` honorary doctorate - chitraloka.com | Kannada Movie News, Reviews | Image

honorary doctorate

 • Honorary Doctorate for Parvathamma Rajakumar

  parvathamma rajkumar image

  Veteran producer Parvathamma Rajakumar is all set to be conferred the Honorary Doctorate on the 31st of May. The Honorary Doctorate is being conferred by the Bangalore University on the occasion of its 50th convocation.

  On Wednesday night, the Bangalore University has announced three names for honorary doctorate this year and Parvathamma Rajakumar is in top of the list with retired chancellor G K Narayana Reddy and engineer Chinnaswamy Mamballi following her. Governor of Karnataka will be conferring the Honorary Doctorate for all the three on the 31st of May.

  With Parvathamma Rajakumar being conferred the Honorary Doctorate, she has become the third in the family to get a honorary doctorate after Dr Rajakumar and Shivarajakumar.

 • ಕಲಾ ಸಾಮ್ರಾಟ್ ನಾರಾಯಣ್ ಈಗ ಡಾ.ಎಸ್.ನಾರಾಯಣ್

  ಕಲಾ ಸಾಮ್ರಾಟ್ ನಾರಾಯಣ್ ಈಗ ಡಾ.ಎಸ್.ನಾರಾಯಣ್

  ಚೈತ್ರದ ಪ್ರೇಮಾಂಜಲಿ ಚಿತ್ರದ ನಿರ್ದೇಶಕರಾಗಿ ಕನ್ನಡಿಗರಿಗೆ ಚಿರಪರಿಚಿತರಾದ ಎಸ್.ನಾರಾಯಣ್, ಕನ್ನಡದ ಖ್ಯಾತ ನಿರ್ದೇಶಕ, ನಟ, ನಿರ್ಮಾಪಕ. ಡಾ.ರಾಜ್ ಕುಮಾರ್ ಅವರಿಂದ ಹಿಡಿದು ವಿಷ್ಣು, ಅಂಬರಿಷ್, ಶಿವಣ್ಣ, ರವಿಚಂದ್ರನ್, ಪುನೀತ್, ರಾಘವೇಂದ್ರ ರಾಜ್‍ಕುಮಾರ್, ಸುದೀಪ್, ದರ್ಶನ್, ಗಣೇಶ್, ದುನಿಯಾ ವಿಜಯ್, ಶ್ರೀಮುರಳಿ, ವಿಜಯ್ ರಾಘವೇಂದ್ರ, ಜಗ್ಗೇಶ್, ರಮೇಶ್ ಅರವಿಂದ್.. ಹೀಗೆ ಕನ್ನಡದ 3 ಜನರೇಷನ್‍ನ ಎಲ್ಲ ಸ್ಟಾರ್‍ಗಳನ್ನೂ ನಿರ್ದೇಶಿಸಿರುವ ಹೆಮ್ಮೆ ನಾರಾಯಣ್ ಅವರದ್ದು. ಹಲವು ಹಿಟ್ ಚಿತ್ರಗಳನ್ನು ಕೊಟ್ಟಿರುವ ಎಸ್.ನಾರಾಯಣ್ ಈಗ ಡಾ.ನಾರಾಯಣ್ ಆಗಿದ್ದಾರೆ.

  ಯುನಿವರ್ಸಲ್ ಡೆವಲಪ್‍ಮೆಂಟ್ ಕೌನ್ಸಿಲ್, ಎಸ್.ನಾರಾಯಣ್ ಅವರಿಗೆ ಗೌರವ ಡಾಕ್ಟರೇಟ್ ನೀಡಿದೆ.

 • ಕೆಲವರು ತಗೊಂಡ್ರು. ನಂಗೆ ಕೊಟ್ರು : ಗೌರವ ಡಾಕ್ಟರೇಟ್ ಪದವಿಗೆ ರವಿಚಂದ್ರನ್ ಹೇಳಿದ್ದು ಇಷ್ಟು

  ravichandran 's reaction on doctorate

  ಆ ದೃಶ್ಯ ರಿಲೀಸ್ ಹೊತ್ತಲ್ಲಿ ರವಿಚಂದ್ರನ್ ಖುಷಿ ಖುಷಿಯಾಗಿದ್ದಾರೆ. ಕಾರಣ ಇಷ್ಟೆ.. ಅವರೀಗ ಬರೀ ರವಿಚಂದ್ರನ್ ಅಲ್ಲ. ಡಾ. ರವಿಚಂದ್ರನ್. ಈ ಕುರಿತು ಮಾತನಾಡಿದ ರವಿಚಂದ್ರನ್ ಅಕ್ಟೋಬರ್ ೧೮ ನನಗೆ ತುಂಬಾ ವಿಶೇಷವಾದ ದಿನ. ನನ್ನ ಮಗಳ ಹುಟ್ಟುಹಬ್ಬ. ಅವಳ ಹುಟ್ಟುಹಬ್ಬದ ಸಂಭ್ರಮದಲ್ಲಿರುವಾಗಲೇ ನನಗೆ ಯುನಿವರ್ಸಿಟಿಯವರು ಗೌರವ ಡಾಕ್ಟರೇಟ್ ಕೊಡುತ್ತಿದ್ದೇವೆ ಎಂದು ಕರೆ ಮಾಡಿ ತಿಳಿಸಿದರು. ಅದಾದ ಮೇಲೆ ಚಿತ್ರರಂಗದ ಹಲವರು ಇಡೀ ದಿನ ಮೆಸೇಜ್ ಮಾಡಿದರು. ಯು ಡಿಸರ್ವ್ ಇಟ್ ಎಂದರು. ಇನ್ನೂ ಕೆಲವರು ಲೇಟ್ ಆಯ್ತು, ಯಾವಾಗಲೋ ಬರಬೇಕಿತ್ತು ಎಂದರು.

  ನಾನು ಹೇಳಿದ್ದು ಇಷ್ಟೆ, ಅದು ಯಾವಾಗ ಬರಬೇಕೋ ಅವಾಗಲೇ ಬರಬೇಕು. ಅದು ಕಿತ್ತುಕೊಂಡು ತೆಗೆದುಕೊಳ್ಳೋ ವಸ್ತುವಲ್ಲ. ಕೆಲವರು ತಗೊಂಡ್ರು, ನನಗೆ ಕೊಟ್ರು. ಅಷ್ಟೇ ವ್ಯತ್ಯಾಸ. ಎಷ್ಟೋ ಜನ ನನಗೆ ಗೌರವ ಡಾಕ್ಟರೇಟ್ ಕೊಡಿಸ್ತೀನಿ ಎಂದು ಬಂದಿದ್ದರು. ಅದು ಬಂದಾಗ ಬರಲಿ ಎಂದು ಅವರನ್ನು ದೂರ ಕಳಿಸಿದ್ದೆ ಎಂದಿದ್ದಾರೆ ರವಿಚಂದ್ರನ್.

  ಈ ಗೌರವ ಡಾಕ್ಟರೇಟ್ ಕೊಟ್ಟಿರುವುದು ರವಿಚಂದ್ರನ್ ಅನ್ನೋ ವ್ಯಕ್ತಿಗಲ್ಲ, ಮಾಡಿರುವ ಕೆಲಸಕ್ಕೆ. ಇದು ಗೌರವ, ಜವಾಬ್ದಾರಿ ಎರಡನ್ನೂ ಹೆಚ್ಚಿಸಿದೆ ಎಂದಿದ್ದಾರೆ.

 • ಕ್ರೇಜಿಸ್ಟಾರ್ ರವಿಚಂದ್ರನ್ ಇನ್ಮುಂದೆ ಡಾ.ರವಿಚಂದ್ರನ್

  ravichandran gets honorary doctorate

  ಕ್ರೇಜಿಸ್ಟಾರ್, ರಣಧೀರ, ಅಂಜದಗಂಡು, ಮಲ್ಲ.. ಎಂದೆಲ್ಲ ಅಭಿಮಾನಿಗಳಿಂದ ಕರೆಸಿಕೊಳ್ಳುವ ರವಿಚಂದ್ರನ್, ಇನ್ನು ಮುಂದೆ ಡಾ.ರವಿಚಂದ್ರನ್ ಆಗಲಿದ್ದಾರೆ. ಬೆಂಗಳೂರಿನ ಸಿಎಂಆರ್ ಯುನಿವರ್ಸಿಟಿ, ರವಿಚಂದ್ರನ್ ಅವರಿಗೆ ಗೌರವ ಡಾಕ್ಟರೇಟ್ ನೀಡುತ್ತಿದೆ. ನವೆಂಬರ್ 3ರಂದು ಯುನಿವರ್ಸಿಟಿ, ರವಿಚಂದ್ರನ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದ್ದಾರೆ.

  ರವಿಚಂದ್ರನ್ ಚಿತ್ರರಂಗಕ್ಕೆ ಬಂದಿದ್ದು ಬಾಲನಟನಾಗಿ. 1971ರಲ್ಲಿ ಕುಲಗೌರವ ಚಿತ್ರದಲ್ಲಿ ಬಾಲನಟ. ನಂತರ ಖದೀಮ ಕಳ್ಳರು ಚಿತ್ರಕ್ಕೆ ನಿರ್ಮಾಪಕರಾದರು. ಆ ಚಿತ್ರದಲ್ಲಿ ವಿಲನ್ ಆಗಿ ಪುಟ್ಟ ಪಾತ್ರ ಮಾಡಿದ್ದ ರವಿಚಂದ್ರನ್, ನಾನೇ ರಾಜ ಚಿತ್ರದ ಮೂಲಕ ಹೀರೋ ಆದರು. ಪ್ರೇಮಲೋಕದ ಮೂಲಕ ನಿರ್ದೇಶಕರಾಗಿಯೂ ಗೆದ್ದ ರವಿಚಂದ್ರನ್, ನಾನು ನನ್ನ ಹೆಂಡ್ತೀರು ಚಿತ್ರದಿಂದ ಸಂಗೀತ ನಿರ್ದೇಶಕರೂ ಆದರು. ಒಂದು ರೀತಿಯಲ್ಲಿ ರವಿಚಂದ್ರನ್, ಚಿತ್ರರಂಗದ ಆಲ್‍ರೌಂಡರ್. ಈಗ ಡಾ.ರವಿಚಂದ್ರನ್.

  ಈ ಮೂಲಕ ರವಿಚಂದ್ರನ್, ಡಾ.ರಾಜ್, ವಿಷ್ಣುವರ್ಧನ್, ಅಂಬರೀಷ್, ಶಿವರಾಜ್ ಕುಮಾರ್, ಲೀಲಾವತಿ ಮೊದಲಾದವರ ಸಾಲಿಗೆ ಸೇರಿದ್ದಾರೆ.

 • ಡಾ. ವಿ.ರವಿಚಂದ್ರನ್ : ಕ್ರೇಜಿಸ್ಟಾರ್‌ಗೆ ಸ್ಯಾಂಡಲ್ ವುಡ್ ಶುಭ ಹಾರೈಕೆ

  ravichandran dedicates his doctorate to his father veeraswamy

  ಕ್ರೇಜಿಸ್ಟಾರ್ ರವಿಚಂದ್ರನ್ ಈಗ ಡಾ.ರವಿಚಂದ್ರನ್. ಸಿಎಂಆರ್ ವಿವಿ, ರವಿಚಂದ್ರನ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಬೆಂಗಳೂರಿನ ಕುಂದಲಹಳ್ಳಿಯಲ್ಲಿರುವ ಕ್ಯಾಂಪಸ್‌ನಲ್ಲಿ ಡಿಸಿಎಂ ಅಶ್ವತ್ಥ್ ನಾರಾಯಣ್ ಗೌ.ಡಾ. ನೀಡಿ ಗೌರವಿಸಿದ್ರು.

  ಇನ್ನು ಮುಂದೆ ಹೊಸ ದಾರಿಯಲ್ಲಿ ನಡೆಯುತ್ತೇನೆ. ಹಳೆ ದಾರಿಯನ್ನು ಸರಿ ಮಾಡಿಕೊಳ್ಳುವ ಹಾಗೆ ನಡೆಯುತ್ತೇನೆ ಎಂದ ರವಿಚಂದ್ರನ್, ಸಿಎಂಆರ್ ವಿವಿಗೆ ಧನ್ಯವಾದ ಸಲ್ಲಿಸಿದ್ರು.

