ಎಂಎಂಸಿಹೆಚ್ ಅನ್ನೋ ವಿಭಿನ್ನ ಟೈಟಲ್‍ನ ಸಿನಿಮಾದಲ್ಲಿ ಐವರು ನಾಯಕಿಯರು. ಮುಸ್ಸಂಜೆ ಮಹೇಶ್ ನಿರ್ದೇಶನದ ಸಿನಿಮಾಗೆ ಪುರುಷೋತ್ತಮ್ ನಿರ್ಮಾಪಕರು. ಅವರು ಈ ಚಿತ್ರಕ್ಕೆ ನಿರ್ಮಾಪಕರಾಗೋಕೆ ಕಾರಣ ಏನು ಗೊತ್ತೇ..? ಕಥೆ. ಮಹೇಶ್ ಈ ಕಥೆ ಹೇಳಿದಾಗ ತುಂಬಾ ಇಂಪ್ರೆಸ್ ಆದರಂತೆ ಪುರುಷೋತ್ತಮ್. ಕಥೆಯನ್ನು ಮುಸ್ಸಂಜೆ ಮಹೇಶ್ ಹಲವು ರಿಸರ್ಚ್ ಮಾಡಿ ಸಿದ್ಧಪಡಿಸಿದ್ದಾರಂತೆ.
ನಾಲ್ವರು ನಾಯಕಿಯರು ಮತ್ತು ರಾಗಿಣಿ ಇರೋದ್ರಿಂದ ಇದು ಮಹಿಳಾ ಪ್ರಧಾನ ಚಿತ್ರ ಎಂಬಂತೆ ಬಿಂಬಿತವಾಗ್ತಾ ಇದೆ. ಆದರೆ, ಇದು ಫ್ರೆಂಡ್‍ಶಿಪ್ ಆಧರಿಸಿದ ಸಿನಿಮಾ. ಕ್ರೈಂ, ಥ್ರಿಲ್ಲರ್, ಸಸ್ಪೆನ್ಸ್, ಮರ್ಡರ್ ಮಿಸ್ಟರಿ ಇರುವ ಕಥೆ. ಒಟ್ಟು ಐವರು ಹುಡುಗಿಯರೇ ಇದ್ದರೂ, ನಾಯಕರು ಇಬ್ಬರೇ. ರಘು ಭಟ್ ಮತ್ತು ಯುವರಾಜ್.
ಮೇಘನಾ, ರಾಗಿಣಿ, ನಕ್ಷತ್ರ, ದೀಪ್ತಿ ಮತ್ತು ಸಂಯುಕ್ತಾ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ತುಂಬಾ ಚೆನ್ನಾಗಿ ನಟಿಸಿದ್ದಾರೆ ಎನ್ನುವ ಪುರುಷೋತ್ತಮ್, ಸಿನಿಮಾವನ್ನು 150ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ರಿಲೀಸ್ ಮಾಡುತ್ತಿದ್ದಾರೆ.