` kiccha sudeepa - chitraloka.com | Kannada Movie News, Reviews | Image

kiccha sudeepa

 • 'Vikrant Rona' Title Launch On Burj Khalifa

  'Vikrant Rona' Title Launch On Burj Khalifa

  The team of Rajanikanth and Akshay Kumar starrer '2.0' had lit up the Burj Khalifa in Dubai with Rajanikanth's photo during the audio release of the film held three years back.

  Now the team of 'Vikrant Rona' starring Sudeep is all set to launch the title logo and sneak peek of the film on Burj Khalifa as a part of the promotional activities as  well as to kick off the 25th year celebration of Sudeep in the Kannada film industry.

  The event will be held on the 31st of January on 9 PM afterwards and the event will be live on the Kichha Creations channel of Youtube.The event will be attended by the entire team and the team will be travelling to Dubai on the 30th of January.

  'Vikrant Rona' stars Sudeep, Nirup Bhandari, Neetha Ashok and others. The film is directed by Anup Bhandari, while Jack Manjunath is the producer.

   

 • "ಮೋಕ್ಷ" ಚಿತ್ರದ ಟ್ರೇಲರ್ ಗೆ ಶುಭಾಶಯ ಕೋರಿದ ಕಿಚ್ಚ ಸುದೀಪ

  "ಮೋಕ್ಷ" ಚಿತ್ರದ ಟ್ರೇಲರ್ ಗೆ ಶುಭಾಶಯ ಕೋರಿದ ಕಿಚ್ಚ ಸುದೀಪ

  ಕಿಚ್ಚ ಸುದೀಪ ತಮ್ಮ ಟ್ವಿಟರ್ ಖಾತೆಯಲ್ಲಿ "ಮೋಕ್ಷ" ಚಿತ್ರದ ಟ್ರೇಲರ್ ಗೆ ಶುಭಾಶಯ ಕೋರಿ, ಪ್ರೋತ್ಸಾಹ ನೀಡಿದ್ದಾರೆ.

  ಚಿತ್ರದ ಟ್ರೇಲರ್ ಇಂಟ್ರಸ್ಟಿಂಗ್ ಆಗಿ ಮೂಡಿ ಬಂದಿದ್ದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಕಳೆದ ವರ್ಷ ಟೀಸರ್ ಬಿಡುಗಡೆ ಮಾಡಿ ಚಿತ್ರದ ಬಗ್ಗೆ ಗಮನ ಸೆಳೆದಿದ್ದ `ಮೋಕ್ಷ’ ಚಿತ್ರತಂಡ ಇದೀಗ ಕುತೂಹಲ ಭರಿತ ಟ್ರೇಲರ್ ಮೂಲಕ ಎಲ್ಲರ ಚಿತ್ತ ಸೆಳೆದಿದೆ. ಸೈಕಲಾಜಿಕಲ್ ಸಸ್ಪೆನ್ಸ್, ಥ್ರಿಲ್ಲರ್ ಕಥಾನಕ ಹೊಂದಿರುವ ಈ ಸಿನಿಮಾವನ್ನು ಸಮರ್ಥ್ ನಾಯಕ್ ನಿರ್ದೇಶನ ಮಾಡಿದ್ದಾರೆ. ಐಟಿ ಕ್ಷೇತ್ರದ ಸಮರ್ಥ್ ನಾಯಕ್ ನಿರ್ದೇಶನದ ಚೊಚ್ಚಲ ಚಿತ್ರ ಇದಾಗಿದ್ದು ತಾವೇ ಕಥೆ ಬರೆದು ನಿರ್ದೇಶನ ಮಾಡಿದ್ದು, ತಾಂತ್ರಿಕವಾಗಿಯೂ ಚೆಂದವಾಗಿ ಮೂಡಿ ಬಂದಿರುವ `ಮೋಕ್ಷ’ ಸಿನಿಮಾ ಏಪ್ರಿಲ್ 16ರಂದು ಬಿಡುಗಡೆಯಾಗುತ್ತಿದೆ.

  ಕನ್ನಡದಲ್ಲಿ ಸಾಕಷ್ಟು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳು ಬಂದಿವೆ. ಆದರೆ ವಿಭಿನ್ನ ಕಥೆ ಒಳಗೊಂಡಿರುವ "ಮೋಕ್ಷ" ಚಿತ್ರದ ಟ್ರೇಲರ್ ಡಿ ಬೀಟ್ಸ್ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಯಾಗಿದೆ.

  ಎಸ್ ಆರ್ ವಿ ಸಭಾಂಗಣದಲ್ಲಿ ನಡೆದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಿರ್ದೇಶಕ ಸಮರ್ಥ್ ನಾಯಕ್, ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ನಮ್ಮ ಚಿತ್ರ ತಾಂತ್ರಿಕವಾಗಿ ಅದ್ದೂರಿತನದಿಂದ ಮೂಡಿಬಂದಿದೆ. ಅದಕ್ಕೆ ಕಾರಣ ನಮ್ಮ ಚಿತ್ರದ ತಂತ್ರಜ್ಞರು. ಟ್ರೇಲರ್ ಇಂದು ಬಿಡುಗಡೆಯಾಗಿದ್ದು, ಚಿತ್ರರಂಗದ ಗಣ್ಯರು ಹಾಗೂ ನೋಡುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಏಪ್ರಿಲ್ 16 ಮೋಕ್ಷ ಕರ್ನಾಟಕದಾದ್ಯಂತ ಬಿಡುಗಡೆಯಾಗುತ್ತಿದೆ.‌ ಕನ್ನಡ ಸಿನಿರಸಿಕರು ನಮ್ಮ ಚಿತ್ರ ವೀಕ್ಷಿಸಿ, ಪ್ರೋತ್ಸಾಹಿಸಿ ಎಂದರು. ಸಮರ್ಥ್ ನಾಯಕ್ ಈ ಚಿತ್ರದ ನಿರ್ಮಾಪಕರೂ ಹೌದು.

  ಬಾಲಿವುಡ್ ನಲ್ಲಿ ಗುರುತಿಸಿಕೊಂಡಿರುವ ನಾಯಕ ಮೋಹನ್ ಧನರಾಜ್ ಅವರಿಗೆ ಇದು ಕನ್ನಡದಲ್ಲಿ ಚೊಚ್ಚಲ ಚಿತ್ರ. ಸಸ್ಪೆನ್ಸ್ ಚಿತ್ರವಾಗಿರುವುದರಿಂದ ಚಿತ್ರ ನೋಡಿದಮೇಲೆ ಕಥೆ ಏನು? ಎಂದು ತಿಳಿಯುವುದು. ನಮ್ಮ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು ಮೋಹನ್ ಧನರಾಜ್.

  ನಾಯಕಿಯಾಗಿ ಕಾಣಿಸಿಕೊಂಡಿರುವ ಆರಾಧ್ಯ ಲಕ್ಷ್ಮಣ್ ಅವರು ತಮ್ಮ ಪಾತ್ರದ ಬಗ್ಗೆ ಮೆಚ್ಚುಗೆ ಮಾತುಗಳಾಡಿದರು.

  ಈಗಾಗಲೇ ಕೆಲವು ಚಿತ್ರಗಳಲ್ಲಿ ಅಭಿನಯಿಸಿರುವ, ಮೋಕ್ಷ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ತಾರಕ್ ಪೊನ್ನಪ್ಪ, ಚಿತ್ರವನ್ನು ಕರುನಾಡ ಹಾಗೂ ಗೋವಾದ ಸುಂದರಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ‌ ಎಂದು ಹೇಳುತ್ತಾ, ಈ ಚಿತ್ರದಲ್ಲಿ ಮಾಸ್ಕ್ ಮ್ಯಾನ್ ಎಂಬ ಪಾತ್ರವೊಂದಿದೆ. ಮಾಸ್ಕ್ ಮ್ಯಾನ್ ನಿಂದ ನಾಯಕ, ನಾಯಕಿ ಬಹಳ ತೊಂದರೆ ಅನುಭವಿಸುತ್ತಿರುತ್ತಾರೆ.

  ಈ ವಿಷಯ ತಿಳಿದು ಪೊಲೀಸ್ ಅಧಿಕಾರಿ ಪಾತ್ರಧಾರಿಯಾದ ನಾನು ಏನು ಮಾಡುತ್ತೇನೆ ಎಂಬುದನ್ನು ಚಿತ್ರದಲ್ಲಿ ವೀಕ್ಷಿಸಿ ಎಂದರು.

  ಛಾಯಾಗ್ರಾಹಕರ ಪರವಾಗಿ ಜೋಮ್ ಜೋಸಫ್ ತಮ್ಮ ಅಭಿಪ್ರಾಯ ಹಂಚಿಕೊಂಡರು.

  ಜಯಂತ್ ಕಾಯ್ಕಿಣಿ, ಕುಮಾರ್ ದತ್ ಅವರು ಬರೆದಿರುವ ಎರಡು ಹಾಡುಗಳಿಗೆ ಕಿಶನ್ ಮೋಹನ್ ಹಾಗೂ ಸಚಿನ್ ಬಾಲು ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತ ಕಿಶನ್ ಮೋಹನ್ ಅವರದು.

  ಗುರುಪ್ರಶಾಂತ್ ರೈ, ಜೋಮ್ ಜೋಸಫ್, ಕಿರಣ್ ಹಂಪಾಪುರ ಛಾಯಾಗ್ರಹಣ ಹಾಗೂ ವರುಣ್ ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ.

  ಮೋಹನ್ ಧನರಾಜ್ ಮತ್ತು ಆರಾಧ್ಯ ಲಕ್ಷ್ಮಣ್ ಈ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ತಾರಕ್ ಪೊನ್ನಪ್ಪ, ಭೂಮಿ ಅಜ್ಞಾನಿ, ಪ್ರಶಾಂತ್ ನಟನ ಮುಂತಾದ ವರು ಚಿತ್ರದ ತಾರಾಬಳಗದಲ್ಲಿದ್ದಾರೆ.

 • 100 ಕೋಟಿ ಆಫರ್ ಅಂತೆ.. ವಿಕ್ರಾಂತ್ ರೋಣ ಟಾಕೀಸಿಗೇ ಬರಲ್ವಂತೆ..!!!

  100 ಕೋಟಿ ಆಫರ್ ಅಂತೆ.. ವಿಕ್ರಾಂತ್ ರೋಣ ಟಾಕೀಸಿಗೇ ಬರಲ್ವಂತೆ..!!!

  ವಿಕ್ರಾಂತ್ ರೋಣ. ಈ ವರ್ಷ ರಿಲೀಸ್ ಆಗಬೇಕಿರುವ ಬಹುಭಾಷಾ ಸಿನಿಮಾ. ಬಹುನಿರೀಕ್ಷಿತ ಸಿನಿಮಾ. ಕಿಚ್ಚ ಸುದೀಪ್ ಅಭಿನಯದ ಅನೂಪ್ ಭಂಡಾರಿ ನಿರ್ದೇಶನದ ಸಿನಿಮಾ ವಿಕ್ರಾಂತ್ ರೋಣ. ಜಾಕ್ ಮಂಜು ನಿರ್ಮಾಣದ ಸಿನಿಮಾ ಫೆಬ್ರವರಿ 24ರಂದು ರಿಲೀಸ್ ಆಗಬೇಕಿತ್ತು. ಆದರೆ ಈಗ ಸಿನಿಮಾ ಡೈರೆಕ್ಟ್ ಆಗಿ ಒಟಿಟಿಗೇ ಬರಲಿದೆ ಎಂಬ ವದಂತಿ ಗಾಂಧಿನಗರದಲ್ಲಿ ಹಬ್ಬಿದೆ. ಒಂದು ಮೂಲದ ಪ್ರಕಾರ ಎರಡು ಒಟಿಟಿ ಸಂಸ್ಥೆಗಳು 100 ಕೋಟಿಗೂ ಹೆಚ್ಚು ಮೊತ್ತದ ಆಫರ್ ಕೊಟ್ಟಿವೆ.

  ದೊಡ್ಡ ಮೊತ್ತದ ಆಫರ್ ಬಂದಿರೋದು ನಿಜ. ಆದರೆ ಒಟಿಟಿಗೇ ಕೊಡಬೇಕಾ.. ಬೇಡವಾ.. ಅನ್ನೋದು ನಿರ್ಧಾರವಾಗಿಲ್ಲ. ಥಿಯೇಟರ್ ಪ್ರೇಕ್ಷಕರಿಗಾಗಿಯೇ 3ಡಿ ವರ್ಷನ್ ಸಿನಿಮಾ ಕೂಡಾ ಮಾಡಿದ್ದೇವೆ. ಹೀಗಾಗಿ ನಿರ್ಧಾರ ತೆಗೆದುಕೊಳ್ಳೋದರ ಬಗ್ಗೆ ಗೊಂದಲದಲ್ಲಿದ್ದೇನೆ. ಸುದೀಪ್ ಅವರ ಜೊತೆ ಮಾತನಾಡಿ ಇನ್ನೊಂದೆರಡು ವಾರದಲ್ಲಿ ಹೇಳುತ್ತೇನೆ ಎಂದಿದ್ದಾರೆ ಜಾಕ್ ಮಂಜು.

 • 100 ಕೋಟಿ ಕ್ಲಬ್ ಸೇರಿತಾ ವಿಕ್ರಾಂತ್ ರೋಣ?

  100 ಕೋಟಿ ಕ್ಲಬ್ ಸೇರಿತಾ ವಿಕ್ರಾಂತ್ ರೋಣ?

  ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಆಗಿ ಎಲ್ಲೆಡೆ ದಿಬ್ಬಣ ಹೊರಟಿದ್ದರೆ ಬಾಕ್ಸಾಫೀಸ್ ತುಂಬಿ ತುಳುಕುತ್ತಿದೆ. ಮೊದಲ ದಿನವೇ 35 ಕೋಟಿ ಬಿಸಿನೆಸ್ ಮಾಡಿದ್ದ ಚಿತ್ರ ಈಗ 5ನೇ ದಿನಕ್ಕೆ ಕಾಲಿಟ್ಟಿದೆ. ಸಿನಿಮಾ ಎಲ್ಲೆಡೆ ಅದ್ಭುತ ಕಲೆಕ್ಷನ್ ಮಾಡುತ್ತಿದೆ ಅನ್ನೋ ಖುಷಿಯಲ್ಲಿರೋದು ಇಡೀ ಸಿನಿಮಾ ಟೀಂ.

  ದೇಶದ ನಂ.1 ನಿರ್ದೇಶಕ ಎನಿಸಿಕೊಂಡಿರುವ ರಾಜಮೌಳಿಯವರೇ ಹೊಗಳಿದ್ದು ವಿಕ್ರಾಂತ್ ರೋಣ ಚಿತ್ರತಂಡದ ಗೆಲುವಿನ ಕಿರೀಟಕ್ಕೆ ಗರಿ ತೊಡಿಸಿದೆ. ಇದರ ಮಧ್ಯೆ ಬಾಕ್ಸಾಫೀಸ್ ಗಳಿಕೆ ಹೆಚ್ಚುತ್ತಿರೋದು ಚಿತ್ರತಂಡಕ್ಕೆ ಸಿಕ್ಕಿರೋ ಇನ್ನೊಂದು ಗೆಲುವು. ಒಂದೆಡೆ ವ್ಯವಸ್ಥಿತ ಅಪಪ್ರಚಾರದ ನಡುವೆಯೂ ಸಿನಿಮಾವನ್ನು ಗೆಲ್ಲಿಸಿರೋದು ಚಿತ್ರವನ್ನು ನೋಡಿದ ಪ್ರೇಕ್ಷಕರು ಮತ್ತು ಫ್ಯಾನ್ಸ್. ಚಿತ್ರದ ಬಗ್ಗೆ ಮೌತ್ ಪಬ್ಲಿಸಿಟಿ ಶುರುವಾಗಿದೆ.

  ಮೊದಲ ದಿನ : 35 ಕೋಟಿಗೂ ಹೆಚ್ಚು ಗಳಿಕೆ ಮಾಡಿದ್ದ ಸಿನಿಮಾ 2ನೇ ದಿನ ಕಲೆಕ್ಷನ್‍ನ್ನು ಇನ್ನಷ್ಟು ಹೆಚ್ಚಿಸಿಕೊಂಡಿತು. ಗುರುವಾರ ಮತ್ತು ಶುಕ್ರವಾರ ರಜಾದಿನಗಳಲ್ಲ. ಆದರೆ ಶನಿವಾರ ಮತ್ತು ಭಾನುವಾರ ಗಳಿಕೆ ಮತ್ತಷ್ಟು ಏರಿಕೆಯಾಗಿದೆ. ಒಂದು ಲೆಕ್ಕದ ಪ್ರಕಾರ ಭಾನುವಾರದ ಕಲೆಕ್ಷನ್ ನಂತರ ಚಿತ್ರದ ಕಲೆಕ್ಷನ್ 100 ಕೋಟಿ ದಾಟಿದೆ ಎನ್ನಲಾಗುತ್ತಿದೆ.

  ತೆಲುಗು ಮತ್ತು ಹಿಂದಿಯಲ್ಲಿ ಚಿತ್ರದ ಶೋಗಳ ಸಂಖ್ಯೆ ಏರಿಕೆಯಾಗಿದೆ. ರಣ್‍ಬೀರ್ ಕಪೂರ್ ನಟಿಸಿರೋ ಶಂಷೇರಾ ಚಿತ್ರದ ಗಳಿಕೆಯನ್ನೂ ಹಿಂದಿಕ್ಕಿ ಮುನ್ನುಗ್ಗಿದೆ ವಿಕ್ರಾಂತ್ ರೋಣ. ತೆಲುಗಿನಲ್ಲಿ ರವಿತೇಜಾ ನಟನೆಯ ರಾಮರಾವ್ ಚಿತ್ರಕ್ಕಿಂತ ವಿಕ್ರಾಂತ್ ರೋಣ ಚಿತ್ರದ ಕಲೆಕ್ಷನ್ ಹೆಚ್ಚು. ಡಬ್ಬಿಂಗ್ ಚಿತ್ರಗಳಲ್ಲಿ ವಿಕ್ರಾಂತ್ ರೋಣ ಸಕ್ಸಸ್ ನಂ.3 ಎನ್ನುತ್ತಿದ್ದಾರೆ ಟಾಲಿವುಡ್ ಪಂಡಿತರು.

 • 100 ಕೋಟಿ ದಾಟಿದ ಕಬ್ಜ : ನಿರ್ಮಾಪಕರು ಲಾಭದಲ್ಲಿ..

  100 ಕೋಟಿ ದಾಟಿದ ಕಬ್ಜ : ನಿರ್ಮಾಪಕರು ಲಾಭದಲ್ಲಿ..

  ಗಲ್ಲಾಪೆಟ್ಟಿಗೆಯಲ್ಲಿ ‘ಕಬ್ಜ’ ಸಿನಿಮಾ ಧೂಳೆಬ್ಬಿಸುತ್ತಿದೆ. 2ನೇ ದಿನಕ್ಕೆ ಈ ಸಿನಿಮಾ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಆ ಮೂಲಕ ದೊಡ್ಡ ಯಶಸ್ಸು ಕಂಡಿದೆ.  ಮೊದಲ ದಿನ (ಮಾರ್ಚ್ 17) ಭರ್ಜರಿ ಓಪನಿಂಗ್ ಪಡೆದುಕೊಂಡ ಈ ಸಿನಿಮಾ 2ನೇ ದಿನವೂ ಅಬ್ಬರಿಸಿದೆ. ಆ ಮೂಲಕ ನಿರ್ಮಾಪಕರಿಗೆ ಭಾರಿ ಲಾಭ ಮಾಡಿಕೊಟ್ಟಿದೆ. ‘ಕಬ್ಜ’ ಸಿನಿಮಾದ 2ನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ರಿಪೋರ್ಟ್ ಲಭ್ಯವಾಗಿದೆ. ಎರಡೇ ದಿನಕ್ಕೆ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಈ ಸಿನಿಮಾ ಜಯಭೇರಿ ಬಾರಿಸಿದೆ. ಮೊದಲ ದಿನ ಬರೋಬ್ಬರಿ 54 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು ಈ ಸಿನಿಮಾದ ಹೆಚ್ಚುಗಾರಿಕೆ. ಎರಡೇ ದಿನದ ಕಲೆಕ್ಷನ್ ಸೇರಿ ಒಟ್ಟು 100 ಕೋಟಿ ರೂಪಾಯಿ ಆಗಿದೆ.

  ಥಿಯೇಟರ್ ಮಾಲೀಕರು ಮುಂಚೆ ಹಣ ಕೊಟ್ಟು ಸಿನಿಮಾ ತೆಗೆದುಕೊಂಡು ಹೋಗಿದ್ದಾರೆ. ಇನ್ನು, ಟಿವಿ ಹಾಗೂ ಒಟಿಟಿಯವರಿಗೆ ಮೊದಲೇ ಸಿನಿಮಾ ತೋರಿಸಿ ಇದು ನನ್ನ ಚಿತ್ರ ಎಂದಿದ್ದೆ. ಅವರು ಒಳ್ಳೆಯ ಬೆಲೆಕೊಟ್ಟು ಸಿನಿಮಾ ಖರೀದಿ ಮಾಡಿದ್ದಾರೆ. ನಾನು ಹಾಕಿರುವ ಹಣಕ್ಕೆ ಅವತ್ತೇ ಗೆದ್ದೆ. ಹೂಡಿಕೆ ಮಾಡಿರುವ ಹಣ ಬಂದಿದೆ ಎಂದಿದ್ದಾರೆ ನಿರ್ದೇಶಕ ಆರ್. ಚಂದ್ರು.

  ‘ಕಬ್ಜ’ ಯಶಸ್ಸು ಕನ್ನಡ ಚಿತ್ರರಂಗಕ್ಕೆ ದೊಡ್ಡ ಬೂಸ್ಟ್ ನೀಡಿದೆ. ಸಿನಿಮಾದ ಮೇಕಿಂಗ್, ಬಿಜಿಎಂ, ಮಲ್ಟಿ ಸ್ಟಾರ್ ಸಿನಿಮಾ.. ಹೀಗೆ ಚಿತ್ರದ ಎಲ್ಲ ಅಂಶಗಳೂ ಕಬ್ಜಕ್ಕೆ ಪಾಸಿಟಿವ್ ಇಂಪ್ಯಾಕ್ಟ್ ಮಾಡಿವೆ.

  ಕರ್ನಾಟಕವೊಂದರಲ್ಲೇ ಈ ಚಿತ್ರ 20 ಕೋಟಿ ರೂಪಾಯಿ ಗಳಿಸಿದೆ. ಹಿಂದಿ ಭಾಷೆಯಿಂದ ಚಿತ್ರಕ್ಕೆ 12 ಕೋಟಿ ರೂಪಾಯಿ ಹರಿದು ಬಂದಿದೆ. ತೆಲುಗು ಭಾಷೆಯಿಂದ 7 ಕೋಟಿ ರೂಪಾಯಿ, ತಮಿಳಿನಿಂದ 5 ಕೋಟಿ ರೂಪಾಯಿ, ಮಲಯಾಳಂನಿಂದ 3 ಕೋಟಿ ರೂಪಾಯಿ ಹಾಗೂ ವಿದೇಶದಿಂದ 8 ಕೋಟಿ ರೂಪಾಯಿ ಗಳಿಕೆ ಆಗಿದೆ. ಇದು ಮೊದಲ ದಿನದ ಕಂಪ್ಲೀಟ್ ಡೀಟೈಲ್ಸ್ ಮಾತ್ರ. ಬುಧವಾರ ಯುಗಾದಿ ಹಬ್ಬ ಇದ್ದು, ಆ ಪ್ರಯುಕ್ತ ಸರ್ಕಾರಿ ರಜೆ ಇದೆ. ಅದು ಕೂಡ ಚಿತ್ರಕ್ಕೆ ವರದಾನವಾಗಿದೆ. ಕನ್ನಡದಲ್ಲಿ ಯಾವುದೇ ದೊಡ್ಡ ಬಜೆಟ್ ಚಿತ್ರಗಳು ರಿಲೀಸ್ ಆಗುತ್ತಿಲ್ಲ. ಇದು ಕೂಡ ಚಿತ್ರಕ್ಕೆ ಸಹಕಾರಿ ಆಗಿದೆ.

 • 100ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ಪೈಲ್ವಾನ್ 25

  pailwan completes 25 days

  ಪೈಲ್ವಾನ್, ಕಿಚ್ಚ ಸುದೀಪ್ ಅಭಿನಯದ ಚಿತ್ರಕ್ಕೆ ವಿಲನ್ ಆಗಿ ಕಾಡಿದ್ದು ಪೈರಸಿ. ಚಿತ್ರ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರೂ, ಪೈರಸಿ ಕಾಟ ತಪ್ಪಿರಲಿಲ್ಲ. ಪೈರಸಿ ವಿರುದ್ಧ ಸಮರವನ್ನೇ ಸಾರಿದ್ದ ಚಿತ್ರ ತಂಡದಿಂದಾಗಿ ಕೆಲವರ ಬಂಧನವೂ ಆಯ್ತು. ಇದರ ನಡುವೆಯೂ ಬಾಕ್ಸಾಫೀಸ್‍ನಲ್ಲಿ ದಾಖಲೆ ಬರೆದ ಪೈಲ್ವಾನ್, ಈಗ ಯಶಸ್ವಿ 25 ದಿನಗಳನ್ನು ಪೂರೈಸಿದೆ.

  100ಕ್ಕೂ ಹೆಚ್ಚು ಥಿಯೇಟರ್, ಸ್ಕ್ರೀನ್‍ಗಳಲ್ಲಿ 25 ದಿನ ಪೂರೈಸಿ 50ನೇ ದಿನದತ್ತ ಮುನ್ನುಗ್ಗುತ್ತಿದೆ ಪೈಲ್ವಾನ್. ಕೃಷ್ಣ ನಿರ್ದೇಶನದ ಚಿತ್ರಕ್ಕೆ ಸ್ವಪ್ನಾ ಕೃಷ್ಣ ನಿರ್ಮಾಪಕಿ. ಮೊದಲ ಚಿತ್ರದಲ್ಲೇ ಭರ್ಜರಿ ಗೆಲುವಿನ ಸಿಹಿಯುಂಡಿದ್ದಾರೆ ಸ್ವಪ್ನಾ.

 • 131 ವರ್ಷ ಪುರಾತನ ಕನ್ನಡ ಶಾಲೆ ದತ್ತು ಪಡೆದ ಸುದೀಪ್

  131 ವರ್ಷ ಪುರಾತನ ಕನ್ನಡ ಶಾಲೆ ದತ್ತು ಪಡೆದ ಸುದೀಪ್

  ಶಿವಮೊಗ್ಗದ ಬಿ.ಎಚ್.ರಸ್ತೆಯಲ್ಲಿರುವ ಕನ್ನಡ ಶಾಲೆ, ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣವಾದ ಶಾಲೆ. ಒಂದಲ್ಲ.. ಎರಡಲ್ಲ.. 133 ವರ್ಷಗಳಷ್ಟು ಸುದೀರ್ಘ ಇತಿಹಾಸವಿದೆ. ಆ ಶಾಲೆ ಸಂಕಷ್ಟದಲ್ಲಿದ್ದು, ಆ ಶಾಲೆಯ ಅಭಿವೃದ್ಧಿಗೆ ಈಗ ಕಿಚ್ಚ ಸುದೀಪ್ ಕೈಜೋಡಿಸಿದ್ದಾರೆ. ಶಾಲೆಯನ್ನು ಸುದೀಪ್ ಚಾರಿಟಬಲ್ ಟ್ರಸ್ಟ್ ದತ್ತು ಪಡೆಯುತ್ತಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಇದಕ್ಕಾಗಿ ಅನುಮತಿ ಪತ್ರವನ್ನೂ ನೀಡಿದ್ದಾರೆ.

  ಲಾಕ್ ಡೌನ್ ವೇಳೆ ಚಾಮರಾಜನಗರ ಸಮೀಪದ ವಸತಿ ಶಾಲೆಯೊಂದನ್ನು ದುರಸ್ತಿ ಮಾಡಿಸಿಕೊಟ್ಟಿದ್ದ ಸುದೀಪ್, ಕೆಲವು ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡಿದ್ದರು. ಸುದೀಪ್ ಅವರ ಸೇವೆ ಮುಂದುವರೆಯುತ್ತಲೇ ಇದೆ..

 • 23 ವರ್ಷಗಳ ಹಿಂದೆ ಸುದೀಪ್ ದ್ವೇಷಿಸುತ್ತಿದ್ದ ಆ ಒಂದು ವಾಕ್ಯ..

  its 23 years for abhinaya charavarthy

  ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಬಂದು 23 ವರ್ಷಗಳಾಗಿ ಹೋಗಿವೆ. ಸ್ಪರ್ಶ ಸಿನಿಮಾವನ್ನ ಮೊನ್ನೆ ಮೊನ್ನೆ ನೋಡಿದ ಹಾಗಿದೆ. ಆದರೆ, ಸ್ಪರ್ಶ ಅವರ ಮೊದಲ ಸಿನಿಮಾ. ಸುದೀಪ್ ಅಭಿನಯದ ಮೊದಲ ಚಿತ್ರ ಬ್ರಹ್ಮ. ಮುಹೂರ್ತಕ್ಕಷ್ಟೇ ಸೀಮಿತವಾದರೆ, ಮತ್ತೊಂದು ಸಿನಿಮಾ ಓ ಕುಸುಮಬಾಲೆ ತೆರೆ ಕಾಣಲೇ ಇಲ್ಲ. 3ನೇ ಸಿನಿಮಾ ತಾಯವ್ವ ಅಟ್ಟರ್ ಫ್ಲಾಪ್. 4ನೇ ಸಿನಿಮಾ ಪ್ರತ್ಯರ್ಥದಲ್ಲಿ ಪೋಷಕ ನಟ. ಊಹೂಂ.. ಆ ನಟನ ಒಳಗಿದ್ದ ತುಡಿತ, ಆಸೆ, ಛಲ ಬೆಳೆಯುತ್ತಲೇ ಹೋಯ್ತು. ಸುನಿಲ್ ಕುಮಾರ್ ದೇಸಾಯಿ ಅನ್ನೋ ನಿರ್ದೇಶಕನ ಕಣ್ಣಿಗೆ ಬಿದ್ದ ಮೇಲೆ ಸುದೀಪ್ ನಟರಾದರು. ಹುಚ್ಚನ ಕಿಚ್ಚ ಪಾತ್ರ ಸ್ಟಾರ್ ನಟನನ್ನಾಗಿಸಿತು. ಈಗಲೂ ಸುದೀಪ್ ಬೆನ್ನ ಹಿಂದೆಯೇ ಇದೆ ಆ ಹೆಸರು ಕಿಚ್ಚ.

  ಈಗ ಸುದೀಪ್ ಏರಿರುವ ಎತ್ತರ ನೋಡಿದರೆ, ವ್ಹಾವ್ ಎನ್ನುತ್ತೀರಿ. ಆದರೆ, ಆರಂಭದ ದಿನಗಳು ಹಾಗಿರಲಿಲ್ಲ. ಸುದೀಪ್ ಅವರ ಸರೋವರ್ ಹೋಟೆಲ್ ಚಿತ್ರರಂಗದ ಸ್ಟಾರ್‍ಗಳ ಪಾಲಿಗೆ ಟೈಂ ಪಾಸ್ ಅಡ್ಡೆಯೂ ಹೌದು. ಶೂಟಿಂಗ್ ಜಾಗವೂ ಹೌದು. ಕಥೆ, ಚಿತ್ರಕಥೆಗಳ ಚರ್ಚೆಯ ಜಾಗವೂ ಹೌದು. ಹೀಗಾಗಿ ಸ್ಟಾರ್‍ಗಳನ್ನು, ಡೈರೆಕ್ಟರುಗಳನ್ನು ಹತ್ತಿರದಿಂದಲೇ ನೋಡುತ್ತಿದ್ದ ಸುದೀಪ್, ಪ್ರತಿ ದಿನವೂ ಸ್ಟುಡಿಯೋಗಳಿಗೆ, ನಿರ್ದೇಶಕರ ಮನೆ ಬಾಗಿಲು ತಟ್ಟುತ್ತಿದ್ದರು. ಆಡಿಷನ್ ಕೊಡುತ್ತಿದ್ದರು. 

