ಕನ್ನಡಕ, ಕೊರಳಲ್ಲೊಂದು ಕಪ್ಪು ಡಾಲರ್, ವೈಟ್ ಶರ್ಟ್.. ವ್ಹಾವ್.. ಇದು ಕೋಟಿಗೊಬ್ಬ 3 ಚಿತ್ರದ ಹಾಡಿನ ಲುಕ್ಕು. ಶೂಟಿಂಗ್ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿಯೇ ನಡೆಯುತ್ತಿದ್ದು, ಹಾಡಿನ ಕೆಲವು ಫೋಟೋ ಹೊರಬಿದ್ದಿವೆ. ಸುದೀಪ್ಗೆ ಈ ಚಿತ್ರದಲ್ಲಿ ಮಡೋನ್ನಾ ಸೆಬಾಸ್ಟಿಯನ್, ಶ್ರದ್ಧಾ ದಾಸ್ ನಾಯಕಿಯರು.

  ಸುದೀಪ್ ಅವರ ಈ ಹಾಡಿಗೆ ಸ್ಪೆಷಲ್ ಸೆಟ್ ಹಾಕಿರೋದು ಅರುಣ್ ಸಾಗರ್. ನಿರ್ದೇಶಕ ಶಿವ ಕಾರ್ತಿಕ್. ಎರಡು ಹಾಡುಗಳ ಶೂಟಿಂಗ್‌ ಬಾಕಿಯಿದ್ದು, ಇಡೀ ಟೀಂ ಹಾಡಿನ ಶೂಟಿಂಗ್ನಲ್ಲಿ ಬ್ಯುಸಿ. ಈಗಾಗಲೇ ಸರ್ಬಿಯಾ, ಪೋಲೆಂಡ್ನಲ್ಲಿ ಚೇಸಿಂಗ್ ಸೀನ್ ಶೂಟಿಂಗ್ ಮುಗಿಸಿರುವ ಚಿತ್ರತಂಡ, ಕ್ಲೈಮಾಕ್ಸ್ ಶೂಟಿಂಗ್ನ್ನು ಬೆಂಗಳೂರಿನಲ್ಲಿಯೇ ಮಾಡಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery