` chitraloka.com | Kannada Movie News, Reviews | Image - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive

ಯಾವನೋ ಇವ್ನು ಗಿಲಕ್ಕೂ..

ಎಲ್ಲಿಂದ ಬಂದ ಗಿಲಕ್ಕೂ..

ಏಳೇಳು ಬೆಟ್ಟ ದಾಟ್ಕೊಂಡು ಬಂದ

ಗಿಲಕ್ಕೂ ಶಿವ ಗಿಲಕ್ಕೂ..

ಹಾಡು ಕುಣಿಯುವಂತಿದೆ. ಅರ್ಜುನ್ ಜನ್ಯ ಮ್ಯೂಸಿಕ್ಕು, ನಾಗೇಂದ್ರ ಪ್ರಸಾದ್ ಲಿರಿಕ್ಸು, ಮಂಗ್ಲಿ ವಾಯ್ಸ್ ಮ್ಯಾಜಿಕ್ಕುಕ.. ಎಲ್ಲವೂ ಒಟ್ಟೊಟ್ಟಿಗೇ ಮ್ಯಾಚ್ ಆಗಿ ಕುಣಿಯುವಂತೆ ಮಾಡಿದೆ. ಶಿವಣ್ಣ ಅವರ 125ನೇ ಸಿನಿಮಾ ವೇದ ಚಿತ್ರದ ಮೊದಲ ಹಾಡಿದು. ಇತ್ತೀಚೆಗಷ್ಟೇ ರಿಲೀಸ್ ಡೇಟ್ ಅನೌನ್ಸ್ ಮಾಡಿ ಚಿತ್ರದ ವೆಪನ್ಸ್ ಟೀಸರ್ ಬಿಟ್ಟಿದ್ದ ವೇದ, ಈಗ ಮೊದಲ ಹಾಡಿನಲ್ಲೇ ಮೋಡಿ ಮಾಡಿದೆ. ವಿಲನ್‍ಗಳನ್ನು ಶಿವಣ್ಣ ಚೆಂಡಾಡುವ ಹಾಡಿನ ಬ್ಯಾಕ್‍ಗ್ರೌಂಡ್‍ನಲ್ಲಿ ಬರುತ್ತದೆ. ಶಿವಣ್ಣನ ಒಂದೊಂದು ಹೊಡೆತಕ್ಕೂ ವಿಲನ್‍ಗಳು ಹಾರಿ ಬೀಳುತ್ತಿದ್ದರೆ, ಬ್ಯಾಕ್‍ಗ್ರೌಂಡ್‍ನಲ್ಲಿ.. ಗಿಲಕ್ಕೂ ಶಿವ ಗಿಲಕ್ಕೂ..

ಗೀತಾ ಶಿವರಾಜ್‍ಕುಮಾರ್ ನಿರ್ಮಾಪಕಿಯಾಗಿರುವ ಮೊದಲ ಸಿನಿಮಾ ವೇದ. ಶಿವಣ್ಣ ಎದುರು ಗಾನವಿ ಲಕ್ಷ್ಮಣ್, ಉಮಾಶ್ರೀ, ಅದಿತಿ ಸಾಗರ್, ವೀಣಾ ಪೊನ್ನಪ್ಪ, ರಘು ಶಿವಮೊಗ್ಗ, ಜಗ್ಗಪ್ಪ, ಚೆಲುವರಾಜ್, ವಿನಯ್ ಬಿದ್ದಪ್ಪ, ಭರತ್ ಸಾಗರ್, ಪ್ರಸನ್ನ, ಸಂಜೀವ್, ಕುರಿ ಪ್ರತಾಪ್, ಲಾಸ್ಯ ನಾಗರಾಜ್.. ಹೀಗೆ ಕಲಾವಿದರ ದಂಡೇ ಇದೆ.

User Rating: 0 / 5

Star inactiveStar inactiveStar inactiveStar inactiveStar inactive

ತಮ್ಮ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ "ತ್ರಿಬಲ್ ರೈಡಿಂಗ್" ಚಿತ್ರ ಇದೇ ನವೆಂಬರ್ 25ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇತ್ತೀಚಿಗೆ  ಚಿತ್ರದ ಪ್ರೀ ರಿಲೀಸ್ ಇವೆಂಟ್ ಅದ್ದೂರಿಯಾಗಿ ನಡೆಯಿತು. ನಾಯಕ ಗಣೇಶ್ ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು ಚಿತ್ರದ ಕುರಿತಾದ ತಮ್ಮ ಅನುಭವವನ್ನು ಈ ಸುಂದರ ಸಮಾರಂಭದಲ್ಲಿ ಹಂಚಿಕೊಂಡರು.