  ರವಿಚಂದ್ರನ್ ಅವರ ಇಡೀ ಕುಟುಂಬವೇ ಕಾರ್ಯಕ್ರಮದಲ್ಲಿ ಭಾಗವಹಿಸಿತ್ತು. ತಮಗೆ ಸಿಕ್ಕ ಪುರಸ್ಕಾರವನ್ನು ತಂದೆ ಎನ್.ವೀರಸ್ವಾಮಿಗೆ ಅರ್ಪಿಸಿದರು ರವಿಚಂದ್ರನ್.

   ಇತ್ತ ಸ್ಯಾಂಡಲ್‌ವುಡ್ ರವಿಚಂದ್ರನ್ ಅವರಿಗೆ ಗೌರವ ಡಾಕ್ಟರೇಟ್ ನೀಡಿರುವುದನ್ನು ಸಂಭ್ರಮಿಸಿದೆ. ಚಿತ್ರರಂಗದ ಕಲಾವಿದರು, ತಂತ್ರಜ್ಞರು ಡಾ.ರವಿಚಂದ್ರನ್‌ಗೆ ಶುಭ ಹಾರೈಸಿದ್ದಾರೆ. ಖುಷಿ ಹಂಚಿಕೊAಡಿದ್ದಾರೆ.

 • ಡಾಕ್ಟರ್ ಆದರೂ ರೇಖಾದಾಸ್

  rekha das gets honorary doctprate

  ರೇಖಾದಾಸ್, ಕನ್ನಡದ ಜನಪ್ರಿಯ ಹಾಸ್ಯನಟಿಯರಲ್ಲಿ ಒಬ್ಬರು. ಮೂಲತಃ ನೇಪಾಳಿ. ಆದರೆ, ಕನ್ನಡ ಕಲಿತು, ನಾಟಕಗಳಲ್ಲಿಯೂ ನಟಿಸಿ, ಕನ್ನಡತಿಯೇ ಆಗಿಹೋಗಿದ್ದಾರೆ ರೇಖಾದಾಸ್. ಕನ್ನಡದಲ್ಲಿ 100ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ರೇಖಾದಾಸ್‍ಗೆ ಯುನಿವರ್ಸಿಟಿಯೊಂದು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

  ತಮಿಳುನಾಡಿನ ವಲ್ರ್ಡ್ ತಮಿಳು ಕ್ಲಾಸಿಕಲ್ ಯುನಿವರ್ಸಿಟಿ, ರೇಖಾದಾಸ್ ಅವರಿಗೆ ಗೌರವ ಡಾಕ್ಟರೇಟ್ ನೀಡಿದೆ.

 • ನಟಿ ಸುಧಾರಾಣಿ ಇನ್ಮುಂದೆ ಡಾ.ಸುಧಾರಾಣಿ

  ನಟಿ ಸುಧಾರಾಣಿ ಇನ್ಮುಂದೆ ಡಾ.ಸುಧಾರಾಣಿ

  ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದ ಸುಧಾರಾಣಿ, ನಂತರ ದಶಕಗಳ ಕಾಲ ಚಿತ್ರರಂಗವನ್ನು ನಾಯಕಿಯಾಗಿ ಆಳಿದ್ದು ಇತಿಹಾಸ. ಮನ ಮೆಚ್ಚಿದ ಹುಡುಗಿ.. ಮನೆ ಮನೆಯವರೂ ಮೆಚ್ಚುವ ಹುಡುಗಿಯಾದರು. ಸುಮಾರು 35 ವರ್ಷಗಳಿಂದ ಚಿತ್ರರಂಗದಲ್ಲಿರೋ ಸುಧಾರಾಣಿ ಪಡೆದಿರುವ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ಅಂತಹ ಸುಧಾರಾಣಿ ಈಗ ಡಾಕ್ಟರ್ ಸುಧಾರಾಣಿ ಆಗಿದ್ದಾರೆ.