  ಆಗ ಹಲವರು ಸುದೀಪ್‍ಗೆ ಸಲಹೆ ಕೊಡುತ್ತಿದ್ದರಂತೆ.. ಡ್ಯಾನ್ಸ್ ಕಲಿತುಕೋ, ಕುದುರೆ ಸವಾರಿ, ಹೀಗೆ ಹಲವು ಸಲಹೆ ಬರುತ್ತಿದ್ದವಂತೆ. ಅವೆಲ್ಲವನ್ನೂ ವಿನೀತರಾಗಿ ಕೇಳುತ್ತಿರುವಾಗಲೇ ಇನ್ನೊಂದು ಸಲಹೆ ಬಂದಿರುತ್ತಿತ್ತು. ನಿಂಗ್ಯಾಕೆ ಇದೆಲ್ಲ. ಅಪ್ಪನ ಬ್ಯುಸಿನೆಸ್ ಮಾಡಿಕೊಂಡಿರಬಾರದೇ.. ಎನ್ನುವವರೂ ಇದ್ದರು. ಅದೊಂದು ಮಾತನ್ನು ನಾನು ದ್ವೇಷಿಸುತ್ತಿದ್ದೆ. 

  ಹೀಗೆ ಆರಂಭದ ದಿನಗಳ ಕಥೆ ಹೇಳಿಕೊಂಂಡಿರೋ ಸುದೀಪ್, ಅಂಬರೀಷ್, ಶಂಕರ್‍ನಾಗ್, ರವಿಚಂದ್ರನ್, ಶಿವರಾಜ್‍ಕುಮಾರ್ ಮೊದಲಾದವರು ನೀಡಿದ ಸ್ಫೂರ್ತಿಯನ್ನು ನೆನಪಿಸಿಕೊಂಡಿದ್ದಾರೆ.

 • 2ನೇ ವಾರಕ್ಕೆ ವಿಕ್ರಾಂತ್ ರೋಣ : 150 ಕೋಟಿ ಹೊಸ್ತಿಲಲ್ಲಿ..

  2ನೇ ವಾರಕ್ಕೆ ವಿಕ್ರಾಂತ್ ರೋಣ : 150 ಕೋಟಿ ಹೊಸ್ತಿಲಲ್ಲಿ..

  ವಿಕ್ಟರಿ ರೋಣನ ಗೆಲುವಿನ ನಾಗಾಲೋಟ ಮುಂದುವರೆದಿದೆ. ಎಲ್ಲೆಲ್ಲೂ ಚಿತ್ರದ ಬಗ್ಗೆ ಪ್ರಶಂಸೆ ಮತ್ತು ಪಾಸಿಟಿವ್ ಟಾಕ್`ಗಳೇ. ಚಿತ್ರದ ಬಗ್ಗೆ ಶುರುವಾದ ಅಪಪ್ರಚಾರ, ಅಪಸ್ವರಗಳನ್ನೆಲ್ಲ ಮೂಲೆಗುಂಪಾಗಿಸಿ ಚಿತ್ರ ಭರ್ಜರಿ ಯಶಸ್ಸು ಕಂಡಿದೆ. ಈಗ 2ನೇ ವಾರಕ್ಕೆ ಕಾಲಿಟ್ಟಿದೆ.

  ಸಾಮಾನ್ಯವಾಗಿ 2ನೇ ವಾರಕ್ಕೆ ಚಿತ್ರಮಂದಿರ ಮತ್ತು ಶೋಗಳ ಸಂಖ್ಯೆ ಕಡಿಮೆಯಾಗುತ್ತೆ. ಆದರೆ ವಿಕ್ಟರಿ ರೋಣನ ವಿಕ್ಟರಿ ಶೋಗಳ ಸಂಖ್ಯೆ ಹೆಚ್ಚಾಗಿರೋದು ವಿಶೇಷ. ಅಲ್ಲದೆ ಇಂದ ವರಮಹಾಲಕ್ಷ್ಮಿ ಹಬ್ಬ. ಸೋಮವಾರ ಮೊಹರಂ. ನಡುವೆ 4 ದಿನ ರಜೆ. ಇದು ವಿಕ್ರಾಂತ್ ರೋಣ ಚಿತ್ರದ ಕಲೆಕ್ಷನ್‍ನ್ನು ಇನ್ನಷ್ಟು ಹೆಚ್ಚಿಸುವ ನಿರೀಕ್ಷೆ ಇದೆ.

  ಕನ್ನಡದಲ್ಲಿ ವಿಕ್ರಾಂತ್ ರೋಣನ ಕಲೆಕ್ಷನ್ 100 ಕೋಟಿ ಸಮೀಪದಲ್ಲಿದ್ದರೆ, ತೆಲುಗು ಮತ್ತು ಹಿಂದಿಯಲ್ಲಿ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಈ ವಾರವೇ 150 ಕೋಟಿ ದಾಟಬಹುದು ಎಂಬ ನಿರೀಕ್ಷೆ ಚಿತ್ರರಂಗದಲ್ಲಿದೆ.

 • 2ನೇ ಹುಚ್ಚ ರೆಡಿಯಾದ

  huccha 2 ready

  ಕನ್ನಡದ ಹುಚ್ಚ ಯಾರು ಅಂದ್ರೆ, ಅದು ಕಿಚ್ಚ ಅಂತಾರೆ ಅಭಿಮಾನಿಗಳು. ಹುಚ್ಚ ಸಿನಿಮಾ ಸುದೀಪ್‍ಗೆ ಕೊಟ್ಟ ಅತಿದೊಡ್ಡ ಗಿಫ್ಟ್ ಅದು. ಆ ಚಿತ್ರದ ನಿರ್ದೇಶಕ ಓಂಪ್ರಕಾಶ್ ರಾವ್, ಈಗ ಮತ್ತೊಬ್ಬ ಹುಚ್ಚನನ್ನು ಸೃಷ್ಟಿಸಿದ್ದಾರೆ. ಅವರೇ ಡಾರ್ಲಿಂಗ್ ಕೃಷ್ಣ.

  ಓಂಪ್ರಕಾಶ್ ನಿರ್ದೇಶನದ ಹುಚ್ಚ 2 ಸಿನಿಮಾ ರಿಲೀಸ್‍ಗೆ ರೆಡಿಯಾಗಿದೆ. ಪಕ್ಕಾ ಆ್ಯಕ್ಷನ್ ಸಿನಿಮಾದಂತೆ ಕಾಣಿಸುವ ಚಿತ್ರದಲ್ಲಿ ವಿಚಿತ್ರ ವಿಕ್ಷಿಪ್ತ ಕಥೆಯೊಂದು ಸುರುಳಿಯಾಗಿ ಬಿಚ್ಚಿಕೊಳ್ಳಲಿದೆ. 

  ಸುದೀಪ್ ಚಿತ್ರ ಜೀವನದಲ್ಲಿ ಅತಿದೊಡ್ಡ ಬ್ರೇಕ್ ಕೊಟ್ಟ ಚಿತ್ರ, ಕೃಷ್ಣಗೂ ಅಂಥದ್ದೇ ಹಿಟ್ ಕೊಡುತ್ತಾ..? ಕಾದು ನೋಡಬೇಕಷ್ಟೆ.

 • 2ಬಲ್ಲಿ ಸಿಂಗ್ ತಾಕತ್ತು ಹೆಚ್ಚಿಸಿದ್ದು ಸಲ್ಮಾನ್ ಅಂತೆ..!

  balli singh's character was specially curated by salman khan

  ದಬಾAಗ್ 3 ಚಿತ್ರದಲ್ಲಿ ಸಲ್ಮಾನ್ ಖಾನ್ ಚುಲ್ ಬುಲ್ ಪಾಂಡೆಯಾಗಿದ್ದರೆ, ಅವರಿಗೆ ಎದುರಾಗಿ ಬಲ್ಲಿ ಸಿಂಗ್ ಆಗಿ ನಟಿಸಿರುವುದು ಕಿಚ್ಚ ಸುದೀಪ್. ಪ್ರಭುದೇವ ನಿರ್ದೇಶನದಲ್ಲಿ ಸಿನಿಮಾ ಸಖತ್ತಾಗಿ ಬಂದಿದೆ. ಬಲ್ಲಿ ಸಿಂಗ್ ಪಾತ್ರದ ತಾಕತ್ತೂ ಹಾಗೆಯೇ ಇದೆ. ಈಗ ಆ ಪಾತ್ರದ ಹಿನ್ನೆಲೆ ವಿವರಿಸಿದ್ದಾರೆ ಸುದೀಪ್.