ನಾನು ಈ ರೀತಿಯ ಪಾತ್ರ ಇದುವರೆಗೂ ಮಾಡಿಲ್ಲ. ಇದೇ ಮೊದಲು ಎನ್ನಬಹುದು. ಚಿತ್ರದಲ್ಲಿ ಬರುವ ಟ್ವಿಸ್ಟ್ ಗಳು ಪ್ರೇಕ್ಷಕರಿಗೆ ಹಿಡಿಸಲಿದೆ. ಕ್ಲೈಮ್ಯಾಕ್ಸ್ ಅಂತೂ ಅದ್ಭುತ. ಈಗಾಗಲೇ ಚಿತ್ರ ನೋಡಿರುವ ಗೆಳೆಯರು, ನನಗೆ ಫೋನ್ ಮಾಡಿ ನೀವು ಹಿಂದಿನ ಚಿತ್ರಗಳಿಗಿಂತ ಈ ಚಿತ್ರದಲ್ಲಿ ಚೆನ್ನಾಗಿ ಕಾಣುತ್ತಿದ್ದೀರ ಎಂದರು. ಆ ಕ್ರೆಡಿಟ್ ಛಾಯಾಗ್ರಾಹಕ ಜೈ ಆನಂದ್ ಅವರಿಗೆ ಸಲ್ಲಬೇಕು. ಚಿತ್ರದಲ್ಲಿ ಅಭಿನಯಿಸಿರುವ ಎಲ್ಲಾ ಕಲಾವಿದರು ಅಮೋಘವಾಗಿ ನಟಿಸಿದ್ದಾರೆ.  ಉತ್ತಮ ಚಿತ್ರ ನಿರ್ದೇಶಿಸಿರುವ ಮಹೇಶ್ ಗೌಡ ಹಾಗೂ ನಿರ್ಮಿಸಿರುವ ರಾಮ್ ಗೋಪಾಲ್ ಅವರಿಗೆ ಧನ್ಯವಾದ ಎಂದರು ನಾಯಕ ಗಣೇಶ್.

ಈ ಚಿತ್ರದ ಕಥೆ ಒಪ್ಪಿ ನಿರ್ಮಾಣಕ್ಕೆ ಮುಂದಾದ ನಿರ್ಮಾಪಕ ರಾಮ್ ಗೋಪಾಲ್ ಅವರಿಗೆ ಹಾಗೂ ಎಲ್ಲಾ ಕಲಾವಿದ ಹಾಗೂ ತಂತ್ರಜ್ಞರ ತಂಡಕ್ಕೆ ಧನ್ಯವಾದ ತಿಳಿಸುತ್ತೇನೆ. ಇದೇ ಇಪ್ಪತ್ತೈದರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ದೇಶಕ ಮಹೇಶ್ ಗೌಡ. 

ಇದು ನನ್ನ ಮೊದಲ ನಿರ್ಮಾಣದ ಚಿತ್ರ. ಕೋವಿಡ್ ಸಮಯದಲ್ಲಿ ಚಿತ್ರೀಕರಣ ಮಾಡಿದ್ದೇವೆ. ಆ ದಿನದಿಂದ ಹಿಡಿದು ಇಲ್ಲಿಯವರೆಗೂ ನಮ್ಮ ಇಡೀ ತಂಡ ನೀಡಿರುವ ಸಹಕಾರಕ್ಕೆ ನಾನು ಆಬಾರಿ. ನಮ್ಮ  ಮೊದಲ ಪ್ರಯತ್ನಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ ಎನ್ನುತ್ತಾರೆ ನಿರ್ಮಾಪಕ ರಾಮ್ ಗೋಪಾಲ್ ವೈ ಎಂ. 

ನಾಯಕಿಯರಾದ ಅದಿತಿ ಪ್ರಭುದೇವ, ಮೇಘ ಶೆಟ್ಟಿ, ರಚನಾ ಇಂದರ್, ಚಿತ್ರದಲ್ಲಿ ಅಭಿನಯಿಸಿರುವ ಸಾಧುಕೋಕಿಲ, ರಂಗಾಯಣ ರಘು, ರವಿಶಂಕರ್, ಸಂಗೀತ ನಿರ್ದೇಶಕ ಸಾಯಿಕಾರ್ತಿಕ್ ಹಾಗೂ ಛಾಯಾಗ್ರಾಹಕ ಜೈ ಆನಂದ್ "ತ್ರಿಬಲ್ ರೈಡಿಂಗ್" ಜರ್ನಿ ಬಗ್ಗೆ ವಿವರಿಸಿದರು. ಸಮಾರಂಭದ ಆರಂಭದಲ್ಲಿ ನಾಯಕ ಗಣೇಶ್ ಟ್ರೇಲರ್ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಕೋರಿದರು. ಈಗಾಗಲೇ ಜನಪ್ರಿಯವಾಗಿರುವ ಚಿತ್ರದ "ಯಟ್ಟ ಯಟ್ಟ" ಹಾಡಿಗೆ ಇಡೀ ತಂಡ ಹೆಜ್ಜೆ ಹಾಕುವುದರ ಮೂಲಕ ಸಮಾರಂಭದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದರು.

User Rating: 0 / 5

Star inactiveStar inactiveStar inactiveStar inactiveStar inactive

As announced earlier, the shooting for the tentatively titled Kuladalli Melyavudo starting Hattrick Hero Shiva Rajkumar and dancing sensation Prabhudeva has commenced in Bengaluru.

The film is produced by Rockline Entertainment and it is senior producer Rockline Venkatesh's 47th film. The title of the film is yet to be announced but is generally believed to be Kuladalli Melyavudo.

Incidentally, he is also acting in the film as a police officer. Portions involving these three actors were shot during the shooting in the last four days.

This film is special because it is the first time Yograj Bhat is directing Shiva Rajkumar. It is also the first time Shivanna and Prabhudeva are acting together. It is also the first time Rockline Venkatesh and Bhat are combining to make a movie together as producer and director.

User Rating: 0 / 5

Star inactiveStar inactiveStar inactiveStar inactiveStar inactive

ರಾಜ್ಯದ ಖ್ಯಾತ ಉದ್ಯಮಿ ವಿಜಯ ಸಂಕೇಶ್ವರ್ ಜೀವನಕಥೆಯನ್ನಾಧರಿಸಿ ಬರುತ್ತಿರೋ ಸಿನಿಮಾ ವಿಜಯಾನಂದ. ಹೊಸ ಉದ್ಯಮವನ್ನು ಆರಂಭಿಸಬೇಕೆನ್ನುವ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಬಲ್ಲ ಹೆಸರು ವಿಜಯ್ ಸಂಕೇಶ್ವರ್ ಅವರದ್ದು. ಅವರ ಬಯೋಪಿಕ್ ಇದೇ ಡಿಸೆಂಬರ್ 9ರಂದು ರಿಲೀಸ್ ಆಗುತ್ತಿದೆ. ಇದೀಗ ಚಿತ್ರದ ಎರಡು ಹಾಡುಗಳನ್ನುಉ ಬಿಡುಗಡೆ ಮಾಡಲಾಗಿದೆ.

ನಾಯಕ ನಿಹಾಲ್ ಮತ್ತ ನಾಯಕಿ ಸಿರಿ ಪ್ರಹ್ಲಾದ್ ಪ್ರಧಾನ ಪಾತ್ರದಲ್ಲಿದ್ದು ಅವರಿಬ್ಬರ ನಡುವಿನ ಪ್ರೇಮಗೀತೆ ಹಾಗೆ ಆದ ಆಲಿಂಗನ.. ಹಾಡು ಪ್ರೇಕ್ಷಕರಿಗೆ ಇಷ್ಟವಾಗಿದೆ. ವಿಜಯ್ ಪ್ರಕಾಶ್ ಮತ್ತು ಕೀರ್ತನಾ ವೈದ್ಯನಾಥನ್ ಧ್ವನಿ ನೀಡಿದ್ದು  ಧನಂಜಯ್ ರಂಜನ್ ಸಾಹಿತ್ಯವಿದೆ. ಗೋಪಿ ಸುಂದರ್ ಸಂಗೀತ ನಿರ್ದೇಶಕ.

ರಿಪಿಕಾ ಶರ್ಮಾ ನಿರ್ದೇಶನದ ಚಿತ್ರಕ್ಕೆ ವಿಜಯ್ ಸಂಕೇಶ್ವರ್ ಪುತ್ರ ಆನಂದ್ ಸಂಕೇಶ್ವರ್ ಅವರೇ ನಿರ್ಮಾಪಕ. ವಿಜಯ್ ಸಂಕೇಶ್ವರ್ ಪಾತ್ರದಲ್ಲಿ ನಿಹಾಲ್, ಲಲಿತಾ ಸಂಕೇಶ್ವರ ಪಾತ್ರದಲ್ಲಿ ಸಿರಿ ಪ್ರಹ್ಲಾದ್ ನಟಿಸಿದ್ದು, ವಿಜಯ್ ಸಂಕೇಶ್ವರರರ ತಂದೆ ಬಿ.ಜಿ. ಸಂಕೇರ್ಶವರರ ಪಾತ್ರದಲ್ಲಿ ಅನಂತ್ ನಾಗ್ ನಟಿಸಿದ್ದಾರೆ.

User Rating: 0 / 5

Star inactiveStar inactiveStar inactiveStar inactiveStar inactive

ಅಯೋಗ್ಯ ಖ್ಯಾತಿಯ ಮದಗಜ ಮಹೇಶ್ ಕುಮಾರ್ ನಿರ್ದೇಶನದ ಹೊಸ ಚಿತ್ರಕ್ಕೆ ಅಭಿಷೇಕ್ ಅಂಬರೀಷ್ ಹೀರೋ. ಬ್ಯಾಡ್ ಮ್ಯಾನರ್ಸ್ ಚಿತ್ರ ಮುಗಿಯುತ್ತಿದ್ದಂತೆಯೇ ಅಭಿಷೇಕ್ ಈ ಚಿತ್ರದಲ್ಲಿ ತೊಡಗಿಸಿಕೊಳ್ಳುತ್ತಾರೆ. ಹೆಬ್ಬುಲಿ ಕೃಷ್ಣ ಜೊತೆಯಲ್ಲಿ ಮಾಡುತ್ತಿರುವ ಪ್ರಾಜೆಕ್ಟ್ ಕಾಳಿ ಕೂಡಾ ಇನ್ನೊಂದು ಕಡೆ ಶುರುವಾಗಲಿದೆ. ಈಗ ಮಹೇಶ್-ಅಭಿಷೇಕ್ ಜೋಡಿಯ ಚಿತ್ರಕ್ಕೆ ಕಾಲ ಕೂಡಿ ಬಂದಿದೆ.

ಆಗಸ್ಟ್ 27ಕ್ಕೆ ಈ ಚಿತ್ರ ಸೆಟ್ಟೇರುತ್ತಿದೆ. ಆ ದಿನವೇ ಚಿತ್ರದ ಟೈಟಲ್ ಸೇರಿದಂತೆ ಕೆಲವು ವಿವರಗಳು ಬಹಿರಂಗವಾಗಲಿವೆ. ಕಂಠೀರವ ಸ್ಟುಡಿಯೊದಲ್ಲಿ ಅಂಬರೀಷ್ ಸ್ಮಾರಕದ ಎದುರು ಚಿತ್ರಕ್ಕೆ ಓಂಕಾರ ಬೀಳಲಿದೆ.

ಇದು ಮಾಸ್ ಓರಿಯಂಟೆಡ್ ಕಮರ್ಷಿಯಲ್ ಥ್ರಿಲ್ಲರ್. ಸೈನಿಕನ ರೀತಿ ಇರೋ ಪಾತ್ರ ಅವರದ್ದು. ಆದರೆ ಸೈನಿಕ ಅಲ್ಲ. ದಂಗೆಯ ಹಿನ್ನೆಲೆ ಇದೆ ಎಂದಷ್ಟೇ ಕ್ಲೂ ಕೊಟ್ಟಿದ್ದಾರೆ ಮಹೇಶ್ ಕುಮಾರ್.

ಬ್ಯಾಡ್ ಮ್ಯಾನರ್ಸ್ ಚಿತ್ರ ಫೈನಲ್ ಹಂತದಲ್ಲಿದ್ದು ಹಾಡು ಮತ್ತು ಮಾತಿನ ಭಾಗದ ಕೆಲವು ವರ್ಷನ್ ಸೀಕ್ವೆನ್ಸ್‍ಗಳಷ್ಟೇ ಬಾಕಿಯಿವೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳೂ ಆಗಲೇ ಶುರುವಾಗಿದೆ.