  ಇಂಡಿಯನ್ ಎಂಪೈರ್ ವಿಶ್ವವಿದ್ಯಾಲಯ, ಯುನಿವರ್ಸಲ್ ಡೆವಲಪ್‍ಮೆಂಟ್ ಸಹಯೋಗದೊಂದಿಗೆ ಕಲಾಕ್ಷೇತ್ರದಲ್ಲಿನ ನನ್ನ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ನೀಡಿದೆ. ಇದು ನನಗೆ ಗೌರವದ  ಹೆಮ್ಮೆಯ ವಿಷಯ. ಇದನ್ನು ನನ್ನ ಕುಟುಂಬವಾದ ನನ್ನ ಅಭಿಮಾನಿಗಳ ಜೊತೆ ಹಂಚಿಕೊಳ್ಳೋಕೆ ಖುಷಿಯಾಗುತ್ತಿದೆ ಎಂದಿದ್ದಾರೆ ಸುಧಾರಾಣಿ.

 • ನಿರ್ಮಾಪಕ ಕೆ. ಮಂಜು.. ಇನ್ನು ಮುಂದೆ ಡಾಕ್ಟರ್ ಕೆ.ಮಂಜು

  producer k manju gets honorary doctrorate

  ನಿರ್ಮಾಪಕ ಕೆ.ಮಂಜು ಅವರನ್ನು ಇನ್ನು ಮುಂದೆ ಡಾ. ಕೆ.ಮಂಜು ಎಂದು ಸಂಬೋಧಿಸಬೇಕು. ಅವರೀಗ ಡಾಕ್ಟರ್ ಮಂಜು ಆಗಿದ್ದಾರೆ. ಇಂಡಿಯನ್ ವರ್ಚುವಲ್ ಅಕಾಡೆಮಿ ಫಾರ್ ಪೀಸ್ ಅಂಡ್ ಎಜುಕೇಷನ್ ವಿಶ್ವವಿದ್ಯಾಲಯ ಕೆ.ಮಂಜು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

  ಸಿನಿಮಾ ಕ್ಷೇತ್ರದಲ್ಲಿ ಕೆ.ಮಂಜು ಅವರ ಸಾಧನೆ ಗುರುತಿಸಿ ಈ ಗೌರವ ನೀಡಿದೆ ವಿಶ್ವ ವಿದ್ಯಾಲಯ. ಬೆಂಗಳೂರಿನ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದಲ್ಲಿ ಮಂಜು ಅವರಿಗೆ ಡಾಕ್ಟರೇಟ್ ಪುರಸ್ಕಾರ ನೀಡಿ ಗೌರವಿಸಿದೆ.

  ಕೆ.ಮಂಜು ತಮ್ಮ ಕೆ.ಮಂಜು ಸಿನಿಮಾಸ್ ಮತ್ತು ಲಕ್ಷ್ಮಿಶ್ರೀ ಕಂಬೈನ್ಸ್ ಬ್ಯಾನರ್‍ಗಳಲ್ಲಿ ಅನುರಾಗ ಸಂಗಮ, ಜಮೀನ್ದಾರ್ರು, ವಾಲಿ, ಜೇನುಗೂಡು, ರಾಜಾಹುಲಿ, ಹೃದಯವಂತ, ಸಾಹುಕಾರ, ಮಾತಾಡ್ ಮಾತಾಡ್ ಮಲ್ಲಿಗೆ, ವಾಲಿ.. ಮೊದಲಾದ ಹತ್ತು ಹಲವು ಚಿತ್ರಗಳನ್ನು ನಿರ್ಮಿಸಿದ್ದಾರೆ

 • ಪುನೀತ್ ಮತ್ತು ರಾಜಕುಮಾರ್ : ಗೌರವ ಡಾಕ್ಟರೇಟ್ @46

  ಪುನೀತ್ ಮತ್ತು ರಾಜಕುಮಾರ್ : ಗೌರವ ಡಾಕ್ಟರೇಟ್ @46

  ಮೈಸೂರು ವಿವಿಯವರು ಪುನೀತ್ ರಾಜಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ನೀಡುತ್ತಿದ್ದಾರೆ. ಅಶ್ವಿನಿ ಪುನೀತ್ ಸಮ್ಮತಿಯನ್ನೂ ಸೂಚಿಸಿದ್ದಾರೆ. ಈಗ ಪುನೀತ್ ಅವರ ಹಳೆಯ ಸಿನಿಮಾದ್ದೊಂದು ಡೈಲಾಗ್ ವೈರಲ್ ಆಗುತ್ತಿದೆ.