  ಬಲ್ಲಿ ಸಿಂಗ್ ಪಾತ್ರದ ತೂಕ ಹೆಚ್ಚಿಸಿದ್ದು ಸ್ವತಃ ಸಲ್ಮಾನ್ ಖಾನ್. ಎಷ್ಟೋ ಬಾರಿ ನನ್ನ ಪಾತ್ರಕ್ಕೆ ಇದು ಸಾಕಾಗ್ತಾ ಇಲ್ಲ, ಇನ್ನೂ ಏನೋ ಬೇಕು.. ಇನ್ನಷ್ಟು ಡೈಲಾಗ್ಸ್ ಬೇಕು.. ಎನ್ನುತ್ತಾ ನನ್ನ ಪಾತ್ರವನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದು ಸ್ವತಃ ಸಲ್ಮಾನ್ ಎಂದಿದ್ದಾರೆ ಸುದೀಪ್.

  ಸಾಮಾನ್ಯವಾಗಿ ಹೀರೋಗಳು ತಮ್ಮ ಎದುರಿನ ಪಾತ್ರ ಶೈನ್ ಆಗುತ್ತಿದೆ ಎಂದರೆ ಕಸಿವಿಸಿಗೊಳ್ಳುತ್ತಾರೆ. ಆದರೆ, ಸಲ್ಮಾನ್ ಹಾಗಲ್ಲ ಎನ್ನುವ ಸುದೀಪ್, ಡಿಸೆಂಬರ್ 20ಕ್ಕೆ ಎದುರು ನೋಡುತ್ತಿದ್ದಾರೆ.

 • 3000+ ಥಿಯೇಟರುಗಳಲ್ಲಿ ಪೈಲ್ವಾನ್

  pailwan to release in 3000 plus theaters

  ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ರಿಲೀಸ್ ಆಗುತ್ತಿರುವುದು ಸೆಪ್ಟೆಂಬರ್ 12ಕ್ಕೆ. ಟ್ರೇಲರ್, ಹಾಡು ರಿಲೀಸ್ ಆಗಿದ್ದು ದೊಡ್ಡ ಹವಾ ಎಬ್ಬಿಸಿದೆ. ಹೆಬ್ಬುಲಿ ಕೃಷ್ಣ ನಿರ್ದೇಶನದ ಚಿತ್ರಕ್ಕೆ ಹಂಚಿಕೆದಾರರಿಂದಲೇ ಡಿಮ್ಯಾಂಡ್ ಬಂದಿದೆ. ಅದರಲ್ಲೂ ಹಿಂದಿ ಭಾಷೆಯ ಥಿಯೇಟರ್ ಮಾಲೀಕರು ಸ್ವತಃ ಪೈಲ್ವಾನ್ ಚಿತ್ರವನ್ನು ನಮಗೆ ಕೊಡಿ ಎಂದು ಕೇಳುತ್ತಿದ್ದಾರೆ. 

  ಉತ್ತರ ಭಾರತದಲ್ಲಿಯೇ 1500ಕ್ಕೂ ಹೆಚ್ಚು ಥಿಯೇಟರ್ಸ್, ಆಂಧ್ರದಲ್ಲಿ 300+, ತಮಿಳಿನಲ್ಲಿ 200+, ಕೇರಳದಲ್ಲಿ 100+ ಥಿಯೇಟರುಗಳಲ್ಲಿ ಪೈಲ್ವಾನ್ ರಿಲೀಸ್ ಆಗಲಿದೆ. ಜಗತ್ತಿನಾದ್ಯಂತ ಒಂದೇ ದಿನ 3000ಕ್ಕೂ ಹೆಚ್ಚು ಸೆಂಟರುಗಳಲ್ಲಿ ಸಿನಿಮಾ ರಿಲೀಸ್ ಮಾಡಲಿದ್ದೇವೆ ಎಂದಿದ್ದಾರೆ ನಿರ್ದೇಶಕ ಕೃಷ್ಣ.

  ಕನ್ನಡದಲ್ಲಿ ಕೆಆರ್‍ಜಿ ಸ್ಟುಡಿಯೋ, ತೆಲುಗಿನಲ್ಲಿ ವಾರಾಹಿ, ತಮಿಳಿನಲ್ಲಿ ವೈಎನ್‍ಓಟಿಎಕ್ಸ್ ಮಾರ್ಕೆಟಿಂಗ್ & ಡಿಸ್ಟ್ರಿಬ್ಯೂಷನ್, ಮಲಯಾಳಂನಲ್ಲಿ ಪಲ್ಲವಿ ರಿಲೀಸ್, ಹಿಂದಿಯಲ್ಲಿ ಜೀ ಸ್ಟುಡಿಯೋಸ್ ಸಿನಿಮಾ ವಿತರಣೆ ಹಕ್ಕು ಪಡೆದುಕೊಂಡಿವೆ.

  ಸುದೀಪ್ ಜೊತೆ ಸುನಿಲ್ ಶೆಟ್ಟಿ, ಆಕಾಂಕ್ಷಾ ಸಿಂಗ್ ಪ್ರಧಾನ ಪಾತ್ರದಲ್ಲಿದ್ದು, ಸ್ವಪ್ನಾ ಕೃಷ್ಣ ಈ ಚಿತ್ರದ ಮೂಲಕ ಮೊದಲ ಬಾರಿಗೆ ಸಿನಿಮಾ ನಿರ್ಮಾಪಕಿಯಾಗಿದ್ದಾರೆ.

 • 350+ ಚಿತ್ರಮಂದಿರಗಳಲ್ಲಿ ಕೋಟಿಗೊಬ್ಬ 3

  350+ ಚಿತ್ರಮಂದಿರಗಳಲ್ಲಿ ಕೋಟಿಗೊಬ್ಬ 3

  ಕೋಟಿಗೊಬ್ಬ 3 ಮುಂದಿನ ವಾರ ರಿಲೀಸ್ ಆಗುತ್ತಿದೆ. ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 2 ಸೂಪರ್ ಹಿಟ್ ಆಗಿದ್ದ ಹಿನ್ನೆಲೆಯಲ್ಲಿ ಈ ಚಿತ್ರದ ಮೇಲೆ ಭಾರಿ ನಿರೀಕ್ಷೆಯೂ ಇದೆ. ಸೂರಪ್ಪ ಬಾಬು ನಿರ್ಮಾಣದ ಚಿತ್ರ, ಅಕ್ಟೋಬರ್ 14ರಂದು 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ. ಅದೇ ದಿನ ಸಲಗವೂ ಬರುತ್ತಿದೆ.

  ಮೊದಲ ಹಂತವಾಗಿ 350 ಥಿಯೇಟರ್ ಪ್ಲಾನ್ ಇದೆ. ಇನ್ನೂ ಹೆಚ್ಚಾಗುವ ನಿರೀಕ್ಷೆಯೂ ಇದೆ. ಸದ್ಯಕ್ಕೆ ಕನ್ನಡದಲ್ಲಿ ಮಾತ್ರವೇ ರಿಲೀಸ್ ಮಾಡುತ್ತಿದ್ದೇವೆ. ಹೊರ ರಾಜ್ಯದಲ್ಲಿ ಕೂಡಾ ರಿಲೀಸ್ ಮಾಡುತ್ತಿದ್ದೇವೆ ಎಂದಿದ್ದಾರೆ ಸೂರಪ್ಪ ಬಾಬು.

  ಶಿವಕಾರ್ತಿಕ್ ನಿರ್ದೇಶನದ ಕೋಟಿಗೊಬ್ಬನಿಗೆ ಮಡೋನ್ನಾ ಸೆಬಾಸ್ಟಿಯನ್ ನಾಯಕಿ. ಸುದೀಪ್ ಜೊತೆ ರವಿಶಂಕರ್ ಈ ಚಿತ್ರದಲ್ಲೂ ಕಂಟಿನ್ಯೂ ಆಗಿದ್ದಾರೆ.

 • 4 ಭಾಷೆಗಳಲ್ಲಿ ಕಿಚ್ಚನದ್ದೇ ಡಬ್ಬಿಂಗ್ : ಇಷ್ಟವಾಗಿದ್ದು ಯಾವುದು..? ಕಷ್ಟವಾಗಿದ್ದು ಯಾವುದು..?

  sudeep dubs in four languages for pailwan

  ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಇದೇ ವಾರ ತೆರೆ ಕಾಣುತ್ತಿದೆ. ಕೃಷ್ಣ ನಿರ್ದೇಶನದ ಚಿತ್ರದಲ್ಲಿ ಆಕಾಂಕ್ಷಾ ಸಿಂಗ್ ನಾಯಕಿ. ಸುನಿಲ್ ಶೆಟ್ಟಿ, ಕಿಚ್ಚನ ಗುರುವಾಗಿ ನಟಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ಜಗತ್ತಿನಾದ್ಯಂತ ತೆರೆ ಕಾಣ್ತಿದೆ ಪೈಲ್ವಾನ್. ಈ 5 ಭಾಷೆಗಳಲ್ಲಿ ನಾಲ್ಕರಲ್ಲಿ ಸುದೀಪ್ ಅವರೇ ಡಬ್ ಮಾಡಿದ್ದಾರೆ.

  ಕನ್ನಡದಲ್ಲಿ ಡಬ್ಬಿಂಗ್ ಸುಲಭ. ಕಾರಣ ಅದು ನಮ್ಮ ಭಾಷೆ. ಏಕಾಗ್ರತೆ ಸುಲಭ. ಡೈಲಾಗ್‍ನ್ನು ಇಂಪ್ರೂವ್ ಮಾಡುತ್ತಲೇ ಹೋಗಬಹುದು ಎನ್ನುವ ಸುದೀಪ್‍ಗೆ ತಮಿಳು, ತೆಲುಗು ಕಷ್ಟವೇನೂ ಆಗಲಿಲ್ಲ.

  ತುಂಬಾ ಕಷ್ಟವಾಗಿದ್ದು ಹಿಂದಿ ಡಬ್ಬಿಂಗ್. ಹಿಂದಿ ಗೊತ್ತಿದ್ದರೂ ಡಬ್ ಮಾಡುವಾಗ ಕಷ್ಟ ಪಟ್ಟೆ ಎನ್ನುವ ಸುದೀಪ್, ಮಲಯಾಳಂನ್ನು ಮಾತ್ರ ಟ್ರೈ ಮಾಡೋಕೆ ಹೋಗಲಿಲ್ಲವಂತೆ.

   

 • 40 ದಿನ ಕಿಚ್ಚ ಇಂಡಿಯಾದಲ್ಲಿ ಇರಲ್ಲ..!

  kotigobba 3 40 days shooting in aboroad

  ಕಿಚ್ಚ ಸುದೀಪ್ ಇನ್ನು 40 ದಿನಗಳ ಕಾಲ ಭಾರತದಲ್ಲಿ ಇರುವುದಿಲ್ಲ. ಕಿಚ್ಚ ಸುದೀಪ್‍ರನ್ನು ನೋಡಬೇಕೆಂದರೆ, ಸರ್ಬಿಯಾಗೆ ಹೋಗಬೇಕು ಅಷ್ಟೆ. ಏಕೆಂದರೆ, ಕೋಟಿಗೊಬ್ಬ-3 ಚಿತ್ರತಂಡ ಇನ್ನು 40 ದಿನ ಅಲ್ಲಿಯೇ ಉಳಿಯಲಿದೆ. ಚಿತ್ರದ ಹೀರೋ ಸುದೀಪ್ ಕೂಡಾ ಅಲ್ಲಿಯೇ ಇರಲಿದ್ದಾರೆ. ಸತತ 40 ದಿನ.

  ಸುಮಾರು 25ಕ್ಕೂ ಹೆಚ್ಚು ಕಲಾವಿದರು ಹಾಗೂ ತಂತ್ರಜ್ಞರ ತಂಡ ಸರ್ಬಿಯಾದಲ್ಲೇ ಬೀಡುಬಿಡಲಿದೆ. ಜೂನ್ 10ರಂದು ಇಡೀ ಚಿತ್ರತಂಡ ಸರ್ಬಿಯಾಗೆ ಹೊರಡಲಿದೆ. ನಿರ್ಮಾಪಕ ಸೂರಪ್ಪ ಬಾಬು ನಿರ್ಮಾಣದ ಚಿತ್ರಕ್ಕೆ ಕಾರ್ತಿಕ್ ನಿರ್ದೇಶನವಿದೆ. ಚಿತ್ರದ ಮೊದಲ ಹಂತರ ಶೂಟಿಂಗ್‍ನ್ನು ವಿದೇಶದಲ್ಲಿಯೇ ಮುಗಿಸಲು ಚಿತ್ರತಂಡ ನಿರ್ಧರಿಸಿದೆ.

 • 500 Plus Shows For The Villain In Bengaluru

  500 plus shows for the villain in bangalore

  The Villain, the most expected movie of the year in Kannada is releasing in a record number of theaters across Karnataka and Bengaluru. The film is breaking all records before release. It has had the highest positive votes before release with over 53,000 people saying they are interested in the film on online booking sites. This is the first Kannada film with over 50,000 votes before release.

  The film is also creating before-release records in Benaluru. The bookings for the film opened one week in advance in single screen theatres and it is now open in all multiplexes today. The film is releasing tomorrow in 93 single screen theatres and 32 multiplexes in Bengaluru including the entire district.

  The Bengaluru distribution region includes Kolar and Tumakuru. Earlier it was expected that the BKT (Bengaluru Kolar Tumakuru) region will have 150 screens for The Villain. A day before the release of the film, the number of screens in BKT has already crossed 150.

  In Bengaluru the number of shows on the first day is more than 500. With more shows being added, the number of first day shows may cross 600 in the city.

   

 • 7 ಭಾಷೆ..50 ದೇಶ..4000+ ಸ್ಕ್ರೀನ್ : ಕಬ್ಜ ಅದ್ಧೂರಿ ಬಿಡುಗಡೆ

  7 ಭಾಷೆ..50 ದೇಶ..4000+ ಸ್ಕ್ರೀನ್ : ಕಬ್ಜ ಅದ್ಧೂರಿ ಬಿಡುಗಡೆ

  ಕಬ್ಜ ಸಿನಿಮಾ ಅದ್ದೂರಿಯಾಗಿ ತೆರೆಗೆ ಬಂದಿದೆ. ವಿಶ್ವದಾದ್ಯಂತ ಸಿನಿಮಾ ಬಿಡುಗಡೆಯಾಗಿದೆ. ಎಲ್ಲಾ ಕಾತರ ಮತ್ತು ಕುತೂಹಲಕ್ಕೆ ತೆರೆ ಬಿದ್ದಿದೆ. ಅಭಿಮಾನಿಗಳು ಬೆಳಗ್ಗೆಯೇ ಕಬ್ಜ ನೋಡಿ ಆನಂದಿಸುತ್ತಿದ್ದಾರೆ, ಸಂಭ್ರಮಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕಬ್ಜ ಸಿನಿಮಾ ರಿಲೀಸ್ ಆಗಿದೆ. ಕಬ್ಜ ಸಿನಿಮಾ 7 ಭಾಷೆಗಳಲ್ಲಿ ರಿಲೀಸ್ ಆಗಿದೆ. ಸುಮಾರು 50ಕ್ಕೂ ಅಧಿಕ ದೇಶಗಳಲ್ಲಿ ಕಬ್ಜ ಬಿಡುಗಡೆಯಾಗುತ್ತಿದೆ. ವಿಶೇಷ ಎಂದರೆ 4000ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಕಬ್ಜ ತೆರೆಗೆ ಬಂದಿದೆ. ಏಕಕಾಲದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ರಿಲೀಸ್ ಆಗಿರುವ ಕಬ್ಜ ಅಭಿಮಾನಿಗಳು ಹಾಗೂ ಪ್ರೇಕ್ಷಕರ ನಿರೀಕ್ಷೆಯನ್ನು ಹುಸಿಗೊಳಿಲ್ಲ. ನಿರೀಕ್ಷೆಗೆ ತಕ್ಕಂತೆ ಅಲ್ಲ, ನಿರೀಕ್ಷೆಯನ್ನೂ ಮೀರಿ ಜನರ ಮೆಚ್ಚುಗೆ ಪಡೆದುಕೊಂಡಿದೆ.

  ಕರ್ನಾಟಕದಲ್ಲಿ ಕಬ್ಜ ಬರೋಬ್ಬರಿ 450 ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ. ಇಂದು ವಿಶೇಷ ಎಂದರೆ ಪವರ್ ಸ್ಟಾರ್ ಪುನೀತ್ ಅವರ ಜನ್ಮ ದಿನ. ಅನೇಕ ಚಿತ್ರಮಂದಿರಗಳಲ್ಲಿ ಅಪ್ಪು ಕಟೌಟ್ ಕೂಡ ರಾರಾಜಿಸುತ್ತಿದೆ. ರಾಜಧಾನಿಯಲ್ಲೇ ಸುಮಾರು 200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಗೆ ಬರುತ್ತಿದೆ.

  ರಿಯಲ್ ಸ್ಟಾರ್ ಉಪೇಂದ್ರ ನಾಯಕನಾಗಿ ಕಿಚ್ಚ ಸುದೀಪ್ ಮತ್ತು ಶಿವರಾಜ್ ಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. iದೀಗ ಮೂವರನ್ನು ಒಟ್ಟಿಗೆ ನೋಡಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ರಿಯಲ್ ಸ್ಟಾರ್‌ಗೆ ನಾಯಕಿಯಾಗಿ ಶ್ರೀಯಾ ಶರಣ್ ಕಾಣಿಸಿಕೊಂಡಿದ್ದಾರೆ. ಆರ್.ಚಂದ್ರು ನಿರ್ದೇಶನದಲ್ಲಿ ಮೂಡಿ ಬಂದಿರುವ ಕಬ್ಜ ಬಾಕ್ಸಾಫೀಸಿಗೆ ರಂಗು ತಂದಿದೆ.

 • 8 ಭಾಷೆಗಳಲ್ಲಿ ಬರ್ತಾನೆ ಪೈಲ್ವಾನ್ ಕಿಚ್ಚ

  sudeep's phailwan in 8 different languages

  ಕನ್ನಡದಲ್ಲೀಗ ಬಹುಭಾಷಾ ಸಿನಿಮಾಗಳು ಹೊಸದೇನೂ ಅಲ್ಲ. ಆದರೀಗ ಕಿಚ್ಚ ಸುದೀಪ್, ಬಹುಭಾಷೆಯಲ್ಲೂ ದಾಖಲೆ ಬರೆಯಲು ಸಿದ್ಧರಾಗಿದ್ದಾರೆ. ಕಿಚ್ಚ ಸುದೀಪ್‍ರ ಪೈಲ್ವಾನ್ ಸಿನಿಮಾ ಒಂದಲ್ಲ, ಎರಡಲ್ಲ.. 8 ಭಾಷೆಗಳಲ್ಲಿ ರಿಲೀಸ್ ಆಗಲಿದೆ.

  ಕನ್ನಡದ ಜೊತೆ ತೆಲುಗು, ತಮಿಳು, ಹಿಂದಿ, ಮಲಯಾಳಂ, ಮರಾಠಿ, ಪಂಜಾಬಿ, ಬೋಜ್‍ಪುರಿ (ಬಿಹಾರದ ಭಾಷೆ), ಬೆಂಗಾಲಿಯಲ್ಲೂ ಪೈಲ್ವಾನ್ ಸಿನಿಮಾ ತೆರೆ ಕಾಣಲಿದೆ.

  ಸುದೀಪ್ ಚಿತ್ರಗಳಿಗೆ ಉತ್ತರ ಭಾರತದಲ್ಲಿ ಒಳ್ಳೆಯ ಮಾರ್ಕೆಟ್ ಇದೆ. ಹೀಗಾಗಿಯೇ ಅಲ್ಲಿನ ಸ್ಥಳೀಯ ಭಾಷೆಗಳಲ್ಲಿ ಪೈಲ್ವಾನ್ ಸಿನಿಮಾ ರಿಲೀಸ್ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ ನಿರ್ದೇಶಕ ಕೃಷ್ಣ. ಡಿಸೆಂಬರ್‍ನಲ್ಲಿ ಪೈಲ್ವಾನ್ ಚಿತ್ರದ ಟೀಸರ್‍ವೊಮಂದನ್ನು ರಿಲೀಸ್ ಮಾಡಲು ಸಿದ್ಧತೆ ನಡೆದಿದೆ. ಶೂಟಿಂಗ್ ಜೊತೆ ಜೊತೆಯಲ್ಲೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೂ ನಡೆಯುತ್ತಿವೆ. ಲೋಕಸಭೆ ಚುನಾವಣೆಗೆ ಮುನ್ನ ಸಿನಿಮಾ ರಿಲೀಸ್ ಆಗಲಿದೆ ಎಂದು ತಿಳಿಸಿದ್ದಾರೆ ನಿರ್ದೇಶಕ ಕೃಷ್ಣ.

 • 90+ ಸೆಂಟರುಗಳಲ್ಲಿ ಪೈಲ್ವಾನ್ 50 ಫಿಕ್ಸ್

  pailwan 50 days in 90 plus theaters

  100ಕ್ಕೂ ಹೆಚ್ಚು ಸೆಂಟರುಗಳಲ್ಲಿ 25 ದಿನ ಪೂರೈಸಿ, ಬಾಕ್ಸಾಫೀಸಿನಲ್ಲಿ ದಾಖಲೆ ಬರೆದ ಪೈಲ್ವಾನ್, 90ಕ್ಕೂ ಹೆಚ್ಚು ಸೆಂಟುಗಳಲ್ಲಿ 50 ದಿನ ಪೂರೈಸುವುದು ಪಕ್ಕಾ ಆಗಿದೆ. ಪೈಲ್ವಾನ್ ನಿರ್ಮಾಪಕರೂ ಆಗಿರುವ ಸ್ವಪ್ನಾ ಕೃಷ್ಣ ನಿರ್ದೇಶಕ ಕೃಷ್ಣ ಈ ವಿಷಯವನ್ನು ಅಧಿಕೃತವಾಗಿಯೇ ಘೋಷಿಸಿದ್ದಾರೆ. ಯಾವ್ಯಾವ ಸೆಂಟುಗಳಲ್ಲಿ ಪೈಲ್ವಾನ್ 50 ದಿನ ಪೂರೈಸಲಿದೆ ಎಂದು ಮಾಹಿತಿಯನ್ನೂ ಕೊಟ್ಟಿದ್ದಾರೆ.

  ಈ ಗೆಲುವಿಗೆ, ಶ್ರೇಯಸ್ಸಿಗೆ ನೀವು ಅರ್ಹರಾಗಿದ್ದೀರಿ. ಕಂಗ್ರಾಟ್ಸ್ ಎಂದು ಶುಭಾಶಯ ತಿಳಿಸಿದ್ದಾರೆ ಕಿಚ್ಚ ಸುದೀಪ್

 • A big announcement From The Team Of 'Phantom' On Jan 21st

  A big announcement From The Team Of 'Phantom' On Jan 21st

  The shooting for Sudeep starrer 'Phantom' is almost complete except for two songs, which will be shot soon. Meanwhile, Sudeep has announced that there is a major announcement coming from the team on the 21st of January.

  Sudeep took to his Twitter account on Monday morning and announced that the team team 'Phantom' will be making a mighty announcement on Thursday evening. Fans of Sudeep are quite anxious about what would be the announcement and are waiting curiously.

  'Phantom' stars Sudeep, Nirup Bhandari, Neetha Ashok and others in prominent roles. The film is written and directed by Anup Bhandari, while Jack Manju has produced the film under his Shalini Arts Productions banner.

  The shooting for the film, will be completed soon and the film is likely to release during the Varamahalakshmi festival later this year.