` ನಾನ್ ಒಂದ್ ದಿನ ಪ್ರಧಾನಿ ಆಗ್ತೇನೆ - ಹುಚ್ಚ ವೆಂಕಟ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
huccha's dream is to become pm
Huccha Venkat Image

ನೀವು ಒಪ್ತೀರೋ.. ಬಿಡ್ತೀರೋ.. ಹುಚ್ಚ ವೆಂಕಟ್, ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್. ಅವರಿಗಿರುವಷ್ಟು ಅಭಿಮಾನಿಗಳು ಕನ್ನಡದ ಬೇರೆ ಯಾವ ನಟನಿಗೂ ಇಲ್ಲ. ಅದನ್ನು ಹುಚ್ಚ ವೆಂಕಟ್ ಹಲವು ಬಾರಿ ಹೇಳಿಕೊಂಡಿದ್ದಾರೆ. ಜಗತ್ತಿನ ಯಾವುದೇ ವಿಚಾರದ ಬಗ್ಗೆ ಮಾತನಾಡಬಲ್ಲ ಹುಚ್ಚ ವೆಂಕಟ್, ತಮ್ಮದೇ ಆದ ಸೈನ್ಯವನ್ನೂ ಹೊಂದಿದ್ದಾರಂತೆ.

ಅದೆಲ್ಲ ಬಿಡಿ, ಈಗ ಹುಚ್ಚ ವೆಂಕಟ್ ತಮ್ಮ ಮನದಾಳದ ಬಯಕೆಯೊಂದನ್ನ ಹೇಳಿಕೊಂಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿಯೇ ಒಂದು ಹೊಸ ರಾಜಕೀಯ ಪಕ್ಷ ಸ್ಥಾಪಿಸಿ ಚುನಾವಣೆಗೆ ನಿಲ್ಲೋಕೆ ವೆಂಕಟ್ ಮುಂದಾಗಿದ್ದರಂತೆ. ಆದರೆ, ಅವರ ತಂದೆ ಒಪ್ಪಲಿಲ್ಲವಂತೆ. ಮುಂದಿನ ಚುನಾವಣೆ ಹೊತ್ತಿಗೆ ಮನೆಯವರನ್ನೆಲ್ಲ ಒಪ್ಪಿಸಿ, ರಾಜಕೀಯ ಪಕ್ಷ ಸ್ಥಾಪಿಸಿ ಚುನಾವಣೆಗೆ ನಿಲ್ಲುತ್ತೇನೆ. ನಾನು 60 ವರ್ಷ ವಯಸ್ಸು ಆಗುವುದರೊಳಗಾಗಿ ಪ್ರಧಾನಿಯಾಗ್ತೇನೆ ಎಂದಿದ್ದಾರೆ ವೆಂಕಟ್.

Raju Kannada Medium Movie Gallery

Choorikatte Movie Gallery