  ನಮ್ಮ ಅಪ್ಪನ್ನೂ ಜನ ಡಾಕ್ಟರ್ ಅಂತಿದ್ರು. ಮುಂದೊಂದ್ ದಿನ ನನ್ನನ್ನೂ ಜನ ಡಾಕ್ಟರ್ ಅಂತಾರೆ ಅನ್ನೋ ಡೈಲಾಗ್ ಇರೋ ಸಿನಿಮಾ ಡೈಲಾಗ್ ಅದು. ಇದರ ನಡುವೆ ಇನ್ನೊಂದು ಕಾಕತಾಳೀಯವೂ ಇದೆ.

  ಡಾ.ರಾಜ್ ಅವರಿಗೆ ಇದೇ ಮೈಸೂರು ವಿವಿ ಗೌರವ ಡಾಕ್ಟರೇಟ್ ನೀಡಿದಾಗ ರಾಜಕುಮಾರ್ ಅವರಿಗೆ ಆಗ 46 ವರ್ಷ ವಯಸ್ಸು. ಈಗ ಪುನೀತ್ ಅವರಿಗೂ ಅಷ್ಟೆ.. 46 ವರ್ಷ. ದುರಂತವೆಂದರೆ.. ಗೌರವ ಡಾಕ್ಟರೇಟ್‍ನ್ನು ಸ್ವತಃ ಸ್ವೀಕರಿಸಲು ಮತ್ತು ಡಾಕ್ಟರ್ ಪುನೀತ್ ರಾಜಕುಮಾರ್ ಎಂದು ಕರೆಸಿಕೊಳ್ಳೋಕೆ ಪುನೀತ್ ಇಲ್ಲ ಅನ್ನೋದಷ್ಟೇ ನೋವಿನ ಸಂಗತಿ.

 • ರಣಧೀರನ ಖುಷ್ ಬೂ ಈಗ ಡಾಕ್ಟರ್ ಖುಷ್ ಬೂ ಸುಂದರ್..!

  khushboo awarded with honorary doctorate

  ಖುಷ್ ಬೂ, ಈಗ ರಾಜಕಾರಣಿಯೇ ಇರಬಹುದು. ಆದರೆ.. ಕನ್ನಡಿಗರಿಗೆ ಆಕೆ ಚಿತ್ರನಟಿಯಾಗಿ, ರಣಧೀರನ ರಾಣಿಯಾಗಿಯೇ ಚಿರಪರಿಚಿತ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಖುಷ್ ಬೂಗೆ ಈಗ ಗೌರವ ಡಾಕ್ಟರೇಟ್ ಸಂದಿದೆ.

  ಅಮೆರಿಕದ ಇಂಟರ್‍ನ್ಯಾಷನಲ್ ತಮಿಳ್ ಯುನಿವರ್ಸಿಟಿ ಖುಷ್ ಬೂ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಖುಷ್ ಬೂ ಅವರ ಚಿತ್ರರಂಗದಲ್ಲಿನ ಜೀವಮಾನದ ಸಾಧನೆಗಾಗಿ ಈ ಗೌರವ ಡಾಕ್ಟರೇಟ್ ಪುರಸ್ಕಾರ ನೀಡಲಾಗಿದೆ.

