` ಚೂರಿಕಟ್ಟೆಗೆ ದೇಹ ದಂಡಿಸಿದ್ದ ಪ್ರವೀಣ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
churikatte hero praveen tej
Praveen tej Image

ಚೂರಿಕಟ್ಟೆ. ಟಿಂಬರ್ ಮಾಫಿಯಾ ಮತ್ತು ಪೊಲೀಸ್ ವ್ಯವಸ್ಥೆಯ ಸುತ್ತ ಹೆಣೆದಿರುವ ಕಥೆ. ಸಿನಿಮಾದ ಟ್ರೇಲರ್ ಕುತೂಹಲ ಹುಟ್ಟಿಸುವಂತಿದೆ. ಮಲೆನಾಡಿನ ಹಸಿರು ವನಸಿರಿಯ ನಡುವಿನ ವಿಚಿತ್ರ ಲೋಕವೊಂದು ಚೂರಿಕಟ್ಟೆಯಲ್ಲಿ ತೆರೆದುಕೊಳ್ಳಲಿದೆ. ಚಿತ್ರದ ಹೀರೋ ಪ್ರವೀಣ್. ಸಿಂಪಲ್ ಸ್ಟಾರ್ ಅಂಥಾನೇ ಹೆಸರಾಗಿರುವ ಪ್ರವೀಣ್, ಚಿತ್ರಕ್ಕೆ ತಾವು ತಯಾರಾಗಿದ್ದು ಹೇಗೆ ಅನ್ನೋದನ್ನು ಹೇಳಿಕೊಂಡಿದ್ದಾರೆ.

ಸಿನಿಮಾದಲ್ಲಿ ನಾಯಕನದ್ದು ಪೊಲೀಸ್ ಆಗುವ ಕನಸು ಹೊತ್ತ ಹುಡುಗನ ಪಾತ್ರ. ಕಾಲೇಜು ಹುಡುಗನಿಂದ ಹಿಡಿದು 3 ವಿಭಿನ್ನ ಶೇಡ್‍ಗಳಲ್ಲಿ ಕಾಣಿಸಿಕೊಮಡಿದ್ದಾರಂತೆ. ಅದಕ್ಕಾಗಿ ದೇಹವನ್ನು ಇನ್ನಿಲ್ಲದಂತೆ ದಂಡಿಸಿರುವ ಪ್ರವೀಣ್, ಶೇಡ್‍ಗಳ ಬಗ್ಗೆ ಹೇಳುತ್ತಾ ಹೋದರೆ, ಕಥೆಯನ್ನೇ ಹೇಳಬೇಕಾದೀತು. ನಿರ್ದೇಶಕರು ಸುಮ್ಮನಿರಲ್ಲ ಎಂದು ಜಾರಿಕೊಳ್ತಾರೆ.

ಏನೇ ಸಸ್ಪೆನ್ಸ್ ಇಟ್ಟುಕೊಂಡರೂ, ಈ ಶುಕ್ರವಾರ ಎಲ್ಲ ಸಸ್ಪೆನ್ಸ್‍ಗೂ ಉತ್ತರ ಸಿಗಲಿದೆ. ಸಿನಿಮಾ ಇದೇ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

#

16 Years To Majestic Gallery

Valentine Special Gallery