 • ರವಿಚಂದ್ರನ್`ಗೆ ಬೆಂಗಳೂರು ವಿವಿ ಗೌರವ ಡಾಕ್ಟರೇಟ್

  ರವಿಚಂದ್ರನ್`ಗೆ ಬೆಂಗಳೂರು ವಿವಿ ಗೌರವ ಡಾಕ್ಟರೇಟ್

  ಕನ್ನಡಿಗರ ಕ್ರೇಜಿ ಸ್ಟಾರ್ ವಿ.ರವಿಚಂದ್ರನ್ ಅವರಿಗೆ ಬೆಂಗಳೂರು ವಿವಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ರವಿಚಂದ್ರನ್ ಕೇವಲ ನಟರಲ್ಲ, ನಿರ್ದೇಶಕ, ನಿರ್ಮಾಪಕ, ಸಂಕಲನಕಾರ, ಛಾಯಾಗ್ರಾಹಕ, ಕೊರಿಯೋಗ್ರಾಫರ್, ಸಂಗೀತ ನಿರ್ದೇಶಕ, ಗೀತೆ ಸಾಹಿತಿ.. ಹೀಗೆ ಒಂದು ಸಿನಿಮಾದ ಯಾವ ಯಾವ ವಿಭಾಗಗಳಲ್ಲಿ ಕೆಲಸ ಮಾಡಲು ಅವಕಾಶವಿದೆಯೋ.. ಅವೆಲ್ಲ ಕ್ಷೇತ್ರಗಳಲ್ಲೂ ಸಾಧನೆ ಬರೆದಿರುವ ಕನಸುಗಾರ.

  ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ಕೋಟಿ ಬಜೆಟ್‍ನಲ್ಲಿ ಸಿನಿಮಾ ಮಾಡಿ ಕರ್ನಾಟಕದ ಮಾರುಕಟ್ಟೆ ಎಷ್ಟಿದೆ ಎಂದು ತೋರಿಸಿಕೊಟ್ಟ ಪ್ರೇಮಲೋಕದ ರಣಧೀರ. ಸಿನಿಮಾ ಬಗ್ಗೆ ಆಸಕ್ತಿ ಇರುವವರಿಗೆ ರವಿಚಂದ್ರನ್ ವೃತ್ತಿ ಜೀವನವೇ ಒಂದು ಪಠ್ಯಪುಸ್ತಕವಿದ್ದಂತೆ. ಈ ಹಿಂದೆ ಖಾಸಗಿ ವಿವಿಯಿಂದ ಗೌರವ ಡಾಕ್ಟರೇಟ್ ಸ್ವೀಕರಿಸಿದ್ದ ರವಿಚಂದ್ರನ್ ಅವರಿಗೆ ಈಗ ಬೆಂಗಳೂರು ವಿವಿ ಗೌರವ ಡಾಕ್ಟರೇಟ್ ನೀಡುತ್ತಿದೆ.

  ಏಪ್ರಿಲ್ 11ರಂದು ನಡೆಯಲಿರೋ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಸಮಾರಂಭ ನಡೆಯಲಿದೆ. ಚಿತ್ರರಂಗಕ್ಕೆ ನಾನು ನೀಡಿದ ಕೊಡುಗೆಯನ್ನು ಗೌರವಿಸುತ್ತಿರುವ ಗೌರವ ಡಾಕ್ಟರೇಟ್‍ನ್ನು ವಿನೀತನಾಗಿ ಸ್ವೀಕರಿಸುತ್ತಿದ್ದೇನೆ. ಹೃದಯ ತುಂಬಿ ಬಂದಿದೆ ಎಂದಿದ್ದಾರೆ ರವಿಚಂದ್ರನ್. ಚಿತ್ರರಂಗದ ಹಲವು ಗಣ್ಯರು ಡಾ.ರವಿಚಂದ್ರನ್ ಅವರಿಗೆ ಶುಭ ಕೋರಿದ್ದಾರೆ.

  ಚಿತ್ರರಂಗದಲ್ಲಿ ಈ ರೀತಿ ಗೌರವ ಡಾಕ್ಟರೇಟ್ ಪಡೆದ ಮೊದಲಿಗರು ಡಾ.ರಾಜಕುಮಾರ್. ನಂತರ ಡಾ.ವಿಷ್ಣುವರ್ಧನ್, ಡಾ.ಅಂಬರೀಷ್, ಡಾ.ಶಿವರಾಜಕುಮಾರ್, ಡಾ.ಪುನೀತ್ ರಾಜಕುಮಾರ್.. ಮೊದಲಾದವರು ಈ ಗೌರವ ಸ್ವೀಕರಿಸಿದ್ದಾರೆ. ನಟಿ ಡಾ. ಜಯಮಾಲಾ, ಸಂಗೀತ ನಿರ್ದೇಶಕ ಡಾ.ಹಂಸಲೇಖ ಸೇರಿದಂತೆ ಕೆಲವರು ಅಧ್ಯಯನ ಮಾಡಿ ಪಿಹೆಚ್‍ಡಿ ಪದವಿ ಪೂರೈಸಿಯೇ ಡಾಕ್ಟರ್ ಆಗಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery